Tag: indian woman

  • ಮುಂಬೈ ವಿಮಾನ ನಿಲ್ದಾಣದಲ್ಲಿ 62.6 ಕೋಟಿ ಮೌಲ್ಯದ ಕೊಕೇನ್ ವಶಕ್ಕೆ – ಭಾರತೀಯ ಮಹಿಳೆ ಅರೆಸ್ಟ್

    ಮುಂಬೈ ವಿಮಾನ ನಿಲ್ದಾಣದಲ್ಲಿ 62.6 ಕೋಟಿ ಮೌಲ್ಯದ ಕೊಕೇನ್ ವಶಕ್ಕೆ – ಭಾರತೀಯ ಮಹಿಳೆ ಅರೆಸ್ಟ್

    ಮುಂಬೈ: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Mumbai International Airport) 62.6 ಕೋಟಿ ರೂ. ಮೌಲ್ಯದ ಕೊಕೇನ್ ವಶಕ್ಕೆ ಪಡೆಯಲಾಗಿದ್ದು, ಈ ಸಂಬಂಧ ಕಂದಾಯ ಗುಪ್ತಚರ ಇಲಾಖೆಯ ಅಧಿಕಾರಿಗಳು ಓರ್ವ ಭಾರತೀಯ ಮಹಿಳೆಯನ್ನು ಬಂಧಿಸಿದ್ದಾರೆ.

    ಜು.14ರಂದು ಬಂಧಿತ ಮಹಿಳೆ ದೋಹಾದಿಂದ ಮುಂಬೈ ಬಂದಿಳಿದಿದ್ದರು. ಈ ವೇಳೆ ಗುಪ್ತಚರ ಮಾಹಿತಿ ಮೇರೆಗೆ ಡಿಆರ್‌ಐ ಅಧಿಕಾರಿಗಳು (DRI) ಪರಿಶೀಲನೆ ನಡೆಸಿದಾಗ 6 ಬಿಸ್ಕಟ್‌ ಬಾಕ್ಸ್ ಹಾಗೂ ಮೂರು ಚಾಕೋಲೇಟ್ ಬಾಕ್ಸ್‌ಗಳು ಪತ್ತೆಯಾಗಿವೆ. ಈ 9 ಬಾಕ್ಸ್‌ಗಳಲ್ಲಿ ಕೊಕೇನ್ ಎಂದು ಹೇಳಲಾದ ಬಿಳಿ ಪುಡಿಯ ವಸ್ತು ತುಂಬಿದ ಕ್ಯಾಪ್ಸುಲ್‌ಗಳ ಪತ್ತೆಯಾಗಿವೆ.ಇದನ್ನೂ ಓದಿ: ಕರ್ನಾಟಕಕ್ಕಿಂತ ಕಡಿಮೆ – ಆಂಧ್ರದಲ್ಲಿ ಮದ್ಯದ ದರ ಭಾರೀ ಇಳಿಕೆ

    ಪತ್ತೆಯಾದ ವಸ್ತುವನ್ನು ಸ್ಥಳದಲ್ಲಿಯೇ ಕಿಟ್‌ಗಳನ್ನು ಬಳಸಿ ಪರೀಕ್ಷೆಗೊಳಪಡಿಸಿದಾಗ ಕೊಕೇನ್ ಎಂದು ದೃಢಪಟ್ಟಿದೆ. ಈ ಮೂಲಕ ಸುಮಾರು 62.6 ಕೋಟಿ ರೂ. ಮೌಲ್ಯದ 6,261 ಗ್ರಾಂ ಕೊಕೇನ್ ಇರುವ 300 ಕ್ಯಾಪ್ಸುಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಸದ್ಯ 1985ರ ಮಾದಕ ದ್ರವ್ಯಗಳು ಕಾಯ್ದೆಯಡಿ ಮಹಿಳೆಯನ್ನು ಬಂಧಿಸಿ, ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

    ಇದಕ್ಕೂ ಮುನ್ನ ಜುಲೈ 8ರಂದು, ಡಿಆರ್‌ಐ ಅಧಿಕಾರಿಗಳು ತಿರುಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುಮಾರು 12 ಕೋಟಿ ರೂ. ಮೌಲ್ಯದ ಉನ್ನತ ದರ್ಜೆಯ ಹೈಡ್ರೋಪೋನಿಕ್ ಗಾಂಜಾವನ್ನು ಜಪ್ತಿ ಮಾಡಿದ್ದರು. ಪರಿಶೀಲನೆ ವೇಳೆ ಅಚ್ಚುಕಟ್ಟಾಗಿ ಪ್ಯಾಕ್ ಮಾಡಲಾದ 28 ಮಾದಕ ವಸ್ತುಗಳ ಬ್ಯಾಗ್‌ನ್ನು ವಶಪಡಿಸಿಕೊಂಡಿದ್ದರು.ಇದನ್ನೂ ಓದಿ: ಶೈನ್ ಶೆಟ್ಟಿ, ಅಂಕಿತ ಅಮರ್ ಚಿತ್ರಕ್ಕೆ ಸೆನ್ಸಾರ್ ಅಸ್ತು

