Tag: Indian Military

  • ಅಗ್ನಿಪಥ್ ಭಾರತೀಯ ಸೇನೆಯನ್ನೇ ಮುಗಿಸುತ್ತೆ, ಯುವಕರನ್ನು ಕೊಲ್ಲುತ್ತದೆ: ಪ್ರಿಯಾಂಕಾ ಗಾಂಧಿ

    ಅಗ್ನಿಪಥ್ ಭಾರತೀಯ ಸೇನೆಯನ್ನೇ ಮುಗಿಸುತ್ತೆ, ಯುವಕರನ್ನು ಕೊಲ್ಲುತ್ತದೆ: ಪ್ರಿಯಾಂಕಾ ಗಾಂಧಿ

    ನವದೆಹಲಿ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ `ಅಗ್ನಿಪಥ್’ ಯೋಜನೆಯು ಭಾರತೀಯ ಸೇನೆಯನ್ನು ನಾಶ ಮಾಡುತ್ತದೆ. ಯುವಕರನ್ನು ಕೊಲ್ಲುತ್ತದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಎಚ್ಚರಿಸಿದ್ದಾರೆ.

    ಕಾಂಗ್ರೆಸ್ ಸತ್ಯಾಗ್ರಹವನ್ನುದ್ದೇಶಿಸಿ ಮಾತನಾಡಿದ ಅವರು, ಪ್ರತಿಭಟನಾಕಾರರು ಯಾವುದೇ ಕಾರಣಕ್ಕೂ ತಮ್ಮ ಹೋರಾಟ ನಿಲ್ಲಿಸಬಾರದು. ತಮ್ಮ ಆಂದೋಲನವನ್ನು ಶಾಂತಿಯುತವಾಗಿ ಮುಂದುವರಿಸಬೇಕು, ಸರ್ಕಾರವನ್ನು ಪತನಗೊಳಿಸಬೇಕು ಎಂದು ಕರೆ ನಿಡಿದ್ದಾರೆ. ಇದನ್ನೂ ಓದಿ: ಸುರಂಗ ಮಾರ್ಗದಲ್ಲಿ ಬಿದ್ದಿದ್ದ ಕಸವನ್ನು ಬರಿಗೈಯಲ್ಲೇ ತೆಗೆದ ಮೋದಿ

    ಅಗ್ನಿಪಥ್ ಯೋಜನೆಯು ದೇಶದ ಯುವಕರನ್ನು ಕೊಲ್ಲುತ್ತದೆ, ಸೈನ್ಯವನ್ನು ಮುಗಿಸುತ್ತದೆ. ದಯವಿಟ್ಟು ಈ ಸರ್ಕಾರದ ಉದ್ದೇಶವನ್ನು ನೋಡಿ. ಪ್ರಜಾಸತ್ತಾತ್ಮಕ, ಶಾಂತಿಯುತ ಮತ್ತು ಅಹಿಂಸಾತ್ಮಕ ಮಾರ್ಗಗಳ ಮೂಲಕ ಸರ್ಕಾರವನ್ನು ಉರುಳಿಸಿ. ದೇಶದ ಆಸ್ತಿಯನ್ನು ರಕ್ಷಿಸುವ ಸರ್ಕಾರವನ್ನು ಅಧಿಕಾರಕ್ಕೆ ತನ್ನಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಂತ್ರಿಗಳು ತಮ್ಮ ಮಕ್ಕಳನ್ನು ಅಗ್ನಿಪಥ್ ಯೋಜನೆಗೆ ಕಳಿಸಲಿ ನೋಡೋಣ: ಡಿಕೆಶಿ ಚಾಲೆಂಜ್

    ಹೋರಾಟ ಮಾಡುವುದು ನಿಮ್ಮ ಹಕ್ಕು, ದೇಶವನ್ನು ರಕ್ಷಿಸುವುದು ನಿಮ್ಮ ಕರ್ತವ್ಯ, ಕಾಂಗ್ರೆಸ್‌ನ ಪ್ರತಿಯೊಬ್ಬ ನಾಯಕರೂ ಮತ್ತು ಕಾರ್ಯಕರ್ತರೂ ನಿಮ್ಮೊಂದಿಗೆ ಇದ್ದಾರೆ ಎಂದು ಹೇಳಿದ್ದಾರೆ.

    ಅಗ್ನಿಪಥ್ ಯೋಜನೆ ವಿರೋಧಿಸಿ ಕಾಂಗ್ರೆಸ್ ಸಂಸದರು ಹಾಗೂ ಮುಖಂಡರು ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದರು.

    Live Tv

  • ಭಾರತಕ್ಕೆ 500 ದಶಲಕ್ಷ ಡಾಲರ್ ಮಿಲಿಟರಿ ನೆರವು ನೀಡಲು ಮುಂದಾದ ಅಮೆರಿಕ

    ಭಾರತಕ್ಕೆ 500 ದಶಲಕ್ಷ ಡಾಲರ್ ಮಿಲಿಟರಿ ನೆರವು ನೀಡಲು ಮುಂದಾದ ಅಮೆರಿಕ

    ವಾಷಿಂಗ್ಟನ್: ರಷ್ಯಾದ ಮೇಲಿನ ಶಸ್ತ್ರಾಸ್ತ ಅವಲಂಬನೆಯನ್ನು ಕಡಿತಗೊಳಿಸಲು ಅಮೆರಿಕವು ಭಾರತಕ್ಕಾಗಿ ಬೃಹತ್ ಮಿಲಿಟರಿ ಪ್ಯಾಕೇಜ್ ನೀಡಲು ಮುಂದಾಗುತ್ತಿದೆ.

    ಭಾರತವು ರಷ್ಯಾದ ಮೇಲಿನ ಶಸ್ತ್ರಾಸ್ತಗಳ ಅವಲಂಬನೆಯನ್ನು ಕಡಿಮೆಗೊಳಿಸಲು ಜೊತೆಗೆ ಅಮೆರಿಕ-ಭಾರತದ ನಡುವಿನ ಮಿಲಿಟರಿ ಸಂಬಂಧವನ್ನು ಮತ್ತಷ್ಟು ಬಲಗೊಳಿಸಲು ಅಮೆರಿಕ 500 ಮಿಲಿಯನ್ ಡಾಲರ್‌ಗಳ (ಸುಮಾರು 3,800 ಕೋಟಿ ರೂ.) ಬೃಹತ್ ಮೊತ್ತದ ಪ್ಯಾಕೇಜ್ ಅನ್ನು ಸಿದ್ಧಪಡಿಸಿಕೊಂಡಿದೆ ಎಂದು ಅಮೆರಿಕ ಮೂಲಗಳು ತಿಳಿಸಿವೆ. ಇದನ್ನೂ ಓದಿ: 132 ಪ್ರಯಾಣಿಕರಿದ್ದ ಚೀನಾ ವಿಮಾನ ಪತನ ಉದ್ದೇಶಪೂರ್ವಕ – ಅಮೆರಿಕ ವರದಿ ಹೇಳಿದ್ದೇನು?

    Military (1)

    ಸ್ಟಾಕ್‌ಹೋಮ್ ಇಂಟರ್‌ನ್ಯಾಶನಲ್ ಪೀಸ್ ರಿಸರ್ಚ್ ಸಂಸ್ಥೆಯ ಪ್ರಕಾರ ಕಳೆದ ದಶಕದಲ್ಲಿ ಭಾರತವು ಯುಎಸ್‌ನಿಂದ 4 ಶತಕೋಟಿ ಡಾಲರ್ (ಅಂದಾಜು 3 ಸಾವಿರ ಕೋಟಿ) ಹಾಗೂ ರಷ್ಯಾದಿಂದ 25 ಶತಕೋಟಿ ಡಾಲರ್ (ಅಂದಾಜು 19 ಸಾವಿರ ಕೋಟಿ) ಗಿಂತ ಹೆಚ್ಚಿನ ಮೌಲ್ಯದ ಮಿಲಿಟರಿ ಉಪಕರಣಗಳನ್ನು ಖರೀದಿಸಿದೆ.

    ಸದ್ಯ ಅಮೆರಿಕದಿಂದ ಮೆಗಾ ಆಫರ್ ಸಿದ್ಧವಾಗುತ್ತಿದೆ. ಆದರೆ ಭಾರತದ ವಿದೇಶಾಂಗ ಸಚಿವಾಲಯ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದನ್ನೂ ಓದಿ: ಮರಿಯುಪೋಲ್‍ನಲ್ಲಿ ರಷ್ಯಾಗೆ ಶರಣಾದ ಉಕ್ರೇನ್ ಸೈನಿಕರು

    ಅಮೆರಿಕ ಅಧ್ಯಕ್ಷ ಜೋ ಬೈಡನ್ ಆಡಳಿತವು ಭಾರತವನ್ನು ದೀರ್ಘಾವಧಿಯ ಭದ್ರತಾ ಪಾಲುದಾರರಾಗಿ ಮಾಡಿಕೊಳ್ಳಲು ಈ ಉಪಕ್ರಮ ರೂಪಿಸಿದೆ. ವಾಷಿಂಗ್ಟನ್ ಭಾರತವನ್ನು ವಿಶ್ವಾಸ ಪಾಲುದಾರನಾಗಿ ಕಾಣಲು ಬಯಸುತ್ತದೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಅಗತ್ಯ ಸಾಧನಗಳನ್ನು ಸರಬರಾಜು ಮಾಡಲಿದೆ. ಇದನ್ನು ಖಚಿತಪಡಿಸಿಕೊಳ್ಳಲು ಅಮೆರಿಕ ಮುಂದಾಗಿದೆ ಎಂದು ಯುಎಸ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಫೈಟರ್ ಜೆಟ್‌ಗಳು, ನೌಕಾಪಡೆಯ ಹಡಗುಗಳು ಮತ್ತು ಯುದ್ಧ ಟ್ಯಾಂಕರ್‌ಗಳಂತಹ ಪ್ರಮುಖ ಶಸ್ತ್ರಾಸ್ತಗಳನ್ನು ಭಾರತಕ್ಕೆ ನೀಡಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.