Tag: indian navy

  • ಐಎನ್‌ಎಸ್‌ ವಿಕ್ರಾಂತ್‌ ಪಾಕ್‌ಗೆ ನಿದ್ರೆಯಿಲ್ಲದಂತೆ ಮಾಡಿತು, ಬ್ರಹ್ಮೋಸ್‌ ತನ್ನ ಸಾಮರ್ಥ್ಯ ತೋರಿತು – ನರೇಂದ್ರ ಮೋದಿ

    ಐಎನ್‌ಎಸ್‌ ವಿಕ್ರಾಂತ್‌ ಪಾಕ್‌ಗೆ ನಿದ್ರೆಯಿಲ್ಲದಂತೆ ಮಾಡಿತು, ಬ್ರಹ್ಮೋಸ್‌ ತನ್ನ ಸಾಮರ್ಥ್ಯ ತೋರಿತು – ನರೇಂದ್ರ ಮೋದಿ

    – ನೌಕಾಪಡೆ ಸೈನಿಕರೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ

    ಪಣಜಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಂದು ಗೋವಾ ಕರಾವಳಿಯಲ್ಲಿ (Goa Coast) ಭಾರತೀಯ ನೌಕಾಪಡೆಯೊಂದಿಗೆ ದೀಪಾವಳಿ ಆಚರಿಸಿದರು. ಗೋವಾದ ಕಾರವಾರ ಕರಾವಳಿಯಲ್ಲಿರುವ ಐಎನ್ಎಸ್ ವಿಕ್ರಾಂತ್‌ಗೆ ಭೇಟಿ ನೀಡಿದ ಅವರು ನೌಕಾಪಡೆ ಸೇನಾ ಸಿಬ್ಬಂದಿಗೆ ಸಿಹಿ ತಿನ್ನಿಸುವ ಮೂಲಕ ದೀಪಾವಳಿ ಆಚರಿಸಿದ್ರು. ಈ ವೇಳೆ ಆಪರೇಷನ್‌ ಸಿಂಧೂರ ಕಾರ್ಯಾಚರಣೆಯಲ್ಲಿ ಐಎನ್‌ಎಸ್‌ ವಿಕ್ರಾಂತ್‌ ಹಾಗೂ ಬ್ರಹ್ಮೋಸ್‌ (BrahMos), ಆಕಾಶ್‌ ಕ್ಷಿಪಣಿಗಳ ಸಾಮರ್ಥ್ಯವನ್ನು ಕೊಂಡಾಡಿದರು.

    ಇಂದು ಅದ್ಭುತ ದಿನ, ಈ ದೃಶ್ಯ ಅವಿಸ್ಮರಣೀಯ. ಈ ದಿನ ನನ್ನ ಬಳಿ ಒಂದು ಕಡೆ ಸಾಗರವಿದೆ, ಮತ್ತೊಂದೆಡೆ ಭಾರತ ಮಾತೆಯ ವೀರ ಸೈನಿಕರ ಬಲವಿದೆ. ಇನ್ನೊಂದೆಡೆ ಅನಂತ ದಿಗಂತ, ಅನಂತ ಆಕಾಶ ಹಾಗೂ ಅನಂತ ಶಕ್ತಿಯ ಸಂಕೇತವಾದ ಐಎನ್ಎಸ್ ವಿಕ್ರಾಂತ್ (INS Vikrant) ಇದೆ. ಸಾಗರ ನೀರಿನ ಮೇಲೆ ಹೊಳೆಯುವ ಸೂರ್ಯನ ಕಿರಣಗಳು ವೀರ ಸೈನಿಕರು ಬೆಳಗಿದ ದೀಪಾವಳಿ ದೀಪಗಳಂತೆ ಎಂದು ಪ್ರಧಾನಿ ಮೋದಿ ಬಣ್ಣಿಸಿದರು.

    ನೌಕಾಪಡೆಯ ಎಲ್ಲಾ ವೀರ ಸೈನಿಕರೊಂದಿಗೆ ಪವಿತ್ರ ಹಬ್ಬ ದೀಪಾವಳಿ (Deepavali Festival) ಆಚರಿಸುತ್ತಿರುವುದು ನನ್ನ ಅದೃಷ್ಟ. ಐಎನ್ಎಸ್ ವಿಕ್ರಾಂತ್ ಸ್ವಾವಲಂಬಿ ಭಾರತದ ಸಂಕೇತ, ನಾನು ನಮ್ಮ ಸಶಸ್ತ್ರ ಪಡೆಗಳಿಗೆ ವಿಶೇಷವಾಗಿ ವಂದನೆಗಳನ್ನು ಸಲ್ಲಿಸುತ್ತೇನೆ. ಏಕೆಂದ್ರೆ ಈ ಮೂರು ಪಡೆಗಳ ಪ್ರಚಂಡ ಸಮನ್ವಯವು ಪಾಕಿಸ್ತಾನವನ್ನು (Pakistan) ಆಪರೇಷನ್ ಸಿಂಧೂರದಲ್ಲಿ ಶರಣಾಗುವಂತೆ ಮಾಡಿತು. ಬ್ರಹ್ಮೋಸ್‌ ಆಕಾಶ್‌ ನಂತರ ಕ್ಷಿಪಣಿಗಳು ಆಪರೇಷನ್‌ ಸಿಂಧೂರದಲ್ಲಿ ತಮ್ಮ ಸಾಮರ್ಥ್ಯವನ್ನ ಸಾಬೀತುಪಡಿಸಿವೆ. ಹೀಗಿ ಇಂದು ಪ್ರಪಂಚದಾದ್ಯಂತ ಹಲವಾರು ದೇಶಗಳು ಈಗ ಬ್ರಹ್ಮೋಸ್‌ ಕ್ಷಿಪಣಿ ಖರೀದಿಸಲು ಆಸಕ್ತಿ ತೋರಿವೆ ಎಂದು ಮೋದಿ ಹೇಳಿದರು.

    ನಾನು ಮಿಲಿಟರಿ ಉಪಕರಣಗಳ ಶಕ್ತಿಯನ್ನು ನೋಡುತ್ತಿದ್ದೆ, ಈ ಬೃಹತ್ ಹಡಗುಗಳು, ಗಾಳಿಗಿಂತಲೂ ವೇಗವಾಗಿ ಹಾರುವ ವಿಮಾನಗಳು, ಜಲಾಂತರ್ಗಾಮಿ ನೌಕೆಗಳು ಅವು ತಮ್ಮಲ್ಲಿಯೇ ಪ್ರಭಾವಶಾಲಿಯಾಗಿವೆ. ಇದರ ಜೊತೆಗೆ ಅವುಗಳನ್ನು ನಿರ್ವಹಿಸುವವರ ಶೌರ್ಯ ಸಾಹಸ, ಅವುಗಳನ್ನು ಇನ್ನಷ್ಟು ಶಕ್ತಿಶಾಲಿಯಾಗಿ ಮಾಡುತ್ತವೆ. ಉದಾಹರಣೆಗೆ ಈ ಹಡಗುಗಳು ಕಬ್ಬಿಣದಿಂದಲೇ ಮಾಡಿರಬಹುದು ಆದ್ರೆ, ನೀವು ಹತ್ತಿದಾಗ ಅವು ಜೀವಂತ ಹಾಗೂ ಉಸಿರಾಟ ಇರುವ ಶಕ್ತಿಶಾಲಿ ಅಸ್ತ್ರಗಳಾಗಿ ಬದಲಾಗುತ್ತವೆ ಎಂದು ಸೈನಿಕರನ್ನ ಶೌರ್ಯವನ್ನು ಹಾಡಿಹೊಗಳಿದರು.

    2014ರಲ್ಲಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಪ್ರಧಾನಿ ಮೋದಿ ಅವರು ಸಶಸ್ತ್ರ ಪಡೆಗಳ ಸೈನಿಕರೊಂದಿಗೆ ದೀಪಾವಳಿಯನ್ನು ಆಚರಿಸುತ್ತಿದ್ದಾರೆ. 2014ರಲ್ಲಿ ಲಡಾಖ್‌ನಲ್ಲಿರುವ ಸಿಯಾಚಿನ್ ಹಿಮನದಿಗೆ ಭೇಟಿ ನೀಡಿದ್ದರು. 2015 ರಲ್ಲಿ, ಅವರು 1965ರ ಭಾರತ-ಪಾಕಿಸ್ತಾನ ಯುದ್ಧದ ವೀರರಿಗೆ ಗೌರವ ಸಲ್ಲಿಸಲು ಪಂಜಾಬ್‌ನ ಅಮೃತಸರದಲ್ಲಿರುವ ಡೋಗ್ರೈ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದರು. 2016 ರಲ್ಲಿ, ದೀಪಾವಳಿಯಂದು ಹಿಮಾಚಲ ಪ್ರದೇಶದ ಭಾರತ-ಚೀನಾ ಗಡಿಯ ಬಳಿ ಗಡಿ ಭದ್ರತಾ ಪಡೆ ಮತ್ತು ಸೇನಾ ಸಿಬ್ಬಂದಿಯನ್ನು ಭೇಟಿ ಮಾಡಿದರು. 2017ರಲ್ಲಿ ಜಮ್ಮು ಮತ್ತು ಕಾಶ್ಮೀರದ ಗುರೆಜ್ ವಲಯದಲ್ಲಿ ಭದ್ರತಾ ಪಡೆಗಳನ್ನು ಭೇಟಿ ಮಾಡಿದರು. 2018 ರಲ್ಲಿ, ಪ್ರಧಾನಿಯವರು ಉತ್ತರಾಖಂಡದ ಹರ್ಷಿಲ್‌ನಲ್ಲಿ ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ಸಿಬ್ಬಂದಿಯೊಂದಿಗೆ ದೀಪಾವಳಿಯನ್ನು ಕಳೆದರು. 2019 ರಲ್ಲಿ, ಅವರು ಜಮ್ಮು ಮತ್ತು ಕಾಶ್ಮೀರದ ರಾಜೌರಿಯಲ್ಲಿ ಸೈನಿಕರನ್ನು ಭೇಟಿ ಮಾಡಿದರು.

    2020ರಲ್ಲಿ, ಪ್ರಧಾನ ಮಂತ್ರಿಗಳು ರಾಜಸ್ಥಾನದ ಜೈಸಲ್ಮೇರ್‌ನ ಲೋಂಗೆವಾಲಾದಲ್ಲಿದ್ದರು. 2021 ರಲ್ಲಿ, ಪ್ರಧಾನ ಮಂತ್ರಿಗಳು ಜಮ್ಮು ಮತ್ತು ಕಾಶ್ಮೀರದ ನೌಶೇರಾದಲ್ಲಿ ಸೈನಿಕರೊಂದಿಗೆ ದೀಪಾವಳಿಯನ್ನು ಆಚರಿಸಿದರು. 2022 ರಲ್ಲಿ, ಪ್ರಧಾನ ಮಂತ್ರಿ ಮೋದಿ ಹುತಾತ್ಮರಿಗೆ ಗೌರವ ಸಲ್ಲಿಸಲು ಕಾರ್ಗಿಲ್‌ಗೆ ಭೇಟಿ ನೀಡಿದರು. 2023 ಮತ್ತು 2024 ರಲ್ಲಿ, ಅವರು ಹಿಮಾಚಲ ಪ್ರದೇಶದ ಲೆಪ್ಚಾ ಮತ್ತು ಗುಜರಾತ್‌ನ ಸರ್ ಕ್ರೀಕ್‌ನಲ್ಲಿ ನಿಯೋಜಿಸಲಾದ ಸೈನಿಕರೊಂದಿಗೆ ದೀಪಾವಳಿಯನ್ನು ಆಚರಿಸಿದ್ದರು.

  • ಸಬ್‌ ಮರಿನ್‌ಗಳನ್ನೇ ಬೇಟೆಯಾಡೋ ರಣ ಬೇಟೆಗಾರ  ʻಅಂಡ್ರೋತ್‌ʼ! 

    ಸಬ್‌ ಮರಿನ್‌ಗಳನ್ನೇ ಬೇಟೆಯಾಡೋ ರಣ ಬೇಟೆಗಾರ  ʻಅಂಡ್ರೋತ್‌ʼ! 

