Tag: Indigo flight

  • ವಿಮಾನದ ಶೌಚಾಲಯದಲ್ಲಿ‌ ಸಿಗರೇಟ್ ಸೇದಿದ ವ್ಯಕ್ತಿ ಅರೆಸ್ಟ್‌

    ವಿಮಾನದ ಶೌಚಾಲಯದಲ್ಲಿ‌ ಸಿಗರೇಟ್ ಸೇದಿದ ವ್ಯಕ್ತಿ ಅರೆಸ್ಟ್‌

    ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ವಿಮಾನಯಾನ ಸಂದರ್ಭದಲ್ಲಿ ಅಸಭ್ಯ ವರ್ತನೆ, ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುತ್ತಿರುವ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ, ತುರ್ತು ನಿರ್ಗಮನ ದ್ವಾರ ತೆರೆಯುವುದು, ವಿಮಾನ ಸಿಬ್ಬಂದಿ ಮೇಲೆ ಹಲ್ಲೆ ಹೀಗೆ ಅನೇಕ ಘಟನೆಗಳು ನಡೆದಿವೆ. ಅದಕ್ಕೆ ಪೂರಕವೆಂಬಂತೆ ಮತ್ತೊಂದು ಘಟನೆ ವರದಿಯಾಗಿದೆ.

    ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Bengaluru International Airport) ಪೊಲೀಸರಿಂದ ವಿಮಾನದ ಶೌಚಾಲಯದಲ್ಲಿ ಸಿಗರೇಟ್ ಸೇದಿದ ವ್ಯಕ್ತಿಯನ್ನು ಬಂಧಿಸಲಾಗಿದೆ. ಅಸ್ಸಾಂ ಮೂಲದ ಶೇಹರಿ ಚೌದರಿ ಎಂಬಾತ ಬಂಧಿತ ವ್ಯಕ್ತಿ. ಇದನ್ನೂ ಓದಿ: ಕಾಂಗ್ರೆಸ್ ಪಾರ್ಟಿಯ ಅರ್ಥ ಕಮಿಷನ್, ಕರಪ್ಷನ್ – ಜೆ.ಪಿ.ನಡ್ಡಾ

    ಶುಕ್ರವಾರ ಇಂಡಿಗೊ ವಿಮಾನದಲ್ಲಿ (Indgo Flight) ಅಸ್ಸಾಂನಿಂದ ಬೆಂಗಳೂರಿಗೆ ಬರುತ್ತಿದ್ದ. ಈ ವೇಳೆ ಶೌಚಾಲಯಕ್ಕೆ ಹೋಗುವ ನೆಪದಲ್ಲಿ ಹೋಗಿದ್ದಾನೆ. ಶೌಚಾಲಯದಲ್ಲಿ ಸಿಗರೇಟ್ ಸೇದುತ್ತಿರುವ ವಿಚಾರ ತಿಳಿದ ಸಿಬ್ಬಂದಿ, ಚೌದರಿಯನ್ನು ಹೊರಗೆ ಕರೆದು ಬುದ್ದಿ ಹೇಳಿದ್ದಾರೆ.

    ಇಷ್ಟಕ್ಕೆ ಸುಮ್ಮನಾಗದ ವಿಮಾನ ಕ್ಯಾಪ್ಟನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸರಿಗೆ ದೂರು ನೀಡಿದ್ದ‌. ದೂರಿನ ಅಧಾರದ ಮೇಲೆ ಶೇಹರಿ ಚೌದರಿಯನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಹೆಚ್‌.ಡಿ.ದೇವೇಗೌಡರ ಆರೋಗ್ಯ ಸ್ಥಿತಿ ಸರಿಯಿಲ್ಲ ಎಂದ ವೈದ್ಯರು – ಹೆಚ್‌ಡಿಡಿ 100 ಕಿ.ಮೀ ರೋಡ್‌ ಶೋ ರದ್ದು

  • ತುರ್ತು ವೈದ್ಯಕೀಯ ಚಿಕಿತ್ಸೆ- ಕರಾಚಿಯಲ್ಲಿ ಭೂಸ್ಪರ್ಶ ಮಾಡುವ ಮೊದಲೇ ಪ್ರಯಾಣಿಕ ಸಾವು

    ತುರ್ತು ವೈದ್ಯಕೀಯ ಚಿಕಿತ್ಸೆ- ಕರಾಚಿಯಲ್ಲಿ ಭೂಸ್ಪರ್ಶ ಮಾಡುವ ಮೊದಲೇ ಪ್ರಯಾಣಿಕ ಸಾವು

    ನವದೆಹಲಿ: ದೆಹಲಿಯಿಂದ ದುಬೈಗೆ ತೆರಳುತ್ತಿದ್ದ ಇಂಡಿಗೋ ವಿಮಾನ (IndiGo Flight) ದಲ್ಲಿ ಪ್ರಯಾಣಿಕರೊಬ್ಬರಿಗೆ ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ ಕರಾಚಿಗೆ ತನ್ನ ಪಥ ಬದಲಿಸಿದ್ದು, ತುರ್ತು ಭೂಸ್ಪರ್ಶ ಮಾಡುವ ಮೊದಲೇ ವ್ಯಕ್ತಿ ಮೃತಪಟ್ಟ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.

    ಇಂದು ಬೆಳಗ್ಗೆ ದೆಹಲಿಯಿಂದ ಇಂಡಿಗೋ ಏರ್ ಲೈನ್ ಸಂಸ್ಥೆಯ 6ಇ-1736 ವಿಮಾನವು ಪ್ರಯಾಣ ಬೆಳೆಸಿದೆ. ವಿಮಾನ ಜರ್ನಿ ಆರಂಭವಾದ ಕೆಲ ಕ್ಷಣಗಳಲ್ಲಿ, ಪ್ರಯಾಣಿಕ ನೈಜೀರಿಯಾ ಮೂಲದ ಅಬ್ದುಲ್ಲಾ (60)ಗೆ ತೀವ್ರ ಅಸ್ವಸ್ಥತೆ ಕಾಡಿದೆ. ಈ ವೇಳೆ ವಿಮಾನವು ಪಾಕಿಸ್ತಾನದ ಕಡೆಯಿಂದ ಹಾದು ಹೋಗುತ್ತಿತ್ತು.

    ವಿಚಾರದ ತಿಳಿದ ಕೂಡಲೇ ಕರಾಚಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸಿದ ಪೈಲಟ್, ಅಬ್ದುಲ್ಲಾ ಅವರ ಪರಿಸ್ಥಿತಿಯನ್ನು ವಿವರಿಸಿ ತುರ್ತು ಭೂಸ್ಪರ್ಶನಕ್ಕಾಗಿ ಅನುಮತಿ ಕೋರಿದ್ದಾರೆ. ಇದನ್ನು ಕರಾಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಏರ್ ಟ್ರಾಫಿಕ್ ಕಂಟ್ರೋಲರ್ ಅನುಮೋದಿಸಿ, ತುರ್ತು ಭೂಸ್ಪರ್ಶ ಮಾಡಲು ಅನುಮತಿ ನೀಡಿದ್ದಾರೆ. ಇತ್ತ ಅದಾಗಲೇ ಅಬ್ದುಲ್ಲಾ ಅವರ ಪರಿಸ್ಥಿತಿ ತೀರಾ ಹದಗೆಟ್ಟಿದೆ. ವಿಮಾನವನ್ನು ಕರಾಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Karachi International Airport) ದಲ್ಲಿ ಇಳಿಸುವ ಮುನ್ನವೇ ಅಬ್ದುಲ್ಲಾ ಅಸುನೀಗಿದ್ದಾರೆ. ಇದನ್ನೂ ಓದಿ: ಹೊಟ್ಟೆನೋವಿನಿಂದಾಗಿ ತೆಲಂಗಾಣದ ಸಿಎಂ ಕೆಸಿಆರ್ ಆಸ್ಪತ್ರೆ ದಾಖಲು

    ಇಂಡಿಗೋ ಸಂಸ್ಥೆಯಿಂದ ಪ್ರಕಟಣೆ: ದೆಹಲಿಯಿಂದ ದೋಹಾಕ್ಕೆ ಪ್ರಯಾಣಿಸುತ್ತಿದ್ದ ನಮ್ಮ ಸಂಸ್ಥೆಯ ವಿಮಾನವು ಮಾರ್ಗ ಮಧ್ಯೆ ಪಾಕಿಸ್ತಾನದ ಕರಾಚಿ ಕಡೆಗೆ ಪ್ರಯಾಣ ಬೆಳೆಸಿತು. ಇದಕ್ಕೆ ವಿಮಾನದಲ್ಲಿದ್ದ ವ್ಯಕ್ತಿಯೊಬ್ಬರಿಗೆ ತುರ್ತು ವೈದ್ಯಕೀಯ ನೆರವು ಬೇಕಾಗಿದ್ದೇ ಕಾರಣ ಎಂದು ಹೇಳಿದ್ದಾರೆ. ಆದರೆ ದುರದೃಷ್ಟವಶಾತ್ ಆ ವ್ಯಕ್ತಿಯು ಕರಾಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಇಳಿಯುವುದಕ್ಕೂ ಮುನ್ನವೇ ಮೃತಪಟ್ಟಿದ್ದಾರೆ.

    ತೀವ್ರ ಅಸ್ವಸ್ಥರಾಗಿದ್ದ ವ್ಯಕ್ತಿಯನ್ನು ನಮ್ಮ ಸತತ ಪ್ರಯತ್ನದ ನಡುವೆಯೂ ಉಳಿಸಿಕೊಳ್ಳಲಾಗದೇ ಹೋಗಿದ್ದು ನಮ್ಮ ದುರಾದೃಷ್ಟ. ಅವರ ಕುಟುಂಬದವರಿಗೆ ಹಾಗೂ ಅವರ ಸ್ನೇಹಿತರಿಗೆ ದುಃಖದಿಂದ ಬೇಗನೇ ಚೇತರಿಸಿಕೊಳ್ಳುವಂಥ ಶಕ್ತಿಯನ್ನು ದೇವರು ಅವರಿಗೆ ನೀಡಲಿ ಎಂದು ಹಾರೈಸುತ್ತೇವೆ ಎಂದಿದೆ.

  • ಹುಬ್ಬಳ್ಳಿಯಿಂದ ಪುಣೆಗೆ ನೇರ ವಿಮಾನ ಸೇವೆ ಆರಂಭ

    ಹುಬ್ಬಳ್ಳಿಯಿಂದ ಪುಣೆಗೆ ನೇರ ವಿಮಾನ ಸೇವೆ ಆರಂಭ

    ಹುಬ್ಬಳ್ಳಿ: ಪುಣೆಗೆ (Pune) ಶೀಘ್ರವಾಗಿ ಸಂಪರ್ಕಿಸುವ ನಿಟ್ಟಿನಲ್ಲಿ ಹುಬ್ಬಳ್ಳಿಯಿಂದ (Hubballi) ನೇರ ವಿಮಾನ ಸೇವೆ (Flight Service) ಆರಂಭವಾಗಿದೆ.

    ಪುಣೆಯಿಂದ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಇಂಡಿಗೋ ವಿಮಾನಕ್ಕಿಂದು (IndiGo Flight) ಜಲಫಿರಂಗಿಯ ಮೂಲಕ ಸ್ವಾಗತ ನೀಡಲಾಯಿತು. ಇದನ್ನೂ ಓದಿ: ಟರ್ಕಿಗೆ 100 ಮಂದಿಯ NDRF ತಂಡವನ್ನು ಕಳುಹಿಸಲಿದೆ ಭಾರತ

    ಮೊದಲ ದಿನವೇ ವಿಮಾನದ ಎಲ್ಲಾ ಸಿಟ್ ಗಳು ಸಂಪೂರ್ಣ ಭರ್ತಿಯಾಗಿದ್ದು, ಈ ಸೇವೆಯು ಜನರಿಗೆ ಅನುಕೂಲಕರವಾಗಿದೆ ಎಂಬುದು ಖುಷಿಯ ಸಂಗತಿ. ಈ ಸೇವೆಯಿಂದ ಹುಬ್ಬಳ್ಳಿ, ಧಾರವಾಡ ಅವಳಿ ನಗರ ಸೇರಿದಂತೆ ಇಡೀ ಉತ್ತರ ಕರ್ನಾಟಕ ಭಾಗದ ಜನರಿಗೆ ವ್ಯಾಪಾರದ ದೃಷ್ಟಿಯಿಂದ ಸಾಕಷ್ಟು ಅನುಕೂಲವಾಗಲಿದೆ.

    ರಾಜ್ಯದ ಪ್ರಸ್ತಾವನೆಗೆ ಸ್ಪಂದಿಸಿ ವಿಮಾನಯಾನ ಸೇವೆ ಆರಂಭಿಸಿರುವ ಹಿನ್ನಲೆ ಪ್ರಧಾನಿ ನರೇಂದ್ರ ಮೋದಿ (Narendra Modi), ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ಇಂಡಿಗೋ ಸಂಸ್ಥೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಧನ್ಯವಾದ ತಿಳಿಸಿದ್ದಾರೆ. ಇದನ್ನೂ ಓದಿ: Child Marriage Crackdown: ಕಾನೂನಿಗೆ ಹೆದರಿ ಮದ್ವೆ ನಿಲ್ಲಿಸಿದ ಪೋಷಕರು, ಆತ್ಮಹತ್ಯೆ ಮಾಡಿಕೊಂಡ ಮಗಳು

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವಿಮಾನದಲ್ಲಿ ವೃದ್ಧನಿಗೆ ರಕ್ತಸ್ರಾವ ಬೆನ್ನಲೇ ತುರ್ತು ಭೂಸ್ಪರ್ಶ – ಚಿಕಿತ್ಸೆ ಫಲಿಸದೇ ಸಾವು

    ವಿಮಾನದಲ್ಲಿ ವೃದ್ಧನಿಗೆ ರಕ್ತಸ್ರಾವ ಬೆನ್ನಲೇ ತುರ್ತು ಭೂಸ್ಪರ್ಶ – ಚಿಕಿತ್ಸೆ ಫಲಿಸದೇ ಸಾವು

    ಭೋಪಾಲ್: ಮಧುರೈನಿಂದ (Madurai)  ದೆಹಲಿಗೆ (Delhi) ತೆರಳುತ್ತಿದ್ದ ವಿಮಾನದಲ್ಲಿ ಪ್ರಯಾಣಿಸಿದ ವೃದ್ಧ ಪ್ರಯಾಣಿಕನೊಬ್ಬನ (Passenger) ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಇಂದೋರ್‌ನಲ್ಲಿ ತುರ್ತು ಭೂಸ್ಪರ್ಶ (Emergency Landing) ಮಾಡಿದ್ದು, ಆದರೂ ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟ ಘಟನೆ ನಡೆದಿದೆ.

    ನೋಯ್ಡಾ ನಿವಾಸಿಯಾದ ಅತುಲ್ ಗುಪ್ತಾ (60) ಮೃತ ಪ್ರಯಾಣಿಕ. ಅತುಲ್ ಗುಪ್ತಾ ಮಧುರೈನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದರು. ಆದರೆ ಆ ವೇಳೆ ಅವರಿಗೆ ಬಾಯಿಯಿಂದ ರಕ್ತಸ್ರಾವವಾಗುತ್ತಿತ್ತು. ಅಷ್ಟೇ ಅಲ್ಲದೇ ವಿಮಾನದಲ್ಲಿರುವಾಗಲೇ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು.

    ಈ ಹಿನ್ನೆಲೆಯಲ್ಲಿ ಮಧುರೈನಿಂದ ದೆಹಲಿಗೆ ತೆರಳುತ್ತಿದ್ದ ಇಂಡಿಗೋ ವಿಮಾನವನ್ನು (IndiGo Flight) ವೈದ್ಯಕೀಯ ತುರ್ತು ಪರಿಸ್ಥಿಯ ಹಿನ್ನೆಲೆಯಲ್ಲಿ ಇಂದೋರ್‍ನ ದೇವಿ ಅಹಲ್ಯಾಬಾಯಿ ಹೋಳ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು. ನಂತರ ಅಲ್ಲೇ ಸಮೀಪವಿರುವ ಆಸ್ಪತ್ರೆಗೆ ಅತುಲ್ ಗುಪ್ತಾ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ಯಲಾಯಿತು. ಆದರೆ ಅಲ್ಲಿ ವೈದ್ಯರು ಗುಪ್ತಾ ಸಾವನ್ನಪ್ಪಿರುವುದಾಗಿ ಘೋಷಿಸಿದರು.

    ಗುಪ್ತಾ ಅವರನ್ನು ವಿಮಾನ ನಿಲ್ದಾಣದಿಂದ ಆಸ್ಪತ್ರೆಗೆ ಕರೆದೊಯ್ದ ವೈದ್ಯರು, ಗುಪ್ತಾ ಈಗಾಗಲೇ ಹೃದ್ರೋಗ, ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಿಂದ ಬಳಲುತ್ತಿದ್ದರು ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ರ್‍ಯಾಪಿಡ್ ರೋಡ್ ರಿಪೋರ್ಟ್ ವಿಚಾರದಲ್ಲಿ ಬಿಬಿಎಂಪಿ ಡಬಲ್ ಗೇಮ್!

    ಮೃತ ಗುಪ್ತಾ ನೋಯ್ಡಾ ನಿವಾಸಿ ಎಂದು ಏರೋಡ್ರೋಮ್ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್‌ ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಅವರ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಸದ್ದು ಮಾಡಲಿವೆ ಮೆಕ್ಯಾನಿಕಲ್ ಸ್ವೀಪರ್ ಮಷಿನ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬ್ಯಾಗ್‍ನಲ್ಲಿ ಬಾಂಬ್ ಇದೆ  ವಿಮಾನದಲ್ಲಿ ರಂಪಾಟ – ಬೆಚ್ಚಿಬಿದ್ದ ಸಹಪ್ರಯಾಣಿಕರು

    ಬ್ಯಾಗ್‍ನಲ್ಲಿ ಬಾಂಬ್ ಇದೆ ವಿಮಾನದಲ್ಲಿ ರಂಪಾಟ – ಬೆಚ್ಚಿಬಿದ್ದ ಸಹಪ್ರಯಾಣಿಕರು

    ಪಾಟ್ನಾ: ವಿಮಾನ ಹಾರಾಟ ನಡೆಸುತ್ತಿದ್ದ ವೇಳೆ ಕುಟುಂಬ ಸಮೇತ ಪ್ರಯಾಣಿಸುತ್ತಿದ್ದ ಪ್ರಯಾಣಿಕನೋರ್ವ ನನ್ನ ಬ್ಯಾಗ್‍ನಲ್ಲಿ ಬಾಂಬ್ ಇದೆ ಎಂದು ರಂಪಾಟ ಮಾಡಿರುವ ಘಟನೆ ಇಂಡಿಗೋ ವಿಮಾನದಲ್ಲಿ ನಡೆದಿದೆ.

    ದೆಹಲಿಗೆ ಹೋಗುತ್ತಿದ್ದ ಇಂಡಿಗೋ ವಿಮಾನ 6E- 2126 ಪ್ರಯಾಣಿಸುತ್ತಿದ್ದ ರಿಷಿ ಚಂದ್ ಸಿಂಗ್ ಬೇಡಿ ನನ್ನ ಬ್ಯಾಗ್‍ನಲ್ಲಿ ಬಾಂಬ್ ಇದೆ ಎಂದು ಸಹಪ್ರಯಾಣಿಕರಿಗೆ ಹೇಳಿದ್ದಾನೆ. ಇದರಿಂದ ಗಾಬರಿಗೊಂಡ ಸಿಬ್ಬಂದಿ ವಿಮಾನವನ್ನು ಪಾಟ್ನಾ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು. ಬಳಿಕ ಪ್ರಯಾಣಿಕನ ಬ್ಯಾಗ್ ಪರಿಶೀಲಿಸಿದಾಗ ಇದು ಹುಸಿ ಬಾಂಬ್ ಬೆದರಿಕೆ ಎಂದು ತಿಳಿದಿದೆ. ಇದನ್ನೂ ಓದಿ: ಅವಿವಾಹಿತೆಗೂ ಗರ್ಭಪಾತಕ್ಕೆ ಅವಕಾಶ: ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು

    ರಿಷಿ ಚಂದ್ ಸಿಂಗ್ ಬೇಡಿ ಹುಸಿ ಬಾಂಬ್ ಬೆದರಿಕೆ ಬಳಿಕ ಅತನೊಂದಿಗೆ ಪ್ರಯಾಣಿಸುತ್ತಿದ್ದ ಕುಟುಂಬಸ್ಥರು ಆತನಿಗೆ ಥಳಿಸಿದ್ದಾರೆ. ಬಳಿಕ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‍ಎಫ್) ರಿಷಿ ಚಂದ್ ಸಿಂಗ್ ಬೇಡಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈತ ಮಾನಸಿಕ ಅಸ್ವಸ್ಥ ಎಂದು ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಆಗಸ್ಟ್ 13 ರಿಂದ 15ರವರೆಗೆ ನಿಮ್ಮ ಮನೆಮುಂದೆ ತ್ರಿವರ್ಣ ಧ್ವಜವನ್ನು ಹಾರಿಸಿ: ಮೋದಿ ಕರೆ

    Live Tv
    [brid partner=56869869 player=32851 video=960834 autoplay=true]

  • ಹೈದರಾಬಾದ್‍ಗೆ ಬರುತ್ತಿದ್ದ ಇಂಡಿಗೋ ವಿಮಾನ ಕರಾಚಿಯಲ್ಲಿ ತುರ್ತು ಭೂಸ್ಪರ್ಶ

    ಹೈದರಾಬಾದ್‍ಗೆ ಬರುತ್ತಿದ್ದ ಇಂಡಿಗೋ ವಿಮಾನ ಕರಾಚಿಯಲ್ಲಿ ತುರ್ತು ಭೂಸ್ಪರ್ಶ

    ಇಸ್ಲಾಮಾಬಾದ್: ಶಾರ್ಜಾದಿಂದ ಹೈದರಾಬಾದ್‍ಗೆ ಬರುತ್ತಿದ್ದ ಇಂಡಿಗೋ ವಿಮಾನವು ತಾಂತ್ರಿಕ ದೋಷದಿಂದ ಇಂದು ಪಾಕಿಸ್ತಾನದ ಕರಾಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

    ಇಂಡಿಗೋ ವಿಮಾನವು ಶಾರ್ಜಾದಿಂದ ಹೊರಟಿತ್ತು. ಈ ವೇಳೆ ಪೈಲಟ್ ವಿಮಾನದಲ್ಲಿ ತಾಂತ್ರಿಕ ದೋಷ ಇರುವುದನ್ನು ಗಮನಿಸಿದರು. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ಕರಾಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದಾರೆ. ಈ ವೇಳೆ ಎಲ್ಲಾ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ. ಇದನ್ನೂ ಓದಿ: ಜಾರಿದ್ರಿಂದ ದುಡ್ಡು ಕೆಳಗೆ ಬಿತ್ತು- ಸಿದ್ದರಾಮಯ್ಯರ ಕ್ಷಮೆ ಕೋರಿದ ಮುಸ್ಲಿಂ ಮಹಿಳೆ

    ಕಳೆದ ಎರಡು ವಾರಗಳಲ್ಲಿ ಕರಾಚಿಯಲ್ಲಿ ತುರ್ತುಭೂಸ್ಪರ್ಶ ಮಾಡಿದ 2ನೇ ಭಾರತೀಯ ಸಂಸ್ಥೆ ಇದಾಗಿದೆ. ಈ ತಿಂಗಳ ಆರಂಭದಲ್ಲಿ ದೆಹಲಿಯಿಂದ ದುಬೈಗೆ ಹೋಗುತ್ತಿದ್ದ ಸ್ಪೈಸ್ ಜೆಟ್ ವಿಮಾನವು ತಾಂತ್ರಿಕ ಕಾರಣದಿಂದಾಗಿ ಪಾಕಿಸ್ತಾನದ ಕರಾಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು. 138 ಪ್ರಯಾಣಿಕರು ನಂತರ ಭಾರತದಿಂದ ಕಳುಹಿಸಲಾದ ಬದಲಿ ವಿಮಾನದಲ್ಲಿ ದುಬೈಗೆ ತೆರಳಿದರು.ಇದನ್ನೂ ಓದಿ:  ಬೆಂಗಳೂರಲ್ಲಿ ಉಚಿತ ಬೈಕ್ ಅಂಬುಲೆನ್ಸ್ – 5 ತಿಂಗಳಿನಿಂದ ವ್ಯಕ್ತಿಯಿಂದ ಫ್ರೀ ಸರ್ವೀಸ್

    Live Tv
    [brid partner=56869869 player=32851 video=960834 autoplay=true]

  • ಬೆಂಗಳೂರಿನಲ್ಲಿ ಎರಡು ವಿಮಾನಗಳ ನಡುವೆ ತಪ್ಪಿತು ಭಾರೀ ದುರಂತ

    ಬೆಂಗಳೂರಿನಲ್ಲಿ ಎರಡು ವಿಮಾನಗಳ ನಡುವೆ ತಪ್ಪಿತು ಭಾರೀ ದುರಂತ

    ಬೆಂಗಳೂರು: ನಗರದಲ್ಲಿ ಎರಡು ವಿಮಾನಗಳ ನಡುವೆ ಸಂಭವಿಸಲಿದ್ದ ಭಾರೀ ಅವಘಡವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ.

    ಜ.7ರಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮಾನಾಂತರ ರನ್‌ವೇಗಳಿಂದ ಒಂದೇ ದಿಕ್ಕಿನಲ್ಲಿ ವಿಮಾನಗಳು ಟೇಕ್ ಆಫ್ ಮಾಡಲು ಅನುವು ಮಾಡಲಾಗಿದೆ. ಇದರಿಂದ ಇಂಡಿಗೋ ಎರಡು ವಿಮಾನಗಳ ನಡುವೆ ಸಂಭವಿಸಬೇಕಿದ್ದ ಭಾರೀ ಅನಾಹುತವು ರೇಡಾರ್ ನೀಡಿದ ಎಚ್ಚರಿಕೆಯಿಂದ ತಪ್ಪಿದೆ. ಇದನ್ನೂ ಓದಿ: ಕೊರೊನಾ ಭೀತಿ – ಅಂತರಾಷ್ಟ್ರೀಯ ಪ್ರಯಾಣಿಕರ ವಿಮಾನ ಹಾರಾಟ ನಿರ್ಬಂಧ ಫೆ.28 ರವರೆಗೆ ವಿಸ್ತರಣೆ

    ಬೆಂಗಳೂರಿನಿಂದ ಕೋಲ್ಕತ್ತಾಗೆ ತೆರಳುತ್ತಿದ್ದ ಇಂಡಿಗೋ 6ಇ 455 ಮತ್ತು ಬೆಂಗಳೂರಿನಿಂದ ಭುವನೇಶ್ವರಕ್ಕೆ ತೆರಳುತ್ತಿದ್ದ 6ಇ 246 ಎಂಬ ಎರಡು ಇಂಡಿಗೋ ವಿಮಾನಗಳು ಭಾರೀ ದುರಂತದ ಅಂಚಿನಲ್ಲಿದ್ದವು.

    ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಉತ್ತರ ಮತ್ತು ದಕ್ಷಿಣ ರನ್‌ವೇಗಳಿವೆ. ರನ್‌ವೇಗಳಲ್ಲಿ ಒಂದೇ ಸಮಯದಲ್ಲಿ ಎರಡೂ ಕಡೆ ಟೇಕಾಫ್ ಮತ್ತು ಲ್ಯಾಂಡಿಂಗ್‌ಗೆ ಅನುಮತಿ ಇಲ್ಲ. ಎರಡು ರನ್‌ವೇಯಲ್ಲಿ ಸಮಾನಂತರವಾಗಿ ಲ್ಯಾಂಡಿಂಗ್‌, ಟೇಕಾಫ್ ಮಾಡುವುದಿದ್ದರೆ ಕೆಲ ಸಮಯದ ಅಂತರವನ್ನು ನೋಡಿ ಅನುಮತಿ ನೀಡಬೇಕಾಗುತ್ತದೆ. ಇದನ್ನೂ ಓದಿ: ರಸ್ತೆ ಅಪಘಾತ – ದಿವ್ಯಾ ಸುರೇಶ್‌ಗೆ ಗಾಯ

    ಅಂದು ಆಗಿದ್ದೇನು?
    ಜ.7 ರಂದು ಉತ್ತರ ರನ್‌ವೇ ಟೇಕಾಫ್, ದಕ್ಷಿಣ ರನ್‌ವೇ ಲ್ಯಾಂಡಿಂಗ್‌ಗೆ ಬಳಸಲಾಗುತ್ತಿತ್ತು. ಈ ಸಮಯದಲ್ಲಿ ಶಿಫ್ಟ್ ಇನ್‌ಚಾರ್ಜ್ ಉತ್ತರ ರನ್‌ವೇಯಲ್ಲಿ ಟೇಕಾಫ್ ಮತ್ತು ಲ್ಯಾಂಡಿಂಗ್‌ಗೆ ಅನುಮತಿ ನೀಡಿದ್ದರು. ಈ ವೇಳೆ ದಕ್ಷಿಣ ರನ್‌ವೇಯನ್ನು ಕಾರ್ಯಾಚರಣೆಗೆ ಬಂದ್ ಮಾಡಬೇಕಿತ್ತು. ಆದರೆ ಈ ವಿಚಾರವನ್ನು ದಕ್ಷಿಣ ರನ್‌ವೇ ನಿಯಂತ್ರಿಸುತ್ತಿದ್ದ ಟವರ್ ನಿಯಂತ್ರಕರಿಗೆ ತಿಳಿಸಿರಲಿಲ್ಲ.

    ಈ ವಿಚಾರ ತಿಳಿಸದೇ ಇದ್ದ ಕಾರಣ ಕೋಲ್ಕತ್ತಾಗೆ ತೆರಳಲು ಸಿದ್ಧವಾಗಿದ್ದ ವಿಮಾನದ ಹಾರಾಟಕ್ಕೆ ಟವರ್ ನಿಯಂತ್ರಕರು ಅನುಮತಿ ನೀಡಿದ್ದಾರೆ. ಈ ಸಮಯದಲ್ಲೇ ಉತ್ತರ ಟವರ್ ನಿಯಂತ್ರಕರು ಭುವನೇಶ್ವರಕ್ಕೆ ತೆರಳುತ್ತಿದ್ದ ವಿಮಾನದ ಟೇಕಾಫ್‌ಗೆ ಅನುಮತಿ ನೀಡಿದ್ದಾರೆ. ಇಬ್ಬರು ನಿಯಂತ್ರಕರ ಮಧ್ಯೆ ಸಮನ್ವಯದ ಕೊರತೆಯಿಂದ ಎರಡು ವಿಮಾನಗಳು ಒಂದೇ ಸಮಯಕ್ಕೆ ಟೇಕಾಫ್ ಆಗಿದೆ.

    ಎರಡು ವಿಮಾನಗಳು ಹತ್ತಿರದಲ್ಲೇ ಸಾಗುತ್ತಿದ್ದಂತೆ ಬೆಂಗಳೂರಿನಲ್ಲಿದ್ದ ರೇಡಾರ್ ಕಂಟ್ರೋಲರ್ ಆಕಾಶದ ಮಧ್ಯೆ ದುರಂತ ಸಂಭವಿಸುವ ಬಗ್ಗೆ ಪೈಲಟ್‌ಗಳಿಗೆ ಎಚ್ಚರಿಕೆ ಸಂದೇಶವನ್ನು ಕಳುಹಿಸಿದೆ. ಕೂಡಲೇ ಕೋಲ್ಕತ್ತಾಗೆ ತೆರಳುತ್ತಿದ್ದ ವಿಮಾನ ಎಡಕ್ಕೆ ತಿರುಗಿದರೆ ಭುವನೇಶ್ವರಕ್ಕೆ ತೆರಳುತ್ತಿದ್ದ ವಿಮಾನ ಬಲಕ್ಕೆ ತಿರುಗಿದೆ. ಇದನ್ನೂ ಓದಿ: ಹಿಮಪಾತದೊಳಗೆ ಸಿಲುಕಿದ್ದ 30 ಮಂದಿಯ ರಕ್ಷಣೆ

    ರೇಡಾರ್ ಅಲರ್ಟ್ ಸಂದೇಶ ಕಳುಹಿಸುವರೆಗೂ ಎರಡೂ ವಿಮಾನಗಳು ಸುಮಾರು 3,000 ಅಡಿ ತಲುಪುವವರೆಗೂ ಪರಸ್ಪರ ಹತ್ತಿರದಲ್ಲಿ ಹಾರಾಟ ನಡೆಸುತ್ತಿದ್ದವು. ಆದರೆ ಪೈಲಟ್‌ಗಳು ಅಪಾಯದ ಅರಿವಿಲ್ಲದೇ ಕಾರ್ಯನಿರ್ವಹಿಸುತ್ತಿದ್ದರು. ಅದೃಷ್ಟವಶಾತ್ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ರೆಡಾರ್ ನಿಯಂತ್ರಕವು ಸಮಯಕ್ಕೆ ಸರಿಯಾಗಿ ಗುರುತಿಸಿ ಪೈಲಟ್‌ಗಳಿಗೆ ಎಚ್ಚರಿಕೆ ನೀಡಿದೆ.

    ಈ ಗಂಭೀರ ಲೋಪದ ವಿಚಾರವನ್ನು ಸ್ಥಳೀಯ ಅಧಿಕಾರಿಗಳು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ)ಕ್ಕೆ ವರದಿ ಮಾಡದೇ, ತನಿಖೆ ಮತ್ತು ಶಿಕ್ಷೆಯನ್ನು ತಪ್ಪಿಸುವ ಉದ್ದೇಶದಿಂದ ಮುಚ್ಚಿಡಲು ಪ್ರಯತ್ನಿಸಿದ್ದರು.

    ಬೆಂಗಳೂರು-ಕೋಲ್ಕತ್ತಾ ವಿಮಾನವು 176 ಹಾಗೂ ಬೆಂಗಳೂರು-ಭುವನೇಶ್ವರ ವಿಮಾನವು 238 ಸೇರಿ ಒಟ್ಟು 426 ಪ್ರಯಾಣಿಕರನ್ನು ಒಯ್ಯುತ್ತಿದ್ದವು. ಸಂಭವನೀಯ ದುರಂತದ ಕುರಿತು ಪ್ರತಿಕ್ರಿಯಿಸಲು ಬೆಂಗಳೂರು ಎಟಿಸಿ ಅಧಿಕಾರಿಗಳು ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ವರದಿಯಾಗಿದೆ.

    ತನಿಖೆಗೆ ಆದೇಶ
    ಡಿಜಿಸಿಎ ಮುಖ್ಯಸ್ಥ ಅರುಣ್ ಕುಮಾರ್ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ಆದೇಶಿಸಿದ್ದಾರೆ. ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

  • ಇಂಡಿಗೋ ವಿಮಾನದಲ್ಲಿ ತುಳುವಿನಲ್ಲಿ ಪ್ರಕಟಣೆ – ಕರಾವಳಿಗರ ಮನಗೆದ್ದ ಪೈಲಟ್

    ಇಂಡಿಗೋ ವಿಮಾನದಲ್ಲಿ ತುಳುವಿನಲ್ಲಿ ಪ್ರಕಟಣೆ – ಕರಾವಳಿಗರ ಮನಗೆದ್ದ ಪೈಲಟ್

    ಮುಂಬೈ: ಕರಾವಳಿಯಲ್ಲಿ ಮನೆಮಾತಾಗಿರುವ ತುಳು ಭಾಷೆ ಪಂಚ ದ್ರಾವಿಡ ಭಾಷೆಗಳಲ್ಲಿ ಒಂದು. ಇದೀಗ ಈ ತುಳು ಭಾಷೆ ವಿಮಾನದಲ್ಲಿ ಮಾರ್ದನಿಸಿದೆ. ಅದೂ ಕೂಡ ವಿಮಾನದ ಪೈಲಟ್ ಬಾಯಲ್ಲಿ. ಇದೀಗ ಪೈಲಟ್‍ನ ತುಳು ಪ್ರಕಟಣೆಯ ವೀಡಿಯೋ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ವೈರಲ್ ಆಗುತ್ತಿದೆ.‌

    ದಕ್ಷಿಣ ಕನ್ನಡ, ಉಡುಪಿ ಭಾಗದಲ್ಲಿ ತುಳು ಭಾಷೆ ಮಾತನಾಡುವವರ ಸಂಖ್ಯೆ ಹೆಚ್ಚು. ಅವರು ಎಲ್ಲೇ ಹೋದರೂ ಕರಾವಳಿಗರು ಸಿಕ್ಕರೇ ತುಳುವಿನಲ್ಲಿ ಮಾತನಾಡಿ ತಮ್ಮ ಭಾಷಾಪ್ರೇಮವನ್ನು ಮೆರೆಯುತ್ತಾರೆ. ಇದೀಗ ವಿಮಾನದಲ್ಲೂ ಕೂಡ ಅಂತಹದ್ದೆ ಸನ್ನಿವೇಶ ನಡೆದಿದೆ. ಇದನ್ನೂ ಓದಿ: ಪಾಕಿಸ್ತಾನ ತಾಲಿಬಾನ್ ಮಧ್ಯೆ ಬೇಲಿಗಾಗಿ ಘರ್ಷಣೆ – ತಂತಿಯನ್ನೇ ಕದ್ದ ಉಗ್ರರು

    ಇಂಡಿಗೋ ವಿಮಾನ ಶುಕ್ರವಾರ ರಾತ್ರಿ ಎಂಟು ಗಂಟೆಗೆ ಮುಂಬೈನಿಂದ ಮಂಗಳೂರಿಗೆ ಹೊರಟಿತ್ತು. ಈ ವೇಳೆ ಪೈಲಟ್ ಇಂಗ್ಲಿಷ್ ಬದಲಿಗೆ ತುಳುವಿನಲ್ಲಿ ಅನೌನ್ಸ್‌ಮೆಂಟ್ ಕೊಟ್ಟಿದ್ದಾರೆ. ವಿಮಾನದಲ್ಲಿ ಇಂಗ್ಲಿಷ್, ಹಿಂದಿ ಅಥವಾ ಸ್ಥಳೀಯ ರಾಜ್ಯ ಭಾಷೆಯಲ್ಲಿ ಮಾತ್ರ ವಿಮಾನ ಹೊರಡುವಾಗ ಮತ್ತು ಇಳಿಯುವಾಗ ಪ್ರಯಾಣಿಕರಿಗೆ ಸೂಚನೆ ರವಾನಿಸುವ ಪದ್ಧತಿ ಇದೆ. ಈ ನಡುವೆ ಮುಂಬೈನಿಂದ ಮಂಗಳೂರಿಗೆ ಹೊರಟಿದ್ದ ವಿಮಾನದಲ್ಲಿ ಕರಾವಳಿ ಕರ್ನಾಟಕದ ಜನ ಹೆಚ್ಚಿರುವುದನ್ನು ಗಮನಿಸಿದ ಪೈಲಟ್ ‘ಮಾತೆರೆಗ್ಲಾ ಸೊಲ್ಮೆಲು'(ಎಲ್ಲರಿಗೂ ನಮಸ್ಕಾರ) ಎನ್ನುತ್ತಾ ತುಳುವಿನಲ್ಲಿ ಮಾತು ಆರಂಭಿಸಿ ಅಗತ್ಯ ಸೂಚನೆಯನ್ನು ನೀಡಿದ್ದಾರೆ. ಈ ವೀಡಿಯೋ ಇದೀಗ ಕರಾವಳಿಯಾದ್ಯಂತ ಗಮನಸೆಳೆಯುತ್ತಿದೆ.

    ವಿಮಾನದಲ್ಲಿ ತುಳುವಿನಲ್ಲಿ ಅನೌನ್ಸ್‌ಮೆಂಟ್ ಮಾಡಿದ ಪೈಲಟ್ ಪ್ರದೀಪ್ ಪದ್ಮಶಾಲಿ ಮೂಲತಃ ಉಡುಪಿಯವರು ಮುಂಬೈನಲ್ಲಿ ಪೈಲಟ್ ವೃತ್ತಿ ನಿರ್ವಹಿಸುತ್ತಿದ್ದಾರೆ. ಇಂಡಿಗೋ ವಿಮಾನ ಪ್ರತಿದಿನ ಮುಂಬೈನಿಂದ ರಾತ್ರಿ 8 ಗಂಟೆಗೆ ಹೊರಡಿ ಮಂಗಳೂರಿಗೆ 9:30ಕ್ಕೆ ಮಂಗಳೂರಿಗೆ ತಲುಪುತ್ತದೆ. ಈ ವಿಮಾನ ಶುಕ್ರವಾರ ಹೊರಡುತ್ತಿದ್ದಂತೆ ಪ್ರದೀಪ್ ತಮ್ಮ ತುಳು ಭಾಷಾ ಪ್ರೇಮ ಮೆರೆದು ತುಳುವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದನ್ನೂ ಓದಿ: ಯೋಗಿ ಆದಿತ್ಯನಾಥ್‌ ಸರ್ಕಾರ ಜಾಹೀರಾತಿಗೆ ವಾರ್ಷಿಕ 2,000 ಕೋಟಿ ಖರ್ಚು ಮಾಡ್ತಿದೆ: ಎಎಪಿ

    ತುಳು ಭಾಷೆ ಕರಾವಳಿ ಭಾಗದಲ್ಲಿ ಹೆಚ್ಚು ಮಾತನಾಡುತ್ತಿರುವುದರಿಂದಾಗಿ ತುಳು ಭಾಷೆಗೆ ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡಬೇಕೆಂಬ ಆಗ್ರಹ ಕೂಡ ನಿರಂತರವಾಗಿ ನಡೆಯುತ್ತಿದ್ದು, ಸರ್ಕಾರದ ಮುಂದೆ ಪ್ರತಿ ಬಾರಿ ಈ ಬಗ್ಗೆ ಪ್ರಸ್ತಾಪಗಳು ಕೇಳಿ ಬರುತ್ತಿದೆ.

  • ಇಂಡಿಗೋ ವಿಮಾನದಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ

    ಇಂಡಿಗೋ ವಿಮಾನದಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ

    ನವದೆಹಲಿ: ಬೆಂಗಳೂರು ನಗರದಿಂದ ಜೈಪುರಕ್ಕೆ ಹಾರಾಟ ಮಾಡುತ್ತಿದ್ದ ಇಂಡಿಗೋ ವಿಮಾನದಲ್ಲಿ ಮಹಿಳೆ ಸುರಕ್ಷಿತವಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

    ಬೆಂಗಳೂರಿನಿಂದ ಜೈಪುರಕ್ಕೆ ಸಂಚರಿಸುತ್ತಿದ್ದ ವೇಳೆ ಮಹಿಳೆಗೆ ವಿಮಾನದಲ್ಲಿ ಹೆರಿಗೆನೋವು ಕಾಣಿಸಿಕೊಂಡಿದೆ ಕೂಡಲೇ ವಿಮಾನದಲ್ಲಿದ್ದ ವಿಮಾನದ ಸಿಬ್ಬಂದಿ ಮತ್ತು ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೈದ್ಯೆ ಸುಬಾಹಾನ ನಜೀರ್ ಅವರ ನೆರವಿನಿಂದ ಮಹಿಳೆ ಹೆಣ್ಣು ಮಗುವಿಗೆ ಸುರಕ್ಷಿತವಾಗಿ ಜನ್ಮ ನೀಡಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿದ ಇಂಡಿಗೋ ವಿಮಾನಯಾನ ಸಂಸ್ಥೆ, 6ಇ 469 ಹೆಸರಿನ ವಿಮಾನ ಬೆಂಗಳೂರಿನಿಂದ ಜೈಪುರಕ್ಕೆ ತೆರಳುತ್ತಿದ್ದಾಗ ಹೆಣ್ಣುಮಗುವಿನ ಜನನವಾಗಿದೆ. ಮಗುವಿನ ಜನನದ ವೇಳೆ ವಿಮಾನದ ಸಿಬ್ಬಂದಿ ಮತ್ತು ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೈದ್ಯೆ ಸುಬಾಹಾನ ನಜೀರ್ ಅವರು ಸಹಕರಿಸಿದ್ದಾರೆ ಎಂದು ತಿಳಿಸಿದೆ.

    ವಿಮಾನದ ಸಿಬ್ಬಂದಿ ಜೈಪುರದ ವಿಮಾನ ನಿಲ್ದಾಣಕ್ಕೆ ಮಾಹಿತಿ ನೀಡಿ ಜೈಪುರಕ್ಕೆ ತಲುಪುತಿದ್ದಂತೆ ಕೂಡಲೇ ಅಂಬುಲೆನ್ಸ್ ಮತ್ತು ವೈದ್ಯರನ್ನು ವಿಮಾನ ನಿಲ್ದಾಣಕ್ಕೆ ಕರೆಸಿಕೊಂಡಿದ್ದು, ವಿಮಾನದಲ್ಲಿ ಜನನವಾದ ಮಗು ಹಾಗೂ ತಾಯಿ ಇಬ್ಬರೂ ಕೂಡ ಕ್ಷೇಮವಾಗಿದ್ದರೆಂದು ವರದಿಯಾಗಿದೆ.

  • ಬೆಂಗಳೂರಿಗೆ ಬರುವಾಗ ದಾರಿ ಮಧ್ಯೆ ವಿಮಾನದಲ್ಲಿ ಯಶಸ್ವಿ ಹೆರಿಗೆ

    ಬೆಂಗಳೂರಿಗೆ ಬರುವಾಗ ದಾರಿ ಮಧ್ಯೆ ವಿಮಾನದಲ್ಲಿ ಯಶಸ್ವಿ ಹೆರಿಗೆ

    ಬೆಂಗಳೂರು: ದೆಹಲಿಯಿಂದ ಬೆಂಗಳೂರಿಗೆ ಬರುತ್ತಿದ್ದ ಗರ್ಭಿಣಿಯೊಬ್ಬರು ವಿಮಾನದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

    ಇಂದು ಸಂಜೆ ದೆಹಲಿಯಿಂದ ಬೆಂಗಳೂರಿಗೆ ಹೊರಟ್ಟಿದ್ದ ಇಂಡಿಗೋ ವಿಮಾನದಲ್ಲಿ ಗರ್ಭಿಣಿ ಹತ್ತಿದ್ದರು. ದಾರಿ ಮಧ್ಯೆ ಅವರಿಗೆ ಹೆರಿಗೆ ನೋವಾಗಿದೆ.

    ಈ ವೇಳೆ ವಿಮಾನದಲ್ಲಿ ಪ್ರಸೂತಿ ತಜ್ಞೆ ಬೆಂಗಳೂರಿನ ಕ್ಲೌಡ್‌ ನೈನ್‌ ಆಸ್ಪತ್ರೆಯ ಡಾ. ಶೈಲಜಾ ವಲ್ಲಭನಿ ಪ್ರಯಾಣಿಸುತ್ತಿದ್ದರು. ಹೆರಿಗೆ ನೋವಾಗುತ್ತಿದ್ದಂತೆ ಇಂಡಿಗೋ ಸಿಬ್ಬಂದಿ ಸಹಕಾರದಿಂದ ಡಾ. ಶೈಲಜಾ ಅವರು ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದಾರೆ.

    ವಿಮಾನ ಬೆಂಗಳೂರಿನಲ್ಲಿ ಲ್ಯಾಂಡ್‌ ಆಗುತ್ತಿದ್ದಂತೆ ಅಂಬುಲೆನ್ಸ್‌ ಸಿದ್ಧವಾಗಿ ನಿಂತಿತ್ತು. ಅಂಬುಲೆನ್ಸ್‌ ಮೂಲಕ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತು.

    ಸಾಮಾಜಿಕ ಜಾಲತಾಣದಲ್ಲಿ ಈಗ ಪ್ರಯಾಣಿಕರು ಈ ವಿಚಾರವನ್ನು ಹಂಚಿಕೊಂಡು ವೈದ್ಯರಿಗೆ ಮತ್ತು ಇಂಡಿಗೋ ಸಿಬ್ಬಂದಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.