Tag: Indo- Israel Horticultural Crops Excellence Center

  • ರಾಜ್ಯದಲ್ಲಿ ಇಂಡೋ- ಇಸ್ರೇಲ್ ತೋಟಗಾರಿಕಾ ಬೆಳೆ ಉತ್ಕೃಷ್ಟತಾ ಕೇಂದ್ರ ಉದ್ಘಾಟನೆ

    ರಾಜ್ಯದಲ್ಲಿ ಇಂಡೋ- ಇಸ್ರೇಲ್ ತೋಟಗಾರಿಕಾ ಬೆಳೆ ಉತ್ಕೃಷ್ಟತಾ ಕೇಂದ್ರ ಉದ್ಘಾಟನೆ

    ಬೆಂಗಳೂರು: ಇಂಡೋ- ಇಸ್ರೇಲ್ ಕೃಷಿ ಯೋಜನೆಯಡಿ ಕೋಲಾರ, ಬಾಗಲಕೋಟೆ ಮತ್ತು ಧಾರವಾಡ ಜಿಲ್ಲೆಗಳಲ್ಲಿ ತೋಟಗಾರಿಕಾ ಬೆಳೆಗಳ ಉತ್ಕೃಷ್ಟತಾ ಕೇಂದ್ರಗಳನ್ನು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಇಂದು ಉದ್ಘಾಟಿಸಿದರು. ವರ್ಚುಯಲ್ ವೇದಿಕೆ ಮೂಲಕ ನೂತನ ಕೇಂದ್ರಗಳನ್ನ ಮೂಲಕ ಕೇಂದ್ರ ಸಚಿವರು ಉದ್ಘಾಟಿಸಿದರು.

    ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ತೋಟಗಾರಿಕಾ ಸಚಿವ ಎನ್.ಶಂಕರ್, ತೋಟಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಉಪಸ್ಥಿತರಿದ್ದರು. ಇಸ್ರೇಲ್ ನ ಭಾರತ ರಾಯಭಾರಿ ರಾನ್ ಮಲ್ಕಾ ವರ್ಚುಯಲ್ ಆಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.