Tag: induvalu sachidananda

  • ಸುಮಲತಾ ನಿರ್ಧಾರ ಪ್ರಕಟಕ್ಕೂ ಮುನ್ನವೇ ಆಪ್ತನಿಂದ ಶಾಕ್ – ಹೆಚ್‍ಡಿಕೆ ಪರ ಪ್ರಚಾರಕ್ಕಿಳಿದ ಸಚ್ಚಿದಾನಂದ

    ಸುಮಲತಾ ನಿರ್ಧಾರ ಪ್ರಕಟಕ್ಕೂ ಮುನ್ನವೇ ಆಪ್ತನಿಂದ ಶಾಕ್ – ಹೆಚ್‍ಡಿಕೆ ಪರ ಪ್ರಚಾರಕ್ಕಿಳಿದ ಸಚ್ಚಿದಾನಂದ

    – ಕಾಂಗ್ರೆಸ್ ಸಂವಿಧಾನದ ವಿರುದ್ಧವಾಗಿ ರಾಜ್ಯ ಸರ್ಕಾರಗಳ ವಜಾ ಮಾಡಿತ್ತು

    ಮಂಡ್ಯ: ಸಂಸದೆ ಸುಮಲತಾ (Sumalatha) ರಾಜಕೀಯ ನಡೆ ಪ್ರಕಟಕ್ಕೂ ಮುನ್ನವೇ ಅವರ ಆಪ್ತ ಇಂಡುವಾಳು ಸಚ್ಚಿದಾನಂದ (Induvalu Sachidananda), ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಪರ ಪ್ರಚಾರಕ್ಕಿಳಿದಿದ್ದಾರೆ. ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ (Lok Sabha Election) ಸುಮಲತಾ ಬೆನ್ನಿಗೆ ನಿಂತಿದ್ದ ಸಚ್ಚಿದಾನಂದ, ಈ ಬಾರಿಯೂ ತಮ್ಮ ಪರವಾಗಿ ನಿಲ್ಲುತ್ತಾರೆಂಬ ನಿರೀಕ್ಷೆಯಲ್ಲಿದ್ದ ಅವರಿಗೆ ಇದರಿಂದ ದೊಡ್ಡ ಆಘಾತ ಉಂಟಾಗಿದೆ.

    ಶ್ರೀರಂಗಪಟ್ಟಣದ ಟಿಎಪಿಸಿಎಂಎಸ್ ಸಭಾಂಗಣದಲ್ಲಿ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಬಿಜೆಪಿ, ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಸಚ್ಚಿದಾನಂದ ಅವರು ಭಾಗಿಯಾಗಿದ್ದಾರೆ. ಶನಿವಾರ ನಡೆದ ಸುಮಲತಾ ಬೆಂಬಲಿಗರ ಸಭೆಗೂ ಅವರು ಗೈರಾಗಿದ್ದರು. ಈ ಮೂಲಕ ಸುಮಲತಾ ಪಕ್ಷೇತರವಾಗಿ ಸ್ಪರ್ಧೆ ಮಾಡಿದ್ರೆ ತಮ್ಮ ಬೆಂಬಲ ಇಲ್ಲ ಎಂಬ ಸಂದೇಶ ರವಾನಿಸಿದ್ದಾರೆ. ಇದನ್ನೂ ಓದಿ: ಅಪ್ಪ-ಮಗಳನ್ನು ದೂರ ಮಾಡಿದ ಅಪಕೀರ್ತಿ ಬೇಡ ಎಂದು ಸುಮ್ಮನಿದ್ದೇನೆ: ಡಿಕೆಶಿ

    ಸಭೆಯಲ್ಲಿ ಮಾತನಾಡಿರುವ ಸಚ್ಚಿದಾನಂದ ಅವರು, ಸಮಾಜದ ತಳ ಸಮುದಾಯದವರನ್ನು ಗುರುತಿಸಿ ಅವಕಾಶ ನೀಡಿದ್ದು ಪ್ರಧಾನಿ ಮೋದಿ, ಏ.2 ರಂದು ಬಿಜೆಪಿಯಿಂದ ನಾವು ಸಭೆ ಮಾಡುತ್ತೇವೆ. ಆ ಸಭೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಜೆಡಿಎಸ್ ಅಭ್ಯರ್ಥಿಯಲ್ಲ. ಅವರು ನಮ್ಮ ಮೈತ್ರಿ ಆಭ್ಯರ್ಥಿ ಎಂದು ಘೋಷಣೆ ಮಾಡಿ ಬೆಂಬಲ ನೀಡುತ್ತೇವೆ. ಈ ಮೂಲಕ ಮೋದಿಯವರ ಗೆಲುವಿಗೆ ನಾವು ಕುಮಾರಣ್ಣಾ ಅವರಿಗೆ ಬೆಂಬಲ ನೀಡಬೇಕು. ದೇಶ ಕಟ್ಟುವ ಕೆಲಸ ಮೋದಿ ಮಾಡಿದ್ದಾರೆ. ಅವರಿಂದ ದೇಶದಲ್ಲಿ ಅಪಾರ ಅಭಿವೃದ್ಧಿಯಾಗಿದೆ. ಸುಭದ್ರ ದೇಶ ಕಟ್ಟಲು ನರೇಂದ್ರ ಮೋದಿಯವರು ಅವಶ್ಯಕ, ಮತ್ತೆ ಮೋದಿ ಪ್ರಧಾನಿಯಾಗಬೇಕು ಎಂದಿದ್ದಾರೆ.

    ಹೆಚ್‍ಡಿಕೆ ಆರೋಗ್ಯದ ಬಗ್ಗೆ ಕೆಲವರು ಟೀಕೆ ಮಾಡುತ್ತಿದ್ದಾರೆ. ರಮೇಶ್ ಬಂಡಿಸಿದ್ದೇಗೌಡ ಕ್ಷೇತ್ರದಲ್ಲಿ ಗೆದ್ದಿದ್ದು ಹೇಗೆ? ಅವರಿಗೆ ಬೆಂಬಲವಾಗಿ ದೊಡ್ಡಗೌಡರು ಹೇಗೆ ಸಹಕಾರ ನೀಡಿದರು. ಅದನ್ನೆಲ್ಲಾ ದೊಡ್ಡಗೌಡರು ಇಲ್ಲಿ ಬಂದು ಹೇಳಬೇಕು ಎಂದಿದ್ದಾರೆ.

    ಅಂಬೇಡ್ಕರ್ ಅವರು ಬರೆದ ಸಂವಿಧಾನವನ್ನು ಕಾಂಗ್ರೆಸ್ ಅತಿ ಹೆಚ್ಚು ತಿದ್ದುಪಡಿ ಮಾಡಿತ್ತು. 300ಕ್ಕೂ ಹೆಚ್ಚು ಸಲ ಕಾಂಗ್ರೆಸ್ ತಿದ್ದುಪಡಿ ಮಾಡಿದೆ. ಕಾಂಗ್ರೆಸ್ ಸಂವಿಧಾನ ವಿರೋಧವಾಗಿ ರಾಜ್ಯ ಸರ್ಕಾರಗಳನ್ನು ವಜಾ ಮಾಡಿತ್ತು. ಪ್ರಧಾನಿ ಮೋದಿ ಅವರು ಯಾವುದೇ ರಾಜ್ಯ ಸರ್ಕಾರವನ್ನು ವಜಾ ಮಾಡಿದ ಉದಾಹರಣೆ ಇಲ್ಲ ಎಂದು ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಸಮಾಜದಲ್ಲಿ ಬದಲಾವಣೆ ತರಲು ಕಾಂಗ್ರೆಸ್‌ ಸೇರಲು ಚಿಂತನೆ: ನಿಶಾ ಯೋಗೇಶ್ವರ್‌

  • ‘ಮಂಡ್ಯ’ ಟಿಕೆಟ್‌ಗೆ ಸುಮಲತಾ ಬಿಗಿಪಟ್ಟು – ಸಂಸದೆಗೆ ಸಾಥ್ ಕೊಡ್ತಾರಾ ಇಂಡವಾಳು ಸಚ್ಚಿದಾನಂದ?

    ‘ಮಂಡ್ಯ’ ಟಿಕೆಟ್‌ಗೆ ಸುಮಲತಾ ಬಿಗಿಪಟ್ಟು – ಸಂಸದೆಗೆ ಸಾಥ್ ಕೊಡ್ತಾರಾ ಇಂಡವಾಳು ಸಚ್ಚಿದಾನಂದ?

    ಬೆಂಗಳೂರು/ಮಂಡ್ಯ: ಮಂಡ್ಯ ಲೋಕಸಭಾ ಅಖಾಡ ಕ್ಷಣ ಕ್ಷಣಕ್ಕೂ ರೋಚಕ ತಿರುವು ಪಡೆದುಕೊಳ್ಳುತ್ತಿದ್ದು, ಮಂಡ್ಯ (Mandya) ಬಿಜೆಪಿ ಟಿಕೆಟ್‌ಗೆ ಬಿಗಿಪಟ್ಟು ಹಿಡಿದಿರುವ ಸಂಸದೆ ಸುಮಲತಾ (Sumalatha Ambareesh) ಇಂದು ಬೆಂಬಲಿಗರು, ಹಿತೈಷಿಗಳೊಂದಿಗೆ ಮಹತ್ವದ ಸಭೆ ನಡೆಸಲಿದ್ದಾರೆ. ಇನ್ನು ಸಂಸದೆಯೊಂದಿಗೆ ಅಂತರ ಕಾಯ್ದುಕೊಂಡಿರುವ ಇಂಡವಾಳು ಸಚ್ಚಿದಾನಂದ (Induvalu Sachidananda)  ಅವರನ್ನು ಸಭೆಗೆ ಕರೆತರಲು ಸುಮಲತಾ ನಟ ದರ್ಶನ್ ಅವರ ಮೊರೆ ಹೋಗಿದ್ದಾರೆ.

    ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ವಾಭಿಮಾನದ ಕಹಳೆ ಊದಿ ಸಂಸದೆಯಾಗಿದ್ದ ಸುಮಲತಾ ಮತ್ತೆ ಅಖಾಡಕ್ಕೆ ಧುಮುಕಿದ್ದಾರೆ. ಬಿಜೆಪಿಗೆ (BJP) ಈಗಾಗಲೇ ಬಾಹ್ಯ ಬೆಂಬಲ ನೀಡಿರುವ ಸುಮಲತಾ ಬಿಜೆಪಿ ಟಿಕೆಟ್‌ಗೆ ಬಿಗಿಪಟ್ಟು ಹಿಡಿದಿದ್ದಾರೆ. ಮಂಡ್ಯದಿಂದಲೇ ನನ್ನ ಸ್ಪರ್ಧೆ ಖಚಿತ ಎಂದು ಸ್ಪಷ್ಟ ಸಂದೇಶ ತಿಳಿಸಿದ್ದಾರೆ. ಆದರೆ ಬಿಜೆಪಿ, ಜೆಡಿಎಸ್ ಹೊಂದಾಣಿಕೆ ಹಿನ್ನೆಲೆ ಮೈತ್ರಿ ಟಿಕೆಟ್ ಜೆಡಿಎಸ್ ಪಾಲಾಗಿದೆ ಎನ್ನಲಾಗುತ್ತಿದೆ. ಇದರ ನಡುವೆ ಸಂಸದೆ ಸುಮಲತಾ ಇಂದು ಬೆಂಬಲಿಗರು, ಆಪ್ತರ ಸಭೆ ಕರೆದಿದ್ದಾರೆ. ಬೆಂಗಳೂರಿನ ಸುಮಲತಾ ನಿವಾಸದಲ್ಲಿ ನಡೆಯಲಿರುವ ಸಭೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳ ಬೆಂಬಲಿಗರು, ಹಿತೈಷಿಗಳು ಪಾಲ್ಗೊಳ್ಳಲಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರ ಸಮುದ್ರದಲ್ಲಿ ವೇವ್ ರೈಡರ್ ಬಾಯ್‌ ಜಾಗ ಪತ್ತೆ – ನೌಕಾದಳದ ಭದ್ರತೆ ನಡುವೆ ಕಳವು?

    ಸುಮಲತಾರ ಬೆಂಗಳೂರು ನಿವಾಸದಲ್ಲಿ ಸಂಜೆ 4 ಗಂಟೆಗೆ ಹೈವೋಲ್ಟೇಜ್ ಮೀಟಿಂಗ್ ನಡೆಯಲಿದೆ. ಸಭೆಯಲ್ಲಿ ಸುಮಲತಾ ಹಾಗೂ ಅಂಬರೀಶ್ ಅವರ 100 ರಿಂದ 150ಕ್ಕೂ ಹೆಚ್ಚು ಪ್ರಮುಖ ಬೆಂಬಲಿಗರು, ಆಪ್ತರು ಭಾಗಿಯಾಗಲಿದ್ದಾರೆ. ಚುನಾವಣೆ ಸಿದ್ಧತೆ ಕುರಿತು ಮುಖಂಡರೊಂದಿಗೆ ಸುದೀರ್ಘ ಚರ್ಚೆ ನಡೆಸಲಿದ್ದಾರೆ. ಇದನ್ನೂ ಓದಿ: ಮುಳ್ಳಯ್ಯನಗಿರಿ ತಪ್ಪಲಿನ ಬೈರೇಗುಡ್ಡದಲ್ಲಿ ಕಾಡ್ಗಿಚ್ಚು – ನೂರಾರು ಎಕರೆ ಅರಣ್ಯ ನಾಶ

    ಇನ್ನು ಈ ಸಭೆಗೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ಬಿಜೆಪಿ ಮುಖಂಡ ಇಂಡವಾಳು ಸಚ್ಚಿದಾನಂದ ಕೂಡ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ಮತ್ತಷ್ಟು ಕುತೂಹಲ ಕೆರಳಿಸಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ (Lok Sabha Election) ಸುಮಲತಾ ಬೆನ್ನಿಗೆ ನಿಂತ ಇಂಡವಾಳು ಸಚ್ಚಿದಾನಂದ ಸದ್ಯ ಸಂಸದೆಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಇದು ಸಂಸದೆ ಸುಮಲತಾಗೆ ದೊಡ್ಡ ಹಿನ್ನಡೆಯಾಗಿದ್ದು, ಮತ್ತೆ ಅಖಾಡಕ್ಕೆ ಧುಮುಕಿದರೆ ಸಚ್ಚಿದಾನಂದ ಸಂಸದೆಗೆ ಅನಿವಾರ್ಯ. ಆದ್ದರಿಂದ ಸಚ್ಚಿ ಜೊತೆ ಮತ್ತೆ ಬಾಂಧವ್ಯ ಬೆಸಯಲು ಡಿ ಬಾಸ್ ಮೊರೆ ಹೋಗಿರುವ ಸುಮಲತಾ ಅವರು ಸಚ್ಚಿದಾನಂದ ಜೊತೆ ಸಂಧಾನ ಮಾಡಿಕೊಳ್ಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಲೋಕಸಮರಕ್ಕೆ ಭರ್ಜರಿ ತಾಲೀಮು – ಬಿಜೆಪಿಗೆ 10 ಕ್ಷೇತ್ರಗಳದ್ದೇ ತಲೆನೋವು

    ಒಟ್ಟಾರೆ ಇಂದಿನ ಹೈವೋಲ್ಟೇಜ್ ಮೀಟಿಂಗ್ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದ್ದು, ಸಂಸದೆ ಸುಮಲತಾರ ನಡೆ ಏನು ಎಂದು ತೀವ್ರ ಕುತೂಹಲ ಮೂಡಿಸಿದೆ. ಇದನ್ನೂ ಓದಿ: ಕಾಂಗ್ರೆಸ್ ಮೋಸ್ಟ್ ಕಮ್ಯುನಲ್‌ & ಕ್ರಿಮಿನಲ್ ಪಾರ್ಟಿ – ಸಿ.ಟಿ ರವಿ ವಾಗ್ದಾಳಿ

  • ಮಂಡ್ಯದಲ್ಲಿ ಕಮಲ ಅರಳಿಸಲು ಪ್ಲಾನ್ – ಸುಮಲತಾ ಅಂಬರೀಶ್ ಆಪ್ತ ಸಚ್ಚಿದಾನಂದ ಬಿಜೆಪಿಗೆ

    ಮಂಡ್ಯದಲ್ಲಿ ಕಮಲ ಅರಳಿಸಲು ಪ್ಲಾನ್ – ಸುಮಲತಾ ಅಂಬರೀಶ್ ಆಪ್ತ ಸಚ್ಚಿದಾನಂದ ಬಿಜೆಪಿಗೆ

    ಮಂಡ್ಯ: ಜೆಡಿಎಸ್ (JDS) ಭದ್ರ ಕೋಟೆಯಾಗಿರುವ ಸಕ್ಕರೆ ನಾಡು ಮಂಡ್ಯ (mandya) ಜಿಲ್ಲೆಯನ್ನು ಭೇದಿಸಲು ಬಿಜೆಪಿ (BJP) ರಣತಂತ್ರವೊಂದನ್ನು ಹೆಣೆಯುತ್ತಿದ್ದು, ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಅವರ ಆಪ್ತರನ್ನು ತಮ್ಮತ್ತ ಸೆಳೆದು ವಿಧಾನಸಭಾ ಚುನಾವಣೆಯ (Assembly polls) ಅಖಾಡಕ್ಕೆ ಧುಮುಕಿಸಲು ಸಜ್ಜಾಗಿದೆ.

    ಕಳೆದ ಲೋಕಸಭಾ ಚುನಾವಣೆ ವೇಳೆ ಸಕ್ಕರೆ ನಾಡು ಮಂಡ್ಯ ಜಿಲ್ಲೆ ಅಕ್ಷರಶಃ ರಣರಂಗವಾಗಿ ಬದಲಾಗಿತ್ತು. ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಕಾಂಗ್ರೆಸ್‍ನ ಕೆಲ ನಾಯಕರು ಹಿಂಭಾಗಿಲಿನಿಂದ ಸಪೋರ್ಟ್ ಮಾಡಿದ್ರು ಸಹ, ರೆಬಲ್ ಸ್ಟಾರ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಇಂಡುವಾಳು ಸಚ್ಚಿದಾನಂದ (Induvalu Sachidananda) ಅವರ ಸಪೋರ್ಟ್ ಸುಮಲತಾ ಅವರಿಗೆ ನೂರು ಆನೆಯ ಬಲ ನೀಡಿತ್ತು. ಆ ವೇಳೆ ಸಚ್ಚಿದಾನಂದ ಅವರು ಕಾಂಗ್ರೆಸ್ ಪಕ್ಷದಲ್ಲಿ ಇದ್ರು, ಅಂದು ಮೈತ್ರಿ ಸರ್ಕಾರದ ಒಪ್ಪಂದದ ಪ್ರಕಾರ ಮಂಡ್ಯದಲ್ಲಿ ಕಾಂಗ್ರೆಸ್ ಜೆಡಿಎಸ್‍ಗೆ ಬೆಂಬಲ ನೀಡಬೇಕಾಗಿತ್ತು. ಆದ್ರೆ ಕೆಲ ಕಾಂಗ್ರೆಸ್ ನಾಯಕರು ಹಿಂಬಾಗಿಲಿನಿಂದ ಸುಮಲತಾ ಅವರಿಗೆ ಬೆಂಬಲ ಸೂಚಿಸಿದ್ರು. ಆದ್ರೆ ಇಂಡುವಾಳು ಸಚ್ಚಿದಾನಂದ ಸುಮಲತಾ ಅಂಬರೀಶ್ ಅವರ ಮನೆ ಬಾಗಿಲಿಗೆ ಹೋಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಎಂದು ಕೇಳಿಕೊಂಡಿದ್ದಲ್ಲದೇ ಸುಮಲತಾ ಅವರು ಭರ್ಜರಿ ಗೆಲುವು ಸಾಧಿಸುವರೆಗೂ ಸಚ್ಚಿದಾನಂದ ಅವರು ಸುಮಲತಾ ಜೊತೆಗೆ ಇದ್ರು. ಇದೀಗ ಸುಮಲತಾ ಅವರ ಆಪ್ತರಾಗಿರುವ ಸಚ್ಚಿದಾನಂದ ಅವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಲು ಬಿಜೆಪಿ ಮುಂದಾಗಿದೆ. ಇದನ್ನೂ ಓದಿ: ಏಕರೂಪ ನಾಗರಿಕ ಸಂಹಿತೆ ಜಾರಿ, 20 ಲಕ್ಷ ಉದ್ಯೋಗ ಸೃಷ್ಟಿ – ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಭರವಸೆ

    sumalatha ambarish

    ಈಗಾಗಲೇ ಶ್ರೀರಂಗಪಟ್ಟಣ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು ನಿರ್ಧರಿಸಿರುವ ಸಚ್ಚಿದಾನಂದ ಅವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಂಡು ಶ್ರೀರಂಗಪಟ್ಟಣ ಕ್ಷೇತ್ರದಿಂದ ಬಿಜೆಪಿಯಿಂದ ಅಖಾಡಕ್ಕೆ ಧುಮುಕಿಸಲು ಬಿಜೆಪಿ ಪ್ಲಾನ್ ಮಾಡಿದೆ. ಇದಕ್ಕೆ ಪೂರಕ ಎಂಬಂತೆ ಸಚ್ಚಿದಾನಂದ ಅವರು ನ.28ಕ್ಕೆ ಬೆಂಗಳೂರಿನ (Bengaluru) ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಈ ಹಿನ್ನೆಲೆ ಶ್ರೀರಂಗಪಟ್ಟಣ ಕ್ಷೇತ್ರದ ಜನರು ಹಾಗೂ ತಮ್ಮ ಬೆಂಬಲಿಗರ ಅಭಿಪ್ರಾಯ ಸಂಗ್ರಹಿಸಲು ಸಭೆಯನ್ನು ಸಹ ಸಚ್ಚಿದಾನಂದ ನಡೆಸಿದ್ದಾರೆ. ನ.28 ರಂದು ಸಚ್ಚಿದಾನಂದ 1,000 ಮಂದಿ ಬೆಂಬಲಿಗರೊಂದಿಗೆ ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಇದನ್ನೂ ಓದಿ: ರಶ್ಮಿಕಾ ಪಾಪದ ಹುಡುಗಿ ಎನ್ನುವುದರಲ್ಲಿ ಅರ್ಥವಿಲ್ಲ ಎಂದ ಸಾಹಿತಿ ಗುರುರಾಜ ಕೊಡ್ಕಣಿ

    ಸಚ್ಚಿದಾನಂದ ಅವರು ಶ್ರೀರಂಗಪಟ್ಟಣ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ರೆ ಸುಮಲತಾ ಅವರು ಬೆಂಬಲ ಕೊಡುತ್ತಾರ ಎಂಬ ಪ್ರಶ್ನೆ ಸಹ ಎದ್ದಿದೆ. ಈ ಹಿಂದೆ ಸ್ವತಃ ಸುಮಲತಾ ಅವರೇ ಮುಂದಿನ ಚುನಾವಣೆಯಲ್ಲಿ ಸಚ್ಚಿದಾನಂದ ಯಾವ ಪಕ್ಷದಿಂದ ಸ್ಪರ್ಧೆ ಮಾಡಿದ್ರು ನಾನು ಸಪೋರ್ಟ್ ಮಾಡುತ್ತೇನೆ ಎಂದಿದ್ರು. ಈ ಹಿನ್ನೆಲೆ ಸುಮಲತಾ ಅಂಬರೀಶ್ ಅವರ ಆಶೀರ್ವಾದ ಪಡೆದೆ ನಾನು ಬಿಜೆಪಿ ಸೇರ್ಪಡೆಯಾಗುತ್ತಿದ್ದೇನೆ. ಅವರ ಸೇರ್ಪಡೆಯನ್ನು ಅವರು ತೀರ್ಮಾನ ಮಾಡುತ್ತಾರೆ. ಈಗ ನಾನು ಮಾತ್ರ ಸೇರ್ಪಡೆಯಾಗುತ್ತಿದ್ದೇನೆ. ಅವರ ಆಶೀರ್ವಾದ ನನ್ನ ಮೇಲೆ ಸದಾ ಇರುತ್ತೆ ಎಂದು ಸಚ್ಚಿದಾನಂದ ತಿಳಿಸಿದ್ದಾರೆ.

    ಒಟ್ಟಾರೆ ಶತಾಯ ಗತಯಾ ಮಂಡ್ಯ ಜಿಲ್ಲೆಯಲ್ಲಿ ಕಮಲವನ್ನು ಇನ್ನಷ್ಟು ಕ್ಷೇತ್ರಗಳಲ್ಲಿ ಅರಳಿಸಬೇಕೆಂದು ಕೊಂಡಿರುವ ಬಿಜೆಪಿಗೆ ಇಂಡುವಾಳು ಸಚ್ಚಿದಾನಂದ ಬ್ರಹ್ಮಾಸ್ತ್ರವಾಗಿ ಸಿಕ್ಕಿದ್ದಾರೆ. ಮುಂದೆ ಬಿಜೆಪಿಯಲ್ಲಿ ಸಚ್ಚಿದಾನಂದ ಮಂಡ್ಯದಲ್ಲಿ ಎಷ್ಟರಮಟ್ಟಿಗೆ ಕಮಾಲ್ ಮಾಡ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಬಿಜೆಪಿ ಸೇರ್ತಾರಾ ಸಂಸದೆ ಸುಮಲತಾ ಆಪ್ತ?

    ಬಿಜೆಪಿ ಸೇರ್ತಾರಾ ಸಂಸದೆ ಸುಮಲತಾ ಆಪ್ತ?

    ಮಂಡ್ಯ: ಪಕ್ಷೇತರ ಅಭ್ಯರ್ಥಿಯಾಗಿ ಮಂಡ್ಯ ಲೋಕಸಭೆಯಿಂದ ಸ್ಪರ್ಧಿಸಿ ಜಯಗಳಿಸಿದ್ದ ಸುಮಲತಾ ಅವರ ಆಪ್ತ ಬಿಜೆಪಿ ಸೇರುತ್ತಾರಾ ಎಂಬ ಪ್ರಶ್ನೆ ಎದ್ದಿದೆ.

    ಹೌದು. ಮುಂದಿನ ಚುನಾವಣೆ ವೇಳೆಗೆ ಸುಮಲತಾ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂಬ ಮಾತು ಕೆಲ ದಿನಗಳಿಂದ ಹರಿದಾಡುತ್ತಿದೆ. ಆದರೆ ಎಲ್ಲಿಯೂ ಸುಮಲತಾ ಬಹಿರಂಗವಾಗಿ ಈ ವಿಚಾರವನ್ನು ತಿಳಿಸಿಲ್ಲ. ಆದರೆ ಸುಮಲತಾ ಆಪ್ತ ಬಿಜೆಪಿಗೆ ಸೇರುವುದು ಬಹುತೇಕ ಖಚಿತ ಎಂಬ ಅಭಿಪ್ರಾಯ ಈಗ ವ್ಯಕ್ತವಾಗಿದೆ.

    ವಿಧಾನಸಭಾ ಚುನಾವಣೆಗೆ ಇನ್ನೂ ಒಂದು ವರ್ಷ ಇರುವಂತೆಯೇ ಜಿಲ್ಲೆಯಲ್ಲಿ ರಾಜಕೀಯ ಗರಿಗೆದರಿದೆ. ಸುಮಲತಾ ಆಪ್ತ ಇಂಡುವಾಳು ಸಚ್ಚಿದಾನಂದ ಅವರ ಹುಟ್ಟುಹಬ್ಬಕ್ಕೆ ಬಿಜೆಪಿ ನಾಯಕರು ಭೇಟಿ ನೀಡಿ ಶುಭ ಕೋರಿದ್ದಾರೆ. ಕೆಲ ದಿನಗಳಿಂದ ಇಂಡುವಾಳು ಸಚ್ಚಿದಾನಂದ ಬಿಜೆಪಿ ಸೇರುತ್ತಾರೆ ಎಂಬ ಮಾತು ಚರ್ಚೆಯಲ್ಲಿತ್ತು. ಆದರೆ ಈಗ ಈ ಮಾತಿಗೆ ಪುಷ್ಠಿ ಎನ್ನುವಂತೆ ಬಿಜೆಪಿ ನಾಯಕರು ಶುಭ ಕೋರಿದ್ದಾರೆ. ಈಗಾಗಲೇ ಶ್ರೀರಂಗಪಟ್ಟಣ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸಚ್ಚಿದಾನಂದ ಅವರು ಸ್ಪರ್ಧೆ ಮಾಡುವುದು ಬಹುತೇಕ ಖಚಿತವಾಗಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಜಾತ್ರೆಯಲ್ಲಿ ತಡೆ ಹಾಕಿದ್ರು, ಜನರ ಹೊಟ್ಟೆ ಉರಿದಿದ್ದಕ್ಕೆ ಹೀಗೆಲ್ಲಾ ಆಗಿದೆ: ಡಿಕೆಶಿ

    ಹುಟ್ಟುಹಬ್ಬದ ನೆಪದಲ್ಲಿ ಇಂಡುವಾಳು ಸಚ್ಚಿದಾನಂದ ಕ್ಷೇತ್ರದ ಜನರಿಗೆ ಬಾಡೂಟ ಹಾಕಿಸಿದ್ದಾರೆ. ಇಂಡುವಾಳು ಗ್ರಾಮದಲ್ಲಿ ಭಾನುವಾರ ಭರ್ಜರಿ ಬಾಡೂಟ ಆಯೋಜನೆ ಆಗಿತ್ತು. ಸಚ್ಚಿದಾನಂದ ಅವರ ಆಪ್ತವಲಯ ಸಚ್ಚಿದಾನಂದ ಅವರು ಬಿಜೆಪಿ ಸೇರ್ಪಡೆ ಖಚಿತ ಎಂದು ಹೇಳುತ್ತಿದ್ದಾರೆ. ಬೆಂಬಲಿಗರ ಮೂಲಕ ಬಿಜೆಪಿ ಸೇರ್ಪಡೆ ಬಗ್ಗೆ ಸುಮಲತಾ ಸುಳಿವು ನೀಡಿದ್ದಾರೆ. ಇದನ್ನೂ ಓದಿ: ಪೊಲೀಸರ ಮೇಲೆ ಕೈ ಮಾಡೋದು, ಠಾಣೆಗೆ ನುಗ್ಗೋ ಪ್ರಯತ್ನ ಮಾಡೋದು ಅಕ್ಷಮ್ಯ ಅಪರಾಧ: ಬಿಎಸ್‍ವೈ