Tag: Indian Oil Corporation Limited

  • ಪಿಎಂಯುವೈ ಗ್ರಾಹಕರಿಗೆ ಉಚಿತ ಗ್ಯಾಸ್ ಸಿಲಿಂಡರ್ ವಿತರಣೆ

    ಪಿಎಂಯುವೈ ಗ್ರಾಹಕರಿಗೆ ಉಚಿತ ಗ್ಯಾಸ್ ಸಿಲಿಂಡರ್ ವಿತರಣೆ

    ಬೆಂಗಳೂರು: ಪಿಎಂಯುವೈ(ಪ್ರಧಾನಮಂತ್ರಿ ಉಜ್ವಲ್ ಯೋಜನೆ) ಗ್ಯಾಸ್ ಸಿಲಿಂಡರ್ ಬಳಕೆ ಮಾಡುವವರು ಆತಂಕ ಪಡಬೇಕಿಲ್ಲ. ಯಾಕೆಂದರೆ ಈ ತಿಂಗಳಿನಿಂದ ಮೇ, ಜೂನ್ ತನಕ ಅಂದರೆ ಮೂರು ಕಂತುಗಳಲ್ಲಿ ಉಚಿತ ಗ್ಯಾಸ್ ಸಿಲಿಂಡರ್‌ಗಳನ್ನು ಬಳಕೆದಾರರಿಗೆ ಹಂಚಿಕೆ ಮಾಡಲಾಗುತ್ತಿದೆ.

    ಈ ಬಗ್ಗೆ ಪಬ್ಲಿಕ್ ಟಿವಿಗೆ ಇಂಡಿಯನ್ ಆಯಿಲ್ ಕಾರ್ಪೋರೇಶನ್ ಲಿಮಿಟೆಡ್ ನ ಜನರಲ್ ಮ್ಯಾನೆಜರ್ ನೂರಾನಾ ಹೇಳಿಕೆ ನೀಡಿದ್ದಾರೆ. ಉಜ್ವಲ್ ಯೋಜನೆಯ ಗ್ರಾಹಕರಿಗೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ ಅಡಿಯಲ್ಲಿ ಉಚಿತವಾಗಿ ಗ್ಯಾಸ್ ಸಿಲಿಂಡರ್ ಹಂಚಿಕೆ ಮಾಡಲಾಗುತ್ತಿದೆ. 14.2 ಕೆಜಿ ತೂಕದ ಗ್ಯಾಸ್ ಸಿಲಿಂಡರ್‌ಗಳನ್ನು ಹಂಚಿಕೆ ಮಾಡಲಾಗುತ್ತಿದೆ. ಈ ಯೋಜನೆಯ ಗ್ರಾಹಕರಿಗೆ ಸಮರ್ಪಕವಾಗಿ ಗ್ಯಾಸ್ ಸಿಲಿಂಡರ್‌ಗಳನ್ನು ಆಯಿಲ್ ಮಾರ್ಕೆಟಿಂಗ್ ಕಂಪನಿಗಳು ವಿತರಿಸಲಿದ್ದಾರೆ ಎಂದು ನೂರಾನಾ ಅವರು ಮಾಹಿತಿ ನೀಡಿದ್ದಾರೆ.

    ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್, ಭಾರತ್ ಪೆಟ್ರೋಲಿಯಂ, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್‍ನಿಂದ ಸಿಲಿಂಡರ್‌ಗಳನ್ನು ನೀಡಲಿದ್ದಾರೆ. ಆನ್‍ಲೈನ್ ಮೂಲಕ ಡೋರ್ ಟು ಡೋರ್ ಸೇವೆಯನ್ನು ಕಲ್ಪಿಸಿಕೊಂಡಲಾಗುತ್ತಿದೆ. ಸದ್ಯ ರಾಜ್ಯದಲ್ಲಿ 31 ಲಕ್ಷ ಮಂದಿ ಉಜ್ವಲ್ ಯೋಜನೆಯಲ್ಲಿ ಬರಲಿದ್ದು, ಈ ಪೈಕಿ 18 ಲಕ್ಷ ಗ್ರಾಹಕರಿಗೆ ಈಗಾಗಲೇ ಸಿಲಿಂಡರ್ ವಿತರಣೆಯನ್ನು ಮನೆ ಬಾಗಿಲಿಗೆ ಡಿಸ್ಟ್ರಿಬ್ಯೂಟರ್ಸ್ ಮಾಡುತ್ತಿದ್ದಾರೆ.