Tag: Indian Cricket

  • Retirement | ಎಲ್ಲ ಮಾದರಿಯ ಕ್ರಿಕೆಟ್‌ಗೆ ಚೇತೇಶ್ವರ ಪೂಜಾರ ಗುಡ್‌ಬೈ

    Retirement | ಎಲ್ಲ ಮಾದರಿಯ ಕ್ರಿಕೆಟ್‌ಗೆ ಚೇತೇಶ್ವರ ಪೂಜಾರ ಗುಡ್‌ಬೈ

    ಮುಂಬೈ: ಟೆಸ್ಟ್‌ ಪರಿಣತ ಬ್ಯಾಟರ್‌ ಚೇತೇಶ್ವರ ಪೂಜಾರ (Cheteshwar Pujara) ಅವರು ಎಲ್ಲ ಮಾದರಿಯ ಕ್ರಿಕೆಟ್‌ಗೆ ಇಂದು ನಿವೃತ್ತಿ ಘೋಷಿಸಿದ್ದಾರೆ. ಈ ವರ್ಷ ರೋಹಿತ್‌ ಶರ್ಮಾ (ಟೆಸ್ಟ್‌), ವಿರಾಟ್‌ ಕೊಹ್ಲಿ (ಟೆಸ್ಟ್‌), ರವಿಚಂದ್ರನ್‌ ಅಶ್ವಿನ್‌ (ಎಲ್ಲಾ ಮಾದರಿ) ಬಳಿಕ ಈಗ ಪೂಜಾರ ಎಲ್ಲ ಮಾದರಿಯ ಕ್ರಿಕೆಟ್‌ಗೆ (Cricket) ನಿವೃತ್ತಿ ಘೋಷಿಸಿದ್ದಾರೆ.

    ಈ ಕುರಿತು ತಮ್ಮ ಇನ್‌ಸ್ಟಾ ಖಾತೆಯಲ್ಲಿ ಭಾವುಕ ಸಂದೇಶವೊಂದನ್ನೂ ಹಂಚಿಕೊಂಡಿದ್ದಾರೆ. ಟೀಂ ಇಂಡಿಯಾ ಜೆರ್ಸಿಯನ್ನ ಧರಿಸಿ ರಾಷ್ಟ್ರಗೀತೆ ಹಾಡುವುದು, ಪ್ರತಿ ಬಾರಿ ಮೈದಾನಕ್ಕಿಳಿದಾಗ ನನ್ನ ಅತ್ಯುತ್ತಮ ಪ್ರಯತ್ನ ಮಾಡುವುದು ಇದೆಲ್ಲವೂ ಪದಗಳಲ್ಲಿ ವರ್ಣಿಸಲು ಅಸಾಧ್ಯ. ಆದ್ರೆ ಎಲ್ಲ ಒಳ್ಳೇ ವಿಷಯಗಳೂ ಎಂದಾದರೂ ಕೊನೆಗೊಳ್ಳಬೇಕಲ್ಲವೇ? ಅದೇ ರೀತಿ ನಾನು ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ, ಎಲ್ಲರ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು ಅಂತ ಭಾವುಕ ಸಂದೇಶ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಟೆಸ್ಟ್‌ ಕ್ಯಾಪ್ಟನ್‌ ಗಿಲ್‌ಗೆ ಅನಾರೋಗ್ಯ – ಏಷ್ಯಾಕಪ್‌ ಟೂರ್ನಿಗೆ ಅಯ್ಯರ್‌ಗೆ ಸಿಗುತ್ತಾ ಚಾನ್ಸ್‌?

    ರಾಜ್‌ಕೋಟ್‌ನಲ್ಲಿ ಜನಿಸಿದ 37 ವರ್ಷದ ಪೂಜಾರ 2010ರಲ್ಲಿ ಟೀಂ ಇಂಡಿಯಾಕ್ಕೆ ಪದಾರ್ಪಣೆ ಮಾಡಿದರು. ಟೀಂ ಇಂಡಿಯಾದಲ್ಲಿ ಅತಿಹೆಚ್ಚು ರನ್‌ ಗಳಿಸಿದ 8ನೇ ಟೆಸ್ಟ್‌ ಬ್ಯಾಟರ್‌ ಎನಿಸಿಕೊಂಡಿದ್ದರು. ಇದುವರೆಗೆ 103 ಟೆಸ್ಟ್‌, 5 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಸರಣಿ ಆಡಲ್ಲ: ಸಚಿವ ಮನ್ಸುಖ್ ಮಾಂಡವಿಯಾ

