Tag: indiragandhi

  • ವಿಧವೆಯರಿಗೆ ಪೆನ್ಷನ್, ರೇಷನ್ ಕಾರ್ಡ್ ತಂದಿದ್ದು ಇಂದಿರಾಗಾಂಧಿ ನೇತೃತ್ವದ ಸರ್ಕಾರ: ಉಮಾಶ್ರೀ

    ವಿಧವೆಯರಿಗೆ ಪೆನ್ಷನ್, ರೇಷನ್ ಕಾರ್ಡ್ ತಂದಿದ್ದು ಇಂದಿರಾಗಾಂಧಿ ನೇತೃತ್ವದ ಸರ್ಕಾರ: ಉಮಾಶ್ರೀ

    ಮಂಡ್ಯ: ವಿಧವೆಯರಿಗೆ ಪೆನ್ಷನ್ ಮಾಡಿದ್ದು ಇಂದಿರಾಗಾಂಧಿ, ರೇಷನ್ ಕಾರ್ಡ್ (Ration Card) ತಂದಿದ್ದು ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ (Congress Government). ರೇಷನ್ ಕಾರ್ಡ್ ಕೊಟ್ಟಿದ್ದು ಬಿಜೆಪಿ, ಜೆಡಿಎಸ್ ನಿಂದ ಅಲ್ಲ ಎಂದು ಮಾಜಿ ಸಚಿವೆ ಉಮಾಶ್ರೀ (Umashree) ಹೇಳಿದ್ದಾರೆ.

    ಮಂಡ್ಯ ಜಿಲ್ಲೆಯ ಕೊಪ್ಪದಲ್ಲಿ ನಡೆದ ಕಾಂಗ್ರೆಸ್ ಮಹಿಳಾ ಸಮಾವೇಶದಲ್ಲಿ ಮಾತನಾಡಿದ ಅವರು, ಉಳುವವನೇ ಭೂಮಿಯ ಒಡೆಯ ಎಂದ್ರು. ಅವರು ಇಂದು ನಮ್ಮ ಜೊತೆ ಇಲ್ಲ. ಬಡವರನ್ನ ಎಬ್ಬಿಸಿದ ಆ ತಾಯಿಯನ್ನ ನಾವು ನೆನೆಯಬೇಕು. ಮಹಾತ್ಮಗಾಂಧಿಗೆ ಗುಂಡೇಟು ಹೊಡೆದ ಜನರೇ ಇಂದಿರಾಗಾಂಧಿ ಕೊಂದರು. ಆ ತಾಯಿಗೆ 18 ಗುಂಡುಗಳನ್ನ ಹೊಡೆದ್ರು. ಇಡೀ ದೇಶದ ಜನರಿಂದ ಕಣ್ಣೀರ ಕೋಡಿ ಹರಿಯಿತು. ಅಂತಹ ನಾಯಕಿಯನ್ನ ನಾವು ಇಂದು ನೆನಪಿಸಿಕೊಳ್ಳಬೇಕು ಎಂದರು. ಇದನ್ನೂ ಓದಿ: ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ದರ್ಗಾ ಹೋಲುವ ಕಟ್ಟಡ – ತೆರವಿಗೆ ಸಂಸದ ಪತ್ರ

    ಕಾಂಗ್ರೆಸ್ ಪಕ್ಷಕ್ಕೆ ಮತಹಾಕಬೇಕು. ಕೋಮುವಾದ ಸೃಷ್ಟಿಮಾಡುವ ಬಿಜೆಪಿ ಇಡೀ ದೇಶವನ್ನ ಛಿದ್ರ ಮಾಡಿಬಿಟ್ಟರು. ಬಿಜೆಪಿ ಪಕ್ಷದವರು ಜಾತಿ-ಜಾತಿ, ಧರ್ಮ ಧರ್ಮಗಳ ನಡುವೆ ನಂಜುಕಾರುವ ಆಗೆ ಮಾಡಿದ್ದಾರೆ. ಬಿಜೆಪಿ ಇರುವವರೆಗೂ ಬಡವರು, ರೈತರು ಜೀವನ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿ ಸರ್ಕಾರವನ್ನ ಹಿಟ್ಲರ್ ಆಡಳಿತಕ್ಕೆ ಉಮಾಶ್ರೀ ಹೋಲಿಸಿದರು.

    ಧರ್ಮ, ಸುಳ್ಳುಗಳ ಮೇಲೆ ಬಿಜೆಪಿ ಆಡಳಿತ ನಡೆಸುತ್ತಿದೆ. ಚಿಕ್ಕಮಗಳೂರಿನಲ್ಲಿ ದತ್ತಮಾಲೆ ಕಥೆ. ಮಂಡ್ಯದಲ್ಲಿ ಉರಿಗೌಡ, ನಂಜೇಗೌಡ ಕಥೆ ಕಟ್ತಾರೆ. ಇನ್ನೊಂದು ಕಡೆ ಹಿಜಬ್ ತರ್ತಾರೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತೆ ಅಂತಾ ಬಿಜೆಪಿಗೆ ಉರಿ. ಆದ್ದರಿಂದ ಜನರ ಮನಸ್ಸನಲ್ಲಿ ಕಥೆ ಕಟ್ಟಿ ಬೇರೆ ಕಡೆ ತಿರುಗಿಸುತ್ತಾರೆ ಎಂದು ಹೇಳಿದರು.

    ಗೌಡರು ಬೇಡ, ಲಿಂಗಾಯರು ಬೇಕಾಗಿಲ್ಲ. ಎಲ್ಲ ಜಾತಿಗಳನ್ನ ಛಿದ್ರಮಾಡಬೇಕು, ಮತವಿಭಜನೆ ಮಾಡಬೇಕೆಂಬುದೆ ಬಿಜೆಪಿ (BJP) ತಂತ್ರ. ಬಂಡವಾಳ ಶಾಹಿಗಳನ್ನ ಮೇಲೆ ತರಲು ಈ ರೀತಿ ವಿಷಯ ತರುತ್ತಿದ್ದಾರೆ. ತೇಜಸ್ವಿ ಸೂರ್ಯ ರೈತರ ಸಾಲ ಮಾಡಿದ್ರೆ ದೇಶಕ್ಕೆ ಕಂಟಕ ಅಂತಾರೆ. ಅಯ್ಯೋ ಪುಣ್ಯಾತ್ಮ ನಿನಗೆ ಏನು ಗೊತ್ತಪ್ಪ ಎಂದು ಉಮಾಶ್ರೀ ಪ್ರಶ್ನಿಸಿದರು.

  • ನೀರು ಕೊಟ್ಟಿಲ್ಲವೆಂಬ ಆರೋಪಕ್ಕೆ ದೇವೇಗೌಡ್ರು ಸ್ಪಷ್ಟನೆ

    ನೀರು ಕೊಟ್ಟಿಲ್ಲವೆಂಬ ಆರೋಪಕ್ಕೆ ದೇವೇಗೌಡ್ರು ಸ್ಪಷ್ಟನೆ

    ತುಮಕೂರು: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರು ತುಮಕೂರಿಗೆ ಹೇಮಾವತಿ ನೀರು ಕೊಟ್ಟಿಲ್ಲ ಅನ್ನೋ ಆರೋಪಕ್ಕೆ ಖುದ್ದು ದೇವೇಗೌಡರೇ ತಿರುಗೇಟು ಕೊಟ್ಟಿದ್ದಾರೆ.

    ತುಮಕೂರು ಮಾಧ್ಯಮ ಕೇಂದ್ರಕ್ಕೆ ಭೇಟಿ ಕೊಟ್ಟು ಮಾತನಾಡಿದ ಅವರು, ಎಲ್ಲಾ ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸೋದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ರಾಷ್ಟ್ರದಲ್ಲಿ ಪ್ರಥಮ ಆದ್ಯತೆ ಕುಡಿಯುವ ನೀರಿಗೆ ಕೊಡೋದು ಎಂದು ಹೇಳಿದ್ದಾರೆ.

    ಕೆಲವರು ತಮ್ಮನ್ನು ವಿನಾಕಾರಣ ದೂಷಿಸುತ್ತಾರೆ. ಆದ್ರೆ ವಾಸ್ತವ ಬೇರೆ ಇದೆ. ಈ ಹಿಂದೆ ಇಂದಿರಾಗಾಂಧಿ ಇದ್ದಾಗ ನಾನು ನೀರಾವರಿ ಮಂತ್ರಿಯಾಗಿದ್ದೆನು. ಆ ಸಂದರ್ಭದಲ್ಲಿ ಎರಡು ದಿನ ಚರ್ಚೆಯಾಯ್ತು. ಇಡೀ ಹಿಂದೂಸ್ಥಾನದ ನೀರಾವರಿ ಖಾತೆ ಹೊಂದಿದ ಮಂತ್ರಿಗಳು ಸಭೆ ನಡೆಸಿದ್ರು.

    ನೀರಿನ ಬಳಕೆ ಹಾಗೂ ಎಲ್ಲಾ ನದಿಗಳ ಜೋಡಣೆ ಬಗ್ಗೆ ಅಭಿಪ್ರಾಯ ಕುರಿತು ಇಂದಿರಾಗಾಂಧಿ ಅವರು 2 ಕಮಿಟಿ ಮಾಡಿದ್ರು. ನದಿಗಳ ನೀರು ಎಲ್ಲಿ ಹೆಚ್ಚು ಪ್ರವಾಹ ಹರಿಯುತ್ತೋ, ಅಂತಹ ನದಿಗಳಿಂದ ನೀರು ಸಂಗ್ರಹದ ಬಗ್ಗೆ ಕಮಿಟಿಯಲ್ಲಿ ಚಿಂತನೆ ನಡೆದಿತ್ತು. ಆದ್ರೆ ತುಮಕೂರಿಗೂ ಕುಡಿಯುವ ನೀರಿನ ವಿಚಾರದಲ್ಲಿ ರಾಜಕೀಯ ಏನಿಲ್ಲ ಎಂದು ಗೌಡರು ಸ್ಪಷ್ಟನೆ ನೀಡಿದ್ದಾರೆ.