Tag: Indian bowlers

  • ಪಾಕ್‌ ಆಟಗಾರರಿಗೆ ನನ್ನ ಯಶಸ್ಸನ್ನು ಅರಗಿಸಿಕೊಳ್ಳಲಾಗುತ್ತಿಲ್ಲ – ಶಮಿ ತಿರುಗೇಟು

    ಪಾಕ್‌ ಆಟಗಾರರಿಗೆ ನನ್ನ ಯಶಸ್ಸನ್ನು ಅರಗಿಸಿಕೊಳ್ಳಲಾಗುತ್ತಿಲ್ಲ – ಶಮಿ ತಿರುಗೇಟು

    ಮುಂಬೈ: ಗಡಿಯಾಚೆಗಿರುವ ಪಾಕಿಸ್ತಾನದ (Pakistan) ಕೆಲ ಆಟಗಾರರಿಗೆ ನನ್ನ ಯಶಸ್ಸನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಟೀಂ ಇಂಡಿಯಾ ಸ್ಟಾರ್‌ ವೇಗಿ ಮೊಹಮ್ಮದ್‌ ಶಮಿ (Mohammed Shami) ತಿರುಗೇಟು ನೀಡಿದ್ದಾರೆ.

    ಸಂದರ್ಶನವೊಂದರಲ್ಲಿ ಮಾತನಾಡಿರುವ ಶಮಿ, ನನ್ನಂತೆಯೇ ಪ್ರದರ್ಶನ ನೀಡುವ ಇನ್ನೂ 10 ಬೌಲರ್‌ಗಳು ಹುಟ್ಟಿಕೊಳ್ಳಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ಯಾರ ಬಗ್ಗೆಯೂ ಅಸೂಯೆ ಪಡುವುದಿಲ್ಲ. ನೀವು ಬೇರೆಯವರ ಯಶಸನ್ನು ಆನಂದಿಸಿದ್ರೆ, ಉತ್ತಮ ಆಟಗಾರರಾಗುತ್ತೀರಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾ ಬೌಲರ್‌ಗಳಿಗೆ ಸ್ಪೆಷಲ್‌ ಬಾಲ್‌ ಕೊಡ್ತಿದ್ದಾರೆ – ಗೆಲುವಿನ ಬಗ್ಗೆ ಪಾಕ್‌ ಮಾಜಿ ಕ್ರಿಕೆಟಿಗ ಟೀಕೆ

    ಕೆಲವರು ಅನಗತ್ಯ ವಿವಾದಗಳನ್ನ ಸೃಷ್ಟಿಸುತ್ತಿದ್ದಾರೆ. ಬೇರೆ ಬೇರೆ ಚೆಂಡುಗಳನ್ನು (Different Ball) ಪಡೆಯುತ್ತಿದ್ದೇವೆ ಎಂದು ಆರೋಪಿಸುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ನಾನು ಬಹಳಷ್ಟು ಕೇಳುತ್ತಿದ್ದೇನೆ. ಆರಂಭಿಕ ಪಂದ್ಯಗಳಲ್ಲಿ ಪ್ಲೇಯಿಂಗ್‌-11 ಭಾಗವಾಗಿರಲಿಲ್ಲ. ನನ್ನನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡ ಮೊದಲ ಪಂದ್ಯದಲ್ಲೇ 5 ವಿಕೆಟ್‌ ಪಡೆದೆ, ಮುಂದಿನ 2 ಪಂದ್ಯಗಳಲ್ಲಿ ಕ್ರಮವಾಗಿ 4 ಮತ್ತು 5 ವಿಕೆಟ್‌ ಪಡೆದೆ. ಹಾಗಾಗಿ ಪಾಕಿಸ್ತಾನದ ಕೆಲ ಆಟಗಾರರು ನನ್ನ ಯಶಸ್ಸನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನನ್ನ ಪ್ರಕಾರ ಹೇಳುವುದಾದ್ರೇ ಸರಿಯಾದ ಸಮಯಕ್ಕೆ ಸೂಕ್ತ ಪ್ರದರ್ಶನ ನೀಡುವವರೇ ಉತ್ತಮ ಆಟಗಾರ ಎಂದು ನುಡಿದಿದ್ದಾರೆ.

    ಅನುಭವಿ ವೇಗಿ ಮೊಹಮ್ಮದ್‌ ಶಮಿ ಅವರು ಹಾರ್ದಿಕ್‌ ಪಾಂಡ್ಯ (Hardik Pandya) ಅವರಿಂದಾಗಿ ಮೊದಲ 4 ಪಂದ್ಯಗಳಿಗೆ ಅಲಭ್ಯರಾಗಿದ್ದರು. ಆದ್ರೆ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಕಾಲಿಗೆ ಪೆಟ್ಟಾಗಿಸಿಕೊಂಡ ಪರಿಣಾಮ ವಿಶ್ವಕಪ್‌ನಿಂದಲೇ (World Cup 2023) ಪಾಂಡ್ಯ ಹೊರಗುಳಿಯಬೇಕಾಯಿತು. ಹಾಗಾಗಿ ಶಮಿ ಹಾರ್ದಿಕ್‌ ಪಾಂಡ್ಯ ಬದಲಿಗೆ ತಂಡದಲ್ಲಿ ಸೇರ್ಪಡೆಯಾದರು. ಆ ನಂತರ ಮುಂದಿನ 7 ಪಂದ್ಯಗಳನ್ನಾಡಿದ ಮೊಹಮ್ಮದ್‌ ಶಮಿ ಬರೋಬ್ಬರಿ 24 ವಿಕೆಟ್‌ಗಳನ್ನು ಪಡೆಯುವ ಮೂಲಕ‌ ಪ್ರಸಕ್ತ ಟೂರ್ನಿಯಲ್ಲಿ ಅತಿಹೆಚ್ಚು ವಿಕೆಟ್‌ ಪಡೆದ ಶ್ರೇಷ್ಠ ಸಾಧನೆ ಮಾಡಿದರು. ಇದನ್ನೂ ಓದಿ: ಲಕ್ನೋದಲ್ಲಿ ಫೈನಲ್‌ ನಡೆಯುತ್ತಿದ್ದರೆ ಭಾರತ ಗೆಲ್ಲುತ್ತಿತ್ತು: ಮೋದಿ ಪಿಚ್‌ ಬಗ್ಗೆ ಅಖಿಲೇಶ್‌ ಟೀಕೆ

    ದಿಗ್ಗಜರ ಎಲೈಟ್‌ ಪಟ್ಟಿ ಸೇರಿದ ಶಮಿ:
    ಇತ್ತೀಚೆಗೆ ಮುಕ್ತಾಯಗೊಂಡ ವಿಶ್ವಕಪ್‌ ಟೂರ್ನಿಯಲ್ಲಿ 50ಕ್ಕೂ ಹೆಚ್ಚು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಟಾಪ್‌-5 ದಿಗ್ಗಜರ ಎಲೈಟ್‌ ಪಟ್ಟಿ ಸೇರಿಕೊಂಡರು. 39 ವಿಶ್ವಕಪ್‌ ಪಂದ್ಯಗಳನ್ನಾಡಿರುವ ಆಸೀಸ್‌ ಬೌಲಿಂಗ್‌ ದಿಗ್ಗಜ ಗ್ಲೇನ್‌ ಮೆಕ್‌ಗ್ರಾತ್‌ 71 ವಿಕೆಟ್‌ಗಳನ್ನು ಪಡೆದು ಮೊದಲ ಸ್ಥಾನದಲ್ಲಿದ್ದರೇ, ಶ್ರೀಲಂಕಾದ ಮುತ್ತಯ್ಯ ಮುರಳಿಧರನ್‌ (40 ಮ್ಯಾಚ್‌, 68 ವಿಕೆಟ್‌), ಆಸೀಸ್‌ನ ಮಿಚೆಲ್‌ ಸ್ಟಾರ್ಕ್‌ (28 ಮ್ಯಾಚ್‌, 65 ವಿಕೆಟ್‌), ಶ್ರೀಲಂಕಾದ ಮಾಲಿಂಗ (29 ಮ್ಯಾಚ್‌, 56 ವಿಕೆಟ್‌) ಪಡೆದು ಕ್ರಮವಾಗಿ ಮೊದಲ 4 ಸ್ಥಾನಗಳಲ್ಲಿದ್ದಾರೆ. ಕೇವಲ 18 ಪಂದ್ಯಗಳಲ್ಲಿ 55 ವಿಕೆಟ್‌ಗಳನ್ನು ಪಡೆದಿರುವ ಶಮಿ 5ನೇ ಸ್ಥಾನದಲ್ಲಿದ್ದಾರೆ. ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ 57 ರನ್‌ಗಳಿಗೆ 7 ವಿಕೆಟ್‌ ಪಡೆದಿರುವುದು ಶಮಿಯ ಶ್ರೇಷ್ಠ ಪ್ರದರ್ಶನವಾಗಿದೆ.

    ಹಸನ್‌ ರಾಝಾ ಹೇಳಿದ್ದೇನು?
    ಪಾಕ್‌ ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಭಾರತದ ಆತಿಥ್ಯದಲ್ಲಿ ನಡೆಯುತ್ತಿದ್ದ ವಿಶ್ವಕಪ್‌ ಟೂರ್ನಿಯ ಕುರಿತು ಮಾತುಕತೆ ನಡೆಯುತ್ತಿತ್ತು. ವಾಸಿಂ ಅಕ್ರಮ್‌, ಶೋಯೆಬ್‌ ಮಲಿಕ್‌, ಮಿಸ್ಬಾ ಉಲ್‌ ಹಕ್‌ ಮೊದಲಾದವರು ಪಾಕ್‌ ತಂಡದ ಕಳಪೆ ಪ್ರದರ್ಶನ ಬಗ್ಗೆ ವಿಶ್ಲೇಷಣೆ ನಡೆಸುತ್ತಿದ್ದರು. ಆಗ ಹಸನ್‌ ರಾಝಾ ಟೀಂ ಇಂಡಿಯಾ ಬೌಲಿಂಗ್‌ (Team India Bowling) ಮತ್ತು ಡಿಆರ್‌ಎಸ್‌ ನಿರ್ಧಾರಗಳ ಕುರಿತು ಟೀಕಿಸಿದ್ದರು.

    ಶ್ರೀಲಂಕಾ ತಂಡದ ವಿರುದ್ಧ ಭರ್ಜರಿ ಜಯ ಸಾಧಿಸಿದ ಬಳಿಕ, ಟೀಂ ಇಂಡಿಯಾ ಬೌಲಿಂಗ್‌ ವೇಳೆ ಚೆಂಡುಗಳು ಹೆಚ್ಚಾಗಿ ಸ್ವಿಂಗ್‌ ಆಗುತ್ತಿವೆ. ಒಂದು ವೇಳೆ ಅವರಿಗೆ ವಿಶೇಷ ಚೆಂಡುಗಳನ್ನು (Speical Ball) ನೀಡುತ್ತಿದ್ದಾರೆ ಅಂತ ನಿಮಗೆ ಅನ್ನಿಸುತ್ತದೆಯೇ? ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಹಸನ್‌, ಟೀಂ ಇಂಡಿಯಾ ಬೌಲರ್‌ಗಳ ಸ್ವಿಂಗ್‌ ಗಮನಿಸಿದ್ರೆ ಖಂಡಿತಾ ಅನುಮಾನ ಮೂಡುತ್ತಿದೆ ಎಂದು ಹೇಳಿದ್ದರು. ಇದನ್ನೂ ಓದಿ: ಇನ್ಮುಂದೆ ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತೃತೀಯ ಲಿಂಗಿಗಳಿಗೆ ನಿಷೇಧ – ICC ಹೇಳಿದ್ದೇನು?

  • ಟೀಂ ಇಂಡಿಯಾ ಬೌಲರ್‌ಗಳಿಗೆ ಸ್ಪೆಷಲ್‌ ಬಾಲ್‌ ಕೊಡ್ತಿದ್ದಾರೆ – ಗೆಲುವಿನ ಬಗ್ಗೆ ಪಾಕ್‌ ಮಾಜಿ ಕ್ರಿಕೆಟಿಗ ಟೀಕೆ

    ಟೀಂ ಇಂಡಿಯಾ ಬೌಲರ್‌ಗಳಿಗೆ ಸ್ಪೆಷಲ್‌ ಬಾಲ್‌ ಕೊಡ್ತಿದ್ದಾರೆ – ಗೆಲುವಿನ ಬಗ್ಗೆ ಪಾಕ್‌ ಮಾಜಿ ಕ್ರಿಕೆಟಿಗ ಟೀಕೆ

    – DRS ನಿರ್ಧಾರಗಳೂ ಭಾರತಕ್ಕೆ ಫೇವರ್‌ ಆಗಿಯೇ ಬರ್ತಿವೆ ಎಂದ ಹಸನ್ ರಾಝಾ

    ಇಸ್ಲಾಮಾಬಾದ್‌: ವಿಶ್ವಕಪ್‌ ಟೂರ್ನಿಯಲ್ಲಿ +2.102 ರನ್‌ರೇಟ್‌ನೊಂದಿಗೆ ಅಗ್ರಸ್ಥಾನಲ್ಲಿರುವ ಟೀಂ ಇಂಡಿಯಾ ಗೆಲುವಿನ ಕುರಿತು ಪಾಕಿಸ್ತಾನ ತಂಡದ ಮಾಜಿ ಕ್ರಿಕೆಟಿಗ ಹಸನ್‌ ರಾಝಾ (Hasan Raza) ಟೀಕಿಸಿದ್ದಾರೆ. ಐಸಿಸಿ ಮತ್ತು ಬಿಸಿಸಿಐ (ICC, BCCI), ಟೀಂ ಇಂಡಿಯಾ ಬೌಲರ್ಸ್‌ಗೆ (Indian Bowlers) ವಿಶೇಷ ಚೆಂಡುಗಳನ್ನ ಕೊಡುತ್ತಿದೆ. ಆದ್ದರಿಂದ ಅವರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಎಂದು ಆರೋಪಿಸಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    ಪಾಕ್‌ ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ವಿಶ್ವಕಪ್‌ ಟೂರ್ನಿಯ ಕುರಿತು ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ವಾಸಿಂ ಅಕ್ರಮ್‌, ಶೋಯೆಬ್‌ ಮಲಿಕ್‌, ಮಿಸ್ಬಾ ಉಲ್‌ ಹಕ್‌ ಮೊದಲಾದವರು ಪಾಕ್‌ ತಂಡದ ಕಳಪೆ ಪ್ರದರ್ಶನ ಬಗ್ಗೆ ವಿಶ್ಲೇಷಣೆ ನಡೆಸಿದರು. ಆದ್ರೆ ಹಸನ್‌ ರಾಝಾ ಟೀಂ ಇಂಡಿಯಾ ಬೌಲಿಂಗ್‌ (Team India Bowling) ಮತ್ತು ಡಿಆರ್‌ಎಸ್‌ ನಿರ್ಧಾರಗಳ ಕುರಿತು ಟೀಕಿಸಿದರು. ಇದನ್ನೂ ಓದಿ: World Cup 2023: ಶ್ರೇಯಸ್‌ ಅಯ್ಯರ್‌ಗೆ ಸರ್ಪ್ರೈಸ್‌ ಗಿಫ್ಟ್‌ ಕೊಟ್ಟ ಕ್ರಿಕೆಟ್‌ ದೇವರು

    ಗುರುವಾರ (ನ.2) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧ ಭಾರತ 302 ರನ್‌ಗಳ ಭರ್ಜರಿ ಜಯ ಸಾಧಿಸಿತು. ಈ ಕುರಿತು ಪಾಕ್‌ ಸುದ್ದಿ ನಿರೂಪಕ, ಟೀಂ ಇಂಡಿಯಾ ಬೌಲಿಂಗ್‌ ವೇಳೆ ಚೆಂಡುಗಳು ಹೆಚ್ಚಾಗಿ ಸ್ವಿಂಗ್‌ ಆಗುತ್ತಿವೆ. ಒಂದು ವೇಳೆ ಅವರಿಗೆ ವಿಶೇಷ ಚೆಂಡುಗಳನ್ನು (Speical Ball) ನೀಡುತ್ತಿದ್ದಾರೆ ಅಂತ ನಿಮಗೆ ಅನ್ನಿಸುತ್ತದೆಯೇ? ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಹಸನ್‌, ಟೀಂ ಇಂಡಿಯಾ ಬೌಲರ್‌ಗಳ ಸ್ವಿಂಗ್‌ ಗಮನಿಸಿದ್ರೆ ಖಂಡಿತಾ ಅನುಮಾನ ಮೂಡುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಶಮಿ ಬೆಂಕಿ ಬೌಲಿಂಗ್‌ಗೆ ನೀಲಿ ತಾರೆ ಫಿದಾ – ಕೇಂದ್ರ ಲಸ್ಟ್‌ ರಿಯಾಕ್ಷನ್‌ ಸಿಕ್ಕಾಪಟ್ಟೆ ವೈರಲ್‌

    ಭಾರತ ಬೌಲಿಂಗ್‌ಗೆ ಇಳಿದಾಗ ಚೆಂಡು ಬದಲಾಗುತ್ತದೆ. ಬಹುಶಃ ಐಸಿಸಿ ಅಥವಾ ಬಿಸಿಸಿಐ ಭಾರತಕ್ಕೆ ವಿಶೇಷ ಚೆಂಡನ್ನು ನೀಡಬಹುದು ಅನ್ನಿಸುತ್ತದೆ. ಅಲ್ಲದೇ ಭಾರತ ತೆಗೆದುಕೊಳ್ಳುವ ಡಿಆರ್‌ಎಸ್‌ ನಿರ್ಧಾರಗಳು ತಮಗೆ ಫೇವರ್‌ ಆಗಿಯೇ ಬರುತ್ತಿದ್ದು, 3ನೇ ಅಂಪೈರ್‌ ಕೂಡ ಭಾರತದ ಪರವಾಗಿಯೇ ಇದ್ದಾರೆ ಅನ್ನಿಸುತ್ತಿದೆ. ಇದರ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: World Cup 2023: ಲಂಕಾಗೆ ಬೆಂಕಿ ಹಚ್ಚಿ ನಂ.1 ಪಟ್ಟಕ್ಕೇರಿದ ಶಮಿ

    ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಭಾರತ, ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ ಹಾಗೂ ಶ್ರೇಯಸ್‌ ಅಯ್ಯರ್‌ ಭರ್ಜರಿ ಬ್ಯಾಟಿಂಗ್‌ ನೆರವಿನಿಂದ 50 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 357 ರನ್‌ ಗಳಿಸಿತ್ತು. 358 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ಲಂಕಾ ಪಡೆ 19.4 ಓವರ್‌ಗಳಲ್ಲಿ ಕೇವಲ 55 ರನ್‌ಗಳಿಗೆ ನೆಲಕಚ್ಚಿತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದುರ್ಬಲರಂತೆ ಬಂದರೂ ಕೋಚ್ ಉತ್ತಮ ತರಬೇತಿ ನೀಡಿದ್ರು- ಮುಷ್ಫಿಕರ್ ರಹೀಮ್

    ದುರ್ಬಲರಂತೆ ಬಂದರೂ ಕೋಚ್ ಉತ್ತಮ ತರಬೇತಿ ನೀಡಿದ್ರು- ಮುಷ್ಫಿಕರ್ ರಹೀಮ್

    ನವದೆಹಲಿ: ಟಿ-20 ಸರಣಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶವು ಭಾರತವನ್ನು 7 ವಿಕೆಟ್‌ಗಳಿಂದ ಸೋಲಿಸಿ, ಐತಿಹಾಸಿಕ ಗೆಲುವಿಗೆ ಸಾಕ್ಷಿಯಾಯಿತು. ದೆಹಲಿಯ ವಾಯುಮಾಲಿನ್ಯವು ಗಂಭೀರ ಮಟ್ಟದಲ್ಲಿರುವುದರಿಂದ ಆರೋಗ್ಯ ತುರ್ತು ಪರಿಸ್ಥಿತಿ ಎದುರಾಗಿದೆ. ಬಾಂಗ್ಲಾ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದ್ದ ಮುಷ್ಫಿಕರ್ ರಹೀಮ್, ಇದು ನನಗೆ ವಿಶೇಷ ವಿಷಯವಲ್ಲ. ಮಾಲಿನ್ಯಕ್ಕಿಂತ ಭಾರತೀಯ ಬೌಲರ್‌ಗಳನ್ನು ಎದುರಿಸುವ ಬಗ್ಗೆ ನನಗೆ ಹೆಚ್ಚು ಚಿಂತೆ ಇತ್ತು ಎಂದು ಹೇಳಿಕೊಂಡಿದ್ದಾರೆ.

    ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆಯುವಾಗ ಮಾತನಾಡಿದ ಮುಷ್ಫಿಕರ್ ರಹೀಮ್, ನಾವು ಪರಿಸ್ಥಿತಿಯ ಬಗ್ಗೆ ಚಿಂತಿಸದೆ ಪಂದ್ಯವನ್ನು ಆಡಿದ್ದೇವೆ. ಭಾರತಕ್ಕೆ ಭೇಟಿ ನೀಡಿದಾಗಿನಿಂದಲೂ ಇದೇ ರೀತಿಯ ಹವಾಮಾನವನ್ನು ಎದುರಿಸಿದ್ದೇವೆ. ಅದಕ್ಕಾಗಿಯೇ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದೇವೆ. ಭಾರತದ ನೆಲದಲ್ಲಿಯೇ ಟೀಂ ಇಂಡಿಯಾವನ್ನು ಸೋಲಿಸಿದ್ದೇವೆ. ಇದಕ್ಕಿಂತ ಉತ್ತಮ ಸಾಧನೆ ಮತ್ತೊಂದಿಲ್ಲ. ಈ ಪಂದ್ಯದಲ್ಲಿ ನನಗೆ ಸೌಮ್ಯ ಸರ್ಕಾರ್ ಸಾಥ್ ಸಾಥ್ ನೀಡಿ ತಂಡದ ಗೆಲುವಿಗೆ ಅವಕಾಶ ಮಾಡಿಕೊಟ್ಟರು ಎಂದು ತಿಳಿಸಿದರು. ಇದನ್ನೂ ಓದಿ: ಕ್ಯಾಚ್ ಡ್ರಾಪ್, ಕೊನೆಯಲ್ಲಿ ಸತತ 4‌ ಬೌಂಡರಿ – ಗೆದ್ದು ಇತಿಹಾಸ ನಿರ್ಮಿಸಿದ ಬಾಂಗ್ಲಾ

    ನಾವು ಇಲ್ಲಿಗೆ ಬಂದಿರುವುದು ದುರ್ಬಲರಂತೆ. ಕಳೆದ ಮೂರು ವಾರಗಳಲ್ಲಿ ತಂಡದ ಕೋಚ್ ನಮಗೆ ಉತ್ತಮ ತರಬೇತಿ ನೀಡಿದ್ದಾರೆ. ಇದಕ್ಕಾಗಿ ನಾನು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದರು.

    ಟಿ-20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡವು ಬಾಂಗ್ಲಾದೇಶಕ್ಕೆ 149 ರನ್‌ಗಳ ಗುರಿ ನೀಡಿತ್ತು. ಇದನ್ನು ಬಾಂಗ್ಲಾದೇಶದ ತಂಡವು 19.3 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 154 ರನ್ ಹೊಡೆದು ಜಯಗಳಿಸಿತು. ಬಾಂಗ್ಲಾ ಪರ ಮುಷ್ಫಿಕರ್ ರಹೀಮ್ ಅತ್ಯಧಿಕ (60 ರನ್) ಮತ್ತು ಸೌಮ್ಯ ಸರ್ಕಾರ್ 39 ರನ್ ಗಳಿಸಿದ್ದರು. ಮೂರನೇ ವಿಕೆಟಿಗೆ ಇವರಿಬ್ಬರೂ 60 ರನ್ ಜೊತೆಯಾಟವಾಡಿ ಬಾಂಗ್ಲಾ ತಂಡವನ್ನು ಗೆಲುವಿನ ಸಮೀಪ ತಂದರು.

    ವಾಯುಮಾಲಿನ್ಯದ ವಿಪರೀತ ಪರಿಸ್ಥಿತಿಯ ಮಧ್ಯೆ ಅದ್ಭುತವಾಗಿ ಆಡಿದ ಮತ್ತು ಪ್ರದರ್ಶನ ನೀಡಿದ ಉಭಯ ತಂಡಗಳಿಗೆ ಬಿಸಿಸಿಐ ನೂತನ ಅಧ್ಯಕ್ಷ ಸೌರವ್ ಗಂಗೂಲಿ ಧನ್ಯವಾದ ತಿಳಿಸಿದ್ದಾರೆ.

    ಸ್ಟೇಡಿಯಂ ಭರ್ತಿ:
    ದೆಹಲಿಯಲ್ಲಿ ಪಂದ್ಯಕ್ಕೂ ಮುನ್ನ ಮಾಲಿನ್ಯದ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು. ಇದರ ಹೊರತಾಗಿಯೂ ಅರುಣ್ ಜೇಟ್ಲಿ ಕ್ರೀಡಾಂಗಣವು ಭಾನುವಾರ ಸಂಪೂರ್ಣ ಭರ್ತಿಯಾಗಿತ್ತು. ಈ ಮಾಲಿನ್ಯವು ಆಟಗಾರರಿಗೆ ಮತ್ತು ಪ್ರೇಕ್ಷಕರಿಗೆ ಅಪಾಯಕಾರಿ ಎಂದು ಹೇಳಲಾಗಿತ್ತು. ಆದರೆ ಇದು ಕ್ರಿಕೆಟ್ ಅಭಿಮಾನಿಗಳ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಜೊತೆಗೆ ಪಂದ್ಯ ಪ್ರಾರಂಭವಾಗುವ ಮುನ್ನ ಸುಮಾರು 46 ಸಾವಿರ ಪ್ರೇಕ್ಷಕರ ಸಾಮರ್ಥ್ಯ ಹೊಂದಿರುವ ಕ್ರೀಡಾಂಗಣ ಸಂಪೂರ್ಣವಾಗಿ ತುಂಬಿತ್ತು.