Tag: Indian Oil Corporation

  • 3 ಮಿಲಿಯನ್ ಬ್ಯಾರಲ್ ಕಚ್ಚಾ ತೈಲ ಆಮದಿಗೆ ರಷ್ಯಾದೊಂದಿಗೆ ಭಾರತ ಒಪ್ಪಂದ

    3 ಮಿಲಿಯನ್ ಬ್ಯಾರಲ್ ಕಚ್ಚಾ ತೈಲ ಆಮದಿಗೆ ರಷ್ಯಾದೊಂದಿಗೆ ಭಾರತ ಒಪ್ಪಂದ

    ನವದೆಹಲಿ: ಭಾರತಕ್ಕೆ 3 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳಲು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿಎಲ್) ರಷ್ಯಾದ ತೈಲ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

    ಇದು ಸರ್ಕಾರದ ಮಟ್ಟದಲ್ಲಿ ನಡೆದ ಒಪ್ಪಂದವಲ್ಲ, ತೈಲ ಕಂಪನಿಗಳ ನಡುವೆ ಮಾಡಿಕೊಂಡಿರುವ ಒಪ್ಪಂದ ಆಗಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ಮಾದರಿಯಲ್ಲಿ ಯಾವೆಲ್ಲ ಚಿತ್ರಗಳು ಬರಬೇಕು : ಪ್ರಕಾಶ್ ರೈ ಲಿಸ್ಟ್ ನೋಡಿ

    ಉಕ್ರೇನ್ ಮೇಲಿನ ದಾಳಿಗೆ ಪ್ರತಿಯಾಗಿ ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾದ ಮೇಲೆ ನಿಬರ್ಂಧಗಳನ್ನು ವಿಧಿಸಿದ್ದರೂ, ರಷ್ಯಾದ ತೈಲ ಕಂಪನಿಗಳಿಂದ ಕಚ್ಚಾ ತೈಲ ಖರೀದಿಸಲು ಭಾರತೀಯ ತೈಲ ಕಂಪನಿಗಳಿಗೆ ಯಾವುದೇ ನಿಬರ್ಂಧಗಳಿಲ್ಲ. ಆದ್ದರಿಂದ ಎರಡೂ ಕಂಪನಿಗಳ ನಡುವೆ ಈ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ. ಭಾರತದ ಬಹುತೇಕ ಕಂಪನಿಗಳು ಸಹ ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳಲು ಸಹಮತ ವ್ಯಕ್ತಪಡಿಸಿವೆ ಎಂದು ಐಇಸಿಎಲ್ ಮೂಲಗಳು ತಿಳಿಸಿವೆ.

    ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಒಂದು ಬ್ಯಾರಲ್‍ಗೆ ಗರಿಷ್ಠ 100 ಡಾಲರ್ (ಸುಮಾರು 7,594.67 ರೂ.) ಇರುತ್ತಿತ್ತು. ಆದರೆ ಉಕ್ರೇನ್ ಆಕ್ರಮಣದ ನಂತರ ಕಚ್ಚಾ ತೈಲವು ಬ್ಯಾರಲ್‍ಗೆ 140 ಡಾಲರ್ (ಸುಮಾರು 10,632.53 ರೂ.) ತಲುಪಿದೆ. ಇದು ಗರಿಷ್ಠ ಮಟ್ಟದ ಏರಿಕೆಯಾಗಿದೆ ಎಂದು ಕಂಪನಿಗಳು ಅಂದಾಜಿಸಿವೆ. ಇದನ್ನೂ ಓದಿ: ಭಾರತೀಯ ಮೂಲದ ಗೆಳತಿ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗ್ಲೆನ್ ಮ್ಯಾಕ್ಸ್‌ವೆಲ್

    ಅಮೆರಿಕದ ಆಮದು ಶೇ.11 ಹೆಚ್ಚಳ
    ರಷ್ಯಾದ ಮೇಲಿನ ನಿರ್ಬಂಧವನ್ನು ತಿರಸ್ಕರಿಸಿರುವ ಭಾರತವು ಪ್ರಸಕ್ತ ವರ್ಷದಲ್ಲಿ ಅಮೆರಿಕದಿಂದಲೂ ಶೇ.11 ರಷ್ಟು ಕಚ್ಚಾ ತೈಲ ಆಮದು ಮಾಡಿಕೊಂಡಿರುವುದು ಕಂಡುಬಂದಿದೆ. ಈಗಾಗಲೇ ಭಾರತವು ಇರಾಕ್‍ನಿಂದÀ ಶೇ.23, ಸೌದಿ ಅರೇಬಿಯಾದಿಂದ ಶೇ.18ರಷ್ಟು ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್‍ನಿಂದ ಶೇ.11ರಷ್ಟು ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಈ ನಡುವೆ ಭಾರತೀಯ ಮಾರುಕಟ್ಟೆಯ ಯುಎಸ್ ಪಾಲು ಶೇ.8ಕ್ಕೆ ಏರಲಿದೆ ಎಂದು ಹೇಳಲಾಗಿತ್ತು. ಆದರೆ ಪ್ರಸಕ್ತ ವರ್ಷದಲ್ಲಿ ಶೇ.11 ರಷ್ಟು ಆಮದು ಮಾಡಿಕೊಂಡಿರುವುದು ಗಮನಾರ್ಹ ಅಂಶವಾಗಿದೆ.

  • ಇನ್ಮುಂದೆ ಫೇಸ್‍ಬುಕ್, ಟ್ವಿಟ್ಟರ್‍ನಲ್ಲೂ ಎಲ್‍ಪಿಜಿ ಸಿಲಿಂಡರ್ ಬುಕ್ ಮಾಡಬಹುದು

    ಇನ್ಮುಂದೆ ಫೇಸ್‍ಬುಕ್, ಟ್ವಿಟ್ಟರ್‍ನಲ್ಲೂ ಎಲ್‍ಪಿಜಿ ಸಿಲಿಂಡರ್ ಬುಕ್ ಮಾಡಬಹುದು

    ನವದೆಹಲಿ: ಸಾಮಾಜಿಕ ಜಾಲತಾಣಗಳಾದ ಫೇಸ್‍ಬುಕ್ ಹಾಗೂ ಟ್ವಿಟ್ಟರ್ ಮೂಲಕ ಎಲ್‍ಪಿಜಿ ಸಿಲಿಂಡರ್‍ಗಳನ್ನ ಬುಕ್ ಮಾಡುವ ವ್ಯವಸ್ಥೆಯನ್ನ ಇಂಡಿಯನ್ ಆಯಿಲ್ ಕಾರ್ಪೊರೇಷನ್(ಐಒಸಿ) ಪರಿಚಯಿಸಿದೆ.

    ಈವರೆಗೆ ಗ್ರಾಹಕರು ಫೋನ್ ಅಥವಾ ಮೆಸೇಜ್ ಮೂಲಕ ಗ್ಯಾಸ್ ಸಿಲಿಂಡರ್‍ಗಳನ್ನ ಬುಕ್ ಮಾಡಬಹುದಿತ್ತು. ಇನ್ಮುಂದೆ ಫೇಸ್‍ಬುಕ್ ಹಾಗೂ ಟ್ವಿಟ್ಟರ್ ಮೂಲಕವೂ ಸಿಲಿಂಡರ್ ಬುಕ್ ಮಾಡಬಹುದಾಗಿದೆ.

    ಪ್ರಧಾನಿ ಮೋದಿ ಡಿಜಿಟಲೈಸೇಷನ್‍ಗೆ ಒತ್ತು ನೀಡುತ್ತಿರೋ ಸಮಯದಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಹೊಸ ಡಿಜಿಟಲ್ ಬುಕಿಂಗ್ ಸೇವೆಯನ್ನ ಆರಂಭಿಸಿದೆ. ಈ ಮೂಲಕ ಇಂಡಿಯನ್ ಆಯಿಲ್ ಕಾರ್ಪೊರೇಷನ್, ತೈಲೋತ್ಪನ್ನ ಕಂಪನಿಗಳಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ರೀಫಿಲ್ಲಿಂಗ್ ಸೇವೆ ಒದಗಿಸುತ್ತಿರೋ ಮೊದಲ ಸಂಸ್ಥೆ ಎನಿಸಿಕೊಂಡಿದೆ.

    ಫೇಸ್‍ಬುಕ್ ಮೂಲಕ ಇಂಡೇನ್ ಗ್ಯಾಸ್ ಬುಕ್ ಮಾಡಲು ಹೀಗೆ ಮಾಡಿ
    * ಫೇಸ್‍ಬುಕ್‍ಗೆ ಲಾಗಿನ್ ಆಗಬೇಕು.
    * ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್‍ನ ಅಧಿಕೃತ ಫೇಸ್‍ಬುಕ್ ಪೇಜ್ IndianOilCorpLimited ಗೆ ಭೇಟಿ ನೀಡಿ.
    * ಬುಕ್ ನೌ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

    ಟ್ವಿಟ್ಟರ್‍ನಲ್ಲಿ ಇಂಡೇನ್ ಗ್ಯಾಸ್ ಬುಕ್ ಮಾಡಲು ಹೀಗೆ ಮಾಡಿ
    * ರೀಫಿಲ್ @indianoilcorplimited ಎಂದು ಟ್ವೀಟ್ ಮಾಡಿ
    * ಮೊದಲ ಬಾರಿಯ ರಿಜಿಸ್ಟ್ರೇಷನ್‍ಗಾಗಿ ರಿಜಿಸ್ಟರ್ ಎಲ್‍ಪಿಜಿಐಡಿ ಎಂದು ಟ್ವೀಟ್ ಮಾಡಿ.