Tag: Indian Hockey Team

  • Asian Games 2023: ಜಪಾನ್‌ ಮಣಿಸಿ ಚಿನ್ನದ ಹಾರ ʻಹಾಕಿʼಕೊಂಡ ಭಾರತ – ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಗ್ರೀನ್‌ ಸಿಗ್ನಲ್‌!

    Asian Games 2023: ಜಪಾನ್‌ ಮಣಿಸಿ ಚಿನ್ನದ ಹಾರ ʻಹಾಕಿʼಕೊಂಡ ಭಾರತ – ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಗ್ರೀನ್‌ ಸಿಗ್ನಲ್‌!

    ಹ್ಯಾಂಗ್‌ಝೌ: ಇಲ್ಲಿ ನಡೆದ ಏಷ್ಯನ್ ಗೇಮ್ಸ್‌ (Asian Games 2023) ಪುರುಷರ ಹಾಕಿ ಪಂದ್ಯದಲ್ಲಿ ಭಾರತ ತಂಡ ಚಿನ್ನ ಗೆದ್ದು ಸಾಧನೆ ಮಾಡಿದೆ. ಫೈನಲ್‌ ಪಂದ್ಯದಲ್ಲಿ ಜಪಾನ್ ತಂಡವನ್ನು 5-1 ಗೋಲುಗಳಿಂದ ಮಣಿಸಿದ ಭಾರತ, ಬಂಗಾರದ ಪದಕದೊಂದಿಗೆ 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ (Olympics 2024) ಅರ್ಹತೆ ಪಡೆದುಕೊಂಡಿದೆ.

    ಈ ಪಂದ್ಯದಲ್ಲಿ ಭಾರತ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್, 2 ಗೋಲು ದಾಖಲಿಸಿ ಮಿಂಚಿದ್ದಾರೆ. ಏಷ್ಯನ್‌ ಗೇಮ್ಸ್‌ನಲ್ಲಿ ಚಿನ್ನದ ಹೊಳಪು ತಂದ ಹಾಕಿ ಕ್ರೀಡಾಪಟುಗಳನ್ನು ಪ್ರಧಾನಿ ಮೋದಿ ಅಭಿನಂದಿಸಿದ್ದಾರೆ. ಅಲ್ಲದೇ ಇದು ಭಾರತಕ್ಕೆ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತಕ್ಕೆ ದಕ್ಕಿದ 22ನೇ ಪದಕವಾಗಿದೆ. ಇದನ್ನೂ ಓದಿ: ಕನ್ನಡ ಮಾತು ಕೇಳಿ ಇಂಗ್ಲಿಷ್‌ನಲ್ಲಿ ಉತ್ತರ ಕೊಟ್ಟ ರಚಿನ್‌ – ಬೆಂಗ್ಳೂರು ವಿಲ್ಸನ್‌ ಗಾರ್ಡನ್‌ ನೆನಪು ಹಂಚಿಕೊಂಡ ರವೀಂದ್ರ

    ಈಗಾಗಲೇ ಒಟ್ಟು 354 ಪದಕಗಳನ್ನು (187 ಚಿನ್ನ, 104 ಬೆಳ್ಳಿ, 63 ಕಂಚು) ಗೆದ್ದಿರುವ ಚೀನಾ ಆರಂಭದಿಂದಲೂ ಮೊದಲ ಸ್ಥಾನದಲ್ಲೇ ಮುಂದುವರಿದಿದೆ. 169 ಪದಕಗಳನ್ನು (47 ಚಿನ್ನ, 57 ಬೆಳ್ಳಿ, 65 ಕಂಚು) ಗೆದ್ದಿರುವ ಜಪಾನ್‌ 2ನೇ ಸ್ಥಾನದಲ್ಲಿದೆ. ರಿಪಬ್ಲಿಕ್‌ ಕೊರಿಯಾ 169 ಪದಕಗಳನ್ನ (36 ಚಿನ್ನ, 49 ಬೆಳ್ಳಿ, 84 ಕಂಚು) ಗೆದ್ದು 3ನೇ ಸ್ಥಾನದಲ್ಲಿದೆ. ಆದ್ರೆ ಈವರೆಗೆ 22 ಚಿನ್ನ, 34 ಬೆಳ್ಳಿ ಹಾಗೂ 39 ಕಂಚು ಸೇರಿದಂತೆ ಒಟ್ಟು 95 ಪದಕಗಳನ್ನ ಬಾಚಿಕೊಂಡಿರುವ ಭಾರತ 4ನೇ ಸ್ಥಾನ ಭದ್ರಪಡಿಸಿಕೊಂಡಿದೆ. ಇದನ್ನೂ ಓದಿ: ಆಂಗ್ಲರ ವಿರುದ್ಧ ಶತಕ ಸಿಡಿಸಿ ಮೆರೆದಾಡಿದ ಬೆಂಗ್ಳೂರು ಮೂಲದ ರಚಿನ್‌ ರವೀಂದ್ರ ಯಾರು ಗೊತ್ತಾ?