    ಟೀಂ ಇಂಡಿಯಾ ಪರ 103 ಟೆಸ್ಟ್‌ ಪಂದ್ಯಗಳಲ್ಲಿ 43.60 ಸರಾಸರಿಯಲ್ಲಿ 7,195 ರನ್‌ ಗಳಿಸಿದ್ದಾರೆ. ಇದರಲ್ಲಿ 19 ಶತಕಗಳು ಮತ್ತು 35 ಅರ್ಧಶತಕಗಳು ಸೇರಿವೆ. ತವರಿನಲ್ಲಿ ನಡೆದ ಒಟ್ಟು ಟೆಸ್ಟ್‌ನಲ್ಲಿ 3,839 ರನ್ ಗಳಿಸಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತ್ಯಂತ ವಿಶ್ವಾಸಾರ್ಹ ಬ್ಯಾಟರ್‌ ಆಗಿದ್ದ ಪೂಜಾರ, ಸ್ವದೇಶಿ ಮತ್ತು ವಿದೇಶಗಳಲ್ಲಿ ನಡೆದ ಟೆಸ್ಟ್‌ ಪಂದ್ಯಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದ್ರೆ ಕಳೆದ ವರ್ಷಗಳಲ್ಲಿ ಸಂಪೂರ್ಣವಾಗಿ ಫಾರ್ಮ್‌ ಕಳೆದುಕೊಂಡಿದ್ದರು. ಇದು ಅವರನ್ನು ನಿವೃತ್ತಿಯ ಕಡೆಗೆ ಸೆಳೆದಿರಬಹುದು ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ನವೆಂಬರ್‌ನಲ್ಲಿ ಕೇರಳಕ್ಕೆ ಭೇಟಿ ನೀಡಲಿದ್ದಾರೆ ಅರ್ಜೆಂಟಿನಾದ ಫುಟ್‌ಬಾಲ್ ಆಟಗಾರ ಮೆಸ್ಸಿ

  • ಭಾರತದ ಮಾಜಿ ಸ್ಪಿನ್ನರ್ ದಿಲೀಪ್ ದೋಶಿ ನಿಧನ

    ಭಾರತದ ಮಾಜಿ ಸ್ಪಿನ್ನರ್ ದಿಲೀಪ್ ದೋಶಿ ನಿಧನ

    ನವದೆಹಲಿ: ಭಾರತದ ಮಾಜಿ ಸ್ಪಿನ್ನರ್ ದಿಲೀಪ್ ದೋಶಿ (Dilip Doshi) ಸೋಮವಾರ ಹೃದಯ ಸ್ತಂಭನದಿಂದಾಗಿ ಕೊನೆಯುಸಿರೆಳೆದರು.

    ಭಾರತದ ಪರ ಹಲವು ಪಂದ್ಯಗಳನ್ನು ಆಡಿದ್ದ ದೋಶಿ ಲಂಡನ್‌ನಲ್ಲಿ (London) ವಾಸವಾಗಿದ್ದರು. ಸೋಮವಾರ ತಮ್ಮ 77 ವಯಸ್ಸಿನಲ್ಲಿ ಹೃದಯ ಸ್ತಂಭನದಿಂದಾಗಿ ನಿಧನರಾದರು.ಇದನ್ನೂ ಓದಿ: Tumakuru | ಸ್ಟೇಟಸ್‌ಗೆ ರೀಲ್ಸ್ ಅಪ್ಲೋಡ್ ಮಾಡಿದ್ದಕ್ಕೆ ಪ್ರಿಯಕರ ಕಿರಿಕ್ – ಯುವತಿ ನೇಣಿಗೆ ಶರಣು

    1979 ರಿಂದ 1983ರವರೆಗೆ ದೋಶಿ ಭಾರತದ (India) ಪರ 33 ಟೆಸ್ಟ್ ಹಾಗೂ 15 ಏಕದಿನ ಪಂದ್ಯಗಳನ್ನು ಆಡಿದ್ದರು. ತಾವು ಆಡಿದ 33 ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 114 ವಿಕೆಟ್‌ಗಳನ್ನು ಪಡೆದುಕೊಂಡಿದ್ದರು. ತಾವು ಮಾತ್ರವಲ್ಲದೇ ತಮ್ಮ ಮಗನನ್ನು ಕ್ರಿಕೆಟ್ ರಂಗದಲ್ಲಿಯೇ ಬೆಳೆಸಿದ್ದರು. ಇವರ ಮಗ ನಯನ್ ಭಾರತ ಟೆಸ್ಟ್ ಕ್ರಿಕೆಟ್‌ನ (Indian Test Cricket) ಮಾಜಿ ಬೌಲರ್ ಹಾಗೂ ಸರ್ರೆ ಹಾಗೂ ಸೌರಾಷ್ಟ್ರ ಪರ ರಣಜಿಯಲ್ಲಿ ಆಡಿದ್ದಾರೆ.

