Tag: Indrajith Lankesh

  • ದರ್ಶನ್ ವಿಚಲಿತರಾಗಿದ್ದಾರೆ, ಮೊದಲು ನನ್ನ ಪ್ರಶ್ನೆಗಳಿಗೆ ಉತ್ತರ ಕೊಡಲಿ: ಇಂದ್ರಜಿತ್

    ದರ್ಶನ್ ವಿಚಲಿತರಾಗಿದ್ದಾರೆ, ಮೊದಲು ನನ್ನ ಪ್ರಶ್ನೆಗಳಿಗೆ ಉತ್ತರ ಕೊಡಲಿ: ಇಂದ್ರಜಿತ್

    – ಧರ್ಮಸ್ಥಳಕ್ಕೆ ಹೋಗಿ ಆಣೆ ಮಾಡಿ

    ಬೆಂಗಳೂರು: ನಟ ದರ್ಶನ್ ಮಾತನಾಡಿದ್ದನ್ನು ನೋಡಿದ್ದೇನೆ. ಅವರು ತುಂಬಾ ವಿಚಲಿತರಾಗಿದ್ದಾರೆ. ಮೊದಲು ನನ್ನ ಪ್ರಶ್ನೆಗಳಿಗೆ ಅವರು ಉತ್ತರ ಕೊಡಲಿ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.

    ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೋಟೆಲಿನಲ್ಲಿ ನೀವು ಬಡವ ಸಪ್ಲೇಯರ್ ಗೆ ಹೊಡೆದ್ರೋ ಇಲ್ಲವೋ..?, ಅಂದು ನೀವು ಯಾರ ಜೊತೆಗಿದ್ರಿ..?, 25 ಕೋಟಿ ಡೀಲ್ ವಿಚಾರ ಸಂಬಂಧ ನೀವು ಅರುಣಾ ದೇವಿಯನ್ನು ಯಾಕೆ ತೋಟಕ್ಕೆ ಕರೆದ್ರಿ..?. ಮೊದಲು ನನ್ನ ಈ ಪ್ರಶ್ನೆಗಳಿಗೆ ಉತ್ತರ ನೀಡಿ. ಅಲ್ಲದೆ ಬಡವನಿಗೆ ಹೊಡೆದಿಲ್ಲ ಅಂದ್ರೆ ಧರ್ಮಸ್ಥಳಕ್ಕೆ ಹೋಗಿ ಆಣೆ ಮಾಡಿ ಎಂದು ಚಾಲೆಂಜ್ ಹಾಕಿದ್ರು.

    ದರ್ಶನ್ ವಿಚಲಿತರಾಗಿದ್ದಾರೆ. ಅವರು ಈ ಸಂದರ್ಭದಲ್ಲಿ ವಿಚಲಿತರಾಗಬೇಕಾಗಿಲ್ಲ. ನನ್ನ ಪ್ರಶ್ನೆಗಳಿಗೆ ಉತ್ತರ ಕೊಟ್ಟರೆ ಸಾಕು. ಅವರು ಇಂದು ಬಳಸಿರುವ ಭಾಷೆ ಅವರ ಹಿನ್ನೆಲೆ ತೋರಿಸುತ್ತದೆ. ನಾನು ಅವರನ್ನು ಅನ್ ಎಜುಕೇಟೆಡ್ ಅಂತ ಹೇಳಿಲ್ಲ. ರಾಜ್ ಕುಮಾರ್ ನಡೆದು ಬಂದ ದಾರಿ, ಭಾಷೆ, ಸಿನಿಮಾ, ನಟನೆಯ ಬಗ್ಗೆ ಇರುವ ಕಾಳಜಿ ಇಡೀ ದೇಶಕ್ಕೆ ಗೊತ್ತಿದೆ ಎಂದರು. ಇದನ್ನೂ ಓದಿ: ನನ್ನ ಬಳಿಯಲ್ಲಿದ್ದ ಆಸ್ತಿ ದರ್ಶನ್ ಕೇಳಿದ್ದು ನಿಜ, ಕೊಡಲ್ಲ ಅಂದಿದ್ದೆ: ನಿರ್ಮಾಪಕ ಉಮಾಪತಿ

    ಡಿಸ್ಟರ್ಬ್ ಆಗಿದ್ರೆ ಟ್ರೀಟ್ಮೆಂಟ್ ತಗೋಳಿ ದರ್ಶನ್ ಅವರೇ. ಆಡಿಯೋ, ವೀಡಿಯೋ ಸಾಕ್ಷ್ಯಗಳನ್ನು ಪೊಲೀಸರ ಮುಂದೆ ತೋರಿಸುತ್ತೇವೆ. ಇವರ ಮುಂದಿಡುವ ಅವಶ್ಯಕತೆ ಇಲ್ಲ. ಮಹಿಳೆಗೆ ಬೆದರಿಕೆ ಹಾಗೂ ಸಪ್ಲೇಯರ್ ಗೆ ಹೊಡೆದಿದ್ದಾರೆ. ಇದರ ಬಗ್ಗೆ ತನಿಖೆ ಆಗಬೇಕು ಎಂದಾಗ ಇಷ್ಟೊಂದು ವಿಚಾರಗಳು ಹೊರ ಬಂದಿದೆ. ಇನ್ನೂ ಕೂಡ ಎಷ್ಟೊಂದು ವಿಚಾರಗಳು ಹೊರ ಬರುತ್ತವೆ ಎಂದು ದರ್ಶನ್ ಈಗಾಗಲೇ ವಿಚಲಿತರಾಗಿ ಮಾತನಾಡಿದ್ದಾರೆ ಎಂದು ತಿಳಿಸಿದರು.

    ಗಂಡಸಾಗಿರುವುದನ್ನು ಪ್ರೂವ್ ಮಾಡೋಕೆ ಹೇಳಿದ್ದಾರೆ. ಅವರ ಈ ಮಾತಿನಿಂದ ನನಗೆ ನಗು ಬರುತ್ತೆ. ಬಡವ ಸಪ್ಲೆಯರ್‍ಗೆ ಹೊಡೆದಿದ್ದೀರಾ ಎಂಬುದಕ್ಕೆ ಉತ್ತರ ಕೊಡಿ. ಅವರಿಗೆ ಹೊಡೆಯುವುದು ಎಷ್ಟು ಸರಿ..? ಅರುಣಾ ದೇವಿಯರನ್ನು ಮನೆಗೆ ಕರೆಸಿಕೊಂಡ್ರೋ..? ಇಲ್ಲವೋ..? ಹೇಳಿ. 25 ಕೋಟಿ ಡೀಲ್ ಹಿನ್ನೆಲೆ ಬಗ್ಗೆ ಹೇಳಿ ಎಂದು ಇಂದ್ರಜಿತ್ ಒತ್ತಾಯಿಸಿದರು. ಇದನ್ನೂ ಓದಿ: ಇಂದೇ ಸ್ಟಿಂಗ್ ಆಪರೇಷನ್ ಮಾಡಿದರೂ ನಾನು ಹೆದರಲ್ಲ: ದರ್ಶನ್

    ಧರ್ಮಪತ್ನಿ ವಿಚಾರದಲ್ಲಿ ಯಾಕೆ ಲಾಯರ್ ಕರೆಸಿಕೊಂಡ್ರಿ ಅನ್ನೋದು ಇಡೀ ಕರ್ನಾಟಕಕ್ಕೆ ಗೊತ್ತು. ಇದೆಲ್ಲ ಹೀರೋಯಿಸಂ, ಇದನ್ನು ಸಿನಿಮಾದಲ್ಲಿ ಇಟ್ಟುಕೊಳ್ಳಿ. ನನಗೆ ಸಂಸ್ಕಾರ, ಸಂಸ್ಕೃತಿ ಇದೆ. ಗಾಂಡುಗಿರಿ ಅಲ್ಲ ಗೂಂಡಾಗಿರಿ ಅಂದಿದ್ದು, ಮೊದಲು ಕನ್ನಡ ಸರಿಯಾಗಿ ಓದಲು ಹೇಳಿ. ಅನ್ ಎಜುಕೇಟೆಡ್ ಅಂತ ಎಲ್ಲಿ ಹೇಳಿದ್ದೀನಿ..? ಸೆಲೆಬ್ರಿಟಿ ಮೊದಲು ಮಾದರಿಯಾಗಲಿ. ಈ ರೀತಿ ಮಾಡುವುದಲ್ಲ. ಅಲ್ಲದೆ ತಲೆ ಸೀಳ್ತೀನಿ ಅನ್ನೋದು ಸರಿಯಲ್ಲ ಅನ್ನೋ ಅರ್ಥ ಬರುವಂತೆ ಹೇಳಿದ್ದೇನೆ ಎಂದರು.

    ತನಿಖಾ ತಂಡದ ಮುಂದೆ ಎಲ್ಲಾ ಸಾಕ್ಷ್ಯಗಳನ್ನು ಒದಗಿಸುತ್ತೇನೆ. ಡ್ರಗ್ಸ್ ಕೇಸ್ ವಿಚಾರದಲ್ಲಿ ನಿಮಗೆ ಏನಾದರೂ ತೊಂದರೆ ಆಗಿದೆಯಾ..? ಯಾಕೆ ಈ ವಿಚಾರ ಇಂದು ಮಾತನಾಡಿದ್ದೀರಿ. ಡ್ರಗ್ಸ್ ಕೇಸ್ ನಲ್ಲಿ ದೊಡ್ಡ ದೊಡ್ಡ ಕುಳಗಳು ಹೊರಬಂದವು. ಹೋಟೇಲಿನ ಸಿಬ್ಬಂದಿ, ಸೆಕ್ಯೂರಿಟಿ ಗಾರ್ಡ್ ಹೀಗೆ ಎಲ್ಲರೂ ಮಾತನಾಡಿದ್ದಾರೆ. ಯಾಕೆ ಪೊಲೀಸರು ಇನ್ನೂ ಸುಮೊಟೋ ಕೇಸ್ ದಾಖಲಿಸಿಲ್ಲ. ಯಾಕೆ ಬಡವರಿಗೆ ಅನ್ಯಾಯ ಆಗುತ್ತಿದೆ ಎಂದು ಇಂದ್ರಜಿತ್ ಪ್ರಶ್ನಿಸಿದರು. ಇದನ್ನೂ ಓದಿ: ಇಂದ್ರಜಿತ್ ಅಪ್ಪನಿಗೆ ಹುಟ್ಟಿದವರಾಗಿದ್ರೆ ದಾಖಲೆ ರಿಲೀಸ್ ಮಾಡಲಿ: ದರ್ಶನ್ ನೇರ ಸವಾಲ್

    ಸಿನಿಮಾ ಹಿನ್ನೆಲೆ ಏನೂ ಇಲ್ಲ ಎಂದು ದರ್ಶನ್ ಹೇಳಿರುವುದನ್ನು ಮಾಧ್ಯಮದವರು ಪ್ರಸ್ತಾಪಿಸಿದಾಗ, ಯುವ ಪ್ರತಿಭೆಗಳಿಗೆ ಸಿನಿಮಾ ಮಾಡಿದ್ದೇನೆ, ಯುವಕ, ಯುವಕರಿಗೆ ಅವಕಾಶ ಮಾಡಿಕೊಟ್ಟಿದ್ದೇನೆ. ಅನೇಕ ರಾಷ್ಟ್ರ, ರಾಜ್ಯ ಪ್ರಶಸ್ತಿಗಳು ನನಗೆ ಬಂದಿವೆ. ಸಂಗೊಳ್ಳಿ ರಾಯಣ್ಣ ಸಿನಿಮಾದ ನಿರ್ಮಾಪಕರು ಸಾಮಾನ್ಯ ಜನರ ಹಣ ತೆಗೆದುಕೊಂಡು ಹೋಗಿದ್ದಕ್ಕೆ ಇಂದು ಜೈಲಿಗೆ ಹೋಗಿದ್ದಾರೆ. ಇದರ ಬಗ್ಗೆ ಈವಾಗ ಮಾತನಾಡುವುದು ಬೇಡ. ಇಲ್ಲಿ ಸಿನಿಮಾದ ವಿಚಾರವಲ್ಲ ಎಂದರು.

    ನಾನೊಬ್ಬ ಪತ್ರಕರ್ತ, ನನಗೆ ಜವಾಬ್ದಾರಿ ಇದೆ. ಹೀಗಾಗಿ ಇಲ್ಲಿ ನಾನು ಜಾಸ್ತಿ ಮಾತಾಡಲ್ಲ. ಎಲ್ಲವನ್ನೂ ಪೊಲೀಸ್ ಅಧಿಕಾರಿಗಳ ಜೊತೆ ಚರ್ಚೆ ನಡೆಸಲು ನಾನು ರೆಡಿಯಾಗಿದ್ದೇನೆ ಎಂದು ಇಂದ್ರಜಿತ್ ಹೇಳಿದರು.  ಇದನ್ನೂ ಓದಿ: ಯಾವುದೇ ಕಾರಣಕ್ಕೂ ನಮಗೂ, ದೊಡ್ಮನೆಗೂ ಹೋಲಿಕೆ ಮಾಡ್ಬೇಡಿ: ಚಾಲೆಂಜಿಂಗ್ ಸ್ಟಾರ್ ಎಚ್ಚರಿಕೆ

  • ದರ್ಶನ್ ಒಮ್ಮೆ ಕೆಟ್ಟದಾಗಿ ಬೈದ್ರು ಅದಕ್ಕೆ ಕೆಲಸ ಬಿಟ್ಟೆ: ಹಾರ್ಸ್ ರೈಡರ್ ಸಂತೋಷ್

    ದರ್ಶನ್ ಒಮ್ಮೆ ಕೆಟ್ಟದಾಗಿ ಬೈದ್ರು ಅದಕ್ಕೆ ಕೆಲಸ ಬಿಟ್ಟೆ: ಹಾರ್ಸ್ ರೈಡರ್ ಸಂತೋಷ್

    ಬೆಂಗಳೂರು: ನಟ ದರ್ಶನ್ ಅವರೊಂದಿಗಿದ್ದ ಹಾರ್ಸ್ ರೈಡರ್‍ಗೆ ಹಲ್ಲೆ ಮಾಡಿದ್ದರು ಎಂಬ ಆರೋಪವನ್ನು ಇಂದ್ರಜಿತ್ ಲಂಕೇಶ್ ಮಾಡಿದ್ದರ. ಆದ್ರೆ ಹಾರ್ಸ್ ರೈಡರ್ ಸಂತೋಷ್ ಆರೋಪವನ್ನು ಅಲ್ಲಗಳೆದಿದ್ದಾರೆ. ನನಗೆ ದರ್ಶನ್ ಅವರು ಹಲ್ಲೆ ಮಾಡಿಲ್ಲ. ನಾನು ಏಳು ವರ್ಷ ದರ್ಶನ್ ಅವರೊಂದಿಗಿದ್ದೆ. ಒಂದು ದಿನ ಕೆಟ್ಟದಾಗಿ ಬೈದ್ರು, ಅದಕ್ಕೆ ಕೆಲಸ ಬಿಟ್ಟೆ ಎಂದಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಂತೋಷ್, ನಾನು 7 ವರ್ಷಗಳ ಕಾಲ ಹಾರ್ಸ್ ರೈಡರ್ ಆಗಿ ಕೆಲಸ ಮಾಡುತ್ತಿದ್ದೆ. ಒಂದು ದಿನ ಕೂಡ ದರ್ಶನ್ ನನ್ನೊಂದಿಗೆ ಏಕವಚನದಲ್ಲೂ ಮಾತನಾಡಿರಲಿಲ್ಲ ತುಂಬಾ ಚೆನ್ನಾಗಿ ಇದ್ವಿ, ಒಂದು ದಿನ ಕುದುರೆ ವಿಚಾರವಾಗಿ ನನಗೆ ಬೈದ್ರು ಅದಕ್ಕೆ ಕೆಲಸ ಬಿಟ್ಟೆ ಅದನ್ನು ಹೊರತು ಪಡಿಸಿ ನನಗೆ ಯಾವುದೇ ರೀತಿ ಹಲ್ಲೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ‘ಏನಯ್ಯಾ ದರ್ಶನ್‍ಗೆ ತಲೆ ಇಲ್ವೇನಯ್ಯಾ, ಹೋಗಿ ಹೋಗಿ ನಾಯಿಗೆ ಕಚ್ಚಿದ್ದಾನೆ’

    ದರ್ಶನ್ ಮತ್ತು ನಾನು ಚೆನ್ನಾಗಿ ಇದ್ವಿ, ಈಗಲೂ ಅವರ ಅಮ್ಮ ನನ್ನೊಂದಿಗೆ ಮಾತನಾಡಿಸುತ್ತಾರೆ. ದರ್ಶನ್ ಅವರು ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಆ ಬಳಿಕ ಒಂದು ದಿನ ಕುದುರೆ ವಿಚಾರವಾಗಿ ನನಗೆ ಬೈದರು. ಅದಕ್ಕೆ ನಾನು ಕೆಲಸ ಬಿಟ್ಟು ಬಂದೆ. ಅವರೊಂದಿಗೆ ಕೆಲಸ ಬಿಟ್ಟು ಬಂದು 3 ವರ್ಷ ಆಯ್ತು. ನಾನು ಅವರು ಸೆಲೆಬ್ರಿಟಿ ಅಂತ ಜಂಬದಿಂದ ಹೇಳುತ್ತಿಲ್ಲ. ಅವರಿಂದ ಬಿಟ್ಟು ಬಂದೆ ಎನ್ನುವ ಕೋಪಕ್ಕೂ ಹೇಳುತ್ತಿಲ್ಲ. ನಾನು ಅವರೊಂದಿಗೆ 7 ವರ್ಷ ಉತ್ತಮ ಬಾಂಧವ್ಯ ಹೊಂದಿದ್ದೆ. ಅದನ್ನು ಹೊರತು ಪಡಿಸಿ ಬೇರೆನಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನೀವೆಲ್ಲಾ ಸೇರಿದ್ದೀರಿ, ನಿಮ್ಮ ಜಾತಿಯನ್ನು ನಾವು ಕೇಳ್ತೀವಾ – ಇಂದ್ರಜಿತ್‍ಗೆ ದರ್ಶನ್ ತಿರುಗೇಟು

