Tag: Indira Nagar

  • ಕಾರ್ಪೊರೇಟ್ ಕಂಪನಿಗೆ 2 ದಿನದಲ್ಲಿ 12.51 ಕೋಟಿ ವಂಚನೆ; ಬ್ಯಾಂಕ್ ಮ್ಯಾನೇಜರ್ ಸೇರಿ ನಾಲ್ವರ ಬಂಧನ

    ಕಾರ್ಪೊರೇಟ್ ಕಂಪನಿಗೆ 2 ದಿನದಲ್ಲಿ 12.51 ಕೋಟಿ ವಂಚನೆ; ಬ್ಯಾಂಕ್ ಮ್ಯಾನೇಜರ್ ಸೇರಿ ನಾಲ್ವರ ಬಂಧನ

    – ಗುಜರಾತ್ ಬ್ಯಾಂಕ್‌ನ 17 ಖಾತೆಗಳಿಗೆ ಹಣ ವರ್ಗಾವಣೆ

    ಬೆಂಗಳೂರು: ಕಾರ್ಪೊರೇಟ್ ಕಂಪನಿಯೊಂದರ ಇಂಟರ್ನೆಟ್ ಆಕ್ಸೆಸ್ ಪಡೆದು ಖಾಸಗಿ ಬ್ಯಾಂಕ್ ಮ್ಯಾನೇಜರ್ ಒಬ್ಬ 2 ದಿನದಲ್ಲಿ 12 ಕೋಟಿ ರೂ.ಗೂ ಅಧಿಕ ಹಣವನ್ನು ವಂಚಿಸಿರುವ ಘಟನೆ ಬೆಂಗಳೂರಿನ (Bengaluru) ಇಂದಿರಾನಗರದಲ್ಲಿ (Indira Nagar) ನಡೆದಿದೆ.

    ಖಾಸಗಿ ಬ್ಯಾಂಕ್ ಮ್ಯಾನೇಜರ್ ಸೈಬರ್ ವಂಚನೆಯಲ್ಲಿ ಭಾಗಿಯಾಗಿ ಬರೋಬ್ಬರಿ 12 ಕೋಟಿ 51 ಲಕ್ಷ ರೂ. ವಂಚನೆ ಮಾಡಿದ್ದಾನೆ.ಇದನ್ನೂ ಓದಿ: ಮುನಿರತ್ನ ಮೇಲೆ ಮೊಟ್ಟೆ ದಾಳಿ; ಸ್ಥಳ ಮಹಜರು – ಸಿಬಿಐಗೆ ಕೊಡಲಿ ಎಂದ ಡಿಕೆ ಸುರೇಶ್

    ಬೆಂಗಳೂರಿನ ಇಂದಿರಾನಗರದಲ್ಲಿ ಖಾಸಗಿ ಕಂಪನಿಯೊಂದರ ಶಾಖೆಯಿದೆ. ಆ ಶಾಖೆಯಲ್ಲಿ ಕಾರ್ಪೊರೇಟ್ ನೋಡೆಲ್ ಖಾತೆಯನ್ನು ಹೊಂದಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಬ್ಯಾಂಕ್ ಮ್ಯಾನೇಜರ್ ಕಂಪನಿಯ ಕಾರ್ಪೊರೇಟ್ ಇನ್‌ವೆಸ್ಟಮೆಂಟ್ ಬ್ಯಾಂಕಿಂಗ್ ಮನವಿಗೆ ನಿರ್ದೇಶಕರ ನಕಲಿ ಸಹಿ ಮಾಡಿ ಆಕ್ಸೆಸ್ ಪಡೆದುಕೊಂಡರು. ಇದಾದ 2 ದಿನದಲ್ಲಿ 12 ಕೋಟಿ 51 ರೂ. ಲಕ್ಷ ವಂಚನೆ ಮಾಡಿದ್ದಾನೆ.

    ವಂಚನೆ ಸಂಬಂಧ ಕಂಪನಿ ಡೈರೆಕ್ಟರ್ ನರಸಿಂಹ ವಸಂತ ಶಾಸ್ತ್ರಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬ್ಯಾಂಕ್ ಮ್ಯಾನೇಜರ್ ವೈಭವ್ ಪಿತಾಡಿಯಾ ಸೇರಿದಂತೆ ನಾಲ್ವರನ್ನು ಅರೆಸ್ಟ್ ಮಾಡಿದ್ದಾರೆ. ಬಂಧಿತರಿಂದ 1,83,48,000 ರೂ. ನಗದು ವಶಪಡಿಸಿಕೊಂಡಿದ್ದಾರೆ.

