ನವದೆಹಲಿ: ಹಬ್ಬದ ಸಮಯದಲ್ಲಿ ರೈಲ್ವೇಯಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಸಿಹಿ ಸುದ್ದಿ. ಹಬ್ಬದ ಸಮಯದಲ್ಲಿ ಪ್ರಯಾಣದಟ್ಟಣೆ ನಿರ್ವಹಣೆ ಮತ್ತು ಬುಕ್ಕಿಂಗ್ ಸರಳಗೊಳಿಸಲು ಭಾರತೀಯ ರೈಲ್ವೇ (Indian Railways) ರೌಂಡ್ ಟ್ರಿಪ್ ಪ್ಯಾಕೇಜ್ (Round Trip Package) ಆರಂಭಿಸಿದೆ. ಈ ಪ್ಯಾಕೇಜ್ ಅನ್ವಯ ರಿಟರ್ನ್ ಟಿಕೆಟ್ ಬುಕ್ (Ticket Book) ಮಾಡಿದವರಿಗೆ 20% ರಿಯಾಯಿತಿ ಸಿಗಲಿದೆ.
ನಿಯಮಗಳು ಮತ್ತು ಷರತ್ತುಗಳು ಏನು?
ನಿಗದಿತ ಅವಧಿಯಲ್ಲಿ ತಮ್ಮ ವಾಪಸಾತಿ ಪ್ರಯಾಣವನ್ನು ಆಯ್ಕೆ ಮಾಡುವ ಪ್ರಯಾಣಿಕರಿಗೆ ಮಾತ್ರ ಈ ಯೋಜನೆ ಅನ್ವಯಿಸುತ್ತದೆ:
ಈ ಯೋಜನೆಯಡಿಯಲ್ಲಿ, ಒಂದೇ ಗುಂಪಿನ ಪ್ರಯಾಣಿಕರಿಗೆ ಮುಂದಿನ ಮತ್ತು ಹಿಂದಿರುಗುವ ಪ್ರಯಾಣ ಎರಡಕ್ಕೂ ಬುಕ್ ಮಾಡಿದಾಗ ರಿಯಾಯಿತಿಗಳು ಅನ್ವಯವಾಗುತ್ತವೆ. ಹಿಂದಿರುಗುವ ಪ್ರಯಾಣದ ಪ್ರಯಾಣಿಕರ ವಿವರಗಳು ಮುಂದಿನ ಪ್ರಯಾಣದಂತೆಯೇ ಇರಬೇಕಾಗುತ್ತದೆ.
ಈ ಯೋಜನೆಯಡಿಯಲ್ಲಿ ಬುಕ್ ಮಾಡಿದ ಟಿಕೆಟ್‌ಗಳಿಗೆ ಯಾವುದೇ ಶುಲ್ಕ ಮರುಪಾವತಿ (Refund) ನೀಡುವುದಿಲ್ಲ. ಒಂದು ಬಾರಿ ಟಿಕೆಟ್ ಬುಕ್ ಮಾಡಿದ ನಂತರ ಯಾವುದೇ ಬದಲಾವಣೆಗೆ ಅನುಮತಿಸಲಾಗುವುದಿಲ್ಲ.
ರಿಯಾಯಿತಿ ದರದಲ್ಲಿ ಹಿಂದಿರುಗುವ ಪ್ರಯಾಣ ಬುಕ್ಕಿಂಗ್ ಮಾಡುವಾಗ ಯಾವುದೇ ರಿಯಾಯಿತಿಗಳು, ರೈಲು ಪ್ರಯಾಣ ಕೂಪನ್‌ಗಳು, ವೋಚರ್ ಆಧಾರಿತ ಬುಕಿಂಗ್‌ಗಳು, ಪಾಸ್‌ಗಳು ಅಥವಾ ಪಿಟಿಒಗಳು ಇತ್ಯಾದಿಗಳನ್ನು ಅನುಮತಿಸಲಾಗುವುದಿಲ್ಲ.
ಮುಂದಿನ ಮತ್ತು ಹಿಂದಿರುಗುವ ಪ್ರಯಾಣದ ಟಿಕೆಟ್‌ಗಳನ್ನು ಇಂಟರ್ನೆಟ್ (ಆನ್‌ಲೈನ್) ಬುಕಿಂಗ್ ಅಥವಾ ಕಚೇರಿಗಳಲ್ಲಿ ಕೌಂಟರ್ ಬುಕಿಂಗ್ ಮೂಲಕ ಒಂದೇ ಮೋಡ್ ಅನ್ನು ಬಳಸಿಕೊಂಡು ಬುಕ್ ಮಾಡಬೇಕು.
ಟಿಕೆಟ್ ಬುಕಿಂಗ್ ಯಾವಾಗ ಪ್ರಾರಂಭ?
ರಾಜಧಾನಿ, ಶತಾಬ್ದಿ, ಡುರಾಂಟೊ ಮತ್ತು ಇತರ ಫ್ಲೆಕ್ಸಿ ದರ ರೈಲುಗಳಲ್ಲಿ ರಿಯಾಯಿತಿ ಅನ್ವಯಿಸುವುದಿಲ್ಲ. ಆಗಸ್ಟ್ 14 ರಿಂದ ಅಕ್ಟೋಬರ್ 13 ರಿಂದ 26 ವರೆಗಿನ ಪ್ರಯಾಣಕ್ಕೆ ಮತ್ತು ನವೆಂಬರ್ 17 ರಿಂದ ಡಿಸೆಂಬರ್ 1ರ ಅವಧಿಯ ರಿಟರ್ನ್ ಟಿಕೆಟ್ ಬುಕ್ ಮಾಡಬಹುದು. ಅಕ್ಟೋಬರ್ 13 ರಿಂದ 26 ಅವಧಿಯಲ್ಲಿ ರಿಟರ್ನ್ ಟಿಕೆಟ್ ಮಾಡಿದರೆ ಆಫರ್ ಸಿಗುವುದಿಲ್ಲ. 60 ದಿನಗಳ ಮೊದಲೇ ಮುಂಗಡ ಬುಕ್ಕಿಂಗ್ ಮಾಡಬೇಕೆಂಬ ನಿಯಮ ಈ ರೌಂಡ್ ಟ್ರಿಪ್ ಪ್ಯಾಕೇಜಿಗೆ ಅನ್ವಯವಾಗುವುದಿಲ್ಲ.
ಕಲಬುರಗಿ: ಹಾಸನ – ಸೋಲಾಪುರ ಎಕ್ಸ್‌ಪ್ರೆಸ್ ರೈಲಿನಲ್ಲಿ (Hasan Solapur Train) ಬ್ರೇಕ್ ಬೈಡಿಂಗ್ ದೋಷದಿಂದ ದಟ್ಟ ಹೊಗೆ ಕಾಣಿಸಿಕೊಂಡಿದೆ.
ಇಂದು (ಜು.21) ಮುಂಜಾನೆ ಶಹಬಾದ್ ತಾಲೂಕಿನ ಮರತೂರ ಬಳಿ ಈ ಘಟನೆ ನಡೆದಿದೆ. ಬ್ರೇಕ್ ಬೈಡಿಂಗ್ ತಾಂತ್ರಿಕ ದೋಷದಿಂದ ದಟ್ಟ ಹೊಗೆ ಕಾಣಿಸಿಕೊಂಡಿದೆ. ಕೂಡಲೇ, ಪಾಯಿಂಟ್ ಮ್ಯಾನ್ ಇದನ್ನು ಗಮನಿಸಿ ರೇಡ್ ಹ್ಯಾಂಡ್ ಸಿಗ್ನಲ್ ತೋರಿಸಿ ರೈಲು ನಿಲ್ಲಿಸಿದ್ದಾರೆ. ಬಳಿಕ ಪರಿಶೀಲಿಸಿ, ಕೋಚ್ ಸಂಖ್ಯೆ CR 227454 LS-5 ಎಂಜಿನ್ ನಿಂದ 4ನೇ ಕೋಚ್‌ನಲ್ಲಿ ಕಾಣಿಸಿಕೊಂಡಿದ್ದ ಬ್ರೇಕ್ ಬೈಂಡಿಂಗ್ ದೋಷ ಸರಿಪಡಿಸಲಾಗಿದೆ. ಇದನ್ನೂ ಓದಿ: ತಮಿಳುನಾಡು ಸಿಎಂ ಸ್ಟಾಲಿನ್ ಆಸ್ಪತ್ರೆಗೆ ದಾಖಲು
ಜಗತ್ತಿನಲ್ಲೇ ಅತಿ ದೊಡ್ಡ ರೈಲು ಸಂಪರ್ಕ ಜಾಲವನ್ನು ಹೊಂದಿರುವ ವ್ಯವಸ್ಥೆಯೆಂದರೆ ಅದು ಭಾರತೀಯ ರೈಲ್ವೆ (Indian Railway). ಈ ವಲಯ ಹಲವು ಸುಧಾರಿತ ಕ್ರಮಗಳೊಂದಿಗೆ ಪ್ರಯಾಣಿಕ ಸ್ನೇಹಿಯಾಗುವತ್ತ ಹೆಜ್ಜೆ ಇಟ್ಟಿದೆ. ಮನುಷ್ಯ ಹೋದಲ್ಲಿ ಬಂದಲ್ಲಿ, ನಿಂತಲ್ಲಿ ಕುಂತಲ್ಲಿ ಎಲ್ಲಾ ಸೌಕರ್ಯಗಳು ಕೈಗೆ ಸಿಗುವಂತಿದ್ದರೆ ಆ ಕಡೆ ಹೆಚ್ಚು ಒಲವು ತೋರುವುದುಂಟು. ಇದನ್ನರಿತು ರೈಲ್ವೆಯು ಹೊಸ ವ್ಯವಸ್ಥೆಯೊಂದನ್ನು ಜಾರಿಗೊಳಿಸಿದೆ. ರೈಲಿನಲ್ಲೇ ಎಟಿಎಂ (ATM on Train) ಸ್ಥಾಪಿಸಿ ಜನರ ಕೈಗೆ ಸುಲಭವಾಗಿ ಹಣ ಸಿಗುವಂತೆ ಮಾಡಿದೆ. ರೈಲ್ವೆಯ ಹೊಸ ಕ್ರಮದಿಂದ ಪ್ರಯಾಣಿಕರು ಖುಷಿಪಟ್ಟಿದ್ದಾರೆ.
ಭಾರತಕ್ಕೆ ರೈಲು ಬಂದಿದ್ಯಾವಾಗ?
1853 ರಲ್ಲಿ ಭಾರತಕ್ಕೆ ಮೊದಲ ಬಾರಿಗೆ ರೈಲು ವ್ಯವಸ್ಥೆ ಬಂದಿತು. ಮುಂಬೈ (ಆಗ ಬಾಂಬೆ) ಮತ್ತು ಥಾಣೆ ನಡುವೆ ಮೊದಲ ಪ್ರಯಾಣಿಕ ರೈಲು ಓಡಾಟ ಆರಂಭಿಸಿತು. ಆರಂಭದಲ್ಲಿ, ಪ್ರಮುಖ ಬಂದರು ನಗರಗಳನ್ನು ಸಂಪರ್ಕಿಸುವುದು, ಸರಕುಗಳ ವ್ಯಾಪಾರ ಮತ್ತು ಸಾಗಣೆಯನ್ನು ಸುಗಮಗೊಳಿಸುವತ್ತ ಗಮನ ಹರಿಸಲಾಯಿತು. ವರ್ಷಗಳು ಕಳೆದಂತೆ ಈ ಜಾಲವು ವಿಸ್ತರಿಸಿತು. ವಿವಿಧ ಪ್ರದೇಶಗಳನ್ನು ಸಂಪರ್ಕಿಸಲು ಮತ್ತು ರಾಷ್ಟ್ರೀಯ ಏಕೀಕರಣದಲ್ಲಿ ನಿರ್ಣಾಯಕ ಪಾತ್ರ ವಹಿಸಿತು. ಇದನ್ನೂ ಓದಿ: ಭಾರತದ ಮೊದಲ ಆನ್-ಬೋರ್ಡ್ ಎಟಿಎಂ ಪ್ರಯೋಗ ಯಶಸ್ವಿ – ಇನ್ಮುಂದೆ ರೈಲಿನಲ್ಲೂ ಇರಲಿದೆ ಎಟಿಎಂ!
ದೇಶದಲ್ಲಿ ಎಷ್ಟು ರೈಲುಗಳಿವೆ?
ಭಾರತದಲ್ಲಿ 7,349 ನಿಲ್ದಾಣಗಳು, 13,169 ಪ್ಯಾಸೆಂಜರ್ ರೈಲುಗಳು, 8,479 ಸರಕು ರೈಲುಗಳಿವೆ. 2.3 ಕೋಟಿ ಪ್ರಯಾಣಿಕರಿಗೆ ಮತ್ತು 7,349 ನಿಲ್ದಾಣಗಳಿಂದ ಪ್ರತಿದಿನ 30 ಲಕ್ಷ ಟನ್ ಸರಕು ಸಾಗಣೆಗೆ ಸೇವೆ ಸಲ್ಲಿಸುತ್ತಿವೆ. ಕರ್ನಾಟಕದಲ್ಲಿ 200 ಕ್ಕೂ ಹೆಚ್ಚು ರೈಲು ನಿಲ್ದಾಣಗಳಿವೆ. ರಾಜ್ಯದಲ್ಲಿ ಪಟ್ಟಿಯಲ್ಲಿ ಸೇರಿಸದ ಕೆಲವು ನಿಲ್ದಾಣಗಳಿವೆ. ಇದರಲ್ಲಿ ಸಣ್ಣ ನಿಲ್ದಾಣಗಳು ಮತ್ತು ನಿರ್ದಿಷ್ಟ ರೈಲು ಮಾರ್ಗಗಳಲ್ಲಿರುವ ನಿಲ್ದಾಣಗಳು ಸೇರಿರಬಹುದು. ಸಾಮಾನ್ಯ ನಿಲ್ದಾಣಗಳು ಮತ್ತು ಸಣ್ಣ ನಿಲ್ದಾಣಗಳು ಸೇರಿದಂತೆ ಒಟ್ಟು ನಿಲ್ದಾಣಗಳ ಸಂಖ್ಯೆ ಸುಮಾರು 262 ಎಂದು ಅಂದಾಜಿಸಲಾಗಿದೆ.
ದೇಶದಲ್ಲೇ ಮೊದಲು
ದೇಶದಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ರೈಲ್ವೆಯು ರೈಲಿನೊಳಗೆ ಎಟಿಎಂ ಯಂತ್ರವನ್ನು ಸ್ಥಾಪಿಸಿದೆ. ಇನ್ಮುಂದೆ ರೈಲಿನಲ್ಲೂ ಎಟಿಎಂ ಮೂಲಕ ಹಣ ಪಡೆಯಬಹುದು. ಹೌದು, ಮುಂಬೈ-ಮನಮಾಡ್ ಪಂಚವಟಿ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಾಯೋಗಿಕವಾಗಿ ಎಟಿಎಂ ಯಂತ್ರ ಅಳವಡಿಸಲಾಗಿದೆ. ಸಾರ್ವಜನಿಕರಿಂದಲೂ ಉತ್ತಮ ಸ್ಪಂದನೆ ಸಿಕ್ಕಿದೆ. ತನ್ನ 172ನೇ ವರ್ಷಾಚರಣೆಯ ಪ್ರಯುಕ್ತ ಈ ವ್ಯವಸ್ಥೆಯನ್ನು ಭಾರತೀಯ ರೈಲ್ವೆ ಜಾರಿಗೆ ತಂದಿದೆ. ಪ್ರಯಾಣಿಕರಿಗೆ ಬ್ಯಾಂಕಿಂಗ್ ಸೇವೆಗಳನ್ನು ಸುಗಮಗೊಳಿಸಲು ಒಂದು ಹೆಜ್ಜೆ ಮುಂದಿಟ್ಟಿದೆ. ಕೇಂದ್ರ ರೈಲ್ವೆ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಸೃಜನಶೀಲ ಕಾರ್ಯಕ್ಕೆ ಕೈಜೋಡಿಸಿವೆ. ಸಾರಿಗೆಯೊಂದಿಗೆ ಆರ್ಥಿಕ ಪ್ರವೇಶವನ್ನು ಬೆಸೆಯುವ ನಿಟ್ಟಿನಲ್ಲಿ ಇದು ಪ್ರಮುಖ ಹೆಜ್ಜೆಯಾಗಿದೆ. ಇದನ್ನೂ ಓದಿ: Explainer| ಏನಿದು ಪಬ್ಲಿಕ್ ಟಿವಿ ವಿದ್ಯಾಪೀಠ? ವಿದ್ಯಾರ್ಥಿಗಳಿಗೆ ಏನು ಲಾಭ? ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ
🚨 ATM facility in Indian train for the first time, announces Ashwini Vaishnaw. pic.twitter.com/n7Jp5RTNlJ
ಅತಿ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುವ ರೈಲು
ಪಂಚವಟಿ ಎಕ್ಸ್‌ಪ್ರೆಸ್ ಮಹಾರಾಷ್ಟ್ರದ ಮನಮಾಡ್-ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ನಡುವೆ ಸಂಚರಿಸುವ ದೈನಂದಿನ ಅಂತರನಗರ ಸೂಪರ್ ಫಾಸ್ಟ್ ರೈಲಾಗಿದೆ. ಬಹಳಷ್ಟು ಪ್ರಯಾಣಿಕರನ್ನು ಹೊತ್ತೊಯ್ಯುವ ರೈಲು ಎಂದು ಹೆಸರುವಾಸಿಯಾಗಿದೆ. ಹೀಗಾಗಿ, ಪ್ರಾಯೋಗಿಕವಾಗಿ ಈ ರೈಲಿನ ಒಂದು ಬೋಗಿಯಲ್ಲಿ ಎಟಿಎಂ ಅಳವಡಿಸಲಾಗಿದೆ. ರೈಲಿನಲ್ಲೂ ಪ್ರಯಾಣಿರಿಗೆ ಸುಲಭವಾಗಿ ಹಣಕಾಸು ಸೇವೆ ಒದಗಿಸಲು ಇದು ಸಹಕಾರಿಯಾಗಿದೆ.
ಹೇಗೆ ಕೆಲಸ ಮಾಡುತ್ತೆ?
ರೈಲಿನ ಎಸಿ ಕೋಚ್‌ನಲ್ಲಿ ಎಟಿಎಂ ಯಂತ್ರವನ್ನು ಅಳವಡಿಸಲಾಗಿದೆ. ನಿಲ್ದಾಣಗಳು, ನಗರಗಳಲ್ಲಿನ ಇತರೆ ಎಟಿಎಂಗಳಂತೆಯೇ ಇದು ಕಾರ್ಯನಿರ್ವಹಿಸುತ್ತದೆ. ಹಣ ಡ್ರಾ, ಚೆಕ್ ಬುಕ್ ಆರ್ಡರ್, ಬ್ಯಾಂಕ್ ಸ್ಟೇಟ್‌ಮೆಂಟ್ ಪಡೆಯಬಹುದು. ನಗದು ಹಿಂಪಡೆಯಲು ಪ್ರಯಾಣಿಕರು ವಿವಿಧ ಬ್ಯಾಂಕ್‌ಗಳ ಡೆಬಿಟ್ ಕಾರ್ಡ್‌ಗಳನ್ನು ಬಳಸಬಹುದು. ಈ ಎಟಿಎಂ ಅನ್ನು ಬೋಗಿಯ ಹಿಂಭಾಗದಲ್ಲಿರುವ ಒಂದು ಕ್ಯೂಬಿಕಲ್‌ನಲ್ಲಿ ಇರಿಸಲಾಗಿದೆ. ಈ ಪ್ರದೇಶದಲ್ಲಿ ಹಿಂದೆ ತಾತ್ಕಾಲಿಕ ಪ್ಯಾಂಟ್ರಿಯಾಗಿ ಕಾರ್ಯನಿರ್ವಹಿಸಲಾಗುತ್ತಿತ್ತು. ಭದ್ರತೆ ಕಾಪಾಡಲು ಮತ್ತು ಯಾವುದೇ ಅವಘಡಗಳನ್ನು ತಪ್ಪಿಸಲು ಆ ಜಾಗವನ್ನು ಶಟರ್‌ನಿಂದ ಲಾಕ್ ಮಾಡಲಾಗಿದೆ. 24*7 ಸಿಸಿಟಿವಿ ಕಣ್ಗಾವಲಿನಲ್ಲಿ ಇರಿಸಲಾಗಿದೆ. ಎಕ್ಸ್‌ಪ್ರೆಸ್‌ನ ಎಲ್ಲಾ 22 ಕೋಚ್‌ಗಳು ಒಂದಕ್ಕೊಂದು ಸಂಪರ್ಕ ಹೊಂದಿರುವುದರಿಂದ, ಎಲ್ಲಾ ಪ್ರಯಾಣಿಕರು ಇದನ್ನು ಬಳಸಬಹುದು.
ಪ್ರಾಯೋಗಿಕ ಅವಧಿಯಲ್ಲಿ ನಿರ್ವಹಣೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ತಾಂತ್ರಿಕ ತೊಂದರೆಗಳ ಸಂದರ್ಭದಲ್ಲಿ ನೆರವು ನೀಡಲು ಎಸ್‌ಬಿಐ ಪ್ರತಿನಿಧಿ ಸಹ ಮಂಡಳಿಯಲ್ಲಿರುತ್ತಾರೆ. ರೈಲಿನ ವಿದ್ಯುತ್ ವ್ಯವಸ್ಥೆಗಳನ್ನು ಯಂತ್ರಕ್ಕೆ ವಿದ್ಯುತ್ ಪೂರೈಸಲು ಹೊಂದಿಸಲಾಗಿದೆ. ಯಾವುದೇ ಅಲಭ್ಯತೆಯನ್ನು ತಡೆಗಟ್ಟಲು ಬ್ಯಾಕ್‌ಅಪ್ ಸ್ಥಳದಲ್ಲಿದೆ. ಇದನ್ನೂ ಓದಿ: PublicTV Explainer: ‘ಕೆಜಿಎಫ್’ಗೆ ಕಂಟಕ – ಸರ್ಕಾರ V/S ವಿದ್ಯಾರ್ಥಿಗಳು; ಏನಿದು ವಿವಾದ?
ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆ
ಈ ಉಪಕ್ರಮವು ಭಾರತ ಸರ್ಕಾರದ ಡಿಜಿಟಲ್ ಇಂಡಿಯಾ ಅಭಿಯಾನದ ವಿಶಾಲ ಗುರಿಗಳಿಗೆ ಅನುಗುಣವಾಗಿದೆ. ಇದು ವಿಶ್ವಾದ್ಯಂತ ಡಿಜಿಟಲ್ ಬ್ಯಾಂಕಿಂಗ್ ಪ್ರವೇಶ ಮತ್ತು ಆರ್ಥಿಕ ಸೇರ್ಪಡೆಯನ್ನು ಮುನ್ನಡೆಸುವ ಗುರಿಯನ್ನು ಹೊಂದಿದೆ. ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳಿಗೆ ಪ್ರಯಾಣಿಸುವ ಪ್ರಯಾಣಿಕರು, ಎಟಿಎಂಗಳಿಲ್ಲದ ಸ್ಥಳಗಳಿಗೆ ಮತ್ತು ಸೀಮಿತ ಹಣಕಾಸು ಸೇವೆಗಳಿರುವ ಪ್ರದೇಶಗಳಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಇದು ಸಹಕಾರಿಯಾಗಿದೆ.
ಆನ್‌ಬೋರ್ಡ್ ಎಟಿಎಂ ತುರ್ತು ಸಂದರ್ಭಗಳಲ್ಲಿ ಪ್ರಯಾಣಿಸುವಾಗ, ನಗದು ಅಗತ್ಯವಿರುವಾಗ, ಆಗಾಗ್ಗೆ ಪ್ರಯಾಣಿಕರಿಗೆ ಅನುಕೂಲಕರವಾಗಿ ಸಹಾಯ ಮಾಡುತ್ತದೆ. ಮೊಬೈಲ್ ಬ್ಯಾಂಕಿಂಗ್ ಪ್ಲಾಟ್‌ಫಾರ್ಮ್‌ಗಳ ಪರಿಚಯವಿಲ್ಲದ ಹಿರಿಯ ವ್ಯಕ್ತಿಗಳು ಮತ್ತು ಪ್ರಯಾಣಿಕರು ಸಹ ಇದರಿಂದ ಪ್ರಯೋಜನ ಪಡೆಯುತ್ತಾರೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: Explainer | ಯಾರಿದು ಹೌತಿ ಉಗ್ರರು? ಅಮೆರಿಕ ದಾಳಿ ನಡೆಸಿದ್ದು ಯಾಕೆ? ವಿಶ್ವಕ್ಕೆ ಸಮಸ್ಯೆ ಏನು?
ಮುಂದೇನು?
ಈ ಪ್ರಯೋಗವು ಯಶಸ್ವಿಯಾದರೆ ಹೆಚ್ಚಿನ ರೈಲುಗಳಲ್ಲಿ ಎಟಿಎಂ ಯಂತ್ರವನ್ನು ಸ್ಥಾಪಿಸಲಾಗುವುದು. ಮುಂದೆ ರಾಜಧಾನಿ, ದುರಂತೋ ಮತ್ತು ವಂದೇ ಭಾರತ್ ಎಕ್ಸ್‌ಪ್ರೆಸ್‌ನಂತಹ ದೀರ್ಘ ಪ್ರಯಾಣ ಮತ್ತು ಪ್ರೀಮಿಯಂ ರೈಲುಗಳಲ್ಲಿ ಹಣಕಾಸು ಸೇವೆಗಳನ್ನು ಸಂಯೋಜಿಸುವ ಬಗ್ಗೆ ಭಾರತೀಯ ರೈಲ್ವೇ ಯೋಚಿಸಿದೆ. ರೈಲು ಪ್ರಯಾಣವನ್ನು ಪ್ರಯಾಣಿಕರ ಸ್ನೇಹಿಯಾಗಿ ಮಾಡಲು ಕ್ರಮ ವಹಿಸಲಿದೆ. ಇಂತಹ ಯೋಜನೆಗಳು ಡಿಜಿಟಲ್ ಬ್ಯಾಂಕಿಂಗ್ ಸಲಹೆ ಸೇವೆಗಳು ಮತ್ತು ಸ್ಮಾರ್ಟ್ ಟಿಕೆಟಿಂಗ್ ಕಿಯೋಸ್ಕ್‌ಗಳನ್ನು ಸಹ ಅಳವಡಿಸಿಕೊಳ್ಳಬಹುದು.
ಒಂದು ವೇಳೆ ನೀವು ಪ್ರವಾಸಕ್ಕೆ ಪ್ಲ್ಯಾನ್ ಮಾಡುತ್ತಿದ್ದು, ತಕ್ಷಣವೇ ನಿಮ್ಮ ಬಳಿ ರೈಲು ಟಿಕೆಟ್ ಖರೀದಿಸಲು ಚಿಂತಿಸಬೇಕಿಲ್ಲ. ಅದಕ್ಕಾಗಿಯೇ ಭಾರತೀಯ ರೈಲ್ವೆ ಇಲಾಖೆ ʻಈಗಲೇ ಬುಕ್ ಮಾಡಿ, ನಂತರ ಪಾವತಿಸಿʼ ಆಯ್ಕೆಯನ್ನು ಪರಿಚಯಿಸಿದೆ, ಇದು ಯಾವುದೇ ಮುಂಗಡ ಪಾವತಿಯಿಲ್ಲದೆ ನಿಮ್ಮ ಟಿಕೆಟ್ ಅನ್ನು ಸುರಕ್ಷಿತವಾಗಿರಿಸಲು ಅನುವು ಮಾಡಿಕೊಡುತ್ತದೆ. ಆದಾಗ್ಯೂ, ಸಂಪೂರ್ಣ ಬುಕಿಂಗ್ ಪ್ರಕ್ರಿಯೆಯನ್ನು ಆನ್‌ಲೈನ್‌ನಲ್ಲಿ ಪೂರ್ಣಗೊಳಿಸಬೇಕು ಮತ್ತು ಅನುಸರಿಸಲು ಕೆಲವು ಪ್ರಮುಖ ಷರತ್ತುಗಳಿವೆ.
ಬುಕ್ಕಿಂಗ್ ಹೇಗೆ?
1. ಮೊದಲಿಗೆ ನಿಮ್ಮ IRCTC ಖಾತೆಗೆ ಲಾಗ್ ಇನ್ ಮಾಡಿ.
2. ‘ಬುಕ್ ನೌ’ ಆಯ್ಕೆಯನ್ನು ಕ್ಲಿಕ್ ಮಾಡಿ.
3. ಪ್ರಯಾಣಿಕರ ವಿವರಗಳು ಮತ್ತು ಕ್ಯಾಪ್ಚಾ ಕೋಡ್ ಕೇಳುವ ಹೊಸ ಪುಟವು ಕಾಣಿಸಿಕೊಳ್ಳುತ್ತದೆ. ಅಗತ್ಯವಿರುವ ಮಾಹಿತಿಯನ್ನು ಭರ್ತಿ ಮಾಡಿ ಮತ್ತು ಸಲ್ಲಿಸು (Submit) ಆಯ್ಕೆಯನ್ನು ಕ್ಲಿಕ್ ಮಾಡಿ.
4. ನಿಮ್ಮನ್ನು ಪಾವತಿ ಪೇಜ್‌ಗೆ ನಿರ್ದೇಶಿಸಲಾಗುತ್ತದೆ, ಅಲ್ಲಿ ನೀವು ಕ್ರೆಡಿಟ್/ಡೆಬಿಟ್ ಕಾರ್ಡ್, BHIM ಅಪ್ಲಿಕೇಶನ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಲು ಆಯ್ಕೆ ಮಾಡಬಹುದು.
5. ಪೇ ಲೇಟರ್ ಆಯ್ಕೆಯನ್ನು ಬಳಸಲು, ಮೊದಲು (www.epaylater.in) ಗೆ ಭೇಟಿ ನೀಡುವ ಮೂಲಕ ನೋಂದಾಯಿಸಬೇಕು.
6. ನೋಂದಣಿ ನಂತರ, ಪೇ ಲೇಟರ್ ಆಯ್ಕೆಯು ಲಭ್ಯವಾಗುತ್ತದೆ. ಅದನ್ನು ಆಯ್ಕೆ ಮಾಡಿ ಮತ್ತು ಯಾವುದೇ ಮುಂಗಡ ಪಾವತಿಯಿಲ್ಲದೇ ನೀವು ದೃಢೀಕೃತ ಟಿಕೆಟ್ ಅನ್ನು ಪಡೆಯುತ್ತೀರಿ.
14 ದಿನದಲ್ಲಿ ಪಾವತಿಸಿ:
ನಿಮ್ಮ ಟಿಕೆಟ್ ಅನ್ನು ಬುಕ್ ಮಾಡಿದ 14 ದಿನಗಳಲ್ಲಿ ನೀವು ಪಾವತಿಯನ್ನು ಪೂರ್ಣಗೊಳಿಸಬೇಕು. ಒಂದು ವೇಳೆ 14 ದಿನಗಳಲ್ಲಿ ಹಣ ಪಾವತಿ ಮಾಡಲು ವಿಫಲವಾದ್ರೆ 3.5% ಸೇವಾ ಶುಲ್ಕ ವಿಧಿಸಲಾಗುತ್ತದೆ. ಆ ನಂತರವೂ ಪಾವತಿಯನ್ನ ಮತ್ತಷ್ಟು ವಿಳಂಬ ಮಾಡಿದ್ರೆ ಹೆಚ್ಚುವರಿ ಶುಲ್ಕ ವಿಧಿಸಲಾಗುವುದಿಲ್ಲ. ಇದನ್ನೂ ಓದಿ: ಸುಪ್ರೀಂ ಕೋರ್ಟ್ ತೀರ್ಪು ನೋಡ್ಕೊಂಡು ದರ್ಶನ್ ಕೇಸ್‌ನಲ್ಲಿ ಮುಂದಿನ ಕ್ರಮ – ಪರಮೇಶ್ವರ್
ಡೆಹ್ರಾಡೂನ್: ಇಂದು ಮುಂಜಾನೆ ಉತ್ತರಾಖಂಡದ (Uttarakhand) ರೂರ್ಕಿ ಬಳಿ ರೈಲ್ವೇ ಹಳಿಯ ಮೇಲೆ ಖಾಲಿ ಎಲ್‌ಪಿಜಿ ಸಿಲಿಂಡರ್ (LPG Cylinder) ಇರಿಸಿ ರೈಲನ್ನು (Indian Railway) ಹಳಿ ತಪ್ಪಿಸಲು ಯತ್ನಿಸಲಾಗಿದೆ.
ಅದೃಷ್ಟವಶಾತ್ ಗೂಡ್ಸ್ ರೈಲಿನ ಲೋಕೋ ಪೈಲಟ್ ಸಿಲಿಂಡರ್‌ನ್ನು ಗುರುತಿಸಿದ್ದಾರೆ. ಇದರಿಂದ ಸಂಭಾವ್ಯ ಹಳಿತಪ್ಪುವಿಕೆಯನ್ನು ತಪ್ಪಿದೆ. ಬಳಿಕ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದಾರೆ.
ಧಂಧೇರಾದಿಂದ ಸರಿಸುಮಾರು ಒಂದು ಕಿಲೋಮೀಟರ್ ದೂರದಲ್ಲಿರುವ ಲಂಡೌರಾ ಮತ್ತು ಧಂಧೇರಾ ನಿಲ್ದಾಣಗಳ ನಡುವೆ ಬೆಳಿಗ್ಗೆ 6:35 ಕ್ಕೆ ಈ ಘಟನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ ಸಿಬ್ಬಂದಿಯನ್ನು ಕಳುಹಿಸಲಾಯಿತು. ಸಿಲಿಂಡರ್ ಖಾಲಿಯಾಗಿದೆ ಎಂಬುದ್ನು ಖಚಿತಪಡಿಸಿಕೊಂಡು ಧಂಧೇರಾದಲ್ಲಿ ಸ್ಟೇಷನ್‌ಗೆ ತರಲಾಯಿತು. ಈ ಬಗ್ಗೆ ಸ್ಥಳೀಯ ಪೊಲೀಸರು ಹಾಗೂ ರೈಲ್ವೇ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತದಾದ್ಯಂತ ರೈಲು ಹಳಿತಪ್ಪಿಸುವ ಪ್ರಯತ್ನಗಳು ಇತ್ತೀಚಿಗೆ ಹೆಚ್ಚಾಗಿದೆ. ಆಗಸ್ಟ್‌ನಿಂದ ದೇಶಾದ್ಯಂತ ಇಂತಹ 18 ಪ್ರಯತ್ನಗಳು ನಡೆದಿವೆ ಎಂದು ಭಾರತೀಯ ರೈಲ್ವೆ ಇಲಾಖೆ ಬಹಿರಂಗಪಡಿಸಿದೆ.
ಜೂನ್ 2023ರಿಂದ ಎಲ್‌ಪಿಜಿ ಸಿಲಿಂಡರ್‌ಗಳು, ಸೈಕಲ್‌ಗಳು, ಕಬ್ಬಿಣದ ರಾಡ್‌ಗಳು ಮತ್ತು ಸಿಮೆಂಟ್ ಬ್ಲಾಕ್‌ಗಳು ಸೇರಿದಂತೆ ವಿವಿಧ ವಸ್ತುಗಳನ್ನು ಇರಿಸಿದ 24 ಪ್ರಕರಣಗಳು ನಡೆದಿವೆ. ಇವುಗಳಲ್ಲಿ 15 ಘಟನೆಗಳು ಆಗಸ್ಟ್‌ನಲ್ಲಿ ಸಂಭವಿಸಿವೆ. ಸೆಪ್ಟೆಂಬರ್‌ನಲ್ಲಿ 5 ಘಟನೆಗಳು ನಡೆದಿವೆ.
ಕಿಡಿಗೇಡಿಗಳು ನಡೆಸಿದ ಕಲ್ಲು ತೂರಾಟದಿಂದ ರೈಲಿನ ಕೆಲವು ಕೋಚ್‍ಗಳ ಗಾಜುಗಳು ಪುಡಿಪುಡಿಯಾಗಿವೆ.
ಸಮಸ್ತಿಪುರ ರೈಲ್ವೆ ಪೊಲೀಸರು (Railway Police) ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ದಾಳಿಕೋರರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಕಲ್ಲುಗಳನ್ನು ಏಕೆ ಎಸೆಯಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ.
ಸಮಸ್ತಿಪುರ ರೈಲು ನಿಲ್ದಾಣದ ಹೊರ ಸಿಗ್ನಲ್‍ನಲ್ಲಿ ಈ ಘಟನೆ ಸಂಭವಿಸಿದೆ. ರೈಲು ಮುಜಾಫರ್‍ಪುರಕ್ಕೆ ಹೊರಡುವ ಮೊದಲು ಗುರುವಾರ ರಾತ್ರಿ 8:45ರ ಸುಮಾರಿಗೆ ನಿಲ್ದಾಣದಲ್ಲಿ ಸ್ವಲ್ಪ ಸಮಯ ನಿಂತಿತ್ತು. ಬಳಿಕ ಹೊರಗಿನ ಸಿಗ್ನಲ್ ತಲುಪಿದ ತಕ್ಷಣ ಕಲ್ಲು ತೂರಾಟ ಆರಂಭವಾಯಿತು. ದಾಳಿಯಿಂದಾಗಿ ರೈಲು 45 ನಿಮಿಷ ತಡವಾಯಿತು.
ಭೋಪಾಲ್: ಜಮ್ಮು ಮತ್ತು ಕಾಶ್ಮೀರದಿಂದ (Jammu And Kashmir) ಕರ್ನಾಟಕಕ್ಕೆ (Karnataka) ಯೋಧರನ್ನು ಕರೆದೊಯ್ಯುತ್ತಿದ್ದ ರೈಲನ್ನು ಸ್ಫೋಟಿಸಲು ಯತ್ನಿಸಲಾಗಿತ್ತು. ಇದೀಗ ಡಿಟೋನೇಟರ್‌ಗಳು ಕದ್ದಿದ್ದಕ್ಕಾಗಿ ಓರ್ವ ರೈಲ್ವೆ ಸಿಬ್ಬಂದಿಯನ್ನು ವಶಕ್ಕೆ ಪಡೆಯಲಾಗಿದೆ.
ರೈಲ್ವೆ ಸಿಬ್ಬಂದಿ ಶಬೀರ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.
ಮಧ್ಯಪ್ರದೇಶದ (Madhyapradesh) ಬುರ್ಹಾನ್ಪುರ (Burhanpur) ಜಿಲ್ಲೆಯಲ್ಲಿ ಸೇನಾ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ವಿಶೇಷ ರೈಲನ್ನು ಸ್ಫೋಟಿಸಲು ಯತ್ನಿಸಿರುವ ಘಟನೆ ನಡೆದಿತ್ತು. ಡಿಟೋನೇಟರ್‌ಗಳು ಕದ್ದಿದ್ದಕ್ಕಾಗಿ ಓರ್ವ ರೈಲ್ವೆ ಸಿಬ್ಬಂದಿಯನ್ನು ರೈಲ್ವೆ ರಕ್ಷಣಾ ಪಡೆ (Railway Protection Force) ವಶಕ್ಕೆ ಪಡೆದುಕೊಂಡಿದ್ದಾರೆ.ಇದನ್ನೂ ಓದಿ: ಬೆಂಗಳೂರಿನಲ್ಲಿ ರಾತ್ರಿ ಭಾರೀ ಮಳೆ
ಮಧ್ಯಪ್ರದೇಶದ ರೈಲ್ವೆ ಹಳಿಯಲ್ಲಿ ಕನಿಷ್ಠ 10 ಡಿಟೋನೇಟರ್‌ಗಳು ಹಾಗೂ ಗ್ಯಾಸ್ ಸಿಲಿಂಡರ್ ಪತ್ತೆಯಾಗಿದ್ದವು. ವಶಕ್ಕೆ ಪಡೆದ ಶಬೀರ್ ವಿರುದ್ಧ ರೈಲಿನ ಡಿಟೋನೇಟರ್‌ಗಳು ಹಾಗೂ ಗ್ಯಾಸ್ ಸಿಲಿಂಡರ್ ಕದ್ದಿದ್ದಕ್ಕಾಗಿ ಕೇಸ್ ದಾಖಲಿಸಲಾಗಿದೆ.
ಏನಿದು ಘಟನೆ?
ಮಧ್ಯಪ್ರದೇಶದ ಬುರ್ಹಾನ್ಪುರ ಜಿಲ್ಲೆಯಲ್ಲಿ ಸೇನಾ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ವಿಶೇಷ ರೈಲನ್ನು ಸ್ಫೋಟಿಸಲು ಯತ್ನಿಸಿರುವ ಘಟನೆ ನಡೆದಿತ್ತು. ಸೇನೆಯ ವಿಶೇಷ ರೈಲು ಜಮ್ಮು-ಕಾಶ್ಮೀರದಿಂದ ಕರ್ನಾಟಕಕ್ಕೆ ತೆರಳುತ್ತಿದ್ದಾಗ ಸಗ್ಫಾಟ ರೈಲು ನಿಲ್ದಾಣದ ಬಳಿ ಸ್ಫೋಟಕ್ಕೆ ಯತ್ನ ನಡೆದಿತ್ತು.
ಮಧ್ಯಪ್ರದೇಶದ ರೈಲ್ವೆ ಹಳಿಯಲ್ಲಿ ಕನಿಷ್ಠ 10 ಡಿಟೋನೇಟರ್‌ಗಳು ಹಾಗೂ ಗ್ಯಾಸ್ ಸಿಲಿಂಡರ್ ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದರು.
ರೈಲು ಡಿಟೋನೇಟರ್ಗಳ ಮೇಲೆ ಹಾದು ಹೋಗುತ್ತಿದ್ದಂತೆ ಸ್ಫೋಟದಿಂದ ಲೋಕೋ ಪೈಲಟ್ ರೈಲನ್ನು ತಕ್ಷಣವೇ ನಿಲ್ಲಿಸಿದ್ದರು. ನಂತರ ಠಾಣಾಧಿಕಾರಿಗೆ ಮಾಹಿತಿ ನೀಡಿದರು. ಘಟನೆಯಲ್ಲಿ ಯಾರಿಗೂ ಹಾನಿಯಾಗಿಲ್ಲ. ಭಯೋತ್ಪಾದನಾ ನಿಗ್ರಹ ದಳ (ATS), ರಾಷ್ಟ್ರೀಯ ತನಿಖಾ ಸಂಸ್ಥೆ (NIA), ರೈಲ್ವೆ ಮತ್ತು ಸ್ಥಳೀಯ ಪೊಲೀಸರು ಘಟನೆಯ ಕುರಿತು ತನಿಖೆ ನಡೆಸುತ್ತಿದ್ದಾರೆ.ಇದನ್ನೂ ಓದಿ: ಬದ್ಲಾಪುರ ಶಾಲೆಯಲ್ಲಿ ದೌರ್ಜನ್ಯ – ಕಾಮುಕನನ್ನು ಗುಂಡಿಕ್ಕಿ ಹತ್ಯೆಗೈದ ಪೊಲೀಸರು
ಭೋಪಾಲ್: ಮಧ್ಯಪ್ರದೇಶದ (Madhya Pradesh) ಬುರ್ಹಾನ್ಪುರ ಜಿಲ್ಲೆಯಲ್ಲಿ ಸೇನಾ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ವಿಶೇಷ ರೈಲನ್ನು ಸ್ಫೋಟಿಸಲು ಯತ್ನಿಸಿರುವ ಘಟನೆ ನಡೆದಿದೆ. ಸೇನೆಯ (Indian Army) ವಿಶೇಷ ರೈಲು ಜಮ್ಮು-ಕಾಶ್ಮೀರದಿಂದ ಕರ್ನಾಟಕಕ್ಕೆ ತೆರಳುತ್ತಿದ್ದಾಗ ಸಗ್ಫಾಟ ರೈಲು ನಿಲ್ದಾಣದ ಬಳಿ ಸ್ಫೋಟಕ್ಕೆ ಯತ್ನ ನಡೆದಿದೆ.
ರೈಲು ಡಿಟೋನೇಟರ್ಗಳ ಮೇಲೆ ಹಾದು ಹೋಗುತ್ತಿದ್ದಂತೆ ಸ್ಫೋಟದಿಂದ ಲೋಕೋ ಪೈಲಟ್ ರೈಲನ್ನು ತಕ್ಷಣವೇ ನಿಲ್ಲಿಸಿದ್ದಾರೆ. ನಂತರ ಠಾಣಾಧಿಕಾರಿಗೆ ಮಾಹಿತಿ ನೀಡಿದರು. ಘಟನೆಯಲ್ಲಿ ಯಾರಿಗೂ ಹಾನಿಯಾಗಿಲ್ಲ.
ಭಯೋತ್ಪಾದನಾ ನಿಗ್ರಹ ದಳ (ATS), ರಾಷ್ಟ್ರೀಯ ತನಿಖಾ ಸಂಸ್ಥೆ (NIA), ರೈಲ್ವೆ ಮತ್ತು ಸ್ಥಳೀಯ ಪೊಲೀಸರು ಘಟನೆಯ ಕುರಿತು ತನಿಖೆ ನಡೆಸುತ್ತಿದ್ದಾರೆ.
ಇನ್ನೂ, ಉತ್ತರ ಪ್ರದೇಶದ ಕಾನ್ಪುರದ ಪ್ರೇಂಪುರ್ ರೈಲು ನಿಲ್ದಾಣದ ಬಳಿ ಹಳಿಗಳ ಮೇಲೆ ಭಾನುವಾರ ಖಾಲಿ ಗ್ಯಾಸ್ ಸಿಲಿಂಡರ್‌ಗಳು ಪತ್ತೆಯಾಗಿವೆ. ಗೂಡ್ಸ್ ರೈಲು ಲೋಕೋ ಪೈಲಟ್ ರೈಲು ನಿಲ್ಲಿಸಲು ತುರ್ತು ಬ್ರೇಕ್ ಹಾಕಿ ನಿಲ್ಲಿಸಿದ್ದಾರೆ.
ರೈಲು ಕಾನ್ಪುರದಿಂದ ಪ್ರಯಾಗ್‍ರಾಜ್‍ಗೆ ತೆರಳುತ್ತಿದ್ದಾಗ ಬೆಳಗ್ಗೆ 8:10ಕ್ಕೆ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ತಿಂಗಳಲ್ಲಿ ಉತ್ತರ ಪ್ರದೇಶದಲ್ಲಿ ನಡೆದ ಎರಡನೇ ಪ್ರಕರಣ ಇದಾಗಿದೆ. ಸೆಪ್ಟೆಂಬರ್ 8 ರಂದು, ಪ್ರಯಾಗರಾಜ್‍ನಿಂದ ಭಿವಾನಿ ಕಡೆಗೆ ಹೋಗುತ್ತಿದ್ದ ಕಾಳಿಂದಿ ಎಕ್ಸ್‍ಪ್ರೆಸ್‍ನ್ನು ಹಳಿಗಳ ಮೇಲೆ ಎಲ್‍ಪಿಜಿ ಸಿಲಿಂಡರ್ ಇರಿಸುವ ಮೂಲಕ ಹಳಿತಪ್ಪಿಸಲು ಪ್ರಯತ್ನಿಸಲಾಗಿತ್ತು. ಇದನ್ನೂ ಓದಿ: ಈ ಬಾರಿ ದಸರಾದಲ್ಲಿ ಗಂಗಾರತಿಯಂತೆ ಕಾವೇರಿ ಆರತಿ ಮಾಡಬೇಕೆಂಬ ಆಸೆ: ಚಲುವರಾಯಸ್ವಾಮಿ
ಕಾನ್ಪುರ್ ಮತ್ತು ಭೀಮಸೇನ್ ನಡುವೆ ಸಬರಮತಿ ಎಕ್ಸ್ಪ್ರೆಸ್ (Sabaramati Express) ರೈಲಿನ 22 ಬೋಗಿಗಳು ಹಳಿ ತಪ್ಪಿದೆ. ಅದೇ ಹಳಿ ಮೇಲೆ ಮೆಮೊ ರೈಲೊಂದು ಬರುತ್ತಿತ್ತು. ಅದೃಷ್ಟವಷಾತ್ ಯಾವುದೇ ಸಾವುನೋವು ಸಂಭವಿಸಿಲ್ಲ. ಪ್ರಯಾಣಿಕರನ್ನು ಬಸ್ಸಿನ ಮೂಲಕ ಕಾನ್ಪುರ್ ರೈಲ್ವೆ ಸ್ಟೇಷನ್ ತಲುಪಿಸಿದ್ದೇವೆ ಎಂದು ಜಿಲ್ಲಾ ಮಾಜಿಸ್ಟ್ರೇಟ್ ರಾಕೇಶ್ ವರ್ಮಾ ತಿಳಿಸಿದ್ದಾರೆ. ಇದನ್ನೂ ಓದಿ: ಸಿಎಂ ವಿರುದ್ಧದ ತನಿಖೆಗೆ ರಾಜ್ಯಪಾಲರ ಅನುಮತಿ – ಬಿಜೆಪಿ ಪಾದಯಾತ್ರೆಗೆ ಸಿಕ್ಕ ಯಶಸ್ಸು: ಆರ್.ಅಶೋಕ್
ಸಬರಮತಿ ಎಕ್ಸ್‌ಪ್ರೆಸ್ (ವಾರಾಣಸಿ-ಅಹಮದಾಬಾದ್) (Varanasi-Ahmedabad) ರೈಲು ಕಾನ್ಪುರ್ ಹತ್ತಿರ ನಸುಕಿನ 2:35 ಗಂಟೆಗೆ ಹಳಿ ತಪ್ಪಿದೆ. ಎಂಜಿನ್ ಹೀಟ್ ಆಗಿರುವುದು ಗಮನಕ್ಕೆ ಬಂದಿದೆ. ಅದರ ಮಾಹಿತಿ ಕಲೆ ಹಾಕುತ್ತಿದ್ದೇವೆ. ಐಬಿ ಮತ್ತು ಯುಪಿ ಪೊಲೀಸರು ಪರೀಶಿಲನೆ ಮಾಡುತ್ತಿದ್ದಾರೆ. ಯಾವುದೇ ಪ್ರಯಾಣಿಕರಿಗೆ ಮತ್ತು ಸಿಬ್ಬಂದಿಗೆ ಸಮಸ್ಯೆಯಾಗಿಲ್ಲ. ಪ್ರಯಾಣಿಕರಿಗೆ ಮತ್ತೊಂದು ರೈಲಿನ ವ್ಯವಸ್ಥೆ ಮಾಡಲಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಕಾನೂನುಬದ್ಧವಾಗಿ ಹೋರಾಟ ಮಾಡಿ ಕ್ಲೀನ್‌ಚಿಟ್ ಸಿಕ್ಕಿ ಯಶಸ್ವಿಯಾಗಿ ಹೊರಬರಲಿ: ಈಶ್ವರಪ್ಪ
ಪ್ರಯಾಣಿಕರನ್ನು ಘಟನೆ ನಡೆದ ಸ್ಥಳದಿಂದ ಕಾನ್ಪುರ್‌ವರೆಗೆ ಬಸ್ಸಿನಲ್ಲಿ ಕರೆದೊಯ್ಯಲಾಗಿದೆ. ಕಾನ್ಪುರದಿಂದ ಮತ್ತೊಂದು ರೈಲಿನ ವ್ಯವಸ್ಥೆ ಮಾಡಿ, ಪ್ರಯಾಣಿಕರನ್ನು ಅಹಮದಾಬಾದ್ ವರೆಗೆ ತಲುಪಿಸುತ್ತೇವೆ ಎಂದು ಝಾನ್ಸಿ ವಿಭಾಗದ ರೈಲ್ವೆ ಅಧಿಕಾರಿ ದೀಪಕ್ ಕುಮಾರ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಧೈರ್ಯವಾಗಿರಿ, ನಿಮ್ಮ ಜೊತೆ ನಾವಿದ್ದೇವೆ: ಸಿದ್ದರಾಮಯ್ಯ ಬೆಂಬಲಕ್ಕೆ ನಿಂತ ಹೈಕಮಾಂಡ್
ಭೋಪಾಲ್: ಮಹಿಳೆಯೊಬ್ಬಳನ್ನು ಹತ್ಯೆಗೈದು ಎರಡು ಚೀಲಗಳಲ್ಲಿ ತುಂಬಿ ರೈಲಿನಲ್ಲಿ ಇಟ್ಟು ಹೋದ ಪ್ರಕರಣ ಮಧ್ಯಪ್ರದೇಶದ (Madhya Pradesh) ಇಂದೋರ್ (Indore) ರೈಲ್ವೇ ನಿಲ್ದಾಣದಲ್ಲಿ ನಡೆದಿದೆ.
ಒಂದು ಅಥವಾ ಎರಡು ದಿನಗಳ ಹಿಂದೆ ಮಹಿಳೆಯನ್ನು ಬೇರೆ ಸ್ಥಳದಲ್ಲಿ ಕೊಲೆ ಮಾಡಲಾಗಿದೆ. ಬಳಿಕ ಶವವನ್ನು ಕತ್ತರಿಸಿ ಬ್ಯಾಗ್‍ನಲ್ಲಿ ತುಂಬಿ ಶನಿವಾರ ರಾತ್ರಿ ರೈಲಿನಲ್ಲಿ ತಂದು ಇರಿಸಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಚೀಲದಲ್ಲಿ ಮಹಿಳೆಯ ಕೈ ಹಾಗೂ ಕಾಲುಗಳು ಪತ್ತೆಯಾಗಿಲ್ಲ. ಚೀಲಗಳನ್ನು ವಶಕ್ಕೆ ಪಡೆದು ರೈಲ್ವೇ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಮತ್ತೆ ಪ್ರಧಾನಿಯಾಗಿ ಮೋದಿ ಪದಗ್ರಹಣ – ಪುರಿ ಬೀಚ್‌ನಲ್ಲಿ ಮರಳು ಕಲಾಕೃತಿ ರಚಿಸಿ ಶುಭಕೋರಿದ ಕಲಾವಿದ
ರೈಲಿನ ಸ್ವಚ್ಛತಾ ಸಿಬ್ಬಂದಿ ಬೋಗಿಯ ಒಳಗೆ ಸ್ವಚ್ಛಗೊಳಿಸುತ್ತಿದ್ದಾಗ ಎರಡು ಬ್ಯಾಗ್‍ಗಳು ಪತ್ತೆಯಾಗಿವೆ. ಈ ಮಾಹಿತಿಯನ್ನು ಸಿಬ್ಬಂದಿ ಪೊಲೀಸರಿಗೆ ತಿಳಿಸಿದ್ದಾರೆ. ಬಳಿಕ ಪೊಲೀಸರು ಬ್ಯಾಗ್ ಪರಿಶೀಲನೆ ಮಾಡಿದಾಗ ಮಹಿಳೆಯ ಮೃತದೇಹ ತುಂಡು ತುಂಡಾಗಿ ಕತ್ತರಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಹತ್ಯೆಯಾದ ಮಹಿಳೆ ಸುಮಾರು 20 ರಿಂದ 25 ವರ್ಷ ವಯಸ್ಸಿನವಳೆಂದು ಅಂದಾಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.