    ಇಂದ್ರಜಿತ್ ಲಂಕೇಶ್ ಆರೋಪವೇನು?:

    ದರ್ಶನ್ ವೇಟರ್ ಮೇಲೆ ಹಲ್ಲೆ ಮಾಡಿರುವ ಆರೋಪ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಇಂದ್ರಜಿತ್ ಲಂಕೇಶ್ ಅವರು, ನನಗೆ ವೈಯಕ್ತಿಕವಾಗಿ ಯಾರ ಮೇಲೂ ದ್ವೇಷ ಇಲ್ಲ. ಆದ್ರೆ ತಪ್ಪನ್ನು ತಪ್ಪು ಅಂತ ಒಪ್ಪಿಕೊಳ್ಳಬೇಕು. ಎಷ್ಟು ಅಂತ ಮತ್ತೆ ಮತ್ತೆ ತಪ್ಪುಗಳನ್ನು ಮಾಡುತ್ತೀರಾ..? ಓರ್ವ ಸೆಲೆಬ್ರಿಟಿಯಾಗಿದ್ದುಕೊಂಡು ನಿರ್ದೇಶಕ, ನಿರ್ಮಾಪಕ, ವಾಚ್ ಮ್ಯಾನ್ ಗೆ ಅಥವಾ ಸಾಮಾನ್ಯ ನಾಗರಿಕನಿಗೆ ಹೊಡೆಯುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.

    ಜುಲೈ 3ರಂದು ಗೋಪಾಲ್ ರಾಜ್ ಅರಸು(ಪಪ್ಪು) ಅವರಿಗೆ ಸೋಶಿಯಲ್ ನಲ್ಲಿ ಹೊಡೆದಿದ್ದಾರೆ. ನಿಮ್ಮ ತೋಟದಲ್ಲಿದ್ದ ವಾಚ್ ಮ್ಯಾನ್ ಗೂ ಒದೆ ಬಿದ್ದಿದೆ. ಅವನು ಕೆಲಸನೇ ಬಿಟ್ಟು ಹೋಗಿದ್ದಾನೆ. ಏನಿದು ಇಷ್ಟೊಂದು ಹೊಡೆಯುವುದು, ಇದೇನು ಪಾಳೇಗಾರಿಕೆನಾ..? ಕರ್ನಾಟಕದಲ್ಲಿ ಪಾಳೇಗಾರಿಕೆ ನಡೆಯಲ್ಲ ಎಂದು ದರ್ಶನ್ ವಿರುದ್ಧ ಇಂದ್ರಜಿತ್ ಕಿಡಿಕಾರಿದರು.

    ಅರುಣಾ ಕುಮಾರಿ ವಿಚಾರ, ಸಂದೇಶ್ ನಾಗರಾಜ್ ಹೋಟೆಲ್ ನಲ್ಲಿ ಜಗಳದ ಬಗ್ಗೆ ಮಾತಾಡಿದ್ದೆ. ಆ ಬಳಿಕ ದರ್ಶನ್ ಅವರು, ಹೌದು ಹೊಡೆದೆ. ಕೋಪ ಬಂತು ಹೊಡೆದಿದ್ದು ನಿಜ ಅಂದ್ರು. ಈ ಘಟನೆಗೆ ನಾನು ಬದ್ಧ, ಅದಕ್ಕೆ ಬೇಕಾದ ಎಲ್ಲಾ ದಾಖಲೆಗಳು ಕೊಡ್ತೀನಿ. ಸದ್ಯ ಆ ಹುಡುಗ ಕೆಲಸ ಕಳೆದುಕೊಂಡಿದ್ದಾನೆ. ಬರೇ ಇದೊಂದೆ ಅಲ್ಲ, ಇಂತಹ ಪ್ರಕರಣಗಳು ತುಂಬಾ ಇದ್ದಾವೆ ಎಂದು ಹೇಳಿದರು.

  • ಕರ್ನಾಟಕದಲ್ಲಿ ಪಾಳೇಗಾರಿಕೆ ನಡೆಯಲ್ಲ: ದರ್ಶನ್ ವಿರುದ್ಧ ಇಂದ್ರಜಿತ್ ಗರಂ

    ಕರ್ನಾಟಕದಲ್ಲಿ ಪಾಳೇಗಾರಿಕೆ ನಡೆಯಲ್ಲ: ದರ್ಶನ್ ವಿರುದ್ಧ ಇಂದ್ರಜಿತ್ ಗರಂ

    – ಬಹಳಷ್ಟು ಜನರ ಮೇಲೆ ದರ್ಶನ್ ಹಲ್ಲೆ ಮಾಡಿದ್ದಾರೆ
    – ಸೆಲೆಬ್ರಿಟಿಯಾಗಿ ಎಷ್ಟುಂತ ತಪ್ಪು ಮಾಡ್ತೀರಿ..?
    – ಸಿಸಿಟಿವಿ ದೃಶ್ಯ ಡಿಲೀಟ್ ಮಾಡಿದ್ದು ಯಾಕೆ..?

    ಬೆಂಗಳೂರು: ಕರ್ನಾಟಕದಲ್ಲಿ ಪಾಳೇಗಾರಿಕೆ ನಡೆಯಲ್ಲ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಕಿಡಿಕಾರಿದ್ದಾರೆ.

    ದರ್ಶನ್ ವೇಟರ್ ಮೇಲೆ ಹಲ್ಲೆ ಮಾಡಿರುವ ಆರೋಪ ಸಂಬಂಧ ಮತ್ತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ವೈಯಕ್ತಿಕವಾಗಿ ಯಾರ ಮೇಲೂ ದ್ವೇಷ ಇಲ್ಲ. ಆದ್ರೆ ತಪ್ಪನ್ನು ತಪ್ಪು ಅಂತ ಒಪ್ಪಿಕೊಳ್ಳಬೇಕು. ಎಷ್ಟು ಅಂತ ಮತ್ತೆ ಮತ್ತೆ ತಪ್ಪುಗಳನ್ನು ಮಾಡುತ್ತೀರಾ..? ಓರ್ವ ಸೆಲೆಬ್ರಿಟಿಯಾಗಿದ್ದುಕೊಂಡು ನಿರ್ದೇಶಕ, ನಿರ್ಮಾಪಕ, ವಾಚ್ ಮ್ಯಾನ್ ಗೆ ಅಥವಾ ಸಾಮಾನ್ಯ ನಾಗರಿಕನಿಗೆ ಹೊಡೆಯುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.

    ಜುಲೈ 3ರಂದು ಗೋಪಾಲ್ ರಾಜ್ ಅರಸು(ಪಪ್ಪು) ಅವರಿಗೆ ಸೋಶಿಯಲ್ ನಲ್ಲಿ ಹೊಡೆದಿದ್ದಾರೆ. ನಿಮ್ಮ ತೋಟದಲ್ಲಿದ್ದ ವಾಚ್ ಮ್ಯಾನ್ ಗೂ ಒದೆ ಬಿದ್ದಿದೆ. ಅವನು ಕೆಲಸನೇ ಬಿಟ್ಟು ಹೋಗಿದ್ದಾನೆ. ಏನಿದು ಇಷ್ಟೊಂದು ಹೊಡೆಯುವುದು, ಇದೇನು ಪಾಳೇಗಾರಿಕೆನಾ..? ಕರ್ನಾಟಕದಲ್ಲಿ ಪಾಳೇಗಾರಿಕೆ ನಡೆಯಲ್ಲ ಎಂದು ದರ್ಶನ್ ವಿರುದ್ಧ ಇಂದ್ರಜಿತ್ ಕಿಡಿಕಾರಿದರು.

    ಅರುಣಾ ಕುಮಾರಿ ವಿಚಾರ, ಸಂದೇಶ್ ನಾಗರಾಜ್ ಹೋಟೆಲ್ ನಲ್ಲಿ ಜಗಳದ ಬಗ್ಗೆ ಮಾತಾಡಿದ್ದೆ. ಆ ಬಳಿಕ ದರ್ಶನ್ ಅವರು, ಹೌದು ಹೊಡೆದೆ. ಕೋಪ ಬಂತು ಹೊಡೆದಿದ್ದು ನಿಜ ಅಂದ್ರು. ಈ ಘಟನೆಗೆ ನಾನು ಬದ್ಧ, ಅದಕ್ಕೆ ಬೇಕಾದ ಎಲ್ಲಾ ದಾಖಲೆಗಳು ಕೊಡ್ತೀನಿ. ಸದ್ಯ ಆ ಹುಡುಗ ಕೆಲಸ ಕಳೆದುಕೊಂಡಿದ್ದಾನೆ. ಬರೇ ಇದೊಂದೆ ಅಲ್ಲ, ಇಂತಹ ಪ್ರಕರಣಗಳು ತುಂಬಾ ಇದ್ದಾವೆ ಎಂದು ಹೇಳಿದರು. ಇದನ್ನೂ ಓದಿ: ‘ಏನಯ್ಯಾ ದರ್ಶನ್‍ಗೆ ತಲೆ ಇಲ್ವೇನಯ್ಯಾ, ಹೋಗಿ ಹೋಗಿ ನಾಯಿಗೆ ಕಚ್ಚಿದ್ದಾನೆ’

    ನಾನು ಒಂಟಿ ಸಲಗ, ನಾನು ಮಾತಾಡ್ತೀನಿ. ನಂಗೆ ಕೆಲ ಮಾಹಿತಿಗಳು ಬರುತ್ತವೆ. ಇನ್ನೂ ಕೆಲವು ವಿಚಾರ ತಿಳಿದ್ರೆ ನೀವು ಶಾಕ್ ಆಗ್ತೀರಿ. ಘಟನೆ ನಡೆದ ಸಮಯ, ಸ್ಥಳ ಎಲ್ಲವನ್ನೂ ಹೇಳಿದ್ದೀನಿ. ಪೊಲೀಸರು ಏನ್ ಮಾಡ್ತಾರೋ ನೋಡೋಣ. ನಾನೊಬ್ಬ ಪತ್ರಕರ್ತ, ನಾನು ಇನ್ವೆಷ್ಟಿಗೇಷನ್ ಮಾಡ್ತೀನಿ. ಹರ್ಷ, ಪಾಪಣ್ಣ ಮೆಲಂಟಾ, ದರ್ಶನ್, ಇಬ್ಬರು ಹುಡುಗಿಯರು, ರಾಕೇಶ್, ಪವಿತ್ರ ಗೌಡ ಕೂಡ ಇದ್ದರು ಎಂದು ಇಂದ್ರಜಿತ್ ಮತ್ತೆ ಹೇಳಿದರು. ಇದನ್ನೂ ಓದಿ: ಸಣ್ಣ ಗಲಾಟೆ ನಡೆದಿದ್ದು ನಿಜ, ಆದ್ರೆ ದರ್ಶನ್ ಹೊಡೆದಿಲ್ಲ: ಸಂದೇಶ್ ನಾಗರಾಜ್ ಪುತ್ರ

    ಜೂನ್ 24 ಮತ್ತು 25 ರಂದು ಲಾಕ್ ಡೌನ್ ಇತ್ತು. ಈ ಸಮಯದಲ್ಲಿ ಘಟನೆ ನಡೆದಿದೆ. ಬಡವರಿಗೆ ಒಂದು ನ್ಯಾಯ, ಸೆಲೆಬ್ರಿಟಿಗೆ ಒಂದು ನ್ಯಾಯನಾ..? ಇನ್ನೂ ತುಂಬಾ ವಿಚಾರಗಳಿವೆ ಅದರ ಜೊತೆಗೆ ಮತ್ತೆ ಬರುತ್ತೇನೆ. ಫೋಟೋ, ವೀಡಿಯೋಗಳು ಕೂಡ ನನ್ನ ಬಳಿ ಇವೆ. ಪೊಲೀಸರು ಕೇಳಿದ್ರೆ ಕೊಡ್ತೀನಿ. ಆಗಾಗ ಈ ರೀತಿಯ ಘಟನೆಗಳು ನಡೆದು ಅಲ್ಲಲ್ಲೆ ಸೆಟ್ಲ್ ಮೆಂಟ್ ಗಳು ಆಗುತ್ತಿವೆ ಎಂದು ಮತ್ತೆ ಇಂದ್ರಜಿತ್ ಆರೋಪಿಸಿದರು.

    ಡ್ರಗ್ಸ್ ವಿಚಾರದಲ್ಲಿ ಕೆಲ ಸೆಲೆಬ್ರಿಟಿಗಳು ತಪ್ಪಿಸಿಕೊಂಡರು. ಹೋಟೆಲ್ ನಲ್ಲಿ ಏಟು ತಿಂದ ಗಂಗಾಧರ್‍ನ ಕೆಲಸದಿಂದ ಬಿಡಿಸಿದ್ರು. ಈಗ ದರ್ಶನ್ ಸಣ್ಣ ಗಲಾಟೆ ಅಂತ ಒಪ್ಪಿಕೊಂಡಿದ್ದಾರೆ. ಹಿಂದುಳಿದವರಿಗೆ ಅನ್ಯಾಯ ಆಗ್ತಿದೆ. ಇಂದಿನ ಕಾಲದಲ್ಲೂ ಅದೇ ಅನ್ಯಾಯ ಆಗ್ತಿದೆ. ಅದಕ್ಕೆ ದಲಿತ ಅಂತಾ ಹೇಳಿದೆ. ಬಡವರಿಗೆ, ನ್ಯಾಯ ಸಿಗಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ನೀವೆಲ್ಲಾ ಸೇರಿದ್ದೀರಿ, ನಿಮ್ಮ ಜಾತಿಯನ್ನು ನಾವು ಕೇಳ್ತೀವಾ – ಇಂದ್ರಜಿತ್‍ಗೆ ದರ್ಶನ್ ತಿರುಗೇಟು

    ಸಿಡಿ ಲೇಡಿ, ಅರುಣಾ ಕುಮಾರಿ ಇಬ್ಬರ ವಿಚಾರನೂ ನೋಡಿ, ಇಬ್ಬರಿಗೂ ಅನ್ಯಾಯ ಆಗ್ತಿದೆ. ನನ್ನ ಪ್ರಕಾರ ದರ್ಶನ್ ಹಲ್ಲೆ ಮಾಡಿ ಮೂರು ಗಂಟೆ ರಾತ್ರಿ ಸಂಧಾನ ಮಾಡಿದ್ರು. ಸಂದೇಶ್ ನಾಗರಾಜು, ಮಧ್ಯ ಪ್ರವೇಶ ಮಾಡಿ ದರ್ಶನ್ ರನ್ನು ಹೊರ ದಬ್ಬಿದ್ರು. ಇಲ್ಲಿವರೆಗೂ ಅವರಿಬ್ಬರು ಮಾತಾಡ್ತಿಲ್ಲ. ಹೊಟೆಲ್ ನ ಇಡೀ ಸಿಬ್ಬಂದಿ, ದರ್ಶನ್ ವಿರುದ್ಧ ಗಲಾಟೆ ಮಾಡಿದರು ಎಂದರು.

    ಇದು ಮೊದಲನೇಯದಲ್ಲ, ಚಿತ್ರ ರಂಗದ ಸಾಕಷ್ಟು ಜನರಿಗೆ ಈ ಅನುಭವ ಆಗಿದೆ. ಬಹಳಷ್ಟು ಜನರ ಮೇಲೆ ದರ್ಶನ್ ಹಲ್ಲೆ ಮಾಡಿದ್ದಾರೆ. ಹೋಟೆಲ್ ನ ಹಾರ್ಡ್ ಡಿಸ್ಕ್ ತೆಗೆದ್ರೆ ಎಲ್ಲವು ಹೊರಬರುತ್ತೆ. ಹಲ್ಲೆಗೊಳಾದ ಯುವಕ ಗಂಗಾಧರ್ ಕನ್ನಡಿಗರು. ಸಮಯ ನೋಡ್ಕೊಂಡು, ಖಂಡಿತ ನಾನು ಎಲ್ಲವನ್ನೂ ಬಹಿರಂಗ ಪಡಿಸ್ತೀನಿ. ನಮ್ಮದೇ ಆದ ತನಿಖಾ ತಂಡ ಇದೆ, ಆ ಮೂಲಕ ನಮಗೆ ಬರುತ್ತೆ ಎಂದು ಹೇಳಿದರು.

    ಯಾಕೆ ಹೋಟೆಲ್ ನ ಸಿಸಿಟಿವಿ ಡಿಲೀಟ್ ಮಾಡ್ತಿರಿ. 2 ತಿಂಗಳು, ಕಾಲ ಡಿಲೀಟ್ ಮಾಡಬಾರದು ಅಂತಾ ನಿಯಮ ಇದೆ. ಪತ್ರಕರ್ತನಾಗಿ ನಾನು ಜನರಿಗೆ ಮಾಹಿತಿ ನೀಡಿದ್ದೇನೆ. ಮುಂದಿನದ್ದು ಪೊಲೀಸರ ಕೆಲಸ. ನಾವು ಹೋಗಿ ತನಿಖೆ ಮಾಡೋಕೆ ಆಗಲ್ಲ. ಪೊಲೀಸರು ತನಿಖೆ ಆಗಲಿ. ಮುಂದೆ ಯಾವಾಗ ಏನು ಕೊಡಬೇಕು ಅದು ತರ್ತಿನಿ. ಮೈಸೂರು ಪೊಲೀಸರು ಏನ್ ಮಾಡ್ತಾರೆ ನೋಡೋಣ ಎಂದು ತಿಳಿಸಿದ್ದಾರೆ.

  • ಇಂದ್ರಜಿತ್ ಮನವಿಯಂತೆ ತನಿಖೆಗೆ ಮೈಸೂರು ಪೊಲೀಸ್ ಆಯುಕ್ತರಿಗೆ ಸೂಚನೆ: ಬೊಮ್ಮಾಯಿ

    ಇಂದ್ರಜಿತ್ ಮನವಿಯಂತೆ ತನಿಖೆಗೆ ಮೈಸೂರು ಪೊಲೀಸ್ ಆಯುಕ್ತರಿಗೆ ಸೂಚನೆ: ಬೊಮ್ಮಾಯಿ

    ಬೆಂಗಳೂರು: ನಿರ್ಮಾಪಕ ಇಂದ್ರಜಿತ್ ಲಂಕೇಶ್ ಅವರ ಮನವಿಯಂತೆ ಪ್ರಕರಣ ಸಂಬಂಧ ತನಿಖೆ ನಡೆಸುವಂತೆ ಮೈಸೂರು ಪೊಲೀಸ್ ಆಯುಕ್ತರಿಗೆ ಸೂಚಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದ್ರಜಿತ್ ಲಂಕೇಶ್ ನನಗೆ ಮನವಿ ಪತ್ರ ನೀಡಿದ್ದಾರೆ. ಮನವಿ ಪತ್ರದ ಆಧಾರದ ಮೇಲೆ ತನಿಖೆ ಮಾಡುವಂತೆ ಮೈಸೂರು ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದ್ದೇನೆ ಎಂದರು.

    ಇಂದ್ರಜಿತ್ ಆರೋಪದ ಬಗ್ಗೆ ನನಗೆ ಮಾಹಿತಿ ಇಲ್ಲ. ಅವರ ಮನವಿ ಪತ್ರದ ಮೇಲೆ ತನಿಖೆ ಮಾಡಲು ಸೂಚನೆ ನೀಡಿದ್ದೇನೆ. ಮನವಿ ಪತ್ರದಲ್ಲಿ ಸ್ಪಷ್ಟವಾಗಿ ಏನೂ ಹೇಳಿಲ್ಲ. ಯಾವುದೇ ಸಾಕ್ಷಿಗಳನ್ನು ಅವರು ನಮಗೆ ನೀಡಿಲ್ಲ. ಇಂದ್ರಜಿತ್ ಏನಾದರೂ ಆರೋಪ ಮಾಡೋದಾದ್ರೆ ದೂರು ಕೊಟ್ಟು ಆರೋಪಗಳನ್ನ ಮಾಡಲಿ. ನನಗೆ ಕೊಟ್ಟ ಮನವಿ ಮೇಲೆ ತನಿಖೆಗೆ ಸೂಚಿಸಿದ್ದೇನೆ ಎಂದರು. ಇದನ್ನೂ ಓದಿ: ದಲಿತ ವೇಟರ್ ಮೇಲೆ ದರ್ಶನ್, ಸ್ನೇಹಿತರಿಂದ ಹಲ್ಲೆ – ಇಂದ್ರಜಿತ್ ಆರೋಪ

    ಇಂದ್ರಜಿತ್ ಆರೋಪವೇನು..?
    ಮೈಸೂರಿನ ಸಂದೇಶ್ ಪ್ರಿನ್ಸ್ ಹೋಟೆಲಿನಲ್ಲಿ ದಲಿತ ವೇಟರ್ ಮೇಲೆ ದರ್ಶನ್ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ವೇಟರ್ ಕಣ್ಣುಗಳಿಗೆ ಹಾನಿಯಾಗಿದೆ. ಈ ಘಟನೆಯ ಸಂದರ್ಭದಲ್ಲಿ ದರ್ಶನ್, ರಾಕೇಶ್, ಹರ್ಷ ಮೆಲಾಂಟ, ಮತ್ತು ಪವಿತ್ರ ಗೌಡ ಇರುತ್ತಾರೆ. ಘಟನೆಯ ಬಳಿಕ 50 ಸಾವಿರ ರೂ. ನೀಡಿ ರಾಜಿ ಮಾಡಿಕೊಂಡಿದ್ದಾರೆ ಎಂದು ಹೇಳಿದರು.

    ಈ ಘಟನೆ ಹೊರಗಡೆ ಬರಬಾರದು ಎಂಬ ಕಾರಣಕ್ಕೆ ಸಿಸಿಟಿವಿ ದೃಶ್ಯಗಳನ್ನು ಡಿಲೀಟ್ ಮಾಡಿಸಿದ್ದಾರೆ. ಮೈಸೂರು ಪೊಲೀಸರು ಬಳೆ ತೊಟ್ಟಿದ್ದಾರಾ ಈ ಎಲ್ಲ ಘಟನೆಗಳ ಬಗ್ಗೆ ತನಿಖೆ ನಡೆಸಲಿ ಎಂದು ಆಗ್ರಹಿಸಿದರು. ಇದೇ ವೇಳೆ ಆರೋಪಕ್ಕೆ ಮಾಧ್ಯಮಗಳು ಸಾಕ್ಷ್ಯ ನೀಡುವಂತೆ ಕೇಳಿದ್ದಕ್ಕೆ, ಈಗ ನಾನು ಬೊಮ್ಮಾಯಿ ಅವರಲ್ಲಿ ದೂರು ನೀಡಿದ್ದೇನೆ. ಪೊಲೀಸರು ತನಿಖೆ ನಡೆಸಲಿ. ಮುಂದೆ ನೋಡೋಣ ಎಂದು ಉತ್ತರಿಸಿದರು.

  • ಹೋಟೆಲಿನಲ್ಲಿ ಸ್ಟಾರ್ ನಟರೊಬ್ಬರಿಂದ ವೇಟರ್ ಮೇಲೆ ಹಲ್ಲೆ – ಬೊಮ್ಮಾಯಿಗೆ ಇಂದ್ರಜಿತ್ ದೂರು

    ಹೋಟೆಲಿನಲ್ಲಿ ಸ್ಟಾರ್ ನಟರೊಬ್ಬರಿಂದ ವೇಟರ್ ಮೇಲೆ ಹಲ್ಲೆ – ಬೊಮ್ಮಾಯಿಗೆ ಇಂದ್ರಜಿತ್ ದೂರು

    ಬೆಂಗಳೂರು: ಸ್ಟಾರ್ ನಟರೊಬ್ಬರು ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ನಿರ್ಮಾಪಕ ಇಂದ್ರಜಿತ್ ಲಂಕೇಶ್ ಅವರು ಇಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿಗೆ ದೂರು ನೀಡಿದ್ದಾರೆ.

    ಮೈಸೂರಿನ ಸಂದೇಶ್ ನಾಗರಾಜ್ ಮಾಲೀಕತ್ವದ ಹೋಟೇಲಿನಲ್ಲಿ ಈ ಘಟನೆ ನಡೆದಿದ್ದು, ಪ್ರಕರಣದ ಸಂಪೂರ್ಣ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ. ಸ್ಟಾರ್ ನಟ,  ಹೋಟೇಲಿನಲ್ಲಿ ದಲಿತ ವೇಟರ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಇಂದ್ರಜಿತ್ ಆರೋಪಿಸಿದ್ದಾರೆ.

    ಈ ಬಗ್ಗೆ ಮಾತನಾಡಿರುವ ಇಂದ್ರಜಿತ್, ಸಂದೇಶ್ ನಾಗರಾಜ್ ಹೋಟೆಲಿನಲ್ಲಿ ನಟರೊಬ್ಬರು ದಲಿತ ಸಮುದಾಯದ ವೇಟರ್ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಯಿಂದ ವೇಟರ್ ಗೆ ಕಣ್ಣುಗಳಿಗೆ ಹಾನಿಯಾಗಿದೆ. ಸಿಸಿ ಟಿವಿ ದೃಶ್ಯ ಇದೆ. ಕೂಡಲೇ ಈ ಬಗ್ಗೆ ತನಿಖೆ ನಡೆಸಿ ಎಂದು ಇಂದ್ರಜಿತ್ ಆಗ್ರಹಿಸಿದ್ದಾರೆ. ಆದರೆ ನಟನ ಹೆಸರನ್ನು ಮಾತ್ರ ಇಂದ್ರಜಿತ್ ಮನವಿಯಲ್ಲಿ ಉಲ್ಲೇಖ ಮಾಡಿಲ್ಲ.

    ನಾನು ಸಾಮಾನ್ಯರ ಪರ. ಪ್ರತಿಯೊಂದು ಕೇಸ್ ನಲ್ಲಿ ಸಾಮಾನ್ಯರಿಗೆ ನ್ಯಾಯ ಸಿಗ್ತಿಲ್ಲ. ಹೀಗಾಗಿ ಈ ಪ್ರಕರಣದಲ್ಲಾದರೂ ನ್ಯಾಯ ಸಿಗಲಿ ಎಂದು ಇಂದ್ರಜಿತ್ ಒತ್ತಾಯಿಸಿದ್ದಾರೆ.

  • ಶಕೀಲಾ ಹೇಳಿದ ಕಥೆ ಕೇಳಿ ಅತ್ತಿದ್ದರಂತೆ ರಿಚಾ ಛಡ್ಡಾ!

    ಶಕೀಲಾ ಹೇಳಿದ ಕಥೆ ಕೇಳಿ ಅತ್ತಿದ್ದರಂತೆ ರಿಚಾ ಛಡ್ಡಾ!

    ಬೆಂಗಳೂರು: ಬಾಲಿವುಡ್ ನಟಿ ರಿಚಾ ಛಡ್ಡಾ ಇಂದ್ರಜಿತ್ ಲಂಕೇಶ್ ನಿರ್ದೇಶನದ ಶಕೀಲ ಜೀವನಾಧಾರಿತ ಚಿತ್ರದಲ್ಲಿ ನಟಿಸುತ್ತಿದ್ದಾರೆ. ವಯಸ್ಕರ ಸಿನಿಮಾಗಳ ಮೂಲಕವೇ ಪ್ರಸಿದ್ಧರಾದ ಶಕೀಲಾ ಬದುಕಿನ ಕಥೆ ಎಂಥವರನ್ನೂ ಭಾವುಕರನ್ನಾಗಿಸುವಂಥಾದ್ದು. ಅಂಥಾ ಶಕೀಲಾ ಪಾತ್ರ ನಿರ್ವಹಿಸುತ್ತಿರುವ ರಿಚಾ ಈ ಚಿತ್ರಕ್ಕಾಗಿ ಭಾರೀ ತಯಾರಿ ಆರಂಭಿಸಿಕೊಂಡೇ ಅಖಾಡಕ್ಕಿಳಿದಿದ್ದಾರೆ.

    ಈ ಪಾತ್ರವನ್ನು ಮಾಡಲು ಒಪ್ಪಿಕೊಂಡ ನಂತರ ರಿಚಾ ಶಕೀಲಾ ಅವರನ್ನು ಖುದ್ದಾಗಿ ಭೇಟಿಯಾಗಿದ್ದರಂತೆ. ಅವರ ಸಾಂಗತ್ಯದೊಂದಿಗೆ ಆ ಪಾತ್ರವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲೆತ್ನಿಸಿದ್ದ ರಿಚಾ ಶಕೀಲ ಜೊತೆ ಗಂಟೆಗಟ್ಟಲೆ ಮಾತಾಡಿದ್ದರಂತೆ. ಈ ಭೇಟಿ ಪುನರಾವರ್ತನೆಯಾದಾಗ ಇಬ್ಬರ ನಡುವೆ ಆತ್ಮೀಯತೆ ಬೆಳೆದುಕೊಂಡು ತಂತಮ್ಮ ಪರ್ಸನಲ್ ವಿಚಾರಗಳನ್ನೂ ವಿನಿಮಯ ಮಾಡಿಕೊಂಡಿದ್ದರಂತೆ.

    ಈ ಬಗ್ಗೆ ರಿಚಾ ಛಡ್ಡಾ ಹೇಳಿಕೊಂಡಿದ್ದಾರೆ. ಮೊದಲ ಸಲ ಶಕೀಲಾರನ್ನು ರಿಚಾ ಭೇಟಿಯಾಗಿ ಒಂದಷ್ಟು ಮಾತಾಡಿ ಬಂದಿದ್ದರು. ಆದರೆ ಎರಡನೇ ಸಲ ಭೇಟಿಯಾದಾಗ ಶಕೀಲಾ ತಮ್ಮ ಬದುಕಿನ ಕೆಲ ಪುಟಗಳನ್ನು ಬಿಚ್ಚಿಟಾಗ ರಿಚಾ ಛಡ್ಡ ಅತ್ತು ಬಿಟ್ಟಿದ್ದರಂತೆ. ಹೊರ ಜಗತ್ತಿಗೆ ಮಾದಕತೆಯ ಸಿಂಬಲ್ ಆಗಿ ಕಾಣಿಸುವ ಶಕೀಲಾ ಅವರೊಳಗೆ ಅವಿತಿರೋ ಆದ್ರ್ರ ಭಾವಗಳನ್ನು ಕಂಡು ಭಾವುಕರಾಗಿದ್ದರಂತೆ.

    ಈ ಭೇಟಿ ಮತ್ತು ಸಲುಗೆಯಿಂದ ಶಕೀಲಾ ಪಾತ್ರವನ್ನು ಪರಿಣಾಮಕಾರಿಯಾಗಿ ಪ್ರಸದ್ತುತಪಡಿಸಲು ಸಾಧ್ಯವಾಗಿದೆ ಎಂಬುದು ರಿಚಾ ಛಡ್ಡಾ ಅಭಿಪ್ರಾಯ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • `ಗೌರಿ ದಿನ’ ಕಾರ್ಯಕ್ರಮದಲ್ಲಿ ಭಾಗವಹಿಸಲ್ಲ ಎಂದ ಸಹೋದರ ಇಂದ್ರಜಿತ್ ಲಂಕೇಶ್

    `ಗೌರಿ ದಿನ’ ಕಾರ್ಯಕ್ರಮದಲ್ಲಿ ಭಾಗವಹಿಸಲ್ಲ ಎಂದ ಸಹೋದರ ಇಂದ್ರಜಿತ್ ಲಂಕೇಶ್

    ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ 56ರ ಹುಟ್ಟುಹಬ್ಬದ ನೆನಪು ಹಿನ್ನಲೆಯಲ್ಲಿ ಇಂದು ನಗರದಲ್ಲಿ ಗೌರಿ ದಿನ ಆಚರಿಸಲಾಗುತ್ತಿದೆ.

    ಈ ವೇಳೆ ಇಂದ್ರಜಿತ್ ಲಂಕೇಶ್ ಚಾಮರಾಜಪೇಟೆ ಗೌರಿ ಫೋಟೋ ಇಟ್ಟು ಸಮಾಧಿಗೆ ಪೂಜೆ ಸಲ್ಲಿಸಿದ್ದು ಟೌನ್ ಹಾಲ್ ನಲ್ಲಿ ಮಧ್ಯಾಹ್ನ ನಡೆಯಲಿರುವ ಕಾರ್ಯಕ್ರಮಕ್ಕೆ ನಾನು ಭಾಗವಹಿಸುವುದಿಲ್ಲ ಎಂದು ತಿಳಿಸಿದ್ದಾರೆ.

    ಇಂದು ಟೌನ್‍ಹಾಲ್ ನಲ್ಲಿ ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮ ನಡೆಯುತ್ತಿದ್ದು, ಸಿಎಂ ಸಿದ್ದರಾಮಯ್ಯ ತಮ್ಮ ಮಾಧ್ಯಮ ಸಲಹೆಗಾರ ಅಮೀನ್‍ಮಟ್ಟು ನೇತೃತ್ವದಲ್ಲಿ ಕಾರ್ಯಕ್ರಮ ನಡೆಸುತ್ತಿದ್ದಾರೆ. ಹೀಗಾಗಿ ನಾನು ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

     

    ಸಿಎಂ ಸಿದ್ದರಾಮಯ್ಯ ತಮ್ಮ ಮಾಧ್ಯಮ ಸಲಹೆಗಾರ ಅಮೀನ್‍ಮಟ್ಟು ನೇತೃತ್ವದಲ್ಲಿ ಕಾರ್ಯಕ್ರಮ ನಡೆಸ್ತಿದ್ದಾರೆ. ಇವರೇ ಸಾವಿರಾರು ರೂಪಾಯಿ ಕೊಟ್ಟು ವಿಮಾನದಲ್ಲಿ ದೆಹಲಿಯಿಂದ ಹಲವರನ್ನು ಕರೆಸ್ತಿದ್ದಾರೆ. ಇದರ ಉದ್ದೇಶ ಏನು? ಎಂದು ಸಹೋದರ ಇಂದ್ರಜಿತ್ ಲಂಕೇಶ್ ಪ್ರಶ್ನಿಸಿದ್ದಾರೆ.

    ಗೌರಿ ಹತ್ಯೆ ವಿಚಾರ ಜೀವಂತವಾಗಿರಲಿ ಎನ್ನುವುದು ರಾಜ್ಯ ಸರ್ಕಾರದ ಆಸೆ ಇರಬಹುದು. ಹಾಗಾಗಿಯೇ ಗೌರಿ ಹಂತಕರನ್ನು ಹಿಡಿಯುತ್ತಿಲ್ಲ. ಇವತ್ತು ಟೌನ್‍ಹಾಲ್ ಮುಂಭಾಗದಲ್ಲಿ ನಡೆಯುತ್ತಿರೋದು ಸರ್ಕಾರದ ಪ್ರಾಯೋಜಿತ ಕಾರ್ಯಕ್ರಮ. ನಾನು ಅಥವಾ ನಮ್ಮ ಕುಟುಂಬದ ಸದಸ್ಯರು ಯಾವುದೇ ಕಾರಣಕ್ಕೂ ಅಲ್ಲಿಗೆ ಹೋಗೋದಿಲ್ಲ ಎಂದರು.

    ಸೆಪ್ಟೆಂಬರ್ 5, 2017 ಮಂಗಳವಾರ ರಾತ್ರಿ ಸುಮಾರು 7.30 ರ ಸುಮಾರಿ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಅವರ ಮನೆಯ ಮುಂಭಾಗವೇ ಮೂವರು ದುಷ್ಕರ್ಮಿಗಳು ಬೈಕಿನಲ್ಲಿ ಬಂದು ಗುಂಡಿಟ್ಟು ಹತ್ಯೆ ಮಾಡಿದ್ದರು. ತನಿಖೆಯ ನಂತರ ಎಸ್‍ಐಟಿ ಗೌರಿ ಹಂತಕರ ರೇಖಾಚಿತ್ರ ಮತ್ತು ವಿಡಿಯೋವನ್ನು ಬಿಡುಗಡೆ ಮಾಡಿದ್ದು, ಸಾರ್ವಜನಿಕರಿಗೆ ಹಂತಕರ ಬಗ್ಗೆ ಸುಳಿವು ನೀಡುವಂತೆ ಮನವಿ ಕೂಡ ಮಾಡಿಕೊಂಡಿದ್ದರು. ಮೂವರು ಆರೋಪಿಗಳಲ್ಲಿ ಇಬ್ಬರು ನೋಡುವುದಕ್ಕೆ ಒಂದೇ ತರಹ ಕಾಣುತ್ತಿದ್ದರು. ಆರೋಪಿಗಳು ನಗರದಲ್ಲಿ ಮೂರು ವಾರಗಳ ಕಾಲ ಉಳಿದುಕೊಂಡಿದ್ದರು ಎಂದು ಎಸ್‍ಐಟಿ ತಿಳಿಸಿತ್ತು.

  • ಗೌರಿ ಹತ್ಯೆ ಪ್ರಕರಣ: ಎಸ್‍ಐಟಿ ತನಿಖೆ ಬಗ್ಗೆ ಇಂದ್ರಜಿತ್ ಲಂಕೇಶ್ ಹೇಳಿದ್ದು ಹೀಗೆ

    ಗೌರಿ ಹತ್ಯೆ ಪ್ರಕರಣ: ಎಸ್‍ಐಟಿ ತನಿಖೆ ಬಗ್ಗೆ ಇಂದ್ರಜಿತ್ ಲಂಕೇಶ್ ಹೇಳಿದ್ದು ಹೀಗೆ

    ಬೆಂಗಳೂರು: ನಮ್ಮ ಅಕ್ಕನ ಕೊಲೆಯಾಗಿದೆ. ಇದನ್ನು ನಾನು, ನಮ್ಮ ತಾಯಿ ಹಾಗೂ ಅಕ್ಕ ಕವಿತಾ ಲಂಕೇಶ್ ಖಂಡಿಸಿದ್ದೇವೆ. ಹೀಗಾಗಿ ಆದಷ್ಟು ಬೇಗ ಕೊಲೆಗಾರನ ಪತ್ತೆಹಚ್ಚಬೇಕು. ಈ ಹಿನ್ನೆಲೆಯಲ್ಲಿ ನಾವು ಮೂವರು ವಿಶೇಷ ತನಿಖಾ ತಂಡದ(ಎಸ್‍ಐಟಿ) ಪೊಲೀಸರಿಗೆ ಸಂಪೂರ್ಣ ಸಹಕಾರ ನೀಡುತ್ತಿದ್ದೇವೆ ಅಂತ ಹೇಳಿದ್ದಾರೆ.

    ಇಂದಿರಾನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‍ಐಟಿ ಅವರು ಹೇಳಿಕೆ ಪಡೆಯಲು ನಮ್ಮ ಮೂವರನ್ನು ಕರೆದಿದ್ದರು. ಹೇಳಿಕೆ ಕೊಡುವ ವೇಳೆ ಗೌರಿಯ ಇತಿಹಾಸವನ್ನು ಅವರು ಕೇಳಿದ್ದಾರೆ. ಇದಕ್ಕಾಗಿ ಮೂವರ ಹೇಳಿಕೆಯನ್ನು ಪಡೆದಿದ್ದಾರೆ. ಇದು ಬಿಟ್ಟು ತಬ್ಬಿಬ್ಬಾಗಿ ಬಿದ್ ಬಿಟ್ಟೆ, ಗಳಗಳನೆ ಅತ್ತುಬಿಟ್ಟೆ ಅನ್ನೋದು ಎಲ್ಲಾ ಸುಳ್ಳು. ನನ್ನನ್ನು ಕೆಲಸ ಮಾಡಲು ಬಿಡಿ ಅಂತ ಹೇಳಿದ್ರು.

    ಅಕ್ಕ ಗೌರಿ ಲಂಕೇಶ್ ಕೊಲೆಗಾರರು ಯಾರು ಅಂತ ನಮಗೆ ಗೊತ್ತಿಲ್ಲ. ಆದ್ರೆ ನನಗೆ ಈ ಅಪಪ್ರಚಾರ ಮಾಡುವುದು ಯಾರು ಅಂತ ತಿಳಿದಿದೆ. ಸಮಯ ಸಂದರ್ಭ ಬಂದಾಗ ನಾನು ಅದನ್ನು ಬಹರಂಗಪಡಿಸ್ತೀನಿ ಅಂತ ಬೇಸರ ವ್ಯಕ್ತಪಡಿಸಿದ್ರು.

    ನಾವಿಬ್ಬರೂ ಒಂದು ಸಿದ್ದಾಂತದಿಂದ ಬೇರೆಯಾಗಿದ್ದೇವೆ ಅಷ್ಟೆ. ಈ 13 ವರ್ಷದಲ್ಲಿ ನಾನು ಮತ್ತು ಗೌರಿ ಒಂದು ವಾದವನ್ನೂ ಮಾಡಿಲ್ಲ. ಹುಟ್ಟು ಹಬ್ಬದ ಸಂದರ್ಭದಲ್ಲಿ ನನ್ನ ಮಕ್ಕಳಿಗೆ ವಿಶ್ ಮಾಡ್ತಾ ಇದ್ರು. ಅಲ್ಲದೇ ಉಡುಗೊರೆಗಳನ್ನು ಕೂಡ ಕೊಡ್ತಾ ಇದ್ರು. ನಾನು ಅವರ ಜೊತೆಗಿದ್ದೀನಿ. ಅವರ ಮನೆಗೆ ಹೋಗಿ ಹಬ್ಬಗಳನ್ನೆಲ್ಲಾ ಆಚರಿಸುತ್ತಿದ್ದೆ, ಹೀಗಾಗಿ ನನ್ನ ಮೇಲಿನ ಆರೋಪಗಳೆಲ್ಲಾ ಸುಳ್ಳು. ಒಟ್ಟಿನಲ್ಲಿ ಗೌರಿ ಹತ್ಯೆ ಬಗೆಗಿನ ತನಿಖೆ ಬಿರುಸಿನಿಂದ ನಡೀತಾ ಇದೆ ಅಂತ ಹೇಳಿದ್ರು.

    ಸೆ.5ರ ರಾತ್ರಿ ಸುಮಾರು 7.40ರ ಸುಮಾರಿಗೆ ಹಿರಿಯ ಪತ್ರಕರ್ತೆ ಹಾಗೂ ವಿಚಾರವಾದಿ ಗೌರಿ ಲಂಕೇಶ್ ತಮ್ಮ ಕಾರಿನಲ್ಲಿ ಮನೆಗೆ ವಾಪಾಸ್ಸಾಗಿ ಗೇಟ್ ತೆಗೆಯುತ್ತಿದ್ದಂತೆಯೇ ಆಗಂತುಕನೋರ್ವ ಬಂದು ಗೌರಿ ಮೇಲೆ ಗುಂಡಿನ ಸುರಿಮಳೆಗೈದಿದ್ದಾನೆ. ಪರಿಣಾಮ ಗೌರಿ ಮನೆ ಬಾಗಿನಲ್ಲಿಯೇ ಮೃತಪಟ್ಟಿದ್ದಾರೆ. ಹಿರಿಯ ಸಾಹಿತಿ ಎಂ ಎಂ ಕಲಬುರ್ಗಿ ಹತ್ಯೆಯ ಬಳಿಕ ರಾಜ್ಯದಲ್ಲಿ ಇದು ಎರಡನೇ ವಿಚಾರವಾದಿಯ ಹತ್ಯೆಯಾಗಿದ್ದು ದೇಶಾದ್ಯಂತ ಭಾರೀ ಸಂಚಲನವನ್ನೇ ಉಂಟುಮಾಡಿದೆ. ಆ ಬಳಿಕ ಗೌರಿ ಹತ್ಯೆ ಖಂಡಿಸಿ ಅನೇಕ ಪ್ರತಿಭಟನೆಗಳು ನಡೆದವು. ದುಷ್ಕರ್ಮಿಗಳನ್ನು ಬಂಧಿಸುವಂತೆ ಇಂದಿಗೂ ಹೋರಾಟಗಳು ನಡೆಯುತ್ತಲೇ ಇದೆ.

    https://www.youtube.com/watch?v=jPCvGSLZnDY

    https://www.youtube.com/watch?v=jtfEPQsG_LQ

    https://www.youtube.com/watch?v=JatNCXlFzmo

    https://www.youtube.com/watch?v=Wm2_FgKUvtA

    https://www.youtube.com/watch?v=UpTSQC0W05M

     

  • 2005ರಲ್ಲಿ ಗೌರಿ ಲಂಕೇಶ್‍ಗೆ ಪಿಸ್ತೂಲ್ ತೋರಿಸಿದ್ದ ಇಂದ್ರಜಿತ್ ಲಂಕೇಶ್

    2005ರಲ್ಲಿ ಗೌರಿ ಲಂಕೇಶ್‍ಗೆ ಪಿಸ್ತೂಲ್ ತೋರಿಸಿದ್ದ ಇಂದ್ರಜಿತ್ ಲಂಕೇಶ್

    ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಹಿನ್ನಲೆಯಲ್ಲಿ 2005 ರಲ್ಲಿ ಗೌರಿ ಲಂಕೇಶ್‍ಗೆ ಪಿಸ್ತೂಲ್ ತೋರಿಸಿ ಇಂದ್ರಜಿತ್ ಬೆದರಿಕೆ ಹಾಕಿದ್ದರು. ಲಂಕೇಶ್ ಪತ್ರಿಕೆ ಒಡೆತನದ ವಿಷಯಕ್ಕೆ ಇಂದ್ರಜಿತ್ ಹಾಗೂ ಗೌರಿ ಲಂಕೇಶ್ ನಡುವೆ ಜಗಳವಾಗಿತ್ತು. ಈ ಪ್ರಕರಣದ ಮಾಹಿತಿ ಪಡೆಯಲು ಪೊಲೀಸರು ಮುಂದಾಗಿದ್ದಾರೆ.

    2000ರಲ್ಲಿ ಲಂಕೇಶ್ ಮೃತ ಪಟ್ಟಿದ್ದರು. ಲಂಕೇಶ್ ಸಾವನಪ್ಪಿದ ಬಳಿಕ ಗೌರಿ ಲಂಕೇಶ್ ಅವರು ಲಂಕೇಶ್ ಪತ್ರಿಕೆಯ ಸಂಪಾದಕಿ ಆಗಿದ್ದರು. ಈ ವೇಳೆ ಪತ್ರಿಕೆಯಲ್ಲಿ ಪ್ರಕಟವಾದ ಕೆಲ ವರದಿಗಳಿಗೆ ಇಂದ್ರಜಿತ್ ಆಕ್ಷೇಪ ವ್ಯಕ್ತ ಪಡಿಸಿದ್ದರು. ಇದೇ ವಿಚಾರವಾಗಿ ಇಬ್ಬರ ನಡುವೆ ವೈಮನಸ್ಸು ಕೂಡ ಉಂಟಾಗಿತ್ತು. 15 ಫೆಬ್ರವರಿ 2005 ರಂದು ಬಸವನಗುಡಿ ಪೊಲೀಸ್ ಠಾಣೆಯಲ್ಲಿ ತನ್ನ ಸಹೋದರ ಇಂದ್ರಜಿತ್ ವಿರುದ್ಧ ಗೌರಿ ಲಂಕೇಶ್ ದೂರುನೀಡಿದ್ದರು. ಪಿಸ್ತೂಲ್ ತೋರಿಸಿ ಜೀವ ಬೆದರಿಕೆ ಹಾಕಿದ್ದಾನೆಂದು ಗೌರಿ ಲಂಕೇಶ್ ದೂರು ನೀಡಿದ್ದರು.

    ನಂತರ ಪ್ರತಿಯಾಗಿ ಗೌರಿ ಲಂಕೇಶ್ ವಿರುದ್ಧ ಇಂದ್ರಜಿತ್ ಲಂಕೇಶ್ ಪ್ರತಿ ದೂರು ದಾಖಲಿಸಿದ್ದರು. ಪತ್ರಿಕೆಗೆ ಸಂಬಂಧ ಪಟ್ಟ ದಾಖಲೆ ಹಾಗೂ ಕಂಪ್ಯೂಟರ್ ಕದ್ದೊಯ್ದಿದ್ದಾರೆಂದು ಇಂದ್ರಜಿತ್ ದೂರು ದಾಖಲಿಸಿದ್ದರು. ಎರಡು ಪ್ರಕರಣಗಳನ್ನು ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದ್ದರು. ತನಿಖೆ ಮುಗಿಸಿದ ನಂತರ ನ್ಯಾಯಾಧೀಶರ ಮುಂದೆ ಚಾರ್ಜ್ ಶೀಟ್ ಕೂಡ ಸಲ್ಲಿಸಿದ್ದರು. ಈ ವಿಚಾರದ ಬಗ್ಗೆ ಈಗ ಮತ್ತೆ ಮಾಹಿತಿ ಪಡೆಯಲು ಎಸ್‍ಐಟಿ ಟೀಂ ಮುಂದಾಗಿದ್ದಾರೆ. ಮಾಹಿತಿ ಪಡೆದ ಬಳಿಕ ಸಂಬಂಧ ಪಟ್ಟವರ ವಿಚಾರಣೆಗೆ ಸಿದ್ಧತೆ ನಡೆಸುತ್ತಿದ್ದಾರೆ.

    ಗೌರಿ ಲಂಕೇಶ್ ಫಾರ್ಮ್ ಹೌಸ್‍ನಲ್ಲೂ ಶೋಧ ನಡೆಸಿದ ಪೊಲೀಸರು ಅಲ್ಲಿದ್ದ ಇಬ್ಬರು ಕೆಲಸಗಾರರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಫಾರ್ಮ್ ಹೌಸ್ ಹಂಚಿಕೆ ವಿಚಾರವಾಗಿ ಗೌರಿ ಲಂಕೇಶ್ ಹಾಗೂ ಕುಟುಂಬಸ್ಥರ ನಡುವೆ ಅಸಮಾಧಾನ ಇತ್ತು. ಇದೇ ವಿಚಾರಕ್ಕೆ ಆಗಾಗ ಜಗಳವಾಡುತ್ತಿದ್ದರು ಎಂದು ಎಸ್‍ಐಟಿ ಗಮಕ್ಕೆ ತಂದಿದ್ದಾರೆ. ಕಳೆದ ಸೋಮವಾರ ವಿಶೇಷ ತಂಡ ಭೇಟಿ ನೀಡಿ ಶೋಧ ಕಾರ್ಯ ನಡೆಸಿದ್ದರು. ಗೌರಿ ಲಂಕೇಶ್ ಕಚೇರಿಯಲ್ಲೂ ಎಸ್‍ಐಟಿ ತಂಡ ಪರಿಶೀಲನೆ ನಡೆಸಿದರು. ಈ ವೇಳೆ ಮಹತ್ವದ ದಾಖಲೆಗಳಿರುವ ಗೌರಿ ಲಂಕೇಶ್‍ಗೆ ಸೇರಿದ ಲ್ಯಾಪ್‍ಟಾಪ್ ಹಾಗೂ ಎರಡು ಪೆನ್ ಡ್ರೈವ್ ಎಸ್‍ಐಟಿ ವಶಕ್ಕೆ ಪಡೆದಿದ್ದಾರೆ. ಗೌರಿ- ಇಂದ್ರಜಿತ್ ನಡುವಿನ ಹಳೆ ಜಗಳದ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.

    ಗೌರಿ ಲಂಕೇಶ್ ಹತ್ಯೆ ಪ್ರಕರಣದ ಹಿನ್ನಲೆಯಲ್ಲಿ ಪ್ರಕರಣದ ತನಿಖೆಯಲ್ಲಿ ಅತಿದೊಡ್ಡ ವಿಶೇಷ ತಂಡವನ್ನು ರಚಿಸಲಾಗಿದೆ. ಪ್ರಕರಣದ ತನಿಖೆಯಲ್ಲಿ 100 ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದಾರೆ. ಈ ಹಿಂದೆ ಕಲಬುರ್ಗಿ ಪ್ರಕರಣದಲ್ಲಿ 70 ಪೊಲೀಸರ ತಂಡ ಕಾರ್ಯಾಚರಣೆ ನಡೆಸಿತ್ತು. ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಕೊಲೆ ಪ್ರಕರಣಕ್ಕೆ 100 ಮಂದಿ ಅಧಿಕಾರಿಗಳ ನಿಯೋಜನೆ ಆಗಿದ್ದಾರೆ.