Tag: Indian national anthem

  • ಪಾಕ್‌ ನೆಲದಲ್ಲಿ ಮೊಳಗಿದ ಭಾರತದ ರಾಷ್ಟ್ರಗೀತೆ – ಟ್ರೋಲ್‌ ಆಯ್ತು PCB

    ಪಾಕ್‌ ನೆಲದಲ್ಲಿ ಮೊಳಗಿದ ಭಾರತದ ರಾಷ್ಟ್ರಗೀತೆ – ಟ್ರೋಲ್‌ ಆಯ್ತು PCB

    ಲಾಹೋರ್: ಚಾಂಪಿಯನ್ಸ್‌ ಟ್ರೋಫಿಯ ಆಸ್ಟ್ರೇಲಿಯಾ ವರ್ಸಸ್‌ ಇಂಗ್ಲೆಂಡ್‌ ಪಂದ್ಯಕ್ಕೂ ಮುನ್ನ ಲಾಹೋರ್‌ನಲ್ಲಿ ಭಾರತದ ರಾಷ್ಟ್ರಗೀತೆ (Indian national anthem) ಮೊಳಗಿತು.

    2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಮೆಗಾ ಪಂದ್ಯಕ್ಕೆ ಇನ್ನೂ ಒಂದು ದಿನ ಬಾಕಿ ಇದೆ. ಆದರೆ, ಭಾರತದ ರಾಷ್ಟ್ರಗೀತೆ ‘ಜನ ಗಣ ಮನ’ ಈಗಾಗಲೇ ಪಾಕ್‌ ನೆಲದಲ್ಲಿ ಮೊಳಗಿದೆ.

    ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಗ್ರೂಪ್ ಬಿ ಪಂದ್ಯ ನಡೆಯುತ್ತಿದೆ. ಮೊದಲು ಇಂಗ್ಲೆಂಡ್‌ನ ರಾಷ್ಟ್ರಗೀತೆ ನುಡಿಸಲಾಯಿತು. ನಂತರ ಆಸ್ಟ್ರೇಲಿಯಾದ ರಾಷ್ಟ್ರಗೀತೆ ಬದಲಿಗೆ ಭಾರತದ ರಾಷ್ಟ್ರಗೀತೆ ‘ಭಾರತ್ ಭಾಗ್ಯ ವಿಧಾತ’ ನುಡಿಸಲಾಯಿತು.

    ತಕ್ಷಣ ಆದನ್ನು ಶೀಘ್ರದಲ್ಲೇ ಸರಿಪಡಿಸಲಾಯಿತು. ಆದರೆ, ಈ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಟ್ರೋಲ್‌ಗೆ ಒಳಗಾಗಿದೆ.

  • ಫಸ್ಟ್ ಟೈಂ ದೀಪಾವಳಿ ಆಚರಣೆ ವೇಳೆ ದುಬೈನಲ್ಲಿ ಮೊಳಗಿತು ರಾಷ್ಟ್ರಗೀತೆ: ವಿಡಿಯೋ ವೈರಲ್

    ಫಸ್ಟ್ ಟೈಂ ದೀಪಾವಳಿ ಆಚರಣೆ ವೇಳೆ ದುಬೈನಲ್ಲಿ ಮೊಳಗಿತು ರಾಷ್ಟ್ರಗೀತೆ: ವಿಡಿಯೋ ವೈರಲ್

    ದುಬೈ: ಈ ಬಾರಿ ಅದ್ಧೂರಿಯಾಗಿ ದುಬೈನಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತಿದೆ. ಇದೇ ಮೊದಲ ಬಾರಿಗೆ ದುಬೈ ಸರ್ಕಾರವು ಭಾರತೀಯ ರಾಯಬಾರ ಕಚೇರಿ ಜೊತೆಗೂಡಿ 10 ದಿನಗಳ ದೀಪಾವಳಿ ಉತ್ಸವವನ್ನು ಆಯೋಜಿಸಿದೆ.

    ದೀಪಾವಳಿಯ ಮೊದಲ ದಿನವಾದ ನವೆಂಬರ್ 1ರಂದು ದುಬೈ ಪೊಲೀಸ್ ಬ್ಯಾಂಡ್ ಸಿಬ್ಬಂದಿ ಭಾರತದ ರಾಷ್ಟ್ರಗೀತೆಯನ್ನು ಇಂಪಾಗಿ ಬಾರಿಸಿದ್ದಾರೆ. ಇದೇ ವೇಳೆ ಅವರ ಹಿಂದೆಯಿದ್ದ ಎಲ್‍ಇಡಿ ಪರದೆಯ ಮೇಲೆ ಭಾರತದ ತ್ರೀವರ್ಣ ಧ್ವಜವನ್ನು ಬಿಂಬಿಸಿ ಗೌರವ ಸಲ್ಲಿಸಲಾಗಿದೆ. ಈ ವಿಡಿಯೋ ಈಗ ವೈರಲ್ ಆಗಿದೆ.

    ಒಟ್ಟು 10 ದಿನಗಳ ಕಾಲ ನಡೆಯುವ ದೀಪಾವಳಿ ಉತ್ಸವದಲ್ಲಿ ವಿವಿಧ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ರಾತ್ರಿ ಆಗುತ್ತಿದ್ದಂತೆ ದುಬೈ ನಗರಿಯಲ್ಲಿ ಬಣ್ಣ ಬಣ್ಣದ ಬೆಳಕಿನ ದೀಪಗಳು, ಪಟಾಕಿ ಭಾರೀ ಸದ್ದು ಮಾಡುತ್ತಿವೆ. ಇದೇ ಮೊದಲ ಬಾರಿಗೆ ಇಷ್ಟು ಅದ್ಧೂರಿಯಾಗಿ ದುಬೈನಲ್ಲಿ ದೀಪಾವಳಿ ಆಚರಿಸಲಾಗುತ್ತಿದೆ. ಈ ಉತ್ಸವವು ನವೆಂಬರ್ 10ರಂದು ಮುಕ್ತಾಯವಾಗಲಿದೆ.

    ದುಬೈ ಮೂಲದ ವಿಮಾನಯಾನ ಕಂಪೆನಿ ಎಮಿರೈಟ್ಸ್ ಕೂಡ ದೀಪಾವಳಿಯನ್ನು ಆಚರಿಸುತ್ತಿದೆ. ಎಮಿರೈಟ್ಸ್ ಗಗನಸಖಿಯರು ಫುಡ್ ಟ್ರಕ್ ಮೂಲಕ ಭಾರತೀಯ ಸಂಪ್ರದಾಯದ ಸಿಹಿ ಖಾದ್ಯ ಹಾಗೂ ತಿನಿಸುಗಳನ್ನು ಹೊತ್ತು ಸ್ಥಳೀಯರಿಗೆ ಹಾಗೂ ಪ್ರವಾಸಿಗರಿಗೆ ನೀಡಿ ದೀಪಾವಳಿಯ ಶುಭಕೋರುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv