Tag: Indus River

  • ಸಿಂಧೂ ನದಿ ನೀರು ಈಶಾನ್ಯ ರಾಜ್ಯಗಳಿಗೆ ಹರಿಸಲು ಕೇಂದ್ರ ಸರ್ಕಾರ ಪ್ಲ್ಯಾನ್‌

    ಸಿಂಧೂ ನದಿ ನೀರು ಈಶಾನ್ಯ ರಾಜ್ಯಗಳಿಗೆ ಹರಿಸಲು ಕೇಂದ್ರ ಸರ್ಕಾರ ಪ್ಲ್ಯಾನ್‌

    – ಪಾಕಿಸ್ತಾನಕ್ಕೆ ಹೆಚ್ಚುವರಿ ನೀರು ಹರಿಯುವುದನ್ನು ತಪ್ಪಿಸುತ್ತೆ ಯೋಜನೆ

    ನವದೆಹಲಿ: ಸಿಂಧೂ ನದಿ (Indus River) ನೀರನ್ನು ಈಶಾನ್ಯ ರಾಜ್ಯಗಳಿಗೆ ಹರಿಸಲು ಕೇಂದ್ರ ಸರ್ಕಾರ ಯೋಜಿಸಿದೆ. 2029ರ ಚುನಾವಣೆಗೂ ಮುನ್ನ ಯೋಜನೆ ಪೂರ್ಣಗೊಳಿಸಲು ಕೇಂದ್ರ ಮುಂದಾಗಿದೆ.

    ಕಳೆದ ಶುಕ್ರವಾರ ಕೇಂದ್ರದ ಹಿರಿಯ ಸಚಿವ ಸಭೆಯಲ್ಲಿ ಈ ಸಂಬಂಧ ಡಿಪಿಆರ್ ಸಿದ್ಧಪಡಿಸಲು ಒಪ್ಪಿಗೆ ಸೂಚಿಸಲಾಗಿದೆ. ಮುಂದಿನ ವರ್ಷದಲ್ಲಿ ವಿಸ್ತೃತ ಯೋಜನಾ ವರದಿ ನೀಡಲು ಎಲ್ ಆ್ಯಂಡ್ ಟಿ ಕಂಪನಿಗೆ ಸೂಚನೆ ನೀಡಲಾಗಿದೆ.

    ಉತ್ತರ ರಾಜ್ಯಗಳ ನೀರಿನ ಬೇಡಿಕೆಗಳನ್ನು ಪೂರೈಸಲು ಭಾರತ ಸಿಂಧೂ ನದಿ ವ್ಯವಸ್ಥೆಯಲ್ಲಿ ಬೃಹತ್ ಬದಲಾವಣೆಗಳನ್ನು ಮಾಡಲು ಸಜ್ಜಾಗಿದೆ. ಪಾಕಿಸ್ತಾನದೊಂದಿಗಿನ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಿದ ನಂತರ ಕೇಂದ್ರ ಈ ಕಾರ್ಯತಂತ್ರ ರೂಪಿಸಿದೆ. ಇದನ್ನೂ ಓದಿ: ಅ.6ರ ಬಳಿಕ ಬಿಹಾರ ವಿಧಾನಸಭೆ ಚುನಾವಣೆಗೆ ದಿನಾಂಕ ಪ್ರಕಟಿಸುವ ಸಾಧ್ಯತೆ

    ಉತ್ತರ ರಾಜ್ಯಗಳಿಗೆ ಸಿಂಧೂ ನದಿ ನೀರನ್ನು ತಲುಪಿಸುವ ಉದ್ದೇಶಿತ 113 ಕಿ.ಮೀ. ಕಾಲುವೆಯ ಕಾಮಗಾರಿ ಬಗ್ಗೆ ಸಭೆಯಲ್ಲಿ ಪರಿಶೀಲಿಸಲಾಯಿತು ಎಂದು ಮೂಲಗಳು ತಿಳಿಸಿವೆ.

    ಸಿಂಧೂ ನದಿ ನೀರು ಒಪ್ಪಂದವು 1960 ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಆಗಿತ್ತು. ವಿಶ್ವಬ್ಯಾಂಕ್ ಹಸ್ತಕ್ಷೇಪದ ನಂತರ ಸಹಿ ಹಾಕಲಾದ ಒಂದು ಮಹತ್ವದ ನೀರು ಹಂಚಿಕೆ ಒಪ್ಪಂದ ಇದಾಗಿದೆ. ಏಪ್ರಿಲ್ 22 ರ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತವು ಒಪ್ಪಂದವನ್ನು ಸ್ಥಗಿತಗೊಳಿಸಿತು. ‘ನೀರು ಮತ್ತು ರಕ್ತ ಒಟ್ಟಿಗೆ ಹರಿಯಲು ಸಾಧ್ಯವಿಲ್ಲ’ ಎಂದು ಸರ್ಕಾರ ಪ್ರತಿಪಾದಿಸಿತ್ತು.

    ಅಂದಿನಿಂದ ಸರ್ಕಾರವು ಭಾರತದ ಸಿಂಧೂ ನದಿ ನೀರಿನ ಪಾಲನ್ನು ಬಳಸಿಕೊಳ್ಳಲು ವಿವರವಾದ ಯೋಜನೆಯನ್ನು ರೂಪಿಸುತ್ತಿದೆ. ಅದಕ್ಕಾಗಿ, ಅಂತರ-ಜಲಾನಯನ ಸಿಂಧೂ ಜಲ ವರ್ಗಾವಣೆ ಯೋಜನೆಯಡಿಯಲ್ಲಿ ಮಹತ್ವಾಕಾಂಕ್ಷೆಯ ಯೋಜನೆಯನ್ನು ರೂಪಿಸಲಾಗಿದೆ. ಸರ್ಕಾರದ ಉನ್ನತ ಮಟ್ಟದಲ್ಲಿ ಮೇಲ್ವಿಚಾರಣೆ ಮಾಡಲಾಗುತ್ತಿದೆ.

    14 ಕಿ.ಮೀ. ಸುರಂಗದ ನಿರ್ಮಾಣ ಮಾಡುವುದು ಈ ಯೋಜನೆಯ ಅತ್ಯಂತ ಸವಾಲಿನ ಸಂಗತಿಯಾಗಿದೆ ಎಂದು ಮೂಲಗಳು ತಿಳಿಸಿವೆ. ಅಂತಹ ಸುರಂಗಕ್ಕೆ ಪರ್ವತ ಬಂಡೆಗಳ ವಿವರವಾದ ಅಧ್ಯಯನದ ಅಗತ್ಯವಿದೆ. ಇದನ್ನೂ ಓದಿ: ಜಾಗತಿಕ ಅಡೆತಡೆ, ಅನಿಶ್ಚಿತತೆಗಳ ಹೊರತಾಗಿಯೂ ಭಾರತದ ಬೆಳವಣಿಗೆ ಆಕರ್ಷಕವಾಗಿದೆ: ಮೋದಿ

    ವೇಗ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸುರಂಗ ಕೊರೆಯುವ ಯಂತ್ರಗಳು ಮತ್ತು ರಾಕ್ ಶೀಲ್ಡ್ ತಂತ್ರಜ್ಞಾನದ ಬಳಕೆಯನ್ನು ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ. ಈ ಸುರಂಗವನ್ನು ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಉಜ್ ಬಹುಪಯೋಗಿ ಯೋಜನೆಗೆ ಸಂಪರ್ಕಿಸಲಾಗುವುದು. ಇದು ರಾವಿಯ ಉಪನದಿಯಾದ ಉಜ್ ನದಿಯಿಂದ ಬಿಯಾಸ್ ಜಲಾನಯನ ಪ್ರದೇಶಕ್ಕೆ ನೀರನ್ನು ವರ್ಗಾಯಿಸಲು ಅನುವು ಮಾಡಿಕೊಡುತ್ತದೆ.

    ಈ ಸುರಂಗದ ಕಾಮಗಾರಿ ಪೂರ್ಣಗೊಳ್ಳುವುದರಿಂದ ರವಿ-ಬಿಯಾಸ್-ಸಟ್ಲೆಜ್ ವ್ಯವಸ್ಥೆಯನ್ನು ಸಿಂಧೂ ನದಿ ಜಲಾನಯನ ಪ್ರದೇಶಕ್ಕೆ ಸಂಪರ್ಕಿಸುತ್ತದೆ. ಇದರಿಂದಾಗಿ ಭಾರತವು ತನ್ನ ನೀರಿನ ಪಾಲಿನ ಬಳಕೆಯನ್ನು ಗರಿಷ್ಠಗೊಳಿಸಲು ಸಾಧ್ಯವಾಗುತ್ತದೆ. ಇದರ ನಿರ್ಮಾಣವು ಮೂರರಿಂದ ನಾಲ್ಕು ವರ್ಷಗಳನ್ನು ತೆಗೆದುಕೊಳ್ಳುತ್ತದೆ. 2028 ರ ವೇಳೆಗೆ ಸಿದ್ಧವಾಗಲಿದೆ ಎಂದು ಮೂಲಗಳು ಅಂದಾಜಿಸಿವೆ. ಅಂದಾಜು ವೆಚ್ಚ ಸುಮಾರು 4,000-5,000 ಕೋಟಿ ರೂ. ಆಗಬಹುದು ಎನ್ನಲಾಗಿದೆ.

    ಈ ಯೋಜನೆಯು ರಾಜಸ್ಥಾನದ ಶುಷ್ಕ ಪ್ರದೇಶಗಳಲ್ಲಿ ಇಂದಿರಾ ಗಾಂಧಿ ಕಾಲುವೆಗೆ ನೀರನ್ನು ತಿರುಗಿಸುವ ಮೂಲಕ ನೀರಾವರಿ ಸಾಮರ್ಥ್ಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಜಮ್ಮು ಮತ್ತು ಕಾಶ್ಮೀರ, ಹರಿಯಾಣ, ದೆಹಲಿ ಮತ್ತು ಪಂಜಾಬ್‌ನಂತಹ ರಾಜ್ಯಗಳು ಸಹ ಈ ಯೋಜನೆಯಿಂದ ಪ್ರಯೋಜನ ಪಡೆಯುತ್ತವೆ. ಚೆನಾಬ್ ನದಿಯನ್ನು ರವಿ-ಬಿಯಾಸ್-ಸಟ್ಲೆಜ್ ವ್ಯವಸ್ಥೆಗೆ ಸಂಪರ್ಕಿಸಲು ಕಾಲುವೆಯನ್ನು ನಿರ್ಮಿಸಲಾಗುವುದು. ಈ ರಾಜ್ಯಗಳ ಅಸ್ತಿತ್ವದಲ್ಲಿರುವ ಕಾಲುವೆ ವ್ಯವಸ್ಥೆಗಳಿಗೆ ಇದನ್ನು ಸಂಪರ್ಕಿಸಲಾಗುವುದು. ಇದರಿಂದ ನೀರು ನೇರವಾಗಿ ಇಂದಿರಾ ಗಾಂಧಿ ಕಾಲುವೆಯನ್ನು ತಲುಪಬಹುದು. ರಾಜಸ್ಥಾನದ ಶ್ರೀ ಗಂಗಾನಗರಕ್ಕೆ ನೀರನ್ನು ತಲುಪಿಸಬಹುದು.

    ಅಲ್ಲದೇ, ಈ ಯೋಜನೆಯು ದೆಹಲಿ, ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನಗಳಲ್ಲಿ ಕುಡಿಯುವ ನೀರಿನ ಲಭ್ಯತೆಯನ್ನು ಹೆಚ್ಚಿಸುತ್ತದೆ. ಈ ಯೋಜನೆಯು ಭಾರತದ ಪಾಲಿನ ಹೆಚ್ಚುವರಿ ನೀರನ್ನು ಪಾಕಿಸ್ತಾನಕ್ಕೆ ಹರಿಯುವುದನ್ನು ತಪ್ಪಿಸುತ್ತದೆ. ಹೀಗಾಗಿ, ದೇಶದ ನೀರಿನ ಭದ್ರತೆಯನ್ನು ಬಲಪಡಿಸುತ್ತದೆ. ಇದು ಹವಾಮಾನ ಬದಲಾವಣೆ ಮತ್ತು ಬದಲಾಗುತ್ತಿರುವ ಮಳೆಯ ಮಾದರಿಗಳ ಪರಿಣಾಮಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ. ಅಸ್ತಿತ್ವದಲ್ಲಿರುವ 13 ಕಾಲುವೆ ವ್ಯವಸ್ಥೆಗಳನ್ನು ಬಲಪಡಿಸುತ್ತದೆ ಎನ್ನಲಾಗಿದೆ.

  • ಡ್ಯಾಮ್ ನಿರ್ಮಾಣಕ್ಕೆ ಸಂಗ್ರಹಿಸಿದ್ದು 300 ಕೋಟಿ, ಜಾಹೀರಾತಿಗೆ ಖರ್ಚಾಗಿದ್ದು 500 ಕೋಟಿ

    ಡ್ಯಾಮ್ ನಿರ್ಮಾಣಕ್ಕೆ ಸಂಗ್ರಹಿಸಿದ್ದು 300 ಕೋಟಿ, ಜಾಹೀರಾತಿಗೆ ಖರ್ಚಾಗಿದ್ದು 500 ಕೋಟಿ

    ಇಸ್ಲಾಮಾಬಾದ್: ಶ್ರೀಲಂಕಾ (SriLanka) ಹಾದಿಯಲ್ಲೇ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಪಾಕಿಸ್ತಾನದಿಂದ (Pakistan) ಮತ್ತೊಂದು ಭ್ರಷ್ಟಾಚಾರದ ಮಾಹಿತಿ ಬೆಳಕಿಗೆ ಬಂದಿದೆ.

    ಜಲಪ್ರಳಯದಿಂದ ಜನರನ್ನು ರಕ್ಷಿಸಲು ಸಿಂಧೂನದಿಗೆ (Indus River) ಅಡ್ಡಲಾಗಿ ಡ್ಯಾಮ್ (Dam) ನಿರ್ಮಾಣ ಮಾಡಲು ಉದ್ದೇಶಿಸಿ ಜನರಿಂದ ದೇಣಿಗೆ ಸಂಗ್ರಹಿಸಲಾಗಿದೆ. ಆದರೆ ಡ್ಯಾಮ್ ಪಾಕ್ ಸರ್ಕಾರ (Pakistan Government) ಡ್ಯಾಮ್ ನಿರ್ಮಾಣಕ್ಕೆ ಸಂಗ್ರಹಿಸಿದ್ದಕ್ಕಿಂತ ಹೆಚ್ಚಿನ ಹಣವನ್ನು ಜಾಹೀರಾತಿಗೆ (Advertising) ವಿನಿಯೋಗಿಸಿದೆ ಎಂಬ ಅಚ್ಚರಿ ಮಾಹಿತಿ ಪಾಕಿಸ್ತಾನದ ಲೆಕ್ಕಪತ್ರ ಸಮಿತಿ ಸಭೆಯಲ್ಲಿ ಬಹಿರಂಗಗೊಂಡಿದೆ. ಇದನ್ನೂ ಓದಿ: ಹಿಂದೂ ದೇವರ ಅಪಹಾಸ್ಯ: ಅಜಯ್ ದೇವಗನ್ ನಟನೆಯ ‘ಥ್ಯಾಂಕ್ ಗಾಡ್’ ಸಿನಿಮಾ ನಿಷೇಧಕ್ಕೆ ಹಿಂದೂ ಜನಜಾಗೃತಿ ಸಮಿತಿ ಒತ್ತಾಯ

    ಪಾಕಿಸ್ತಾನದ ಪಾರ್ಲಿಮೆಂಟರಿ ಲೆಕ್ಕಪತ್ರ ಸಮಿತಿ (PAC) ನೀಡಿರುವ ಅಂಕಿ-ಅಂಶಗಳ ಪ್ರಕಾರ, ಸಿಂಧೂ ನದಿಗೆ ಅಡ್ಡಲಾಗಿ ಡ್ಯಾಮ್ ನಿರ್ಮಿಸುವುದಕ್ಕೆ ಸುಮಾರು 40 ಮಿಲಿಯನ್ ಡಾಲರ್ ಅಂದರೆ 319 ಕೋಟಿ ರೂಪಾಯಿ ಜನರಿಂದ ಸಂಗ್ರಹ ಮಾಡಿದೆ. ಆದರೆ ಸರ್ಕಾರ ಜಾಹೀರಾತಿಗೆ (Advertising) ಬರೋಬ್ಬರಿ 63 ಮಿಲಿಯನ್ ಡಾಲರ್ ಅಂದರೆ ಸುಮಾರು 500 ಕೋಟಿ ರೂ.ಗಳಷ್ಟು ಖರ್ಚು ಮಾಡಿದೆ ಎಂದು ಹೇಳಿದೆ. ಇನ್ನೊಂದೆಡೆ ತಜ್ಞರು ಪಾಕ್‌ನಲ್ಲಿ ಎದುರಾಗಿರೋ ಭೀಕರ ಪ್ರವಾಹಕ್ಕೆ ಹವಾಮಾನ ಬದಲಾವಣೆಯೇ ಅತಿಮುಖ್ಯ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ.

    1980ರ ದಶಕದಲ್ಲಿ ಅಣೆಕಟ್ಟು ಪೂರ್ಣಗೊಳಿಸಲು ನಿರ್ಧರಿಸಲಾಗಿತ್ತು. ಆದರೆ ಪರಿಸರದ ಮೇಲಿನ ಪ್ರಭಾವ ಹಾಗೂ ಅಣೆಕಟ್ಟು ನಿರ್ಮಾಣದ ವೆಚ್ಚ ಹೆಚ್ಚುತ್ತಾ ಹೋದಂತೆ ಅಣೆಕಟ್ಟು ಪೂರ್ಣಗೊಳಿಸುವ ಯೋಜನೆ ವಿಳಂಬವಾಗುತ್ತಲೇ ಹೋಯಿತು. 2018ರಲ್ಲಿ ಪಾಕಿಸ್ತಾನದ ಮಾಜಿ ಮುಖ್ಯ ನ್ಯಾಯಮೂರ್ತಿ (CJP) ಸಾಕಿಬ್ ನಿಸಾರ್ ಅವರು ಅಣೆಕಟ್ಟು ನಿರ್ಮಾಣಕ್ಕಾಗಿ 14 ಮಿಲಿಯನ್ ಡಾಲರ್‌ನಷ್ಟು ವೆಚ್ಚ ನಿಗದಿಗೊಳಿಸಿದ್ದರು. ಅದಕ್ಕಾಗಿ ನಿಸಾರ್ ಅವರು ಪಾಕ್ ಪ್ರಜೆಗಳಿಂದ ದೇಣಿಗೆ ಸಂಗ್ರಹಿಸಲು ಪ್ರತ್ಯೇಕ ನಿಧಿಯನ್ನೂ ಸ್ಥಾಪಿಸಿದರು. ಇದನ್ನೂ ಓದಿ: ಜಲಾಶಯ ನೋಡಲು ಗೆಳೆಯನೊಂದಿಗೆ ಬಂದಿದ್ದ ವಿದ್ಯಾರ್ಥಿನಿ ಅಪಘಾತಕ್ಕೆ ಬಲಿ

    ಸಾರ್ವಜನಿಕರಿಂದ ಮಾತ್ರವಲ್ಲದೆ ದೇಶದ ಕ್ರಿಕೆಟ್ ತಂಡ (Cricket Team), ಖ್ಯಾತ ಸಂಗೀತಗಾರರೂ ಸಹ ಕೊಡುಗೆ ನೀಡಲು ಆರಂಭಿಸಿದರು. ಪಾಕ್ ಸೈನಿಕರು ಸೇರಿದಂತೆ ಹಲವಾರು ಸರ್ಕಾರಿ ನೌಕರರು ತಮ್ಮ ವೇತನದ ಒಂದು ಭಾಗ (ಸುಮಾರು 100 ಶತಕೋಟಿ ಡಾಲರ್) ನೀಡಲು ನೀಡಿದ್ದರು. ಆಗ ಪಾಕ್ ಪ್ರಧಾನಿ ಇಮ್ರಾನ್ ಖಾನ್ (Imran Khan) ನಿಧಿ ಸ್ಥಾಪನೆಯ ಜಂಟಿ ನಾಯಕತ್ವ ವಹಿಸಿದ್ದರು.

    ನಿಸಾರ್ ಅವರು 2019ರಲ್ಲಿ ನಿವೃತ್ತಿಯಾದಾಗ 6.3 ಶತಕೋಟಿ ಡಾಲರ್‌ಗಳ ಕೊರತೆಯಿತ್ತು. ಆದರೆ ಅವರ ಇತ್ತೀಚಿನ ಹೇಳಿಕೆಯು ಜನರಲ್ಲಿ ಕಳವಳವನ್ನುಂಟುಮಾಡಿದೆ. ಅಂದು ಸ್ಥಾಪಿತವಾದ ನಿಧಿ ಅಣೆಕಟ್ಟು ನಿರ್ಮಿಸಲು ಉದ್ದೇಶಿದಿಲ್ಲ. ಬದಲಾಗಿ ಜಾಗೃತಿ ಮೂಡಿಸಲು ಹೇಳಲಾಗಿತ್ತು ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಾರಿಗೆ ಇಲಾಖೆ ನೌಕರರಿಗೆ ವೇತನ ಪರಿಷ್ಕರಣೆ ಮಾಡಲು ಸರ್ಕಾರ ಸಿದ್ಧ – ಶ್ರೀರಾಮುಲು

    ಈ ಬೆನ್ನಲ್ಲೇ ಪಾಕಿಸ್ತಾನದ ಪಾರ್ಲಿಮೆಂಟರಿ ಲೆಕ್ಕಪತ್ರ ಸಮಿತಿ ಸಭೆಯಲ್ಲಿ ರಾಷ್ಟ್ರೀಯ ಅಸೆಂಬ್ಲಿ ಸದಸ್ಯ ಅಹ್ಸಾನ್ ಇಕ್ಬಾಲ್, ಅಣೆಕಟ್ಟು ನಿಧಿಗೆ ಸಂಗ್ರಹಿಸಿದ್ದ ದೇಣಿಗೆಗಿಂತ ಹೆಚ್ಚಿನ ಹಣವನ್ನು ಜಾಹೀರಾತಿಗೆ ಖರ್ಚು ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

    272 ಮೀಟರ್ ಎತ್ತರ ಇರುವ ಡೈಮರ್-ಭಾಷಾ ಅಣೆಕಟ್ಟು 4,500 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ ಎಂದು ಸಮಿತಿ ಸಭೆಯಲ್ಲಿ ಹೇಳಿದೆ.

    Live Tv
    [brid partner=56869869 player=32851 video=960834 autoplay=true]

  • ಲಡಾಕ್‍ನ ಸಿಂಧೂ ನದಿ ಸಂಗಮ ಸ್ಥಳಕ್ಕೆ ಶೋಭಾ ಕರಂದ್ಲಾಜೆ ಭೇಟಿ

    ಲಡಾಕ್‍ನ ಸಿಂಧೂ ನದಿ ಸಂಗಮ ಸ್ಥಳಕ್ಕೆ ಶೋಭಾ ಕರಂದ್ಲಾಜೆ ಭೇಟಿ

    ಲೇಹ್: ಡಿಆರ್‌ಡಿಒ ಸಂಸ್ಥೆ ಲಡಾಖಿನಲ್ಲಿ ಹಮ್ಮಿಕೊಂಡಿದ್ದ ಕಿಸಾನ್ ಮೇಳದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪಾಲ್ಗೊಂಡಿದ್ದರು. ಈ ವೇಳೆ ಲಡಾಕ್‍ನ ನಿಮ್ಮು ಪ್ರದೇಶಕ್ಕೆ ಭೇಟಿಕೊಟ್ಟಿದ್ದಾರೆ.

    ಉಡುಪಿ ಚಿಕ್ಕಮಗಳೂರು ಸಂಸದೆ ಕೇಂದ್ರ ಕೃಷಿ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಡಿಆರ್‌ಡಿಒ ನಡೆಸಿರುವ ರಾಷ್ಟ್ರ ಮಟ್ಟದ ಕೃಷಿ ಮೇಳ ಮತ್ತು ಕೃಷಿ ಉಪಕರಣಗಳ ಮಾಹಿತಿ ಕಾರ್ಯಾಗಾರದಲ್ಲಿ ಭಾಗಿಯಾಗಿದ್ದಾರೆ. ಆಧುನಿಕ ಮತ್ತು ಪಾರಂಪರಿಕ ಕೃಷಿ ಪದ್ಧತಿಗಳ ಬಗ್ಗೆ ರೈತರಿಗೆ ಅಧಿಕಾರಿಗಳು ಜನಪ್ರತಿನಿಧಿಗಳು ಚರ್ಚೆ ಮಾಡಿದ್ದಾರೆ.

    ಲಡಾಕ್ ಪ್ರವಾಸ ಸಂದರ್ಭ ಸಚಿವೆ ಶೋಭಾ ಕರಂದ್ಲಾಜೆ ಸಿಂಧೂ ನದಿಯ ಸಂಗಮ ಸ್ಥಳಕ್ಕೆ ಭೇಟಿಕೊಟ್ಟಿದ್ದಾರೆ. ಸಿಂಧೂ ನದಿಯ ತಟದಲ್ಲಿ ಕೆಲಕಾಲ ಕುಳಿತು ನದಿ ಹರಿವಿನ ಸೌಂದರ್ಯವನ್ನು ಕಣ್ತುಂಬಿಕೊಂಡಿದ್ದಾರೆ. ಇದನ್ನೂ ಓದಿ: ರೈಲ್ವೆ ನಿಲ್ದಾಣದಲ್ಲಿ ಕಿಡ್ನ್ಯಾಪ್ ಆಗಿದ್ದ ಮಗು ಬಿಜೆಪಿ ಕಾರ್ಪೊರೇಟರ್ ಮನೆಯಲ್ಲಿ ಪತ್ತೆ

    ಹಿಂದೂ ಪುರಾಣಗಳಲ್ಲಿ ಉಲ್ಲೇಖಿತ ಪವಿತ್ರ ನದಿಗಳಲ್ಲಿ ಒಂದಾದ, ಸಿಂಧೂ ನದಿಯ ಸಂಗಮ ಸ್ಥಳಕ್ಕೆ ಭೇಟಿ ನೀಡುವ ಅವಕಾಶ ಒದಗಿ ಬಂತು. ಲೇಹ್ – ಲಡಾಖಿನ, ನಿಮ್ಮು ಎಂಬ ಪ್ರದೇಶದಲ್ಲಿ ಪವಿತ್ರ ಸಿಂಧೂ ನದಿಯು ಜಂಸ್ಕಾರ (Zanskar) ನದಿಯೊಂದಿಗೆ ಸಂಗಮಗೊಳ್ಳುತ್ತದೆ. ಸರ್ಕಾರಿ ಕಾರ್ಯಕ್ರಮ ಸಂದರ್ಭ ಈ ಪವಿತ್ರ ಸ್ಥಳಕ್ಕೆ ಭೇಟಿಯಾಗುವ ಅವಕಾಶ ಸಿಕ್ಕಿತು ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಇದನ್ನೂ ಓದಿ: ಚಿಕ್ಕಬಳ್ಳಾಪುರದ ಅಂಡರ್‌ಪಾಸ್‌ನಲ್ಲಿ ಲಾರಿ ಪಲ್ಟಿ – ಚಾಲಕನ ಎರಡೂ ಕಾಲು ಕಟ್

    Live Tv
    [brid partner=56869869 player=32851 video=960834 autoplay=true]