Tag: indonesian

  • ರೈಸ್ ಕುಕ್ಕರನ್ನೇ ಮದುವೆಯಾದ ಆಸಾಮಿ

    ರೈಸ್ ಕುಕ್ಕರನ್ನೇ ಮದುವೆಯಾದ ಆಸಾಮಿ

    ಜಕಾರ್ತಾ: ಹುಡುಗ, ಹುಡುಗಿ ಮದುವೆಯಾಗುವುದರಲ್ಲಿ ವಿಶೇಷತೆ ಏನು ಇಲ್ಲ. ಆದರೆ ಮದುವೆ ವಿಭಿನ್ನವಾಗಿ ನೀರಿನಲ್ಲೋ, ವಿಮಾನದಲ್ಲೋ ಆಗಿ ಸುದ್ದಿಯಾಗಿರುವ ಅನೇಕ ಉದಾಹರಣೆಗಳಿವೆ. ಆದರೆ ಇಲ್ಲೊಬ್ಬ ಆಸಾಮಿ ಅಡುಗೆ ಮಾಡುವ ಕುಕ್ಕರನ್ನೇ ಮದುವೆಯಾಗಿದ್ದಾನೆ.

    ಖೋಯಿರುಲ್ ಅನಾಮ್ ನನಗೆ ಮದುವೆಯಾಗಲು ಹೆಣ್ಣು ಬೇಡ ಎಂದು ಅನ್ನ ಮಾಡಲು ಬಳಸುವ ಕುಕ್ಕರೇ ನನ್ನ ಮಡದಿ ಎಂದು ನಿರ್ಧರಿಸಿ ಕುಕ್ಕರನ್ನು ಮದುವೆಯಾಗಿದ್ದಾನೆ. ಅಷ್ಟೇ ಅಲ್ಲದೇ ನಾಲ್ಕು ದಿನಗಳ ನಂತರ ಡಿವೋರ್ಸ್ ಮಾಡಿಕೊಂಡಿದ್ದಾನೆ.

    ಇಂಡೋನೇಷ್ಯಾದ ಖೋಯಿರುಲ್ ಅನಾಮ್ ರೈಸ್ ಕುಕ್ಕರ್ ಜೊತೆಗೆ ಮದುವೆ ಮಾಡಿಕೊಂಡಿದ್ದು, ಮಾತ್ರವಲ್ಲದೇ ನಾಲ್ಕು ದಿನಗಳ ನಂತರ ಡಿವೋರ್ಸ್ ಮಾಡಿಕೊಂಡಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ನೀನಿಲ್ಲದೇ ನನ್ನ ನನ್ನ ಅನ್ನ ಪೂರ್ಣ ಆಗೋದಿಲ್ಲ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾನೆ. ಇದನ್ನೂ ಓದಿ:  ಕಬ್ಬಿನ ಬಿಲ್ ಪಾವತಿ ಸಕ್ಕರೆ ಕಾರ್ಖಾನೆಗಳಿಗೆ ಮೂರು ದಿನಗಳ ಗಡುವು: ಮುನೇನಕೊಪ್ಪ

    ತಾನು ವರನ ಉಡುಪಿನಲ್ಲಿ ಮಿಂಚಿದ್ದಲ್ಲದೇ ರೈಸ್ ಕುಕ್ಕರ್‍ಗೂ ವೇಲ್ ಹಾಕಿ ವಧುವಂತೆ ಭಾವಿಸಿ ಕುಕ್ಕರ್‍ಗೆ ಮುತ್ತಿಟ್ಟಿದ್ದಾನೆ. ಸದ್ಯ ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