  • US ಏವಿಯೇಷನ್ ಮ್ಯೂಸಿಯಂನಲ್ಲಿ ಸ್ಥಾನ ಪಡೆದ ಭಾರತದ ಮೊದಲ ಮಹಿಳಾ ಪೈಲಟ್

    US ಏವಿಯೇಷನ್ ಮ್ಯೂಸಿಯಂನಲ್ಲಿ ಸ್ಥಾನ ಪಡೆದ ಭಾರತದ ಮೊದಲ ಮಹಿಳಾ ಪೈಲಟ್

    ವಾಷಿಂಗ್ಟನ್/ನವದೆಹಲಿ: ಉತ್ತರಧ್ರುವದಲ್ಲಿ ವಿಮಾನ ಹಾರಿಸಿ ವಿಶೇಷ ಸಾಧನೆ ಮಾಡಿದ ಭಾರತದ ಮೊದಲ ಮಹಿಳಾ ಪೈಲಟ್ ಅಮೆರಿಕದ ಏವಿಯೇಷನ್ ವಸ್ತು ಸಂಗ್ರಹಾಲಯದಲ್ಲಿ ಸ್ಥಾನ ಪಡೆದು ದಾಖಲೆ ನಿರ್ಮಿಸಿದ್ದಾರೆ.

    ಏರ್ ಇಂಡಿಯಾದ ಹಿರಿಯ ಪೈಲಟ್ (ಬೋಯಿಂಗ್-777 ವಿಮಾನ) ಕ್ಯಾಪ್ಟನ್ ಜೋಯಾ ಅಗರ್ವಾಲ್ ಅವರು, ಉತ್ತರ ಧ್ರುವ (ಉತ್ತರ ಗೋಳಾರ್ಧದಲ್ಲಿ ಭೂಮಿಯ ತಿರುಗುವಿಕೆಯ ಅಕ್ಷವು ಅದರ ಮೇಲ್ಮೈಯನ್ನು ಸಂಧಿಸುವ ಬಿಂದು)ದ ಮೇಲೆ ವಿಮಾನ ಹಾರಿಸಿದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ. 16,000 ಕಿಮೀ ಕ್ರಮಿಸಿ ದಾಖಲೆ ನಿರ್ಮಿಸಿದ್ದು, SFO ಏವಿಯೇಷನ್ ಮ್ಯೂಸಿಯಂನಲ್ಲಿ ಸ್ಥಾನ ಗಳಿಸಿದ್ದಾರೆ. ಇದನ್ನೂ ಓದಿ: 11 ರಾಜ್ಯಗಳಲ್ಲಿ ಮಹಿಳೆಯರೇ ಹೆಚ್ಚು ಸೆಕ್ಸ್ ಪಾಲುದಾರರನ್ನು ಹೊಂದಿದ್ದಾರೆ: ವರದಿ

    ಜೋಯಾ ಅಗರ್ವಾಲ್ ನೇತೃತ್ವದ ಏರ್ ಇಂಡಿಯಾದ ಮಹಿಳಾ ಪೈಲಟ್ ತಂಡವು 2021 ರಲ್ಲಿ ಮೊದಲ ಬಾರಿಗೆ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದಲ್ಲಿರುವ ಸ್ಯಾನ್ ಫ್ರಾನ್ಸಿಸ್ (SFO) ನಿಂದ ಭಾರತದ ಬೆಂಗಳೂರು ನಗರಕ್ಕೆ ವಿಶ್ವದ ಅತಿ ಉದ್ದದ ವಿಮಾನ ಮಾರ್ಗವನ್ನು ಕ್ರಮಿಸಿತ್ತು. ಏರ್‌ಇಂಡಿಯಾ ಮಹಿಳೆಯರ ಈ ಸಾಧನೆಯಿಂದ ಪ್ರಭಾವಿತವಾದ ಯುಎಸ್ ಮೂಲದ ಏವಿಯೇಷನ್ ತನ್ನ ಮ್ಯೂಸಿಯಂನಲ್ಲಿ ಸ್ಥಾನ ನೀಡಿದೆ. ಇದನ್ನೂ ಓದಿ: ಫಿನ್‌ಲ್ಯಾಂಡ್ ಪ್ರಧಾನಿಯ ಖಾಸಗಿ ವೀಡಿಯೋ ಲೀಕ್ – ಮುಚ್ಚಿಡಲು ಏನೂ ಇಲ್ಲವೆಂದ ಮರಿನ್

    ಈ ಸಂತಸವನ್ನು ಹಂಚಿಕೊಂಡಿರುವ ಕ್ಯಾಪ್ಟನ್ ಜೋಯಾ ಅಗರ್ವಾಲ್, ಯುಎಸ್‌ನ ಮ್ಯೂಸಿಯಂನಲ್ಲಿ ನಾನೊಬ್ಬಳೇ ಅಲ್ಲಿರುವ ಏಕೈಕ ಜೀವಂತ ವಸ್ತು. ಅದನ್ನು ಕಂಡು ನನಗೆ ಆಶ್ಚರ್ಯವಾಯಿತು. ಸದ್ಯ ಯುಸ್‌ನ ಪ್ರತಿಷ್ಟಿತ ವಾಯುಯಾನ ಮ್ಯೂಸಿಯಂನ ಭಾಗವಾಗಿದ್ದೇನೆ. ನಾನು ಅದಕ್ಕೆ ಪ್ರಾಮಾಣಿಕಳಾಗಿರುತ್ತೇನೆ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸುಖವಾಗಿರಬಹುದೆಂದು ಪತಿ ಜೊತೆಗೆ ವಿದೇಶಕ್ಕೆ ಹೋದ್ಲು – ಕಿರುಕುಳ ತಡೆಯದೆ ಮಸಣ ಸೇರಿದ್ಲು

    ಸುಖವಾಗಿರಬಹುದೆಂದು ಪತಿ ಜೊತೆಗೆ ವಿದೇಶಕ್ಕೆ ಹೋದ್ಲು – ಕಿರುಕುಳ ತಡೆಯದೆ ಮಸಣ ಸೇರಿದ್ಲು

    ಅಲ್ಬನಿ: ಪತಿ ಜೊತೆ ನ್ಯೂಯಾರ್ಕ್‍ನಲ್ಲಿದ್ದ ಭಾರತೀಯ ಮೂಲದ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಭಾರೀ ಸದ್ದು ಮಾಡುತ್ತಿದೆ.

    ನ್ಯೂಯಾರ್ಕ್ ನಿವಾಸಿಯಾಗಿರುವ 30 ವರ್ಷದ ಭಾರತೀಯ ಮೂಲದ ಮಹಿಳೆ ಮಂದೀಪ್ ಕೌರ್ ಅವರು ಎಂಟು ವರ್ಷಗಳ ಕಾಲ ಆಕೆಯ ಪತಿ ರಂಜೋಧಬೀರ್ ಸಿಂಗ್ ಸಂಧು ಅವರಿಂದ ಪದೇ ಪದೇ ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದರು. ಪರಿಣಾಮ ಪತಿಯ ಕಿರಿಕುಳ ತಡೆಯಲಾದೆ ಆಗಸ್ಟ್ 3 ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೌರ್ ಅವರಿಗೆ ನಾಲ್ಕು ಮತ್ತು ಆರು ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದು ಅವರನ್ನು ಅಗಲಿದ್ದಾರೆ. ಇದನ್ನೂ ಓದಿ: 3 ಆ್ಯಪ್‍ಗಳನ್ನು ರಚಿಸಿ ಗಿನ್ನಿಸ್ ದಾಖಲೆ ಮಾಡಿದ 12 ವರ್ಷದ ಪೋರ

    ಪ್ರಸ್ತುತ ಪೊಲೀಸರು ಸಂಧು ಅವರನ್ನು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ಮಾಡುತ್ತಿದ್ದಾರೆ. ಪುತ್ರಿಯರು ನ್ಯೂಯಾರ್ಕ್‍ನ ರಿಚ್ಮಂಡ್ ಹಿಲ್‍ನಲ್ಲಿದ್ದಾರೆ. ಅವರ ಕುಟುಂಬ ಉತ್ತರ ಪ್ರದೇಶದ ಬಿಜ್ನೋರ್‌ನಿಂದ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    @TheKaurMovement ಎಂಬ ಇನ್‍ಸ್ಟಾ ಪೇಜ್ ಕ್ರಿಯೇಟ್ ಮಾಡಿ ಪ್ರತಿಭಟನೆಕಾರರು ಜಸ್ಟಿಸ್‍ಗಾಗಿ ಹೋರಾಟ ಮಾಡುತ್ತಿದ್ದಾರೆ. ಈ ಪೇಜ್ ವೀಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ಕೌರ್ ತನ್ನ ವೈವಾಹಿಕ ಜೀವನದುದ್ದಕ್ಕೂ ಹಿಂಸೆ ಮತ್ತು ನಿಂದನೆಯನ್ನು ಅನುಭವಿಸಿದ್ದಾಳೆ. ತನ್ನ ಮೂಗೇಟುಗಳು ಮತ್ತು ರಕ್ತ ಹೆಪ್ಪುಗಟ್ಟುವಿಕೆಯನ್ನು ತೋರಿಸುತ್ತಾ, ತನ್ನ ಅತ್ತೆ ಹೇಗೆ ನಿಂದನೆಯನ್ನು ಪ್ರೋತ್ಸಾಹಿಸುತ್ತಿದ್ದರು ಎಂಬುದನ್ನು ವಿವರಿಸಿದ್ದಾಳೆ.

     

    View this post on Instagram

     

    A post shared by The Kaur Movement (@thekaurmovement)

    ವೀಡಿಯೋದಲ್ಲಿ ಏನಿದೆ?
    ನನಗೆ ನಿಜವಾಗಿಯೂ ತುಂಬಾ ದುಃಖವಾಗಿದೆ. ನಾನು ಮದುವೆಯಾಗಿ ಎಂಟು ವರ್ಷಗಳಾಯಿತು. ನಾನು ನನ್ನ ಕೈಲಾದಷ್ಟು ಪ್ರಯತ್ನಿಸಿದೆ. ನಾನು ಪ್ರತಿದಿನ ಅವನ ಹೊಡೆತಗಳನ್ನು ಅನುಭವಿಸುತ್ತಿದ್ದೇನೆ. ಅವನು ಒಂದು ದಿನ ಸುಧಾರಿಸುತ್ತಾನೆ ಎಂದು ತಿಳಿದುಕೊಂಡಿದ್ದೆ. ಆದರೆ ಇಲ್ಲ, ಅವನು ಎಂದೂ ಸುಧಾರಿಸುವುದಿಲ್ಲ. ಅಲ್ಲದೇ ಅವನು ಅಕ್ರಮ ಸಂಬಂಧವನ್ನು ಹೊಂದಿದ್ದಾನೆ. ನಾವು ಮೊದಲ ಎರಡೂವರೆ ವರ್ಷ ಭಾರತದಲ್ಲಿ ವಾಸಿಸುತ್ತಿದ್ದೆವು. ಅದು ನರಕವಾಗಿತ್ತು ಎಂದು ವಿವರಿಸಿದ್ದಾರೆ. ಇದನ್ನೂ ಓದಿ:  ವರಮಹಾಲಕ್ಷ್ಮಿ ಪೂಜೆ ಮಾಡಿ ಸಾಮರಸ್ಯಕ್ಕೆ ಸಾಕ್ಷಿಯಾದ ಮುಸ್ಲಿಂ ಕುಟುಂಬ 

    ನನ್ನ ತಂದೆ ಪೊಲೀಸ್ ಕೇಸ್ ದಾಖಲಿಸಿದ್ದರು. ನಂತರ ಅವನು ನನ್ನನ್ನು ಉಳಿಸಿ, ನನ್ನನ್ನು ಉಳಿಸಿ ಎಂದು ಬೇಡಿಕೊಳ್ಳಲು ಪ್ರಾರಂಭಿಸಿದ. ನಾನು ಅವನನ್ನು ಉಳಿಸಿದೆ. ನಾನು ಎಲ್ಲವನ್ನೂ ಸರಿಮಾಡಲು ಪ್ರಯತ್ನಿಸಿದೆ, ಆದರೆ ನನ್ನ ಅತ್ತೆ ನನಗೆ ಏನು ಸಹಾಯ ಮಾಡಲಿಲ್ಲ. ಆದರೆ ಇದಕ್ಕೆಲ್ಲ ದೇವರು ಉತ್ತರ ತೋರಿಸುತ್ತಾನೆ. ನಾನು ಏನನ್ನೂ ಹೇಳುವುದಿಲ್ಲ. ದೇವರು ಎಲ್ಲರನ್ನು ಶಿಕ್ಷಿಸುತ್ತಾನೆ. ಆದರೆ ಈಗ ನಾನು ಅಸಹಾಯಕಿಯಾಗಿದ್ದೇನೆ. ನಾನು ನನ್ನ ಮಕ್ಕಳನ್ನು ಬಿಟ್ಟು ಈಗ ಹೋಗಬೇಕಾಗಿದೆ ಎಂದು ವೀಡಿಯೋದಲ್ಲಿ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನೆದರ್‌ಲ್ಯಾಂಡ್‌ನ ಅಮೆರಿಕ ರಾಯಭಾರಿಯಾಗಿ ಭಾರತ ಮೂಲದ ಮಹಿಳೆ ನಾಮನಿರ್ದೇಶನ

    ನೆದರ್‌ಲ್ಯಾಂಡ್‌ನ ಅಮೆರಿಕ ರಾಯಭಾರಿಯಾಗಿ ಭಾರತ ಮೂಲದ ಮಹಿಳೆ ನಾಮನಿರ್ದೇಶನ

    ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಶುಕ್ರವಾರ ನೆದರ್‌ಲ್ಯಾಂಡ್‌ನ ಅಮೆರಿಕ ರಾಯಭಾರಿಯಾಗಿ ಭಾರತ ಮೂಲದ ಸಾಮಾಜಿಕ ಕಾರ್ಯಕರ್ತೆ ಶೆಫಾಲಿ ರಜ್ದಾನ್ ದುಗ್ಗಾಲ್(Shefali Razdan Duggal) ಅವರನ್ನು ನಾಮನಿರ್ದೇಶನ ಮಾಡಿದ್ದಾರೆ.

    ಭಾರತದ ಕಾಶ್ಮೀರ ಮೂಲದ ಶೆಫಾಲಿ ತಮ್ಮ ಚಿಕ್ಕ ಪ್ರಾಯದಲ್ಲೇ ಅಮೆರಿಕಗೆ ಹೋಗಿ, ಅಲ್ಲಿ ಸಿನ್ಸಿನಾಟಿ, ಚಿಕಾಗೊ, ನ್ಯೂಯಾರ್ಕ್ ಹಾಗೂ ಬೋಸ್ಟನ್ ನಗರಗಳಲ್ಲಿ ಬೆಳೆದರು.

    ಶೆಫಾಲಿ ತಮ್ಮ 50ನೇ ವಸಂತದಲ್ಲಿದ್ದು, ಇಬ್ಬರು ಮಕ್ಕಳ ತಾಯಿಯಾಗಿದ್ದಾರೆ. ಇವರು ಅನುಭವಿ ರಾಜಕೀಯ ಕಾರ್ಯಕರ್ತೆ, ಮಹಿಳಾ ಹಕ್ಕುಗಳ ವಕೀಲೆ ಹಾಗೂ ಮಾನವ ಹಕ್ಕುಗಳ ಪ್ರಚಾರಕಿ ಎಂದು ಶ್ವೇತಭವನ ಶುಕ್ರವಾರ ತಿಳಿಸಿದೆ. ಇದನ್ನೂ ಓದಿ: ದಿ ಕಾಶ್ಮೀರ್ ಫೈಲ್ಸ್ ಸಿನಿಮಾ: ಕ್ಷಮೆ ಕೋರಿದ ಪ್ರಕಾಶ್ ಬೆಳವಾಡಿ

    ಸ್ಯಾನ್ ಫ್ರಾನ್ಸಿಸ್ಕೋ ಸಮಿತಿಯ ಸದಸ್ಯೆಯಾಗಿರುವ ದುಗ್ಗಾಲ್ ವಾಕ್ ಫಾರೆಸ್ಟ್ ವಿಶ್ವವಿದ್ಯಾಲಯದ ಲೀಡರ್‌ಶಿಪ್, ಕ್ಯಾರೆಕ್ಟರ್ ಕೌನ್ಸಿಲ್‌ನ ಸದಸ್ಯರೂ ಆಗಿದ್ದಾರೆ. ರಾಷ್ಟ್ರೀಯ ನಾಮನಿರ್ದೇಶಕರ ಮಂಡಳಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್‌ ಮೇಯರ್‌ ಕಿಡ್ನಾಪ್ ಮಾಡಿದ ರಷ್ಯಾ ಸೇನೆ

    ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ಎಮ್‌ಎ ಪೊಲಿಟಿಕಲ್ ಕಮ್ಯೂನಿಕೇಶನ್ (ರಾಜಕೀಯ ಸಂವಹನ) ಪದವೀಧರರಾಗಿರುವ ಶೆಫಾಲಿ, ಮಿಯಾಮಿ ವಿಶ್ವವಿದ್ಯಾಲಯದಲ್ಲಿ ಮಾಸ್ ಕಮ್ಯುನಿಕೇಶನ್ (ಸಮೂಹ ಸಂವಹನ) ವ್ಯಾಸಂಗವನ್ನೂ ಮಾಡಿದ್ದಾರೆ.

    ಶೆಫಾಲಿ 2008ರಲ್ಲಿ ಬರಾಕ್ ಒಬಾಮಾ ಅವರ ಅಧ್ಯಕ್ಷೀಯ ಪ್ರಚಾರದಲ್ಲಿ ಸಕ್ರಿಯರಾಗಿದ್ದರು. ಹಿಲರಿ ಕ್ಲಿಂಟನ್‌ರ ಅಧ್ಯಕ್ಷೀಯ ಪ್ರಚಾರದೊಂದಿಗೂ ಸಂಬಂಧ ಹೊಂದಿದ್ದರು. ಹೀಗೆ ರಾಜಕೀಯ ಪ್ರಚಾರ ಕಾರ್ಯದಲ್ಲಿ ಸಕ್ರಿಯರಾಗಿದ್ದ ಇವರನ್ನು ಉತ್ತರ ಕ್ಯಾಲಿಫೋರ್ನಿಯಾ ಸ್ಟೀರಿಂಗ್ ಸಮಿತಿ ಹಾಗೂ ವುಮೆನ್ ಫಾರ್ ಹಿಲರಿ ಸಮಿತಿಯ ಸದಸ್ಯರನ್ನಾಗಿ ಮಾಡಲಾಗಿತ್ತು.

  • ಭಾರತ ಮೂಲದ ಯುವತಿಯೊಂದಿಗೆ ಮ್ಯಾಕ್ಸ್‌ವೆಲ್ ಡೇಟಿಂಗ್

    ಭಾರತ ಮೂಲದ ಯುವತಿಯೊಂದಿಗೆ ಮ್ಯಾಕ್ಸ್‌ವೆಲ್ ಡೇಟಿಂಗ್

    ನವದೆಹಲಿ: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಲ್‍ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಭಾರತ ಮೂಲದ ಯುವತಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ.

    ಮ್ಯಾಕ್ಸ್‌ವೆಲ್ ವಿನಿ ರಾಮನ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ. ಮಿನಿ ರಾಮನ್ ಮ್ಯಾಕ್ಸ್‌ವೆಲ್ ಜೊತೆಗಿನ ಹಾಟ್ ಫೋಟೋಗಳನ್ನುತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

    https://www.instagram.com/p/BuYXAL9Fqgk/

    ಪಾಕಿಸ್ತಾನ ಕ್ರಿಕೆಟ್ ತಂಡದ ವೇಗಿ ಹಸನ್ ಅಲಿ ಭಾರತದ ಶಮಿಯಾ ಅಝ್ರೂ ಅವರನ್ನು ಆಗಸ್ಟ್ 20ರಂದು ದುಬೈನಲ್ಲಿ ವಿವಾಹವಾಗಿದ್ದರು. ಈ ಬೆನ್ನಲ್ಲೇ ಮ್ಯಾಕ್ಸ್‌ವೆಲ್ ಭಾರತದ ಯುವತಿಯೊಂದಿಗೆ ಡೇಟಿಂಗ್ ನಡೆಸಿರುವ ಸುದ್ದಿ ರಿವೀಲ್ ಆಗಿದೆ.

    ಭಾರತದಲ್ಲಿ ಜನಿಸಿರುವ ವಿನಿ ರಾಮನ್ ಮೆಲ್ಬೋರ್ನ್ ನಲ್ಲಿ ನೆಲೆಸಿದ್ದು, ಫಾರ್ಮಸಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ವಿನಿ ಹಾಗೂ ಮ್ಯಾಕ್ಸ್‌ವೆಲ್ ಎರಡು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಆದರೆ ಈ ಜೋಡಿ ಮದುವೆಯಾಗುವ ಬಗ್ಗೆ ಎಲ್ಲಿಯೂ ಹೇಳಿಕೊಂಡಿಲ್ಲ.

    ಈ ಹಿಂದೆ ಆಸ್ಟ್ರೇಲಿಯಾದ ಮಾಜಿ ಬೌಲರ್ ಶಾನ್ ಟೈಟ್ ಒಂದು ವರ್ಷದ ಡೇಟಿಂಗ್ ನಂತರ 2014ರಲ್ಲಿ ರೂಪದರ್ಶಿ, ವೈನ್ ಉದ್ಯಮಿ ಮಶೂಮ್ ಸಿಂಘಾ ಅವರನ್ನು ವಿವಾಹವಾಗಿದ್ದರು. ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರು 2010ರಲ್ಲಿ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರನ್ನು ವಿವಾಹವಾಗಿದ್ದು, ಕಳೆದ ವರ್ಷ ಗಂಡು ಮಗುವನ್ನು ಜನ್ಮ ನೀಡಿದ್ದಾರೆ.

  • ತುಂಬು ಗರ್ಭಿಣಿ ಮೇಲೆ ಬಾಣ ಬಿಟ್ಟ ದುಷ್ಕರ್ಮಿಗಳು- ಪವಾಡ ರೀತಿಯಲ್ಲಿ ಮಗು ಪಾರು!

    ತುಂಬು ಗರ್ಭಿಣಿ ಮೇಲೆ ಬಾಣ ಬಿಟ್ಟ ದುಷ್ಕರ್ಮಿಗಳು- ಪವಾಡ ರೀತಿಯಲ್ಲಿ ಮಗು ಪಾರು!

    ಲಂಡನ್: ಭಾರತೀಯ ಮೂಲದ ಗರ್ಭಿಣಿಯ ಮೇಲೆ ಲಂಡನ್ ನಲ್ಲಿ ದುಷ್ಕರ್ಮಿಗಳು ಬಿಲ್ಲು-ಬಾಣದಿಂದ ದಾಳಿ ಮಾಡಿದ ಮನಕಲಕುವ ಘಟನೆಯೊಂದು ನಡೆದಿದೆ.

    ಈ ಘಟನೆ ಸೋಮವಾರ ಸಂಜೆ ಪೂರ್ವ ಲಂಡನ್ ನ ಇಲ್ಫೋರ್ಡ್ ಪ್ರದೇಶದಲ್ಲಿ ನಡೆದಿದ್ದು, ಮೃತ ಗರ್ಭಿಣಿಯನ್ನು 35 ವರ್ಷದ ದೇವಿ ಉನ್ಮಥಲ್ಲೆಗಡೋ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಹೊಟ್ಟೆಯಲ್ಲಿದ್ದ ಮಗು ಪವಾಡವೆಂಬಂತೆ ಪಾರಾಗಿದೆ.

    ಏನಿದು ಘಟನೆ?:
    ತಾವು ವಾಸಿಸುತ್ತಿದ್ದ ಪ್ರದೇಶದ ಶೆಡ್ ನಲ್ಲಿ ದುಷ್ಕರ್ಮಿಗಳು ಅಡಗಿ ಕುಳಿತಿದ್ದರು. ಈ ವಿಚಾರ ನನ್ನ ಗಮನಕ್ಕೆ ಬಂದ ಕೂಡಲೇ ನಾನು ನನ್ನ ಪತ್ನಿ ಹಾಗೂ ಮಕ್ಕಳಿಗೆ ಎಚ್ಚರಿಕೆಯಲ್ಲಿರುವಂತೆ ಹೇಳಲು ಮನೆಗೆ ಓಡಿದೆ. ಆದ್ರೆ ಅದಾಗಲೇ ದುಷ್ಕರ್ಮಿಗಳು ಆಕೆಯ ಮೇಲೆ ಬಿಲ್ಲು-ಬಾಣ ಪ್ರಯೋಗಿಸಿದ್ದಾರೆ.

    ದುಷ್ಕರ್ಮಿಗಳು ಬಿಟ್ಟ ಬಾಣ ಆಕೆಯ ಹೃದಯ, ಕಿಬ್ಬೊಟ್ಟೆಗೆ ಚುಚ್ಚಿದ್ದು, ಗಂಭೀರ ಗಾಯಗಳಾಗಿತ್ತು. ಪರಿಣಾಮ ತೀವ್ರ ರಕ್ತಸ್ರಾವ ಉಂಟಾಗಿ ಆಕೆ ಕುಸಿದು ಬಿದ್ದಿದ್ದಳು. ಇದನ್ನು ಕಂಡು ದಂಗಾದ ನಾನು ಆಕೆಯನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದೆ. ಆದ್ರೆ ಅದಾಗಲೇ ಆಕೆ ಮೃತಪಟ್ಟಿದ್ದಾಳೆಂದು ವೈದ್ಯರು ತಿಳಿಸಿದ್ದು, ಮಗು ಅಪಾಯದಿಂದ ಪಾರಾಗಿದೆ ಅಂತ ಹೇಳಿದ್ದಾರೆ. ಆದ್ರೆ ಆಕೆಯ ಮೇಲೆ ಚುಚ್ಚಿದ್ದ ಬಾಣವನ್ನು ವೈದ್ಯರು ಹೊರತೆಗೆಯಲಿಲ್ಲ. ಯಾಕಂದ್ರೆ ಇದರಿಂದ ಮಗುವಿಗೆ ತೊಂದರೆಯಾಗುವ ಸಾಧ್ಯತೆಗಳಿತ್ತು.

    ಸದ್ಯ ಮಗುವನ್ನು ಪತ್ನಿಯ ಹೊಟ್ಟೆಯಿಂದ ಹೊರ ತೆಗೆದು ಚಿಕಿತ್ಸೆ ನೀಡಲಾಗುತ್ತಿದ್ದು, ಮಗು ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದೆ ಅಂತ 2ನೇ ಪತಿ ಇಮ್ತಿಯಾಜ್ ಮಾಹಿತಿ ನೀಡಿದ್ದಾರೆ.

    ಸನಾ ಒಬ್ಬಳು ಒಳ್ಳೆಯ ತಾಯಿ ಹಾಗೂ ಪತ್ನಿಯಾಗಿದ್ದಾಳೆ. ನಾವಿಬ್ಬರೂ ಕಳೆದ 7 ವರ್ಷಗಳಿಂದ ಜೊತೆಯಾಗಿದ್ದೇವೆ. ಸದ್ಯ ಇದೀಗ ಪತ್ನಿ ನನ್ನ ಜೊತೆ ಇಲ್ಲವೆಂದಾಗ ನಿಜಕ್ಕೂ ನನಗೆ ಆಘಾತವಾಗಿದೆ ಅಂತ ಇಮ್ತಿಯಾಜ್ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಇಮ್ತಿಯಾಜ್ ಕೆಲ ದೂರದಿಂದಲೇ ಕೂಗುತ್ತಾ ಬರುತ್ತಿದ್ದ ಅಂತ ಘಟನೆಯ ಬಳಿಕ ನೆರೆಹೊರೆಯವರು ಪೊಲೀಸರಿಗೆ ತಿಳಿಸಿದ್ದಾರೆ.

    ಮೊದಲ ಪತಿಯಿಂದ್ಲೇ ಕೃತ್ಯ?:
    ದೇವಿ, 50 ವರ್ಷದ ರಾಮನ್ಡೊಗೆ ಉನ್ಮಥಲ್ಲೆಗಡೋ ಎಂಬಾತನನ್ನು ವಿವಾಹವಾಗಿದ್ದರು. ಈ ದಂಪತಿಗೆ 18, 14 ಹಾಗೂ 12 ವರ್ಷದ ಮೂವರು ಮಕ್ಕಳಿದ್ದಾರೆ. ಕೆಲ ಸಮಯದ ಬಳಿಕ ರಾಮನ್ಡೊಗೆ ವಿಚ್ಚೇದನ ನೀಡಿ ಇಮ್ತಿಯಾಜ್ ಮೊಹಮ್ಮದ್ ಎಂಬಾತನನ್ನು ದೇವಿ ವರಿಸಿದ್ದರು. ಮದುವೆಯ ಬಳಿಕ ದೇವಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದು, ತನ್ನ ಹೆಸರನ್ನು ಸನಾ ಮೊಹಮ್ಮದ್ ಎಂಬುದಾಗಿ ಬದಲಾಯಿಸಿಕೊಂಡಿದ್ದರು ಎಂಬುದಾಗಿ ವರದಿಯಾಗಿದೆ.

    ಸನಾ ಹಾಗೂ ಇಮ್ತಿಯಾಜ್ ದಂಪತಿ 5 ಹಾಗೂ 2 ವರ್ಷದ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. ಸದ್ಯ ಈಕೆ ತುಂಬು ಗರ್ಭಿಣಿಯಾಗಿದ್ದು, ಘಟನೆಯ ಬಳಿಕ ಶಸ್ತ್ರ ಚಿಕಿತ್ಸೆಯ ಮೂಲಕ ಮಗುವನ್ನು ರಕ್ಷಿಸಲಾಗಿದೆ. ಅಲ್ಲದೇ ಮಗುವಿಗೆ ಇಬ್ರಾಹಿಂ ಎಂದು ಹೆಸರಿಡಲಾಗಿದೆ.

    ಆಕೆಯ ಮೊದಲ ಪತಿಯೇ ಈ ಕೃತ್ಯ ಎಸಗಿರುವುದಾಗಿ ಹೇಳಲಾಗುತ್ತಿದ್ದು, ಘಟನೆಗೆ ಸಂಬಂಧಿಸಿದಂತೆ ರಾಮನ್ಡೊಗೆ ಉನ್ಮಥಲ್ಲೆಗಡೋ ಲಂಡನ್ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews