Tag: Indira Canteen

  • ಬಿಬಿಎಂಪಿಯಲ್ಲಿ ದುಡ್ಡಿಲ್ಲ, ಸರ್ಕಾರವೂ ಕೊಡ್ತಿಲ್ಲ- ಸಂಕಷ್ಟದಲ್ಲಿದ್ದಾರೆ ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರು!

    ಬಿಬಿಎಂಪಿಯಲ್ಲಿ ದುಡ್ಡಿಲ್ಲ, ಸರ್ಕಾರವೂ ಕೊಡ್ತಿಲ್ಲ- ಸಂಕಷ್ಟದಲ್ಲಿದ್ದಾರೆ ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರು!

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಇಂದಿರಾ ಕ್ಯಾಂಟೀನ್ ಗೆ ಕೊಟಿ ಕೋಟಿ ಹಣ ಬಿಡುಗಡೆಯಾಬೇಕಾಗಿದೆ. ಇದೀಗ ಬಿಬಿಎಂಪಿ ಈ ಅನುದಾನಕ್ಕೆ ಸಕಾರದ ಕಡೆ ತಿರುಗಿದೆ.

    ಬಡವರ ಹಸಿವು ನೀಗಿಸುವ ಇಂದಿರಾ ಕ್ಯಾಂಟೀನ್ ಗೆ ಕೊಡಲು ಸರ್ಕಾರದ ಬಳಿ ಹಣ ಇಲ್ವಾ ಅನ್ನೋ ಪ್ರಶ್ನೆ ಇದೀಗ ಮೂಡಿದೆ. 198 ಕ್ಯಾಂಟೀನ್ ಗಳಿಗೆ 130 ಕೋಟಿ ರೂ. ನೀಡುವುದಾಗಿ ಸಿದ್ದರಾಮಯ್ಯ ಅವರ ಸರ್ಕಾರ ಹೇಳಿತ್ತು. ಆದ್ರೆ 100 ಕೋಟಿ ಮಾತ್ರ ಬಿಡುಗಡೆಯಾಗಿದ್ದು, ಅದೂ ಕೂಡ ನಗರೋತ್ಥಾನ ನಿಧಿಯಿಂದ ಅನ್ನೋ ಮಾಹಿತಿ ಪಬ್ಲಿಕ್ ಟಿವಿಗೆ ಲಭಿಸಿದೆ.

    ಸಿದ್ದರಾಮಯ್ಯ ಸರ್ಕಾರ ಪೂರ್ತಿ ಅನುದಾನ ಕೊಡಲಿಲ್ಲ, ಮೈತ್ರಿ ಸರ್ಕಾರವೂ ಕೊಡೋ ಮನಸು ಮಾಡ್ತಿಲ್ಲ. ಹೀಗಾಗಿ ಬಿಬಿಎಂಪಿ ನೀಡಬೇಕಿದೆ ಬಾಕಿ 35 ಕೋಟಿ ರೂಪಾಯಿಯನ್ನು ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರಿಗೆ ನೀಡಬೇಕಾಗಿದೆ. ಬಿಬಿಎಂಪಿಯಲ್ಲಿ ದುಡ್ಡಿಲ್ಲ, ಸರ್ಕಾರವು ಕೊಡ್ತಿಲ್ಲ. ಹೀಗಾಗಿ ಗುತ್ತಿಗೆದಾರರು ಸಂಕಷ್ಟದಲ್ಲಿ ಕ್ಯಾಂಟೀನ್ ನಡೆಸುತ್ತಿದ್ದಾರೆ.

    ಬಿಜೆಪಿ ನಾಯಕ ಪದ್ಮನಾಭರೆಡ್ಡಿ ಪ್ರಶ್ನೆಗೆ ಬಿಬಿಎಂಪಿ ಬರೆದ ಪತ್ರದಲ್ಲಿ ಈ ಎಲ್ಲ ವಿಚಾರಗಳು ಬಹಿರಂಗವಾಗಿದೆ.

  • ಅಪ್ಪಾಜಿ-ಇಂದಿರಾ ಕ್ಯಾಂಟೀನ್ ನಡುವೆ ಪೈಪೋಟಿ – ಗೌಡರ ರಾಗಿ ಮುದ್ದೆಗೆ ಹೆಚ್ಚಾಯ್ತು ಬೇಡಿಕೆ!

    ಅಪ್ಪಾಜಿ-ಇಂದಿರಾ ಕ್ಯಾಂಟೀನ್ ನಡುವೆ ಪೈಪೋಟಿ – ಗೌಡರ ರಾಗಿ ಮುದ್ದೆಗೆ ಹೆಚ್ಚಾಯ್ತು ಬೇಡಿಕೆ!

    ಬೆಂಗಳೂರು: ಜೆಡಿಎಸ್‍ನ ಅಪ್ಪಾಜಿ ಕ್ಯಾಂಟೀನ್‍ನ ರಾಗಿ ಮುದ್ದೆ, ಈಗ ಇಂದಿರಾ ಕ್ಯಾಂಟೀನ್ ರೈಸ್ ಬಾತ್‍ನ್ನ ಸೈಡ್ ಹೊಡೆಯೋಕೆ ತಯಾರಿ ನಡೆಸ್ತಿದೆಯಾ..? ಇದೇ ಪ್ರಶ್ನೆ ಈಗ ಮೈತ್ರಿ ಸರ್ಕಾರದ ಅಂಗಳದಲ್ಲಿದೆ. ಬಿಬಿಎಂಪಿಯಲ್ಲಿದ್ದ ಮೈತ್ರಿ ದೋಸ್ತಿ ರಾಜ್ಯ ಸರ್ಕಾರದಲ್ಲಿ ಮುಂದುವರೆದಿದೆ.

    ಈ ಹಿಂದೆ ಕಾಂಗ್ರೆಸ್ ಸರ್ಕಾರ ಬೆಂಗಳೂರು ನಗರದಲ್ಲೆಡೆ ಇಂದಿರಾ ಕ್ಯಾಂಟೀನ್ ತೆರೆಯುವ ಮೂಲಕ ಸಾರ್ವಜನಿಕರಿಂದ ಮೆಚ್ಚುಗೆಯನ್ನು ಪಡೆದಿತ್ತು. ಇದನ್ನು ನೋಡಿದ ಜೆಡಿಎಸ್ ಮುಖಂಡ ಶರವಣ, ಅಪ್ಪಾಜಿ ಕ್ಯಾಂಟೀನ್ ಮಾಡಿದ್ದು. ಇದೀಗ ಕುಮಾರಸ್ವಾಮಿ ಸಿಎಂ ಆಗುತ್ತಿದ್ದಂತೆ ನಗರದೆಲ್ಲೆಡೆ ಅಪ್ಪಾಜಿ ಕ್ಯಾಂಟೀನ್ ತೆರೆಯಬೇಕು ಎಂಬ ಒತ್ತಡಗಳು ಹೆಚ್ಚಾಗಿವೆ.

    ಜೆಡಿಎಸ್‍ನ ಎಲ್ಲಾ ಬಿಬಿಎಂಪಿ ಸದಸ್ಯರು ಅಪ್ಪಾಜಿ ಕ್ಯಾಂಟೀನ್‍ನ ಮೆನುವಿಗೆ ಮೊರೆ ಹೋಗಿದ್ದಾರಂತೆ. ಊಟಕ್ಕೆ ಮುದ್ದೆ, ಬಸ್ಸಾರು, ಸೊಪ್ಪಿನ ಸಾರು, ಮೊಳಕೆ ಕಾಳಿನ ಸಾಂಬಾರ್ ನೀಡುವ ಅಪ್ಪಾಜಿ ಕ್ಯಾಂಟೀನ್‍ಗಳನ್ನ ತೆರೆಯಬೇಕು ಅಂತಾ ಒತ್ತಡ ಹೇರುತ್ತಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿವೆ.

    ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರ ಎರಡೂ ಕಡೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಆಡಳಿತ ನಡೆಯುತ್ತಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಅಪ್ಪಾಜಿ ಕ್ಯಾಂಟೀನ್‍ಗಳನ್ನ ತೆರೆಯುವ ಸಂಬಂಧ, ಜೆಡಿಎಸ್ ಸದಸ್ಯರ ಆಗ್ರಹದ ಬಗ್ಗೆ ಪಾಲಿಕೆ ಮೇಯರ್ ಸಂಪತ್ ರಾಜ್‍ರನ್ನು ಕೇಳಿದ್ರೆ, ಈ ಬಗ್ಗೆ ಮಾಹಿತಿ ಬಂದಿಲ್ಲ. ಆ ವಿಚಾರ ಬಂದಾಗ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ ಎಂದು ಹೇಳುತ್ತಾರೆ.

  • ಚಿತ್ರದುರ್ಗದಲ್ಲಿ ಇಂದಿರಾ ಕ್ಯಾಂಟೀನ್‍ಗೆ ಕಲ್ಲು – ಧಾರವಾಡದಲ್ಲಿ ಬಸ್ ಮೇಲೆ ಕಲ್ಲು ತೂರಾಟ

    ಚಿತ್ರದುರ್ಗದಲ್ಲಿ ಇಂದಿರಾ ಕ್ಯಾಂಟೀನ್‍ಗೆ ಕಲ್ಲು – ಧಾರವಾಡದಲ್ಲಿ ಬಸ್ ಮೇಲೆ ಕಲ್ಲು ತೂರಾಟ

    – ದಾವಣಗೆರೆಯಲ್ಲಿ ಪೊಲೀಸರ ಜೊತೆ ಬಿಜೆಪಿ ಜಟಾಪಟಿ

    ಚಿತ್ರದುರ್ಗ/ ಧಾರವಾಡ / ದಾವಣಗೆರೆ: ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅಧಿಕಾರ ಸ್ವೀಕಾರದ 24 ಗಂಟೆಯೊಳಗೆ ಸಾಲಮನ್ನಾ ಮಾಡ್ತೀನಿ ಅಂತಾ ಹೇಳಿ ಈಗ ನುಣುಚಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಇಂದು ಬಿಜೆಪಿ ಕರ್ನಾಟಕ ಬಂದ್‍ಗೆ ಕರೆ ನೀಡಿತ್ತು. ಕರ್ನಾಟಕ ಬಂದ್ ಗೆ ರಾಜ್ಯಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವಡೆ ಕಲ್ಲು ತೂರಾಟ ಸಹ ನಡೆದಿದೆ.

    ಧಾರವಾಡದಲ್ಲಿ ಒತ್ತಾಯಪೂರ್ವಕವಾಗಿ ಬಿಜೆಪಿ ಕಾರ್ಯಕರ್ತರು ಬಂದ್ ಮಾಡಿಸಲು ಯತ್ನಿಸಿದ್ದಾರೆ. ಮೂರು ಬಸ್‍ಗಳ ಮೇಲೆ ಕಲ್ಲು ತೂರಿ ಗಾಜುಗಳನ್ನ ಪುಡಿ ಪುಡಿ ಮಾಡಿದ್ದಾರೆ. ಅಷ್ಟೇ ಅಲ್ಲ, ಬಸ್‍ಗಾಗಿ ಕಾಯುತ್ತಾ ನಿಂತಿದ್ದ ಪ್ರಯಾಣಿಕರ ಮೇಲೆ ಗೂಂಡಾ ವರ್ತನೆ ತೋರಿದ್ದಾರೆ. ಈ ವೇಳೆ ನಗರದ ಕೋರ್ಟ್ ವೃತ್ತದಲ್ಲಿ ಪ್ರಯಾಣಿಕರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ.

    ಕೋಟೆ ನಾಡು ಚಿತ್ರದುರ್ಗದಲ್ಲಿ ಬಿಜೆಪಿ ಕಾರ್ಯಜಕರ್ತರು ದಾಂಧಲೆ ನಡೆಸಿದ್ದಾರೆ. ಇಲ್ಲಿನ ಯೂನಿಯನ್ ಪಾರ್ಕ್ ನಲ್ಲಿರುವ ಇಂದಿರಾ ಕ್ಯಾಂಟೀನ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ಸಂಬಂಧ ಕೂಡಲೇ ಕಾರ್ಯಾಚರಣೆ ನಡೆಸಿದ ಪೊಲೀಸರು, ಬಿಜೆಪಿ ಕಾರ್ಯಕರ್ತರಾದ ಶಂಭು, ಮಂಜು, ರವಿ ಎಂಬವರನ್ನ ವಶಕ್ಕೆ ಪಡೆದಿದ್ದಾರೆ. ಕಲ್ಲು ತೂರಾಟ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಸ್ಥಳಕ್ಕೆ ಎಸ್ಪಿ ಶ್ರೀನಾಥ್ ಎಂ ಜೋಷಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ದಾವಣಗೆರೆಯಲ್ಲಿ ಸಹ ಒತ್ತಾಯಪೂರ್ವಕ ಬಂದ್ ಮಾಡಲು ಬಿಜೆಪಿ ಕಾರ್ಯಕರ್ತರು ಯತ್ನಿಸಿದ್ದಾರೆ. ಬಂದ್ ಮಾಡದಂತೆ ಸೂಚನೆ ನೀಡಿದ ಪೊಲೀಸರ ಮೇಲೆ ಬಿಜೆಪಿ ಕಾರ್ಯಕರ್ತರು ಮುಗಿಬಿದ್ದಿದ್ದಾರೆ. ಈ ವೇಳೆ ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ.

  • ಫೇಸ್‍ಬುಕ್ ನಲ್ಲಿ ನಯವಾಗಿ ಬಿಜೆಪಿಯ ಕಾಲೆಳೆದ ಟಬು ರಾವ್

    ಫೇಸ್‍ಬುಕ್ ನಲ್ಲಿ ನಯವಾಗಿ ಬಿಜೆಪಿಯ ಕಾಲೆಳೆದ ಟಬು ರಾವ್

    ಬೆಂಗಳೂರು: ಬಿಜೆಪಿ ಮುಖಂಡರೊಬ್ಬರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಪತ್ನಿ ಟಬು ದಿನೇಶ್ ಗುಂಡೂರಾವ್ ಫೇಸ್‍ಬುಕ್‍ನಲ್ಲಿ ನಯವಾಗಿ ಕಾಲೆಳೆದಿದ್ದಾರೆ.

    ಮಹಾಲಕ್ಷ್ಮಿ ಲೇಔಟ್ ಬಿಜೆಪಿ ಅಭ್ಯರ್ಥಿ ನೆಲ ನರೇಂದ್ರ ಬಾಬು ಕಾರ್ಯಕರ್ತರ ಜೊತೆ ಇಂದಿರಾ ಕ್ಯಾಂಟಿನ್ ನಲ್ಲಿ ತಿಂಡಿ ತಿಂದು ಫೋಟೋ ತೆಗೆದುಕೊಂಡಿದ್ದರು. ಈ ಪೋಟೋವನ್ನು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಹಾಕಿದ ಟಬು ಅವರು, ಸಿಎಂ ಸಿದ್ದರಾಮಯ್ಯ ಕೊಡುಗೆಯ ಇಂದಿರಾ ಕ್ಯಾಂಟಿನ್ ನಲ್ಲಿ ಆಹಾರ ಸೇವಿಸಿ ಖುಷಿಯಾಗಿರುವ ಬಿಜೆಪಿಯವರು. ಕಾಂಗ್ರೆಸ್ ಇವರ ಹಸಿವನ್ನು ತಣಿಸಿರುವುದನ್ನ ನೋಡಲು ಖುಷಿಯಾಗುತ್ತೆ ಅಂತ ಲೇವಡಿ ಮಾಡಿದ್ದಾರೆ. ಫೋಟೋ ಇದೀಗ ವೈರಲ್ ಆಗಿದೆ. ಇದನ್ನೂ ಓದಿ: ಮುಲ್ಲಾ ಅಥವಾ ಮೌಲ್ವಿಗೆ ಹೊಡೀಬೇಕು ಅಂತ ಹೇಳಿದ್ರೆ, ನಿಮ್ಮ ಹೆಂಡ್ತಿಯೇ ನಿಮ್ಗೆ ಹೊಡೀತಿದ್ರು: ಗುಂಡೂರಾವ್ ವಿರುದ್ಧ ಸಿಂಹ ಕೆಂಡಾಮಂಡಲ

    ಇತ್ತೀಚೆಗಷ್ಟೇ ಉನ್ನಾವೋ ಅತ್ಯಾಚಾರ ಪ್ರಕರಣ ಸಂಬಂಧ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಟೀಕಿಸಿದ್ದ ದಿನೇಶ್ ಗುಂಡೂರಾವ್ ಅವರನ್ನು ಟೀಕಿಸುವ ಭರದಲ್ಲಿ ಸಂಸದ ಪ್ರತಾಪ್ ಸಿಂಹ ಅವರು ದಿನೇಶ್ ಪತ್ನಿ ಟಬು ಅವರ ಹೆಸರನ್ನು ಪ್ರಸ್ತಾಪ ಮಾಡಿದ್ದರು. ಸಂಸದರ ಹೇಳಿಕೆಗೆ ಟಬು ಅಸಮಾಧಾನ ವ್ಯಕ್ತಪಡಿಸಿದ್ದರು. ಪ್ರತಾಪ್ ಸಿಂಹ ಅವರು ತನ್ನನ್ನು ಮಧ್ಯೆ ಎಳೆದು ತಂದಿರುವುದು ತಪ್ಪು. ದಿನೇಶ್ ಅವರ ಹೇಳಿಕೆ ಸಂಬಂಧ ಅವರು ಏನು ಬೇಕಾದ್ರೂ ಹೇಳಿಕೊಳ್ಳಲಿ. ಆದ್ರೆ ಮಾತಿನ ಭರದಲ್ಲಿ ನನ್ನನ್ನು ಎಳೆದು ತರುವ ಅವಶ್ಯಕತೆ ಏನಿತ್ತು ಅಂತ ಫೇಸ್ ಬುಕ್ ನಲ್ಲಿ ಪ್ರಶ್ನಿಸಿದ್ದರು. ಇದನ್ನೂ ಓದಿ: ಸಂಸದ ಪ್ರತಾಪ್ ಸಿಂಹ ಹೇಳಿಕೆ ವಿರುದ್ಧ ದಿನೇಶ್ ಗುಂಡುರಾವ್ ಪತ್ನಿ ಆಕ್ರೋಶ

  • ಮಂಡ್ಯದಲ್ಲಿ ನೂತನ ಇಂದಿರಾ ಕ್ಯಾಂಟೀನ್ ಉದ್ಘಾಟನೆ – ಉದ್ಘಾಟನೆಯಾದ ಕೆಲವೇ ಗಂಟೆಗಳಲ್ಲಿ ಊಟ ಖಾಲಿ

    ಮಂಡ್ಯದಲ್ಲಿ ನೂತನ ಇಂದಿರಾ ಕ್ಯಾಂಟೀನ್ ಉದ್ಘಾಟನೆ – ಉದ್ಘಾಟನೆಯಾದ ಕೆಲವೇ ಗಂಟೆಗಳಲ್ಲಿ ಊಟ ಖಾಲಿ

    ಮಂಡ್ಯ: ನೂತನವಾಗಿ ಇಂದಿರಾ ಕ್ಯಾಂಟೀನ್ ಉದ್ಘಾಟನೆಯಾಗಿದ್ದು, ಉದ್ಘಾಟನೆಯಾದ ಒಂದೇ ಗಂಟೆಯಲ್ಲಿ ಊಟ ಖಾಲಿಯಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಸಂಜಯ ವೃತ್ತದಲ್ಲಿರುವ ಇಂದು ಇಂದಿರಾ ಕ್ಯಾಂಟೀನ್ ಉದ್ಘಾಟನೆಯಾಗಿದೆ. ಆದ್ದರಿಂದ ಇಂದು ಉಚಿತವಾಗಿ ಊಟ ನೀಡಲಾಗುತ್ತಿತ್ತು. ಕ್ಯಾಂಟೀನ್ ಬಳಿ ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಂತು ಊಟ ಸ್ವೀಕರಿಸುತ್ತಿದ್ದರು. ಆದರೆ ಕ್ಯಾಂಟೀನ್ ಶುರುವಾರ ಕೇವಲ ಒಂದೇ ಗಂಟೆಯಲ್ಲಿ ಊಟ ಖಾಲಿಯಾಗಿದೆ.

    ಸಾರ್ವಜನಿಕರು ಕಡಿಮೆ ದುಡ್ಡಿಗೆ ಊಟ ಮಾಡಬಹುದೆಂದು ಕ್ಯಾಂಟೀನ್ ಗೆ ಬಂದಿದ್ದರು. ಆದರೆ ಕೇವಲ ಒಂದು ಗಂಟೆಯಲ್ಲಿ ಊಟ ಖಾಲಿಯಾಗಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೊದಲ ದಿನವೇ ಒಂದೇ ಒಂದು ಗಂಟೆ ಊಟ ನೀಡಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಪರಿಸ್ಥಿತಿ ಹೇಗೆ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.

  • ಮಹಿಳಾ ದಿನಾಚರಣೆಗೆ ಸರ್ಕಾರದ ಗಿಫ್ಟ್- ಇಂದಿರಾ ಕ್ಯಾಂಟೀನಲ್ಲಿಂದು ಮಹಿಳೆಯರಿಗೆ ಊಟ-ತಿಂಡಿ ಫ್ರೀ

    ಮಹಿಳಾ ದಿನಾಚರಣೆಗೆ ಸರ್ಕಾರದ ಗಿಫ್ಟ್- ಇಂದಿರಾ ಕ್ಯಾಂಟೀನಲ್ಲಿಂದು ಮಹಿಳೆಯರಿಗೆ ಊಟ-ತಿಂಡಿ ಫ್ರೀ

    – ಬಿಎಂಟಿಸಿ ಬಸ್‍ಗಳಲ್ಲಿ ಎಲ್ಲಿ ಬೇಕೋ ಅಲ್ಲೇ ಸಿಗುತ್ತೆ ಸ್ಟಾಪ್

    ಬೆಂಗಳೂರು: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ರಾಜ್ಯ ಸರ್ಕಾರ ಮಹಿಳೆಯರಿಗೆಂದು ಗಿಫ್ಟ್ ನೀಡಿದೆ.

    ಬೆಂಗಳೂರಿನ ಎಲ್ಲಾ ಇಂದಿರಾ ಕ್ಯಾಂಟೀನ್‍ಗಳಲ್ಲಿ ಇಂದು ಮಹಿಳೆಯರಿಗೆ ಊಟ ಉಚಿತ. ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ಸಂಜೆ ಊಟ ಉಚಿತವಾಗಿ ಸಿಗಲಿದೆ.

    ಇದೇ ಹೊತ್ತಲ್ಲಿ ಇವತ್ತಿಂದ ಬಿಎಂಟಿಸಿ ಬಸ್‍ಗಳಲ್ಲಿ ಓಡಾಡೋ ಮಹಿಳೆಯರು ರಾತ್ರಿ 9 ಗಂಟೆಯ ಬಳಿಕ ತಮಗೆ ಎಲ್ಲಿ ಬೇಕೋ ಅಲ್ಲಿ ಸ್ಟಾಪ್ ತೆಗೋಬಹುದು. ಸೇಫ್ ಡ್ರಾಪ್ ಯೋಜನೆಯಡಿ ಒಂದು ತಿಂಗಳ ಕಾಲ ಬೆಂಗಳೂರಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದೆ.

  • ಅಪ್ಪಾಜಿ ಕ್ಯಾಂಟೀನ್ ರಾಗಿ ಮುದ್ದೆಗೆ ಬಹುಪರಾಕ್-ಇಂದಿರಾ ಕ್ಯಾಂಟೀನ್‍ನಲ್ಲೂ ಶುರುವಾಗಲಿದೆ ಹೊಸ ಮೆನು !

    ಅಪ್ಪಾಜಿ ಕ್ಯಾಂಟೀನ್ ರಾಗಿ ಮುದ್ದೆಗೆ ಬಹುಪರಾಕ್-ಇಂದಿರಾ ಕ್ಯಾಂಟೀನ್‍ನಲ್ಲೂ ಶುರುವಾಗಲಿದೆ ಹೊಸ ಮೆನು !

    ಬೆಂಗಳೂರು: ಜೆಡಿಎಸ್‍ನ ಅಪ್ಪಾಜಿ ಕ್ಯಾಂಟೀನ್ ರಾಗಿ ಮುದ್ದೆ, ಇಂದಿರಾ ಕ್ಯಾಂಟೀನ್ ರೈಸ್ ಬಾತ್‍ಗೆ ಸೈಡ್ ಹೊಡೆದು ಬಿಡ್ತಾ..? ಅಪ್ಪಾಜಿ ಕ್ಯಾಂಟೀನ್‍ನ ರಾಗಿ ಮುದ್ದೆಗೆ ಬೆಂಗಳೂರು ಜನ ಫುಲ್ ಮಾರ್ಕ್ಸ ಕೊಟ್ಟಿದ್ದಾರೆ. ಈ ವಿಚಾರ ಬಿಬಿಎಂಪಿಗೂ ಗೊತ್ತಾಗಿದೆ ಅನಿಸುತ್ತೆ. ಹಾಗಾಗಿ ಇಂದಿರಾ ಕ್ಯಾಂಟೀನ್‍ಗೂ ಸದ್ಯದಲ್ಲೇ ರಾಗಿ ಮುದ್ದೆ ಎಂಟ್ರಿ ಕೊಡಲಿದೆ.

    198 ವಾರ್ಡ್ ಗಳಲ್ಲಿ ಸರ್ಕಾರ ಶುರು ಮಾಡಿರೋ ಇಂದಿರಾ ಕ್ಯಾಂಟೀನ್‍ಗಳಿಗಿಂತ ಬೆಂಗಳೂರಿನ ನಾಗರೀಕರ ಮನ ಗೆದ್ದಿರೋದು ಜೆಡಿಎಸ್‍ನ ಅಪ್ಪಾಜಿ ಕ್ಯಾಂಟೀನ್‍ನ ಮುದ್ದೆ ಬಸ್ಸಾರು. ಇದೀಗ ಬಿಬಿಎಂಪಿ ಸಹ ಅಪ್ಪಾಜಿ ಕ್ಯಾಂಟೀನ್ ಸ್ಟ್ರಾಟಜಿಗೆ ಮೊರೆ ಹೋಗಿದ್ದು, ಮಧ್ಯಾಹ್ನದ ಊಟಕ್ಕೆ ಮುದ್ದೆ ಬಸ್ಸಾರು, ಸೊಪ್ಪಿನ ಸಾರು, ಮೊಳಕೆ ಕಾಳಿನ ಸಾಂಬಾರ್ ನೀಡೋಕೆ ಚಿಂತನೆ ನಡೆಸಿದೆ. ಇದೇ ಮಾರ್ಚ್ ಒಂದರಿಂದ ಇಂದಿರಾ ಕ್ಯಾಂಟೀನ್‍ನಲ್ಲಿ ಬಿಸಿ ಬಿಸಿ ರಾಗಿ ಮುದ್ದೆಯನ್ನ ಸಾರ್ವಜನಿಕರು ಸವಿಯಬಹುದಾಗಿದೆ.

    ಬೆಳಗಿನ ಉಪಹಾರದ ಮೆನುನಲ್ಲೂ ಬದಲಾವಣೆ ಆಗ್ತಿದ್ದು, ಬಿಬಿಎಂಪಿ ಇಡ್ಲಿ, ಉಪ್ಪಿಟ್ಟಿನ ಜೊತೆ ಕೇಸರಿ ಬಾತ್, ಶಾವಿಗೆ ಬಾತ್ ನೀಡೋ ತಯಾರಿಯಲ್ಲಿದೆ. ಈಗಾಗಲೇ ಇಂದಿರಾ ಕ್ಯಾಂಟೀನ್ ಮುಂಭಾಗ ಜನರ ಸಂಖ್ಯೆ ಕಡಿಮೆಯಾಗಿದೆ. ಕ್ಯಾಂಟೀನ್‍ಗಾಗಿ ದೊಡ್ಡ ದೊಡ್ಡ ಕಟ್ಟಡಗಳಿದ್ರೂ ಆಹಾರದ ವಿಚಾರವಾಗಿ ಶುಚಿ ರುಚಿ ಎರಡು ಮುಖ್ಯ ಅನ್ನೋದು ಬಿಬಿಎಂಪಿಗೆ ಅರ್ಥವಾದಂತಿದೆ. ಈ ಹೊಸ ಮೆನ್ಯೂ ಇಂದಿರಾ ಕ್ಯಾಂಟೀನ್ ಕಡೆ ಸಾರ್ವಜನಿಕರನ್ನು ಸೆಳೆಯೋದ್ರಲ್ಲಿ ಯಶಸ್ವಿಯಾಗುತ್ತಾ ಕಾದು ನೋಡಬೇಕಿದೆ.

  • ಇನ್ಮುಂದೆ ಶಾಲಾ ಕಾಲೇಜುಗಳ ಬಳಿಯೂ ಇಂದಿರಾ ಕ್ಯಾಂಟೀನ್ ಪ್ರಾರಂಭ

    ಇನ್ಮುಂದೆ ಶಾಲಾ ಕಾಲೇಜುಗಳ ಬಳಿಯೂ ಇಂದಿರಾ ಕ್ಯಾಂಟೀನ್ ಪ್ರಾರಂಭ

    ಬೆಂಗಳೂರು: ಬಿಬಿಎಂಪಿ, ಆಸ್ಪತ್ರೆ ಆವರಣಗಳಲ್ಲಿ, ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ಪ್ರಾರಂಭವಾಗಿದ್ದ ಇಂದಿರಾ ಕ್ಯಾಂಟೀನ್ ಇನ್ಮುಂದೆ ಸರ್ಕಾರ ಶಾಲಾ-ಕಾಲೇಜುಗಳ ಬಳಿಯೂ ಪ್ರಾರಂಭವಾಗಲಿದೆ.

    ಶಾಲಾ ಕಾಲೇಜುಗಳ ಬಳಿ ಇಂದಿರಾ ಕ್ಯಾಂಟೀನ್ ಪ್ರಾರಂಭದ ಕುರಿತು ಬೆಂಗಳೂರು ಅಭಿವೃದ್ಧಿ ಸಚಿವ ಕೆಜೆ ಜಾರ್ಜ್ ಟ್ವೀಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಅಗತ್ಯ ಇರುವ ನಗರದ ಶಾಲಾ ಕಾಲೇಜುಗಳ ಬಳಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಲಾಗುತ್ತೆ ಅಂತ ತಿಳಿಸಿದ್ದಾರೆ.

    ಈಗಾಗಲೇ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ಮಾಡುತ್ತಿದ್ದು ಆದಷ್ಟು ಬೇಗ ಇಂದಿರಾ ಕ್ಯಾಂಟೀನ್ ಶಾಲಾ ಕಾಲೇಜುಗಳಿಗೂ ತಲುಪಲಿವೆ. ಶುಕ್ರವಾರವಷ್ಟೇ ಮೊಬೈಲ್ ಕ್ಯಾಂಟೀನ್ ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾನ ಸೌಧದ ಬಳಿ ಚಾಲನೆ ನಿಡಿದ್ದರು.

    ರಾಜ್ಯದಲ್ಲಿ ಯಾರೂ ಹಸಿವಿನಿಂದ ಬಳಲಬಾರದು. ಕರ್ನಾಟಕವನ್ನು ಹಸಿವು ಮುಕ್ತಗೊಳಿಸುವುದೇ ನಮ್ಮ ಸರ್ಕಾರದ ಉದ್ದೇಶ. ಅಲ್ಲದೆ ಕಾಲೇಜ್ ಮತ್ತು ಶಾಲೆಗಳಲ್ಲೂ ಇಂದಿರಾ ಕ್ಯಾಂಟೀನ್ ಆರಂಭಿಸುವ ಉದ್ದೇಶ ಇದ್ದು, ಇದರಿಂದ ವಿದ್ಯಾರ್ಥಿಗಳಿಗೆ ಕಡಿಮೆ ಬೆಲೆಗೆ ತಿಂಡಿ ಮತ್ತು ಊಟ ದೊರೆಯಲಿದೆ ಎಂದು ಸಿಎಂ ಹೇಳಿದ್ದರು. ಇದನ್ನೂ ಓದಿ: ಪಿಂಕ್ ಹೊಯ್ಸಳ ಆಯ್ತು, ಈಗ ಪಿಂಕ್ ಟಾಯ್ಲೆಟ್ಸ್- ಮಹಿಳೆಯರ ರಕ್ಷಣೆಗಾಗಿ ಬೆಂಗ್ಳೂರಲ್ಲಿ ಹೊಸ ಶೌಚಾಲಯ

    ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ಕನಸಿನ ಯೋಜನೆಯಾಗಿದ್ದ ಇಂದಿರಾ ಕ್ಯಾಂಟಿನ್ ಗೆ ಕಳೆದ ವರ್ಷ  ಆಗಸ್ಟ್ 15ರಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬೆಂಗಳೂರಿನಲ್ಲಿ ಚಾಲನೆ ನೀಡಿದ್ದರು. ಇಂದಿರಾ ಕ್ಯಾಂಟೀನ್ ಯಶಸ್ವಿಯಾಗುತ್ತಿದ್ದ ಬೆನ್ನಲ್ಲೇ ಮುಖ್ಯಮಂತ್ರಿಯವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹೆಸರಿನಲ್ಲಿ ಇಂದಿರಾ ಕ್ಲಿನಿಕ್ ಪ್ರಾರಂಭಿಸಿದ್ದಾರೆ. ಹಾಗೆಯೇ ವಿದ್ಯಾರ್ಥಿಗಳ ಮತ್ತು ಮಹಿಳೆಯರ ಅನುಕೂಲಕ್ಕಾಗಿ ಇಂದಿರಾ ಸಾರಿಗೆ ಬಸ್ ವ್ಯವಸ್ಥೆಯನ್ನು ಕೂಡ ಮಾಡಲಾಗುವುದು ಎಂಬುದಾಗಿ ಸಚಿವ ಎಚ್ ಎಂ ರೇವಣ್ಣ ಈ ಹಿಂದೆ ಹೇಳಿದ್ದರು.

  • ರಾಯಚೂರಿನಲ್ಲಿ ಇಂದಿರಾ ಕ್ಯಾಂಟೀನ್‍ ಗೆ ವಿರೋಧ- ಇಂದಿರಾ ಬದಲು ವಾಜಪೇಯಿ, ದೇವೇಗೌಡರ ಹೆಸರಿಡಲು ಪಟ್ಟು

    ರಾಯಚೂರಿನಲ್ಲಿ ಇಂದಿರಾ ಕ್ಯಾಂಟೀನ್‍ ಗೆ ವಿರೋಧ- ಇಂದಿರಾ ಬದಲು ವಾಜಪೇಯಿ, ದೇವೇಗೌಡರ ಹೆಸರಿಡಲು ಪಟ್ಟು

    ರಾಯಚೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಯೋಜನಾ ಭಾಗ್ಯಗಳ ಜೊತೆ ಮಹತ್ವಾಕಾಂಕ್ಷಿ ಯೋಜನೆಯಾದ ಇಂದಿರಾ ಕ್ಯಾಂಟಿನ್‍ಗೆ ರಾಯಚೂರಿನ ನಗರಸಭೆ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ.

    ನಗರಸಭೆಯ ಅನುದಾನದಲ್ಲಿ ಕ್ಯಾಂಟಿನ್ ನಡೆಯುವುದರಿಂದ ಎಚ್.ಡಿ.ದೇವೇಗೌಡರ ಹೆಸರಿಡಬೇಕು ಅಂತ ಜೆಡಿಎಸ್ ಸದಸ್ಯರು, ಅಟಲ್ ಬಿಹಾರಿ ವಾಜಪೇಯಿ ಹೆಸರಿಡಬೇಕು ಅಂತ ಬಿಜೆಪಿ ಸದಸ್ಯರು ಪಟ್ಟು ಹಿಡಿದಿದ್ದಾರೆ.

    ರಾಯಚೂರಿನಲ್ಲಿ ಒಟ್ಟು ಮೂರು ಸ್ಥಳಗಲ್ಲಿ ಕ್ಯಾಂಟಿನ್ ತೆರೆಯಲಾಗುತ್ತಿದ್ದು ಒಂದೊಂದು ಕ್ಯಾಂಟಿನ್‍ಗೆ ಒಬ್ಬೊಬ್ಬರ ಹೆಸರನ್ನಿಡಲು ಸದಸ್ಯರು ಆಗ್ರಹಿಸಿದ್ದಾರೆ.

     

  • ಮೈಸೂರಿನಲ್ಲಿ ಇಂದಿರಾ ಕ್ಯಾಂಟೀನ್ ಗೆ ಚಾಲನೆ ನೀಡಿದ ಸಿಎಂ

    ಮೈಸೂರಿನಲ್ಲಿ ಇಂದಿರಾ ಕ್ಯಾಂಟೀನ್ ಗೆ ಚಾಲನೆ ನೀಡಿದ ಸಿಎಂ

    ಮೈಸೂರು: ನಗರದಲ್ಲಿ ಇಂದು ಇಂದಿರಾ ಕಾಂಟೀನ್ ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚಾಲನೆ ನೀಡಿದ್ದಾರೆ.

    ಸಿಎಂ ಸಿದ್ದರಾಮಯ್ಯ ಮೈಸೂರಿನ ಕಾಡಾ ಕಚೇರಿಯ ಆವರಣದಲ್ಲಿ ಇಂದು ಬೆಳಗ್ಗೆ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿದ್ದಾರೆ. ಈ ಮೂಲಕ ಮೈಸೂರು ನಗರ ವ್ಯಾಪ್ತಿಯಲ್ಲಿ ಒಟ್ಟು 11 ಇಂದಿರಾ ಕ್ಯಾಂಟೀನ್‍ಗಳು ಇಂದಿನಿಂದ ಕಾರ್ಯಾರಂಭ ಆಗಿವೆ.

    ಜಿಲ್ಲೆಯಲ್ಲಿ ಒಟ್ಟು 17 ಇಂದಿರಾ ಕ್ಯಾಂಟೀನ್ ಆರಂಭಕ್ಕೆ ಸಿದ್ಧತೆ ನಡೆಯುತ್ತಿದ್ದು, ಮೊದಲ ಹಂತದಲ್ಲಿ ನಗರಪ್ರದೇಶ ನಂತರ ತಾಲೂಕು ಕೇಂದ್ರದಲ್ಲಿ ಪ್ರಾರಂಭವಾಗಲಿದೆ ಎಂಬುದಾಗಿ ತಿಳಿದುಬಂದಿದೆ.