ಬೆಂಗಳೂರು: ಹಳೇ ಇಂದಿರಾ ಕ್ಯಾಂಟೀನ್‍ಗೆ ಹೊಸ ರೂಪ ಕೊಟ್ಟು ಮತ್ತೆ ಇಂದಿರಾ ಕ್ಯಾಂಟೀನ್ ಆರಂಭಿಸಲು ತೀರ್ಮಾನ ಮಾಡಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದರು.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ 250 ಕ್ಯಾಂಟಿನ್ ಪ್ರಾರಂಭಕ್ಕೆ ಸೂಚನೆ ನೀಡಲಾಗಿದೆ. ಇಂದಿರಾ ಕ್ಯಾಂಟೀನ್ ಗಳಲ್ಲಿನ ಮೆನು ಬದಲಾವಣೆ ಮಾಡುವ ಮೂಲಕ ಹೊಸದಾಗಿ ಟೆಂಡರ್ ಕರೆಯಲು ಸರ್ಕಾರ ತೀರ್ಮಾನ ಮಾಡಿದೆ ಎಂದರು.
ಕಳೆದ ಬಾರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಇಂದಿರಾ ಕ್ಯಾಂಟೀನ್ (Indira Canteen) ಪ್ರಾರಂಭ ಮಾಡಲಾಗಿತ್ತು. ಕಡಿಮೆ ದರದಲ್ಲಿ ತಿಂಡಿ, ಊಟ ಸಿಗುತ್ತಿದ್ದರಿಂದ ಬಡವರಿಗೆ ಭಾರೀ ಅನುಕೂಲವಾಗಿತ್ತು. ಆದರೆ ಬಿಜೆಪಿ ಸರ್ಕಾರ ಇದರ ಕಡೆ ಹೆಚ್ಚು ಗಮನ ಕೊಡದೇ ಇದ್ದ ಕಾರಣ ಅನೇಕ ಕಡೆಗಳಲ್ಲಿ ಮುಚ್ಚಿದ್ದವು. ಈಗ ಮತ್ತೆ ಕಾಂಗ್ರೆಸ್ ಸರ್ಕಾರ ಬಂದಿರುವುದರಿಂದ ಇಂದಿರಾ ಕ್ಯಾಂಟೀನ್‍ಗಳಿಗೆ ಬಲ ಸಿಕ್ಕಿದೆ.
ಬೆಂಗಳೂರು: ಬಿಜೆಪಿ (BJP) ಅವಧಿಯಲ್ಲಿ ಹಳ್ಳ ಹಿಡಿದಿದ್ದ ಕೈ ಸರ್ಕಾರದ ಕನಸಿನ ಕೂಸು ಇಂದಿರಾ ಕ್ಯಾಂಟಿನ್‍ಗೆ ಈಗ ಮತ್ತೆ ಮರುಜೀವ ಬಂದಿದೆ. ನಯಾ ಲುಕ್ ನಲ್ಲಿ ಮತ್ತೆ ಬಡವರ ಫೈವ್ ಸ್ಟಾರ್ ಹೋಟೆಲ್ ಇಂದಿರಾ ಕ್ಯಾಂಟಿನ್ (Indira Canteen) ಲಕ ಲಕ ಅನ್ನಲಿದೆ.
ಕಾಂಗ್ರೆಸ್ ಸರ್ಕಾರ (Congress Government) ಬಂದ ಬಳಿಕ ಈಗ ಇಂದಿರಾ ಕ್ಯಾಂಟಿನ್ ಗೆ ಹೊಸ ಲುಕ್ ಬರಲಿದೆ. ಬಿಜೆಪಿ (BJP) ಅವಧಿಯಲ್ಲಿ ದುಡ್ಡು ಬಿಡುಗಡೆಯಾಗದೇ ನಿರ್ವಹಣೆ ಸಮಸ್ಯೆಯಿಂದ ಇಂದಿರಾ ಕ್ಯಾಂಟಿನ್ ಅವಸಾನದತ್ತ ಹೋಗಿತ್ತು. ಆದರೆ ಈಗ ಕೈ ಸರ್ಕಾರ ಅಸ್ತಿತ್ವಕ್ಕೆ ಬರ್ತಾ ಇದ್ದಂತೆ ಬೆಂಗಳೂರಿನಲ್ಲಿ 198 ವಾರ್ಡ್ ನಲ್ಲಿಯೂ ಇಂದಿರಾ ಕ್ಯಾಂಟಿನ್ ಗೆ ಮತ್ತೆ ಜೀವ ಬರಲಿದೆ. ಇದನ್ನೂ ಓದಿ: CSKvsGT: ಜಿಯೋಸಿನಿಮಾದಲ್ಲಿ ಏಕಕಾಲಕ್ಕೆ 2.5 ಕೋಟಿ ಜನರಿಂದ ವೀಕ್ಷಣೆ – ಎಲ್ಲಾ ದಾಖಲೆಗಳು ಉಡೀಸ್
ಒಂದು ತಿಂಗಳೊಳಗೆ ಹೊಸ ಟೆಂಡರ್ ಇಂದಿರಾ ಕ್ಯಾಂಟಿನ್ ರೀ ಒಪನ್ ಆಗಲಿದೆ. ಈ ಬಾರಿ ಕಳೆದ ಬಾರಿಗಿಂತಲೂ ವೆರೈಟಿ ವೆರೈಟಿ ಫುಡ್ (Indira Canteen Food) ಮೆನು ಇರಲಿದೆ. ಪೌಷ್ಟಿಕಾಂಶವುಳ್ಳ ತಿಂಡಿ ಕೊಡುವಂತೆ ಸೂಚನೆ ನೀಡಲಾಗಿದೆ. ರಾತ್ರಿಯೂಟಕ್ಕೂ ಡಿಮ್ಯಾಂಡ್ ಮೇಲೆ ಊಟ ಪೂರೈಕೆ ಮಾಡಲಾಗುತ್ತದೆ. ಐದು ರೂಪಾಯಿಂದ ಹತ್ತು ರೂಪಾಯಿಗೆ ದರ ಏರಿಕೆ ಮಾಡಲಾಗುತ್ತಿದ್ದು, ತಿಂಡಿ ಕ್ವಾಂಟಿಟಿ ಜಾಸ್ತಿ ಇರಲಿದೆ.
ಇಂದಿರಾ ಕ್ಯಾಂಟಿನ್ ನಲ್ಲಿ ಈ ಹಿಂದಿನ ಅವಧಿಯಲ್ಲಿ ನಡೆದ ಅಕ್ರಮದ ಬಗ್ಗೆ ಸದ್ಯ ಬಿಬಿಎಂಪಿ ಸೈಲೆಂಟ್ ಆಗಿದೆ. ಬೆಂಗಳೂರಿನಲ್ಲಿ 120-130 ಕ್ಯಾಂಟಿನ್ ಗಳು ಸುಸ್ಥಿತಿಯಲ್ಲಿದೆ. ಆದರೆ ಅಡುಗೆ ಮನೆಗೆ ಹೊಸ ಸಾಮಾಗ್ರಿಗಳು ಬೇಕು ಎನ್ನುವ ನಿರ್ಧಾರಕ್ಕೆ ಬಿಬಿಎಂಪಿ ಬಂದಿದೆ.
ಕೊಪ್ಪಳ: ಬಿಜೆಪಿ (BJP) ಸರ್ಕಾರ 40 ಪರ್ಸೆಂಟ್ ಕಮಿಷನ್ (40 Percent Commission) ಪಡೆಯುವುದನ್ನ ಕಡಿಮೆ ಮಾಡಿದ್ರೆ, ಬಡವರಿಗೆ ಖರ್ಚು ಮಾಡಲು ಹಣ ಉಳಿಯುತ್ತಿತ್ತು. ಇಂದಿರಾ ಕ್ಯಾಂಟೀನ್ (Indira Canteen) ಸಹ ಉಳಿಯುತ್ತಿತ್ತು ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ವ್ಯಂಗ್ಯವಾಡಿದರು.
ಕೊಪ್ಪಳದ (Koppal) ಕಾರಟಗಿಯಲ್ಲಿ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು, ಬಡವರ ಹಾಗೂ ಕಾರ್ಮಿಕರ ಸಲುವಾಗಿ ನಮ್ಮ ಸರ್ಕಾರ ಆರಂಭಿಸಿದ್ದ ಇಂದಿರಾ ಕ್ಯಾಂಟೀನ್ ಗಳನ್ನ ಭ್ರಷ್ಟ ಬಿಜೆಪಿ ಸರ್ಕಾರ ಮುಚ್ಚಿದೆ. ಈ ಬಾರಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಕೂಡಲೇ ಮತ್ತೆ ಇಂದಿರಾ ಕ್ಯಾಂಟೀನ್ ಆರಂಭಿಸುತ್ತೇವೆ ಎಂದು ಹೇಳಿದರು.
ಪಿಎಸ್ಐ ಹಗರಣದಲ್ಲಿ 15 ಲಕ್ಷ ರೂ. ಪಡೆದ ಆರೋಪ ಆ ಶಾಸಕನ ಮೇಲಿದೆ. ಆಡಿಯೋದಲ್ಲಿರುವ ಧ್ವನಿ ನನ್ನದೇ ಎಂದು ಒಪ್ಪಿಕೊಂಡರೂ ಬಿಜೆಪಿ ಸರ್ಕಾರ ಮನೆಗೆ ಕಳುಹಿಸದೇ ಆ ಶಾಸಕನನ್ನ ರಕ್ಷಣೆ ಮಾಡಿದೆ. ಮತದಾನದ ದಿನದಂದು ನೀವೆಲ್ಲರೂ ಕಾಂಗ್ರೆಸ್ ಅಭ್ಯರ್ಥಿ ಶಿವರಾಜ ತಂಗಡಗಿಗೆ ಮತ ಹಾಕಿ ಬಿಜೆಪಿ ಶಾಸಕನನ್ನ ಮನೆಗೆ ಕಳುಹಿಸಿ ಎಂದು ಕರೆ ನೀಡಿದರು.
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಬಡವರ ಹಸಿವು ನೀಗಿಸಲು ಆರಂಭಿಸಿದ ಇಂದಿರಾ ಕ್ಯಾಂಟೀನ್ (Indira Canteen) ಯೋಜನೆ ನಿರ್ವಹಣೆಯಲ್ಲಿ ಬಿಬಿಎಂಪಿ (BBMP) ಹಿಂದೆ ಬಿದ್ದಿದೆ.
ಇಂದಿರಾ ಕ್ಯಾಂಟೀನ್ಗಳಲ್ಲಿ ನೀರಿನ ಸಮಸ್ಯೆ ಬಿಗಾಡಿಯಿಸಿದ್ದು, ನೀರಿನ ಬಿಲ್ (Water Bill) ಕಟ್ಟದೇ ಇರುವುದಕ್ಕೆ ನೀರಿನ ಪೂರೈಕೆ ಸ್ಥಗಿತವಾಗಿದೆ. ಈಗ ಬಿಬಿಎಂಪಿ ಗುತ್ತಿಗೆದಾರರಿಗೆ ಹಣ ಪಾವತಿ ಮಾಡದ ಕಾರಣ ಇಂದಿರಾ ಕ್ಯಾಂಟೀನ್‌ಗಳಿಗೆ ಕೆಲ ಆಹಾರ ಪೂರೈಕೆ ಸ್ಥಗಿತವಾಗಿದೆ.
ಬೆಳಗ್ಗೆ ತಿಂಡಿಗೆ ಇಡ್ಲಿ, ಸಾಂಬಾರ್ ಪೂರೈಕೆ ಆಗುತ್ತಿತ್ತು. ಮಧ್ಯಾಹ್ನ ಅನ್ನ ಸಾಂಬಾರ್, ಮೊಸರನ್ನ, ಪಲಾವ್ ನೀಡಲಾಗುತ್ತಿತ್ತು. ಆದರೆ ಈಗ ಇಡ್ಲಿ, ಸಾಂಬಾರ್, ಚಟ್ನಿ ಸ್ಥಗಿತವಾಗಿದೆ. ಜೊತೆಗೆ ಮಧ್ಯಾಹ್ನ ಮೊಸರನ್ನ, ಪಲಾವ್ ಮತ್ತು ಪಾಯಸವೂ ಸ್ಥಗಿತ ಮಾಡಿದ್ದಾರೆ. 4-5 ಆಹಾರಗಳು ಸ್ಥಗಿತವಾಗಿ ಈಗ ಬೆಳಗ್ಗೆ ರೈಸ್ ಬಾತ್, ಮಧ್ಯಾಹ್ನ ಅನ್ನ ಸಾಂಬಾರ್ ನೀಡುತ್ತಾ ಇದ್ದಾರೆ. ಐಟಂ ಪೂರೈಕೆ ಸ್ಥಗಿತ ಆಗಿರುವ ಬಗ್ಗೆ ಗ್ರಾಹಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ಪವರ್ ಸ್ಟಾರ್ ಪ್ರೇರಣೆ – 150ಕ್ಕೂ ಹೆಚ್ಚು ಜನರಿಂದ ಅಂಗಾಂಗ ದಾನಕ್ಕೆ ಪ್ರತಿಜ್ಞೆ
ಇಂದಿರಾ ಕ್ಯಾಂಟೀನ್‌ನಿಂದ ಬಡವರ ಹೊಟ್ಟೆ ತುಂಬುತ್ತಿದೆ. ಆದರೆ ಸರಿಯಾದ ನಿರ್ವಹಣೆ ಇಲ್ಲದೇ ಮುಚ್ಚಿ ಹೋಗುವ ಸಾಧ್ಯತೆಯಿದೆ. ಸರ್ಕಾರ ಮತ್ತು ಬಿಬಿಎಂಪಿ ಬಿಲ್‌ಗಳನ್ನು ಪಾವತಿ ಮಾಡಿ ಆಹಾರ ಪೂರೈಕೆ ಮಾಡುತ್ತಾ ಎಂಬುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: ChatGPT ಬಳಕೆಗೆ ಕಡಿವಾಣ ಹಾಕಲು ಬೆಂಗ್ಳೂರು ಕಾಲೇಜುಗಳ ನಿರ್ಧಾರ
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಬಡವರ ಹಸಿವು ನೀಗಿಸಲು ಆರಂಭಿಸಿದ ಮಹತ್ವಾಕಾಂಕ್ಷೆಯ ಯೋಜನೆ ಹಳ್ಳ ಹಿಡಿಯುತ್ತಿದೆ. ಇಂದಿರಾ ಕ್ಯಾಂಟೀನ್‍ನಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ವಾಟರ್ ಕನೆಕ್ಷನ್ ಕಟ್ ಮಾಡಲಾಗಿದೆ. ಬಿಬಿಎಂಪಿ (BBMP) ನಿದ್ದೆಗೆ ಜಾರಿದ್ದು, ಬಿಲ್ ಪಾವತಿ ಮಾಡಲು ಮುಂದಾಗಿಲ್ಲ. ಕುಡಿಯಲು ನೀರಿಲ್ಲದೇ ಜನ ಪರದಾಡುತ್ತಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಬಡವರ ಹಸಿವು ನೀಗಿಸಲು ಇಂದಿರಾ ಕ್ಯಾಂಟಿನ್‍ಗಳನ್ನು ಆರಂಭ ಮಾಡಿದ್ದರು. ಇಂದಿರಾ ಕ್ಯಾಂಟೀನ್‍ಗಳಲ್ಲಿ (Indira Canteen) ಬಡವರು, ಕೂಲಿಕಾರ್ಮಿಕರು ಊಟ ಮಾಡಿ ಹಸಿವನ್ನು ನೀಗಿಸಿಕೊಳ್ಳುತ್ತಿದ್ದರು. ಆದರೆ ಈಗ ಈ ಯೋಜನೆ ನಿರ್ವಹಣೆಯಲ್ಲಿ ಬಿಬಿಎಂಪಿ ಹಿಂದೆ ಬಿದ್ದಿದೆ. ಇಂದಿರಾ ಕ್ಯಾಂಟೀನ್‍ಗಳು ಮುಚ್ಚು ಹೋಗ್ತಾವಾ ಎಂಬ ಆತಂಕ ಎದುರಾಗಿದೆ. ಏಕೆಂದರೆ ಮೆಜೆಸ್ಟಿಕ್‍ನ ಇಂದಿರಾ ಕ್ಯಾಂಟೀನ್ ಸೇರಿದಂತೆ ನಗರದ ಹಲವು ಇಂದಿರಾ ಕ್ಯಾಂಟೀನ್ಗಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಜಲಮಂಡಳಿ ವಾಟರ್ ಪೈಪ್‍ಲೈನ್ ಕಟ್ ಮಾಡಿದ್ದು, ನೀರಿಲ್ಲದೇ ದುಡ್ಡಿಗೆ ಹೊರಗಡೆ ನೀರು ತಂದು ನಡೆಸುತ್ತಿದ್ದಾರೆ.
ನಗರದ 8 ವಲಯಗಳಲ್ಲೂ ಇರುವ ಇಂದಿರಾ ಕ್ಯಾಂಟೀನ್‍ಗಳಲ್ಲಿ ವಾಟರ್ ಬಿಲ್ ಬಾಕಿಯಿದೆ. ಸುಮಾರು 40 ಲಕ್ಷಕ್ಕೂ ಹೆಚ್ಚು ವಾಟರ್ ಬಿಲ್‍ಬಾಕಿ ಇದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸಾಕಷ್ಟು ಬಾರಿ ಬಿಬಿಎಂಪಿ ಗಮನಕ್ಕೆ ತಂದ್ರು ಬಿಬಿಎಂಪಿ ಬಿಲ್ ಪಾವತಿಸಿ ಸಮಸ್ಯೆ ಕ್ಲಿಯರ್ ಮಾಡುವ ಗೋಜಿಗೆ ಹೋಗಿಲ್ಲ. ಸುಮಾರು ಏಳೇಂಟು ತಿಂಗಳ ಬಿಲ್ ಬಾಕಿ ಉಳಿಸಿಕೊಳ್ಳಲಾಗಿದೆ. ಇಂದಿರಾ ಕ್ಯಾಂಟೀನ್‍ಗೆ ಬರುವ ಗ್ರಾಹಕರು ಕೂಡ ಸಮಸ್ಯೆಯನ್ನು ಹೇಳಿಕೊಳ್ಳುತ್ತಿದ್ದು, ಊಟ ಚೆನ್ನಾಗಿದೆ ಮೂರು ಟೈಂ ನಾವು ಇಲ್ಲಿಯೇ ಊಟ ಮಾಡುತ್ತೇವೆ. ಆದರೆ ನೀರಿನ ಸಮಸ್ಯೆ ಇದೆ, ಅದನ್ನು ಕ್ಲಿಯರ್ ಮಾಡಿಕೊಡಿ ಎಂದು ಹೇಳುತ್ತಿದ್ದಾರೆ. ಇದನ್ನೂ ಓದಿ:ಹಂಪಿ ಉತ್ಸವ: ಗಾಯಕ ಕೈಲಾಶ್ ಕೇರ್ ಮೇಲೆ ಬಾಟಲಿ ಎಸೆದ ಕಿಡಿಗೇಡಿಗಳು
ಒಟ್ಟಾರೆ ಇಂದಿರಾ ಕ್ಯಾಂಟೀನ್ ಬಡವರು ಹೊಟ್ಟೆ ತುಂಬುತ್ತಿದೆ. ಆದರೆ ಸರಿಯಾದ ನಿರ್ವಹಣೆ ಇಲ್ಲದೇ ಎಲ್ಲಿ ಮುಚ್ಚಿ ಹೋಗುತ್ತೋ ಎಂಬ ಆತಂಕ ಇದೆ. ಹಾಗಾಗಿ ಸರ್ಕಾರ ಮತ್ತು ಬಿಬಿಎಂಪಿ ನೀರಿನ ಶುಲ್ಕವನ್ನು ಪೂರ್ಣ ಮಾಡಿ ನೀರನ್ನು ಕಲ್ಪಿಸುತ್ತಾ ಎಂದು ಕಾದು ನೋಡಬೇಕಿದೆ. ಇದನ್ನೂ ಓದಿ: ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇಯಲ್ಲಿ ಕಿಮೀ ಗಟ್ಟಲೆ ಟ್ರಾಫಿಕ್ ಜಾಮ್
Live Tv
[brid partner=56869869 player=32851 video=960834 autoplay=true]
ಹಾಸನ: ಸರ್ಕಾರ ಹಣ ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ ಹದಿನೈದು ದಿನಗಳಿಂದ ಇಂದಿರಾ ಕ್ಯಾಂಟೀನ್ ಬಂದ್ ಮಾಡಿರುವ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ಪಟ್ಟಣದಲ್ಲಿ ನಡೆದಿದೆ.
ಬಡ ವರ್ಗದವರಿಗೆ, ಕೂಲಿ ಕಾರ್ಮಿಕರಿಗೆ ಅನುಕೂಲವಾಗಲೆಂದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಪಟ್ಟಣ ಪ್ರದೇಶಗಳಲ್ಲಿ ಇಂದಿರಾ ಕ್ಯಾಂಟೀನ್ ತೆರೆದಿದ್ದರು. ಕಡಿಮೆ ಬೆಲೆಯಲ್ಲಿ ತಿಂಡಿ, ಊಟ ದೊರೆಯುತ್ತಿತ್ತು. ಆದರೆ ಈಗ ಇಂದಿರಾ ಕ್ಯಾಂಟೀನ್ ಅವ್ಯವಸ್ಥೆಯ ಆಗರವಾಗಿದೆ.
ವಿದ್ಯುತ್ ಬಿಲ್ ಪಾವತಿಸದ ಕಾರಣ ಕಳೆದ ಹದಿನೈದು ದಿನಗಳಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಕ್ಯಾಂಟೀನ್‍ನಲ್ಲಿ ಕೆಲಸ ಮಾಡುವವರಿಗೆ ಕಳೆದ ಐದಾರು ತಿಂಗಳಿನಿಂದ ವೇತನ ನೀಡಿಲ್ಲ. ಇದರಿಂದಾಗಿ ಕೆಲಸಗಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹತ್ತು ದಿನಗಳಿಂದ ಗ್ರೈಂಡರ್ ಕೂಡ ಕೆಟ್ಟು ಹೋಗಿದೆ. ಇದನ್ನೂ ಓದಿ:ಸರ್ಕಾರಿ ಬಸ್ ಚಾಲಕನ ಮೇಲೆ ಟ್ರಾಫಿಕ್ ಸಿಬ್ಬಂದಿಯಿಂದ ಹಲ್ಲೆ
ಸರ್ಕಾರ ಇಂದಿರಾ ಕ್ಯಾಂಟೀನ್ ಹಣ ನೀಡಿದ ಹಿನ್ನಲೆಯಲ್ಲಿ ಬಂದ್ ಮಾಡಲಾಗಿದೆ. ಇದರಿಂದಾಗಿ ಕಡಿಮೆ ಹಣದಲ್ಲಿ ಒಂದೊತ್ತಿನ ತುತ್ತಿನ ಚೀಲ ತುಂಬಿಸಿಕೊಳ್ಳುತ್ತಿದ್ದ ಬಡವರು, ಕೂಲಿ ಕಾರ್ಮಿಕರಿಗೆ ಸಂಕಷ್ಟ ಎದುರಾಗಿದೆ. ಈ ಬಗ್ಗೆ ತಹಸೀಲ್ದಾರ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಕ್ರಮ ಕೈಗೊಳ್ಳದೆ ಬೇಜವಾಬ್ದಾರಿತನ ಪ್ರದರ್ಶಿಸಿದ್ದಾರೆ. ಪ್ರತಿನಿತ್ಯ ಕೆಲಸಗಾರರು ಬಂದು ಕ್ಯಾಂಟೀನ್ ಸ್ವಚ್ಛಗೊಳಿಸುತ್ತಿದ್ದರು. ಸರ್ಕಾರ ಸಮಸ್ಯೆ ಬಗೆಹರಿಸದ ಕಾರಣ ಕ್ಯಾಂಟೀನ್‍ಗೆ ಬೀಗ ಜಡಿಯಲಾಗಿದೆ. ಇದನ್ನೂ ಓದಿ:ಗಣೇಶನ ಜೊತೆಗೆ ಈ ಊರಿನಲ್ಲಿ ನಡೆಯುತ್ತೆ ಮೂಷಿಕನಿಗೂ ವಿಶೇಷ ಪೂಜೆ
Live Tv
[brid partner=56869869 player=32851 video=960834 autoplay=true]
– ಬೇಡಿಕೆ ತಗ್ಗಿದ್ದಕ್ಕೆ ಸಿಬ್ಬಂದಿ ಕಳ್ಳಾಟ – ಪಬ್ಲಿಕ್ ಟಿವಿಯಿಂದ ಬಿಗ್ ಎಕ್ಸ್‌ಪೋಸ್
ಬೆಂಗಳೂರು: ಹಸಿದವರ ಪಾಲಿನ ಅನ್ನಪೂರ್ಣೇ. ಬಡವರ ಪಾಲಿನ ಫೈವ್ ಸ್ಟಾರ್ ಹೋಟೆಲ್ ಅಂತಲೇ ಒಂದು ಕಾಲದಲ್ಲಿ ಇಂದಿರಾ ಕ್ಯಾಂಟೀನ್ ಫೇಮಸ್ ಆಗಿತ್ತು. ಆದರೆ ಕೋವಿಡ್ ನಂತರದ ದಿನಗಳಲ್ಲಿ ಕೆಲ ಇಂದಿರಾ ಕ್ಯಾಂಟೀನ್‍ಗೆ ಬೇಡಿಕೆ ಕುಸಿದಿದೆ. ಹೀಗಾಗಿ ಕ್ಯಾಂಟೀನ್ ಸಿಬ್ಬಂದಿ ತಮ್ಮ ಕೆಲಸ ಉಳಿಸಿಕೊಂಡು ಜೇಬು ತುಂಬಿಸಿಕೊಳ್ಳಲು ಅಡ್ಡ ದಾರಿಯಲ್ಲಿ ಹೊರಟಿದ್ದಾರೆ. ಕ್ಯಾಂಟೀನ್‍ನಲ್ಲಿ ಸೇಲ್ ಆದ ಊಟ, ತಿಂಡಿಯನ್ನು ಖಾಸಗಿ ಹೋಟೆಲ್‍ಗಳಿಗೆ ಮಾರಾಟ ಮಾಡುತ್ತಿದ್ದಾರೆ.
ಇಂದಿರಾ ಕ್ಯಾಂಟೀನ್‍ನಲ್ಲಿ ರಿಯಾಯಿತಿ ದರದಲ್ಲಿ 5 ರೂಪಾಯಿಗೆ ತಿಂಡಿ, 10 ರೂಪಾಯಿಗೆ ಮಧ್ಯಾಹ್ನ – ರಾತ್ರಿ ಊಟ ನೀಡಲಾಗುತ್ತದೆ. ಈ ಹಿಂದೆ ಕೊರೊನಾ ಇದ್ದಾಗ ಉಚಿತ ಎಂಬ ಕಾರಣಕ್ಕೆ ಇಂದಿರಾ ಕ್ಯಾಂಟೀನ್ ಮುಂದೆ ಜನ ಸಾಲುಗಟ್ಟಿ ನಿಲ್ಲುತ್ತಿದ್ದರು. ಆದರೀಗ ಈ ಬೇಡಿಕೆ ಪ್ರಮಾಣ ಕುಸಿದಿದೆ. ತಮ್ಮ ಕೆಲಸ ಉಳಿಸಿಕೊಂಡು ಜೇಬು ತುಂಬಿಸಿಕೊಳ್ಳಲು ಹಲವು ಕ್ಯಾಂಟೀನ್‍ಗಳು ಅಡ್ಡ ದಾರಿಯಲ್ಲಿ ವ್ಯಾಪಾರಕ್ಕೆ ಮುಂದಾಗಿವೆ. ಇದನ್ನೂ ಓದಿ: ಶಾಲೆ ಆವರಣದಲ್ಲೇ ಭಜರಂಗದಳ ಕಾರ್ಯಕರ್ತರಿಗೆ ತ್ರಿಶೂಲ ದೀಕ್ಷೆ, ಶಸ್ತ್ರಾಸ್ತ್ರ ತರಬೇತಿ
ಊಟ ಸೇಲ್ ಆಗದ ಕಾರಣಕ್ಕೆ ಕೆಲ ಇಂದಿರಾ ಕ್ಯಾಂಟೀನ್ ಮಾಲೀಕರು ಹೋಟೆಲ್‍ಗಳಿಗೆ ಊಟ ಪೂರೈಕೆ ಮಾಡಲು ನಿಂತು ಬಿಟ್ಟಿದ್ದಾರೆ. ಈ ಬಗ್ಗೆ ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆ ನಡೆಸಿದ್ದು, ಇಂದಿರಾ ಕ್ಯಾಂಟೀನ್‍ನಲ್ಲಿ ನಮ್ಮ ಪ್ರತಿನಿಧಿ ನಿಮ್ಮ ಕ್ಯಾಂಟೀನ್‍ನಲ್ಲಿ ಹೇಗಿದ್ದರೂ ಊಟ ಸೇಲ್ ಆಗುತ್ತಿಲ್ಲ. ಹಾಗಾಗಿ ನೀವು ನಮ್ಮ ಹೋಟೆಲ್‍ಗೆ ಊಟ ಪೂರೈಸಿ ಅಂತ ಕೇಳಿದ್ದೆ ತಡಾ, ಸಿಬ್ಬಂದಿ ಊಟವನ್ನು ತುಂಬಿ, ತುಂಬಿ ಕೊಟ್ಟಿದ್ದಾರೆ. ಇದನ್ನೂ ಓದಿ: ಇಂದಿನಿಂದ ಶಾಲೆ ಆರಂಭ – ಈ ವರ್ಷವೂ ಮಕ್ಕಳಿಗಿಲ್ಲ ಸೈಕಲ್ ಭಾಗ್ಯ
`ಇಂದಿರಾ ಕ್ಯಾಂಟೀನ್ ರಹಸ್ಯ’ ಸ್ಥಳ: ಹೆಬ್ಬಾಳ ಫ್ಲೈಓವರ್ (ವಾರ್ಡ್ ನಂ.22 – ವಿಶ್ವನಾಥ ನಾಗೇನಹಳ್ಳಿ)
ಪ್ರತಿನಿಧಿ – ಸರ್ ಊಟ ಬೇಕು..!
ಇಂದಿರಾ ಕ್ಯಾಂಟೀನ್ ಸಿಬ್ಬಂದಿ – ಎಷ್ಟು ಬೇಕು?
ಪ್ರತಿನಿಧಿ – ನಮಗೆ ಬೇರೆ ಕಡೆ ಮಾರೋದಕ್ಕೆ.. ಹೋಟೆಲ್‍ಗೆ ಬೇಕು
ಇಂದಿರಾ ಕ್ಯಾಂಟೀನ್ ಸಿಬ್ಬಂದಿ – ಆಯ್ತು ಹೆಂಗ್ ತಗೊಂಡ್ ಹೋಗ್ತೀರಾ? ಡಬ್ಬಿ ತಗೊಂಡ್ ಬನ್ನಿ
ಪ್ರತಿನಿಧಿ – ಡಬ್ಬಿ ತಂದಿದ್ದೀವಿ… ಲಾಸ್ಟ್ ಟೈಮ್ ಹೇಳಿದ್ರಿ ಡಬ್ಬ ಬೇಕು ಅಂತ.. ನಾವ್ ಒಂದ್ ಮೂರ್ ಕಡೆ ನೋಡಿಕೊಂಡಿದ್ದೀವಿ.. ನಿತ್ಯ ಇಂದಿರಾದಿಂದಲೇ ಪರ್ಸೆಲ್ ತಗೋತೀವಿ.
ಇಂದಿರಾ ಕ್ಯಾಂಟೀನ್ ಸಿಬ್ಬಂದಿ – ಆಗಲೀ ಹೇಳಿ.. ಈಗೆಷ್ಟು ಬೇಕು.. 20 ಊಟ ದಬ್ರಿಗೆ ತೆಗೆಯಿರಿ.
`ಇಂದಿರಾ ಕ್ಯಾಂಟೀನ್ ರಹಸ್ಯ’ ಸ್ಥಳ – ಶಿವಾಜಿನಗರ (ವಾರ್ಡ್ ನಂಬರ್ ನಂ 92 ಶಿವಾಜಿನಗರ)
ಪ್ರತಿನಿಧಿ – 20 ತಿಂಡಿ ಬೇಕು..!
ಮಾರ್ಷಲ್ – ಖಾಲಿ ಆಗಿದೆ.. ಲಾಸ್ಟ್ ಟೈಮ್ ಬಂದಿದ್ರಿ
ಪ್ರತಿನಿಧಿ – ಹೌದು , ಬೇರೆ ಅಂಗಡಿ ನೋಡಿಕೊಂಡಿದ್ದಿವಿ
ಮಾರ್ಷಲ್ – ಯಾಕೆ.. ಇಲ್ಲೇ ಸಿಗುತ್ತಿತ್ತು.. ಟೈಮ್‍ಗೆ ಮಧ್ಯಾಹ್ನ ಬನ್ನಿ.. ಕೊಡ್ತೀವಿ. ನೀವು ಡೈಲಿ ಬಂದರೆ ಸಿಗುತ್ತೆ.. ಬಿಟ್ಟು, ಬಿಟ್ಟು ಬಂದರೆ ಕೊಡುವುದು ಕಷ್ಟ.
`ಇಂದಿರಾ ಕ್ಯಾಂಟೀನ್ ರಹಸ್ಯ’ ಸ್ಥಳ – ಶಿವಾಜಿನಗರ (ವಾರ್ಡ್ ನಂಬರ್ ನಂ 92 ಶಿವಾಜಿನಗರ)
ಪ್ರತಿನಿಧಿ – ಸರ್ ಈಗ ಊಟ 20 ಕೊಡಿ
ಮಾರ್ಷಲ್ – ತಗೊಳ್ಳಿ… ಪಾತ್ರೆ ತೆಗೆಯಿರಿ
ಪ್ರತಿನಿಧಿ – ನಮಗೆ ಮೂರು ಟೈಮ್ ಬೇಕು.. ಹೋಟೆಲ್‍ನಲ್ಲಿ ಮಾರ್ತಿವಿ
ಮಾರ್ಷಲ್ – ನೀವು ಫಿಕ್ಸ್ ಆಗಿ ಬರಬೇಕು.. ನಮ್ ಸೂಪರ್ ವೈಸರ್‍ಗೆ ಮಾಹಿತಿ ಕೊಡಬೇಕಿದೆ
ಪ್ರತಿನಿಧಿ – ಚೀಟಿ.. ಅದುವೇ ಟೋಕನ್ ಬೇಕಿತ್ತು..
ಇಂದಿರಾ ಕ್ಯಾಂಟೀನ್ ಸಿಬ್ಬಂದಿ – ಇಲ್ಲ.. ಬನ್ನಿ.. ಡೈಲಿ ಬರ್ತಿರಾ ಅಲ್ವಾ?
ಪ್ರತಿನಿಧಿ – ನಾವ್ ಮೂರು – ನಾಲ್ಕ್ ಕಡೆ ನೋಡಿಕೊಂಡಿದ್ದೀವಿ… ಇದೇ ನಮ್ ಕೆಲಸ.. ಕೊರೋನಾ ಲಾಸ್ ಕಂಟ್ರೋಲ್‍ಗೆ ಬೇರೆ ದಾರಿ ಕಾಣಲಿಲ್ಲ..
`ಇಂದಿರಾ ಕ್ಯಾಂಟೀನ್ ರಹಸ್ಯ’ ಸ್ಥಳ – ಡಾಲರ್ಸ್ ಕಾಲೋನಿ (ವಾರ್ಡ್ – 18 , ರಾಧಕೃಷ್ಣ ದೇವಸ್ಥಾನ)
ಪ್ರತಿನಿಧಿ – ಲಾಸ್ಟ್ ಟೈಮ್ ಹೋಟೆಲ್‍ಗೆ ತಿಂಡಿ ಬೇಕು ಅಂತ ಬಂದ್ವಿ
ಇಂದಿರಾ ಕ್ಯಾಂಟೀನ್ ಸಿಬ್ಬಂದಿ – ಅಯ್ಯೋ ಬರ್ತೀರಾ.. ಅಮೇಲೆ ಕಾಣಿಸುವುದಿಲ್ಲ
ಪ್ರತಿನಿಧಿ – ಇವತ್ತು 15 ತಿಂಡಿ ಬೇಕು
ಇಂದಿರಾ ಕ್ಯಾಂಟೀನ್ ಸಿಬ್ಬಂದಿ – ಏನ್ ತಂದಿದ್ದೀರಾ.. ಕವರಾ.? ಬಾಕ್ಸಾ.?
ಪ್ರತಿನಿಧಿ – ಈ ಸಲ ಬಾಕ್ಸ್ ತಂದಿದೀವಿ
ಇಂದಿರಾ ಕ್ಯಾಂಟೀನ್ ಸಿಬ್ಬಂದಿ – ಕೊಡ್ತೀವಿ
ಪ್ರತಿನಿಧಿ – ನಮ್ ಹೋಟೆಲ್‍ಗೆ ಬೇಕು
ಇಂದಿರಾ ಕ್ಯಾಂಟೀನ್ ಸಿಬ್ಬಂದಿ – ಎಲ್ಲಿಗಾದ್ರೂ ತಗೊಂಡ್ ಹೋಗಿ ನಮಗೆ ಬ್ಯುಸಿನೆಸ್ ಬೇಕು.. ಅಷ್ಟೆ..
`ಇಂದಿರಾ ಕ್ಯಾಂಟೀನ್ ರಹಸ್ಯ’ ಸ್ಥಳ – ವಿಶ್ವನಾಥ್ ನಾಗೇನಹಳ್ಳಿ ಟು ಸಿಬಿಐ ಕ್ರಾಸ್
ಪ್ರತಿನಿಧಿ – ಸರ್ ಫೋನ್ ಮಾಡಿಸಿದಲ್ವ
ಇಂದಿರಾ ಕ್ಯಾಂಟೀನ್ ಸಿಬ್ಬಂದಿ – ಹು… ಪಾರ್ಸೆಲ್‍ಗೆ ಏನ್ ತಂದಿದ್ದೀರಾ..?
ಪ್ರತಿನಿಧಿ – ಬಾಕ್ಸ್ ತಂದಿದ್ದೀನಿ
ಇಂದಿರಾ ಕ್ಯಾಂಟೀನ್ ಸಿಬ್ಬಂದಿ – ಸರ್ ಎಷ್ಟು ಬೇಕು?
ಪ್ರತಿನಿಧಿ – 15 ತಿಂಡಿ ಕೊಡಿ
ಇಂದಿರಾ ಕ್ಯಾಂಟೀನ್ ಸಿಬ್ಬಂದಿ – ಬೇಗ ಬಾಕ್ಸ್ ತನ್ನಿ
ಪ್ರತಿನಿಧಿ – ಅಣ್ಣಾ ನಮಗೆ ಡೈಲಿ ಬೇಕು.. ಸ್ವಲ್ಪ ಜಾಸ್ತಿ ದುಡ್ ಬೇಕಾದರೂ ತಗೊಳ್ಳಿ
ಇಂದಿರಾ ಕ್ಯಾಂಟೀನ್ ಸಿಬ್ಬಂದಿ – ಜಾಸ್ತಿ ದುಡ್ ಬೇಡ.. ನಮ್ ಸೂಪರ್ ವೈಸರ್ ಹತ್ರ ಮಾತನಾಡಿ ಸಾಕು..
ಹಣ ಪಡೆದು ಚೀಟಿ ಕೊಡುವ ಸಿಬ್ಬಂದಿ ಪ್ರತಿನಿತ್ಯ ಬರುತ್ತೀರಾ ಅಲ್ವಾ ಅಂತ ಮತ್ತೆ, ಮತ್ತೆ ಕನ್ಫರ್ಮ್ ಮಾಡಿಕೊಳ್ಳುತ್ತಾರೆ. ಮೆಜೆಸ್ಟಿಕ್, ಕೆ.ಆರ್. ಮಾರುಕಟ್ಟೆ ಸೇರಿ ಹಲವೆಡೆ ಇಂದಿರಾ ಕ್ಯಾಂಟೀನ್ ಬಡವರ ಹೊಟ್ಟೆ ತುಂಬಿಸುತ್ತಿದೆ. ಮತ್ತೆ ಕೆಲವೆಡೆ ಗ್ರಾಹಕರಿಲ್ಲದೇ ಖಾಲಿಯಾಗಿದೆ. ಸದ್ಯ ಈ ಹಗರಣ ಕುರಿತಂತೆ ಬೆಂಗಳೂರು ಉಸ್ತುವಾರಿಗಳಾದ ಮಾನ್ಯ ಮುಖ್ಯಮಂತ್ರಿಗಳು ಕ್ರಮ ತೆಗೆದುಕೊಳ್ಳುತ್ತಾರಾ ಎಂದು ಕಾದು ನೋಡಬೇಕಾಗಿದೆ.
ಕೊಪ್ಪಳ: ಕಳೆದ ನಾಲ್ಕು ವರ್ಷಗಳಿಂದಲೂ ಸರ್ಕಾರದಿಂದ ಅನುದಾನ ಬಿಡುಗಡೆಯಾಗದ ಕಾರಣ ರಾಜ್ಯದಲ್ಲಿ ಇಂದಿರಾ ಕ್ಯಾಂಟೀನ್‌ಗಳು ಬಂದ್ ಆಗಲಿವೆಯೇ ಎನ್ನುವ ಆತಂಕ ಶುರುವಾಗಿದೆ.
ಈ ಕುರಿತು ಕೊಪ್ಪಳ, ಬಳ್ಳಾರಿ, ಕಲಬುರಗಿ, ಹಾಗೂ ಬಾಗಲಕೋಟೆ ಸೇರಿದಂತೆ ರಾಜ್ಯದ ನಾನಾ ಕಡೆ ಇಂದಿರಾ ಕ್ಯಾಂಟೀನ್ ಗುತ್ತಿಗೆ ಪಡೆದಿರುವ ಬಸಲಿಂಗಪ್ಪ ಅವರನ್ನು ಪಬ್ಲಿಕ್ ಟಿವಿ ಮಾತನಾಡಿಸಿದೆ. ಈ ವೇಳೆ ಇಂದಿರಾ ಕ್ಯಾಂಟೀನ್ ಟೆಂಡರ್ ಪಡೆದಿರೋ ಸೆಫ್ಟಾನ್ ಫುಡ್ ಅಂಡ್ ಹಾಸ್ಪಿಟಾಲಿಟಿ ಕಂಪೆನಿಗೆ ಕಳೆದ ೪ ವರ್ಷಗಳಿಂದ ಸರ್ಕಾರದಿಂದ ಬರಬೇಕಿದ್ದ ಸುಮಾರು 25 ಕೋಟಿ ಹಣ ಬಾಕಿ ಉಳಿದಿರುವ ವಿಚಾರ ತಿಳಿಸಿದ್ದಾರೆ. ಇದನ್ನೂ ಓದಿ: ಇಂದಿರಾ ಕ್ಯಾಂಟೀನ್‍ನ ಚಿತ್ರಾನ್ನ ಸವಿದ ಎಸ್.ಟಿ. ಸೋಮಶೇಖರ್
ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 10 ಕೋಟಿ ಹಾಗೂ ಬಳ್ಳಾರಿ ಮಾಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 7 ಕೋಟಿ ಹಣ ಬಾಕಿಯಿದೆ. ಕಾರ್ಮಿಕ ಇಲಾಖೆಯ ಸಹಾಯಧನಕ್ಕೂ ಕೊಕ್ಕೆ ಬಿದ್ದಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕ್ಯಾಂಟೀನ್ ನಡೆಸುವುದೇ ಕಷ್ಟವಾಗುತ್ತಿದೆ. ಮಾಹಾನಗರ ಪಾಲಿಕೆ ಆಯುಕ್ತರಿಗೆ ಪತ್ರ ಬರೆದರೂ ಸ್ಪಂದಿಸುತ್ತಿಲ್ಲ. ಹಾಗಾಗಿ ನಾವು ಶೀಘ್ರದಲ್ಲೇ ಕಲಬುರಗಿ, ಬಳ್ಳಾರಿ ವ್ಯಾಪ್ತಿಯಲ್ಲಿರುವ ಇಂದಿರಾ ಕ್ಯಾಂಟೀನ್‌ಗಳನ್ನು ಬಂದ್ ಮಾಡುತ್ತೇವೆ ಎಂದು ಬಸಲಿಂಗಪ್ಪ ತಿಳಿಸಿದ್ದಾರೆ. ಇದನ್ನೂ ಓದಿ: ಇಂದಿರಾ ಕ್ಯಾಂಟೀನ್‍ಗೆ ಅನ್ನಪೂರ್ಣೇಶ್ವರಿ ಹೆಸರಿಟ್ಟರೆ ತಪ್ಪೇನು- ಸುಧಾಕರ್ ಪ್ರಶ್ನೆ
ಪ್ರತಿ ತಿಂಗಳ ಎರಡನೇ ಮಂಗಳವಾರ ಬಿಜೆಪಿ ಕಾರ್ಯಕರ್ತರ ಸಮಸ್ಯೆ ಆಲಿಸಲು ಪಕ್ಷದ ಪ್ರಧಾನ ಕಚೇರಿ ಜಗನ್ನಾಥ ಭವನಕ್ಕೆ ಭೇಟಿ ನೀಡುತ್ತೇನೆ. ಅಲ್ಲದೇ ಆಗಸ್ಟ್ 26ರಂದು ಕೋಲಾರ ಜಿಲ್ಲೆಗೆ ಭೇಟಿ ನೀಡುತ್ತಿದ್ದು, ಕೋಲಾರದಲ್ಲಿಯೂ ಸಹ ಪಕ್ಷದ ಕಾರ್ಯಕರ್ತರು ಇಲಾಖೆ ಸಂಬಂಧ ಸಮಸ್ಯೆಗಳನ್ನು ನೀಡಬಹುದು ಎಂದು ಮಾಹಿತಿ ಹಂಚಿಕೊಂಡರು.
ಯಶವಂತಪುರದಲ್ಲಿ ಎಲ್ಲಿಯೂ ಸಾರ್ವಜನಿಕರಿಗೆ ತೊಂದರೆಯಾಗುವಂತೆ ಗೋಡೆ ನಿರ್ಮಿಸಿಲ್ಲ. ಆಸ್ಪತ್ರೆಗಾಗಿ ತಡೆಗೋಡೆ ಕಟ್ಟಲಾಗಿದೆ. ಇದರಿಂದ ರೈಲ್ವೇ ನಿಲ್ದಾಣ ಹಾಗೂ ಆಸ್ಪತ್ರೆಗೆ ಹೋಗಲು ಹಾಗೂ ವ್ಯಾಪಾರಿಗಳಿಗೂ ಅನುಕೂಲ ಆಗುವಂತೆ ವ್ಯವಸ್ಥೆ ಮಾಡಿದ್ದೇವೆ ಎಂದು ಸಚಿವರು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಗಣೇಶ ಚತುರ್ಥಿ ಆಚರಣೆಗೆ 10 ದಿನದಲ್ಲಿ ಹೊಸ ಮಾರ್ಗಸೂಚಿ: ಶಿವರಾಮ್ ಹೆಬ್ಬಾರ್
ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ವಿಚಾರವಾಗಿ ಸುದ್ದಿಗಾರರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮುನಿರತ್ನ, ಪಕ್ಷದ ವರಿಷ್ಠರು ಈ ಬಗ್ಗೆ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನಾವೆಲ್ಲ ಬದ್ಧ ಎಂದು ಉತ್ತರಿಸಿದರು.
– ಸಿಟಿ ರವಿ ನಾಲಿಗೆಯನ್ನ ಇಟ್ಟಿಗೆಯಿಂದ ಉಜ್ಜಿ ಪಾವನ ಮಾಡ್ಬೇಕು
ತುಮಕೂರು: ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಮಾಡುವುದು ಸಣ್ಣತನದ ಪರಮಾವಧಿ ಎಂದು ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ ಕಿಡಿಕಾರಿದ್ದಾರೆ.
ಮಧುಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅವರು, ರಾಜ್ಯ ಸರ್ಕಾರದ ವಿರುದ್ಧ ಗರಂ ಆದರು. ಕ್ಯಾಂಟೀನ್ ಹೆಸರು ಬದಲಾಯಿಸೋದನ್ನ ಬಿಟ್ಟು ಅದೇ ಹೆಸರಲ್ಲಿ ಬೇರೆ ಯಾವುದಾದರೂ ಬಡವರ ಪರ ಕಾರ್ಯಕ್ರಮ ರೂಪಿಸಲಿ. ಖೇಲ್ ರತ್ನಗೆ ರಾಜೀವ್ ಗಾಂಧಿ ಹೆಸರು ತೆಗೆಯುವಂತಹದ್ದು ಅಪಚಾರ ಮಾಡಿದ ಹಾಗೆ. ಇಂದಿರಾ ಗಾಂಧಿಯವರ ಹೆಸರು ಇಡೀ ಪ್ರಪಂಚವೇ ನೆನಪಿಸಿಕೊಳ್ಳುವಂತಹದ್ದು ಎಂದು ಬಣ್ಣಿಸಿದರು. ಇದನ್ನೂ ಓದಿ: ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾ ಕ್ಯಾಂಟೀನ್, ಬೇಕಾದ್ರೆ ನೆಹರು ಹುಕ್ಕಾ ಬಾರ್ ತೆರೆಯಲಿ : ಸಿಟಿ ರವಿ
ಇಂಡಿಯಾ ಎಂದರೆ ಇಟ್ ಇಸ್ ಇಂದಿರಾ ಎಂದರ್ಥ. ಸಿಟಿ ರವಿ ಯಾರ್ರೀ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಇವರು ಹುಟ್ಟೇ ಇರಲಿಲ್ಲ ಈ ಗಿರಾಕಿ. ಸ್ವಾತಂತ್ರ್ಯ ತರಲಿಕ್ಕೆ ಎಷ್ಟು ಕಷ್ಟ ಅನುಭವಿಸಿದ್ದಾರೆ ಗೊತ್ತಾ ಇವರಿಗೆ. ಆರ್ ಎಸ್ ಎಸ್ ಟ್ರೇನಿಂಗ್ ಭಾಷಣ ಮಾಡೋದು ಹೇಳಿಕೊಟ್ಟಿದ್ದಾರೆ, ಭಾಷಣ ಮಾಡ್ಕೊಂಡು ತಿರುಗ್ತಾರೆ. ಅವರ ನಾಲಿಗೆಗೆ ಸ್ವಲ್ಪ ಇಟ್ಟಿಗೆ ತಗೊಂಡು ಉಜ್ಜಿ ಪಾವನ ಮಾಡಬೇಕು ಎಂದು ವಾಗ್ದಾಳಿ ನಡೆಸಿದರು.
ಸಿ.ಟಿ.ರವಿ ವಿವಾದಾತ್ಮಕ ಹೇಳಿಕೆ:
ಕಾಂಗ್ರೆಸ್ಸಿನವರು ಇಂದಿರಾ ಕ್ಯಾಂಟೀನ್ ತೆರೆದಿರೋದು ಅವರ ಎಟಿಎಂಗಳನ್ನು ತುಂಬಿಸಿಕೊಳ್ಳಲೇ ಹೊರತು, ಇಂದಿರಾ ಗಾಂಧಿ ಮೇಲಿನ ಪ್ರೀತಿಯಿಂದಲ್ಲ. ಕಾಂಗ್ರೆಸ್‍ನವರು ಬೇಕಾದ್ರೆ ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲಿ. ಬೇಕಾದ್ರೆ ಬಾರ್ ತೆರೆಯಲಿ, ನೆಹರು ಹುಕ್ಕಾ ಬಾರ್ ಎಂಬ ಹೆಸರಲ್ಲಿ ತೆರೆಯಲಿ. ಈಗ ಇಂದಿರಾ ಕ್ಯಾಂಟೀನ್ ಅನ್ನು ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಎಂದು ಮಾಡಬೇಕು ಅಂತಾ ಪ್ರಸ್ತಾಪಿಸಿದ್ದೇನೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆ ಕಾಂಗ್ರೆಸ್ಸಿಗರ ಕೆಂಗಣ್ಣಿಗೆ ಗುರಿಯಾಗಿದೆ.