    ಅಲ್ಲದೇ ಈಗಾಗಲೇ ಕ್ರಿಕೆಟ್‌ನಲ್ಲಿ ಫೈನಲ್‌ ತಲುಪಿರುವ ಭಾರತಕ್ಕೆ ಮತ್ತೊಂದು ಚಿನ್ನ ಲಭಿಸುವ ವಿಶ್ವಾಸ ಹೊಂದಿದೆ. ಹಾಗಾಗಿ ಈ ಬಾರಿ ಏಷ್ಯನ್‌ ಗೇಮ್ಸ್‌ನಲ್ಲಿ 100 ಪದಕಗಳನ್ನು ಗೆದ್ದು ಹೊಸ ಇತಿಹಾಸ ಸೃಷ್ಟಿಸುವ ವಿಶ್ವಾಸದಲ್ಲಿದೆ. ಇದನ್ನೂ ಓದಿ: World Cup 2023: ಚೊಚ್ಚಲ ಪಂದ್ಯದಲ್ಲೇ ಮೋದಿ ಕ್ರಿಕೆಟ್‌ ಅಂಗಳದಲ್ಲಿ ಇತಿಹಾಸ ಬರೆದ ಇಂಗ್ಲೆಂಡ್‌

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಹಿಳೆಯರ ಜೂನಿಯರ್ ಏಷ್ಯಾ ಕಪ್ – ಚೊಚ್ಚಲ ಟ್ರೋಫಿ ಗೆದ್ದ ಭಾರತ

    ಮಹಿಳೆಯರ ಜೂನಿಯರ್ ಏಷ್ಯಾ ಕಪ್ – ಚೊಚ್ಚಲ ಟ್ರೋಫಿ ಗೆದ್ದ ಭಾರತ

    ಟೋಕಿಯೊ: ಜಪಾನಿನ ಕಾಕಾಮಿಗಾರಾದಲ್ಲಿ ನಡೆದ ಮಹಿಳೆಯರ ಜೂನಿಯರ್ ಏಷ್ಯಾ ಕಪ್ ಹಾಕಿ (Womens Junior Asia Cup 2023 Hockey) ಟೂರ್ನಿಯ ಫೈನಲ್‌ನಲ್ಲಿ ದಕ್ಷಿಣ ಕೊರಿಯಾ ತಂಡವನ್ನ 2-1 ಗೋಲುಗಳ ಅಂತರದಲ್ಲಿ ಮಣಿಸುವ ಮೂಲಕ ಭಾರತ ತಂಡ (Indian Hockey Team) ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

    ಭಾರತ ತಂಡದ ಸಾಂಘಿಕ ಪ್ರದರ್ಶನದಿಂದ ಅನು (21) ಮತ್ತು ನೀಲಂ (40) ಅವರು ಭಾರತ ತಂಡದ ಪರ ಗೋಲುಗಳನ್ನು ದಾಖಲಿಸಿದರೆ, 4 ಬಾರಿಯ ಚಾಂಪಿಯನ್ ಆಗಿದ್ದ ದಕ್ಷಿಣ ಕೊರಿಯಾ (South Korea) ಪರ ಏಕೈಕ ಗೋಲನ್ನು ಸಿಯೊಯಾನ್ ಪಾರ್ಕ್ (24) ದಾಖಲಿಸಿದರು. ಇದಕ್ಕೂ ಮುನ್ನ ಶನಿವಾರ ಸೆಮಿಫೈನಲ್‌ನಲ್ಲಿ ಜಪಾನ್ ತಂಡವನ್ನು 1-0 ಯಿಂದ ಸೋಲಿಸಿ ಫೈನಲ್ ಪ್ರವೇಶಿಸಿದ್ದ ಭಾರತ ತಂಡ ವರ್ಷಾಂತ್ಯಕ್ಕೆ ನಡೆಯುವ ಜೂನಿಯರ್ ಮಹಿಳಾ ವಿಶ್ವಕಪ್‌ಗೂ (Womens Hockey World Cup 2023) ಅರ್ಹತೆ ಪಡೆದುಕೊಂಡಿತು.

    2012ರಲ್ಲಿ ಫೈನಲ್‌ಗೆ ತಲುಪಿದ್ದೇ ಭಾರತ ತಂಡದ ಇದುವರೆಗಿನ ಶ್ರೇಷ್ಠ ಸಾಧನೆಯಾಗಿತ್ತು. ಅಂದು ಥಾಯ್ಲೆಂಡ್‌ನ ಬ್ಯಾಂಕಾಕ್‌ನಲ್ಲಿ ನಡೆದ ಟೂರ್ನಿಯ ಫೈನಲ್ ಮ್ಯಾಚ್‌ನಲ್ಲಿ ಚೀನಾ ತಂಡದ ವಿರುದ್ಧ 2-5 ಗೋಲುಗಳಿಂದ ಸೋಲನುಭವಿಸಿತ್ತು. ಇದನ್ನೂ ಓದಿ: WTC: ಭಾರತಕ್ಕೆ ಹೀನಾಯ ಸೋಲು – 209 ರನ್‌ಗಳ ಭರ್ಜರಿ ಜಯ, ಆಸೀಸ್‌ಗೆ ಚೊಚ್ಚಲ ಟ್ರೋಫಿ

    ಏಷ್ಯಾಕಪ್ ಫೈನಲ್ ಮ್ಯಾಚ್‌ನ 22ನೇ ನಿಮಿಷದಲ್ಲಿ ಅನು ಪೆನಾಲ್ಟಿ ಕಾರ್ನರ್‌ನಲ್ಲಿ ಭಾರತದ ಪರ ಮೊದಲ ಗೋಲು ದಾಖಲಿಸುವ ಮೂಲಕ ಆರಂಭಿಕ ಮುನ್ನಡೆ ತಂದುಕೊಟ್ಟರು. ಅದಾದ ಮೂರೇ ನಿಮಿಷದಕ್ಕೆ ಎದುರಾಳಿ ತಂಡದ ಸಿಯೊಯಾನ್ ಪಾರ್ಕ್ ಸಹ ಮೊದಲ ಗೋಲು ಸಿಡಿಸಿ ಸಮಬಲ ಸಾಧಿಸಿದ್ದರು. ವಿರಾಮದ ನಂತರ 41ನೇ ನಿಮಿಷಕ್ಕೆ ದೊರೆತ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಬಿರುಸಿನ ಹೊಡೆತ ಬಾರಿಸಿದ ನೀಲಂ ಮತ್ತೊಂದು ಗೋಲ್ ಬಾರಿಸುವ ಮೂಲಕ ಭಾರತಕ್ಕೆ ಮತ್ತೊಮ್ಮೆ ಮುನ್ನಡೆ ತಂದುಕೊಟ್ಟರು. ಎದುರಾಳಿ ತಂಡದ ಆಟಗಾರರು ಮತ್ತೊಮ್ಮೆ ಗೋಲ್ ಬಾರಿಸಲು ಸಾಕಷ್ಟು ಪ್ರಯತ್ನ ನಡೆಸಿದರೂ ಅವರನ್ನು ನಿಯಂತ್ರಿಸುವಲ್ಲಿ ಭಾರತ ತಂಡ ಯಶಸ್ವಿಯಾಯಿತು. ಇದರಿಂದ ಭಾರತ 2-1 ಅಂತರದಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಜಯ ಸಾಧಿಸಿತು. ಇದನ್ನೂ ಓದಿ: WTC Final: ಟೆಸ್ಟ್‌ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದ ರವೀಂದ್ರ ಜಡೇಜಾ

    ಭಾರತದ ಕೀರ್ತಿಪತಾಕೆ ಹಾರಿಸಿದ ಕ್ರೀಡಾಪಟುಗಳಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅಭಿನಂದನೆ ಸಲ್ಲಿಸಿದ್ದಾರೆ. ಈ ಕುರಿತು ಟ್ವಿಟ್ಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, 2023ರ ಮಹಿಳಾ ಹಾಕಿ ಜೂನಿಯರ್ ಏಷ್ಯಾ ಕಪ್ ಗೆದ್ದ ನಮ್ಮ ಯುವ ಚಾಂಪಿಯನ್‌ಗಳಿಗೆ ಅಭಿನಂದನೆಗಳು. ಭಾರತ ತಂಡವು ಅಪಾರ ಪರಿಶ್ರಮ, ಪ್ರತಿಭೆ ಹಾಗೂ ಸಾಂಘಿಕತೆಯನ್ನು ಪ್ರದರ್ಶಿಸಿದೆ. ಯುವ ಚಾಂಪಿಯನ್‌ಗಳು ನಮ್ಮ ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಅವರ ಮುಂದಿನ ಪ್ರಯತ್ನಗಳಿಗೆ ಶುಭಾಶಯಗಳು ಎಂದು ಅಭಿನಂದನೆ ಸಲ್ಲಿಸಿದ್ದಾರೆ.