Tag: Indian Origin Student

  • ಇಸ್ರೇಲ್‌ ವಿರುದ್ಧ ಪ್ರತಿಭಟನೆ – ಅಮೆರಿಕದಲ್ಲಿ ಭಾರತ ಮೂಲದ ವಿದ್ಯಾರ್ಥಿನಿ ಬಂಧನ

    ಇಸ್ರೇಲ್‌ ವಿರುದ್ಧ ಪ್ರತಿಭಟನೆ – ಅಮೆರಿಕದಲ್ಲಿ ಭಾರತ ಮೂಲದ ವಿದ್ಯಾರ್ಥಿನಿ ಬಂಧನ

    ವಾಷಿಂಗ್ಟನ್‌: ಇಸ್ರೇಲ್‌ (Israel) ವಿರುದ್ಧ ಪ್ರತಿಭಟನೆ ನಡೆಸಿದ್ದಕ್ಕೆ ಅಮೆರಿಕದ ಪ್ರತಿಷ್ಠಿತ ಪ್ರಿನ್ಸ್‌ಟನ್ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿರುವ ಭಾರತೀಯ ಮೂಲದ ವಿದ್ಯಾರ್ಥಿನಿಯೊಬ್ಬಳನ್ನು ಕ್ಯಾಂಪಸ್‌ನಲ್ಲಿ ಬಂಧಿಸಲಾಗಿದೆ.

    ಗುರುವಾರ ಮುಂಜಾನೆ ವಿಶ್ವವಿದ್ಯಾನಿಲಯದ ಅಂಗಳದಲ್ಲಿ ಶಿಬಿರಕ್ಕಾಗಿ ಪ್ರತಿಭಟನಾಕಾರರು ಟೆಂಟ್‌ಗಳನ್ನು ಸ್ಥಾಪಿಸಿದ್ದರು. ನಂತರ ತಮಿಳುನಾಡು ಮೂಲದ ಅಚಿಂತ್ಯ ಶಿವಲಿಂಗನ್ ಮತ್ತು ಹಸನ್ ಸೈಯದ್ ಅವರನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್‌ ಮೇಲೆ ದಾಳಿ ಕೇಸ್‌ – ಖಲಿಸ್ತಾನಿ ಪರ ಆರೋಪಿ ಬಂಧನ

    ಇಬ್ಬರು ಪದವೀಧರ ವಿದ್ಯಾರ್ಥಿಗಳನ್ನು ಅತಿಕ್ರಮ ಪ್ರವೇಶ ಆರೋಪದಲ್ಲಿ ಬಂಧಿಸಲಾಗಿದೆ. ಈ ಬೆಳವಣಿಗೆಯಾದ ತಕ್ಷಣ ವಿವಿ ಕ್ಯಾಂಪಸ್‌ನಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿದೆ. ಕ್ಯಾಂಪಸ್‌ನಲ್ಲಿ ಟೆಂಟ್‌ಗಳನ್ನು ಹಾಕುವುದು ವಿವಿ ನೀತಿ ಉಲ್ಲಂಘನೆ ಎಂದು ಹೇಳಲಾಗಿದೆ.

    ಶಿವಲಿಂಗಂ ಪ್ರಿನ್ಸ್‌ಟನ್‌ನಲ್ಲಿ ಸಾರ್ವಜನಿಕ ವ್ಯವಹಾರಗಳ ವಿಷಯದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದಾರೆ. ಇಸ್ರೇಲಿ ಮಿಲಿಟರಿ ಕಾರ್ಯಾಚರಣೆಯಿಂದಾಗಿ ಗಾಜಾದಲ್ಲಿ ಅಪಾರ ಸಾವು-ನೋವುಗಳಾಗಿವೆ ಎಂದು ಇಸ್ರೇಲ್‌ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಇದನ್ನೂ ಓದಿ: Olympic 2024: ಕ್ರೀಡೆಗಳ ಮಹಾಸಂಗಮಕ್ಕೆ ಕೆಲವೇ ದಿನ ಬಾಕಿ – ಕೈಬೀಸಿ ಕರೆಯುತ್ತಿದೆ ಪ್ಯಾರಿಸ್‌!

    ಸಾವಿರಾರು ವಿದ್ಯಾರ್ಥಿಗಳು ತಮ್ಮ ಕ್ಯಾಂಪಸ್‌ಗಳಲ್ಲಿ ದಾಂಧಲೆ ಸೃಷ್ಟಿಸಿ, ಪ್ಯಾಲೆಸ್ಟೈನ್ ಪರ (Pro-Palestine) ಪ್ರತಿಭಟನೆಗಳನ್ನು ನಡೆಸುತ್ತಿರುವುದು ಯುಎಸ್ ಉನ್ನತ ವಿಶ್ವವಿದ್ಯಾಲಯಗಳನ್ನು ಬೆಚ್ಚಿಬೀಳಿಸಿದೆ. ನ್ಯೂಯಾರ್ಕ್‌ನ ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ಮೊದಲು ಪ್ರತಿಭಟನೆ ಪ್ರಾರಂಭವಾಯಿತು. ಈಗ ಅದು ದೇಶಾದ್ಯಂತ ಕಾಲೇಜುಗಳಿಗೆ ಆವರಿಸಿಕೊಂಡಿದೆ.

  • ಅಮೆರಿಕದಲ್ಲಿ ಸಿಡಿಲಿನ ಹೊಡೆತ – ಆಸ್ಪತ್ರೆಯಲ್ಲಿ ಭಾರತೀಯ ಮೂಲದ ವಿದ್ಯಾರ್ಥಿನಿ ಜೀವನ್ಮರಣ ಹೋರಾಟ

    ಅಮೆರಿಕದಲ್ಲಿ ಸಿಡಿಲಿನ ಹೊಡೆತ – ಆಸ್ಪತ್ರೆಯಲ್ಲಿ ಭಾರತೀಯ ಮೂಲದ ವಿದ್ಯಾರ್ಥಿನಿ ಜೀವನ್ಮರಣ ಹೋರಾಟ

    – ಭಾರತಕ್ಕೆ ಏರ್‌ಲಿಫ್ಟ್‌ ಮಾಡಿ ಅಂತ ಕುಟುಂಬ ಮನವಿ

    ನ್ಯೂಯಾರ್ಕ್:‌ ಅಮೆರಿಕದಲ್ಲಿ (America) ಸಿಡಿಲಿನ ಆಘಾತಕ್ಕೆ ಸಿಲುಕಿದ್ದ ಭಾರತೀಯ ಮೂಲದ ವಿದ್ಯಾರ್ಥಿನಿಯೊಬ್ಬರು (Indian Origin Student) ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.

    ಯೂನಿವರ್ಸಿಟಿ ಆಫ್‌ ಹೂಸ್ಟನ್‌ನಲ್ಲಿ ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಅಧ್ಯಯನ ಮಾಡುತ್ತಿರುವ ಸುಸ್ರೂಣ್ಯ ಕೋಡೂರು ಜೀವನ್ಮರಣ ಹೋರಾಟ ನಡೆಸುತ್ತಿರುವ ವಿದ್ಯಾರ್ಥಿನಿ. ಈಕೆ ಸ್ಯಾನ್‌ ಜಸಿಂಟೋ ಸ್ಮಾರಕ ಉದ್ಯಾನದಲ್ಲಿ ಸ್ನೇಹಿತರೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಸಿಡಿಲು ಬಡಿದಿತ್ತು. ಇದನ್ನೂ ಓದಿ: ಏಸು ಭೇಟಿಗಾಗಿ ಉಪವಾಸ – 400ಕ್ಕೂ ಹೆಚ್ಚು ಮಂದಿ ಸಾವು, 610 ಜನ ನಾಪತ್ತೆ

    ಸಿಡಿಲ ಬಡಿತದ ಪರಿಣಾಮ ಆಕೆ ಪಕ್ಕದಲ್ಲಿದ್ದ ಕೊಳಕ್ಕೆ ಬಿದ್ದಿದ್ದಳು. ಈ ವೇಳೆ ಹೃದಯ ಸ್ತಂಭನ ಕೂಡ ಆಗಿದೆ. ಮೆದುಳಿಗೂ ಹಾನಿಯಾಗಿದೆ. ಕೋಮಾ ಸ್ಥಿತಿಯಲ್ಲಿರುವ ಆಕೆಗೆ ಸ್ವಂತವಾಗಿ ಉಸಿರಾಡಲು ಸಾಧ್ಯವಾಗುತ್ತಿಲ್ಲ. ಟ್ರಾಕಿಯೊಸ್ಟೊಮಿಯೊಂದಿಗೆ ವೆಂಟಿಲೇಟರ್ ಬೆಂಬಲದ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆಸ್ಪತ್ರೆ ಸೇರಿರುವ ವಿದ್ಯಾರ್ಥಿನಿಯ ಸ್ಥಿತಿ ಗಂಭೀರವಾಗಿದೆ. ಕುಟುಂಬವು ವೈದ್ಯಕೀಯ ವೆಚ್ಚಕ್ಕಾಗಿ GoFundMe ಮೂಲಕ ಸಹಾಯ ಯಾಚಿಸಿದೆ.

    ಆಕೆಯನ್ನು ಭಾರತಕ್ಕೆ ಏರ್‌ಲಿಫ್ಟ್ ಮಾಡಲು ಕುಟುಂಬವು ಮನವಿ ಮಾಡಿದೆ. ಸದ್ಯ ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿನಿಗೆ ಹೆಚ್ಚಿನ ಆರೈಕೆ ಬೇಕಿದೆ. ಆಕೆಯನ್ನು ಭಾರತಕ್ಕೆ ವಾಪಸ್‌ ಕರೆತರಲು ಕುಟುಂಬದವರು ಮುಂದಾಗಿದ್ದಾರೆ. ಇದನ್ನೂ ಓದಿ: ಅಮೆರಿಕದ ಟಾಪ್ ಸೀಕ್ರೆಟ್ ಪ್ಲೇಸ್ – ಅಂಥಾದ್ದೇನಿದೆ ಏರಿಯಾ 51ರಲ್ಲಿ?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]