Tag: indiranagar

  • ಸಿನಿಮಾ ಶೈಲಿಯಲ್ಲಿ ಮೊಬೈಲ್‌ಗಳ್ಳರ ಸೆರೆ

    ಸಿನಿಮಾ ಶೈಲಿಯಲ್ಲಿ ಮೊಬೈಲ್‌ಗಳ್ಳರ ಸೆರೆ

    ಬೆಂಗಳೂರು: ಸಿನಿಮಾ ಶೈಲಿಯಲ್ಲಿ ಹೊಯ್ಸಳ  (Hoysala) ಪೊಲೀಸರು ಚೇಸಿಂಗ್ (Chasing) ಮಾಡಿ ಕಳ್ಳರನ್ನು ಇಂದಿರಾ ನಗರದ (Indira Nagar) 80 ಅಡಿ ರಸ್ತೆಯಲ್ಲಿ ಸೆರೆ ಹಿಡಿದಿದ್ದಾರೆ.

    ರೌಡಿಶೀಟರ್‌ಗಳಾದ ಗುಂಡಾ ಅಲಿಯಾಸ್ ವಿನೋದ್, ಸ್ಪೀಫನ್ ರಾಜ್‌ನನ್ನು ಬಂಧಿಸಲಾಗಿದೆ. ಜನವರಿ 31 ರಂದು ರಾತ್ರಿ ಎರಡು ಗಂಟೆ ವೇಳೆಗೆ ಸಿದ್ದೇಶ್ ಎಂಬಾತನ ಕಾರನ್ನು ಅಡ್ಡಗಟ್ಟಿ ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದಾರೆ. ಇದನ್ನೂ ಓದಿ: ಪಾಕ್‌ನ ಸ್ವತಂತ್ರ ಅಭ್ಯರ್ಥಿಯ ಕಚೇರಿಯ ಹೊರಗೆ ಬಾಂಬ್‌ ಸ್ಫೋಟ: 26 ಮಂದಿ ಸಾವು

    ಸಿದ್ದೇಶ್ ಅವರು ಈ ಕುರಿತು ಹೊಯ್ಸಳ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಪೊಲೀಸರು ತಕ್ಷಣ ಸ್ಥಳಕ್ಕೆ ಹೋಗಿದ್ದಾರೆ. ಆರೋಪಿಗಳು ಪೊಲೀಸರಿಂದ ತಪ್ಪಿಸಿಕೊಳ್ಳಲು ಬೈಕ್‌ನಲ್ಲಿ ಹೊರಟ್ಟಿದ್ದಾರೆ. ಬಳಿಕ ಪೊಲೀಸರು ಆರೋಪಿಗಳನ್ನು ಬೆನ್ನಟ್ಟಿದ್ದಾರೆ. ಇದನ್ನೂ ಓದಿ: ಓದಿನ ಕಡೆ ಗಮನಕೊಡುವಂತೆ ಹೇಳಿದ್ದಕ್ಕೆ ಫುಟ್ಬಾಲ್ ಪ್ಲೇಯರ್ ಸೂಸೈಡ್

    ಹೊಯ್ಸಳ ಪೊಲೀಸರಾದ ಜಾರ್ಜ್ ಮತ್ತು ಬೀರಪ್ಪ ಅವರು ಆರೋಪಿಗಳನ್ನು ಬೆನ್ನಟ್ಟಿದು, ಸುಮಾರು ಮೂರು ಕಿಲೋಮಿಟರ್‌ಗಳವರೆಗೂ ಬೈಕ್‌ನಲ್ಲಿ ಆರೋಪಿಗಳು ಹೋಗಿದ್ದಾರೆ. ಪಟ್ಟು ಬಿಡದ ಪೊಲೀಸರು ಆರೋಪಿಗಳನ್ನು ಬೆನ್ನಟ್ಟಿ ಬಂಧಿಸಿ, ಆರೋಪಿಗಳು ಕಳವು ಮಾಡಿದ್ದ ಏಳು ಮೊಬೈಲ್ ಫೋನ್‌ಗಳನ್ನು ಸಹ ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಿದ ಬಿಜೆಪಿ ಕಾರ್ಯಕರ್ತರ ವಶ

    ಹೊಯ್ಸಳ ಪೊಲೀಸರ ಕೆಲಸಕ್ಕೆ ಹಿರಿಯ ಅಧಿಕಾರಿಗಳು ಬಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ 40 ಸ್ಥಾನಗಳನ್ನಾದರೂ ಉಳಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ: ಮೋದಿ ವ್ಯಂಗ್ಯ

  • ನಟಿ ಸಂಜನಾ ಗಲ್ರಾನಿಗೆ ಕೊಲೆ ಬೆದರಿಕೆ : ಎಫ್ಐಆರ್‌ ದಾಖಲು

    ನಟಿ ಸಂಜನಾ ಗಲ್ರಾನಿಗೆ ಕೊಲೆ ಬೆದರಿಕೆ : ಎಫ್ಐಆರ್‌ ದಾಖಲು

    ಸಿನಿಮಾ ರಂಗದಿಂದ ದೂರವಿದ್ದು, ಸದ್ಯ ಮಗುವಿನ ಪಾಲನೆ ಪೋಷನೆಯಲ್ಲಿ ಬ್ಯುಸಿಯಾಗಿರುವ ನಟಿ ಸಂಜನಾ ಗಲ್ರಾನಿ (Sanjana Galrani) ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಸಂಜನಾಗೆ ಕೊಲೆ ಬೆದರಿಕೆ (Death threat) ಹಾಕಲಾಗಿದೆ ಎಂದು ಆರೋಪ ಮಾಡಿರುವ ಅವರು, ಬೆದರಿಕೆ ಹಾಕಿದವರು ವಿರುದ್ಧ ದೂರು ದಾಖಲಿಸಿದ್ದಾರೆ.

    ಪಾರ್ಕಿಂಗ್ ವಿಚಾರವಾಗಿ ಸ್ಥಳೀಯ ನಿವಾಸಿಗಳ ಜೊತೆ ಗಲಾಟೆ ನಡೆದಿದ್ದು, ಕೊಲೆ ಮಾಡ್ತಿನಿ ಅಂತ ಬೆದರಿಕೆ ಹಾಕಿದ್ದಾರೆ ಎಂದು ಸಂಜನಾ ಇಂದಿರಾನಗರ ಠಾಣೆಗೆ ದೂರು ನೀಡಿದ್ದಾರೆ. ಇಂದಿರಾನಗರದ (Indiranagar) ಧೂಪನಹಳ್ಳಿಯಲ್ಲಿ ವಾಸವಾಗಿರುವ ಸಂಜನಾ ಗಲ್ರಾನಿ ಮನೆ ಬಳಿ ಯಶೋಧಮ್ಮ ಹಾಗೂ ರಾಜಣ್ಣ ಎಂಬುವವರ ಮನೆಯೂ ಇದೆ. ಇವರ ಮೇಲೆಯೇ ಸಂಜನಾ ದೂರು ನೀಡಿದ್ದಾರೆ. ಇದನ್ನೂ ಓದಿ: ದೀಪಿಕಾ ಪಡುಕೋಣೆ ನಮ್ಮ ಭಾರತದ ಹೆಮ್ಮೆ ಎಂದು ಹಾಡಿ ಹೊಗಳಿದ ಕಂಗನಾ

    ಯಶೋಧಮ್ಮ ಹಾಗೂ ರಾಜಣ್ಣ ಎನ್ನುವವರು ರಸ್ತೆಗೆ ಅಡ್ಡಲಾಗಿ ಕಾರುಗಳನ್ನ ನಿಲ್ಲಿಸ್ತಾರಂತೆ. ಇದನ್ನ ಪ್ರಶ್ನೆ ಮಾಡಿದ್ರೆ ಕೊಲೆ ಮಾಡ್ತಿನಿ, ನಾವು ನಲವತ್ತು ವರ್ಷದಿಂದ ವಾಸ ಇದ್ದೀವಿ ಅಂತ ಆವಾಜ್ ಹಾಕಿದ್ದಲ್ಲದೆ, ವೇಶ್ಯೆ ಎಂದು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ ಸಂಜನಾ ಗಲ್ರಾನಿ. ಸದ್ಯ ನ್ಯಾಯಲಯದ ಅನುಮತಿ ಮೇರೆಗೆ ಎಫ್ಐಆರ್‌ (FIR) ದಾಖಲಾಗಿದೆ.

  • ಹೊಸವರ್ಷ ಸಂಭ್ರಮಾಚರಣೆಗೆ ರಂಗೇರಿದ ಬೆಂಗಳೂರು

    ಹೊಸವರ್ಷ ಸಂಭ್ರಮಾಚರಣೆಗೆ ರಂಗೇರಿದ ಬೆಂಗಳೂರು

    ಬೆಂಗಳೂರು: 2022ಕ್ಕೆ ಟಾಟಾ ಹೇಳಿ, 2023ಕ್ಕೆ ಹಾಯ್ ಹಾಯ್ ಹೇಳಲು ಇನ್ನು ಕೆಲವೇ ಗಂಟೆಯಷ್ಟೇ ಬಾಕಿ. ಈಗಾಗಲೇ ಬೆಂಗಳೂರು (Bengaluru), ಮೈಸೂರು (Mysuru), ಹುಬ್ಬಳ್ಳಿ(Hubballi), ಕಲಬುರಗಿ, ಬೆಳಗಾವಿ (Belagavi), ಮಂಗಳೂರು (Managaluru) ಸೇರಿ ರಾಜ್ಯದೆಲ್ಲೆಡೆ ಸಂಭ್ರಮಾಚರಣೆಗಳು ಶುರುವಾಗಿವೆ. ಎಲ್ಲರೂ ರಂಗು ರಂಗಾಗಿದ್ದಾರೆ.

    12 ಗಂಟೆ ಯಾವಾಗ ಆಗುತ್ತಪ್ಪಾ ಎಂದು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಬೆಂಗಳೂರಿನ ಎಂಜಿ ರೋಡ್, ಬ್ರಿಗೇಡ್ ರೋಡ್‍ಗಳು ಯುವ ಸಮೂಹದಿಂದ ಕಿಕ್ಕಿರಿಯುತ್ತಿವೆ. ಪಬ್, ಬಾರ್ ಅಂಡ್ ರೆಸ್ಟೋರೆಂಟ್‍ಗಳು ಕಲರ್‌ಫುಲ್ ಆಗಿವೆ. ಮುಂಜಾಗ್ರತಾ ಕ್ರಮವಾಗಿ 8,500ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.

    ಈಗಾಗಲೇ ಇಂದಿರಾನಗರ ಚರ್ಚ್ ಸ್ಟ್ರೀಟ್ ಬಂದ್ ಆಗಿದ್ದು, ದುಬಾರಿ ಚಾರ್ಜ್ ನಡುವೆಯೂ ಪಬ್‍ಗಳಿಗೆ ಫುಲ್ ಬೇಡಿಕೆ ಕೇಳಿಬರುತ್ತಿವೆ. ಚರ್ಚ್ ಸ್ಟ್ರೀಟ್ ರಸ್ತೆಯಲ್ಲಿ ಪಬ್‍ಗಳು ಭರ್ತಿಯಾಗಿದ್ದು, ಪಬ್‍ಗಳು ಹೊಸ ವರ್ಷದ ಪಾರ್ಟಿಗೆ ದರ ಹೆಚ್ಚಿಸಿದೆ. ಪ್ರತಿಬಾರಿಗಿಂತ ಇಂದು ಶೇ.50ರಷ್ಟು ಏರಿಕೆ ಆಗಿದ್ದು, 2.5 ಸಾವಿರ ಇದ್ದ ಚಾರ್ಚ್ 4.5 ರಿಂದ 5 ಸಾವಿರ ಚಾರ್ಚ್ ಮಾಡಲಾಗುತ್ತಿದೆ. ದುಪ್ಪಟ್ಟು ಚಾರ್ಚ್ ನಡುವೆಯೂ ಪಾರ್ಟಿ ಪ್ರೀಯರು ಮುಂಗಡ ಬುಕ್ಕಿಂಗ್ ಮಾಡಿದ್ದಾರೆ. ಇದನ್ನೂ ಓದಿ: ಬಂಡೀಪುರದಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ಅವಕಾಶವಿಲ್ಲ – ಪ್ರವಾಸಿಗರಿಗೆ ಕಾಟೇಜ್ ಕೊಡದಿರಲು ನಿರ್ಧಾರ

    ವಾಚ್ ಟವರ್, ವುಮೆನ್ ಸೇಫ್ ಹೌಸ್ ನಿರ್ಮಿಸಲಾಗಿದೆ. ಸಿಸಿಟಿವಿಗಳ ಕಣ್ಗಾವಲು, ಆರೆಂಜ್ ಸ್ಕ್ವಾಡ್ ಕೂಡ ಇದೆ. ಮಧ್ಯರಾತ್ರಿ 1 ಗಂಟೆಯವರೆಗೆ ಮಾತ್ರ ಸಂಭ್ರಮಾಚರಣೆಗೆ ಅವಕಾಶವಿದೆ. ನಸುಕಿನಜಾವ 2 ಗಂಟೆಯವರೆಗೂ ಮೆಟ್ರೋ ಸೇವೆ ಇರಲಿದೆ. ಅವಧಿ ಮೀರಿದ್ರೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲಿದ್ದಾರೆ. ಈಗಾಗಲೇ ಏರ್‌ಪೋರ್ಟ್ ಮೇಲ್ಸೇತುವೆ ಹೊರತುಪಡಿಸಿ ಉಳಿದೆಲ್ಲಾ ಫ್ಲೈಓವರ್ ಬಂದ್ ಆಗಿವೆ. ಇದನ್ನೂ ಓದಿ:  ಕಾಂಗ್ರೆಸ್ ತುಕ್ಡೆ ತುಕ್ಡೆ ಗ್ಯಾಂಗ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ: ಅಮಿತ್‌ ಶಾ

    Live Tv
    [brid partner=56869869 player=32851 video=960834 autoplay=true]

  • ಬೆಂಗಳೂರಿನಲ್ಲಿ ಡ್ರೈನೇಜ್ ಬ್ಲಾಕ್ ದಂಧೆ – ಹಣಕ್ಕಾಗಿ ಮಿಡ್‌ನೈಟ್‌ ಆಪರೇಷನ್‌

    ಬೆಂಗಳೂರಿನಲ್ಲಿ ಡ್ರೈನೇಜ್ ಬ್ಲಾಕ್ ದಂಧೆ – ಹಣಕ್ಕಾಗಿ ಮಿಡ್‌ನೈಟ್‌ ಆಪರೇಷನ್‌

    ಬೆಂಗಳೂರು: ರಾಜಧಾನಿಯಲ್ಲಿ ಎಂತೆಂಥಾ ದಂಧೆಗಳು ನಡೆಯುತ್ತದೆ ಅಂದರೆ ಎಂತವರು ಶಾಕ್ ಆಗಲೇಬೇಕು. ಬೆಂಗಳೂರಿನಲ್ಲಿ(Bengaluru) ಸಣ್ಣ ಮಳೆಗೂ(Rain) ಮುಳುಗುವ ಮನೆ, ರಸ್ತೆ ಅಂಗಡಿಗಳ ಹಿಂದೆ ದೊಡ್ಡದೊಂದು ಮಾಫಿಯಾ ಕೆಲಸ ಮಾಡುತ್ತಿರುವುದು ಈಗ ಸಾಕ್ಷ್ಯ ಸಮೇತ ದೃಢಪಟ್ಟಿದೆ.

    ಅನಾಮಿಕ ವ್ಯಕ್ತಿಗಳು ರಸ್ತೆಯ ಬದಿಯಲ್ಲಿರುವ ಡ್ರೈನೇಜ್ ಬ್ಲಾಕ್‍ಗೆ(Drainage Block) ಇಳಿದು ಮರಳಿನ ಮೂಟೆ, ಅಕ್ಕ-ಪಕ್ಕದ ರಸ್ತೆಯ ದೊಡ್ಡ ದೊಡ್ಡ ಸೈಜುಗಲ್ಲನ್ನು ಡ್ರೈನೇಜ್‍ನೊಳಗೆ ಹಾಕುತ್ತಿರುವ ಸ್ಫೋಟಕ ವಿಚಾರ ಈಗ ಬೆಳಕಿಗೆ ಬಂದಿದೆ.

     

    ಈ ಸ್ಪೋಟಕ ಘಟನೆ ಸೆರೆಯಾಗಿದ್ದು ಬೆಂಗಳೂರಿನ ಪ್ರತಿಷ್ಠಿತ ಇಂದಿರಾ ನಗರದಲ್ಲಿ. ಇತ್ತೀಚೆಗೆ ಸಣ್ಣ ಮಳೆ ಬಂದಾಗಲೂ ಬಡಾವಣೆಗಳು ಅಂಗಡಿಗಳು ಜಲಾವೃತಗೊಂಡಿತ್ತು. ಭಾರೀ ಮಳೆ ಸುರಿದರೂ ಜಲಾವೃತವಾಗದೇ ಇದ್ದ ಬಡಾವಣೆ ಸಣ್ಣ ಮಳೆಗೆ ಹೇಗೆ ಜಲಾವೃತವಾಯಿತು ಎಂಬುದೇ ಇವರ ತಲೆನೋವಿಗೆ ಕಾರಣವಾಗಿತ್ತು. ಹೀಗಾಗಿ ಜನ ಕಳೆದ ತಾವು ಪಟ್ಟ ಬವಣೆಯ ದೃಶ್ಯಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ತೋರಿಸಲು ಅಂಗಡಿಗಳಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದ ದೃಶ್ಯ ಕಲೆಹಾಕಲು ಮುಂದಾಗಿದ್ದಾರೆ. ಆಗ ಅಪರಿಚಿತ ವ್ಯಕ್ತಿಗಳು ಬಂದು ಒಳ ಚರಂಡಿ ವ್ಯವಸ್ಥೆಯನ್ನು ಬ್ಲಾಕ್‌ ಮಾಡುತ್ತಿರುವ ದೃಶ್ಯ ನೋಡಿ ಶಾಕ್‌ ಆಗಿದ್ದಾರೆ. ಇದನ್ನೂ ಓದಿ: ಕರ್ನಾಟಕದಿಂದ 1 ಟ್ರಿಲಿಯನ್ ಡಾಲರ್ ಆರ್ಥಿಕ ಕೊಡುಗೆ ಗುರಿ – ಮೇಲ್ವಿಚಾರಣೆಗೆ ವಿಶೇಷ ತಂಡ ರಚನೆ

