Tag: Indian Bank

  • ಎಟಿಎಂಗಳಲ್ಲಿ ಸಿಗ್ತಿಲ್ಲ 2 ಸಾವಿರ ರೂ. ನೋಟು- ಮೂರ್ನಾಲ್ಕು ತಿಂಗಳಿಂದ ಪಿಂಕ್ ನೋಟ್ ಮಾಯ

    ಎಟಿಎಂಗಳಲ್ಲಿ ಸಿಗ್ತಿಲ್ಲ 2 ಸಾವಿರ ರೂ. ನೋಟು- ಮೂರ್ನಾಲ್ಕು ತಿಂಗಳಿಂದ ಪಿಂಕ್ ನೋಟ್ ಮಾಯ

    ಬೆಂಗಳೂರು: ಇಷ್ಟು ದಿನ 2 ಸಾವಿರ ರೂಪಾಯಿ ಮುಖಬೆಲೆಯ ನೋಟು ಬ್ಯಾನ್ ಆಗುತ್ತೆ ಎಂಬ ಮಾತುಗಳು ಕೇಳಿಬಂದಿತ್ತು. ಆದರೆ ಈಗ ಅದಕ್ಕೆ ಪುಷ್ಠಿ ಎಂಬಂತೆ ಮಾರ್ಚ್ 1ರಿಂದ ಎಟಿಎಂಗಳಲ್ಲಿ 2 ಸಾವಿರ ರೂಪಾಯಿ ಮುಖಬೆಲೆಯ ನೋಟು ಸಿಗಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಹೀಗಾಗಿ ಬೆಂಗಳೂರಿನಲ್ಲಿ ಎಟಿಎಂಗಳಲ್ಲಿ 2 ಸಾವಿರ ರೂಪಾಯಿ ನೋಟು ಸಿಗ್ತಿಲ್ಲ ಎಂಬುದು ಜನರ ಮಾತಾಗಿದ್ದು, ಸಿಲಿಕಾನ್ ಸಿಟಿಯ ಎಟಿಎಂಗಳಲ್ಲಿ 2 ಸಾವಿರ ರೂಪಾಯಿ ನೋಟ್ ಸಿಗುತ್ತಾ ಇದೆಯಾ? ಇಲ್ವ? ಎಂದು ಪಬ್ಲಿಕ್ ಟಿವಿ ನಡೆಸಿದ ರಿಯಾಲಿಟಿ ಚೆಕ್‍ನಲ್ಲಿ ಆತಂಕಕಾರಿ ವಿಚಾರ ಬಯಲಾಗಿದೆ.

    ಇಂಡಿಯನ್ ಬ್ಯಾಂಕ್ ಹೇಳಿದ್ದೇನು?
    ಫೆ. 17ರಂದು ಇಂಡಿಯನ್ ಬ್ಯಾಂಕಿನ ಲೆಂಡರ್ಸ್ ಡಿಜಿಟಲ್ ಬ್ಯಾಂಕಿಂಗ್ ವಿಭಾಗ ಸುತ್ತೋಲೆ ಹೊರಡಿಸಿದೆ. 2000 ರೂಪಾಯಿ ಮುಖಬೆಲೆಯ ನೋಟುಗಳು ಭಾರಿ ಮೊತ್ತದ್ದಾಗಿದ್ದು, ಇದರಿಂದ ಚಿಲ್ಲರೆ ವ್ಯಾಪಾರಿಗಳು ಹಾಗೂ ಗ್ರಾಹಕರು ಚೇಂಜ್ ಪಡೆಯಲು ಸಮಸ್ಯೆ ಎದುರಿಸುತ್ತಿದ್ದಾರೆ. ಆದ್ದರಿಂದ ಈ ನೋಟುಗಳ ವ್ಯವಹಾರವನ್ನು ನಮ್ಮ ಬಾಂಕಿನಲ್ಲಿ ಸ್ಥಗಿತಗೊಳಿಸಲಾಗಿದ್ದು, ಕೇವಲ 100, 200 ಹಾಗೂ 500 ರೂಪಾಯಿ ಮುಖಬೆಲೆಯ ನೋಟುಗಳು ಮಾತ್ರ ನಮ್ಮ ಎಟಿಎಂಗಳಲ್ಲಿ ಲಭ್ಯವಿರುತ್ತೆ ಎಂದು ತಿಳಿಸಿತ್ತು. ಅಲ್ಲದೇ ಮಾರ್ಚ್ 1ರಿಂದ 2000 ರೂಪಾಯಿ ನೋಟು ನಮ್ಮಲ್ಲಿ ಸಿಗಲ್ಲ ಎಂದು ಹೇಳಿತ್ತು.

    ಕಳೆದ ನಾಲ್ಕೈದು ತಿಂಗಳಿನಿಂದ ಎಟಿಎಂಗಳಲ್ಲಿ 2 ಸಾವಿರ ನೋಟು ಹೆಚ್ಚಾಗಿ ಸಿಗುತ್ತಿಲ್ಲ. 2 ಸಾವಿರ ರೂಪಾಯಿ ನೋಟು ಸಿಗ್ತಿಲ್ಲ ಎಂದು ಗ್ರಾಹಕರು ಮಾತಾಡಿಕೊಳ್ಳುತ್ತಿದ್ದರು. ಅದಕ್ಕೆ ಪುಷ್ಠಿ ಎಂಬಂತೆ ಇಂಡಿಯಾನ್ ಬ್ಯಾಂಕ್ ಆತಂಕಕಾರಿ ಮಾಹಿತಿ ನೀಡಿದೆ. ಇದರಿಂದ ಗ್ರಾಹಕರು ಆತಂಕಕ್ಕೆ ಒಳಗಾಗಿದ್ದಾರೆ. ಹೀಗಾಗಿ ಬೆಂಗಳೂರಿನ ಎಟಿಎಂಗಳಲ್ಲಿ 2 ಸಾವಿರ ರೂಪಾಯಿ ನೋಟ್ ಸಿಗುತ್ತಾ ಇದೆಯಾ? ಇಲ್ವ ಎಂದು ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ ಮಾಡಿದಾಗ ಎರಡು ಸಾವಿರ ನೋಟ್ ನಾಪತ್ತೆಯಾಗಿರೋದು ಪತ್ತೆಯಾಗಿದೆ.

    ಸ್ಥಳ- ಮತ್ತಿಕೆರೆ
    ಮತ್ತಿಕೆರೆ ಸರ್ಕಲ್‍ನಲ್ಲಿ ಇರುವ ಎಸ್‍ಬಿಐ ಎಟಿಎಂನಲ್ಲಿ 2 ಸಾವಿರ ನೋಟ್ ಸಿಗುತ್ತಿದೆಯಾ? ಇಲ್ವಾ ಎಂದು ಪಬ್ಲಿಕ್ ಟಿವಿ ತಂಡ ರಿಯಾಲಿಟಿ ಚೆಕ್ ಮಾಡೋದಕ್ಕೆ ಮುಂದಾಯಿತು. ಎಟಿಎಂನಲ್ಲಿ ಹಣ ಡ್ರಾ ಮಾಡುತ್ತಿದ್ದ ಗ್ರಾಹಕರನ್ನು ಕೂಡ ಮಾತಾಡಿಸಿದೇವು. ಈ ಎಟಿಎಂನಲ್ಲಿ 2 ಸಾವಿರ ರೂಪಾಯಿ ಡ್ರಾ ಮಾಡಿದಾಗ 2 ಸಾವಿರ ರೂಪಾಯಿ ಮುಖಬೆಲೆಯ ನೋಟು ಬರಲಿಲ್ಲ. ಬದಲಿಗೆ ಬರೀ 500 ರೂಪಾಯಿ ನೋಟುಗಳು ಮಾತ್ರ ಬಂದವು. ಈ ಬಗ್ಗೆ ಪ್ರತಿಕ್ರಿಯಿಸಿದ ಸ್ಥಳೀಯರು ಕಳೆದ 20 ದಿನಗಳಿಂದಲೂ 2 ಸಾವಿರ ರೂಪಾಯಿ ನೋಟು ಸಿಗುತ್ತಿಲ್ಲ ಎಂದರು.

    ಸ್ಥಳ- ಯಲಹಂಕ
    ಇತ್ತ ಯಲಹಂಕ ಸರ್ಕಲ್‍ನಲ್ಲಿ ಕೂಡ ಕೊಟಕ್ ಮಹಿಂದ್ರಾ ಬ್ಯಾಂಕ್ ಎಟಿಎಂನಲ್ಲಿ 2 ಸಾವಿರ ರೂಪಾಯಿ ಮುಖಬೆಲೆಯ ನೋಟು ಬರುತ್ತಾ ಅಂತಾ ಚೆಕ್ ಮಾಡಿದ್ದೆವು. ಆದರೆ ಅಲ್ಲಿ ಕೂಡ ಬರೀ 500 ರೂಪಾಯಿ ನೋಟು ಬಂದವು. ಯಾಕೆ 2 ಸಾವಿರ ರೂಪಾಯಿ ನೋಟು ಸಿಗ್ತಿಲ್ಲ ಎಂದು ಸೆಕ್ಯೂರಿಟಿನಾ ಕೇಳುದರೆ, ಇಲ್ಲಿ ನಾಲ್ಕೈದು ತಿಂಗಳಿಂದ 2 ಸಾವಿರ ನೋಟು ಬರುತ್ತಿಲ್ಲ. ಮತ್ತೆ ಡೆಪಾಸಿಟ್ ಕೂಡ ಮಾಡ್ತಿಲ್ಲ ಎಂದು ತಿಳಿಸಿದರು.

    ಸ್ಥಳ- ಹೆಬ್ಬಾಳ
    ಮತ್ತಿಕೆರೆ ,ಯಲಹಂಕ ಎರಡು ಕಡೆ ಎಟಿಎಂನಲ್ಲೂ ಕೂಡ 2 ಸಾವಿರ ರೂಪಾಯಿ ನೋಟ್ ಬರಲಿಲ್ಲ. ಬಳಿಕ ಹೆಬ್ಬಾಳದ ಐಸಿಐಸಿಐ ಬ್ಯಾಂಕ್‍ನ ಎಟಿಎಂನಲ್ಲಿ ರಿಯಾಲಿಟಿ ಚೆಕ್ ಮಾಡಿದಾಗ, ಅಲ್ಲಿ ಕೂಡ 2 ಸಾವಿರ ರೂಪಾಯಿ ನೋಟು ಸಿಗಲಿಲ್ಲ.

    ಸ್ಥಳ-ಮಲ್ಲೇಶ್ವರಂ
    ಬಳಿಕ ಅಲ್ಲಿಂದ ಮಲ್ಲೇಶ್ವರ ಕಡೆ ಹೋಗಿ ಒಂದು ಎಟಿಎಂನಲ್ಲಿ ಎರಡು ಸಾವಿರ ನೋಟು ಡ್ರಾ ಮಾಡಿಕೊಳ್ಳಲು ಮುಂದಾದೆವು. ಆದರೆ ಇಲ್ಲಿಯೂ ಅದೇ ಪರಸ್ಥಿತಿ, ಕೇವಲ 100, 200 ಹಾಗೂ 500 ರೂಪಾಯಿ ಮುಖಬೆಲೆಯ ನೋಟುಗಳೇ ಎಂಟಿಎಂನಲ್ಲಿ ಸಿಕ್ಕಿತು.

    ಹೀಗೆ ಬೆಂಗಳೂರಿನ ಬಹುತೇಕ ಎಟಿಎಂಗಳಲ್ಲಿ 2 ಸಾವಿರ ನೋಟು ಸಿಗಲಿಲ್ಲ. ಬರೀ 500, 200, 100 ರೂಪಾಯಿ ಮುಖಬೆಲೆಯ ನೋಟುಗಳು ಸಿಗುತ್ತಿವೆ. ಈ ಪರಿಸ್ಥಿತಿ ನಾಲ್ಕೈದು ತಿಂಗಳಿಂದನೂ ಇದೆ. ನೋಟು ಸಿಗುತ್ತಿಲ್ಲ ಎಂಬ ಮಾಹಿತಿ ಸದ್ಯ ಗ್ರಾಹಕರಲ್ಲಿ ಸಾಕಷ್ಟು ಪ್ರಶ್ನೆ ಹುಟ್ಟುಹಾಕಿದ್ದು, ಮುಂದಿನ ದಿನಗಳಲ್ಲಿ 2 ಸಾವಿರ ನೋಟ್ ಬ್ಯಾನ್ ಆಗುತ್ತಾ ಎಂಬ ಅನುಮಾನಗಳು ಕೂಡ ಗ್ರಾಹಕರಲ್ಲಿ ಕಾಡುತ್ತಿದೆ.

  • ವೃದ್ಧ ದಂಪತಿಗೆ ಬ್ಯಾಂಕ್ ಸಿಬ್ಬಂದಿಯಿಂದ 10 ಲಕ್ಷ ರೂ. ಮೋಸ!

    ವೃದ್ಧ ದಂಪತಿಗೆ ಬ್ಯಾಂಕ್ ಸಿಬ್ಬಂದಿಯಿಂದ 10 ಲಕ್ಷ ರೂ. ಮೋಸ!

    – ನಕಲಿ ಸಹಿ ಮಾಡಿ ಹಣ ಡ್ರಾ ಮಾಡಿದ್ನಾ ಕ್ಯಾಶಿಯರ್?

    ಬಳ್ಳಾರಿ: ಬ್ಯಾಂಕ್ ನಲ್ಲಿ ಹಣ ಇಟ್ರೆ ಫುಲ್ ಸೇಫ್ ಆಗಿರುತ್ತೆ ಅಂತಾರೆ. ಆದ್ರೆ ಬ್ಯಾಂಕ್ ನಲ್ಲಿಟ್ಟ 10 ಲಕ್ಷ ಹಣವನ್ನ ಬ್ಯಾಂಕ್ ಸಿಬ್ಬಂದಿಯೇ ಡ್ರಾ ಮಾಡಿ ವೃದ್ಧ ದಂಪತಿಗೆ ಮೋಸ ಮಾಡಿರುವ ಆರೋಪವೊಂದು ಕೇಳಿ ಬಂದಿದೆ.

    80 ವರ್ಷ ಇಳಿವಯಸ್ಸಿನ ಕೆಟಿ ಹನುಮಂತಪ್ಪ ಹಾಗೂ ಝಾನ್ಸಿ ಲಕ್ಷಿಭಾಯಿ ಬಳ್ಳಾರಿಯ ಇಂಡಿಯನ್ ಬ್ಯಾಂಕ್ ನಲ್ಲಿ ಕಳೆದ 25 ವರ್ಷಗಳಿಂದ ವ್ಯವಹಾರ ನಡೆಸುತ್ತಿದ್ದಾರೆ. 2017ರ ಸಪ್ಟೆಂಬರ್ 6ರಂದು ಬ್ಯಾಂಕಿನ ತಮ್ಮ ಅಕೌಂಟಗೆ ಹತ್ತು ಲಕ್ಷ ರೂಪಾಯಿ ಡೆಪಾಸಿಟ್ ಮಾಡಿದ್ದಾರೆ. ಆದ್ರೆ ಇವರು ಮಾಡಿದ ಡಿಪಾಸಿಟ್ ಹಣವನ್ನು ಬ್ಯಾಂಕ್ ಸಿಬ್ಬಂದಿಯೊಬ್ರು ನಕಲಿ ಸಹಿ ಮಾಡಿ ಸೆಪ್ಟೆಂಬರ್ 19ರಂದು ಹಣ ವಿತ್ ಡ್ರಾ ಮಾಡಿದ್ದಾರೆ ಅಂತ ವಕೀಲ ರವೀಂದ್ರ ಆರೋಪಿಸಿದ್ದಾರೆ.

    ಈ ವೃದ್ಧ ದಂಪತಿ ಬ್ಯಾಂಕಿಗೆ ಹೋದಾಗೆಲ್ಲಾ ಬ್ಯಾಂಕ್ ಕ್ಯಾಶಿಯರ್ ಚಂದ್ರಪ್ಪ ಎಂಬಾತ ಇವರ ಚೆಕ್ ಬುಕ್ ಪಡೆದು ಹಣ ವಿತ್ ಡ್ರಾ ಮಾಡಿಕೊಡುತ್ತಿದ್ದರಂತೆ. ದಂಪತಿಯ ನಂಬಿಕೆಯನ್ನೇ ಬಂಡವಾಳ ಮಾಡಿಕೊಂಡ ಚಂದ್ರಪ್ಪ ಚೆಕ್ ಪಡೆದು ನಕಲಿ ಸಹಿ ಮಾಡಿ ಹಣ ವಿತ್ ಮಾಡಿದ್ದಾನೆ ಅನ್ನೋದು ದಂಪತಿ ಆರೋಪವಾಗಿದೆ.

    ಈಗ ಹಣಕ್ಕಾಗಿ ಬಳ್ಳಾರಿ ಎಸ್‍ಪಿ ಮೊರೆ ಹೋಗಿರುವ ವೃದ್ಧ ದಂಪತಿ ಬ್ಯಾಂಕ್ ಸಿಬ್ಬಂದಿ ವಿರುದ್ಧ ದೂರು ಕೊಟ್ಟಿದ್ದಾರೆ. ಈ ಬಗ್ಗೆ ಮ್ಯಾನೇಜರ್ ಶಿವಕುಮಾರ್ ನನ್ನು ಕೇಳಿದ್ರೆ, ಬ್ಯಾಂಕಿನಲ್ಲಿ ಈ ರೀತಿ ಮೋಸ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

    ಇಷ್ಟೇ ಅಲ್ಲ, ಬ್ಯಾಂಕ್‍ನಲ್ಲಿ ಉಳಿದ ಎಫ್‍ಡಿ ಹಣ ಡ್ರಾ ಮಾಡಲು ಹೋದರೆ `ವಯಸ್ಸಾಗಿದೆ ನಮ್ಮ ಕೈ ನಡುಗುತ್ತೆ ಹೀಗಾಗಿ ಸಹಿ ವ್ಯತ್ಯಾಸವಾಗಿರಬಹುದು’ ಅನ್ನೋ ಪತ್ರಕ್ಕೆ ಸಹಿ ಕೇಳ್ತಿದ್ದಾರಂತೆ. ಇನ್ನಾದ್ರೂ ಇಳಿವಯಸ್ಸಿನ ಈ ದಂಪತಿಗೆ ಆಗ್ತಿರೋ ಮೋಸವನ್ನು ತಡೆಗಟ್ಟಲು ಪೊಲೀಸರು ಮುಂದಾಗಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 100 ರೂ. ಡ್ರಾ ಮಾಡಿದ್ರೆ, 2 ಸಾವಿರ ರೂ. ನೋಟು ಬಂತು

    100 ರೂ. ಡ್ರಾ ಮಾಡಿದ್ರೆ, 2 ಸಾವಿರ ರೂ. ನೋಟು ಬಂತು

    -ಕೆಲವೇ ಕ್ಷಣಗಳಲ್ಲಿ 8.71 ಲಕ್ಷ ಹಣ ಡ್ರಾ

    ಪಾಟ್ನಾ: ಎಟಿಎಂನಲ್ಲಿ ತಾಂತ್ರಿಕ ತೊಂದರೆಯಿಂದಾಗಿ ಬಿಹಾರದ ಹನಾಬಾದ್‍ನಲ್ಲಿ 100 ರೂ. ನೋಟಿನ ಬದಲಾಗಿ 2000 ರೂ. ನೋಟು ಬಂದಿದೆ.

    ಶುಕ್ರವಾರ ಜಹನಾಬಾದ್ ನಗರದ ಇಂಡಿಯನ್ ಬ್ಯಾಂಕ್‍ನ ಎಟಿಎಂನಲ್ಲಿ ನೂರು ರೂಪಾಯಿ ನೋಟಿನ ಬದಲಾಗಿ 2 ಸಾವಿರ ರೂ. ಮುಖಬೆಲೆಯ ನೋಟುಗಳು ಬಂದಿವೆ. ಮೊದಲಿಗೆ ಸುದ್ದಿ ಹರಡುತ್ತಿದ್ದಂತೆ ಒಂದು ಕ್ಷಣ ಜನರು ನಂಬಿರಲಿಲ್ಲ. ಎಟಿಎಂ ಬಳಿ ಬಂದಾಗ 100 ರೂ. ಪಡೆಯಲು ಸೂಚಿಸಿದಾಗ 2 ಸಾವಿರ ರೂ. ನೋಟ್ ಬಂದಿದೆ.

    ಸುದ್ದಿ ತಿಳಿಯುತ್ತಿದ್ದಂತೆ ಜನರು ಎಟಿಎಂ ಮುಂದೆ ಹಣ ಪಡೆಯುವಲ್ಲಿ ಸರದಿ ಸಾಲಿನಲ್ಲಿ ನಿಂತಿದ್ದಾರೆ. ಎಟಿಎಂನಲ್ಲಿದ್ದ 436 ನೋಟುಗಳು ಖಾಲಿ ಆಗುವರೆಗೂ ಜನರು ಸರತಿ ಸಾಲಿನಲ್ಲಿ ನಿಂತಿದ್ದರು ಎಂದು ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದೆ.

    ಎಟಿಎಂನಲ್ಲಿ ಹಣ ಹಾಕುವ ಅಧಿಕಾರಿಯ ತಪ್ಪಿನಿಂದಾಗಿ ಈ ಘಟನೆ ನಡೆದಿದೆ. ಎಟಿಎಂನಲ್ಲಿ ಹಣ ಹಾಕುವಾಗ ಮೂರು ಕೆಸೆಟ್ (ಬಾಕ್ಸ್) ಗಳು ಇರುತ್ತವೆ. 100 ರೂ., 500 ರೂ. ಮತ್ತು 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನಿಡುವ ಮೂರು ಕೆಸೆಟ್ ಇರುತ್ತವೆ. ಯಂತ್ರದ ಕೆಸೆಟ್‍ನಲ್ಲಿ ಹಣ ಇಡುವಾಗ ಅಧಿಕಾರಿ 100 ರೂ. ಸ್ಥಾನದಲ್ಲಿ 2 ಸಾವಿರ ರೂ. ನೋಟುಗಳನ್ನು ಇಟ್ಟಿದ್ದಾರೆ. ಬರೋಬ್ಬರಿ 8,72,000 ರೂ. ಹಣವನ್ನು ಜನರು ಡ್ರಾ ಮಾಡಿದ್ದಾರೆ. ಎಲ್ಲ ಗ್ರಾಹಕರ ಮಾಹಿತಿ ನಮ್ಮ ಬಳಿ ಲಭ್ಯವಿದ್ದು, ಎಲ್ಲರಿಂದಲೂ ಹಣ ಹಿಂಪಡೆಯಲಾಗುವುದು ಎಂದು ಇಂಡಿಯನ್ ಬ್ಯಾಂಕ್‍ನ ಮ್ಯಾನೇಜರ್ ಅಭಿಷೇಕ್ ಕುಮಾರ್ ತಿಳಿಸಿದ್ದಾರೆ.