Tag: Indian Culture

  • ಹಿಂದೂ ಧರ್ಮ ಸ್ವೀಕರಿಸಿದ್ದೇನೆ, ಸಸ್ಯಾಹಾರಿ ಜೀವನಶೈಲಿ ಅನುಸರಿಸ್ತೇನೆ – ಪ್ರೇಮಿಗಾಗಿ ಬದಲಾದ ಪಾಕ್‌ ಮಹಿಳೆ

    ಹಿಂದೂ ಧರ್ಮ ಸ್ವೀಕರಿಸಿದ್ದೇನೆ, ಸಸ್ಯಾಹಾರಿ ಜೀವನಶೈಲಿ ಅನುಸರಿಸ್ತೇನೆ – ಪ್ರೇಮಿಗಾಗಿ ಬದಲಾದ ಪಾಕ್‌ ಮಹಿಳೆ

    ಲಕ್ನೋ: ವೀಸಾ ಇಲ್ಲದೇ ಭಾರತಕ್ಕೆ ಪ್ರವೇಶಿಸಿದ್ದ ಪಾಕಿಸ್ತಾನಿ ಮಹಿಳೆ (Pakistani Woman) ಸೀಮಾ ಹೈದರ್ ಜೈಲಿನಿಂದ ಬಿಡುಗಡೆಯಾದ ನಂತರ ಉತ್ತರ ಪ್ರದೇಶದ ತನ್ನ ಪ್ರೇಮಿ ಸಚಿನ್‌ ಮೀನಾ ಜೊತೆಗೆ ದಾಂಪತ್ಯ ಜೀವನ ಶುರು ಮಾಡಿದ್ದಾಳೆ. ಅಲ್ಲದೇ ತಾನು ಇನ್ನೆಂದಿಗೂ ಪಾಕಿಸ್ತಾನಕ್ಕೆ ಹಿಂದಿರುಗಲ್ಲ, ಭಾರತೀಯ ಸಂಸ್ಕೃತಿಯನ್ನ (Indian Culture) ಹೃದಯದಿಂದ ಸ್ವೀಕರಿಸಿದ್ದೇನೆ ಎಂದು ಹೇಳಿದ್ದಾರೆ.

    ಜೈಲಿನಿಂದ ಬಿಡುಗಡೆಯಾದ ಒಂದು ದಿನದ ನಂತರ ಮಾತನಾಡಿರುವ ಪಾಕ್‌ ಮಹಿಳೆ, ನಾನೀಗ ನನ್ನ ದಿನಚರಿಯಲ್ಲಿ ಹಿಂದೂ ಸಂಸ್ಕೃತಿಯನ್ನ ಅಳವಡಿಸಿಕೊಂಡಿದ್ದೇನೆ. ನನ್ನ ಕೊರಳಲ್ಲಿ ರಾಧೆಯ ಪಟ್ಟಿಯನ್ನ ಧರಿಸೋದು, ಜನರನ್ನ ಕೈಮುಗಿದು ನಮಸ್ಕರಿಸುವುದು, ಆಶೀರ್ವಾದಕ್ಕಾಗಿ ಹಿರಿಯರ ಪಾದಗಳನ್ನ ಮುಟ್ಟಿ ನಮಸ್ಕರಿಸುವುದು, ದೇವರನ್ನ ಪ್ರಾರ್ಥಿಸುವುದು ಹಾಗೂ ಹಿಂದೂ ಸಂಪ್ರದಾಯದಂತೆ ಸಸ್ಯಹಾರಿ ಜೀವನ ಶೈಲಿಯನ್ನ ಅಳವಡಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: Made by Tata iPhones – ಕೋಲಾರದಲ್ಲಿ ಐಫೋನ್‌ ತಯಾರಿಸಲಿದೆ ಟಾಟಾ!

    ಭಾರತಕ್ಕೆ ಅಕ್ರಮವಾಗಿ ತನ್ನ 4 ಮಕ್ಕಳೊಂದಿಗೆ ಪ್ರವೇಶಿಸಿದ್ದ ಮಹಿಳೆ ಮತ್ತು ಆತನ ಪ್ರಿಯಕರ ಹಾಗೂ ಅವರಿಬ್ಬರಿಗೆ ಆಶ್ರಯ ನೀಡಿದ್ದ ಪ್ರಿಯಕರನ ತಂದೆಯನ್ನ ಗ್ರೇಟರ್ ನೋಯ್ಡಾ ಪೊಲೀಸರು (Noida Police) ಜುಲೈ ಬಂಧಿಸಿದ್ದರು. ಶುಕ್ರವಾರ ಸ್ಥಳೀಯ ನ್ಯಾಯಾಲಯ (Local Court) ಈ ಮೂವರಿಗೂ ಜಾಮೀನು ನೀಡಿತು. ಕಾಗದ ಪತ್ರಗಳ ಪರಿಶೀಲನೆ ಕೆಲಸ ಮುಗಿದ ಬಳಿಕ ಶನಿವಾರ ಜೈಲಿನಿಂದ ಬಿಡುಗಡೆ ಮಾಡಲಾಯಿತು. ಜೈಲಿನಿಂದ ಬಿಡುಗಡೆಗೊಂಡ ನಂತರ ಹೊಸದಾಗಿ ದಾಂಪತ್ಯ ಜೀವನ ಶುರು ಮಾಡಿದ್ದಾರೆ. ಇದನ್ನೂ ಓದಿ: ಭಾರತ ಇಡೀ ಜಗತ್ತಿಗೆ ಶಾಂತಿಯ ಸಂದೇಶ ಸಾರಬಲ್ಲದು – ವಿಶ್ವ ಮುಸ್ಲಿಂ ಲೀಗ್‌ ಮುಖ್ಯಸ್ಥ

    ಸೀಮಾ ಭಾರತಕ್ಕೆ ಬಂದ ಹಾದಿಯೇ ರೋಚಕ:
    ನನ್ನದು ತುಂಬಾ ದೀರ್ಘ ಪ್ರಯಾಣವಾಗಿತ್ತು ಎಂದು ಸೀಮಾ ಹೇಳಿಕೊಂಡಿದ್ದಾಳೆ. ಮೊದಲ ಮದುವೆಯಾದ ನಂತರ ಕರಾಚಿಯಿಂದ ದುಬೈಗೆ ಹೋಗಿದ್ದೆ. ಅಲ್ಲಿಂದ ನೇಪಾಳಕ್ಕೆ ಹೋದ್ವಿ. ಕೊನೆಗೆ ಪೋಖ್ರಾ ದಾರಿ ಹಿಡಿಯುವ ಮುನ್ನ ಸಚಿನ್‌ನನ್ನ ಭೇಟಿಯಾಗಿದ್ದೆ. ನಂತರ ನಾನು ಪಾಕಿಸ್ತಾನಕ್ಕೆ, ಸಚಿನ್ ಭಾರತಕ್ಕೆ ಮರಳಿದ್ದರು. ಅದಾದ ಮೇಲೆ ಸೀಮಾ ಹಾಗೂ ಪತಿ ನಡುವೆ ಭಿನ್ನಾಭಿಪ್ರಾಯ ಶುರುವಾಗಿ ಪಾಕಿಸ್ತಾನ ತೊರೆಯಲು ಮುಂದಾದಳು. ಸೀಮಾ ತನಗಿದ್ದ ಒಂದು ಫ್ಲಾಟ್ ಅನ್ನು 12 ಲಕ್ಷ ರೂ.ಗೆ (ಪಾಕಿಸ್ತಾನ ರೂಪಾಯಿಗಳಲ್ಲಿ) ಮಾರಾಟ ಮಾಡಿ, ತನಗೆ ಮತ್ತು ತನ್ನ ನಾಲ್ಕು ಮಕ್ಕಳಿಗೆ ನೇಪಾಳಕ್ಕೆ ವಿಮಾನ ಟಿಕೆಟ್ ಮತ್ತು ವೀಸಾ ವ್ಯವಸ್ಥೆ ಮಾಡಿಕೊಂಡಳು. ಕಳೆದ ಮೇ ತಿಂಗಳಲ್ಲಿ ದುಬೈ ಮೂಲಕ ನೇಪಾಳಕ್ಕೆ ಬಂದ ಸೀಮಾ, ಅಲ್ಲಿಂದ ಮೇ 13ರಂದು ಗ್ರೇಟರ್ ನೋಯ್ದಾಗೆ ಬಂದಿಳಿದಿದ್ದಳು. ಸಚಿನ್ ತನ್ನ ಪ್ರಿಯತಮೆಯ ಗುಟ್ಟು ಬಿಟ್ಟುಕೊಡದೇ ನೋಯ್ಡಾದಲ್ಲೇ ಬಾಡಿಗೆ ಮನೆ ಮಾಡಿ ಇರಿಸಿದ್ದ. ಈ ವಿಷಯ ಬೆಳಕಿಗೆ ಬಂದ ನಂತರ ಜುಲೈ 4ರಂದು ನೋಯ್ಡಾ ಪೊಲೀಸರು ಬಂಧಿಸಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸ್ವಂತ ಮಾವನಿಂದಲೇ ಸೊಸೆಯ ಮೇಲೆ ರೇಪ್‌ – ಸುಳ್ಳು ಆರೋಪವೆಂದು ಜಾಮೀನು ಕೊಟ್ಟ ಕೋರ್ಟ್‌

    ಸ್ವಂತ ಮಾವನಿಂದಲೇ ಸೊಸೆಯ ಮೇಲೆ ರೇಪ್‌ – ಸುಳ್ಳು ಆರೋಪವೆಂದು ಜಾಮೀನು ಕೊಟ್ಟ ಕೋರ್ಟ್‌

    ಲಕ್ನೋ: ಮತ್ತೊಬ್ಬ ವ್ಯಕ್ತಿಯೊಂದಿಗೆ ಸೇರಿ ಮಾವನೊಬ್ಬ ತನ್ನ ಸ್ವಂತ ಸೊಸೆಯ ಮೇಲೆಯೇ ಅತ್ಯಾಚಾರ ನಡೆಸಿರುವುದಾಗಿ ಆರೋಪ ಕೇಳಿಬಂದಿತ್ತು. ಆದರೆ ಭಾರತೀಯ ಸಂಸ್ಕೃತಿಯಲ್ಲಿ ಸ್ವಂತ ಮಾವ ಸೊಸೆಯ ಮೇಲೆ ಅತ್ಯಾಚಾರ ನಡೆಸುವುದು ಅಸಹಜ, ಇತ್ತೀಚೆಗೆ ವ್ಯಕ್ತಿಯ ಪ್ರತಿಷ್ಠೆ ಘಾಸಿಗೊಳಿಸುವ ಉದ್ದೇಶದಿಂದ ಸುಳ್ಳು ಪ್ರಕರಣ ದಾಖಲಿಸಲಾಗುತ್ತಿದೆ ಎಂಬುದನ್ನು ಪರಿಗಣಿಸಿ, ಆರೋಪಿ ಸ್ಥಾನದಲ್ಲಿದ್ದ ಮಾವನಿಗೆ ಅಲಹಾಬಾದ್‌ ಹೈಕೋರ್ಟ್‌ ನಿರೀಕ್ಷಣಾ ಜಾಮೀನು ನೀಡಿದೆ.

    Law

    ಸೊಸೆಯು ತನ್ನ ಸ್ವಂತ ಮಾವ ಹಾಗೂ ಮತ್ತೊಬ್ಬ ಆರೋಪಿಯ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ ಬಳಿಕ ನ್ಯಾಯಮೂರ್ತಿ ಅಜಿತ್ ಸಿಂಗ್ ಅವರು ಅರ್ಜಿದಾರರಿಗೆ ಜಾಮೀನು ಮಂಜೂರು ಮಾಡಿದ್ದಾರೆ.  ಇದನ್ನೂ ಓದಿ: ವಿಮಾನ ಪತನದ ಸ್ಥಳದಲ್ಲಿ 16 ಮೃತದೇಹ ಪತ್ತೆ- ಪ್ರಯಾಣಿಕರೆಲ್ಲರೂ ಮೃತಪಟ್ಟಿರುವ ಶಂಕೆ

    ಅರ್ಜಿದಾರರ ಪೂರ್ವಾಪರ ಹಾಗೂ ಆರೋಪಗಳ ಸ್ವರೂಪವನ್ನು ಪರಿಗಣಿಸಿ, ಮಾವ ತನ್ನ ಸ್ವಂತ ಸೊಸೆಯ ಮೇಲೆ ಅತ್ಯಾಚಾರ ಎಸಗುವುದು ಅಸಹಜ ಎಂದು ಪರಿಗಣಿಸಿ ಈ ಆದೇಶ ನೀಡಿದೆ. ಅಲ್ಲದೆ ಭಾರತೀಯ ಸಂಸ್ಕೃತಿಯಲ್ಲಿ ಇನ್ನೊಬ್ಬ ವ್ಯಕ್ತಿ ಸಮಾಜದಲ್ಲಿ ತನ್ನ ಪ್ರತಿಷ್ಠೆಯನ್ನು ಘಾಸಿಗೊಳಿಸುವ ಉದ್ದೇಶದಿಂದ ಸುಳ್ಳು ಆರೋಪ ಮಾಡಿರುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟು ಕೋರ್ಟ್‌ ಜಾಮೀನು ನೀಡಿದೆ.

    court order law

    ಈ ಪ್ರಕರಣದಲ್ಲಿ ಅವರ 25 ಸಾವಿರ ವೈಯಕ್ತಿಕ ಬಾಂಡ್‌ ಇಬ್ಬರ ಶ್ಯೂರಿಟಿ, ತನಿಖಾಧಿಕಾರಿಗಳು ಕರೆದಾಗ ವಿಚಾರಣೆಗೆ ಹಾಜರಾಗಬೇಕೆಂದು ಷರತ್ತು ವಿಧಿಸಿದೆ. ಅರ್ಜಿದಾರರು ತನ್ನ ಮಾನವ ವಿರುದ್ಧ IPC ಸೆಕ್ಷನ್ 376 (ಅತ್ಯಾಚಾರ), 511 (ದಂಡನೀಯ ಅಪರಾದ), 504 (ಶಾಂತಿಭಂಗ, ಉದ್ದೇಶ ಪೂರ್ವಕ ಅವಮಾನ), 506 (ಅಪರಾಧಿ ಭಯೋತ್ಪಾದನೆಗೆ ದಂಡನೆ) ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.

    2018ರ ಪ್ರಕರಣ: ತಾನೂ ಒಬ್ಬಳೇ ಇದ್ದಾಗ ತನ್ನ ಮಾವ ಮತ್ತೊಬ್ಬ ವ್ಯಕ್ತಿಯೊಂದಿಗೆ ಮನೆಗೆ ಬಂದಿದ್ದರು. ಸಹೋದರ ಮನೆಯಲ್ಲಿ ಇಲ್ಲದಿರುವುದನ್ನು ಕಂಡು ಮಾವ ನಿಂದಿಸಲು ಆರಂಭಿಸಿದ್ದರು. ಬಳಿಕ ಇಬ್ಬರೂ ಆಕೆಯ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದ್ದಾರೆ ಎಂದು 2018ರಲ್ಲಿ ಅರ್ಜಿದಾರರು ಪ್ರಕರಣ ದಾಖಲಿಸಿದ್ದರು. ಇದನ್ನೂ ಓದಿ: ನಾಪತ್ತೆಯಾದ ವಿಮಾನ 6 ಗಂಟೆಗಳಲ್ಲಿ ಪತ್ತೆ – ಸಾವು ನೋವಿನ ಬಗ್ಗೆ ತನಿಖೆ

    STOP RAPE

    ಈ ಸಂಬಂಧ ಆರೋಪಿಗಳು ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಜೊತೆಗೆ ಸಮಾನತೆಯನ್ನೂ ಕೋರಿದ್ದರು. ರಾಜ್ಯದ ವಕೀಲರು ನಿರೀಕ್ಷಣಾ ಜಾಮೀನನ್ನು ವಿರೋಧಿಸಿದ್ದರೇ ಹೊರತು ಸಮಾನತೆಯ ಹಕ್ಕನ್ನು ಪರಿಗಣಿಸಿರಲಿಲ್ಲ. ನಂತರ ಕಕ್ಷಿದಾರರ ವಾದವನ್ನೂ ಆಲಿಸಿದ ನಂತರ ನ್ಯಾಯಾಲಯವು ಷರತ್ತುಗಳಿಗೆ ಒಳಪಟ್ಟು 25 ಸಾವಿರ ಮೊತ್ತದ 2 ಶ್ಯೂರಿಟಿಗಳೊಂದಿಗೆ ವೈಯಕ್ತಿಕ ಬಾಂಡ್‌ ಅನ್ನು ಆಧರಿಸಿ ಅರ್ಜಿದಾರರಿಗೆ ಶರತ್ತು ಬದ್ಧ ಜಾಮೀನು ನೀಡಿದೆ.

    ಅರ್ಜಿದಾರರ ಪರ ವಕೀಲ ಆದಿತ್ಯ ಪ್ರಸಾದ್‌ ಮಿಶ್ರಾ ವಾದಿಸಿದರು. ಸರ್ಕಾರಿ ವಕೀಲ ಅನಯ್ ಕುಮಾರ್ ಶ್ರೀವಾಸ್ತವ ಪ್ರತಿವಾದಿಯಾಗಿದ್ದರು.

  • ಏಕತೆಯೇ ಭಾರತೀಯ ಸಂಸ್ಕೃತಿಯ ದೊಡ್ಡ ಶಕ್ತಿ: ನಿತಿನ್ ಗಡ್ಕರಿ

    ಏಕತೆಯೇ ಭಾರತೀಯ ಸಂಸ್ಕೃತಿಯ ದೊಡ್ಡ ಶಕ್ತಿ: ನಿತಿನ್ ಗಡ್ಕರಿ

    – ಎಲ್ಲಾ ಮತ, ಧರ್ಮ, ಸಮುದಾಯ ಗೌರವಿಸುವುದು ಭಾರತೀಯ ಸಂಸ್ಕೃತಿಯ ವೈಶಿಷ್ಟ್ಯ

    ನವದೆಹಲಿ: ಏಕತೆ ಎಂಬುದು ಭಾರತೀಯ ಸಂಸ್ಕೃತಿಯ ಬಹುದೊಡ್ಡ ಶಕ್ತಿಯಾಗಿದೆ. ಈ ಶಕ್ತಿ ದೇಶವನ್ನು ವಿಶ್ವ ಗುರುವನ್ನಾಗುವಂತೆ ಮಾಡಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

    ರಾಷ್ಟ್ರೀಯ ಅಂತರ್ ಧರ್ಮೀಯ ಸಮ್ಮೇಳದಲ್ಲಿ ಕೋಮು ಸೌಹಾರ್ದತೆಗೆ ಜಾಗತಿಕ ಸವಾಲುಗಳು ಮತ್ತು ಭಾರತದ ಪಾತ್ರ ಕುರಿತು ಮಾತನಾಡಿದ ಅವರು, ಭಾರತೀಯ ಸಂಸ್ಕೃತಿ ನೈಜ ಜಾತ್ಯತೀತವಾಗಿದೆ. ಎಲ್ಲಾ ಮತ, ಧರ್ಮಗಳು, ಸಮುದಾಯ, ಸಿದ್ಧಾಂತಗಳನ್ನು ಗೌರವಿಸುವುದು ಭಾರತೀಯ ಸಂಸ್ಕೃತಿಯ ವೈಶಿಷ್ಟ್ಯ ವಾಗಿದ್ದು, ಈ ಸಂಸ್ಕೃತಿ ಯಾವುದೋ ಒಂದು ಧರ್ಮದೊಂದಿಗೆ ಸಂಬಂಧವನ್ನು ಹೊಂದಿಲ್ಲ ಎಂದು ಅವರು ಹೇಳಿದರು. ಇದನ್ನೂ ಓದಿ:  ಸಣ್ಣ ಪ್ರಮಾಣದ ಡ್ರಗ್ಸ್ ಸೇವಿಸಿದವರಿಗೆ ಜೈಲು ಶಿಕ್ಷೆ ಬೇಡ!

    ಏಕತೆ ಎನ್ನುವುದು ಭಾರತೀಯ ಸಂಸ್ಕೃತಿಯ ಬಹುದೊಡ್ಡ ಶಕ್ತಿಯಾಗಿದೆ. ನಮ್ಮ ದೇಶವನ್ನು ವಿಶ್ವಗುರು ಸ್ಥಾನಕ್ಕೆ ಕೊಂಡೊಯ್ಯುತ್ತದೆ ಎಂದು ಸ್ವಾಮಿ ವಿವೇಕಾನಂದರು ಆ ಕಾಲದಲ್ಲೇ ಭವಿಷ್ಯ ನುಡಿದಿದ್ದರು. ಇದನ್ನೂ ಓದಿ: ಇಸ್ಲಾಂ ತೊರೆದು ಹಿಂದೂ ಧರ್ಮಕ್ಕೆ ಇಂಡೋನೇಷ್ಯಾ ಸಂಸ್ಥಾಪಕನ ಪುತ್ರಿ ಮತಾಂತರ

     

    ಆರ್ಟ್ ಆಫ್ ಲಿವಿಂಗ್‍ನ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ ಗುರೂಜಿ ಮಾತನಾಡಿ, ಮನುಷ್ಯ ಜೀವನ ವೈವಿಧ್ಯವನ್ನು ಬಯಸುತ್ತದೆ. ಆದರೆ ನಮ್ಮಲ್ಲಿರುವ ತಿಳಿವಳಿಕೆಯ ಕೊರತೆ ಹಾಗೂ ಒತ್ತಡದಿಂದಾಗಿ ವೈವಿಧ್ಯವನ್ನು ದ್ವೇಷಿಸಲಾಗುತ್ತಿದೆ. ಇಲ್ಲಿ ಎಲ್ಲ ಸಮುದಾಯಗಳು ಪ್ರಮುಖವಾದವು ಎಂಬುದನ್ನು ಗಮನದಲ್ಲಿಟ್ಟುಕೊಂಡು, ಪರಸ್ಪರ ಗೌರವಿಸುತ್ತಾ, ಒಂದಾಗಿ ಬದುಕುವುದು ಅಗತ್ಯವಾಗಿದೆ ಎಂದು ಹೇಳಿದರು.

  • RSS, ದೇಶದ ಸಂಸ್ಕೃತಿ ದೂಷಣೆ ಮಾಡೋರು ತಾಯಿ ಶೀಲದ ಮೇಲೇ ಶಂಕಿಸೋ ನೀಚರು: ಮಳಲಿ

    RSS, ದೇಶದ ಸಂಸ್ಕೃತಿ ದೂಷಣೆ ಮಾಡೋರು ತಾಯಿ ಶೀಲದ ಮೇಲೇ ಶಂಕಿಸೋ ನೀಚರು: ಮಳಲಿ

    ಬಾಗಲಕೋಟೆ: ಆರ್‌ಎಸ್‌ಎಸ್ ಹಾಗೂ ಭಾರತೀಯ ಸಂಸ್ಕೃತಿಯನ್ನು ದೂಷಣೆ ಮಾಡುವವರು ತನ್ನ ತಾಯಿಯ ಶೀಲದ ಮೇಲೆಯೇ ಶಂಕೆ ವ್ಯಕ್ತಪಡಿಸುವ ನೀಚರು ಎಂದು ಆರ್‌ಎಸ್‌ಎಸ್ ಮುಖಂಡ ಹನುಮಂತ ಮಳಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಬಾಗಲಕೋಟೆಯ ಆರ್‌ಎಸ್‌ಎಸ್ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಆರ್‌ಎಸ್‌ಎಸ್ ವಿರೋಧಿಸುವವರಿಗೆ ಉತ್ತರ ಕೊಡಲ್ಲ. ನಾಯಿ ಬೊಗಳಿದರೂ ಆನೆ ಹೋಗುತ್ತಿರುತ್ತದೆ. ಆರ್‌ಎಸ್‌ಎಸ್ ಅಣ್ಣ ಬಸವಣ್ಣನ ಸೂತ್ರದ ಮೇಲೆ ನಿಂತಿದೆ. ಅಲ್ಲದೆ ಹಿಂದೂ ಧರ್ಮವೇ ಅಲ್ಲ, ರಾಮನಿಗೆ ಅಸ್ತಿತ್ವನೇ ಇಲ್ಲ ಎಂದು ಕೆಲವರು ಹೇಳುತ್ತಾರೆ. ಯಾರ ಮನಸ್ಸು ಶಾಂತ ಇರುತ್ತೋ, ಪ್ರಫುಲ್ಲ ಇರುತ್ತೋ ಅವರಿಗೆ ಮಾತ್ರ ನಮ್ಮ ಧರ್ಮದ ಬಗ್ಗೆ ಅರ್ಥ ಆಗುತ್ತದೆ ಎಂದು ಟಾಂಗ್ ಕೊಟ್ಟರು.

    ಇದೇ ವೇಳೆ ರಾಮ ಮಂದಿರದ ಬಗ್ಗೆ ಪ್ರತಿಕ್ರಿಯಿಸಿ, ನಾವು ಎಲ್ಲದರಲ್ಲೂ ವಿಜಯ ಸಾಧಿಸುತ್ತಿದ್ದೇವೆ. ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದು ಮಾಡಿದ್ದೇವೆ, ಏಕರೂಪ ತೆರಿಗೆ ತಂದಿದ್ದೇವೆ, ಮುಂದೆ ರಾಮ ಮಂದಿರನೂ ಕಟ್ಟುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ಭಾರತೀಯ ಸಂಸ್ಕೃತಿಯನ್ನು ಸಾರುವ ಪರಂಪರಾ ದಿನವನ್ನ ಆಚರಿಸಿದ ಚಿಕ್ಕಮಗಳೂರು ವಿದ್ಯಾರ್ಥಿನಿಯರು

    ಭಾರತೀಯ ಸಂಸ್ಕೃತಿಯನ್ನು ಸಾರುವ ಪರಂಪರಾ ದಿನವನ್ನ ಆಚರಿಸಿದ ಚಿಕ್ಕಮಗಳೂರು ವಿದ್ಯಾರ್ಥಿನಿಯರು

    ಚಿಕ್ಕಮಗಳೂರು: ದೇಶದ ಒಂದೊಂದು ಹಬ್ಬಗಳು ಒಂದೊಂದು ದಿನ ಬಂದರೆ ಕಾಫಿನಾಡಿಗರಿಗೆ ಮಾತ್ರ ಆ ಎಲ್ಲಾ ಹಬ್ಬಗಳು ಒಂದೇ ದಿನ ಬರುತ್ತವೆ. ಕಾಫಿನಾಡಿನ ಎಸ್‍ಟಿಜೆ ಕಾಲೇಜು ವಿದ್ಯಾರ್ಥಿನಿಯರು ಆಚರಿಸಿದ ಪರಂಪರಾ ದಿನದ ಆಚರಣೆ ಆಧುನಿಕ ಭಾರತದಲ್ಲಿ ಮರೆಯಾಗುತ್ತಿರುವ ಸಂಪ್ರದಾಯದ ಉಳಿವಿಗೆ ಸಾಕ್ಷಿಯಾಗಿತ್ತು.

    ಬಣ್ಣ-ಬಣ್ಣದ ಸೀರೆಯುಟ್ಟ ನಾರಿಯರು, ಸ್ಟೈಲಾಗಿ ಜೀನ್ಸ್-ಟೀ ಶರ್ಟ್ ತೊಟ್ಟ ಯುವತಿಯರು, ಮುತ್ತೈದೆಯಂತೆ ಮೈತುಂಬಾ ಸೆರಗೊದ್ದು ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸುತ್ತಿರುವ ಹುಡುಗಿಯರು, ಮಲೆಯಾಳಿ ಕುಟ್ಟಿಗಳಂತೆ ಬಾರ್ಡರ್ ನ ಬಿಳಿ ಸೀರೆಯುಟ್ಟು ಸೆಲ್ಫಿ ಕ್ಲಿಕ್ಕಿಸುತ್ತಿರುವ ಸುಂದರಿಯರು. ಕಿರೀಟ ತೊಟ್ಟು, ಕೈಯಲ್ಲಿ ತ್ರಿಶೂಲ ಇಟ್ಕೊಂಡು ದುರ್ಗೆಯರಾಗಿರೋ ಯುವತಿಯರು, ಇವರೆಲ್ಲಾ ಚಿಕ್ಕಮಗಳೂರಿನ ಎಸ್‍ಟಿಜೆ ಕಾಲೇಜಿನಲ್ಲಿ ಕಂಡು ಬಂದರು.

    ವಿದ್ಯಾರ್ಥಿನಿಯರು ಪ್ರತಿ ವರ್ಷ ಪರಂಪರಾ ದಿನದ ಅಂಗವಾಗಿ ರಾಜ್ಯ ಸೇರಿದಂತೆ ವಿವಿಧ ರಾಜ್ಯಗಳ ಸಂಸ್ಕೃತಿಯನ್ನ ಸಾರುವಂತಹ ಕಾರ್ಯಕ್ರಮವನ್ನ ಆಚರಿಸುತ್ತಾರೆ. ಈ ಬಾರಿ ಕೃಷ್ಣ ಜನ್ಮಾಷ್ಟಮಿ, ಹೋಳಿ ಹುಣ್ಣಿಮೆ, ನವದುರ್ಗೆಯರ ವೈಭವ, ಪರಿಸರ ಉಳಿಸಿ-ದೇಶ ರಕ್ಷಿಸಿ ಸೇರಿದಂತೆ ವಿವಿಧ ಸಾಂಪ್ರದಾಯಿಕ ಹಬ್ಬಗಳನ್ನ ಆಚರಿಸಿದ್ದಾರೆ. ಜೊತೆಗೆ ಕೃಷಿ ಮೇಳ, ಹಳ್ಳಿಸೊಗಡಿನ ಜೀವನ ಶೈಲಿ, ಹಳ್ಳಿಗಳ ಸಂಪ್ರದಾಯಗಳೆಲ್ಲವೂ ಅಲ್ಲಿದ್ದವು. ಅಷ್ಟೇ ಅಲ್ಲದೇ ಹಿಂದೂ, ಮುಸ್ಲಿಂ ಎಂಬ ಭಾವವಿಲ್ಲದೆ ಒಟ್ಟಾಗಿ ಸೇರಿ ಆಚರಣೆ ಮಾಡಿದ್ದಾರೆ.

    ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಫಲಿತಾಂಶಕ್ಕಾಗಿ ಪೋಷಕರು, ಉಪನ್ಯಾಸಕರು ಓದಿನ ಮೇಲೆ ಒತ್ತಡ ಹಾಕುತ್ತಾರೆ. ಆದರೆ ಇಲ್ಲಿನ ಉಪನ್ಯಾಸಕರು ಓದಿನ ಜೊತೆ ರೂಢಿ-ಸಂಪ್ರದಾಯ ಉಳಿಸೋಕು ಹೆಗಲು ಕೊಟ್ಟಿದ್ದಾರೆ. ವರ್ಷಪೂರ್ತಿ ಕಾಲೇಜು, ಓದು, ಮನೆ ಎನ್ನುವ ವಿದ್ಯಾರ್ಥಿನಿಯರು ಮನೋರಂಜನೆ ಜೊತೆ ಅವರೇ ಇಷ್ಟ ಪಟ್ಟು ನಡೆಸುವ ಇಂತಹ ಸಂಸ್ಕೃತಿ ಹಬ್ಬಕ್ಕೆ ಕಾಲೇಜು ಆಡಳಿತ ಮಂಡಳಿ ಹಾಗೂ ಪೋಷಕರ ಬೆಂಬಲವಿದೆ.

    ಕಳೆದ ನಾಲ್ಕು ವರ್ಷಗಳಿಂದಲೂ ಪ್ರತಿ ವರ್ಷ ಈ ರೀತಿಯ ಒಂದೊಂದು ವಿಭಿನ್ನ ರೀತಿಯ ಆಚರಣೆಯಿಂದ ನಾವು ಸಂಭ್ರಮಿಸುತ್ತೇವೆ. ಜೊತೆಗೆ ಭಾರತೀಯ ಸಂಸ್ಕೃತಿಯನ್ನ ಕಾಲೇಜಿನ ವಿದ್ಯಾರ್ಥಿನಿಯರು ಉಳಿಸಿ, ಬೆಳೆಸುತ್ತಿದ್ದಾರೆ. ನಾಡಿನ ಸಂಸ್ಕೃತಿಯ ಬಗ್ಗೆ ತಮ್ಮ ಮಕ್ಕಳಿಗಿರುವ ಗೌರವನ್ನ ಕಂಡು ಕಾಲೇಜಿನ ಉಪನ್ಯಾಸಕರೆಲ್ಲರೂ ಕೂಡ ಮಕ್ಕಳೊಂದಿಗೆ ಸೇರಿ ಮಕ್ಕಳಾಗಿದ್ದರು ಎಂದು ಪ್ರಾಂಶುಪಾಲರಾದ ಭಾರತಿ ಹೇಳಿದ್ದಾರೆ.