Tag: indiranagara

  • ಪ್ರೇಯಸಿಯನ್ನು ಹತ್ಯೆಗೈದು ಪರಾರಿಯಾಗಿದ್ದ ಹಂತಕ ಪೊಲೀಸ್ ವಶಕ್ಕೆ

    ಪ್ರೇಯಸಿಯನ್ನು ಹತ್ಯೆಗೈದು ಪರಾರಿಯಾಗಿದ್ದ ಹಂತಕ ಪೊಲೀಸ್ ವಶಕ್ಕೆ

    ಬೆಂಗಳೂರು: ಇಂದಿರಾನಗರದ (Indiranagara) ಹೋಟೆಲ್ ಒಂದರಲ್ಲಿ ಪ್ರೇಯಸಿಯನ್ನು ಕೊಲೆಗೈದು ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು (Police) ದೇವನಹಳ್ಳಿಯಲ್ಲಿ ವಶಕ್ಕೆ ಪಡೆದಿದ್ದಾರೆ.

    ವಶಕ್ಕೆ ಪಡೆಯಲಾದ ಆರೋಪಿಯನ್ನು ಆರವ್ ಹನೋಯ್ ಎಂದು ಗುರುತಿಸಲಾಗಿದೆ. ಆರೋಪಿ ತನ್ನ ಪ್ರೇಯಸಿ ಮಾಯ ಗೊಗಾಯ್ ಎಂಬಾಕೆಯನ್ನು ಹತ್ಯೆಗೈದಿದ್ದ. ಆತನ ಪತ್ತೆಗೆ ಎರಡು ತಂಡಗಳನ್ನು ರಚಿಸಲಾಗಿತ್ತು.

    ಪ್ರೇಯಸಿಯನ್ನು ಹತ್ಯೆಗೈಯ್ಯಲು ಆರೋಪಿ ಹಗ್ಗ ಹಾಗೂ ಚಾಕುವನ್ನು ಆರ್ಡರ್ ಮಾಡಿ ಹೊಟೆಲ್‌ಗೆ ತರಿಸಿಕೊಂಡಿದ್ದ. ಆತ ತಿಂಗಳ ಹಿಂದಷ್ಟೇ ಬೆಂಗಳೂರಿಗೆ ಬಂದು,  ಖಾಸಗಿ ಕಂಪನಿಯಲ್ಲಿ ಇಂಟರ್ನ್‌ಶೀಪ್ ಮಾಡುತ್ತಿದ್ದ. ಇಬ್ಬರೂ ಆಪ್ ಮೂಲಕ ಪರಿಚಯ ಆಗಿದ್ದರು ಎಂದು ತಿಳಿದು ಬಂದಿದೆ.

    ಕೊಲೆ ಬಳಿಕ  ಆರೋಪಿ ಶವದ ಬಳಿ ಎರಡು ದಿನಗಳ ಕಾಲ ಇದ್ದ, ಬಳಿಕ ಅಲ್ಲಿಂದ ಪರಾರಿಯಾಗಿದ್ದ. ಆರೋಪಿ ಹೋಟೆಲ್‌ನಲ್ಲೇ ಶವ ಬಿಟ್ಟು ಮೆಜೆಸ್ಟಿಕ್ ರೈಲ್ವೆ ನಿಲ್ದಾಣದವರೆಗೂ ಹೋಗಿದ್ದ. ಆ ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದ. ಅಲ್ಲಿಂದ ಮಧ್ಯಪ್ರದೇಶ, ಉತ್ತರ ಪ್ರದೇಶ ಹಾಗೂ ವಾರಣಾಸಿಗೆ ಹೋಗಿದ್ದ. ಅಲ್ಲಿಂದ ಕೊನೆಗೆ ದೇವನಹಳ್ಳಿಗೆ ಬಂದಿದ್ದಾನೆ. ಈ ವೇಳೆ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

    ಕೊಲೆಯಾದ ಮಾಯಳ ಅಕ್ಕ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ ವಾಸವಾಗಿದ್ದಾರೆ. ಶುಕ್ರವಾರ ಅಕ್ಕನಿಗೆ ಕರೆ ಮಾಡಿ, ‘ಆಫೀಸ್ ಪಾರ್ಟಿ ಇದೆ. ರಾತ್ರಿ ಬರಲ್ಲ’ ಎಂದು ಮಾಯ ಹೇಳಿದ್ದಳು. ಇನ್ನೂ ಹಂತಕ ಆರವ್ ಹಾಗೂ ಮಾಯ 6 ತಿಂಗಳಿಂದ ಪ್ರೀತಿಯಲ್ಲಿದ್ದರು ಎಂಬುದು ಮಾಯ ಸಹೋದರಿಯಿಂದ ತಿಳಿದುಬಂದಿತ್ತು.

    ಆರೋಪಿ ಪ್ರೇಯಸಿ ಜೊತೆ ಎರಡು ದಿನಗಳ ಕಾಲ ಕಳೆದು ಪ್ರೀ ಪ್ಲಾನ್‌ನಂತೆ ಕೊಲೆ ಮಾಡಿದ್ದಾನೆ ಎಂದು ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿತ್ತು.

  • ಇಡೀ ರಾತ್ರಿ ಪ್ರೇಯಸಿ ಶವದ ಜೊತೆ ಕುಳಿತು ಸಿಗರೇಟ್ ಸೇದಿದ್ದ ಹಂತಕ

    ಇಡೀ ರಾತ್ರಿ ಪ್ರೇಯಸಿ ಶವದ ಜೊತೆ ಕುಳಿತು ಸಿಗರೇಟ್ ಸೇದಿದ್ದ ಹಂತಕ

    – ಇಂದಿರಾನಗರ ಯುವತಿ ಕೊಲೆ ಪ್ರಕರಣದಲ್ಲಿ ಬೆಚ್ಚಿಬೀಳಿಸೋ ಮಾಹಿತಿ ಬಹಿರಂಗ

    ಬೆಂಗಳೂರು: ಇಂದಿರಾನಗರದ ಹೋಟೆಲ್‌ನಲ್ಲಿ ಯುವತಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಲವು ಮಾಹಿತಿ ಕಲೆಹಾಕಿದ್ದಾರೆ. ಪ್ರೇಯಸಿ ಹತ್ಯೆ ಮಾಡಿ ಇಡೀ ರಾತ್ರಿ ಆಕೆಯ ಶವದ ಜೊತೆ ಕುಳಿತು ಹಂತಕ ಸಿಗರೇಟ್ ಸೇದಿದ್ದಾನೆ ಎಂಬುದು ತಿಳಿದುಬಂದಿದೆ.

    ಎರಡು ದಿನ ಪ್ರೇಯಸಿ ಜೊತೆ ಕಾಲ ಕಳೆದಿದ್ದು ಆ ಬಳಿಕ ಕೊಲೆ ಮಾಡಿದ್ದಾನೆ. ನಿನ್ನೆ ಬೆಳಗ್ಗೆ 8:20 ರ ಸುಮಾರಿಗೆ ರೂಂ ನಿಂದ ಗಾಬರಿಯಲ್ಲೇ ಹೊರಟಿದ್ದಾನೆ. ರೂಂ ನಿಂದ ಹಂತಕ ಹೊರಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಸಾಕ್ಷ್ಯ ಸಂಗ್ರಹಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಚಾಕು ಇರಿದು ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ

    ಕೊಲೆ ಬಳಿಕ ಪ್ರೇಯಸಿಯ ಮೃತದೇಹವನ್ನ ಪೀಸ್ ಪೀಸ್ ಮಾಡುವ ಆಲೋಚನೆಯಲ್ಲಿ ಹಂತಕನಿದ್ದನಾ ಎಂಬ ಶಂಕೆ ವ್ಯಕ್ತವಾಗಿದೆ. ಹೋಟೆಲ್‌ನಲ್ಲೇ ಶವ ಬಿಟ್ಟು ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ ವರೆಗೂ ಹೋಗಿದ್ದಾನೆ. ಆ ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡ್ಕೊಂಡು ಪರಾರಿಯಾಗಿದ್ದಾನೆ. ಹಂತಕ ಕೇರಳಕ್ಕೆ ಎಸ್ಕೇಪ್ ಆಗಿರುವ ಶಂಕೆ ವ್ಯಕ್ತವಾಗಿದೆ.

    ಕೊಲೆಯಾದ ಮಾಯ ಅಕ್ಕ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ ಮತ್ತೊಬ್ಬನ ಜೊತೆ ವಾಸವಾಗಿದ್ದಾರೆ. ಶುಕ್ರವಾರ ಅಕ್ಕನಿಗೆ ಕಾಲ್ ಮಾಡಿ, ‘ಆಫೀಸ್ ಪಾರ್ಟಿ ಇದೆ. ರಾತ್ರಿ ಬರಲ್ಲ’ ಎಂದು ಮಾಯ ಹೇಳಿದ್ದಳು. ಶನಿವಾರ ಕೂಡ ಮೆಸೇಜ್ ಮಾಡಿ, ‘ಇಂದೂ ಪಾರ್ಟಿಯಿದ್ದ ರೂಂಗೆ ಬರಲ್ಲ’ ಎಂದು ತಿಳಿಸಿದ್ದಳು. ಹಂತಕ ಆರನ್ ಹಾಗೂ ಮಾಯ 6 ತಿಂಗಳಿಂದ ಪ್ರೀತಿಯಲ್ಲಿದ್ದರು ಎಂಬುದು ಮಾಯ ಸಹೋದರಿಯಿಂದ ತಿಳಿದುಬಂದಿದೆ. ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್ – ಮುಂದಿನ ವರ್ಷದೊಳಗೆ 21 ಹೊಸ ರೈಲುಗಳು ಸೇರ್ಪಡೆ

    ಹೋಟೆಲ್‌ಗೆ ಬರೋಕು ಮುನ್ನ ಹಳೆಯ ಚಾಕುವೊಂದನ್ನ ಹಂತಕ ತಂದಿದ್ದ. ಹೋಟಲ್‌ಗೆ ಬಂದ ಬಳಿಕ ನೈಲಾನ್ ದಾರವನ್ನ ಆನ್‌ಲೈನ್ ಮೂಲಕ ಆರ್ಡರ್ ಮಾಡಿ ತರಿಸಿಕೊಂಡಿದ್ದ. ಹೀಗಾಗಿ, ಪ್ರೇಯಸಿ ಜೊತೆ ಎರಡು ದಿನಗಳ ಕಾಲ ಕಳೆದು ಪ್ರೀ ಪ್ಲಾನ್‌ನಂತೆ ಕೊಲೆ ಮಾಡಿದ್ದಾನೆ. ಕೇರಳ ಸೇರಿದಂತೆ ಹಲವು ಕಡೆ ಹಂತಕನಿಗಾಗಿ ಹುಡುಕಾಟ ನಡೆಸಲಾಗಿದೆ.

    ಆರೋಪಿ ಆರವ್ ಹನೋಯ್ ಪತ್ತೆಗೆ ಎರಡು ವಿಶೇಷ ತಂಡ ರಚನೆ ಮಾಡಲಾಗಿದೆ. ಇಂದಿರಾನಗರ ಠಾಣೆ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ತಂಡ ರಚನೆಯಾಗಿದೆ. ಕೊಲೆ ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಆರೋಪಿ ಎಸ್ಕೇಪ್ ಆಗಿದ್ದಾನೆ. ಆರೋಪಿ ಎಸ್ಕೇಪ್ ಆದ ಕ್ಯಾಬ್ ಮಾಹಿತಿಯನ್ನು ಪೊಲೀಸರು ಕಲೆಹಾಕಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಿ ಕ್ಯಾಬ್ ಮಾಹಿತಿ ಸಂಗ್ರಹಿಸಿದ್ದಾರೆ. ಆರೋಪಿಯು ಕೊಲೆ ಬಳಿಕ ಕ್ಯಾಬ್ ಬುಕ್ ಮಾಡಿಕೊಂಡು ಹೋಗಿದ್ದ.

    ಕ್ಯಾಬ್ ಬಂದು ಹೋಗಿರುವ ಮಾರ್ಗದ ಸಿಸಿಟಿವಿಗಳ ಪರಿಶೀಲನೆ ನಡೆಸಲಾಗಿದೆ. ಆರೋಪಿ ಕ್ಯಾಬ್ ಎಲ್ಲಿ ಇಳಿದಿದ್ದ ಅನ್ನೋದನ್ನ ಪತ್ತೆಹಚ್ಚಲು ಪೊಲೀಸರು ಮುಂದಾಗಿದ್ದಾರೆ. ಆರವ್ ಹನೋಯ್ ಹಾಗೂ ಮಾಯಾ ಗೊಗಾಯ್ ಪರಿಚಯದ ಬಗ್ಗೆಯೂ ತನಿಖೆ ನಡೆಸಲಾಗಿದೆ. ಈ ಇಬ್ಬರೂ ಸೋಷಿಯಲ್ ಮೀಡಿಯಾ ಮೂಲಕ ಪರಿಚಯವಾಗಿದ್ದರು. ಕಳೆದ ಕೆಲ ತಿಂಗಳ ಹಿಂದಷ್ಟೇ ಪರಿಚಯವಾಗಿದ್ದರು. ಇದೇ 23 ರಂದು ಇಂದಿರಾನಗರ ಸರ್ವೀಸ್ ಅಪಾರ್ಟ್ಮೆಂಟ್‌ಗೆ ಬಂದಿದ್ದರು. ಶನಿವಾರದಿಂದ ನಿನ್ನೆ ಬೆಳಗ್ಗೆ ವರೆಗೂ ಆರೋಪಿ ಅಪಾರ್ಟ್ಮೆಂಟ್‌ನಲ್ಲಿದ್ದ.

    ಮೂರು ದಿನಗಳ ಅಂತರದಲ್ಲಿ ಮಾಯಾ ಗೊಗೊಯ್ ಕೊಲೆಯಾಗಿದೆ. ಬಳಿಕ ನಿನ್ನೆ ಬೆಳಗ್ಗೆ 8:19 ಕ್ಕೆ ರೂಂನಿಂದ ಆರೋಪಿ ಹೊರ ಬಂದಿದ್ದಾನೆ. ಆರೋಪಿ ಪತ್ತೆಗೆ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ. ಕೊಲೆಯಾದ ಮಾಯಾ ಗೊಗೊಯ್ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

  • ಬೆಂಗಳೂರಲ್ಲಿ ಕಾರಿನ ಗಾಜು ಒಡೆದು ಕಳ್ಳತನ – ನಾಲ್ವರ ಬಂಧನ

    ಬೆಂಗಳೂರಲ್ಲಿ ಕಾರಿನ ಗಾಜು ಒಡೆದು ಕಳ್ಳತನ – ನಾಲ್ವರ ಬಂಧನ

    ಬೆಂಗಳೂರು: ಹಾಡಹಗಲೇ ಕಾರಿನ ಗಾಜು ಒಡೆದು ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಕಳ್ಳರ ಗ್ಯಾಂಗ್‌ವೊಂದಕ್ಕೆ ಪೊಲೀಸರು ಬಂಧಿಸಿದ್ದಾರೆ.

    ರಸ್ತೆ ಬದಿ ಪಾರ್ಕ್ ಮಾಡಿ ಶಾಪಿಂಗ್, ಬ್ಯಾಂಕ್ (Bank) ಕೆಲಸಕ್ಕೆಂದು ಹೋಗುವವರನ್ನು ಈ ಖತರ್ನಾಕ್ ಕಳ್ಳರ ಗ್ಯಾಂಗ್ ಟಾರ್ಗೆಟ್ ಮಾಡುತ್ತಿತ್ತು. ಪಾರ್ಕಿಂಗ್ ಮಾಡಿ ನಿಲ್ಲಿಸುತ್ತಿದ್ದ ಕಾರಿನ ಗಾಜು ಒಡೆದು ಕಾರಿನಲ್ಲಿದ್ದ ಲ್ಯಾಪ್‌ಟಾಪ್(Laptop), ಬ್ಯಾಗ್ ಹಾಗೂ ಬೆಲೆಬಾಳುವ ವಸ್ತುಗಳನ್ನು ಎತ್ತೊಯ್ಯುತ್ತಿತ್ತು. ಇದನ್ನೂ ಓದಿ: ಮೈಸೂರು ದಸರಾ 2024| ಗಜಪಡೆಗೆ ಇಂದಿನಿಂದ ಮರಳು ಮೂಟೆ ಹೊರಿಸುವ ತಾಲೀಮು

    ಗುರುವಾರ ಇದೇ ಕಳ್ಳರ ಗ್ಯಾಂಗ್ ಇಂದಿರಾನಗರದಲ್ಲಿ (Indiranagara) ನಿಲ್ಲಿಸಿದ್ದ ಕಾರಿನ ಗಾಜು ಒಡೆದು ಕಾರಿನಲ್ಲಿದ್ದ ಬ್ಯಾಗ್ ಕಳ್ಳತನ ಮಾಡಿತ್ತು. ಖದೀಮರು ಕಳ್ಳತನ ಮಾಡುತ್ತಿರುವ ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

    ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನಿತೀಶ್‌ ಕುಮಾರ್‌ ಪಕ್ಷದ ನಾಯಕ ತ್ಯಾಗಿ JDU ವಕ್ತಾರ ಸ್ಥಾನಕ್ಕೆ ರಾಜೀನಾಮೆ