Tag: Indian Ocean

  • ಹಿಂದೂ ಮಹಾಸಾಗರದಲ್ಲಿ ಖನಿಜ ಶೋಧಕ್ಕೆ ಒಪ್ಪಿಗೆ ನೀಡಿದ ISA – ಭಾರತಕ್ಕೆ ಏನು ಲಾಭ? 

    ಹಿಂದೂ ಮಹಾಸಾಗರದಲ್ಲಿ ಖನಿಜ ಶೋಧಕ್ಕೆ ಒಪ್ಪಿಗೆ ನೀಡಿದ ISA – ಭಾರತಕ್ಕೆ ಏನು ಲಾಭ? 

    ಚಂದ್ರಯಾನ, ಮಂಗಳಯಾನ ಮಾಡಿ ಬಾಹ್ಯಾಕಾಶಕ್ಕೆ ಜಿಗಿದಿದ್ದ ಭಾರತ… ಈಗ ಪಾತಾಳದ ಖನಿಜಗಳ ವಿಸ್ಮಯ ಲೋಕಕ್ಕೂ ಕಾಲಿಟ್ಟಿದೆ. ಇತ್ತೀಚೆಗೆ ಹಿಂದೂ ಮಹಾಸಾಗರದ ಕಾರ್ಲ್ಸ್‌ಬರ್ಗ್ ರಿಡ್ಜ್‌ನಲ್ಲಿ ಪಾಲಿಮೆಟಾಲಿಕ್ ಸಲ್ಫೈಡ್‌ಗಳ ನಿಕ್ಷೇಪ (PMS) ಶೋಧಕ್ಕೆ ಅಂತರರಾಷ್ಟ್ರೀಯ ಸಮುದ್ರತಳ ಪ್ರಾಧಿಕಾರದ (ISA) ಜೊತೆ ಒಪ್ಪಂದಕ್ಕೆ ಭಾರತ ಸಹಿ ಹಾಕಿದೆ. ಇದರಿಂದ PMS ಶೋಧನೆಗಾಗಿ ಎರಡು ಒಪ್ಪಂದಗಳನ್ನು ಮಾಡಿಕೊಂಡ ವಿಶ್ವದ ಮೊದಲ ದೇಶ ಭಾರತವಾಗಿ ಹೊರಹೊಮ್ಮಿದೆ. 

    ಕಾರ್ಲ್ಸ್‌ಬರ್ಗ್ ರಿಡ್ಜ್‌ PMS ಶೋಧಕ್ಕಾಗಿ ಅಂತರರಾಷ್ಟ್ರೀಯ ಸಮುದ್ರತಳದಲ್ಲಿ ಹಂಚಿಕೆಯಾದ ಅತಿದೊಡ್ಡ ಪ್ರದೇಶವಾಗಿದೆ. ಭಾರತ 2024 ರಲ್ಲಿ ISA ಗೆ ಈ ಬಗ್ಗೆ ಅರ್ಜಿಯನ್ನು ಸಲ್ಲಿಸಿತ್ತು. ಪರಿಶೀಲನೆಯ ನಂತರ ISA ಭಾರತಕ್ಕೆ ಕಾರ್ಲ್ಸ್‌ಬರ್ಗ್ ರಿಡ್ಜ್‌ನಲ್ಲಿ 10,000 ಚದರ ಕಿಮೀ ಪ್ರದೇಶವನ್ನು ಮಂಜೂರು ಮಾಡಿದೆ. ಗೋವಾ ಮೂಲದ ರಾಷ್ಟ್ರೀಯ ಧ್ರುವ ಮತ್ತು ಸಾಗರ ಸಂಶೋಧನಾ ಕೇಂದ್ರ (NCPOR)  2026 ರಲ್ಲಿ PMS ಶೋಧಕಾರ್ಯ ಕೈಗೊಳ್ಳಲಿದೆ.

    PMS ಎಂದರೇನು? ಅದು ಭಾರತಕ್ಕೆ ಏಕೆ ಮುಖ್ಯ?
    ಪಾಲಿಮೆಟಾಲಿಕ್ ಸಲ್ಫೈಡ್‌ (PMS) ಇದು ಸಾಗರ ತಳದಲ್ಲಿರುವ ನಿಕ್ಷೇಪಗಳಾಗಿದೆ. ತಾಮ್ರ, ಸತು, ಸೀಸ, ಚಿನ್ನ ಮತ್ತು ಬೆಳ್ಳಿಯಂತಹ  ನಿರ್ಣಾಯಕ ಲೋಹಗಳಿಂದ ಈ ನಿಕ್ಷೇಪಗಳು ತುಂಬಿವೆ. ಈ ಖನಿಜಗಳನ್ನು ಹೊಂದಿರುವ ಭೂ ಪ್ರದೇಶ ಭಾರತಕ್ಕೆ ಬಹಳ ಸೀಮಿತವಾಗಿರುವುದರಿಂದ, ಆಳ ಸಾಗರದಲ್ಲಿ PMSನ್ನು ಅನ್ವೇಷಿಸುವುದು ಬಹಳ ಮುಖ್ಯವಾಗಿದೆ. ಈ ಲೋಹಗಳು ಉನ್ನತ ತಂತ್ರಜ್ಞಾನ, ನವೀಕರಿಸಬಹುದಾದ ಇಂಧನಗಳಿಗೆ ಬಹಳ ಮುಖ್ಯವಾಗಿದೆ. 

    PMS ಹುಡುಕಾಟ ಹೇಗೆ?
    2016 ರಲ್ಲಿ ISA ಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದಾಗಿನಿಂದ ನೈಋತ್ಯ ಹಿಂದೂ ಮಹಾಸಾಗರದಲ್ಲಿ ಸಮೀಕ್ಷೆಗಳನ್ನು ನಡೆಸಲಾಗುತ್ತಿದೆ.  

    ಮೊದಲ ಹಂತದಲ್ಲಿ ನಿಕ್ಷೇಪಗಳ ಹುಡುಕಾಟಕ್ಕಾಗಿ ಹಡಗು‌, ಡಿಟೆಕ್ಟರ್‌ ಉಪಕರಣಗಳನ್ನು ಬಳಸಿಕೊಂಡು ಸಮೀಕ್ಷೆಗಳನ್ನು ನಡೆಸಿ PMS  ಇರುವ ಸಂಭಾವ್ಯ ಸ್ಥಳಗಳನ್ನು ಗುರುತಿಸಲಾಗುತ್ತದೆ. ಎರಡನೇ ಹಂತದಲ್ಲಿ PMS  ಇದರ ಬಗ್ಗೆ ದೃಢಪಡಿಸಿಕೊಳ್ಳಲು AUV ಗಳು ಮತ್ತು ರಿಮೋಟ್ ಆಪರೇಟಿಂಗ್ ವೆಹಿಕಲ್ಸ್ (ROV) ನಂತಹ ಸುಧಾರಿತ ವ್ಯವಸ್ಥೆ ಬಳಸಿಕೊಂಡು ನಿಕ್ಷೇಪಗಳ ಪತ್ತೆ ಮಾಡಲಾಗುತ್ತದೆ. ಮೂರನೇ ಹಂತದಲ್ಲಿ ಗುರುತಿಸಲಾದ PMS ನಿಕ್ಷೇಪಗಳ ಸಂಪನ್ಮೂಲದ ಮೌಲ್ಯಮಾಪನ ಮಾಡಲಾಗುತ್ತದೆ. ‌

    ಮತ್ಸ್ಯ -6000 ಯೋಜನೆ
    ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದ್ದ “ಡೀಪ್‌ ಓಷನ್‌ ಮಿಷನ್‌’ನತ್ತ ಭಾರತ ದೊಡ್ಡ ಹೆಜ್ಜೆ ಇಟ್ಟಿದೆ. ಇದಕ್ಕಾಗಿ “ಭಾರತ ಮತ್ಸ್ಯ-6000′ ಯೋಜನೆ ರೂಪಿಸಿದ್ದು ಈ ಯೋಜನೆ ಭಾಗವಾಗಿ ಸಮುದ್ರದಾಳಕ್ಕೆ ಹೋಗುವ ಭಾರತೀಯ ವಿಜ್ಞಾನಿಗಳು ಫ್ರಾನ್ಸ್‌ನಲ್ಲಿ 5000 ಮೀಟರ್‌ ಆಳದವರೆಗೆ ಹೋಗುವ ತರಬೇತಿ ಪೂರ್ಣಗೊಳಿಸಿದ್ದಾರೆ.

    ಕಾರ್ಲ್ಸ್‌ಬರ್ಗ್ ರಿಡ್ಜ್‌ನ ಮಹತ್ವವೇನು?
    ಕಾರ್ಲ್ಸ್‌ಬರ್ಗ್ ರಿಡ್ಜ್ ಪ್ರದೇಶ ಭಾರತಕ್ಕೆ ಹೆಚ್ಚು ಹತ್ತಿರದಲ್ಲಿದೆ. ಇದು PMS ನಿಕ್ಷೇಪಗಳ ಸಂಭಾವ್ಯ ತಾಣವಾಗಿದೆ. ಕಳೆದ ಮೂರು ದಶಕಗಳಲ್ಲಿ ಭಾರತ ಈ ಬಗ್ಗೆ ಸಾಕಷ್ಟು ವೈಜ್ಞಾನಿಕ ಸಂಶೋಧನೆ ನಡೆಸಿದೆ. 

    ಈ ಪ್ರದೇಶದ ಸಮುದ್ರತಳದ 2,000–5,000 ಮೀಟರ್ ಆಳದಲ್ಲಿ ಕಲ್ಲಿನಿಂದ ಕೂಡಿದ ಭೂಪ್ರದೇಶದಿಂದ ಕೂಡಿದ್ದು,  ಅಪಾರ ಪ್ರಮಾಣದ ಖನಿಜಗಳನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ. ಈ ಪ್ರದೇಶ ಇತರ ಆಳ-ಸಮುದ್ರ ಖನಿಜ ಶೋಧಕ್ಕಿಂತ ಹೆಚ್ಚು ಸವಾಲಿನದ್ದಾಗಿದೆ. ಇದಕ್ಕಾಗಿ ಆಧುನಿಕ ತಂತ್ರಜ್ಞಾನ ಹೊಂದಿರುವ ಉಪಕರಣ ಹಾಗೂ ಹಡಗುಗಳ ಅಗತ್ಯವಿದೆ. 

    ISA ಖನಿಜ ಶೋಧಕ್ಕೆ ಹೇಗೆ ಒಪ್ಪಿಗೆ ನೀಡುತ್ತದೆ? 
    ISA ಒಂದು ಸ್ವಾಯತ್ತ ಅಂತರರಾಷ್ಟ್ರೀಯ ಸಂಸ್ಥೆಯಾಗಿದೆ. ಇದು ವಿಶ್ವಸಂಸ್ಥೆಯ ಸಮುದ್ರ ಕಾನೂನು(UNCLOS) ಚೌಕಟ್ಟಿನ ಅಡಿಯಲ್ಲಿ ಅಂತರರಾಷ್ಟ್ರೀಯ ಸಮುದ್ರ ಖನಿಜ ಪರಿಶೋಧನೆಗಾಗಿ ಸ್ಥಳಗಳನ್ನು ಹಂಚಿಕೆ ಮಾಡುತ್ತದೆ. ಒಂದು ದೇಶವು ಸರ್ಕಾರ, ಸಾರ್ವಜನಿಕ ವಲಯ ಅಥವಾ ಪ್ರಾಯೋಜಿತ ಸಂಸ್ಥೆಯ ಮೂಲಕ ISAಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. 

    ಈ ಅರ್ಜಿಯು ವಿವರವಾದ ಕಾರ್ಯ ಯೋಜನೆ, ಹಣಕಾಸು/ತಾಂತ್ರಿಕ ಸಾಮರ್ಥ್ಯ ದಾಖಲೆಗಳೊಂದಿಗೆ ಪ್ರಸ್ತಾವಿತ ಪ್ರದೇಶದ ಮಾಹಿತಿ ಒದಗಿಸಬೇಕು. ಈ ಅರ್ಜಿಯನ್ನು ISA ಕಾನೂನು ಮತ್ತು ತಾಂತ್ರಿಕ ಆಯೋಗ (LTC) ಪರಿಶೀಲಿಸುತ್ತದೆ. ಎಲ್ಲಾ ಮಾಹಿತಿ ಆಧರಿಸಿ, ಅಂತಿಮ ಅನುಮೋದನೆಗಾಗಿ ISA ಕೌನ್ಸಿಲ್‌ಗೆ ಶಿಫಾರಸು ಮಾಡುತ್ತದೆ. ಬಳಿಕ ಚರ್ಚಿಸಿ ಅನುಮತಿ ನೀಡಬೇಕೇ? ಬೇಡವೇ ಎಂಬುದನ್ನು ನಿರ್ಧರಿಸಲಾಗುತ್ತದೆ. 

    ಭಾರತದಿಂದ ISAಗೆ ಮತ್ತೊಂದು ಅರ್ಜಿ
    ಭಾರತವು ಹಿಂದೂ ಮಹಾಸಾಗರದ ಉದ್ದಕ್ಕೂ ಖನಿಜ ಶೋಧಕ್ಕೆ ತೀರ್ಮಾನಿಸಿದೆ.  ಭಾರತ ಸರ್ಕಾರದ ಬ್ಲೂ ಎಕಾನಮಿ ಉತ್ತೇಜಿಸಲು ಖನಿಜ ಶೋಧನೆಗಾಗಿ ಹಿಂದೂ ಮಹಾಸಾಗರದಲ್ಲಿ ಹೆಚ್ಚುವರಿ ಸ್ಥಳಗಳನ್ನು ಸ್ವಾಧೀನಪಡಿಸಿಕೊಳ್ಳಲು ನೋಡುತ್ತಿದೆ. ಮಧ್ಯ ಹಿಂದೂ ಮಹಾಸಾಗರದ ಅಫನಾಸಿ-ನಿಕಿಟಿನ್ ಸೀಮೌಂಟ್‌ನಲ್ಲಿರುವ ಕೋಬಾಲ್ಟ್ ಭರಿತ ಫೆರೋಮ್ಯಾಂಗನೀಸ್ ಕ್ರಸ್ಟ್‌ಗಳ  ಶೋಧಕ್ಕೆ ಭಾರತ ಮುಂದಾಗಿದೆ. ಈ ಅರ್ಜಿ ISAಯಲ್ಲಿ ಪರಿಶೀಲನೆ ಹಂತದಲ್ಲಿದೆ.

    ಭಾರತಕ್ಕೆ ಈ ಯೋಜನೆಯ ಲಾಭವೇನು? 
    ಭಾರತದ ಆರ್ಥಿಕತೆಯ ಅಭಿವೃದ್ಧಿಗೆ ಕೊಡುಗೆ ನೀಡುವ ಹಲವಾರು ಖನಿಜ ನಿಕ್ಷೇಪಗಳನ್ನು ಹಿಂದೂ ಮಹಾಸಾಗರ ಹೊಂದಿದೆ. ನೀಲಿ ಆರ್ಥಿಕತೆಯಲ್ಲಿ ಲಾಭದಾಯಕವಾದ ಕೈಗಾರಿಕೆಗಳಲ್ಲಿ ಖನಿಜ ಉದ್ಯಮವೂ ಒಂದು. ಹಿಂದೂ ಮಹಾಸಾಗರದ ಸಮುದ್ರತಳದಲ್ಲಿರುವ ಈ ನಿರ್ಣಾಯಕ ಖನಿಜಗಳು ಭವಿಷ್ಯದಲ್ಲಿ ಜಾಗತಿಕ ಇಂಧನ ಪರಿವರ್ತನೆಗೆ ದಾರಿ ಮಾಡಿಕೊಡಬಹುದುಮ ಎಂಬ ನಿರೀಕ್ಷೆ ಇದೆ.  ಈ ಮೂಲಕ ಭಾರತ ನಿರ್ಣಾಯಕ ಖನಿಜಗಳ ಪೂರೈಕೆಯ ವಿಷಯದಲ್ಲಿ ಸ್ವಾವಲಂಬಿಯಾಗುವ ಗುರಿ ತಲುಪುವ ಸಾಧ್ಯತೆ ಇದೆ. ಇದರೊಂದಿಗೆ ಕೈಗಾರಿಗಳಿಗೆ ಖನಿಜ ಬಹಳ ಅಗತ್ಯ. ಇದರಿಂದ ಕೈಗಾರಿಕೆ ಅಭಿವೃದ್ಧಿಯಾಗಿ, ದೇಶದ ಆರ್ಥಿಕತೆ ಪ್ರಗತಿಯಾಗಲಿದೆ. 

    ಇತ್ತೀಚೆಗೆ ಅಮೆರಿಕದ ಟ್ಯಾರಿಫ್‌ ನೀತಿ, ಜೊತೆಗೆ ವಿಶ್ವದ ಬಹುತೇಕ ಭಾಗಗಳಲ್ಲಿ ಯುದ್ಧದಂತಹ ವಾತಾವರಣ ಇರುವುದರಿಂದ ಆಮದಿನ ಮೇಲೆ ಇದು ಭಾರೀ ಪರಿಣಾಮ ಬೀರುತ್ತದೆ. ಇದರಿಂದ ಭಾರತವೇ ಅಗತ್ಯ ಖನಿಜಗಳನ್ನು ಶೋಧಿಸಿ ಬಳಸಿಕೊಂಡರೆ, ಹಾಗೂ ರಫ್ತು ಮಾಡಿದರೆ ಬೇರೆ ದೇಶಗಳ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ. 

     ಸಮುದ್ರ ಜೀವಿಗಳ ನಾಶದ ಆತಂಕ
    ಭೂಮಿ ಮೇಲಿನ ಗಣಿಗಾರಿಕೆಯಂತೆಯೇ ಆಳ ಸಮುದ್ರ ಗಣಿಗಾರಿಕೆಗೂ ಪ್ರಪಂಚದಾದ್ಯಂತ ವಿರೋಧವಿದೆ. ಇದು ನಿಸರ್ಗದ ಅಸಮತೋಲನ ಸೃಷ್ಟಿಸಲಿದೆ. ಸಮುದ್ರ ಜೀವಿಗಳ ನಾಶಕ್ಕೆ ಕಾರಣವಾಗಲಿದೆ ಎಂದು ಅನೇಕ ಸಂಘಟನೆಗಳು ಇದರ ವಿರುದ್ಧ ಧ್ವನಿ ಎತ್ತಿವೆ.

  • ಹಿಂದೂ ಮಹಾಸಾಗರ, ಬಂಗಾಳಕೊಲ್ಲಿ ಸಮುದ್ರದಲ್ಲಿ 28 ಕಿ.ಮೀ ಈಜಿ ಹುಬ್ಬಳ್ಳಿ ಇನ್ಸ್ಪೆಕ್ಟರ್ ಸಾಧನೆ

    ಹಿಂದೂ ಮಹಾಸಾಗರ, ಬಂಗಾಳಕೊಲ್ಲಿ ಸಮುದ್ರದಲ್ಲಿ 28 ಕಿ.ಮೀ ಈಜಿ ಹುಬ್ಬಳ್ಳಿ ಇನ್ಸ್ಪೆಕ್ಟರ್ ಸಾಧನೆ

    ಹುಬ್ಬಳ್ಳಿ: ಹಿಂದೂ ಮಹಾಸಾಗರ (Indian Ocean) ಹಾಗೂ ಬಂಗಾಳಕೊಲ್ಲಿಯಲ್ಲಿ (Bay of Bengal) 28 ಕಿ.ಮೀ ಈಜಿ ಹುಬ್ಬಳ್ಳಿ ಇನ್ಸ್ಪೆಕ್ಟರ್ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಹುಬ್ಬಳ್ಳಿ (Hubballi) ಗ್ರಾಮೀಣ ಇನ್ಸ್ಪೆಕ್ಟರ್ ಮುರುಗೇಶ್ ಚೆನ್ನಣ್ಣ ಅವರು ಶ್ರೀಲಂಕಾದ ರಾಮಸೇತುಯಿಂದ ಭಾರತದ ಧನುಷ್ ಕೋಡಿವರೆಗೆ ಸ್ವಿಮ್ಮಿಂಗ್ ರಿಲೇ ಮಾಡಿದ್ದಾರೆ.

    ಭೀಕರ ಸಮುದ್ರದಲೆಗಳನ್ನು ಲೆಕ್ಕಿಸಿದೇ ಕೇವಲ 8 ಗಂಟೆ 30 ನಿಮಿಷದಲ್ಲಿ 28 ಕಿ.ಮೀ ಈಜಿದ ಇನ್ಸ್ಪೆಕ್ಟರ್ ಮುರುಗೇಶ್ ಚನ್ನಣ್ಣ ಮತ್ತು ಅವರ 8 ಜನರ ತಂಡ ಈ ಸಾಧನೆ ಮಾಡಿದೆ. ಉತ್ತರಪ್ರದೇಶ ಮತ್ತು ಹರಿಯಾಣದ ಇಬ್ಬರು ಐಎಎಸ್ ಅಧಿಕಾರಿಗಳು, ಪಶ್ಚಿಮ ಬಂಗಾಳ ಮತ್ತು ಹರಿಯಾಣದ ಅಂಗವಿಕಲ ಕ್ರೀಡಾಪಟುಗಳು, ಹುಬ್ಬಳ್ಳಿ ಕಿಮ್ಸ್‌ನ ಎಂಬಿಬಿಎಸ್ ವಿದ್ಯಾರ್ಥಿನಿ ಅಮನ ಶಾನ್‌ಭಾಗ್ ಈ ಸಾಧನೆ ಮಾಡಿದ್ದಾರೆ. ಫಿಟ್ ಇಂಡಿಯಾ ಮತ್ತು ಭಾರತ ಸ್ವಿಮ್ಮಿಂಗ್ ಫೆಡರೇಷನ್ ನೇತೃತ್ವದಲ್ಲಿ ಸ್ವಿಮ್ಮಿಂಗ್ ರಿಲೇ ನಡೆದಿತ್ತು. ಇದನ್ನೂ ಓದಿ: ಪ್ರಣಿತಾ ಮಗನ ನಾಮಕರಣದ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್ ತಾರೆಯರು

    ಇನ್ನೂ ಜೂನ್ ತಿಂಗಳಲ್ಲಿ ಈ ತಂಡವು ಅತ್ಯಂತ ಅಪಾಯಕಾರಿಯಾಗಿರುವ ಇಂಗ್ಲಿಷ್ ಕಾಲುವೆಯಲ್ಲಿ ಈಜಲು ಸಿದ್ಧವಾಗಿದೆ. ಇಂಗ್ಲೆಂಡ್ ಮತ್ತು ಫ್ರಾನ್ಸ್ ಮಧ್ಯದಲ್ಲಿರುವ 36 ಕಿ.ಮೀ ಇಂಗ್ಲಿಷ್ ಕಾಲುವೆಯಲ್ಲಿ ಈಜಿ ಮತ್ತೊಂದು ಮೈಲಿಗಲ್ಲು ಸಾಧಿಸಲು ಸಜ್ಜಾಗಿದೆ. ಪೊಲೀಸ್ ಇಲಾಖೆಯ ಕೀರ್ತಿ ಹೆಚ್ಚಿಸಿರುವ ಇನ್ಸ್ಪೆಕ್ಟರ್ ಮುರುಗೇಶ್ ಚೆನ್ನಣ್ಣ ಅವರ ಸಾಧನೆಯು ಎಲ್ಲರ ಮೆಚ್ಚುಗೆಗಳಿಸಿದೆ.

  • ಕಾರವಾರ | ಹಿಂದೂ ಮಹಾಸಾಗರದಲ್ಲಿ 9 ಮಿತ್ರ ರಾಷ್ಟ್ರಗಳೊಂದಿಗೆ IOS ಸಾಗರ ಹೆಸರಿನ ಕಾರ್ಯಾಚರಣೆಗೆ ಚಾಲನೆ

    ಕಾರವಾರ | ಹಿಂದೂ ಮಹಾಸಾಗರದಲ್ಲಿ 9 ಮಿತ್ರ ರಾಷ್ಟ್ರಗಳೊಂದಿಗೆ IOS ಸಾಗರ ಹೆಸರಿನ ಕಾರ್ಯಾಚರಣೆಗೆ ಚಾಲನೆ

    ಕಾರವಾರ: ಹಿಂದೂ ಮಹಾಸಾಗರದಲ್ಲಿ ಚೀನಾ ದೇಶವು ತನ್ನ ಪ್ರಾಭಲ್ಯ ಮೆರೆಯಲು ಸಜ್ಜಾಗಿರುವ ಬೆನ್ನಲ್ಲೇ ಭಾರತ (India) ಹೊಸ ಹೆಜ್ಜೆಯನ್ನಿಟ್ಟಿದೆ. 9 ಮಿತ್ರ ರಾಷ್ಟ್ರಗಳನ್ನು ಸೇರಿಸಿಕೊಂಡು ತನ್ನ ನಾಯಕತ್ವದಲ್ಲಿ ʻಭದ್ರತೆ ಮತ್ತು ಅಭಿವೃದ್ಧಿ ಎಲ್ಲಾ ವಲಯಕ್ಕೆʼ ಎಂಬ ಧ್ಯೇಯ ವಾಕ್ಯದಲ್ಲಿ ʻಒಂದು ಓಷನ್‌ ಒಂದು ಮಿಷನ್ʼ (One Ocean One Mission) ನಡಿಯಲ್ಲಿ ಹಿಂದೂ ಮಹಾಸಾಗರದಲ್ಲಿ ಇಂದಿನಿಂದ ಕಾರ್ಯಾಚರಣೆಗಿಳಿದಿದೆ.

    ಮಿತ್ರ ರಾಷ್ಟ್ರಗಳ ಸಹಭಾಗಿತ್ವದಲ್ಲಿ ಹಿಂದೂ ಮಹಾಸಾಗರ ವಲಯ ರಕ್ಷಣಾ ಕಾರ್ಯಾಚರಣೆ ನಡೆಸುವ ಭಾರತದ ಮಹತ್ವದ ಹೊಸ ಹೆಜ್ಜೆಗೆ ರಾಷ್ಟ್ರೀಯ ಸಾಗರ ದಿನವಾದ ಇಂದು ಚಾಲನೆ ದೊರೆತಿದೆ. ಹಿಂದೂ ಮಹಾಸಾಗರ (Indian Ocean) ವ್ಯಾಪ್ತಿಯಲ್ಲಿ ಚೀನಾ ತನ್ನ ಪ್ರಾಬಲ್ಯ ಸಾಧಿಸಲು ಯತ್ನಿಸುತ್ತಿರುವ ಬೆನ್ನಲ್ಲೇ ಭಾರತ ತನ್ನ 9 ಮಿತ್ರ ರಾಷ್ಟ್ರಗಳ ಒಡಗೂಡಿ ಹಿಂದೂ ಮಹಾಸಾಗರದಲ್ಲಿ ಕಾರ್ಯಾಚರಣೆಗೆ ಇಳಿದಿದೆ. ಇದನ್ನೂ ಓದಿ: ಪ್ರಧಾನಿ ಮೋದಿಗೆ ಶ್ರೀಲಂಕಾದ ಅತ್ಯುನ್ನತ ಗೌರವ ‘ಮಿತ್ರ ವಿಭೂಷಣ’‌ ಪ್ರಶಸ್ತಿ ಪ್ರದಾನ

    ರಾಷ್ಟ್ರೀಯ ಸಾಗರ ದಿನವಾದ ಇಂದು ಭಾರತೀಯ ನೌಕಾಪಡೆಯ ಈ ಪ್ರಯತ್ನಕ್ಕೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಕಾರವಾರದಲ್ಲಿ ಮಧ್ಯಾಹ್ನ ಚಾಲನೆ ನೀಡಿದರು. ಹಿಂದೂ ಮಹಾಸಾಗರ ವಲಯ (IOS) ವ್ಯಾಪ್ತಿಗೆ ಐಒಎಸ್‌ ಸಾಗರ ಹೆಸರಿನ ಹಡಗೊಂದನ್ನು ನಿಯೋಜನೆ ಮಾಡಿದ್ದು, ಹಡಗು ಕೊಚ್ಚಿಯಲ್ಲಿ ತನ್ನ ಸಮುದ್ರ ಪರಿಕ್ರಮ ಹಾಗೂ ಬಂದರು ಪರಿಶೀಲನೆ ನಡೆಸಿಕೊಂಡು ಕಾರವಾರಕ್ಕೆ ಆಗಮಿಸಿದೆ. ಇದನ್ನೂ ಓದಿ: ಒಳ ಮೀಸಲಾತಿ ಜಾರಿ ಮಾಡಿಯೇ ಮಾಡ್ತೀವಿ, ಯಾರಿಗೂ ಅನ್ಯಾಯ ಮಾಡಲ್ಲ: ಸಿದ್ದರಾಮಯ್ಯ

    ಕಾರವಾರದಿಂದ ಈ ಹಡಗು ಹಿಂದೂ ಮಹಾಸಾಗರ ವಲಯದಲ್ಲಿ ಮೇ ಮೊದಲ ವಾರದವರೆಗೂ ನಿಯೋಜನೆಗೊಳ್ಳಲಿದೆ. ನೌಕೆಯು ಭಾರತ ಪಶ್ಚಿಮ ಕರಾವಳಿಯ ವಿಶೇಷ ಆರ್ಥಿಕ ವಲಯ ವ್ಯಾಪ್ತಿಯಲ್ಲಿ ಗಸ್ತು ನಡೆಸಲಿದೆ. ಈ ನೌಕೆಯಲ್ಲಿ ಕೀನ್ಯಾ, ಮಡ್ಗಾಸ್ಕರ್‌, ಮಾಲ್ಡೀವ್ಸ್‌, ಮಾರಿಶಸ್‌, ಮೊಝಾಂಬಿಕ್‌, ಶ್ರೀಲಂಕಾ, ದಕ್ಷಿಣ ಆಫ್ರಿಕಾ ಕೊಮೊರೋಸ್‌, ಸೇಂಚ್‌ಹೆಲ್ಸ್‌ ಸೇರಿ 9 ದೇಶಗಳ 44 ಸಿಬ್ಬಂದಿ ಇದ್ದು, ಅವರಿಗೆ ಸಾಗರ, ರಕ್ಷಣೆ, ಗಸ್ತು, ಹಡಗುಗಳ ಪರಿಶೀಲನೆ, ಅಕ್ರಮಗಳ ಜಪ್ತು, ಅಗ್ನಿ ಶಮನ, ಸಾಗರ ಸಂವಹನ, ಸೀಮೆನ್‌ಶಿಪ್‌, ಸಾಗರ ಮಧ್ಯದ ಸವಾಲುಗಳನ್ನು ಪರಿಶೀಲಿಸುವುದು ಸೇರಿ ವಿವಿಧ ಪ್ರಾಯೋಗಿಕ ತರಬೇತಿಗಳನ್ನು ನೀಡಲಾಗುತ್ತಿದೆ.

    ʻಒನ್‌ ಓಶನ್‌ ಒನ್‌ ಮಿಷನ್‌ʼ ಎಂಬ ಉಪಕ್ರಮದಡಿ ಭಾರತ ಈ ಹೆಜ್ಜೆ ಇಟ್ಟಿದ್ದು, ಹಿಂದೂ ಮಹಾಸಾಗರ ವ್ಯಾಪ್ತಿಯ ಭಾರತ ಮಿತ್ರ ರಾಷ್ಟ್ರಗಳ ನಡುವೆ ಸಮುದ್ರ ವ್ಯವಹಾರದ ಬಾಂಧವ್ಯ ವೃದ್ಧಿ, ಪರಸ್ಪರ ಸಹಕಾರ ವೃದ್ಧಿ ಮಾಡಿಕೊಳ್ಳುವ ಜತೆಗೆ ಹಿಂದೂ ಮಹಾಸಾಗರದ ರಕ್ಷಣೆ ಅದರ ಸುತ್ತಲಿನ ಬಳಕೆದಾರ ರಾಷ್ಟ್ರಗಳಿಗೆ ಸೇರಿದ್ದು ಎಂಬ ಸಂದೇಶವನ್ನು ವಿಶ್ವಕ್ಕೆ ಸಾರಲು ಭಾರತ ಹೊರಟಿದೆ. ಇದನ್ನೂ ಓದಿ: ಏ.15 ರಿಂದ ಅನಿರ್ದಿಷ್ಟಾವಧಿ ಲಾರಿ ಮುಷ್ಕರ – 9 ಲಕ್ಷ ವಾಣಿಜ್ಯ ವಾಹನಗಳ ಸಂಚಾರ ಬಂದ್‌

    ಈಗಾಗಲೇ ಐಎನ್‌ಎಸ್‌ ಸುನೈನಾ ಯುದ್ಧ ಹಡಗಿನಲ್ಲಿ ಭಾರತ ಸೇರಿದಂತೆ ಒಟ್ಟು 10 ರಾಷ್ಟ್ರದ 44 ಸಿಬ್ಬಂದಿಗಳಿದ್ದು ಹಿಂದೂ ಮಹಾಸಾಗರದ ಮೂಲಕ ಆಪ್ರಿಕಾ ದೇಶಕ್ಕೆ ಈ ಹಡಗು ತೆರಳಲಿದೆ.

  • ಹಿಂದೂ ಮಹಾಸಾಗರದಲ್ಲಿ ವ್ಯಾಪಾರಿ ಹಡಗಿನ ಮೇಲೆ ಡ್ರೋಣ್‌ ದಾಳಿ

    ಹಿಂದೂ ಮಹಾಸಾಗರದಲ್ಲಿ ವ್ಯಾಪಾರಿ ಹಡಗಿನ ಮೇಲೆ ಡ್ರೋಣ್‌ ದಾಳಿ

    ನವದೆಹಲಿ: ಹಿಂದೂ ಮಹಾಸಾಗರದಲ್ಲಿ (Indian Ocean) ಇಸ್ರೇಲ್-ಸಂಯೋಜಿತ ವ್ಯಾಪಾರಿ ಹಡಗಿನ ಮೇಲೆ ಡ್ರೋಣ್‌ ಬಳಸಿ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ. ಇದು ಜಲಮೂಲದ ಮೂಲಕ ಹಾದುಹೋಗುವ ಎಲ್ಲಾ ವಾಣಿಜ್ಯ ಹಡಗುಗಳಿಗೆ ಎಚ್ಚರಿಕೆ ನೀಡಲಾಗಿದೆ.

    ಭಾರತದ ವೆರ್ವಾಲ್‌ನ ನೈಋತ್ಯ ದಿಕ್ಕಿನಲ್ಲಿ ಸುಮಾರು 200 ಕಿಮೀ ದೂರದಲ್ಲಿ ಮಾನವರಹಿತ ವೈಮಾನಿಕ ವಾಹನ ಬಳಸಿ ವ್ಯಾಪಾರಿ ಹಡಗನ್ನು ಗುರಿಯಾಗಿರಿಸಿಕೊಂಡಿದೆ ಎಂದು ಬ್ರಿಟಿಷ್ ಕಡಲ ಭದ್ರತಾ ಸಂಸ್ಥೆ ಆಂಬ್ರೆ ಹೇಳಿದ್ದಾರೆ. ಇದನ್ನೂ ಓದಿ: ಬಜರಂಗ್‌ ಪುನಿಯಾ ಬೆನ್ನಲ್ಲೇ ಪದ್ಮಶ್ರೀ ಪ್ರಶಸ್ತಿ ಹಿಂದಿರುಗಿಸಿದ ಕುಸ್ತಿಪಟು ವೀರೇಂದ್ರ ಸಿಂಗ್‌

    ದಾಳಿಯಿಂದ ಹಡಗಿಗೆ ಹಾನಿಯಾಗಿದೆ. ಹಡಗು ಇಸ್ರೇಲ್-ಸಂಯೋಜಿತವಾಗಿತ್ತು. ಭಾರತದ ಕರಾವಳಿಯಲ್ಲಿ ಹಕ್ಕು ಪಡೆಯದ ದಾಳಿಯು ಹಡಗಿನಲ್ಲಿ ಬೆಂಕಿಯನ್ನು ಉಂಟುಮಾಡಿತು. ಆದರೆ ಯಾವುದೇ ಪ್ರಾಣಹಾನಿ ಉಂಟಾಗಿಲ್ಲ.

    ದಾಳಿಗೊಳಗಾದ ನೌಕೆಯನ್ನು ಎಂವಿ ಕೆಮ್ ಪ್ಲುಟೊ ಎಂದು ಗುರುತಿಸಲಾಗಿದೆ. ಇದು ಕಚ್ಚಾ ತೈಲವನ್ನು ಹೊತ್ತೊಯ್ದು ಸೌದಿ ಅರೇಬಿಯಾದ ಬಂದರಿನಿಂದ ಹೊರಟಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಗಡಿಯಲ್ಲಿ ನುಸುಳಲು ಯತ್ನಿಸಿದ ಉಗ್ರನ ಹತ್ಯೆ – ದೇಹವನ್ನು ಪಾಕ್ ಕಡೆಗೆ ಎಳೆದೊಯ್ದ ಸಹಚರರು

    20 ಭಾರತೀಯರನ್ನು ಒಳಗೊಂಡಂತೆ ಹಡಗಿನಲ್ಲಿದ್ದ ಎಲ್ಲಾ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಡಗಿನಲ್ಲಿ ಸ್ಫೋಟಗೊಂಡ ಬೆಂಕಿಯನ್ನು ನಂದಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರತೀಯ ಕೋಸ್ಟ್ ಗಾರ್ಡ್ ಶಿಪ್ ವಿಕ್ರಮ್ ನೆರವು ನೀಡಲು ಹಡಗಿನ ಕಡೆಗೆ ಹೋಗುತ್ತಿದೆ ಎಂದು ಹೇಳಿದ್ದಾರೆ.

  • ಕರಾಚಿಯಲ್ಲಿ ಬೀಡುಬಿಟ್ಟ ಚೀನಾದ ಜಲಾಂತರ್ಗಾಮಿ, ಯುದ್ಧನೌಕೆ – ಭಾರತಕ್ಕೆ ಇದರ ಸಂದೇಶವೇನು?

    ಕರಾಚಿಯಲ್ಲಿ ಬೀಡುಬಿಟ್ಟ ಚೀನಾದ ಜಲಾಂತರ್ಗಾಮಿ, ಯುದ್ಧನೌಕೆ – ಭಾರತಕ್ಕೆ ಇದರ ಸಂದೇಶವೇನು?

    ಇಸ್ಲಾಮಾಬಾದ್‌: ಚೀನಾದ ಯುದ್ಧನೌಕೆಗಳು (Chinese Warships), ಜಲಾಂತರ್ಗಾಮಿಗಳು ಮತ್ತು ಸೇನಾ ಬೆಂಬಲ ವ್ಯವಸ್ಥೆಯು ಪಾಕಿಸ್ತಾನದ ಕರಾಚಿ ಬಂದರಿನಲ್ಲಿ (Karachi Port) ಬೀಡಿಬಿಟ್ಟಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

    ಮಿಲಿಟರಿ ತರಬೇತಿ ನೆಪದಲ್ಲಿ ಚೀನಾ ತನ್ನ ಜಲಾಂತರ್ಗಾಮಿ ಮತ್ತು ಯುದ್ಧನೌಕೆಗಳನ್ನು ಪಾಕಿಸ್ತಾನದ ಕರಾಚಿ ಬಂದರಲ್ಲಿ ಬೀಡುಬಿಟ್ಟಿದೆ. ಈ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ. ಇದಕ್ಕೆ ಸಂಬಂಧಿಸಿದ ಸೆಟಲೈಟ್‌ (ಉಪಗ್ರಹ) ಆಧಾರಿತ ಚಿತ್ರಗಳನ್ನು ಜಾಲತಾಣದಲ್ಲಿ ಹರಿದಾಡುತ್ತಿವೆ. ಸದ್ಯ ಭಾರತ-ಚೀನಾ (India-China) ನಡುವೆ ಅರುಣಾಚಲ ಪ್ರದೇಶದ ಗಡಿವಿವಾದದ ನಡುವೆ ಕರಾಚಿಯಲ್ಲಿ ಚೀನಾದ ಯುದ್ಧನೌಕೆಗಳು ಕಂಡುಬಂದಿರುವುದು ಅನುಮಾನ ಮೂಡಿಸಿದೆ. ಇದನ್ನೂ ಓದಿ: ಅಯೋಧ್ಯೆಯಲ್ಲಿ ದೀಪದಿಂದ ಎಣ್ಣೆ ಕದ್ದ ಮಕ್ಕಳು; ವೀಡಿಯೋ ಹಂಚಿಕೊಂಡ ಅಖಿಲೇಶ್‌ ಯಾದವ್‌

    ಸೀ ಗಾರ್ಡಿಯನ್ -3 (Sea Guardian-3) ಸೇನಾ ಎಕ್ಸರ್‌ಸೈಸ್‌, ಹಿಂದೂ ಮಹಾಸಾಗರದಲ್ಲಿ ಚೀನಾ ತನ್ನ ಕಡಲ ಅಸ್ತಿತ್ವವನ್ನು ಗಮನಾರ್ಹವಾಗಿ ವಿಸ್ತರಿಸಿದ ಸಮಯದಲ್ಲಿ ಬಂದಿವೆ. ಇದು ಆಫ್ರಿಕಾದ ಹಾರ್ನ್‌ನಲ್ಲಿರುವ ಜಿಬೌಟಿಯಲ್ಲಿ ಪ್ರಮುಖ ನೆಲೆಯ ನಿರ್ಮಾಣವನ್ನೂ ಒಳಗೊಂಡಿದೆ. ಜೊತೆಗೆ ಪಾಕಿಸ್ತಾನ ನೌಕಾಪಡೆಗೆ ಇತ್ತೀಚೆಗೆ 4 ಟೈಪ್-054 A/P ಫ್ರಿಗೇಟ್‌ಗಳನ್ನು ಪ್ರಾದೇಶಿಕ ನೌಕಾಪಡೆಗಳಿಗೆ ಮಾರಾಟ ಮಾಡಿದ್ದೂ ಸಹ ಇದರಲ್ಲೇ ಸೇರಿದೆ.

    ಕಳೆದ ವರ್ಷದ ಹಿಂದೂ ಮಹಾಸಾಗರದಲ್ಲಿ ಹಲವಾರು ಚೀನಿ ಕಣ್ಗಾವಲು ಮತ್ತು ಸಾಗರ ಸಮೀಕ್ಷೆ ಹಡಗುಗಳು ಪತ್ತೆಯಾಗಿದ್ದವು. ಈ ತಿಂಗಳ ಆರಂಭದಲ್ಲಿ, ಚೀನಾದ ಸಾಗರ ಸಂಶೋಧನಾ ಹಡಗು, ಶಿಯಾನ್ 6 ಕೊಲಂಬೊದಲ್ಲಿ ಬಂದಿಳಿದಿತ್ತು. ಆದರೀಗ ವ್ಯಾಪಕವಾದ ಜಲಾಂತರ್ಗಾಮಿ ಕಾರ್ಯಾಚರಣೆಗಳನ್ನ ಸಕ್ರಿಯಗೊಳಿಸಲು ಬಂಗಾಳ ಕೊಲ್ಲಿ ಸೇರಿದಂತೆ ಹಿಂದೂ ಮಹಾಸಾಗರವನ್ನೂ ಚೀನಾ ಬಳಸಿಕೊಳ್ಳುತ್ತಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಸೇನೆ ಗಡಿಯಲ್ಲಿ ಹಿಮಾಲಯದಂತೆ ಅಚಲವಾಗಿ ನಿಂತಿರುವವರೆಗೂ ಭಾರತ ಸುರಕ್ಷಿತ: ಮೋದಿ

    ಕರಾಚಿಯಲ್ಲಿ ಬೀಡು ಬಿಟ್ಟಿರುವ ಯುದ್ಧ ಸಾಧನಗಳ ಪೈಕಿ ಚೀನಾದ ಟೈಪ್-039 ಡೀಸೆಲ್-ಎಲೆಕ್ಟ್ರಿಕ್ ಜಲಾಂತರ್ಗಾಮಿ ನೌಕೆ ಕೂಡ ಇದೆ. ಈ ಜಲಾಂತರ್ಗಾಮಿ ನೌಕೆಯು ನೌಕಾ ರಹಸ್ಯಗಳನ್ನು ನಿಕಟವಾಗಿ ಊಹಿಸಬಲ್ಲದು. ಅರಬ್ಬಿ ಸಮುದ್ರದಲ್ಲಿ ಹಡಗುಗಳ ಉಪಸ್ಥಿತಿಯು, ತಮ್ಮ ಹೋಮ್‌ಪೋರ್ಟ್‌ಗಳಿಂದ ಹಲವಾರು ಸಾವಿರ ಕಿಮೀ ದೂರದಲ್ಲಿರುವ ನೌಕಾ ಆಸ್ತಿಗಳನ್ನು ನಿಯಂತ್ರಿಸಲು, ಬೀಜಿಂಗ್‌ನ ವಿಶ್ವಾಸ ವೃದ್ಧಿಸಲು ಈ ಜಲಾಂತರ್ಗಾಮಿ ಕಾರಣವಾಗಿದೆ. 2013ರಿಂದೀಚೆಗೆ ಚೀನಾ ಸೇನೆಯು 8 ಬಾರಿ ಹಿಂದೂ ಮಹಾಸಾಗರದಲ್ಲಿ ಜಲಾಂತರ್ಗಾಮಿಗಳನ್ನು ನಿಯೋಜಿಸಿದೆ ಎಂದು ವರದಿಯಾಗಿದೆ.

    2015ರ ಏಪ್ರಿಲ್‌ನಲ್ಲಿ ಪಾಕಿಸ್ತಾನ ಸರ್ಕಾರವು 5 ಶತಕೋಟಿ ಡಾಲರ್‌ ಮೌಲ್ಯದ ಒಪ್ಪಂದಕ್ಕೆ ಟೈಪ್‌-039 ಜಲಾಂತರ್ಗಾಮಿ ನೌಕೆಗಳ 8 ರೂಪಾಂತರಗಳನ್ನು ಖರೀದಿಸಲು ಒಪ್ಪಿಕೊಂಡಿತ್ತು. ಸದ್ಯ 4 ಜಲಾಂತರ್ಗಾಮಿ ನೌಕೆಗಳನ್ನು ಕರಾಚಿ ಶಿಪ್‌ಯಾರ್ಡ್ ಮತ್ತು ಇಂಜಿನಿಯರಿಂಗ್ ವರ್ಕ್ಸ್ ನಿರ್ಮಿಸುವ ಸಾಧ್ಯತೆಗಳಿವೆ ಎಂಬುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ಹೋಟೆಲಿನಲ್ಲಿ‌ ನಾಲ್ವರು ಕಾಮುಕರಿಂದ ಗ್ಯಾಂಗ್‌ರೇಪ್‌ – ಸಹಾಯಕ್ಕಾಗಿ ಕಣ್ಣೀರಿಟ್ಟ ಸಂತ್ರಸ್ತೆ, ಐವರು ಅರೆಸ್ಟ್

  • ಮುಳುಗಿದ ಚೀನಾ ಹಡಗು – ಸಹಾಯಕ್ಕೆ ನಿಂತ ಭಾರತೀಯ ನೌಕಾಪಡೆ

    ಮುಳುಗಿದ ಚೀನಾ ಹಡಗು – ಸಹಾಯಕ್ಕೆ ನಿಂತ ಭಾರತೀಯ ನೌಕಾಪಡೆ

    ನವದೆಹಲಿ: ಹಿಂದೂ ಮಹಾಸಾಗರದ (Indian Ocean) ಮಧ್ಯ ಪ್ರದೇಶದಲ್ಲಿ ಮುಳುಗಿದ ಚೀನಾದ (China) ಮೀನುಗಾರಿಕಾ ಹಡಗಿನ ಶೋಧ ಕಾರ್ಯಕ್ಕೆ ಭಾರತೀಯ ನೌಕಾಪಡೆ (Indian Navy) ನೆರವು ನೀಡಿದೆ.

    ಹಡಗಿನಲ್ಲಿ 17 ಚೀನೀ ಸಿಬ್ಬಂದಿ, 17 ಇಂಡೋನೇಷಿಯನ್ನರು ಮತ್ತು ಐದು ಫಿಲಿಪೈನ್ಸ್ ನಾಗರಿಕರು ಸೇರಿದಂತೆ 39 ಜನರು ಇದ್ದರು ಎಂದು ವರದಿಯಾಗಿದೆ. ಮಂಗಳವಾರದಿಂದ ಹಡಗಿನ ರಕ್ಷಣಾ ಕಾರ್ಯಾಚರಣೆಗಾಗಿ ಚೀನಾ-ಭಾರತ ಸೇರಿದಂತೆ ಹಲವಾರು ದೇಶಗಳ ಸಹಾಯವನ್ನು ಕೋರಿತ್ತು. ಚೀನಾದ ನೌಕಾಪಡೆಯ ಮನವಿಗೆ ಭಾರತೀಯ ನೌಕಾಪಡೆ ಸ್ಪಂದಿಸಿದ್ದು, ಬುಧವಾರದಿಂದ ಶೋಧ ಕಾರ್ಯದಲ್ಲಿ ತೊಡಗಿಕೊಂಡಿದೆ. ಇದನ್ನೂ ಓದಿ: ಕೇರಳ ಸ್ಟೋರಿ ನಿಷೇಧ – ಮಮತಾ ಸರ್ಕಾರದ ಆದೇಶಕ್ಕೆ ಸುಪ್ರೀಂ ತಡೆ

    ಸೇನೆಯ ವಿಮಾನವು ಪ್ರತಿಕೂಲ ಹವಾಮಾನದ ಹೊರತಾಗಿಯೂ ವ್ಯಾಪಕ ಹುಡುಕಾಟದಲ್ಲಿ ತೊಡಗಿದೆ. ಮುಳುಗಿದ ಹಡಗಿಗೆ ಸೇರಿದ ಬಹು ವಸ್ತುಗಳನ್ನು ಪತ್ತೆ ಮಾಡಿದೆ. ಅಲ್ಲದೆ ಹಡಗಿನಲ್ಲಿ ಎರಡು ಶವಗಳು ಪತ್ತೆಯಾಗಿವೆ ಎಂದು ಚೀನಾದ ಮಾಧ್ಯಮಗಳು ವರದಿ ಮಾಡಿವೆ. ಆದರೆ ಅವರು ಯಾವ ದೇಶದ ಪ್ರಜೆಗಳು ಎಂದು ತಿಳಿಸಲಾಗಿಲ್ಲ. ಇನ್ನುಳಿದವರ ಪತ್ತೆಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಜಲ್ಲಿಕಟ್ಟುಗೆ ಸುಪ್ರೀಂ ಅನುಮತಿ – ಕಂಬಳಕ್ಕೂ ಗ್ರೀನ್ ಸಿಗ್ನಲ್

  • ಹಿಂದೂ ಮಹಾಸಾಗರದಲ್ಲಿ ಚೀನಾದ ದೋಣಿ ಮುಳುಗಡೆ – 39 ಜನ ನಾಪತ್ತೆ

    ಹಿಂದೂ ಮಹಾಸಾಗರದಲ್ಲಿ ಚೀನಾದ ದೋಣಿ ಮುಳುಗಡೆ – 39 ಜನ ನಾಪತ್ತೆ

    – ರಕ್ಷಣೆಗೆ ಕ್ಸಿ ಜಿನ್‌ಪಿಂಗ್ ಆದೇಶ

    ಬೀಜಿಂಗ್: ಮೀನುಗಾರಿಕೆಗೆ ತೆರಳಿದ್ದ ಚೀನಾದ (China) ದೋಣಿಯೊಂದು (Fishing Boat) ಹಿಂದೂ ಮಹಾಸಾಗರದಲ್ಲಿ (Indian Ocean) ಮುಳುಗಡೆಯಾಗಿದ್ದು, ಅದರಲ್ಲಿದ್ದ 39 ಜನರು ನಾಪತ್ತೆಯಾಗಿರುವುದಾಗಿ ವರದಿಯಾಗಿದೆ.

    ಮಂಗಳವಾರ ಮುಂಜಾನೆ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ದೋಣಿಯಲ್ಲಿ ಚೀನಾದ 17 ಪ್ರಜೆಗಳು, ಇಂಡೋನೇಷ್ಯಾದ 17 ಜನ ಹಾಗೂ ಫಿಲಿಪೈನ್ಸ್‌ನ ಐವರು ಇದ್ದರು ಎಂದು ಚೀನಾ ಸೆಂಟ್ರಲ್ ಟೆಲಿವಿಷನ್ (CCTV) ತಿಳಿಸಿದೆ.

    ಇದೀಗ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ (Xi Jinping) ಹಾಗೂ ಪ್ರಧಾನಿ ಲಿ ಕಿಯಾಂಗ್ (Li Qiang)ವಿದೇಶಗಳಲ್ಲಿರುವ ಚೀನಾದ ರಾಜತಾಂತ್ರಿಕರಿಗೆ ಹಾಗೂ ಕೃಷಿ ಮತ್ತು ಸಾರಿಗೆ ಸಚಿವಾಲಯಗಳಿಗೆ ಬದುಕುಳಿದವರನ್ನು ಹುಡುಕಲು ಹಾಗೂ ರಕ್ಷಿಸಲು ಆದೇಶಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಲೇಡಿ ಡಾನ್‌ನಿಂದ ಉದ್ಯಮಿ ಮೇಲೆ ಹಲ್ಲೆ

    ಆಸ್ಟ್ರೇಲಿಯಾ ಮತ್ತು ಇತರ ಹಲವು ದೇಶಗಳಿಂದ ರಕ್ಷಣಾ ತಂಡಗಳು ಹುಡುಕಾಟಕ್ಕಾಗಿ ಘಟನಾ ಸ್ಥಳಕ್ಕೆ ತೆರಳಿವೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಾಯ ಮಾಡಲು ಚೀನಾ 2 ಹಡಗುಗಳನ್ನು ನಿಯೋಜಿಸಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಅಮೆರಿಕಕ್ಕೆ ಹಾರಲಿದ್ದಾರೆ ರಾಹುಲ್ – 10 ದಿನ ಪ್ರವಾಸ

  • ಹಿಂದೂ ಮಹಾಸಾಗರದಲ್ಲಿ ಮುಳುಗಿದ ವಲಸಿಗರ ದೋಣಿ – 34 ಮಂದಿ ಸಾವು

    ಹಿಂದೂ ಮಹಾಸಾಗರದಲ್ಲಿ ಮುಳುಗಿದ ವಲಸಿಗರ ದೋಣಿ – 34 ಮಂದಿ ಸಾವು

    ಮಡಗಾಸ್ಕರ್: ವಲಸಿಗರನ್ನು ಹೊತ್ತು ಸಾಗುತ್ತಿದ್ದ ದೋಣಿ ಹಿಂದೂ ಮಹಾಸಾಗರದಲ್ಲಿ ಮುಳುಗಿ 34 ಮಂದಿ ದಾರುಣ ಸಾವಿಗೀಡಾಗಿರುವ ಘಟನೆ ನಡೆದಿದೆ. ಈ ದೋಣಿ ಮಯೊಟ್ಟೆ ದ್ವೀಪದ ಕಡೆಗೆ ಸಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ದೋಣಿಯಲ್ಲಿ ಒಟ್ಟು 58 ಮಂದಿ ವಲಸಿಗರು ಪ್ರಯಾಣಿಸುತ್ತಿದ್ದರು. ದೋಣಿ ರಹಸ್ಯವಾಗಿ ತೆರಳುತ್ತಿತ್ತು. ಮಡಗಾಸ್ಕರ್‌ನ ವಾಯುವ್ಯ ಕರಾವಳಿಯಲ್ಲಿ ಶನಿವಾರ ರಾತ್ರಿ ದೋಣಿ ಮುಳುಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಅವಘಡಕ್ಕೆ ಸಿಲುಕಿ ಮುಳುಗುತ್ತಿದ್ದ 24 ಮಂದಿಯನ್ನು ರಕ್ಷಿಸಲಾಗಿದೆ. ಮೂವರು ಮಕ್ಕಳು ಸೇರಿ 34 ಮೃತದೇಹಗಳನ್ನು ಹೊರತೆಗೆಯಲಾಗಿದೆ.

    ರಕ್ಷಿಸಲ್ಪಟ್ಟವರಲ್ಲಿ ಒಬ್ಬ ಗರ್ಭಿಣಿ ಹೊರತು ಉಳಿದವರು ದಡಕ್ಕೆ ಬಂದೊಡನೆ ಎಸ್ಕೇಪ್‌ ಆಗಿದ್ದಾರೆ. ವಲಸಿಗರನ್ನು ಅಕ್ರಮವಾಗಿ ಸಾಗಿಸುತ್ತಿರುವ ಇಬ್ಬರು ಶಂಕಿತ ಕಳ್ಳಸಾಗಣೆದಾರರನ್ನು ಬಂಧಿಸಲು ಯತ್ನಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ಆಕಾಶದಲ್ಲಿ ಮಿಂಚಿ ಹಿಂದೂ ಮಹಾಸಾಗರಕ್ಕೆ ಅಪ್ಪಳಿಸಿದ ಚೀನಾ ರಾಕೆಟ್

    ಆಕಾಶದಲ್ಲಿ ಮಿಂಚಿ ಹಿಂದೂ ಮಹಾಸಾಗರಕ್ಕೆ ಅಪ್ಪಳಿಸಿದ ಚೀನಾ ರಾಕೆಟ್

    ಕೌಲಾಲಂಪುರ್: ಜುಲೈ 24ರಂದು ಉಡಾವಣೆ ಮಾಡಲಾಗಿದ್ದ ಚೀನಾದ ರಾಕೆಟ್ ಶನಿವಾರ ಶಿಥಿಲಗೊಂಡು ಹಿಂದೂ ಮಹಾಸಾಗರಕ್ಕೆ ಅಪ್ಪಳಿಸಿದೆ. ರಾಕೆಟ್ ಹಿಂದೂ ಮಹಾಸಾಗರಕ್ಕೆ ಬೀಳುವುದಕ್ಕೂ ಮೊದಲು ಆಕಾಶದಲ್ಲಿ ಬೆಳಗಿರುವ ವೀಡಿಯೋ ವೈರಲ್ ಆಗುತ್ತಿದೆ.

    ಲಾಂಗ್ ಮಾರ್ಚ್-5ಬಿ ವೈ3 ರಾಕೆಟ್ ಅನ್ನು ಚೀನಾ ಜುಲೈ 24ರಂದು ಉಡಾವಣೆ ಮಾಡಿತ್ತು. ಆದರೆ ಅದು ಶನಿವಾರ ಶಿಥಿಲಗೊಂಡು ಮತ್ತೆ ಭೂಮಿಗೆ ಹಿಂತಿರುಗಿದೆ. ಮಲೇಷ್ಯಾದ ಕುಚಿಂಗ್ ನಗರದ ಆಕಾಶದಲ್ಲಿ ರಾಕೆಟ್ ಹೊತ್ತಿ ಉರಿಯುವುದು ಕಂಡುಬಂದಿದೆ. ಇದನ್ನೂ ಓದಿ: ಬುಲೆಟ್ ಪ್ರೂಫ್ ಕಾರು ಖರೀದಿಸಿದ ಬಾಲಿವುಡ್ ನಟ ಸಲ್ಮಾನ್ ಖಾನ್

    ಲಾಂಗ್ ಮಾರ್ಚ್-5 ರಾಕೆಟ್ ಶಿಥಿಲಗೊಂಡು ಶನಿವಾರ ಮಧ್ಯಾಹ್ನ 12:45ರ ವೇಳೆ ಹಿಂದೂ ಮಹಾಸಾಗರದಲ್ಲಿ ಬಿದ್ದಿರುವ ಬಗ್ಗೆ ಅಮೆರಿಕ ಬಾಹ್ಯಾಕಾಶ ಕಮಾಂಡ್ ದೃಢಪಡಿಸಿದೆ. ಇದನ್ನೂ ಓದಿ: Commonwealth Games: ಭಾರತಕ್ಕೆ ಮತ್ತೊಂದು ಚಿನ್ನ ತಂದ ಜೆರೆಮಿ ಚಮತ್ಕಾರ

    ಇದಕ್ಕೂ ಮೊದಲು ನ್ಯಾಶನಲ್ ಏರೋನಾಟಿಕ್ಸ್ ಆಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್(ನಾಸಾ) ರಾಕೆಟ್‌ನ ಅವಶೇಷಗಳು ಎಲ್ಲಿ ಬಿದ್ದಿದೆ ಎಂಬ ನಿರ್ದಿಷ್ಟ ಮಾಹಿತಿಯನ್ನು ಚೀನಾ ನೀಡಿಲ್ಲ ಎಂದು ಹೇಳಿತ್ತು.

    Live Tv
    [brid partner=56869869 player=32851 video=960834 autoplay=true]