Tag: indian origin

  • ಅಮೆರಿಕದ ರಹಸ್ಯ ದಾಖಲೆಗಳ ಸಂಗ್ರಹ ಆರೋಪ – ಭಾರತ ಮೂಲದ ವಿದೇಶಾಂಗ ನೀತಿ ತಜ್ಞ ಆಶ್ಲೇ ಟೆಲ್ಲಿಸ್ ಅರೆಸ್ಟ್‌

    ಅಮೆರಿಕದ ರಹಸ್ಯ ದಾಖಲೆಗಳ ಸಂಗ್ರಹ ಆರೋಪ – ಭಾರತ ಮೂಲದ ವಿದೇಶಾಂಗ ನೀತಿ ತಜ್ಞ ಆಶ್ಲೇ ಟೆಲ್ಲಿಸ್ ಅರೆಸ್ಟ್‌

    – ಆರೋಪ ಸಾಬೀತಾದ್ರೆ 10 ವರ್ಷ ಜೈಲು, 2.21 ಕೋಟಿ ದಂಡ
    – ರಹಸ್ಯ ದಾಖಲೆಗಳೊಂದಿಗೆ ಚೀನಾ ಅಧಿಕಾರಿಗಳನ್ನ ಭೇಟಿಯಾದ್ರಾ ಆಶ್ಲೇ?

    ವಾಷಿಂಗ್ಟನ್‌: ಅಮೆರಿಕ ರಾಷ್ಟ್ರದ ರಕ್ಷಣೆಗೆ ಸಂಬಂಧಿಸಿದ ರಹಸ್ಯ ದಾಖಲೆಗಳನ್ನ (US Secret Documents) ಅನಧಿಕೃತವಾಗಿ ತಮ್ಮ ಬಳಿ ಸಂಗ್ರಹಿಸಿದ್ದ ಹಾಗೂ ಕೆಲ ವರ್ಷದ ಹಿಂದೆ ಚೀನಾ ಜೊತೆ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಭಾರತದ ಮುಂಬೈ ಮೂಲದ ಅಮೆರಿಕನ್ ವಿಶ್ಲೇಷಕ ಹಾಗೂ ವಿದೇಶಾಂಗ ನೀತಿ ತಜ್ಞ ಆಶ್ಲೇ ಟೆಲ್ಲಿಸ್‌ರನ್ನ (Ashley Tellis) ಬಂಧಿಸಲಾಗಿದೆ.

    64 ವರ್ಷದ ಆಶ್ಲೇ ಟೆಲ್ಲಿಸ್ ತಮ್ಮ ವಿಯೆನ್ನಾ, ವರ್ಜೀನಿಯಾದ ಮನೆಯಲ್ಲಿ ವಾಯುಪಡೆಯ ತಂತ್ರಗಳು ಮತ್ತು ವಿಧಾನಗಳಿಗೆ ಸಂಬಂಧಿಸಿದ 1000ಕ್ಕೂ ಹೆಚ್ಚು ಪುಟಗಳಷ್ಟು ರಹಸ್ಯ ದಾಖಲೆಗಳನ್ನು ಇಟ್ಟುಕೊಂಡಿದ್ದರು. ಈ ಮೂಲಕ 18 USC § 793(e) ನಿಯಮ ಉಲ್ಲಂಘನೆ ಮಾಡಿದ್ದಾರೆ. ಶನಿವಾರ ಅವರನ್ನ ಬಂಧಿಸಿದ್ದು, ಸೋಮವಾರ ಅಧಿಕೃತವಾಗಿ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿದೆ ಎಂದು ವರ್ಜೀನಿಯಾದ ಪೂರ್ವ ಜಿಲ್ಲೆಯ ಅಮೆರಿಕದ ಅಟಾರ್ನಿ ಕಚೇರಿ ತಿಳಿಸಿದೆ.

    ಮುಂಬೈ ಮೂಲದ ಆಶ್ಲೇ ಈ ಹಿಂದೆ ಅಧ್ಯಕ್ಷರಾಗಿದ್ದ ಜಾರ್ಜ್ ಡಬ್ಲ್ಯೂ. ಬುಷ್ ಅವರ ಅಡಿಯಲ್ಲಿ ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ ಕೆಲಸ ಮಾಡಿದ್ದರು. ವಿದೇಶಾಂಗ ಇಲಾಖೆಗೆ ಗೌರವ ಸಂಭಾವನೆ ರಹಿತ ಸಲಹೆಗಾರರಾಗಿಯೂ ಮತ್ತು ಪೆಂಟಗನ್‌ ಆಫೀಸ್ ಆಫ್ ನೆಟ್ ಅಸೆಸ್‌ಮೆಂಟ್‌ನ ಗುತ್ತಿಗೆದಾರರಾಗಿಯೂ ವೃತ್ತಿ ಜೀವನ ನಡೆಸಿದ್ದಾರೆ. ಭಾರತ ಮತ್ತು ದಕ್ಷಿಣ ಏಷ್ಯಾಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಅಮೆರಿಕ ಆಡಳಿತಗಳಿಗೆ ಸಲಹೆ ನೀಡುವಲ್ಲಿ ಟೆಲ್ಲಿಸ್ ಹೆಸರುವಾಸಿಯಾಗಿದ್ದಾರೆ.

    ಏನಿದು ರಹಸ್ಯ ದಾಖಲೆ?
    ಅಮೆರಿಕ ಸೇನಾ ವಿಮಾನಗಳ ಸಾಮರ್ಥ್ಯಕ್ಕೆ ಸಂಬಂಧಿಸಿದ ಗೌಪ್ಯ ಕಡತಗಳನ್ನ 2025ರ ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ರಕ್ಷಣಾ ಮತ್ತು ವಿದೇಶಾಂಗ ಇಲಾಖೆಗಳ ಕಟ್ಟಡದಿಂದ ರಹಸ್ಯ ಮಾಹಿತಿ ಸಂಗ್ರಹಿಸಿದ್ದಾರೆ. ದಾಖಲೆಗಳನ್ನ ಮುದ್ರಿಸಿ ಲೆದರ್ ಬ್ರೀಫ್‌ಕೇಸ್‌ನೊಂದಿಗೆ ಒಂದು ಕಟ್ಟಡದಿಂದ ಹೊರಬರುತ್ತಿರುವುದು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಅಕ್ಟೋಬರ್ 11 ರಂದು ಅವರ ನಿವಾಸದಲ್ಲಿ ಶೋಧ ನಡೆಸಿದಾಗ ಹಲವಾರು ರಹಸ್ಯ ಕಡತಗಳು ಪತ್ತೆಯಾಗಿವೆ. ಕಸದ ಬುಟ್ಟಿಯಲ್ಲಿಯೂ ದಾಖಲೆಗಳು ಸಿಕ್ಕಿವೆ ಎಂದು ವರದಿಗಳಿಂದ ತಿಳಿದುಬಂದಿದೆ. ಬಳಿಕ ಅವರನ್ನ ಬಂಧಿಸಲಾಗಿದೆ.

    ಚೀನಾ ಭೇಟಿ ಸಾಧ್ಯತೆ
    ಆಶ್ಲೇ ಅಧಿಕೃತ ಕಡತಗಳನ್ನು ಅಪಹರಿಸಿದ ಬಳಿಕ ಚೀನಾದ ಅಧಿಕಾರಿಗಳನ್ನು ಭೇಟಿ ಮಾಡಿದ್ದಾರೆ ಎಂಬ ಅನುಮಾನ ಹುಟ್ಟಿಕೊಂಡಿದೆ. ಹೀಗಾಗಿ ಚೀನಾದ ಅಧಿಕಾರಿಗಳನ್ನು ಭೇಟಿ ಮಾಡಿದ್ದಾರೆಯೇ? ಅವರ ಬಳಿಕ ವರದಿ ಹಂಚಿಕೊಂಡಿದ್ದಾರೆಯೇ ಅನ್ನೋದನ್ನೂ ಅಮೆರಿಕದ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ಯುಎಸ್‌ ಪ್ರಾಸಿಕ್ಯೂಟರ್‌ಗಳು ತಿಳಿಸಿದ್ದಾರೆ.

