Tag: Indira Canteen

  • ಕಾಚರಕನಹಳ್ಳಿಯಲ್ಲಿ ಇಂದಿರಾ ಕ್ಯಾಂಟೀನೇ ಇಲ್ಲ, ಆದ್ರೂ ಆಹಾರ ಪೂರೈಕೆ ಆಗ್ತಿದ್ಯಂತೆ!- ಸಚಿವ ಜಾರ್ಜ್ ಕ್ಷೇತ್ರದಲ್ಲಿ ಭಾರೀ ಅಕ್ರಮ

    ಕಾಚರಕನಹಳ್ಳಿಯಲ್ಲಿ ಇಂದಿರಾ ಕ್ಯಾಂಟೀನೇ ಇಲ್ಲ, ಆದ್ರೂ ಆಹಾರ ಪೂರೈಕೆ ಆಗ್ತಿದ್ಯಂತೆ!- ಸಚಿವ ಜಾರ್ಜ್ ಕ್ಷೇತ್ರದಲ್ಲಿ ಭಾರೀ ಅಕ್ರಮ

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಇಂದಿರಾ ಕ್ಯಾಂಟೀನ್ ಕೂಡಾ ಒಂದು. ಬೆಂಗಳೂರಿಗೆ ಸೀಮಿತವಾಗಿದ್ದ ಈ ಯೋಜನೆ ಚುನಾವಣೆ ಹೊತ್ತಲ್ಲಿ ಜಿಲ್ಲಾ ಕೇಂದ್ರಗಳು, ತಾಲೂಕು ಕೇಂದ್ರಗಳಿಗೂ ವಿಸ್ತರಣೆಗೊಳ್ಳುತ್ತಿದೆ. ಆದ್ರೆ ಬಡವರ ಹೊಟ್ಟೆ ತುಂಬಿಸಬೇಕಿದ್ದ ಯೋಜನೆಯಲ್ಲಿ ಆರಂಭದಲ್ಲೇ ಹಗರಣ ನಡೆದಿರೋದು ಬೆಳಕಿಗೆ ಬಂದಿದೆ.

    ಇಂದಿರಾ ಕ್ಯಾಂಟೀನ್ ಇಲ್ಲದೇ ಹೋದರೂ ಅನ್ನಾಹಾರ ಪೂರೈಸಿದ್ದೇವೆ ಅಂತ ಸುಳ್ಳು ಹೇಳಿ ದುಡ್ಡು ಹೊಡೆದಿರೋದು ಬಯಲಾಗಿದೆ. ಬೆಂಗಳೂರು ಅಭಿವೃದ್ಧಿ ಸಚಿವ ಕೆಜೆ ಜಾರ್ಜ್ ಸ್ವಕ್ಷೇತ್ರ ಸರ್ವಜ್ಞನಗರದ ಕಾಚರಕನಹಳ್ಳಿಯಲ್ಲಿ ಇಂದಿರಾ ಕ್ಯಾಂಟೀನ್ ಇಲ್ಲ, ಮೊಬೈಲ್ ಕ್ಯಾಂಟೀನೂ ಇಲ್ಲ. ಆದ್ರೆ ಜನವರಿ 1ರಿಂದಲೇ ಊಟ ಪೂರೈಸಲಾಗ್ತಿದೆ ಅಂತ ದಾಖಲೆಗಳಲ್ಲಿ ತೋರಿಸಲಾಗಿದೆ.

    ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ಪ್ರತಿನಿಧಿಸೋ ವಾರ್ಡ್‍ನಲ್ಲಾಗಿರೋ ದೋಖಾದ ಬಗ್ಗೆ ಕರ್ನಾಟಕ ಕಾರ್ಮಿಕ ವೇದಿಕೆಯ ಅಧ್ಯಕ್ಷ ನಾಗೇಶ್ ದಾಖಲೆ ಸಂಗ್ರಹಿಸಿದ್ದಾರೆ. ಈ ಕುರಿತು ಎಸಿಬಿಗೂ ದೂರು ನೀಡಲಿದ್ದಾರೆ. ಇಲ್ಲದ ಇಂದಿರಾ ಕ್ಯಾಂಟೀನ್ ಹೆಸರಿನಲ್ಲಾಗಿರೋ ಅಕ್ರಮದ ಬಗ್ಗೆ ಪದ್ಮನಾಭ್ ರೆಡ್ಡಿ ದಿಗ್ಬ್ರಮೆ ವ್ಯಕ್ತಪಡಿಸಿದ್ದಾರೆ.

  • ಇಂದಿರಾ ಕ್ಯಾಂಟೀನ್ ಮಹಿಳಾ ಕ್ಯಾಷಿಯರ್ ಗೆ ಮೇಲಾಧಿಕಾರಿಯಿಂದ ಲೈಂಗಿಕ ಕಿರುಕುಳ!

    ಇಂದಿರಾ ಕ್ಯಾಂಟೀನ್ ಮಹಿಳಾ ಕ್ಯಾಷಿಯರ್ ಗೆ ಮೇಲಾಧಿಕಾರಿಯಿಂದ ಲೈಂಗಿಕ ಕಿರುಕುಳ!

    ಬೆಂಗಳೂರು: ಇಂದಿರಾ ಕ್ಯಾಂಟೀನ್ ನಲ್ಲಿ ಮಹಿಳಾ ಕ್ಯಾಷಿಯರ್ ಗೆ ಮೇಲಾಧಿಕಾರಿ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಘಟನೆ ಬೆಂಗಳೂರು ಹೊರವಲಯ ಬೊಮ್ಮನಹಳ್ಳಿಯಲ್ಲಿ ನಡೆದಿದೆ.

    ನೇತ್ರಾವತಿ ಎಂಬವರು ಮೇಲಾಧಿಕಾರಿ ಸತೀಶ್ ವಿರುದ್ಧ ಲೈಂಗಿಕ ಕಿರುಕುಳದ ದೂರು ದಾಖಲಿಸಿದ್ದಾರೆ. ನೇತ್ರಾವತಿ ಬಿಬಿಎಂಪಿ 190ನೇ ವಾರ್ಡ್ ನಲ್ಲಿರುವ ಇಂದಿರಾ ಕ್ಯಾಂಟೀನ್ ನಲ್ಲಿ ಕ್ಯಾಷಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

    ಕ್ಯಾಂಟೀನ್ ನಲ್ಲಿ ಕ್ಯಾಷಿಯರ್ ಆಗಿ ಮುಂದುವರೆಯಬೇಕಾದರೆ ತನ್ನೊಂದಿಗೆ ಅಕ್ರಮ ಸಂಬಂಧ ಹೊಂದುವಂತೆ ಸತೀಶ್ ಒತ್ತಡ ಹೇರುತ್ತಿದ್ದಾನೆ. ರಾತ್ರಿ ಸಮಯದಲ್ಲಿ ಫೋನ್ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ತನ್ನೊಂದಿಗೆ ಲೈಂಗಿಕ ಸಂಬಂಧ ಹೊಂದದಿದ್ದಲ್ಲಿ ಕುಟುಂಬದವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದಾರೆಂದು ಪೊಲೀಸ್ ಠಾಣೆಯಲ್ಲಿ ನೇತ್ರಾವತಿ ದೂರು ದಾಖಲಿಸಿದ್ದಾರೆ.

    ದೂರು ದಾಖಲಾದ ಬಳಿಕ ಆರೋಪಿ ಸತೀಶ್ ನಾಪತ್ತೆಯಾಗಿದ್ದು, ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

  • ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಸ್ಥಳವಿಲ್ಲ ಎಂದ ಬಿಜೆಪಿ ಕಾರ್ಪೋರೇಟರ್ ಗಳು

    ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಸ್ಥಳವಿಲ್ಲ ಎಂದ ಬಿಜೆಪಿ ಕಾರ್ಪೋರೇಟರ್ ಗಳು

    ಬೆಂಗಳೂರು: ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ನಮ್ಮ ವಾರ್ಡ್ ನಲ್ಲಿ ಸ್ಥಳವಿಲ್ಲ ಎಂದು ಬಿಜೆಪಿ ಕಾರ್ಪೋರೇಟರ್ ಗಳು ಬಡವರ ಊಟಕ್ಕೆ ಕಲ್ಲು ಹಾಕ್ತಿದ್ದಾರೆ ಎಂದು ಆರೋಪ ಕೇಳಿ ಬಂದಿದೆ. ಐದು ರೂಪಾಯಿಯಲ್ಲಿ ಬಡವರ ಹೊಟ್ಟೆ ತುಂಬಿಸೋ ಇಂದಿರಾ ಕ್ಯಾಂಟೀನ್ ಬೇಡ ಅಂತಾ ಅನ್ನುತ್ತಿದ್ದಾರೆ.

    ಬೆಂಗಳೂರಿನ ಪ್ರತಿ ವಾರ್ಡ್ ನಲ್ಲೂ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಬೇಕು ಅನ್ನೋದು ಸರ್ಕಾರದ ಆದೇಶ. ಆದರೆ 24 ವಾರ್ಡ್ ಗಳಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಸ್ಥಳಾವಕಾಶ ಲಭ್ಯವಾಗಿಲ್ಲ. ಅಶ್ಚರ್ಯ ಅಂದ್ರೆ 24 ರಲ್ಲಿ 16 ವಾರ್ಡ್‍ಗಳು ಬಿಜೆಪಿ ಕಾರ್ಪೋರೇಟರ್ ಗಳಿರೋ ವಾರ್ಡ್ ಗಳು. ಇಂದಿರಾ ಕ್ಯಾಂಟೀನ್‍ಗೆ ಸ್ಥಳಾವಕಾಶ ಮಾಡಿಕೊಡುವ ವಿಚಾರವಾಗಿ ರಾಜಕೀಯ ನಡೆಯುತ್ತಿದಿಯಾ ಎಂಬ ಅನುಮಾನಕ್ಕೆ ಕಾರಣವಾಗಿದೆ.

    ನಮ್ಮ ವಾರ್ಡ್ ಗಳಲ್ಲಿ ಇಂದಿರಾ ಕ್ಯಾಂಟೀನ್ ಬೇಡಾ ಎಂದು ಹೇಳುತ್ತಿರುವ ಕೆಲ ಬಿಜೆಪಿ ಕಾರ್ಪೋರೇಟರ್ ಗಳು ಕ್ಯಾಂಟೀನ್ ನಿರ್ಮಾಣಕ್ಕೆ ಸ್ಥಳವಿಲ್ಲ ಎನ್ನುತ್ತಿದ್ದಾರೆ. ಬಿಬಿಎಂಪಿ ಪೂರ್ವ ವಲಯದ ಕಾಚಕರನಹಳ್ಳಿ, ಮನೋರಾಯನ ಪಾಳ್ಯ, ಹಲಸೂರು ವಾರ್ಡ್, ಪಶ್ಚಿಮ ವಲಯದ ಕಾಡುಮಲ್ಲೇಶ್ವರ, ದಕ್ಷಿಣ ವಲಯ ಕೆಂಪಾಪುರ, ಶ್ರೀನಗರ, ಗಿರಿನಗರ – 162 , ಗಣೇಶಮಂದಿರ – 165 ಯಡಿಯೂರು, ಜಯನಗರ ಪೂರ್ವ, ಹಾಗೂ ಬೊಮ್ಮನಹಳ್ಳಿ ವಲಯದ ಯಲೆಚೇನ ಹಳ್ಳಿ ಸೇರಿದಂತೆ ಬಿಜೆಪಿ ಕಾಪೊರ್ರೇಟರ್ ಗಳಿರೋ 13 ವಾರ್ಡ್ ಗಳಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಸ್ಥಳವಿಲ್ಲ ಎಂದು ಹೇಳಲಾಗಿದೆ.

    ಬಿಜೆಪಿ ಕಾರ್ಪೋರೇಟರ್ ಗಳಿರೋ ಕೆಲವೊಂದು ವಾರ್ಡ್ ಗಳ ಇಂದಿರಾ ಕ್ಯಾಂಟೀನ್‍ಗಳನ್ನು ಸ್ಥಳವಾಕಾಶವಾಗದೆ ಇರೋದ್ರಿಂದ ಪಕ್ಕದ ವಾರ್ಡ್ ಗಳಲ್ಲಿ ನಿರ್ಮಿಸಲಾಗಿದೆ.

    ಯಾವ ಯಾವ ವಾರ್ಡ್ ಗಳಲ್ಲಿ ಕ್ಯಾಂಟೀನ್ ಇಲ್ಲ:

    1. ಮಹದೇವ ಪುರ ವಲಯದ ಹೆಚ್‍ಎಎಲ್ ವಿಮಾನ ನಿಲ್ದಾಣ ವಾರ್ಡ್
    2. ಬಿಬಿಎಂಪಿ ಪೂರ್ವ ವಲಯದ ಕಾಚಕರನಹಳ್ಳಿ -ಬಿಜೆಪಿ
    * ಮನೋರಾಯನ ಪಾಳ್ಯ -33 -ಬಿಜೆಪಿ
    * ಹಲಸೂರು – 90 -ಬಿಜೆಪಿ

    3. ಪಶ್ಚಿಮ ವಲಯದ ಕಾಡುಮಲ್ಲೇಶ್ವರ- ಬಿಜೆಪಿ
    * ಓಕಳಿ ಪುರಂ – 96
    * ದಯಾನಂದ ನಗರ -97
    * ಶಿವಾಜಿ ನಗರ -92
    * ಶ್ರೀ ರಾಮಮಂದಿರಾ – ಬಿಜೆಪಿ

    3. ರಾಜರಾಜೇಶ್ವರಿ ವಲಯ
    * ಲಕ್ಷ್ಮಿದೇವಿ ನಗರ – 42
    * ಲಗ್ಗೆರೆ – ಜೆಡಿಎಸ್
    * ಜ್ಞಾನ ಭಾರತಿ -ಬಿಜೆಪಿ

    4. ದಕ್ಷಿಣ ವಲಯ
    ಕೆಂಪಾಪುರ -122
    ಬಾಪೂಜೀನಗರ – 134
    ಹೊಂಬೆಗೌಡ ನಗರ
    ಶ್ರೀನಗರ – 156 – ಬಿಜೆಪಿ
    ಗಿರಿನಗರ – 162-ಬಿಜೆಪಿ
    ಗಣೇಶಮಂದಿರ -165 -ಬಿಜೆಪಿ
    ಯಡಿಯೂರು – ಬಿಜೆಪಿ
    ಜಯನಗರ ಪೂರ್ವ -153 – ಬಿಜೆಪಿ
    ಮಡಿವಾಳ
    ಜೆಪಿ ನಗರ -177- ಬಿಜೆಪಿ

    5. ಬೊಮ್ಮನಹಳ್ಳಿ
    ಯಲೆಚೇನ ಹಳ್ಳಿ -185- ಬಿಜೆಪಿ
    * ಯಲಹಂಕ
    ಥಣಿಸಂದ್ರ – 6

     

  • ಒಂದೇ ವಾರ್ಡ್ ನಲ್ಲಿ ಮೂರು ಇಂದಿರಾ ಕ್ಯಾಂಟೀನ್- ಸರ್ಕಾರದ ವಿರುದ್ಧ ಸ್ಥಳೀಯರ ಆಕ್ರೋಶ

    ಒಂದೇ ವಾರ್ಡ್ ನಲ್ಲಿ ಮೂರು ಇಂದಿರಾ ಕ್ಯಾಂಟೀನ್- ಸರ್ಕಾರದ ವಿರುದ್ಧ ಸ್ಥಳೀಯರ ಆಕ್ರೋಶ

    ಬೆಂಗಳೂರು: ನಗರದ ಪ್ರತಿ ವಾರ್ಡ್ ನಲ್ಲೊಂದು ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡೋದು ಸರ್ಕಾರದ ಯೋಜನೆ. ಆದರೆ ಇಲ್ಲೊಂದು ವಾರ್ಡ್ ನಲ್ಲಿ ಮೂರು ಇಂದಿರಾ ಕ್ಯಾಂಟೀನ್ ಗಳನ್ನು ನಿರ್ಮಿಸಲಾಗಿದ್ದು, ಇದೀಗ ಚರ್ಚೆಗೆ ಗ್ರಾಸವಾಗಿದೆ.

    ಹೌದು. ಕಾಮಾಕ್ಷಿ ಪಾಳ್ಯ ವಾರ್ಡ್ ಸ್ಥಳೀಯ ಬಿಬಿಎಂಪಿ ಸದಸ್ಯೆಯ ವಿರೋಧದ ನಡುವೆಯೂ ಕಸ ವಿಂಗಡನೆ ಘಟಕದ ಪಕ್ಕದಲ್ಲೇ ಈ ಕ್ಯಾಂಟೀನ್ ನಿರ್ಮಾಣ ಮಾಡಲಾಗಿದೆ ಅನ್ನೋದು ಕಾರ್ಪೋರೇಟರ್ ಪ್ರತಿಮಾ ಆರೋಪ. ಅದು ಹೋಗ್ಲಿ ಅಂದ್ರೆ ಈ ಇಂದಿರಾ ಕ್ಯಾಂಟೀನ್ ಇರುವ ರಸ್ತೆಯಲ್ಲೇ ಕೇವಲ 500 ಮೀಟರ್ ದೂರದಲ್ಲಿ ಮತ್ತೊಂದು ಕ್ಯಾಂಟೀನ್ ನಿರ್ಮಿಸಲಾಗಿದೆ. ಅದು ಪಕ್ಕದ ಗೋವಿಂದ್ ರಾಜ್ ನಗರ ವಾರ್ಡ್ ಗೆ ಸೇರಬೇಕಿದ್ದ ಕ್ಯಾಂಟೀನ್ ಅಗಿದ್ದು, ಕಾಮಾಕ್ಷಿ ಪಾಳ್ಯ ವಾರ್ಡ್ ನಲ್ಲಿ ನಿರ್ಮಿಸಿರೋದಕ್ಕೆ ಪ್ರತಿಮಾ ಆಕ್ರೋಶ ವ್ಯಕ್ತಪಡಿಸಿದ್ರು.

    ಒಂದಲ್ಲ, ಎರಡಲ್ಲ ಅಷ್ಟು ಸಾಲ್ದು ಅಂತಾ ಇದೀಗಾ ಇದೇ ವಾರ್ಡ್ ನ ಶಾರದ ಕಾಲೋನಿ ಬಸ್ ನಿಲ್ದಾಣದಲ್ಲಿ ಮತ್ತೊಂದು ಅಂದ್ರೆ ಮೂರನೇ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಪಾಯ ತೋಡಲಾಗಿದೆ. ಎಲ್ಲ ವಾರ್ಡ್ ನ ಸಾರ್ವಜನಿಕರಿಗೆ ಸಲ್ಲ ಬೇಕಿದ್ದ ಜನ ಪರ ಯೋಜನೆಯನ್ನು ಎಲ್ಲೆಂದರಲ್ಲಿ ನಿರ್ಮಾಣ ಮಾಡುತ್ತಿರೋದರ ಬೆನ್ನಲ್ಲೇ ಸಾರ್ವಜನಿಕರ ಹಿತಾಸಕ್ತಿಗಿಂತ ಕೇವಲ ಪಬ್ಲಿಸಿಟಿ ಗಿಮಿಕ್ ಮಾತ್ರ ಇದೆ ಅನ್ನೋದಾಗಿ ಆರೋಪಿಸಿದ್ರು.

    ವಾರ್ಡ್ ನಲ್ಲಿ ಮೂರು ಇಂದಿರಾ ಕ್ಯಾಂಟೀನ್ ನಿರ್ಮಾಣದ ಬಗ್ಗೆ ಸಾರ್ವಜನಿಕರು ಅಸಮಧಾನ ವ್ಯಕ್ತಪಡಿಸಿದ್ದು, ಜನರ ಹಿತಾಸಕ್ತಿಗಿಂತ ಸರ್ಕಾರಕ್ಕೆ ಲೆಕ್ಕ ತೋರಿಸೋ ಉದ್ದೇಶದಿಂದ ಈ ರೀತಿ ಹಠಕ್ಕೆ ಬಿದ್ದು ಅಕ್ಕ ಪಕ್ಕದ ವಾರ್ಡ್ ಗಳ ಇಂದಿರಾ ಕ್ಯಾಂಟೀನ್ ಗಳನ್ನು ಅನಗತ್ಯವಾಗಿ ನಿರ್ಮಿಸಿದ್ದಾರೆ ಅಂತ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

     

  • ಇಂದಿರಾ ಕ್ಯಾಂಟೀನ್ ಆಹಾರದಲ್ಲಿ ಜಿರಳೆ ಹಾಕಿದ್ದ ಇಬ್ಬರು ಅರೆಸ್ಟ್

    ಇಂದಿರಾ ಕ್ಯಾಂಟೀನ್ ಆಹಾರದಲ್ಲಿ ಜಿರಳೆ ಹಾಕಿದ್ದ ಇಬ್ಬರು ಅರೆಸ್ಟ್

    ಬೆಂಗಳೂರು: ಇಂದಿರಾ ಕ್ಯಾಂಟೀನ್‍ನ ಉಪಹಾರದಲ್ಲಿ ಜಿರಳೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಮಾಕ್ಷಿಪಾಳ್ಯ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

    ಆಟೋ ಡ್ರೈವರ್ ಆಗಿರುವ ಹೇಮಂತ್ ಮತ್ತು ದೇವರಾಜ್ ಬಂಧಿತ ಆರೋಪಿಗಳು. ಕಾಮಾಕ್ಷಿಪಾಳ್ಯ ದ ನಿವಾಸಿಗಳಾದ ಈ ಇಬ್ಬರೂ ಪ್ರಚಾರಕ್ಕಾಗಿ ಉಪಹಾರದಲ್ಲಿ ಜಿರಳೆ ಹಾಕಿರುವುದಾಗಿ ಪೊಲೀಸ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ.

    ಅಕ್ಟೋಬರ್ 20ರಂದು ರಾಜರಾಜೇಶ್ವರಿನಗರದ ಕೊಟ್ಟಿಗೆಪಾಳ್ಯದ ಇಂದಿರಾ ಕ್ಯಾಂಟೀನ್‍ನಲ್ಲಿ ಒಂದೇ ದಿನದಲ್ಲಿ ರೈಸ್‍ಬಾತ್‍ನಲ್ಲಿ ಎರಡೆರೆಡು ಜಿರಳೆ ಸಿಕ್ಕಿತ್ತು. ಜಿರಲೆ ಸಿಕ್ಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

    ಈ ಸಂಬಂಧ ಬಿಬಿಎಂಪಿ ಮೇಯರ್ ಸಂಪತ್ ಕುಮಾರ್ ಪ್ರತಿಕ್ರಿಯಿಸಿ, ಇಂದಿರಾ ಕ್ಯಾಂಟೀನ್ ಹೆಸರು ಹಾಳು ಮಾಡುವ ಉದ್ದೇಶದಿಂದಲೇ ಜಿರಳೆ ರಾಮಾಯಣ ಸೃಷ್ಟಿಸಿದ್ದಾರೆ. ಈ ಕುರಿತು ತನಿಖೆಯನ್ನು ನಡೆಸಿ ಸತ್ಯಾಂಶವನ್ನು ಹೊರತರುತ್ತೇವೆ ಎಂದು ತಿಳಿಸಿದ್ದರು.

  • ಇಂದಿರಾ ಕ್ಯಾಂಟೀನ್‍ನಲ್ಲಿ ಜಿರಲೆ ಪತ್ತೆ-ಪೊಲೀಸ್ ತನಿಖೆಗೆ ಆದೇಶ

    ಇಂದಿರಾ ಕ್ಯಾಂಟೀನ್‍ನಲ್ಲಿ ಜಿರಲೆ ಪತ್ತೆ-ಪೊಲೀಸ್ ತನಿಖೆಗೆ ಆದೇಶ

    ಬೆಂಗಳೂರು: ಇಂದಿರಾ ಕ್ಯಾಂಟೀನ್ ಆಹಾರದಲ್ಲಿ ಜಿರಲೆ ಕಾಣಿಸಿಕೊಂಡಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ವಿಡಿಯೋ ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಈ ಕುರಿತು ತನಿಖೆ ನಡೆಸುವಂತೆ ಆದೇಶ ನೀಡಲಾಗಿದೆ.

    ಎರಡು ದಿನಗಳ ಹಿಂದೇ ರಾಜರಾಜೇಶ್ವರಿನಗರದ ಕೊಟ್ಟಿಗೆಪಾಳ್ಯ ಇಂದಿರಾ ಕ್ಯಾಂಟೀನ್‍ನಲ್ಲಿ ಒಂದೇ ದಿನದಲ್ಲಿ ರೈಸ್‍ಬಾತ್‍ನಲ್ಲಿ ಎರಡೆರೆಡು ಜಿರಲೆ ಸಿಕ್ಕಿತ್ತು. ಇದೇ ಕಾರಣಕ್ಕೆ ಸಾರ್ವಜನಿಕರು ಆಕ್ರೋಶಗೊಂಡಿದ್ದು, ಈ ಬಗೆಗಿನ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿತ್ತು. ಆದರೆ ಇಂದಿರಾ ಕ್ಯಾಂಟೀನ್‍ನಲ್ಲಿ ಸಿಕ್ಕ ಜಿರಲೆ ಯಾರೋ ತಂದು ಹಾಕಿರುವುದು ಎಂದು ಮೇಯರ್ ಸಂಪತ್ ರಾಜ್ ಹೇಳಿಕೆ ನೀಡಿದ್ದಾರೆ.

    ಇಂದಿರಾ ಕ್ಯಾಂಟೀನ್ ಹೆಸರು ಹಾಳು ಮಾಡುವ ಉದ್ದೇಶದಿಂದಲೇ ಜಿರಲೆ ರಾಮಾಯಣ ಸೃಷ್ಟಿಸಿದ್ದಾರೆ. ಈ ಕುರಿತು ತನಿಖೆಯನ್ನು ನಡೆಸಿ ಸತ್ಯಾಂಶವನ್ನು ಹೊರತರುತ್ತೇವೆ ಎಂದು ತಿಳಿಸಿದ್ದಾರೆ.

    ಈ ನಡುವೆ ಜಿರಲೆ ಸಿಕ್ಕಿರುವ ಬಗ್ಗೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ನಾಲ್ವರು ವಿರುದ್ಧ ದೂರು ದಾಖಲು ಮಾಡಲಾಗಿದೆ.

  • ಇಂದಿರಾ ಕ್ಯಾಂಟೀನ್‍ನಲ್ಲಿ ಕಾಣಿಸಿಕೊಂಡ ಬಿಗ್ ಬಾಸ್ ಪ್ರಥಮ್!

    ಇಂದಿರಾ ಕ್ಯಾಂಟೀನ್‍ನಲ್ಲಿ ಕಾಣಿಸಿಕೊಂಡ ಬಿಗ್ ಬಾಸ್ ಪ್ರಥಮ್!

    ಬೆಂಗಳೂರು: ಬಿಗ್ ಬಾಸ್ ಪ್ರಥಮ್ ಅವರಿಗೆ ತಿಂಡಿ ತಿನಿಸುಗಳೆಂದರೆ ಬಹಳ ಇಷ್ಟ ಎಂದು ಅವರು ಬಿಗ್ ಬಾಸ್ ಮನೆಯಲ್ಲಿರುವಾಗ ನೀವೆಲ್ಲಾ ನೋಡಿದ್ದೀರಾ. ಸಾಮಾಜಿಕ ಜಾಲತಾಣದಲ್ಲಿ ಯಾವಾಗಲ್ಲೂ ಆಕ್ಟಿವ್ ಆಗಿರುವ ಪ್ರಥಮ್ ಇಂದಿರಾ ಕ್ಯಾಂಟೀನ್ ನಲ್ಲಿ ತಿಂಡಿ ತಿನ್ನುತ್ತಿರುವ ಫೋಟೋವನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

    ಇಂದಿರಾ ಕ್ಯಾಂಟೀನ್ ನಲ್ಲಿ ತಿಂಡಿ ತಿನ್ನುತ್ತಿರುವ ಫೋಟೋವೊಂದ್ದನ್ನು ಪ್ರಥಮ್ ತಮ್ಮ ಫೇಸ್ ಬುಕ್‍ನಲ್ಲಿ ಹಾಕಿ ಅದಕ್ಕೆ “ನನಗೆ ಹೊಟ್ಟೆ ಹಸಿವಾದರೆ ಎಲ್ಲಿ ಸಿಕ್ಕರೂ ಶಿವಾ ಅನ್ಸದೆ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಪ್ರಥಮ್ ತಮ್ಮ ಗೆಳೆಯನ ಹುಟ್ಟುಹಬ್ಬದ ದಿನ ಅವರ ಜೊತೆ ಇಂದಿರಾ ಕ್ಯಾಂಟೀನ್‍ಗೆ ಹೋಗಿ ತಿಂಡಿ ತಿಂದಿದ್ದಾರೆ.

    ಬಿಗ್ ಬಾಸ್ ಬಳಿಕ ಪ್ರಥಮ್ ಸಿನಿಮಾಗಳಲ್ಲಿ ಸಾಕಷ್ಟು ಬ್ಯುಸಿಯಾಗಿದ್ದಾರೆ. ಸದ್ಯ ಪ್ರಥಮ್ ನಟಿಸಿರುವ ‘ದೇವ್ರಂಥ ಮನುಷ್ಯ’ ಚಿತ್ರ ಶೀಘ್ರದಲ್ಲೇ ತೆರೆ ಕಾಣಲಿದೆ.

  • ಪ್ಯಾಂಟ್ ಬದ್ಲು ಪಂಚೆ ಉಡೋದ್ಯಾಕೆ: ಸಿಎಂ ಮಾತಲ್ಲೇ ಕೇಳಿ

    ಪ್ಯಾಂಟ್ ಬದ್ಲು ಪಂಚೆ ಉಡೋದ್ಯಾಕೆ: ಸಿಎಂ ಮಾತಲ್ಲೇ ಕೇಳಿ

    ಬೆಂಗಳೂರು: ಪ್ಯಾಂಟ್ ಬದಲು ಪಂಚೆ ಉಡೋದು ಯಾಕೆ ಅನ್ನೊ ಸೀಕ್ರೇಟ್ ಅನ್ನು ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಬಿಚ್ಚಿಟ್ಟಿದ್ದಾರೆ.

    ವಿಕ್ಟೋರಿಯ ಆವಾರಣದಲ್ಲಿನ ನೆಫ್ರೊ ಯುರಾಲಜಿ ಅನೆಕ್ಸ್ ಕಟ್ಟಡ ಶಂಕು ಸ್ಥಾಪನೆ ಬಳಿಕ ಮಾತನಾಡಿದ ಸಿಎಂ, ನನಗೆ ಡ್ರೈ ಸ್ಕಿನ್ ಇತ್ತು. ಅದಕ್ಕೆ ನಾನು ಪಂಚೆ ಉಡುವಂತಾಯ್ತು ಅಂತ ತಮ್ಮ ಇತಿಹಾಸ ಹೇಳಿಕೊಂಡ್ರು.

    ನಂಗೆ ಚರ್ಮದ ಸಮಸ್ಯೆ ಇತ್ತು. ಒಬ್ಬ ಡಾಕ್ಟರ್ ಬಳಿ ಹೋಗಿದ್ದೆ ಅವ್ನು ಯಾವನೋ ಯಾವುದೋ ಯಾವುದೋ ಆಯಿಂಟ್ ಮೆಂಟ್ ಕೊಟ್ಟು ಸಮಸ್ಯೆ ತಂದಿಟ್ಟಿದ್ದ. ನಂಗೆ ಇದರಿಂದ ಸಿಕ್ಕಾಪಟ್ಟೆ ಸಮಸ್ಯೆ ಆಯ್ತು. ಮತ್ತೊಬ್ಬ ಡಾಕ್ಟರ್ ಪಂಚೆ ಉಟ್ಟುಕೊಳ್ಳಿ ಅಂತ ಹೇಳಿದ್ರು. ಅದಕ್ಕೆ ಪಂಚೆ ಉಡುತ್ತಿದ್ದೇನೆ ಅಂತ ಪಂಚೆ ರಹಸ್ಯ ಬಿಚ್ವಿಟ್ರು.

    ಬಳಿಕ ಇಂದಿರಾ ಕ್ಯಾಂಟೀನ್ ಬಗ್ಗೆ ಮಾತನಾಡಿದ ಸಿಎಂ, ಸರ್ಕಾರಿ ಆಸ್ಪತ್ರೆಯಲ್ಲಿ ಇಂದಿರಾ ಕ್ಯಾಂಟಿನ್ ಮಾಡುವ ನಿರ್ಧಾರ ಪ್ರಕಟಿಸಿದ್ರು. ವಿಕ್ಟೋರಿಯಾ, ಬೌರಿಂಗ್, ಕಿ ದ್ವಾಯ್, ಕೆಸಿ ಜನರಲ್, ಜೈದೇವಾದಲ್ಲಿ ಇಂದಿರಾ ಕ್ಯಾಂಟಿನ್ ಮಾಡ್ತೀವಿ. ರೋಗಿಗಳ ಜೊತೆ ಬರುವವರಿಗೂ ಊಟ ನೀಡುವ ನಿಟ್ಟಿನಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡ್ತೀವಿ ಅಂದ್ರು.

    ಇದರ ಜೊತೆಗೆ ಬಡವರಿಗೆ ಉಚಿತ ವಾಗಿ ಆರೋಗ್ಯ ಚಿಕತ್ಸೆ ನೀಡುವ `ಆರೋಗ್ಯ ಭಾಗ್ಯ’ ಯೋಜನೆಯನ್ನ ಜಾರಿಗೆ ತರುತ್ತಿದ್ದು, ನವೆಂಬರ್ 1 ರಿಂದ ಯೋಜನೆ ಜಾರಿಗೆ ಬರುತ್ತೆ ಅಂದ್ರು.

    ನಮ್ಮ ಸರ್ಕಾರ ಬಂದ ಮೇಲೆ 12 ಹೊಸ ಮೆಡಿಕಲ್ ಕಾಲೇಜ್ ಮಾಡಿದ್ದೇವೆ. ಮತ್ತೆ ಹೊಸ 6 ಮೆಡಿಕಲ್ ಕಾಲೇಜು ಮಾಡ್ತೀವಿ. ಹೀಗೆ ಹಂತ ಹಂತವಾಗಿ 30 ಜಿಲ್ಲೆಗಳಲ್ಲಿ ಮೆಡಿಕಲ್ ಕಾಲೇಜ್ ಪ್ರಾರಂಭ ಮಾಡ್ತೀವಿ ಅಂತ ತಿಳಿಸಿದ್ರು. ಕಾರ್ಯಕ್ರಮದಲ್ಲಿ ವೈದ್ಯಕೀಯ ಸಚಿವ ಶರಣ ಪ್ರಕಾಶ ಪಾಟೀಲ್, ಮಾಜಿ ಸಚಿವ ಪರಿಷತ್ ಸದಸ್ಯ ರಾಮಚಂದ್ರಗೌಡ ಇನ್ನಿತರರು ಉಪಸ್ಥಿತರಿದ್ದರು.

    https://www.youtube.com/watch?v=w3IRCe2EFgk

     

  • ಇಂದಿರಾ ಆಯ್ತು.. ಅಪ್ಪಾಜಿ ಆಯ್ತು ಈಗ ಶೆಟ್ಟಿ ಕ್ಯಾಂಟೀನ್-ಬೆಳಗ್ಗೆ ಇಲ್ಲಿ ಉಪಹಾರ ಉಚಿತ

    ಇಂದಿರಾ ಆಯ್ತು.. ಅಪ್ಪಾಜಿ ಆಯ್ತು ಈಗ ಶೆಟ್ಟಿ ಕ್ಯಾಂಟೀನ್-ಬೆಳಗ್ಗೆ ಇಲ್ಲಿ ಉಪಹಾರ ಉಚಿತ

    ಕೋಲಾರ: ಕರ್ನಾಟಕದಲ್ಲಿ ಕ್ಯಾಂಟೀನ್ ಪಾಲಿಟಿಕ್ಸ್ ಸದ್ದು ಜೋರಾಗಿದೆ. ಕಾಂಗ್ರೆಸ್ ಇಂದಿರಾ ಕ್ಯಾಂಟೀನ್ ಆಯ್ತು. ಜೆಡಿಎಸ್‍ನ ಅಪ್ಪಾಜಿ ಕ್ಯಾಂಟೀನ್ ಆಯ್ತು. ಈಗ ಬಿಜೆಪಿ ಮುಖಂಡ ಕೃಷ್ಣಯ್ಯ ಶೆಟ್ಟಿ ಕ್ಯಾಂಟೀನ್ ಶುರು ಮಾಡಿದ್ದಾರೆ.

    ಕೋಲಾರ ಜಿಲ್ಲೆ ಮಾಲೂರು ತಾಲೂಕು ಟೇಕಲ್ ಗ್ರಾಮದ ರೈಲ್ವೆ ನಿಲ್ದಾಣದ ಬಳಿ ಕೃಷ್ಣಯ್ಯ ಶೆಟ್ಟಿ ಅವರು, ತಮ್ಮದೇ ಹೆಸರಿನಲ್ಲಿ ಕ್ಯಾಂಟೀನ್ ಶುರು ಮಾಡಿದ್ದಾರೆ. ಕ್ಷೇತ್ರದಿಂದ ದೂರ ಉಳಿದಿದ್ದ ಕೃಷ್ಣಯ್ಯಶೆಟ್ಟಿ ಈಗ ಎಲೆಕ್ಷನ್ ಹೊತ್ತಲ್ಲಿ ಟಿಕೆಟ್ ಪಡೆಯೋಕೆ ಹೊಸ ಪ್ಲ್ಯಾನ್ ಮಾಡಿದ್ದಾರೆ. ಪ್ರತಿ ದಿನ ಬೆಳಿಗ್ಗೆ 5 ಗಂಟೆಯಿಂದ 10 ಗಂಟೆವರೆಗೆ ಉಚಿತವಾಗಿ ಉಪಹಾರ ನೀಡುತ್ತಿದ್ದಾರೆ. ಸದ್ಯ ಮಾಲೂರು ಕ್ಷೇತ್ರದಲ್ಲಿ ಬಿಜೆಪಿ ಟಿಕೇಟ್ ಆಕಾಂಕ್ಷಿಯಾಗಿರುವ ಕೃಷ್ಣಯ್ಯ ಶೆಟ್ಟಿ ಈಗ ಮತ್ತೆ ಕ್ಷೇತ್ರದಲ್ಲಿ ಅಖಾಡಕ್ಕಿಳಿದಿದ್ದಾರೆ.

     

    ಇನ್ನು ಕೃಷ್ಣಯ್ಯಶೆಟ್ಟಿಯವರು ಹೀಗೆ ಟೇಕಲ್ ರೈಲು ನಿಲ್ದಾಣದ ಬಳಿ ಕ್ಯಾಂಟೀನ್ ಆರಂಭ ಮಾಡುತ್ತಿರುವುದು ಸ್ಥಳೀಯ ಕೆಲವು ಹೋಟೆಲ್ ಮಾಲೀಕರುಗಳಿಂದ ಅಸಮದಾನ ವ್ಯಕ್ತವಾಗಿದೆ. ಹಲವಾರು ವರ್ಷಗಳಿಂದ ಟೇಕಲ್ ರೈಲು ನಿಲ್ದಾಣದ ಬಳಿ ಸುಮಾರು ಐದಾರು ಕುಟುಂಬಗಳು ಸಣ್ಣ ಪುಟ್ಟ ಹೋಟೆಲ್ ನಡೆಸಿಕೊಂಡು ಜೀವನ ನಡೆಸುತ್ತಿದ್ದಾರೆ. ಆದ್ರೆ ಈಗ ಕೃಷ್ಣಯ್ಯ ಶೆಟ್ಟಿಯವರು ಉಚಿತ ಶೆಟ್ಟಿ ಕ್ಯಾಂಟೀನ್ ಆರಂಭ ಮಾಡಿರುವುದು ಹೋಟೆಲ್‍ಗಳಿಗೆ ಬೀಗ ಹಾಕುವ ಪರಿಸ್ಥಿತಿ ಬಂದಿದೆ.

     

     

     

  • ಉಂಗುರ, ಚೈನ್ ಹಾಕಿಕೊಂಡವರೆಲ್ಲ ನಮ್ಮ ಇಂದೀರಾ ಕ್ಯಾಂಟೀನ್‍ಗೆ ಹೋಗುತ್ತಿದ್ದಾರೆ: ಸಿಎಂ

    ಉಂಗುರ, ಚೈನ್ ಹಾಕಿಕೊಂಡವರೆಲ್ಲ ನಮ್ಮ ಇಂದೀರಾ ಕ್ಯಾಂಟೀನ್‍ಗೆ ಹೋಗುತ್ತಿದ್ದಾರೆ: ಸಿಎಂ

    ಮೈಸೂರು: ನಮ್ಮ ಇಂದೀರಾ ಕ್ಯಾಂಟೀನ್ ಗೆ ಉಂಗುರ, ಚೈನ್ ಹಾಕಿಕೊಂಡವರೆಲ್ಲ ಹೋಗುತ್ತಿದ್ದಾರೆ ಅಂತ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

    ಮೈಸೂರಿನ ಸುತ್ತೂರು ಮಠದ ಕಾರ್ಯಕ್ರಮದ ಭಾಷಣದಲ್ಲಿ ಸಿಎಂ ಸಿದ್ದರಾಮಯ್ಯ ಬೆಂಗಳೂರಿನ ಇಂದಿರಾ ಕ್ಯಾಂಟೀನ್ ಕುರಿತು ಪ್ರಸ್ತಾಪ ಮಾಡಿದರು. ಈ ವೇಳೆ ಅವರು, ನಮ್ಮ ಇಂದೀರಾ ಕ್ಯಾಂಟೀನ್ ಗೆ ಉಂಗುರ, ಚೈನ್ ಹಾಕಿಕೊಂಡವರೇಲ್ಲ ಹೋಗುತ್ತಿದ್ದಾರೆ. ಸ್ಕೂಟರ್‍ನಲ್ಲಿ ಬಂದು ತಿಂಡಿ ತಿಂದು ಹೋಗುತ್ತಾರೆ. ಕ್ಯಾಂಟೀನ್ ನಲ್ಲಿ ಊಟಕ್ಕಾಗಿ ಕ್ಯೂ ನಿಲ್ಲುತ್ತಿದ್ದಾರೆ ಅಂದ್ರು.

    ಇದಕ್ಕೆ ಕಾರಣ ನಮ್ಮ ಕ್ಯಾಂಟೀನ್‍ನಲ್ಲಿ ಶುಚಿಯಾದ, ರುಚಿಯಾದ ಊಟ ಸಿಗುತ್ತಿದೆ. ಎಣ್ಣೆ ಕಡಿಮೆ ಇರುವ ಗುಣಮಟ್ಟದ ಊಟ ಕ್ಯಾಂಟೀನ್ ನಲ್ಲಿ ಸಿಗುತ್ತಿದೆ ಎಂದು ಸಿಎಂ ಇಂದಿರಾ ಕ್ಯಾಂಟೀನ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

    ಇದೇ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದ ಸಿಎಂ, ಬಿಜೆಪಿಯ ಹಿಂಸಾತ್ಮಕ ಹೋರಾಟಕ್ಕೆ ಜನರೇ ಪಾಠ ಕಲಿಸುತ್ತಾರೆ. ಬಿಜೆಪಿಗೆ ಕಾಂಗ್ರೆಸ್ ರಣತಂತ್ರ ಮಾಡಿ ಉತ್ತರ ಕೊಡುವ ಅಗತ್ಯ ಇಲ್ಲ. ಹಿಂದೆ ನಮ್ಮ ಕೆಲವು ತಪ್ಪುಗಳಿಂದ ಬಿಜೆಪಿ ಅಧಿಕಾರಕ್ಕೆ ಬಂತು. ಕೆಲ ರಾಜ್ಯಗಳಲ್ಲೂ ಇದೇ ತಪ್ಪು ಮರುಕಳಿಸಿತ್ತು. ಆದ್ರೆ ಈಗ ಕಾಂಗ್ರೆಸ್‍ನಲ್ಲಿ ಆ ತಪ್ಪುಗಳು ಮರುಕಳಿಸುವುದಿಲ್ಲ. ಮುಂದಿನ ಬಾರಿ ಮತ್ತೆ ನಾವೇ ಅಧಿಕಾರಕ್ಕೆ ಬರ್ತಿವಿ ಅಂದ್ರು.

    ಯಡಿಯೂರಪ್ಪ ಸಿಎಂ ಆಗಿದ್ದಾಗ ದಲಿತರಿಗಾಗಿ ಏನು ಮಾಡಿದ್ರು? ಅವತ್ತು ಅವರಿಗೆ ದಲಿತರು ನೆನಪಾಗಲಿಲ್ವಾ. ಇವತ್ತು ಊಟಕ್ಕೆ ಕರೆದು ಗಿಮಿಕ್ ರಾಜಕಾರಣ ಮಾಡುತ್ತಿದ್ದಾರೆ. ನಾನು ದಿನವೂ ದಲಿತರಿಗೆ ಮನೆಯಲ್ಲಿ ಊಟ ಹಾಕುತ್ತೇನೆ. ಅದನ್ನು ವಿಶೇಷ ಎಂದು ನಾವು ಪರಿಗಣಿಸಿಲ್ಲ. ಯಡಿಯೂರಪ್ಪ ತಮ್ಮ ಮನೆಗೆ ಊಟಕ್ಕೆ ಕರೆದವರು ಮಾತ್ರ ದಲಿತರಾ? ಬೇರೆ ದಲಿತರು ಇಲ್ವಾ ಅಂತ ಪ್ರಶ್ನಿಸಿದ್ರು.

    ಶೀಘ್ರದಲ್ಲೆ ಸಚಿವ ಸಂಪುಟ ವಿಸ್ತರಣೆ ಮಾಡುತ್ತೇನೆ ಅಂತ ಸಿಎಂ ಹೇಳಿದ್ರು.