Tag: Indira Gandhi

  • ಆಪರೇಷನ್‌ ಬ್ಲೂ ಸ್ಟಾರ್‌ ತಪ್ಪು, ಅದಕ್ಕೆ ಇಂದಿರಾ ಗಾಂಧಿ ಪ್ರಾಣವನ್ನೇ ಪಣಕ್ಕಿಟ್ಟರು: ಪಿ.ಚಿದಂಬರಂ

    ಆಪರೇಷನ್‌ ಬ್ಲೂ ಸ್ಟಾರ್‌ ತಪ್ಪು, ಅದಕ್ಕೆ ಇಂದಿರಾ ಗಾಂಧಿ ಪ್ರಾಣವನ್ನೇ ಪಣಕ್ಕಿಟ್ಟರು: ಪಿ.ಚಿದಂಬರಂ

    ನವದೆಹಲಿ: ಆಪರೇಷನ್‌ ಬ್ಲೂ ಸ್ಟಾರ್‌ (Operation Blue Star) ತಪ್ಪು. ಅದಕ್ಕೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ (Indira Gandhi) ಅವರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟರು ಎಂದು ಕಾಂಗ್ರೆಸ್‌ ಹಿರಿಯ ನಾಯಕ, ಮಾಜಿ ಗೃಹ ಸಚಿವ ಪಿ.ಚಿದಂಬರಂ (P.Chidambaram) ಅಭಿಪ್ರಾಯಪಟ್ಟಿದ್ದಾರೆ.

    ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಇಲ್ಲಿ ಯಾವುದೇ ಮಿಲಿಟರಿ ಅಧಿಕಾರಿಗಳಿಗೆ ಅಗೌರವವಿಲ್ಲ. ಆದರೆ, ಅದು (ಬ್ಲೂ ಸ್ಟಾರ್) ಗೋಲ್ಡನ್ ಟೆಂಪಲ್ ಅನ್ನು ಹಿಂಪಡೆಯಲು ತಪ್ಪು ಮಾರ್ಗವಾಗಿತ್ತು. ಕೆಲವು ವರ್ಷಗಳ ನಂತರ, ಸೈನ್ಯವನ್ನು ಹೊರಗಿಡುವ ಮೂಲಕ ಗೋಲ್ಡನ್ ಟೆಂಪಲ್ ಅನ್ನು ಹಿಂಪಡೆಯಲು ಸರಿಯಾದ ಮಾರ್ಗವನ್ನು ನಾವು ಪ್ರದರ್ಶಿಸಿದ್ದೇವೆ. ಬ್ಲೂ ಸ್ಟಾರ್ ತಪ್ಪು ಮಾರ್ಗವಾಗಿತ್ತು. ಆ ತಪ್ಪಿಗೆ ಇಂದಿರಾ ಗಾಂಧಿಯವರು ತಮ್ಮ ಪ್ರಾಣವನ್ನೇ ತೆತ್ತರು ಎಂದು ಹೇಳಿದ್ದಾರೆ. ಇದನ್ನೂ ಓದಿ: ಪ್ರಧಾನಿ ಭೇಟಿಯಾದ ಸೆರ್ಗಿಯೊ ಗೋರ್ – ಟ್ರಂಪ್ ಮೋದಿಯನ್ನ ಗ್ರೇಟ್‌ ಫ್ರೆಂಡ್‌ ಅಂತ ಪರಿಗಣಿಸ್ತಾರೆ: ಯುಎಸ್‌ ರಾಯಭಾರಿ

    ಅಮೃತಸರದ ಗೋಲ್ಡನ್ ಟೆಂಪಲ್ ಸಂಕೀರ್ಣದಿಂದ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆ ನೇತೃತ್ವದ ಉಗ್ರಗಾಮಿಗಳನ್ನು ಹೊಡೆದುರುಳಿಸಲು ಇಂದಿರಾ ಗಾಂಧಿಯವರು 1984 ರ ಜೂನ್‌ನಲ್ಲಿ ಆಪರೇಷನ್ ಬ್ಲೂ ಸ್ಟಾರ್ ನಡೆಸಿದ್ದರು.

    ಈ ಕಾರ್ಯಾಚರಣೆಯಿಂದ ಭಾರೀ ಸಾವು-ನೋವುಗಳು ಸಂಭವಿಸಿದವು. ಇದು ಸಿಖ್‌ರಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಯಿತು. ಕೆಲವೇ ತಿಂಗಳುಗಳ ನಂತರ, ಪ್ರತೀಕಾರವಾಗಿ ಗಾಂಧಿಯನ್ನು ಅವರ ಸಿಖ್ ಅಂಗರಕ್ಷಕರು ಹತ್ಯೆ ಮಾಡಿದರು. ಇದು ದೇಶಾದ್ಯಂತ ಭೀಕರ ಸಿಖ್ ವಿರೋಧಿ ಗಲಭೆಗಳಿಗೆ ಕಾರಣವಾಯಿತು. ಇದನ್ನೂ ಓದಿ: ತಾಲಿಬಾನ್ ಸಚಿವನ ಸುದ್ದಿಗೋಷ್ಠಿಯಲ್ಲಿ ಮಹಿಳಾ ಪತ್ರಕರ್ತರಿಗೆ ನಿಷೇಧ – ನಮ್ಮ ಪಾತ್ರ ಇಲ್ಲ ಅಂತ ಕೇಂದ್ರ ಸ್ಪಷ್ಟನೆ

    ಇಂದಿರಾ ಗಾಂಧಿಯವರ ಅಂಗರಕ್ಷಕರಾಗಿದ್ದ ಬಿಯಾಂತ್ ಸಿಂಗ್ ಮತ್ತು ಸತ್ವಂತ್ ಸಿಂಗ್, 1984ರ ಅಕ್ಟೋಬರ್ 31 ರಂದು ನಿವಾಸದಲ್ಲಿ ಇಂದಿರಾ ಗಾಂಧಿಯನ್ನು ಹತ್ಯೆ ಮಾಡಿದರು.

  • ಮತಗಳ್ಳತನ ಸಂಬಂಧ ತೀರ್ಪಿನ ಬಳಿಕವೇ ತುರ್ತು ಪರಿಸ್ಥಿತಿ ಹೇರಿದ್ದ ಇಂದಿರಾ ಗಾಂಧಿ: ಛಲವಾದಿ ನಾರಾಯಣಸ್ವಾಮಿ

    ಮತಗಳ್ಳತನ ಸಂಬಂಧ ತೀರ್ಪಿನ ಬಳಿಕವೇ ತುರ್ತು ಪರಿಸ್ಥಿತಿ ಹೇರಿದ್ದ ಇಂದಿರಾ ಗಾಂಧಿ: ಛಲವಾದಿ ನಾರಾಯಣಸ್ವಾಮಿ

    – ಆಳಂದ ಆರೋಪಕ್ಕೆ ಛಲವಾದಿ ನಾರಾಯಣಸ್ವಾಮಿ ಟಕ್ಕರ್

    ಬೆಂಗಳೂರು: ಹಿಂದೆ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರ (Indira Gandhi) ಮತಗಳ್ಳತನ ಸಂಬಂಧ ಅಲಹಾಬಾದ್ ಹೈಕೋರ್ಟ್ ತೀರ್ಪು ಕೊಟ್ಟ ಬಳಿಕವೇ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಲಾಗಿತ್ತು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಹೇಳಿದರು.

    ಆಳಂದದಲ್ಲಿ (Alanda) ಮತದಾರರ ಪಟ್ಟಿಯಿಂದ ಹೆಸರು ತೆಗೆದ ವಿಷಯದಲ್ಲಿ ರಾಹುಲ್ ಗಾಂಧಿ ಮತ್ತು ಬಿ.ಆರ್.ಪಾಟೀಲರ ಆರೋಪಕ್ಕೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 1975-76ರಲ್ಲಿ ಈ ದೇಶದಲ್ಲೇ ಒಂದು ದೊಡ್ಡ ಆಂದೋಲನ ಆಗಿತ್ತು. ಆಗಿನ ರಾಷ್ಟ್ರೀಯ ನಾಯಕ ಜಯಪ್ರಕಾಶ್ ನಾರಾಯಣ್ ಅವರು ಅದರ ನೇತೃತ್ವ ವಹಿಸಿದ್ದರು. ದೇಶದಲ್ಲಿ ಮತಚೋರಿ ವಿರುದ್ಧ ಅವರು ಆಕ್ಷೇಪಿಸಿ ಆಂದೋಲನ ಮಾಡಿದ್ದರು ಎಂದು ವಿವರಿಸಿದರು. ಆಗ ಇಂದಿರಾ ಗಾಂಧಿ ಹಠಾವೋ ಕಾರ್ಯಕ್ರಮ ನಡೆದಿತ್ತು ಎಂದರು. ಇದನ್ನೂ ಓದಿ: ಆಳಂದ ಫೈಲ್ಸ್ ಕೇಸ್ ತನಿಖೆಗೆ ಎಸ್‌ಐಟಿ ರಚನೆಗೆ ಕ್ಯಾಬಿನೆಟ್ ಒಲವು

    ಕಳ್ಳ ಮತ್ತೊಬ್ಬನನ್ನು ಕಳ್ಳ ಎನ್ನಲು ಶುರು ಮಾಡಿದ್ದಾನೆ. ಕಳ್ಳ ತಪ್ಪಿಸಿಕೊಳ್ಳಲು ಬೇರೆಯವರನ್ನು ಕಳ್ಳ ಮಾಡಲು ಹೊರಟಿದ್ದಾನೆ ಎಂದು ಟೀಕಿಸಿದರು. ಇದು ರಾಹುಲ್ ಗಾಂಧಿಯವರ ಕೆಲಸ ಎಂದು ದೂರಿದರು. ಇವರು ಮತಪತ್ರ ಬೇಕು ಎನ್ನುತ್ತಾರಲ್ಲವೇ? ಯಾಕೆ? ಬೂತಿನಲ್ಲಿ ಬ್ಯಾಲೆಟ್ ಪೇಪರ್ ಇದ್ದಾಗ ಬೂತನ್ನೇ ಕಳವು ಮಾಡಿದ ಕಾಂಗ್ರೆಸ್ಸಿನವರಿದ್ದಾರೆ. ಅವರ ಮೇಲೆ ಕೋರ್ಟುಗಳಲ್ಲಿ ಇನ್ನೂ ಕೂಡ ಕೆಲವು ಕೇಸುಗಳು ಬಾಕಿ ಇವೆ ಎಂದು ವಿವರಿಸಿದರು. ಇದನ್ನೂ ಓದಿ: ನ.30 ರ ನಂತರ ಭಾರತದ ಮೇಲಿನ ಶೇ.25 ರಷ್ಟು ದಂಡ ಸುಂಕವನ್ನು ಅಮೆರಿಕ ತೆಗೆಯಬಹುದು: CEA

    ರಾಜ್ಯದಲ್ಲೂ ಕಾಂಗ್ರೆಸ್ಸಿನವರು ಬೂತ್‌ಗಳನ್ನು ಹೊತ್ತುಕೊಂಡು ಹೋಗಿ ಕೇಸಾದುದು ನಮಗೆ ನೆನಪಿದೆ. ಬೂತ್ ಒಳಗೆ ಹೋಗಿ ಬ್ಯಾಲೆಟ್ ಪೇಪರ್‌ಗೆ ಶಾಯಿ ಹಾಕಿದ್ದೂ ಇದೆ. ಇವಿಎಂಗಳ ಮೂಲಕ ಪಾರದರ್ಶಕ ಮತದಾನ ನಡೆಯುತ್ತಿದೆ ಎಂದು ನುಡಿದರು. ಇದನ್ನೂ ಓದಿ: ಲಿಂಗಾಯತರನ್ನು ತುಂಡು ತುಂಡು ಮಾಡಲು ಹೇಳಿದ್ಯಾರು- ಪೇಪರ್‌ ಎಸೆದು ಕ್ಯಾಬಿನೆಟ್‌ ಸಭೆಯಲ್ಲಿ ಎಂಬಿಪಿ ರೋಷಾವೇಶ

  • ಸತತ 12ನೇ ಧ್ವಜಾರೋಹಣ, 103 ನಿಮಿಷ ಸುದೀರ್ಘ ಭಾಷಣ – ಇಂದಿರಾ ಗಾಂಧಿ ದಾಖಲೆ ಮುರಿದ ಮೋದಿ

    ಸತತ 12ನೇ ಧ್ವಜಾರೋಹಣ, 103 ನಿಮಿಷ ಸುದೀರ್ಘ ಭಾಷಣ – ಇಂದಿರಾ ಗಾಂಧಿ ದಾಖಲೆ ಮುರಿದ ಮೋದಿ

    ನವದೆಹಲಿ: ಇಡೀ ದೇಶ ಇಂದು 79ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿದೆ. ಕೆಂಪು ಕೋಟೆಯಲ್ಲಿ (Red Fort) ಸತತ 12ನೇ ಬಾರಿಗೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ (PM Modi) ಅವರು, ದೇಶವನ್ನುದ್ದೇಶಿಸಿ ಮ್ಯಾರಥಾನ್‌ ಭಾಷಣ ಮಾಡಿದ್ದಾರೆ.

    ಕೆಂಪು ಕೋಟೆಯಲ್ಲಿ 103 ನಿಮಿಷಗಳ ಕಾಲ ಸುದೀರ್ಘ ಭಾಷಣ (longest Speech) ಮಾಡಿದ ಮೋದಿ ಹಲವು ದಾಖಲೆಗಳನ್ನ ಮುರಿದರು. ಸತತ 12ನೇ ಬಾರಿಗೆ ದೇಶದ ಜನತೆಯನ್ನುದ್ದೇಶಿಸಿ ಭಾಷಣ ಮಾಡಿದ್ದು, ಈ ಮೂಲಕ ಇಂದಿರಾ ಗಾಂಧಿಯವರ ದಾಖಲೆಯನ್ನು ಮುರಿದಿದ್ದಾರೆ. 1966ರ ಜನವರಿಯಿಂದ 1977ರ ಮಾರ್ಚ್‌ ವರೆಗೆ ಹಾಗೂ 1980ರ ಜನವರಿಯಿಂದ 1984ರ ಅಕ್ಟೋಬರ್‌ ವರೆಗೆ ಅಧಿಕಾರದಲ್ಲಿದ್ದ ಇಂದಿರಾ ಗಾಂಧಿ (Indira Gandhi) ಅವರು, ಒಟ್ಟು 16 ಬಾರಿ ಹಾಗೂ ಸತತ 11 ಸಲ ಆಗಸ್ಟ್‌ 15ರಂದು ಧ್ವಜಾರೋಹಣ ಭಾಷಣ ಮಾಡಿದ್ದರು. ಇದೀಗ ಸತತ 12ನೇ ಭಾಷಣ ಮಾಡಿರುವ ಪ್ರಧಾನಿ ಮೋದಿ ಅವರು, ಸತತ 17 ಬಾರಿ (1947–63) ಧ್ವಜಾರೋಹಣ ಭಾಷಣ ಮಾಡಿದ ನೆಹರೂ ನಂತರದ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ರೈತರ ಕಾವಲಿಗೆ ನಾನು ತಡೆ ಗೋಡೆಯಂತೆ ನಿಂತಿದ್ದೇನೆ – ಕೆಂಪು ಕೋಟೆಯಿಂದ ಟ್ರಂಪ್‌ಗೆ ಮೋದಿ ಖಡಕ್ ಸಂದೇಶ

    ಮೋದಿ: ಯಾವ ವರ್ಷ ಎಷ್ಟು ನಿಮಿಷ ಭಾಷಣ?
    2025 – 103 ನಿಮಿಷ
    2024 – 98 ನಿಮಿಷ
    2023 – 90 ನಿಮಿಷ
    2022 – 83 ನಿಮಿಷ
    2021 – 88 ನಿಮಿಷ
    2020 – 90 ನಿಮಿಷ
    2019 – 92 ನಿಮಿಷ
    2018 – 83 ನಿಮಿಷ
    2017 – 56 ನಿಮಿಷ
    2016 – 94 ನಿಮಿಷ
    2015 – 88 ನಿಮಿಷ
    2014 – 64 ನಿಮಿಷ

    ಮೊದಲಿಗೆ 103 ನಿಮಿಷಗಳ ಕಾಲ ಭಾಷಣ, ಮೋದಿಯವರ ಅತಿ ದೊಡ್ಡ ಸ್ವಾತಂತ್ರ್ಯ ದಿನಾಚರಣೆಯ ಭಾಷಣವಾಗಿದ್ದು, ಕಳೆದ ವರ್ಷ ಅವರೇ ಮಾಡಿದ್ದ 98 ನಿಮಿಷಗಳ ಭಾಷಣದ ದಾಖಲೆಯನ್ನ ಹಿಂದಿಕ್ಕಿತು. 2014ರಲ್ಲಿ 64 ನಿಮಿಷಗಳ ಕಾಲ ಭಾಷಣ ಮಾಡಿದ್ದ ಪ್ರಧಾನಿ ಮೋದಿ 2015ರಲ್ಲಿ 88 ನಿಮಿಷಗಳ ಕಾಲ ಭಾಷಣ ಮಾಡುವ ಮೂಲಕ 1947ರಲ್ಲಿ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ 72 ನಿಮಿಷಗಳ ಭಾಷಣದ ದಾಖಲೆ ಮುರಿದಿದ್ದರು. ಇದೀಗ ಕೆಂಪುಕೋಟೆಯಲ್ಲಿ ಸತತ 12ನೇ ಧ್ವಜಾರೋಹಣ ಭಾಷಣ ಮಾಡಿ ಇಂದಿರಾಗಾಂಧಿ ಅವರ ದಾಖಲೆಯನ್ನ ಹಿಂದಿಕ್ಕಿದ್ದಾರೆ. ಇದನ್ನೂ ಓದಿ: ಮೋದಿ ನಾಯಕತ್ವದಲ್ಲಿ ಭಾರತವು ಬೃಹತ್ ಆರ್ಥಿಕ ಶಕ್ತಿಯಾಗಿ ಅವತರಿಸುತ್ತಿದೆ: ಕುಮಾರಸ್ವಾಮಿ ಗುಣಗಾನ

    ಅತಿ ಚಿಕ್ಕ ಭಾಷಣ ಮಾಡಿದ್ದ ನೆಹರೂ, ಇಂದಿರಾ
    ಮಾಜಿ ಪ್ರಧಾನಿಗಳಾದ ನೆಹರು 1954ರಲ್ಲಿ ಮತ್ತು ಇಂದಿರಾ ಗಾಂಧಿ ಅವರು 1966 ರಲ್ಲಿ 14 ನಿಮಿಷಗಳಷ್ಟು ಕಡಿಮೆ ಭಾಷಣ ಮಾಡಿದ್ದರು. ಇದು ಅತೀ ಕಡಿಮೆ ಧ್ವಜಾರೋಹಣ ಭಾಷಣ ಎಂದು ದಾಖಲೆಯಾಗಿದೆ. 2012 ಮತ್ತು 2013ರಲ್ಲಿ ಮನಮೋಹನ್‌ ಸಿಂಗ್‌ ಅವರು ಕ್ರಮವಾಗಿ 32 ಮತ್ತು 35 ನಿಮಿಷಗಳಷ್ಟು ಭಾಷಣ ಮಾಡಿದ್ದರು. 2002 ಹಾಗೂ 2003ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಭಾಷಣಗಳು ಕ್ರಮವಾಗಿ 25 ಮತ್ತು 30 ನಿಮಿಷಗಳಷ್ಟು ಮಾತ್ರವೇ ಇದ್ದವು. ಇದನ್ನೂ ಓದಿ: ದೇಶದ ಜನತೆಗೆ ಮೋದಿ ದೀಪಾವಳಿ ಡಬಲ್‌ ಗಿಫ್ಟ್‌ – ತೆರಿಗೆ ಇಳಿಕೆ, ಯುವಜನತೆಗೆ ವಿಕಸಿತ ಭಾರತ ರೋಜ್‌ಗಾರ್‌ ಯೋಜನೆ

  • ರಾಹುಲ್ ಗಾಂಧಿ ಅಜ್ಜಿಯೇ ಮತಗಳ್ಳತನದಿಂದ ಗೆದ್ದಿದ್ರು: ಆರಗ ಜ್ಞಾನೇಂದ್ರ

    ರಾಹುಲ್ ಗಾಂಧಿ ಅಜ್ಜಿಯೇ ಮತಗಳ್ಳತನದಿಂದ ಗೆದ್ದಿದ್ರು: ಆರಗ ಜ್ಞಾನೇಂದ್ರ

    ಶಿವಮೊಗ್ಗ: ಕಾಂಗ್ರೆಸ್‍ಗೆ (Congress) ಮತಗಳ್ಳತನದ ಹಿನ್ನೆಲೆ ಬಹಳ ಹಿಂದಿನಿಂದಲೂ ಇದೆ. ರಾಹುಲ್ ಗಾಂಧಿಯವರ (Rahul Gandhi) ಅಜ್ಜಿಯೇ (Indira Gandhi) ಇದರಿಂದ ಗೆದ್ದಿದ್ದರು ಎಂದು ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ (Araga Jnanendra) ಆರೋಪಿಸಿದ್ದಾರೆ.

    ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ಮತಗಳ್ಳತನ ಆರೋಪ ಮಾಡಿ ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡುತ್ತಿರುವ ರಾಹುಲ್ ಗಾಂಧಿಯವರ ವಿಚಾರಕ್ಕೆ ಪ್ರತಿಕ್ರಿಯಿಸಿದರು. ದೇಶದ ತುರ್ತು ಪರಿಸ್ಥಿತಿಗೂ ಮೊದಲೇ ಮತಗಳ್ಳತನ ನಡೆದಿದೆ. ರಾಯ್‍ಬರೇಲಿಯಲ್ಲಿ ರಾಜ್ ನಾರಾಯಣ್ ವಿರುದ್ಧ ಇಂದಿರಾ ಗಾಂಧಿ ಮತಗಳ್ಳತನದಿಂದ ಗೆದ್ದಿದ್ದರು. ಈಗ ರಾಹುಲ್ ಅವರು ಪ್ರಚಾರಕ್ಕಾಗಿ ಮತಗಳ್ಳತನದ ಆರೋಪ ಮಾಡಿ ಪ್ರತಿಭಟನೆ ಮಾಡುತ್ತಿದ್ದಾರೆ ತಿರುಗೇಟುಕೊಟ್ಟಿದ್ದಾರೆ. ಇದನ್ನೂ ಓದಿ: ಸಂವಿಧಾನ, ಮತದಾನದ ಹಕ್ಕು ರಕ್ಷಣೆಗಾಗಿ ರಾಹುಲ್ ಗಾಂಧಿ ಹೋರಾಟಕ್ಕೆ ಸಂಪೂರ್ಣ ಬೆಂಬಲ: ಡಿಕೆಶಿ

    ಅಲಹಾಬಾದ್ ಹೈಕೋರ್ಟ್ ಇಂದಿರಾಗಾಂಧಿಯವರ ಸದಸ್ಯತ್ವ ರದ್ದು ಮಾಡಿತ್ತು. ಆಗ ಅವರು ಸುಪ್ರೀಂ ಕೋರ್ಟ್‍ಗೆ ಹೋಗಿದ್ದರು. ಅಲಹಾಬಾದ್ ಕೋರ್ಟ್ ತೀರ್ಪನ್ನ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿತ್ತು. ಸುಪ್ರೀಂ ಕೋರ್ಟ್ ಹೇಳಿದ್ರೂ ಅಧಿಕಾರದಿಂದ ಅವರು ಕೆಳಗೆ ಇಳಿಯಲಿಲ್ಲ. ತುರ್ತು ಪರಿಸ್ಥಿತಿ ಹೇರಿ ದಬ್ಬಾಳಿಕೆ ಮಾಡಿದ್ರು. ಪ್ರಜಾಪ್ರಭುತ್ವದ ಕತ್ತು ಹಿಸುಕಿದ್ದು ಕಾಂಗ್ರೆಸ್, ರಾಹುಲ್ ಇದನ್ನ ಅರ್ಥ ಮಾಡಿಕೊಳ್ಳಲಿ. 50 ವರ್ಷ ಆಗಿದೆ, ದೇಶದ ಜನರಿಗೂ ಮರೆತು ಹೋಗಿದೆ ಎಂದು ಅವರು ಭಾವಿಸಿದ್ದಾರೆ.

    ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡೋಕೆ ನಾಚಿಕೆ ಆಗಬೇಕು. ಚುನಾವಣೆ ಬಳಿಕ ತಕ್ಷಣ ಆಕ್ಷೇಪ ಸಲ್ಲಿಸಲು ಅವಕಾಶವಿತ್ತು. ಇವರ ಬಿಎಲ್‍ಎಗಳು ಮತಗಟ್ಟೆಗಳಲ್ಲಿ ಏನು ಮಾಡುತ್ತಿದ್ದರು? ಮತಗಟ್ಟೆಗಳಲ್ಲಿ ಬಿಎಲ್‍ಎ ನೇಮಕಕ್ಕೆ ಚುನಾವಣಾ ಆಯೋಗ ಅವಕಾಶ ನೀಡಿತ್ತು ಆಗ ಯಾರು ತಕರಾರು ಮಾಡಿಲ್ಲ. ಚುನಾವಣೆ ಮುಗಿದ ಮೂರು ತಿಂಗಳವರೆಗೆ ತಕರಾರು ಸಲ್ಲಿಸಲು ಅವಕಾಶವಿತ್ತು. ಆಪಾದನೆ ನಂತರದಲ್ಲೂ ಚುನಾವಣಾ ಆಯೋಗ ಅಫಿಡವಿಟ್ ಸಲ್ಲಿಸಲು ಹೇಳಿದೆ. ಇವರು ಅಫಿಡವಿಟ್ ಸಲ್ಲಿಸಲು ಸಿದ್ಧರಿಲ್ಲ. ರಾಹುಲ್ ಹೇಳುವ ಮಾತುಗಳಲ್ಲಿ ಅವರಿಗೆ ನಂಬಿಕೆ ಇಲ್ಲ. ಜನರ ಕಿವಿಗೆ ಹೂ ಇಡುವ ಕೆಲಸ ಮಾಡ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

    ರಾಜ್ಯದ ಮಹದೇವಪುರ ಕ್ಷೇತ್ರದಲ್ಲಿ ಅಕ್ರಮ ನಡದಿದೆ ಅಂತಾರೆ. ಆಗ ಇಲ್ಲಿ ಯಾವ ಸರ್ಕಾರ ಇತ್ತು? ಇವರ ಅಧಿಕಾರಿಗಳೇ ಇದ್ದರಲ್ವಾ? ಸಿಎಂ ಹಾಗೂ ಇವರ ಅಡಳಿತದ ವಿರುದ್ಧವೇ ರಾಹುಲ್ ಗಾಂಧಿ ಪ್ರತಿಭಟನೆ ಮಾಡ್ತಿದ್ದಾರಾ? ನಿಜಕ್ಕೂ ಸರ್ಕಾರ ವಿಸರ್ಜನೆ ಮಾಡಬೇಕಾದವರು ಸಿದ್ದರಾಮಯ್ಯ. ನಿಮ್ಮ ಸರ್ಕಾರದ ವಿರುದ್ಧವೇ ರಾಹುಲ್ ಕಪಾಳಕ್ಕೆ ಹೊಡೆಯುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಚುನಾವಣಾ ಆಯೋಗ ಬಿಜೆಪಿಯ ಬ್ರ್ಯಾಂಚ್‌ ಆಫೀಸ್‌: ಸಿದ್ದರಾಮಯ್ಯ

  • ಇಂದಿರಾ ದಾಖಲೆ ಬ್ರೇಕ್‌ – 4078 ದಿನ ಪೂರ್ಣ, 10 ಸಾಧನೆ ನಿರ್ಮಿಸಿದ ಮೋದಿ

    ಇಂದಿರಾ ದಾಖಲೆ ಬ್ರೇಕ್‌ – 4078 ದಿನ ಪೂರ್ಣ, 10 ಸಾಧನೆ ನಿರ್ಮಿಸಿದ ಮೋದಿ

    – ತುರ್ತು ಪರಿಸ್ಥಿತಿ ಹೇರದೇ ಪ್ರಜಾಪ್ರಭುತ್ವವನ್ನು ಕೊಲ್ಲದೇ ದಾಖಲೆ
    – ಕಾಂಗ್ರೆಸ್ಸಿಗೆ ಬಿಜೆಪಿ ಗುದ್ದು

    ಬೆಂಗಳೂರು: ತುರ್ತು ಪರಿಸ್ಥಿತಿಯನ್ನು ಹೇರದೆ, ಪ್ರಜಾಪ್ರಭುತ್ವವನ್ನು ಕೊಲ್ಲದೇ ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದಿರಾ ಗಾಂಧಿಯವರ (Indira Gandhi) ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದಿದ್ದಾರೆ ಎಂದು ಬಿಜೆಪಿ ಕಾಂಗ್ರೆಸಿಗೆ ತಿವಿದಿದೆ.

    ಪ್ರಧಾನಿಯಾಗಿ 4,078 ದಿನಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಬಿಜೆಪಿ ಇಂದು ವಿಶೇಷ ಪೋಸ್ಟ್‌ ಹಾಕಿ ನರೇಂದ್ರ ಮೋದಿ ಅವರ 10 ಸಾಧನೆಯನ್ನು ಕೊಂಡಾಡಿದೆ.

    ಪೋಸ್ಟ್‌ನಲ್ಲಿ ಏನಿದೆ?
    ಜುಲೈ 25 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಸತತ 4,078 ದಿನಗಳನ್ನು ಅಧಿಕಾರದಲ್ಲಿ ಪೂರ್ಣಗೊಳಿಸಿದ್ದಾರೆ. ಈ ಮೂಲಕ ಇಂದಿರಾ ಗಾಂಧಿ (1966 ರಿಂದ 1977 ರವರೆಗೆ 4,077 ದಿನಗಳು) ಅವರನ್ನು ಮೀರಿಸುವ ಮೂಲಕ ಅಧಿಕೃತವಾಗಿ ಭಾರತದ ಇತಿಹಾಸದಲ್ಲಿ ಎರಡನೇ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

    ಇದು ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿ ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರ್ಕಾರದ ಮುಖ್ಯಸ್ಥರಾಗಿ ಪ್ರಧಾನಿ ಮೋದಿಯವರ ಸುಮಾರು 24 ವರ್ಷಗಳ ಪ್ರಯಾಣದಲ್ಲಿ ಕೇವಲ ಒಂದು ಮೈಲಿಗಲ್ಲಾಗಿದೆ ಎಂದು ಬಿಜೆಪಿ ಬರೆದಿದೆ. ಇದನ್ನೂ ಓದಿ: ದೇಶದ 2ನೇ ಅತಿ ಸುದೀರ್ಘ ಪ್ರಧಾನಿ ಮೋದಿ ಇಂದಿರಾ ಗಾಂಧಿ ದಾಖಲೆ ಭಗ್ನ

    ಮೋದಿ 10 ಸಾಧನೆಗಳು
    1. ಭಾರತದ ಸ್ವಾತಂತ್ರ್ಯದ ನಂತರ ಜನಿಸಿದ ಮೊದಲ ಮತ್ತು ಏಕೈಕ ಪ್ರಧಾನಿ
    2. ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಕಾಂಗ್ರೆಸ್ಸೇತರ ಪ್ರಧಾನಿ
    3. ಹಿಂದಿ ಮಾತನಾಡದ ರಾಜ್ಯದಿಂದ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಪ್ರಧಾನಿ
    4. ಎಲ್ಲಾ ಪ್ರಧಾನಿಗಳಲ್ಲಿ ಅತಿ ಹೆಚ್ಚು ಕಾಲ ಚುನಾಯಿತ ಸರ್ಕಾರದ (ರಾಜ್ಯ + ಕೇಂದ್ರ) ಮುಖ್ಯಸ್ಥರು
    5. ಎರಡು ಪೂರ್ಣ ಅವಧಿಗಳನ್ನು ಪೂರ್ಣಗೊಳಿಸಿದ ಮೊದಲ ಮತ್ತು ಏಕೈಕ ಕಾಂಗ್ರೆಸ್ಸೇತರ ಪ್ರಧಾನಿ
    6. ಎರಡು ಬಾರಿ ಮರು ಆಯ್ಕೆಯಾದ ಮೊದಲ ಮತ್ತು ಏಕೈಕ ಕಾಂಗ್ರೆಸ್ಸೇತರ ಪ್ರಧಾನಿ
    7. ಸ್ವಂತವಾಗಿ ಲೋಕಸಭೆ ಬಹುಮತವನ್ನು ಗೆದ್ದ ಮೊದಲ ಮತ್ತು ಏಕೈಕ ಕಾಂಗ್ರೆಸ್ಸೇತರ ನಾಯಕ
    8. ಇಂದಿರಾ ಗಾಂಧಿ (1971) ನಂತರ ಬಹುಮತದೊಂದಿಗೆ ಮರು ಆಯ್ಕೆಯಾದ ಮೊದಲ ಹಾಲಿ ಪ್ರಧಾನಿ ಇದನ್ನೂ ಓದಿ: Exclusive: ಸರ್ಕಾರದ ಅಧಿಕಾರಿಗಳ ನಡುವೆಯೇ ಬೀದಿ ಕಾಳಗ – ಸಿಎಂ & ಡಿಸಿಎಂ ವಿಶೇಷಾಧಿಕಾರಿಗಳ ಮಧ್ಯೆ ಜಗಳ
    9. ನೆಹರೂ ಹೊರತುಪಡಿಸಿ ಸತತ ಮೂರು ರಾಷ್ಟ್ರೀಯ ಚುನಾವಣೆಗಳನ್ನು ಗೆದ್ದ ಏಕೈಕ ಪ್ರಧಾನಿ
    10. ಪಕ್ಷದ ನಾಯಕರಾಗಿ ಸತತ ಆರು ಚುನಾವಣೆಗಳನ್ನು ಗೆದ್ದ ಭಾರತದ ಏಕೈಕ ನಾಯಕ:
    🔹 2002 ಗುಜರಾತ್
    🔹 2007 ಗುಜರಾತ್
    🔹 2012 ಗುಜರಾತ್
    🔹 2014 ಲೋಕಸಭೆ
    🔹 2019 ಲೋಕಸಭೆ
    🔹 2024 ಲೋಕಸಭೆ

  • ದೇಶದ 2ನೇ ಅತಿ ಸುದೀರ್ಘ ಪ್ರಧಾನಿ ಮೋದಿ – ಇಂದಿರಾ ಗಾಂಧಿ ದಾಖಲೆ ಭಗ್ನ

    ದೇಶದ 2ನೇ ಅತಿ ಸುದೀರ್ಘ ಪ್ರಧಾನಿ ಮೋದಿ – ಇಂದಿರಾ ಗಾಂಧಿ ದಾಖಲೆ ಭಗ್ನ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಮಾಜಿ ಪ್ರಧಾನಿ ಇಂದಿರಾ ಗಾಂಧಿ ದಾಖಲೆ ಮುರಿದಿದ್ದಾರೆ. ಭಾರತದ ಇತಿಹಾಸದಲ್ಲಿ ಅತಿ ಹೆಚ್ಚು ಕಾಲ ಪ್ರಧಾನಿಯಾಗಿ ಎರಡನೇ ವ್ಯಕ್ತಿ ಮೋದಿ.

    4,078 ದಿನಗಳ ಕಾಲ ಪ್ರಧಾನಿಯಾಗಿ ಅಧಿಕಾರ ನಡೆಸುತ್ತಿದ್ದ, ಪ್ರಧಾನಿ ಮೋದಿ ಸತತ ಮೂರು ಲೋಕಸಭಾ ಚುನಾವಣೆಗಳಲ್ಲಿ ಗೆದ್ದು ಬೀಗಿದ್ದಾರೆ.‌ ಪ್ರಧಾನಿ ನರೇಂದ್ರ ಮೋದಿ ಇವತ್ತಿಗೆ 4,078 ದಿನಗಳನ್ನು ಪೂರೈಸಿದ್ದು, ಮಾಜಿ ಪ್ರಧಾನಿ ಇಂದಿರಾ ಗಾಂಧಿ (Indira Gandhi) 4077 ದಿನಗಳ ಕಾಲ ಪ್ರಧಾನಿ ಆಗಿದ್ದರು. 1966ರ ಜನವರಿ 24 ರಿಂದ 1977ರ ಮಾರ್ಚ್ 24ರ ವರೆಗೆ ಇಂದಿರಾ ಗಾಂಧಿಯವರು 4,077 ದಿನಗಳ ಕಾಲ ಪ್ರಧಾನಿ ಆಗಿದ್ದರು. ಅಲ್ಲದೇ, ಸತತ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಎರಡನೇ ಪ್ರಧಾನಿಯಾಗಿ ಮೋದಿ ದಾಖಲೆ ಬರೆದರೆ, ಮೊದಲ ಸ್ಥಾನದಲ್ಲಿ ಜವಾಹರಲಾಲ್ ನೆಹರೂ ದಾಖಲೆ ಇದೆ. ಇದನ್ನೂ ಓದಿ: Exclusive: ಸರ್ಕಾರದ ಅಧಿಕಾರಿಗಳ ನಡುವೆಯೇ ಬೀದಿ ಕಾಳಗ – ಸಿಎಂ & ಡಿಸಿಎಂ ವಿಶೇಷಾಧಿಕಾರಿಗಳ ಮಧ್ಯೆ ಜಗಳ

    74 ವರ್ಷ ವಯಸ್ಸಿನ ಪ್ರಧಾನಿ ಮೋದಿ, ಸ್ವಾತಂತ್ರ್ಯದ ನಂತರ ಜನಿಸಿದ ಮೊದಲ ಪ್ರಧಾನಿ ಮತ್ತು ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಕಾಂಗ್ರೆಸ್ಸೇತರ ಪ್ರಧಾನಿ ಕೂಡ ಆಗಿದ್ದಾರೆ. ಗುಜರಾತ್‌ನಲ್ಲಿ ಜನಿಸಿದ ಬಿಜೆಪಿ ನಾಯಕ, ಕೇಂದ್ರ ಸರ್ಕಾರದ ಮುಖ್ಯಸ್ಥರಾಗಿ ಎರಡು ಪೂರ್ಣ ಅವಧಿಗಳನ್ನು ಪೂರ್ಣಗೊಳಿಸಿದ ಏಕೈಕ ಕಾಂಗ್ರೆಸ್ಸೇತರ ನಾಯಕ ನರೇಂದ್ರ ಮೋದಿ.

    2002, 2007 ಮತ್ತು 2012 ರಲ್ಲಿ ಗುಜರಾತ್ ವಿಧಾನಸಭಾ ಚುನಾವಣೆಗಳಲ್ಲಿ ಮತ್ತು 2014, 2019 ಮತ್ತು 2024 ರಲ್ಲಿ ನಡೆದ ರಾಷ್ಟ್ರೀಯ ಚುನಾವಣೆಗಳಲ್ಲಿ ಸತತ ಆರು ಚುನಾವಣೆಗಳಲ್ಲಿ ಪಕ್ಷದ ನಾಯಕರಾಗಿ ಗೆದ್ದ ಭಾರತದ ಎಲ್ಲಾ ಪ್ರಧಾನಿಗಳು ಮತ್ತು ಮುಖ್ಯಮಂತ್ರಿಗಳಲ್ಲಿ ಮೋದಿ ಏಕೈಕ ನಾಯಕ ಎಂದು ಬಿಜೆಪಿ ಸಂಭ್ರಮಿಸುತ್ತಿದೆ. ಇದನ್ನೂ ಓದಿ: ನವೀಕರಿಸಬಹುದಾದ ಇಂಧನದಿಂದ 4 ಲಕ್ಷ ಕೋಟಿ ರೂ. ಉಳಿತಾಯ: ಪ್ರಹ್ಲಾದ್ ಜೋಶಿ

  • ಯಾವ ಭಾರತೀಯನು ಎಂದಿಗೂ ಮರೆಯುವುದಿಲ್ಲ: ತುರ್ತು ಪರಿಸ್ಥಿತಿ ಕರಾಳತೆ ನೆನೆದು ಕಾಂಗ್ರೆಸ್‌ ವಿರುದ್ಧ ಮೋದಿ ವಾಗ್ದಾಳಿ

    ಯಾವ ಭಾರತೀಯನು ಎಂದಿಗೂ ಮರೆಯುವುದಿಲ್ಲ: ತುರ್ತು ಪರಿಸ್ಥಿತಿ ಕರಾಳತೆ ನೆನೆದು ಕಾಂಗ್ರೆಸ್‌ ವಿರುದ್ಧ ಮೋದಿ ವಾಗ್ದಾಳಿ

    – ತುರ್ತು ಪರಿಸ್ಥಿತಿ ಕರಾಳತೆ ಅನುಭವಿಸಿದವರು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ: ಪಿಎಂ ಕರೆ

    ನವದೆಹಲಿ: ಯಾವ ಭಾರತೀಯನು ಎಂದಿಗೂ ಮರೆಯುವುದಿಲ್ಲ ಎಂದು ಇಂದಿರಾ ಗಾಂಧಿ ಸರ್ಕಾರ ದೇಶಾದ್ಯಂತ ತುರ್ತು ಪರಿಸ್ಥಿತಿ ಹೇರಿದ್ದ ಸಂದರ್ಭ ನೆನಪಿಸಿಕೊಂಡು ಪ್ರಧಾನಿ ಮೋದಿ (PM Modi) ವಾಗ್ದಾಳಿ ನಡೆಸಿದ್ದಾರೆ.

    ದೇಶದಲ್ಲಿ ತುರ್ತು ಪರಿಸ್ಥಿತಿ (Emergency) ಹೇರಿ ಇಂದಿಗೆ 50 ವರ್ಷ. ಪ್ರಧಾನಿ ನರೇಂದ್ರ ಮೋದಿ ಆ ವರ್ಷಗಳಲ್ಲಿನ ತಮ್ಮ ಅನುಭವ ಮತ್ತು ನಾಯಕನಾಗಿ ಅವರನ್ನು ಹೇಗೆ ರೂಪಿಸಿತು ಎಂಬುದನ್ನು ವಿವರಿಸುವ ಪುಸ್ತಕವನ್ನು ಪ್ರಕಟಿಸಿದ್ದಾರೆ. ಬ್ಲೂಕ್ರಾಫ್ಟ್ ಡಿಜಿಟಲ್ ಫೌಂಡೇಶನ್ ಪ್ರಸ್ತುತಪಡಿಸಿದ ‘ದಿ ಎಮರ್ಜೆನ್ಸಿ ಡೈರೀಸ್’ನಲ್ಲಿ ಉಲ್ಲೇಖವಾಗಿದೆ. ಇದನ್ನೂ ಓದಿ: ಇಂದು ಮಧ್ಯಾಹ್ನ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಬಾಹ್ಯಾಕಾಶಕ್ಕೆ

    ಮೋದಿ ಎಕ್ಸ್‌ ಪೋಸ್ಟ್‌ನಲ್ಲೇನಿದೆ?
    ಭಾರತದ ಪ್ರಜಾಪ್ರಭುತ್ವ ಇತಿಹಾಸದ ಕರಾಳ ಅಧ್ಯಾಯಗಳಲ್ಲಿ ಒಂದಾದ ತುರ್ತು ಪರಿಸ್ಥಿತಿ ಹೇರಿಕೆಗೆ ಇಂದು ಐವತ್ತು ವರ್ಷಗಳು ತುಂಬಿವೆ. ಭಾರತದ ಜನರು ಈ ದಿನವನ್ನು ಸಂವಿಧಾನ ಹತ್ಯೆ ದಿವಸ್ ಎಂದು ಆಚರಿಸುತ್ತಾರೆ. ಈ ದಿನದಂದು, ಭಾರತೀಯ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಮೌಲ್ಯಗಳನ್ನು ಬದಿಗಿಡಲಾಯಿತು, ಮೂಲಭೂತ ಹಕ್ಕುಗಳನ್ನು ಅಮಾನತುಗೊಳಿಸಲಾಯಿತು, ಪತ್ರಿಕಾ ಸ್ವಾತಂತ್ರ್ಯವನ್ನು ಅಳಿಸಿಹಾಕಲಾಯಿತು ಮತ್ತು ಹಲವಾರು ರಾಜಕೀಯ ನಾಯಕರು, ಸಾಮಾಜಿಕ ಕಾರ್ಯಕರ್ತರು, ವಿದ್ಯಾರ್ಥಿಗಳು ಮತ್ತು ಸಾಮಾನ್ಯ ನಾಗರಿಕರನ್ನು ಜೈಲಿಗೆ ಹಾಕಲಾಯಿತು. ಆ ಸಮಯದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರವು ಪ್ರಜಾಪ್ರಭುತ್ವವನ್ನು ಬಂಧನದಲ್ಲಿ ಇರಿಸಿದಂತೆ ಇತ್ತು!

    ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟದಲ್ಲಿ ದೃಢವಾಗಿ ನಿಂತ ಪ್ರತಿಯೊಬ್ಬ ವ್ಯಕ್ತಿಗೂ ನಾವು ನಮಸ್ಕರಿಸುತ್ತೇವೆ! ಭಾರತದಾದ್ಯಂತ, ಎಲ್ಲಾ ಹಂತಗಳಿಂದ, ವೈವಿಧ್ಯಮಯ ಸಿದ್ಧಾಂತಗಳಿಂದ ಬಂದ ಜನರು ಇವರು, ಒಂದೇ ಗುರಿಯೊಂದಿಗೆ ಪರಸ್ಪರ ನಿಕಟವಾಗಿ ಕೆಲಸ ಮಾಡಿದರು. ಭಾರತದ ಪ್ರಜಾಪ್ರಭುತ್ವದ ರಚನೆಯನ್ನು ರಕ್ಷಿಸುವುದು ಮತ್ತು ನಮ್ಮ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಜೀವನವನ್ನು ಮುಡಿಪಾಗಿಟ್ಟ ಆದರ್ಶಗಳನ್ನು ಸಂರಕ್ಷಿಸುವುದು. ಆಗಿನ ಕಾಂಗ್ರೆಸ್ ಸರ್ಕಾರವು ಪ್ರಜಾಪ್ರಭುತ್ವವನ್ನು ಪುನಃಸ್ಥಾಪಿಸಲು ಮತ್ತು ಹೊಸ ಚುನಾವಣೆಗಳಿಗೆ ಕರೆ ನೀಡಬೇಕಾಗಿತ್ತು ಎಂದು ಖಚಿತಪಡಿಸಿದ್ದು ಅವರ ಸಾಮೂಹಿಕ ಹೋರಾಟ, ಆದರೆ ಅವರು ಅದನ್ನು ತೀವ್ರವಾಗಿ ಸೋತರು.

    ನಮ್ಮ ಸಂವಿಧಾನದಲ್ಲಿನ ತತ್ವಗಳನ್ನು ಬಲಪಡಿಸುವ ಮತ್ತು ವಿಕಸಿತ ಭಾರತದ ನಮ್ಮ ದೃಷ್ಟಿಕೋನವನ್ನು ಸಾಕಾರಗೊಳಿಸಲು ಒಟ್ಟಾಗಿ ಕೆಲಸ ಮಾಡುವ ನಮ್ಮ ಬದ್ಧತೆಯನ್ನು ನಾವು ಪುನರುಚ್ಚರಿಸುತ್ತೇವೆ. ನಾವು ಪ್ರಗತಿಯ ಹೊಸ ಎತ್ತರವನ್ನು ಏರೋಣ ಮತ್ತು ಬಡವರು ಮತ್ತು ದೀನದಲಿತರ ಕನಸುಗಳನ್ನು ನನಸಾಗಿಸೋಣ.

    ‘ದಿ ಎಮರ್ಜೆನ್ಸಿ ಡೈರೀಸ್’ ತುರ್ತು ಪರಿಸ್ಥಿತಿಯ ವರ್ಷಗಳಲ್ಲಿ ನನ್ನ ಪ್ರಯಾಣವನ್ನು ವಿವರಿಸುತ್ತದೆ. ಅದು ಆ ಕಾಲದ ಅನೇಕ ನೆನಪುಗಳನ್ನು ಮರಳಿ ತಂದಿತು. ತುರ್ತು ಪರಿಸ್ಥಿತಿಯ ಆ ಕರಾಳ ದಿನಗಳನ್ನು ನೆನಪಿಸಿಕೊಳ್ಳುವ ಎಲ್ಲರೂ ಅಥವಾ ಆ ಸಮಯದಲ್ಲಿ ಬಳಲಿದ ಕುಟುಂಬಗಳು ತಮ್ಮ ಅನುಭವಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲು ನಾನು ಕರೆ ನೀಡುತ್ತೇನೆ. ಇದು 1975 ರಿಂದ 1977 ರವರೆಗಿನ ನಾಚಿಕೆಗೇಡಿನ ಸಂದರ್ಭವು ಯುವಕರಲ್ಲಿ ಜಾಗೃತಿ ಮೂಡಿಸುತ್ತದೆ. ಇದನ್ನೂ ಓದಿ: ಶಾಸಕರ ಅಸಮಾಧಾನ ಎಲ್ಲವನ್ನೂ ಸಿಎಂ ಹ್ಯಾಂಡಲ್ ಮಾಡ್ತಾರೆ: ಸಚಿವ ಎಂಬಿ ಪಾಟೀಲ್

    ತುರ್ತು ಪರಿಸ್ಥಿತಿ ಹೇರಿದಾಗ, ನಾನು ಯುವ ಆರ್‌ಎಸ್‌ಎಸ್ ಪ್ರಚಾರಕನಾಗಿದ್ದೆ. ತುರ್ತು ಪರಿಸ್ಥಿತಿ ವಿರೋಧಿ ಚಳುವಳಿ ನನಗೆ ಕಲಿಕೆಯ ಅನುಭವವಾಗಿತ್ತು. ಇದು ನಮ್ಮ ಪ್ರಜಾಪ್ರಭುತ್ವ ಚೌಕಟ್ಟನ್ನು ಸಂರಕ್ಷಿಸುವ ಚೈತನ್ಯವನ್ನು ಪುನರುಚ್ಚರಿಸಿತು. ಅದೇ ಸಮಯದಲ್ಲಿ, ರಾಜಕೀಯ ವರ್ಣಪಟಲದಾದ್ಯಂತ ಜನರಿಂದ ನಾನು ಬಹಳಷ್ಟು ಕಲಿಯಲು ಸಾಧ್ಯವಾಯಿತು. ಬ್ಲೂಕ್ರಾಫ್ಟ್ ಡಿಜಿಟಲ್ ಫೌಂಡೇಶನ್ ಆ ಅನುಭವಗಳಲ್ಲಿ ಕೆಲವನ್ನು ಪುಸ್ತಕ ರೂಪದಲ್ಲಿ ಸಂಗ್ರಹಿಸಿದೆ ಎಂದು ನನಗೆ ಸಂತೋಷವಾಗಿದೆ. ಅದರ ಮುನ್ನುಡಿಯನ್ನು ಸ್ವತಃ ತುರ್ತು ಪರಿಸ್ಥಿತಿ ವಿರೋಧಿ ಚಳುವಳಿಯ ಪ್ರಮುಖರಾದ ಹೆಚ್‌.ಡಿ.ದೇವೇಗೌಡರು ಬರೆದಿದ್ದಾರೆ ಎಂದು ಮೋದಿ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

  • ಕಾಂಗ್ರೆಸ್‌ನಿಂದ ಇಂದಿರಾಗಾಂಧಿ ಪೋಸ್ಟರ್ – ಬಿಜೆಪಿ ಕಿಡಿ

    ಕಾಂಗ್ರೆಸ್‌ನಿಂದ ಇಂದಿರಾಗಾಂಧಿ ಪೋಸ್ಟರ್ – ಬಿಜೆಪಿ ಕಿಡಿ

    ಬೆಂಗಳೂರು: ದೇಶವು ಒಗ್ಗಟ್ಟಿನಲ್ಲಿರುವ ಸಂದರ್ಭದಲ್ಲಿ ಇಂದಿರಾಗಾಂಧಿಗೆ (Indira Gandhi) ಹೋಲಿಕೆ ಮಾಡುವ ಕಾಂಗ್ರೆಸ್ಸಿನವರು (Congress) ಮೊದಲು ಒಡಕು ಮಾತುಗಳನ್ನು ನಿಲ್ಲಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ (R Ashok) ಖಂಡಿಸಿದ್ದಾರೆ.ಇದನ್ನೂ ಓದಿ: ಪಕ್ಷಾತೀತವಾಗಿ ಮೇ 15ರಿಂದ 23ರವರೆಗೆ ಕರ್ನಾಟಕದಲ್ಲಿ ತಿರಂಗಾ ಯಾತ್ರೆ: ಆರ್.ಅಶೋಕ್

    ಬೆಂಗಳೂರಿನಲ್ಲಿ ಮಾತನಾಡಿದ ಅವರು, `ಆಪರೇಷನ್ ಸಿಂಧೂರ’ (Operation Sindoor) ಕಾರ್ಯಾಚರಣೆಗೂ ಮೊದಲು ಕಾಂಗ್ರೆಸ್‌ನವರು ಯುದ್ಧ ಬೇಡ, ಅದರ ಅವಶ್ಯಕತೆ ಇದೆಯೇ ಎಂದು ಹೇಳುತ್ತಿದ್ದರು. ಆಪರೇಷನ್ ಸಿಂಧೂರ ಪ್ರಾರಂಭವಾದ ಮೇಲೆ ಶಾಂತಿ ಸ್ಥಾಪನೆ ಮಾಡಬೇಕೆಂದು ಹೇಳಿಕೆ ನೀಡಿದ್ದರು. ಬಳಿಕ ಕದನ ವಿರಾಮ ಘೋಷಣೆಯಾದ ಮೇಲೆ ಏತಕ್ಕೆ ಯುದ್ಧ ನಿಲ್ಲಿಸಿದ್ದಾರೆ ಎಂದು ಪ್ರಶ್ನಿಸಿದ್ದಾರೆ ಎಂದು ಟೀಕಿಸಿದರು.

    ಕಾಂಗ್ರೆಸ್ ಹೇಳಿಕೆಯಲ್ಲಿನ ನಿಲುವು ಮತ್ತು ಉದ್ದೇಶ ಏನು ಎಂಬುದನ್ನು ಮೊದಲು ತಿಳಿಸಬೇಕು. ಪಾಕಿಸ್ತಾನವು ಭಯೋತ್ಪಾದನೆ ಮೂಲಕ ಭಾರತದ ಮೇಲೆ ದಾಳಿ ಮಾಡಿರುವುದಕ್ಕೆ ತಕ್ಕ ಉತ್ತರ ನೀಡುವ ಸಂದರ್ಭದಲ್ಲಿ ಸಂಸತ್ತಿನಲ್ಲಿ ಅಧಿವೇಶನ ಕರೆಯಬೇಕು, ಚರ್ಚೆಯಾಗಬೇಕು ಎಂಬ ಹೇಳಿಕೆಗಳನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.ಇದನ್ನೂ ಓದಿ: ಬೆಂಗಳೂರಿನ ಹಲವೆಡೆ ಆಲಿಕಲ್ಲು ಮಳೆ

  • ಇಂದಿರಾ ಗಾಂಧಿ ವಿರುದ್ಧ ಘೋಷಣೆ ಕೂಗಿದ್ದಕ್ಕೆ ನನ್ನನ್ನು 7 ದಿನ ಜೈಲಿಗೆ ಹಾಕಿದ್ದರು: ಅಮಿತ್‌ ಶಾ

    ಇಂದಿರಾ ಗಾಂಧಿ ವಿರುದ್ಧ ಘೋಷಣೆ ಕೂಗಿದ್ದಕ್ಕೆ ನನ್ನನ್ನು 7 ದಿನ ಜೈಲಿಗೆ ಹಾಕಿದ್ದರು: ಅಮಿತ್‌ ಶಾ

    ದಿಸ್ಪುರ: ಇಂದಿರಾ ಗಾಂಧಿ ವಿರುದ್ಧ ಘೋಷಣೆ ಕೂಗಿದ್ದಕ್ಕೆ ನನ್ನನ್ನು 7 ದಿನ ಜೈಲಿಗೆ ಹಾಕಿದ್ದರು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ನೆನಪಿಸಿಕೊಂಡಿದ್ದಾರೆ.

    ಡೆರ್ಗಾಂವ್‌ನಲ್ಲಿ ಲಚಿತ್ ಬರ್ಫುಕನ್ ಪೊಲೀಸ್ ಅಕಾಡೆಮಿಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಹಿತೇಶ್ವರ ಸೈಕಿಯಾ ಅಸ್ಸಾಂ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನನ್ನನ್ನು ಬಂಧಿಸಿ ಜೈಲಿಗಟ್ಟಿದ್ದರು. 7 ದಿನ ಜೈಲೂಟ ಮಾಡುವಂತಾಯಿತು ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಹುಲ್‌ ಸೂಚನೆ ಮೇರೆಗೆ ರಾಜ್ಯದಲ್ಲಿ ಮುಸ್ಲಿಮರಿಗೆ ಮೀಸಲಾತಿ: ರವಿಶಂಕರ್ ಪ್ರಸಾದ್ ಕಿಡಿ

    ಅಸ್ಸಾಂನಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ನನ್ನನ್ನು ಥಳಿಸಿದ್ದರು. ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ವಿರುದ್ಧ ‘ಅಸ್ಸಾಂ ಕಿ ಗಾಳಿಯಾ ಸುನಿ ಹೈ, ಇಂದಿರಾ ಗಾಂಧಿ ಖೂನಿ ಹೈ’ ಎಂದು ಘೋಷಣೆಗಳನ್ನು ಕೂಗುತ್ತಿದ್ದೆವು. ಇಂದಿರಾ ಅವರ ವಿರುದ್ಧ ಘೋಷಣೆ ಕೂಗಿದ್ದಕ್ಕೆ ನನ್ನನ್ನು ಬಂಧಿಸಿದ್ದರೆಂದು ತಿಳಿಸಿದ್ದಾರೆ.

    ನಾನು ಕೂಡ ಅಸ್ಸಾಂನಲ್ಲಿ ಏಳು ದಿನಗಳ ಕಾಲ ಜೈಲೂಟ ತಿಂದಿದ್ದೇನೆ. ಆಗ ದೇಶಾದ್ಯಂತ ಅಸ್ಸಾಂ ಉಳಿಸಲು ಹೋರಾಟ ನಡೆದಿತ್ತು. ಇಂದು ಅಸ್ಸಾಂ ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಯುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಹರ್ಯಾಣ| ಭೂ ವಿವಾದ; ಬಿಜೆಪಿ ಮಂಡಲ ಅಧ್ಯಕ್ಷನ ಭೀಕರ ಹತ್ಯೆ

    ಅಸ್ಸಾಂನ ಗೋಲಾಘಾಟ್ ಜಿಲ್ಲೆಯಲ್ಲಿ ಲಚಿತ್ ಬರ್ಫುಕನ್ ಅವರ ಹೆಸರಿನ ನವೀಕರಿಸಿದ ಪೊಲೀಸ್ ಅಕಾಡೆಮಿಯನ್ನು ಅಮಿತ್ ಶಾ ಉದ್ಘಾಟಿಸಿದ್ದಾರೆ. ಗೃಹ ಸಚಿವರೊಂದಿಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್ ಇತರರು ಇದ್ದರು.

  • ಇಂದಿರಾ ಗಾಂಧಿಗೆ ಸಚಿವನಿಂದ ಅವಮಾನ; ಕಾಂಗ್ರೆಸ್ ಶಾಸಕರ ಅಮಾನತು – ರಾಜಸ್ಥಾನದಲ್ಲಿ ಬೃಹತ್ ಪ್ರತಿಭಟನೆ

    ಇಂದಿರಾ ಗಾಂಧಿಗೆ ಸಚಿವನಿಂದ ಅವಮಾನ; ಕಾಂಗ್ರೆಸ್ ಶಾಸಕರ ಅಮಾನತು – ರಾಜಸ್ಥಾನದಲ್ಲಿ ಬೃಹತ್ ಪ್ರತಿಭಟನೆ

    ಜೈಪುರ್‌: ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ (Indira Gandhi) ಬಗ್ಗೆ ಸಚಿವರ ಹೇಳಿಕೆ ಖಂಡಿಸಿ ಹಾಗೂ ಅದನ್ನು ವಿರೋಧಿಸಿ ಪ್ರತಿಭಟಿಸಿದ್ದ ಆರು ಕಾಂಗ್ರೆಸ್‌ ಶಾಸಕರ ಅಮಾನತು ವಿರೋಧಿಸಿ ರಾಜಸ್ಥಾನ (Rajasthan) ವಿಧಾನಸಭೆಯ ಹೊರಗೆ ಕಾಂಗ್ರೆಸ್ (Congress) ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ.

    ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಬಗ್ಗೆ ಸಚಿವ ಅವಿನಾಶ್ ಗೆಹ್ಲೋಟ್ (Avinash Gehlot) ನೀಡಿದ ಹೇಳಿಕೆಯನ್ನು ವಿರೋಧಿಸಿ, ಕಾಂಗ್ರೆಸ್ ಕಾರ್ಯಕರ್ತರು ರಾಜಸ್ಥಾನ ವಿಧಾನಸಭೆಯ ಹೊರಗೆ ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿ, ಪ್ರತಿಭಟನಾಕಾರರು ವಿಧಾನಸಭೆ ಆವರಣದ ಕಡೆಗೆ ಮೆರವಣಿಗೆ ನಡೆಸದಂತೆ ಬ್ಯಾರಿಕೇಡ್‌ಗಳನ್ನು ಹಾಕಿ ತಡೆದರು. ಪ್ರತಿಭಟನೆಯ ನೇತೃತ್ವ ವಹಿಸಿದ್ದವರಲ್ಲಿ ಸಂಸದ ಹರೀಶ್ ಮೀನಾ, ಮುರಾರಿ ಮೀನಾ ಮತ್ತು ಮಾಜಿ ಸಚಿವ ಬಿಡಿ ಕಲ್ಲಾ ಸೇರಿದಂತೆ ಇತರ ಹಲವಾರು ಹಿರಿಯ ಕಾಂಗ್ರೆಸ್ ನಾಯಕರು ಸೇರಿದ್ದರು.

    ಕಳೆದ ಶುಕ್ರವಾರ ಗೆಹ್ಲೋಟ್ ಅವರ ಹೇಳಿಕೆಗಳು ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಇದು ಕಾಂಗ್ರೆಸ್ ನಾಯಕರು ವಿಧಾನಸಭೆಯೊಳಗೆ ಧರಣಿ ನಡೆಸಲು ಕಾರಣವಾಯಿತು. ಇನ್ನೂ ಈ ಹೇಳಿಕೆ ಮತ್ತು ಆರು ಕಾಂಗ್ರೆಸ್ ಶಾಸಕರ ಅಮಾನತು ವಿರೋಧಿಸಿ ನಡೆದ ಪ್ರತಿಭಟನೆಗಳಿಂದಾಗಿ ರಾಜಸ್ಥಾನ ವಿಧಾನಸಭೆಯಲ್ಲಿ ಇಂದು ಸಹ (ಫೆ.24) ಗದ್ದಲ ಮುಂದುವರಿದಿತ್ತು.

    ಶುಕ್ರವಾರದ ಪ್ರಶ್ನೋತ್ತರ ಅವಧಿಯಲ್ಲಿ, ಗೆಹ್ಲೋಟ್ ವಿರೋಧ ಪಕ್ಷದತ್ತ ಬೊಟ್ಟು ಮಾಡಿ, “ನೀವು 2023-24ರ ಬಜೆಟ್‌ನಲ್ಲಿ ಮಹಿಳೆಯರ ಹಾಸ್ಟೆಲ್ ಯೋಜನೆಗೆ ನಿಮ್ಮ ʻಅಜ್ಜಿʼ ಇಂದಿರಾ ಗಾಂಧಿಯವರ ಹೆಸರನ್ನು ಇಟ್ಟಿದ್ದೀರಿ, ನೀವು ಯಾವಾಗಲೂ ಹೀಗೆ” ಎಂದು ಟೀಕಿಸಿದ್ದರು. ಈ ಹೇಳಿಕೆಯಿಂದ ಸದನದಲ್ಲಿ ಕೋಲಾಹಲ ಉಂಟಾಗಿ, ಮೂರು ಬಾರಿ ಕಲಾಪ ಮುಂದೂಡಲ್ಪಟ್ಟಿತು. ಈ ವೇಳೆ ಉಂಟಾದ ಗದ್ದಲದ ಪರಿಣಾಮ ಪಿಸಿಸಿ ಮುಖ್ಯಸ್ಥ ಗೋವಿಂದ್ ಸಿಂಗ್ ದೋಟಸಾರ ಸೇರಿದಂತೆ ಆರು ಕಾಂಗ್ರೆಸ್ ಶಾಸಕರನ್ನು ಅಮಾನತುಗೊಳಿಸಲಾಗಿತ್ತು.

    ಸೋಮವಾರ, ಅಮಾನತುಗೊಂಡ ಶಾಸಕರನ್ನು ಹೊರಹೋಗುವಂತೆ ಸ್ಪೀಕರ್ ಕೇಳಿಕೊಂಡರು, ಆದರೆ ಅವರು ನಿರಾಕರಿಸಿದ್ದರಿಂದ ಹಲವು ಬಾರಿ ಕಲಾಪ ಮುಂದೂಡಲಾಯಿತು. ಅಮಾನತುಗೊಂಡ ಸದಸ್ಯರನ್ನು ಹೊರಹಾಕಲು ಮಾರ್ಷಲ್‌ಗಳನ್ನು ಕರೆಸಲಾಗಿತ್ತು.