Tag: Indrani Mukerjea

  • 6 ವರ್ಷ ಜೈಲು ವಾಸದ ಬಳಿಕ ಬಿಡುಗಡೆಯಾದ ಇಂದ್ರಾಣಿ ಮುಖರ್ಜಿ

    6 ವರ್ಷ ಜೈಲು ವಾಸದ ಬಳಿಕ ಬಿಡುಗಡೆಯಾದ ಇಂದ್ರಾಣಿ ಮುಖರ್ಜಿ

    ನವದೆಹಲಿ: ಸುಪ್ರಿಂ ಕೋರ್ಟ್ ಬುಧವಾರ ಐಎನ್‌ಎಕ್ಸ್ ಕಂಪನಿ ಮಾಲಕಿ ಇಂದ್ರಾಣಿ ಮುಖರ್ಜಿಗೆ ಜಾಮೀನು ಮಂಜೂರು ಮಾಡಿದ್ದು, ಶುಕ್ರವಾರ ಜೈಲಿನಿಂದ ಹೊರಬಂದಿದ್ದಾರೆ.

    ಇಂದ್ರಾಣಿ ಮುಖರ್ಜಿ ತನ್ನ ಪುತ್ರಿ ಶೀನಾ ಬೋರಾ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿ, 2015ರಲ್ಲಿ ಜೈಲು ಸೇರಿದ್ದರು. ಇದೀಗ 6 ವರ್ಷಗಳ ಜೈಲು ವಾಸ ಅನುಭವಿಸಿ, ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದಾರೆ.

    ಜೈಲಿನಿಂದ ಹೊರಬರುತ್ತಲೇ ಮಾಧ್ಯಮದೊಂದಿಗೆ ಮಾತನಾಡಿದ ಇಂದ್ರಾಣಿ ಮುಖರ್ಜಿ, ತೆರೆದ ಆಕಾಶವನ್ನು ನೋಡುತ್ತಾ ಬಹಳ ಸಂತೋಷವಾಗುತ್ತಿದೆ. ನಾನು ಜೈಲಿನಲ್ಲಿ ಬಹಳಷ್ಟು ಕಲಿತಿದ್ದೇನೆ. ಮುಂದಿನ ಸಂದರ್ಶನದಲ್ಲಿ ಅದರ ಬಗ್ಗೆ ಮಾತನಾಡುತ್ತೇನೆ ಎಂದಿದ್ದಾರೆ.

    ಬುಧವಾರ ಸುಪ್ರೀಂ ಕೋರ್ಟ್ ಇಂದ್ರಾಣಿ ಮುಖರ್ಜಿಗೆ 2 ಲಕ್ಷ ರೂ. ಶ್ಯೂರಿಟಿ ಮತ್ತು ತನಿಖಾಧಿಕಾರಿಗಳು ಕರೆದಾಗ ವಿಚಾರಣೆಗೆ ಹಾಜರಾಗಬೇಕೆಂದು ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿತ್ತು. ಇದನ್ನೂ ಓದಿ: ಪಿಎಸ್‍ಐ ಅಕ್ರಮ – ದಿವ್ಯಾ ಹಾಗರಗಿ ಸೇರಿ ನಾಲ್ವರಿಗೆ ಜಾಮೀನು ನಿರಾಕರಿಸಿದ ಕೋರ್ಟ್

    ಆರೋಪ ಏನು?
    2012 ಏಪ್ರಿಲ್ 24 ರಂದು ಇಂದ್ರಾಣಿ ಮುಖರ್ಜಿ, ಕಾರು ಚಾಲಕ ಶ್ಯಾಮ್‌ವರ್ ರೈ ಮತ್ತು ಮಾಜಿ ಪತಿ ಸಂಜೀವ್ ಖನ್ನಾ ಸೇರಿ ಶೀನಾ ಬೋರಾಳನ್ನು ಹತ್ಯೆ ಮಾಡಿದ್ದರು. ಪುತ್ರಿಯ ಶವವನ್ನು ರಾಯಗಢ ಜಿಲ್ಲೆಯ ಕಾಡಿನಲ್ಲಿ ಎಸೆದು ಸುಟ್ಟು ಹಾಕಲಾಗಿದೆ ಎಂಬ ಆರೋಪ ಇಂದ್ರಾಣಿ ಮುಖರ್ಜಿ ಮೇಲಿದೆ. ಇದನ್ನೂ ಓದಿ: ಕೇಂದ್ರ ಕಾರಾಗೃಹದಲ್ಲಿ ವೀರ ಸಾವರ್ಕರ್ ಪುಸ್ತಕ ಇಡಲು ಹೈಕೋರ್ಟ್ ನ್ಯಾಯಮೂರ್ತಿ ಸೂಚನೆ

    ಈ ಸಂಬಂಧ 2015ರಲ್ಲಿ ಮುಂಬೈ ಪೊಲೀಸರು ಇಂದ್ರಾಣಿ ಮುಖರ್ಜಿಯನ್ನು ಬಂಧಿಸಿದ್ದರು. ಹೈ ಪ್ರೊಫೈಲ್ ಪ್ರಕರಣದ ಹಿನ್ನೆಲೆ ಇದರ ತನಿಖೆಯನ್ನು ಸಿಬಿಐಗೆ ವರ್ಗಾಯಿಸಲಾಗಿತ್ತು.

  • ಶೀನಾ ಬೋರಾ ಹತ್ಯೆ ಕೇಸ್‌- ಇಂದ್ರಾಣಿಗೆ ಮುಖರ್ಜಿಗೆ ಜಾಮೀನು ಮಂಜೂರು

    ಶೀನಾ ಬೋರಾ ಹತ್ಯೆ ಕೇಸ್‌- ಇಂದ್ರಾಣಿಗೆ ಮುಖರ್ಜಿಗೆ ಜಾಮೀನು ಮಂಜೂರು

    ನವದೆಹಲಿ: ಪುತ್ರಿ ಶೀನಾ ಬೋರಾ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಐಎನ್‍ಎಕ್ಸ್ ಕಂಪನಿಯ ಮಾಲಕಿ ಇಂದ್ರಾಣಿ ಮುಖರ್ಜಿಗೆ ಸುಪ್ರೀಂ ಕೋರ್ಟ್‌ ಜಾಮೀನು ಮಂಜೂರು ಮಾಡಿದೆ.

    ನ್ಯಾ. ಎಲ್‌ ನಾಗೇಶ್ವರ ರಾವ್‌ ಮತ್ತು ನ್ಯಾ. ಬಿ.ಆರ್‌ ಗವಾಯ್‌ ಅವರಿದ್ದ ಪೀಠ ಜಾಮೀನು ಮಂಜೂರು ಮಾಡಿದೆ. ಬಾಂಬೆ ಹೈಕೋರ್ಟ್‌ 2021ರ ನವೆಂಬರ್‌ನಲ್ಲಿ ಶೀನಾ ಬೋರಾ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾ ಮಾಡಿತ್ತು. ಈ ಆದೇಶವನ್ನು ಶೀನಾ ಬೋರಾ ಸುಪ್ರೀಂನಲ್ಲಿ ಪ್ರಶ್ನಿಸಿದ್ದರು.

    ಸಾಂದರ್ಭಿಕ ಸಾಕ್ಷ್ಯ ಮತ್ತು ಶೇ.50 ರಷ್ಟು ಸಾಕ್ಷಿಗಳು ಪ್ರಾಸಿಕ್ಯೂಶನ್‌ ಪರವಾಗಿ ಹೇಳಿಕೆ ನೀಡಿದ್ದರೂ ವಿಚಾರಣೆ ಶೀಘ್ರವೇ ಮುಕ್ತಾಯವಾಗಲಾರದು ಎಂದು ಪೀಠ ಅಭಿಪ್ರಾಯಪಟ್ಟಿದೆ. ಇದನ್ನೂ ಓದಿ: 31 ವರ್ಷಗಳ ನಂತರ ರಾಜೀವ್ ಗಾಂಧಿ ಹಂತಕ ಜೈಲಿನಿಂದ ಬಿಡುಗಡೆ

    ಆರೋಪ ಏನು?
    2012 ಏಪ್ರಿಲ್‌ 24 ರಂದು ಇಂದ್ರಾಣಿ ಮುಖರ್ಜಿ, ಕಾರು ಚಾಲಕ ಶ್ಯಾಮ್‌ವರ್‌ ರೈ ಮತ್ತು ಮಾಜಿ ಪತಿ ಸಂಜೀವ್ ಖನ್ನಾ ಸೇರಿ ಶೀನಾ ಬೋರಾಳನ್ನು ಹತ್ಯೆ ಮಾಡಿದ್ದಾರೆ. ಪುತ್ರಿಯ ಶವವನ್ನು ರಾಯಗಢ ಜಿಲ್ಲೆಯ ಕಾಡಿನಲ್ಲಿ ಎಸೆದು ಸುಟ್ಟು ಹಾಕಲಾಗಿದೆ ಎಂಬ ಆರೋಪ ಇಂದ್ರಾಣಿ ಮುಖರ್ಜಿ ಮೇಲಿದೆ.

    ಈ ಸಂಬಂಧ 2015ರಲ್ಲಿ ಮುಂಬೈ ಪೊಲೀಸರು ಇಂದ್ರಾಣಿ ಮುಖರ್ಜಿ ಅವರನ್ನು ಬಂಧಿಸಿತ್ತು. ಹೈ ಪ್ರೊಫೈಲ್‌ ಪ್ರಕರಣದ ಹಿನ್ನೆಲೆಯಲ್ಲಿ ನಂತರ ಇದರ ತನಿಖೆ ಸಿಬಿಐಗೆ ವರ್ಗಾವಣೆಯಾಗಿತ್ತು. ಕಳೆದ 6.5 ವರ್ಷಗಳಿಂದ ಇಂದ್ರಾಣಿ ಮುಖರ್ಜಿ ಜೈಲಿನಲ್ಲಿದ್ದರು.