    ಚೆನ್ನೈನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ (International Cricket) ಪಾದಾರ್ಪಣೆ ಮಾಡಿದ್ದರು. ದಿಲೀಪ್ ದೋಶಿ ಪತ್ನಿ ಕಲಿಂಡಿ, ಪುತ್ರ ನಯನ್ ಹಾಗೂ ಮಗಳು ವಿಶಾಖಾ ಅವರನ್ನು ಅಗಲಿದ್ದಾರೆ.ಇದನ್ನೂ ಓದಿ: ಸರ್ಕಾರ, ನಮ್ಮ ನಡುವಿನದ್ದು ಗಂಡ-ಹೆಂಡತಿ ಜಗಳವಿದ್ದ ಹಾಗೆ: ಬಿ.ಆರ್ ಪಾಟೀಲ್

  • ಕೊಹ್ಲಿ Vs ರೋಹಿತ್ ನಾಯಕತ್ವ ಫೈಟ್ – ಸಂಕಷ್ಟದಲ್ಲಿ ಟೀಂ ಇಂಡಿಯಾ

    ಕೊಹ್ಲಿ Vs ರೋಹಿತ್ ನಾಯಕತ್ವ ಫೈಟ್ – ಸಂಕಷ್ಟದಲ್ಲಿ ಟೀಂ ಇಂಡಿಯಾ

    ಮುಂಬೈ: ಟೀಂ ಇಂಡಿಯಾದ ಏಕದಿನ ನಾಯಕತ್ವದಿಂದ ಬಿಸಿಸಿಐ ವಿರಾಟ್ ಕೊಹ್ಲಿಯನ್ನು ಕೆಳಗಿಳಿಸಿ ರೋಹಿತ್ ಶರ್ಮಾರನ್ನು ನಾಯಕನನ್ನಾಗಿ ನೇಮಿಸಿದ ಬೆನ್ನಲ್ಲೇ ಕೊಹ್ಲಿ ಮುನಿಸಿಕೊಂಡಿರುವ ಬಗ್ಗೆ ವರದಿಯಾಗಿದೆ. ಈ ಮೂಲಕ ತಂಡದ ಒಳಗೆ ಆಟಗಾರರ ನಡುವೆ ಬಿನ್ನಭಿಪ್ರಾಯ ಮೂಡಿರುವುದು ಸ್ಪಷ್ಟವಾಗಿದ್ದು ಇದರಿಂದ ಟೀಂ ಇಂಡಿಯಾದ ಪ್ರದರ್ಶನಕ್ಕೆ ಬಹುದೊಡ್ಡ ಹೊಡೆತ ಬಿದ್ದಿದೆ ಎಂದು ವಿಶ್ಲೇಷಿಸಲಾಗುತ್ತದೆ.

    ಗುಂಪು ಕ್ರೀಡೆಯಲ್ಲಿ ಎಲ್ಲರೂ ಒಂದಾಗಿ ಆಡಿದರೆ ಗೆಲುವು ಖಂಡಿತ ಹಾಗಾಗಿ ಪ್ರತಿಯೊಂದು ಗುಂಪು ಕ್ರೀಡೆಯಲ್ಲೂ ಆಟಗಾರ ಒಗ್ಗಟ್ಟಾಗಿರುವುದು ಕೂಡ ಮುಖ್ಯವಾಗಿದೆ. ಇದು ಕ್ರಿಕೆಟ್‍ಗೂ ಕೂಡ ಅನ್ವಯಿಸುತ್ತದೆ. ಪ್ರತಿಯೊಬ್ಬರು ಆಟಗಾರರು ತಂಡಕ್ಕಾಗಿ ಆಡಿದರೆ ಗೆಲುವು ಅವರದ್ದೇ ಆಗಿರುತ್ತದೆ. ಆದರೆ ಇದೀಗ ಟೀಂ ಇಂಡಿಯಾದ ಪರಿಸ್ಥಿತಿ ಮಾತ್ರ ಮನೆಯೊಂದು ಮೂರು ಬಾಗಿಲಿನಂತಾಗಿದೆ. ಸೀಮಿತ ಓವರ್‌ಗಳ ತಂಡದ ನಾಯಕತ್ವದಿಂದ ವಿರಾಟ್ ಕೊಹ್ಲಿಯನ್ನು ಕೆಳಗಿಳಿಸಿ ರೋಹಿತ್ ಶರ್ಮಾರಿಗೆ ಬಿಸಿಸಿಐ ಪಟ್ಟ ಕಟ್ಟಿದೆ. ಇದು ಕೊಹ್ಲಿಗೆ ತುಂಬಾ ಬೇಸರ ತರಿಸಿದೆ. ನನಗೆ ಬಿಸಿಸಿಐ ನಾಯಕತ್ವದಿಂದ ಕೆಳಗಿಳಿಸುವ ಬಗ್ಗೆ ಮುಂಚಿತವಾಗಿ ತಿಳಿಸಿಲ್ಲ ಎಂದು ಕೊಹ್ಲಿ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಹೇಳದೇ ಕೇಳದೇ ನಾಯಕ ಪಟ್ಟದಿಂದ ತೆಗೆದ್ರು – ಮೌನ ಮುರಿದ ಕೊಹ್ಲಿ

    ಈ ನಡುವೆ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ವಿಶ್ರಾಂತಿ ಕೇಳಿದ್ದಾರೆ ಎಂಬ ಸುದ್ದಿ ಹರಡಿತ್ತು. ಇದರ ಬೆನ್ನಲ್ಲೇ ರೋಹಿತ್ ಶರ್ಮಾ ಗಾಯಳುವಾಗಿ ಟೆಸ್ಟ್ ಸರಣಿಯಿಂದ ಹೊರನಡೆದಿದ್ದಾರೆ. ಈ ಹಿಂದೆಯೇ ರೋಹಿತ್ ಮತ್ತು ಕೊಹ್ಲಿ ಮಧ್ಯೆ ಭಿನ್ನಾಭಿಪ್ರಾಯವಿದೆ ಎಂಬ ಸುದ್ದಿಗಳು ಬಂದಿತ್ತು. ಆದರೆ ಇಬ್ಬರೂ ಆಟಗಾರರು ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಹೇಳಿದ್ದರು. ಆದರೆ ಈಗ ನಡೆಯುತ್ತಿರುವ ಬೆಳವಣಿಗೆಗಳು ಭಿನ್ನಾಭಿಪ್ರಾಯ ಜಾಸ್ತಿಯಾಗಿದೆ ಎಂಬ ಮಾತಿಗೆ ಪುಷ್ಠಿ ನೀಡುವಂತಿದೆ. ಇದನ್ನೂ ಓದಿ: ನಾಯಕತ್ವ ಪಟ್ಟದಿಂದ ಇಳಿಸಿದ್ದಕ್ಕೆ ಸಿಟ್ಟು? – ಅಭ್ಯಾಸ ಶಿಬಿರಕ್ಕೆ ಕೊಹ್ಲಿ ಗೈರು

    ಈ ಎಲ್ಲದರ ನಡುವೆ ಟೆಸ್ಟ್ ತಂಡದ ಉಪನಾಯಕರು ಆಗಿರುವ ರೋಹಿತ್ ಶರ್ಮಾ ಸರಣಿಯಿಂದ ಹೊರ ನಡೆಯುತ್ತಿದ್ದಂತೆ ಇತ್ತ ಉಪನಾಯಕನ ಪಟ್ಟ ಯಾರಿಗೆ ಕೊಡುವುದು ಎಂಬ ಬಗ್ಗೆ ಬಿಸಿಸಿಐಗೆ ಗೊಂದಲವಿದೆ. ಹಾಗಾಗಿ ಇದೀಗ ಈ ಇಬ್ಬರ ಆಟಗಾರರ ಸ್ವಪ್ರತಿಷ್ಠೆಯಿಂದಾಗಿ ವಿಶ್ವದ ಬಲಿಷ್ಠ ಕ್ರಿಕೆಟ್ ತಂಡವೆಂದು ಬೀಗುತಿದ್ದ ಭಾರತಕ್ಕೆ ಇರಿಸುಮುರಿಸು ಶುರುವಾಗಿದೆ. ಆಟಗಾರರ ಕಚ್ಚಾಟದಿಂದಾಗಿ ತಂಡದಲ್ಲಿ ಹುಮ್ಮಸ್ಸಿಲ್ಲ. ಹಾಗಾಗಿ ಈ ಬಗ್ಗೆ ಬಿಸಿಸಿಐ ಗಂಭೀರವಾಗಿ ಪರಿಗಣಿಸಿ ಈ ಎಲ್ಲಾ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುತ್ತಾ ಎಂಬ ಪ್ರಶ್ನೆಗೆ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಉತ್ತರ ಸಿಗಲಿದೆ.

  • ಟೀಂ ಇಂಡಿಯಾ ಆಟಗಾರರು ಹಲಾಲ್ ಪ್ರಮಾಣೀಕೃತ ಮಾಂಸ ಮಾತ್ರ ಸೇವಿಸಬೇಕೆಂದ ಬಿಸಿಸಿಐ

    ಟೀಂ ಇಂಡಿಯಾ ಆಟಗಾರರು ಹಲಾಲ್ ಪ್ರಮಾಣೀಕೃತ ಮಾಂಸ ಮಾತ್ರ ಸೇವಿಸಬೇಕೆಂದ ಬಿಸಿಸಿಐ

    ಮುಂಬೈ: ಟೀಂ ಇಂಡಿಯಾ ಆಟಗಾರರು ಹಲಾಲ್ ಪ್ರಮಾಣೀಕೃತ ಮಾಂಸವನ್ನು ಮಾತ್ರ ಸೇವಿಸಬೇಕೆಂದು ಬಿಸಿಸಿಐ ಕಡ್ಡಾಯಗೊಳಿಸಿದೆ. ಬಿಸಿಸಿಐನ ಈ ನಿಯಮದ ವಿರುದ್ಧ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

    ಬಿಸಿಸಿಐ ಆಟಗಾರರ ಡಯಟ್ ಪ್ಲಾನ್‍ನಲ್ಲಿ ಹಲಾಲ್ ಮಾಂಸ ಪದ್ಧತಿಯನ್ನು ಸೇರಿಸಿದೆ. ಮುಂಬರುವ ಐಸಿಸಿ ಟೂರ್ನಿಗಳು ನಿರ್ಣಾಯಕವಾಗಿರೋ ಕಾರಣ, ಆಟಗಾರರನ್ನು ಫಿಟ್ ಆಗಿಡಲು ಇಂಥ ಡಯಟ್ ಪ್ಲಾನ್ ಅನಿವಾರ್ಯ. ಹಾಗಾಗಿ, ಪೋರ್ಕ್ ಮತ್ತು ಬೀಫ್ ಯಾವುದನ್ನೂ ಸೇವಿಸುವಂತಿಲ್ಲ ಎಂದು ಬಿಸಿಸಿಐ ತಾಕೀತು ಮಾಡಿದೆ. ಆದರೆ, ಬಿಸಿಸಿಐನ ಈ ನಿರ್ಧಾರ ಸಾಮಾಜಿಕ ಜಾಲತಾಣಗಳಲ್ಲಿ ಕೆಂಗಣ್ಣಿಗೆ ಗುರಿಯಾಗಿದೆ. ಇದನ್ನೂ ಓದಿ: ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಕನ್ನಡಿಗ ಕೆ.ಎಲ್ ರಾಹುಲ್ ಹೊರಕ್ಕೆ

    ಹಲಾಲ್ ಮಾಂಸ ಎಂದರೇನು?:
    ಹಲಾಲ್ ಮಾಂಸ ಎಂದರೆ ಕುರಿ ಕೋಳಿ ಇನ್ನಿತರ ಪ್ರಾಣಿಗಳ ಕತ್ತು ಕುಯ್ಯುವ ಮೂಲಕ ಅದರ ರಕ್ತನಾಳಗಳನ್ನು ಕತ್ತರಿಸಿ ಸಂಪೂರ್ಣ ರಕ್ತ ಹರಿದ ಬಳಿಕ ಮಾಂಸ ಮಾಡಲಾಗುತ್ತದೆ ಇದನ್ನು ಹಲಾಲ್ ಮಾಂಸ ತಯಾರಿ ಎನ್ನಲಾಗುತ್ತದೆ.  ಇದನ್ನೂ ಓದಿ: ಕಪ್ ಗೆಲ್ಲಲು ಲಕ್ಕಿ ಕಲರ್ ಆದ ಹಳದಿ ಜೆರ್ಸಿ

    https://twitter.com/VinayaPrabhu10/status/1462969882488705027

    ಟೀಂ ಇಂಡಿಯಾ ಸರ್ವಧರ್ಮೀಯ ತಂಡ. ಹಿಂದೂ, ಸಿಖ್ ಧರ್ಮದಲ್ಲಿ ಹಲಾಲ್ ಮಾಂಸ ಸೇವನೆ ನಿಷೇಧವಿದೆ. ಮುಸ್ಲಿಂ ಆಟಗಾರರಿಗೆ ಮಾತ್ರ ಹಲಾಲ್ ಮಾಂಸ ಸೇವನೆಗೆ ಅವಕಾಶ ಇದೆ. ಅವರು ಹಲಾಲ್ ಮಾಂಸ ಹೊರತುಪಡಿಸಿ ಬೇರೆ ಯಾವುದೇ ಮಾಂಸ ಸೇವಿಸುವುದಿಲ್ಲ. ಆದರೆ, ಬಿಸಿಸಿಐ ಯಾಕೆ ಇಂಥ ನಿರ್ಧಾರ ಮಾಡಿದೆ? ಬಿಸಿಸಿಐ ಹಲಾಲ್‍ಗೆ ಉತ್ತೇಜನ ಕೊಡ್ತಿದ್ಯಾ? ಸರ್ವಧರ್ಮೀಯರಿರುವ ಟೀಂ ಇಂಡಿಯಾದಲ್ಲಿ ಇದೆಂತಹ ಪದ್ಧತಿ ಅಂತ ನೆಟ್ಟಿಗರು ಮುಗಿಬಿದ್ದಿದ್ದಾರೆ. ಇದನ್ನೂ ಓದಿ: ಚಹರ್ ಸಿಕ್ಸ್‌ಗೆ ಸೆಲ್ಯೂಟ್ ಹೊಡೆದ ರೋಹಿತ್

  • ಭಾರತದ ಗೆಲುವಿಗೆ ಕೊಹ್ಲಿ ಕಾರಣ: ಇಂಜಮಾಮ್ ಉಲ್ ಹಕ್

    ಭಾರತದ ಗೆಲುವಿಗೆ ಕೊಹ್ಲಿ ಕಾರಣ: ಇಂಜಮಾಮ್ ಉಲ್ ಹಕ್

    ಇಸ್ಲಾಮಾಬಾದ್: ಇಂಗ್ಲೆಂಡ್ ವಿರುದ್ಧ ಭಾರತ ನಾಲ್ಕನೇ ಟೆಸ್ಟ್ ಪಂದ್ಯವನ್ನು ಗೆಲ್ಲಲ್ಲು ನಾಯಕ ವಿರಾಟ್ ಕೊಹ್ಲಿ ಪ್ರಮುಖ ಕಾರಣ ಎಂದು ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ಹೇಳಿದ್ದಾರೆ.

    ಪಂದ್ಯದ ಕುರಿತು ತಮ್ಮ ಯೂಟ್ಯೂಬ್ ಚಾನೆಲ್‍ನಲ್ಲಿ ಮಾತನಾಡಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್, ಭಾರತದ ನಾಯಕ ವಿರಾಟ್ ಕೊಹ್ಲಿಯನ್ನು ಹಾಡಿ ಹೊಗಳಿದ್ದಾರೆ. 4ನೇ ಟೆಸ್ಟ್ ಪಂದ್ಯದ ಮೊದಲ  ಭಾರತ ಅಲ್ಪ ಮೊತ್ತಕ್ಕೆ ಆಲೌಟ್ ಆಗಿ ಸಂಕಷ್ಟಕ್ಕೆ ಸಿಲುಕಿತ್ತು.

    ಎರಡನೇ ಇನ್ನಿಂಗ್ಸ್‍ನಲ್ಲಿ 466ರನ್‍ಗಳ ದೊಡ್ಡ ಮೊತ್ತ ಕಲೆಹಾಕಿತು. ಭಾರತದ ಬೌಲರ್‍ಗಳಾದ ಜಸ್ಪ್ರೀತ್ ಬುಮ್ರಾ ಉಮೇಶ್ ಯಾದವ್, ಶಾರ್ದೂಲ್ ಠಾಕೂರ್ ಹಾಗೂ ರವೀಂದ್ರ ಜಡೇಜಾ ಸೇರಿದಂತೆ ಎಲ್ಲಾ ಬೌಲರ್‍ಗಳು ಉತ್ತಮ ಪ್ರದರ್ಶನ ನೀಡಿ ಇಂಗ್ಲೆಂಡ್ ಬ್ಯಾಟ್ಸ್ಮನ್‍ಗಳನ್ನು ಕಟ್ಟಿಹಾಕಿ ಟೆಸ್ಟ್ ಪಂದ್ಯವನ್ನು ಗೆಲ್ಲಿಸಿದರು. ಭಾರತ ತನ್ನ ಮೊದಲ ಇನ್ನಿಂಗ್ಸ್‍ನಲ್ಲಿ ಕೇವಲ 191 ರನ್‍ಗಳಿಗೆ ಆಲೌಟ್ ಆಗಿ, ನಂತರ ಎರಡನೇ ಇನ್ನಿಂಗ್ಸ್‍ನಲ್ಲಿ 466 ರನ್‍ಗಳ ದೊಡ್ಡ ಮೊತ್ತ ಕಲೆಹಾಕಿ ಇಂಗ್ಲೆಂಡ್ ವಿರುದ್ಧ ಗೆಲುವು ಸಾಧಿಸಿತ್ತು. ಇದನ್ನೂ ಓದಿ: ಬೌಲರ್‌ಗಳ ಭರ್ಜರಿ ಆಟ – ಭಾರತಕ್ಕೆ 157 ರನ್‍ಗಳ ಗೆಲುವು