    ಹಲ್ಗಾಮ್‌ ದಾಳಿಯ ಬಳಿಕ ಭಾರತ ತನ್ನ ಭದ್ರತೆಗೆ ಭಾರೀ ಮಹತ್ವ ನೀಡುತ್ತಿದೆ. ಈ ದಾಳಿಯ ನಂತರ ನಡೆದ ಆಪರೇಷನ್‌ ಸಿಂದೂರದ ಬಳಿಕ ಭಾರತದ ಸೇನೆಯ ಶಕ್ತಿ ಜಗತ್ತಿಗೂ ಗೊತ್ತಾಗಿದೆ. ಇದರ ನಡುವೆಯೇ ಭಾರತೀಯ ಸೇನೆಯ (Indian Army) ಬತ್ತಳಿಕೆಗೆ ಹೊಸ ಹೊಸ ಅಸ್ತ್ರ ಗಳು, ಯುದ್ಧ ವಿಮಾನಗಳು ಸೇರಿದಂತೆ ನೌಕಾಪಡೆಗೆ ಯುದ್ಧನೌಕೆಗಳನ್ನು ಸೇರಿಸುತ್ತಿದೆ. ಅದರಂತೆ ಇತ್ತೀಚೆಗೆ ಸ್ವದೇಶಿ ನಿರ್ಮಿತ 2ನೇ ಜಲಾಂತರ್ಗಾಮಿ ನಿರೋಧಕ  ಹಡಗು ನೌಕಾಪಡೆಗೆ ಸೇರ್ಪಡೆಯಾಗಿದೆ. ಅದರ ವಿಶೇಷತೆ ಹಾಗೂ ಮಹತ್ವದ ಬಗ್ಗೆ ಇಲ್ಲಿ ವಿವರಿಸಲಾಗಿದೆ. 

    ನೌಕೆಗೆ ʻಅಂಡ್ರೋತ್‌ʼ ಹೆಸರು ಬಂದಿದ್ದೇಕೆ?
    ಭಾರತೀಯ ನೌಕಾಪಡೆಗೆ (Indian Navy) ಎರಡನೆಯ ಸ್ವದೇಶಿ ನಿರ್ಮಿತ ಜಲಾಂತರ್ಗಾಮಿ ನಿರೋಧಕ  ಹಡಗು (ಎಎಸ್‌ಡಬ್ಲ್ಯು ಎಸ್‌ಡಬ್ಲ್ಯುಸಿಗಳು) ‌ಅಂಡ್ರೋತ್‌ (Androth) ಸೇರ್ಪಡೆಯಾಗಿದೆ. ಈ ಹಡಗಿನ ನಿರ್ಮಾಣವನ್ನು ರಕ್ಷಣಾ ಉತ್ಪಾದನಾ ಕ್ಷೇತ್ರದಲ್ಲಿ ಸ್ವಾವಲಂಬನೆಯೆಡೆಗೆ ಇಡಲಾದ ಮಹತ್ವದ ಹೆಜ್ಜೆಯೆಂದು ಪರಿಗಣಿಸಲಾಗಿದೆ.ಇದಕ್ಕೆ ಲಕ್ಷದ್ವೀಪ ಸಮೂಹದ ದ್ವೀಪಗಳಲ್ಲೊಂದಾದ ‘ಅಂಡ್ರೋತ್‌’ ದ್ವೀಪದ ಹೆಸರನ್ನು ಈ ಹಡಗಿಗೆ ಇಡಲಾಗಿದೆ. ನೌಕೆಗೆ ಇಡಲಾದ ʻಅಂಡ್ರೋತ್‌ʼ ಹೆಸರು ಭಾರತದ ವಿಶಾಲವಾದ ಕಡಲ ತೀರವನ್ನು ರಕ್ಷಿಸುವ ಬದ್ಧತೆಯನ್ನು ಸೂಚಿಸುತ್ತದೆ ಎಂದು ನೌಕಾಪಡೆ ಹೇಳಿಕೊಂಡಿದೆ. 

    ಕೋಲ್ಕತಾದ ಗಾರ್ಡನ್ ರೀಚ್ ಶಿಪ್‌ಬಿಲ್ಡರ್ಸ್‌ ಆ್ಯಂಡ್ ಎಂಜಿನಿಯರ್ಸ್‌ (ಜಿಆರ್‌ಎಸ್‌ಇ) ಈ ಹಡಗುಗಳನ್ನು ನಿರ್ಮಿಸುತ್ತಿದೆ.  ಒಟ್ಟು 8 ಜಲಾಂತರ್ಗಾಮಿ ವಿರೋಧಿ ಯುದ್ಧನೌಕೆಗಳಲ್ಲಿ ಈಗಾಗಲೇ ಎರಡು ನೌಕಾಪಡೆಗೆ ಹಸ್ತಾಂತರಿಸಲಾಗಿದೆ. 

    ಅಂಡ್ರೋತ್‌ ಸಾಮರ್ಥ್ಯವೇನು?
    77 ಮೀಟರ್ ವಿಸ್ತೀರ್ಣದ ಈ ಹಡಗು ಡೀಸೆಲ್-ವಾಟರ್‌ಜೆಟ್ ಎಂಜಿನ್‌ ಮೂಲಕ ಚಲಿಸುವ ಬೃಹತ್ ಸಮರ ನೌಕೆಗಳಲ್ಲೊಂದಾಗಿದೆ. ಈ ಹಡಗುಗಳ ನಿಯೋಜನೆಯಿಂದಾಗಿ ಶತ್ರು ದೇಶಗಳ ಜಲಾಂತರ್ಗಾಮಿಗಳಿಂದ ರಕ್ಷಣೆ ದೊರೆಯಲಿದೆ. ಇನ್ನೂ ಸೆನ್ಸಾರ್‌ ಮೂಲಕ ಕರಾವಳಿಯ ಗಡಿಯ ಮೇಲೆ ಈ ನೌಕೆ ಕಣ್ಗಾವಲು ಇರಿಸಲಿದೆ. ಹೆಚ್ಚಿನ ಸ್ಫೋಟಕಗಳನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಈ ನೌಕೆ ಹೊಂದಿದ್ದು, ಹಠಾತ್‌ ದಾಳಿಗಳೇನಾದರೂ ಆದರೆ ತಕ್ಷಣ ಪ್ರತಿಕ್ರಿಯಿಗೆ ಸಿದ್ಧವಿರುತ್ತವೆ. ತೀರಪ್ರದೇಶಗಳಲ್ಲಿ ಶತ್ರು ದೇಶದ ಜಲಾಂತರ್ಗಾಮಿ ನೌಕೆಗಳನ್ನು ಪರಿಣಾಮಕಾರಿಯಾಗಿ ಪತ್ತೆಹಚ್ಚುವ ಈ ನೌಕೆ ಅದರ ಮೇಲೆ ದಾಳಿ ನಡೆಸುವ ಸಾಮರ್ಥ್ಯವನ್ನು ಹೊಂದಿದೆ ನೌಕಾಪಡೆಯ ಮೂಲಗಳು ತಿಳಿಸಿವೆ.

     ಅತ್ಯಾಧುನಿಕ ಹಗುರವಾದ ಟಾರ್ಪಿಡೊಗಳು (ಸ್ಫೋಟಕ) ಮತ್ತು ASW ರಾಕೆಟ್‌ಗಳಿಂದ ಈ ಹಡಗು ಶತ್ರುಗಳ ಮೇಲೆ ದಾಳಿಗೆ ಸಜ್ಜುಗೊಂಡಿರುತ್ತದೆ. ಕಡಲಲ್ಲಿ ಕಾರ್ಯಾಚರಣೆ ನಡೆಸಲು ಅನುಕೂಲವಾಗುವಂತೆ ತಂತ್ರಜ್ಞಾನವನ್ನು ಈ ಹಡಗು ಒಳಗೊಂಡಿದೆ.  

    ಸುಮಾರು 80% ಕ್ಕಿಂತ ಹೆಚ್ಚು ಸ್ಥಳೀಯ ಸಂಪನ್ಮೂಲಗಳಿಂದಲೇ ಈ ಹಡಗನ್ನು ನಿರ್ಮಿಸಲಾಗಿದೆ. ಇದರಿಂದ ರಕ್ಷಣಾ ಆಮದಿನ ಅವಲಂಬನೆ ಕಡಿಮೆ ಆಗಲಿದೆ. ಇದು ಸರ್ಕಾರದ ಆತ್ಮನಿರ್ಭರ ಭಾರತ ಧ್ಯೇಯವನ್ನು  ಬಲಪಡಿಸುತ್ತದ. ಈ ಮೂಲಕ ಸ್ಥಳೀಯ ಹಡಗು ನಿರ್ಮಾಣಕ್ಕಾಗಿ ನೌಕಾಪಡೆಯ ಪ್ರಯತ್ನದಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಂತಾಗಿದೆ. ಅಲ್ಲದೇ ಭಾರತದ ದೇಶೀಯ ರಕ್ಷಣಾ ಉದ್ಯಮದ ಬೆಳೆಯುತ್ತಿರುವ ಸಾಮರ್ಥ್ಯಗಳಿಗೆ ಸಾಕ್ಷಿಯಾಗಿದೆ.  

    ಅಂಡ್ರೋತ್‌ ಎಲ್ಲಿ ಕಾರ್ಯ ನಿರ್ವಹಿಸುತ್ತದೆ?
    ವಿಶೇಷವಾಗಿ ಲಕ್ಷದ್ವೀಪ ದ್ವೀಪಸಮೂಹ ಮತ್ತು ಇತರ ನಿರ್ಣಾಯಕ ಸಮುದ್ರ ಮಾರ್ಗಗಳ ಸುತ್ತಲೂ ಕರಾವಳಿ ಭದ್ರತಗೆ ನಿಯೋಜಿಸಲಾಗುತ್ತದೆ. ಈ ಮೂಲಕ ಶತ್ರು ದೇಶಗಳ ಚಲನವಲನದ ಮೇಲೆ ಕಣ್ಣಿಟ್ಟು ಗಡಿ ಭದ್ರತೆಯನ್ನು ಹೆಚ್ಚಿಸಲಾಗುತ್ತದೆ. 

    ಅಂಡ್ರೋತ್‌ ನೌಕೆಗೆ ಆದ ಖರ್ಚು?
    ಆಂಡ್ರೋತ್ ನೌಕೆಯ ನಿರ್ಮಾಣಕ್ಕೆ 789 ಕೋಟಿ ರೂ. ಖರ್ಚಾಗಿದೆ. ಈ ಹಿಂದೆ 2020ರಲ್ಲಿ ನೌಕಾಪಡೆಯ 16 ಹಡಗುಗಳಿಗಾಗಿ ಸುಮಾರು 12,622 ಕೋಟಿ ರೂ.ಗಳನ್ನು ಬಜೆಟ್‌ನಲ್ಲಿ ಮೀಸಲಿಡಲಾಗಿತ್ತು.  

    ಭಾರತಕ್ಕೆ ಅಂಡ್ರೋತ್‌ ಯಾಕೆ ಮುಖ್ಯ? 
    ಭಾರತ ಪರ್ಯಾಯ ದ್ವೀಪವಾಗಿದ್ದು, ಮೂರು ದಿಕ್ಕಿನಲ್ಲಿ ಸಮುದ್ರ ಗಡಿಯನ್ನು ಹೊಂದಿದೆ. ಶತ್ರುಗಳು ನೆಲದ ಮೇಲೆ ದಾಳಿ ನಡೆಸಿದರೆ ಸುಲಭವಾಗಿ ದಾಳಿ ನಡೆಸಬಹುದು. ಉದ್ವಿಗ್ನ ಪರಿಸ್ಥಿತಿಯಲ್ಲಿ ಸಮುದ್ರ ಮಾರ್ಗವಾಗಿ ದಾಳಿ ನಡೆಸಿದರೆ ಅದನ್ನು ಹತ್ತಿಕ್ಕಲು ಸಜ್ಜಾಗಿರಬೇಕಾಗುತ್ತದೆ.

    ಈ ಗಡಿಗಳು ಪಾಕಿಸ್ತಾನ ಹಾಗೂ ಚೀನಾಕ್ಕೂ ಹೊಂದಿಕೊಂಡಿದ್ದು, ಒಂದೊಮ್ಮೆ ಉದ್ವಿಗ್ನ ಪರಿಸ್ಥಿತಿ ಉಂಟಾದರೆ ಅದನ್ನು ಹಿಮ್ಮೆಟ್ಟಿಸಲು ನೌಕಾಪಡೆಗೆ ಅಂಡ್ರೋತ್‌ನಂತಹ ಯುದ್ಧ ನೌಕೆಗಳ ಅಗತ್ಯವಿದೆ. 

    ಅಂದ್ರೋತ್ ಬಗ್ಗೆ ಮುಖ್ಯಾಂಶಗಳು
    ನಿರ್ಮಾಣ: ಕೋಲ್ಕತ್ತಾದ ಗಾರ್ಡನ್ ರೀಚ್ ಶಿಪ್‌ಬಿಲ್ಡರ್ಸ್ ಅಂಡ್ ಇಂಜಿನಿಯರ್ಸ್ (GRSE) ನಿರ್ಮಿಸಿದೆ. GRSE ನಿರ್ಮಿಸುತ್ತಿರುವ 8 ಜಲಾಂತರ್ಗಾಮಿ ನೌಕೆಗಳ ಪೈಕಿ 2ನೆಯದು.
    ಉದ್ದೇಶ: ಇದು ಜಲಾಂತರ್ಗಾಮಿ-ನಿರೋಧಕ (Anti-Submarine Warfare) ಯುದ್ಧನೌಕೆಯಾಗಿದೆ. ಭಾರತದ ಕಡಲಲ್ಲಿ ಶತ್ರು ದೇಶಗಳ ಜಲಾಂತರ್ಗಾಮಿಗಳ ಸಂಚಾರ, ಹಾಗೂ ಗೂಢಚಾರ್ಯ ಮೇಲೆ ಕಣ್ಣಿಟ್ಟು ಕಾಪಾಡುವುದಾಗಿದೆ.
    ಎಂಜಿನ್: ಡೀಸೆಲ್ ಎಂಜಿನ್-ವಾಟರ್‌ಜೆಟ್ ಸಂಯೋಜನೆಯಿಂದ ಚಲಿಸುತ್ತದೆ.
    ಆಯುಧಗಳು: ಅತ್ಯಾಧುನಿಕ ಹಗುರವಾದ ಟಾರ್ಪಿಡೊಗಳು ಮತ್ತು ದೇಶೀಯ ಜಲಾಂತರ್ಗಾಮಿ-ನಿರೋಧಕ ಯುದ್ಧ ಕ್ಷಿಪಣಿಗಳನ್ನು ಹೊಂದಿದೆ.
    ಹೆಸರಿನ ಮೂಲ: ಲಕ್ಷದ್ವೀಪ ದ್ವೀಪಸಮೂಹದಲ್ಲಿರುವ ಅಂಡ್ರೋತ್ ದ್ವೀಪದಿಂದ ಈ ನೌಕೆಗೆ ಹೆಸರಿಡಲಾಗಿದೆ.

    ಸೇನೆಗೆ ಇನ್ನೂ ಸಿಗಲಿದೆ ಭೀಮ ಬಲ!
    ಆಪರೇಷನ್‌ ಸಿಂದೂರ ಬಳಿಕ ಎಚ್ಚೆತ್ತುಕೊಂಡಿರುವ ಮೋದಿ ಸರ್ಕಾರ ಸ್ವಾತಂತ್ರ್ಯಾನಂತರದ ಅತಿದೊಡ್ಡ ರಕ್ಷಣಾ ಸಾಮರ್ಥ್ಯ ಮೇಲ್ದರ್ಜೆಗೇರಿಸುವ ಯೋಜನೆಗೆ ಕೈಹಾಕಿದೆ. ಮುಂದಿನ ದಿನಗಳಲ್ಲಿ ಸಾವಿರಾರು ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ನೌಕೆಗಳು, ಡ್ರೋನ್‌ಗಳನ್ನು ಸೇನಾ ಬತ್ತಳಿಕೆಗೆ ಸೇರ್ಪಡೆ ಮಾಡುವ ಯೋಜನೆ ರೂಪಿಸಲಾಗಿದೆ. ಈ ಸಂಬಂಧ ಮುಂದಿನ ತಲೆಮಾರಿನ ಯುದ್ಧದ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು 15 ವರ್ಷಗಳ ನೀಲನಕ್ಷೆಯನ್ನೂ ಸಿದ್ಧಪಡಿಸಲಾಗಿದೆ.  

    ನೌಕಾಸೇನೆಗೆ ಏನೆಲ್ಲ ಸೇರಿಸಲು ತೀರ್ಮಾನಿಸಲಾಗಿದೆ?
    ನೂತನ ವಿಮಾನವಾಹಕ ಯುದ್ಧ ನೌಕೆ, ಮುಂದಿನ ತಲೆಮಾರಿನ 10 ಯುದ್ಧನೌಕೆಗಳು, 8 ಅತ್ಯಾಧುನಿಕ ಗಸ್ತು ಸಮರ ನೌಕೆಗಳು, ನಾಲ್ಕು ಲ್ಯಾಂಡಿಂಗ್‌ ಡಾಕ್‌ ಪ್ಲಾಟ್‌ಫಾರ್ಮ್‌ಗಳು, ಯುದ್ಧನೌಕೆಗಳಿಗೆ ನ್ಯೂಕ್ಲಿಯರ್‌ ಪ್ರೊಪಲ್ಷನ್‌ಗಳು, ಎಲೆಕ್ಟ್ರೋ ಮ್ಯಾಗ್ನೆಟಿಕ್‌ ಏರ್‌ಕ್ರಾಫ್ಟ್ ಲಾಂಚ್‌ ಸಿಸ್ಟಂಗಳ ಸೇರ್ಪಡೆಗೆ ತೀರ್ಮಾನಿಸಲಾಗಿದೆ. 

  • ಭಾರತೀಯ ನೌಕಾಪಡೆಗೆ ಬಲ; 2 ನೀಲಗಿರಿ ವರ್ಗದ ಯುದ್ಧನೌಕೆಗಳ ನಿಯೋಜನೆ

    ಭಾರತೀಯ ನೌಕಾಪಡೆಗೆ ಬಲ; 2 ನೀಲಗಿರಿ ವರ್ಗದ ಯುದ್ಧನೌಕೆಗಳ ನಿಯೋಜನೆ

    ನವದೆಹಲಿ: ಭಾರತೀಯ ನೌಕಾಪಡೆಯು (Indian Navy) ನೌಕಾ ಶಕ್ತಿಗೆ ದೊಡ್ಡ ಉತ್ತೇಜನ ನೀಡುವ 2 ನೀಲಗಿರಿ-ವರ್ಗದ ಯುದ್ಧನೌಕೆಗಳನ್ನು ನಿಯೋಜಿಸಿದೆ.

    ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ನೌಕಾಪಡೆಯು ಮಂಗಳವಾರ ಎರಡು ಹೊಸ ನೀಲಗಿರಿ-ವರ್ಗದ ಸ್ಟೆಲ್ತ್ ಫ್ರಿಗೇಟ್‌ಗಳಾದ ಐಎನ್‌ಎಸ್ ಹಿಮಗಿರಿ ಮತ್ತು ಐಎನ್‌ಎಸ್ ಉದಯಗಿರಿಯನ್ನು ಕಾರ್ಯರೂಪಕ್ಕೆ ತಂದಿತು. ಇದನ್ನೂ ಓದಿ: ಮಾರುತಿ ಸುಜುಕಿಯ ಮೊದಲ ಇವಿ ವಾಹನ ಇ-ವಿಟಾರ ರಫ್ತಿಗೆ ಪ್ರಧಾನಿ ಮೋದಿ ಚಾಲನೆ

    ಭಾರತದಲ್ಲಿ ತಯಾರಿಸಲಾದ ಈ ಎರಡೂ ಯುದ್ಧನೌಕೆಗಳು ಪ್ರಾಜೆಕ್ಟ್ 17 ಆಲ್ಫಾ (ಪಿ-17ಎ) ನ ಭಾಗವಾಗಿವೆ. ಐಎನ್ಎಸ್ ನೀಲಗಿರಿ ಎಂಬ ಪ್ರಮುಖ ನೌಕೆಯನ್ನು ಈ ವರ್ಷದ ಆರಂಭದಲ್ಲಿ ನಿಯೋಜಿಸಲಾಯಿತು. ಹಿಮಗಿರಿ ಮತ್ತು ಉದಯಗಿರಿ ಹೆಚ್ಚಾಗಿ ಸ್ವದೇಶಿಯಾಗಿ ಬೆಳೆದವು. ಶೇ.75 ಕ್ಕಿಂತ ಹೆಚ್ಚು ಸ್ಥಳೀಯ ಸಾಮಗ್ರಿಗಳನ್ನು ಬಳಸಿ ರೂಪಿಸಲಾಗಿದೆ. ಸರ್ಕಾರದ ‘ಆತ್ಮನಿರ್ಭರತ’ ಅಥವಾ ಸ್ವಾವಲಂಬನೆ, ರಕ್ಷಣಾ ಉತ್ಪಾದನೆ ಮತ್ತು ಸಾಮರ್ಥ್ಯಗಳಲ್ಲಿ ಹೆಚ್ಚಿನ ಉತ್ತೇಜನವನ್ನು ಇದು ಪ್ರತಿನಿಧಿಸುತ್ತದೆ.

    ಎರಡು ಪ್ರಮುಖ ಯುದ್ಧನೌಕೆಗಳನ್ನು ಏಕಕಾಲದಲ್ಲಿ ನಿಯೋಜಿಸಲಾಗುತ್ತಿರುವುದು ಇದೇ ಮೊದಲು. ಹಿಮಗಿರಿಯನ್ನು ಕೋಲ್ಕತ್ತಾದಲ್ಲಿ ಗಾರ್ಡನ್ ರೀಚ್ ಶಿಪ್‌ಬಿಲ್ಡರ್ಸ್ & ಎಂಜಿನಿಯರ್‌ಗಳು ಮುಂಬೈನ ಮಜಗಾಂವ್ ಡಾಕ್ ಶಿಪ್‌ಬಿಲ್ಡರ್ಸ್ ಉದಗಿರಿಯಲ್ಲಿ ನಿರ್ಮಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕದ ಗಡಿಯಿಂದ 19 ಕಿ.ಮೀ ದೂರದಲ್ಲಿ ನಿರ್ಮಾಣವಾಗಲಿದೆ ಹೊಸೂರು ವಿಮಾನ ನಿಲ್ದಾಣ!

    ಭಾರತವು ಈಗ ಮೂರು-ಫ್ರಿಗೇಟ್ ಸ್ಕ್ವಾಡ್ರನ್ ಅನ್ನು ಹೊಂದಿದ್ದು, ಇದು ದೇಶದ ಕೈಗಾರಿಕಾ-ತಾಂತ್ರಿಕ ಸಾಮರ್ಥ್ಯ ಮತ್ತು ಸ್ಥಳೀಯ ಸಾಮರ್ಥ್ಯದಿಂದ ಪ್ರಾದೇಶಿಕ ಶಕ್ತಿ ಸಮತೋಲನವನ್ನು ಪ್ರದರ್ಶಿಸುತ್ತದೆ.

  • ಸೇನೆ ಸೇರಲು ಸ್ವದೇಶಿ ನಿರ್ಮಿತ ಉದಯಗಿರಿ, ಹಿಮಗಿರಿ ಯುದ್ಧ ನೌಕೆಗಳು ಸಿದ್ಧ; ನೌಕಾಪಡೆಗೆ ಇನ್ನಷ್ಟು ಬಲ

    ಸೇನೆ ಸೇರಲು ಸ್ವದೇಶಿ ನಿರ್ಮಿತ ಉದಯಗಿರಿ, ಹಿಮಗಿರಿ ಯುದ್ಧ ನೌಕೆಗಳು ಸಿದ್ಧ; ನೌಕಾಪಡೆಗೆ ಇನ್ನಷ್ಟು ಬಲ

    ವಿಶಾಖಪಟ್ಟಣಂ: ಭಾರತೀಯ ನೌಕಾಪಡೆಯು (Indian Navy) ಅಭಿವೃದ್ಧಿಪಡಿಸಿರುವ ಎರಡು ಅತ್ಯಾಧುನಿಕ ಯುದ್ಧನೌಕೆಗಳಾದ ಉದಯಗಿರಿ (F35) ಹಾಗೂ ಹಿಮಗಿರಿ (F34) (Udaygiri (F35) and Himagiri (F34) ನೌಕೆಗಳು ಸೇನೆಗ ಸೇರಲು ಸಜ್ಜಾಗಿವೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಇದೇ ಆಗಸ್ಟ್‌ 26ರಂದು ಈ ಎರಡೂ ಸ್ವದೇಶಿ ನಿರ್ಮಿತ ನೌಕೆಗಳನ್ನು ಏಕಕಾಲಕ್ಕೆ ಸೇನೆಗೆ ನಿಯೋಜನೆ ಮಾಡಲಾಗುತ್ತದೆ ಎಂದು ಪೂರ್ವ ನೌಕಾ ಕಮಾಂಡ್ (ENC) ತಿಳಿಸಿದ್ದಾರೆ.

    ಇದೇ ಮೊದಲ ಬಾರಿಗೆ ಎರಡು ಪ್ರತ್ಯೇಕ ಸಂಸ್ಥೆಗಳು ಅಭಿವೃದ್ಧಿಪಡಿಸಿದ ಯುದ್ಧನೌಕೆಗಳನ್ನು (War Ships) ವಿಶಾಖಪಟ್ಟಣದಲ್ಲಿ ಏಕಕಾಲಕ್ಕೆ ನೌಕಾಪಡೆಗೆ ಸೇರಿಸಲಾಗುತ್ತಿದೆ. ಇದನ್ನೂ ಓದಿ: ಟ್ರಾಫಿಕ್‌ನಲ್ಲಿ ಸಿಲುಕಿದ ಅಂಬುಲೆನ್ಸ್ – ರಸ್ತೆಯಲ್ಲಿ ಓಡಿ ಟ್ರಾಫಿಕ್ ಕ್ಲಿಯರ್ ಮಾಡಿದ ASI ಅಪರ್ಣಾ

    ಅಧಿಕಾರಿಗಳ ಪ್ರಕಾರ, ಸುಮಾರು 6,700 ಟನ್‌ಗಳಷ್ಟು ತೂಕ ಇರುವ P17A ವರ್ಗದ ಯುದ್ಧನೌಕೆಗಳು, ಹಿಂದಿನ ಶಿವಾಲಿಕ್-ವರ್ಗದ ಯುದ್ಧನೌಕೆಗಳಿಗಿಂತ ಶೇ.5 ಪಟ್ಟು ದೊಡ್ಡದಾಗಿದೆ. F35 ಎಂಬ ಉದಯಗಿರಿ ನೌಕೆಯು ಪ್ರಾಜೆಕ್ಟ್ 17A ರಹಸ್ಯ ಕಾರ್ಯಾಚರಣೆ ಸಾಮರ್ಥ್ಯದ ಯುದ್ಧನೌಕೆಯಿಂದ ಬಂದ 2ನೇ ರಚೆನೆಯಾಗಿದೆ. ಇದನ್ನು ಮುಂಬೈನ ಮಡಗಾಂವ್‌ ಡಾಕ್ ಹಡಗು ನಿರ್ಮಾಣ ಸಂಸ್ಥೆ (MDL) ಅಭಿವದ್ಧಿಪಡಿಸಿದೆ. ಇನ್ನೂ ಹಿಮಗಿರಿ ಯುದ್ಧನೌಕೆಯನ್ನು ಕೋಲ್ಕತ್ತದಲ್ಲಿರುವ ಗಾರ್ಡನ್ ರೀಚ್ ಹಡಗು ನಿರ್ಮಾಣ ಮತ್ತು ಎಂಜಿನಿಯರ್ಸ್‌ ಸಂಸ್ಥೆ (GRSE) ನಿರ್ಮಿಸಿದೆ. ಈ ಪಿ17ಎ ಯೋಜನೆಯು ಇದರ ಮೊದಲ ಪ್ರಯತ್ನವಾಗಿದೆ.

    ಉದಯಗಿರಿ, ಹಿಮಗಿರಿಯ ವಿಶೇಷತೆ ಏನು?
    6,700 ಟನ್‌ ತೂಕವಿರುವ ಈ ನೌಕೆಗಳು ಶಿವಾಲಿಗ್‌ ಯುದ್ಧ ನೌಕೆಗಿಂತ ಶೇ.5 ದೊಡ್ಡದಿದೆ. ರೆಡಾರ್‌ ಕಣ್ತಪ್ಪಿಸಿ ಶತ್ರುಗಳಿಂದ ರಕ್ಷಿಸಿಕೊಂಡು ದಾಳಿಯನ್ನು ನಡೆಸುವ ಸಾಮರ್ಥ್ಯವನ್ನೂ ಇವು ಹೊಂದಿವೆ. ಡೀಸೆಲ್‌ ಅಥವಾ ಅನಿಲ (CODOG) ಎರಡನ್ನೂ ಬಳಸುವ ಪ್ರೊಪೆಲರ್‌ಗಳನ್ನು ಹೊಂದಿವೆ. ಇದನ್ನೂ ಓದಿ: ಆ.15 ರಿಂದ ಸಿಗುತ್ತೆ ಫಾಸ್ಟ್ಯಾಗ್‌ ವಾರ್ಷಿಕ ಪಾಸ್‌

    ಸೂಪರ್‌ಸಾನಿಕ್ ಖಂಡಾಂತರ ಕ್ಷಿಪಣಿ, ಮಧ್ಯಮ ಶ್ರೇಣಿಯ ಭೂಮಿಯಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿ, 76 ಮಿ.ಮೀ. ಎಂಆರ್ ಬಂದೂಕು ಹಾಗೂ 30 ಮಿ.ಮೀ. ಹಾಗೂ 12.7 ಮಿ.ಮೀ. ಬಂದೂಕುಗಳನ್ನೂ ಅಳವಡಿಸಲಾಗಿದೆ. ಜೊತೆಗೆ ಜಲಾಂತರ್ಗಾಮಿ ನಿರೋಧಕ ಹಾಗೂ ನೀರಿನೊಳಗೆ ಬಳಸುವ ಯಾವುದೇ ಶಸ್ತ್ರಾಸ್ತ್ರಗಳಿಂದ ರಕ್ಷಿಸಿಕೊಳ್ಳಬಲ್ಲ ಶಕ್ತಿಶಾಲಿ ನೌಕೆ ಇದಾಗಿದೆ.

    ಕಡಲಿನಲ್ಲಿ ಈಗಾಗಲೇ ಕಠಿಣ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದೆ. ಯಂತ್ರೋಪಕರಣಗಳು, ಅಗ್ನಿಶಾಮಕ ವ್ಯವಸ್ಥೆ, ಹಾನಿ ನಿಯಂತ್ರಣ, ನೌಕಾ ನಿರ್ವಹಣೆ ಮತ್ತು ಸಂಪರ್ಕ ವ್ಯವಸ್ಥೆಗಳ ಕಾರ್ಯಕ್ಷಮತೆಯ ಪರೀಕ್ಷೆ ನಡೆದಿದೆ ಎಂದು ನೌಕಾದಳ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

    ಇದಲ್ಲದೇ ನೌಕಾಪಡೆಯ ಯುದ್ಧನೌಕೆ ವಿನ್ಯಾಸ ಸಂಸ್ಥೆಯಿಂದ ಅಭಿವೃದ್ಧಿಯಾದ 100ನೇ ಹಡಗು ಉದಯಗಿರಿ ಎಂಬುದು ಮತ್ತೊಂದು ವಿಶೇಷ. ಇದನ್ನೂ ಓದಿ: ನೋಯ್ಡಾದ ಡೇಕೇರ್‌ನಲ್ಲಿ 15 ತಿಂಗಳ ಹೆಣ್ಣುಮಗು ಮೇಲೆ ಹಲ್ಲೆ – ತೊಡೆ ಮೇಲೆ ಕಚ್ಚಿ ವಿಕೃತಿ 

  • ಆಪರೇಷನ್ ಸಿಂಧೂರ ವೇಳೆ ನೌಕಾದಳದಿಂದ ಮಿಸೈಲ್ ದಾಳಿಗೆ ಟಾರ್ಗೆಟ್ ಫಿಕ್ಸ್ ಆಗಿತ್ತು – ಆದ್ರೆ ಅಂತಿಮ ಆದೇಶ ಬರಲಿಲ್ಲ

    ಆಪರೇಷನ್ ಸಿಂಧೂರ ವೇಳೆ ನೌಕಾದಳದಿಂದ ಮಿಸೈಲ್ ದಾಳಿಗೆ ಟಾರ್ಗೆಟ್ ಫಿಕ್ಸ್ ಆಗಿತ್ತು – ಆದ್ರೆ ಅಂತಿಮ ಆದೇಶ ಬರಲಿಲ್ಲ

    – ಅಂತಿಮ ಆದೇಶ ಬಂದಿದ್ದರೆ ಪಾಕಿಸ್ತಾನದ ಪೋರ್ಟ್‌ಗಳು ಮಿಸೈಲ್ ದಾಳಿಗೆ ಭಸ್ಮವಾಗುತ್ತಿದ್ದವು

    ನವದೆಹಲಿ: ಪಹಲ್ಗಾಮ್‌ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿದ ಆಪರೇಷನ್‌ ಸಿಂಧೂರ ಕಾರ್ಯಾಚರಣೆಗೆ ಸಂಬಂಧಪಟ್ಟ ಸ್ಫೋಟಕ ಮಾಹಿತಿಯೊಂದು ಬೆಳಕಿಗೆ ಬಂದಿದೆ. ಆಪರೇಷನ್ ಸಿಂಧೂರ (Operation Sindoor) ವೇಳೆ ಪಾಕಿಸ್ತಾನದ ವಿರುದ್ಧ ನೌಕಾದಳದಿಂದ (Indian Navy ಮಿಸೈಲ್ ದಾಳಿಗೆ ಟಾರ್ಗೆಟ್ ಫಿಕ್ಸ್ ಆಗಿತ್ತು. ಆದರೆ, ದಾಳಿಗೆ ಅಂತಿಮ ಆದೇಶ ಬರಲಿಲ್ಲ. ಬಂದಿದ್ದರೆ ಪಾಕ್ ಬಂದರುಗಳು, ಅಲ್ಲಿದ್ದ ನೌಕೆಗಳು ಧ್ವಂಸವಾಗುತ್ತಿತ್ತು ನೌಕಾಪಡೆಯ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

    ಉತ್ತರ ಅರಬ್ಬೀ ಸಮುದ್ರದಲ್ಲಿ ಮಿಗ್-29 ಎಂಕೆ ಫೈಟರ್‌ಜೆಟ್‌ಗಳನ್ನು (Fighter Jets) ಹೊತ್ತು ಐಎನ್‌ಎಸ್ ವಿಕ್ರಾಂತ್ ಸಜ್ಜಾಗಿತ್ತು (ಹಾಟ್-ಸ್ಟ್ಯಾಂಡ್‌ಬೈನಲ್ಲಿ). ಒಂದೊಮ್ಮೆ ದಾಳಿಗೆ ಸಿಗ್ನಲ್ ಸಿಕ್ಕಿದ್ದಲ್ಲಿ ದಕ್ಷಿಣ ಪಾಕಿಸ್ತಾನದ ಬಂದರುಗಳು (Pakistan Port) ಭಸ್ಮ ಆಗ್ತಿತ್ತು ಅಂತ ಹೇಳಲಾಗಿದೆ. ಇದನ್ನೂ ಓದಿ: ಚೀನಾದೊಂದಿಗೆ ರಾಜತಾಂತ್ರಿಕ ಸಂಬಂಧ ಸುಧಾರಿಸಲು 4 ಹಂತದ ಯೋಜನೆ ಪ್ರಸ್ತಾಪಿಸಿದ ರಾಜನಾಥ್ ಸಿಂಗ್

