Tag: Indian Cinema

  • ‘ಪ್ಯಾನ್ ಇಂಡಿಯಾ’ – ಸಿನಿಮಾಗಳಿಗೆ ಅಗೌರವ ತೋರುವ ಪದ, ಇದನ್ನು ತೆಗೆದುಹಾಕಬೇಕು: ಸಿದ್ಧಾರ್ಥ್

    ‘ಪ್ಯಾನ್ ಇಂಡಿಯಾ’ – ಸಿನಿಮಾಗಳಿಗೆ ಅಗೌರವ ತೋರುವ ಪದ, ಇದನ್ನು ತೆಗೆದುಹಾಕಬೇಕು: ಸಿದ್ಧಾರ್ಥ್

    – ಕಂಟೆಂಟ್ ಚೆನ್ನಾಗಿದ್ದರೆ ಅದಕ್ಕೆ ಹೆಸರಿಡಬೇಕಾಗಿಲ್ಲ

    ಕ್ಷಿಣ ಭಾರತದ ಸಿನಿಮಾಗಳು ಇಡೀ ವಿಶ್ವವೇ ತಮ್ಮ ಸಿನಿಮಾಗಳತ್ತ ತಿರುಗಿ ನೋಡುವಂತೆ ಮಾಡುತ್ತಿವೆ. ದಕ್ಷಿಣ ಸಿನಿಮಾಗಳು ಸೂಪರ್‌ಹಿಟ್‌ ಸಿನಿಮಾಗಳಾಗಿ ಹೊರಹೊಮ್ಮುತ್ತಿವೆ. ಅದಕ್ಕೆ ಈಗ ಸಿನಿಮಾರಂಗದಲ್ಲಿ ‘ಪ್ಯಾನ್ ಇಂಡಿಯಾ ಸ್ಟಾರ್’ ಎಂಬ ಪದ ಫುಲ್ ಫೇಮಸ್ ಆಗಿದೆ. ಎಲ್ಲ ನಟರು ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟ ನಮ್ಮದಾಗಿಸಿಕೊಳ್ಳಬೇಕು ಎಂದು ಗಮನಹರಿಸುತ್ತಿದ್ದಾರೆ. ಆದರೆ ಬಹುಭಾಷಾ ನಟ ಸಿದ್ಧಾರ್ಥ್ ‘ಪ್ಯಾನ್-ಇಂಡಿಯನ್’ ಪದದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    Siddharth Slams Trolls Abusing His Mother: "My Country, My Religion... All Hacked By A Bunch Of Pitiful Woman-Hating Crowds"

    ನಟ ಸಿದ್ಧಾರ್ಥ್ ಹಿಂದಿ ಸೇರಿದಂತೆ ಐದಕ್ಕೂ ಹೆಚ್ಚು ಭಾಷೆಗಳಲ್ಲಿ ಕೆಲಸ ಮಾಡಿದ್ದಾರೆ. ದೇಶದ ಎರಡು ಜನಪ್ರಿಯ ಚಲನಚಿತ್ರೋದ್ಯಮಗಳಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಆದರೆ ಸಂದರ್ಶನವೊಂದರಲ್ಲಿ ‘ಪ್ಯಾನ್-ಇಂಡಿಯನ್’ ಕುರಿತು ಮಾತನಾಡಿದ ಅವರು, ಚಿತ್ರರಂಗದಲ್ಲಿ ಇತ್ತೀಚೆಗೆ ಬಳಕೆಯಾಗುತ್ತಿರುವ ಪ್ಯಾನ್ ಇಂಡಿಯನ್ ಪದ ಸಿನಿಮಾಗಳಿಗೆ ಅಗೌರವ ತೋರುವ ಪದ. ಏಕೆಂದರೆ ಪ್ರಾದೇಶಿಕ ಸಿನಿಮಾ ಎಂದರೆ ಬಾಲಿವುಡ್‍ನಿಂದ ಬಂದ ಭಾರತೀಯ ಚಲನಚಿತ್ರ ಎಂದು ವಿವರಿಸಲು ಈ ಪದವನ್ನು ಬಳಸಲಾಗುತ್ತಿದೆ. ಅದು ಅಸಂಬದ್ಧ! ಎಲ್ಲ ಚಲನಚಿತ್ರಗಳು ಭಾರತೀಯ ಚಲನಚಿತ್ರಗಳೇ ಆಗಿರುತ್ತೆ ಎಂದು ಬೇಸರಿಸಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿಯನ್ನು ಬದಲಾಯಿಸಲು RSS ಹೊರಟಿದೆ: ಸಿದ್ದು 

    ಕೆಜಿಎಫ್’ ಭಾರತೀಯ ಚಿತ್ರ
    15 ವರ್ಷಗಳ ಹಿಂದೆ ಪ್ಯಾನ್ ಇಂಡಿಯನ್ ಸಿನಿಮಾ ಇರಲಿಲ್ಲ. ಭಾರತೀಯ ಸಿನಿಮಾ ಭಾರತೀಯ ಸಿನಿಮಾ ಅಷ್ಟೇ ಆಗಿತ್ತು. ನನ್ನ ಬಾಸ್ ಮಣಿರತ್ನಂ ‘ರೋಜಾ’ ಎಂಬ ಚಲನಚಿತ್ರವನ್ನು ಮಾಡಿದರು. ಅದನ್ನು ಭಾರತದಲ್ಲಿ ಎಲ್ಲರೂ ನೋಡಿದರು. ಅದನ್ನು ನೋಡಿ ‘ಪ್ಯಾನ್ ಇಂಡಿಯನ್’ ಸಿನಿಮಾ ಎಂದು ಯಾರೂ ಹೇಳಿರಲಿಲ್ಲ. ಇಂದು ಬೆಂಗಳೂರಿನ ನನ್ನ ಸ್ನೇಹಿತರು ‘ಕೆಜಿಎಫ್’ ಮಾಡಿದ್ದಾರೆ. ಅವರ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ‘ಕೆಜಿಎಫ್’ ಭಾರತೀಯ ಚಿತ್ರ. ಅದೊಂದು ಕನ್ನಡ ಚಿತ್ರ. ನೀವು ಯಾವುದೇ ಭಾಷೆಯಲ್ಲಿ ಇದನ್ನು ವೀಕ್ಷಿಸಬಹುದು. ಆದರೆ ಇದು ಕನ್ನಡ ಇಂಡಸ್ಟ್ರಿ ಮಾಡಿದ ಭಾರತೀಯ ಚಲನಚಿತ್ರವಾಗಿದೆ ಎಂದು ತಿಳಿಸಿದ್ದಾರೆ.

    ನೀವು ನನ್ನನ್ನು ಕೇಳಿದರೆ ಪ್ಯಾನ್ ಇಂಡಿಯಾ ಪದವನ್ನು ತೆಗೆದುಹಾಕಬೇಕು. ಅದನ್ನು ಭಾರತೀಯ ಚಲನಚಿತ್ರ ಎಂದು ಕರೆಯಬೇಕು. ಇಲ್ಲದಿದ್ದರೆ ಅದು ಯಾವ ಭಾಷೆಯಲ್ಲಿದೆ ಎಂಬುದನ್ನು ಉಲ್ಲೇಖಿಸಿ. ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಸ್ಟಾರ್‍ಡಮ್ ಕಂಡುಕೊಂಡಿರುವ ತಮಿಳು ನಟ ನಾನು. ಬಾಲಿವುಡ್ ಸಿನಿಮಾದಲ್ಲಿ ನಟಿಸಲು ಹೋದ್ರೆ ನನ್ನನ್ನು ದಕ್ಷಿಣ ನಟ ಎಂದು ಕರೆಯುತ್ತಾರೆ. ದಕ್ಷಿಣ ಭಾರತದ ನಟನೆಂದೂ ಹೇಳುವುದಿಲ್ಲ. ಅದಕ್ಕೆ ನಾನು ಹೇಳುವುದು ಸಿನಿಮಾ ವಿಚಾರಕ್ಕೆ ಬಂದ್ರೆ ಅತ್ಯುತ್ತಮ ತಂತ್ರಜ್ಞರು, ಅತ್ಯುತ್ತಮ ಚಲನಚಿತ್ರಗಳನ್ನು ಮಾಡುತ್ತಾರೆ ಎಂದು ಉತ್ತರ ಕೊಟ್ಟಿದ್ದಾರೆ. ಇದನ್ನೂ ಓದಿ:  ಆ್ಯಸಿಡ್ ದಾಳಿಗೆ ಒಳಗಾದ ಯುವತಿಗೆ ಸಹಾಯಹಸ್ತ

    KGF 2 Yash (4)

    ಒಳ್ಳೆಯ ಸಿನಿಮಾ ಮಾಡಲು ಯಾವುದೇ ಭಾಷೆಯಾದರೂ ಪರವಾಗಿಲ್ಲ. ಚೆನ್ನೈನ ದೊಡ್ಡ ತಂತ್ರಜ್ಞರು ಹಿಂದಿ ಚಿತ್ರರಂಗದಲ್ಲಿ ಕೆಲಸ ಮಾಡಿದ್ದಾರೆ. ತೆಲುಗು ಚಿತ್ರರಂಗದ ದೊಡ್ಡ ನಿರ್ಮಾಪಕರು ಹಿಂದಿ ಚಿತ್ರರಂಗದಲ್ಲಿ ಕೆಲಸ ಮಾಡಿದ್ದಾರೆ. ಇಂದು ‘ಕೆಜಿಎಫ್’ನ ಮಹಾನ್ ಕನ್ನಡಿಗರು ಹಿಂದಿ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಕಂಟೆಂಟ್ ಚೆನ್ನಾಗಿದ್ದರೆ ಅದಕ್ಕೆ ಹೆಸರಿಡಬೇಕಾಗಿಲ್ಲ. ಅದು ಎಲ್ಲೆಡೆ ಹೋಗುತ್ತದೆ ಎಂದಿದ್ದಾರೆ.

  • ಉಕ್ರೇನ್‍ನಲ್ಲಿ ಚಿತ್ರೀಕರಣಗೊಂಡ ಭಾರತೀಯ ಚಲನಚಿತ್ರಗಳು

    ಉಕ್ರೇನ್‍ನಲ್ಲಿ ಚಿತ್ರೀಕರಣಗೊಂಡ ಭಾರತೀಯ ಚಲನಚಿತ್ರಗಳು

    ಷ್ಯಾ ಹಾಗೂ ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧ ವಿಶ್ವವನ್ನೇ ಆತಂಕಕ್ಕೆ ದೂಡಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ಮೇಲೆ ಯುದ್ಧವನ್ನು ಘೋಷಿಸಿದ್ದಾರೆ. ಈ ವಿಚಾರವಾಗಿ ಯಾರಾದರೂ ಮಧ್ಯಪ್ರವೇಶಿಸಿದರೆ ಪ್ರತೀಕಾರ ತೀರಿಸಿಕೊಳ್ಳಲಾಗುವುದು ಎಂದು ಇತರ ದೇಶಗಳಿಗೆ ಎಚ್ಚರಿಕೆ ನೀಡಿದ್ದಾರೆ.

    ಉಕ್ರೇನ್‍ನ ಕೈವ್, ಖಾರ್ಕಿವ್ ಮತ್ತು ಇತರ ಪ್ರದೇಶಗಳಲ್ಲಿ ದೊಡ್ಡ ಸ್ಫೋಟಗಳು ಸಂಭವಿಸಿವೆ. ಸಾಮಾನ್ಯವಾಗಿ ಸಿನಿಮಾ ಶೂಟಿಂಗ್ ನಡೆಸಲು ಉಕ್ರೇನ್ ಸಾಕಷ್ಟು ಫೇಮಸ್ ಪ್ಲೇಸ್‍ಗಳಿದ್ದು, ಉಕ್ರೇನ್‍ನಲ್ಲಿ ಭಾರತದ ಹಲವಾರು ಸಿನಿಮಾಗಳನ್ನು ಚಿತ್ರೀಕರಿಸಲಾಗಿದೆ. ಇದನ್ನೂ ಓದಿ : ಮಾಜಿ ಸಿಎಂ ಸಿದ್ಧರಾಮಯ್ಯಗೆ ಹೆದರಿಸಿದ ಬಿಗ್ ಬಾಸ್ ಪ್ರಥಮ್

    RRR
    ಕಳೆದ ವರ್ಷ ಆಗಸ್ಟ್‌ನಲ್ಲಿ ರಾಮ್ ಚರಣ್ ಮತ್ತು ಜೂನಿಯರ್ ಎನ್‍ಟಿಆರ್ ಅಭಿನಯದ ಬಹು ನಿರೀಕ್ಷಿತ ಆರ್‌ಆರ್‌ಆರ್‌ ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ಉಕ್ರೇನ್‍ನಲ್ಲಿ ನಡೆಸಲಾಗಿತ್ತು. ಎಸ್‍ಎಸ್ ರಾಜಮೌಳಿ ನಿರ್ದೇಶನದ ಈ ಚಿತ್ರದಲ್ಲಿ ಜ್ಯೂನಿಯರ್ ಎನ್‍ಟಿಆರ್, ರಾಮ್ ಚರಣ್, ಆಲಿಯಾ ಭಟ್, ಅಜಯ್ ದೇವಗನ್, ಸಮುದ್ರಕನಿ, ರೇ ಸ್ಟೀವನ್ಸನ್, ಅಲಿಸನ್ ಡೂಡಿ, ಶ್ರಿಯಾ ಸರನ್ ಮತ್ತು ಒಲಿವಿಯಾ ಮೋರಿಸ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಆರ್‌ಆರ್‌ಆರ್‌ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರಾದ ಕೋಮರಂ ಭೀಮ್ ಮತ್ತು ಅಲ್ಲೂರಿ ಸೀತಾರಾಮ ರಾಜು ಅವರ ಕಾಲ್ಪನಿಕ ಕಥಾಹಂದರವಾಗಿದೆ.

    99 ಸಾಂಗ್ಸ್
    ’99 ಸಾಂಗ್ಸ್’ ಸಿನಿಮಾ ನಿರ್ಮಾಣ ಮಾಡಿರುವ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್, ಈ  ಸಿನಿಮಾದ ಹಾಡುಗಳನ್ನು ಉಕ್ರೇನ್‍ನಲ್ಲಿ ಚಿತ್ರೀಕರಣ ಮಾಡಿದ್ದಾರೆ. ಐಡಿಯಲ್ ಎಂಟರ್‍ಟೈನ್‍ಮೆಂಟ್ ಜೊತೆಗೆ ವೈಎಂ ಮೂವೀಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ. 99 ಸಾಂಗ್ಸ್ ಅನ್ನು ಭಾರತದಲ್ಲಿ ಮತ್ತು ಉಕ್ರೇನ್‍ನಲ್ಲಿ ಚಿತ್ರೀಕರಣ ನಡೆಸಲಾಗಿತ್ತು. 99 ಸಾಂಗ್ಸ್‍ನ ಆರಂಭದಲ್ಲಿ ಇಹಾನ್ ಭಟ್ ಮತ್ತು ಎಡಿಲ್ಸಿ ವರ್ಗಾಸ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜೊತೆಗೆ ಆದಿತ್ಯ ಸೀಲ್, ಲೀಸಾ ರೇ ಮತ್ತು ಮನಿಶಾ ಕೊಯಿರಾಲಾ ಪೋಷಕ ಪಾತ್ರಗಳಲ್ಲಿದ್ದಾರೆ.

    2.0
    ಕಾಲಿವುಡ್ ನಟ ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಆಮಿ ಜಾಕ್ಸನ್ ಅಭಿನಯದ 2.0 ಸಿನಿಮಾದ ಸಾಂಗ್ ಶೂಟಿಂಗ್ ಉಕ್ರೇನ್‍ನ ಟನಲ್ ಆಫ್ ಲವ್‍ನಲ್ಲಿ ಚಿತ್ರೀಕರಿಸಲಾಗಿತ್ತು. ಈ ಸಿನಿಮಾದ ರೋಜಾ ಕಾದಲ್ ಎಂಬ ಹಾಡನ್ನು ಎ.ಆರ್ ರೆಹಮಾನ್ ಸಂಯೋಜಿಸಿದ್ದಾರೆ. ಇನ್ನೂ ಈ ಸಾಂಗ್‍ನಲ್ಲಿ ಬರುವ ಉಕ್ರೇನ್ ದೃಶ್ಯಗಳು ಬಹಳ ಅದ್ಭುತವಾಗಿ ಮೂಡಿಬಂದಿದೆ. ಇದನ್ನೂ ಓದಿ : ಅಶರೀರವಾಣಿ ಆಲ್ಬಂಗೆ ನೀನಾಸಂ ಸತೀಶ್ ಸಿಂಗರ್ : ಮಗಳೊಂದಿಗೆ ಹಾಡಿದ ಸ್ಟಾರ್ ನಟ

    ದೇವ್
    ದೇವ್ ರಜತ್ ರವಿಶಂಕರ್ ಬರೆದು ನಿರ್ದೇಶಿಸಿರುವ 2019ರ ತಮಿಳಿನ ರೋಮ್ಯಾಂಟಿಕ್ ಆ್ಯಕ್ಷನ್ ಸಿನಿಮಾವಾಗಿದೆ. ಚಿತ್ರದಲ್ಲಿ ಕಾರ್ತಿಕ್ ಮತ್ತು ರಾಕುಲ್ ಪ್ರೀತ್ ಸಿಂಗ್ ನಟಿಸಿದ್ದಾರೆ. ಪ್ರಕಾಶ್ ರಾಜ್ ಮತ್ತು ರಮ್ಯಾ ಕೃಷ್ಣನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ಕಥಾವಸ್ತುವು ಮಾಜಿ ಭಾರತೀಯ ಕ್ರಿಕೆಟ್ ನಾಯಕ ಮತ್ತು ಸ್ಟಾರ್ ಆಲ್ ರೌಂಡರ್ ಕಪಿಲ್ ದೇವ್ ಅವರ ಜೀವನ ಪ್ರೇರಿತವಾಗಿದೆ. ಇನ್ನು ಈ ಸಿನಿಮಾದ ಶೂಟಿಂಗ್ ದೃಶ್ಯಗಳನ್ನು ಚೆನ್ನೈ, ಹೈದರಾಬಾದ್, ಬೆಂಗಳೂರು, ಮುಂಬೈ, ಪುಣೆ, ಕುಲು, ಮನಾಲಿ, ಹಿಮಾಲಯ, ಗುಲ್ಮಾರ್ಗ್, ಉಕ್ರೇನ್ ಮತ್ತು ಕಾರ್ಪಾಥಿಯನ್ ಪರ್ವತಗಳಂತಹ ಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದೆ. 2018ರ ನವೆಂಬರ್ ಆರಂಭದಲ್ಲಿ ಉಕ್ರೇನ್‍ನಲ್ಲಿ ಚಿತ್ರೀಕರಣ ಮಾಡಲಾಯಿತು.

    ವಿನ್ನರ್
    ವಿನ್ನರ್ 2017ರಲ್ಲಿ ತೆರೆಕಂಡ ತೆಲುಗಿನ ಆ್ಯಕ್ಷನ್, ಕಾಮಿಡಿ ಸಿನಿಮಾವಾಗಿದ್ದು, ಶ್ರೀ ಲಕ್ಷ್ಮಿ ನರಸಿಂಹ ಪ್ರೊಡಕ್ಷನ್ಸ್ ಮತ್ತು ಲಿಯೋ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ನಲ್ಲಮಲುಪು ಬುಜ್ಜಿ, ಟ್ಯಾಗೋರ್ ಮಧು ಜಂಟಿಯಾಗಿ ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದರು. ನಿರ್ದೇಶಕ ಗೋಪಿಚಂದ್ ಮಲಿನೇನಿ ಆ್ಯಕ್ಷನ್ ಕಟ್ ಹೇಳಿರುವ ಈ ಸಿನಿಮಾದಲ್ಲಿ ಸಾಯಿ ಧರಮ್ ತೇಜ್, ರಾಕುಲ್ ಪ್ರೀತ್ ಸಿಂಗ್ ಮತ್ತು ಜಗಪತಿ ಬಾಬು ನಟಿಸಿದ್ದಾರೆ. ಇದರ ಶೂಟಿಂಗ್ ಸ್ಥಳಗಳಲ್ಲಿ ಕೈವ್, ಎಲ್ವಿವ್ ಮತ್ತು ಇಸ್ತಾನ್‍ಬುಲ್‍ನಲ್ಲಿ ಚಿತ್ರೀಕರಿಸಲಾಗಿದೆ.

    ಈ ಚಿತ್ರತಂಡವು ಉಕ್ರೇನ್‍ನಲ್ಲಿ ಮೂರು ಹಾಡುಗಳನ್ನು ಚಿತ್ರೀಕರಿಸಿದೆ. ವಿನ್ನರ್ ಸಿನಿಮಾ ಉಕ್ರೇನ್‍ನಲ್ಲಿ ಚಿತ್ರೀಕರಿಸಲಾದ ಮೊದಲ ಭಾರತೀಯ ಚಲನಚಿತ್ರವಾಗಿದೆ ಎಂದು ನಿರ್ದೇಶಕ ಗೋಪಿಚಂದ್ ಮಲಿನೇನಿ ಹೇಳಿದ್ದಾರೆ.

  • 2019ರಲ್ಲಿ ಚಂದನವನವನ್ನ ತಿರುಗಿ ನೋಡಿತು ಭಾರತೀಯ ಸಿನಿಲೋಕ

    2019ರಲ್ಲಿ ಚಂದನವನವನ್ನ ತಿರುಗಿ ನೋಡಿತು ಭಾರತೀಯ ಸಿನಿಲೋಕ

    2019 ಕನ್ನಡ ಸಿನಿಮಾಗಳಿಗೆ ಹೊಸ ರೂಪು ನೀಡಿತು ಎಂದ್ರೆ ಸುಳ್ಳಾಗಲ್ಲ. ಕರ್ನಾಟಕದ ಮಾರುಕಟ್ಟೆಗೆ ಸೀಮಿತಗೊಂಡಿದ್ದ ಚಂದನವನನ್ನ ಇಂದು ಇಡೀ ಭಾರತವೇ ತಿರುಗಿ ನೋಡುತ್ತಿದೆ. ಇಂದು ಕನ್ನಡ ಸಿನಿಮಾಗಳಿಗೆ ಹೊರ ರಾಜ್ಯದಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ. ಕನ್ನಡ ಸ್ಟಾರ್ ಗಳನ್ನು ಇಂದು ಗುರುತಿಸುವಂತಾಗಿದೆ. ಇದೆಕ್ಕೆಲ್ಲಾ ಕಾರಣ ಪ್ಯಾನ್ ಇಂಡಿಯಾ ಕಾನ್ಸೆಪ್ಟ್.

    ಹೌದು, ಮೊದಲಿಗೆ ಕನ್ನಡದ ಯಾವುದೇ ಸಿನಿಮಾ ಬಿಡುಗಡೆ ಆದ್ರೆ ಅದು ಕೇವಲ ಕರ್ನಾಟಕದ ಮಾರುಕಟ್ಟೆಗೆ ಮಾತ್ರ ಸೀಮಿತವಾಗಿತ್ತು. ಇಂದು ಕನ್ನಡದ ಸಿನಿಮಾಗಳು ಗಡಿಯನ್ನು ದಾಟಿ ವಿದೇಶದಲ್ಲಿ ನಮ್ಮ ಚಂದನವನದ ಪರಿಮಳವನ್ನು ಪಸರಿಸಿವೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ 2018 ಡಿಸೆಂಬರ್ 21ರಂದು ತೆರೆಕಂಡಿತ್ತು. ಈ ಕನ್ನಡದ ಸಿನಿಮಾವನ್ನು ಇಡೀ ಭಾರತೀಯ ಚಿತ್ರರಂಗ ಒಪ್ಪಿ, ಅಪ್ಪಿಕೊಂಡು ಮುದ್ದಾಡಿದೆ. ಕೆಜಿಎಫ್ ಎಂಬ ದೈತ್ಯ ಸಿನಿಮಾ ಕನ್ನಡದ ಮಾರುಕಟ್ಟೆಯನ್ನು ವಿಸ್ತರಿಸಿತು. ಕೆಜಿಎಫ್ ಬಳಿಕ ಕನ್ನಡದ ಸಿನಿಮಾಗಳು ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ನ್ನು ಅಳವಡಿಸಿಕೊಳ್ಳಲು ಮುಂದಾದವು.

    ಸೆಪ್ಟೆಂಬರ್ 12ರಂದ ಬಿಡುಗಡೆಯಾದ ಸ್ಯಾಂಡಲ್‍ವುಡ್ ಸ್ವಾತಿಮುತ್ತು ಸುದೀಪ್ ಅಭಿನಯದ ‘ಪೈಲ್ವಾನ್’ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ನಲ್ಲಿ ತೆರೆಕಂಡಿತು. ಕನ್ನಡ ಮಾತ್ರವಲ್ಲದೇ ತೆಲಗು ಮತ್ತು ಹಿಂದಿ ಭಾಷೆಗಳಲ್ಲಿಯೂ ಪೈಲ್ವಾನ್ ಹೊಡೆದ ಸೆಡ್ಡು ಎಲ್ಲರನ್ನು ನಡಗುವಂತೆ ಮಾಡಿತ್ತು. ಬಾಲಿವುಡ್ ಸ್ಟಾರ್ ಸುನಿಲ್ ಶೆಟ್ಟಿ ಮೊದಲ ಬಾರಿಗೆ ಪೈಲ್ವಾನ್ ನಲ್ಲಿ ನಟಿಸುವ ಮೂಲಕ ಚಂದನವನಕ್ಕೆ ಪಾದರ್ಪಣೆ ಮಾಡಿದ್ದು ಈ ಚಿತ್ರದ ಮತ್ತೊಂದು ವಿಶೇಷ. 50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಪೈಲ್ವಾನ್ ಅಂದಾಜು 113 ಕೋಟಿಗೂ ಅದಿಕ ಹಣವನ್ನು ತನ್ನ ಗಲ್ಲಾ ಪೆಟ್ಟಿಗೆಯಲ್ಲಿ ತುಂಬಿಕೊಂಡಿತ್ತು.

    ಇದಾದ ಬಳಿಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಮುನಿರತ್ನ ಕುರುಕ್ಷೇತ್ರ’ ಸಿನಿಮಾ ಸಹ ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ಆಗಸ್ಟ್ 9ರಂದು ಬಿಡುಗಡೆಗೊಂಡಿತು. ಸಿನಿಮಾ ಸೆಟ್ಟೇರಿದಾಗಿನಿಂದಲೂ ಒಂದಿಲ್ಲೊಂದು ವಿಷಯಗಳಿಗೆ ಚಿತ್ರ ಗಾಂಧಿನಗರದಲ್ಲಿ ಸದ್ದು ಮಾಡುತ್ತಿತ್ತು. ದರ್ಶನ್, ಅಂಬರೀಶ್, ನಿಖಿಲ್ ಕುಮಾರಸ್ವಾಮಿ, ಶಶಿಕುಮಾರ್, ಅರ್ಜುನ್ ಸರ್ಜಾ, ಭಾರತಿ ವಿಷ್ಣುವರ್ಧನ್, ಶ್ರೀನಾಥ್, ಸೋನು ಸೂದ್ ದೊಡ್ಡ ತಾರಾಬಳಗವನ್ನೇ ಸಿನಿಮಾ ಹೊಂದಿತ್ತು. ಮುನಿರತ್ನ ಕುರುಕ್ಷೇತ್ರ ಸಿನಿಮಾ ಸಹ 100 ಕೋಟಿ ಕ್ಲಬ್ ಸೇರುವ ಮೂಲಕ ದಾಖಲೆ ಬರೆದಿದೆ.

    ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮೂರು ವರ್ಷಗಳ ಬಳಿಕ ಬೆಳ್ಳಿ ಪರದೆಗೆ ಎಂಟ್ರಿ ಕೊಡುತ್ತಿದ್ದಾರೆ. ಕಿರಿಕ್ ಪಾರ್ಟಿ ಸಿನಿಮಾ ಯಶಸ್ಸಿನ ಬಳಿಕ ಅವನೇ ಶ್ರೀಮನ್ನಾರಾಯಣನಾಗಿ ರಕ್ಷಿತ್ ಶೆಟ್ಟಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಟೀಸರ್, ಟ್ರೈಲರ್ ಮತ್ತು ಹಾಡುಗಳ ಮೂಲಕ ಕ್ರೇಜ್ ಹುಟ್ಟಿಸಿರೋ ಅವನೇ ಶ್ರೀಮನ್ನಾರಾಯಣ ಸಹ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಥೀಮ್ ನಲ್ಲಿ ರಿಲೀಸ್ ಆಗಲು ಭರ್ಜರಿ ತಯಾರಿ ನಡೆಸಿದೆ. ಕನ್ನಡ, ತಮಿಳು, ತೆಲಗು ಮತ್ತು ಮಲಯಾಳಂ ಭಾಷೆಗಳಲ್ಲಿ ಅವನೇ ಶ್ರೀಮನ್ನಾರಾಯಣ ರಿಲೀಸ್ ಆಗಲಿದೆ.

  • ಫಿಲ್ಮ್ ಇಂಡಸ್ಟ್ರಿ ರೇಪ್‍ಗೆ ಬದಲಾಗಿ ತುತ್ತು ಅನ್ನ ನೀಡುತ್ತೆ: ಸರೋಜ್ ಖಾನ್

    ಫಿಲ್ಮ್ ಇಂಡಸ್ಟ್ರಿ ರೇಪ್‍ಗೆ ಬದಲಾಗಿ ತುತ್ತು ಅನ್ನ ನೀಡುತ್ತೆ: ಸರೋಜ್ ಖಾನ್

    ಮುಂಬೈ: ಸಿನಿಮಾ ಉದ್ಯಮದಲ್ಲಿ ಕೆಲವು ದಿನಗಳಿಂದ ‘ಕಾಸ್ಟಿಂಗ್ ಕೌಚ್’ ಕುರಿತಾಗಿ ಭಾರೀ ಚರ್ಚೆಗಳು ನಡೆಯುತ್ತಿವೆ. ಬಾಲಿವುಡ್ ಖ್ಯಾತ ನೃತ್ಯ ಸಂಯೋಜಕಿ ಸರೋಜ್ ಖಾನ್ ಕಾಸ್ಟಿಂಗ್ ಕೌಚ್ ಪರ ಹೇಳಿಕೆ ನೀಡುವ ಮೂಲಕ ಅಚ್ಚರಿಯನ್ನುಂಟು ಮಾಡಿದ್ದಾರೆ.

    ಬಾಲಿವುಡ್ ಕಾಸ್ಟಿಂಗ್ ಕೌಚ್ ನೆಪದಲ್ಲಿ ನಡೆಸುವ ರೇಪ್‍ಗೆ ಬದಲಾಗಿ ನಟಿಗೆ ಅನ್ನವನ್ನು ನೀಡುತ್ತದೆ ಅಂತಾ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ ವೇಳೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ಕಾಸ್ಟಿಂಗ್ ಕೌಚ್ ಕಿರುಕುಳ ಬಾಬಾ ಅಝಮ್ ಕಾಲದಿಂದಲೂ ನಡೆದುಕೊಂಡು ಬಂದಿದೆ. ಸಿನಿಮಾ ಅಂಗಳದಲ್ಲಿರುವ ಪ್ರತಿಯೊಬ್ಬ ಹುಡುಗಿಯ ಮೇಲೆ ಒಬ್ಬರಾದ್ರೂ ಕೈ ಹಾಕುವ ಪ್ರಯತ್ನ ಮಾಡ್ತಾರೆ. ಇಂತಹ ಪ್ರಕರಣದಲ್ಲಿ ಸರ್ಕಾರದ ಪ್ರತಿನಿಧಿಗಳು ಸಹ ಇರ್ತಾರೆ. ಸರ್ಕಾರದ ಪ್ರತಿನಿಧಿಗಳು ಫಿಲ್ಮ್ ಇಂಡಸ್ಟ್ರಿಯ ಹಿಂದೆ ಯಾಕೆ ಬೀಳುತ್ತಾರೋ ಗೊತ್ತಾಗುತ್ತಿಲ್ಲ. ಕೊನೆ ಪಕ್ಷದಲ್ಲಿ ಸಿನಿಮಾದವರು ರೇಪ್ ಬದಲಾಗಿ ನಟಿಗೆ ತುತ್ತು ಅನ್ನವಾದ್ರೂ ನೀಡ್ತಾರೆ ಅಂತಾ ಹೇಳಿದ್ದಾರೆ.

    ಈ ಎಲ್ಲ ವಿಷಯಗಳು ನಟಿಯ ಮೇಲೆ ನಿರ್ಧರಿಸಲ್ಪಡುತ್ತವೆ. ನಟಿ ಲೈಂಗಿಕ ಕಿರುಕುಳಕ್ಕೆ ಒಳಗಾಗಲು ಇಷ್ಟ ಪಡದೇ ಇದ್ದರೆ ದೂರ ಉಳಿಯುವ ಸ್ವಾತಂತ್ರ್ಯ ಆಕೆಗಿದೆ. ಅವಳಲ್ಲಿ ನಟನೆಯ ಕಲೆ ಇದ್ರೆ, ಆಕೆ ಎಲ್ಲಿಯಾದ್ರೂ ಬದುಕಬಹುದು. ಆದ್ರೆ ಫಿಲ್ಮ್ ಇಂಡಸ್ಟ್ರಿಗೆ ಅವಮಾನಿಸುವಂತಹ ಹೇಳಿಕೆಗಳನ್ನು ನೀಡಬಾರದು. ಫಿಲ್ಮ್ ಇಂಡಸ್ಟ್ರಿ ನಮಗೆ ತಂದೆ-ತಾಯಿ. ಹೀಗಾಗಿ ಅನಾವಶ್ಯಕ ಹೇಳಿಕೆಗಳನ್ನು ನೀಡಬಾರದು ಅಂತಾ ಸರೋಜ್ ಖಾನ್ ತಿಳಿಸಿದ್ದಾರೆ. ಇದನ್ನೂ ಓದಿ: ಪೊಲೀಸ್ ಠಾಣೆ ಮೆಟ್ಟಿಲೇರಿದ್ರು ಬಟ್ಟೆ ಬಿಚ್ಚಿ ಶ್ರೀರೆಡ್ಡಿಗೆ ತಿರುಗೇಟು ಕೊಟ್ಟ ಸ್ಯಾಂಡಲ್ ವುಡ್ ನಟಿ

    ಸರೋಜ್ ಖಾನ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಟಾಲಿವುಡ್ ನಟಿ ಶ್ರೀರೆಡ್ಡಿ, ಇದೂವರೆಗೂ ಸರೋಜ್ ಖಾನ್ ಮೇಡಂ ಮೇಲಿದ್ದ ಗೌರವವೆಲ್ಲಾ ಕಡಿಮೆಯಾಗಿದೆ. ಸಿನಿಮಾ ರಂಗದಲ್ಲಿರುವ ಒಬ್ಬ ಹಿರಿಯ ಕಲಾವಿದೆಯಾಗಿ, ಯುವ ನಟಿಯರಿಗೆ ಒಳ್ಳೆಯ ದಾರಿಯನ್ನು ತೋರಿಸಬೇಕು. ಅದರ ಬದಲಾಗಿ ನಟಿಯರು ನಿರ್ಮಾಪಕರ ಗುಲಾಮರು ಇದ್ದಂತೆ ನಿಮ್ಮ ಹೇಳಿಕೆ ಇದೆ ಅಂತಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬಟ್ಟೆ ಬಿಚ್ಚಿ ಶ್ರೀರೆಡ್ಡಿಗೆ ತಿರುಗೇಟು ಕೊಟ್ಟ ಕನ್ನಡದ ನಟಿ ಕವಿತಾ!