  • ವಿಚ್ಛೇದಿತ ಪತ್ನಿಗೆ ಜೀವನಾಂಶ 7 ಲಕ್ಷ ರೂ.ಯನ್ನು ನಾಣ್ಯಗಳಲ್ಲಿ ನೀಡಿದ ಪತಿ

    ವಿಚ್ಛೇದಿತ ಪತ್ನಿಗೆ ಜೀವನಾಂಶ 7 ಲಕ್ಷ ರೂ.ಯನ್ನು ನಾಣ್ಯಗಳಲ್ಲಿ ನೀಡಿದ ಪತಿ

    -12 ಮೂಟೆ, 860 ಕೆ.ಜಿ. ತೂಕ

    ಜಕಾರ್ತ: ವ್ಯಕ್ತಿಯೊಬ್ಬ ತನ್ನ ವಿಚ್ಛೇದಿತ ಪತ್ನಿಗೆ ನೀಡಬೇಕಾಗಿದ್ದ ಜೀವನಾಂಶದ ಹಣವನ್ನು ನಾಣ್ಯಗಳ ರೂಪದಲ್ಲಿ ನೀಡಿದ್ದಾನೆ. ಇಂಡೋನೇಷ್ಯಾದಲ್ಲಿ ಈ ಘಟನೆ ನಡೆದಿದ್ದು, ಬರೋಬ್ಬರಿ 860 ಕೆ.ಜಿ. ತೂಕವುಳ್ಳ 12 ಮೂಟೆಗಳನ್ನು ನೀಡಿದ್ದಾನೆ.

    ಗುರುವಾರ ಸ್ಥಳೀಯ ಸಿವಿಲ್ ನ್ಯಾಯಾಲಯಕ್ಕೆ ಹಾಜರಾದ ಡ್ವಿ ಸ್ಸುಲಾರ್ಟೊ ಎಂಬವರು 12 ಮೂಟೆಗಳಲ್ಲಿ ಒಟ್ಟು 10,000 ಡಾಲರ್ (6.97 ಲಕ್ಷ ರೂ.) ತಂದು ವಿಚ್ಛೇದಿತ ಪತ್ನಿಗೆ ಪರಿಹಾರವಾಗಿ ನೀಡಿದ್ದಾರೆ. ಆ ಮೂಟೆಗಳ ತೂಕ ಬರೋಬ್ಬರಿ 890 ಕಿಲೋ ಗ್ರಾಂ ಇತ್ತು ಎಂದು ವರದಿಯಾಗಿದೆ.

    ಒಂಬತ್ತು ವರ್ಷಗಳಿಂದ ಡ್ವಿ ಸ್ಸುಲಾರ್ಟೊ ತನ್ನ ವಿಚ್ಛೇದಿತ ಪತ್ನಿಗೆ ಜೀವನಾಂಶವನ್ನು ನೀಡಿರಲಿಲ್ಲ. ಹೀಗಾಗಿ ಮಹಿಳೆ ಕೋರ್ಟ್ ಮೆಟ್ಟಿಲೇರಿದ್ದರು. ಗುರುವಾರ ನ್ಯಾಯಾಲಯಕ್ಕೆ ಹಾಜರಾದ ಡ್ವಿ ಸ್ಸುಲಾರ್ಟೊ ವಿಚ್ಛೇದಿತ ಪತ್ನಿಗೆ ನಾಣ್ಯರೂಪದಲ್ಲಿ ಜೀವನಾಂಶ ನೀಡಿದ್ದಾನೆ. ಇದನ್ನು ಓದಿ: ವಿಚ್ಛೇದಿತ ಪತ್ನಿಗೆ ಜೀವನಾಂಶದ ಹಣವನ್ನ ಚಿಲ್ಲರೆ ರೂಪದಲ್ಲಿ ನೀಡಿದ ಪತಿ!

