Tag: Indian Athletes

  • Paris Paralympics 2024 | ಭಾರತ ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನ – ದಾಖಲೆಯ 20 ಪದಕ

    Paris Paralympics 2024 | ಭಾರತ ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನ – ದಾಖಲೆಯ 20 ಪದಕ

    ಪ್ಯಾರಿಸ್: ಈ ಬಾರಿ ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ನಲ್ಲಿ (Paris Paralympics 2024) ಚಿನ್ನದ ಪದಕದೊಂದಿಗೆ ತನ್ನ ಬೇಟೆ ಆರಂಭಿಸಿದ ಭಾರತದ ಅದ್ಭುತ ಪ್ರದರ್ಶನದೊಂದಿಗೆ ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನ ನೀಡಿದೆ. ಮಂಗಳವಾರ (ಆ.3) ಒಂದೇ ದಿನ 5 ಪದಕ ಗೆದ್ದಿದ್ದು, ಪ್ಯಾರಾಲಿಂಪಿಕ್ಸ್‌ನಲ್ಲೇ ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನ ನೀಡಿದೆ. ಸದ್ಯ ಭಾರತ ಪದಕ ಪಟ್ಟಿ 20ಕ್ಕೆ ಹೆಚ್ಚಾಗಿದೆ. ಈ ಮೂಲಕ ಟೋಕಿಯೊ ಕ್ರೀಡಾಕೂಟದಲ್ಲಿ ಗೆದ್ದಿದ್ದ 19 ಪದಕಗಳ ದಾಖಲೆ ಮುರಿದಿದೆ.

    ಮಂಗಳವಾರ ಭಾರತಕ್ಕೆ ಅಥ್ಲೆಟಿಕ್ಸ್‌ನ (Indian Athletes) ಜಾವಲಿನ್ ಎಸೆತದಲ್ಲಿ 2, ಹೈ ಜಂಪ್‌ನಲ್ಲಿ 2 ಹಾಗೂ ಮಹಿಳೆಯರ ಓಟದ ಸ್ಪರ್ಧೆಯಲ್ಲಿ 1 ಪದಕ ಲಭಿಸಿತು. ಸದ್ಯ ಭಾರತ 3 ಚಿನ್ನ, 7 ಬೆಳ್ಳಿ ಹಾಗೂ 10 ಕಂಚು ಜಯಿಸಿದೆ. ಟೋಕಿಯೋದಲ್ಲಿ ಭಾರತ 5 ಚಿನ್ನ, 8 ಬೆಳ್ಳಿ ಹಾಗೂ 6 ಕಂಚಿನ ಪದಕ ಗೆದ್ದಿತ್ತು. ಈ ಬಾರಿ ಕ್ರೀಡಾಕೂಟದಲ್ಲಿ ಇನ್ನೂ 4 ದಿನ ಬಾಕಿ ಇದ್ದು, ಭಾರತ ಮತ್ತಷ್ಟು ಪದಕ ಸಾಧನೆ ಮಾಡುವ ವಿಶ್ವಾಸದಲ್ಲಿದೆ.

    3ನೇ ಪದಕ ಗೆದ್ದ 3ನೇ ಅಥ್ಲಿಟ್‌:
    ಮರಿಯಪ್ಪನ್‌ ತಂಗವೇಲು ಭಾರತದ ಪರ ಪ್ಯಾರಾಲಿಂಪಿಕ್ಸ್‌ನಲ್ಲಿ ಮೂರು ಬಾರಿ ಪದಕ ಗೆದ್ದ 3ನೇ ಕ್ರೀಡಾಪಟು ಎನಿಸಿಕೊಂಡರು. ಪುರುಷರ ಜಾವಲಿನ್‌ನಲ್ಲಿ ದೇವೇಂದ್ರ ಝಝಾರಿಯಾ 2 ಚಿನ್ನ, 1 ಬೆಳ್ಳಿ, ಶೂಟಿಂಗ್‌ನಲ್ಲಿ ಅವನಿ ಲೇಖರಾ 2 ಚಿನ್ನ, ಕಂಚು ಗೆದ್ದಿದ್ದಾರೆ. ತಂಗವೇಲು 2016ರ ರಿಯೋ ಕ್ರೀಡಾಕೂಟದಲ್ಲಿ ಚಿನ್ನ, 2020ರ ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಮುಡಗೇರಿಸಿಕೊಂಡಿದ್ದರು. ಇದನ್ನೂ ಓದಿ: Paralympics | ಮನೀಶಾ ಕಂಚಿನ ಮಿಂಚು – ಬ್ಯಾಡ್ಮಿಂಟನ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ!

    400 ಮೀ. ಓಟದಲ್ಲಿ ದೀಪ್ತಿಗೆ ಕಂಚು:
    ಮಂಗಳವಾರ ರಾತ್ರಿ ನಡೆದ ಮಹಿಳೆಯರ 400 ಮೀಟರ್‌ ಟಿ20 ವಿಭಾಗದಲ್ಲಿ ದೀಪ್ತಿ ಜೀವಾಂಗಿ 55.82 ಸೆಕೆಂಡುಗಳಲ್ಲಿ ತಮ್ಮ ಗುರಿ ತಲುಪಿ ಕಂಚಿನ ಪದಕಕಕ್ಕೆ ಕೊರಳೊಡ್ದಿದರು. ಇದನ್ನೂ ಓದಿ: Paris Paralympics | ಡಿಸ್ಕಸ್ ಥ್ರೋನಲ್ಲಿ ಭಾರತದ ಯೋಗೇಶ್‌ ಕಥುನಿಯಾಗೆ ಬೆಳ್ಳಿ

    ಕಂಚು ಗೆದ್ದ ನಿತ್ಯಶ್ರೀ:
    ಬ್ಯಾಡ್ಮಿಂಟನ್‌ನಲ್ಲಿ ಈ ಬಾರಿ ಕ್ರೀಡಾಕೂಟದಲ್ಲಿ ಭಾರತಕ್ಕೆ ಮತ್ತೊಂದು ಪದಕ ಬಂದಿದೆ. ಸೋಮವಾರ ಮಧ್ಯರಾತ್ರಿ ಮಹಿಳೆಯರ ಸಿಂಗಲ್ಸ್‌ನ ಎಎಚ್6 ವಿಭಾಗ (ಕುಬ್ಬ ಕ್ರೀಡಾಪಟುಗಳು ಸ್ಪರ್ಧಿಸುವ ವಿಭಾಗ)ದಲ್ಲಿ ನಿತ್ಯಶ್ರೀ ಶಿವನ್ ಕಂಚಿನ ಪದಕ ತಮ್ಮದಾಗಿಸಿಕೊಂಡರು. ಇದನ್ನೂ ಓದಿ: Paris Paralympics 2024 | ಭಾರತಕ್ಕೆ ಮತ್ತೊಂದು ಪದಕ – ಕಂಚಿಗೆ ರುಬಿನಾ ಶೂಟ್‌

    ಮನೀಶಾ ಕಂಚಿನ ಮಿಂಚು
    ಬ್ಯಾಡ್ಮಿಂಟನ್‌ನಲ್ಲಿ ಮಹಿಳೆಯರ ಸಿಂಗಲ್ಸ್ ಎಸ್‌ಯು5 ವಿಭಾಗದಲ್ಲಿ ಭಾರತದ ಮನೀಶಾ ರಾಮದಾಸ್ (Manisha Ramadass) ಕಂಚಿನ ಪದಕ ಗೆದ್ದು ಬೀಗಿದರು. ಲಾ ಚಾಪೆಲ್ಲೆ ಅರೆನಾ ಕೋರ್ಟ್ 3 ರಲ್ಲಿ ಡೆನ್ಮಾರ್ಕ್‌ನ ಕ್ಯಾಥರೀನ್ ರೋಸೆಂಗ್ರೆನ್ ಅವರನ್ನು 25 ನಿಮಿಷಗಳಲ್ಲಿ 21-12, 21-8 ಸೆಟ್‌ಗಳಿಂದ ಸೋಲಿಸುವ ಮೂಲಕ ಕಂಚಿನ ಪದಕಕ್ಕೆ ಕೊರಳೊಡ್ಡಿದರು.

    ಡಿಸ್ಕಸ್ ಥ್ರೋನಲ್ಲಿ ಯೋಗೇಶ್‌ ಕಥುನಿಯಾಗೆ ಬೆಳ್ಳಿ:
    ಭಾರತದ ಯೋಗೇಶ್‌ ಕಥುನಿಯಾ (Yogesh Kathuniya) ಅವರು ಪುರುಷರ ಡಿಸ್ಕಸ್‌ ಥ್ರೋ ಎಫ್‌-56 ಸ್ಪರ್ಧೆಯಲ್ಲಿ 2ನೇ ಸ್ಥಾನ ಪಡೆಯುವ ಮೂಲಕ ಬೆಳ್ಳಿ ಪದಕಕ್ಕೆ ಕೊರಳೊಡ್ದಿದರು. 42.22 ಮೀಟರ್‌ ಡಿಸ್ಕಸ್‌ ಎಸೆಯುವ (Discus Throw, )ಮೂಲಕ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದರು.

    ಇದಕ್ಕೂ ಮುನ್ನ 2023ರ ಅರ್ಜುನ ಪ್ರಶಸ್ತಿ ವಿಜೇತೆ, ಬಿಲ್ಲುಗಾರ್ತಿ ಶೀತಲ್ ದೇವಿ (Sheetal Devi), ಕ್ರೀಡಾಪಟುಗಳಾದ ನಿಶಾದ್‌ ಕುಮಾರ್‌ ಬೆಳ್ಳಿ, ಪ್ರೀತಿ ಪಾಲ್‌ ಕಂಚು, ಶೂಟರ್ ರುಬಿನಾ ಫ್ರಾನ್ಸಿಸ್‌ ಕಂಚು, ಶೂಟರ್‌ ಅವನಿ ಲೆಖರಾ ಚಿನ್ನ ಹಾಗೂ ಮೋನಾ ಅಗರ್ವಾಲ್‌ ಕಂಚಿನ ಪದಕ ಬಾಚಿಕೊಂಡರು. ಇದನ್ನೂ ಓದಿ: Paris Paralympics 2024 | ಭಾರತಕ್ಕೆ ಒಂದೇ ದಿನ 4 ಪದಕ – ಬೆಳ್ಳಿಗೆ ಮನೀಷ್ ನರ್ವಾಲ್‌ ಶೂಟ್‌

  • Asian Games 2023: ಅರುಣಾಚಲ ಪ್ರದೇಶದ ಮೂವರು ಅಥ್ಲೆಟ್‌ಗಳಿಗೆ ಪ್ರವೇಶ ನಿರಾಕರಿಸಿದ ಚೀನಾ

    Asian Games 2023: ಅರುಣಾಚಲ ಪ್ರದೇಶದ ಮೂವರು ಅಥ್ಲೆಟ್‌ಗಳಿಗೆ ಪ್ರವೇಶ ನಿರಾಕರಿಸಿದ ಚೀನಾ

    ಹ್ಯಾಂಗ್‌ಜೂ: ಚೀನಾದ (China) ಹ್ಯಾಂಗ್‌ಜೂನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ (Asian Games) ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ತೆರಳಬೇಕಿದ್ದ ಅರುಣಾಚಲ ಪ್ರದೇಶದ ಮೂವರು ವೂಶೂ ಕ್ರೀಡಾಪಟುಗಳಿಗೆ ಚೀನಾ ಪ್ರವೇಶ ನಿರಾಕರಿಸಿದೆ.

    10 ಆಟಗಾರರನ್ನೊಳಗೊಂಡ ತಂಡದಲ್ಲಿ ಮೂವರು ಮಹಿಳಾ ಆಟಗಾರರಿಗೆ ಪ್ರವೇಶ ನಿರಾಕರಿಸಿದ್ದು, ಉಳಿವರು ಹ್ಯಾಂಗ್‌ಜೂಗೆ ತೆರಳಿದ್ದಾರೆ. ವೂಶೂ ಕ್ರೀಡಾಪಟುಗಳಾದ ನೈಮನ್ ವಾಂಗ್ಸು, ಒನಿಲು ಟೆಗಾ ಮತ್ತು ಮೆಪುಂಗ್ ಲಾಮ್ಗು ಅವರ ಪ್ರವೇಶ ನಿರಾಕರಿಸಿದೆ. ಚೀನಾ ಅರುಣಾಚಲ ಪ್ರದೇಶದ (Arunachal Pradesh) ಕ್ರೀಡಾಪಟುಗಳಿಗೆ ಪ್ರವೇಶ ನಿರಾಕರಿಸಿದ ಬೆನ್ನಲ್ಲೇ ಮಾಹಿತಿ ಮತ್ತು ಪ್ರಸಾರ ಹಾಗೂ ಕ್ರೀಡಾ ಸಚಿವ ಅನುರಾಗ್ ಠಾಕೂರ್ (Anurag Thakur) ತಮ್ಮ ನಿಗದಿತ ಚೀನಾ ಪ್ರವಾಸವನ್ನ ರದ್ದುಗೊಳಿಸಿದ್ದಾರೆ. ಇದು ಪ್ರತಿಭಟನೆಯ ಸಂಕೇತವೆಂದೂ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

    ನೈಮನ್ ವಾಂಗ್ಸು, ಒನಿಲು ಟೆಗಾ ಮತ್ತು ಮೆಪುಂಗ್ ಲಾಮ್ಗು ಪ್ರವೇಶ ವೀಸಾವಾಗಿ ಕಾರ್ಯನಿರ್ವಹಿಸುವ ಹ್ಯಾಂಗ್‌ಜೂ ಏಷ್ಯನ್ ಗೇಮ್ಸ್ ಆರ್ಗನೈಸಿಂಗ್ ಕಮಿಟಿಯಿಂದ ತಮ್ಮ ಮಾನ್ಯತೆ ಕಾರ್ಡ್ಗಳನ್ನು ಪಡೆದಿದ್ದರು. ಈ ಮಾನ್ಯತಾ ಪತ್ರವನ್ನ ಪ್ರವೇಶ ವೀಸಾ ಎಂದು ಪರಿಗಣಿಸಲಾಗುತ್ತದೆ. ಅಥ್ಲೀಟ್‌ಗಳು ತಮ್ಮ ಪ್ರಯಾಣ ದಾಖಲೆಯನ್ನ ಡೌನ್‌ಲೋಡ್ ಮಾಡಿಕೊಳ್ಳಬೇಕಿತ್ತು. ಏಕೆಂದರೆ ಇದು ಆಟಗಾರರು ಆಗಮಿಸುವ ವೇಳೆ ದೃಢೀಕರಿಸಲಾಗುತ್ತದೆ. ಆದ್ರೆ ಬುಧವಾರ ಏಷ್ಯನ್ ಗೇಮ್ಸ್‌ಗೆ ತೆರಳಬೇಕಿದ್ದಾಗ ಅರುಣಾಚಲ ಪ್ರದೇಶದ ಮೂವರು ಆಟಗಾರರು ತಮ್ಮ ಪ್ರಯಾಣದ ದಾಖಲೆಗಳನ್ನ ಡೌನ್‌ಲೋಡ್ ಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಮೂವರಿಗೆ ಪ್ರವೇಶ ನಿಷೇಧ ಮಾಡಲಾಗಿದೆ ಎಂದು ತಿಳಿದುಬಂದಿದೆ. 10 ಆಟಗಾರರನ್ನೊಳಗೊಂಡ ತಂಡದಲ್ಲಿ ಉಳಿದ ಯಾವುದೇ ಆಟಗಾರರು ಮತ್ತು ಸಿಬ್ಬಂದಿಗೆ ಈ ಸಮಸ್ಯೆ ಎದುರಾಗಿಲ್ಲ.

    ಈ ನಡುವೆ 19ನೇ ಏಷ್ಯನ್ ಗೇಮ್ಸ್ಗೆ ಕೆಲವು ಭಾರತೀಯ ಕ್ರೀಡಾಪಟುಗಳಿಗೆ ಪ್ರವೇಶ ನಿರಾಕರಿಸಲಾಗಿದೆ ಎನ್ನುವ ಬಗ್ಗೆ ಹಿರಿಯ ಭಾರತ ಸರ್ಕಾರದ ಅಧಿಕಾರಿ ಅರಿಂದಮ್ ಬಾಗ್ಚಿ ಪ್ರತಿಕ್ರಿಯಿಸಿದ್ದಾರೆ.

    ಚೀನಾದ ಹಾಂಗ್‌ಜೂನಲ್ಲಿ ನಡೆಯುತ್ತಿರಯುವ 19ನೇ ಏಷ್ಯನ್ ಗೇಮ್ಸ್‌ಗೆ ಅರುಣಾಚಲ ಪ್ರದೇಶದ ಕೆಲವು ಭಾರತೀಯ ಕ್ರೀಡಾಪಟುಗಳಿಗೆ ಮಾನ್ಯತೆ ಮತ್ತು ಪ್ರವೇಶ ನಿರಾಕರಿಸುವ ಮೂಲಕ ಚೀನಾದ ಅಧಿಕಾರಿಗಳು ತಾರತಮ್ಯ ಮಾಡಿದ್ದಾರೆ ಎಂದು ಭಾರತ ಸರ್ಕಾರ ತಿಳಿದುಕೊಂಡಿದೆ. ವಾಸಸ್ಥಳ, ಜನಾಂಗೀಯತೆಯ ಆಧಾರದ ಮೇಲೆ ನಾಗರಿಕರನ್ನು ಭೇದ-ಭಾವದಿಂದ ನೋಡುವುದನ್ನ ದೃಢವಾಗಿ ತಿರಸ್ಕರಿಸುತ್ತದೆ. ಈ ಕುರಿತು ನವದೆಹಲಿ ಮತ್ತು ಬೀಜಿಂಗ್‌ನಲ್ಲೂ ಪ್ರತಿಭಟನೆ ದಾಖಲಿಸಲಾಗಿದೆ. ಇದನ್ನೂ ಓದಿ: ಮುಲ್ಲಾ, ಭಯೋತ್ಪಾದಕ – ಲೋಕಸಭೆಯಲ್ಲಿ ಡ್ಯಾನಿಶ್‌ ಅಲಿಗೆ ಬಿಜೆಪಿ ಸಂಸದನಿಂದ ನಿಂದನೆ

    ಚೀನಾ ನಮ್ಮ ಕ್ರೀಡಾಪಟುಗಳಿಗೆ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸಿದೆ. ಚೀನಾದ ಈ ನಡೆಯು ಏಷ್ಯನ್ ಗೇಮ್ಸ್ನ ಉತ್ಸಾಹ ಹಾಗೂ ನಿಯಮವನ್ನೂ ಉಲ್ಲಂಘಿಸುತ್ತದೆ ಎಂದು ಭಾರತ ಅಸಮಾಧಾನ ಹೊರಹಾಕಿದೆ. ಅಲ್ಲದೇ ಮಾಹಿತಿ ಮತ್ತು ಪ್ರಸಾರ, ಯುವ ವ್ಯವಹಾರ ಹಾಗೂ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಚೀನಾಕ್ಕೆ ತಮ್ಮ ನಿಗದಿತ ಭೇಟಿಯನ್ನ ರದ್ದುಗೊಳಿಸಿದ್ದಾರೆ. ಜೊತೆಗೆ ನಮ್ಮ ಹಿತಾಸಕ್ತಿಯನ್ನ ಕಾಪಾಡಲು ಸೂಕ್ತ ಕ್ರಮ ಕೈಗೊಳ್ಳುವು ಹಕ್ಕನ್ನು ಭಾರತ ಸರ್ಕಾರ ಹೊಂದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಇದಕ್ಕೆ ಪ್ರತಿಕ್ರಿಯೆ ನೀಡಿರುವ ಚೀನಾ, ಎಲ್ಲಾ ದೇಶಗಳ ಕ್ರೀಡಾಪಟುಗಳು ಅಗತ್ಯ ದಾಖಲೆಗಳೊಂದಿಗೆ ಕಾನೂನುಬದ್ಧವಾಗಿ ಏಷ್ಯನ್ ಗೇಮ್ಸ್ನಲ್ಲಿ ಭಾಗವಹಿಸುವಂತೆ ಕೋರುವುದಾಗಿ ತಿಳಿಸಿದೆ. ಇದನ್ನೂ ಓದಿ: ಬಂಗಾರಪ್ಪ ಸಿಎಂ ಆಗಿದ್ದಾಗ ಚಿಟಿಕೆ ಹೊಡೆಯುವುದರಲ್ಲಿ ಕಾವೇರಿ ಸಮಸ್ಯೆಗೆ ಉತ್ತರ ಕೊಟ್ಟಿದ್ದರು: ಮಧು ಬಂಗಾರಪ್ಪ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]