ಲಕ್ನೋ: ಇಂಧನ ಸೋರಿಕೆಯಿಂದಾಗಿ ಶ್ರೀನಗರಕ್ಕೆ ಹೊರಟಿದ್ದ ಇಂಡಿಗೋ ವಿಮಾನವನ್ನ (IndiGo Flight) ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Lal Bahadur Shastri International Airport) ತುರ್ತು ಭೂಸ್ಪರ್ಶ ಮಾಡಿರುವುದಾಗಿ ವರದಿಯಾಗಿದೆ.
ಸಾಂದರ್ಭಿಕ ಚಿತ್ರ
ಕೋಲ್ಕತ್ತಾದಿಂದ ಶ್ರೀನಗರಕ್ಕೆ ಹೊರಟಿದ್ದ ವಿಮಾನದಲ್ಲಿ ಇಂಧನ ಸೋರಿಕೆಯಾಗುತ್ತಿರುವುದು (Fuel Leak) ಕಂಡುಬಂದಿದೆ. ಕೂಡಲೇ ಎಚ್ಚೆತ್ತ ಪೈಲಟ್ ವಿಮಾನವನ್ನ ತುರ್ತು ಭೂಸ್ಪರ್ಶ ಮಾಡಿಸಿದ್ದಾರೆ. ಎಲ್ಲಾ 166 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ವಾರಣಾಸಿ ಪೊಲೀಸರು ತಿಳಿಸಿದ್ದಾರೆ.
ಇನ್ನೂ ವಿಮಾನ ನಿಲ್ದಾಣದ ಅಧಿಕಾರಿಗಳು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿರುವುದಾಗಿ ತಿಳಿಸಿದ್ದಾರೆ. ಉಳಿದ ವಿಮಾನಗಳ ಕಾರ್ಯಾಚರಣೆಯಲ್ಲಿ ಯಾವುದೇ ವ್ಯತ್ಯಯ ಕಂಡುಬಂದಿಲ್ಲವೆಂದು ಹೇಳಿದ್ದಾರೆ.
ಹೈದರಾಬಾದ್: ತಿರುಪತಿಯಿಂದ ಹೈದರಾಬಾದ್‌ಗೆ (Tirupati-Hyderabad) ಹೋಗುತ್ತಿದ್ದ ಇಂಡಿಗೋ ವಿಮಾನ (IndiGo Flight) ತಾಂತ್ರಿಕ ದೋಷದಿಂದ ಸುಮಾರು 40 ನಿಮಿಷಗಳ ಕಾಲ ಆಕಾಶದಲ್ಲೇ ಸುತ್ತಾಡಿದೆ.
ಇದರಿಂದಾಗಿ ಹೈದರಾಬಾದ್‌ಗೆ ನಿಗದಿಪಡಿಸಲಾದ ಕೊನೆಯ ವಿಮಾನವನ್ನು ರದ್ದುಗೊಳಿಸಲಾಯಿತು. ವಿಮಾನ ರದ್ದಾದ ವಿಚಾರಕ್ಕೆ ಪ್ರಯಾಣಿಕರು, ಸಿಬ್ಬಂದಿ ಜೊತೆ ವಾಗ್ವಾದ ನಡೆಸಿದ್ದಾರೆ. ಸಿಬ್ಬಂದಿ ಹಾಗೂ ಪ್ರಯಾಣಿಕರ ನಡುವಿನ ವಾಗ್ವಾದದ ವಿಡಿಯೋ ವೈರಲ್ ಆಗಿದೆ.
ನವದೆಹಲಿ: 168 ಪ್ರಯಾಣಿಕರನ್ನು ಹೊತ್ತು ಸಾಗಿದ್ದ ಇಂಡಿಗೋ (IndiGo Flight) ವಿಮಾನ ಹಾರಾಟದ ಸಮಯದಲ್ಲೇ ‘ಮೇಡೇ’ ಘೋಷಿಸಿದೆ. ಅದೃಷ್ಟವಶಾತ್ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.
168 ಪ್ರಯಾಣಿಕರಿದ್ದ ಇಂಡಿಗೋದ ಗುವಾಹಟಿ-ಚೆನ್ನೈ ವಿಮಾನವು ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಅಹಮದಾಬಾದ್‌ನಲ್ಲಿ ಟೇಕಾಫ್ ಆದ ಸ್ವಲ್ಪ ಸಮಯದಲ್ಲೇ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿತ್ತು. ಪೈಲಟ್‌ಗಳು ‘ಮೇಡೇ’ ಘೋಷಿಸಿದ ಕೆಲ ಹೊತ್ತಲ್ಲೇ ಈ ದುರಂತ ಸಂಭವಿಸಿತ್ತು. ಇದನ್ನೂ ಓದಿ: ʻಮೇ ಡೇʼ – ವಿಮಾನ ಪತನಕ್ಕೂ ಮುನ್ನ ಎಟಿಸಿಗೆ ಪೈಲಟ್ ಕೊಟ್ಟ ಕೊನೆಯ ಸಂದೇಶ
ಗುರುವಾರ ಈ ಘಟನೆ ನಡೆದಿದೆ. ಇಂಧನವು ತೀರಾ ಕಡಿಮೆ ಇದ್ದ ಇಂಡಿಗೋ ವಿಮಾನವು ಬೆಂಗಳೂರಿನಲ್ಲಿ ಸುರಕ್ಷಿತವಾಗಿ ಇಳಿಯಿತು. ವಿಪತ್ತಿನ ಕರೆ ಬಂದ ನಂತರ, ಎಟಿಸಿ (ವಾಯು ಸಂಚಾರ ನಿಯಂತ್ರಣ) ಸಿಬ್ಬಂದಿಗೆ ಮಾಹಿತಿ ನೀಡಿತು. ಅವರು ಕಾರ್ಯಪ್ರವೃತ್ತರಾದರು. ವೈದ್ಯಕೀಯ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳದಲ್ಲಿದ್ದರು. ವಿಮಾನವು ರಾತ್ರಿ 8:20 ಕ್ಕೆ ಸುರಕ್ಷಿತವಾಗಿ ಇಳಿಯಿತು ಎಂದು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ. ಇದನ್ನೂ ಓದಿ: Mayday ಅಂದ್ರೆ ವಿಮಾನ ತುಂಬಾ ಡೆಂಜರ್‌ನಲ್ಲಿದ್ದಂತೆ – ದುರಂತದ ಬಗ್ಗೆ ಯುವ ಮಹಿಳಾ ಪೈಲಟ್ ಹೇಳಿದ್ದೇನು?
ಮಧುರೈಗೆ ಹೋಗುತ್ತಿದ್ದ ಇಂಡಿಗೋ ವಿಮಾನವು ಆಕಾಶದಲ್ಲೇ ತಾಂತ್ರಿಕ ದೋಷವನ್ನು ಅನುಭವಿಸಿತು. ಸುಮಾರು 168 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನವು ಸುರಕ್ಷಿತವಾಗಿ ಇಳಿಯಿತು. ಎಲ್ಲಾ ಪ್ರಯಾಣಿಕರನ್ನು ಸೂಕ್ತ ಸುರಕ್ಷತಾ ಕ್ರಮಗಳೊಂದಿಗೆ ಕೆಳಗಿಳಿಸಲಾಯಿತು.
ನವದೆಹಲಿ: ಲಡಾಕ್‌ನ ಲೇಹ್‌ಗೆ (Leh) ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ (IndiGo Flight) ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ದೆಹಲಿಗೆ (Delhi) ವಾಪಸ್ ಆಗಿದೆ.
ಇಂಡಿಗೋ ವಿಮಾನ ಇಂದು (ಜೂ.19) ಬೆಳಿಗ್ಗೆ ದೆಹಲಿಯಿಂದ ಲೇಹ್‌ಗೆ ತೆರಳುತ್ತಿತ್ತು. ಸುಮಾರು 2 ಗಂಟೆಗಳಿಗೂ ಹೆಚ್ಚು ಕಾಲ ವಿಮಾನ ಹಾರಾಟ ನಡೆಸಿತ್ತು. ಇನ್ನೇನೂ ಲೇಹ್ ಸಮೀಪ ಇರುವಾಗ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ (Emergency Landing) ಮಾಡಲಾಗಿದೆ. ಇದನ್ನೂ ಓದಿ: ಜ್ವಾಲಾಮುಖಿ ಸ್ಫೋಟ – ದೆಹಲಿಯಿಂದ ಬಾಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ವಾಪಸ್
ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಅದರಲ್ಲಿ 180 ಜನ ಇದ್ದರು ಎಂದು ವರದಿಯಾಗಿದೆ.
ನವದೆಹಲಿ: ದೆಹಲಿ (Delhi) ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆ (Rain) ಮತ್ತು ಬಿರುಗಾಳಿ ಬೀಸಿದ್ದರಿಂದ ಇಂಡಿಗೋ ವಿಮಾನ (IndiGo Flight) ತೀವ್ರ ಪ್ರಕ್ಷುಬ್ಧತೆ ಅನುಭವಿಸಿದ ಘಟನೆ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ರಾಯ್‌ಪುರ್‌ನಿಂದ ಬಂದ 6E 6313 ವಿಮಾನವು ದೆಹಲಿಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಬೇಕಿತ್ತು. ಈ ವೇಳೆ ಗಾಳಿ 80 ಕಿ.ಮೀ ವೇಗದಲ್ಲಿ ಬೀಸಿದೆ. ಇದರಿಂದ ಪ್ರಕ್ಷುಬ್ಧತೆ ಉಂಟಾಗಿದೆ. ತಕ್ಷಣ ಎಚ್ಚೆತ್ತ ಪೈಲಟ್, ವಿಮಾನವನ್ನು ಲ್ಯಾಂಡ್ ಮಾಡದೇ, ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಬಳಿಕ 38 ನಿಮಿಷಗಳ ಕಾಲ ಆಕಾಶದಲ್ಲೇ ಗಿರಕಿ ಹೊಡೆಸಿ, ವಾತಾವರಣ ತಿಳಿಯಾದ ಬಳಿಕ ಲ್ಯಾಂಡ್ ಮಾಡಿದ್ದಾರೆ. ವಿಮಾನವು ಸಂಜೆ 5:05ಕ್ಕೆ ಲ್ಯಾಂಡ್ ಆಗಬೇಕಿತ್ತು. ಆದರೆ ಸಂಜೆ 5:43 ಕ್ಕೆ ಲ್ಯಾಂಡ್ ಆಯಿತು.
#WATCH | An IndiGo flight number 6E 6313 from Raipur to Delhi experienced turbulence due to a duststorm, prompting the pilot to climb up again when the aircraft was about to touch down at Delhi airport. The aircraft landed safely at Delhi airport after making many circuits in the… pic.twitter.com/TtDUwIH79b
ಗಾಳಿಗೆ ಸಿಕ್ಕ ವಿಮಾನ ತೀವ್ರವಾಗಿ ಅಲುಗಾಡುತ್ತಿದ್ದಂತೆ ಪ್ರಯಾಣಿಕರು ಕಿರುಚಾಡಿದ್ದಾರೆ. ಈ ವೀಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದೆಹಲಿ ಹವಾಮಾನ ಹಠಾತ್ ಬದಲು!
ಇಂದು ಮುಂಜಾನೆ, ದೆಹಲಿ-ಎನ್‌ಸಿಆರ್‌ನಲ್ಲಿ ಬಲವಾದ ಗಾಳಿ ಇತ್ತು, ಮಧ್ಯಾಹ್ನ ಬಿಸಿಲಿನ ವಾತಾವರಣ ಇತ್ತು. ಸಂಜೆಯ ವೇಳೆಗೆ ಮಳೆ ಹಾಗೂ ಬಿರುಗಾಳಿ ಬೀಸಿದೆ ಎಂದು ವರದಿಯಾಗಿದೆ.
ಮಳೆಯಿಂದಾಗಿ ತಾಪಮಾನದಲ್ಲಿ ಗಣನೀಯ ಇಳಿಕೆ ಕಂಡುಬಂದಿದ್ದು, ದೆಹಲಿಯ ವಿವಿಧ ಭಾಗಗಳಲ್ಲಿ ತಾಪಮಾನವು 14 ಡಿಗ್ರಿ ಸೆಲ್ಸಿಯಸ್ ವರೆಗೆ ಇಳಿಕೆಯಾಗಿದೆ.
– 227 ಮಂದಿ ಹೊತ್ತು 36,000 ಅಡಿ ಎತ್ತರದಲ್ಲಿ ಹಾರಾಡುತ್ತಿದ್ದ ವಿಮಾನ
ನವದೆಹಲಿ: ದೆಹಲಿಯಿಂದ ಶ್ರೀನಗರಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ (IndiGo Flight) ಪ್ರಕ್ಷುಬ್ಧತೆ ತಪ್ಪಿಸಲು ಪಾಕ್ ವಾಯುಸೀಮೆ ಬಳಸಲು ನಿರಾಕರಿಸಿದ ಬಳಿಕ ನಿಮಿಷಕ್ಕೆ 8,500 ಅಡಿಯಂತೆ ಇಳಿಸಿ ವಿಮಾನವನ್ನು ಸುರಕ್ಷಿತವಾಗಿ ಶ್ರೀನಗರದಲ್ಲಿ ಲ್ಯಾಂಡಿಗ್ ಮಾಡಲಾಗಿತ್ತು ಎಂದು ವರದಿಗಳು ತಿಳಿಸಿವೆ.
ಇತ್ತೀಚಿನ ವರದಿಗಳ ಪ್ರಕಾರ ಅತಿಯಾದ ಬಿರುಗಾಳಿಗೆ ಸಿಲುಕಿ ಇಂಡಿಗೋ ವಿಮಾನ ಪಕ್ಷುಬ್ಧತೆ ಎದುರಿಸಿತ್ತು. ಇದರೊಂದಿಗೆ ಆಲಿಕಲ್ಲು ಮಳೆಗೆ ಸಿಲುಕಿದ ಪರಿಣಾಮ ಸಮಸ್ಯೆ ಎದುರಾಗಿತ್ತು. ಹೀಗಾಗಿ 6E-2142 ಇಂಡಿಗೋ ವಿಮಾನವು ನಿಮಿಷಕ್ಕೆ 8,500 ಅಡಿಯಂತೆ ಇಳಿಯಿತು. ಸಾಮಾನ್ಯವಾಗಿ ವಿಮಾನವನ್ನು ನಿಮಿಷಕ್ಕೆ 1,500 ರಿಂದ 3,000 ಅಡಿಯಂತೆ ಇಳಿಸಿ ಲ್ಯಾಂಡಿಂಗ್ ಮಾಡಲಾಗುತ್ತದೆ. ಆದ್ರೆ ಅಂದು ನಿಮಿಷಕ್ಕೆ 8,500 ಅಡಿಯಂತೆ ಇಳಿಸಲಾಗಿತ್ತು ಎನ್ನಲಾಗಿದೆ. ಇದನ್ನೂ ಓದಿ: ಡೇಂಜರ್‌ನಲ್ಲಿದ್ದರೂ ದೆಹಲಿ-ಶ್ರೀನಗರ ಇಂಡಿಗೋ ವಿಮಾನಕ್ಕೆ ತನ್ನ ವಾಯುಸೀಮೆ ಬಳಸಲು ನಿರಾಕರಿಸಿದ ಪಾಕ್
ಡಿಜಿಸಿಎಯ ಪ್ರಾಥಮಿಕ ವರದಿಯ ಪ್ರಕಾರ, ಸಂಸತ್ ಸದಸ್ಯರು ಸೇರಿದಂತೆ 227ಕ್ಕೂ ಜನರನ್ನು ಹೊತ್ತ ವಿಮಾನವು 36,000 ಅಡಿಗಳಷ್ಟು ಎತ್ತರದಲ್ಲಿ ಹಾರಾಟ ನಡೆಸುತ್ತಿತ್ತು. ಭಾರತ-ಪಾಕಿಸ್ತಾನ ಗಡಿಯ ಸಮೀಪವಿರುವ ಪಠಾಣ್‌ಕೋಟ್ ಬಳಿ ಪ್ರತಿಕೂಲ ಹವಾಮಾನಕ್ಕೆ ಸಿಲುಕಿ ಪ್ರಕ್ಷುಬ್ಧತೆ ಎದುರಿಸಿತ್ತು ಎಂದು ವಿವರಿಸಿದೆ. ಇದನ್ನೂ ಓದಿ: ಮೋದಿಜೀ ಪೊಳ್ಳು ಭಾಷಣ ನಿಲ್ಲಿಸಿ… ಕ್ಯಾಮೆರಾಗಳ ಮುಂದೆ ಮಾತ್ರ ನಿಮ್ಮ ರಕ್ತ ಏಕೆ ಕುದಿಯುತ್ತೆ? – ರಾಗಾ
ಮನವಿ ನಿರಾಕರಿಸಿದ್ದ ಪಾಕ್:
ಇಂಡಿಗೋ ವಿಮಾನವು ಪ್ರಕ್ಷುಬ್ಧತೆಯನ್ನು ತಪ್ಪಿಸಲು ಸ್ವಲ್ಪ ಸಮಯದವರೆಗೆ ಪಾಕಿಸ್ತಾನದ ವಾಯುಸೀಮೆ ಬಳಸಲು ಅನುಮತಿ ಕೋರಿತ್ತು. ಅಮೃತಸರದ ಬಳಿಕ ನಡೆಸುತ್ತಿರುವಾಗ ಅಸ್ಥಿರ ಹವಾಮಾನವನ್ನು ಗಮನಿಸಿದ ಪೈಲಟ್, ಸುರಕ್ಷತಾ ಕಾರಣಗಳಿಗಾಗಿ ತನ್ನ ವಾಯುಸೀಮೆ ಮೂಲಕ ಹಾರಾಟ ನಟಡೆಸಲು ಪಾಕಿಸ್ತಾನಿ ವಾಯು ಸಂಚಾರ ನಿಯಂತ್ರಣ ಸಂಪರ್ಕಿಸಿದರು. ಆದಾಗ್ಯೂ, ವಿನಂತಿಯನ್ನು ಪಾಕ್ ನಿರಾಕರಿಸಿತು. ಆದಾಗ್ಯೂ ವಿಮಾನವು ತನ್ನ ನಿಗದಿತ ಮಾರ್ಗದಲ್ಲಿ ತಲುಪಿ ಶ್ರೀನಗರದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಯಿತು.
6ಇ2142 ವಿಮಾನವು ಐದು ಸದಸ್ಯರ ತೃಣಮೂಲ ಕಾಂಗ್ರೆಸ್ (TMC) ನಿಯೋಗ ಸೇರಿದಂತೆ 227 ಮಂದಿಯನ್ನ ಹೊತ್ತೊಯ್ಯುತ್ತಿತ್ತು. ದೆಹಲಿಯಿಂದ ಹೊರಟು ಶ್ರೀನಗರ ಸಮೀಪಿಸುತ್ತಿದ್ದಾಗ ಆಲಿಕಲ್ಲು ಮಳೆಯಿಂದ ತೀವ್ರ ಹಾನಿಗೆ ಒಳಗಾಯಿತು. ಆಲಿಕಲ್ಲು ಹೊಡೆತಕ್ಕೆ ವಿಮಾನದ ಮುಂಭಾಗ ಡ್ಯಾಮೇಜ್ ಆಯಿತು. ಆದರೆ ಸಿಬ್ಬಂದಿ ಸಂಜೆ 6:30 ಕ್ಕೆ ಶ್ರೀನಗರ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಇಳಿಸುವಲ್ಲಿ ಯಶಸ್ವಿಯಾದರು. ವಿಮಾನ ಇಳಿದ ನಂತರ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು.
ವಿಮಾನದಲ್ಲಿದ್ದ ಎಲ್ಲ 227 ಮಂದಿಯೂ ಸೇಫ್ ಆಗಿದ್ದಾರೆ. ಪೈಲಟ್‌ಗಳ ಚಾಕಚಕ್ಯತೆಯಿಂದ ಎಲ್ಲ ಪ್ರಯಾಣಿಕರು ಸೇಫ್ ಆಗಿ ಬದುಕುಳಿದಿದ್ದಾರೆ. ವಿಮಾನದ ಮುಂಭಾಗ ಭಾರೀ ಪ್ರಮಾಣದಲ್ಲಿ ಹಾನಿಗೀಡಾಗಿದ್ದು, ಈ ಹಾನಿಯನ್ನು ನೋಡಿದವರು ಪ್ರಯಾಣಿಕರು ಪವಾಡಸದೃಶರಾಗಿ ಬದುಕುಳಿದಿದ್ದಾರೆ ಎನ್ನುವಷ್ಟು ಗಂಭೀರ ಪ್ರಮಾಣದಲ್ಲಿ ವಿಮಾನ ಹಾನಿಗೊಳಗಾಗಿದೆ.
ನವದೆಹಲಿ: ದೆಹಲಿಯಿಂದ ಶ್ರೀನಗರಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನವು ಗಾಳಿಯಲ್ಲಿ ತೀವ್ರ ಹವಾಮಾನ ಪ್ರಕ್ಷುಬ್ಧತೆ ಅನುಭವಿಸಿತು. ಈ ಸಂದರ್ಭದಲ್ಲಿ ಪ್ರಕ್ಷುಬ್ಧತೆ ತಪ್ಪಿಸಲು ಪಾಕ್ ವಾಯುಸೀಮೆ ಬಳಸಲು ಇಂಡಿಗೋ ಮಾಡಿದ್ದ ಮನವಿಯನ್ನು ಪಾಕಿಸ್ತಾನ ನಿರಾಕರಿಸಿದೆ ಎಂದು ವರದಿಗಳು ತಿಳಿಸಿವೆ.
ಅಮೃತಸರದ ಬಳಿಕ ನಡೆಸುತ್ತಿರುವಾಗ ಅಸ್ಥಿರ ಹವಾಮಾನವನ್ನು ಗಮನಿಸಿದ ಪೈಲಟ್, ಸುರಕ್ಷತಾ ಕಾರಣಗಳಿಗಾಗಿ ತನ್ನ ವಾಯುಸೀಮೆ ಮೂಲಕ ಹಾರಾಟ ನಟಡೆಸಲು ಪಾಕಿಸ್ತಾನಿ ವಾಯು ಸಂಚಾರ ನಿಯಂತ್ರಣ ಸಂಪರ್ಕಿಸಿದರು. ಆದಾಗ್ಯೂ, ವಿನಂತಿಯನ್ನು ಪಾಕ್ ನಿರಾಕರಿಸಿತು. ಆದಾಗ್ಯೂ ವಿಮಾನವು ತನ್ನ ನಿಗದಿತ ಮಾರ್ಗದಲ್ಲಿ ತಲುಪಿ ಶ್ರೀನಗರದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಯಿತು. ಇದನ್ನೂ ಓದಿ: ಜ್ಯೋತಿಗೆ ಒಡಿಶಾ ಲಿಂಕ್ – ‘ಪಾಕ್‌ನಲ್ಲಿ ಒಡಿಶಾ ಹುಡುಗಿ’ ವೀಡಿಯೋ ಮಾಡಿದ್ದ ಯೂಟ್ಯೂಬರ್ ವಿಚಾರಣೆ
6E2142 ವಿಮಾನವು ಐದು ಸದಸ್ಯರ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಿಯೋಗ ಸೇರಿದಂತೆ 227 ಮಂದಿಯನ್ನ ಹೊತ್ತೊಯ್ಯುತ್ತಿತ್ತು. ದೆಹಲಿಯಿಂದ ಹೊರಟು ಶ್ರೀನಗರ ಸಮೀಪಿಸುತ್ತಿದ್ದಾಗ ಆಲಿಕಲ್ಲು ಮಳೆಯಿಂದ ತೀವ್ರ ಹಾನಿಗೆ ಒಳಗಾಯಿತು. ಆಲಿಕಲ್ಲು ಹೊಡೆತಕ್ಕೆ ವಿಮಾನದ ಮುಂಭಾಗ ಡ್ಯಾಮೇಜ್ ಆಯಿತು. ಆದರೆ ಸಿಬ್ಬಂದಿ ಸಂಜೆ 6:30 ಕ್ಕೆ ಶ್ರೀನಗರ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಇಳಿಸುವಲ್ಲಿ ಯಶಸ್ವಿಯಾದರು. ವಿಮಾನ ಇಳಿದ ನಂತರ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು.
ವಿಮಾನದಲ್ಲಿದ್ದ ಎಲ್ಲ 227 ಮಂದಿಯೂ ಸೇಫ್ ಆಗಿದ್ದಾರೆ. ಪೈಲಟ್‌ಗಳ ಚಾಕಚಕ್ಯತೆಯಿಂದ ಎಲ್ಲ ಪ್ರಯಾಣಿಕರು ಸೇಫ್ ಆಗಿ ಬದುಕುಳಿದಿದ್ದಾರೆ. ವಿಮಾನದ ಮುಂಭಾಗ (Nose damage) ಭಾರೀ ಪ್ರಮಾಣದಲ್ಲಿ ಹಾನಿಗೀಡಾಗಿದ್ದು, ಈ ಹಾನಿಯನ್ನು ನೋಡಿದವರು ಪ್ರಯಾಣಿಕರು ಪವಾಡಸದೃಶರಾಗಿ ಬದುಕುಳಿದಿದ್ದಾರೆ ಎನ್ನುವಷ್ಟು ಗಂಭೀರ ಪ್ರಮಾಣದಲ್ಲಿ ವಿಮಾನ ಹಾನಿಗೊಳಗಾಗಿದೆ. ಇದನ್ನೂ ಓದಿ: ಮೋದಿಜೀ ಪೊಳ್ಳು ಭಾಷಣ ನಿಲ್ಲಿಸಿ… ಕ್ಯಾಮೆರಾಗಳ ಮುಂದೆ ಮಾತ್ರ ನಿಮ್ಮ ರಕ್ತ ಏಕೆ ಕುದಿಯುತ್ತೆ? – ರಾಗಾ
- ಅಪಾಯದ ಅಂಚಿನಿಂದ ಪಾರಾದ ವಿಮಾನ – ಭಯಭೀತರಾಗಿ ಕಿರುಚಾಡಿದ ಪ್ರಯಾಣಿಕರು
ನವದೆಹಲಿ: ಆಲಿಕಲ್ಲು ಹೊಡೆತಕ್ಕೆ ವಿಮಾನದ ಮುಂಭಾಗ ಹಾನಿಯಾದ ಪರಿಣಾಮ ದೆಹಲಿಯಿಂದ ಶ್ರೀನಗರಕ್ಕೆ ಹೊರಟಿದ್ದ ಇಂಡಿಗೋ (IndiGo) ವಿಮಾನದಲ್ಲಿ ಎಮರ್ಜೆನ್ಸಿ ಘೋಷಿಸಲಾಯಿತು. ಕಡೆಗೆ ವಿಮಾನವು ಶ್ರೀನಗರದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಯಿತು.
ದೆಹಲಿಯಿಂದ ಶ್ರೀನಗರಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನವು ಮಂಗಳವಾರ ಸಂಜೆ ಗಾಳಿಯಲ್ಲಿ ತೀವ್ರ ಹವಾಮಾನ ಪ್ರಕ್ಷುಬ್ಧತೆಯನ್ನು ಅನುಭವಿಸಿತು. ಇದರಿಂದಾಗಿ ಪೈಲಟ್ ವಾಯು ಸಂಚಾರ ನಿಯಂತ್ರಣ (ಎಟಿಸಿ) ದೊಂದಿಗೆ ತುರ್ತು ಪರಿಸ್ಥಿತಿ ಘೋಷಿಸಿದರು. ಇದನ್ನೂ ಓದಿ: ಐಎಎಸ್ ಹುದ್ದೆಗೆ ನಕಲಿ ಪ್ರಮಾಣಪತ್ರ: ಪೂಜಾ ಖೇಡ್ಕರ್‌ಗೆ ನಿರೀಕ್ಷಣಾ ಜಾಮೀನು
Indigo flight 6E-2142 from Delhi to Srinagar got caught in a severe hailstorm.
The flight landed safely and all passangers are safe.
ಎಟಿಸಿಗೆ ಪೈಲಟ್ ಎರ್ಮೆಜೆನ್ಸಿ ಘೋಷಿಸಿದರು. ಮಳೆ ಮತ್ತು ಆಲಿಕಲ್ಲು ರಭಸದಿಂದ ವಿಮಾನ ಅಲುಗಾಡಿತು. ವಿಮಾನ ಅಲುಗಾಡುತ್ತಿದ್ದಂತೆ ಪ್ರಯಾಣಿಕರು ಆಘಾತಗೊಂಡರು. ಭಯಭೀತಿರಾದ ಪ್ರಯಾಣಿಕರಿಂದ ಕಿರುಚಾಡಿದರು.
6E2142 ವಿಮಾನವು ಶ್ರೀನಗರ ಸಮೀಪಿಸುತ್ತಿದ್ದಾಗ ಆಲಿಕಲ್ಲು ಮಳೆಯಿಂದ ತೀವ್ರ ಹಾನಿಗೆ ಒಳಗಾಯಿತು. ಆಲಿಕಲ್ಲು ಹೊಡೆತಕ್ಕೆ ವಿಮಾನದ ಮುಂಭಾಗ ಡ್ಯಾಮೇಜ್ ಆಯಿತು. ಆದರೆ ಸಿಬ್ಬಂದಿ ಸಂಜೆ 6:30 ಕ್ಕೆ ಶ್ರೀನಗರ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಇಳಿಸುವಲ್ಲಿ ಯಶಸ್ವಿಯಾದರು. ವಿಮಾನ ಇಳಿದ ನಂತರ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ನನ್ನನ್ನು ಮದುವೆಯಾಗು: ಪಾಕ್ ಅಧಿಕಾರಿ ಮುಂದೆ ಆಸೆ ವ್ಯಕ್ತಪಡಿಸಿದ್ದ ಜ್ಯೋತಿ
ವಿಮಾನದಲ್ಲಿದ್ದ ಎಲ್ಲ 227 ಮಂದಿಯೂ ಸೇಫ್ ಆಗಿದ್ದಾರೆ. ಪೈಲಟ್‌ಗಳ ಚಾಕಚಕ್ಯತೆಯಿಂದ ಎಲ್ಲ ಪ್ರಯಾಣಿಕರು ಸೇಫ್ ಆಗಿ ಬದುಕುಳಿದಿದ್ದಾರೆ. ವಿಮಾನದ ಮುಂಭಾಗ (Nose damage) ಭಾರೀ ಪ್ರಮಾಣದಲ್ಲಿ ಹಾನಿಗೀಡಾಗಿದ್ದು, ಈ ಹಾನಿಯನ್ನು ನೋಡಿದವರು ಪ್ರಯಾಣಿಕರು ಪವಾಡಸದೃಶರಾಗಿ ಬದುಕುಳಿದಿದ್ದಾರೆ ಎನ್ನುವಷ್ಟು ಗಂಭೀರ ಪ್ರಮಾಣದಲ್ಲಿ ವಿಮಾನ ಹಾನಿಗೊಳಗಾಗಿದೆ.
ಚೆನ್ನೈ: ಫೆಂಗಲ್ ಚಂಡಮಾರುತದಿಂದ (Cyclone Fengal) ಚೆನ್ನೈನಲ್ಲಿ (Chennai) ಆಗುತ್ತಿರುವ ಭಾರೀ ಮಳೆ (Rain) ಹಾಗೂ ಗಾಳಿಯಿಂದಾಗಿ ಅಲ್ಲಿನ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಲು ವಿಮಾನವೊಂದು ಹೆಣಗಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶನಿವಾರ ಸಂಜೆ ಭಾರೀ ಮಳೆ ಮತ್ತು ಬಲವಾದ ಗಾಳಿಯ ನಡುವೆ ಮುಂಬೈ – ಚೆನ್ನೈ ನಡುವೆ ಸಂಚರಿಸುವ ಇಂಡಿಗೋ ವಿಮಾನವನ್ನು (IndiGo Flight) ಚೆನ್ನೈ ಏರ್‌ಪೋರ್ಟ್‌ನಲ್ಲಿ ಇಳಿಸಲು ಪೈಲಟ್ ಯತ್ನಿಸಿದ್ದಾರೆ. ಆದರೆ ಕೊನೆಯ ಕ್ಷಣದಲ್ಲಿ ಟಚ್‌ಡೌನ್‌ನ್ನು ಸ್ಥಗಿತಗೊಳಿಸಿ ಮತ್ತೆ ವಿಮಾನವನ್ನು ಹಾರಿಸಲಾಗಿದೆ. ಇಂಡಿಗೋ ವಿಮಾನಯಾನ ಸಂಸ್ಥೆ ಈ ಘಟನೆಯನ್ನು ದೃಢಪಡಿಸಿದೆ.
ವಿಮಾನವನ್ನು ಇಳಿಸಲು ಸಾಧ್ಯವಾಗದೆ ಇರುವ ಸಂದರ್ಭದಲ್ಲಿ ಮತ್ತೆ ಹಾರಿಸುವ ಪ್ರಕ್ರಿಯೆಗೆ ಗೋ-ರೌಂಡ್ ಎನ್ನಲಾಗತ್ತದೆ. ಇದನ್ನು ಸಾಮಾನ್ಯವಾಗಿ ಸುರಕ್ಷಿತ ಲ್ಯಾಂಡಿಂಗ್ ಸಾಧಿಸಲು ಸಾಧ್ಯವಾಗದಿದ್ದಾಗ ಮಾಡಲಾಗುತ್ತದೆ.
ಇಂತಹ ಕೌಶಲ್ಯವನ್ನು ಪೈಲಟ್‌ಗಳು ತುರ್ತು ಸಂದರ್ಭಗಳನ್ನು ನಿಭಾಯಿಸಲು ಸೂಕ್ತ ತರಬೇತಿ ಪಡೆದಿದ್ದಾರೆ ಎಂದು ಏರ್‌ಲೈನ್ಸ್ ಸ್ಪಷ್ಟಪಡಿಸಿದೆ.
ಫೆಂಗಲ್ ಚಂಡಮಾರುತದಿಂದ ಉತ್ತರ ತಮಿಳುನಾಡು ಮತ್ತು ಪುದುಚೇರಿಯ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಚೆನ್ನೈನಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ ಕನಿಷ್ಠ ಮೂರು ಜನರು ಸಾವನ್ನಪ್ಪಿದ್ದಾರೆ.
ನವದೆಹಲಿ: ಬಾಂಬ್ ಬೆದರಿಕೆಯ ಹಿನ್ನೆಲೆಯಲ್ಲಿ ನಾಗ್ಪುರದಿಂದ ಕೋಲ್ಕತ್ತಾಗೆ ಹೊರಟಿದ್ದ ವಿಮಾನವನ್ನು ರಾಯ್‌ಪುರ (Raipur) ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು. ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದ ಸಿಐಎಸ್‌ಎಫ್ ಮತ್ತು ಪೊಲೀಸರು ವಿಮಾನವನ್ನು ತಪಾಸಣೆ ಮಾಡಿದರು, ತಪಾಸಣೆಯಲ್ಲಿ ಯಾವುದೇ ಸ್ಫೋಟಕ ಪತ್ತೆಯಾಗದ ಕಾರಣ ಹುಸಿ ಬಾಂಬ್ ಬೆದರಿಕೆ ಎಂದು ನಿರ್ಧರಿಸಲಾಗಿದೆ.
ಈ ಬಗ್ಗೆ ಮಾತನಾಡಿದ ರಾಯ್‌ಪುರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಸಿಂಗ್, ವಿಮಾನಯಾನ ಸಂಸ್ಥೆಗಳಿಗೆ ಬೆದರಿಕೆ ಬಂದ ಹಿನ್ನೆಲೆ ನಾಗ್‌ಪುರದಿಂದ (Nagpur) ಕೋಲ್ಕತ್ತಾ (Kolkatta) ಕಡೆಗೆ ವಿಮಾನವನ್ನು ತಿರುಗಿಸಲಾಯಿತು. ಇಂಡಿಗೋ ವಿಮಾನದಲ್ಲಿದ್ದ 187 ಪ್ರಯಾಣಿಕರು ಮತ್ತು ಆರು ಸಿಬ್ಬಂದಿಯನ್ನು ಸ್ಥಳಾಂತರಿಸಲಾಯಿತು ಎಂದು ಹೇಳಿದರು. ಇದನ್ನೂ ಓದಿ: ಕಬ್ಬು ಬೆಲೆ ನಿಗದಿಗಾಗಿ ಹೋರಾಟ- ಸಿಎಂಗೆ ಘೇರಾವ್ ಹಾಕಲು ನಿರ್ಧರಿಸಿದ ಮುಧೋಳ ರೈತರು
ಬೆದರಿಕೆಗೆ ಸಂಬಂಧಿಸಿದಂತೆ ಒಬ್ಬ ಪ್ರಯಾಣಿಕನನ್ನು ಬಂಧಿಸಲಾಗಿದ್ದು, ಆತನನ್ನು ನಿಮೇಶ್ ಮಂಡಲ್ ಎಂದು ಗುರುತಿಸಲಾಗಿದೆ. ಆತನನ್ನು ಮನ ಪೊಲೀಸ್ ಠಾಣೆಯಲ್ಲಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ವಿಮಾನಯಾನ ಸಂಸ್ಥೆಗಳಿಂದ ದೂರು ಸ್ವೀಕರಿಸಿದ್ದರಿಂದ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ನ.20ಕ್ಕೆ ರಾಜ್ಯಾದ್ಯಂತ ಬಾರ್ ಬಂದ್