Tag: Indian Girl

  • ಭಾರತೀಯ ಯುವತಿಯೊಂದಿಗೆ ಸಪ್ತಪದಿ ತುಳಿದ ಕೆನಡಾ ಯುವಕ

    ಭಾರತೀಯ ಯುವತಿಯೊಂದಿಗೆ ಸಪ್ತಪದಿ ತುಳಿದ ಕೆನಡಾ ಯುವಕ

    ಡೆಹ್ರಾಡೂನ್:‌ ಪ್ರೀತಿಗೆ ಯಾವುದೇ ಗಡಿಯಿಲ್ಲ. ಪರಸ್ಪರರು ಪ್ರೀತಿಸಿದರೆ ದೇಶ, ಭಾಷೆ, ಗಡಿ ಎಲ್ಲವನ್ನೂ ಮೀರಿ ಒಂದಾಗಲು ಪ್ರಯತ್ನಿಸುತ್ತಾರೆ. ಅಂತೆಯೇ ಭಾರತೀಯ ಯುವತಿಯನ್ನು ಕೆನಡಾದ ಯುವಕ ಮದುವೆಯಾಗಿದ್ದಾನೆ. ಭಾರತೀಯ ಸಂಪ್ರದಾಯದಂತೆ ಯುವತಿಯ ಕೈ ಹಿಡಿದಿದ್ದಾನೆ.

    ಕೆನಡಾದ ಶಾನ್ ತಾಯಿ ಕರೋಲ್ ಹ್ಯೂಸ್ ಅವರು ಕೆನಡಾದ ಹೌಸ್ ಆಫ್ ಕಾಮನ್ಸ್ ಸದಸ್ಯರಾಗಿದ್ದಾರೆ. ಫೆಡರಲ್ ಚುನಾವಣೆಗಳಲ್ಲಿ ನಾಲ್ಕು ಬಾರಿ ಆಯ್ಕೆಯಾಗಿದ್ದಾರೆ. ಭಾರತದ ಶೀತಲ್ ಅವರ ಮಾವ ಕೀತ್ ಹ್ಯೂಸ್ ಕೆನಡಾದ ನಿಕಲ್ ಮೈನಿಂಗ್‌ನಲ್ಲಿ ಅಧಿಕಾರಿಯಾಗಿದ್ದಾರೆ.‌ ದೇಶ, ಸಂಪ್ರದಾಯದಲ್ಲಿ ಭಿನ್ನತೆ ಇದ್ದರೂ ಒಬ್ಬರನ್ನೊಬ್ಬರು ಪ್ರೀತಿಸಿದ್ದರು. ಇದನ್ನೂ ಓದಿ: ಹೀಗೊಂದು ಪ್ರೇಮ ಕಥೆ? – ಅವಳ ಗಂಡನನ್ನು ಇವಳು, ಇವಳ ಪತಿಯನ್ನು ಅವಳು ಮದುವೆಯಾದ್ರು!

    ಆಧ್ಯಾತ್ಮಿಕ ಮಹತ್ವಕ್ಕೆ ಹೆಸರುವಾಸಿಯಾದ ರಿಷಿಕೇಶದಲ್ಲಿ ವಿವಾಹ ಸಮಾರಂಭವನ್ನು ಆಯೋಜಿಸಲಾಗಿತ್ತು. ಶಾನ್ ಭಾರತೀಯ ಸಂಪ್ರದಾಯದಂತೆ ಶೀತಲ್ ಅವರೊಂದಿಗೆ ಸಪ್ತಪದಿ ತುಳಿದರು.

    ಶೀತಲ್ ಅವರ ತಂದೆ ಹಲವು ವರ್ಷಗಳ ಹಿಂದೆ ನಿಧನರಾಗಿದ್ದರು. ಆಕೆಯ ಚಿಕ್ಕಪ್ಪ ನಟವರ್ ಶ್ಯಾಮ್ ಮತ್ತು ಅವರ ಕುಟುಂಬವನ್ನು ನೋಡಿಕೊಂಡರು. ಶೀತಲ್ ಅವರು ರಿಷಿಕೇಶದ ಓಂಕಾರಾನಂದ ಶಾಲೆಯಲ್ಲಿ ಅಧ್ಯಯನ ಮಾಡಿದ್ದರು. ಕೆನಡಾದಲ್ಲಿ ಪಿಹೆಚ್‌ಡಿ ಮಾಡಿದ್ದರು. ಪ್ರಸ್ತುತ ಕೆನಡಾದಲ್ಲಿ ನೇತ್ರಶಾಸ್ತ್ರಜ್ಞರಾಗಿ ಕೆಲಸ ಮಾಡುತ್ತಿದ್ದಾರೆ. ಇದನ್ನೂ ಓದಿ: ಅದಾನಿ ಸಮೂಹ ಕಂಪನಿಗಳಲ್ಲಿ 15,446 ಕೋಟಿ ಹೂಡಿಕೆ – ಅದಾನಿ ಕೈ ಹಿಡಿದ ರಾಜೀವ್‌ ಜೈನ್‌ ಯಾರು?

    ಮದುವೆಯ ನಂತರ ಶಾನ್ ಭಾರತೀಯ ವೈದಿಕ ಸಂಪ್ರದಾಯ ಮತ್ತು ಅವಿಭಕ್ತ ಕುಟುಂಬ ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಪದ್ಧತಿಗಳಿಂದ ಪ್ರತಿಯೊಬ್ಬರೂ ತಮ್ಮ ದಾಂಪತ್ಯ ಜೀವನದಲ್ಲಿ ಅವಿಸ್ಮರಣೀಯವಾಗಿ ಉಳಿಯುತ್ತಾರೆ ಎಂದು ಹೇಳಿದರು.

  • ದುಬೈನಲ್ಲಿ ಭಾರತೀಯ ಅಪ್ರಾಪ್ತೆಗೆ ಪಾಕ್ ಪ್ರಜೆಯಿಂದ ಕಿರುಕುಳ

    ದುಬೈನಲ್ಲಿ ಭಾರತೀಯ ಅಪ್ರಾಪ್ತೆಗೆ ಪಾಕ್ ಪ್ರಜೆಯಿಂದ ಕಿರುಕುಳ

    ದುಬೈ: ಪಾಕಿಸ್ತಾನದ ಪ್ರಜೆಯೊಬ್ಬ ದುಬೈನಲ್ಲಿ ನೆಲೆಸಿದ್ದ ಭಾರತೀಯ ಮೂಲದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂಬ ಆರೋಪ ಕೇಳಿಬಂದಿದ್ದು, ಈ ಸಂಬಂಧ ದುಬೈ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.

    ಪಾಕ್ ಮೂಲದ 35 ವರ್ಷದ ಡೆಲಿವರಿ ಸಿಬ್ಬಂದಿ ಮೇಲೆ ಆರೋಪ ಕೇಳಿಬರುತ್ತಿದೆ. ದುಬೈನಲ್ಲಿ ವಸತಿ ಕಟ್ಟಡದ ಲಿಫ್ಟ್‌ವೊಂದರಲ್ಲಿ ಡೆಲಿವರಿ ಸಿಬ್ಬಂದಿ 12 ವರ್ಷದ ಭಾರತೀಯ ಬಾಲಕಿಗೆ ಕಿರುಕುಳ ನೀಡಿದ್ದಾನೆ.

    ಪತ್ರಿಕೆಯೊಂದರ ವರದಿ ಪ್ರಕಾರ, ಜೂನ್ 16ರಂದು ಈ ಘಟನೆ ನಡೆದಿದೆ. ಡೆಲಿವರಿ ಸಿಬ್ಬಂದಿ ಭಾರತದ ಬಾಲಕಿ ವಾಸಿಸುತ್ತಿದ್ದ ವಸತಿ ನಿಲಯಕ್ಕೆ ಡೆಲಿವರಿ ನೀಡಲು ಬಂದಿದ್ದನು. ಅಂದು ಬಾಲಕಿ ಹಾಗೂ ಆತ ಲಿಫ್ಟ್‌ನಲ್ಲಿ ಹೋಗುತ್ತಿದ್ದ ವೇಳೆ ಅಪ್ರಾಪ್ತೆಯನ್ನು ಅಸಭ್ಯವಾಗಿ ಸ್ಪರ್ಶಿಸಿದ್ದಾನೆ ಎಂದು ದೂರು ದಾಖಲಾಗಿದೆ. ಆದರೆ ಈ ಆರೋಪವನ್ನು ಆರೋಪಿ ತಳ್ಳಿ ಹಾಕಿದ್ದಾನೆ.

    ಪೊಲೀಸ್ ತನಿಖೆಯ ವೇಳೆ ಭಾರತೀಯ ಮೂಲದ 34 ವರ್ಷದ ಶಿಕ್ಷಕಿ ಸಾಕ್ಷ್ಯ ಹೇಳಿದ್ದಾರೆ. ಗಣಿತ ಕಲಿಯಲು ಬಾಲಕಿ ನನ್ನ ಮನೆಗೆ ಟ್ಯೂಷನ್‍ಗೆ ಬರುತ್ತಾಳೆ. ಜೂನ್ 16ರಂದು ಕೂಡ ಎಂದಿನಂತೆ ಬಾಲಕಿ ಟ್ಯೂಷನ್‍ಗೆ ಬಂದಿದ್ದಳು. ಈ ಸಂದರ್ಭದಲ್ಲಿ ಅವಳು ಕೆಲ ವಸ್ತುಗಳನ್ನು ಮನೆಯಲ್ಲಿಯೇ ಮರೆತು ಬಂದಿದ್ದಳು. ಆದ್ದರಿಂದ ಅವುಗಳನ್ನು ತೆಗೆದುಕೊಂಡು ಬರುತ್ತೇನೆಂದು ಬಾಲಕಿ ಮನೆ ಕಡೆಗೆ ಹೋಗಿದ್ದಳು. ಬಳಿಕ ಅವಳು ವಾಪಸ್ ಮರಳಿ ಬಂದಾಗ ಆಕೆಯ ಮುಖದಲ್ಲಿ ಭಯ ಎದ್ದು ಕಾಣುತ್ತಿತ್ತು, ನಡಗುತ್ತಾ, ಅಳುತ್ತಿದ್ದಳು. ನಂತರ ಬಾಲಕಿಯನ್ನು ವಿಚಾರಿಸಿದಾಗ, ನಾನು ಲಿಫ್ಟ್‌ನಲ್ಲಿ ಬರುವಾಗ ವ್ಯಕ್ತಿಯೊಬ್ಬ ವಿಳಾಸ ಕೇಳುವ ನೆಪದಲ್ಲಿ ಹತ್ತಿರ ಬಂದು ನನ್ನನ್ನು ಗಟ್ಟಿಯಾಗಿ ಹಿಡಿದುಕೊಂಡನು ಎಂದು ಬಾಲಕಿ ನನ್ನ ಬಳಿ ಹೇಳಿಕೊಂಡಳು ಎಂದು ತಿಳಿಸಿದ್ದಾರೆ.

    ಕೂಡಲೇ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆರೋಪಿಯ ಕೃತ್ಯ ಬೆಳಕಿಗೆ ಬಂದಿದೆ. ಈಗಾಗಲೇ ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದು, ಸೆಪ್ಟೆಂಬರ್ 16ರಂದು ಆರೋಪಿಗೆ ದುಬೈ ನ್ಯಾಯಾಲಯ ಶಿಕ್ಷೆ ವಿಧಿಸಲಿದೆ.