Tag: Indian women’s hockey team

  • Commonwealth Games: ಮಹಿಳಾ ಹಾಕಿ ತಂಡದ ಸಹಾಯಕ ಕೋಚ್ ಆಗಿ ಕೊಡಗಿನ ಅಂಕಿತಾ ಸುರೇಶ್ ಆಯ್ಕೆ

    Commonwealth Games: ಮಹಿಳಾ ಹಾಕಿ ತಂಡದ ಸಹಾಯಕ ಕೋಚ್ ಆಗಿ ಕೊಡಗಿನ ಅಂಕಿತಾ ಸುರೇಶ್ ಆಯ್ಕೆ

    ಮಡಿಕೇರಿ: ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್ ನಲ್ಲಿ ಜುಲೈ 28 ರಿಂದ ಆಗಸ್ಟ್ 8ರ ವರೆಗೆ ನಡೆಯಲಿರುವ 22ನೇ ಕಾಮನ್‌ವೆಲ್ತ್ ಗೇಮ್ಸ್ಗೆ ಭಾರತ ಮಹಿಳಾ ಹಾಕಿ ತಂಡದ ಸಹಾಯಕ ಕೋಚ್ ಆಗಿ ಕೊಡಗಿನ ಹಾಕಿ ಪ್ರತಿಭೆ ಅಂಕಿತಾ ಸುರೇಶ್ ಅವರು ನಿಯುಕ್ತಿಗೊಂಡಿದ್ದಾರೆ.

    ಅಂಕಿತಾ ಸುರೇಶ್ ಅವರು ಸಹಾಯಕ ಕೋಚ್ ಹೊಣೆಯೊಂದಿಗೆ ತಂಡದ ವ್ಯವಸ್ಥಾಪಕರಾಗಿಯೂ ಕಾರ್ಯ ನಿರ್ವಹಿಸಲಿದ್ದಾರೆ. 2021ರಲ್ಲಿ ಜಪಾನಿನ ಟೋಕಿಯೋದಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ ಅಂಕಿತಾ ಸುರೇಶ್ ಅವರ ಗರಡಿಯಲ್ಲಿ ಪಳಗಿದ ಭಾರತ ಮಹಿಳಾ ತಂಡದ ಹಾಕಿ ಕಲಿಗಳು ಅತ್ಯುನ್ನತ ಸಾಧನೆ ಮಾಡಿ ಭಾರತೀಯರ ಮನ ಗೆದ್ದಿದ್ದರು. ಇದನ್ನೂ ಓದಿ: ಪ್ಲೇಯಿಂಗ್ 11ನಲ್ಲಿ ಹೆಸರಿಲ್ಲ ಆದ್ರೂ ಬೌಲಿಂಗ್ ಮಾಡಿದ ಪ್ರಸಿದ್ಧ್ ಕೃಷ್ಣ!

    ಯಾರಿದು ಅಂಕಿತಾ ಸುರೇಶ್?
    ಮೂಲತಃ ಮಡಿಕೇರಿಯವರಾದ ಅಂಕಿತಾ ಸುರೇಶ್ ಸುಂಟಿಕೊಪ್ಪ ಸಮೀಪದ ಕಂಬಿಬಾಣೆಯ ಉದ್ಯಮಿ ಹೊನ್ನಂಪಾಡಿ ಸುರೇಶ್ ಕುಶಾಲಪ್ಪ ಅವರ ಪತ್ನಿ. ಈಗಾಗಲೇ ಇಂಗ್ಲೆಂಡ್ ತಲುಪಿ ತಾಲೀಮಿನಲ್ಲಿ ತೊಡಗಿರುವ ಭಾರತ ಮಹಿಳಾ ಹಾಕಿ ತಂಡವು ಮೊದಲ ಪಂದ್ಯದಲ್ಲಿ ಘಾನ ದೇಶದ ತಂಡವನ್ನು ಎದುರಿಸಲಿದೆ. ಅಂಕಿತಾ ಸುರೇಶ್ ಅವರ ಸಹಕಾರದೊಂದಿಗೆ ಭಾರತ ತಂಡ ಜಯಭೇರಿ ಬಾರಿಸಲಿ ಎಂದು ಕೊಡಗಿನ ಜನರು ಹಾರೈಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಎಫ್‍ಐಎಚ್ ಫೈನಲ್ ಗೆದ್ದ ಮಹಿಳೆಯರು – ಬಸ್ಸಿನಲ್ಲಿ ಸಂಭ್ರಮಿಸಿದ ವಿಡಿಯೋ ವೈರಲ್

    ಎಫ್‍ಐಎಚ್ ಫೈನಲ್ ಗೆದ್ದ ಮಹಿಳೆಯರು – ಬಸ್ಸಿನಲ್ಲಿ ಸಂಭ್ರಮಿಸಿದ ವಿಡಿಯೋ ವೈರಲ್

    ಹಿರೋಶೀಮಾ: ಭಾರತೀಯ ಮಹಿಳಾ ಹಾಕಿ ತಂಡ ಎಫ್‍ಐಹೆಚ್ ಸೀರಿಸ್ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದು, ಈ ಗೆಲುವನ್ನು ಆಟಗಾರ್ತಿಯರು ಸಂಭ್ರಮಿಸಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಏಷ್ಯಾನ್ ಚಾಂಪಿಯನ್ ಜಪಾನ್ ತಂಡವನ್ನು 3-1 ಗೋಲುಗಳ ಅಂತರದಿಂದ ಸೋಲಿಸುವ ಮೂಲಕ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಈ ಖುಷಿಯನ್ನು ಭಾರತ ತಂಡದ ಆಟಗಾರ್ತಿಯರು ಸಖತ್ ಜೋಶ್‍ನಲ್ಲಿ ಸಂಭ್ರಮಿಸಿದ್ದಾರೆ.

    ಪಂದ್ಯದ ಬಳಿಕ ಬಸ್ಸಿನಲ್ಲಿ ಬರುತ್ತಿದ್ದಾಗ `ಸುನೋ ಗೌರ್ ಸೆ ದುನಿಯಾ ವಾಲೋ’ ಹಿಂದಿ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ. ಈ ವೀಡಿಯೋವನ್ನು ಮೊದಲು ಹಾಕಿ ಇಂಡಿಯಾದ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

    ಭಾರತೀಯ ಹಾಕಿ ಮಹಿಳಾ ತಂಡದ ಆಟಗಾರ್ತಿಯರು ಸಂಭ್ರಮಿಸಿರುವ ವಿಡಿಯೋ ಸದ್ಯ ಎಲ್ಲೆಡೆ ಸಖತ್ ವೈರಲ್ ಆಗಿದೆ.

    ಭಾರತದ ಕೀರ್ತಿಯನ್ನು ಹೆಚ್ಚಿಸಿದ ತಂಡದ ಆಡಗಾರ್ತಿಯರ ಆಟಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ತಂಡವನ್ನು ಅಭಿನಂದಿಸಿದ್ದಾರೆ.

    ಫೈನಲ್ ಪ್ರವೇಶಿಸುವ ಮೂಲಕ ಭಾರತ ಮತ್ತು ಜಪಾನ್ 2020 ಒಲಿಂಪಿಕ್ಸ್ ಅರ್ಹತಾ ಪಂದ್ಯಗಳ ಅಂತಿಮ ಸುತ್ತಿಗೆ ಅರ್ಹತೆ ಗಳಿಸಿಕೊಂಡಿವೆ.