ಇಸ್ಲಾಮಾಬಾದ್: ಭಾರತದ ಮೇಲೆ ಪಾಕಿಸ್ತಾನ ನಡೆಸುತ್ತಿರುವ ಡ್ರೋನ್ ದಾಳಿಯ ಮಧ್ಯೆ ಲಾಹೋರ್ ಬಳಿ 2 ನಾಗರಿಕ ವಿಮಾನಗಳು ಕಾಣಿಸಿಕೊಂಡಿದ್ದು, ಇವುಗಳನ್ನು ಬಳಸಿಕೊಂಡು ಡ್ರೋನ್ ದಾಳಿ ನಡೆಸುತ್ತಿದೆ ಎನ್ನಲಾಗುತ್ತಿದೆ.
ಇಂದು ಸರ್ಕಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪ್ರಕಾರ, ಗುರುವಾರ ರಾತ್ರಿ ಪಾಕ್ ವಾಯುಪ್ರದೇಶ ಬಳಕೆ ಬಂದ್ ಮಾಡಿರಲಿಲ್ಲ ಹಾಗೂ ನಾಗರಿಕ ವಿಮಾನಯಾನ ಮಾಡಲು ಅವಕಾಶ ನೀಡಿರಲಿಲ್ಲ ಎಂದು ತಿಳಿಸಿತ್ತು, ಆದರೆ ದಾಳಿ ವೇಳೆ ಪಾಕಿಸ್ತಾನ ಭಾರತೀಯ ನಗರಗಳ ಮೇಲೆ ಟರ್ಕಿಶ್ ನಿರ್ಮಿತ ಡ್ರೋನ್‌ಗಳನ್ನು ಗುಟ್ಟಾಗಿ ಹಾರಿಸಿತ್ತು.
ಅಂತಾರಾಷ್ಟ್ರೀಯ ಗಡಿಯ ಸಮೀಪ ಪಾಕಿಸ್ತಾನ ಏರ್‌ಲೈನ್ಸ್ ವಿಮಾನ PIA 306 ಕರಾಚಿಯಿಂದ ಲಾಹೋರ್‌ಗೆ ತೆರಳುವಾಗ ಕಂಡುಬಂದರೆ, ಇನ್ನೊಂದು ವಿಮಾನ ABQ406, ರಾತ್ರಿ 10 ಗಂಟೆಗೆ ಪಾಕಿಸ್ತಾನದಲ್ಲಿ ಇಳಿಯಬೇಕಿತ್ತು. ಆದರೆ ಅದು ಕರಾಚಿಯಿಂದ ಲಾಹೋರ್‌ಗೆ ಹಾರಾಟ ನಡೆಸುವಾಗ ಕಂಡುಬಂದಿದೆ.ಇದನ್ನೂ ಓದಿ:ದೇಶದಲ್ಲಿಲ್ಲ ಆಹಾರ ಕೊರತೆ; ಜನರಿಗೆ ಬೇಕಿಲ್ಲ ಚಿಂತೆ
ಪಾಕ್ ನಡೆಸಿದ ದಾಳಿಯ ಪರಿಣಾಮ ಪಂಜಾಬ್‌ನ ಫಿರೋಜ್‌ಪುರದಿಂದ 12ಕಿ.ಮೀ ದೂರದಲ್ಲಿರುವ ಖೈ ಫೆಮೆ ಕಿ ಗ್ರಾಮದ ಮನೆಯೊಂದರ ಮೇಲೆ ಡ್ರೋನ್ ಬಿದ್ದಿದ್ದು, ಭಾರೀ ಸ್ಫೋಟಗೊಂಡಿದೆ. ಪರಿಣಾಮ ಕಾರಿಗೆ ಬೆಂಕಿ ತಗುಲಿದ್ದು, ಮೂವರು ಗಾಯಗೊಂಡಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ.
ಈ ಮೊದಲೇ ಆರ್ಥಿಕವಾಗಿ ಪಾತಾಳಕ್ಕೆ ಕುಸಿದಿದ್ದ ಪಾಕ್, ಆಪರೇಷನ್ ಸಿಂಧೂರದ ಬಳಿಕ ಸಾಲಕ್ಕಾಗಿ ಭಿಕ್ಷೆ ಬೇಡುವಂತಾಗಿದೆ. ಇದೀಗ ತನ್ನ ಮಿತ್ರರಾಷ್ಟ್ರಗಳ ಬಳಿ ಹಣಕಾಸಿನ ನೆರವು ನೀಡುವಂತೆ ಅಂಗಲಾಚಿದೆ. ಜೊತೆಗೆ ಅಧಿಕೃತ ಎಕ್ಸ್ ಖಾತೆಯಲ್ಲಿ ಬಹಿರಂಗವಾಗಿ ಫಂಡ್‌ಗಾಗಿ ಬೇಡಿಕೊಂಡಿದೆ. ಇನ್ನೊಂದು ಕಡೆ ಸೇನಾ ಸಂಘರ್ಷ ನಡೆಯುತ್ತಿರುವಾಗ ಪಾಕ್ ಆರ್ಥಿಕ ಸಚಿವಾಲಯ ಎಟಿಎಂ ವಿತ್‌ಡ್ರಾ ಮಿತಿಯನ್ನು ಕೇವಲ 3 ಸಾವಿರ ರೂ.ಗೆ ಇಳಿಸಿದೆ. ಪಾಕಿಸ್ತಾನದಲ್ಲಿ ಪರಿಸ್ಥಿತಿ ಸುಧಾರಿಸುವವರೆಗೂ ಬ್ಯಾಂಕ್‌ಗಳಿಂದ ಹಣ ವಿತ್ ಡ್ರಾ ಮಾಡದಂತೆ ಮನವಿ ಮಾಡುತ್ತಿದೆ.
ಆರ್ಥಿಕ ಸಂಕಷ್ಟದ ಜೊತೆಗೆ ಈಗ ಜಲಕಂಟಕವೂ ಶುರುವಾಗಿದೆ. ಭಾರಿ ಮಳೆಯಿಂದಾಗಿ ಭಾರತ ಸಲಾಲ್, ಬಗ್ಲಿಹಾರ್ ಡ್ಯಾಂನ ಹಲವು ಗೇಟ್‌ಗಳಿಂದ ನೀರು ರಿಲೀಸ್ ಮಾಡಿದೆ. ಈ ಮೂಲಕ ಚೆನಾಬ್ ನೀರು ಪಾಕಿಸ್ತಾನಕ್ಕೆ ಹರಿಯುವಂತೆ ಮಾಡಿದ್ದು, ಪಾಕಿಸ್ತಾನಕ್ಕೆ ಪ್ರವಾಹ ಭೀತಿ ಶುರುವಾಗಿದೆ.ಇದನ್ನೂ ಓದಿ: ಭಾರತ-ಪಾಕ್ ಗಡಿಯಲ್ಲಿರುವ 24 ವಿಮಾನ ನಿಲ್ದಾಣಗಳು ಮೇ 15ರವರೆಗೆ ಬಂದ್
-ರಾಜಸ್ಥಾನದ ಜೈಸಲ್ಮೇರ್‌ನಲ್ಲೂ ಪಟಾಕಿ ಮಾರಾಟ, ಖರೀದಿ ನಿಷೇಧ
ಚಂಡೀಗಢ: ಭಾರತ ಮತ್ತು ಪಾಕಿಸ್ತಾನದ (India-Pakistan) ನಡುವಿನ ಉದ್ವಿಗ್ನತೆ ಹೆಚ್ಚಾಗುತ್ತಿರುವ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಚಂಡೀಗಢ ಸರ್ಕಾರ (Chandigarh Government) 2 ತಿಂಗಳುಗಳ ಕಾಲ ಪಟಾಕಿ ನಿಷೇಧಿಸಿದೆ.
ಪಹಲ್ಗಾಮ್ ದಾಳಿಯ (Pahalgam Terrorist Attack) ಬಳಿಕ ಭಾರತ ಹಾಗೂ ಪಾಕ್ ನಡುವಿನ ಕಾದಾಟ ಹೆಚ್ಚಾಗುತ್ತಿದೆ. ಹಿಂದೂಗಳ ನರಮೇಧಕ್ಕೆ ಪ್ರತೀಕಾರವಾಗಿ `ಆಪರೇಷನ್ ಸಿಂಧೂರ’ದಡಿಯಲ್ಲಿ (Operation Sindoor) ಭಾರತೀಯ ಸೇನೆ ಪಾಕ್ ಮೇಲೆ ವಾಯುದಾಳಿ ನಡೆಸಿತ್ತು. ಬಳಿಕ ಗುರುವಾರ ರಾತ್ರಿ ಪಾಕಿಸ್ತಾನ ನಡೆಸಿದ ಕ್ಷಿಪಣಿ ದಾಳಿ ಬೆನ್ನಲ್ಲೇ ಭಾರತವು ತಕ್ಕ ಉತ್ತರ ನೀಡಿದೆ.ಇದನ್ನೂ ಓದಿ: ನಮ್ಮ ನಾಯಕ ಹೇಡಿ.. ಮೋದಿ ಹೆಸರು ಹೇಳುವುದಕ್ಕೂ ಹೆದರುತ್ತಿದ್ದಾರೆ: ತಮ್ಮ ಪ್ರಧಾನಿ ವಿರುದ್ಧವೇ ಗುಡುಗಿದ ಪಾಕ್ ಸಂಸದ
ಉಭಯ ದೇಶಗಳ ನಡುವೆ ಹೆಚ್ಚುತ್ತಿರುವ ಯುದ್ಧ ಭೀತಿ ಹಿನ್ನೆಲೆ ಇದೀಗ ಚಂಡೀಗಢ ಸರ್ಕಾರ ಎರಡು ತಿಂಗಳುಗಳ ಪಟಾಕಿ ನಿಷೇಧಿಸಿದೆ. ಮದುವೆ, ಶುಭ ಸಮಾರಂಭಗಳಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಿದೆ. ಇನ್ನೂ ರಾಜಸ್ಥಾನದ ಜೈಸಲ್ಮೇರ್‌ನಲ್ಲಿಯೂ (Jaisalmer) ಪಟಾಕಿ ಸಿಡಿಸುವುದರ ಜೊತೆಗೆ ಮಾರಾಟ ಹಾಗೂ ಖರೀದಿಯನ್ನು ನಿಷೇಧಿಸಿಲಾಗಿದೆ.
ಈ ಕುರಿತು ಚಂಡೀಗಢ ಜಿಲ್ಲಾ ಮ್ಯಾಜಿಸ್ಟ್ರೇಟ್ ನಿಶಾಂತ್ ಕುಮಾರ್ ಯಾದವ್ ಮಾತನಾಡಿ, 2023ರ ಬಿಎನ್‌ಎಸ್ (BNS) ಸೆಕ್ಷನ್ 163ರ ಅಡಿಯಲ್ಲಿ 2025ರ ಮೇ 09 ರಿಂದ ಜುಲೈ 7ರವರೆಗೆ ಪಟಾಕಿ ನಿಷೇಧಿಸಲಾಗಿದೆ ಎಂದು ಆದೇಶಿಸಿದ್ದಾರೆ.
ಮದುವೆ, ಶುಭ ಸಮಾರಂಭ ಹಾಗೂ ಧಾರ್ಮಿಕ ಹಬ್ಬಗಳಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ. ಕಾರಣ ಯುದ್ಧ ಭೀತಿಯ ಸಂದರ್ಭದಲ್ಲಿ ಈ ರೀತಿ ಪಟಾಕಿ ಶಬ್ದವು ಡ್ರೋನ್ ಹಾಗೂ ಕ್ಷಿಪಣೆ ದಾಳಿಯ ಭ್ರಮೆಯನ್ನು ಸೃಷ್ಟಿಸಿ, ಸಾರ್ವಜನಿಕರಲ್ಲಿ ಭಯ ಉಂಟು ಮಾಡುತ್ತದೆ. ಹೀಗಾಗಿ ಈ ಆದೇಶವು ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಎಲ್‌ಒಸಿಯಲ್ಲಿ ಭಾರತ-ಪಾಕ್ ಸಂಘರ್ಷ; ಭಾರತೀಯ ಯೋಧ ಹುತಾತ್ಮ
ಶ್ರೀನಗರ: ಜಮ್ಮುವನ್ನು ಗುರಿಯಾಗಿಸಿಕೊಂಡು ಮತ್ತೆ ಪಾಕಿಸ್ತಾನ ದಾಳಿ ನಡೆಸಿದ್ದು, ಕ್ಷಿಪಣಿಗಳನ್ನು ಬಳಸಿಕೊಂಡು ಹಮಾಸ್ ಸ್ಟೈಲ್‌ನಲ್ಲಿ ಪಾಕ್ ಆರ್ಮಿ ಆಟ್ಯಾಕ್ ಆರಂಭಿಸಿದೆ.
ಆದರೆ ಭಾರತದ ಏರ್ ಡಿಫೆನ್ಸ್ ಯೂನಿಟ್‌ನಿಂದ ಪಾಕ್‌ನ ಎಲ್ಲ ಕ್ಷಿಪಣಿಗಳನ್ನು ಉಡೀಸ್ ಮಾಡಿದೆ. ಇಸ್ರೇಲ್ ಮೇಲೆ ಹಮಾಸ್ ದಾಳಿಯ ಮಾದರಿಯಲ್ಲಿ ಪಾಕ್ ಅರ್ಮಿ ದಾಳಿ ನಡೆಸಿದೆ. ಆದರೆ ಭಾರತದ ದಾಳಿಗೆ ಪಾಕ್ ಆರ್ಮಿ ಆಟ ನಡೆಯದಂತಾಗಿದೆ. ದಾಳಿ ಆರಂಭವಾಗುತ್ತಿದ್ದಂತೆ ಭಾರೀ ಶಬ್ದಕ್ಕೆ ಬೆಚ್ಚಿ ಬಿದ್ದು, ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.ಇದನ್ನೂ ಓದಿ: ಜಮ್ಮು ಮೇಲೆ ಪಾಕಿಸ್ತಾನ ಕ್ಷಿಪಣಿ ದಾಳಿ ಯತ್ನ – ಮಿಸೈಲ್, ಡ್ರೋನ್ ಹೊಡೆದುರುಳಿಸಿದ ಭಾರತ
ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಜಮ್ಮುವಿನ ಮೇಲೆ ಹಾಕಿಸಿದ್ದು, ನಗರದಲ್ಲಿ ಜೋರಾಗಿ ಸ್ಫೋಟಗಳು ಕೇಳಿಬಂದಿವೆ. ದಾಳಿಗೆ ಭಾರತವು ತಕ್ಕ ಪ್ರತ್ಯುತ್ತರ ನೀಡಿದೆ. ಭಾರತದಲ್ಲಿ ಯಾವುದೇ ಹಾನಿಯಾಗಿಲ್ಲ ಎಂದು ಭಾರತೀಯ ಸೇನೆ ಸ್ಪಷ್ಟಪಡಿಸಿದೆ.
ಜಮ್ಮುವಿನಲ್ಲಿ ಜೋರಾಗಿ ಸ್ಫೋಟಗಳು ಕೇಳಿಬಂದವು. ನಂತರ ಸೈರನ್‌ಗಳ ಕೂಗು ಕೇಳಿಬಂತು. ತಕ್ಷಣ ವಿದ್ಯುತ್ ಕಡಿತವಾಯಿತು. ದಾಳಿ ಇನ್ನೂ ಮುಂದುವರಿದಿದೆ. ಪರಿಣಾಮವಾಗಿ ಸೆಲ್‌ಫೋನ್ ಸೇವೆ ಸ್ಥಗಿತಗೊಂಡಿದೆ.
ಸ್ಥಳೀಯರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ವೀಡಿಯೋಗಳಲ್ಲಿ, ಆಕಾಶದಾದ್ಯಂತ ದೀಪಗಳು ಪಸರಿಸಿದಂತೆ ದೃಶ್ಯ ಕಂಡುಬಂದಿದೆ. ಇದು ಭಾರತೀಯ ಸಶಸ್ತ್ರ ಪಡೆಗಳ ವಾಯು ರಕ್ಷಣಾ ವ್ಯವಸ್ಥೆಯಿಂದ ಪಾಕ್‌ನ ಕ್ಷಿಪಣಿಗಳು ಮತ್ತು ಡ್ರೋನ್‌ಗಳ ಹೊಡೆದುರುಳಿಸುವ ದೃಶ್ಯವಾಗಿದೆ.
300 ಕಿ.ಮೀ.ಗಿಂತಲೂ ಹೆಚ್ಚು ದೂರದಲ್ಲಿರುವ ಕುಪ್ವಾರಾ ಪಟ್ಟಣ ಮತ್ತು ಪಠಾಣ್‌ಕೋಟ್‌ನಲ್ಲೂ ಇದೇ ರೀತಿಯ ಪರಿಸ್ಥಿತಿ ಕಂಡುಬಂದಿದೆ. ಪಂಜಾಬ್‌ನ ಹತ್ತಿರದ ಪಟ್ಟಣವಾದ ಗುರುದಾಸ್ಪುರದಲ್ಲಿ ಬ್ಲ್ಯಾಕೌಟ್ ಘೋಷಿಸಲಾಯಿತು. ಅಖ್ನೂರ್‌ನ ಸಾಂಬಾದಲ್ಲಿರುವ ಅಂತರರಾಷ್ಟ್ರೀಯ ಗಡಿಯಲ್ಲಿ ಶೆಲ್ ದಾಳಿ ನಡೆದಿದೆ.ಇದನ್ನೂ ಓದಿ:ಭಯೋತ್ಪಾದನೆ ವಿರುದ್ಧ ನಾವು ನಿಮ್ಮೊಂದಿಗೆ – ಭಾರತದ ಬೆಂಬಲಕ್ಕೆ ನಿಂತ ನೇಪಾಳ
ಮಡಿಕೇರಿ: 1965ರಲ್ಲಿ ಭಾರತ-ಪಾಕ್ (Indo – Pak war 1965) ನಡುವೆ ನಡೆದ ಯುದ್ಧದಲ್ಲಿ ಶತ್ರುಗಳ ವಿಮಾನವನ್ನು ಹೊಡೆದುರುಳಿಸಿ ದೇಶಕ್ಕಾಗಿ ಪ್ರಾಣತೆತ್ತ ಕೊಡಗಿನ ಯೋಧ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರ ಸಾಹಸಗಾಥೆ ತೆರೆಯಮೇಲೆ ಬರಲು ಸಜ್ಜಾಗಿದೆ. ನೈಜ ಘಟನೆಯನ್ನಾಧರಿಸಿದ ʻಸ್ಕೈ ಫೋರ್ಸ್ʼ (Sky Force) ಬಾಲಿವುಡ್ ಸಿನಿಮಾ ಇದೇ ಜ.24 ರಂದು ತೆರೆಗೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಸೈನಿಕರ ತವರು ಜಿಲ್ಲೆ ಕೊಡಗಿನಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ.
ಕೊಡಗು ಯೋಧರ (Kodagu Soldier) ಪರಂಪರೆಯ ನಾಡು. ಪ್ರತೀ ಕುಟುಂಬದಲ್ಲಿ ಒಬ್ಬನಾದ್ರೂ ಯೋಧನಾಗಿ ದೇಶ ಸೇವೆ ಮಾಡಬೇಕು ಅನ್ನೋದು ಇಲ್ಲಿನ ಜನರ ಮನೋಭಾವ. ಈ ಪುಣ್ಯ ಭೂಮಿಯಲ್ಲಿ ಹುಟ್ಟಿ ದೇಶಕ್ಕಾಗಿ ಪ್ರಾಣಕೋಡುವ ಯೋಧರು ಕೊಡಗು ಜಿಲ್ಲೆಯಲ್ಲಿ ಇಂದಿಗೂ ಇದ್ದಾರೆ. ಈ ನಡುವೆ 1965ರಲ್ಲಿ ಭಾರತ-ಪಾಕ್ ಯುದ್ಧದಲ್ಲಿ ಶತ್ರುಗಳ ವಿಮಾನವನ್ನು ಹೊಡೆದುರುಳಿಸಿ ದೇಶಕ್ಕಾಗಿ ಬಲಿದಾನಗೈದ ಕೊಡಗಿನ ಯೋಧ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರ ಸಾಹಸಗಾಥೆ ಸಿನಿಮಾ ರೂಪದಲ್ಲಿ ತೆರೆಮೇಲೆ ಬರುತ್ತಿದೆ. ದೇಶಾದ್ಯಂತ ಚಿತ್ರ ಜ.24ರಂದು ರಿಲೀಸ್ ಆಗಲಿದೆ.
ಈ ಚಿತ್ರದಲ್ಲಿ ಪಾಕಿಸ್ತಾನದ ಸರ್ಗೋಧಾ ವಾಯುನೆಲೆ ಮೇಲೆ ಭಾರತೀಯ ವಾಯುಸೇನೆ ವೈಮಾನಿಕ ದಾಳಿ ನಡೆಸಿತು. ಇದು ಭಾರತೀಯ ವಾಯುಪಡೆಯ ಮೊದಲ ಮತ್ತು ಅತ್ಯಂತ ಮಾರಣಾಂತಿಕ ದಾಳಿ ಎಂದು ಪರಿಗಣಿಸಲಾಗಿದೆ. ಚಿತ್ರದಲ್ಲಿ ದೇಶಪ್ರೇಮದ ಜೊತೆಗೆ ಸಾಹಸ ದೃಶ್ಯಗಳಿಗೆ ಆದ್ಯತೆ ನೀಡಲಾಗಿದ್ದು, ಭಾರತೀಯ ವಾಯುಪಡೆಯ ಧೈರ್ಯದ ಪ್ರತೀಕ ಎಂಬಂತೆ ಚಿತ್ರಿಸಲಾಗಿದೆ. 1965ರ ಭಾರತ-ಪಾಕ್ ಯುದ್ಧದಲ್ಲಿ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರು ಬದುಕಿ ಹಿಂದಕ್ಕೆ ಬರುವ ಅವಕಾಶಗಳಿತ್ತು. ಆದರೂ ಜೀವದಮೇಲಿನ ಹಂಗು ತೊರೆದು, ಶತ್ರು ರಾಷ್ಟ್ರ ಪಾಕ್‌ನ ಅತ್ಯಾಧುನಿಕ ಯುದ್ಧವಿಮಾನವನ್ನು ಹೊಡೆದುರುಳಿಸಿ ಹುತಾತ್ಮರಾದರು.
ಈ ಘಟನೆಯು ಹಲವು ವರ್ಷಗಳ ಬಳಿಕ ಪಾಕ್ ಸೇನೆಯ ಅಧಿಕಾರಿಯೊಬ್ಬರನ್ನ ಬಿಬಿಸಿ ಸಂದರ್ಶನ ಮಾಡಿದಾಗ ಬೆಳಕಿಗೆ ಬಂದಿತು. ಶೌರ್ಯ ಮೆರೆದು ಹುತಾತ್ಮರಾದ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರಿಗೆ ಮರಣೋತ್ತರವಾಗಿ ಮಹಾವೀರ ಚಕ್ರ ಪುರಸ್ಕಾರ ನೀಡಲಾಯಿತು. ಇವರ ಸಾಹಸಗಾಥೆಯ ನೈಜ ಘಟನೆಯ ಚಿತ್ರವಾಗಿರುವುದರಿಂದ ಜಿಲ್ಲೆಯ ಜನರು ಹರ್ಷ ವ್ಯಕ್ತ ಪಡಿಸುತ್ತಿದ್ದಾರೆ.
ಅಜ್ಜಮಾಡ ಬಿ.ದೇವಯ್ಯ ಅವರ ಜೀವನಾಧರಿತ ಪುಸ್ತಕ ʻ1965ರ ಯುದ್ಧ ಹಾಗೂ ಮಹಾವೀರʼ ಆಧರಿಸಿ ʻಸ್ಕೈ ಫೋರ್ಸ್ʼ ಚಿತ್ರ ನಿರ್ಮಿಸಲಾಗಿದೆ. ಮ್ಯಾಡಾಕ್ ಫಿಲ್ಕ್ ಮತ್ತು ಜಿಯೋ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ದಿನೇಶ್ ವಿಜನ್, ಅಮರ್ ಕೌಶಿಕ್ ಹಾಗೂ ಜ್ಯೋತಿ ದೇಶಪಾಂಡೆ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಚಿತ್ರದಲ್ಲಿ ಸಂದೀಪ್ ಕೇವಾಲಾನಿ ಹಾಗೂ ಅಭಿಷೇಕ್ ಅನಿಲ್ ಕಪೂರ್ ಜಂಟಿಯಾಗಿ ಸಿನಿಮಾ ನಿರ್ದೇಶಿಸಿದ್ದಾರೆ. ಅಕ್ಷಯ್ ಕುಮಾರ್ (Akshay Kumar) ಹಾಗೂ ವೀರ್ ಪಹಾಡಿಯಾ ಪ್ರಮುಖ ಪಾತ್ರಗಳಲ್ಲಿದ್ದಾರೆ. ಸಾರಾ ಅಲಿ ಖಾನ್, ನಿಮ್ರತ್ ಕೌರ್ ಮತ್ತು ಶರದ್ ಕೇಳ್ಳರ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆ ಕನ್ನಡದ ಸೂಪರ್ ಹಿಟ್ ಚಿತ್ರ ʻಮುತ್ತಿನಹಾರʼ ನೋಡಿ ರಾಜ್ಯದ ನಾನಾ ಭಾಗದ ನೂರಾರು ಯುವಕರು ಸೈನ್ಯಕ್ಕೆ ಸೇರಲು ಮುಂದಾಗಿದ್ರು.