Tag: Indian Penal Code

  • ಜು.1 ರಿಂದ ದೇಶಾದ್ಯಂತ ಹೊಸ ಕ್ರಿಮಿನಲ್‌ ಕಾನೂನುಗಳು ಜಾರಿ

    ಜು.1 ರಿಂದ ದೇಶಾದ್ಯಂತ ಹೊಸ ಕ್ರಿಮಿನಲ್‌ ಕಾನೂನುಗಳು ಜಾರಿ

    ನವದೆಹಲಿ: ಮೂರು ಹೊಸ ಕ್ರಿಮಿನಲ್ ಕಾನೂನುಗಳು (New Criminal Laws) ಜುಲೈ 1 ರಿಂದ ಜಾರಿಗೆ ಬರಲಿವೆ. ದೇಶದ ವಸಾಹತುಶಾಹಿ ಯುಗದ ಶಾಸನಗಳನ್ನು (Indian Penal Code) ಬದಲಿಸುತ್ತವೆ ಎಂದು ಸರ್ಕಾರ ಶನಿವಾರ ಪ್ರಕಟಿಸಿದೆ.

    ಭಾರತೀಯ ನ್ಯಾಯ ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷಿ ಮಸೂದೆಯು 1860 ರ ಭಾರತೀಯ ದಂಡ ಸಂಹಿತೆ (ಐಪಿಸಿ), 1973 ರ ಕ್ರಿಮಿನಲ್ ಪ್ರೊಸೀಜರ್ ಕೋಡ್ (CrPC) ಮತ್ತು 1872 ರ ಭಾರತೀಯ ಸಾಕ್ಷ್ಯ ಕಾಯಿದೆಯನ್ನು ಬದಲಿಸುತ್ತದೆ. ಇದನ್ನೂ ಓದಿ: ಹೊಸ ಕ್ರಿಮಿನಲ್ ಕಾನೂನುಗಳಲ್ಲಿ ಸಲಿಂಗಕಾಮ, ವ್ಯಭಿಚಾರ ಸೇರಿಸುವ ಶಿಫಾರಸಿಗೆ ಕೇಂದ್ರ ಕ್ಯಾಬಿನೆಟ್‌ ಅಸಮ್ಮತಿ

    ಮೂರು ಕಾನೂನುಗಳನ್ನು ಸಂಸತ್ತು ಈಚೆಗೆ ಅಂಗೀಕರಿಸಿತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕಳೆದ ಡಿಸೆಂಬರ್‌ನಲ್ಲಿ ಅದಕ್ಕೆ ಅಂಕಿತ ಹಾಕಿದ್ದರು. ಹೊಸ ಕಾನೂನುಗಳು ಭಾರತೀಯತೆ, ಭಾರತೀಯ ಸಂವಿಧಾನ ಮತ್ತು ಜನರ ಯೋಗಕ್ಷೇಮಕ್ಕೆ ಒತ್ತು ನೀಡುತ್ತವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಳೆದ ವರ್ಷ ಸಂಸತ್ತಿನಲ್ಲಿ ಮಂಡಿಸುವಾಗ ಪ್ರತಿಪಾದಿಸಿದ್ದರು.

    ಹೊಸ ಕಾನೂನುಗಳು ತಂತ್ರಜ್ಞಾನದ ಬಳಕೆಯನ್ನು ಪ್ರೋತ್ಸಾಹಿಸುತ್ತವೆ. ತನಿಖೆ, ಪ್ರಾಸಿಕ್ಯೂಷನ್ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ನ್ಯಾಯವು ವಿಜ್ಞಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತದೆ ಎಂದು ಅವರು ತಿಳಿಸಿದ್ದರು. ಇದನ್ನೂ ಓದಿ: ಅಪ್ರಾಪ್ತೆಯರ ಅತ್ಯಾಚಾರಕ್ಕೆ ಗಲ್ಲುಶಿಕ್ಷೆ, ಗ್ಯಾಂಗ್‌ ರೇಪ್‌ಗೆ 20 ವರ್ಷ ಜೈಲು – ಲೋಕಸಭೆಯಲ್ಲಿ 3 ಮಸೂದೆ ಮಂಡಿಸಿದ ಅಮಿತ್‌ ಶಾ

    ಮೂರು ಕಾನೂನುಗಳ ಅಡಿಯಲ್ಲಿ ಎಲ್ಲಾ ವ್ಯವಸ್ಥೆಗಳು ಜಾರಿಗೆ ಬಂದ ನಂತರ ಐದು ವರ್ಷಗಳಲ್ಲಿ ಭಾರತೀಯ ಕ್ರಿಮಿನಲ್ ನ್ಯಾಯ ವ್ಯವಸ್ಥೆಯು ವಿಶ್ವದಲ್ಲೇ ಅತ್ಯಂತ ಮುಂದುವರಿದ ಕಾನೂನಾಗಲಿದೆ ಎಂದು ಅಮಿತ್‌ ಶಾ ಪ್ರತಿಪಾದಿಸಿದ್ದರು.

  • 12 ವರ್ಷದ ಹಿಂದಿನ ಕೇಸ್: ಐವರು ನಕ್ಸಲರನ್ನು ಅಪರಾಧಿಗಳೆಂದು ಘೋಷಿಸಿದ ಎನ್‍ಐಎ ಕೋರ್ಟ್

    12 ವರ್ಷದ ಹಿಂದಿನ ಕೇಸ್: ಐವರು ನಕ್ಸಲರನ್ನು ಅಪರಾಧಿಗಳೆಂದು ಘೋಷಿಸಿದ ಎನ್‍ಐಎ ಕೋರ್ಟ್

    ದಿಸ್ಪುರ್: 12 ವರ್ಷಗಳ ಹಿಂದಿನ ಪ್ರಕರಣದಲ್ಲಿ ಐವರು ನಕ್ಸಲರನ್ನು ದೋಷಿಗಳೆಂದು ಗುವಾಹಟಿಯ (Guwahati) ಎನ್‍ಐಎ ವಿಶೇಷ ಕೋರ್ಟ್ (Special NIA court) ಬುಧವಾರ ತೀರ್ಪು ಪ್ರಕಟಿಸಿದೆ.

    ಮಣಿಪುರದ ದಿಲೀಪ್ ಸಿಂಗ್, ಅಸ್ಸಾಂನ (Assam) ಸೆಂಜಮ್ ಧೀರೇನ್ ಸಿಂಗ್, ಅರ್ನಾಲ್ಡ್ ಸಿಂಗ್, ಪಶ್ಚಿಮ ಬಂಗಾಳದ ಇಂದ್ರನೀಲ್ ಚಂದಾ ಮತ್ತು ಅಮಿತ್ ಬಾಗ್ಚಿ ಶಿಕ್ಷೆಗೊಳಗಾದ ಅಪರಾಧಿಗಳು. ಇದನ್ನೂ ಓದಿ: ಬಾಡಿಗೆ ವಾಹನದಲ್ಲಿ ಬರುತ್ತಿದ್ದ ಯೋಧರು – ದಾಳಿಗೆ ನಕ್ಸಲರಿಂದ 50 ಕೆಜಿ ಸುಧಾರಿತ IED ಬಳಕೆ

    ಪೀಪಲ್ಸ್ ಲಿಬರೇಶನ್ ಆರ್ಮಿ ನಕ್ಸಲ್ ಸಂಘಟನೆ ಸಂಬಂಧದ ಪ್ರಕರಣದಲ್ಲಿ ದೇಶದ ಭದ್ರತೆ ಮತ್ತು ಸಾರ್ವಭೌಮತೆಗೆ ಧಕ್ಕೆ ತರುವ ಕ್ರಿಮಿನಲ್ ಪಿತೂರಿಯಲ್ಲಿ ತೊಡಗಿದ್ದರು ಎಂದು ನ್ಯಾಯಾಲಯ ತೀರ್ಪಿನಲ್ಲಿ ಉಲ್ಲೇಖಿಸಿದೆ.

    ಐಪಿಸಿ ಸೆಕ್ಷನ್ (Indian Penal Code) 121 ಎ ಮತ್ತು ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ (Unlawful Activities Prevention) ಕಾಯಿದೆ 1967 ರ ಸೆಕ್ಷನ್ 18, 18 ಎ ಮತ್ತು 39 ರ ಆರೋಪದಡಿಯಲ್ಲಿ ಸುದೀರ್ಘ ವಿಚಾರಣೆಯ ನಂತರ ನ್ಯಾಯಾಲಯ ಶಿಕ್ಷೆಯನ್ನು ಘೋಷಿಸಿದೆ.

    ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಪಿಎಲ್‍ಎ (PLA) ಸಹಾಯದಿಂದ ಸಿಪಿಐ (ಮಾವೋವಾದಿ) ನಕ್ಸಲರು ದೇಶವನ್ನು ಅಸ್ಥಿರಗೊಳಿಸಲು ಸಂಚು ರೂಪಿಸಿದೆ ಎಂಬ ಮಾಹಿತಿ ಮೇರೆಗೆ 2011ರ ಜು. 1ರಂದು ಎನ್‍ಐಎ (NIA) ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿತ್ತು.

    ತನಿಖೆಯ ವೇಳೆ ಕೋಲ್ಕತ್ತಾದಲ್ಲಿ ಪಿಎಲ್‍ಎ ಕಚೇರಿ ತೆರೆದಿರುವುದು ಬೆಳಕಿಗೆ ಬಂದಿತ್ತು. ಅಲ್ಲದೇ 2010 ರಲ್ಲಿ 76 ಸಿಆರ್‌ಪಿಎಫ್ ಸಿಬ್ಬಂದಿಯನ್ನು ಹತ್ಯೆಗೈದಿದ್ದಕ್ಕಾಗಿ ಪಿಎಲ್‍ಎನ ಅಧ್ಯಕ್ಷ ಸಿಪಿಐ (Maoist) ಪ್ರಧಾನ ಕಾರ್ಯದರ್ಶಿಯನ್ನು ಅಭಿನಂದಿಸಿದ್ದಾರೆ ಎಂಬುದು ತಿಳಿದು ಬಂದಿತ್ತು.

    ಪಿಎಲ್‍ಎ, ಮಾವೋವಾದಿ ಕಾರ್ಯಕರ್ತರಿಗೆ ಬೆಂಬಲ ನೀಡಿದೆ. ನಿರಂತರವಾಗಿ ಇಮೇಲ್ ಮೂಲಕ ಸಂಪರ್ಕದಲ್ಲಿವೆ ಎಂದು ತನಿಖೆ ವೇಳೆ ತಿಳಿದು ಬಂದಿತ್ತು. ಅಲ್ಲದೆ ಅಪರಾಧಿಗಳು ಭಾರತದ ಒಳಗೆ ಮತ್ತು ಹೊರಗೆ ವಿವಿಧ ಸ್ಥಳಗಳಿಗೆ ನಕಲಿ ಗುರುತಿನ ಚೀಟಿಗಳನ್ನು ಬಳಸಿ ಪ್ರಯಾಣಿಸಿದ್ದಾರೆ. ಅಲ್ಲದೆ ಅವುಗಳನ್ನು ಬಳಸಿಕೊಂಡು ಬ್ಯಾಂಕ್ ಖಾತೆ ತೆರೆದಿದ್ದಾರೆ ಎಂಬ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿತ್ತು.

    ಮಾಹಿತಿ ಕಲೆ ಹಾಕಿ ತನಿಖೆ ನಡೆಸಿದ್ದ ಎನ್‍ಐಎ 2012 ರ ಮೇ 21 ಮತ್ತು ನವೆಂಬರ್ 16 ರಂದು ಹಾಗೂ ಜುಲೈ 31, 2014 ರಂದು ಗುವಾಹಟಿಯ ಎನ್‍ಐಎ ವಿಶೇಷ ನ್ಯಾಯಾಲಯಕ್ಕೆ ಪ್ರಕರಣದ ಆರೋಪ ಪಟ್ಟಿಗಳನ್ನು ಸಲ್ಲಿಸಿತ್ತು. ಇದನ್ನೂ ಓದಿ: ಗೋಧ್ರಾ ರೈಲು ಬೋಗಿ ಸುಟ್ಟ ಪ್ರಕರಣ – 8 ದೋಷಿಗಳಿಗೆ ಸುಪ್ರೀಂ ಕೋರ್ಟ್ ಜಾಮೀನು

  • ಪೊಲೀಸರ ಮನೆಯ ಕಬ್ಬಿಣ ಕದ್ದು ಸಿಕ್ಕಿಬಿದ್ದ ವಕೀಲ!

    ಪೊಲೀಸರ ಮನೆಯ ಕಬ್ಬಿಣ ಕದ್ದು ಸಿಕ್ಕಿಬಿದ್ದ ವಕೀಲ!

    ಚಿಕ್ಕೋಡಿ: ಪೊಲೀಸರೊಬ್ಬರು ಮನೆ ಕಟ್ಟಲು ತಂದಿಟ್ಟಿದ್ದ ಕಬ್ಬಿಣವನ್ನು ವಕೀಲನೊಬ್ಬ ಕದ್ದ ಅಚ್ಚರಿಯ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದಿದೆ.

    ಜಿಲ್ಲೆಯ ಅಥಣಿ ಪಟ್ಟಣದ ಸತ್ಯಪ್ರಮೋದ ನಗರದ ಪೊಲೀಸ್ ಪೇದೆ ಮಲ್ಲಿಕಾರ್ಜುನ ಗುಟ್ಟೋಳಗಿ ಎಂಬುವರ ಮನೆ ನಿರ್ಮಾಣದ ಹಂತದಲ್ಲಿತ್ತು. ಕಟ್ಟಡ ನಿರ್ಮಾಣಕ್ಕೆ ಮನೆಯ ಪಕ್ಕದಲ್ಲಿ ಕಬ್ಬಿಣವನ್ನು ತಂದು ಹಾಕಲಾಗಿತ್ತು. ಇದನ್ನೇ ಕಾಯುತ್ತಿದ್ದ ವಕೀಲ ರಮೇಶ್ ಪಡಸಲಗಿ (38) ಪೊಲೀಸರ ಮನೆಯ 1 ಟನ್ ಕಬ್ಬಿಣವನ್ನೇ ಕಳ್ಳತನ ಮಾಡಿದ್ದಾನೆ.

    ರಾತ್ರಿ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದ ವಕೀಲನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ವಕೀಲ ಕಬ್ಬಿಣದ ಜೊತೆಗೆ ಸೋಲಾರ್ ಯಂತ್ರವನ್ನೂ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಅಥಣಿ ಪೊಲೀಸ್ ಠಾಣೆಯಲ್ಲಿ ವಕೀಲ ರಮೇಶ್ ವಿರುದ್ಧ ಐಪಿಸಿ ಸೆಕ್ಷನ್ 379 ಅಡಿ(ಕಳ್ಳತನಕ್ಕೆ ದಂಡನೆ) ಪ್ರಕರಣ ದಾಖಲಿಸಲಾಗಿದೆ.

    ಪೊಲೀಸರು ಕಳ್ಳ ವಕೀಲ ರಮೇಶ್ ಕದ್ದ 3 ಲಕ್ಷ ರೂ ಮೌಲ್ಯದ ಕಬ್ಬಿಣ ಹಾಗೂ ಸೋಲಾರ್ ಯಂತ್ರವನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ವಕೀಲನ ವಿರುದ್ಧ ಕೇಸ್ ದಾಖಲಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಆರೋಪಿ ವಕೀಲ ರಮೇಶ್ ಗೆ ಅಥಣಿ ನ್ಯಾಯಾಲಯ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ.