Tag: Industrial Area

  • ಕೆಮಿಕಲ್ ದುರ್ವಾಸನೆಗೆ ಉಸಿರುಗಟ್ಟಿ ಕಾರ್ಮಿಕರು ಅಸ್ವಸ್ಥ – ಲಾರಿಯಿಂದ ಕೆಳಗೆ ಬಿದ್ದು ಓರ್ವ ಸಾವು

    ಕೆಮಿಕಲ್ ದುರ್ವಾಸನೆಗೆ ಉಸಿರುಗಟ್ಟಿ ಕಾರ್ಮಿಕರು ಅಸ್ವಸ್ಥ – ಲಾರಿಯಿಂದ ಕೆಳಗೆ ಬಿದ್ದು ಓರ್ವ ಸಾವು

    ಚಿಕ್ಕಬಳ್ಳಾಪುರ: ಕೆಮಿಕಲ್ (Chemical) ದುರ್ವಾಸನೆಯಿಂದ ಉಸಿರುಗಟ್ಟಿ, ತಲೆ ಸುತ್ತು ಬಂದು ಲಾರಿಯಿಂದ ಕೆಳಗೆ ಬಿದ್ದು ಕಾರ್ಮಿಕನೋರ್ವ ದುರ್ಮರಣಕ್ಕೀಡಾಗಿರುವ ಘಟನೆ ಚಿಕ್ಕಬಳ್ಳಾಪುರ (Chikkaballapur) ನಗರದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.

    ಬಿಹಾರ ಮೂಲದ ಮಹಮದ್ ರಜೀಕ್ (33) ಮೃತ ಕಾರ್ಮಿಕ. ಘಟನೆಯಲ್ಲಿ ವಿಕಾಸ್ ಹಾಗೂ ಸೋನು ಎಂಬ ಸಹ ಕಾರ್ಮಿಕರು (labours) ಉಸಿರಾಟದ ಸಮಸ್ಯೆಯಿಂದ (Breathing problem) ಅಸ್ವಸ್ಥಗೊಂಡು ಆಸ್ಪತ್ರೆ ಪಾಲಾಗಿದ್ದಾರೆ. ಇದನ್ನೂ ಓದಿ: ಪ್ರೀತಿ ನಿರಾಕರಿಸಿದ್ದಕ್ಕೆ ನೂರಾರು ಜನರ ಮುಂದೆ ಯುವತಿಯ ಬರ್ಬರ ಹತ್ಯೆ – ಆರೋಪಿಗೆ ಧರ್ಮದೇಟು

    ಮಹಮದ್ ರಜೀಕ್ ಮೂಲತಃ ಬಿಹಾರದವನು, ಕಳೆದ 5 ವರ್ಷಗಳ ಹಿಂದೆ ಹೆಂಡತಿಯೊಂದಿಗೆ ಕೂಲಿ ಕೆಲಸ ಹರಸಿ ಚಿಕ್ಕಬಳ್ಳಾಪುರಕ್ಕೆ ಬಂದಿದ್ದ. ನಗರ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿನ ಮಾಲೀಕ ಶ್ರೀನಿವಾಸಮೂರ್ತಿ ಎಂಬುವವರಿಗೆ ಸೇರಿದ ರಾಮ್ ಕೀ ಕೆಮಿಕಲ್ ತಯಾರಿಕಾ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ. ಈತನ ಜೊತೆ ಸೋನು ಹಾಗೂ ವಿಕಾಸ್ ಸಹ ಕೆಲಸ ಮಾಡ್ತಿದ್ರು. ಇದನ್ನೂ ಓದಿ: 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ರಾಯಭಾರಿಯಾಗಿ ನಟ ಕಿಶೋರ್‌ ನೇಮಕ

    ಎಂದಿನಂತೆ ಬುಧವಾರ ಸಂಜೆ ಫ್ಯಾಕ್ಟರಿಗೆ ಕೆಮಿಕಲ್ ವೇಸ್ಟ್ ತುಂಬಿಕೊಂಡು ಹೋಗಲು ಟ್ಯಾಂಕರ್ ಲಾರಿ ಬಂದಿದೆ. ಈ ವೇಳೆ ಟ್ಯಾಂಕರ್‌ನ ಮೇಲ್ಭಾಗದ ಕ್ಯಾಪ್ ಒಪನ್ ಆಗಿದೆ. ಇದರಿಂದ ಕೆಮಿಕಲ್‌ ದುರ್ವಾಸನೆ ಹೊರಸೂಸಿದ್ದು, ಏಕಾಏಕಿ ಮೂವರಿಗೂ ಉಸಿರುಗಟ್ಟಿದಂತಾಗಿದೆ. ತಲೆ ಸುತ್ತು ಬಂದು ಲಾರಿಯಿಂದ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಮಹಮದ್ ರಜೀಕ್ ತಲೆಗೆ ಗಂಭೀರ ಗಾಯವಾಗಿ ಸಾವನ್ನಪ್ಪಿದ್ರೆ ವಿಕಾಸ್ ಹಾಗೂ ಸೋನು ಉಸಿರಾಟದ ಸಮಸ್ಯೆಗೆ ತುತ್ತಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

    ಘಟನೆ ನಂತರ ಲಾರಿ ಚಾಲಕ ಲಾರಿಯೊಂದಿಗೆ ಎಸ್ಕೇಪ್ ಆಗಿದ್ದಾನೆ. ಮೃತದೇಹವನ್ನ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯೆ ಶವಾಗರಕ್ಕೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಇನ್ನೂ ಮೃತದೇಹವನ್ನ ಮೃತನ ಸ್ವಗ್ರಾಮ ಬಿಹಾರಕ್ಕೆ ಕಳುಹಿಸಿಕೊಡಲು ತಯಾರಿ ಮಾಡಲಾಗಿದೆ. ಕೆಮಿಕಲ್‌ ಕಾರ್ಖಾನೆ ಮಾಲೀಕ ಶ್ರೀನಿವಾಸಮೂರ್ತಿ ಮೃತರ ಜೊತೆಗಾರರ ಜೊತೆ ಮಧ್ಯಸ್ಥಿಕೆ ಮಾಡಿಸಿ ಪ್ರಕರಣ ಮುಚ್ಚಿ ಹಾಕಿವ ಹುನ್ನಾರ ಸಹ ನಡೆಸಿದ್ರು ಎಂಬ ಆರೋಪ ಕೇಳಿಬಂದಿದೆ. ಆದ್ರೆ ಕಾರ್ಮಿಕ ಇಲಾಖಾಧಿಕಾರಿಗಳಿಗೆ ʻಪಬ್ಲಿಕ್‌ ಟಿವಿʼ ಮಾಹಿತಿ ಮುಟ್ಟಿಸಿದ್ದು ಸ್ಥಳಕ್ಕೆ ಬಂದ ಅಧಿಕಾರಿಗಳು ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ.

    ಮಾಲೀಕನ ನಿರ್ಲಕ್ಷ್ಯ ಆರೋಪದಡಿ ಕಾರ್ಮಿಕನ ಸಾವು ಸಂಭವಿಸಿದ್ದು, ನಂದಿಬೆಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇನ್ನೂ ಕಾರ್ಮಿಕ ಇಲಾಖೆ ಸಹ ಕಾರ್ಮಿಕರಿಗೆ ಬೇಕಾದ ಯಾವುದೇ ಸುರಕ್ಷತಾ ಕ್ರಮಗಳನ್ನ ಕೈಗೊಂಡಿಲ್ಲ ಅಂತ ಮಾಲೀಕನ ಮೇಲೆ ಕ್ರಮಕ್ಕೆ ಮುಂದಾಗಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ತ್ರಿಬಲ್‌ ಮರ್ಡರ್‌ ಕೇಸ್‌ – ಎರಡನೇ ಪತ್ನಿ, ಮಲ ಮಗಳ ಮೇಲೆ ಅಕ್ರಮ ಸಂಬಂಧ ಅನುಮಾನ

  • ವಿಜಯಪುರದಲ್ಲಿ ದುರಂತ – ಮೆಕ್ಕೆಜೋಳ ಮೂಟೆ ತುಂಬುವ ಯಂತ್ರ ಕುಸಿದು ಮೂವರು ಕಾರ್ಮಿಕರು ಸಾವು

    ವಿಜಯಪುರದಲ್ಲಿ ದುರಂತ – ಮೆಕ್ಕೆಜೋಳ ಮೂಟೆ ತುಂಬುವ ಯಂತ್ರ ಕುಸಿದು ಮೂವರು ಕಾರ್ಮಿಕರು ಸಾವು

    – ಸಾವಿನ ಸಂಖ್ಯೆ ಮತ್ತಷ್ಟು ಏರಿಕೆ ಸಾಧ್ಯತೆ

    ವಿಜಯಪುರ: ಇಲ್ಲಿನ ರಾಜಗುರು ಗೋದಾಮಿನ (Warehouse) ಸಂಸ್ಕರಣಾ ಘಟಕದಲ್ಲಿ ಮೆಕ್ಕೆ ಜೋಳ (Maize) ಮೂಟೆ ತುಂಬುವ ಯಂತ್ರ ಕುಸಿದು, ಮೂವರು ಮೂವರು ಕಾರ್ಮಿಕರು (Workers) ಸಾವನ್ನಪ್ಪಿರುವ ಘಟನೆ ನಡೆದಿದೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

    ವಿಜಯಪುರದ ಕೈಗಾರಿಕಾ ಪ್ರದೇಶದಲ್ಲಿರುವ ರಾಜಗುರು ಇಂಡಸ್ಟ್ರೀಸ್‌ನ ಗೋದಾಮಿನಲ್ಲಿ ಈ ದುರಂತ ಸಂಭವಿಸಿದೆ. ರಾಜೇಶ್ ಮುಖಿಯಾ(25), ರಾಮ್ರೀಜ್ ಮುಖಿಯಾ(29), ಶಂಭು ಮುಖಿಯಾ(26) ಮೃತ ಕಾರ್ಮಿಕರು. ಇದನ್ನೂ ಓದಿ: ಜಾರಕಿಹೊಳಿ ಆಪ್ತನಿಗೆ ಚಾಕು ಇರಿತ – ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರನಿಂದ ಕೃತ್ಯ ಆರೋಪ

    ಅವಶೇಷಗಳ ಅಡಿಯಲ್ಲಿ ಇನ್ನೂ 6-7 ಮಂದಿ ಸಿಲುಕಿದ್ದು, ಮೃತಪಟ್ಟಿರುವ ಶಂಕೆಯೂ ವ್ಯಕ್ತವಾಗಿದೆ. ಎಸ್‌ಡಿಆರ್‌ಎಫ್ ತಂಡದಿಂದ ಶೋಧ ಕಾರ್ಯ ನಡೆಯುತ್ತಿದೆ. ಮೃತ ಕಾರ್ಮಿಕರೆಲ್ಲರೂ ಬಿಹಾರ ಮೂಲದವರು ಎಂದು ಗುರುತಿಸಲಾಗಿದೆ. ಕಳೆದ ಹಲವು ವರ್ಷಗಳಿಂದ ಆ ಕಾರ್ಮಿಕರು ಇದೇ ಇಂಡಸ್ಟ್ರೀಜ್‍ನಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಸಿಪಿವೈ ಬಾವ ನಾಪತ್ತೆ ಪ್ರಕರಣ ದುರಂತ ಅಂತ್ಯ – ಮೃತದೇಹ ಮರಣೋತ್ತರ ಪರೀಕ್ಷೆಗೆ ರವಾನೆ, ಅಂತ್ಯಕ್ರಿಯೆಗೆ ಸಿದ್ಧತೆ

    ಅವಶೇಷಗಳ ಅಡಿ ಸಿಲುಕಿರುವ ಕಾರ್ಮಿಕರು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ರಾತ್ರಿಯಿಂದಲೂ 4 ಜೆಸಿಬಿಗಳ ಮೂಲಕ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ. ಸ್ಥಳದಲ್ಲಿ ಕಾರ್ಮಿಕರು, ಅವರ ಸಂಬಂಧಿಕರು ಗುಂಪುಗೂಡಿದ್ದು, ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಜಿಲ್ಲಾಧಿಕಾರಿ, ಪೊಲೀಸ್‌ ವರಿಷ್ಠಾಧಿಕಾರಿ, ಸ್ಥಳದಲ್ಲೇ ಬೀಡುಬಿಟ್ಟು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ವೈದ್ಯರ ತಂಡವೂ ಕಾರ್ಮಿಕರಿಗೆ ಆಮ್ಲಜನಕ ಪೂರೈಕೆ ಮಾಡುತ್ತಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ, ಪೊಲೀಸರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

  • ರಾಯಚೂರಿನ ಕೆಮಿಕಲ್ ಫ್ಯಾಕ್ಟರಿಯಲ್ಲಿ ಭಾರೀ ಅಗ್ನಿ ದುರಂತ – ತಪ್ಪಿದ ಅನಾಹುತ

    ರಾಯಚೂರಿನ ಕೆಮಿಕಲ್ ಫ್ಯಾಕ್ಟರಿಯಲ್ಲಿ ಭಾರೀ ಅಗ್ನಿ ದುರಂತ – ತಪ್ಪಿದ ಅನಾಹುತ

    ರಾಯಚೂರು: ತಾಲ್ಲೂಕಿನ ಚಿಕ್ಕಸುಗೂರು ಬಳಿ ಕೈಗಾರಿಕಾ ಪ್ರದೇಶದ (Industrial Area) ಕೆಮಿಕಲ್ ಫ್ಯಾಕ್ಟರಿಯಲ್ಲಿ (Chemical Factory) ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದ್ದು ಲಕ್ಷಾಂತರ ರೂಪಾಯಿ ಹಾನಿಯಾಗಿದೆ.

    ಬೆಂಕಿಯಿಂದ ದಟ್ಟಹೊಗೆ ಆವರಿಸುತ್ತಿದ್ದಂತೆಯೇ ಹೊರ ಓಡಿಬಂದ ಸಿಬ್ಬಂದಿ ಅಪಾಯದಿಂದ ತಪ್ಪಿಸಿಕೊಂಡಿದ್ದಾರೆ.

    ಹೈದರಾಬಾದ್‌ ರಸ್ತೆ ಬಳಿಯ ಜಯಂತ್ ಲೈಫ್ ಸೈನ್ಸ್ ಕೆಮಿಕಲ್ ಫ್ಯಾಕ್ಟರಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಬಂದ ಅಗ್ನಿಶಾಮಕ‌ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಎಚ್ಚೆತ್ತ ಸಿಬ್ಬಂದಿ ಕೂಡಲೇ ರಸ್ತೆಗೆ ಓಡಿ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ಹೆಸರು ಕಳೆದುಕೊಳ್ಳಲು ಇಷ್ಟವಿಲ್ಲ- ರಾಮನಗರ ಮರುನಾಮಕರಣ ಪುನರುಚ್ಚರಿಸಿದ ಡಿಕೆಶಿ

    ಸದ್ಯ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಅನಾಹುತ ತಪ್ಪಿದೆ. ಇದನ್ನೂ ಓದಿ: ನಮ್ಮ ಪಕ್ಷದೊಳಗೆ ರಾಮ, ಹಿಂದೂಗಳನ್ನು ದ್ವೇಷಿಸುವ ನಾಯಕರಿದ್ದಾರೆ: ಕಾಂಗ್ರೆಸ್‌ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂ

  • ಪ್ರಧಾನಿ ತವರಲ್ಲೇ ಭೀಕರ ದುರಂತ – ಕೆಮಿಕಲ್ ಫ್ಯಾಕ್ಟರಿ ಸ್ಫೋಟಗೊಂಡು 6 ಮಂದಿ ಸಾವು

    ಪ್ರಧಾನಿ ತವರಲ್ಲೇ ಭೀಕರ ದುರಂತ – ಕೆಮಿಕಲ್ ಫ್ಯಾಕ್ಟರಿ ಸ್ಫೋಟಗೊಂಡು 6 ಮಂದಿ ಸಾವು

    ಗಾಂಧಿನಗರ: ಗುಜರಾತ್‌ನ ಭರೂಚ್ ಜಿಲ್ಲೆಯ ರಾಸಾಯನಿಕ ಕಾರ್ಖಾನೆಯೊಂದು ಮುಂಜಾನೆ ವೇಳೆ ಸ್ಫೋಟಗೊಂಡಿದ್ದು, 6 ಮಂದಿ ಕಾರ್ಮಿಕರು ಮೃತಪಟ್ಟಿರುವ ದುರಂತ ಘಟನೆ ನಡೆದಿದೆ.

    ಅಹಮದಾಬಾದ್‌ನಿಂದ 235 ಕಿಮೀ ದೂರದಲ್ಲಿರುವ ದಹೇಜ್ ಕೈಗಾರಿಕಾ ಪ್ರದೇಶದ ಘಟಕದಲ್ಲಿ ಮುಂಜಾನೆ 3 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದೆ. ರಿಯಾಕ್ಟರ್ ಬಳಿ ಕೆಲಸ ಮಾಡುತ್ತಿದ್ದ ವೇಳೆ ದ್ರಾವಕ ಭಟ್ಟಿ ಇಳಿಸುವ ಪ್ರಕ್ರಿಯೆಯಲ್ಲಿ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ ಎಂದು ಭರೂಚ್ ಪೊಲೀಸ್ ವರಿಷ್ಠಾಧಿಕಾರಿ ಲೀನಾ ಪಾಟೀಲ್ ಹೇಳಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಗಲಾಟೆ- ಯುವಕನಿಗೆ ಪೆಟ್ರೋಲ್ ಸುರಿದು ಬೆಂಕಿ

    POLICE

    ರಿಯಾಕ್ಟರ್‌ನಲ್ಲಿನ ಸ್ಫೋಟದಿಂದಾಗಿ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದಾಗಿ ಅಲ್ಲೇ ಇದ್ದ 6 ಮಂದಿ ಮೃತಪಟ್ಟಿದ್ದಾರೆ. ನಂತರ ಬೆಂಕಿಯನ್ನು ನಿಯಂತ್ರಿಸಿ, ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಇದರ ಹೊರತಾಗಿ ಯಾರೂ ಗಾಯಗೊಂಡಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಚಂದ್ರು ಕೊಲೆ ಪ್ರಕರಣವನ್ನು ಸಿಐಡಿಗೆ ವಹಿಸಿದ ಸರ್ಕಾರ

  • KIADBಯಿಂದ ರಾಜ್ಯದ ಎಂಟು ಜಿಲ್ಲೆಗಳಲ್ಲಿ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ

    KIADBಯಿಂದ ರಾಜ್ಯದ ಎಂಟು ಜಿಲ್ಲೆಗಳಲ್ಲಿ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ

    -ವಿಧಾನಪರಿಷತ್‍ನಲ್ಲಿ ಬೃಹತ್ ಮತ್ತು ಕೈಗಾರಿಕೆ ಸಚಿವ ನಿರಾಣಿ ಘೋಷಣೆ
    -2022ರ ನ.2ರಿಂದ 4ವರೆಗೆ ಜಾಗತಿಕ ಹೂಡಿಕೆದಾರರ ಸಮಾವೇಶ
    -ವಿದೇಶಿ ನೇರ ಬಂಡವಾಳ ಹೂಡಿಕೆ ಆಕರ್ಷಣೆಯಲ್ಲಿ ಕರ್ನಾಟಕ ಮೊದಲ ಸ್ಥಾನ
    -ಎನ್‍ಜಿಇಎಫ್ ಆಸ್ತಿ ಪರಭಾರೆ ಇಲ್ಲ

    ಬೆಂಗಳೂರು: ಬೆಂಗಳೂರಿನ ಆಚೆಗೂ ಕೈಗಾರಿಕಾ ಪ್ರದೇಶಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಎಂಟು ಜಿಲ್ಲೆಗಳಲ್ಲಿ ಹೊಸ ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿಪಡಿಸಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಘೋಷಿಸಿದರು.

    ಮಂಗಳವಾರ ವಿಧಾನಪರಿಷತ್‍ನಲ್ಲಿ ಜೆಡಿಎಸ್ ಸದಸ್ಯ ರಮೇಶ್‍ಗೌಡ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 2022-23ರಲ್ಲಿ ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿಪಡಿಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಹೇಳಿದರು. ಇದರಲ್ಲಿ ಪ್ರಮುಖವಾಗಿ ರಾಮನಗರದ ಹಾರೋಹಳ್ಳಿ 5ನೇ ಹಂತ, ಚಿಕ್ಕಬಳ್ಳಾಪುರದ ಗೌರಿಬಿದನೂರು 3ನೇ ಹಂತ, ತುಮಕೂರಿನ ಮಧುಗಿರಿ ಕೈಗಾರಿಕಾ ಪ್ರದೇಶ, ಕೋಲಾರದ ಜಕ್ಕಸಂದ್ರ 2ನೇ ಹಂತ, ಮಂಡ್ಯದ ಕುದುರೆಗುಂಡಿ ಕೈಗಾರಿಕಾ ಪ್ರದೇಶ, ಹಾಸನದ ಅರಸೀಕೆರೆ ಕೈಗಾರಿಕಾ ಪ್ರದೇಶ, ಹಾಸನ ಮತ್ತು ಯಾದಗಿರಿಯ ಕಡೇಚೂರು 2ನೇ ಹಂತ, ಓಬಳಾಪುರ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿಪಡಿಸಲಿದೆ ಎಂದು ಹೇಳಿದರು.

    ಈ ಕೈಗಾರಿಕಾ ಪ್ರದೇಶಗಳು ಅಭಿವೃದ್ಧಿಯಾದರೆ ರಾಜ್ಯಕ್ಕೆ ದೊಡ್ಡ ಮಟ್ಟದಲ್ಲಿ ಬಂಡವಾಳ ಹರಿದುಬರಲಿದ್ದು, ಕೈಗಾರಿಕೆಗಳ ಪುನಶ್ಚೇತನ ಮತ್ತು ಹೆಚ್ಚು ಉದ್ಯೋಗ ಸೃಷ್ಟಿ ಆಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ಇದನ್ನೂ ಓದಿ: ಸುಳ್ಳು ಭರವಸೆಗಳನ್ನು ಕೇಳಬೇಕಿದ್ದರೆ ಮೋದಿ, ಕೇಜ್ರಿವಾಲ್ ಮಾತು ಕೇಳಿ: ರಾಹುಲ್ ಗಾಂಧಿ

    ಜೆಡಿಎಸ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅವರ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸಚಿವ ನಿರಾಣಿಯವರು, ರಾಜ್ಯದಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶವನ್ನು ನವೆಂಬರ್ 2 ರಿಂದ 4, 2022 ರವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಪ್ರಕಟಿಸಿದರು.

    ಕರ್ನಾಟಕವು ಈವರೆಗೆ ಒಟ್ಟು 1,02,866 ಕೋಟಿ ರೂ. ಹೂಡಿಕೆಗಳನ್ನು ಆಕರ್ಷಿಸಿದೆ. 2021ರ ಹಣಕಾಸು ವರ್ಷದ ಏಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ ಶೇ. 46ರಷ್ಟು ವಿದೇಶಿ ಬಂಡವಾಳ ಹೂಡಿಕೆಯನ್ನು ಆಕರ್ಷಿಸಿ ಇಡೀ ದೇಶದಲ್ಲಿಯೇ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಹೂಡಿಕೆಗಳನ್ನು ಆಕರ್ಷಿಸುವ ಮತ್ತು ರಾಜ್ಯದಲ್ಲಿ ಕೈಗಾರಿಕಾ ಬೆಳವಣಿಗೆಯನ್ನು ಉತ್ತೇಜಿಸುವ ಉದ್ದೇಶದಿಂದ ಕೈಗಾರಿಕಾ 2020-25 ನೀತಿಯನ್ನು ಜಾರಿಗೆ ತಂದಿದ್ದೇವೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಆಸ್ಟ್ರೇಲಿಯಾದ ಮ್ಯಾಕ್ಸ್‌ವೆಲ್ ತಮಿಳುನಾಡಿನ ಅಳಿಯ – ಆಮಂತ್ರಣ ಪತ್ರಿಕೆ ವೈರಲ್

    ಬೆಂಗಳೂರು ನಗರ, ಮುಂಬೈ, ಗುಜರಾತ್ ಸೇರಿದಂತೆ ವಿವಿಧ ಭಾಗಗಳಲ್ಲಿ ಮೈಸೂರ್ ಲ್ಯಾಂಪ್ ಲಿಮಿಟೆಡ್‍ಗೆ 249.10 ಕೋಟಿ ಆಸ್ತಿಯಿದ್ದು, ಎನ್‍ಜಿಇಎಫ್ ಲಿ.,ನ ನೂರಾರು ಕೋಟಿ ರೂ. ಮೌಲ್ಯದ ಆಸ್ತಿ ಇದೆ. ಆದರೆ, ಇದನ್ನು ಪರಭಾರೆ ಮಾಡುವ ಯಾವುದೇ ಉದ್ದೇಶ ಸರ್ಕಾರಕ್ಕೆ ಇಲ್ಲ ಎಂದು ಸ್ಪಷ್ಟಪಡಿಸಿದರು.

    ಮೈಸೂರು ಲ್ಯಾಂಪ್ಸ್‌ಗೆ ನಗರದ ಮಲ್ಲೇಶ್ವರಂನ ಪಶ್ಚಿಮ ಹಳೇ ತುಮಕೂರು ರಸ್ತೆಯಲ್ಲಿ 21 ಎಕರೆ 6.73 ಗುಂಟೆ ಭೂಮಿ ಮತ್ತು ಕಟ್ಟಡಗಳಿವೆ. ರಾಜ್‍ಮಹಲ್ ವಿಲಾಸ್ ಬಡಾವಣೆಯ 2ನೇ ಹಂತದಲ್ಲಿ ಎಚ್‍ಐಜಿ ಬಂಗಲೆ 307 ಚದರ.ಮೀ ವಿಸ್ತೀರ್ಣವಿದೆ. ಅದೇ ಜಾಗದಲ್ಲಿ 309 ಚದರ ಮೀಟರ್ ಮತ್ತೊಂದು ನಿವೇಶನವಿದೆ ಎಂದರು. ಇದನ್ನೂ ಓದಿ: ಈಶಾನ್ಯ ಭಾರತದವರ ಜೀವನ ಶೈಲಿಯ ಮೇಲೆ ಬಿಜೆಪಿ ಹಸ್ತಕ್ಷೇಪ: ಪ್ರಿಯಾಂಕಾ ಗಾಂಧಿ

    ಮುಂಬೈನ ಪೊರ್ಲಿ ಪ್ರದೇಶದ ಟಿವಿ ಇಂಡಸ್ಟ್ರಿಯಲ್ ಎಸ್ಟೇಟ್‍ನಲ್ಲಿ 79 ಚದರ ಅಡಿ ಕಟ್ಟಡವಿದೆ. ಅಹಮದಾಬಾದ್‍ನಗರದ ನವರಂಗ್ ವೃತ್ತದಲ್ಲಿ ಜಿಟಿ ಅಸೋಸಿಯೇಷನ್ ಸಮುಚ್ಚಯದ 8ನೆ ಹಂತಸ್ತಿನಲ್ಲಿ 1043 ಚದರ ಅಡಿ ಕಟ್ಟಡ, ನೆಲಮಹಡಿಯಲ್ಲಿ 300 ಅಡಿ ಜಾಗ ಇದೆ. ಈ ಸ್ಥಿರಾಸ್ತಿಗಳ ಒಟ್ಟು ಮೌಲ್ಯ 249.10 ಕೋಟಿ ಎಂದು ಅಂದಾಜಿಸಲಾಗಿದೆ ಎಂದರು.

    ಎನ್‍ಜಿಇಎಫ್‍ನ ಸಂಸ್ಥೆಗೆ ಬೆಂಗಳೂರಿನ ಕೆಆರ್‌ಪುರಂ ತಾಲೂಕಿನ ಬಯ್ಯಪ್ಪನಹಳ್ಳಿ ಮತ್ತು ಬೆನ್ನಿಗಾನಹಳ್ಳಿ ಗ್ರಾಮಗಳಲ್ಲಿ 119.60 ಎಕರೆ ಜಮೀನು ಇದ್ದು ಇದರಲ್ಲಿ 105 ಎಕರೆ ಕಾಂಪೌಂಡ್‍ನೊಳಗೆ ಉಳಿದ ಜಮೀನು ಕಾಂಪೌಂಡ್‍ನ ಹೊರಗೆ ಇದೆ. ಇದನ್ನು ಖಚಿತಪಡಿಸಿಕೊಳ್ಳಲು ಭೂಮಾಪನ ಕಂದಾಯ ವ್ಯವಸ್ಥೆ ಹಾಗೂ ಭೂ ದಾಖಲೆ ಇಲಾಖೆಗಳನ್ನು ಕೋರಲಾಗಿದೆ. ಕಚ್ಚಾ ಮಾಲಾಗಿ ಉಪಯೋಗಿಸುತ್ತಿದ್ದ 14.57 ಕೆಜಿ ಬೆಳ್ಳಿ , 5.5 ಕೆಜಿ ಮಿಶ್ರ ಲೋಹದ ಚರಾಸ್ತಿ ಸಹ ಇದೆ ಎಂದು ವಿವರಿಸಿದರು. ಇದನ್ನೂ ಓದಿ: ಯುವಕರಿಗೆ ಉದ್ಯೋಗ, ಬಡವರಿಗೆ 1 ಕೆಜಿ ಉಚಿತ ತುಪ್ಪ: ಅಖಿಲೇಶ್ ಯಾದವ್ ಭರವಸೆ

    ಮೈಸೂರು ಲ್ಯಾಂಪ್ಸ್ ಜಾಗದಲ್ಲಿ ಬೆಂಗಳೂರಿನ ಇತಿಹಾಸ, ರಾಜ್ಯದ ಆಹಾರ ಪದ್ದತಿ ಸೇರಿದಂತೆ ಹಲವಾರು ಐತಿಹಾಸಿಕ ಯೋಜನೆಗಳನ್ನು ಜಾರಿಗೊಳಿಸಲು “ಬೆಂಗಳೂರು ಬೆಳಕು” ಎಂಬ ಕಾರ್ಯಕ್ರಮ ರೂಪಿಸಲಾಗಿದೆ. ಈ ಜಾಗದ ಹಸರೀಕರಣ ಹಾಗೂ ವಿವಿಧ ಯೋಜನೆಗಳಿಗಾಗಿ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ 7 ಮಂದಿ ಐಎಎಸ್ ಅಕಾರಿಗಳು, 5 ಖಾಸಗಿ ವ್ಯಕ್ತಿಗಳನ್ನು ಒಳಗೊಂಡ ಟ್ರಸ್ಟ್ ರಚಿಸಲಾಗಿದೆ. ಯಾವುದೇ ಕಾರಣಕ್ಕೂ ಜಾಗವನ್ನು ಪರಭಾರೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

  • ಕೈಗಾರಿಕಾ ಪ್ರದೇಶದಲ್ಲಿ ಹೆಚ್ಚಾಯಿತು ಕೊರೊನಾ ಸೋಂಕು, ಪ್ರತಿಷ್ಠಿತ ಕಂಪನಿಗಳು ಸೀಲ್‍ಡೌನ್

    ಕೈಗಾರಿಕಾ ಪ್ರದೇಶದಲ್ಲಿ ಹೆಚ್ಚಾಯಿತು ಕೊರೊನಾ ಸೋಂಕು, ಪ್ರತಿಷ್ಠಿತ ಕಂಪನಿಗಳು ಸೀಲ್‍ಡೌನ್

    ಕೋಲಾರ: ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಓಟಕ್ಕೆ ಬ್ರೇಕ್ ಇಲ್ಲವಾಗಿದೆ. ಈ ಮಧ್ಯೆ ಕೈಗಾರಿಕಾ ಪ್ರದೇಶಗಳಲ್ಲಿ ಕೊರೊನಾ ವೈರಸ್ ಉತ್ಪಾದನೆಯಾಗುವ ಮೂಲಕ ಜಿಲ್ಲೆಯಲ್ಲಿ ಆತಂಕ ಹೆಚ್ಚಾಗಿದೆ. ದೇಶದ ಪ್ರತಿಷ್ಠಿತ ವಿಸ್ಟ್ರಾನ್ ಹಾಗೂ ಹೋಂಡಾ ಕಂಪನಿಯಲ್ಲಿ ಸೋಂಕು ಪತ್ತೆಯಾಗಿದ್ದು ಕೈಗಾರಿಕಾ ಪ್ರದೇಶ ಬಹುತೇಕ ಬಂದ್ ಆಗಿದೆ.

    ಕೊರೊನಾ ಲಾಕ್‍ಡೌನ್ ವೇಳೆ ಕಾರ್ಮಿಕರಿಗೆ ಹಾಗೂ ದಿನಗೂಲಿ ಕೆಲಸಗಾರರಿಗೆ ಯಾವುದೇ ತೊಂದರೆ ಆಗದಂತೆ ಸರ್ಕಾರ ಕೈಗಾರಿಕೆಗಳು ಹಾಗೂ ಕಟ್ಟಡ ನಿರ್ಮಾಣಕ್ಕೆ ವಿನಾಯಿತಿ ನೀಡಿದೆ. ಆದರೆ ಇದನ್ನ ಸಹಿಸದ ಕೊರೊನಾ ಆ ಕೈಗಾರಿಕಾ ಪ್ರದೇಶಗಳಲ್ಲೂ ತನ್ನ ಅಟ್ಟಹಾಸ ಮೆರೆಯುವ ಮೂಲಕ ಕೈಗಾರಿಕಾ ಪ್ರದೇಶಕ್ಕೆ ಬೀಗ ಹಾಕಿದೆ. ಹೌದು ಕೋಲಾರ ತಾಲೂಕು ನರಸಾಪುರ ಕೈಗಾರಿಕಾ ಪ್ರದೇಶದಲ್ಲಿನ ಪ್ರತಿಷ್ಠಿತ ಕಂಪನಿಗಾಳಾದ ವಿಸ್ಟ್ರಾನ್ ಹಾಗೂ ಹೋಂಡಾ ಕಂಪನಿಗಳಲ್ಲಿ ಕೆಲಸ ಮಾಡುವ ನೂರಾರು ಜನ ಕಾರ್ಮಿಕರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.

    ಹಲವು ಜನ ಕಾರ್ಮಿಕರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿನ ಹೊಂಡಾ ಹಾಗೂ ವಿಸ್ಟ್ರಾನ್ ಕಂಪನಿಗಳನ್ನು ಒಂದು ವಾರದ ಕಾಲ ಬಂದ್ ಮಾಡಲಾಗಿದೆ. ವಿಸ್ಟ್ರಾನ್ ಕಂಪನಿಯಲ್ಲಿ ಸುಮಾರು 120 ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರೆ, ಹೋಂಡಾ ಕಂಪನಿಯಲ್ಲೂ ಸುಮಾರು 100 ಕ್ಕೂ ಹೆಚ್ಚು ಜನರಲ್ಲಿ ಸೊಂಕು ಕಾಣಿಸಿಕೊಂಡಿದೆ. ಪರಿಣಾಮ ಕೈಗಾರಿಕೆಗಳಿಗೆ ಸೋಂಕು ನಿವಾರಕವನ್ನು ಸಿಂಪಡಿಸಿ, ಕೆಲ ದಿನಗಳ ಕಾಲ ಕೈಗಾರಿಕೆಗಳ ಉತ್ಪಾದನೆಯನ್ನು ಸ್ಥಗಿತ ಮಾಡಲಾಗಿದೆ.

    ಕೈಗಾರಿಕಾ ಪ್ರದೇಶದಲ್ಲಿನ ದೈತ್ಯ ಕಂಪನಿಗಳಲ್ಲಿ ಆತಂಕ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕೈಗಾರಿಕಾ ಪ್ರದೇಶದಲ್ಲಿದ್ದ ಸಣ್ಣ ಸಣ್ಣ ಕಂಪನಿಗಳು ಕೂಡಾ ಒಂದು ವಾರಗಳ ಕಾಲ ಬಂದ್ ಮಾಡಿವೆ. ಇನ್ನು ಕೆಲವು ಕಂಪನಿಗಳು ಕೆಲಸಕ್ಕೆ ಬರುವ ಕಾರ್ಮಿಕರು ಕಂಪನಿಗೆ ಹಾಜರಾಗಬೇಕಾದ್ರೆ ಅದಕ್ಕೂ ಮುನ್ನ ಕಡ್ಡಾಯವಾಗಿ ಕೊರೊನಾ ಟೆಸ್ಟ್ ಸರ್ಟಿಪಿಕೇಟ್ ತರಬೇಕು ಎಂದು ಹೇಳಿವೆ.

    ಹಾಗಾಗಿ ಕೋಲಾರ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಕೊರೊನಾ ಟೆಸ್ಟ್ ಮಾಡಿಸಲು ಸಾವಿರಾರು ಸಂಖ್ಯೆಯ ಕಾರ್ಮಿಕರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಆಸ್ಪತ್ರೆಯಲ್ಲಿ ಸರಿಯಾದ ಸಿಬ್ಬಂದಿಗಳ ಕೊರೆತೆಯಿಂದ ಸಮರ್ಪಕವಾಗಿ ಹಾಗೂ ಶೀಘ್ರವಾಗಿ ಟೆಸ್ಟ್ ಮಾಡಲಾಗದೆ ಸಿಬ್ಬಂದಿಗಳು ಸರ್ಕಸ್ ಮಾಡುತ್ತಿದ್ದರೆ ಕಾರ್ಮಿಕರು ಕೊರೊನಾ ಟೆಸ್ಟ್ ಗಾಗಿ ಸಂಜೆವರೆಗೂ ಸಾಲುಗಟ್ಟಿ ನಿಂತಿದ್ದ ದೃಶ್ಯಗಳು ಜಿಲ್ಲಾಸ್ಪತ್ರೆಯ ಬಳಿ ಕಂಡು ಬಂದಿತ್ತು. ಪರಿಣಾಮ ಜಿಲ್ಲಾದಿಕಾರಿ ಡಾ.ಆರ್.ಸೆಲ್ವಮಣಿ ಭೇಟಿ ನೀಡಿ ಕೈಗಾರಿಕೆಗಳ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ. ಕೈಗಾರಿಕೆಗಳಲ್ಲೆ ವ್ಯವಸ್ಥೆ ಮಾಡುವಂತೆ ಆಯಾ ಕೈಗಾರಿಕೆಗಳ ಮುಖ್ಯಸ್ಥರಿಗೆ ಸೂಚನೆ ನೀಡಿದ್ದಾರೆ.

    ಕೊರೊನಾವನ್ನು ಕಟ್ಟಿ ಹಾಕಲು ರಾಜ್ಯ ಸರ್ಕಾರ ಲಾಕ್‍ಡೌನ್ ಘೋಷಣೆ ಮಾಡಿ, ಕೈಗಾರಿಕೆ ಸೇರಿದಂತೆ ಕೆಲವು ವಲಯಗಳಿಗೆ ವಿನಾಯಿತಿ ನೀಡಿತ್ತು. ಆದರೆ ಅದನ್ನು ಸಹಿಸದ ಕೊರೊನಾ ಆ ಕ್ಷೇತ್ರಗಳ ಮೇಲೆ ತನ್ನ ವಕ್ರ ದೃಷ್ಟಿ ಬೀರಿದೆ. ಈ ಮೂಲಕ ಕೈಗಾರಿಕಾ ಪ್ರದೇಶದಲ್ಲೂ ಕೊರೊನಾದ್ದೇ ಕಾರುಬಾರು ಎನ್ನುವಂತಾಗಿದೆ.

  • ಭಾರತ್ ಬಂದ್‍ಗೆ ರಾಮನಗರ ಕೈಗಾರಿಕಾ ಪ್ರದೇಶದಲ್ಲಿ ಮಿಶ್ರ ಪ್ರತಿಕ್ರಿಯೆ

    ಭಾರತ್ ಬಂದ್‍ಗೆ ರಾಮನಗರ ಕೈಗಾರಿಕಾ ಪ್ರದೇಶದಲ್ಲಿ ಮಿಶ್ರ ಪ್ರತಿಕ್ರಿಯೆ

    ರಾಮನಗರ: ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್‍ಗೆ ರೇಷ್ಮೆನಗರಿ ರಾಮನಗರ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದರೆ, ಜಿಲ್ಲೆಯಲ್ಲಿನ ಎರಡೂ ಕೈಗಾರಿಕಾ ಪ್ರದೇಶದಲ್ಲಿ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ.

    ರಾಮನಗರದಲ್ಲಿ ಬೆಳಗ್ಗೆ 5:40ಕ್ಕೆ ಸರ್ಕಾರಿ ಬಸ್ಸುಗಳು ಬಸ್ ನಿಲ್ದಾಣಕ್ಕೆ ಆಗಮಿಸಿದ್ದವು. ಅಲ್ಲದೇ ಜಿಲ್ಲೆಯಾದ್ಯಂತ ಸಂಚಾರ ವ್ಯವಸ್ಥೆಯಲ್ಲಿ ಯಾವುದೇ ರೀತಿಯ ತೊಂದರೆಗಳು ಆಗಲಿಲ್ಲ. ದಿನನಿತ್ಯದಂತೆ ಬಸ್, ಕ್ಯಾಬ್, ಆಟೋಗಳು ರಸ್ತೆಗಿಳಿದು ಸಂಚಾರ ನಡೆಸುತಿತ್ತು.

    ಬಂದ್ ವಿಚಾರವಾಗಿ ಯಾವುದೇ ಸಂಘಟನೆಗಳು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಅನುಮತಿ ಪಡೆಯದ ಹಿನ್ನೆಲೆಯಲ್ಲಿ ಪ್ರತಿಭಟನೆ, ರಸ್ತೆತಡೆ, ಮೆರವಣಿಗೆ, ಧರಣಿ ನಡೆಸಿದರೆ ಕಾನೂನು ಕ್ರಮ ಜರುಗಿಸುವುದಾಗಿ ರಾಮನಗರ ಎಸ್‍ಪಿ ಅನೂಪ್ ಎ ಶೆಟ್ಟಿ ಆದೇಶಿಸಿದ್ದರು. ಆದ್ದರಿಂದ ಪ್ರತಿಭಟನಾಕಾರರು ರಸ್ತೆಗೆ ಇಳಿಯುವ ಕೆಲಸ ಮಾಡಲಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಪ್ರತಿಭಟನೆಗಳೇ ನಡೆಯದೇ ಬಂದ್ ನೀರಸವಾಗಿತ್ತು.

    ಜಿಲ್ಲೆಯ ಬಿಡದಿ, ಹಾರೋಹಳ್ಳಿ ಕೈಗಾರಿಕಾ ಪ್ರದೇಶಗಳಲ್ಲಿ ಕಾರ್ಖಾನೆಗಳನ್ನು ಮುಚ್ಚುವಂತೆ ಸಿಐಟಿಯು ಕೈಗಾರಿಕೆಗಳಿಗೆ ಸಂದೇಶ ರವಾನಿಸಿತ್ತು. ಅಲ್ಲದೇ ಕಾರ್ಮಿಕರು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿನ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿತ್ತು.

    ಆದರೆ ಎರಡೂ ಕೈಗಾರಿಕಾ ಪ್ರದೇಶಗಳು ಸಹ ಸ್ಥಬ್ಧವಾಗಿರಲಿಲ್ಲ. ಬಿಡದಿ ಇಂಡಸ್ಟ್ರಿಯಲ್ ಏರಿಯಾದಲ್ಲಿ 130ಕ್ಕೂ ಹೆಚ್ಚು ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿದ್ದರೆ, ಹಾರೋಹಳ್ಳಿ ಇಂಡಸ್ಟ್ರಿಯಲ್ ಏರಿಯಾದಲ್ಲಿ 100ಕ್ಕೂ ಹೆಚ್ಚು ಕಾರ್ಖಾನೆಗಳಿವೆ. ಆದರೆ ಇಂದು ಭಾರತ್ ಬಂದ್ ಇದ್ದರೂ ಕೆಲವೇ ಕೆಲವು ಕಾರ್ಖಾನೆಗಳು ಬಂದ್ ಆಗಿವೆ. ಬಹುತೇಕ ಕಾರ್ಖಾನೆಗಳು ದಿನನಿತ್ಯದಂತೆ ಕಾರ್ಯನಿರ್ವಹಿಸುತಿತ್ತು. ಕಾರ್ಖಾನೆಗಳು ಬಂದ್ ಮಾಡದಿದ್ದರೂ ಸಹ ಕಾರ್ಮಿಕರು ಕೆಲಸಕ್ಕೆ ಗೈರಾಗಿ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ತೆರಳಿದ್ದರು.

  • 1 ನಿಮಿಷದಲ್ಲಿ 1,400 ಎಕರೆ ಕೈಗಾರಿಕಾ ಪ್ರದೇಶ ವೀಕ್ಷಿಸಿ ಕಾಲ್ಕಿತ್ತ ಸಚಿವ ಜಾರ್ಜ್!

    1 ನಿಮಿಷದಲ್ಲಿ 1,400 ಎಕರೆ ಕೈಗಾರಿಕಾ ಪ್ರದೇಶ ವೀಕ್ಷಿಸಿ ಕಾಲ್ಕಿತ್ತ ಸಚಿವ ಜಾರ್ಜ್!

    ಚಾಮರಾಜನಗರ: ಭಾರೀ ಮತ್ತು ಮಧ್ಯಮ ಕೈಗಾರಿಕೆ, ಐಟಿ, ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಕೆ.ಜೆ.ಜಾರ್ಜ್ ಕೇವಲ ಒಂದು ನಿಮಿಷದಲ್ಲೇ 1,400 ಎಕರೆ ಕೈಗಾರಿಕಾ ಪ್ರದೇಶವನ್ನು ಪರಿಶೀಲನೆ ಮಾಡಿ ಕಾಲ್ಕಿತ್ತಿದ್ದಾರೆ.

    ಗಡಿ ಜಿಲ್ಲೆ ಚಾಮರಾಜನಗರದ ಕೆಲ್ಲಂಬಳ್ಳಿ ಹಾಗೂ ಬದನಗುಪ್ಪೆ ಕೈಗಾರಿಕಾ ಪ್ರದೇಶವನ್ನು ವೀಕ್ಷಿಸಲು ಜಾರ್ಜ್ ಬರುತ್ತಿದ್ದಾರೆ ಎನ್ನುವ ಮಾಹಿತಿ ತಿಳಿದು ಅಧಿಕಾರಿಗಳು ಸಕಲ ಸಿದ್ಧತೆ ನಡೆಸಿದ್ದರು. ಅಧಿಕಾರಿಗಳು ಒಂದು ವಾರದಿಂದ ಇಲ್ಲಿನ ಸಮಸ್ಯೆಗಳನ್ನು ಹಾಗೂ ಪರಿಹಾರವನ್ನು ಪಟ್ಟಿಮಾಡಿಕೊಂಡು ಸ್ಥಳ ವೀಕ್ಷಣೆಗೆ ಸಜ್ಜಾಗಿದ್ದರು. ಇದನ್ನೂ ಓದಿ: ಗಡಿ ಜಿಲ್ಲೆ ಅಭಿವೃದ್ಧಿ ಕನಸಿಗೆ ತೊಡಕಾದ ಮೂಲಭೂತ ಸೌಲಭ್ಯ- ಸರ್ಕಾರದ 800ಕೋಟಿ ರೂ. ಯೋಜನೆ ವ್ಯರ್ಥ

    ನಿಗದಿಯಂತೆ ಆಗಮಿಸಿದ ಜಾರ್ಜ್ 1,400 ಎಕರೆ ಕೈಗಾರಿಕಾ ಪ್ರದೇಶವನ್ನು ಕೇವಲ ಒಂದೇ ನಿಮಿಷದಲ್ಲಿ ವೀಕ್ಷಣೆ ಮಾಡಿದ್ದಾರೆ. ಕಾರಿನಲ್ಲಿ ಕೈಗಾರಿಕಾ ಪ್ರದೇಶಕ್ಕೆ ಬಂದಿಳಿದ ಜಾರ್ಜ್ ಸಚಿವ ಕೈ ಕುಲುಕಿ ಹಾರ ಹಾಕಿಸಿಕೊಂಡು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

    ಈಗ ಜಾರ್ಜ್ ಬಂದ ಪುಟ್ಟ, ಹೋದ ಪುಟ್ಟ ಎಂಬಂತೆ ಕಾಟಚಾರಕ್ಕೆ ಕೈಗಾರಿಕಾ ಪ್ರದೇಶದ ಪರಿಶೀಲನೆ ನಡೆಸಿದ್ದಾರೆ ಅಂತ ಸ್ಥಳೀಯರು ಆಕ್ರೋಶ ಹೊರ ಹಾಕುತ್ತಿದ್ದಾರೆ.

  • ಗಡಿ ಜಿಲ್ಲೆ ಅಭಿವೃದ್ಧಿ ಕನಸಿಗೆ ತೊಡಕಾದ ಮೂಲಭೂತ ಸೌಲಭ್ಯ- ಸರ್ಕಾರದ 800ಕೋಟಿ ರೂ. ಯೋಜನೆ ವ್ಯರ್ಥ

    ಗಡಿ ಜಿಲ್ಲೆ ಅಭಿವೃದ್ಧಿ ಕನಸಿಗೆ ತೊಡಕಾದ ಮೂಲಭೂತ ಸೌಲಭ್ಯ- ಸರ್ಕಾರದ 800ಕೋಟಿ ರೂ. ಯೋಜನೆ ವ್ಯರ್ಥ

    ಚಾಮರಾಜನಗರ: ರಾಜ್ಯದ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಕೈಗಾರಿಕೋದ್ಯಮವನ್ನು ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಸಿದ್ದರಾಮಯ್ಯ ಸರ್ಕಾರ 800 ಕೋಟಿಗೂ ಅಧಿಕ ಹಣ ಖರ್ಚು ಮಾಡಿರುವ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ.

    ರಾಜ್ಯದಲ್ಲಿ 5 ವರ್ಷಗಳ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ, ಚಾಮರಾಜನಗರ ಹೊರವಲಯದ ಬದನಗುಪ್ಪೆ ಬಳಿ 2000 ಎಕರೆ ಪ್ರದೇಶದವನ್ನು ಖರೀದಿಸಿ ಜಮೀನನ್ನು ಕೈಗಾರಿಕೋದ್ಯಮಕ್ಕಾಗಿ ಅಭಿವೃದ್ಧಿಪಡಿಸಲಾಗಿತ್ತು. ಈ ದೃಷ್ಟಿಯಿಂದ ತಮಿಳುನಾಡಿನ ಕೊಯಮತ್ತೂರಿನಲ್ಲಿ ಇಡೀ ಮಂತ್ರಿ ಮಂಡಲ ರೋಡ್ ಶೋ ನಡೆಸಿತ್ತು. ಇದರಿಂದರ 150 ಜನ ಉದ್ಯಮಿಗಳು ಈ ಪ್ರದೇಶದಲ್ಲಿ 12 ಸಾವಿರ ಕೋಟಿ ಬಂಡವಾಳ ಹೂಡಲು ಮುಂದೆ ಬಂದಿದ್ದರು. ಆದರೆ ಸರ್ಕಾರ ಕೈಗಾರಿಗಾ ಪ್ರದೇಶದಲ್ಲಿ ನೀರು ಮತ್ತು ಇನ್ನಿತರ ಸೌಲಭ್ಯವನ್ನು ಕಲ್ಪಿಸದೆ ನಿರ್ಲಕ್ಷ್ಯ ವಹಿಸಿದೆ.

    ಈ ಪ್ರದೇಶದಲ್ಲಿ ಮೂಲಭೂತ ಸೌಲಭ್ಯಗಳಿಲ್ಲದೇ ಉದ್ಯಮಿಗಳು ಇಲ್ಲಿ ಬಂಡವಾಳ ಹೂಡಿಕೆ ಮಾಡುವುದಕ್ಕೆ ಹಿಂದೆ ಸರಿದಿದ್ದಾರೆ. ಹೀಗಾಗಿ 5 ವರ್ಷಗಳಿಂದ ಈ ಪ್ರದೇಶ ಯಾವುದೇ ಅಭಿವೃದ್ಧಿ ಚಟುವಿಟಿಕೆ ಇಲ್ಲದೇ ಸ್ತಬ್ಧವಾಗಿದೆ. ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್ ಸೋಮವಾರ(ನಾಳೆ) ಜಿಲ್ಲೆಯ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಲಿದ್ದು, ಇದರ ಅಭಿವೃದ್ಧಿಗೆ ಮತ್ತಷ್ಟು ಹಣ ಸುರಿಯಲಿದ್ದಾರೆ. ಸರ್ಕಾರದ ಹಣ ಮಾತ್ರ ನೀರಿನ ಹಾಗೆ ಖರ್ಚಾಗುತ್ತಿದ್ದು, ಇಲ್ಲಿ ಉದ್ಯಮಿಗಳನ್ನು ಕರೆತರಲು ಯಾರು ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.