    ಭಾರತ ತಂಡದ ಈ ಗೆಲುವಿಗೆ ನಾಯಕ ವಿರಾಟ್ ಕೊಹ್ಲಿಯ ದೇಹ ಭಾಷೆಯೇ ಕಾರಣ. ತಂಡಕ್ಕೆ ಅವರು ನೀಡುವ ಹುರುಪು ಗೆಲುವಿಗೆ ಸಹಕಾರಿ ಎಂದು ಇಂಜಮಾಮುಲ್ ಹಕ್ ಕೊಹ್ಲಿಯನ್ನು ಹೊಗಳಿದ್ದಾರೆ. ಇದನ್ನೂ ಓದಿ: ರನ್‍ನಂತೆ ಏರುತ್ತಿದೆ ವಿರಾಟ್ ಕೊಹ್ಲಿ ಫಾಲೋವರ್ಸ್ ಸಂಖ್ಯೆ

  • ಕೊಹ್ಲಿ ಭಾರತೀಯ ಕ್ರಿಕೆಟ್‍ನ ಬಾಸ್: ರವಿಶಾಸ್ತ್ರಿ

    ಕೊಹ್ಲಿ ಭಾರತೀಯ ಕ್ರಿಕೆಟ್‍ನ ಬಾಸ್: ರವಿಶಾಸ್ತ್ರಿ

    ನವದೆಹಲಿ: ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಭಾರತೀಯ ಕ್ರಿಕೆಟಿನ ಬಾಸ್ ಎಂದು ಟೀಂ ಇಂಡಿಯಾದ ಮುಖ್ಯ ಕೋಚ್ ರವಿ ಶಾಸ್ತ್ರಿ ಹೇಳಿದ್ದಾರೆ.

    ಸ್ಕೈ ಕ್ರಿಕೆಟ್ ಪಾಡ್‍ಕ್ಯಾಸ್ಟ್ ಕಾರ್ಯಕ್ರಮದಲ್ಲಿ ಶಾಸ್ತ್ರಿ ಇಂಗ್ಲೆಂಡ್‍ನ ಮಾಜಿ ನಾಯಕ ನಾಸರ್ ಹುಸೇನ್ ಮತ್ತು ಮೈಕೆಲ್ ಅಥರ್ಟನ್ ಮತ್ತು ರಾಬ್ ಕೀ ಅವರೊಂದಿಗೆ ಮಾತನಾಡುತ್ತಿದ್ದರು. ಈ ವೇಳೆ ಕೊಹ್ಲಿ ಭಾರತೀಯ ಕ್ರಿಕೆಟಿನ ಬಾಸ್, ಜೊತೆಗೆ ನಾಯಕನ ಹೊರೆಯನ್ನು ಹೊರಹಾಕಲು ಅವರಿಗೆ ಸಹಾಯ ಸಿಬ್ಬಂದಿ ಇದ್ದಾರೆ ಎಂದು ತಿಳಿಸಿದ್ದಾರೆ.

    ವಿರಾಟ್ ಕೊಹ್ಲಿ ಅವರು ತವರು ನೆಲದಲ್ಲಿ 12 ಟೆಸ್ಟ್ ಅನ್ನು ಗೆಲ್ಲುವ ಮೂಲಕ ವಿಶ್ವದಾಖಲೆ ನಿರ್ಮಿಸಿ ಭಾರತೀಯರ ಹೃದಯದಲ್ಲಿದ್ದಾರೆ. ಒಂದು ತಂಡದಲ್ಲಿ ನಾಯಕ ಯಾವಗಲೂ ಬಾಸ್ ಆಗಿ ಇರುತ್ತಾರೆ. ಕೋಚಿಂಗ್ ಸಿಬ್ಬಂದಿಯ ಕೆಲಸ ನನ್ನ ಪ್ರಕಾರ ಕ್ರಿಕೆಟ್ ಮೈದಾನದಲ್ಲಿ ಹುಡುಗರನ್ನು ಧೈರ್ಯಶಾಲಿಯಾಗಿ, ಸಕಾರತ್ಮಕವಾಗಿ ಮತ್ತು ಭಯಪಡದೇ ಆಡುವಂತೆ ಸಿದ್ಧ ಮಾಡುವುದು ಎಂದು ನಾನು ನಂಬುತ್ತೇನೆ ಎಂದು ರವಿಶಾಸ್ತ್ರಿ ಹೇಳಿದ್ದಾರೆ.

    ತಂಡದ ನಾಯಕ ತಂಡವನ್ನು ಮುನ್ನೆಡೆಸುತ್ತಿರುತ್ತಾನೆ. ತಂಡದ ಜವಾಬ್ದಾರಿ ನಮಗೂ ಇರುತ್ತದೆ. ಆದರೆ ಮೈದಾನದ ಮಧ್ಯೆದಲ್ಲಿ ಅವರ ಆಟವನ್ನು ಅವರಿಗೆ ಆಡಲು ಬಿಡಬೇಕು. ತಂಡದ ನಾಯಕ ಮೈದಾನದ ಮಧ್ಯೆದಲ್ಲಿ ನಿಂತು ಎಲ್ಲವನ್ನು ಮಾಡುತ್ತಿರುತ್ತಾನೆ. ಅವನಿಗೆ ಎಲ್ಲವನ್ನು ಎದುರಿಸಲು ನಾವು ಪ್ರೋತ್ಸಾಹಿಸಬೇಕು. ಆಗ ನಾಯಕ ತಂಡವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡು ಪಂದ್ಯವನ್ನು ಮುನ್ನೆಡೆಸುತ್ತಾನೆ ಎಂದು ಶಾಸ್ತ್ರಿ ಕೋಚ್ ಅನುಭವವನ್ನು ವಿವರಿಸಿದ್ದಾರೆ.

    ಇದೇ ವೇಳೆ ಕೊಹ್ಲಿ ಅವರು ಫಿಟ್ನೆಸ್ ಮತ್ತು ಅವರು ತಂಡದ ಇತರ ಆಟಗಾರನ್ನು ಹೇಗೆ ನೋಡಿಕೊಳ್ಳುತ್ತಾರೆ ಎಂಬುದರ ಬಗ್ಗೆ ಮಾತನಾಡಿರುವ ರವಿಶಾಸ್ತ್ರಿ, ಫಿಟ್ನೆಸ್ ಬಗ್ಗೆ ಮಾತನಾಡುವುದಾದರೆ ಕೊಹ್ಲಿ ನಾಯಕತ್ವದ ಮುಂಚೂಣಿಗೆ ಬರುತ್ತಾರೆ. ಫಿಟ್ನೆಸ್ ವಿಚಾರದಲ್ಲಿ ಅವರು ಗೊಂದಲ ಮಾಡಿಕೊಳ್ಳುವುದಿಲ್ಲ. ಕೊಹ್ಲಿ ಬೆಳಗ್ಗೆ ಎದ್ದು ಇತರ ಆಟಗಾರರಿಗೆ ನೀವು ಈ ಪಂದ್ಯ ಆಡಬೇಕು ಎಂದರೆ ಫಿಟ್ ಆಗಿ ಇರಬೇಕು. ಯಾವುದೇ ಪರಿಸ್ಥಿತಿಯಲ್ಲೂ ತಂಡಕ್ಕೆ ನೆರವಾಗಬೇಕು ಎಂದು ಎಚ್ಚರಿಕೆ ನೀಡುತ್ತಾರೆ ಎಂದು ತಿಳಿಸಿದ್ದಾರೆ.

    ಸದ್ಯ ಭಾರತ ತಂಡದಲ್ಲಿ ವಿಶ್ರಾಂತಿ ಪಡೆಯದೇ ನಿರಂತರವಾಗಿ ಆಟವಾಡುತ್ತಿರುವ ಕೆಲ ಆಟಗಾರಲ್ಲಿ ಕೊಹ್ಲಿ ಅವರು ಒಬ್ಬರು. ನಾನು ಕೇವಲ ತರಬೇತಿ ನೀಡಬಹುದು. ಆದರೆ ಕೊಹ್ಲಿ ತನ್ನ ಆಹಾರ ಕ್ರಮದಲ್ಲಿ ಫಿಟ್ ಆಗಿ ಇರಲು ಬಹಳ ತ್ಯಾಗ ಮಾಡಿದ್ದಾರೆ. ಈ ಕಟ್ಟು ನಿಟ್ಟಿನ ಅವರ ನಿಯಮಗಳು ಬೇರೆ ಆಟಗಾರರನ್ನು ಹುರಿದುಂಬಿಸುತ್ತದೆ ಎಂದು ರವಿಶಾಸ್ತ್ರಿ ಕೊಹ್ಲಿ ಅವರನ್ನು ಹಾಡಿಹೊಗಳಿದ್ದಾರೆ.