Tag: Indira Canteen

  • ಘೋಷಣೆಯಾಗಿ 1 ವರ್ಷ ಕಳೆದ್ರೂ ಬದಲಾಗದ ಮೆನು – ಇಂದಿರಾ ಕ್ಯಾಂಟೀನ್‌ನಲ್ಲಿ ರಾಗಿ ಮುದ್ದೆ, ಚಪಾತಿ ವಿತರಣೆಗೆ ಆಗ್ರಹ

    ಘೋಷಣೆಯಾಗಿ 1 ವರ್ಷ ಕಳೆದ್ರೂ ಬದಲಾಗದ ಮೆನು – ಇಂದಿರಾ ಕ್ಯಾಂಟೀನ್‌ನಲ್ಲಿ ರಾಗಿ ಮುದ್ದೆ, ಚಪಾತಿ ವಿತರಣೆಗೆ ಆಗ್ರಹ

    ಬೆಂಗಳೂರು: ಇಂದಿರಾ ಕ್ಯಾಂಟೀನ್‌ಗಳಲ್ಲಿ (Indira Canteen) ರಾಗಿ ಮುದ್ದೆ, ಚಪಾತಿ ಕೊಡ್ತೇವೆ ಅಂತ ಬಿಬಿಎಂಪಿ (BBMP) ಘೋಷಣೆ ಮಾಡಿತ್ತು. ಘೋಷಣೆ ಮಾಡಿ ವರ್ಷ ಆದರೂ ಇನ್ನೂ ಬಿಬಿಎಂಪಿಯ ಕೆಲ ವಲಯಗಳಲ್ಲಿ ರಾಗಿ ಮುದ್ದೆ, ಚಪಾತಿ ವಿತರಣೆ ಮಾಡಿಯೇ ಇಲ್ಲ.

    ಈ ನಡುವೆ ಹೊಸದಾಗಿ 54 ಇಂದಿರಾ ಕ್ಯಾಂಟಿನ್ ಮಾಡ್ತೆವೆ ಅಂತಾ ಸರ್ಕಾರ ಹೇಳ್ತಿದೆ. ಆದರೆ ಇಲ್ಲಿ ಹೊಸ ಮೆನು ಘೋಷಣೆ ಮಾಡಿ ವಿತರಣೆ ಆಗ್ತಿಲ್ಲ. ರಾಗಿಮುದ್ದೆ, ಚಪಾತಿ ಕೊಡಿ ಅಂತಾ ಸಾರ್ವಜನಿಕರು ಅಗ್ರಹಿಸುತ್ತಾ ಇದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಕ್ಷೇತ್ರದ ಪರ ನಿಂತ ರಾಜ್ಯ ಬಿಜೆಪಿ – ಶ್ರೀಕ್ಷೇತ್ರ ದೇವಸ್ಥಾನಕ್ಕೆ ಇಂದು ವಿಜಯೇಂದ್ರ & ಟೀಂ

    ಸಿದ್ದರಾಮಯ್ಯ (Siddaramaiah) ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಇಂದಿರಾ ಕ್ಯಾಂಟಿನ್. ಬಡವರಿಗೆ ತುಂಬಾ ಅನುಕೂಲ ಆಗ್ತಿರುವ ಯೋಜನೆ ಇದು. ಇಂದಿರಾ ಕ್ಯಾಂಟಿನ್‌ನಲ್ಲಿ ಮೆನು ಬದಲಾವಣೆ ಮಾಡಿ ರಾಗಿ ಮುದ್ದೆ , ಚಪಾತಿ ನೀಡೋದಾಗಿ ಬಿಬಿಎಂಪಿ ಹೇಳಿತ್ತು. ಹೇಳಿ ಒಂದು ವರ್ಷ ಕಳೆದ್ರೂ ಬಿಬಿಎಂಪಿ ಪಶ್ಚಿಮ ವಲಯದ ಹಲವು ಇನ್ನೂ ರಾಗಿ ಮುದ್ದೆ ಮತ್ತು ಚಪಾತಿ ವಿತರಣೆ ಇಲ್ಲ. ಬರೀ ಅನ್ನ ಸಾಂಬಾರ್ ವಿತರಣೆ ಮಾಡ್ತಾ ಇದ್ದಾರೆ. ಇದನ್ನೂ ಓದಿ: ಅಣುಬಾಂಬ್‌ ಪರೀಕ್ಷೆಯನ್ನು ವಿಶ್ವವೇ ವಿರೋಧಿಸಿದಾಗ ಇನ್ನೂ 2 ಬಾಂಬ್‌ ಪರೀಕ್ಷೆ ಮಾಡಿ ಅಂದವರು ಅಟಲ್‌ಜೀ: ಬಿಎಲ್‌ ಸಂತೋಷ್‌

    ಇನ್ನೂ ಮತ್ತೆ ಹೊಸದಾಗಿ 54 ಇಂದಿರಾ ಕ್ಯಾಂಟಿನ್ ಓಪನ್ ಮಾಡೋದಾಗಿ ಸರ್ಕಾರ ಹೇಳ್ತಿದೆ. ಆದ್ರೆ ಇಂದಿರಾ ಕ್ಯಾಂಟಿನ್ ಮೆನು ಬದಲಾವಣೆ ಘೋಷಣೆ ಮಾಡಿ ಹೊಸ ಮೆನು ಕೆಲ ವಲಯಗಳಲ್ಲಿ ವಿತರಣೆ ಆಗ್ತಿಲ್ಲ. ಇದಕ್ಕೆ ಟೆಂಡರ್ ಸಮಸ್ಯೆ ಎನ್ನಲಾಗ್ತಿದೆ. ಮೆಜೆಸ್ಟಿಕ್ ಇಂದಿರಾ ಕ್ಯಾಂಟಿನ್‌ನಲ್ಲಿ ಅತಿ ಹೆಚ್ಚು ಊಟ ವಿತರಣೆ ಆಗುತ್ತೆ. ಚಪಾತಿ, ರಾಗಿ ಮುದ್ದೆ ವಿತರಣೆಗೆ ಆಗ್ರಹಿಸುತ್ತಾ ಇದ್ದಾರೆ.

    ಸರ್ಕಾರ ಸಂಬಂಧ ಪಟ್ಟ ಇಲಾಖೆಗಳಿಗೆ ಇಂದಿರಾ ಕ್ಯಾಂಟಿನ್ ಹೊಸ ಮೆನು ಜಾರಿಗೆ ಸೂಚಿಸಬೇಕಿದೆ. ಇಲ್ಲದೇ ಹೋದಲ್ಲಿ ಸಮಸ್ಯೆ ಆಗಲಿದೆ. ಶೀಘ್ರದಲ್ಲೇ ರಾಗಿಮುದ್ದೆ, ಚಪಾತಿ ವಿತರಣೆ ಆಗುತ್ತಾ ಕಾದು ನೋಡಬೇಕಿದೆ. ಇದನ್ನೂ ಓದಿ: ಚಂದ್ರಶೇಖರ ಸ್ವಾಮೀಜಿ ಭೈರವೈಕ್ಯ – ನಾಥ ಸಂಪ್ರದಾಯದಂತೆ ನೆರವೇರಿದ ಅಂತ್ಯ ಸಂಸ್ಕಾರ

  • ಗದಗ | ನೂತನ ಇಂದಿರಾ ಕ್ಯಾಂಟೀನ್ ಲೋಕಾರ್ಪಣೆ ಮಾಡಿದ ಸಚಿವ ಹೆಚ್.ಕೆ ಪಾಟೀಲ್

    ಗದಗ | ನೂತನ ಇಂದಿರಾ ಕ್ಯಾಂಟೀನ್ ಲೋಕಾರ್ಪಣೆ ಮಾಡಿದ ಸಚಿವ ಹೆಚ್.ಕೆ ಪಾಟೀಲ್

    ಗದಗ: ನಗರದ ಗಾನಯೋಗಿ ಪಂಡಿತ್ ಪುಟ್ಟರಾಜ ಗವಾಯಿ ಬಸ್ ನಿಲ್ದಾಣದಲ್ಲಿ ನೂತನವಾಗಿ ನಿರ್ಮಿಸಲಾದ ಇಂದಿರಾ ಕ್ಯಾಂಟೀನ್ ಅನ್ನು ಶುಕ್ರವಾರ ಕಾನೂನು, ನ್ಯಾಯ, ಪ್ರವಾಸೋದ್ಯಮ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಕೆ ಪಾಟೀಲ್ (H K Patil) ಲೋಕಾರ್ಪಣೆ ಮಾಡಿದರು.

    ಬಳಿಕ ಮಾತನಾಡಿದ ಅವರು ಈ ಸ್ಥಳದಲ್ಲಿ ಇಂದಿರಾ ಕ್ಯಾಂಟೀನ್ (Indira Canteen) ತೆರೆದಿದ್ದರಿಂದ ಗ್ರಾಮೀಣ ಭಾಗದವರಿಗೆ ತುಂಬಾನೇ ಅನುಕೂಲ ಆಗಲಿದೆ. ನಗರದ ಬಸ್ ನಿಲ್ದಾಣಕ್ಕೆ ಗದಗ ತಾಲೂಕು ಅಷ್ಟೇ ಅಲ್ಲ, ಬೇರೆ ಬೇರೆ ತಾಲೂಕಿನ ಜನರು ಬರುತ್ತಾರೆ. ಅವರಿಗೆ ಕಡಿಮೆ ಹಣದಲ್ಲಿ ಊಟ, ಉಪಹಾರ ಸಿಗುತ್ತೆ. ಹಾಗಾಗಿ ಇಲ್ಲಿಗೆ ಈ ಇಂದಿರಾ ಕ್ಯಾಂಟೀನ್‌ನ ಅವಶ್ಯಕತೆ ಇತ್ತು ಎಂದರು. ಇದನ್ನೂ ಓದಿ: ತುಂಗಭದ್ರಾ ಡ್ಯಾಂನ 8 ಗೇಟ್ ಜಾಮ್, ಮೇಲೆತ್ತಲು ಸಾಧ್ಯವಾಗುತ್ತಿಲ್ಲ: ಶಿವರಾಜ ತಂಗಡಗಿ

    ನಂತರ ಹೆಚ್.ಕೆ ಪಾಟೀಲ್ ಅವರು ಅಧಿಕಾರಿಗಳು ಹಾಗೂ ಸಿಬ್ಬಂದಿಗಳೊಂದಿಗೆ ನೂತನ ಇಂದಿರಾ ಕ್ಯಾಂಟೀನ್‌ನಲ್ಲಿ ಉಪಹಾರ ಸೇವಿಸಿದರು. ಇದನ್ನೂ ಓದಿ: ಬನ್ನೇರುಘಟ್ಟ ಸಫಾರಿ ವೇಳೆ ಬೊಲೆರೋ ಹಿಂಬಾಲಿಸಿ ಬಾಲಕನ ಮೇಲೆ ಚಿರತೆ ದಾಳಿ

    ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಅಕ್ಬರ್‌ಸಾಬ್ ಬಬರ್ಜಿ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ ಅಸೂಟಿ, ತಾಲೂಕು ಅಧ್ಯಕ್ಷ ಅಶೋಕ ಮಂದಾಲಿ, ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್, ಅಪರ ಜಿಲ್ಲಾಧಿಕಾರಿ ಡಾ. ದುರುಗೇಶ್ ಕೆ.ಆರ್ ಸೇರಿ ಅನೇಕರು ಉಪಸ್ಥಿತರಿದ್ದರು.

  • 6 ತಿಂಗಳಿನಿಂದ ಸಿಕ್ಕಿಲ್ಲ ವೇತನ – ಹಲವು ಇಂದಿರಾ ಕ್ಯಾಂಟೀನ್‌ಗಳಿಗೆ ಬಿತ್ತು ಬೀಗ!

    6 ತಿಂಗಳಿನಿಂದ ಸಿಕ್ಕಿಲ್ಲ ವೇತನ – ಹಲವು ಇಂದಿರಾ ಕ್ಯಾಂಟೀನ್‌ಗಳಿಗೆ ಬಿತ್ತು ಬೀಗ!

    ಬೆಂಗಳೂರು: ಸಿಬ್ಬಂದಿಗೆ ವೇತನ ಪಾವತಿ ಮಾಡದ ಹಿನ್ನೆಲೆಯಲ್ಲಿ ನಗರದ ಕೆಲವು ಇಂದಿರಾ ಕ್ಯಾಂಟೀನ್‌ಗಳಲ್ಲಿ (Indira Canteen) ಊಟ ಸ್ಥಗಿತವಾಗಿದೆ. ಬಡವರ ಹಸಿವು ನೀಗಿಸುವ ಕೆಲ ಇಂದಿರಾ ಕ್ಯಾಂಟೀನ್‌ಗಳು ಮುಚ್ಚಿವೆ.

    ಬುಧವಾರದಿಂದ ಬೆಳಗ್ಗೆ ಉಪಹಾರ, ಮಧ್ಯಾಹ್ನ, ರಾತ್ರಿ ಊಟ ಪೂರೈಕೆ ಸ್ಥಗಿತವಾಗಿದೆ. ಬಡವರ ಹಸಿವು ನೀಗಿಸುವ ಕೆಲ ಇಂದಿರಾ ಕ್ಯಾಂಟೀನ್‌ಗಳಲ್ಲಿ ಊಟ ಪೂರೈಕೆಯಾಗುತ್ತಿಲ್ಲ. ಇದರಿಂದ ಊಟ ಸಿಗದೇ ಜನ ಹಸಿದ ಹೊಟ್ಟೆಯಲ್ಲಿಯೇ ವಾಪಸ್ ಆಗುತ್ತಿದ್ದಾರೆ. ಕ್ಯಾಂಟೀನ್ ಸಿಬ್ಬಂದಿಗೆ ಆರು ತಿಂಗಳ ವೇತನ ಪಾವತಿ ಮಾಡದ ಹಿನ್ನೆಲೆಯಲ್ಲಿ ಸಿಬ್ಬಂದಿಗಳು ಕರ್ತವ್ಯಕ್ಕೆ ಗೈರಾಗಿದ್ದಾರೆ. ಇದರಿಂದ ಊಟ ಕೂಡ ಪೂರೈಕೆಯಾಗುತ್ತಿಲ್ಲ. ಇದನ್ನೂ ಓದಿ: ಮತ್ತೆ ಕೋಟ್ಯಧೀಶನಾದ ಮಲೆ ಮಾದಪ್ಪ – 2.43 ಕೋಟಿ ರೂ. ಕಾಣಿಕೆ ಹಣ ಸಂಗ್ರಹ

    ಪಶ್ಚಿಮ ವಲಯದ ಮಲ್ಲೇಶ್ವರಂ (Malleshwaram), ನಂದಿನಿಲೇಔಟ್ ಇಂದಿರಾ ಕಿಚನ್‌ಗಳ ವ್ಯಾಪ್ತಿಯಲ್ಲಿ ಬರುವ ಇಂದಿರಾ ಕ್ಯಾಂಟೀನ್‌ಗಳಿಗೆ ಊಟ ಪೂರೈಕೆಯಾಗುತ್ತಿಲ್ಲ. ನೂರಾರು ಇಂದಿರಾ ಕ್ಯಾಂಟೀನ್‌ನಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಸಂಬಳ ನೀಡಿಲ್ಲ. ಈ ಕಿಚನ್‌ಗಳನ್ನು ಚೆಫ್ ಟಾಕ್ ಕಂಪನಿ ನಿರ್ವಹಣೆ ಮಾಡುತ್ತಿದೆ. ಈ ಕಂಪನಿಗೆ ಬಿಬಿಎಂಪಿ ಹಣ ಪಾವತಿ ಮಾಡಲಿಲ್ಲ. ಪಾಲಿಕೆ, ಚೆಫ್ ಟಾಕ್ ಕಂಪನಿಗೆ ಹಣ ನೀಡದ ಕಾರಣ ಸಿಬ್ಬಂದಿಗೂ ಸಂಬಳ ಸಿಗದೇ ಕಂಗಾಲಾಗಿದ್ದಾರೆ. ಇದನ್ನೂ ಓದಿ: ಮಾಜಿ ಸಚಿವ ಮನೋಹರ್‌ ತಹಶೀಲ್ದಾರ್‌ ವಿಧಿವಶ

    ನಗರದ ಯಾವ್ಯಾವ ಇಂದಿರಾ ಕ್ಯಾಂಟೀನ್‌ಗಳಿಗೆ ಬೀಗ?
    ಮಂತ್ರಿ ಮಾಲ್ ರಸ್ತೆ, ಸುಭಾಶ್ ನಗರ, ಮೆಜೆಸ್ಟಿಕ್ (Mejestic) ಮೆಟ್ರೋ ನಿಲ್ದಾಣ ಸಮೀಪ, ಗಾಂಧಿನಗರ, ಅರಮನೆ ನಗರ, ಸರ್ಕಲ್ ಮಾರಮ್ಮ ದೇವಸ್ಥಾನ ಯಶವಂತಪುರ ರಸ್ತೆ, ಮಲ್ಲೇಶ್ವರಂ ಇಂದಿರಾ ಕಿಚನ್‌ಗಳಿಗೆ ಬೀಗ ಬಿದ್ದಿದೆ. ಇದನ್ನೂ ಓದಿ: ಧಾರವಾಡದಲ್ಲಿ ತಾಯಂದಿರಿಂದಲೇ ಮಕ್ಕಳ ಕಿಡ್ನ್ಯಾಪ್‌ – ತಾಯಂದಿರು, ಅವರ ಪ್ರೇಮಿಗಳು ಅರೆಸ್ಟ್‌

    ಉತ್ತರ ಪ್ರದೇಶದ (Uttar Pradesh )ಕೆಲ ಯುವಕರು ಇಂದಿರಾ ಕ್ಯಾಂಟೀನ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರಿಗೂ ವೇತನ ಆಗಿಲ್ಲ. ಮನೆ ನಿರ್ವಹಣೆ ಕಷ್ಟ ಆಗಿದೆ. ಸಂಬಳ ಕೊಟ್ಟರೆ ನಾವು ಊರಿಗೆ ಹೋಗುತ್ತೇವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಬಡವರ ಹಸಿವು ನೀಗಿಸಬೇಕಿದ್ದ ಇಂದಿರಾ ಕ್ಯಾಂಟೀನ್‌ಗಳಲ್ಲಿ ಈಗ ಊಟ ಸಿಗದೇ ಜನ ಪರದಾಡುತ್ತಿರುವುದು ವಿಪರ್ಯಾಸ. ಮುಂದಿನ ದಿನಗಳಲ್ಲಿ ಇಂದಿರಾ ಕ್ಯಾಂಟೀನ್‌ಗಳನ್ನ ಸ್ಥಗಿತಗೊಳಿಸಲು ಸಿಬ್ಬಂದಿ ಮುಂದಾಗಿದ್ದಾರೆ. ಇದನ್ನೂ ಓದಿ: ತಾಯಿಯಿಂದ ಬೇರ್ಪಟ್ಟು ಒಂಟಿಯಾಗಿ ಅಲೆದಾಡುತ್ತಿದ್ದ ಮರಿ ಕರಡಿ ಸಾವು

  • PUBLiC TV Impact | ಕತ್ತಲಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಂದಿರಾ ಕ್ಯಾಂಟೀನ್‌ಗಳಿಗೆ ಬೆಳಕಿನ ಭಾಗ್ಯ

    PUBLiC TV Impact | ಕತ್ತಲಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಂದಿರಾ ಕ್ಯಾಂಟೀನ್‌ಗಳಿಗೆ ಬೆಳಕಿನ ಭಾಗ್ಯ

    ಬೆಂಗಳೂರು: ಇಂದಿರಾ ಕ್ಯಾಂಟೀನ್‌ಗಳನ್ನು (Indira Canteen) ಕತ್ತಲೆಗೆ ದೂಡಿದ್ದ ಬಿಬಿಎಂಪಿ ಇದೀಗ ಎಚ್ಚೆತ್ತುಕೊಂಡಿದ್ದು, ‘ಪಬ್ಲಿಕ್ ಟಿವಿ’ ವರದಿಯ ಬೆನ್ನಲ್ಲೇ ಇಂದಿರಾ ಕ್ಯಾಂಟೀನ್‌ಗಳಿಗೆ ಬೆಳಕಿನ ಭಾಗ್ಯ ಸಿಕ್ಕಿದೆ.

    ನಗರದ ಕೆಲವು ಇಂದಿರಾ ಕ್ಯಾಂಟೀನ್‌ಗಳಲ್ಲಿ ವಿದ್ಯುತ್ ಸಂಪರ್ಕವಿಲ್ಲದೇ, ಮೊಂಬತ್ತಿ ಬೆಳಕಿನಡಿ ಗ್ರಾಹಕರು ಊಟ ಮಾಡುತ್ತಿದ್ದರು. ಈ ಬಗ್ಗೆ ಇಂದಿರಾ ಕ್ಯಾಂಟೀನ್‌ಗಳಿಗೆ ಕತ್ತಲೆ ಭಾಗ್ಯ ಎಂದು ಪಬ್ಲಿಕ್ ಟಿವಿ ವರದಿಯೊಂದು ಬಿತ್ತರಿಸಿತ್ತು. ವರದಿ ಪ್ರಸಾರದ ಬೆನ್ನಲ್ಲೇ ಎಚ್ಚೆತ್ತ ಬಿಬಿಎಂಪಿ, ಬೆಸ್ಕಾಂಗೆ ಇನ್ನೆರೆಡು ತಿಂಗಳಲ್ಲಿ ಬಿಲ್ ಪಾವತಿ ಮಾಡುವುದಾಗಿ ಭರವಸೆ ನೀಡಿದ್ದು, ಮತ್ತೆ ವಿದ್ಯುತ್ ಸಂಪರ್ಕವನ್ನು ಪಡೆದುಕೊಂಡಿದೆ.ಇದನ್ನೂ ಓದಿ: ರಾಜ್ಯದ ಎರಡನೇ ದಸರಾ ಖ್ಯಾತಿಯ ಶಿವಮೊಗ್ಗ ದಸರಾಕ್ಕೆ 44ರ ಸಂಭ್ರಮ

    ಮೆಜೆಸ್ಟಿಕ್, ವೆಸ್ಟ್ ಹಾಫ್ ಕಾರ್ಡ್ ರಸ್ತೆ ಸೇರಿ ಹಲವು ಇಂದಿರಾ ಕ್ಯಾಂಟೀನ್‌ಗಳಲ್ಲಿ ನಾಲ್ಕೈದು ತಿಂಗಳುಗಳಿಂದ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿತ್ತು. ಮೆಜೆಸ್ಟಿಕ್‌ನ ಇಂದಿರಾ ಕ್ಯಾಂಟೀನ್‌ನ ಬಿಲ್ 8 ಸಾವಿರದ 340 ರೂ. ಆಗಿತ್ತು.

    ಪ್ರತಿಯೊಂದು ಇಂದಿರಾ ಕ್ಯಾಂಟೀನ್‌ಗಳ ವಿದ್ಯುತ್ ಬಿಲ್‌ನ್ನು ಆಯಾ ವಲಯದ ಬಿಬಿಎಂಪಿ (BBMP) ಇಂಜಿನಿಯರ್‌ಗಳೆ ಪಾವತಿ ಮಾಡಬೇಕು. ಈ ಇಂಜಿನಿಯರ್‌ಗಳಿಗೆ ಪಾಲಿಕೆಯ ಕೇಂದ್ರ ಕಚೇರಿಯಿಂದ ಹಣ ಬಿಡುಗಡೆ ಮಾಡದ ಹಿನ್ನೆಲೆ, ಬೆಸ್ಕಾಂಗೆ ಬಿಲ್ ಕಟ್ಟಿರಲಿಲ್ಲ. ಹೀಗಾಗಿ ಬಿಬಿಎಂಪಿಯ ಹೆಲ್ತ್ ಇನ್ಸ್ಪೆಕ್ಟರ್ ಅವರೇ ಖುದ್ದು ಇಂದಿರಾ ಕ್ಯಾಂಟೀನ್‌ಗೆ ಧಾವಿಸಿ ಪರಿಶೀಲಿಸಿದ್ದಾರೆ.

    ಇದೀಗ ಈ ಕ್ಯಾಂಟೀನ್‌ಗೂ ಬೆಳಕಿನ ಭಾಗ್ಯ ನೀಡಲಾಗಿದ್ದು, ವೆಸ್ಟ್ ಹಾಫ್ ಕಾರ್ಡ್ ರಸ್ತೆಯ ರಾಜುಕುಮಾರ್ ವಾರ್ಡ್ನ ಇಂದಿರಾ ಕ್ಯಾಂಟೀನ್‌ನಲ್ಲಿಯೂ ವಿದ್ಯುತ್ ಸಂಪರ್ಕವನ್ನ ಕಲ್ಪಿಸಲಾಗಿದೆ. ಪಬ್ಲಿಕ್ ಟಿವಿಯ ವರದಿಯ ಬೆನ್ನಲ್ಲೇ ಎಚ್ಚೆತ್ತ ಬಿಬಿಎಂಪಿ ಕತ್ತಲಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕ್ಯಾಂಟೀನ್‌ಗಳಿಗೆ ಬೆಳಕು ನೀಡಿದೆ.ಇದನ್ನೂ ಓದಿ: Mysuru Dasara: ಅದ್ದೂರಿ ಜಂಬೂಸವಾರಿಗೆ ಕ್ಷಣಗಣನೆ – ನಾಳೆ ಏನೆಲ್ಲಾ ವಿಶೇಷತೆ ಇರುತ್ತೆ?

     

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್; ಸ್ಮಶಾನದಲ್ಲಿ ನಿರ್ಮಾಣವಾಗುತ್ತಿದ್ದ ಇಂದಿರಾ ಕ್ಯಾಂಟೀನ್ ಸ್ಥಳಾಂತರ

    ಪಬ್ಲಿಕ್ ಟಿವಿ ಇಂಪ್ಯಾಕ್ಟ್; ಸ್ಮಶಾನದಲ್ಲಿ ನಿರ್ಮಾಣವಾಗುತ್ತಿದ್ದ ಇಂದಿರಾ ಕ್ಯಾಂಟೀನ್ ಸ್ಥಳಾಂತರ

    ಹುಬ್ಬಳ್ಳಿ: ‘ಪಬ್ಲಿಕ್ ಟಿವಿ’ ಸತತ ವರದಿಗೆ ಹುಬ್ಬಳ್ಳಿ ಧಾರವಾಡ (Dharwad) ಮಹಾನಗರ ಪಾಲಿಕೆ ಕೊನೆಗೂ ಎಚ್ಚೆತ್ತುಕೊಂಡಿದೆ. ಸ್ಮಶಾನದಲ್ಲಿ ನಿರ್ಮಾಣವಾಗುತ್ತಿದ್ದ ಇಂದಿರಾ ಕ್ಯಾಂಟೀನ್‌ಗೆ (Indira Canteen) ಬ್ರೇಕ್ ಬಿದ್ದಿದು, ಹುಬ್ಬಳ್ಳಿ (Hubballi) ಮಂಟೂರು ರಸ್ತೆಯಲ್ಲಿನ ಸ್ಮಶಾನದಿಂದ ಮತ್ತೊಂದು ಸ್ಥಳಕ್ಕೆ ಇಂದಿರಾ ಕ್ಯಾಂಟೀನ್ ಸ್ಥಳಾಂತರಗೊಂಡಿದೆ.

    ಸ್ಮಶಾನದಲ್ಲಿ ಸಾರ್ವಜನಿಕರ ವಿರೋಧದ ನಡುವೆಯೂ ರಾತ್ರೋರಾತ್ರಿ ಕಾಂಪೌಂಡ್ ಹೊಡೆದು ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಲಾಗುತ್ತಿತ್ತು. ಈ ಕುರಿತು ಸೆ.17 ರಂದು ‘ಪಬ್ಲಿಕ್ ಟಿವಿ’ ವರದಿ ಪ್ರಸಾರ ಮಾಡಿತ್ತು. ಅಲ್ಲದೆ ಹಿಂದೂಪರ ಸಂಘಟನೆಗಳ ಆಕ್ರೋಶಕ್ಕೂ ಇಂದಿರಾ ಕ್ಯಾಂಟೀನ್ ಕಾರಣವಾಗಿತ್ತು. ಹೀಗಾಗಿ ಇದೇ ತಿಂಗಳ 26ರಂದು ಶ್ರೀರಾಮಸೇನೆ ಮತ್ತು ಸತ್ಯಹರಿಶ್ಚಂದ್ರ ರುದ್ರಭೂಮಿ ಅಭಿವೃದ್ಧಿ ಮತ್ತು ಹೋರಾಟ ಸಮಿತಿಯಿಂದ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿತ್ತು. ಇದನ್ನೂ ಓದಿ: ಭೂಮಿಯನ್ನು 2 ತಿಂಗಳ ಕಾಲ ಸುತ್ತಲಿರುವ ಮಿನಿ ಮೂನ್‌! – ಏನಿದರ ವಿಶೇಷ? 

    ಸಾರ್ವಜನಿಕರ ಸತತ ವಿರೋಧ ಹಿನ್ನೆಲೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸೂಚನೆ ಮೇರೆಗೆ, ಇಂದಿರಾ ಕ್ಯಾಂಟೀನ್ ಸ್ಥಳಾಂತರಕ್ಕೆ ಪಾಲಿಕೆ ಮುಂದಾಗಿದೆ. ಈ ಕುರಿತು ಪಾಲಿಕೆ ಆಯುಕ್ತ ಈಶ್ವರ್ ಉಳ್ಳಾಗಡ್ಡಿ ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಆಸ್ಪತ್ರೆಯಲ್ಲಿ ಗಣೇಶ ಪ್ರತಿಷ್ಠಾಪಿಸಿದ ಸಿಬ್ಬಂದಿಗೆ ನೋಟಿಸ್ – ಅಧೀಕ್ಷಕರ ವಿರುದ್ಧ ಹಿಂದೂ ಸಂಘಟನೆಗಳು ಕಿಡಿ

  • ಬೆಂಗ್ಳೂರಲ್ಲಿ ಒಂದು ಇಂದಿರಾ ಕ್ಯಾಂಟೀನ್ ಬಂದ್ – ಅಕ್ರಮ ಚಟುವಟಿಕೆಗಳ ತಾಣವಾದ ಕ್ಯಾಂಟೀನ್

    ಬೆಂಗ್ಳೂರಲ್ಲಿ ಒಂದು ಇಂದಿರಾ ಕ್ಯಾಂಟೀನ್ ಬಂದ್ – ಅಕ್ರಮ ಚಟುವಟಿಕೆಗಳ ತಾಣವಾದ ಕ್ಯಾಂಟೀನ್

    – ಗುಜುರಿ ಸೇರಿದ ಲಕ್ಷಾಂತರ ಮೌಲ್ಯದ ಮೊಬೈಲ್ ಕ್ಯಾಂಟೀನ್ ವಾಹನ

    ಬೆಂಗಳೂರು: ಬಡವರಿಗೆ ಕಡಿಮೆ ದರದಲ್ಲಿ ಊಟ ಸಿಗಬೇಕೆಂಬ ಉದ್ದೇಶದಿಂದ ಇಂದಿರಾ ಕ್ಯಾಂಟೀನ್ ಶುರು ಮಾಡಿದ್ದರು ಸಿಎಂ ಸಿದ್ದರಾಮಯ್ಯ. ಬಳಿಕ ಬಿಜೆಪಿ ಸರ್ಕಾರದ ಅವಧಿಯಲ್ಲಿ ಇಂದಿರಾ ಕ್ಯಾಂಟೀನ್ ನಿರ್ವಹಣೆ ಅಷ್ಟಕ್ಕೆ ಅಷ್ಟೇ ಆಗಿತ್ತು. ಈಗ ಮತ್ತೆ ಅಧಿಕಾರಕ್ಕೆ ಬಂದಿರೋ ಕಾಂಗ್ರೆಸ್‌ ಸರ್ಕಾರ ಇಂದಿರಾ ಕ್ಯಾಂಟೀನ್‌ಗೆ ಹೊಸ ರೂಪ ನೀಡೋದಾಗಿ ಹೇಳಿದೆ. ಆದ್ರೇ ಇರೋ ಕ್ಯಾಂಟೀನ್‌ ಒಂದಕ್ಕೆ ಬೀಗ ಬಿದ್ದಿದ್ದು, ಆ ಕ್ಯಾಂಟೀನ್ ಅಕ್ರಮ ಚಟುವಟಿಕೆಯ ತಾಣವಾಗಿದೆ.

    ಹೊಸ ರೂಪದಲ್ಲಿ ಇಂದಿರಾ ಕ್ಯಾಂಟೀನ್ ಇರುತ್ತೆ.. ಬಡವರ ಹಸಿವು ನೀಗಿಸುತ್ತೆ, ಹೊಸ ಮೆನು ಇರುತ್ತೆ ಅಂತಾ ಕಾಂಗ್ರೆಸ್ ಸರ್ಕಾರ ಹೇಳಿತ್ತು. ಆದ್ರೆ ಅಧಿಕಾರಕ್ಕೆ ಬಂದು ಒಂದೂವರೆ ವರ್ಷಗಳೇ ಕಳದ್ರೂ ಇನ್ನೂ ಹೊಸ ಮೆನು ಬಂದೇ ಇಲ್ಲ. ಅದ್ರಲ್ಲಿ ಕಳೆದ ಅವಧಿಯಲ್ಲಿ ನಿರ್ಮಾಣವಾಗಿದ್ದ ವಾರ್ಡ್ ನಂಬರ್ 155ರ ಹನುಮಂತನಗರದ ಇಂದಿರಾ ಕ್ಯಾಂಟೀನ್ ಅಕ್ಷರಶಃ ಪಾಳು ಬಿದ್ದ ಜಾಗದಂತೆ ಆಗಿದ್ದು, ಕ್ಯಾಂಟೀನ್ ಆವರಣದಲ್ಲಿ ಗಿಡಗಂಟೆಗಳು ಬೆಳೆದುಕೊಂಡಿದೆ. ಇದನ್ನೂ ಓದಿ: ಹೆಚ್‌ಡಿಕೆ, ಬಿಎಸ್‌ವೈಯಿಂದ ಜಂಟಿ ಡಿನೋಟಿಫೈ – ಕಾಂಗ್ರೆಸ್ ಸಚಿವರಿಂದ ಗಂಭೀರ ಆರೋಪ

    ಕ್ಯಾಂಟೀನ್ ಕೂಡ ಕ್ಲೋಸ್ ಆಗಿದ್ದು ಇದು ಪೋಲಿ, ಪುಂಡರ ಅಡ್ಡೆಯಾಗಿ ಮಾರ್ಪಾಡಾಗಿದ್ದು, ಅನೈತಿಕ ಚಟುವಟಿಕೆಗಳ ಸ್ಥಳವಾಗಿದೆ. ಅಲ್ಲದೇ ಕ್ಯಾಂಟೀನ್ ಮುಂದೆಯೇ ಇಂದಿರಾ ಮೊಬೈಲ್ ಕ್ಯಾಂಟೀನ್‌ನ ಟಿಟಿ ವಾಹನ ಕೂಡ ಕೆಟ್ಟು ನಿಂತು ವರ್ಷಗಳೇ ಕಳೆದಿವೆ, ಇಡೀ ವಾಹನ ಗಬ್ಬೆದ್ದು ನಾರುತ್ತಿದೆ. ಇದನ್ನೂ ಓದಿ: ಬಿಹಾರದಲ್ಲಿ 80 ಕ್ಕೂ ಅಧಿಕ ದಲಿತರ ಮನೆಗಳಿಗೆ ಬೆಂಕಿ: ಎನ್‌ಡಿಎ ಆಡಳಿತದ ರಾಜ್ಯದಲ್ಲಿ ಜಂಗಲ್ ರಾಜ್ ಎಂದ ಕಾಂಗ್ರೆಸ್

    ಟಿಟಿ ವಾಹನ ಕೂಡ ಅನೈತಿಕ ಚಟುವಟಿಕೆಗಳ ತಾಣವಾಗಿದ್ದು, ನಡೆಯಬಾರದ ಘಟನೆಗಳು ನಡೆಯುತ್ತಿರೋವಂತೆ ಆಗಿದೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ಉಳಿದ ಇಂದಿರಾ ಕ್ಯಾಂಟೀನ್‌ಗಳ ಬಗ್ಗೆ ನಿಗಾ ವಹಿಸುತ್ತಾ ಅನ್ನೋದನ್ನ ಕಾದುನೋಡಬೇಕಿದೆ. ಇದನ್ನೂ ಓದಿ: ಟ್ರೈನಿ ವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣ – 41 ದಿನಗಳ ಬಳಿಕ ವೈದ್ಯರ ಮುಷ್ಕರ ವಾಪಸ್

  • ರಾತ್ರೋರಾತ್ರಿ ಸ್ಮಶಾನ ಒಡೆದು ಇಂದಿರಾ ಕ್ಯಾಂಟೀನ್ ನಿರ್ಮಾಣ – ಸ್ಥಳೀಯರಿಂದ ಆಕ್ರೋಶ

    ರಾತ್ರೋರಾತ್ರಿ ಸ್ಮಶಾನ ಒಡೆದು ಇಂದಿರಾ ಕ್ಯಾಂಟೀನ್ ನಿರ್ಮಾಣ – ಸ್ಥಳೀಯರಿಂದ ಆಕ್ರೋಶ

    ಹುಬ್ಬಳ್ಳಿ: ರಾತ್ರೋರಾತ್ರಿ ಸ್ಮಶಾನದ ಕಾಂಪೌಂಡ್ ಒಡೆದು ಇಂದಿರಾ ಕ್ಯಾಂಟೀನ್ (Indira Canteen) ನಿರ್ಮಾಣ ಮಾಡುತ್ತಿದ್ದು, ಸರ್ಕಾರದ ನಡೆಗೆ ಸ್ಥಳೀಯರಿಂದ ಆಕ್ರೋಶ ವ್ಯಕ್ತವಾಗಿದೆ. ಈ ಘಟನೆ ಜಿಲ್ಲೆಯ ಮಂಟೂರು ರಸ್ತೆಯ ಸತ್ಯಹರಿಶ್ಚಂದ್ರ ಕಾಲೋನಿಯಲ್ಲಿ (Satya Harishchandra) ನಡೆದಿದೆ.

    ಇಂದಿರಾ ಕ್ಯಾಂಟೀನ್ ಬಡವರ, ಶ್ರಮಿಕರ, ಕಾರ್ಮಿಕರ ಹೊಟ್ಟೆ ತುಂಬಿಸುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಆರಂಭಿಸಿರುವ ಯೋಜನೆಯಾಗಿದೆ. ಯೋಜನೆ ಆರಂಭದಿಂದಲೂ ಈ ಯೋಜನೆ ಒಂದಿಲ್ಲಾ ಒಂದು ವಿವಾದಕ್ಕೆ ಕಾರಣವಾಗಿದೆ. ಈ ಕ್ಯಾಂಟೀನ್ ದಲಿತರ ಮತ್ತು ಹಿಂದೂಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ವಾಣಿಜ್ಯ ನಗರಿಯಲ್ಲಿ ಸ್ಮಶಾನದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಲಾಗುತ್ತಿದ್ದು, ಕಾಮಗಾರಿಗೆ ಭಾರಿ ವಿರೋಧ ವ್ಯಕ್ತವಾಗಿದೆ.ಇದನ್ನೂ ಓದಿ: ನಾಗಮಂಗಲ ಗಲಭೆ; ಕಿಡಿಗೇಡಿಗಳು ಅಂಗಡಿಗೆ ಪೆಟ್ರೋಲ್ ಬಾಂಬ್ ಎಸೆಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ

     ಒಂದು ಕಡೆ ಇಂದಿರಾ ಕ್ಯಾಂಟೀನ್ ಕಾಮಗಾರಿ, ಇನ್ನೊಂದು ಕಡೆ ಹಿಂದೂಪರ ಸಂಘಗಳ ತೀವ್ರ ಆಕ್ರೋಶ. ಹುಬ್ಬಳ್ಳಿ ಮಂಟೂರು ರಸ್ತೆಯಲ್ಲಿ ಸತ್ಯಹರಿಶ್ಚಂದ್ರ ಕಾಲೋನಿಯ ಪಕ್ಕದಲ್ಲಿ ಸರ್ವೆ ನಂಬರ್ 212ರಲ್ಲಿ ಸುಮಾರು ಏಂಟು ಎಕರೆಯಲ್ಲಿ ಹಿಂದೂಗಳ ರುದ್ರಭೂಮಿಯಿದೆ. ಸ್ಮಶಾನದ ಕಾಂಪೌಂಡ್ ಗೋಡೆ ಒಡೆದು ರಾತ್ರೋರಾತ್ರಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಲಾಗುತ್ತಿದೆ.

    ಕಾಮಗಾರಿ ಸ್ಥಳಕ್ಕೆ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್‌ (Pramod Mutalik) ಭೇಟಿ ನೀಡಿ ಮಾತನಾಡಿ, ಅಬ್ಬಯ್ಯ ಅವರು ದಲಿತರ ವೋಟ್ ಮೇಲೆ ಗೆದ್ದಿದ್ದಾರೆ. ಆದರೆ ಈಗ ದಲಿತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಇವತ್ತು ಇಂದಿರಾ ಕ್ಯಾಂಟೀನ್, ನಾಳೆ ಅಬ್ಬಯ್ಯ ಕ್ಯಾಂಟೀನ್ ಕಟ್ಟುತ್ತಾರೆ. ಹಿಂದೂ ರುದ್ರಭೂಮಿಯಲ್ಲಿ ಇಂದಿರಾ ಕ್ಯಾಂಟೀನ್ ಬೇಡ. ಕೂಡಲೇ ಇಂದಿರಾ ಕ್ಯಾಂಟೀನ್ ಕಟ್ಟಡ ಸ್ಥಳಾಂತರ ಮಾಡಿ. ಇಲ್ಲದಿದ್ದರೆ ಉಗ್ರ ಹೋರಾಟ ಮೂಲಕ ನಾವೇ ತೆರವು ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಸತ್ಯಹರಿಶ್ಚಂದ್ರ ರುದ್ರಭೂಮಿ ಅಭಿವೃದ್ಧಿ ಮತ್ತು ಹೋರಾಟ ಸಮಿತಿ ಈ ಬಗ್ಗೆ ಸಾಕಷ್ಟು ಹೋರಾಟ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ತಮ್ಮ ಪ್ರತಿಷ್ಠೆಗಾಗಿ ರುದ್ರಭೂಮಿಯಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡುತ್ತಿದ್ದು, ಅಧಿಕಾರಗಳ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎನ್ನಲಾಗಿದೆ. ಈಗ ಈ ಹೋರಾಟಕ್ಕೆ ಹಿಂದೂಪರ ಸಂಘಟನೆಗಳು ಸಹ ಕೈ ಜೋಡಿಸಿದ್ದು, ರುದ್ರಭೂಮಿ ಹೋರಾಟ ತೀವ್ರತೆ ಪಡೆದುಕೊಂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ನಮ್ಮ ಪಾರ್ಟಿ, ನಮ್ಮ ಲೀಡರ್, ನನ್ನಿಷ್ಟ: ವಿದೇಶದಲ್ಲಿ ರಾಹುಲ್ ಗಾಂಧಿ ಭೇಟಿ ಬಗ್ಗೆ ಡಿಸಿಎಂ ಪ್ರತಿಕ್ರಿಯೆ

  • ಇಂದಿರಾ ಕ್ಯಾಂಟೀನ್‌ಗೆ ಡಿಜಿಟಲ್‌ ಸ್ಪರ್ಶ – ಇನ್ಮುಂದೆ ಆನ್‌ಲೈನ್‌ನಲ್ಲಿ ಊಟ ಬುಕ್ಕಿಂಗ್‌!

    ಇಂದಿರಾ ಕ್ಯಾಂಟೀನ್‌ಗೆ ಡಿಜಿಟಲ್‌ ಸ್ಪರ್ಶ – ಇನ್ಮುಂದೆ ಆನ್‌ಲೈನ್‌ನಲ್ಲಿ ಊಟ ಬುಕ್ಕಿಂಗ್‌!

    – ಅಕ್ರಮ ತಡೆ, ಗುಣಮಟ್ಟದ ಆಹಾರ ನೀಡಲು ಬಿಬಿಎಂಪಿ ಪ್ಲ್ಯಾನ್‌
    – ಎಲ್‌ಇಡಿ ಸ್ಕ್ರೀನ್‌ನಲ್ಲಿ ಊಟದ ಮೆನು ಪ್ರದರ್ಶನ

    ಬೆಂಗಳೂರು: ಇಂದಿರಾ ಕ್ಯಾಂಟೀನ್‌ಗಳನ್ನ (Indira Canteen) ಅಪ್‌ಗ್ರೇಡ್‌ ಮಾಡಲು ಬಿಬಿಎಂಪಿ (BBMP) ಮುಂದಾಗಿದೆ. ಬಡವರ ಹೊಟ್ಟೆ ತುಂಬಿಸೋ ಈ ಕ್ಯಾಂಟೀನ್‌ಗಳಿಗೆ ಡಿಜಿಟಲ್ ಟಚ್ ನೀಡಲು ಪಾಲಿಕೆ ಮುಂದಾಗಿದ್ದು, ಇನ್ಮುಂದೆ ಗ್ರಾಹಕರು ಎಲ್‌ಇಡಿ ಮಾದರಿಯ ಮಿಷಿನ್ ಮೂಲಕ ಇಂದಿರಾ ಕ್ಯಾಂಟೀನ್ ಊಟವನ್ನ ಬುಕ್ಕಿಂಗ್‌ ಮಾಡಬಹುದು.

    ಇಂದಿರಾ ಕ್ಯಾಂಟೀನ್‌ಗಳಿಗೆ ಡಿಜಿಟಲ್‌ ಸ್ಪರ್ಧ ನೀಡಲು ಮುಂದಾಗಿರುವ ಬಿಬಿಎಂಪಿ ಎಲ್‌ಇಡಿ ಮಾದರಿಯ ಮಿಷಿನ್‌ ಸ್ಕ್ರೀನ್‌ ಅಳವಡಿಸಿ, ಅದರಲ್ಲೇ ಊಟ ಬುಕ್‌ ಮಾಡುವ ವ್ಯವಸ್ಥೆಯನ್ನ ಜಾರಿಗೆ ತರಲು ಚಿಂತನೆ ನಡೆಸಿದೆ. ಪ್ರಾಥಮಿಕ ಹಂತವಾಗಿ ರಾಜರಾಜೇಶ್ವರಿ ನಗರ ವಲಯದಲ್ಲಿ 11 ಕ್ಯಾಂಟೀನ್‌ಗಳಲ್ಲಿ‌ ಅನುಷ್ಟಾನಗೊಳಿಸಲಾಗಿದೆ. ಯಾವ ಕ್ಯಾಂಟೀನ್‌ಗಳಲ್ಲಿ ಎಷ್ಟು ಊಟ (Indira Canteen Food) ಹೋಗಿದೆ? ಊಟದ ಗುಣಮಟ್ಟ ಹೇಗಿದೆ? ಅನ್ನೋದನ್ನ ತಕ್ಷಣಕ್ಕೆ ತಿಳಿಯಬಹುದು. ಈ ಮೂಲಕ ಊಟವನ್ನ ಪಾರ್ಸೆಲ್ ಮಾಡಿ ಸೇಲ್ ಮಾಡೋದು, ಕ್ವಾಲಿಟಿ ಇಲ್ಲ ಅನ್ನೋ ದೂರುಗಳನ್ನ ತಡೆಗಟ್ಟಬಹುದು. ತಾಂತ್ರಿಕತೆ ಅಭಿವೃದ್ಧಿಪಡಿಸುವುದು ಸರಿ ಆದ್ರೆ ಅನಕ್ಷರಸ್ಥರು ಹೇಗೆ ಇದನ್ನ ಆಪರೇಟ್ ಮಾಡ್ತಾರೆ. ಅವ್ರು ಹೇಗೆ ಊಟವನ್ನ ತೆಗೆದುಕೊಳ್ತಾರೆ? ಅನ್ನೋದನ್ನ ಕೆಲ ಗ್ರಾಹಕರು ಪ್ರಶ್ನೆ ಮಾಡ್ತಿದ್ದಾರೆ.

    ಬುಕ್ಕಿಂಗ್‌ ಕಾರ್ಯ ಹೇಗೆ?
    ಸೆಲ್ಫ್ ಕಿಯೋಕ್ಸ್ ಮಿಷಿನ್ ಅಳವಡಿಕೆಯಲ್ಲಿ ಊಟದ ಮೆನುವನ್ನ, ಮೊದ್ಲೇ ಪ್ರೊಗ್ರಾಮಿಂಗ್ ಮಾಡಲಾಗುತ್ತದೆ. ಮೆನುವಿನಲ್ಲಿದ್ದ ಯಾವ ಊಟ ಬೇಕೋ, ಆ ಊಟವನ್ನ ಆಯ್ಕೆ ಮಾಡಿಕೊಂಡ್ರೆ, ಕ್ಯಾಂಟೀನ್ ಸಿಬ್ಬಂದಿ ಕೊಡುತ್ತಾರೆ. ಇದಕ್ಕಿಂತ ಮೊದಲು ಮೂರು ತಂತ್ರಜ್ಞಾನಗಳನ್ನ ಬಳಸಿಕೊಂಡು ಟ್ರಯಲ್‌ ಟೆಸ್ಟ್ ಮಾಡಿದ್ರೂ, ಸಕ್ಸಸ್ ಆಗಿರಲಿಲ್ಲ. ಹೀಗಾಗಿ ಇದೀಗಾ ಹೊಸ ವ್ಯವಸ್ಥೆಗೆ ಪಾಲಿಕೆ ಮುಂದಾಗಿದೆ. ಐಟಿ ವಿಭಾಗಕ್ಕೆ ಈಗಾಗಲೇ ಕಡತ ಕಳುಹಿಸಿರುವ ಬಿಬಿಎಂಪಿ, ಈ ಹೊಸ ವ್ಯವಸ್ಥೆ ಜಾರಿಗೆ ತರಲು ಟೆಂಡರ್ ಕರೆಯೋದಕ್ಕೂ ಮುಂದಾಗಿದೆ.

    ಸೆಲ್ಫ್ ಕಿಯೋಕ್ಸ್ ಮಿಷಿನ್ ಹೇಗೆ ಕೆಲಸ ಮಾಡುತ್ತೆ?
    * ಸೆಲ್ಫ್ ಕಿಯೋಕ್ಸ್ ಮಿಷಿನ್‌ನಲ್ಲಿ ಊಟದ ಮೆನು ಸೇರಿ, ಯೋಜನೆಯ ಎಲ್ಲಾ ಮಹಿತಿಯನ್ನ ಮೊದಲೇ ಪ್ರೋಗ್ರಾಮಿಂಗ್‌ ಮಾಡಲಾಗುತ್ತೆ.
    * ಊಟವನ್ನ ರಿಸರ್ವ್ ಮಾಡಲು ಆಪರೇಟ್ ಮಾಡುವಾಗ ಗ್ರಾಹಕನ ಫೋಟೋ ಕ್ಲಿಕ್ಕಿಸುತ್ತೆ
    * ಒಬ್ಬ ವ್ಯಕ್ತಿಗೆ ಎಷ್ಟು ಊಟ ಕೊಡಬೇಕು ಅನ್ನೋದು ಮೊದಲೇ ನಮೂದು ಆಗಿರುತ್ತೆ
    * ಬೆಳಗ್ಗೆ ಉಪಹಾರ, ಮಧ್ಯಾಹ್ನ, ರಾತ್ರಿ ಊಟದ ಸಮಯದಲ್ಲಿ ಮಾತ್ರ ಇದು ಕಾರ್ಯಾಚರಣೆ ಮಾಡುತ್ತೆ
    * ಒಂದು ದಿನಕ್ಕೆ ಎಷ್ಟು ಊಟ ಸೇಲ್ ಆಗಿದೆ, ಊಟದ ಕ್ವಾಲಿಟಿಯನ್ನೂ ಇದು ತೋರಿಸುತ್ತದೆ
    * ಸೀಮಿತ ತಿಂಗಳವರೆಗೆ, ಊಟ ಖರೀದಿಸಿದ ಗ್ರಾಹಕರ ಮಾಹಿತಿಯ ಡೆಟಾ, ಬಿಬಿಎಂಪಿ ಸರ್ವರ್‌ನಲ್ಲಿ ನೊಂದಣಿಯಾಗುತ್ತೆ
    * ಎಷ್ಟು ಊಟ ಮಾರಾಟವಾಗಿದ್ಯೋ ಅಷ್ಟು ಹಣವನ್ನ ಟೆಂಡರ್ ದಾರರಿಗೆ ನೀಡಲು ಸಹಕಾರಿ. ಅಕ್ರಮ ತಡೆಗೆ ಅನುಕೂಲ

    ಡಿಜಿಟಲ್ ವ್ಯವಸ್ಥೆ ಮಾಡುವ ಉದ್ದೇಶ ಏನು?
    * ಮೂರು ಮುಖ್ಯ ಉದ್ದೇಶಗಳನ್ನಿಟ್ಟುಕೊಂಡು ಈ ವ್ಯವಸ್ಥೆ ಜಾರಿಗೆ ತರಲು ಬಿಬಿಎಂಪಿ ನಿರ್ಧರಿಸಿದೆ.
    * ಊಟ ಬಡಿಸೋದ್ರಲ್ಲಿ ಹೆಚ್ಚು ಕಡಿಮೆಯಾಗ್ತಿದೆ ಅನ್ನೋ ದೂರುಗಳನ್ನ ತಪ್ಪಿಸಲು
    * ಯಾವ ಕ್ಯಾಂಟೀನ್‌ಗಳು ಹೇಗೆ ಕಾರ್ಯಾಚರಣೆ ಮಾಡ್ತಿವೆ?
    * ರಿಪೋರ್ಟ್ ಜನರೇಶನ್ ಬಗ್ಗೆ ತಕ್ಷಣಕ್ಕೆ ಮಾಹಿತಿ ಪಡೆಯಬಹುದು. ಊಟ ಪಡೆದ ಗ್ರಾಹಕರ ಸಂಖ್ಯೆಯ ಮಾಹಿತಿಯನ್ನ ಸುಲಭವಾಗಿ ಪಡೆಯಬಹುದು ಅನ್ನೋ ಕಾರಣಕ್ಕೆ ಡಿಜಿಟಲ್‌ ಸ್ಪರ್ಧ ನೀಡಲಾಗುತ್ತಿದೆ.

  • ‘ಪಬ್ಲಿಕ್ ಟಿವಿ’ ಇಂಪ್ಯಾಕ್ಟ್; ಬೆಂಗಳೂರಲ್ಲಿ ಮುಚ್ಚಿದ್ದ 10ಕ್ಕೂ ಹೆಚ್ಚು ಇಂದಿರಾ ಕ್ಯಾಂಟೀನ್‌ಗಳು ಓಪನ್

    ‘ಪಬ್ಲಿಕ್ ಟಿವಿ’ ಇಂಪ್ಯಾಕ್ಟ್; ಬೆಂಗಳೂರಲ್ಲಿ ಮುಚ್ಚಿದ್ದ 10ಕ್ಕೂ ಹೆಚ್ಚು ಇಂದಿರಾ ಕ್ಯಾಂಟೀನ್‌ಗಳು ಓಪನ್

    ಬೆಂಗಳೂರು: ಕಳೆದ 15 ದಿನಗಳಿಂದ ಬೆಂಗಳೂರು (Bengaluru) ದಕ್ಷಿಣ ಭಾಗದಲ್ಲಿ ಬಂದ್ ಆಗಿದ್ದ, 10ಕ್ಕೂ ಹೆಚ್ಚಿನ ಇಂದಿರಾ ಕ್ಯಾಂಟೀನ್‌ಗಳು (Indira Canteen) ಮತ್ತೆ ಓಪನ್ ಆಗಿವೆ.

    ಈ ಕ್ಯಾಂಟೀನ್‌ಗಳಲ್ಲಿ ಆಹಾರ ಪೂರೈಕೆ ಟೆಂಡರ್ ಪಡೆದಿದ್ದ, ಶೆಫ್ ಟೆಕ್ ಸಂಸ್ಥೆಗೆ ಬಿಬಿಎಂಪಿಯಿಂದ ಬಾಕಿ ಹಣ ಬಿಡುಗಡೆಯಾಗಿಲ್ಲ. ಜೊತೆಗೆ ನೀರು, ವಿದ್ಯುತ್ ಬಿಲ್ ಪಾವತಿಯಾಗಿಲ್ಲ ಎಂಬ ಕಾರಣಕ್ಕೆ ಕ್ಯಾಂಟೀನ್‌ಗಳು ಬಂದ್ ಆಗಿದ್ದವು. ಇದನ್ನೂ ಓದಿ: ಕಾಂಗ್ರೆಸ್ ಅವಧಿಯಲ್ಲೇ ಇಂದಿರಾ ಕ್ಯಾಂಟೀನ್ ಬಂದ್ – ಬೆಂಗಳೂರಲ್ಲಿ 15ಕ್ಕೂ ಹೆಚ್ಚು ಕ್ಯಾಂಟೀನ್‌ಗಳಿಗೆ ಬೀಗ

    ಈ ಬಗ್ಗೆ ‘ಪಬ್ಲಿಕ್ ಟಿವಿ’ ಕಳೆದ ಮೂರು ದಿನದ ಹಿಂದೆ ಸವಿಸ್ತಾರ ಸುದ್ದಿ ಪ್ರಸಾರ ಮಾಡಿತ್ತು. ವರದಿ ಬಳಿಕ ಎಚ್ಚೆತ್ತ ಬಿಬಿಎಂಪಿ ಅಧಿಕಾರಿಗಳು ಸಮಸ್ಯೆ ಬಗೆಹರಿಸಿದ್ದು, ಕ್ಯಾಂಟೀನ್‌ಗಳನ್ನ ಪುನರಾರಂಭ ಮಾಡಲಾಗಿದೆ.

    ಜಯನಗರ 153 ರ ವಾರ್ಡ್ ಸೇರಿದಂತೆ ಬಸವನಗುಡಿ, ವಿವಿ ಪುರಂ, ಆಡುಗೋಡಿ, ಪದ್ಮನಾಭನಗರ ಸೇರಿದಂತೆ 10 ಇಂದಿರಾ ಕ್ಯಾಂಟೀನ್‌ಗಳು ತೆರೆದಿವೆ. ನಿಮಾನ್ಸ್ ಆಸ್ಪತ್ರೆ ಬಳಿಯ ಕ್ಯಾಂಟೀನ್ ಒಂದನ್ನ ಹೊರತುಪಡಿಸಿ ಉಳಿದೆಲ್ಲ ಕಡೆ ಓಪನ್ ಆಗಿವೆ. ಇದನ್ನೂ ಓದಿ: ಬಿಜೆಪಿ-ಜೆಡಿಎಸ್ ಕಾರ್ಯಕರ್ತರನ್ನ ಶಿಕಾರಿ ಮಾಡಿ, ಒಬ್ಬ ಮುಖಂಡ ಕನಿಷ್ಠ 10 ಮಂದಿಯನ್ನ ಪಕ್ಷಕ್ಕೆ ಕರೆತನ್ನಿ: ಡಿಕೆಶಿ

    ರಾಹುಲ್ ಗಾಂಧಿ ಉದ್ಘಾಟನೆ ಮಾಡಿದ್ದ ಜಯನಗರ 153 ವಾರ್ಡ್ ಕ್ಯಾಂಟೀನ್ ಕೂಡ ಬಂದ್ ಆಗಿತ್ತು. ಸದ್ಯ ನಿನ್ನೆಯಿಂದ ಕ್ಯಾಂಟೀನ್ ತೆರೆದಿದೆ. ಕೆಲವರಿಗೆ ಕ್ಯಾಂಟೀನ್ ಓಪನ್ ಆಗಿರುವ ಬಗ್ಗೆ ಮಾಹಿತಿ ಇಲ್ಲದ ಹಿನ್ನೆಲೆ ಕಡಿಮೆ ಸಂಖ್ಯೆಯಲ್ಲಿ ಜನ ಊಟಕ್ಕೆ ಬರ್ತಿದ್ದಾರೆ.

  • ಕಾಂಗ್ರೆಸ್ ಅವಧಿಯಲ್ಲೇ ಇಂದಿರಾ ಕ್ಯಾಂಟೀನ್ ಬಂದ್ – ಬೆಂಗಳೂರಲ್ಲಿ 15ಕ್ಕೂ ಹೆಚ್ಚು ಕ್ಯಾಂಟೀನ್‌ಗಳಿಗೆ ಬೀಗ

    ಕಾಂಗ್ರೆಸ್ ಅವಧಿಯಲ್ಲೇ ಇಂದಿರಾ ಕ್ಯಾಂಟೀನ್ ಬಂದ್ – ಬೆಂಗಳೂರಲ್ಲಿ 15ಕ್ಕೂ ಹೆಚ್ಚು ಕ್ಯಾಂಟೀನ್‌ಗಳಿಗೆ ಬೀಗ

    ಬೆಂಗಳೂರು: ಕಾಂಗ್ರೆಸ್ (Congress) ಸರ್ಕಾರದ ಅವಧಿಯಲ್ಲೇ ಬೆಂಗಳೂರಿನಲ್ಲಿ (Bengaluru) 15 ಕ್ಕೂ ಹೆಚ್ಚು ಇಂದಿರಾ ಕ್ಯಾಂಟೀನ್‌ಗಳು (Indira Canteen) ಬಂದ್ ಆಗಿವೆ.

    2013ರ ಸಿದ್ದರಾಮಯ್ಯ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದ ಮಹತ್ವ ಯೋಜನೆ ‘ಇಂದಿರಾ ಕ್ಯಾಂಟೀನ್’. ಕೇವಲ ಬೆಂಗಳೂರಿಗೆ ಮಾತ್ರ ಅಲ್ಲದೆ ಇಡೀ ರಾಜ್ಯಕ್ಕೆ ಈ ಯೋಜನೆಯನ್ನ ಜಾರಿ ಮಾಡಿ ಸಿಎಂ ಸಿದ್ದರಾಮಯ್ಯ ಮೆಚ್ಚುಗೆ ಪಡೆದಿದ್ದರು. ಆದರೆ ಈಗ ಎರಡನೇ ಬಾರಿಗೆ ಅವರದೇ ಸರ್ಕಾರ ಅಧಿಕಾರದಲ್ಲಿದೆ. ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿದ್ದಾರೆ. ಅವರ ಕನಸಿನ ಕೂಸು ಕೆಲ ಕಡೆ ಐಸಿಯು ಸೇರಿದೆ. ಬಿಬಿಎಂಪಿ ನಿರ್ಲಕ್ಷ್ಯಕ್ಕೆ, ನಗರದ ಒಂದು ಭಾಗದಲ್ಲಿ ಇಡೀ ಯೋಜನೆ ಹಳ್ಳ ಹಿಡಿದಿದೆ. ಇದನ್ನೂ ಓದಿ: ಶಿರೂರು ಗುಡ್ಡ ಕುಸಿತ ಪ್ರಕರಣ – ಐದು ವರ್ಷದ ಬಾಲಕಿ ಮೃತದೇಹ ಪತ್ತೆ

    2013 ರಲ್ಲಿ ಸರ್ಕಾರದ ಅವಧಿಯಲ್ಲಿ ಜಾರಿಯಾದ ಇಂದಿರಾ ಕ್ಯಾಂಟೀನ್ ಬಡವರು, ಕೂಲಿ ಕಾರ್ಮಿಕರು, ನಿರಾಶ್ರಿತರು ಸೇರಿದಂತೆ ಹಸಿದ ಹೊಟ್ಟೆಗಳನ್ನ ತುಂಬಿಸಿತ್ತು. ಅಲ್ಲದೇ ಇತರ ರಾಜ್ಯಗಳಿಗೂ ಈ ಯೋಜನೆ ಸ್ಫೂರ್ತಿ ಆಗಿತ್ತು. ಆದರೆ ಬೆಂಗಳೂರು ದಕ್ಷಿಣದಲ್ಲಿ ಈ ಯೋಜನೆ ಸಂಪೂರ್ಣ ಹಳ್ಳ ಹಿಡಿಯುವಂತಾಗಿದೆ. ಕಳೆದ ಒಂದು ವರ್ಷದಿಂದ ಬಾಕಿ ಹಣ ಪಾವತಿ ಮಾಡಿಲ್ಲ ಅಂತಾ ಆಹಾರ ಪೂರೈಕೆಯ ಟೆಂಡರ್ ಪಡೆದಿದ್ದ ಶೆಫ್ ಟಾಕ್ ಸಂಸ್ಥೆ, ಪಾಲಿಕೆಯ ದಕ್ಷಿಣ ವಲಯಕ್ಕೆ ಬರುವ 15ಕ್ಕೂ ಹೆಚ್ಚು ಇಂದಿರಾ ಕ್ಯಾಂಟೀನ್‌ಗಳನ್ನು ಕಳೆದ 15-20 ದಿನಗಳಿಂದ ಬಾಗಿಲು ಬಂದ್ ಮಾಡಿದೆ.

    ಬಡವರ ಪಾಲಿನ ಅನ್ನಪೂರ್ಣೇಶ್ವರಿ ಎಂದೇ ಕರೆಸಿಕೊಳ್ಳುತ್ತಿದ್ದ ಇಂದಿರಾ ಕ್ಯಾಂಟೀನ್‌ಗಳು ಕಾಂಗ್ರೆಸ್ ಸರ್ಕಾರದ ಅವದಿಯಲ್ಲೇ ಈ ರೀತಿ ಅವನತಿಯ ಹಾದಿ ಹಿಡಿದಿರುವುದು ನಿಜಕ್ಕೂ ಸಿಎಂ ಸಿದ್ದರಾಮಯ್ಯರಿಗೆ ಮುಜುಗರ ತರಿಸಿದೆ. ಅದರಲ್ಲೂ ನಗರದ ಪ್ರಮುಖ ಆಸ್ಪತ್ರೆಗಳ ಆವರಣ, ಅಕ್ಕಪಕ್ಕದಲ್ಲಿರುವ ಕ್ಯಾಂಟೀನ್‌ಗಳೇ ಮುಚ್ಚಿವೆ. ನಿಜವಾಗಿ ಯಾರಿಗೆ ಯೋಜನೆ ತಲುಪಬೇಕಿತ್ತೋ ಅವರೇ ಯೋಜನೆ ಸಿಗದೇ ಪರದಾಡುವಂತಾಗಿದೆ. ಇದನ್ನೂ ಓದಿ: ಉದ್ಯೋಗ ಕಲ್ಪಿಸುವ ವಿಧೇಯಕ ತಡೆಹಿಡಿದು ಕನ್ನಡಿಗ, ಕರ್ನಾಟಕಕ್ಕೆ ಅಪಮಾನ: ಸರ್ಕಾರದ ವಿರುದ್ಧ ವಿಜಯೇಂದ್ರ ಕಿಡಿ

    ಬಿಬಿಎಂಪಿ ವ್ಯಾಪ್ತಿಯಲ್ಲಿ 174 ಸ್ಥಿರ ಹಾಗೂ 24 ಮೊಬೈಲ್ ಕ್ಯಾಂಟಿನ್‌ಗಳಿವೆ. ಶುರುವಾದಾಗಿನಿಂದ ಪ್ರತಿ ನಿತ್ಯ ಮೂರೂವರೆ ಲಕ್ಷ ಜನ ಊಟ, ತಿಂಡಿ ಮಾಡುತ್ತಿದ್ದರು. ಕಳೆದ ಒಂದು ವರ್ಷದಿಂದ ಕಂಪನಿಗೆ ಪಾಲಿಕೆ 47 ಕೋಟಿ ಹಣ ನೀಡಬೇಕಿದೆ. ಕ್ಯಾಂಟೀನ್ ಸಿಬ್ಬಂದಿ ಸಂಬಳ, ದಿನಸಿ ಬಿಲ್ ಸಮಸ್ಯೆಯಿಂದಾಗಿ ಟೆಂಡರ್ ಪಡೆದ ಸಂಸ್ಥೆ ಕ್ಯಾಂಟೀನ್‌ಗೆ ಬೀಗ ಹಾಕಿದೆ. ಬಸವನಗುಡಿ, ಪದ್ಮನಾಭನಗರ, ಚಿಕ್ಕಪೇಟೆ, ಜಯನಗರ ಕ್ಷೇತ್ರಗಳಲ್ಲಿ ಕ್ಯಾಂಟೀನ್‌ಗಳಿಗೆ ಬೀಗ ಹಾಕಲಾಗಿದೆ. ಸಿದ್ದರಾಮಯ್ಯ ಸಿಎಂ ಆಗಿರುವಾಗಲೇ ಅವರ ಯೋಜನೆ ಈ ರೀತಿ ಹಳ್ಳ ಹಿಡಿಯುತ್ತಿರೋದು ವಿಪರ್ಯಾಸ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.