    ‘ನನ್ನ ಕಕ್ಷಿದಾರರನ್ನು ಅವಮಾನಿಸಲು ಡ್ವಿ ಸ್ಸುಲಾರ್ಟೊ ಚಿಲ್ಲರೆ ಹಣವನ್ನು ನೀಡುತ್ತಿದ್ದಾರೆ’ ಎಂದು ವಿಚ್ಛೇದಿತ ಮಹಿಳೆಯ ಪರ ವಕೀಲ ವಾದ ಮಂಡಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಡ್ವಿ ಸ್ಸುಲಾರ್ಟೊ ಪರ ವಕೀಲ, ನನ್ನ ಕಕ್ಷಿದಾರ ಕೆಳ ದರ್ಜೆಯ ನಾಗರಿಕ ಸೇವೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ತನ್ನ ಸಂಬಂಧಿಕರು ಹಾಗೂ ಸ್ನೇಹಿತರಿಂದ ಹಣ ಸಂಗ್ರಹಿಸಿದ್ದು, ಅವರೆಲ್ಲರೂ ಚಿಲ್ಲರೆ ಹಣ ನೀಡಿದ್ದರಿಂದ ಅದನ್ನು ಕೋರ್ಟ್ ಗೆ ಒಪ್ಪಿಸಿದ್ದಾರೆ ಎಂದರು.

    ನಾನು ಬಡತನದಲ್ಲಿ ಇದ್ದೇನೆ ಎನ್ನುವಂತೆ ಅವಮಾನ ಮಾಡಲು ಡ್ವಿ ಸ್ಸುಲಾರ್ಟೊ ಚಿಲ್ಲರೆ ಹಣವನ್ನು ನೀಡುತ್ತಿದ್ದಾರೆ ಎಂದು ವಿಚ್ಛೇದಿತ ಮಹಿಳೆ ಆರೋಪಿಸಿದ್ದಾರೆ. ಕೊನೆಗೆ ಚಿಲ್ಲರೆ ಹಣವನ್ನು ಏಣಿಕೆ ಮಾಡುವಂತೆ ನ್ಯಾಯಾಲಯವು ತನ್ನ ಸಿಬ್ಬಂದಿಗೆ ಸೂಚನೆ ನೀಡಿತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪ್ರಿಯತಮನ ಆತ್ಮದ ಹೆಸರಲ್ಲಿ 15 ವರ್ಷ ಕಾಲ ಗುಹೆಯಲ್ಲಿ ಕೂಡಿಹಾಕಿ ವೃದ್ಧನ ಸೆಕ್ಸ್!

    ಪ್ರಿಯತಮನ ಆತ್ಮದ ಹೆಸರಲ್ಲಿ 15 ವರ್ಷ ಕಾಲ ಗುಹೆಯಲ್ಲಿ ಕೂಡಿಹಾಕಿ ವೃದ್ಧನ ಸೆಕ್ಸ್!

    ಜಕಾರ್ತ: ಯುವತಿಯೊಬ್ಬಳನ್ನು ಗುಹೆಯಲ್ಲಿ ಕೂಡಿ ಹಾಕಿ ತನ್ನ ಕಾಮತೃಷೆಗೆ 15 ವರ್ಷಗಳ ಕಾಲ ಬಳಸಿಕೊಂಡ 83 ವರ್ಷದ ಮಂತ್ರವಾದಿ ಹಾಗೂ ನಕಲಿ ವೈದ್ಯನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಇಂಡೋನೇಷ್ಯಾದಲ್ಲಿ ಈ ಘಟನೆ ನಡೆದಿದ್ದು ಮಂತ್ರವಾದಿಯ ಮನೆಯ ಸಮೀಪದಲ್ಲೇ ಇದ್ದ ಗುಹೆಯಲ್ಲಿ ಯುವತಿ ಕಾಣಿಸಿಕೊಂಡ ಬಳಿಕ ಪ್ರಕರಣ ಬಯಲಿಗೆ ಬಂದಿದೆ.