    ಆರೋಪ ಸಾಬೀತಾದ್ರೆ ಜೈಲೇ ಗತಿ
    ಒಂದು ವೇಳೆ ಆಶ್ಲೇ ಅವರ ವಿರುದ್ಧ ಹೊರಿಸಲಾದ ಆರೋಪ ಸಾಬೀತಾದ್ರೆ 10 ವರ್ಷಗಳ ಜೈಲುಶಿಕ್ಷೆ ಹಾಗೂ 2.50 ಲಕ್ಷ ಡಾಲರ್‌ (2.21 ಕೋಟಿ ರೂ.) ದಂಡ ಪಾವತಿಸಬೇಕಾಗುತ್ತದೆ. ಜೊತೆಗೆ ಅವರ ಆಸ್ತಿಯನ್ನು ಅಮೆರಿಕ ಮುಟ್ಟುಗೋಲು ಹಾಕಿಕೊಳ್ಳಲಿದೆ.

    ಆಶ್ಲೇ ಟೆಲ್ಲಿಸ್ ಯಾರು?
    2001 ರಲ್ಲಿ ಅಮೆರಿಕ ಸರ್ಕಾರ ಸೇರಿದ್ದ ಟೆಲ್ಲಿಸ್, ಭಾರತ ಮತ್ತು ದಕ್ಷಿಣ ಏಷ್ಯಾ ಬಗ್ಗೆ ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಆಡಳಿತಗಳಿಗೆ ಸಲಹೆ ನೀಡಿದ್ದಾರೆ. ಮುಂಬೈನಲ್ಲಿ ಜನಿಸಿದ ಟೆಲ್ಲಿಸ್, ಸೇಂಟ್ ಕ್ಸೇವಿಯರ್ಸ್ ಕಾಲೇಜಿನಲ್ಲಿ ಓದಿದ್ದು, ನಂತರ ಚಿಕಾಗೋ ವಿಶ್ವವಿದ್ಯಾಲಯದಿಂದ ಪಿಹೆಚ್‌ಡಿ ಪಡೆದಿದ್ದಾರೆ. ಅವರು ಚಿಕಾಗೋ ವಿಶ್ವವಿದ್ಯಾಲಯದಿಂದಲೇ ರಾಜಕೀಯ ವಿಜ್ಞಾನದಲ್ಲಿ ಎಂಎ ಪದವಿಯನ್ನೂ ಹೊಂದಿದ್ದಾರೆ. ವರ್ಷಗಳಲ್ಲಿ, ಟೆಲ್ಲಿಸ್ ಅಮೆರಿಕ-ಭಾರತ-ಚೀನಾ ನೀತಿ ವಲಯದಲ್ಲಿ ಗುರುತಿಸಿಕೊಂಡಿದ್ದರು. ವೇದಿಕೆಗಳಲ್ಲಿ ಪರಿಚಿತ ಮುಖವಾಗಿದ್ದ ಅವರು, ವಾಷಿಂಗ್ಟನ್, ನವದೆಹಲಿ ಮತ್ತು ಬೀಜಿಂಗ್‌ನಲ್ಲಿ ಅವರ ಬರಹಗಳನ್ನು ಗೌರವಿಸಲಾಗುತ್ತಿತ್ತು.

  • ಅಮೆರಿಕದಲ್ಲಿ ಕಾರು ಅಪಘಾತ; ನಾಪತ್ತೆಯಾಗಿದ್ದ ಭಾರತೀಯ ಮೂಲದ ನಾಲ್ವರ ಮೃತದೇಹ ಪತ್ತೆ

    ಅಮೆರಿಕದಲ್ಲಿ ಕಾರು ಅಪಘಾತ; ನಾಪತ್ತೆಯಾಗಿದ್ದ ಭಾರತೀಯ ಮೂಲದ ನಾಲ್ವರ ಮೃತದೇಹ ಪತ್ತೆ

    ವಾಷಿಂಗ್ಟನ್: ಪಶ್ಚಿಮ ವರ್ಜೀನಿಯಾದ ಆಧ್ಯಾತ್ಮಿಕ ಸ್ಥಳಕ್ಕೆ ಹೋಗುವ ಮಾರ್ಗಮಧ್ಯೆ ನಾಪತ್ತೆಯಾಗಿದ್ದ ನ್ಯೂಯಾರ್ಕ್ನ ಒಂದೇ ಕುಟುಂಬದ ಭಾರತೀಯ ಮೂಲದ ನಾಲ್ವರು ಶವವಾಗಿ ಪತ್ತೆಯಾಗಿದ್ದಾರೆ.

    ಮೃತರನ್ನು ಆಶಾ ದಿವಾನ್ (85), ಕಿಶೋರ್ ದಿವಾನ್ (89), ಶೈಲೇಶ್ ದಿವಾನ್ (86) ಮತ್ತು ಗೀತಾ ದಿವಾನ್ (84) ಎಂದು ಗುರುತಿಸಲಾಗಿದೆ.

    ಕುಟುಂಬವು ಬಫಲೋದಿಂದ ಪಶ್ಚಿಮ ವರ್ಜೀನಿಯಾದ ಮಾರ್ಷಲ್ ಕೌಂಟಿಯಲ್ಲಿರುವ ಪ್ರಭುಪಾದರ ಪ್ಯಾಲೇಸ್ ಆಫ್ ಗೋಲ್ಡ್ಗೆ ಟೊಯೊಟಾ ಕ್ಯಾಮ್ರಿಯಲ್ಲಿ ನ್ಯೂಯಾರ್ಕ್ ಪರವಾನಗಿ ಪ್ಲೇಟ್ ಇಏW2611 ಅನ್ನು ಹೊಂದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ನ್ಯೂಯಾರ್ಕ್ನ ಬಫಲೋದಿಂದ ನಾಪತ್ತೆಯಾಗಿದ್ದ ನಾಲ್ವರು, ವಾಹನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಮಾರ್ಷಲ್ ಕೌಂಟಿ ಶೆರಿಫ್ ಮೈಕ್ ಡೌಘರ್ಟಿ ದೃಢಪಡಿಸಿದ್ದಾರೆ.

    ಶನಿವಾರ ರಾತ್ರಿ 9:30 ರ ಸುಮಾರಿಗೆ (ಸ್ಥಳೀಯ ಸಮಯ) ಬಿಗ್ ವೀಲಿಂಗ್ ಕ್ರೀಕ್ ರಸ್ತೆಯ ಕಡಿದಾದ ಒಡ್ಡಿನಲ್ಲಿ ಮೃತದೇಹಗಳು ಮತ್ತು ಅಪಘಾತಕ್ಕೀಡಾದ ವಾಹನ ಪತ್ತೆಯಾಗಿದೆ ಎಂದು ಶೆರಿಫ್ ತಿಳಿಸಿದ್ದಾರೆ.

    ಹಿರಿಯ ನಾಗರಿಕರು ಕೊನೆಯ ಬಾರಿಗೆ ಜು.29 ರಂದು ಪೆನ್ಸಿಲ್ವೇನಿಯಾದ ಬರ್ಗರ್ ಕಿಂಗ್ ಔಟ್‌ಲೆಟ್‌ನಲ್ಲಿ ಕಾಣಿಸಿಕೊಂಡಿದ್ದರು ಎಂದು ವರದಿಯಾಗಿದೆ. ಬರ್ಗರ್ ಕಿಂಗ್ ಔಟ್‌ಲೆಟ್‌ನ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಗುಂಪಿನ ಇಬ್ಬರು ಸದಸ್ಯರು ರೆಸ್ಟೋರೆಂಟ್‌ಗೆ ಪ್ರವೇಶಿಸುತ್ತಿರುವುದು ಕಂಡುಬAದಿದೆ. ಅವರ ಕೊನೆಯ ಕ್ರೆಡಿಟ್ ಕಾರ್ಡ್ ವಹಿವಾಟು ಸಹ ಅದೇ ಸ್ಥಳದಲ್ಲಿ ಪತ್ತೆಹಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ಗರ್ಭಿಣಿ, ವೃದ್ಧನ ಮೇಲೆ ಕಾರು ಹರಿಸಿದ ಭಾರತೀಯ ಮೂಲದ ಚಾಲಕನಿಗೆ 16 ವರ್ಷ ಜೈಲು ಶಿಕ್ಷೆ

    ಗರ್ಭಿಣಿ, ವೃದ್ಧನ ಮೇಲೆ ಕಾರು ಹರಿಸಿದ ಭಾರತೀಯ ಮೂಲದ ಚಾಲಕನಿಗೆ 16 ವರ್ಷ ಜೈಲು ಶಿಕ್ಷೆ

    ಲಂಡನ್: ಡ್ರಗ್ಸ್‌ ಸೇವಿಸಿ ವಾಹನ ಚಲಾಯಿಸಿದ್ದಕ್ಕೆ ಕಾರು ನಿಯಂತ್ರಣ ತಪ್ಪಿ ಗರ್ಭಿಣಿ ಹಾಗೂ ಆಕೆ ತಂದೆಯ ಸಾವಿಗೆ ಕಾರಣನಾದ ಭಾರತೀಯ ಮೂಲದ (Indian Origin) ಚಾಲಕನಿಗೆ 16 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

    ಆಗ್ನೇಯ ಇಂಗ್ಲೆಂಡ್‌ನ (England) ಕಡಲತೀರದ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಸ್ಥಳೀಯ ಪೊಲೀಸರ ಪ್ರಕಾರ, ಚಾಲಕ ನಿತೇಶ್ ಬಿಸೆಂಡರಿ ವಾಹನ ಕೆಂಟ್‌ನ ರಾಮ್ಸ್‌ಗೇಟ್‌ನಲ್ಲಿ ನಿಯಂತ್ರಣ ತಪ್ಪಿದೆ. ಈ ವೇಳೆ ಸಂಭವಿಸಿದ ಅಪಘಾತದಲ್ಲಿ ಗರ್ಭಿಣಿ ಹಾಗೂ ಆಕೆಯ ತಂದೆ ಸಾವನ್ನಪ್ಪಿದ್ದಾರೆ. ಇಬ್ಬರು ಮಕ್ಕಳು ಸೇರಿ ಮೂವರು ಗಾಯಗೊಂಡಿದ್ದಾರೆ. ಇದನ್ನೂ ಓದಿ: 18-25 ವರ್ಷದ ಒಳಗಿನ ಫ್ರಾನ್ಸ್‌ ಯುವಜನತೆಗೆ ಉಚಿತ ಕಾಂಡೋಮ್‌

    ನೊಗಾ ಸೆಲ್ಲಾ (37) ಗರ್ಭಿಣಿ ಹಾಗೂ ಆಕೆಯ ತಂದೆ ಯೋರಾಮ್ ಹಿರ್ಶ್‌ಫೆಲ್ಡ್ (81) ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಸೆಲ್ಲಾಳ ಪತಿ ಓಮರ್ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ವಿಚಾರಣೆಯ ನಂತರ ಅಪರಾಧಿಗೆ 16 ವರ್ಷಗಳ ಕಾಲ ಜೈಲು ಶಿಕ್ಷೆ ಹಾಗೂ ಕಸ್ಟಡಿ ಶಿಕ್ಷೆಯ ನಂತರ 10 ವರ್ಷಗಳ ಕಾಲ ವಾಹನ ಚಲಾಯಿಸಲು ಅನರ್ಹಗೊಳಿಸಿ ಕ್ಯಾಂಟರ್ಬರಿ ಕ್ರೌನ್ ಕೋರ್ಟ್‌ ಆದೇಶ ಹೊರಡಿಸಿದೆ. ಇದನ್ನೂ ಓದಿ: ಗಾಯವನ್ನೂ ಲೆಕ್ಕಿಸದೇ ಆಡಿದ ಹಿಟ್‌ಮ್ಯಾನ್‌ ಹೋರಾಟ ವ್ಯರ್ಥ – ಬಾಂಗ್ಲಾದೇಶಕ್ಕೆ ಏಕದಿನ ಸರಣಿ

    ಅಪಘಾತದ ಜವಾಬ್ದಾರಿಯನ್ನು ಹೊರಲು ಚಾಲಕ ನಿರಾಕಿಸಿದ್ದ. ಅಷ್ಟೇ ಅಲ್ಲದೇ ಅಪಘಾತದ ನಂತರ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕ್ಯಾಲಿಫೋರ್ನಿಯಾ – ಕಿಡ್ನ್ಯಾಪ್‌ ಆಗಿದ್ದ ಭಾರತ ಮೂಲದ ಒಂದೇ ಕುಟುಂಬದ ನಾಲ್ವರು ಶವವಾಗಿ ಪತ್ತೆ

    ಕ್ಯಾಲಿಫೋರ್ನಿಯಾ – ಕಿಡ್ನ್ಯಾಪ್‌ ಆಗಿದ್ದ ಭಾರತ ಮೂಲದ ಒಂದೇ ಕುಟುಂಬದ ನಾಲ್ವರು ಶವವಾಗಿ ಪತ್ತೆ

    ವಾಷಿಂಗ್ಟನ್‌: ಕ್ಯಾಲಿಫೋರ್ನಿಯಾದಲ್ಲಿ (California) ಕಿಡ್ನ್ಯಾಪ್‌ ಆಗಿದ್ದ ಭಾರತ ಮೂಲದ 8 ತಿಂಗಳ ಮಗು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಶವವಾಗಿ ಪತ್ತೆಯಾಗಿದ್ದಾರೆ.

    8 ತಿಂಗಳ ಮಗು ಅರೂಹಿ ಧೇರಿ ಮತ್ತು ಪೋಷಕರಾದ ಜಸ್ಲೀನ್ ಕೌರ್ (27), ಜಸ್ದೀಪ್ ಸಿಂಗ್ (36) ಹಾಗೂ ಚಿಕ್ಕಪ್ಪ ಅಮನದೀಪ್ ಸಿಂಗ್ (39) ಅವರನ್ನು ಕೆಲ ದಿನಗಳ ಹಿಂದೆ ಅಪಹರಿಸಲಾಗಿತ್ತು. ಈಗ ಹಣ್ಣಿನ ತೋಟವೊಂದರಲ್ಲಿ ನಾಲ್ವರ ಮೃತದೇಹ ಪತ್ತೆಯಾಗಿದೆ. ಇದನ್ನೂ ಓದಿ: ಅಮೆರಿಕದಲ್ಲಿ ಭಾರತ ಮೂಲದ 8 ತಿಂಗಳ ಮಗು ಸೇರಿ ನಾಲ್ವರು ಕಿಡ್ನ್ಯಾಪ್‌

    ನಾಲ್ವರ ಶವಗಳು ಇಂಡಿಯಾನಾ ರಸ್ತೆ ಮತ್ತು ಹಚಿನ್ಸನ್ ರಸ್ತೆ ಬಳಿಯ ಹಣ್ಣಿನ ತೋಟದಲ್ಲಿ ಬುಧವಾರ ಸಂಜೆ ಪತ್ತೆಯಾಗಿವೆ. ತೋಟದ ರೈತ ಶವಗಳನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಕುಟುಂಬದವರನ್ನು ಅಪಹರಿಸಿದ ಒಂದು ದಿನದ ನಂತರ ಪೊಲೀಸರು, ಜೀಸಸ್ ಮ್ಯಾನುಯೆಲ್ ಸಲ್ಗಾಡೊ ಹೆಸರಿನ ಶಂಕಿತನನ್ನು ಬಂಧಿಸಿದ್ದರು. ಈ ವೇಳೆ ಬಂಧಿತ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆತನನ್ನು ಪ್ರಾಣಾಪಾಯದಿಂದ ಉಳಿಸಿದ ಪೊಲೀಸರು, ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಇದನ್ನೂ ಓದಿ: ಹಿಜಬ್‌ ಧರಿಸದ್ದಕ್ಕೆ ಡಿಬಾರ್‌ – ಇರಾನ್‌ನಲ್ಲಿ ಪ್ರತಿಭಟನೆಗೆ ಧುಮುಕಿದ ಶಾಲಾ ಮಕ್ಕಳು

    2019 ರಲ್ಲೂ ಭಾರತೀಯ ಮೂಲದ ಟೆಕ್ಕಿ ತುಷಾರ್ ಅಟ್ರೆ ಅವರು ಯುಎಸ್‌ನಲ್ಲಿ ಕಿಡ್ನ್ಯಾಪ್‌ ಆಗಿದ್ದರು. ನಂತರ ಗೆಳತಿಯ ಕಾರಿನಲ್ಲಿ ಟೆಕ್ಕಿ ಶವ ಪತ್ತೆಯಾಗಿತ್ತು.

    Live Tv
    [brid partner=56869869 player=32851 video=960834 autoplay=true]