Tag: Indira Canteen

  • ಪರಮೇಶ್ವರ್ ಕೈಯಿಂದ 10ರೂ. ತಗೊಂಡು ಅಜ್ಜಿ ಕ್ಯಾಂಟೀನ್ ನಲ್ಲಿ ಊಟ ಸವಿದ ರಾಹುಲ್!

    ಪರಮೇಶ್ವರ್ ಕೈಯಿಂದ 10ರೂ. ತಗೊಂಡು ಅಜ್ಜಿ ಕ್ಯಾಂಟೀನ್ ನಲ್ಲಿ ಊಟ ಸವಿದ ರಾಹುಲ್!

    ಬೆಂಗಳೂರು: ಬಹುನಿರೀಕ್ಷಿತ ಇಂದಿರಾ ಕ್ಯಾಂಟೀನ್ ಗೆ ಕನಕನ ಪಾಳ್ಯದಲ್ಲಿ ಇಂದು ಕಾಂಗ್ರೆಸ್ ನ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್ ಗಾಂಧಿ ಚಾಲನೆ ನೀಡಿದ್ದಾರೆ. ಬಳಿಕ ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ಅವರ ಬಳಿಯಿಂದ 10 ರೂ, ತೆಗೆದುಕೊಂಡು ಟೋಕನ್ ಕೊಟ್ಟು ಊಟ ಮಾಡಿದ್ದಾರೆ.

    ಅನ್ನ ಸಾಂಬಾರ್ ಮತ್ತು ರೈಸ್ ಬಾತ್ ಸವಿಯುತ್ತಿರುವ ರಾಹುಲ್ ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ಅವರು ಸಾಥ್ ನೀಡಿದ್ರು. ಕ್ಯಾಂಟೀನ್ ಒಳಹೊಕ್ಕು ವ್ಯವಸ್ಥೆಗಳನ್ನು ಪರಿಶೀಲಿಸಿದ ರಾಹುಲ್, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕ್ಯಾಂಟೀನ್ ಮೆನು ಬಗ್ಗೆಯೂ ತೃಪ್ತಿ ಪಟ್ಟಿದ್ದಾರೆ.

    ಕಾರ್ಯಕ್ರಮ ಉದ್ಘಾಟನೆಯ ಬಳಿಕ ಮಾತನಾಡಿದ ರಾಹುಲ್ ಗಾಂಧಿ, ಬೆಂಗಳೂರಿನಲ್ಲಿ ಯಾರು ಹಸಿವಿನಿಂದ ಇರಬಾರದು. ಊಟ ದೊಡ್ಡ ವಿಚಾರವಲ್ಲ ಹೋಟೆಲ್‍ಗೆ ಹೋಗಿ ಅವರಿಗೆ ಇಷ್ಟ ಇರೋ ಮೆನು ಹೇಳಿ ಊಟ ಮಾಡಬಹುದು. ಆದ್ರೇ ಯಾರು ದುಡ್ಡು ಇಲ್ಲದವರಿದ್ದಾರೋ ಆಟೋ ಡ್ರೈವರ್‍ಗಳು, ಕಾರ್ಮಿಕರು, ಬಡವರು ಅವರಿಗಾಗಿ ಈ ಇಂದಿರಾ ಕ್ಯಾಂಟೀನ್ ನೆರವಾಗುತ್ತದೆ. ನನಗೆ ಹೆಮ್ಮೆ ಇದೆ ಕಾಂಗ್ರೆಸ್ ಸರ್ಕಾರ ಐದು ರೂಪಾಯಿಗೆ ಬೆಳಗ್ಗೆ ಉಪಹಾರ ನೀಡುತ್ತೆ ಅಂತ ಹೇಳಿದ್ರು.

    ಇಂದಿರಾ ಕ್ಯಾಂಟೀನ್ ಬೆಂಗಳೂರಿಗೆ ಸೀಮಿತವಾಗಿರಲ್ಲ. ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್ ವಿಸ್ತರಿಸೋದಾಗಿ ಸಿಎಂ ನನ್ನ ಜೊತೆ ಚರ್ಚೆ ನಡೆಸಿದ್ದಾರೆ. 10 ರೂಪಾಯಿಗೆ ಊಟ ಕೊಡ್ತಾರೆ. ಜೊತೆಗೆ ಅಷ್ಟೇ ಶುಚಿತ್ವ ಹಾಗೂ ರುಚಿಯನ್ನು ಕಾಯ್ದು ಕೊಳ್ಳಲು ಶ್ರಮ ವಹಿಸುತ್ತಿದ್ದಾರೆ. ನಾನು ಸಹ ಇದ್ದನ್ನೆ ರಿಕ್ವೇಸ್ಟ್ ಮಾಡುತ್ತೇನೆ. ಇದು ಪ್ರಾರಂಭ, ಬೆಂಗಳೂರಿನಲ್ಲಿ ಮುಂದೆ ಕರ್ನಾಟಕದ ಹಲವು ನಗರಗಳಿಗೆ ಈ ಯೋಜನೆ ಸಿಗಲಿದೆ ಅಂತಾ ಈಗಾಗಲೇ ಸಿದ್ದರಾಮಯ್ಯ ಜೀ ಹೇಳಿದ್ದಾರೆ. ಈ ವಿಚಾರ ಕೇಳಿ ಸಂತಸವಾಗಿದೆ. ರಾಜ್ಯ ಸರ್ಕಾರದ ಈ ಸಾಧನೆಗೆ ನನ್ನ ಅಭಿನಂದನೆಗಳು ಅಂದ್ರು.

    ರಾಹುಲ್ ಗಾಂಧಿ ಬಾಷಣ ಮಾಡುತ್ತಿದ್ದಂತೆಯೇ ಕಾರ್ಯಕ್ರಮದಲ್ಲಿ ನೆರೆದಿದ್ದ ಮಂದಿ ಎದ್ದು ಹೋದ್ರು. ಇದೇ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು ಇಂದಿರಾ ಕ್ಯಾಂಟೀನ್ ಲೋಗೋ ಡಿಸೈನ್ ಮಾಡಿದ ಕ್ರಿಯೇಟಿವ್ ಇನ್ಫ್ರಾ ಸಂಸ್ಥೆಗೆ ಒಂದು ಲಕ್ಷ ಬಹುಮಾನ ನೀಡಿದ್ರು. 770 ಲೋಗೋಗಳ ಪೈಕಿ ಕ್ರಿಯೇಟಿವ್ ಇನ್ಫ್ರಾ ಸಂಸ್ಥೆಯ ಲೋಗೋ ಆಯ್ಕೆಯಾಗಿದೆ.

    ಕಾರ್ಯಕ್ರಮದಲ್ಲಿ ಸಚಿವ ಕೆಜೆ ಜಾರ್ಜ್, ರಾಮಲಿಂಗರೆಡ್ಡಿ, ಡಿಕೆ ಶಿವ ಕುಮಾರ್, ಕೃಷ್ಣ ಬೈರೇಗೌಡ, ಯುಟಿ ಖಾದರ್, ಕಾಂಗ್ರೆಸ್ ಹಿರಿಯ ನಾಯಕ ಆಸ್ಕರ್ ಫೆರ್ನಾಂಡಿಸ್, ಎಂಎಲ್ ಎ ಆರ್ ವಿ ದೇವರಾಜ್, ಮುನ್ನಿರತ್ನ, ಮೇಯರ್ ಪದ್ಮಾವತಿ, ಎಂಎಲ್ ಸಿ ಪಿ ಆರ್ ರಮೇಶ್, ಎಚ್ ಎಂ ರೇವಣ್ಣ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ರಾಹುಲ್ ಗಾಂಧಿ ಬೆಂಗಳೂರಿಗೆ ಬರುವ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.

     

  • ಮನ್‍ಕೀ ಬಾತ್‍ನಿಂದ ಜನ್ರ ಹೊಟ್ಟೆ ತುಂಬಲ್ಲ, ನಾವು ನೀಡೋ ವಾಂಗಿಬಾತ್‍ನಿಂದ ತುಂಬುತ್ತೆ: ಸಿಎಂ

    ಮನ್‍ಕೀ ಬಾತ್‍ನಿಂದ ಜನ್ರ ಹೊಟ್ಟೆ ತುಂಬಲ್ಲ, ನಾವು ನೀಡೋ ವಾಂಗಿಬಾತ್‍ನಿಂದ ತುಂಬುತ್ತೆ: ಸಿಎಂ

    ಬೆಂಗಳೂರು: ಮನ್‍ಕೀ ಬಾತ್‍ನಿಂದ ಜನ್ರ ಹೊಟ್ಟೆ ತುಂಬಲ್ಲ, ನಾವು ನೀಡೋ ವಾಂಗಿಬಾತ್‍ನಿಂದ ತುಂಬುತ್ತದೆ. ಇಂದಿರಾ ಕ್ಯಾಂಟೀನ್ ಚುನಾವಣೆ ವರ್ಷದಲ್ಲಿ ಬಂದ ಯೋಜನೆ ಅಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

    ಕ್ಯಾಂಟೀನ್ ಉದ್ಘಾಟನೆಯ ಬಳಿಕ ಮಾತನಾಡಿದ ಅವರು, ಇಂದು ಬೆಂಗಳೂರು ನಗರಕ್ಕೆ ಐತಿಹಾಸಿಕ ದಿನ ಹಾಗೂ ಸ್ಮರಣೀಯ ದಿನವಾಗಿದೆ. ಇಂದಿರಾ ಕ್ಯಾಂಟೀನ್ ರಾಜಕೀಯ ಲಾಭಕ್ಕೋಸ್ಕರ ಆರಂಭಿಸಿಲ್ಲ. ಶೇ 28 ರಷ್ಟು ಅಪೌಷ್ಠಿಕತೆ ಆಹಾರ ಸೇವಿಸುವವರಿದ್ದಾರೆ. ಶೇ.03 ರಷ್ಟು ಮಹಿಳೆಯರಿಗೆ 3 ಹೊತ್ತು ಆಹಾರ ಸಿಗುತ್ತಿಲ್ಲ. ಬೇರೆ ರಾಜ್ಯಕ್ಕೆ ಹೋಲಿಕೆ ಮಾಡಿದ್ರೆ ನಮ್ಮ ರಾಜ್ಯದಲ್ಲಿ ಹಸಿವಿನಿಂದ ಬಳಲುತ್ತಿರುವವರು ಹೆಚ್ಚಿದ್ದಾರೆ. ಹೀಗಾಗಿ ಇಂದಿರಾ ಕ್ಯಾಂಟೀನ್ ಆರಂಭಿಸಿದ್ದೇವೆ ಎಂದರು.

    ಇಂದೇ 198 ಕ್ಯಾಂಟೀನ್ ಗಳನ್ನು ಸಹ ಪ್ರಾರಂಭಿಸಬೇಕಿತ್ತು. ಆದ್ರೆ ಜಾಗದ ಕೊರತೆಯಿಂದ 101 ಕ್ಯಾಂಟೀನ್ ಪ್ರಾರಂಭಿಸುತ್ತಿದ್ದೇವೆ. ಈ ವರ್ಷದ ಬಜೆಟ್ ನಲ್ಲಿ 198 ಕ್ಯಾಂಟೀನ್ ಪ್ರಾರಭಿಸೋದಾಗಿ ಘೋಷಣೆ ಮಾಡಿದ್ದೆವು. ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಹೆಸರನ್ನು ಇಡೋದಾಗಿ ಬಜೆಟ್ ನಲ್ಲಿ ಹೇಳಿದ್ದೇವು ಎಂದರು.

    ನಮ್ಮ ಸರ್ಕಾರ ಬಂದ ಮೇಲೆ ಒಂದು ಕೋಟಿ 8 ಲಕ್ಷ ಜನರಿಗೆ 7 ಕೆ.ಜಿ ಅಕ್ಕಿ ಕೊಡ್ತಾ ಇದ್ದೇವೆ. ಅನ್ನ ಭಾಗ್ಯ, ಇಂದಿರಾ ಕ್ಯಾಂಟೀನ್ ಬಗ್ಗೆ ವಿರೋಧ ಮಾಡಿದವರೆ ಹೆಚ್ಚು ಅಂತ ಅವರು ವಿಷಾದ ವ್ಯಕ್ತಪಡಿಸಿದ್ರು.

    ಅನ್ನ ಭಾಗ್ಯ ಯೋಜನೆಯಿಂದ ಗುಳೇ ಹೋಗುವುದು ಕಡಿಮೆಯಾಗಿದೆ. ಬರಗಾಲ ಇದ್ದರೂ ಉಚಿತ ಅಕ್ಕಿ ವಿತರಣೆ ಮಾಡುತ್ತಿದ್ದೇವೆ. ಬರಗಾಲ ಇದ್ದರೂ ಜನ ಹಸಿವಿನಿಂದ ಬಳಲದಂತೆ ನಮ್ಮ ಸರಕಾರ ನೋಡಿಕೊಂಡಿದೆ. ಸರಕಾರದ ಯೋಜನೆಗಳಿಗೆ ವಿರೋಧ ಇದೆ. ಆಟದ ಮೈದಾನದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸಿಲ್ಲ. ಸರಕಾರಿ ಜಾಗದಲ್ಲೇ ಕ್ಯಾಂಟೀನ್ ನಿರ್ಮಾಣ ಮಾಡಿದ್ದೇವೆ ಎಂದು ತಿಳಿಸಿದರು.

    ಕೆಲವರಿಗೆ ಮೊಸರಲ್ಲಿ ಕಲ್ಲು ಹುಡುಕುವ ಬುದ್ಧಿ ಇದೆ. ಹೊಟ್ಟೆ ತುಂಬಿದವರಿಗೆ ಹಸಿವಿನ ಬೆಲೆ ಗೊತ್ತಿಲ್ಲ. ನಾವು ಬಡವರ ಪರ ಇರುವವರು. ಇಂದಿರಾ ಗಾಂಧಿ ಬಡತನದ ವಿರುದ್ಧ ಹೋರಾಡಿದ ಉಕ್ಕಿನ ಮಹಿಳೆ. ಅವರ `ಗರೀಬಿ ಹಟಾವೋ’ ಮಹತ್ವದ ಕಾರ್ಯಕ್ರಮವಾಗಿದೆ. ಬಡವರ ಹಸಿವು ಅರ್ಥ ಮಾಡಿಕೊಳ್ಳದವರೇ ಇಂದಿರಾ ಕ್ಯಾಂಟೀನ್ ವಿರೋಧಿಸ್ತಿದ್ದಾರೆ ಅಂತ ಟಾಂಗ್ ನೀಡಿದ ಅವರು ಮುಂದಿನ ದಿನಗಳಲ್ಲಿ ಬೇರೆ ಜಿಲ್ಲೆಗಳಿಗೂ ಇಂದಿರಾ ಕ್ಯಾಂಟೀನ್ ವಿಸ್ತರಣೆ ಮಾಡುವುದಾಗಿ ಭರವಸೆ ನೀಡಿದರು.

    ಕಾರ್ಯಕ್ರಮದಲ್ಲಿ ಸಚಿವ ಕೆಜೆ ಜಾರ್ಜ್, ರಾಮಲಿಂಗರೆಡ್ಡಿ, ಡಿಕೆ ಶಿವ ಕುಮಾರ್, ಕೃಷ್ಣ ಬೈರೇಗೌಡ, ಯುಟಿ ಖಾದರ್, ಕಾಂಗ್ರೆಸ್ ಹಿರಿಯ ನಾಯಕ ಆಸ್ಕರ್ ಫೆರ್ನಾಂಡಿಸ್, ಎಂಎಲ್ ಎ ಆರ್ ವಿ ದೇವರಾಜ್, ಮುನ್ನಿರತ್ನ, ಮೇಯರ್ ಪದ್ಮಾವತಿ, ಎಂಎಲ್ ಸಿ ಪಿ ಆರ್ ರಮೇಶ್, ಎಚ್ ಎಂ ರೇವಣ್ಣ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ರಾಹುಲ್ ಗಾಂಧಿ ಬೆಂಗಳೂರಿಗೆ ಬರುವ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.

     

     

     

  • ಕ್ಯಾಂಟೀನ್ ಆಯ್ತು, ಈಗ ರಾಜ್ಯ ಸರ್ಕಾರದಿಂದ 100 ಶಾಲೆಗಳಿಗೆ ಇಂದಿರಾ ಗಾಂಧಿ ಹೆಸರು

    ಕ್ಯಾಂಟೀನ್ ಆಯ್ತು, ಈಗ ರಾಜ್ಯ ಸರ್ಕಾರದಿಂದ 100 ಶಾಲೆಗಳಿಗೆ ಇಂದಿರಾ ಗಾಂಧಿ ಹೆಸರು

    ಕೊಪ್ಪಳ: ರಾಜ್ಯ ಸರ್ಕಾರದ ವತಿಯಿಂದ ಬೆಂಗಳೂರಲ್ಲಿ `ಇಂದಿರಾ ಕ್ಯಾಂಟೀನ್’ ಗೆ ಇಂದು ಚಾಲನೆ ದೊರೆಯುತ್ತಿರುವ ಬೆನ್ನಲ್ಲೆ, 100 ವಸತಿ ಶಾಲೆಗಳಿಗೆ ರಾಜ್ಯ ಸರ್ಕಾರ ಸದ್ದಿಲ್ಲದೇ ಮರುನಾಮಕರಣ ಮಾಡಿ ಆದೇಶ ಹೊರಡಿಸಿದೆ.

    ಪರಿಶಿಷ್ಟ ಜಾತಿ 66, ಪರಿಶಿಷ್ಟ 24, ಹಿಂದುಳಿದ ವರ್ಗಕ್ಕೆ ಸೇರಿರೋ 10 ವಸತಿ ಶಾಲೆಗಳು ಸೇರಿ ಒಟ್ಟು 100 ಮೊರಾರ್ಜಿ ದೇಸಾಯಿ ವಸತಿಗಳಿಗೆ `ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆ’ಯೆಂದು ಮರುನಾಮಕರಣ ಮಾಡಿ ಆದೇಶಿಸಿದೆ.

    ಇದಕ್ಕೆ ಸಮಾಜ ಕಲ್ಯಾಣ ಸಚಿವ ಆಂಜನೇಯ ಮರುನಾಮಕರಣ ಮಾಡೋವಲ್ಲಿ ಉತ್ಸುಕರಾಗಿ, ಇಲಾಖೆ ಮೂಲಕ ಆದೇಶ ಹೊರಡಿಸಿದ್ದಾರೆ ಎನ್ನಲಾಗಿದೆ.

  • 5 ರೂಪಾಯಿಗೆ ತಿಂಡಿ, 10 ರೂಪಾಯಿಗೆ ಊಟ-ಅಜ್ಜಿ ಹೆಸರಿನ ಕ್ಯಾಂಟೀನ್ ಮೊಮ್ಮಗನಿಂದ ಓಪನಿಂಗ್

    5 ರೂಪಾಯಿಗೆ ತಿಂಡಿ, 10 ರೂಪಾಯಿಗೆ ಊಟ-ಅಜ್ಜಿ ಹೆಸರಿನ ಕ್ಯಾಂಟೀನ್ ಮೊಮ್ಮಗನಿಂದ ಓಪನಿಂಗ್

    ಬೆಂಗಳೂರು: ಅಜ್ಜಿ ಹೆಸರಲ್ಲಿ ಶುರುವಾಗ್ತಿರೋ ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ಇವತ್ತು ಮೊಮ್ಮಗ ರಾಹುಲ್‍ಗಾಂಧಿ ಬೆಂಗಳೂರಿಗೆ ಬರ್ತಿದ್ದಾರೆ.

    ಬೆಳಗ್ಗೆ 10 ಗಂಟೆಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ರಾಹುಲ್ ಅವರನ್ನ ಸಿಎಂ ಸಿದ್ದರಾಮಯ್ಯ ಬರಮಾಡಿಕೊಳ್ಳಲಿದ್ದಾರೆ. ಬಳಿಕ 11.30ಕ್ಕೆ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಕನಕನಪಾಳ್ಯ ಮುಖ್ಯ ರಸ್ತೆಯಲ್ಲಿ ಇಂದಿರಾ ಕ್ಯಾಂಟೀನ್ ಗೆ ಚಾಲನೆ ನೀಡಲಿದ್ದಾರೆ.

    ಬಳಿಕ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಕೆಪಿಸಿಸಿ ಆಯೋಜಿಸಿರುವ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಈ ಸಮಾವೇಶದಲ್ಲಿ ಮೂರು ದಿನಗಳ ಅಮಿತ್ ಶಾ ಪ್ರವಾಸಕ್ಕೆ ತಿರುಗೇಟು ನೀಡುವ ಸಾಧ್ಯತೆಯಿದ್ದು, ಶಾ ಸವಾಲಿಗೆ ಜವಾಬು ಕೊಡುವ ಸಾಧ್ಯತೆಯೂ ಇದೆ.

    ಇವತ್ತಿನಿಂದ ಒಟ್ಟು 101 ಕ್ಯಾಂಟೀನ್ ಗಳು ಕಾರ್ಯಾರಂಭ ಮಾಡಲಿದೆ. ಬಡವರಿಗೆ ರಿಯಾಯಿತಿ ದರದಲ್ಲಿ ತಿಂಡಿ, ಊಟ ಪೂರೈಕೆ ಆಗಲಿದ್ದು, ಹೈಟೆಕ್ ಇಂದಿರಾ ಕ್ಯಾಂಟೀನ್ ನ ಜನಸಾಮಾನ್ಯರ ಸೇವೆಗೆ ಅರ್ಪಣೆಯಾಗಲಿದೆ. ಉಳಿದ 97 ಕ್ಯಾಂಟೀನ್ ಅಕ್ಟೋಬರ್ 2ರಂದು ಚಾಲನೆಯಾಗುತ್ತದೆ. ಅಂದಹಾಗೆ ಒಟ್ಟಾರೆ ಕ್ಯಾಂಟೀನ್ ಗಳಿಗೆ ಒಂದು ದಿನಕ್ಕೆ 3 ಲಕ್ಷ ಜನರು ಬರುವ ನಿರೀಕ್ಷೆಯಿದೆ.

    https://twitter.com/KtakaCongress/status/895992670744530944

  • ಇಂದಿರಾ ಕ್ಯಾಂಟೀನ್‍ಗೆ ಪಾರ್ಕ್ ಜಾಗವೇ ಬಲಿ-ಬಿಬಿಎಂಪಿ ನಡೆಗೆ ಬಿಜೆಪಿಗರು ಕಿಡಿ

    ಇಂದಿರಾ ಕ್ಯಾಂಟೀನ್‍ಗೆ ಪಾರ್ಕ್ ಜಾಗವೇ ಬಲಿ-ಬಿಬಿಎಂಪಿ ನಡೆಗೆ ಬಿಜೆಪಿಗರು ಕಿಡಿ

    – ಸುಪ್ರೀಂ ಆದೇಶ ಮೀರಿದ ಪದ್ಮಾವತಿ ಆಡಳಿತ

    ಬೆಂಗಳೂರು: ಆಗಸ್ಟ್ 15ಕ್ಕೆ ಇಂದಿರಾ ಕ್ಯಾಂಟೀನ್ ಲಾಂಚ್ ಮಾಡ್ಬೇಕು. ಸಮಯ ಬೇರೆ ಕಡಿಮೆಯಿದ್ದು, ಜಾಗನೂ ಸಿಕ್ತಿಲ್ಲ. ಹೀಗಾಗಿ ನಗರದ ಸಿಕ್ಕಸಿಕ್ಕ ಜಾಗದಲ್ಲೆಲ್ಲಾ ರಾಜ್ಯ ಸರ್ಕಾರ ಇಂದಿರಾ ಕ್ಯಾಂಟೀನ್ ಮಾಡೋಕೆ ಹೊರಟಿದೆ. ಇದೀಗ ಈ ಇಂದಿರಾ ಕ್ಯಾಂಟೀನ್‍ಗೆ ಪಾರ್ಕ್‍ವೊಂದು ಬಲಿಯಾಗಿದೆ.

    ಇಂದಿರಾ ಕ್ಯಾಂಟಿನ್ ಗಾಗಿ ನಗರದ ಕುರುಬರ ಹಳ್ಳಿಯ ಸಿದ್ಧಾರೂಢ ಪಾರ್ಕನ್ನು ಅರ್ಧ ಕತ್ತರಿಸಿ ತೆಗೆದಿದ್ದಾರೆ. ಬಿಬಿಎಂಪಿ ಅಧಿಕಾರಿಗಳು ಪಾರ್ಕ್ ಇತ್ತು ಅನ್ನೋದು ಗುರುತು ಸಿಗದ ಹಾಗೆ ಆ ಜಾಗವನ್ನ ಕಿತ್ತೊಗೆದಿದ್ದಾರೆ. ಕ್ಯಾಂಟೀನ್ ಮಾಡೋದಕ್ಕೆ ನಮ್ಮ ಅಭ್ಯಂತರವಿಲ್ಲ, ಆದ್ರೆ ಪಾರ್ಕ್ ಜಾಗವನ್ನು ಬಳಸೋಕೆ ನಾವು ಅವಕಾಶ ಕೊಡಲ್ಲ ಎಂದು ಬಿಜೆಪಿ ನಾಯಕರು ಅಂತಿದ್ದಾರೆ.

    ಪಾರ್ಕ್ ಹಾಗೂ ಮೈದಾನದ ಜಾಗವನ್ನು ಕ್ಯಾಂಟೀನ್‍ಗೆ ಬಳಸಲ್ಲ ಅಂತ ಬಿಬಿಎಂಪಿ ಹೇಳ್ತಿದೆ. ಇಲ್ಲಿ ನೋಡಿದ್ರೆ ಕ್ಯಾಂಟೀನ್‍ಗಾಗಿ ಪಾರ್ಕ್ ಧ್ವಂಸಗೊಳಸಿದ್ದಾರೆ. ಆಟದ ಮೈದಾನ ಹಾಗೂ ಪಾರ್ಕ್‍ಗಳಲ್ಲಿ ಯಾವುದೇ ಈ ರೀತಿಯ ಚಟುವಟಿಕೆಗಳನ್ನು ನಡೆಸೋದಕ್ಕೆ ಅವಕಾಶವಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.

     

  • ರಾಯಚೂರಿನಲ್ಲಿ ಸಿದ್ದರಾಮಯ್ಯ ಅಭಿಮಾನಿಯಿಂದ `ಅಣ್ಣಾ ಕ್ಯಾಂಟೀನ್’: 5 ರೂ. ತಿಂಡಿ, 10 ರೂ. ಊಟ

    ರಾಯಚೂರಿನಲ್ಲಿ ಸಿದ್ದರಾಮಯ್ಯ ಅಭಿಮಾನಿಯಿಂದ `ಅಣ್ಣಾ ಕ್ಯಾಂಟೀನ್’: 5 ರೂ. ತಿಂಡಿ, 10 ರೂ. ಊಟ

    ರಾಯಚೂರು: ತಮಿಳುನಾಡಿನ ಅಮ್ಮಾ ಕ್ಯಾಂಟಿನ್ ಮಾದರಿಯಲ್ಲೇ ಬೆಂಗಳೂರಿನಲ್ಲಿ ಇಂದಿರಾ ಕ್ಯಾಂಟಿನ್ ತೆರೆಯಲು ಸರ್ಕಾರ ಸಿದ್ಧತೆ ನಡೆಸಿದೆ. ಆದ್ರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಮಾನಿಯೊಬ್ಬರು ರಾಯಚೂರಿನಲ್ಲಿ ಅಣ್ಣಾ ಕ್ಯಾಂಟೀನ್ ತೆಗೆದು ಬಡವರಿಗೆ ಕಡಿಮೆ ದರದಲ್ಲಿ ಊಟ ನೀಡುತ್ತಿದ್ದಾರೆ.

    ರಾಜ್ಯ ಸರ್ಕಾರದ ಇಂದಿರಾ ಕ್ಯಾಂಟಿನ್ ಆರಂಭಿಸುವ ಮೊದಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಮಾನಿಯಾದ ರಾಯಚೂರಿನ ಮಾನ್ವಿ ಪಟ್ಟಣದ ನಿವಾಸಿ ಎಂ.ಈರಣ್ಣ ಹಾಗೂ ಅವರ ಸ್ನೇಹಿತರು `ಅಣ್ಣಾ ಕ್ಯಾಂಟೀನ್’ ಪ್ರಾಂಭಿಸಿದ್ದಾರೆ. ಅತ್ಯಂತ ಕಡಿಮೆ ದರದಲ್ಲಿ ತಿಂಡಿ, ಊಟ ಒದಗಿಸುವ ಮೂಲಕ ಇಡೀ ದೇಶದಲ್ಲೇ ಮನೆ ಮಾತಾದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಹೆಸರಿನ ಅಮ್ಮಾ ಕ್ಯಾಂಟಿನ್ ಮಾದರಿಯ ಪ್ರಯೋಗ ಈಗ ರಾಜ್ಯದಲ್ಲೂ ಆರಂಭವಾಗಲಿದೆ.

    5 ರೂಪಾಯಿಗೆ ತಿಂಡಿ, 10 ರೂಪಾಯಿಗೆ ಶುಚಿ-ರುಚಿಯಾದ ಊಟ ಕೊಡುತ್ತಿದ್ದಾರೆ. ಕ್ಯಾಂಟಿನ್‍ನಲ್ಲಿ ಇಡ್ಲಿ, ಪಲಾವ್, ಪೂರಿ ಸೇರಿದಂತೆ ಒಂದೊಂದು ದಿನ ಒಂದೊಂದು ತಿಂಡಿ ಸಿಗುತ್ತೆ. ಅನ್ನ ಸಾಂಬರ್, ಚಿತ್ರಾನ್ನ, ಮಿರ್ಚಿ ಊಟ ಕಡಿಮೆ ದುಡ್ಡಿನಲ್ಲಿ ರೈತರ ಹೊಟ್ಟೆ ತುಂಬಿಸುತ್ತಿದೆ. ಕ್ಯಾಂಟಿನ್‍ನಲ್ಲಿ ಬೆಳಿಗ್ಗೆ 8 ಗಂಟೆಯಿಂದ 11 ಗಂಟೆವರೆಗೆ ತಿಂಡಿ ಸಿಗುತ್ತದೆ. ಮಧ್ಯಾಹ್ನ 1 ರಿಂದ 4 ಗಂಟೆವರೆಗೆ ಊಟ ಸಿಗುತ್ತದೆ.

    ವೃತ್ತಿಯಲ್ಲಿ ಗುತ್ತಿಗೆದಾರರಾಗಿರುವ ಎಂ.ಈರಣ್ಣ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ. ಸತತ ಎರಡು ವರ್ಷಗಳಿಂದ ರಾಯಚೂರಿನಲ್ಲಿ ಭೀಕರ ಬರಗಾಲ ಎದುರಾಗಿದ್ದು, ರೈತರು ಗುಳೆ ಹೋಗುವುದು ನಿಂತಿಲ್ಲ. ಹೀಗಾಗಿ ಮಾನ್ವಿಯ ಟಿಎಪಿಎಂಸಿ ಆವರಣದಲ್ಲಿ ಮುಖ್ಯವಾಗಿ ರೈತರಿಗಾಗಿ ಈರಣ್ಣ ಅವರು ತಮ್ಮ ನಾಲ್ಕೈದು ಜನ ಸ್ನೇಹಿತರೊಂದಿಗೆ ಅಣ್ಣಾ ಕ್ಯಾಂಟಿನ್ ತೆರೆದಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆ ಗಮನದಲ್ಲಿದ್ರೂ ರಾಜಕೀಯ ಬೇರೆ, ಜನಸೇವೆ ಬೇರೆ. ಜನರ ಕಷ್ಟಕ್ಕೆ ಸ್ಪಂದಿಸಲು ಕ್ಯಾಂಟಿನ್ ತೆರೆದಿದ್ದೇವೆ ಎಂದು ಈರಣ್ಣ ಹೇಳುತ್ತಾರೆ.

    ಈಗಾಗಲೇ ಮಾನ್ವಿ, ಸಿರವಾರ, ಕಲ್ಲೂರು, ಪೋತ್ನಾಳ ಸೇರಿದಂತೆ ವಿವಿಧೆಡೆ ಕುಡಿಯುವ ನೀರಿನ ಅರವಟಿಗೆಗಳನ್ನ ತೆರೆದಿರುವ ಸಿದ್ದರಾಮಯ್ಯ ಅಭಿಮಾನಿಗಳು, ಮೊದಲ ಬಾರಿಗೆ ಅಣ್ಣಾ ಕ್ಯಾಂಟಿನ್ ಆರಂಭಿಸಿದ್ದಾರೆ. ರಾಜ್ಯ ಸರ್ಕಾರ ಅಗಸ್ಟ್ 15ಕ್ಕೆ ಇಂದಿರಾ ಕ್ಯಾಂಟಿನ್ ಆರಂಭಿಸುವ ಮುನ್ನವೇ ರಾಯಚೂರಿನ ಮಾನ್ವಿಯಲ್ಲಿ ಅಣ್ಣಾ ಕ್ಯಾಂಟಿನ್ ಹೆಸರು ಮಾಡುತ್ತಿದೆ.