    ಮಳೆ ಬರುವ ಸಂದರ್ಭದಲ್ಲಿ ಈ ರೀತಿ ಡ್ರೈನೇಜ್ ಬ್ಲಾಕ್ ಮಾಡಿದಾಗ ಸಣ್ಣ ಮಳೆಗೂ ಇಡೀ ಮನೆ ಅಕ್ಕಪಕ್ಕದ ಅಂಗಡಿ ರಸ್ತೆ ಮುಳುಗಡೆಯಾಗುತ್ತದೆ. ಕೂಡಲೇ ಬಿಬಿಎಂಪಿ(BBMP) ಎಮರ್ಜೆನ್ಸಿ ದುರಸ್ತಿ ಮಾಡಲು ಕೆಲ ಗುತ್ತಿಗೆದಾರರಿಗೆ ಕೆಲಸ ನೀಡುತ್ತದೆ. ದುಡ್ಡು ಮಾಡುವ ದಂಧೆಗಾಗಿ ಈ ಕೃತ್ಯ ಎಸಗಲಾಗುತ್ತಿದೆ ಎಂದು ಇಂದಿರಾನಗರದ ಜನ ಆರೋಪ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಮ್ಮ ಕಣ್ಣಿನಿಂದ ಇನ್ನೊಬ್ಬರಿಗೆ ದೃಷ್ಟಿ ಬರುವುದೇ ಬದುಕಿನ ಸಾಕ್ಷಾತ್ಕಾರ: ಡಾ.ಕೆ.ಸುಧಾಕರ್

    ನಮ್ಮ ಕಣ್ಣಿನಿಂದ ಇನ್ನೊಬ್ಬರಿಗೆ ದೃಷ್ಟಿ ಬರುವುದೇ ಬದುಕಿನ ಸಾಕ್ಷಾತ್ಕಾರ: ಡಾ.ಕೆ.ಸುಧಾಕರ್

    ಬೆಂಗಳೂರು: ನಮ್ಮ ಸಾವಿನ ನಂತರ ನಮ್ಮ ಕಣ್ಣುಗಳಿಂದ ಇನ್ನೊಬ್ಬರಿಗೆ ದೃಷ್ಟಿ ಬರುತ್ತದೆ ಅಂದರೆ ಅದಕ್ಕಿಂತ ಸಾಕ್ಷಾತ್ಕಾರ ಇನ್ನೊಂದಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

    ಬೆಂಗಳೂರಿನ ಇಂದಿರಾನಗರದಲ್ಲಿ ಡಾಕ್ಟರ್. ಅಗರ್ ವಾಲ್ಸ್ ಕಣ್ಣಿನ ಆಸ್ಪತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಂಧತ್ವ ಬಹಳ ನೋವಿನ ಸಂಗತಿ. ಯಾರೇ ಇರಲಿ, ಭಗವಂತ ಸೃಷ್ಟಿ ಮಾಡಿರುವ ಪ್ರಕೃತಿಯನ್ನು ನೋಡಲು ಸಾಧ್ಯವಾಗುವುದು ನಮ್ಮ ಕಣ್ಣುಗಳಿಂದ. ಆದರೆ ಕಣ್ಣೇ ಇಲ್ಲದಿದ್ದರೆ ಈ ಸುಂದರ ಪ್ರಕೃತಿಯನ್ನು ಸವಿಯಲು ಅಸಾಧ್ಯ. ವಿಶ್ವದಲ್ಲಿ 4 ಕೋಟಿಗೂ ಹೆಚ್ಚು ಜನರಿಗೆ ಅಂಧತ್ವ ಇದೆ. ಭಾರತದಲ್ಲಿ ಪ್ರತಿವರ್ಷ 1 ಲಕ್ಷ ನೇತ್ರದಾನಿಗಳ ಅವಶ್ಯಕತೆ ಇದೆ. ಆದರೆ ನಮಗೆ ಸಿಗುತ್ತಿರುವ ದಾನಿಗಳ ಪ್ರಮಾಣ ಕೇವಲ 5% ಮಾತ್ರ. ಕಣ್ಣಿನ ದಾನಿಗಳ ಕೊರತೆ ನಮ್ಮನ್ನು ಕಾಡುತ್ತಿದೆ. ದೇಶದಲ್ಲಿ 10.8 ಲಕ್ಷ ಮಕ್ಕಳು ಅಂಧತ್ವಕ್ಕೆ ಒಳಗಾಗಿದ್ದಾರೆ ಎಂದರು.

    ಕೋವಿಡ್ ಸಮಯದಲ್ಲಿ ನೇತ್ರದಾನ ಪ್ರಮಾಣ ಮತ್ತಷ್ಟು ಕಡಿಮೆಯಾಗಿದೆ. ಕಣ್ಣಿನ ದಾನ ಮಹಾದಾನವಾದರೂ ಈ ಬಗ್ಗೆ ಕೆಲ ಮೂಢನಂಬಿಕೆಗಳು ಇವೆ. ಶವದಿಂದ ಕಣ್ಣನ್ನು ತೆಗೆದರೆ ಮುಖ ವಿಕಾರವಾಗುತ್ತದೆ ಎಂಬ ತಪ್ಪು ತಿಳಿವಳಿಕೆ ಇದೆ. ಆದರೆ ಇದು ಸುಳ್ಳು. ಕನ್ನಡದ ವರನಟ ಡಾ.ರಾಜ್ ಕುಮಾರ್, ಇತ್ತೀಚೆಗೆ ಅಕಾಲಿಕ ಮರಣ ಹೊಂದಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಂತಹ ಮಹಾನ್ ವ್ಯಕ್ತಿಗಳು ಕಣ್ಣು ದಾನ ಮಾಡಿದ್ದರು. ಲಕ್ಷಾಂತರ ಜನರು ಅವರ ಪಾರ್ಥಿವ ಶರೀರ ನೋಡಿದ್ದಾರೆ. ಆದರೆ ಯಾವುದೇ ವಿಕಾರ ಕಂಡಿಲ್ಲ. ಹೀಗಾಗಿ ನೇತ್ರದಾನ ಎಲ್ಲರೂ ಮಾಡಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸುದೀಪ್ ಕುಟುಂಬ ಸಮೇತರಾಗಿ ಭೇಟಿ

    ಆರೋಗ್ಯ ಇರಲಿ ಅಥವಾ ನೇತ್ರದಾನದ ವಿಚಾರವೇ ಆಗಿರಲಿ ಕರ್ನಾಟಕ ದೇಶದ ಎಲ್ಲಾ ರಾಜ್ಯಗಳಿಗೂ ಮಾದರಿಯಾಗಿದೆ. ಹೆಲ್ತ್ ಕೇರ್ ಉದ್ಯಮಿಗಳಿಂದ ಇದೆಲ್ಲಾ ಸಾಧ್ಯವಾಗಿದೆ. ಪ್ರತಿಯೊಬ್ಬರಿಗೂ ಕೈ ಗೆಟಕುವ ರೀತಿಯಲ್ಲಿ ಹೇಲ್ತ್ ಕೇರ್ ಇಂಡಸ್ಟ್ರಿ ಕರ್ನಾಟಕದಲ್ಲಿ ಬೆಳೆದಿದೆ ಎಂದು ಹೇಳಿದರು.

    ಆಯುಷ್ಮಾನ್ ಭಾರತ್ ನಿಂದ ಎಲ್ಲರಿಗೂ ಲಾಭವಾಗುತ್ತಿದೆ. ಸಮಾಜದ ಎಲ್ಲಾ ವರ್ಗಗಳಿಗೆ ಇದರ ಉಪಯೋಗ ಆಗುತ್ತಿದೆ. ನಾವು ಎಲ್ಲಾ ಕನ್ನಡಿಗರಿಗೂ ಸಹಾಯವಾಗುವಂತೆ ಹೆಲ್ತ್ ಕೇರ್ ಫೆಸಿಲಿಟಿ ವ್ಯವಸ್ಥೆ ಮಾಡಿದ್ದೇವೆ. ಸರ್ಕಾರಿ ಇರಲಿ, ಖಾಸಗಿ ಇರಲಿ ಎಲ್ಲಾ ಕಡೆಯೂ ಇನ್ನೂ ಹೆಚ್ಚಿನ ಸೌಕರ್ಯ ಒದಗಿಸುವ ಯೋಜನೆ ರೂಪಿಸಲಾಗಿದೆ ಎಂದರು. ಇದನ್ನೂ ಓದಿ:  ಮತಾಂತರ ನಿಷೇಧ ಕಾಯ್ದೆ ಜಾರಿ ಸರಿಯಿದೆ: ಬಿವೈ ರಾಘವೇಂದ್ರ

    ನೇತ್ರದಾನದ ಮಹತ್ವ ತಿಳಿಸಿ:
    ರಾಜ್ಯದಲ್ಲಿರುವ 21 ಮೆಡಿಕಲ್ ಕಾಲೇಜುಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಇನ್ನಷ್ಟು ಹೆಚ್ಚಿಸುವ ಯೋಜನೆ ರೂಪಿಸಿದ್ದೇವೆ. ಖಾಸಗಿ ಆಸ್ಪತ್ರೆಗಳು ದೊಡ್ಡಮಟ್ಟದಲ್ಲಿ ನೇತ್ರದಾನದ ಮಹತ್ವವನ್ನು ಸಮಾಜಕ್ಕೆ ತಿಳಿಸಿಕೊಡಬೇಕು. ಗ್ರಾಮೀಣ ಭಾಗದಲ್ಲಿ ಐ ಕ್ಯಾಂಪ್ ಗಳನ್ನು ಮಾಡಬೇಕು ಎಂದು ಮನವಿ ಮಾಡಿದರು.

    PM MODI

    ಪ್ರಧಾನಿ ನರೇಂದ್ರ ಮೋದಿಯವರು ಪ್ರಜಾಪ್ರಭುತ್ವ ಹಾಗೂ ಭಾರತದ ಅಭಿವೃದ್ಧಿಯ ಹರಿಕಾರ. ಹಾಗೆಯೇ ಡಾ.ಎಂ.ಸಿ.ಮೋದಿಯವರು ಕಣ್ಣಿನ ಆಸ್ಪತ್ರೆಗಳನ್ನು ಕಟ್ಟಿಸಿ ಎಲ್ಲರಿಗೂ ದೃಷ್ಟಿ ಸಿಗಬೇಕು ಅನ್ನುವ ಕನಸು ಕಂಡಿದ್ದರು. ತನ್ನ 40 ವರ್ಷಗಳ ಸೇವೆಯಲ್ಲಿ ಹಲವು ಸರ್ಜರಿಗಳನ್ನು ಅವರು ಮಾಡಿದ್ದರು. ಲಕ್ಷಾಂತರ ಕಣ್ಣಿನ ಸಮಸ್ಯೆಗಳನ್ನು ಪರಿಹರಿಸಿದರು. ಡಾ.ಎಂ.ಸಿ.ಮೋದಿಯವರ ಸೇವೆ ಮಾದರಿ ಎಂದರು.

  • 20 ರೂ. ಪೌಡರ್ ಇಟ್ಕೊಂಡು ಮಸಾಜ್ ಹೆಸ್ರಲ್ಲಿ ಸೆಕ್ಸ್ ದಂಧೆ!

    20 ರೂ. ಪೌಡರ್ ಇಟ್ಕೊಂಡು ಮಸಾಜ್ ಹೆಸ್ರಲ್ಲಿ ಸೆಕ್ಸ್ ದಂಧೆ!

    ಬೆಂಗಳೂರು: ವೃದ್ಧಾಶ್ರಮ ಹೆಸರಲ್ಲಿ ಮಸಾಜ್ ಪಾರ್ಲರ್ ಮಾಡಿಕೊಂಡು ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದ ಪಾರ್ಲರ್ ಮೇಲೆ ಕೊನೆಗೂ ಇಂದಿರಾನಗರ ಪೊಲೀಸರು ದಾಳಿ ನಡೆಸಿದ್ದಾರೆ.

    ಬೆಂಗಳೂರಿನ ಇಂದಿರಾನಗರದ ಆರನೇ ಅಡ್ಡರಸ್ತೆಯಲ್ಲಿರುವ ಈ ಮನೆಯಲ್ಲಿ ಮಸಾಜ್ ಪಾರ್ಲರ್ ಹೆಸರಿನಲ್ಲಿ ಸೆಕ್ಸ್ ದಂಧೆ ನಡೆಯುವುದನ್ನು ಪಬ್ಲಿಕ್ ಟಿವಿ ಸ್ಟಿಂಗ್ ಆಪರೇಷನ್ ಮೂಲಕ ಬಯಲಿಗೆ ತಂದಿದೆ.

    ಇಂದಿರಾ ನಗರದ ಕೂಗಳತೆಯ ದೂರದಲ್ಲಿ ಈ ದಂಧೆ ಎಗ್ಗಿಲ್ಲದೆ ನಡೆಯುತ್ತಿದ್ದು, ಈ ಮನೆಯ ಪಕ್ಕ ಕಾಲೇಜಗಳಿವೆ. ಸಂಪ್ರದಾಯಸ್ಥರ ಮನೆಗಳೂ ಇವೆ. ಆದ್ರೂ ರಾಜಾರೋಷವಾಗಿ ಈ ಸೆಕ್ಸ್ ದಂಧೆ ನಡೆಯುತ್ತಿತ್ತು. ಈ ಬಗ್ಗೆ ಸಾರ್ವಜನಿಕರು ದೂರು ನೀಡಿದ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ಕಾರ್ಯಾಚರಣೆ ನಡೆಸಿದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.

    ಈ ದಂಧೆಯ ಓನರ್ ಒಬ್ಬಳು ಖತರ್ನಾಕ್ ಮಹಿಳೆಯೆ ಆಗಿದ್ದಾಳೆ. ಈಕೆಯ ಹೆಸರಿನಲ್ಲಿ ಅನೇಕರು ಕೆಲಸ ಮಾಡಿಕೊಂಡಿದ್ದಾರೆ. ಈ ಮನೆಗೆ ದಿನಕ್ಕೆ ಏನಿಲ್ಲವೆಂದರೂ ನೂರಾರು ಜನರು ಬರ್ತಾರೆ. ಲಕ್ಷ ಲಕ್ಷ ರೂಪಾಯಿಗಳ ವ್ಯವಹಾರ ಕೂಡ ನಡೆಯುತ್ತದೆ.

    ಫಸ್ಟ್ ಹಣ ಕೊಡ್ಬೇಕು: ರೂಂಗೆ ಹೋದ ತಕ್ಷಣ ಗ್ರಾಹಕರ ಬಳಿ ಫಸ್ಟ್ ಟಿಪ್ಸ್ ಕೊಡಿ ಅಂತಾ ದುಡ್ಡು ಕಿತ್ತುಕೊಳ್ತಾರೆ. ಆ ಮೇಲೆ ಬಟ್ಟೆ ಬಿಚ್ಚಿ ಪೌಡರ್ ಮಸಾಜ್ ಶುರು ಹಚ್ಕೊಳ್ತಾರೆ. ಬರೇ ಮಸಾಜ್ ಸಾಕು ಅಂದ್ರೂ ಕೇಳಲ್ಲ, ಟಿಪ್ಸ್ ಕೊಡೋದನ್ನ ತಪ್ಪಿಸೋಕೆ ಹಿಂಗಾಡ್ತೀಯಾ ಅಂತಾ ಗದರಿ ದುಡ್ಡು ಕಿತ್ಕೊಂಡು ಕೆಲ್ಸ ಮುಗಿಸ್ತಾರೆ. ದುರಂತ ಅಂದ್ರೆ ಇಲ್ಲಿ ಚಿಗುರು ಮೀಸೆ ಕಾಲೇಜ್ ಹುಡ್ಗರು ಎಂಟ್ರಿ ಕೊಡುತ್ತಿದ್ದಾರೆ.

     

    https://www.youtube.com/watch?v=P15VRt6N1Gw

    https://www.youtube.com/watch?v=LviKyrP1pKc

    https://www.youtube.com/watch?v=2EsDfbHP9n8

     

  • ವಿಚ್ಛೇದನ ಕೊಡುವಂತೆ ಒತ್ತಡ ಹೇರಿದ್ದಕ್ಕೆ ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ

    ವಿಚ್ಛೇದನ ಕೊಡುವಂತೆ ಒತ್ತಡ ಹೇರಿದ್ದಕ್ಕೆ ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ

    ಬೆಂಗಳೂರು: ಗಂಡನಿಂದಲೇ ಹೆಂಡತಿ ಬರ್ಬರ ಕೊಲೆಯಾದ ಘಟನೆ ಬೆಂಗಳೂರಿನ ಇಂದಿರಾನಗರದಲ್ಲಿ ನಡೆದಿದೆ.

    45 ವರ್ಷದ ಮಂಜುಳಾ ಕೊಲೆಯಾಗಿದ್ದು, ಪತ್ನಿಯನ್ನ ಕೊಂದು ಆರೋಪಿ ಮೈಲಾರಯ್ಯ ಪೊಲೀಸರಿಗೆ ಶರಣಾಗಿದ್ದಾನೆ. ಆರೋಪಿ ಮೈಲಾರಯ್ಯ ನಗರದ ಕಾಲೇಜೊಂದರಲ್ಲಿ ಲೆಕ್ಚರರ್ ಆಗಿ ಕೆಲಸ ಮಾಡುತ್ತಿದ್ದು, ವಿಚ್ಛೇದನ ಕೊಡುವಂತೆ ಪತ್ನಿ ಒತ್ತಡ ಹೇರಿದ್ದಕ್ಕೆ ಕತ್ತು ಸೀಳಿ ಕೊಲೆ ಮಾಡಿದ್ದಾನೆ.

    ಕೊಲೆಯಾದ ಮಂಜುಳಾ ಇಂದಿರಾ ನಗರ ಕ್ಲಬ್ ನಿಂದ ಮನೆಗೆ ತೆರಳಿದ್ದಳು. ಇದನ್ನ ಪ್ರಶ್ನಿಸಿದ ಪತಿ ಮಂಜುಳಾ ಜೊತೆ ಜಗಳವಾಡಿದ್ದ. ಆಗ ಮಕ್ಕಳು ಕೂಡ ತಾಯಿ ಸಪೋರ್ಟ್‍ಗೆ ಬಂದು ಅಪ್ಪನನ್ನೇ ಮನೆ ಬಿಟ್ಟು ಹೋಗು ಅಂದಿದ್ರು. ಇದ್ರಿಂದ ಕೆರಳಿದ ಮೈಲಾರಯ್ಯ ಪತ್ನಿಯನ್ನ ಕೊಲೆ ಮಾಡಿದ್ದಾನೆ. ಇತ್ತ ಅಮ್ಮನನ್ನ ಕೊಂದ ಅಪ್ಪನಿಗೆ ಮಕ್ಕಳು ಚೆನ್ನಾಗಿ ಥಳಿಸಿದ್ದಾರೆ. ಬಳಿಕ ಮಕ್ಕಳ ಕೈಯಿಂದ ತಪ್ಪಿಸಿಕೊಂಡು ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ.