Tag: indian army

  • Operation Sindoor | ಭಾರತದ ದಾಳಿಯಲ್ಲಿ 31 ಮಂದಿ ಹತ್ಯೆ, 46 ಮಂದಿಗೆ ಗಾಯ – ಹೊಣೆ ಹೊತ್ತ ಪಾಕ್‌ ಸೇನೆ

    Operation Sindoor | ಭಾರತದ ದಾಳಿಯಲ್ಲಿ 31 ಮಂದಿ ಹತ್ಯೆ, 46 ಮಂದಿಗೆ ಗಾಯ – ಹೊಣೆ ಹೊತ್ತ ಪಾಕ್‌ ಸೇನೆ

    ಇಸ್ಲಾಮಾಬಾದ್‌: ಭಾರತೀಯ ಸೇನೆ ʻಆಪರೇಷನ್‌ ಸಿಂಧೂರʼ (Operation Sindoor) ಹೆಸರಿನಡಿ ಉಗ್ರ ನೆಲೆಗಳ ಮೇಲೆ ನಡೆಸಿದ ಪ್ರತೀಕಾರದ ದಾಳಿಯಲ್ಲಿ 31 ಮಂದಿ ಸಾವನ್ನಪ್ಪಿದ್ದು, 46 ಮಂದಿ ಗಾಯಗೊಂಡಿರುವುದಾಗಿ ಪಾಕ್‌ ಸೇನೆ (Pakistan Army) ಹೊಣೆ ಹೊತ್ತುಕೊಂಡಿದೆ.

    ಭಾರತದ ದಾಳಿಯಲ್ಲಿ JEM ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್‌ ಅಜರ್‌ ಕುಟುಂಬದ 10 ಜನ ಸೇರಿದಂತೆ ಒಟ್ಟು 31 ಮಂದಿ ಸಾವನ್ನಪ್ಪಿದ್ದು, 46 ಮಂದಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಿರಬಹುದು ಎಂದು ಪಾಕ್‌ ಸೇನಾ ವಕ್ತಾರರು ಹೇಳಿರುವುದಾಗಿ ವರದಿಗಳು ತಿಳಿಸಿವೆ. ಇದನ್ನೂ ಓದಿ: ಪ್ರತಿ ರಕ್ತದ ಹನಿಗೂ ಸೇಡು ತೀರಿಸಿಕೊಳ್ತೀವಿ – ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್‌

    ಏನಿದು ʻಆಪರೇಷನ್‌ ಸಿಂಧೂರʼ?
    ಕಳೆದ ಏಪ್ರಿಲ್‌ 22ರಂದು ಕಾಶ್ಮೀರದ ಪೆಹಲ್ಗಾಮ್‌ನ ಬೈಸರನ್‌ ಕಣಿವೆ ಪ್ರದೇಶದಲ್ಲಿ ನಾಲ್ವರು ಉಗ್ರರು ಓರ್ವ ವಿದೇಶಿ ಪ್ರಜೆ ಸೇರಿದಂತೆ 26 ಪ್ರವಾಸಿಗರನ್ನ ಗುಂಡಿಕ್ಕಿ ಕೊಂದಿದ್ದರು. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಪಣ ತೊಟ್ಟಿದ್ದ ಭಾರತ ಮಂಗಳವಾರ ತಡರಾತ್ರಿ 1:44 ಗಂಟೆ ಸುಮಾರಿಗೆ ಪಾಕ್‌ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದೆ. ದಾಳಿಯಲ್ಲಿ ಪಾಕ್‌ ಸೇನೆಯಾಗಲಿ ಅಥವಾ ನಾಗರಿಕರ ಮೇಲಾಗಲಿ ದಾಳಿ ಮಾಡದೇ ಉಗ್ರರ ನೆಲೆಗಳನ್ನು ಮಾತ್ರವೇ ಗುರಿಯಾಗಿಸಿ ದಾಳಿ ನಡೆಸಿದೆ. ಇದನ್ನೂ ಓದಿ: `ಆಪರೇಷನ್ ಸಿಂಧೂರ’ಕ್ಕೆ ತತ್ತರಿಸಿದ ಪಾಕ್ – ತುರ್ತು ಪರಿಸ್ಥಿತಿ ಘೋಷಣೆ

    ಮೋಸ್ಟ್‌ವಾಂಟೆಡ್‌ಗಳನ್ನ ತಯಾರು ಮಾಡ್ತಿದ್ದ ನೆಲೆಗಳು ಧ್ವಂಸ:
    ಭಾರತ ಧ್ವಂಸ ಮಾಡಿರುವ ಈ ಉಗ್ರರ ನೆಲೆಗಳು ಮೋಸ್ಟ್‌ ಡೇಂಜರಸ್‌ ತಾಣಗಳು ಎಂದೇ ಗುರುತಿಸಿಕೊಂಡಿದ್ದು, ಇಡೀ ವಿಶ್ವಕ್ಕೆ ಕಂಟಕವಾಗಿದ್ದವು. ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಇಲ್ಲಿ ಅಡಗಿಸಿಡಲಾಗಿತ್ತು. ಜೊತೆಗೆ ವಿಶ್ವಾದ್ಯಂತ ವಿವಿಧೆಡೆಗೆ ಕಳುಹಿಸಲು ಉಗ್ರರಿಗೆ ಇಲ್ಲಿ ತರಬೇತಿ ನೀಡಲಾಗುತ್ತಿತ್ತು ಅನ್ನೋ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಕುಟುಂಬದ 10 ಜನರ ಹತ್ಯೆ – ಅವರೆಲ್ಲರೂ ಅಲ್ಲಾನ ಅತಿಥಿಗಳಾಗಿದ್ದಾರೆ ಎಂದ ಉಗ್ರ ಮಸೂದ್

    ದಾಳಿ ಒಪ್ಪಿಕೊಳ್ಳದ ಪಾಕ್‌:
    ಅಲ್ಲದೇ ಏಪ್ರಿಲ್‌ 22ರಂದು ನಡೆದ ಪಹಲ್ಗಾಮ್‌ ದಾಳಿ ಕುರಿತು ಮತ್ತೆ ಪ್ರಸ್ತಾಪಿಸಿದ ಷರೀಫ್‌, ಪಹಲ್ಗಾಮ್‌ ದಾಳಿ ನಡೆದಾಗ ನಾನು ಟರ್ಕಿಗೆ ಭೇಟಿ ನೀಡಿದ್ದೆ. ಈ ದಾಳಿಗೂ ನಮಗೂ ಯಾವುದೇ ಸಂಬಂಧವಿಲ್ಲ. ಆಗಲೇ ನಾವು ಈ ಬಗ್ಗೆ ಸ್ಪಷ್ಟನೆ ನೀಡಿದ್ದೇವೆ, ತನಿಖೆಗೆ ಸಹಕರಿಸಲೂ ಸಿದ್ಧರಿದ್ದೇವೆ ಎಂದು ಹೇಳಿದ್ದೆವು. ಆದ್ರೆ ಭಾರತ ನಮ್ಮ ಸ್ಪಷ್ಟನೆಯನ್ನು‌ ಸ್ವೀಕರಿಸದೇ ದಾಳಿ ನಡೆಸಿದೆ ಎಂದು ಹೇಳಿದ್ದಾರೆ.

  • ಏರ್ ಇಂಡಿಯಾದಿಂದ ಸಶಸ್ತ್ರ ಪಡೆ ಸಿಬ್ಬಂದಿಗೆ ಟಿಕೆಟ್‌ ಉಚಿತ ಮರುಹೊಂದಿಕೆ ಆಫರ್‌

    ಏರ್ ಇಂಡಿಯಾದಿಂದ ಸಶಸ್ತ್ರ ಪಡೆ ಸಿಬ್ಬಂದಿಗೆ ಟಿಕೆಟ್‌ ಉಚಿತ ಮರುಹೊಂದಿಕೆ ಆಫರ್‌

    ನವದೆಹಲಿ: ಟಿಕೆಟ್‌ ಬುಕಿಂಗ್ ಮಾಡಿರುವ ಸಶಸ್ತ್ರ ಪಡೆಗಳ ಸಿಬ್ಬಂದಿಗೆ (Armed Forces) ಉಚಿತ ಮರುಹೊಂದಿಕೆ (Rescheduling) ಅಥವಾ ರದ್ದತಿಯ ಮೇಲೆ ಪೂರ್ಣ ಮರುಪಾವತಿ ನೀಡುವ ಆಫರ್‌ ಅನ್ನು ಏರ್ ಇಂಡಿಯಾ (Air India), ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ (Air India Express) ವಿಮಾನಯಾನ ಸಂಸ್ಥೆ ನೀಡಿದೆ.

    ಪಾಕಿಸ್ತಾನ ಮತ್ತು ಪಿಒಕೆಯ 9 ಉಗ್ರರ ನೆಲೆಗಳ ಮೇಲೆ ʻಆಪರೇಷನ್‌ ಸಿಂಧೂರʼ (Operation Sindoor) ಹೆಸರಿನಲ್ಲಿ ಭಾರತದ ಸಶಸ್ತ್ರ ಪಡೆಗಳು ದಾಳಿ ನಡೆಸಿದ ಹಿನ್ನೆಲೆ ಏರ್‌ ಇಂಡಿಯಾ ಮತ್ತು ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಈ ಘೋಷಣೆ ಮಾಡಿದೆ. ಇದನ್ನೂ ಓದಿ: ಆಪರೇಷನ್‌ ಸಿಂಧೂರ ಬೆನ್ನಲ್ಲೇ ರಾಜ್ಯದ ಕರಾವಳಿಯಲ್ಲಿ ಹೈಅಲರ್ಟ್‌ – ಆಳ ಸಮುದ್ರ ಮೀನುಗಾರಿಕೆಗೆ ನಿಷೇಧ

    ಈ ದಾಳಿ ನಡೆಸಿದ ಹಿನ್ನೆಲೆ, ಕೆಲ ವಾಯು ಮಾರ್ಗಗಳನ್ನು ಬಂದ್ ಮಾಡಲಾಗಿದೆ. ಇದರಿಂದ ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ಆದ್ದರಿಂದ ವಿಮಾನಯಾನ ಸಂಸ್ಥೆ ಈ ನಿರ್ಧಾರ ಪ್ರಕಟಿಸಿದೆ.

    ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಏರ್ ಇಂಡಿಯಾ, ಮೇ 31 ರವರೆಗೆ ಬುಕ್ ಮಾಡಲಾದ ರಕ್ಷಣಾ ಸಿಬ್ಬಂದಿಗೆ ಈ ಸೌಲಭ್ಯ ಮಾಡಿಕೊಡಲಾಗಿದೆ. ಸೈನಿಕರ ಸೇವೆಯನ್ನು ಬೆಂಬಲಿಸಲು ಟಿಕೆಟ್ ರದ್ದತಿಗೆ ಸಂಪೂರ್ಣ ಮರುಪಾವತಿಯನ್ನು ನೀಡುತ್ತಿದ್ದೇವೆ ಎಂದು ಏರ್ ಇಂಡಿಯಾ ತಿಳಿಸಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಕೂಡ ಇದೇ ಪೋಸ್ಟ್ ಹಂಚಿಕೊಂಡಿದೆ.

    18 ಏರ್‌ಪೋರ್ಟ್‌ಗಳ ಕಾರ್ಯಾಚರಣೆ ತಾತ್ಕಾಲಿಕ ಸ್ಥಗಿತ
    ʻಆಪರೇಷನ್‌ ಸಿಂಧೂರʼ ಬೆನ್ನಲ್ಲೇ ಏರ್ ಇಂಡಿಯಾ, ಇಂಡಿಗೋ, ಸ್ಪೈಸ್‌ಜೆಟ್, ಏರ್ ಇಂಡಿಯಾ ಎಕ್ಸ್‌ಪ್ರೆಸ್, ಆಕಾಶ ಏರ್ ಮತ್ತು ಕೆಲವು ವಿದೇಶಿ ವಿಮಾನಯಾನ ಸಂಸ್ಥೆಗಳು ವಿವಿಧ ವಿಮಾನ ನಿಲ್ದಾಣಗಳಿಗೆ ತಮ್ಮ ಸೇವೆಗಳನ್ನು ರದ್ದುಗೊಳಿಸಿವೆ. ಒಟ್ಟು 18 ವಿಮಾನ ನಿಲ್ದಾಣಗಳ ಕಾರ್ಯಾಚರಣೆಯನ್ನ ರದ್ದುಗೊಳಿಸಲಾಗಿದೆ, ಈ ಪೈಕಿ ಶ್ರೀನಗರ, ಲೇಹ್, ಜಮ್ಮು, ಅಮೃತಸರ, ಪಠಾಣ್‌ಕೋಟ್, ಚಂಡೀಗಢ, ಜೋಧ್‌ಪುರ, ಜೈಸಲ್ಮೇರ್, ಶಿಮ್ಲಾ, ಧರ್ಮಶಾಲಾ ಮತ್ತು ಜಾಮ್‌ನಗರ ನಿಲ್ದಾಣಗಳೂ ಸೇರಿವೆ. ಒಟ್ಟಾರೆಯಾಗಿ ವಿವಿಧ ವಿಮಾನಯಾನ ಸಂಸ್ಥೆಗಳ 200ಕ್ಕೂ ಹೆಚ್ಚು ವಿಮಾನ ಹಾರಾಟವನ್ನ ರದ್ದುಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಪೂಂಚ್‌ನಲ್ಲಿ ಪಾಕಿಸ್ತಾನ ಶೆಲ್‌ ದಾಳಿ – ಭಾರತೀಯ ಯೋಧ ಹುತಾತ್ಮ

  • Operation Sindoor | ಪಾಕ್ ಉಗ್ರ ತಾಣಗಳ ಮೇಲೆ ಏರ್‌ಸ್ಟ್ರೈಕ್‌ – ವಿಡಿಯೋ ಹಂಚಿಕೊಂಡ ಭಾರತೀಯ ಸೇನೆ

    Operation Sindoor | ಪಾಕ್ ಉಗ್ರ ತಾಣಗಳ ಮೇಲೆ ಏರ್‌ಸ್ಟ್ರೈಕ್‌ – ವಿಡಿಯೋ ಹಂಚಿಕೊಂಡ ಭಾರತೀಯ ಸೇನೆ

    ನವದೆಹಲಿ: ಪಾಕಿಸ್ತಾನ (Pakistan) ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ 9 ಉಗ್ರರ ನೆಲೆಗಳ ಮೇಲೆ ನಡೆದ `ಆಪರೇಷನ್ ಸಿಂಧೂರ’ (Operation Sindoor) ವಾಯುದಾಳಿಯ ವಿಡಿಯೋವನ್ನು ಭಾರತೀಯ ಸೇನೆ ಹಂಚಿಕೊಂಡಿದೆ.

    ಏ.22ರಂದು ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ನಡೆದ ಭಯೋತ್ಪಾದಕರ ಉಗ್ರರ ದಾಳಿಯ ಪ್ರತೀಕಾರವಾಗಿ `ಆಪರೇಷನ್ ಸಿಂಧೂರ’ ಹೆಸರಿನಲ್ಲಿ ಭಾರತೀಯ ಸೇನೆ ಮಂಗಳವಾರ ತಡರಾತ್ರಿ 1:44ರ ಸುಮಾರಿಗೆ ಪಾಕ್‌ನ 9 ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದೆ. ಈ ದಾಳಿಯಲ್ಲಿ 70ಕ್ಕೂ ಅಧಿಕ ಭಯೋತ್ಪಾದಕರು ಸಾವನ್ನಪ್ಪಿರುವುದಾಗಿ ಮೂಲಗಳು ತಿಳಿಸಿವೆ.ಇದನ್ನೂ ಓದಿ: `ಆಪರೇಷನ್ ಸಿಂಧೂರ’ಕ್ಕೆ ತತ್ತರಿಸಿದ ಪಾಕ್ – ತುರ್ತು ಪರಿಸ್ಥಿತಿ ಘೋಷಣೆ

    ದಾಳಿಯ ಹಲವು ವಿಡಿಯೋಗಳನ್ನು ಸೇನೆ ಹಂಚಿಕೊಂಡಿದ್ದು, ವಾಯುದಾಳಿಗೆ ತತ್ತರಿಸಿದ ಪಾಕ್‌ನ ಜೈಶ್-ಎ-ಮೊಹಮ್ಮದ್ (ಜೆಇಎಂ), ಲಷ್ಕರ್-ಎ-ತೈಬಾ (ಎಲ್‌ಇಟಿ) ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಗುಂಪು ಸೇರಿ 9 ಉಗ್ರರ ನೆಲೆಗಳು ಧ್ವಂಸಗೊಂಡಿವೆ.

    ವಿಡಿಯೋದಲ್ಲಿ ಏನಿದೆ?
    ದಾಳಿ ಪ್ರಾರಂಭವಾದ ಮೊದಲು ಪಿಒಕೆಯ ಕೋಟ್ಲಿಯಲ್ಲಿರುವ ಮರ್ಕಜ್ ಅಬ್ಬಾಸ್ ಭಯೋತ್ಪಾದಕ ಕೇಂದ್ರದ ಧ್ವಂಸ, 25 ನಿಮಿಷಗಳ ದಾಳಿಯ ಮತ್ತೊಂದು ವಿಡಿಯೋದಲ್ಲಿ ನಿಯಂತ್ರಣ ರೇಖೆಯಿಂದ ಸುಮಾರು 30 ಕಿ.ಮೀಟರ್ ದೂರದಲ್ಲಿರುವ ಲಷ್ಕರ್-ಎ-ತೈಬಾ ನೆಲೆ ಕೋಟ್ಲಿಯಲ್ಲಿರುವ ಗುಲ್ಪುರ್ ಕೇಂದ್ರದ ನಾಶ, ಅಂತಾರಾಷ್ಟ್ರೀಯ ಗಡಿಯಿಂದ 6 ಕಿ.ಮೀ ದೂರದಲ್ಲಿರುವ ಸಿಯಾಲ್‌ಕೋಟ್‌ನಲ್ಲಿರುವ ಸರ್ಜಲ್ ಕೇಂದ್ರ, ಬಳಿಕ ಪಾಕಿಸ್ತಾನದ ಪಂಜಾಬ್‌ನಲ್ಲಿರುವ ಬಹಾವಲ್ಪುರದಲ್ಲಿರುವ ಜೆಇಎಂ ಮತ್ತು ಮುರಿಡ್ಕೆಯಲ್ಲಿರುವ ಎಲ್‌ಇಟಿಯ ಪ್ರಧಾನ ಕಚೇರಿಗಳ ಮೇಲೆ ದಾಳಿ ನಡೆಸಿರುವುದನ್ನು ತೋರಿಸುತ್ತದೆ.

    ನಂತರ ಅಂತರರಾಷ್ಟ್ರೀಯ ಗಡಿಯಿಂದ ಸುಮಾರು 12 ರಿಂದ 18 ಕಿ.ಮೀ ದೂರದಲ್ಲಿರುವ ಸಿಯಾಲ್‌ಕೋಟ್‌ನಲ್ಲಿರುವ ಮಹಮೂನ ಜಯ ಕೇಂದ್ರ, ತಂಗ್ಧರ್ ಸೆಕ್ಟರ್‌ನ ಎಲ್‌ಒಸಿಯಿಂದ 30 ಕಿ.ಮೀ ದೂರದಲ್ಲಿರುವ ಮತ್ತು ಪ್ರಮುಖ ಎಲ್‌ಇಟಿ ತರಬೇತಿ ಕೇಂದ್ರವಾಗಿದ್ದ ಮುಜಫರಾಬಾದ್‌ನಲ್ಲಿರುವ ಸವಾಯಿ ನಾಲಾ, ಸೈಯದ್ನಾ ಬೇಲಾಲ್ ಹಾಗೂ ಎಲ್‌ಒಸಿಯಿಂದ ಸುಮಾರು 9 ಕಿ.ಮೀ ದೂರದಲ್ಲಿರುವ ಭಿಂಬರ್‌ನಲ್ಲಿರುವ ಬರ್ನಾಲಾ ಕೇಂದ್ರವನ್ನು ನಾಶಪಡಿಸಿರುವುದನ್ನು ವಿಡಿಯೋ ಮೂಲಕ ಭಾರತೀಯ ಸೇನೆ ಹಂಚಿಕೊಂಡಿದೆ.ಇದನ್ನೂ ಓದಿ: 9 ಉಗ್ರ ಅಡಗು ತಾಣಗಳ ಮಟಾಶ್ – ಯಾವ್ಯಾವ ಪ್ರದೇಶದಲ್ಲಿ ಯಾವ ಉಗ್ರ ಸಂಘಟನೆ ಇತ್ತು? ಅವುಗಳ ಪಾತ್ರ ಏನು?

  • 9 ಉಗ್ರ ಅಡಗು ತಾಣಗಳ ಮಟಾಶ್ – ಯಾವ್ಯಾವ ಪ್ರದೇಶದಲ್ಲಿ ಯಾವ ಉಗ್ರ ಸಂಘಟನೆ ಇತ್ತು? ಅವುಗಳ ಪಾತ್ರ ಏನು?

    9 ಉಗ್ರ ಅಡಗು ತಾಣಗಳ ಮಟಾಶ್ – ಯಾವ್ಯಾವ ಪ್ರದೇಶದಲ್ಲಿ ಯಾವ ಉಗ್ರ ಸಂಘಟನೆ ಇತ್ತು? ಅವುಗಳ ಪಾತ್ರ ಏನು?

    ನವದೆಹಲಿ: ಪಹಲ್ಗಾಮ್‌ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ನಡೆಸಿದ ‘ಆಪರೇಷನ್‌ ಸಿಂಧೂರ’ ಕಾರ್ಯಾಚರಣೆಗೆ 9 ಉಗ್ರರ ಅಡಗು ತಾಣಗಳು ನಾಶವಾಗಿವೆ. ಪಾಕಿಸ್ತಾನ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಸೇನೆ ಈ ಕಾರ್ಯಾಚರಣೆ ನಡೆಸಿತ್ತು. ಹಾಗಾದರೆ, ಯಾವ್ಯಾವ ಪ್ರದೇಶದಲ್ಲಿ ಯಾವ ಉಗ್ರ ಸಂಘಟನೆ ಇತ್ತು? ಅವುಗಳ ಪಾತ್ರ ಏನು ಎಂಬುದರ ಬಗ್ಗೆ ತಿಳಿಯೋಣ.

    1. ಮರ್ಕಝ್ ಸುಭಾನ್ ಅಲ್ಲಾ, ಬಹವಾಲ್ಪುರ್ (ಪಾಕಿಸ್ತಾನ)
    ಇದು 2015 ರಿಂದ ಕಾರ್ಯನಿರ್ವಹಿಸುತ್ತಿದೆ. 15 ಎಕರೆ ಪ್ರದೇಶದಲ್ಲಿ ಈ ಶಿಬಿರವಿದ್ದು, ಜೈಶ್-ಎ-ಮೊಹಮ್ಮದ್ (JeM)ನ ಮುಖ್ಯ ಕೇಂದ್ರವಾಗಿದೆ. ಇದನ್ನು ತರಬೇತಿ ಮತ್ತು ಮೂಲಭೂತೀಕರಣಕ್ಕಾಗಿ ಬಳಸಲಾಗುತ್ತದೆ. ಇದು 2019, ಫೆಬ್ರವರಿ 14ರ ಪುಲ್ವಾಮಾ ದಾಳಿಗೆ ನೇರವಾಗಿ ಸಂಬಂಧಿಸಿದೆ. ಮೌಲಾನಾ ಮಸೂದ್ ಅಜರ್, ಮುಫ್ತಿ ಅಬ್ದುಲ್ ರೌಫ್ ಅಸ್ಗರ್ ಮತ್ತು ಮೌಲಾನಾ ಅಮ್ಮರ್ ಸೇರಿದಂತೆ ಹಿರಿಯ ಜೆಇಎಂ ನಾಯಕರನ್ನು ಹೊಂದಿದೆ. ಈ ಸೈಟ್ ಶಸ್ತ್ರಾಸ್ತ್ರಗಳು, ಧಾರ್ಮಿಕ ಮತ್ತು ಕಾರ್ಯಕರ್ತರ ದೈಹಿಕ ತರಬೇತಿಗಾಗಿ ಮತ್ತು ಭಾರತ ವಿರೋಧಿ ಜಿಹಾದಿ ವಾಕ್ಚಾತುರ್ಯವನ್ನು ಪ್ರಚಾರ ಮಾಡಲು ಹೆಸರುವಾಸಿಯಾಗಿದೆ.

    2. ಮರ್ಕಜ್ ತೈಬಾ, ಮುರಿಡ್ಕೆ (ಪಾಕಿಸ್ತಾನ)
    ನಂಗಲ್ ಸಹ್ದಾನ್‌ನಲ್ಲಿರುವ ಲಷ್ಕರ್-ಎ-ತೈಬಾ (LeT) ನ ಪ್ರಮುಖ ತರಬೇತಿ ಸೌಲಭ್ಯ ಕೇಂದ್ರವಿದು. 2000 ರಲ್ಲಿ ಸ್ಥಾಪನೆಯಾದ ಈ ಉಗ್ರರ ಶಿಬಿರದಲ್ಲಿ ವರ್ಷಕ್ಕೆ 1 ಸಾವಿರ ಉಗ್ರರಿಗೆ ತರಬೇತಿ ನೀಡಿ ಭಯೋತ್ಪಾದಕ ಕೃತ್ಯಗಳಿಗೆ ಕಳುಹಿಸಲಾಗುತ್ತೆ. ಈ ಹಿಂದೆ ಒಸಾಮಾ ಬಿನ್ ಲಾಡೆನ್ ಈ‌ ಶಿಬಿರಕ್ಕೆ ಆರ್ಥಿಕ‌ ಸಹಾಯ ಒದಗಿಸಿದ್ದರು. ಅಜ್ಮಲ್ ಕಸಬ್ ಸೇರಿದಂತೆ 26/11 ಮುಂಬೈ ದಾಳಿಕೋರರಿಗೆ ಇಲ್ಲಿ ತರಬೇತಿ ನೀಡಲಾಗಿತ್ತು. 26/11 ರ ಪ್ರಮುಖ ಸಂಚುಕೋರರಾದ ​​ಡೇವಿಡ್ ಹೆಡ್ಲಿ, ತಹವ್ವೂರ್ ರಾಣಾ ಮತ್ತು ಇತರರು ಈ ಸ್ಥಳಕ್ಕೆ ಭೇಟಿ ನೀಡಿದ್ರು.

    3. ಸರ್ಜಲ್/ತೆಹ್ರಾ ಕಲಾನ್ ಉಡಾವಣಾ ಸೌಲಭ್ಯ (ನರೋವಾಲ್, ಪಾಕಿಸ್ತಾನ)
    ಜಮ್ಮು ಮತ್ತು ಕಾಶ್ಮೀರಕ್ಕೆ ಭಯೋತ್ಪಾದಕ ಒಳನುಸುಳುವಿಕೆಗೆ ಬಳಸಲಾಗುತ್ತಿದ್ದ ಜೆಇಎಂ ಸೌಲಭ್ಯ, ಪ್ರಾಥಮಿಕ ಆರೋಗ್ಯ ಕೇಂದ್ರದಿಂದ (PHC) ರಹಸ್ಯವಾಗಿ ಕಾರ್ಯನಿರ್ವಹಿಸುತ್ತದೆ. ಸಾಂಬಾ ಸೆಕ್ಟರ್‌ನ ಅಂತರರಾಷ್ಟ್ರೀಯ ಗಡಿಯಿಂದ ಕೇವಲ 6 ಕಿಮೀ ದೂರದಲ್ಲಿರುವ ಇದನ್ನು ಗಡಿಯಾಚೆಗಿನ ಸುರಂಗಗಳನ್ನು ಅಗೆಯಲು ಮತ್ತು ಭಾರತೀಯ ಪ್ರದೇಶಕ್ಕೆ ಶಸ್ತ್ರಾಸ್ತ್ರ ಮತ್ತು ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡಲು ಡ್ರೋನ್‌ಗಳನ್ನು ಉಡಾಯಿಸಲು ಸಹ ಬಳಸಲಾಗುತ್ತಿತ್ತು.

    4. ಮೆಹಮೂನಾ ಜೋಯಾ ಸೌಲಭ್ಯ, ಸಿಯಾಲ್‌ಕೋಟ್ (ಪಾಕಿಸ್ತಾನ)
    ಸರ್ಕಾರಿ ಶಾಲೆಯ ಆವರಣದಿಂದ ಹಿಜ್ಬುಲ್ ಮುಜಾಹಿದ್ದೀನ್ (HM) ನಡೆಸುತ್ತಿರುವ ಈ ಸ್ಥಳವು ಜಮ್ಮು ಪ್ರದೇಶಕ್ಕೆ HM ಕೇಡರ್‌ಗಳ ಒಳನುಸುಳುವಿಕೆ ಮತ್ತು ಶಸ್ತ್ರಾಸ್ತ್ರ ತರಬೇತಿಯನ್ನು ನೀಡುತ್ತದೆ. ಈ ಸೌಲಭ್ಯವನ್ನು HM ಕಮಾಂಡರ್ ಮೊಹಮ್ಮದ್ ಇರ್ಫಾನ್ ಖಾನ್ ಅಲಿಯಾಸ್ ಇರ್ಫಾನ್ ತಾಂಡಾ ನೋಡಿಕೊಳ್ಳುತ್ತಾನೆ. 20–25 ಸಕ್ರಿಯ ಭಯೋತ್ಪಾದಕರಿಗೆ ಆಶ್ರಯ ನೀಡಲಾಗಿದೆ.

    5. ಮರ್ಕಜ್ ಅಹ್ಲೆ ಹದೀಸ್ ಬರ್ನಾಲಾ, ಭಿಂಬರ್ (PoJK)
    ಬರ್ನಾಲಾ ಪಟ್ಟಣದ ಬಳಿ ಕಾರ್ಯತಂತ್ರ ರೂಪಿಸುವ ಎಲ್‌ಇಟಿ ಕೇಂದ್ರ. ಭಯೋತ್ಪಾದಕರನ್ನು ಒಳನುಸುಳಲು ಮತ್ತು ಪೂಂಚ್-ರಾಜೌರಿ-ರಿಯಾಸಿ ವಲಯಕ್ಕೆ ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ ಮಾಡಲು ಬಳಸಲಾಗುತ್ತದೆ. 100–150 ಭಯೋತ್ಪಾದಕರಿಗೆ ಆಶ್ರಯ ನೀಡುವ ಸಾಮರ್ಥ್ಯವಿರುವ ಈ ಶಿಬಿರವನ್ನು ಖಾಸಿಮ್ ಗುಜ್ಜರ್, ಖಾಸಿಮ್ ಖಾಂಡಾ ಮತ್ತು ಅನಸ್ ಜರಾರ್ ಸೇರಿದಂತೆ ಎಲ್‌ಇಟಿ ನಾಯಕರು ನಿರ್ವಹಿಸುತ್ತಿದ್ದರು.

    6. ಮರ್ಕಜ್ ಅಬ್ಬಾಸ್, ಕೋಟ್ಲಿ (PoJK)
    ಮುಫ್ತಿ ಅಬ್ದುಲ್ ರೌಫ್ ಅಸ್ಗರ್‌ನ ಆಪ್ತ ಸಹಾಯಕ ಹಫೀಜ್ ಅಬ್ದುಲ್ ಶಕೂರ್ ಅಲಿಯಾಸ್ ಖಾರಿ ಜರ್ರಾರ್ ನೇತೃತ್ವದ ಜೆಇಎಂನ ಪ್ರಮುಖ ಭದ್ರಕೋಟೆ ಇದು. ಈ ಸ್ಥಳವು 100–125 ಕಾರ್ಯಕರ್ತರಿಗೆ ತರಬೇತಿ ನೀಡಿ, ಭಯೋತ್ಪಾದಕ ಕೃತ್ಯಗಳನ್ನ ನಡೆಸಲು, ಜಮ್ಮು ಮತ್ತು ಕಾಶ್ಮೀರದಲ್ಲಿ ಒಳನುಸುಳುವಿಕೆ ಮತ್ತು ಸಂಚು ರೂಪಿಸಲು ಪ್ಲ್ಯಾನ್ ಮಾಡುತ್ತದೆ.

    7. ಮಸ್ಕರ್ ರಹೀಲ್ ಶಾಹಿದ್, ಕೋಟ್ಲಿ (PoJK)
    ಹೆಚ್‌ಎಂನ (ಹಿಜ್ಬುಲ್ ಮುಜಾಹಿದ್ದೀನ್) ಅತ್ಯಂತ ಹಳೆಯ ಮತ್ತು ಅತ್ಯಂತ ಸಕ್ರಿಯ ಶಿಬಿರಗಳಲ್ಲಿ ಇದು ಕೂಡ ಒಂದು. 150–200 ಭಯೋತ್ಪಾದಕರಿಗೆ ತರಬೇತಿ ನೀಡಿ ಕೈಗೆ ಶಸ್ತ್ರಾಸ್ತ್ರಗಳನ್ನ ನೀಡುತ್ತದೆ. ದೈಹಿಕ ಕಸರತ್ತುಗಳ ಜೊತೆಗೆ ವಿಶೇಷ ಸ್ನೈಪರ್, ಬಿಎಟಿ (ಬಾರ್ಡರ್ ಆಕ್ಷನ್ ಟೀಮ್) ಮತ್ತು ಗುಡ್ಡಗಾಡು ಪ್ರದೇಶದಲ್ಲಿ ಕಾರ್ಯಾಚರಣೆಗಳನ್ನ ಮಾಡುವುದು, ಜೀವ ಹಾನಿಯಾಗದಂತೆ ಹೇಗೆ ಪ್ರಾಣ ಉಳಿಸಿಕೊಳ್ಳಬಹುದೆಂದು ತರಬೇತಿಯನ್ನು ನೀಡಲಾಗುತ್ತಿತ್ತು.

    8. ಶಾವಾಯಿ ನಲ್ಲಾ ಕ್ಯಾಂಪ್, ಮುಜಫರಾಬಾದ್ (PoJK)
    ಬೈತ್-ಉಲ್-ಮುಜಾಹಿದ್ದೀನ್ ಎಂದೂ ಕರೆಯಲ್ಪಡುವ ಈ ಎಲ್‌ಇಟಿ ಶಿಬಿರವು ನೇಮಕಾತಿ ಮತ್ತು ತರಬೇತಿ ಕೇಂದ್ರವಾಗಿದೆ. 26/11 ದಾಳಿಕೋರರೊಂದಿಗೆ ಸಂಪರ್ಕ ಹೊಂದಿದ್ದು, ಧಾರ್ಮಿಕ ಬೋಧನೆ ಮತ್ತು ಶಸ್ತ್ರಾಸ್ತ್ರ ನಿರ್ವಹಣೆಯನ್ನು ಒಳಗೊಂಡ ದೌರಾ-ಎ-ಆಮ್ ತರಬೇತಿಯನ್ನು ನೀಡುತ್ತದೆ. ಪಾಕಿಸ್ತಾನಿ ಐಎಸ್‌ಐ ಮತ್ತು ಸೈನ್ಯವು ಈ ಸೌಲಭ್ಯದಲ್ಲಿ ಶಸ್ತ್ರಾಸ್ತ್ರ ತರಬೇತಿಯನ್ನು ಒದಗಿಸುತ್ತವೆ ಎಂದು ಹೇಳಲಾಗುತ್ತಿದೆ. ಇದು 200–250 ಕಾರ್ಯಕರ್ತರಿಗೆ ಇಲ್ಲಿ ಉತ್ತರ ಕಾಶ್ಮೀರ ಒಳನುಸುಳಿಗೆ ಭಯೋತ್ಪಾದಕ ಕೃತ್ಯಗಳನ್ನ ಮಾಡಲು ತರಬೇತಿ ನೀಡುತ್ತದೆ.

    9. ಮರ್ಕಜ್ ಸೈಯದ್ನಾ ಬಿಲಾಲ್, ಮುಜಫರಾಬಾದ್ (PoJK)
    ಮುಜಫರಾಬಾದ್‌ನ ಕೆಂಪುಕೋಟೆಯ ಎದುರಿನ ಪ್ರಮುಖ ಜೆಇಎಂ ಶಿಬಿರ ಇದು. ಈ ಶಿಬಿರವನ್ನ ಜಮ್ಮು-ಕಾಶ್ಮೀರ ಗಡಿಯೊಳಗೆ ಒಳನುಸುಳಲು ಸಾರಿಗೆ ಸೌಲಭ್ಯವಾಗಿ ಬಳಸಲಾಗುತ್ತದೆ.‌ ಇಲ್ಲಿ 50–100 ಜೆಇಎಂ ಕಾರ್ಯಕರ್ತರಿದ್ದು, ಈ ಸೌಲಭ್ಯವನ್ನು ಮುಫ್ತಿ ಅಸ್ಗರ್ ಖಾನ್ ಕಾಶ್ಮೀರಿ ನೇತೃತ್ವ ವಹಿಸಿದ್ದಾನೆ. ಪಾಕ್ ಸೇನೆಯ ಎಸ್‌ಎಸ್‌ಜಿ ಕಮಾಂಡೋಗಳು ಈ ಸ್ಥಳದಲ್ಲಿ ಕಾರ್ಯಕರ್ತರಿಗೆ ಸುಧಾರಿತ ಯುದ್ಧ ತರಬೇತಿಯನ್ನು ನೀಡುತ್ತಾರೆ ಎಂದು ಹೇಳಲಾಗುತ್ತಿದೆ.

  • ಸೈನಿಕರಿಗೆ ಮೋದಿ ಆತ್ಮಸ್ಥೈರ್ಯ, ಉಗ್ರರಿಗೆ ಇದು ಎಚ್ಚರಿಕೆ: ಬಿ.ವೈ ವಿಜಯೇಂದ್ರ

    ಸೈನಿಕರಿಗೆ ಮೋದಿ ಆತ್ಮಸ್ಥೈರ್ಯ, ಉಗ್ರರಿಗೆ ಇದು ಎಚ್ಚರಿಕೆ: ಬಿ.ವೈ ವಿಜಯೇಂದ್ರ

    ಕೋಲಾರ: ಮೋದಿಯವರ ದಿಟ್ಟ ನಾಯಕತ್ವದಿಂದ ನಮ್ಮ ದೇಶದ ಯೋಧರಿಗೆ ದೊಡ್ಡ ಶಕ್ತಿ ತಂದುಕೊಟ್ಟಿದೆ. ಹಾಗಾಗಿ ಇಂದು ಯೋಧರು ನಿರ್ಭೀತಿಯಿಂದ ಉಗ್ರರ ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ(B Y Vijayendra) ಹೇಳಿದರು.

    ಕೋಲಾರದ(Kolar) ಜನಾಕ್ರೋಶ ರ‍್ಯಾಲಿಗೂ ಮುನ್ನ ಕೋಲಾರಮ್ಮ ದೇವಾಲಯದಲ್ಲಿ `ಆಪರೇಷನ್ ಸಿಂಧೂರ'(Operation Sindoor) ಯಶಸ್ವಿಯಾದ ಹಿನ್ನಲೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. ಉಗ್ರರ ಮೇಲೆ ಕಳೆದ ರಾತ್ರಿಯಿಂದ ದಾಳಿ ಆರಂಭವಾಗಿದೆ. ಯಶಸ್ಸು ಸಿಗಲಿ ಎಂದು ತಾಯಿ ಕೋಲಾರಮ್ಮ ಬಳಿ ಪ್ರಾರ್ಥನೆ ಮಾಡಿದ್ದೇನೆ ಎಂದರು. ಇದನ್ನೂ ಓದಿ: ಆಪರೇಷನ್ ಸಿಂಧೂರ | ಇದು ಭಾರತೀಯ ಸೇನೆಯ ನಿಜವಾದ ಮುಖ: ಶಿವಕಾರ್ತಿಕೇಯನ್

    ದೇಶದಲ್ಲಿ ಈ ಕಾಂಗ್ರೆಸ್‌ನ ದ್ವಂದ್ವ ಮತ್ತು ದೇಶ ವಿರೋಧಿ ನೀತಿಯಿಂದ ಉಗ್ರಗಾಮಿಗಳು ಅಟ್ಟಹಾಸದಿಂದ ಮೆರೆಯುತ್ತಿದ್ದಾರೆ. ಕಾಂಗ್ರೆಸ್‌ನ ಈ ನೀತಿಯಿಂದಲೇ ಜಮ್ಮು ಕಾಶ್ಮೀರದಲ್ಲಿ ಸಾವಿರಾರು ಹಿಂದೂ ಕುಟುಂಬಗಳು ಮನೆ ಮಠ ಕಳೆದುಕೊಂಡಿದ್ದಾರೆ. ಯೋಧರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ರಿಯಲ್ ಹೀರೋಗಳು ನೀವೇ – ‘ಆಪರೇಷನ್ ಸಿಂಧೂರ’ಕ್ಕೆ ಮಮ್ಮುಟ್ಟಿ ಮೆಚ್ಚುಗೆ

    ನಮಗೆ ಸಂಪೂರ್ಣ ವಿಶ್ವಾಸ ಇದೆ. ಉಗ್ರಗಾಮಿಗಳ ವಿರುದ್ಧ ಹೋರಾಟದಲ್ಲಿ ಯಶಸ್ಸು ಸಿಗುತ್ತದೆ. ಇಂತಹ ಯುದ್ಧದ ಸಂದರ್ಭದಲ್ಲಿ ಎಲ್ಲರೂ ಒಗ್ಗಟ್ಟಾಗಿ ಬೆಂಬಲಿಸುತ್ತಿದ್ದಾರೆ. ಆದರೆ ಕಾಂಗ್ರೆಸ್‌ನವರು ದೇಶ ವಿರೋಧಿ ಚಟುವಟಿಕೆಗಳಿಗೆ ಬೆಂಬಲಿಸಬಾರದು. ದೇಶದ ಪರ ಗಟ್ಟಿಯಾಗಿ ನಿಲ್ಲಬೇಕು ಎಂದರು. ಇದನ್ನೂ ಓದಿ: LIVE – ʼಆಪರೇಷನ್‌ ಅಭ್ಯಾಸ್ʼ ಹೆಸರಲ್ಲಿ ದೇಶಾದ್ಯಂತ ಮಾಕ್‌ ಡ್ರಿಲ್‌

    ಯುದ್ಧದ ಸಂದರ್ಭದಲ್ಲಿ ಕಾಂಗ್ರೆಸ್‌ನವರ(Congress) ಶಾಂತಿ ಸ್ಥಾಪನೆ ನಿಲುವು ಸರಿಯಲ್ಲ. ಇದನ್ನು ಬದಿಗಿಟ್ಟು ಸೈನಿಕರ ಪರವಾಗಿ ನಿಲ್ಲಬೇಕು. ನಮ್ಮ ಯೋಧರು ಪಾಕಿಸ್ತಾನದ ವಿರುದ್ಧ ಹೋರಾಟ ಆರಂಭಿಸಿದ್ದು, ಈ ಯುದ್ಧದಲ್ಲಿ ಭಾರತಕ್ಕೆ ವಿಜಯ ಸಿಗಬೇಕು. ಉಗ್ರರು ಇಡೀ ಜಗತ್ತಿಗೆ ಮಾರಕವಾಗಿ ರಕ್ತದೋಕುಳಿ ನಡೆಸುತ್ತಿದ್ದಾರೆ. ಇದಕ್ಕೆ ಪ್ರತೀಕಾರ ತೆಗೆದುಕೊಳ್ಳುವ ದಿಟ್ಟ ನಿರ್ಧಾರವನ್ನು ಮೋದಿಯವರು ತೆಗೆದುಕೊಂಡಿದ್ದಾರೆ ಎಂದು ಹೇಳಿದರು.

  • ಭಾರತದ ವಿರುದ್ಧ ಪ್ರತಿದಾಳಿಗೆ ಪಾಕ್‌ ಕುತಂತ್ರ – ಸೇನೆಗೆ ಪರಮಾಧಿಕಾರ ನೀಡಿದ ಪ್ರಧಾನಿ ಶೆಹಬಾಜ್ ಶರೀಫ್

    ಭಾರತದ ವಿರುದ್ಧ ಪ್ರತಿದಾಳಿಗೆ ಪಾಕ್‌ ಕುತಂತ್ರ – ಸೇನೆಗೆ ಪರಮಾಧಿಕಾರ ನೀಡಿದ ಪ್ರಧಾನಿ ಶೆಹಬಾಜ್ ಶರೀಫ್

    ಇಸ್ಲಾಮಾಬಾದ್‌: ಕಾಶ್ಮೀರದಲ್ಲಿ (Kashmir) ನಡೆದ ಹಿಂದೂಗಳ ನರಮೇಧಕ್ಕೆ ಭಾರತ ಪ್ರತೀಕಾರದ ದಾಳಿ ನಡೆಸಿದೆ. ʻಆಪರೇಷನ್‌ ಸಿಂಧೂರʼ ಹೆಸರಿನಡಿ ಪಾಕ್‌ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದ (PoK) 9 ಉಗ್ರ ನೆಲೆಗಳ ಮೇಲೆ ವಾಯುದಾಳಿ ನಡೆಸಿದೆ. ಆದ್ರೂ ಕುತಂತ್ರ ಬುದ್ದಿ ಬಿಡದ ಪಾಕ್‌ ಭಾರತದ ವಿರುದ್ಧ ಪ್ರತಿದಾಳಿಗೆ ಸಂಚು ರೂಪಿಸುತ್ತಿದೆ.

    ಇಂದು ಮಧ್ಯಾಹ್ನದ ಬಳಿಕ ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಮಿತಿಯ ಸಭೆ ಕರೆದ ಪ್ರಧಾನಿ ಶೆಹಬಾಜ್ ಶರೀಫ್ (Shehbaz Sharif), ಭಾರತದ ಪ್ರತೀಕಾರದ ದಾಳಿಯನ್ನ ತೀವ್ರವಾಗಿ ಖಂಡಿಸಿದ್ದಾರೆ. ಅಪ್ರಚೋದಿತ ಮತ್ತು ಕಾನೂನುಬಾಹಿರ ಯುದ್ಧ ಕೃತ್ಯ ಎಂದು ಕರೆದಿದ್ದಾರೆ. ಅಲ್ಲದೇ ಭಾರತದ ವಿರುದ್ಧ ದಾಳಿಗೆ ಸೇನೆಗೆ (Pakistan Army) ಅಧಿಕಾರ ನೀಡಿದ್ದಾರೆ ಎಂದು ಪಾಕ್‌ ಮಾಧ್ಯಮಗಳು ವರದಿ ಮಾಡಿವೆ.

    ಏನಿದು ʻಆಪರೇಷನ್‌ ಸಿಂಧೂರʼ?
    ಕಳೆದ ಏಪ್ರಿಲ್‌ 22ರಂದು ಕಾಶ್ಮೀರದ ಪೆಹಲ್ಗಾಮ್‌ನ ಬೈಸರನ್‌ ಕಣಿವೆ ಪ್ರದೇಶದಲ್ಲಿ ನಾಲ್ವರು ಉಗ್ರರು ಓರ್ವ ವಿದೇಶಿ ಪ್ರಜೆ ಸೇರಿದಂತೆ 26 ಪ್ರವಾಸಿಗರನ್ನ ಗುಂಡಿಕ್ಕಿ ಕೊಂದಿದ್ದರು. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಪಣ ತೊಟ್ಟಿದ್ದ ಭಾರತ ಮಂಗಳವಾರ ತಡರಾತ್ರಿ 1:44 ಗಂಟೆ ಸುಮಾರಿಗೆ ಪಾಕ್‌ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದೆ. ದಾಳಿಯಲ್ಲಿ ಪಾಕ್‌ ಸೇನೆಯಾಗಲಿ ಅಥವಾ ನಾಗರಿಕರ ಮೇಲಾಗಲಿ ದಾಳಿ ಮಾಡದೇ ಉಗ್ರರ ನೆಲೆಗಳನ್ನು ಮಾತ್ರವೇ ಗುರಿಯಾಗಿಸಿ ದಾಳಿ ನಡೆಸಿದೆ.

    ಮೋಸ್ಟ್‌ವಾಂಟೆಡ್‌ಗಳನ್ನ ತಯಾರು ಮಾಡ್ತಿದ್ದ ನೆಲೆಗಳು ಧ್ವಂಸ:
    ಭಾರತ ಧ್ವಂಸ ಮಾಡಿರುವ ಈ ಉಗ್ರರ ನೆಲೆಗಳು ಮೋಸ್ಟ್‌ ಡೇಂಜರಸ್‌ ತಾಣಗಳು ಎಂದೇ ಗುರುತಿಸಿಕೊಂಡಿದ್ದು, ಇಡೀ ವಿಶ್ವಕ್ಕೆ ಕಂಟಕವಾಗಿದ್ದವು. ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಇಲ್ಲಿ ಅಡಗಿಸಿಡಲಾಗಿತ್ತು. ಜೊತೆಗೆ ವಿಶ್ವಾದ್ಯಂತ ವಿವಿಧೆಡೆಗೆ ಕಳುಹಿಸಲು ಉಗ್ರರಿಗೆ ಇಲ್ಲಿ ತರಬೇತಿ ನೀಡಲಾಗುತ್ತಿತ್ತು ಅನ್ನೋ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ.

    ಎಲ್ಲೆಲ್ಲಿ ದಾಳಿ ನಡೆದಿದೆ?
    1) ಬಹವಾಲ್ಪುರ್: ಅಂತರರಾಷ್ಟ್ರೀಯ ಗಡಿಯಿಂದ ಸುಮಾರು 100 ಕಿ.ಮೀ ದೂರದಲ್ಲಿರುವ ಬಹವಾಲ್ಪುರ್ ಮೇಲೆ ದಾಳಿ ನಡೆದಿದೆ. ಇದು ಜೈಷ್‌ ಉಗ್ರ ಸಂಘಟನೆಯ ಪ್ರಧಾನ ಕಚೇರಿಯಾಗಿತ್ತು.

    2) ಮುರಿಡ್ಕೆ: ಸಾಂಬಾ ಎದುರಿನ ಗಡಿಯಿಂದ 30 ಕಿ.ಮೀ ದೂರದಲ್ಲಿದ್ದು ಇದು ಲಷ್ಕರ್-ಎ-ತೈಬಾ ಸಂಘಟನೆ ಉಗ್ರರ ಶಿಬಿರ ನಡೆಸುತ್ತಿತ್ತು. ಮುಂಬೈ ದಾಳಿ ನಡೆಸಿದ ಉಗ್ರರಿಗೆ ಇಲ್ಲಿ ತರಬೇತಿ ನೀಡಲಾಗಿತ್ತು.

    3) ಗುಲ್ಪುರ್ : ಗಡಿ ನಿಯಂತ್ರಣ ರೇಖೆ ಪೂಂಚ್-ರಾಜೌರಿಯಿಂದ 35 ಕಿ.ಮೀ ದೂರದಲ್ಲಿದೆ. ಪೂಂಚ್‌ನಲ್ಲಿ ಏಪ್ರಿಲ್ 20, 2023 ರಂದು ನಡೆದ ದಾಳಿ ಮತ್ತು ಜೂನ್ 24 ರಂದು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಅಮಾಯಕ ಯಾತ್ರಿಕರ ಮೇಲೆ ಇಲ್ಲಿ ತರಬೇತಿ ಪಡೆದ ಉಗ್ರರು ದಾಳಿ ನಡೆಸಿದ್ದರು.

    4) ಸವಾಯಿ: ಲಷ್ಕರ್‌ ಉಗ್ರರ ಕ್ಯಾಂಪ್‌ ಇದಾಗಿದ್ದು ಗಡಿ ನಿಯಂತ್ರಣ ರೇಖೆಯಿಂದ 30 ಕಿ.ಮೀ ದೂರದಲ್ಲಿದೆ. ಕಳೆದ ವರ್ಷ ಅಕ್ಟೋಬರ್ 20, 24 ರಂದು ಸೋನ್‌ಮಾರ್ಗ್, ಅಕ್ಟೋಬರ್ 24 ರಂದು ಗುಲ್ಮಾರ್ಗ್ ಮತ್ತು ಏಪ್ರಿಲ್ 22 ರಂದು ಪಹಲ್ಗಾಮ್ ಮೇಲೆ ದಾಳಿ ನಡೆಸಿದ ಉಗ್ರರು ಇಲ್ಲಿ ತರಬೇತಿ ಪಡೆದಿದ್ದರು.

    5) ಬಿಲಾಲ್: ಉಗ್ರ ಸಂಘಟನೆ ಜೈಷ್–ಎ–ಮೊಹಮದ್ ಲಾಂಚ್‌ ಪ್ಯಾಡ್‌ ಇದಾಗಿದ್ದು ಉಗ್ರರು ಇಲ್ಲಿ ಕೊನೆಯ ಹಂತದ ತರಬೇತಿ ಪಡೆದು ಭಾರತಕ್ಕೆ ನುಗ್ಗುತ್ತಿದ್ದರು.

    6) ಕೋಟ್ಲಿ: ಗಡಿ ನಿಯಂತ್ರಣ ರೇಖೆಯಿಂದ 15 ಕಿ.ಮೀ ದೂರದಲ್ಲಿದೆ. ಲಷ್ಕರ್‌ ಉಗ್ರರ ಕ್ಯಾಂಪ್‌ ಇದಾಗಿದ್ದು 50 ಉಗ್ರರಿಗೆ ತರಬೇತಿ ನೀಡುವ ಸಾಮರ್ಥ್ಯ ಹೊಂದಿತ್ತು.

    7) ಬರ್ನಾಲಾ: ಭಾರತ ಗಡಿಯಿಂದ 10 ಕಿ.ಮೀ ದೂರದಲ್ಲಿದೆ. ಇಲ್ಲೂ ಲಷ್ಕರ್‌ ಉಗ್ರರಿಗೆ ತರಬೇತಿ ನೀಡಲಾಗುತ್ತಿತ್ತು.

    8) ಸರ್ಜಲ್: ಸಾಂಬಾ ಕಟುವಾ ಬಳಿ ಅಂತಾರಾಷ್ಟ್ರೀಯ ಗಡಿಯಿಂದ 8 ಕಿಲೋಮೀಟರ್ ದೂರದಲ್ಲಿ ಜೈಶ್ ಎ ಮೊಹಮದ್ ಕ್ಯಾಂಪ್.

    9) ಮಹಮೂನಾ: ಸಿಯಾಲ್ ಕೋಟ್ ಬಳಿಯ ಅಂತಾರಾಷ್ಟ್ರೀಯ ಗಡಿಯಿಂದ 15 ಕಿಲೋಮೀಟರ್ ದೂರದಲ್ಲಿ ಹಿಜ್ಬುಲ್ಲಾ ಟ್ರೈನಿಂಗ್ ಸೆಂಟರ್.

  • ಇದು ಪ್ರಾರಂಭವಷ್ಟೇ, ಉಗ್ರ ಪೋಷಕ ಪಾಕ್‌ಗೆ ಭಾರತ ತಕ್ಕ ಪಾಠ ಕಲಿಸುತ್ತೆ – ಯತ್ನಾಳ್

    ಇದು ಪ್ರಾರಂಭವಷ್ಟೇ, ಉಗ್ರ ಪೋಷಕ ಪಾಕ್‌ಗೆ ಭಾರತ ತಕ್ಕ ಪಾಠ ಕಲಿಸುತ್ತೆ – ಯತ್ನಾಳ್

    ವಿಜಯಪುರ: ಭಾರತೀಯ ಸೇನೆ ನಡೆಸಿದ `ಆಪರೇಷನ್ ಸಿಂಧೂರ’ ಇದು ಪ್ರಾರಂಭವಷ್ಟೇ, ಉಗ್ರ ಪೋಷಕ ಪಾಕಿಸ್ತಾನಕ್ಕೆ ಭಾರತ ತಕ್ಕ ಪಾಠ ಕಲಿಸುತ್ತದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಹೇಳಿದರು.

    ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಹಾಕಿಕೊಂಡಿರುವ ಅವರು, ಭಾರತೀಯ ಸೇನೆಯಿಂದ ನಡೆದ ಏರ್‌ಸ್ಟ್ರೈಕ್‌`ಆಪರೇಷನ್ ಸಿಂಧೂರ’ ಪ್ರತೀಕಾರದ ದಾಳಿಯನ್ನು ಸ್ವಾಗತಿಸಿದ್ದಾರೆ. ಪ್ರಧಾನಿ ಮೋದಿಯವರ (PM Modi) ನೇತೃತ್ವದಲ್ಲಿ ಭಾರತೀಯ ಸೇನೆ, ನೌಕಾ ಪಡೆ ಹಾಗೂ ವಾಯು ಪಡೆಗಳು ಉಗ್ರರ ನೆಲೆಯ ಮೇಲೆ ದಾಳಿ ನಡೆಸಿದೆ ಎಂದು ಉಲ್ಲೇಖಿಸಿದ್ದಾರೆ.ಇದನ್ನೂ  ಓದಿ: ಯೋಧರ ಹೋರಾಟ ಶುರುವಾಗಿದೆ: ‘ಆಪರೇಷನ್ ಸಿಂಧೂರ’ಗೆ ಜೈ ಎಂದ ತಲೈವಾ

    ಏ.22 ರಂದು ಜಮ್ಮು ಮತ್ತು ಕಾಶ್ಮೀರದ (Jammu Kashmir) ಪಹಲ್ಲಾಮ್‌ನ (Pahalgam) ಬೈಸರನ್ ಕಣಿವೆಯಲ್ಲಿ ನಡೆದಿದ್ದ ಅಮಾಯಕ ಪ್ರವಾಸಿಗರ ಹತ್ಯೆಯ ಪ್ರತೀಕಾರವನ್ನು ಭಾರತೀಯ ಸೇನೆ ತೆಗೆದುಕೊಂಡಿದೆ. ಇದು ಪ್ರಾರಂಭವಷ್ಟೇ. ಉಗ್ರ ಪೋಷಕ ಪಾಕಿಸ್ತಾನಕ್ಕೆ ಭಾರತ ತಕ್ಕ ಪಾಠ ಕಲಿಸುತ್ತದೆ. ಸಮಸ್ತ ಭಾರತೀಯರ ಪರವಾಗಿ ಈ ದಾಳಿಯನ್ನು ಸ್ವಾಗತಿಸುತ್ತೇನೆ. ಸೇನೆ ಮತ್ತು ಸರ್ಕಾರದ ಜೊತೆ ನಾವೆಲ್ಲರೂ ನಿಲ್ಲೋಣ. ಭಾರತ ಮಾತೆಗೆ ಜಯವಾಗಲಿ, ಜೈ ಹಿಂದ್ ಎಂದು ಬರೆದುಕೊಂಡಿದ್ದಾರೆ.

    ಎಕ್ಸ್‌ನಲ್ಲಿ ಎನಿದೆ?
    ಪ್ರಧಾನಿ ನರೇಂದ್ರ ಮೋದಿ ಜಿ ಅವರ ನೇತೃತ್ವದಲ್ಲಿ ಭಾರತದ ಸೇನೆ, ನೌಕಾ ಪಡೆ ಹಾಗೂ ವಾಯು ಪಡೆ ಉಗ್ರರ ನೆಲೆಯ ಮೇಲೆ ದಾಳಿ ಮಾಡಿ ಪಹಲ್ಗಾಮ್ ನಲ್ಲಿ ನಡೆದ ಅಮಾಯಕ ಪ್ರವಾಸಿಗರ ಹತ್ಯೆಯ ಪ್ರತೀಕಾರ ತೆಗೆದುಕೊಂಡಿದೆ. ಇದು ಪ್ರಾರಂಭವಷ್ಟೇ. ಉಗ್ರ ಪೋಷಕ ಪಾಕಿಸ್ತಾನಕ್ಕೆ ಭಾರತ ತಕ್ಕ ಪಾಠ ಕಲಿಸುತ್ತದೆ. ಸಮಸ್ತ ಭಾರತೀಯರ ಪರವಾಗಿ ಈ ದಾಳಿಯನ್ನು ಸ್ವಾಗತಿಸುತ್ತೇನೆ ಹಾಗೂ ಸೇನೆ ಮತ್ತು ಸರ್ಕಾರದ ಜೊತೆ ನಾವೆಲ್ಲರೂ ನಿಲ್ಲೋಣ.

    ಭಾರತ ಮಾತೆಗೆ ಜಯವಾಗಲಿ
    ಜೈ ಹಿಂದ್.ಇದನ್ನೂ  ಓದಿ: ಭಾರತೀಯರಿಗೆ ಇಂದು ಸಮಾಧಾನ ತಂದ ದಿನ: ಹೆಚ್.ಕೆ ಪಾಟೀಲ್

  • ಪಿಕ್ಚರ್ ಅಭಿ ಬಾಕಿ ಹೈ: ಉಗ್ರರಿಗೆ ಎಚ್ಚರಿಕೆ ಕೊಟ್ಟ ಮಾಜಿ ಸಿಡಿಎಸ್‌ ನರವಾಣೆ

    ಪಿಕ್ಚರ್ ಅಭಿ ಬಾಕಿ ಹೈ: ಉಗ್ರರಿಗೆ ಎಚ್ಚರಿಕೆ ಕೊಟ್ಟ ಮಾಜಿ ಸಿಡಿಎಸ್‌ ನರವಾಣೆ

    ನವದೆಹಲಿ: ಉಗ್ರರ ವಿರುದ್ಧ ಆಪರೇಷನ್‌ ಸಿಂಧೂರ (Operation Sindoor) ಮಾತ್ರ ಅಲ್ಲ, ಪಿಕ್ಚರ್ ಅಭಿ ಬಾಕಿ ಹೈ ಎಂದು ಮಾಜಿ ಸೇನಾ ಮುಖ್ಯಸ್ಥ ಮನೋಜ್ ನರವಾಣೆ (Manoj Naravane) ಪಾಕ್‌ (Pakistan) ಉಗ್ರರಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ಈ ಬಗ್ಗೆ  ಎಕ್ಸ್‌ನಲ್ಲಿ ಅವರು ಪೋಸ್ಟ್‌ ಮಾಡಿದ್ದು, ಮತ್ತೆ ದಾಳಿ ನಡೆಯುವ ಬಗ್ಗೆ ಮುನ್ಸೂಚನೆ ನೀಡಿದ್ದಾರೆ.

    ಪಹಲ್ಗಾಮ್ ಭಯೋತ್ಪಾದಕ ದಾಳಿಯ ಅಪರಾಧಿಗಳನ್ನು ಶಿಕ್ಷಿಸಿ, ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು ಎಂಬುದನ್ನು ಭಾರತ ಬಯಸುತ್ತಿದೆ. ಅಲ್ಲಿಯವರೆಗೂ ಇಂತಹ ಕಾರ್ಯಾಚರಣೆಗಳು ನಡೆಯಬೇಕು ಎಂಬ ಆಗ್ರಹಗಳು ಕೇಳಿಬರುತ್ತಿವೆ. ಇದನ್ನೂ ಓದಿ: I TOLD MODI – ಆಪರೇಷನ್‌ ಸಿಂಧೂರ ಬೆನ್ನಲ್ಲೇ ಕಾರ್ಟೂನ್‌ ವೈರಲ್‌ !

    ಮನೋಜ್ ನರವಾಣೆಯವರು ಭಾರತೀಯ ಸೇನೆಯ 28ನೇ ಸೇನಾ ಮುಖ್ಯಸ್ಥರಾಗಿದ್ದರು. ಸಿಡಿಎಸ್‌ ಬಿಪಿನ್ ರಾವತ್ ಹೆಲಿಕಾಪ್ಟರ್‌ ಅಪಘಾತದಲ್ಲಿ ಸಾವಿಗೀಡಾದ ಬಳಿಕ ಅವರು ಅಧಿಕಾರ ವಹಿಸಿಕೊಂಡಿದ್ದರು.

    ನರವಾಣೆ ಅವರನ್ನು ಸೇನಾ ವಲಯದಲ್ಲಿ ‘ಚೀನಾ ತಜ್ಞ ‘ ಎಂಬ ಹೆಸರಿದೆ. ಜಮ್ಮು ಮತ್ತು ಕಾಶ್ಮೀರ ಹಾಗೂ ಈಶಾನ್ಯ ರಾಜ್ಯಗಳಲ್ಲಿ ನುಸುಳುಕೋರರ ವಿರುದ್ಧದ ಕಾರ್ಯಾಚರಣೆಗಳ ತಂತ್ರ ಹೆಣೆದ ಅನುಭವಿಯಾಗಿದ್ದರು. ಅವರು ಸೇನೆಯ ಉಪ ಮುಖ್ಯಸ್ಥರಾಗುವ ಮೊದಲು ಕೊಲ್ಕತ್ತಾದಲ್ಲಿ ಪ್ರಧಾನ ಕಚೇರಿಯಿರುವ ಭೂಸೇನೆಯ ಪೂರ್ವ ಕಮಾಂಡ್‌ನ ಕಮಾಂಡರ್ ಆಗಿದ್ದರು.

    ಸೇವಾ ಅವಧಿಯಲ್ಲಿ ಹತ್ತು ಹಲವು ಉನ್ನತ ಹುದ್ದೆಗಳನ್ನು ನರವಾಣೆ ನಿರ್ವಹಿಸಿದ್ದಾರೆ. ಇವರ ಸೇವೆಗೆ ಹಲವು ಗೌರವಗಳೂ ಸಂದಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಅತ್ಯುತ್ತಮ ಬೆಟಾಲಿಯನ್ ನಿರ್ವಹಣೆಗಾಗಿ ‘ಸೇನಾ ಪದಕ’, ನಾಗಾಲ್ಯಾಂಡ್‌ನಲ್ಲಿ ಅಸ್ಸಾಂ ರೈಫಲ್‌ನ ಇನ್‌ಸ್ಪೆಕ್ಟರ್ ಜನರಲ್ ಸೇವೆಗೆ ‘ವಿಶಿಷ್ಟ ಸೇವಾ ಪದಕ’, ಪ್ರತಿಷ್ಠಿತ ದಾಳಿ ಪಡೆ (ಸ್ಟೈಕ್ ಕಾರ್ಪ್ಸ್) ಮುನ್ನಡೆಸಿದ್ದಕ್ಕಾಗಿ ‘ಅತಿ ವಿಶಿಷ್ಟ ಸೇವಾ ಪದಕ’ ಅವರಿಗೆ ಒಲಿದಿವೆ. ಶಾಂತಿಪಾಲನಾ ಪಡೆಯೊಂದಿಗೆ ಶ್ರೀಲಂಕಾದಲ್ಲಿ ಕಾರ್ಯನಿರ್ವಹಿಸಿದ್ದ ನರವಾಣೆ ಕೆಲ ಕಾಲ ಮ್ಯಾನ್ಮಾರ್‌ನಲ್ಲಿಯೂ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ಜೂನ್ 1980ರಲ್ಲಿ ಸಿಖ್ ರೆಜಿಮೆಂಟ್‌ನಲ್ಲಿ ಕೆಲಸ ಆರಂಭಿಸಿದ್ದರು. ಇದನ್ನೂ ಓದಿ: ಕುಂಕುಮ ಇಟ್ಟು ಸುದ್ದಿಗೋಷ್ಠಿಗೆ ಬಂದು ಸೈನಿಕರಿಗೆ ಸಲಾಂ ಎಂದ ಸಿಎಂ

  • ಭಾರತೀಯರಿಗೆ ಇಂದು ಸಮಾಧಾನ ತಂದ ದಿನ: ಹೆಚ್.ಕೆ ಪಾಟೀಲ್

    ಭಾರತೀಯರಿಗೆ ಇಂದು ಸಮಾಧಾನ ತಂದ ದಿನ: ಹೆಚ್.ಕೆ ಪಾಟೀಲ್

    ಗದಗ: ಇವತ್ತು ಭಾರತೀಯರಿಗೆ ಸಮಾಧಾನದ ದಿನವಾಗಿದೆ. ಉಗ್ರರು ಕುತಂತ್ರದಿಂದ ದೇಶದ ಪ್ರಜೆಗಳ ಹತ್ಯೆಗೈದಿದ್ದರು. ಅವರಿಗೆ ತಕ್ಕ ಶಾಸ್ತಿ ಮಾಡಲು ಸೇನೆಯು ಉಗ್ರರ ನೆಲೆಗಳನ್ನು ಧ್ವಂಸ ಮಾಡಿದ್ದು ಸಮಾಧಾನ ತಂದಿದೆ ಎಂದು ಕಾನೂನು ಸಚಿವ ಹೆಚ್.ಕೆ ಪಾಟೀಲ್(H K Patil) ಹೇಳಿದರು.

    ಗದಗನಲ್ಲಿ(Gadag) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಾರತೀಯ ಸೈನ್ಯ 9 ಸ್ಥಳಗಳಲ್ಲಿ ಆಪರೇಷನ್ ಸಿಂಧೂರ(Operation Sindoor) ಹೆಸರಲ್ಲಿ ಕಾರ್ಯಚರಣೆ ಮಾಡಿದೆ. ದೇಶದ ಜನ ನಿರ್ಣಯಿಸಿ, ಒಗ್ಗಟ್ಟಿನ ಬಲವನ್ನು ಸೈನ್ಯಕ್ಕೆ ನೀಡಿದ್ದೇವೆ. ಭಾರತವನ್ನು(India) ಕೆಣಕಿದರೇ ತಕ್ಕ ಶಾಸ್ತಿ ಆಗುತ್ತದೆ. ದಾಳಿ ಮೂಲಕ ಮೊದಲ ಹೆಜ್ಜೆಯನ್ನು ಇಂದು ಇಟ್ಟಿದ್ದೇವೆ ಎಂದು ಹರ್ಷ ವ್ಯಕ್ತಪಡಿಸಿದರು. ಇದನ್ನೂ ಓದಿ: ʻಆಪರೇಷನ್‌ ಸಿಂಧೂರʼ ಪಾಕ್‌ಗೆ ಎಚ್ಚರಿಕೆ ಗಂಟೆ, ಭದ್ರತೆ ವಿಚಾರದಲ್ಲಿ ರಾಜಿ ಇಲ್ಲ: ಗುಡುಗಿದ ಸಿದ್ದರಾಮಯ್ಯ

    ಭಾರತ ಕೇವಲ ಶಾಂತಿ ಪ್ರಿಯರು ಎಂದು ಪಾಕಿಸ್ತಾನದವರು ತಿಳಿದುಕೊಂಡಿದ್ದರು. ಅವರಿಗೆ ಸರಿಯಾದ ಉತ್ತರ ನೀಡುವ ಮೂಲಕ ಜ್ಞಾನೋದಯ ಮಾಡಲಾಗಿದೆ. ಭಾರತವನ್ನು ಕೆಣಕಿದರೆ ಬಿಡುವ ಮಾತೇ ಇಲ್ಲ ಎನ್ನುವಂತಹ ಕಾರ್ಯಚರಣೆ ಮಾಡಲಾಗಿದೆ. ಇದು ಯುದ್ಧ ಕಾಲವಾಗಿದ್ದು, ಎಲ್ಲರೂ ಸನ್ನದ್ಧರಾಗಿರಬೇಕು. ಎಲ್ಲರೂ ತಯಾರಿ ಮಾಡಿಕೊಳ್ಳಬೇಕಿದೆ ಎಂದರು. ಇದನ್ನೂ ಓದಿ: I TOLD MODI – ಆಪರೇಷನ್‌ ಸಿಂಧೂರ ಬೆನ್ನಲ್ಲೇ ಕಾರ್ಟೂನ್‌ ವೈರಲ್‌ !

    ಜಿಲ್ಲೆಯಲ್ಲಿ ಡಿಸಿ, ಎಸ್ಪಿ ಹಾಗೂ ಮಾಜಿ ಸೈನ್ಯದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಜೊತೆ ಮಾತನಾಡಿದ್ದೇನೆ. ನಾಳೆ ಮಾಜಿ ಸೈನಿಕರು, ಎನ್‌ಸಿಸಿ, ಸ್ಕೌಟ್ಸ್, ಗೈಡ್ಸ್, ಪೊಲೀಸ್ ಅಂಗ ಸಂಸ್ಥೆಗಳ ಜೊತೆ ಡಿಸಿ ಕಚೇರಿಯಲ್ಲಿ ಸಭೆ ಕರೆಯಲಾಗಿದೆ. ಜನರನ್ನು ಜಾಗೃತಿಗೊಳಿಸುವ ನಿಟ್ಟಿನಲ್ಲಿ ಸಮಾಲೋಚನೆ ನಡೆಸಲಾಗುವುದು ಎಂದು ಹೇಳಿದರು.

  • ʻಆಪರೇಷನ್‌ ಸಿಂಧೂರʼ ಪಾಕ್‌ಗೆ ಎಚ್ಚರಿಕೆ ಗಂಟೆ, ಭದ್ರತೆ ವಿಚಾರದಲ್ಲಿ ರಾಜಿ ಇಲ್ಲ: ಗುಡುಗಿದ ಸಿದ್ದರಾಮಯ್ಯ

    ʻಆಪರೇಷನ್‌ ಸಿಂಧೂರʼ ಪಾಕ್‌ಗೆ ಎಚ್ಚರಿಕೆ ಗಂಟೆ, ಭದ್ರತೆ ವಿಚಾರದಲ್ಲಿ ರಾಜಿ ಇಲ್ಲ: ಗುಡುಗಿದ ಸಿದ್ದರಾಮಯ್ಯ

    – ಪಹಲ್ಗಾಮ್ ಹತ್ಯಾಕಾಂಡದಲ್ಲಿ ಜೀವ ಕಳೆದುಕೊಂಡ ಕುಟುಂಬಗಳಿಗೆ ನೆಮ್ಮದಿ ಸಿಕ್ಕಿದೆ ಎಂದ ಸಿಎಂ

    ಬೆಂಗಳೂರು: ರಾಷ್ಟ್ರೀಯ ಭದ್ರತೆ ವಿಷಯದಲ್ಲಿ ಯಾವುದೇ ರಾಜಿ ಸಾಧ್ಯವಿಲ್ಲ. ʻಆಪರೇಷನ್‌ ಸಿಂಧೂರʼ ದಾಳಿಯನ್ನು ಎಲ್ಲರೂ ಬೆಂಬಲಿಸಿದ್ದೇವೆ. ಇದು ಪಾಕಿಸ್ತಾನಕ್ಕೆ (Pakistan) ಎಚ್ಚರಿಕೆಯ ಗಂಟೆಯಾಗಿದೆ. ನಮ್ಮ ಸರ್ಕಾರ ನೂರಕ್ಕೆ ನೂರರಷ್ಟು ಸೇನೆ ಕೈಗೊಂಡಿರುವ ಕ್ರಮವನ್ನು ಬೆಂಬಲಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಗುಡುಗಿದ್ದಾರೆ.

    ಮುಖ್ಯಮಂತ್ರಿಗಳ ಕಾವೇರಿ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ, ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (PoK)ಗಳಲ್ಲಿನ ಉಗ್ರಗಾಮಿಗಳ ನೆಲೆಯನ್ನು ನಾಶ ಮಾಡಿ ಪರಾಕ್ರಮ ಮೆರೆದ ಭಾರತದ ಹೆಮ್ಮೆಯ ಧೀರ ಸೈನಿಕರಿಗೆ ಇಡೀ ರಾಜ್ಯದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಸೇನೆ ನಡೆಸಿರುವ ಈ ದಾಳಿ ಭಾರತದ ಮೇಲೆ ಸತತವಾಗಿ ದಾಳಿ ನಡೆಸಿ ಹತ್ಯಾಕಾಂಡ ನಡೆಸುತ್ತಿದ್ದ ಉಗ್ರಗಾಮಿಗಳಿಗೆ ಕಲಿಸಿದ ಪಾಠ ಮಾತ್ರವಲ್ಲ, ಈ ಉಗ್ರರಿಗೆ ಆಶ್ರಯ ಮತ್ತು ನೆರವು ನೀಡಿ ಭಾರತದ ವಿರುದ್ಧ ಅವರನ್ನು ಛೂಬಿಡುತ್ತಿದ್ದ ಪಾಕಿಸ್ಥಾನಕ್ಕೂ ನೀಡಿರುವ ಎಚ್ಚರಿಕೆ ಆಗಿದೆ ಎಂದು ಹೇಳಿದರು. ಇದನ್ನೂ ಓದಿ: ಸಿಂಧೂರ ಅಳಿಸಿದವರಿಗೆ ನಾರಿ ಶಕ್ತಿಯಿಂದಲೇ ಭಾರತ ಉತ್ತರ – ಕರ್ನಲ್ ಸೋಫಿಯಾ, ವಿಂಗ್ ಕಮಾಂಡರ್ ವ್ಯೋಮಿಕಾ ಬಗ್ಗೆ ಗೊತ್ತಾ?

    ದೇಶದ ಸೇನಾಪಡೆ ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರಗಾಮಿಗಳ ನೆಲೆಗಳನ್ನು ನಾಶಗೊಳಿಸಿ ಪರಾಕ್ರಮ ಮೆರೆದಿದ್ದಾರೆ. ಆಪರೇಷನ್ ಸಿಂಧೂರ ಹೆಸರಿನಲ್ಲಿ ಸುಮಾರು 9 ಉಗ್ರಗಾಮಿಗಳ ನೆಲೆಗಳನ್ನು ನಾಶಗೊಳಿಸಿದೆ. ಕೇವಲ ಉಗ್ರಗಾಮಿಗಳ ನೆಲೆಗಳ ಮೇಲೆ ಮಾತ್ರ ದಾಳಿ ನಡೆಸಲಾಗಿದೆ. ನಮ್ಮ ಸೈನಿಕರು ಉಗ್ರರ ನೆಲೆಗಳನ್ನು ಪತ್ತೆ ಹಚ್ಚಿ ದಾಳಿ ಮಾಡಿದ್ದು, ಅಮಾಯಕ ಜನರ ಸಾವು ನೋವು ತಪ್ಪಿಸಿದ್ದಾರೆ. ನಮ್ಮ ಸೈನಿಕರ ಕಾರ್ಯದಕ್ಷತೆಗೆ ದೊಡ್ಡ ಸಲಾಂ. ಈ ದಾಳಿಯನ್ನು ನಾವು ಸ್ವಾಗತಿಸುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: I TOLD MODI – ಆಪರೇಷನ್‌ ಸಿಂಧೂರ ಬೆನ್ನಲ್ಲೇ ಕಾರ್ಟೂನ್‌ ವೈರಲ್‌ !

    ಕಾಶ್ಮೀರದ ಪಹಲ್ಗಾವ್‌ನಲ್ಲಿ ಅಮಾಯಕ 26ಜನ ಹತ್ಯೆ ನಡೆಸಿದ ಉಗ್ರರನ್ನು ಬೆಂಬಲಿಸುವವರು, ಸಾಕುವವರು ಸಹ ಪಾಕಿಸ್ತಾನದವರೇ ಎಂಬುವುದು ಸ್ಪಷ್ಟವಾಗಿದೆ. ನಾವು ಕೇಂದ್ರ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದ್ದೇವೆ. ರಾಜ್ಯದಲ್ಲಿ ಸುರಕ್ಷತೆಯ ಕುರಿತು ಎಲ್ಲಾ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಉಗ್ರರ ಮೇಲಿನ ದಾಳಿ ಹಿನ್ನೆಲೆಯಲ್ಲಿ ಸಂವಿಧಾನ ಉಳಿಸಿ ಅಡಿಯಲ್ಲಿ ರಾಯಚೂರಿನಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಕಾರ್ಯಕ್ರಮನ್ನು ರದ್ದುಗೊಳಿಸಲಾಗಿದೆ ವಿವರಿಸಿದರು. ಇದನ್ನೂ ಓದಿ: ಎರಡನೇ ದೀಪಾವಳಿ, ಭಾರತೀಯರ ಸಿಂಧೂರಕ್ಕೆ ಕೈ ಹಾಕಿದ್ದಕ್ಕೆ ತಕ್ಕ ಶಾಸ್ತಿ: ಸಿ.ಟಿ ರವಿ

    ಉಗ್ರರ ನೆಲೆಗಳ ಮೇಲೆ ಸೇನಾದಾಳಿ ನಡೆಸದೆ ಭಾರತದ ಮುಂದೆ ಬೇರೆ ಆಯ್ಕೆಗಳಿರಲಿಲ್ಲ. ಪಹಲ್ಗಾಮ್ ನಲ್ಲಿ ನಡೆದ ಹತ್ಯಾಕಾಂಡ ನಡೆಸಿದ ಉಗ್ರಗಾಮಿಗಳು ಪಾಕಿಸ್ತಾನಕ್ಕೆ ಸೇರಿದವರೆಂದು ಜಗಜ್ಜಾಹೀರಾಗಿದ್ದರೂ ಪಾಕಿಸ್ತಾನ ಇದನ್ನು ಒಪ್ಪಿಕೊಂಡು ಕ್ರಮಕೈಗೊಳ್ಳುವ ಭರವಸೆ ನೀಡದೆ ಹಠಮಾರಿ ಧೋರಣೆ ತಳೆದಿರುವ ಕಾರಣದಿಂದಾಗಿ ಭಾರತಕ್ಕೂ ಈ ದಾಳಿ ನಡೆಸದೆ ಬೇರೆ ಆಯ್ಕೆಗಳಿರಲಿಲ್ಲ. ಉಗ್ರಗಾಮಿಗಳ ನೆಲೆಗಳನ್ನು ಧೂಳೀಪಟ ಮಾಡಿ ಉಗ್ರರನ್ನು ಶಿಕ್ಷಿಸಿದ ನಮ್ಮ ಸೈನಿಕರ ಧೀರೋದ್ದಾತ ಪರಾಕ್ರಮದಿಂದ ಪಹಲ್ಗಾಮ್ ಹತ್ಯಾಕಾಂಡದಲ್ಲಿ ತಮ್ಮವರನ್ನು ಕಳೆದುಕೊಂಡ ಕುಟುಂಬಗಳಿಗೆ ತುಸು ನೆಮ್ಮದಿ, ಸಮಾಧಾನ ಸಿಕ್ಕಿರಬಹುದೆಂದು ಭಾವಿಸಿದ್ದೇನೆ. ಇದು ಪಾಕಿಸ್ಥಾನಕ್ಕೆ ಮಾತ್ರವಲ್ಲ ಭಾರತದ ಜೊತೆ ಈ ರೀತಿಯ ಕಿಡಿಗೇಡಿತನವನ್ನು ನಡೆಸುವ ನೆರೆಯ ಎಲ್ಲ ದೇಶಗಳಿಗೆ ಕೂಡಾ ಇಂದಿನ ಸೇನಾದಾಳಿ ಎಚ್ಚರಿಕೆಯ ಗಂಟೆಯಾಗಿದೆ ಎಂದು ಎಚ್ಚರಿಸಿದರು. ಇದನ್ನೂ ಓದಿ: Operation Sindoor | ಶ್ರೀನಗರ ಏರ್‌ಪೋರ್ಟ್‌ ನಿಯಂತ್ರಣಕ್ಕೆ ಪಡೆದ IAF – ಜೆ&ಕೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

    ಉಗ್ರಗಾಮಿಗಳ ನೆಲೆಯನ್ನೇ ಕೇಂದ್ರವಾಗಿಟ್ಟುಕೊಂಡು ಅಮಾಯಕ ಜನರ ಸಾವು-ನೋವು ನಡೆಯದಂತೆ ದಾಳಿ ನಡೆಸಿರುವ ನಮ್ಮ ಸೈನಿಕರ ಕಾರ್ಯಕ್ಷಮತೆ ಮತ್ತು ಪರಿಣತಿಗೆ ನನ್ನದೊಂದು ದೊಡ್ಡ ಸಲಾಮ್. ಭಾರತ ಸರ್ಕಾರ ಕೈಗೊಂಡಿರುವ ಈ ನಿರ್ಧಾರವನ್ನು ನಮ್ಮ ಪಕ್ಷ ಸಂಪೂರ್ಣ ಬೆಂಬಲಿಸಿದೆ. ನಾನು ಕೂಡಾ ನಮ್ಮ ಸರ್ಕಾರ ಮತ್ತು ರಾಜ್ಯದ ಪರವಾಗಿ ಸಂಪೂರ್ಣ ಬೆಂಬಲ ಘೋಷಿಸುತ್ತಿದ್ದೇನೆ. ಇದು ನಾವೆಲ್ಲರೂ ಒಗ್ಗಟ್ಟಿನಿಂದ ಮತ್ತು ಅಷ್ಟೇ ಎಚ್ಚರದಿಂದ ಇರುವ ಕಾಲ. ರಾಜ್ಯದ ಭದ್ರತಾ ವ್ಯವಸ್ಥೆ ಮೇಲೆ ನಿಗಾ ಇಡುವಂತೆ ಪೊಲೀಸ್ ವರಿಷ್ಠರಿಗೆ ತಿಳಿಸಿದ್ದೇನೆ. ನಮ್ಮ ಸರ್ಕಾರ ಕೇಂದ್ರ ಸರ್ಕಾರದ ಜೊತೆಯಲ್ಲಿಯೂ ಸಂಪರ್ಕದಲ್ಲಿರುತ್ತದೆ. ಅಲ್ಲಿಂದ ಬರುವ ಸೂಚನೆಗಳನ್ನು ಪಾಲಿಸಲಾಗುತ್ತದೆ. ಯಾರೂ ಭಯಭೀತರಾಗುವ ಅವಶ್ಯಕತೆ ಇಲ್ಲ. ಕಟ್ಟುನಿಟ್ಟಿನ ಕ್ರಮಗಳೊಂದಿಗೆ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಲಾಗುವುದು ಎಂದು ಭರವಸೆ ನೀಡಿದರು. ಇದನ್ನೂ ಓದಿ: Operation Sindoor | ಮೋಸ್ಟ್‌ ಡೇಂಜರಸ್‌ ಉಗ್ರರನ್ನ ತಯಾರು ಮಾಡ್ತಿದ್ದ ತಾಣಗಳು ಉಡೀಸ್‌