Tag: IndiaVsPakistan

  • T20 WorldCupಗೆ ಡಿಕೆ ಓಕೆ, ರಿಷಭ್ ಯಾಕೆ – ಪಂತ್ ಕೈಬಿಡೋದು ಸೂಕ್ತ ಅಂದ ಮಾಜಿ ಕ್ರಿಕೆಟಿಗ

    T20 WorldCupಗೆ ಡಿಕೆ ಓಕೆ, ರಿಷಭ್ ಯಾಕೆ – ಪಂತ್ ಕೈಬಿಡೋದು ಸೂಕ್ತ ಅಂದ ಮಾಜಿ ಕ್ರಿಕೆಟಿಗ

    ಮುಂಬೈ: ಟೀಂ ಇಂಡಿಯಾ (Team India) ಆಯ್ಕೆ ಮಾಡಿರುವ T20 ವಿಶ್ವಕಪ್ (T20 World Cup) ತಂಡದಿಂದ ರಿಷಭ್ ಪಂತ್  (Rishabh Pant) ಅವರನ್ನ ಕೈಬಿಡುವಂತೆ ಭಾರತೀಯ ಮಾಜಿ ಕ್ರಿಕೆಟಿಗ ಸಲಹೆ ನೀಡಿದ್ದಾರೆ.

    ಇಂದಿನಿಂದ ಭಾರತ (India) – ಆಸ್ಟ್ರೇಲಿಯಾ (Australia) ಟಿ20 ಸರಣಿ ಆರಂಭವಾಗುತ್ತಿದ್ದು, ತವರಿನಲ್ಲೇ ಆಸಿಸ್ ತಂಡವನ್ನು ಬಗ್ಗು ಬಡಿಯಲು ಟೀಂ ಇಂಡಿಯಾ ಸಜ್ಜಾಗಿದೆ.

    ಏಷ್ಯಾಕಪ್ (Aisa Cup) ಸೂಪರ್ ಫೋರ್ ಲೀಗ್ ಹಂತದಲ್ಲಿ ಪಾಕಿಸ್ತಾನ (Pakistan) ಹಾಗೂ ಶ್ರೀಲಂಕಾದ (SriLanka) ವಿರುದ್ಧ ಸೆಣಸಿದರೂ ಫೈನಲ್ ತಲುಪಲು ಭಾರತ ವಿಫಲವಾಯಿತು. ಈ ಸೋಲಿನ ರುಚಿ ಕಂಡ ಭಾರತ ಹಲವು ಬದಲಾವಣೆಯೊಂದಿಗೆ ಎದುರಾಳಿಗಳನ್ನು ಬಗ್ಗು ಬಡಿಯಲು ಸಜ್ಜಾಗುತ್ತಿದೆ. ಅಲ್ಲದೇ ಐಸಿಸಿ (ICC) ಟಿ20 ವಿಶ್ವಕಪ್‌ಗೂ ಮುನ್ನವೇ ಟೀಂ ಇಂಡಿಯಾ ಆಟಗಾರರ ಸಾಮರ್ಥ್ಯವನ್ನೂ ಮೌಲ್ಯಮಾಪನ ಮಾಡುವ ಪಂದ್ಯವೂ ಇದಾಗಿದೆ. ಆಸ್ಟ್ರೇಲಿಯಾ ಟಿ20 ಸರಣಿ ಮುಗಿಯುತ್ತಿದ್ದಂತೆ ಸೆಪ್ಟೆಂಬರ್ 28 ರಿಂದ ದಕ್ಷಿಣ ಆಫ್ರಿಕಾದೊಂದಿಗೆ ಟಿ20 ಸರಣಿ ಆರಂಭವಾಗಲಿದೆ.

    ಈ ಹೊತ್ತಿನಲ್ಲೇ ರಿಷಭ್ ಪಂತ್ ಅವರನ್ನು ವಿಶ್ವಕಪ್ ತಂಡದಿಂದ ಕೈ ಬಿಡುವುದು ಉತ್ತಮ ಎಂದು ಭಾರತೀಯ ಮಾಜಿ ಕ್ರಿಕೆಟರ್ ವಾಸಿಮ್ ಜಾಫರ್ (Wasim Jaffer) ಹೇಳಿದ್ದಾರೆ.

    ಈ ವರ್ಷದಲ್ಲಿ ಪಂತ್ ಅವರ ಪ್ರದರ್ಶನ ಉತ್ತಮವಾಗಿಲ್ಲ. ವಿಶ್ವಕಪ್‌ನಲ್ಲೂ ಅವರು ಸರಿಯಾಗಿ ಆಡುತ್ತಾರೋ ಇಲ್ಲವೋ ಎಂಬುದು ಗೊತ್ತಿಲ್ಲ. ಆದರೆ ದಿನೇಶ್ ಕಾರ್ತಿಕ್ (Dinesh Karthik) ಅವರು ಇನ್ನಿಂಗ್ಸ್ ಹೇಗೆ ಕೊನೆಗೊಳಿಸಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಆದ್ದರಿಂದ ದಿನೇಶ್ ಕಾರ್ತಿಕ್ ಅವರು ಟೀಂ ಇಂಡಿಯಾದಲ್ಲಿ ಇರಬಹುದು. ಆದರೆ ಪಂತ್ ಅವರ ಆಯ್ಕೆಯನ್ನು ಟೀಂ ಇಂಡಿಯಾ (Team India) ಪರಾಮರ್ಶಿಸಬೇಕು ಎಂದು ಸಲಹೆ ನೀಡಿದ್ದಾರೆ.

    ಇತ್ತೀಚೆಗೆ ನಡೆದ ಏಷ್ಯಾಕಪ್ (AisaCup) ಟೂರ್ನಿಯ ಸೂಪರ್ ಫೋರ್ ಲೀಗ್‌ನಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾದ ವಿರುದ್ಧ ಕಳಪೆ ಪ್ರದರ್ಶನ ನೀಡಿದ ರಿಷಭ್ ಪಂತ್ 4 ಪಂದ್ಯಗಳಲ್ಲಿ ಕೇವಲ 54 ರನ್‌ಗಳನ್ನಷ್ಟೇ ಗಳಿಸಿದ್ದಾರೆ. ಆದರೆ ಇದಕ್ಕೂ ಮುನ್ನ ಭಾರತ ಹಾಗೂ ಇಂಗ್ಲೆAಡ್ ನಡುವೆ ನಡೆದ ಏಕದಿನ ಹಾಗೂ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿ ಪಂತ್ ಮಿಂಚಿದ್ದರು. ಇಂಗ್ಲೆAಡ್ ವಿರುದ್ಧದ ಏಕದಿನ ಪಂದ್ಯದಲ್ಲಿ 113 ಎಸೆತಗಳಲ್ಲಿ 125 ರನ್ ಸಿಡಿಸಿ ಅಜೇಯರಾಗಿ ಟೀಂ ಇಂಡಿಯಾಕ್ಕೆ ಗೆಲುವು ತಂದುಕೊಟ್ಟಿದ್ದರು. ಹಾಗಾಗಿ ಪಂತ್ ಏಕದಿನ ಹಾಗೂ ಟೆಸ್ಟ್ ಪಂದ್ಯಗಳಿಗೆ ಸೂಕ್ತವಾಗಿದ್ದಾರೆಯೇ ಹೊರತು ಟಿ20ಗೆ ಸೂಕ್ತವಲ್ಲ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿವೆ.

    Live Tv
    [brid partner=56869869 player=32851 video=960834 autoplay=true]

  • ಭಾರತ-ಪಾಕಿಸ್ತಾನ ಪಂದ್ಯದ ವೇಳೆ ನನ್ನ ಮಗಳು ಭಾರತದ ಧ್ವಜವನ್ನೇ ಹಿಡಿದಿದ್ದಳು – ಶಾಹಿದ್ ಅಫ್ರಿದಿ

    ಭಾರತ-ಪಾಕಿಸ್ತಾನ ಪಂದ್ಯದ ವೇಳೆ ನನ್ನ ಮಗಳು ಭಾರತದ ಧ್ವಜವನ್ನೇ ಹಿಡಿದಿದ್ದಳು – ಶಾಹಿದ್ ಅಫ್ರಿದಿ

    ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟ್ (Cricket) ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ (Shahid Afridi) ಭಾರತೀಯ ಕ್ರಿಕೆಟ್ ತಂಡದೊಂದಿಗೆ ವಿವಾದಗಳ ಸುದೀರ್ಘ ಇತಿಹಾಸ ಹೊಂದಿದ್ದಾರೆ. ಗೌತಮ್ ಗಂಭೀರ್ ಮತ್ತು ಇತರ ಭಾರತೀಯ ಕ್ರಿಕೆಟಿಗರೊಂದಿಗೆ ಅನೇಕ ಬಾರಿ ಮುಖಾಮುಖಿಯಾಗಿದ್ದಾರೆ. ಆದರೆ ಅವರು ಮಾಧ್ಯಮದಲ್ಲಿ ನೀಡಿದ ಹೇಳಿಕೆಯೊಂದು ಭಾರತೀಯ ಕ್ರಿಕೆಟಿಗರಿಗೆ (Team India) ವಿಶ್ವದೆಲ್ಲೆಡೆ ಅಭಿಮಾನಿಗಳಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ.

    ಏಷ್ಯಾಕಪ್ ಟಿ20 (Aisa Cup T20) ಟೂರ್ನಿಯ ಕುರಿತು ಮಾತನಾಡಿರುವ ಅಫ್ರಿದಿ, ಭಾರತ ಮತ್ತು ಪಾಕಿಸ್ತಾನ (India Pakistan) ನಡುವಿನ ಏಷ್ಯಾ ಕಪ್ 2022ರ ಪಂದ್ಯದ ವೇಳೆ ನನ್ನ ಮಗಳು ಪಾಕಿಸ್ತಾನ ಧ್ವಜಕ್ಕಿಂತ ಭಾರತ ಧ್ವಜವನ್ನೇ ಹಿಡಿದು ಬೀಸುತ್ತಿದ್ದಳು ಎಂದು ಅವರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಪಾಕ್ ಕೈ ಹಿಡಿದ ರಿಜ್ವಾನ್ – ರೋಚಕ ಪಂದ್ಯದಲ್ಲಿ ಭಾರತ ವಿರುದ್ಧ ಪಾಕಿಸ್ತಾನಕ್ಕೆ ಜಯ

    ಸ್ಟೇಡಿಯಂನಲ್ಲಿ ಕೇವಲ ಪಾಕಿಸ್ತಾನಿ ಅಭಿಮಾನಿಗಳು ಶೇ.10 ರಷ್ಟು ಇದ್ದರೆ, ಶೇ.90 ರಷ್ಟು ಭಾರತದ ಅಭಿಮಾನಿಗಳೇ ತುಂಬಿದ್ದರು. ಭಾರತೀಯ ಅಭಿಮಾನಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಈ ವಿಷಯವನ್ನು ನನ್ನ ಹೆಂಡತಿ ನನಗೆ ಹೇಳಿದಳು ಎಂದು ಹೇಳಿಕೊಂಡಿದ್ದಾರೆ.

    ಪಾಕಿಸ್ತಾನದ ಧ್ವಜಗಳು ಅಲ್ಲಿ ಲಭ್ಯವಿರಲಿಲ್ಲ. ಆದ್ದರಿಂದ ನನ್ನ ಕಿರಿಯ ಮಗಳು ಭಾರತದ ಧ್ವಜವನ್ನು ಹಿಡಿದು ಬೀಸುತ್ತಿದ್ದಳು. ನಾನು ವೀಡಿಯೊವನ್ನು ಸ್ವೀಕರಿಸಿದ್ದೇನೆ. ಆದರೆ ಅದನ್ನು ಜಾಲತಾಣದಲ್ಲಿ ಹಂಚಿಕೊಳ್ಳಲು ಆಗಲಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಉಗ್ರನ ಶವವನ್ನು ಹೊರತೆಗೆದು ಅಂತ್ಯಸಂಸ್ಕಾರಕ್ಕೆ ಅವಕಾಶ ಕೋರಿದ್ದ ಅರ್ಜಿ ವಜಾ

    ಮೊದಲ ಪಂದ್ಯದಲ್ಲಿ 147 ರನ್‌ಗಳಿಸಿ ಭಾರತದ ಎದುರು ಸೋತ ಪಾಕಿಸ್ತಾನ, ಸೂಪರ್ ಫೋರ್ ಲೀಗ್‌ನಲ್ಲಿ 182 ರನ್‌ಗಳಿಸಿ ಭಾರತದ ವಿರುದ್ಧ ಗೆಲುವು ದಾಖಲಿಸಿತ್ತು.

    Live Tv
    [brid partner=56869869 player=32851 video=960834 autoplay=true]

  • ಅರ್ಶ್‌ದೀಪ್‌ ಸಿಂಗ್ ಬೆಂಬಲಿಸಿದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ

    ಅರ್ಶ್‌ದೀಪ್‌ ಸಿಂಗ್ ಬೆಂಬಲಿಸಿದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ

    ದುಬೈ: ಟೀಂ ಇಂಡಿಯಾ ಆಟಗಾರ ಅರ್ಶ್‌ದೀಪ್‌ ಸಿಂಗ್ ಅವರನ್ನು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಹಫೀಜ್ ಬೆಂಬಲಿಸಿದ್ದಾರೆ.

    ಏಷ್ಯಾಕಪ್‌ನ ಸೂಪರ್ ಫೋರ್ ಲೀಗ್ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ಭಾನುವಾರ ಹಣಾಹಣಿ ನಡೆಯಿತು. ಈ ಪಂದ್ಯದ 18ನೇ ಓವರ್‌ನಲ್ಲಿ ಎಡಗೈ ವೇಗಿ ಬೌಲರ್ ಅರ್ಶ್‌ದೀಪ್‌ ಸಿಂಗ್ ಒತ್ತಡದ ಸಮಯದಲ್ಲಿ ಸುಲಭ ಕ್ಯಾಚ್ ಅನ್ನು ಕೈಚೆಲ್ಲಿದರು.

    ಇದರಿಂದ ಭಾರೀ ಟಿಕೆಗಳು ವ್ಯಕ್ತವಾಯಿತು. ಅಲ್ಲದೇ ಅರ್ಶ್‌ದೀಪ್‌ ಅವರ ಪುಟದಲ್ಲಿ ಖಲಿಸ್ತಾನ ಆಟಗಾರ ಎಂದು ಎಡಿಟ್ ಮಾಡಲಾಗಿತ್ತು. ಇದರಿಂದ ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಚರ್ಚೆ ಆಗುತ್ತಿದ್ದಂತೆ ಮಾಹಿತಿ ಮತ್ತು ತಂತ್ರಜ್ಞಾನ ಖಾತೆಯ ಸಚಿವಾಲಯ ವಿಕಿಪೀಡಿಯಾದ ಭಾರತದ ಪ್ರತಿನಿಧಿಗೆ ಸಮನ್ಸ್ ಜಾರಿ ಮಾಡಿತ್ತು. ಇದನ್ನೂ ಓದಿ: ಸುಷ್ಮಿತಾ ಸೇನ್ ಜೊತೆ ಬ್ರೇಕ್ ಅಪ್ ಘೋಷಿಸಿಕೊಂಡ ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ

    ಅನೇಕ ಕಡೆ ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ಭಾರತೀಯ ಹಿರಿಯ ಹಾಗೂ ಮಾಜಿ ಕ್ರಿಕೆಟಿಗರು ಅರ್ಶ್‌ದೀಪ್‌ ಸಿಂಗ್ ಬೆಂಬಲಕ್ಕೆ ನಿಂತರು. ಈ ಬೆನ್ನಲ್ಲೇ ಇಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಹಫೀಜ್ ಸಹ ಅರ್ಶ್‌ದೀಪ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅವರನ್ನು ಅವಮಾನಿಸದಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ರಿಷಭ್ ಪಂತ್‌ನ ಆ ಆಟ ಅಗತ್ಯವಿರಲಿಲ್ಲ – ಗೌತಮ್ ಗಂಭೀರ್ ಅಸಮಾಧಾನ

    ಈ ಕುರಿತು ಟ್ವೀಟ್ ಮಾಡಿರುವ ಮೊಹಮ್ಮದ್ ಹಫೀಜ್, ಎಲ್ಲಾ ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳಿಗೆ ನನ್ನ ವಿನಂತಿ ಏನೆಂದರೆ ನಾವು ಕ್ರೀಡೆಯಲ್ಲಿ ಮನುಷ್ಯರಾಗಿ ಸಹಜ ತಪ್ಪುಗಳನ್ನು ಮಾಡುತ್ತೇವೆ. ಆದರೆ ದಯವಿಟ್ಟು ಈ ತಪ್ಪುಗಳಿಂದ ಯಾರನ್ನೂ ಅವಮಾನಿಸಬೇಡಿ ಎಂದು ಮನವಿ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಿಷಭ್ ಪಂತ್‌ನ ಆ ಆಟ ಅಗತ್ಯವಿರಲಿಲ್ಲ – ಗೌತಮ್ ಗಂಭೀರ್ ಅಸಮಾಧಾನ

    ರಿಷಭ್ ಪಂತ್‌ನ ಆ ಆಟ ಅಗತ್ಯವಿರಲಿಲ್ಲ – ಗೌತಮ್ ಗಂಭೀರ್ ಅಸಮಾಧಾನ

    ಮುಂಬೈ: ಏಷ್ಯಾಕಪ್ ಟೂರ್ನಿಯ ಸೂಪರ್ ಫೋರ್ ಲೀಗ್‌ನಲ್ಲಿ ಭಾರತ, ಪಾಕಿಸ್ತಾನದ ಎದುರು ಸೋಲನ್ನು ಅನುಭವಿಸಿತು.

    ಟಾಸ್ ಸೋತು ಮೊದಲು ಕ್ರೀಸ್‌ಗಿಳಿದ ಟೀಂ ಇಂಡಿಯಾ 10 ಓವರ್‌ಗಳವರೆಗೂ ಉತ್ತಮ ರನ್‌ಗಳನ್ನೇ ಕಲೆಹಾಕಿತ್ತು. 9.4 ಓವರ್‌ಗಳಿದ್ದಾಗ ತಂಡದ ಮೊತ್ತ 3 ವಿಕೆಟ್‌ಗೆ 91 ರನ್‌ಗಳಿತ್ತು. ಈ ವೇಳೆ ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ರಿಷಭ್ ಪಂತ್ 12 ಎಸೆತಗಳಲ್ಲಿ 2 ಬೌಂಡರಿಯೊಂದಿಗೆ ಕೇವಲ 14 ರನ್ ಗಳಿಸಿದರು. ರಿವರ್ಸ್ ಸ್ವೀಪ್ ಶಾಟ್ ಮೂಲಕ ಮತ್ತೊಂದು ಬೌಂಡರಿ ಎತ್ತುವ ಪ್ರಯತ್ನ ಮಾಡಿದ ಪಂತ್ ಎದುರಾಳಿ ತಂಡದ ಆಸಿಫ್ ಅಲಿ ಕೈಗೆ ಸುಲಭ ಕ್ಯಾಚ್ ನೀಡಿದರು. ಇದನ್ನೂ ಓದಿ: ವಿದೇಶಿ ಲೀಗ್‌ನತ್ತ ಕಣ್ಣು – ಐಪಿಎಲ್‌ಗೆ ರೈನಾ ಗುಡ್‌ಬೈ

    ನಂತರದಲ್ಲಿ ಬಂದ ಆಟಗಾರರು ಸ್ಥಿರವಾಗಿ ನಿಲ್ಲದ ಕಾರಣ ಟೀಂ ಇಂಡಿಯಾ 7 ವಿಕೆಟ್‌ಗಳ ನಷ್ಟಕ್ಕೆ 181 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಈ ರನ್‌ಗಳ ಗುರಿ ಬೆನ್ನತ್ತಿದ್ದ ಪಾಕಿಸ್ತಾನ 19.5 ಓವರ್‌ಗಳಲ್ಲಿ 182 ರನ್ ಗಳಿಸಿ ಟೀಂ ಇಂಡಿಯಾ ವಿರುದ್ಧ ಗೆಲುವು ಸಾಧಿಸಿತು.

    ಸೂಪರ್ ಲೀಗ್‌ನಲ್ಲಿ ರಿಷಭ್ ಪಂತ್ ಅವರ ಬ್ಯಾಟಿಂಗ್ ಬಗ್ಗೆ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರು ಅಸಮಾಧಾನ ಹೊರಹಾಕಿದ್ದಾರೆ. ಪಾಕಿಸ್ತಾನದ ಮಾಜಿ ವೇಗಿ ವಾಸಿಂ ಅಕ್ರಮ್ ಕೂಡ ಗಂಭೀರ್ ಅಭಿಪ್ರಾಯವನ್ನು ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ಸುಷ್ಮಿತಾ ಸೇನ್ ಜೊತೆ ಬ್ರೇಕ್ ಅಪ್ ಘೋಷಿಸಿಕೊಂಡ ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ

    `ಸೂಪರ್ ಫೋರ್ ಲೀಗ್‌ನ ಆ ಹಂತದಲ್ಲಿ ಪಂತ್ ಅಂತಹ ಶಾಟ್ ಆಡುವ ಅಗತ್ಯವಿರಲಿಲ್ಲ. ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ರಿವರ್ಸ್ ಸ್ವೀಪ್ ಆಡುತ್ತಾರೆ ಎಂಬುದು ನನಗೆ ತಿಳಿದಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನ ಅಗ್ರ ಆಟಗಾರರಲ್ಲಿ ಒಬ್ಬರಾಗಿದ್ದಾರೆ ಎಂಬುದೂ ಗೊತ್ತಿದೆ. ಆದರೆ ಈ ಹಂತದಲ್ಲಿ ಆ ಹೊಡೆತ ಅಗತ್ಯವಿರಲಿಲ್ಲ ಎಂದು ಹೇಳಿದ್ದಾರೆ.

    ರಿವರ್ಸ್ ಸ್ವೀಪ್ ಹೊಡೆಯುವುದು ಪಂತ್ ಅವರ ಶಾಟ್ ಅಲ್ಲ. ಲಾಂಗ್ ಆನ್ ಅಥವಾ ಡೀಪ್ ಮಿಡ್‌ವಿಕೆಟ್ ಅವರ ಪಕ್ಕಾ ಶಾಟ್. ಅದೇ ಅವರ ಶಕ್ತಿ. ಆ ಸಂದರ್ಭದಲ್ಲಿ ರಿವರ್ಸ್ ಸ್ವೀಪ್ ಅಗತ್ಯವಿರಲಿಲ್ಲ. ಅದು ಅವರ ಶಕ್ತಿಯೂ ಅಲ್ಲ ಎಂದು ಗಂಭೀರ್ ಅಸಮಾಧಾನ ಹೊರಹಾಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ತಪ್ಪುಗಳು ಆಗಬಹುದು, ಅದರಿಂದ ಕಲಿಯುವುದು ಬಹಳ ಮುಖ್ಯ – ಅರ್ಶ್‌ದೀಪ್‌ ಬೆಂಬಲಿಸಿದ ಕಿಂಗ್ ಕೊಹ್ಲಿ

    ತಪ್ಪುಗಳು ಆಗಬಹುದು, ಅದರಿಂದ ಕಲಿಯುವುದು ಬಹಳ ಮುಖ್ಯ – ಅರ್ಶ್‌ದೀಪ್‌ ಬೆಂಬಲಿಸಿದ ಕಿಂಗ್ ಕೊಹ್ಲಿ

    ದುಬೈ: ಏಷ್ಯಾಕಪ್ ಟೂರ್ನಿಯ ಸೂಪರ್ ಫೋರ್ ಲೀಗ್‌ನಲ್ಲಿ ನಿನ್ನೆ ಭಾರತ ಮತ್ತು ಪಾಕಿಸ್ತಾನ ಸೆಣಸಾಡಿದವು. ರಣರೋಚಕ ಪಂದ್ಯದಲ್ಲಿ ಕೊನೆಯವರೆಗೂ ತೀವ್ರ ಪೈಪೋಟಿ ನೀಡಿದ ಭಾರತ ಕೊನೆಗೂ ಪಾಕಿಸ್ತಾನದ ವಿರುದ್ಧ ಸೋಲನ್ನು ಒಪ್ಪಿಕೊಂಡಿತು.

    ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಅರ್ಶ್‌ದೀಪ್‌ ಬೆಂಬಲಕ್ಕೆ ನಿಂತಿದ್ದಾರೆ. ಒತ್ತಡದಲ್ಲಿದ್ದಾಗ ತಪ್ಪುಗಳು ಸಂಭವಿಸುತ್ತವೆ. ಆದರೆ ಅದರಿಂದ ಕಲಿಯುವುದು ಮತ್ತು ಕಲಿತು ಮುಂದುವರಿಯುವುದು ಬಹಳ ಮುಖ್ಯ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬ್ಯಾಕ್ ಟು ಬ್ಯಾಕ್ ಅರ್ಧಶತಕ ಸಿಡಿಸಿ ಮಿಂಚಿದ ಕೊಹ್ಲಿ – THE KING IS BACK ಎಂದ ಅಭಿಮಾನಿಗಳು

    ಪರಿಸ್ಥಿತಿ ಬಿಗಿಯಾಗಿದ್ದಾಗ, ಹೆಚ್ಚಿನ ಒತ್ತಡಗಳು ಇದ್ದಾಗ ತಪ್ಪು ಯಾರೂಬೇಕಾದರೂ ಮಾಡಬಹುದು. ನಿನ್ನೆಯೂ ಪರಿಸ್ಥಿತಿ ಬಿಗಿಯಾಗಿತ್ತು. ನಾನು ನನ್ನ ಮೊದಲ ಚಾಂಪಿಯನ್ ಟ್ರೋಫಿ ಆಡುತ್ತಿದ್ದಾಗ, ಶಾಹಿದ್ ಅಫ್ರಿದಿ ಅವರ ಬೌಲಿಂಗ್‌ಗೆ ಕೆಟ್ಟಹೊಡೆತ ಎದುರಿಸಿದ್ದೆ. ಈಗಲೂ ಅದು ನನಗೆ ನೆನಪಿದೆ. ಅಂದು ನನಗೆ ನಿದ್ರೆ ಮಾಡಲು ಸಾಧ್ಯವಾಗಲೇ ಇಲ್ಲ, ಬೆಳಿಗ್ಗೆ 5 ಗಂಟೆವರೆಗೂ ಅದೇ ಸೀಲಿಂಗ್ ಅನ್ನು ನೋಡುತ್ತಿದೆ. ನನ್ನ ವೃತ್ತಿ ಜೀವ ಮುಗಿದೇಹೋಯ್ತು ಎಂದು ಭಾವಿಸಿದ್ದೆ ಎಂದು ಹಳೆಯ ಘಟನೆಯೊಂದನ್ನು ನೆನಪಿಸಿಕೊಂಡಿದ್ದಾರೆ.

    ಟೀಂ ಇಂಡಿಯಾದಲ್ಲಿ ಇದೀಗ ಉತ್ತಮ ವಾತಾವರಣವಿದ್ದು, ಹಿರಿಯ ಆಟಗಾರರು ನಿಮ್ಮ ಸುತ್ತಲೂ ಇದ್ದಾರೆ. ಇದರ ಕ್ರಿಡಿಟ್ ಅನ್ನು ನಾಯಕ ಮತ್ತು ಕೋಚ್‌ಗೆ ನೀಡುತ್ತೇನೆ. ಆಟಗಾರರು ತಮ್ಮ ತಪ್ಪುಗಳಿಂದ ಇನ್ನಷ್ಟು ಕಲಿಯುತ್ತಾರೆ. ಒಬ್ಬರು ತಪ್ಪನ್ನು ಒಪ್ಪಿಕೊಂಡು ಅದನ್ನು ಸರಿಪಸಿಡಿಕೊಳ್ಳಬೇಕು ಎಂದು ಹೇಳಿದ್ದಾರೆ.

    ನಿನ್ನೆ ನಡೆದ ಏಷ್ಯಾಕಪ್ ಟೂರ್ನಿಯ ಸೂಪರ್ ಫೋರ್ ಲೀಗ್ ಪಂದ್ಯದಲ್ಲಿ ಪಾಕಿಸ್ತಾನ ಭಾರತದ ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿತು. ನಿಗದಿತ ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಭಾರತ 181 ರನ್ ಗಳಿಸಿತ್ತು. ಬೃಹತ್ ಮೊತ್ತದ ಗುರಿ ಬೆನ್ನತ್ತಿದ್ದ ಪಾಕಿಸ್ತಾನ 19.5 ಓವರ್‌ಗಳಲ್ಲೇ 182 ರನ್ ಗಳಿಸಿ ಜಯ ಸಾಧಿಸಿತು. ಇದನ್ನೂ ಓದಿ: ಪಾಕ್ ಕೈ ಹಿಡಿದ ರಿಜ್ವಾನ್ – ರೋಚಕ ಪಂದ್ಯದಲ್ಲಿ ಭಾರತ ವಿರುದ್ಧ ಪಾಕಿಸ್ತಾನಕ್ಕೆ ಜಯ

    ಡೆತ್ ಓವರ್‌ನಲ್ಲಿ ಉತ್ತಮಪ್ರದರ್ಶನ ನೀಡುತ್ತಿದ್ದ ಟೀಂ ಇಂಡಿಯಾ ಗೆಲ್ಲುವ ನಿರೀಕ್ಷೆಯಲ್ಲಿತ್ತು. ಆದರೆ 18ನೇ ಓವರ್‌ನಲ್ಲಿ ರವಿ ಬಿಷ್ಣೋಯ್ ಅವರ ಬೌಲಿಂಗೆ ಸುಲಭವಾಗಿ ನೀಡಿದ ಆಸಿಫ್ ಅಲಿ ಕ್ಯಾಚ್ ಅನ್ನು ಅರ್ಶ್‌ದೀಪ್‌ ಸಿಂಗ್ ಕೈಚೆಲ್ಲಿದರು. ಇದು ಪಾಕ್ ಗೆಲುವಿಗೆ ತಿರುವು ನೀಡಿತು. ಕೊನೆಯ ಓವರ್‌ನಲ್ಲಿ ಬೌಲಿಂಗ್‌ಗಿಳಿದ ಅರ್ಶ್‌ದೀಪ್‌ ಅವರ ಮೊದಲ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. ಆದರೆ 2ನೇ ಎಸೆತದಲ್ಲಿ ಫುಲ್‌ಟಾಸ್ ಬೌಲ್ ಮಾಡಿ 4 ರನ್ ಚಚ್ಚಿಸಿಕೊಂಡರು. ಅದರ ಮರು ಎಸೆತದಲ್ಲೇ ಅಸಿಫ್ ಅಲಿ ಅವರ ವಿಕೆಟ್ ಉರುಳಿಸಿದರೂ ಜಯ ಪಾಕಿಸ್ತಾನದ ಪಾಲಾಯಿತು. ಅಂತಿಮವಾಗಿ ಪಾಕಿಸ್ತಾನ 5 ವಿಕೆಟ್‌ಗಳ ಜಯ ಸಾಧಿಸಿತು.

    Live Tv
    [brid partner=56869869 player=32851 video=960834 autoplay=true]

  • ಕ್ರಿಕೆಟ್ ಪ್ರಿಯರಿಗೆ ನಾಳೆ ಸೂಪರ್ ಸಂಡೇ – ಕದನ ಕುತೂಹಲ ಮೂಡಿಸಿದ ಇಂಡೋ-ಪಾಕ್ ಹೋರಾಟ

    ಕ್ರಿಕೆಟ್ ಪ್ರಿಯರಿಗೆ ನಾಳೆ ಸೂಪರ್ ಸಂಡೇ – ಕದನ ಕುತೂಹಲ ಮೂಡಿಸಿದ ಇಂಡೋ-ಪಾಕ್ ಹೋರಾಟ

    ದುಬೈ: ಏಷ್ಯಾಕಪ್ ಟಿ-20 ಕ್ರಿಕೆಟ್ ಟೂರ್ನಿಯ ಸೂಪರ್ ಫೋರ್ ಕಾಳಗ ಆರಂಭವಾಗಿದೆ. ಮತ್ತೊಮ್ಮೆ ಭಾರತ – ಪಾಕಿಸ್ತಾನ ಸೂಪರ್ ಸಂಡೇನಲ್ಲಿ ಎದುರಾಗುತ್ತಿದ್ದು, ಕ್ರಿಕೆಟ್ ಅಭಿಮಾನಿಗಳಿಗೆ ಹಬ್ಬ ಶುರುವಾಗಿದೆ.

    ನಾಳಿನ ಸೂಪರ್ ಸಂಡೇನಲ್ಲಿ ಭಾರತ-ಪಾಕಿಸ್ತಾನ 2ನೇ ಬಾರಿಗೆ ಮುಖಾಮುಖಿಯಾಗುತ್ತಿದ್ದು, ಏಷ್ಯಾಕಪ್‌ನ ಲೀಗ್ ಹಂತದಲ್ಲಿ ಒಂದು ಬಾರಿ ಇತ್ತಂಡಗಳು ಮುಖಾಮುಖಿಯಾಗಿದ್ದವು. ಇದೀಗ ಸೂಪರ್ ಫೋರ್ ಹಂತದಲ್ಲಿ ಮತ್ತೊಮ್ಮೆ ಹೋರಾಟಕ್ಕೆ ಎರಡು ತಂಡಗಳು ಸಿದ್ಧಗೊಂಡಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಸಜ್ಜಾಗಿದೆ. ಉಭಯ ತಂಡಗಳ ಕ್ರಿಕೆಟ್ ಪ್ರಿಯರು ಇಂಡೋ-ಪಾಕ್ ಪಂದ್ಯಕ್ಕಾಗಿ ಕಾದು ಕುಳಿತಿದ್ದಾರೆ. ಗೆಲುವಿಗಾಗಿ ಇತ್ತಂಡಗಳು ಭಾರೀ ಕಸರತ್ತನ್ನೇ ನಡೆಸಿವೆ. 

    ಲೀಗ್ ಹಂತದ ಸೋಲಿನ ಸೇಡು ತೀರಿಸಿಕೊಳ್ಳಲು ಪಾಕಿಸ್ತಾನ ಹೋಂಚು ಹಾಕುತ್ತಿದ್ದರೆ, ಇತ್ತ ಭಾರತ ತನ್ನ ಗೆಲುವಿನ ಹಾದಿಯಲ್ಲಿ ಮುನ್ನಡೆಯಲು ಸಮರಾಭ್ಯಾಸ ನಡೆಸುತ್ತಿದೆ.

    ಕಳೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 19.5 ಓವರ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 147 ರನ್‌ಗಳಿಸಿತ್ತು. ಅಲ್ಪಮೊತ್ತದ ಗುರಿ ಬೆನ್ನತ್ತಿದ್ದ ಭಾರತ ತಂಡ 19.4 ಓವರ್‌ಗಳಲ್ಲೇ 5 ವಿಕೆಟ್ ನಷ್ಟಕ್ಕೆ 148 ರನ್‌ಗಳಿಸಿ ಬದ್ಧವೈರಿಗಳ ಹುಟ್ಟಡಗಿಸಿತ್ತು. ಇದನ್ನೂ ಓದಿ: ಕೊಹ್ಲಿಯ ಈ ಸಾಧನೆಗೂ ಮುನ್ನವೇ ವಿಶ್ ಮಾಡಿದ ದೋಸ್ತಿ ABD

    ಟೀಂ ಇಂಡಿಯಾ ಎದುರು ಸೋತು ಮುಖಭಂಗ ಅನುಭವಿಸಿದ್ದ ಪಾಕಿಸ್ತಾನ ತಂಡ ತನ್ನ 2ನೇ ಪಂದ್ಯದಲ್ಲಿ ಹಾಂಕಾಂಗ್ ವಿರುದ್ಧ ಭರ್ಜರಿ ಜಯ ಸಾಧಿಸಿತ್ತು. ನಿಗದಿತ ಓವರ್‌ಗಳಲ್ಲಿ ಕೇವಲ 2 ವಿಕೆಟ್ ನಷ್ಟಕ್ಕೆ 193 ರನ್ ಗಳಿಸಿತು. ಅಲ್ಲದೇ ಮಾರಕ ಬೌಲಿಂಗ್ ದಾಳಿಯಿಂದ ಎದುರಾಳಿ ತಂಡವನ್ನು 10.4 ಓವರ್‌ಗಳಲ್ಲಿ 38 ರನ್‌ಗಳಿಗೆ ಕಟ್ಟಿಹಾಕಿತು.

    ಪಾಕ್ ತಂಡದ ಈ ಅಮೋಘ ಪ್ರದರ್ಶನ ಕಂಡ ಮಾಜಿ ಕ್ರಿಕೆಟಿಗರು ಭಾನುವಾರವೂ ಟೀಂ ಇಂಡಿಯಾ ಎದುರು ಇದೇ ರೀತಿ ಆಡುವಂತೆ ಸಲಹೆ ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಮಾಜಿ ಕ್ರಿಕೆಟಿಗ ಯಾಸಿರ್ ಅರಾಫರ್, `ದಯವಿಟ್ಟು ನೀವು ಇಂದು ಆಡಿದಂತೆ ಭಾನುವಾರವೂ ಆಡಿ’ ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: 1.5 ಕೋಟಿ ರೂ. ನೀಡಿ ನೀರಜ್ ಚೋಪ್ರಾರ ಜಾವೆಲಿನ್ ಖರೀದಿಸಿದ ಬಿಸಿಸಿಐ

    ನಾಳೆ ಸೂಪರ್ ಫೋರ್ ಹಂತದಲ್ಲಿ ಭಾರತ ಮತ್ತು ಪಾಕಿಸ್ತಾನ ಮತ್ತೆ ಮುಖಾಮುಖಿಯಾಗುತ್ತಿವೆ. ಆದರೆ ಕಳೆದ ಪಂದ್ಯದಲ್ಲಿ 29 ಎಸೆತಗಳಲ್ಲಿ 35 ರನ್ ಸಿಡಿಸಿ ತಂಡದ ಗೆಲುವಿಗೆ ಶ್ರಮಿಸಿದ್ದ ಆಲ್‌ರೌಂಡರ್ ರವೀಂದ್ರ ಜಡೇಜಾ ಮೊಣಕಾಲಿನ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ತಂಡದಿಂದ ಹೊರಗುಳಿದಿದ್ದಾರೆ. ಅವರ ಬದಲಿಗೆ ಮತ್ತೊಬ್ಬ ಆಲ್‌ರೌಂಡರ್ ಅಕ್ಷರ್ ಪಟೇಲ್ ತಂಡ ಸೇರಿಕೊಂಡಿದ್ದಾರೆ. ಇವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಚಾನ್ಸ್ ಸಿಗಲಿದೆಯೇ ಇದು ತಂಡದಲ್ಲಿ ಬದಲಾವಣೆ ತರುವ ಸಾಧ್ಯತೆಗಳಿವೆಯೇ ಎಂಬುದನ್ನು ಕಾದು ನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಏಷ್ಯಾಕಪ್ ಟೂರ್ನಿಯಿಂದ ರವೀಂದ್ರ ಜಡೇಜಾ ಔಟ್

    ಏಷ್ಯಾಕಪ್ ಟೂರ್ನಿಯಿಂದ ರವೀಂದ್ರ ಜಡೇಜಾ ಔಟ್

    ದುಬೈ: ಗಾಯದ ಸಮಸ್ಯೆಯಿಂದಾಗಿ ಟೀಂ ಇಂಡಿಯಾದ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರು ಪ್ರಸ್ತುತ ಯುಎಇ ಆತಿಥ್ಯದಲ್ಲಿ ನಡೆಯುತ್ತಿರುವ 2022ರ ಏಷ್ಯಾ ಕಪ್ ಟೂರ್ನಿಯಿಂದ ಹೊರ ನಡೆದಿದ್ದಾರೆ.

    ಜಡೇಜಾ ಬದಲಿಗೆ ಅಕ್ಷರ್ ಪಟೇಲ್ ಟೀಂ ಇಂಡಿಯಾ ಸೇರ್ಪಡೆಯಾಗಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ. ಇದನ್ನೂ ಓದಿ: AsiaCup: ಜಡೇಜಾ ಜಾದು, ಪಾಂಡ್ಯ ಪರಾಕ್ರಮ – ಪಾಕಿಸ್ತಾನದ ವಿರುದ್ಧ ಭಾರತಕ್ಕೆ 5 ವಿಕೆಟ್‌ಗಳ ರೋಚಕ ಜಯ

    ಆಲ್‌ರೌಂಡರ್ ರವೀಂದ್ರ ಜಡೇಜಾ ಬಲ ಮೊಣಕಾಲಿಗೆ ಗಾಯವಾಗಿದ್ದು, ಸದ್ಯ ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದಾರೆ. ಅಕ್ಷರ್ ಪಟೇಲ್ ಅವರನ್ನು ಸ್ಟ್ಯಾಂಡ್‌ ಬೈ ಪ್ಲೇಯರ್ ಎಂದು ಹೆಸರಿಸಿದ್ದ ಬಿಸಿಸಿಐ ಇದೀಗ ಜಡೇಜಾ ಅವರ ಸ್ಥಾನ ತುಂಬಲಿದ್ದಾರೆ ಎಂದು ಬಿಸಿಸಿಐ ಹೇಳಿದೆ.

    ಭಾರತ-ಪಾಕಿಸ್ತಾನ ನಡುವೆ ನಡೆದ ಪಂದ್ಯದಲ್ಲಿ ಜಡೇಜಾ ಉತ್ತಮ ಪ್ರದರ್ಶನ ನೀಡಿದ್ದರು. ಪಾಕ್ ವಿರುದ್ಧ 29 ಎಸೆತಗಳಲ್ಲಿ 35 ರನ್ ಸಿಡಿಸಿ ಟೀಂ ಇಂಡಿಯಾ ಗೆಲುವಿಗೆ ಶ್ರಮಿಸಿದ್ದರು. ಹಾಂಕಾಂಗ್ ವಿರುದ್ಧ ನಡೆದ 2ನೇ ಪಂದ್ಯದಲ್ಲಿ ಒಂದು ವಿಕೆಟ್ ಪಡೆದು ಬ್ಯಾಟಿಂಗ್ ಅವಕಾಶದಿಂದ ವಂಚಿತರಾದರು.

    Live Tv
    [brid partner=56869869 player=32851 video=960834 autoplay=true]

  • ಏಷ್ಯಾಕಪ್ ಸೋಲು – ಪಾಕಿಸ್ತಾನ ಕಾಲೆಳೆದ ವಾಸಿಮ್ ಜಾಫರ್

    ಏಷ್ಯಾಕಪ್ ಸೋಲು – ಪಾಕಿಸ್ತಾನ ಕಾಲೆಳೆದ ವಾಸಿಮ್ ಜಾಫರ್

    ದುಬೈ: ಏಷ್ಯಾಕಪ್-2022ರ ಟೂರ್ನಿಯಲ್ಲಿ ತನ್ನ ಮೊದಲ ಪಂದ್ಯದಲ್ಲೇ ಭಾರತದ ಎದುರು ಸೋಲನುಭವಿಸಿದ ಪಾಕಿಸ್ತಾನ ತಂಡದ ವಿರುದ್ಧ ಜನ ಹಿಗ್ಗಾಮುಗ್ಗಾ ಟ್ರೋಲ್ ಮಾಡ್ತಿದ್ದಾರೆ.

    ಕಳೆದ ಎರಡು ದಿನಗಳಿಂದಲೂ ಟೀಂ ಇಂಡಿಯಾದ ಗೆಲುವನ್ನು ಇಡೀ ದೇಶದ ಜನ ಸಂಭ್ರಮಿಸುತ್ತಿದ್ದಾರೆ. ಡೆತ್ ಓವರ್‌ನಲ್ಲಿ ಟೀಂ ಇಂಡಿಯಾದ ಪ್ರದರ್ಶನದ ರೋಚಕತೆಯನ್ನೇ ಗುನುಗುತ್ತಾ, ಜಾಲತಾಣಗಳಲ್ಲೂ ನೆಚ್ಚಿನ ಕ್ರಿಕೆಟಿಗರ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಮತ್ತೊಂದೆಡೆ ಟ್ರೋಲಿಗರು ತಮ್ಮ-ತಮ್ಮ ಟ್ರೋಲ್ ಪೇಜ್‌ಗಳಲ್ಲಿ ಕ್ಯಾಪ್ಷನ್‌ಗಳನ್ನು ಹಾಸ್ಯಾಸ್ಪದ ಹೇಳಿಕೆಗಳನ್ನು ದಾಖಲಿಸುವ ಮೂಲಕ ಟ್ರೋಲ್‌ಗೆ ಗುರಿ ಮಾಡುತ್ತಿದ್ದಾರೆ.

    ಅಂತೆಯೇ ಆಗಾಗ್ಗೆ ಹಾಸ್ಯಾಸ್ಪದ ವೀಡಿಯೋಗಳನ್ನು ಹರಿಯಬಿಡುತ್ತಿದ್ದ ಮಾಜಿ ಕ್ರಿಕೆಟಿಗ ವಾಸಿಮ್ ಜಾಫರ್, ಟ್ವಿಟ್ಟರ್‌ನಲ್ಲಿ ವೀಡಿಯೋವೊಂದನ್ನು ಪೋಸ್ಟ್ ಮಾಡುವ ಮೂಲಕ ಪಾಕಿಸ್ತಾನ ತಂಡದ ಕಾಲೆಳೆದಿದ್ದಾರೆ. ಭಾರತದ ಎದುರು ಪಾಕಿಸ್ತಾನ ನೀಡಿದ ಪ್ರದರ್ಶನದ ಬಗ್ಗೆ ಹಾಸ್ಯ ತರಿಸುವ ಈ ವೀಡಿಯೋ ಈಗ ಭಾರೀ ಸದ್ದು ಮಾಡುತ್ತಿದೆ.

    ಜೊತೆಗೆ ಜಾಫರ್ `ಇದು ಟೀಂ ಇಂಡಿಯಾದ ಈ ವಿಶೇಷ ಗೆಲುವು, ಹಾರ್ದಿಕ್ ಪಾಂಡ್ಯ ಆಲ್‌ರೌಂಡರ್ ಆಟ, ಭುವನೇಶ್ವರ್ ಬೌಲಿಂಗ್ ಹಾಗೂ ಜಡೇಜಾ ಬ್ಯಾಟಿಂಗ್ ಎಲ್ಲವೂ ಅದ್ಭುತವಾಗಿದೆ. ಈ ಪಂದ್ಯದಲ್ಲಿ ಪಾಕಿಸ್ತಾನ ನೀಡಿದ ಪ್ರದರ್ಶನ ಹೇಗಿತ್ತು ಎಂಬುದರ ವೀಡಿಯೋ ಪ್ರತಿ ತುಣುಕು’ ಇಲ್ಲಿದೆ ಎಂದು ಬರೆದುಕೊಂಡಿದ್ದಾರೆ.

    ಏಷ್ಯಾಕಪ್ ಟೂರ್ನಿಯಲ್ಲಿ ಇತ್ತೀಚೆಗೆ ನಡೆದ ಇಂಡೋ-ಪಾಕ್ ಮ್ಯಾಚ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 19.5 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 147 ರನ್‌ಗಳನ್ನು ಗಳಿಸಿತ್ತು. ಅಲ್ಪ ಮೊತ್ತದ ಗುರಿ ಬೆನ್ನತ್ತಿದ ಭಾರತ 19.4 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 148 ರನ್‌ಗಳಿಸಿ ಗೆಲುವು ಸಾಧಿಸಿತು.

    Live Tv
    [brid partner=56869869 player=32851 video=960834 autoplay=true]

  • ಟಿವಿ ಸ್ಕ್ರೀನ್‌ನಲ್ಲೇ ಹಾರ್ದಿಕ್ ಪಾಂಡ್ಯಾಗೆ ಮುತ್ತಿಟ್ಟ ಅಫ್ಘನ್ ಅಭಿಮಾನಿ

    ಟಿವಿ ಸ್ಕ್ರೀನ್‌ನಲ್ಲೇ ಹಾರ್ದಿಕ್ ಪಾಂಡ್ಯಾಗೆ ಮುತ್ತಿಟ್ಟ ಅಫ್ಘನ್ ಅಭಿಮಾನಿ

    ದುಬೈ/ಕಾಬೂಲ್: ಭಾರತೀಯ ಕ್ರಿಕೆಟಿಗರು ವಿಶ್ವದಾದ್ಯಂತ ಅಭಿಮಾನಿಗಳನ್ನ ಹೊಂದಿದ್ದಾರೆ ಎಂಬುದಕ್ಕೆ ಅಫ್ಘಾನಿಸ್ತಾನದಲ್ಲಿ ನಡೆದ ಘಟನೆಯೊಂದು ಸಾಕ್ಷಿಯಾಗಿದೆ.

    ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಏಷ್ಯಾ ಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ 5 ವಿಕೆಟ್‌ಗಳ ಅಂತರದಲ್ಲಿ ಗೆದ್ದು ಬೀಗಿತು. ಕೊನೆಯ ಕ್ಷಣದ ವರೆಗೂ ರೋಚಕತೆಯಿಂದಲೇ ಕೂಡಿದ ಪಂದ್ಯ ಪ್ರತಿ ಎಸೆತದಲ್ಲೂ ಅಭಿಮಾನಿಗಳ ಮೈ ರೋಮಾಂಚನಗೊಳಿಸುತ್ತಿತ್ತು. ಇದನ್ನೂ ಓದಿ: ಅಂದು ಗಾಯಾಳು, ಇಂದು ಮ್ಯಾಚ್ ವಿನ್ನರ್ – ಹಳೆಯ ಘಟನೆ ಬಿಚ್ಚಿಟ್ಟ ಪಾಂಡ್ಯ

    ಒತ್ತಡದ ನಡುವೆಯೂ ಬದ್ಧ ವೈರಿ ಪಾಕಿಸ್ತಾನವನ್ನು ಮಣಿಸಿದ ಟೀಂ ಇಂಡಿಯಾ ಖುಷಿಯನ್ನು ಇಡೀ ದೇಶವೇ ಸಂಭ್ರಮಿಸುತ್ತಿತ್ತು. ಇದೇ ವೇಳೆ ವಿದೇಶಗಳಲ್ಲೂ ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು. ಈ ನಡುವೆ ಅಫ್ಘಾನಿಸ್ತಾನದ ಅಭಿಮಾನಿಯೊಬ್ಬ ಟಿವಿ ಸ್ಕ್ರೀನ್‌ನಲ್ಲೇ ಹಾರ್ದಿಕ್ ಪಾಂಡ್ಯಾಗೆ ಮುತ್ತಿಡುವ ಮೂಲಕ ತನ್ನ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಸದ್ಯ ಹಾರ್ದಿಕ್ ಪಾಂಡ್ಯಗೆ ಮುತ್ತಿಡುತ್ತಿರುವ ವೀಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ಜನರು ವೀಡಿಯೋ ವೀಕ್ಷಣೆ ಮಾಡಿದ್ದಾರೆ.

    ಅಲ್ಲದೇ ಇದೇ ಏಷ್ಯಾಕಪ್ ಟೂರ್ನಿಯಲ್ಲಿ ಸ್ಪರ್ಧೆಗಿಳಿದಿರುವ ಅಫ್ಘಾನಿಸ್ತಾನ್ ಸಹ ಭಾರತ ತಂಡಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದೆ. ಇದನ್ನೂ ಓದಿ: AsiaCup: ಜಡೇಜಾ ಜಾದು, ಪಾಂಡ್ಯ ಪರಾಕ್ರಮ – ಪಾಕಿಸ್ತಾನದ ವಿರುದ್ಧ ಭಾರತಕ್ಕೆ 5 ವಿಕೆಟ್‌ಗಳ ರೋಚಕ ಜಯ

    ನಿನ್ನೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 19.5 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 147 ರನ್‌ಗಳನ್ನು ಗಳಿಸಿತ್ತು. ಅಲ್ಪ ಮೊತ್ತದ ಗುರಿ ಬೆನ್ನತ್ತಿದ ಭಾರತ 19.4 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 148 ರನ್‌ಗಳಿಸಿ ಗೆಲುವು ಸಾಧಿಸಿತು.

    Live Tv
    [brid partner=56869869 player=32851 video=960834 autoplay=true]

  • ಅಂದು ಗಾಯಾಳು, ಇಂದು ಮ್ಯಾಚ್ ವಿನ್ನರ್ – ಹಳೆಯ ಘಟನೆ ಬಿಚ್ಚಿಟ್ಟ ಪಾಂಡ್ಯ

    ಅಂದು ಗಾಯಾಳು, ಇಂದು ಮ್ಯಾಚ್ ವಿನ್ನರ್ – ಹಳೆಯ ಘಟನೆ ಬಿಚ್ಚಿಟ್ಟ ಪಾಂಡ್ಯ

    ದುಬೈ: ಸ್ಫೋಟಕ ಬ್ಯಾಟಿಂಗ್ ಹಾಗೂ ಬೌಲಿಂಗ್ ಮೂಲಕ ಮತ್ತೊಮ್ಮೆ ಭರ್ಜರಿ ಪ್ರದರ್ಶನ ನೀಡುವ ಮೂಲಕ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ತಾನು ಉತ್ತಮ ಆಲ್‌ರೌಂಡರ್ ಎಂಬುದನ್ನು ಸಾಬೀತು ಮಾಡಿದ್ದಾರೆ.

    ನಿನ್ನೆ ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಅಬ್ಬರಿಸುವ ಮೂಲಕ ಬದ್ಧವೈರಿ ಪಾಕಿಸ್ತಾನದ ವಿರುದ್ಧ ಗೆಲುವು ಸಾಧಿಸುವ ಮೂಲಕ ಟೀಂ ಇಂಡಿಯಾಕ್ಕೆ 5 ವಿಕೆಟ್‌ಗಳ ರೋಚಕ ಜಯ ತಂದುಕೊಟ್ಟರು. ಇದನ್ನೂ ಓದಿ: AsiaCup: ಜಡೇಜಾ ಜಾದು, ಪಾಂಡ್ಯ ಪರಾಕ್ರಮ – ಪಾಕಿಸ್ತಾನದ ವಿರುದ್ಧ ಭಾರತಕ್ಕೆ 5 ವಿಕೆಟ್‌ಗಳ ರೋಚಕ ಜಯ

    ಕೊನೆಯ ಓವರ್‌ನಲ್ಲಿ ಟೀಂಡಿಯಾಕ್ಕೆ 7 ರನ್‌ಗಳ ಅಗತ್ಯವಿತ್ತು. ಈ ವೇಳೆ ಪಾಕ್ ಪರ ಬೌಲಿಂಗ್ ಮಾಡಿದ ಸ್ಪಿನ್ನರ್ ಮೊಹಮ್ಮದ್ ನವಾಝ್ ಮೊದಲ ಎಸೆತದಲ್ಲೇ ಆಲ್‌ರೌಂಡರ್ ರವೀಂದ್ರ ಜಡೇಜಾರನ್ನು ಕ್ಲೀನ್ ಬೌಲ್ಡ್ ಮಾಡಿದ್ದರು. ಸಂದಿಗ್ಧ ಪರಿಸ್ಥಿತಿಯಲ್ಲಿ ಕ್ರೀಸ್‌ಗಿಳಿದ ದಿನೇಶ್ ಕಾರ್ತಿಕ್ ಒಂದು ರನ್ ಕದಿಯುವ ಮೂಲಕ ಪಾಂಡ್ಯಗೆ ಕ್ರೀಸ್ ಬಿಟ್ಟುಕೊಟ್ಟರು.

    ಕೊನೆಯ ಓವರ್ 3ನೇ ಎಸೆತದಲ್ಲಿ ಬೌಂಡರಿ ಬಾರಿಸುವ ಪ್ರಯತ್ನ ಮಾಡಿದ ಹಾರ್ದಿಕ್ ಪಾಂಡ್ಯ ಡಾಟ್‌ಬಾಲ್ ಮಾಡಿಕೊಂಡರು. ಉಳಿದ ಮೂರು ಎಸೆತಗಳಲ್ಲಿ 6 ರನ್ ಬೇಕಿದ್ದ ಟೀಂ ಇಂಡಿಯಾ ಮತ್ತಷ್ಟು ಒತ್ತಡಕ್ಕೆ ಸಿಲುಕಿತ್ತು. ಅದರೂ ಆತ್ಮವಿಶ್ವಾಸ ಕಳೆದುಕೊಳ್ಳದ ಪಾಂಡ್ಯ ಬ್ಯಾಟಿಂಗ್ ಮುಂದುವರಿಸಿ, ನಾಲ್ಕನೇ ಎಸೆತವನ್ನು ಲಾಂಗ್ ಆನ್‌ಕಡೆಗೆ ಸಿಕ್ಸರ್ ಬಾರಿಸುವ ಮೂಲಕ ಟೀಂ ಇಂಡಿಯಾ ಅವಿಸ್ಮರಣೀಯ ಗೆಲುವಿಗೆ ಕಾರಣರಾದ್ರು. ಇದನ್ನೂ ಓದಿ: ಇಂಡಿಯಾ, ಪಾಕ್ ಹೈವೋಲ್ಟೇಜ್ ಕ್ರಿಕೆಟ್- ಭಾರತ ಗೆಲುವಿಗೆ ಮುಸ್ಲಿಮರಿಂದ ವಿಶೇಷ ಪೂಜೆ

    ಬಳಿಕ ಗೆಲುವಿನ ಸಂಭ್ರಮ ಹಂಚಿಕೊಂಡ ಪಾಂಡ್ಯ, ಬೌಲಿಂಗ್ ವೇಳೆ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ಮೂಲಕ ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಬೌಲ್ ಮಾಡಬೇಕಾಗುತ್ತದೆ. ಹಾಗೆಯೇ ಶಾರ್ಟ್ ಪಿಚ್ ಮತ್ತು ಹಾರ್ಡ್ ಲೆನ್ತ್ ಬೌಲಿಂಗ್ ನನ್ನ ಸಾಮರ್ಥ್ಯ. ಇದನ್ನು ಸರಿಯಾದ ರೀತಿಯಲ್ಲಿ ಸೂಕ್ತ ಬ್ಯಾಟರ್‌ಗಳ ಎದುರು ಬಳಕೆ ಮಾಡಿಕೊಳ್ಳಬೇಕು ಎಂದಿದ್ದಾರೆ.

    ಅಲ್ಲದೇ ಪಾಕಿಸ್ತಾನ ವಿರುದ್ಧದ ಗೆಲುವನ್ನು ಸಂಭ್ರಮಿಸುತ್ತಿರುವ ವೇಳೆಯಲ್ಲೇ ಹಾರ್ದಿಕ್ ಪಾಂಡ್ಯ ತಮ್ಮ ಫೇಸ್‌ಬುಕ್ ಪುಟದಲ್ಲಿ ಎರಡು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಈ ಹಿಂದಿನ ಪಂದ್ಯವೊಂದರಲ್ಲಿ ತಾವು ಕೈಗೆ ಪೆಟ್ಟುಮಾಡಿಕೊಂಡು ಅರ್ಧಕ್ಕೆ ನಿರ್ಗಮಿಸುತ್ತಿರುವುದು ಹಾಗೂ ಪಾಕ್ ಗೆಲುವನ್ನು ಸಂಭ್ರಮಿಸುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

    ಪಾಕ್ ವಿರುದ್ಧ ಕಹಿ ಘಟನೆ ನೆನಪಿಸಿಕೊಂಡ ಪಾಂಡ್ಯ: 2018ರ ಏಷ್ಯಾಕಪ್ ನಲ್ಲಿ ಪಾಕ್ ವಿರುದ್ಧ ಸೆಣಸಾಡುತ್ತಿದ್ದ ವೇಳೆ ತಮ್ಮ ಕೊನೆಯ ಓವರ್ ಬೌಲಿಂಗ್ ಮಾಡುತ್ತಿದ್ದ ವೇಳೆ ಕೈಗೆ ಪೆಟ್ಟುಮಾಡಿಕೊಂಡು ಅರ್ಧಕ್ಕೆ ಪಂದ್ಯದಿಂದ ನಿರ್ಗಮಿಸಿದ್ದರು. ನಿನ್ನೆ ಪಾಕ್ ವಿರುದ್ಧ ಅಬ್ಬರಿಸಿ ಗೆಲುವು ಸಾಧಿಸಿದ್ದ ಬೆನ್ನಲ್ಲೇ ಮತ್ತೊಮ್ಮೆ ಪಾಂಡ್ಯ ತಮಗಾದ ಕಹಿ ಘಟನೆಯನ್ನೂ ನೆನಪಿಸಿಕೊಂಡಿದ್ದಾರೆ.

    ಇದರೊಂದಿಗೆ `ಹಿನ್ನಡೆಗಿಂತ ಪುನರ್ ಆಗಮನವೇ ಹೆಚ್ಚು’ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: AsiaCup 2022: ಮೊದಲ ಪಂದ್ಯದಲ್ಲೇ ಮುಗ್ಗರಿಸಿದ ಲಂಕಾ – ಆಫ್ಘನ್‌ಗೆ 8 ವಿಕೆಟ್‌ಗಳ ಸುಲಭ ಜಯ

    ಈ ರೀತಿಯ ರನ್ ಚೇಸ್ ಮಾಡುವಾಗ ಪ್ರತಿ ಓವರ್‌ಗೆ ಪ್ರತ್ಯೇಕ ಯೋಜನೆ ಹೊಂದಿರಬೇಕಾಗುತ್ತದೆ. ಹಾಗೆಯೇ ಎದುರಾಳಿ ತಂಡದಿಂದ ಎಡಗೈ ಸ್ಪಿನ್ನರ್ ಇರುವುದು ನನಗೆ ಗೊತ್ತಿತ್ತು. ಕೊನೇ ಓವರ್‌ನಲ್ಲಿ 7 ರನ್ ಮಾತ್ರ ಗಳಿಸಬೇಕಿತ್ತು. ಒಂದು ವೇಳೆ 15 ರನ್‌ಗಳು ಬೇಕಿದ್ದರೂ ಪಂದ್ಯ ಗೆದ್ದುಕೊಡುವ ವಿಶ್ವಾಸ ನನ್ನಲ್ಲಿ ಇತ್ತು. ಏಕೆಂದರೆ ನನ್ನೆದುರು ಬೌಲಿಂಗ್ ಮಾಡುವ ಬೌಲರ್ ಸಹ ಒತ್ತಡದಲ್ಲಿ ಇರುತಾನೆ ಎಂಬುದು ನಗೆ ಗೊತ್ತಿತ್ತು ಎಂಬ ವಿಶ್ವಾಸದ ಮಾತುಗಳನ್ನು ಆಡಿದ್ದಾರೆ.

    147 ರನ್‌ಗಳ ಗುರಿಯನ್ನು ಪಡೆದ ಭಾರತ 49.4 ಓವರ್‌ಗಳಲ್ಲಿ 148 ರನ್ ಹೊಡೆಯುವ ಮೂಲಕ ಜಯ ಸಾಧಿಸಿತು. ಬೌಲಿಂಗ್‌ನಲ್ಲಿ 25 ರನ್ ನೀಡಿ 3 ವಿಕೆಟ್ ಪಡೆದಿದ್ದ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್‌ನಲ್ಲಿ 35 ರನ್(17 ಎಸೆತ, 4 ಬೌಂಡರಿ, 1 ಸಿಕ್ಸ್) ಹೊಡೆಯುವ ಮೂಲಕ ಅರ್ಹವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

    Live Tv
    [brid partner=56869869 player=32851 video=960834 autoplay=true]