    ಹೌದು. ಪಾಕಿಸ್ತಾನದ ಕರಾಚಿ ಬಂದರಿನಲ್ಲಿರುವ ನೌಕಾಪಡೆಯ ಹಡಗುಗಳು, ಜಲಾಂತರ್ಗಾಮಿ ನೌಕೆಗಳು ಹಾಗೂ ಭೂಸೇನೆ ಸೇರಿದಂತೆ ನೌಕಾದಳದಿಂದ ಮಿಸೈಲ್ ದಾಳಿಗೆ ಟಾರ್ಗೆಟ್ ಫಿಕ್ಸ್ ಆಗಿತ್ತು. ಬ್ರಹ್ಮೋಸ್‌ ಕ್ಷಿಪಣಿ ಮತ್ತು ಜಲಾಂತರ್ಗಾಮಿ ನೌಕೆಗಳಿಂದ ದಾಳಿ ಮಾಡಲು ನಿರ್ಧರಿಸಲಾಗಿತ್ತು. ಇವು ಭಾರತದ ರಷ್ಯಾ ನಿರ್ಮಿತ ಕಿಲೋ ವರ್ಗದ ಜಲಾಂತರ್ಗಾಮಿ ನೌಕೆಗಳೊಂದಿಗೆ ಸಂಯೋಜಿಸಲ್ಪಟ್ಟ ಕ್ಲಬ್ ಸರಣಿಯವು ಎಂದು ನಂಬಲಾಗಿದೆ. ಯುದ್ಧನೌಕೆಗಳು ಮತ್ತು ಜಲಾಂತರ್ಗಾಮಿ ನೌಕೆಗಳು ಎರಡೂ ಹಡಗು ವಿರೋಧಿ ಮತ್ತು ಭೂ-ದಾಳಿ ಕ್ಷಿಪಣಿಗಳನ್ನು ಉಡಾಯಿಸುವ ಸ್ಥಿತಿಯಲ್ಲಿದ್ದವು. ಆದ್ರೆ ಅಂತಿಮ ಆದೇಶ ಬರಲೇ ಇಲ್ಲ. ಬಂದಿದ್ದರೆ ಪಾಕಿಸ್ತಾನದ ಪೋರ್ಟ್‌ಗಳು ಮಿಸೈಲ್ ದಾಳಿಗೆ ಭಸ್ಮವಾಗುತ್ತಿದ್ದವು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಅಂತರಿಕ್ಷ ನಿಲ್ದಾಣದಲ್ಲಿ ಶುಭಾಂಶು ಶುಕ್ಲಾ – ಭಾರತದಿಂದ ‘ಸಪ್ತ ಸಂಶೋಧನೆ’

    ಉತ್ತರ ಅರಬ್ಬೀ ಸಮುದ್ರದಲ್ಲಿ ನಿಯೋಜನೆಯಾಗಿದ್ದ ಐಎನ್‌ಎಸ್‌ ವಿಕ್ರಾಂತ್‌ ನೌಕೆ ಹೊತ್ತಿದ್ದ ಮಿಕ್‌ 29K ಯುದ್ಧ ವಿಮಾನವು ಪಾಕಿಸ್ತಾನದ ದಕ್ಷಿಣ ಕರಾವಳಿ ವಾಯುಪ್ರದೇಶದ ಪ್ರಾಬಲ್ಯವನ್ನು ಖಚಿತಪಡಿಸಿತ್ತು. ಭಾರತ ಮತ್ತು ಪಾಕಿಸ್ತಾನ ನಡುವಿನ ಮಿಲಿಟರಿ ಯುದ್ಧಗಳು ಕೊನೆಗೊಂಡ ಕೆಲ ದಿನಗಳ ನಂತರ ATR-72 ಟರ್ಬೊ-ಪ್ರಾಪ್ ವಿಮಾನದ ಆವೃತ್ತಿ RAS-72 ಸೀ ಈಗಲ್ ಅನ್ನು INS ವಿಕ್ರಾಂತ್ ಟ್ರ್ಯಾಕ್‌ ಮಾಡಿತು. ಇದು ಕಡಲ ತೀರದ ಕಣ್ಗಾವಲು ವಿಮಾನವಾಗಿದೆ. ಅದಕ್ಕಾಗಿ ಪಾಕ್ ನೌಕಾಪಡೆಯ ವಿಮಾನದಿಂದ ಕೆಲ ಮೀಟರ್‌ಗಳ ಅಂತರದಷ್ಟು ದೂರದಲ್ಲಿ ಮಿಗ್-29ಕೆ ವಿಮಾನವನ್ನು ಕಣ್ಗಾವಲಿಗೆ ಇರಿಸಲಾಗಿತ್ತು. ಈ ಮೂಲಕ ಪಾಕ್ ನೌಕಾಪಡೆಯ ವಿಮಾನವನ್ನು ಹಿಮ್ಮೆಟ್ಟಿಸುವಲ್ಲಿ ನೌಕಾಪಡೆ ಯಶಸ್ವಿಯಾಯಿತು. ಇದನ್ನೂ ಓದಿ: ಹನಿಮೂನ್ ಮರ್ಡರ್‌ನಂತೆಯೇ ಆಂಧ್ರದಲ್ಲೂ ಮರ್ಡರ್ – ಮೇಘಾಲಯ ಹತ್ಯೆ ವಿಚಾರದ ಬಗ್ಗೆಯೂ ಮಾತಾಡಿದ್ರಂತೆ ಆರೋಪಿಗಳು

    ಇನ್ನೂ, ಭಾರತದ ಜೊತೆ ಶೀಘ್ರವೇ ಅತಿದೊಡ್ಡ ವ್ಯಾಪಾರ ಒಪ್ಪಂದ ನಡೆಯಲಿದೆ ಅಂತ ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ. ಇನ್ನು, ಟ್ಯಾಕ್ಸ್ ವಾರ್ ಬಳಿಕ ಚೀನಾ ಜೊತೆ ಅಮೆರಿಕ ವ್ಯಾಪಾರ ಒಪ್ಪಂದ ಮಾಡಿಕೊಂಡಿದೆ. ಇನ್ನು, ಇರಾನ್ ಜೊತೆ ಮತ್ತೆ ಮಾತುಕತೆಗೆ ಟ್ರಂಪ್ ಮುಂದಾಗಿದ್ದಾರೆ. ನಾಗರಿಕ ಪರಮಾಣು ಇಂಧನದಲ್ಲಿ 30 ಬಿಲಿಯನ್ ಡಾಲರ್ ಹೂಡಿಕೆ, ಫಂಡ್ ರಿಲೀಸ್, ನಿರ್ಬಂಧ ವಾಪಸ್ ಬಗ್ಗೆ ಮಾತುಕತೆ ನಡೆಸೋಣ ಅಂತ ಇರಾನ್‌ಗೆ ಅಮೆರಿಕ ಆಹ್ವಾನ ಕೊಟ್ಟಿದೆ. ಇರಾನ್-ಇಸ್ರೇಲ್‌ನಿಂದ ಈವರೆಗೂ 4,415 ಭಾರತೀಯರು ತಾಯ್ನಾಡಿಗೆ ವಾಪಸ್ ಬಂದಿದ್ದಾರೆ. ‘ಆಪರೇಷನ್ ಸಿಂಧು’ ಕಾರ್ಯಾಚರಣೆ ಮೂಲಕ ಇರಾನ್‌ನಿಂದ 3,597, ಇಸ್ರೇಲ್‌ನಿಂದ 818 ಮಂದಿಯನ್ನು ಕರೆತರಲಾಗಿದೆ ವಿದೇಶಾಂಗ ಇಲಾಖೆ ಹೇಳಿದೆ. ಇದಕ್ಕಾಗಿ 19 ವಿಶೇಷ ವಿಮಾನಗಳು, ವಾಯುಪಡೆಯ 3 ವಿಮಾನಗಳನ್ನು ಬಳಕೆ ಮಾಡಲಾಗಿದೆ. ಈ ಮಧ್ಯೆ, ಇರಾನ್ ಸುಪ್ರೀಂಲೀಡರ್ ಖಮೇನಿ ಹತ್ಯೆಗೆ ತುಂಬಾ ಹುಡುಕಾಟ ನಡೆಸಿದ್ದೆವು. ಆದರೆ, ಆತ ಅಜ್ಞಾತವಾಸಿಯಾಗಿಬಿಟ್ಟ. ನಮ್ಮ ಕಣ್ಣಿಗೆ ಬಿದ್ದಿದ್ದರೆ ಆತನನ್ನು ಕಗ್ಗೊಲೆ ಮಾಡುತ್ತಿದ್ದೆವು ಅಂತ ಇಸ್ರೇಲ್ ರಕ್ಷಣಾ ಸಚಿವ ಕಾಟ್ಜ್ ಹೇಳಿದ್ದಾರೆ. ಇದನ್ನೂ ಓದಿ: ಮಧ್ಯಪ್ರದೇಶ ಸಿಎಂ ಬೆಂಗಾವಲು ಪಡೆಯ 19 ವಾಹನಗಳಿಗೆ ನೀರು ಮಿಶ್ರಿತ ಡೀಸೆಲ್ ತುಂಬಿದ ಬಂಕ್ ಸಿಬ್ಬಂದಿ!

  • 2000 ವರ್ಷಗಳಷ್ಟು ಹಳೆಯ ತಂತ್ರಜ್ಞಾನಕ್ಕೆ ಮರುಜೀವ – ಏನಿದು ಸ್ಟಿಚ್ಡ್ ಶಿಪ್?‌

    2000 ವರ್ಷಗಳಷ್ಟು ಹಳೆಯ ತಂತ್ರಜ್ಞಾನಕ್ಕೆ ಮರುಜೀವ – ಏನಿದು ಸ್ಟಿಚ್ಡ್ ಶಿಪ್?‌

    – ಅಜಂತಾ ಗುಹೆಯ ವರ್ಣಚಿತ್ರದಿಂದ ಪ್ರೇರಣೆ
    – ಕೇರಳ ಕುಶಲಕರ್ಮಿಗಳಿಂದ ಸಾಂಪ್ರದಾಯಿಕ ವಿಧಾನ ಬಳಸಿ ನಿರ್ಮಾಣ
    – ಪ್ರಾಚೀನ ವ್ಯಾಪಾರ ಮಾರ್ಗ ಗುಜರಾತ್‌ನಿಂದ ಒಮನ್‌ಗೆ ಮೊದಲ ಪ್ರಯಾಣಕ್ಕೆ ಸಿದ್ಧತೆ

    ಕಾರವಾರದ (Karwar) ನೌಕಾ ನೆಲೆಯಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಭಾರತೀಯ ನೌಕಾಪಡೆಯು (Indian Navy) ಐಎನ್​ಎಸ್​ವಿ ಕೌಂಡಿನ್ಯ (INSV Kaundinya) ಹೆಸರಿನ ನೇಯ್ದ ಹಡಗನ್ನು ಅನಾವರಣಗೊಳಿಸಿದೆ. ಈ ಹಡಗು 5 ನೇ ಶತಮಾನದ ಹಡಗಿನ ಪ್ರತಿಕೃತಿಯಾಗಿದ್ದು, ಸಂಪೂರ್ಣ ಪ್ರಾಚೀನ ತಂತ್ರಜ್ಞಾನ ಬಳಸಿಕೊಂಡು ನಿರ್ಮಾಣ ಮಾಡಲಾಗಿದೆ.

    ಸಂಸ್ಕೃತಿ ಸಚಿವಾಲಯ, ಭಾರತೀಯ ನೌಕಾಪಡೆ ಮತ್ತು ಹೊಡಿ ಇನ್ನೋವೇಶನ್ಸ್ ಸೇರಿ ಈ ಹಡಗನ್ನು ನಿರ್ಮಿಸಿವೆ. ಜುಲೈ 2023 ರಲ್ಲಿ ತ್ರಿಪಕ್ಷೀಯ ಒಪ್ಪಂದದ ಮೂಲಕ ಈ ಯೋಜನೆಯನ್ನು ಪ್ರಾರಂಭಿಸಲಾಗಿತ್ತು. ಸಂಸ್ಕೃತಿ ಸಚಿವಾಲಯವು ಈ ಯೋಜನೆಗೆ ಹಣಕಾಸಿನ ನೆರವನ್ನು ಒದಗಿಸಿದೆ. ಈ ಯೋಜನೆಗೆ ಸುಮಾರು 9 ಕೋಟಿ ರೂ. ವೆಚ್ಚವಾಗಿದೆ. 21 ಮೀಟರ್‌ ಉದ್ದ ಇರುವ ಈ ಹಡಗು, ನಿರ್ಮಾಣಕ್ಕೆ ಸುಮಾರು 22 ತಿಂಗಳುಗಳು ಹಿಡಿದಿವೆ.

    ನೇಯ್ದ ಹಡಗು ಏಕೆ ವಿಶೇಷ?
    ಈ ಹಡಗು ಅಜಂತಾ ಗುಹೆಗಳಲ್ಲಿನ ವರ್ಣಚಿತ್ರದಿಂದ (Ajanta Paintings) ಪ್ರೇರಣೆ ಪಡೆದಿದೆ. ಈ ಹಡಗಿನ ನಿರ್ಮಾಣವನ್ನು ಸಂಪೂರ್ಣವಾಗಿ ಸಾಂಪ್ರದಾಯಿಕ ವಿಧಾನದಲ್ಲಿ ತಯಾರಿಸಲಾಗಿದೆ. ನೈಸರ್ಗಿಕ ಕಚ್ಚಾ ವಸ್ತುಗಳನ್ನು ಬಳಸಿ ಕೇರಳದ ಹಡಗು ತಯಾರಕ ಬಾಬು ಶಂಕರನ್ ನೇತೃತ್ವದಲ್ಲಿ ಗೋವಾದಲ್ಲಿ ಇದರ ನಿರ್ಮಾಣವಾಗಿದೆ. ಸಂಪೂರ್ಣ ಮರದ ವಸ್ತುಗಳನ್ನು ಬಳಕೆ ಮಾಡಲಾಗಿದೆ. ಚೌಕಾಕಾರದ ಹಾಯಿಗಳು ಮತ್ತು ಸ್ಟೀರಿಂಗ್ ಹೊಂದಿರುವ ಈ ಹಡಗು ಆಧುನಿಕ ಹಡಗುಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಹಲ್ ಜ್ಯಾಮಿತಿ, ರಿಗ್ಗಿಂಗ್ ಮತ್ತು ಹಾಯಿಗಳನ್ನು ಸಹ ಇದರಲ್ಲಿ ಅಭಿವೃದ್ಧಿಪಡಿಸಲಾಗಿದೆ.

    ಹಡಗಿನ ಹೈಡ್ರೊಡೈನಾಮಿಕ್ ಕಾರ್ಯಕ್ಷಮತೆಯ ಮೌಲ್ಯೀಕರಣಕ್ಕೆ ಭಾರತೀಯ ನೌಕಾಪಡೆಯು ಐಐಟಿ ಮದ್ರಾಸ್‌ನ ಸಾಗರ ಎಂಜಿನಿಯರಿಂಗ್ ವಿಭಾಗ ಪರೀಕ್ಷೆ ನಡೆಸಿದೆ. ಈ ಹಡಗನ್ನು ಪುನರ್ನಿರ್ಮಿಸುವುದು ಭಾರತದ ಪ್ರಾಚೀನ ಕಡಲ ಸಂಪ್ರದಾಯವನ್ನು ಜೀವಂತವಾಗಿಡಲು ಭಾರತೀಯ ನೌಕಾಪಡೆ ಕೈಗೊಂಡ ಮಹತ್ವದ ಪ್ರಯತ್ನವಾಗಿದೆ.

    ಸವಾಲಿನ ಕೆಲಸ
    ಈ ಯೋಜನೆಯು ಹಲವಾರು ವಿಶಿಷ್ಟ ತಾಂತ್ರಿಕ ಸವಾಲುಗಳನ್ನು ಒಡ್ಡಿತು, ಏಕೆಂದರೆ ಅಂತಹ ಹಡಗುಗಳ ಯಾವುದೇ ನೀಲನಕ್ಷೆಗಳು ಅಥವಾ ಭೌತಿಕ ಅವಶೇಷಗಳು ಈಗ ಲಭ್ಯವಿಲ್ಲ. ವಿನ್ಯಾಸವನ್ನು ಕಲಾತ್ಮಕ ಚಿತ್ರದಿಂದ ಮಾತ್ರ ಅಧ್ಯಯನ ಮಾಡಿ ನಿರ್ಮಿಸಲಾಗಿದೆ. ಆದರೂ, ಹಡಗಿನ ಪ್ರತಿಯೊಂದು ಅಂಶವನ್ನು ಸಮುದ್ರಯಾನಕ್ಕೆ ಸಮತೋಲನವನ್ನು ಸಾಧಿಸುವಂತೆ ಎಚ್ಚರಿಕೆಯಿಂದ ರಚಿಸಲಾಗಿದೆ. ಈ ಮೂಲಕ ಯೋಜನೆಯ ಮೊದಲ ಮತ್ತು ಅತ್ಯಂತ ಕಠಿಣ ಹಂತವು ಈಗ ಪೂರ್ಣಗೊಂಡಿದೆ.

    ಮುಂದಿನ ಹಂತವು ಭಾರತೀಯ ನೌಕಾಪಡೆಯು ಪ್ರಾಚೀನ ಸಮುದ್ರ ವ್ಯಾಪಾರ ಮಾರ್ಗಗಳಲ್ಲಿ ಸಂಚಾರ ಕೈಗೊಳ್ಳುವುದಾಗಿದೆ. ಗುಜರಾತ್‌ನಿಂದ ಒಮನ್‌ಗೆ ಮೊದಲ ಪ್ರಯಾಣಕ್ಕೆ ಈಗಾಗಲೇ ಸಿದ್ಧತೆಗಳು ನಡೆಯುತ್ತಿವೆ. ಈ ವರ್ಷದ ಕೊನೆಯಲ್ಲಿ ಸಮುದ್ರಯಾನ ಕೈಗೊಳ್ಳಲಾಗುತ್ತದೆ. ಮಸ್ಕತ್ ಮತ್ತು ಇಂಡೋನೇಷ್ಯಾದಂತಹ ಸ್ಥಳಗಳಿಗೆ ಈ ಹಡಗು ಸಂಚರಿಸಲಿದೆ. ಭಾರತದ ಶ್ರೀಮಂತ ಕಡಲ ಪರಂಪರೆಯನ್ನು, ಸಮಕಾಲೀನ ನಾವೀನ್ಯತೆಯನ್ನು ಅಳವಡಿಸಿಕೊಳ್ಳುವುದು ಇದರ ಮೂಲ ಉದ್ದೇಶವಾಗಿದೆ.

    ಕಚ್ಚಾವಸ್ತುಗಳು
    ಮರದ ಹಲಗೆಗಳು, ತೆಂಗಿನ ಮರದ ನಾರಿನ ಹಗ್ಗವನ್ನು ಬಳಕೆ ಮಾಡಲಾಗಿದೆ. ಸಮುದ್ರದಲ್ಲಿ ಬಾಳಿಕೆ ಬರುವಂತೆ ಹಡಗಿನ ಹಲ್‌ನ್ನು ಸಾರ್ಡೀನ್ ಎಣ್ಣೆ, ನೈಸರ್ಗಿಕ ರಾಳಗಳು ಹಾಕಿ ಸಂಸ್ಕರಿಸಲಾಗಿದೆ.

    ಇದರ ಚೌಕಟ್ಟನ್ನು ತೇಗ ಮತ್ತು ಹಲಸಿನ ಮರದಿಂದ ತಯಾರಿಸಲಾಗಿದ್ದು, ಕೀಲ್‌ನ್ನು ಗೋವಾದ ರಾಜ್ಯ ಮರವಾದ ಮಟ್ಟಿಯಿಂದ ತಯಾರಿಸಲಾಗಿದೆ. ಪ್ರತಿಯೊಂದು ಹಲಗೆಯನ್ನು ಸಾಂಪ್ರದಾಯಿಕ ಉಗಿ ತಂತ್ರಗಳನ್ನು ಬಳಸಿ ಆಕಾರ ನೀಡಲಾಯಿತು ಮತ್ತು ನಂತರ ನೈಸರ್ಗಿಕ ವಸ್ತುಗಳಿಂದ ಹೊಲಿಯಲಾಗಿದೆ. ಇದೆಲ್ಲವನ್ನು ತೆಂಗಿನ ನಾರು ಬಳಸಿ ಕಟ್ಟಲಾಗಿದೆ. ಮೀನಿನ ಎಣ್ಣೆ ಮತ್ತು ಖುಂಡ್ರಸ್ ರಾಳದ ಮಿಶ್ರಣವನ್ನು ಬಳಸಿ ಕೀಲುಗಳನ್ನು ಮುಚ್ಚಲಾಗಿದೆ.

    15 ಸದಸ್ಯರ ಭಾರತೀಯ ನೌಕಾಪಡೆಯ ಸಿಬ್ಬಂದಿ ಈ ಹಡಗನ್ನು ಓಡಿಸಲಿದ್ದಾರೆ. ಕ್ಯಾಪ್ಟನ್ ದಿಲೀಪ್ ದೊಂಡೆ (ನಿವೃತ್ತ) (First Indian To Complete A solo) ಅವರ ಮಾರ್ಗದರ್ಶನದಲ್ಲಿ ಕಾರವಾರದಲ್ಲಿ ತರಬೇತಿ ನಡೆಯಲಿದೆ.

  • ಪಾಕ್‌ ಮತ್ತೆ ಬಾಲ ಬಿಚ್ಚಿದ್ರೆ ನಾವೇನು ಮಾಡ್ತೀವಿ ಅಂತ ಅವರಿಗೆ ಗೊತ್ತಾಗಿದೆ: ನೌಕಾ ಪಡೆ ಎಚ್ಚರಿಕೆ

    ಪಾಕ್‌ ಮತ್ತೆ ಬಾಲ ಬಿಚ್ಚಿದ್ರೆ ನಾವೇನು ಮಾಡ್ತೀವಿ ಅಂತ ಅವರಿಗೆ ಗೊತ್ತಾಗಿದೆ: ನೌಕಾ ಪಡೆ ಎಚ್ಚರಿಕೆ

    ನವದೆಹಲಿ: ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಲು ಧೈರ್ಯ ಮಾಡಿದರೆ, ನಾವು ಏನು ಮಾಡುತ್ತೇವೆಂದು ಅವರಿಗೆ ತಿಳಿದಿದೆ ಎಂದು ಸಶಸ್ತ್ರ ಪಡೆಗಳು ಬಲವಾದ ಎಚ್ಚರಿಕೆ ನೀಡಿವೆ.

    ಭಾರತೀಯ ನೌಕಾಪಡೆಯು ಸಂಪೂರ್ಣ ಕಡಲ ಪ್ರಾಬಲ್ಯವನ್ನು ಹೊಂದಿದ್ದು, ಪಾಕಿಸ್ತಾನದಿಂದ ಬರುವ ಯಾವುದೇ ಪ್ರಚೋದನೆಗೆ ಪ್ರತಿಕ್ರಿಯೆಯಾಗಿ ಭಾರಿ ಹೊಡೆತ ನೀಡಲು ಸಿದ್ಧವಾಗಿದೆ ಎಂದು ನೌಕಾ ಕಾರ್ಯಾಚರಣೆಗಳ ಮಹಾನಿರ್ದೇಶಕ ವೈಸ್ ಅಡ್ಮಿರಲ್ ಎ.ಎನ್.ಪ್ರಮೋದ್ ಹೇಳಿದ್ದಾರೆ.

    ಭಾರತೀಯ ಸೇನೆ ಮತ್ತು ಭಾರತೀಯ ವಾಯುಪಡೆಯ ಚಲನಶೀಲ ಕ್ರಮಗಳ ಜೊತೆಗೆ, ಸಮುದ್ರದಲ್ಲಿ ಭಾರತೀಯ ನೌಕಾಪಡೆಯ ಅಗಾಧ ಕಾರ್ಯಾಚರಣೆಯ ಶಕ್ತಿಯು ನಿನ್ನೆ ಪಾಕಿಸ್ತಾನದ ತುರ್ತು ಕದನ ವಿರಾಮ ಮನವಿಯಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದು ತಿಳಿಸಿದ್ದಾರೆ.

    ಭಾರತೀಯ ಸಶಸ್ತ್ರ ಪಡೆಗಳು ಭಾನುವಾರ ಮಿಲಿಟರಿ ಕಾರ್ಯಾಚರಣೆಗಳು, ನೌಕಾ ಕಾರ್ಯಾಚರಣೆಗಳು ಮತ್ತು ವಾಯು ಕಾರ್ಯಾಚರಣೆಗಳ ಮಹಾನಿರ್ದೇಶಕರು ಭಾನುವಾರ ಸುದ್ದಿಗೋಷ್ಠಿ ನಡೆಸಿ, ಪಾಕಿಸ್ತಾನದೊಳಗಿನ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿ ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಯಶಸ್ವಿಗಳಿಸಿರುವ ಬಗ್ಗೆ ಮಾತನಾಡಿದ್ದಾರೆ.

  • ಕರಾವಳಿಯಲ್ಲಿ `OP TRIGGER’ ಆಪರೇಷನ್ – ಕಡಲಿನಲ್ಲಿ ಕಟ್ಟೆಚ್ಚರ

    ಕರಾವಳಿಯಲ್ಲಿ `OP TRIGGER’ ಆಪರೇಷನ್ – ಕಡಲಿನಲ್ಲಿ ಕಟ್ಟೆಚ್ಚರ

    ಕಾರವಾರ: ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯ ಬಳಿಕ ರಾಜ್ಯದ ಕರಾವಳಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ರಾಜ್ಯದ ಕರಾವಳಿ ಭಾಗಗಳಲ್ಲಿ ಹದ್ದಿನ ಕಣ್ಣಿರಿಸಿರುವ ಇಂಡಿಯನ್ ನೇವಿ, ಇಂಡಿಯನ್ ಕೋಸ್ಟ್ ಗಾರ್ಡ್‌ ಹಾಗೂ ಕೋಸ್ಟಲ್ ಪೊಲೀಸರು ಕೂಮಿಂಗ್ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ.

    ʻOP TRIGGERʼ ಹೆಸರಿನಲ್ಲಿ ಆಪರೇಷನ್ ನಡೆಸ್ತಿರುವ ಇಂಡಿಯನ್ ನೇವಿ, ಇಂಡಿಯನ್ ಕೋಸ್ಟ್ ಗಾರ್ಡ್‌ ಹಾಗೂ ಕೋಸ್ಟಲ್ ಪೊಲೀಸರು ಅರಬ್ಬಿ ಸಮುದ್ರ ಭಾಗದಲ್ಲಿ ತಪಾಸಣೆ ನಡೆಸುತಿದ್ದಾರೆ.

    ದೇಶದ ಆಂತರಿಕ ಭದ್ರತೆ ಹಿನ್ನಲೆಯಲ್ಲಿ ಸಮುದ್ರದಲ್ಲಿರುವ ಸಾಗುವ ಪ್ರತಿ ಬೋಟುಗಳು ಹಾಗೂ ಬಂದರುಗಳಲ್ಲಿರುವ ಬೋಟುಗಳು, ಕಾರ್ಮಿಕರ ಪರಿಶೀಲನೆ ನಡೆಸಿ ಮಾಹಿತಿ ಕಲೆಹಾಕುತಿದ್ದಾರೆ. ಯಾವುದೇ ಉಗ್ರರು ರಾಜ್ಯದ ಕರಾವಳಿಯ ಮೂಲಕ ದೇಶಕ್ಕೆ ಎಂಟ್ರಿಕೊಡಬಾರದು ಎಂಬ ಉದ್ದೇಶದಿಂದ ತಪಾಸಣೆ ಚುರುಕುಗೊಳಿಸಲಾಗಿದೆ. ಇದನ್ನೂ ಓದಿ: ಮರ ಬಿದ್ದು ಮೃತಪಟ್ಟಿದ್ದ ಆಟೋ ಚಾಲಕನ ಅಂತ್ಯಸಂಸ್ಕಾರ – ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಮಹೇಶ್

    ಅತಿ ಸೂಕ್ಷ್ಮ ಪ್ರದೇಶವಾಗಿರುವ ಕಾರವಾರದ ನೌಕಾನೆಲೆ ಹಾಗೂ ಕೈಗಾ ಅಣುವಿದ್ಯುತ್ ಸ್ಥಾವರದ ಸುತ್ತಮುತ್ತಲೂ ಭಿಗಿ ಭದ್ರತೆ ನೀಡಲಾಗಿದೆ. ಜೊತೆಗೆ ತೀರ ಪ್ರದೇಶಗಳಲ್ಲಿ ಡ್ರೋನ್‌ಗಳನ್ನು ಕೂಡ ಬಳಸಿ ಪರಿಶೀಲನೆ‌ ನಡೆಸಲಾಗುತ್ತಿದೆ. ಇನ್ನು ಕರಾವಳಿ ಕಾವಲು ಪಡೆ ಸಿಬ್ಬಂದಿ ಪ್ರತಿದಿನ ಕೂಮಿಂಗ್ ಕಾರ್ಯಾಚರಣೆಯನ್ನು ಹೆಚ್ಚಿಸಿದ್ದು ಮೀನುಗಾರರಿಗೆ ಯಾರೇ ಅನುಮಾನಸ್ಪದ ಬೋಟುಗಳು ಅರಬ್ಬಿ ಸಮುದ್ರದಲ್ಲಿ ಕಂಡಲ್ಲಿ ತಕ್ಷಣ ಮಾಹಿತಿ ನೀಡಲು ತಿಳಿಸಾಗಿದೆ.  ಇದನ್ನೂ ಓದಿ: ಪಾಕ್ ಯುವತಿಯನ್ನು ಮದ್ವೆಯಾಗಿ ಕೆಲಸ ಕಳೆದುಕೊಂಡ ಸಿಆರ್‌ಪಿಎಫ್‌ ಯೋಧ!

  • Anytime, Anywhere – ಬ್ರಹ್ಮೋಸ್‌ ಹಾರಿಸಿ ಎಲ್ಲದ್ದಕ್ಕೂ ಸಿದ್ಧ ಎಂದ ನೌಕಾಸೇನೆ

    Anytime, Anywhere – ಬ್ರಹ್ಮೋಸ್‌ ಹಾರಿಸಿ ಎಲ್ಲದ್ದಕ್ಕೂ ಸಿದ್ಧ ಎಂದ ನೌಕಾಸೇನೆ

    ನವದೆಹಲಿ: ಪಹಲ್ಗಾಮ್‌ ಉಗ್ರರ ದಾಳಿಯ (Pahalgam Terror Attack) ಬಳಿಕ ಭಾರತದ ನೌಕಾಸೇನೆ (Indian Navy) ಬ್ರಹ್ಮೋಸ್‌ ಕ್ಷಿಪಣಿಯನ್ನು ಯುದ್ಧನೌಕೆಯಿಂದ ಹಾರಿಸಿದೆ.

    ಯುದ್ಧ ನೌಕೆಯಿಂದ ಹಾರಿಸಿ Anytime, Anywhere ಎಂದು ಭಾರತೀಯ ನೌಕಾಸೇನೆ ಪೋಸ್ಟ್‌ ಮಾಡಿದೆ.

    ಪೋಸ್ಟ್‌ನಲ್ಲಿ ಏನಿದೆ?
    ಭಾರತೀಯ ಯುದ್ಧನೌಕೆಗಳು ಅರೇಬಿಯನ್ ಸಮುದ್ರದಲ್ಲಿ ಅನೇಕ ಹಡಗು ವಿರೋಧಿ ಗುಂಡಿನ ದಾಳಿಗಳನ್ನು ನಡೆಸಿದೆ. ನೌಕಾಪಡೆಯು ದೇಶದ ಹಿತಾಸಕ್ತಿಗಳನ್ನು ರಕ್ಷಿಸಲು ಸಿದ್ಧವಾಗಿದೆ ಎಂದು ಹೇಳಿದೆ.

    ಸಮುದ್ರದ ಮಧ್ಯದಲ್ಲಿರುವ ಯುದ್ಧನೌಕೆಯಿಂದ ಬ್ರಹ್ಮೋಸ್ (BrahMos) ಮತ್ತು ಮೇಲ್ಮೈ ವಿರೋಧಿ ಕ್ರೂಸ್ ಕ್ಷಿಪಣಿಗಳನ್ನು ಹಾರಿಸುತ್ತಿರುವ ದೃಶ್ಯಗಳನ್ನು ನೌಕಾಪಡೆಯು ಹಂಚಿಕೊಂಡಿದೆ.

    ಪಹಲ್ಗಾಮ್‌ನಲ್ಲಿ ಉಗ್ರರು ದಾಳಿ ನಡೆಸಿದ ಬಳಿಕ ಭಾರತ ಮತ್ತು ಪಾಕಿಸ್ತಾನ ಸಂಬಂಧ ಮತ್ತಷ್ಟು ಹಳಸಿದೆ. ಪಾಕಿಸ್ತಾನ ಕ್ಷಿಪಣಿ ಪರೀಕ್ಷೆ ಮಾಡುತ್ತಿದ್ದರೆ ಇನ್ನೊಂದು ಕಡೆ ಭಾರತ ಅರಬ್ಬಿ ಸಮುದ್ರದಲ್ಲಿ ಕ್ಷಿಪಣಿ ಪರೀಕ್ಷೆ ನಡೆಸುತ್ತಿದೆ.

    ಬ್ರಹ್ಮೋಸ್‌ ವಿಶೇಷತೆ ಏನು?
    ಚಲಿಸುವ ಪಥದ ಆಧಾರದ ಮೇಲೆ ಕ್ಷಿಪಣಿಗಳನ್ನು ಬ್ಯಾಲಿಸ್ಟಿಕ್‌ ಮತ್ತು ಕ್ರೂಸ್‌ ಕ್ಷಿಪಣಿಗಳಾಗಿ ವಿಂಗಡಿಸಲಾಗುತ್ತದೆ. ಬ್ಯಾಲಿಸ್ಟಿಕ್‌ ಕ್ಷಿಪಣಿ ಭೂಮಿಯ ವಾತಾವರಣವನ್ನು ಬಿಟ್ಟು ಬಾಹ್ಯಾಕಾಶವನ್ನು ಪ್ರವೇಶಿಸಿ ನಂತರ ಭೂಮಿಗೆ ಅಪ್ಪಳಿಸುತ್ತದೆ. ಭಾರತದ ಅಗ್ನಿ, ಪೃಥ್ವಿ ಬ್ಯಾಲಿಸ್ಟಿಕ್‌ ಕ್ಷಿಪಣಿಗಳಾಗಿವೆ. ಇದನ್ನೂ ಓದಿ: ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮೋದಿ

    ಕ್ರೂಸ್‌ ಕ್ಷಿಪಣಿ ಶಬ್ಧದ ವೇಗಕ್ಕಿಂತ ಹೆಚ್ಚು ವೇಗದಲ್ಲಿ ಹೋಗುತ್ತದೆ. ಆರಂಭದಲ್ಲಿ ಕ್ರೂಸ್‌ ಕ್ಷಿಪಣಿ ಕೆಳಹಂತದಲ್ಲಿ ಭೂಮಿಯ ಮೇಲ್ಮೆಗೆ ಸಮಾನಂತರವಾಗಿ ಶಬ್ಧದ ವೇಗಕ್ಕಿಂತ ಕಡಿಮೆ ವೇಗದಲ್ಲಿ ಚಲಿಸಿ ಗುರಿ ತಲುಪುತ್ತಿದ್ದಂತೆ ಇದರ ವೇಗ ಶಬ್ಧದ ವೇಗಕ್ಕಿಂತ ಹೆಚ್ಚಾಗಿ ಕೊನೆಗೆ ಗುರಿಯನ್ನು ತಲುಪುತ್ತದೆ. ಈ ತಂತ್ರಜ್ಞಾನದಿಂದ ಶತ್ರುಗಳ ರೇಡಾರ್‌ಗಳಿಗೆ ಸಹ ಈ ಕ್ಷಿಪಣಿಯ ಪಥವನ್ನು ಅಷ್ಟು ಸುಲಭವಾಗಿ ಪತ್ತೆ ಹಚ್ಚಲು ಸಾಧ್ಯವಾಗುವುದಿಲ್ಲ. ಈ ಕ್ಷಿಪಣಿ ಸಮುದ್ರದ ಒಳಗೆ ಹೋಗಿ ಮತ್ತೆ ಮೇಲೆ ಬರುವ ಸಾಮರ್ಥ್ಯವನ್ನು ಹೊಂದಿದೆ. ಕ್ರೂಸ್‌ ಕ್ಷಿಪಣಿಯ ವರ್ಗಕ್ಕೆ ಸೇರುವ ಬ್ರಹ್ಮೋಸ್‌ 800 ಕಿ.ಮೀ ದೂರದಲ್ಲಿರುವ ಗುರಿಯನ್ನು ಧ್ವಂಸ ಮಾಡುವ ಸಾಮರ್ಥ್ಯ ಹೊಂದಿದೆ.

     

    ಈ ಕ್ಷಿಪಣಿಗಳನ್ನು ಭೂಮಿಯಿಂದ, ಬಾನಿನಿಂದ, ಸಮುದ್ರದಿಂದ, ಜಲಾಂತರ್ಗಮಿ, ಚಲಿಸುವ ವಾಹನಗಳಿಂದಲೂ ಉಡಾಯಿಸಬಹುದು. ಭೂ ನೆಲೆ ಮತ್ತು ಯುದ್ಧ ನೌಕೆ ಆಧಾರಿತ ಬ್ರಹ್ಮೋಸ್ ಕ್ಷಿಪಣಿಗಳು ಗರಿಷ್ಠ 200 ಕೆಜಿ ಸಿಡಿತಲೆಗಳನ್ನು ಹೊತ್ತುಕೊಂಡು ಹೋಗುವ ಸಾಮರ್ಥ್ಯ ಹೊಂದಿದ್ದರೆ ಯುದ್ಧ ವಿಮಾನದಿಂದ ಉಡಾವಣೆಯಾಗುವ ವೇರಿಯೆಂಟ್‌ 300 ಕೆಜಿ ಭಾರವನ್ನು ಹೊತ್ತುಕೊಂಡು ಹೋಗುವ ಸಾಮರ್ಥ್ಯ ಹೊಂದಿದೆ.

    ಚಲಿಸುವ ಗುರಿಯನ್ನು ನಿಖರವಾಗಿ ಹೊಡೆದು ಉರುಳಿಸವ ಸಾಮರ್ಥ್ಯ ಬ್ರಹ್ಮೋಸ್‌ಗೆ ಇದೆ. ಶತ್ರು ನೆಲೆಗಳಿಂದ ಬರುವ ಕ್ಷಿಪಣಿ ಹಾದಿಯನ್ನು ತಪ್ಪಿಸುವ ಎಲೆಕ್ಟ್ರಾನ್‌ ಸಂಕೇತಗಳ ವಿರುದ್ಧ ತನ್ನನ್ನು ರಕ್ಷಿಸಿಕೊಳ್ಳುವ ಸಿಗ್ನಲ್‌ ಜಾಮಿಂಗ್‌ ವ್ಯವಸ್ಥೆ ಬ್ರಹ್ಮೋಸ್‌ನಲ್ಲಿದೆ. ಮೊದಲ ಬಾರಿಗೆ ಬ್ರಹ್ಮೋಸ್‌ ಕ್ಷಿಪಣಿಯನ್ನು 2001ರ ಜೂನ್‌ 12 ರಲ್ಲಿ ಒಡಿಶಾದ ತೀರಪ್ರದೇದೇಶದದಲ್ಲಿ ಪರೀಕ್ಷೆ ಮಾಡಿದ್ದು ಈಗ ಭಾರತದ ಭೂ, ವಾಯು, ನೌಕಾ ಸೇನೆಗೆ ಸೇರ್ಪಡೆಯಾಗಿದೆ.

    ಪಾಕಿಸ್ತಾನಕ್ಕೆ ಹಾರಿತ್ತು ಬ್ರಹ್ಮೋಸ್‌
    ಈ ಬ್ರಹ್ಮೋಸ್‌ ಕ್ಷಿಪಣಿ ಪಾಕಿಸ್ತಾನಕ್ಕೂ ಹಾರಿತ್ತು. 2022ರ ಮಾರ್ಚ್‌ 9ರ ಸಂಜೆಯ ವೇಳೆ ಹರ್ಯಾಣದ ಸಿರ್ಸಾದಿಂದ ಬ್ರಹ್ಮೋಸ್‌ ಕ್ಷಿಪಣಿ ಆಕಸ್ಮಿಕವಾಗಿ ಉಡಾವಣೆಯಾಗಿ ಕೇವಲ 3 ನಿಮಿಷ 44 ಸೆಕೆಂಡ್‌ನಲ್ಲಿ 124 ಕಿ.ಮೀ ಕ್ರಮಿಸಿ ಪಾಕಿಸ್ತಾನದ ಭೂ ಪ್ರದೇಶದ ಒಳಗಡೆ ಬಿದ್ದಿತ್ತು. ಈ ಘಟನೆಯಿಂದ ಯಾವುದೇ ಸಾವು,ನೋವು ಸಂಭವಿಸಲಿಲ್ಲ. ಈ ವಿಷಯವನ್ನು ಇಟ್ಟುಕೊಂಡು ಪಾಕಿಸ್ತಾನ ಭಾರೀ ವಿರೋಧ ವ್ಯಕ್ತಪಡಿಸಿತ್ತು. ಕೊನೆಗೆ ಭಾರತ ತಾಂತ್ರಿಕ ಸಮಸ್ಯೆಯಿಂದ ಈ ಕ್ಷಿಪಣಿ ಉಡಾವಣೆಯಾಗಿದೆ ಎಂದು ಹೇಳಿ ವಿಷಾದ ವ್ಯಕ್ತಪಡಿಸಿ ತನಿಖೆ ನಡೆಸುವುದಾಗಿ ಹೇಳಿತ್ತು. ತನಿಖೆಯ ಬಳಿಕ ವಾಯುಸೇನೆಯ ಇಮೇಜ್‌ಗೆ ಧಕ್ಕೆ ತಂದ ಹಿನ್ನೆಲೆಯಲ್ಲಿ ವಿಂಗ್‌ ಕಮಾಂಡರ್‌ ಅಭಿನವ್‌ ಶರ್ಮಾ ಅವರನ್ನು ಸೇವೆಯಿಂದಲೇ ವಜಾಗೊಳಿಸಿತ್ತು. ಈ ಕ್ಷಿಪಣಿ ಪ್ರಕರಣದಿಂದ ಭಾರತ ಸರ್ಕಾರಕ್ಕೆ 24 ಕೋಟಿ ರೂ. ನಷ್ಟವಾಗಿತ್ತು.

  • ಭಾರತ-ಪಾಕ್‌ ನಡುವೆ ಉದ್ವಿಗ್ನತೆ – ʻಆಕ್ರಮಣ್‌ʼ ಹೆಸರಲ್ಲಿ ಭಾರತ ಸಮರಾಭ್ಯಾಸ

    ಭಾರತ-ಪಾಕ್‌ ನಡುವೆ ಉದ್ವಿಗ್ನತೆ – ʻಆಕ್ರಮಣ್‌ʼ ಹೆಸರಲ್ಲಿ ಭಾರತ ಸಮರಾಭ್ಯಾಸ

    ನವದೆಹಲಿ: ಪಹಲ್ಗಾಮ್‌ ಪೈಶಾಚಿಕ ಕೃತ್ಯಕ್ಕೆ ಭಾರತ ಪ್ರತೀಕಾರದ ಪಣ ತೊಟ್ಟಿದೆ. ಕಾಶ್ಮೀರದಲ್ಲಿ ರಕ್ತಪಾತ ಹರಿಸಿದ ಉಗ್ರರನ್ನು ಹುಡುಕಿ ಹುಡುಕಿ ಯಾವ ಬಿಲದಲ್ಲಿ ಅಡಗಿದ್ದರೂ ಹೊರಗೆಳೆದು ಹೊಡೆಯುತ್ತೇವೆ. ಉಗ್ರರು ಊಹೆಯೂ ಮಾಡದಂತ ಶಿಕ್ಷೆ ಅನುಭವಿಸ್ತಾರೆ ಅಂತ ಪ್ರಧಾನಿ ಮೋದಿ ಕಟು ಎಚ್ಚರಿಕೆ ನೀಡಿದ್ದಾರೆ.

    ಬಿಹಾರದ ಮಣ್ಣಿನಲ್ಲಿ ನಿಂತು ಇಡೀ ಪ್ರಪಂಚಕ್ಕೆ ಸಾರಿ ಹೇಳ್ತಿದ್ದೇನೆ. ಪ್ರತಿಯೊಬ್ಬ ಭಯೋತ್ಪಾದಕ, ಸಂಚುಕೋರರನ್ನು ಪತ್ತೆಹಚ್ಚಿ, ಗುರುತಿಸಿ ಶಿಕ್ಷಿಸ್ತೇವೆ ಅಂದಿದ್ದಾರೆ. ಅಲ್ಲದೆ, ಸಾರ್ವಜನಿಕ ರ‍್ಯಾಲಿ ಆರಂಭಕ್ಕೆ ಮುನ್ನ 2 ನಿಮಿಷ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು. ಇನ್ನು, ಮೋದಿ ಮಾತಿಗೆ ಬೆಂಬಲ ವ್ಯಕ್ತಪಡಿಸಿರುವ ಎಂಐಎಂ ಮುಖ್ಯಸ್ಥ ಓವೈಸಿ, ಭಯೋತ್ಪಾದಕರನ್ನು ನಿರ್ಮೂಲನೆ ಮಾಡ್ಬೇಕು ಅಂದಿದ್ದಾರೆ. ಈ ಮಧ್ಯೆ, ಉಗ್ರರ ಪಾಲಿನ ಸ್ವರ್ಗ ಪಾಕಿಸ್ತಾನಕ್ಕೆಕ್ಕೆ ಭಾರತ ರಾಕೆಟ್ ವಾರ್ನಿಂಗ್ ಕೂಡ ರವಾನಿಸಿದೆ.

    ಅರಬ್ಬೀ ಸಮುದ್ರದಲ್ಲಿ ಐಎನ್‌ಎಸ್ ಸೂರತ್ ನೌಕೆಯಿಂದ ಸಮರಾಭ್ಯಾಸ ಆರಂಭಿಸಿದೆ. ಜೊತೆಗೆ `ಆಕ್ರಮಣ್’ ಹೆಸರಿನಲ್ಲಿ ಸುಖೋಯ್, ರಫೇಲ್ ಜೆಟ್‌ಗಳ ಸಮೇತ ಡ್ರಿಲ್ ಮಾಡಿವೆ. ಪಾಕಿಸ್ತಾನ ಬೆಳಗ್ಗೆ ಕ್ಷಿಪಣಿ ಪ್ರಯೋಗ ಮಾಡಿದ್ದ ಒಂದೇ ಗಂಟೆಯಲ್ಲಿ ಭಾರತ ಕೂಡ ಯುದ್ಧಭ್ಯಾಸ ಮಾಡಿ ಮುಯ್ಯಿಗೆ ಮುಯ್ಯಿ ಕೊಡಲು ನಾವೂ ಸನ್ನದ್ಧರಿದ್ದೇವೆ ಅಂತ ಸಂದೇಶ ರವಾನಿಸಿದೆ.

    ದೇಶಿಯವಾಗಿ ನಿರ್ಮಿಸಲಾದ, ನೆಲದಿಂದ ಆಗಸಕ್ಕೆ ಚಿಮ್ಮಬಲ್ಲ ಮಧ್ಯಮ ವ್ಯಾಪ್ತಿಯ ಕ್ಷಿಪಣಿ ಪರೀಕ್ಷೆಯನ್ನು ಯುದ್ಧನೌಕೆ ʻಐಎನ್‌ಎಸ್‌ ಸೂರತ್‌ʼನಿಂದ ಅರಬ್ಭಿ ಸಮುದ್ರದಲ್ಲಿ ಪರೀಕ್ಷೆಯನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ.