Tag: Indonesia Government

  • ವಿವಾಹಪೂರ್ವ ಸೆಕ್ಸ್‌ ಮಾಡಿದ್ರೆ ಅಪರಾಧ – ಇಂಡೋನೇಷ್ಯಾ ಕಾನೂನಿಗೆ ಭಾರೀ ವಿರೋಧ

    ವಿವಾಹಪೂರ್ವ ಸೆಕ್ಸ್‌ ಮಾಡಿದ್ರೆ ಅಪರಾಧ – ಇಂಡೋನೇಷ್ಯಾ ಕಾನೂನಿಗೆ ಭಾರೀ ವಿರೋಧ

    ಜಕಾರ್ತ: ವಿಹಾಹ ಪೂರ್ವ ಸೆಕ್ಸ್ (Premarital Sex) ತಡೆಯಲು ಇಂಡೋನೇಷ್ಯಾ ಸರ್ಕಾರ (Indonesia Government) ಹೊಸ ಕ್ರಿಮಿನಲ್ ಕಾನೂನು (Criminal Code) ಅಂಗೀಕರಿಸಿದ್ದು, ದೇಶದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ.

    ಈ ಕಾನೂನು ವಿವಾಹಪೂರ್ವ ಲೈಂಗಿಕತೆ ಹಾಗೂ ಸಹಬಾಳ್ವೆಯನ್ನು ಕಾನೂನುಬಾಹಿರಗೊಳಿಸುತ್ತದೆ. ಜೊತೆಗೆ ಆಗ್ನೇಯ ಏಷ್ಯಾದಂತಹ ರಾಷ್ಟ್ರಗಳಲ್ಲಿ ಸ್ವಾತಂತ್ರ‍್ಯವನ್ನು ದುರ್ಬಲಗೊಳಿಸಬಹುದು. ಹೀಗಾಗಿ ಕಾನೂನನ್ನು ರದ್ದುಗೊಳಿಸುವಂತೆ ಪ್ರತಿಭಟನೆಗಳು ಎದ್ದಿವೆ. ಇದನ್ನೂ ಓದಿ: ವಿವಾಹಪೂರ್ವ ಸೆಕ್ಸ್ ಮಾಡಿದ್ರೆ 1 ವರ್ಷ ಜೈಲು – ಹೊಸ ಕಾನೂನು ಜಾರಿಗೆ ಇಂಡೋನೇಷ್ಯಾ ಸಜ್ಜು

    ಸಂಸತ್ತಿನಲ್ಲಿ ಸರ್ವಾನುಮತದಿಂದ ಅಂಗೀಕರಿಸಲ್ಪಟ್ಟ ಹೊಸ ಕ್ರಿಮಿನಲ್ ಕಾನೂನು (Criminal Code), 1946 ರಲ್ಲಿ ಇಂಡೋನೇಷ್ಯಾ (Indonesia) ಸ್ವಾತಂತ್ರ‍್ಯದ ನಂತರ ಜಾರಿಯಲ್ಲಿದ್ದ ಚೌಕಟ್ಟನ್ನು ಮತ್ತೆ ಬದಲಾಯಿಸುತ್ತದೆ. ಈ ಕಾನೂನು ಇಂಡೋನೇಷ್ಯಾ ಜನರಿಗೆ ಮಾತ್ರವಲ್ಲದೇ ವಿದೇಶಿಯರಿಗೂ ಅನ್ವಯಿಸುತ್ತದೆ. ಅಲ್ಲದೇ ದೇಶದ ಅಧ್ಯಕ್ಷರು, ರಾಜ್ಯ ಸಂಸ್ಥೆಗಳು ಹಾಗೂ ದೇಶದ ರಾಷ್ಟ್ರೀಯ ಸಿದ್ಧಾಂತವನ್ನು ಅವಮಾನಿಸುತ್ತದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ. ಇದನ್ನೂ ಓದಿ: ಸ್ವಂತ ಮಗಳು ಸೇರಿ 20ಕ್ಕೂ ಹೆಚ್ಚು ಯುವತಿಯರ ಮದುವೆ- ಸ್ವಘೋಷಿತ ಪ್ರವಾದಿ ಅರೆಸ್ಟ್

    ಚರ್ಚೆಗೆ ಒಳಗಾದ ಪ್ರಮುಖ ವಿಷಯಗಳು ಹಾಗೂ ಭಿನ್ನ ಅಭಿಪ್ರಾಯಗಳನ್ನು ನಾವು ಸರಿಹೊಂದಿಸಲು ಪ್ರಯತ್ನಿಸುತ್ತೇವೆ. ದೇಶದ ದಂಡಸಂಹಿತೆಯ ತಿದ್ದುಪಡಿಯ ಬಗ್ಗೆ ಐತಿಹಾಸಿಕ ನಿರ್ಣಯ ತೆಗೆದುಕೊಳ್ಳಲು ಹಾಗೂ ವಂಶ ಪಾರಂಪರ್ಯ ಕಾನೂನನ್ನು ಕೈಬಿಡಲು ಇದು ಸುಸಂದರ್ಭವಾಗಿದೆ ಎಂದು ಕಾನೂನು ಮತ್ತು ಮಾನವ ಹಕ್ಕುಗಳ ಸಚಿವ ಯಾಸೊನ್ನಾ ಲಾವೊಲಿ ಮತದಾನದ ಮೊದಲು ಸಂಸತ್ತಿಗೆ ತಿಳಿಸಿದರು. ಇದನ್ನೂ ಓದಿ: ಕ್ಯಾಂಪಸ್‌ನಲ್ಲಿ ಲವ್‌ಜಿಹಾದ್‌ಗೆ ಉತ್ತೇಜನ, ಸೇನೆಗೆ ಅಪಮಾನ – 6 ಶಿಕ್ಷಕರಿಗೆ ಪಾಠ ಮಾಡದಂತೆ ಸೂಚನೆ

    ವಿವಾಹಪೂರ್ವ ಲೈಂಗಿಕತೆ ತಡೆ ಕಾನೂನು ರೂಪಿಸಲು 2019ರಲ್ಲಿ ಕರಡನ್ನು ಸಿದ್ದಪಡಿಸಲಾಗಿತ್ತು. ಆದರೆ ವ್ಯಾಪಕ ಪ್ರತಿಭಟನೆಗಳಿಂದಾಗಿ ಕಾನೂನು ರೂಪಿಸುವುದನ್ನು ಮುಂದೂಡಲಾಯಿತು. ಈ ಕಾನೂನು ಭಯದ ನಡುವೆ ವೈಯಕ್ತಿಕ ಸ್ವಾತಂತ್ರ‍್ಯವನ್ನು ಮೊಟಕುಗೊಳಿಸುತ್ತದೆ ಎಂದು ಪ್ರತಿಭಟನಾಕಾರರು ದೂರಿದ್ದರು. ಪ್ರತಿಭಟನೆಯಲ್ಲಿ ಸುಮಾರು 300 ಮಂದಿ ಗಾಯಗೊಂಡಿದ್ದರು.

    ಕಳೆದ ಒಂದು ವಾರದ ಹಿಂದೆಯಷ್ಟೇ ಇಂಡೋನೇಷ್ಯಾ ಸರ್ಕಾರ ವಿವಾಹಪೂರ್ವ ಸೆಕ್ಸ್ ತಡೆಯಲು ಕಾನೂನು ರೂಪಿಸುತ್ತಿರುವುದಾಗಿ ಹೇಳಿ ಕರಡನ್ನು ಬಿಡುಗಡೆ ಮಾಡಿತ್ತು. ಈ ಕಾನೂನಿನ ಅನ್ವಯ ವಿವಾಹಕ್ಕೆ ಮುಂಚೆ ಸೆಕ್ಸ್ ಮಾಡಿದ್ರೆ, ಒಂದು ವರ್ಷ ಜೈಲು ಹಾಗೂ ಭಾರೀ ಮೊತ್ತದ ದಂಡ ವಿಧಿಸಬಹುದು ಎಂದು ಸರ್ಕಾರ ಹೇಳಿತ್ತು.

    Live Tv
    [brid partner=56869869 player=32851 video=960834 autoplay=true]

  • ವಿವಾಹಪೂರ್ವ ಸೆಕ್ಸ್ ಮಾಡಿದ್ರೆ 1 ವರ್ಷ ಜೈಲು – ಹೊಸ ಕಾನೂನು ಜಾರಿಗೆ ಇಂಡೋನೇಷ್ಯಾ ಸಜ್ಜು

    ವಿವಾಹಪೂರ್ವ ಸೆಕ್ಸ್ ಮಾಡಿದ್ರೆ 1 ವರ್ಷ ಜೈಲು – ಹೊಸ ಕಾನೂನು ಜಾರಿಗೆ ಇಂಡೋನೇಷ್ಯಾ ಸಜ್ಜು

    ಜಕಾರ್ತ: ವಿವಾಹಪೂರ್ವ ಸೆಕ್ಸ್ ತಡೆಯಲು ಇಂಡೋನೇಷ್ಯಾ ಸರ್ಕಾರ (Indonesia Government) ಹೊಸ ಕ್ರಿಮಿನಲ್ ಕಾನೂನು (Criminal Law) ಜಾರಿಗೆ ತರಲು ಸಜ್ಜಾಗಿದೆ. ಅದಕ್ಕಾಗಿ ಕರಡನ್ನೂ ಸಿದ್ಧಪಡಿಸಿದೆ.

    ಹೊಸ ಕ್ರಿಮಿನಲ್ ಕಾನೂನು (Criminal Law) ಪ್ರಕಾರ ವಿವಾಹ (Marriage) ಪೂರ್ವ ಸೆಕ್ಸ್ ಮಾಡಿದ್ರೆ ಅಂತಹವರಿಗೆ 1 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಬಹುದು ಎಂದು ಸರ್ಕಾರ ಹೇಳಿದೆ. ಇದನ್ನೂ ಓದಿ: ಕ್ಯಾಂಪಸ್‌ನಲ್ಲಿ ಲವ್‌ಜಿಹಾದ್‌ಗೆ ಉತ್ತೇಜನ, ಸೇನೆಗೆ ಅಪಮಾನ – 6 ಶಿಕ್ಷಕರಿಗೆ ಪಾಠ ಮಾಡದಂತೆ ಸೂಚನೆ

    ಇಂಡೋನೇಷ್ಯಾ ತನ್ನ ದೇಶದ ಮೌಲ್ಯಗಳಿಗೆ ತಕ್ಕಂತೆ ಕ್ರಿಮಿನಲ್ ಕಾನೂನು ರೂಪಿಸಿರುವುದು ನಮ್ಮ ಹೆಮ್ಮೆ. ಮುಂದಿನ ಸಂಸತ್ತಿನಲ್ಲಿ ಹೊಸ ಶಾಸನವಾಗಿ ಈ ಕ್ರಿಮಿನಲ್ ಕೋಡ್ ಅಂಗೀಕಾರವಾಗುವ ನಿರೀಕ್ಷೆಯಿದೆ ಎಂದು ಉಪ ಕಾನೂನು ಮಂತ್ರಿ ಎಡ್ವರ್ಡ್ ಒಮರ್ ಷರೀಫ್ ಹೇಳಿದ್ದಾರೆ. ಇದನ್ನೂ ಓದಿ: ಜನಾರ್ದನ ರೆಡ್ಡಿ ಮೊಮ್ಮಗಳ ನಾಮಕರಣ ಸಮಾರಂಭದಲ್ಲಿ ಬಿಎಸ್‌ವೈ ಭಾಗಿ

    ಈ ಕಾನೂನು ವಿಶ್ವದ ಮುಸ್ಲಿಂ (Muslims Nation) ಬಹುಸಂಖ್ಯಾತ ದೇಶದ ಜನರ ಮೇಲೆ ಪರಿಣಾಮ ಬೀರಬಹುದು. ದಂಪತಿ ವಿವಾಹಪೂರ್ವವಾಗಿ ಅಕ್ರಮ ಸಂಬಂಧ ಹೊಂದಿದ್ದರೆ ಜೈಲು ಶಿಕ್ಷೆ ಎದುರಿಸಬೇಕಾಗುತ್ತದೆ. ಆದರೆ ಇಂಡೋನೇಷ್ಯಾದಲ್ಲಿ ಸಲಿಂಗ ಕಾಮ ಅನುಮತಿಸಿದ ಕಾರಣ, ಆಗ್ನೇಯ ಏಷ್ಯಾದ ರಾಷ್ಟ್ರದ ಸಣ್ಣ LGBT (ಲೆಸ್ಬಿಯನ್, ಗೇ ಸೇಕ್ಸ್ ಮಾಡುವರು) ಗುಂಪುಗಳನ್ನು ಶಿಕ್ಷಿಸಬಹುದೆಂಬ ಆತಂಕ ವ್ಯಕ್ತಪಡಿಸಿದೆ.

    ಪತಿ ಅಥವಾ ಪತ್ನಿ ಸಂಬಂಧ ಇಲ್ಲದವರೊಂದಿಗೆ ಸಂಭೋಗಿಸಿದರೆ, ಅದನ್ನು ವ್ಯಬಿಚಾರವೆಂದು ಪರಿಗಣಿಸಿ ಆರ್ಟಿಕಲ್ 413ರಲ್ಲಿ ಉಲ್ಲೇಖಿಸಿ ಗರಿಷ್ಠ 1 ವರ್ಷ ಜೈಲು ಶಿಕ್ಷೆ ಅಥವಾ ಗರಿಷ್ಠ ದಂಡವನ್ನು ವಿಧಿಸಲಾಗುತ್ತದೆ ಎಂದು ಇಂಡೋನೇಷ್ಯಾ ಸರ್ಕಾರ ತಿಳಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾಗೆ ಮುಂಬೈ ಪೊಲೀಸರಿಂದ ಸಮನ್ಸ್

    ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾಗೆ ಮುಂಬೈ ಪೊಲೀಸರಿಂದ ಸಮನ್ಸ್

    ಮುಂಬೈ: ಪ್ರವಾದಿ ಮೊಹಮ್ಮದ್ ಪೈಗಂಬರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರಿಗೆ ಮುಂಬೈ ಪೊಲೀಸರು ಸಮನ್ಸ್ ಜಾರಿಗೊಳಿಸಿದ್ದಾರೆ.

    ನೂಪುರ್ ಶರ್ಮಾ ಜ್ಞಾನವಾಪಿ ಮಸೀದಿ ಕುರಿತ ಚರ್ಚೆಯ ವೇಳೆ ಪ್ರವಾದಿ ಮೊಹಮ್ಮದ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ಗದ್ದಲ ಎಬ್ಬಿದ್ದಾರೆ. ಈ ಸಂಬಂಧ ಇದೇ ಜೂನ್ 22ರಂದು ವಿಚಾರಣೆಗೆ ಹಾಜರಾಗುವಂತೆ ಮುಂಬೈ ಪೊಲೀಸರು ನೂಪುರ್ ಶರ್ಮಾಗೆ ಇ-ಮೇಲ್ ಮತ್ತು ಸ್ಪೀಡ್ ಪೋಸ್ಟ್ ಮೂಲಕ ಸಮನ್ಸ್ ಕಳುಹಿಸಿದ್ದಾರೆ. ಇದನ್ನೂ ಓದಿ: ಅತ್ಯಾಚಾರ, ಕೊಲೆ ಬೆದರಿಕೆ – ವಿವಾದಿತ ಬಿಜೆಪಿ ನಾಯಕಿ ನೂಪುರ್ ಶರ್ಮಾಗೆ ದೆಹಲಿ ಪೊಲೀಸರಿಂದ ಭದ್ರತೆ 

    ಈಗಾಗಲೇ ಅವಹೇಳನಕಾರಿ ಹೇಳಿಕೆ ಕುರಿತಂತೆ ನೂಪುರ್ ವಿರುದ್ಧ ಥಾಣೆ ಜಿಲ್ಲೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಅಂಬರ್‌ನಾಥ್ ಪೋಲೀಸರೂ ಸಹ ದೂರನ್ನು ಸ್ವೀಕರಿಸಿದ್ದಾರೆ. ಇದೂ ಸಹ ಎಫ್‌ಐಆರ್ ಆದರೆ ಥಾಣೆ ಜಿಲ್ಲೆಯಲ್ಲೇ ಮೂರು ಪ್ರಕರಣ ದಾಖಲಾಗಲಿದೆ. ಈ ಹಿನ್ನೆಲೆಯಲ್ಲಿ ಜೂನ್ 22ರಂದು ವಿಚಾರಣೆಗೆ ಹಾಜರಾಗಿ ಹೇಳಿಕೆ ದಾಖಲಿಸಲು ಸಮನ್ಸ್ ಜಾರಿ ಮಾಡಲಾಗಿದೆ ಎಂದು ಥಾಣೆ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರವಾದಿ ಮೊಹಮ್ಮದ್‍ ಕುರಿತು ಆಕ್ಷೇಪಾರ್ಹ ಹೇಳಿಕೆ – ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಅಮಾನತು

    ಭಾರತದ ರಾಯಭಾರಿಗೂ ಸಮನ್ಸ್: ಪ್ರವಾದಿ ಮೊಹಮ್ಮದ್ ಕುರಿತ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಜಕಾರ್ತದಲ್ಲಿರುವ ಭಾರತದ ರಾಯಭಾರಿಗೆ ಇಂಡೋನೇಷ್ಯಾ ಸರ್ಕಾರ ಸಮನ್ಸ್ ನೀಡಿದೆ. ಸಮನ್ಸ್ ನೀಡಿರುವ ವಿಚಾರವನ್ನು ಇಂಡೋನೇಷ್ಯಾದ ವಿದೇಶಾಂಗ ಸಚಿವಾಲಯದ ವಕ್ತಾರ ತೆವುಕು ಫಜಾಸ್ಯಾಹ್ ಖಚಿತಪಡಿಸಿದ್ದಾರೆ. ಜಕಾರ್ತದಲ್ಲಿರುವ ಭಾರತದ ರಾಯಭಾರಿ ಮನೋಜ್ ಕುಮಾರ್ ಭಾರ್ತಿ ಅವರನ್ನು ನಿನ್ನೆ ಕರೆದು ಪ್ರತಿಭಟನೆ ದಾಖಲಿಸಿದ್ದು, ಸಮನ್ಸ್ ನೀಡಲಾಗಿದೆ ಎಂದು ತಿಳಿಸಿದ್ದಾರೆ.

    ಈ ವಿಚಾರಕ್ಕೆ ಸಂಬಂಧಿಸಿದಂತೆ ಅರಬ್ ರಾಷ್ಟ್ರಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಹಲವು ಮಧ್ಯಪ್ರಾಚ್ಯ ರಾಷ್ಟ್ರಗಳು ಭಾರತದ ರಾಯಭಾರಿಗಳಿಗೆ ಸಮನ್ಸ್ ನೀಡಿದ್ದವು. ಕುವೈತ್ ಸೂಪರ್ ಮಾರ್ಕೆಟ್‌ನಿಂದ ಭಾರತದ ಉತ್ಪನ್ನಗಳನ್ನು ತೆಗೆದುಹಾಕಲಾಗಿತ್ತು. ಇದರ ಬೆನ್ನಲ್ಲೇ ಇದೀಗ ಇಂಡೋನೇಷ್ಯಾ ಕೂಡ ಕ್ರಮ ಕೈಗೊಂಡಿದೆ.

    ಈ ಸಂಬಂಧ ಟ್ವೀಟ್ ಮಾಡಿರುವ ಇಂಡೋನೇಷ್ಯಾ ವಿದೇಶಾಂಗ ಸಚಿವಾಲಯವು, ಪ್ರವಾದಿ ಮೊಹಮ್ಮದ್ ಅವರ ವಿರುದ್ಧ ಭಾರತದ ಇಬ್ಬರು ರಾಜಕಾರಣಿಗಳು ನೀಡಿರುವ ಆಕ್ಷೇಪಾರ್ಹ, ಅವಹೇಳನಕಾರಿ ಹೇಳಿಕೆಗಳನ್ನು ಬಲವಾಗಿ ಖಂಡಿಸಿದ್ದೇವೆ ಎಂದು ಹೇಳಿದೆ.