    ತನಿಖೆ ನಡೆಸುತ್ತಿರುವ ಪೊಲೀಸರು, ಗುಜರಾತ್ ಬ್ಯಾಂಕ್‌ನ 17 ಅಪರಿಚಿತ ಅಕೌಂಟ್‌ಗಳಿಗೆ ಹಣ ವರ್ಗಾವಣೆ ಮಾಡಲಾಗಿದೆ ಎಂದು ಬಯಲಿಗೆಳೆದಿದ್ದಾರೆ.ಇದನ್ನೂ ಓದಿ: ದುಡ್ಡಿಗಾಗಿ ಸ್ನೇಹಿತನಿಗೆ ಸ್ಕೆಚ್ ಹಾಕಿ ಕೊಲೆ – ದೃಶ್ಯಂ ಸಿನಿಮಾ ಶೈಲಿಯಲ್ಲಿ ಸಾಕ್ಷ್ಯನಾಶ; ಕೊನೆಗೂ ಹಂತಕ ಅಂದರ್

  • ಕರ್ತವ್ಯ ನಿರತ ಟ್ರಾಫಿಕ್ ಪೊಲೀಸ್‍ಗೆ ಕಪಾಳಮೋಕ್ಷ

    ಕರ್ತವ್ಯ ನಿರತ ಟ್ರಾಫಿಕ್ ಪೊಲೀಸ್‍ಗೆ ಕಪಾಳಮೋಕ್ಷ

    ಬೆಂಗಳೂರು: ಕರ್ತವ್ಯ ನಿರತ ಟ್ರಾಫಿಕ್ ಪೊಲೀಸ್ ಅಧಿಕಾರಿಗೆ ಆರೋಪಿಯೊಬ್ಬ ಕಪಾಳಮೋಕ್ಷ ಮಾಡಿರುವ ಘಟನೆ ನಗರದ ಜೆಬಿ ನಗರದಲ್ಲಿ ತಡರಾತ್ರಿ ನಡೆದಿದೆ.

    ರಾಜಸ್ತಾನ ಮೂಲದ ವ್ಯಕ್ತಿ ಜೀವನ್ ಭೀಮಾನಗರ ಟ್ರಾಫಿಕ್ ಸಹಾಯಕ ನಿರೀಕ್ಷಕ (ಎಎಸ್‍ಐ) ಶಿವಪ್ಪ ಅವರಿಗೆ ಕಪಾಳಮೋಕ್ಷ ಮಾಡಿದ್ದು, ಆರೋಪಿಯನ್ನು ಕೇಶವ್ ಗುಪ್ತಾ ಎಂದು ಗುರುತಿಸಲಾಗಿದೆ.

    ಆರೋಪಿ ಕೇಶವ್ ಗುಪ್ತಾ ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಜೆಬಿ ನಗರದಲ್ಲಿ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದ ಎನ್ನಲಾಗಿದೆ. ಈ ವೇಳೆ ಸ್ಥಳದಿಂದ ಪರಾರಿಯಾಗಲು ಕೇಶವ್ ಯತ್ನಿಸಿದ್ದು, ಆ ಸಮಯಕ್ಕೆ ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸರು ಮಾಹಿತಿ ಪಡೆದಿದ್ದಾರೆ. ಅಲ್ಲದೇ ಡ್ರಿಂಕ್ ಅಂಡ್ ಡ್ರೈವ್ ಕೇಸ್ ದಾಖಲಿಸಿ, ವೈದ್ಯಕೀಯ ಪರೀಕ್ಷೆಗೆ ಬರುವಂತೆ ಸೂಚಿಸಿದ್ದಾರೆ.

    ಈ ಹಂತದಲ್ಲಿ ಪೊಲೀಸರ ವಿರುದ್ಧವೇ ತಿರುಗು ಬಿದ್ದ ಆರೋಪಿ ಕೇಶವ್ ನಾನು ರಾಜಸ್ಥಾನಿ ಎಂದು ನನ್ನ ಮೇಲೆ ಕೇಸ್ ದಾಖಲಿಸುತ್ತಿದ್ದಾರೆ ಎಂದು ಆರೋಪಿಸಿ ಎಎಸ್‍ಐಗೆ ಕಾಪಾಳಮೋಕ್ಷ ಮಾಡಿದ್ದಾನೆ. ಅಲ್ಲದೇ ಮಹಿಳಾ ಪಿಎಸ್‍ಐ ವಿದ್ಯಾ ಅವರೊಂದಿಗೂ ಆರೋಪಿ ಅನುಚಿತ ವರ್ತನೆ ತೋರಿದ್ದಾನೆ. ಘಟನೆಯ ಸಂಬಂಧ ನಗರದ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಎಎಸ್‍ಐ ಮತ್ತು ಮಹಿಳಾ ಪಿಎಸ್‍ಐ ಅವರು ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದ ಅಡಿ ದೂರು ದಾಖಲಿಸಿದ್ದಾರೆ. ಆರೋಪಿಯನ್ನು ಇಂದಿರಾ ನಗರದ ಪೊಲೀಸರು ಬಂಧಿಸಿದ್ದಾರೆ.