    ಆಗಿದ್ದೇನು?
    2003ರಲ್ಲಿ ಆಕೆ 13ರ ಬಾಲಕಿ. ಆಕೆಯ ಪೋಷಕರು ಚಿಕಿತ್ಸೆಗೆಂದು ಆಕೆಯನ್ನು 2003ರಲ್ಲಿ ನಕಲಿ ವೈದ್ಯನ ಬಳಿಗೆ ಕರೆ ತಂದಿದ್ದರು. ಚಿಕಿತ್ಸೆಗೆಂದು ಆಕೆಯನ್ನು ಅಲ್ಲೇ ಬಿಟ್ಟು ಪೋಷಕರು ತೆರಳಿದ್ದರು. ಇದಾದ ಕೆಲವು ದಿನಗಳ ನಂತರ ಮಗಳನ್ನು ನೋಡಲು ಪೋಷಕರು ವಾಪಸ್ ಬಂದಾಗ ಮಂತ್ರವಾದಿ ಕಟ್ಟುಕತೆ ಹೆಣೆದ. ಆಕೆ ಕೆಲಸ ಹುಡುಕಿಕೊಂಡು ಇಲ್ಲಿಂದ ಜಕಾರ್ತಾಗೆ ಹೊರಟಿದ್ದಾಳೆ ಎಂದು ಹೇಳಿ ಅವರನ್ನು ನಂಬಿಸಿದ್ದ. ಇದಾದ ಬಳಿಕ 15 ವರ್ಷಗಳ ಕಾಲ ಆಕೆಯ ಪೋಷಕರು ಎಲ್ಲಾ ಪ್ರಯತ್ನ ಮಾಡಿದರೂ ಯುವತಿಯ ಸುಳಿವು ಸಿಕ್ಕಿರಲೇ ಇಲ್ಲ. ಆದರೆ ಕಳೆದ ವಾರ ಆಕೆ ಗುಹೆಯೊಂದರಲ್ಲಿ ಕಾಣಿಸಿಕೊಂಡಿದ್ದಾಳೆ ಎಂಬ ರಹಸ್ಯ ವಿವರ ಬಹಿರಂಗವಾದ ಬೆನ್ನಲ್ಲೇ ಪೋಷಕರು ಹಾಗೂ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಖಚಿತ ಮಾಹಿತಿ ಆಧರಿಸಿ ಹೋದ ಪೊಲೀಸರಿಗೆ ಆಕೆ ಗುಹೆಯೊಂದರಲ್ಲಿ ಪತ್ತೆಯಾಗಿದ್ದಾಳೆ. ಸದ್ಯ ಆಕೆ ಪೊಲೀಸರ ವಶದಲ್ಲಿದ್ದು ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ.

    ಏನ್ಮಾಡ್ತಿದ್ದ ಮಂತ್ರವಾದಿ?
    ಪೊಲೀಸರು ಹೇಳುವ ಪ್ರಕಾರ, ಜಾಗೋ ಎಂಬ ಹೆಸರಿನ ಈತ ಅಮ್ರೀನ್ ಎಂಬಾತನ ಫೋಟೋ ತೋರಿಸಿ ಈತ ನಿನ್ನ ಬಾಯ್ ಫ್ರೆಂಡ್. ಆತನ ಆತ್ಮ ನನ್ನ ದೇಹ ಪ್ರವೇಶಿಸಿದೆ. ಅವನ ಶಕ್ತಿಯನ್ನು ನಾನು ಪಡೆದಿದ್ದೇನೆ ಎಂದು ಆಕೆಯನ್ನು ನಂಬಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಆರಂಭಿಸಿದ್ದ. ಇದರಿಂದಾಗಿ ಆಕೆ ಕಳೆದ 10 ವರ್ಷಗಳಲ್ಲಿ ಹಲವು ಬಾರಿ ಗರ್ಭಿಣಿಯಾಗಿದ್ದಾಳೆ. ಆಗ ಜಾಗೋ ಆಕೆಗೆ ಗರ್ಭಪಾತ ಮಾಡಿಸಿದ್ದ ಎಂದು ತನಿಖೆ ವೇಳೆ ಬಯಲಾಗಿದೆ. ಜಾಗೋ ನಡೆಸಿರುವ ಕೃತ್ಯಗಳು ಸಾಬೀತಾದರೆ 15 ವರ್ಷ ಕಾಲ ಜೈಲು ವಾಸ ಖಚಿತ ಎಂದು ಇಂಡೋನೇಷ್ಯಾದ ಕಾನೂನು ತಜ್ಞರು ಹೇಳುತ್ತಿದ್ದಾರೆ.

    ಹಗಲೆಲ್ಲಾ ಯುವತಿಯನ್ನು ಗುಹೆಯಲ್ಲಿರುವಂತೆ ಮಾಡಿದ್ದ ಜಾಗೋ ರಾತ್ರಿಯಾಗುತ್ತಿದ್ದಂತೆಯೇ ಅದರ ಪಕ್ಕದಲ್ಲೇ ಇದ್ದ ಗುಡಿಸಲಿಗೆ ಕರೆ ತಂದು ಆಕೆಯ ಜೊತೆ ಸೆಕ್ಸ್ ಮಾಡುತ್ತಿದ್ದ ಎಂಬ ವಿಚಾರವನ್ನೂ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಬಂಧಿತನ ವಿಚಾರಣೆ ವೇಳೆ 2008ರಿಂದ ತಾನು ಯುವತಿ ಜೊತೆ ಸೆಕ್ಸ್ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.

    ಯುವತಿ ಮಂತ್ರವಾದಿಯ ಸಂಬಂಧಿ..!
    ಇನ್ನೂ ಅಚ್ಚರಿಯ ವಿಚಾರವೆಂದರೆ ಮಂತ್ರವಾದಿ ಜಾಗೋನ ಪುತ್ರ ಈ ಯುವತಿಯ ಸೋದರಿಯನ್ನು ಮದುವೆಯಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಆಕೆಗೂ ಈ ಪ್ರಕರಣದಲ್ಲಿ ಏನಾದರೂ ಸಂಬಂಧವಿದೆಯೇ ಎಂದೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆ ನಡೆದ ಗ್ರಾಮದಲ್ಲಿ ಈ ವ್ಯಕ್ತಿ ಭಾರೀ ಗೌರವಯುತ ವ್ಯಕ್ತಿಯಾಗಿದ್ದ. ಆದರೆ ಈ ಪ್ರಕರಣ ಬೆಳಕಿಗೆ ಬಂದ ನಂತರ ಈ ರೀತಿಯ ಇನ್ನೂ ಯಾವುದಾದರೂ ಪ್ರಕರಣ ನಡೆದಿರಬಹುದೇ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ಯುವತಿಯ ಸೋದರಿಯೇ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದ್ದು, ಈ ವಿವರ ಇಟ್ಟುಕೊಂಡೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ ಯುವತಿಗಾಗಿ ಹುಡುಕಾಟ ಆರಂಭಿಸಿದ್ದರು.

    15 ವರ್ಷಗಳಿಂದ ಯುವತಿ ಗುಹೆಯಲ್ಲೇ ವಾಸ ಮಾಡಿದ್ದರಿಂದ ಈಗ ಜನರ ಜೊತೆ ಬೆರೆಯಲು ಹಿಂದೆ ಮುಂದೆ ನೋಡುತ್ತಿದ್ದಾಳೆ. ಆಲ್ಲದೆ ಜನರನ್ನು ಕಂಡ ತಕ್ಷಣ ನಾನು ಗುಹೆಗೆ ವಾಪಸ್ ಹೋಗುತ್ತೇನೆ. ಜನರನ್ನು ನೋಡಿದರೆ ನನಗೆ ಭಯವಾಗುತ್ತದೆ ಎಂದು ಹೇಳುತ್ತಿದ್ದಾಳೆ. ಗುಹೆಯಲ್ಲಿ ಯುವತಿ ಪತ್ತೆಯಾದ ಬಳಿಕ ಜನರು ತಂಡೋಪತಂಡವಾಗಿ ಗುಹೆಯ ಬಳಿ ಆಗಮಿಸುತ್ತಿದ್ದು, ಇದೊಂದು ಪಿಕ್ನಿಕ್ ಸ್ಪಾಟ್ ಆಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews