ಇಸ್ಲಾಮಾಬಾದ್: ಪಹಲ್ಗಾಮ್ ಉಗ್ರರ ದಾಳಿಗೆ ಭಾರತದ (India) ಪ್ರತೀಕಾರ ಮುಂದುವರೆದಿದ್ದು, ಪಾಕ್ (Pakistan) ತತ್ತರಿಸಿ ಹೋಗಿದೆ. ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ನಿವಾಸದ ಸಮೀಪದಲ್ಲೇ ಸ್ಫೋಟ ಸಂಭವಿಸಿದ್ದು, ಪ್ರಾಣಭಯದಲ್ಲಿ ಅವರು ಬಂಕರ್ ಸೇರಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಪಾಕ್ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಶೆಹಬಾಜ್ ಶರೀಫ್ ಅವರ ಮನೆಯಿದೆ. ಆ ಮನೆಯಿಂದ 20 ಕಿಮೀ ದೂರದಲ್ಲೇ ಭಾರೀ ಸ್ಫೋಟದ ಸದ್ದಾಗಿದೆ. ಇದರಿಂದ ಪಾಕ್ ಪ್ರಧಾನಿ ಬೆಚ್ಚಿದ್ದಾರೆ. ಇದರಿಂದ ಪಾಕಿಸ್ತಾನದಲ್ಲಿ ದಿಕ್ಕು ತೋಚದ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶದ ಹಲವು ನಗರಗಳು ಕತ್ತಲಲ್ಲಿ ಸಿಲುಕಿವೆ. ಕೆಲವು ನಗರಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.
ರಸ್ತೆಗಳಿಗೆ ಬಾರದಂತೆ ಪಾಕ್ ನಾಗರಿಕರಿಗೆ ಅಲ್ಲಿನ ಸ್ಥಳೀಯ ಆಡಳಿತ ಸೂಚನೆ ನೀಡಿದೆ. ಇದರ ನಡುವೆಯೇ ಪಾಕಿಸ್ತಾನದ ಪೈಲಟ್‌ನನ್ನು ಭಾರತೀಯ ಸೇನೆ ವಶಕ್ಕೆ ಪಡೆದಿದೆ ಎಂದು ವರದಿಯಾಗಿದೆ.
ನವದೆಹಲಿ: ಪಾಕಿಸ್ತಾನ ಸಶಸ್ತ್ರಪಡೆಗಳು (Pakistan Armed Forces) ಮೇ 8 ಮತ್ತು 9ರ ಮಧ್ಯರಾತ್ರಿ ಇಡೀ ಪಶ್ಚಿಮ ಗಡಿಯಲ್ಲಿ ನಡೆಸಿದ ದಾಳಿಯನ್ನು ಪರಿಣಾಮಕಾರಿಯಾಗಿ ಹಿಮ್ಮೆಟ್ಟಿಸಿರುವುದಾಗಿ ಭಾರತೀಯ ಸೇನೆ (Indian Army) ಅಧಿಕೃತ ಹೇಳಿಕೆ ನೀಡಿದೆ.
OPERATION SINDOOR
Pakistan Armed Forces launched multiple attacks using drones and other munitions along entire Western Border on the intervening night of 08 and 09 May 2025. Pak troops also resorted to numerous cease fire violations (CFVs) along the Line of Control in Jammu and… pic.twitter.com/WTdg1ahIZp
ಈ ಕುರಿತು ಇಂಡಿಯನ್ ಆರ್ಮಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಪಾಕಿಸ್ತಾನ ಸಶಸ್ತ್ರ ಪಡೆಗಳು ಇದೇ ಮೇ 08 ಮತ್ತು 09ರ ಮಧ್ಯರಾತ್ರಿ ಇಡೀ ಪಶ್ಚಿಮ ಗಡಿಯಲ್ಲಿ ಡ್ರೋನ್‌ಗಳು (Drones) ಮತ್ತು ಇತರ ಯುದ್ಧಸಾಮಗ್ರಿಗಳನ್ನು ಬಳಸಿಕೊಂಡು ಅನೇಕ ದಾಳಿಗಳನ್ನು ನಡೆಸಿದವು. ಜಮ್ಮು ಮತ್ತು ಕಾಶ್ಮೀರದ (Jammu and Kashmir) ನಿಯಂತ್ರಣ ರೇಖೆಯ ಉದ್ದಕ್ಕೂ ಪಾಕ್ ಪಡೆಗಳು ಹಲವಾರು ಕದನ ವಿರಾಮ ಉಲ್ಲಂಘನೆ ಮಾಡಿವೆ. ಆದ್ರೆ ಪಾಕ್‌ನ ಡ್ರೋನ್ ದಾಳಿಗಳನ್ನು ಪರಿಣಾಮಕಾರಿಯಾಗಿ ಹಿಮ್ಮೆಟ್ಟಿಸಿ, ಸಿಎಫ್‌ವಿಗಳಿಗೆ ತಕ್ಕ ಉತ್ತರ ನೀಡಲಾಗಿದೆ ಎಂದು ಸೇನೆ ಹೇಳಿದೆ. ಇದನ್ನೂ ಓದಿ: ಪಾಕ್‌ನ ಪ್ರಮುಖ ಎಫ್-16 ಹೊಡೆದುರುಳಿಸಿದ ಭಾರತೀಯ ವಾಯು ಸೇನೆ
ಅಲ್ಲದೇ ಭಾರತೀಯ ಸೇನೆಯು ರಾಷ್ಟ್ರದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡಲು ಬದ್ಧವಾಗಿದೆ. ಎಲ್ಲಾ ದುಷ್ಟ ವಿನ್ಯಾಸಗಳಿಗೆ ಬಲದಿಂದ ಪ್ರತಿಕ್ರಿಯಿಸಲಾಗುವುದು ಎಂದು ಹೇಳಿದೆ. ಇದನ್ನೂ ಓದಿ: ಸಾಂಬಾದಲ್ಲಿ ಹಲವು ಪಾಕ್ ಉಗ್ರರ ಹತ್ಯೆ
ಜಮ್ಮು ಮತ್ತು ಕಾಶ್ಮೀರ, ಪಂಜಾಬ್ ಮತ್ತು ಗುಜರಾತ್ ಸೇರಿದಂತೆ ದೇಶದ ಉತ್ತರ ಮತ್ತು ಪಶ್ಚಿಮ ಭಾಗಗಳಲ್ಲಿರುವ 15 ನಗರಗಳಲ್ಲಿನ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಉದ್ವಿಗ್ನತೆ ಹೆಚ್ಚಿಸಲು ಪಾಕ್ ಪ್ರಯತ್ನಿಸಿತು. ಆದರೆ, ಆ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ. ಇದರಿಂದ ಯಾವುದೇ ಹಾನಿ ಸಂಭವಿಸಿಲ್ಲ. ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಇದನ್ನೂ ಓದಿ: ಪಾಕಿಸ್ತಾನಿಗಳಿಗೆ ಶಸ್ತ್ರಾಸ್ತ್ರಗಳನ್ನ ತ್ಯಜಿಸುವಂತೆ ಅಮೆರಿಕ ಹೇಳಲು ಸಾಧ್ಯವಿಲ್ಲ: ಜೆಡಿ ವ್ಯಾನ್ಸ್
ನವದೆಹಲಿ: ಜಮ್ಮುವಿನ ಮೇಲೆ ಪಾಕ್ 100 ಕ್ಷಿಪಣಿ ದಾಳಿ ನಡೆಸಿದ ಬೆನ್ನಲ್ಲೇ ಕೌಂಟರ್ ಅಟ್ಯಾಕ್ ಮಾಡಿರುವ ಭಾರತ ಲಾಹೋರ್ (Lahore) ಮೇಲೆ ಮಿಸೈಲ್‌ಗಳ ಸುರಿಮಳೆ ಗರೆದಿದೆ. ಆಪರೇಷನ್ ಸಿಂಧೂರ (Operation Sindoor) ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದು, ಪಾಕ್ ಮತ್ತು ಅಲ್ಲಿನ ಜನತೆ ತತ್ತರಿಸಿದೆ. ಇಷ್ಟಾಗಿಯೂ ಕಿತಾಪತಿ ಬಿಡದ ಪಾಕಿಸ್ತಾನ ಮತ್ತೆ ಭಾರತದ ಜಮ್ಮುವಿನ ಮೇಲೆ ದಾಳಿಗೆ ವಿಫಲಯತ್ನ ನಡೆಸಿದೆ.
ಜಮ್ಮುವಿನಲ್ಲಿ ಇದುವರೆಗೆ ಪಾಕಿಸ್ತಾನದ 50ಕ್ಕೂ ಹೆಚ್ಚು ಡ್ರೋನ್ ದಾಳಿಯನ್ನು ಭಾರತೀಯ ವಿಫಲಗೊಳಿಸಿದೆ. ಭಾರತೀಯ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಹಾಗೂ ವಿವಿಧ ಪ್ರದೇಶಗಳನ್ನು ಗುರಿಯಾಗಿಸಿ ಪಾಕಿಸ್ತಾನ ಡ್ರೋನ್ ದಾಳಿ ನಡೆಸಿತ್ತು. ಅವಂತಿಪುರ, ಶ್ರೀನಗರ, ಜಮ್ಮು, ಪಠಾಣ್‌ಕೋಟ್, ಅಮೃತಸರ, ಕಪುರ್ತಲ, ಜಲಂಧರ್, ಲುಧಿಯಾನ, ಆದಂಪುರ, ಬಟಿಂಡಾ, ಚಂಡೀಗಢ, ನಾಲ್, ಫಲೋಡಿ, ಉತ್ತರಲೈ, ಭುಜ್ ಸೇರಿ ಒಟ್ಟು 15 ನಗರಗಳ ಮೇಲೂ ದಾಳಿಗೆ ಸಂಚುಮಾಡಿತ್ತು. ಆದ್ರೆ ಭಾರತೀಯ ಸೇನೆ ಎಲ್ಲಾ ದಾಳಿಯನ್ನ ವಿಫಲಗೊಳಿಸಿದೆ. ಇದನ್ನೂ ಓದಿ: ಕರಾಚಿಯ 15 ಕಡೆ ಭಾರೀ ಸ್ಫೋಟ – INS ವಿಕ್ರಾಂತ್ ನೌಕೆಯಿಂದ ಅಟ್ಯಾಕ್
ಮೇ 7 ರಂದು ಭಾರತ ಪಾಕಿಸ್ತಾನ ಹಾಗೂ ಪಿಒಕೆಯಲ್ಲಿದ್ದ 9 ಭಯೋತ್ಪಾದಕರ ಶಿಬಿರಗಳ ಮೇಲೆ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆಸಿ ಉಗ್ರರನ್ನು ಧ್ವಂಸಮಾಡಿದೆ, ಇದಕ್ಕೆ ಪ್ರತಿಯಾಗಿ ಪಾಕ್ ಭಾರತದ ಅಮಾಯಕ ನಾಗರಿಕರ ಮೇಲೆ ದಾಳಿ ಮಾಡಿ 16 ಜನರನ್ನು ಕೊಂದಿದೆ. ಅಲ್ಲದೆ ಉದ್ಧಟತನ ತೋರಿರುವ ಪಾಕಿಸ್ತಾನ ಸೈನ್ಯ ಗುರುವಾರ ಸಂಜೆಯಿಂದ ಕ್ಷಿಪಣಿ ದಾಳಿ ಮಾಡಿದೆ. ಜಮ್ಮುವಿನ ಮೇಲೆ ದಾಳಿ ಮುಂದುವರಿಸಿದೆ. ಭಾರತ ಪ್ರತಿದಾಳಿ ಮಾಡಿ, ಪಾಕಿಸ್ತಾನದ ಕ್ಷಿಪಣಿಗಳನ್ನು ಹೊಡೆದುರುಳಿಸಿದೆ. ಇದನ್ನೂ ಓದಿ: ಗಡಿ, ಏರ್‌ಪೋರ್ಟ್‌ಗಳ ಭದ್ರತೆ ಪರಿಶೀಲನೆ – ಉನ್ನತ ಅಧಿಕಾರಿಗಳೊಂದಿಗೆ ಅಮಿತ್ ಶಾ ಚರ್ಚೆ
ಪೂಂಚ್ ಹಾಗೂ ರಜೌರಿಯಲ್ಲಿ ಸ್ಫೋಟಗಳ ಸದ್ದು:
ಇನ್ನೂ ಲೈನ್ ಆಫ್ ಕಂಟ್ರೋಲ್ ಬಳಿ ಉದ್ವಿಗ್ನತೆ ಹೆಚ್ಚಾಗಿದೆ, ಜಮ್ಮುವಿನ ಪೂಂಚ್ ಹಾಗೂ ರಜೌರಿ ಜಿಲ್ಲೆಗಳಲ್ಲಿ ಸ್ಫೋಟದ ಸದ್ದು ಕೇಳಿಬಂದಿದೆ. ಆದರೆ ಭಯಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ಜನರಿಗೆ ಧೈರ್ಯ ತುಂಬಿದ್ದು, ಜನರು ಮನೆಯಲ್ಲಿಯೇ ಇರಲು ಸೂಚಿಸಲಾಗಿದೆ. ಲೈಟ್ ಆಫ್ ಮಾಡಿ, ಕಿಟಕಿಗಳಿಗೆ ಪರದೆ ಹಾಕಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಾಂಬಾದಲ್ಲಿ ಹಲವು ಪಾಕ್ ಉಗ್ರರ ಹತ್ಯೆ
ಅಮೃತಸರ DPRO ಮಾತನಾಡಿ, ಯಾವುದೇ ಕಾರಣಕ್ಕೂ ಭಯಪಡಬೇಡಿ. ಸೈರನ್ ಮೊಳಗುತ್ತದೆ. ಪರಿಸ್ಥಿತಿ ತಿಳಿಯಾದ ನಂತರ ಮತ್ತೆ ಸಂದೇಶ ರವಾನಿಸುತ್ತೇವೆ. ನಮ್ಮ ಸೈನಿಕರು ಕಾರ್ಯಪ್ರವೃತ್ತರಾಗಿದ್ದಾರೆ. ನಾವೆಲ್ಲರೂ ಮನೆಯಲ್ಲಿಯೇ ಇದ್ದು ಅವರಿಗೆ ಬೆಂಬಲ ನೀಡಬೇಕು. ಭಯಪಡುವ ಅಗತ್ಯವಿಲ್ಲ,” ಎಂದು ಅವರು ಹೇಳಿದ್ದಾರೆ. ಈ ಮಾತನ್ನು ಅವರು ನೇರವಾಗಿ ಹೇಳಿದ್ದಾರೆ. ಇದನ್ನೂ ಓದಿ: ಪಾಕ್‌ನ ಪ್ರಮುಖ ಎಫ್-16 ಹೊಡೆದುರುಳಿಸಿದ ಭಾರತೀಯ ವಾಯು ಸೇನೆ
ಶ್ರೀನಗರ: ʻಆಪರೇಷನ್ ಸಿಂಧೂರʼಕ್ಕೆ (Operation Sindoor) ಪ್ರತೀಕಾರವಾಗಿ ಪಾಕಿಸ್ತಾನ ಭಾರತದ ಮೇಲೆ ಕ್ಷಿಪಣಿ ದಾಳಿ ನಡೆಸುತ್ತಿದ್ದು, ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆ ಭಾರತದ 24 ವಿಮಾನ ನಿಲ್ದಾಣಗಳನ್ನು ಬಂದ್ ಮಾಡಲಾಗಿದೆ.
ಗುರುವಾರ ಪಾಕಿಸ್ತಾನ ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆಸುತ್ತಿದ್ದಂತೆಯೇ ಭಾರತವು ಕೂಡ ಲಾಹೋರ್, ಇಸ್ಲಾಮಾಬಾದ್ ಮೇಲೆ ದಾಳಿ ಆರಂಭಿಸಿದೆ. ಹೀಗಾಗಿ ಉಭಯ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚುತ್ತಿದ್ದು, ವಿಮಾನ ನಿಲ್ದಾಣದಲ್ಲಿ ಭದ್ರತೆ ಹೆಚ್ಚಿಸಲಾಗಿದೆ.
ಕ್ಷಿಪಣಿಗಳನ್ನು ಬಳಸಿಕೊಂಡು ಹಮಾಸ್ ಸ್ಟೈಲ್‌ನಲ್ಲಿ ಪಾಕ್ ಆರ್ಮಿ ಜಮ್ಮು, ಪಂಜಾಬ್ ಹಾಗೂ ರಾಜಸ್ಥಾನದ ಕೆಲವು ಸ್ಥಳಗಳನ್ನು ಗುರಿಯಾಗಿಸಿಕೊಂಡು ಅಟ್ಯಾಕ್ ಮಾಡಿದೆ. ಭಾರತದ ಏರ್ ಡಿಫೆನ್ಸ್ ಯೂನಿಟ್‌ನಿಂದ ಪಾಕ್‌ನ ಎಲ್ಲ ಕ್ಷಿಪಣಿಗಳನ್ನು ಉಡೀಸ್ ಮಾಡಿ, ಭಾರತವು ತಕ್ಕ ಪ್ರತ್ಯುತ್ತರ ನೀಡಿದೆ.
– ಶೆಹಬಾಜ್ ಷರೀಫ್ ಮನೆಗೆ 20 ಕಿಮೀ ದೂರದಲ್ಲಿ ಸ್ಫೋಟದ ಸದ್ದು
ಇಸ್ಲಾಮಾಬಾದ್: ಭಾರತ ನಡೆಸಿದ ಮಿಸೈಲ್ ದಾಳಿಗೆ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ನಡುಗುವಂತಾಗಿದೆ. ಪಾಕ್ ಪ್ರಧಾನಿ ಮನೆ ಬಳಿಯೇ ದಾಳಿಯಾಗಿದೆ ಎಂದು ವರದಿಯಾಗಿದೆ.
ಪಾಕ್ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಶೆಹಬಾಜ್ ಶರೀಫ್ ಅವರ ಮನೆಯಿದೆ. ಮನೆಗೆ 20 ಕಿಮೀ ದೂರದಲ್ಲೇ ಸ್ಫೋಟದ ಸದ್ದಾಗಿದೆ. ಇದನ್ನೂ ಓದಿ: ಭಾರತ-ಪಾಕ್ ಗಡಿಯಲ್ಲಿ ಹೈ-ಅಲರ್ಟ್ ಘೋಷಣೆ
ಭಾರತದ ದಾಳಿಗೆ ಪಾಕ್ ಪ್ರಧಾನಿಯೂ ಬೆಚ್ಚಿದ್ದಾರೆ. ಪಾಕಿಸ್ತಾನದಲ್ಲಿ ದಿಕ್ಕು ತೋಚದ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶದ ಹಲವು ನಗರಗಳು ಕತ್ತಲಲ್ಲಿ ಸಿಲುಕಿವೆ. ಕೆಲವು ನಗರಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.
ರಸ್ತೆಗಳಿಗೆ ಬಾರದಂತೆ ಪಾಕ್ ನಾಗರಿಕರಿಗೆ ಅಲ್ಲಿನ ಸ್ಥಳೀಯ ಆಡಳಿತಗಳಿಂದ ಸೂಚನೆ ನೀಡಿದೆ. ಪಾಕಿಸ್ತಾನದ ಪೈಲಟ್‌ನನ್ನು ಭಾರತೀಯ ಸೇನೆ ವಶಕ್ಕೆ ಪಡೆದಿರೋದು ಎನ್ನಲಾಗಿದೆ. ಇದನ್ನೂ ಓದಿ: ಭಾರತದ ಮೇಲೆ ಪಾಕ್‌ನಿಂದ 100 ಕ್ಷಿಪಣಿ ದಾಳಿ
ಶ್ರೀನಗರ: ಭಾರತದ ಮೇಲೆ ಸೇಡು ತೀರಿಸಿಕೊಳ್ಳಲು ಪಾಕಿಸ್ತಾನ ಕ್ಷಿಪಣಿ ದಾಳಿ ನಡೆಸಿದ್ದು, ಇದಕ್ಕೆ ಪ್ರತಿಯಾಗಿ ಭಾರತ ಪಾಕ್ ಮೇಲೆ ದಾಳಿ ನಡೆಸುತ್ತಿದೆ. ಇದರಿಂದಾಗಿ ಭಾರತ್-ಪಾಕ್ ಗಡಿಯಲ್ಲಿ ಹೈ-ಅಲರ್ಟ್ ಘೋಷಿಸಲಾಗಿದೆ.
ಜಮ್ಮು, ಪಂಜಾಬ್, ರಾಜಸ್ಥಾನ ಗುರಿಯಾಗಿಸಿಕೊಂಡು ಪಾಕ್ ದಾಳಿ ಆರಂಭಿಸಿದರೆ, ಭಾರತ ಲಾಹೋರ್, ಇಸ್ಲಾಮಾಬಾದ್ ಮೇಲೆ ದಾಳಿ ನಡೆಸಿದ್ದು, ಅರಬ್ಬೀ ಸಮುದ್ರದಲ್ಲಿಯೂ ನೌಕಾ ಪಡೆ ದಾಳಿ ಆರಂಭಿಸಿದೆ.
ಭಾರತದ ಏರ್ ಡಿಫೆನ್ಸ್ ಯೂನಿಟ್‌ನಿಂದ ಪಾಕ್‌ನ ಎಲ್ಲ ಕ್ಷಿಪಣಿಗಳನ್ನು ಉಡೀಸ್ ಮಾಡಿದೆ. ಇಸ್ರೇಲ್ ಮೇಲೆ ಹಮಾಸ್ ದಾಳಿಯ ಮಾದರಿಯಲ್ಲಿ ಪಾಕ್ ಆರ್ಮಿ ದಾಳಿ ನಡೆಸಿದೆ. ಸದ್ಯ ಭಾರತದ ಮೂರು ಪಡೆಗಳಿಂದಲೂ ದಾಳಿ ಆರಂಭವಾಗಿದ್ದು, ಸದ್ಯ ಭಾರತ-ಪಾಕ್ ಗಡಿಯಲ್ಲಿ ಹೈ-ಅಲರ್ಟ್ ಘೋಷಿಸಲಾಗಿದೆ.
ನವದೆಹಲಿ: 25 ನಿಮಿಷದ ಪ್ರತೀಕಾರದ ವೈಮಾನಿಕ ದಾಳಿಯಲ್ಲಿ ಪಾಕಿಸ್ತಾನ(Pakistan) ಉಗ್ರರ ನೆಲೆಗಳು ಉಡೀಸ್ ಆಗಿದ್ದು, ಆಪರೇಷನ್ ಸಿಂಧೂರ(Operation Sindoor) ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳ ಬುಡಕ್ಕೆ ಬೆಂಕಿ ಹಚ್ಚಿ ಬಿಸಿ ಮುಟ್ಟಿಸಿದೆ. ಇದರ ಬೆನ್ನಲ್ಲೇ ಪಾಕ್ ಉಗ್ರರ ವಿರುದ್ಧ ಭಾರತ ನಡೆಸಿರೋ ಆಪರೇಷನ್ ಸಿಂಧೂರ ಕಾರ್ಯಾಚರಣೆ ಇನ್ನೂ ಮುಗಿದಿಲ್ಲ. ಪಿಕ್ಚರ್ ಅಭಿ ಬಾಕಿ ಹೇ ಎನ್ನುವ ಮೂಲಕ ರಕ್ಷಣಾ ಸಚಿವ ರಾಜನಾಥ್ ಸಿಂಗ್(Rajnath Singh) ಖಡಕ್ ವಾರ್ನ್ ಮಾಡಿದ್ದಾರೆ.
ಪಾಕಿಸ್ತಾನದ ಮೇಲೆ ಭಾರತ(India) ಮತ್ತೊಂದು ಡೆಡ್ಲಿ ಅಟ್ಯಾಕ್ ಮಾಡಿದೆ. ಪಾಕ್‌ನ ಕ್ಷಿಪಣಿ ದಾಳಿ ಯತ್ನಕ್ಕೆ ಭಾರತ ಪ್ರತ್ಯುತ್ತರ ನೀಡಿದೆ. ಭಾರತ ಸುದರ್ಶನ ಚಕ್ರ ಪ್ರಯೋಗಿಸಿ ಪಾಕ್‌ನ ಮಿಸೈಲ್‌ನನ್ನು ಹೊಡೆದುರುಳಿದ್ದು, ಏರ್ ಫೋರ್ಸ್ನ ಎಸ್-400 ಸುದರ್ಶನ ಚಕ್ರ ಬಳಸಿ ಪಾಕ್‌ನ ಕ್ಷಿಪಣಿಗಳನ್ನು ಉಡೀಸ್ ಮಾಡಿದೆ. ಪಾಕ್‌ನ ಹೆಚ್‌ಕ್ಯೂ-9 ವಾಯು ರಕ್ಷಣಾ ಕ್ಷಿಪಣಿ ಉಡಾವಣಾ ಘಟಕಗಳೇ ಹಾನಿಗೊಳಗಾಗಿವೆ. ಇದನ್ನೂ ಓದಿ: ರಾಜ್ಯದ 17 ಅಣೆಕಟ್ಟುಗಳಲ್ಲಿ ಅಲರ್ಟ್ – ನಾರಾಯಣಪುರ ಡ್ಯಾಂಗೆ 42 ಪೊಲೀಸ್ ಸಿಬ್ಬಂದಿ ನಿಯೋಜನೆ
ಭಾರತದ 15 ನಗರಗಳನ್ನು ಪಾಕ್ ಟಾರ್ಗೆಟ್ ಮಾಡಿತ್ತು. ಇದಕ್ಕೆ ಪ್ರತಿಯಾಗಿ ಭಾರತ ದಿಟ್ಟ ಉತ್ತರ ನೀಡಿದ್ದು, ಲಾಹೋರ್‌ನ ಏರ್‌ಡಿಫೆನ್ಸ್ ಅನ್ನು ಉಡೀಸ್ ಮಾಡಿದೆ. ಲಾಹೋರ್, ಕರಾಚಿ, ರಾವಲ್‌ಪಿಂಡಿ, ಸಿಯಾಲ್ ಕೋಟ್ ಸೇರಿದಂತೆ 12 ನಗರಗಳನ್ನು ಟಾರ್ಗೆಟ್ ಮಾಡಿದ್ರು ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನು ಬಹವಾಲ್‌ಪುರ ಮರ್ಕಜ್ ಸುಭಾನಲ್ಲಾ ಮಸೀದಿ ಛಿದ್ರ-ಛಿದ್ರವಾಗಿದೆ. ಜೈಷ್ ಇ ಮೊಹಮದ್, ಲಷ್ಕರ್ ಇ ತೊಯ್ಬಾ ಪ್ರಧಾನ ಕಚೇರಿಗಳು ಸರ್ವನಾಶವಾಗಿದೆ. ಪಿಓಕೆ ಹಾಗೂ ಪಾಕಿಸ್ತಾನದಲ್ಲಿರುವ ಭಯೋತ್ಪಾದಕ 9 ನೆಲೆಗಳ ಮೇಲೆ ಕ್ಷಿಪಣಿ ದಾಳಿ ಮೂಲಕ ಉಡೀಸ್ ಮಾಡಿದೆ. ಇದನ್ನೂ ಓದಿ: ಫ್ಯಾನ್ಸ್‌ಗೆ ಗುಡ್ ನ್ಯೂಸ್- ಬರಲಿದೆ ವಿಜಯ್ ಸೇತುಪತಿ ನಟನೆಯ ‘ಮಹಾರಾಜ’ ಸೀಕ್ವೆಲ್
ಬುಧವಾರ ಭಾರತ ಸೇನೆಯು ಪಾಕಿಸ್ತಾನದ ಮೇಲೆ ಕ್ಷಿಪಣಿ ದಾಳಿ ನಡೆಸಿದ ಬಳಿಕ ಉಗ್ರರ ನೆಲೆ ಧ್ವಂಸಗೊಂಡಿದೆ. ಇಲ್ಲಿಂದಲೇ ಉಗ್ರ ಮಸೂದ್ ಅಜರ್ ಜಿಹಾದ್‌ಗೆ ಕರೆ ನೀಡುತ್ತಿದ್ದ. ಕ್ಷಿಪಣಿ ದಾಳಿಯಿಂದಾಗಿ ಧ್ವಂಸವಾದ ಕಟ್ಟಡದ ಪೂರ್ಣ ವೀಡಿಯೋ ಬಿಡುಗಡೆಯಾಗಿದೆ. ಆ ವಿಡಿಯೋದಲ್ಲಿ ಉಗ್ರರ ನೆಲೆ ಪೂರ್ಣ ಪ್ರಮಾಣದಲ್ಲಿ ನಿರ್ನಾಮವಾಗಿದೆ.
ಭಾರತದ ಮಿಸೈಲ್‌ಗೆ ಪೂರ್ತಿ ಟೆರರ್ ಕ್ಯಾಂಪ್ ಛಿದ್ರಗೊಂಡಿದೆ. ಸದ್ಯ ಟೆರರ್ ಕ್ಯಾಂಪ್‌ಗೆ ಪಾಕ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಸದ್ಯ ಸ್ಥಳೀಯ ಜನರು ದಾಳಿಯಾದ ಪ್ರದೇಶಕ್ಕೆ ಭೇಟಿ ಕೊಡುತ್ತಿದ್ದಾರೆ. ಪೂರ್ತಿ ಟೆರರ್ ಕ್ಯಾಂಪ್ ಅನ್ನ ಪಾಕ್ ಸೀಲ್ ಮಾಡಿದೆ. ಮ್ಯಾಕ್ಸರ್ ಟೆಕ್ನಾಲಜೀಸ್ ಬಿಡುಗಡೆ ಮಾಡಿದ ಉಪಗ್ರಹ ಚಿತ್ರಗಳಲ್ಲಿ ನಿರ್ಣಾಯಕ ಸ್ಥಳಗಳಲ್ಲಿ ದಾಳಿಯಾಗಿರುವುದನ್ನು ತೋರಿಸಲಾಗಿದೆ. ಇದನ್ನೂ ಓದಿ: ಪಾಕ್ ಮಿಸೈಲ್‌ಗಳಿಂದ ಭಾರತ ರಕ್ಷಿಸಿದ S-400 ‘ಸುದರ್ಶನ ಚಕ್ರ’- ಏನಿದರ ವಿಶೇಷತೆ?
ಇತ್ತ ಪಾಕ್ ಉಗ್ರ ಸಂಘಟನೆ ಲಷ್ಕರ್ ಹೆಡ್‌ಕ್ವಾಟ್ರಸ್ ಮುರಿಡ್ಕೆ ಕೂಡ ಸ್ಮಶಾನವಾಗಿದೆ. `ಭಯೋತ್ಪಾದಕರ ನರ್ಸರಿ’ ಅಂತಲೇ ಕುಖ್ಯಾತಿ ಪಡೆದಿದೆ ಈ ಮುರಿಡ್ಕೆ. ಅಜ್ಮಲ್ ಕಸಬ್, ಡೇವಿಡ್ ಹೆಡ್ಲಿಗೆ ಟ್ರೈನಿಂಗ್ ಕೊಟ್ಟಿದ್ದ ಕ್ಯಾಂಪ್ ಈಗ ನಾಮಾವಷೇಶವಾಗಿದೆ.
ಹಲವು ವರ್ಷಗಳಿಂದ ಭಾರತೀಯ ಗುಪ್ತಚರ ಸಂಸ್ಥೆಗಳು ಮುರಿಡ್ಕೆ ಮೇಲೆ ನಿಗಾಯಿಟ್ಟಿತ್ತು. ನಿನ್ನೆ ನಡೆದ ದಾಳಿಯಲ್ಲಿ ಅಟ್ಟಾರಿ-ವಾಘಾ ಗಡಿಯಿಂದ ಸುಮಾರು 25-30 ಕಿ.ಮೀ ದೂರದಲ್ಲಿದ್ದ ಮುರಿಡ್ಕೆಯನ್ನು ಧ್ವಂಸ ಮಾಡಲಾಗಿದೆ. ಸುಮಾರು 82 ಎಕರೆ ವಿಸ್ತೀರ್ಣದ ಮರ್ಕಜ್ ತೈಬಾ ಕಾಂಪ್ಲೆಕ್ಸ್ ಕೂಡ ನೆಲಸಮವಾಗಿದೆ. ಇದನ್ನೂ ಓದಿ: ದೇವರೇ ನಮ್ಮಿಂದ ತಪ್ಪಾಗಿದೆ, ದಯವಿಟ್ಟು ಕಾಪಾಡು – ಸಂಸತ್‌ನಲ್ಲಿ ಕಣ್ಣೀರಿಟ್ಟ ಪಾಕ್ ಸಂಸದ
ಆಪರೇಷನ್ ಸಿಂಧೂರದಲ್ಲಿ ಉಗ್ರ ಮಸೂದ್ ಅಜರ್‌ನ ಸೋದರ ಮುಫ್ತಿ ಅಬ್ದುಲ್ ರೌಫ್ ಅಸ್ಗರ್‌ನ ನೆತ್ತರು ಹರಿದಿದೆ. ಈತ ಐಸಿ-814 ಪ್ರಯಾಣಿಕ ವಿಮಾನದ ಹೈಜಾಕ್‌ನ ಮಾಸ್ಟರ್ ಮೈಂಡ್ ಆಗಿದ್ದ. 1999 ಡಿ. 24ರಂದು ವಿಮಾನವನ್ನು ಹೈಜಾಕ್ ಮಾಡಲಾಗಿತ್ತು. ಇದೀಗ ಆಪರೇಷನ್ ಸಿಂಧೂರ ದಾಳಿಗೆ ಅಸ್ಗರ್ ಪ್ರಾಣಬಿಟ್ಟಿದ್ದಾನೆ.
ಇಸ್ಲಾಮಾಬಾದ್: ದೇವರೇ ನಾವು ತಪ್ಪಿತಸ್ಥರು, ನಮ್ಮನ್ನು ದಯವಿಟ್ಟು ರಕ್ಷಿಸು ಎಂದು ಪಾಕ್ (Pakistan) ಸಂಸದ ತಾಹಿರ್ ಇಕ್ಬಾಲ್ (Tahir Iqbal) ಸಂಸತ್ತಿನಲ್ಲಿ ಕಣ್ಣೀರಿಟ್ಟಿದ್ದಾನೆ.
ಭಾರತದ ಆಪರೇಷನ್ ಸಿಂಧೂರ (Operation Sindoor) ನಂತರ ಪಾಕ್ ತತ್ತರಿಸಿದೆ. ಈ ಬಗ್ಗೆ ಪಾಕಿಸ್ತಾನದ ಸಂಸತ್ತಿನಲ್ಲಿ ಚರ್ಚೆ ನಡೆಯುತ್ತಿದೆ. ಸಂಸತ್ತಿನಲ್ಲಿ ಚರ್ಚೆಯ ಸಮಯದಲ್ಲಿ, ಸಂಸದ ತಾಹಿರ್ ಇಕ್ಬಾಲ್ ಅಲ್ಲಾನು ನಮ್ಮನ್ನು ರಕ್ಷಿಸಲಿ ಎಂದು ನಾವು ಪ್ರಾರ್ಥಿಸುತ್ತೇವೆ ಎಂದು ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ: India Strikes | ಯುಸ್ ನಾಗರಿಕರು ಪಾಕ್ ತೊರೆಯುವಂತೆ ಅಮೆರಿಕ ರಾಯಭಾರ ಕಚೇರಿ ಸೂಚನೆ
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯ ತೀವ್ರಗೊಂಡಿದೆ. ಈ ಉಗ್ರ ದಾಳಿಗೆ ಪ್ರತಿಯಾಗಿ ಭಾರತ ಆಪರೇಷನ್ ಸಿಂಧೂರ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿ, ತಕ್ಕ ಉತ್ತರ ಕೊಟ್ಟಿದೆ. ಈ ದಾಳಿಯಲ್ಲಿ ನೂರಕ್ಕೂ ಹೆಚ್ಚು ಉಗ್ರರ ಹತ್ಯೆಯಾಗಿದೆ.
ಈ ದಾಳಿಗೆ ಪ್ರತಿಯಾಗಿ ಪಾಕ್ ಸೇನೆ ಗಡಿಯಲ್ಲಿ ಅಪ್ರಚೋದಿತ ದಾಳಿ ನಡೆಸುತ್ತಿದೆ. ಪಾಕ್‌ನ ದುಷ್ಕೃತ್ಯಕ್ಕೆ 15ಕ್ಕೂ ಹೆಚ್ಚು ನಾಗರೀಕರು ಸಾವಿಗೀಡಾಗಿದ್ದಾರೆ. 43 ಮಂದಿ ಗಾಯಗೊಂಡಿದ್ದಾರೆ. ಇದರ ಬೆನ್ನಲ್ಲೇ ಪಾಕ್ ಪುಂಡಾಟಕ್ಕೆ ಭಾರತ ತಕ್ಕ ಉತ್ತರ ನೀಡಿದ್ದು, ಪಾಕ್ ಏರ್‌ಡಿಫೆನ್ಸ್ ಸಿಸ್ಟಮ್‌ನ್ನು ಹೊಡೆದು ಹಾಕಿದೆ. ಇದನ್ನೂ ಓದಿ: ಪಾಕಿಸ್ತಾನದ HQ-9 ವಾಯು ರಕ್ಷಣಾ ಕ್ಷಿಪಣಿ ಉಡಾವಣಾ ಕೇಂದ್ರಗಳೇ ಉಡೀಸ್
ಪಾಟ್ನಾ: ಪಾಕಿಸ್ತಾನದ ಮೇಲೆ ಭಾರತ ‘ಆಪರೇಷನ್ ಸಿಂಧೂರ’ (Operation Sindoor) ನಡೆಸಿದ್ದು ಭಾರತದ ಪಾಲಿಗೆ ಐತಿಹಾಸಿಕ ದಿನ. ಇದೀಗ ಆಪರೇಷನ್ ಸಿಂಧೂರದಿಂದ ಪ್ರೇರಿತರಾದ ಬಿಹಾರದ (Bihar) ದಂಪತಿ ತಮ್ಮ ನವಜಾತ ಹೆಣ್ಣು ಮಗುವಿಗೆ `ಸಿಂಧೂರ’ ಎಂದು ಹೆಸರಿಟ್ಟಿದ್ದಾರೆ.
ಭಾರತೀಯ ಸೇನೆ ಪಾಕಿಸ್ತಾನದಲ್ಲಿ ‘ಆಪರೇಷನ್ ಸಿಂಧೂರ’ ಪ್ರಾರಂಭಿಸಿದ ದಿನವೇ ಬಿಹಾರದ ಕತಿಹಾರ್‌ನಲ್ಲಿರುವ ನರ್ಸಿಂಗ್ ಹೋಂನಲ್ಲಿ ಹೆಣ್ಣು ಮಗು ಜನಿಸಿದೆ. ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ದಿನವೇ ಜನಿಸಿದ ಹಿನ್ನೆಲೆ ‘ಸಿಂಧೂರ’ ಎಂದು ಹೆಸರಿಟ್ಟು ಗೌರವ ಸಮರ್ಪಣೆ ಮಾಡಿದ್ದಾರೆ. ಇದನ್ನೂ ಓದಿ: ಮತ್ತೆ ಭಾರತದಿಂದ ದಾಳಿ ಭೀತಿ – ಊರುಬಿಟ್ಟ ಮುಜಾಫರಾಬಾದ್ ಜನತೆ
ನವದೆಹಲಿ: ʻಆಪರೇಷನ್ ಸಿಂಧೂರʼ (Operation Sindoor) ಹೆಸರಿನಡಿ ಭಾರತೀಯ ಸೇನೆಯು ಪಾಕ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ (PoK) ಉಗ್ರ ನೆಲೆಗಳ ಮೇಲೆ ನಡೆಸಿದ ಪ್ರತೀಕಾರದ ದಾಳಿಯಲ್ಲಿ 100 ಉಗ್ರರ ಹತ್ಯೆಯಾಗಿದೆ ಎಂದು ಕೇಂದ್ರ ಸರ್ಕಾರ ವಿಪಕ್ಷಗಳಿಗೆ ಮಾಹಿತಿ ನೀಡಿದೆ.
#WATCH | Delhi | #OperationSindoor | Union Parliamentary Affairs Minister Kiren Rijiju says, “…Many fake news is being propagated to spread fake news, and hence, I appeal to all in this time not to trust any fake news coming out of the country or from within the country and to… pic.twitter.com/Gv32IbBsqc
ಏನಿದು ʻಆಪರೇಷನ್ ಸಿಂಧೂರʼ?
ಕಳೆದ ಏಪ್ರಿಲ್ 22ರಂದು ಕಾಶ್ಮೀರದ ಪೆಹಲ್ಗಾಮ್‌ನ (Pahalgam) ಬೈಸರನ್ ಕಣಿವೆ ಪ್ರದೇಶದಲ್ಲಿ ನಾಲ್ವರು ಉಗ್ರರು ಓರ್ವ ವಿದೇಶಿ ಪ್ರಜೆ ಸೇರಿದಂತೆ 26 ಪ್ರವಾಸಿಗರನ್ನ ಗುಂಡಿಕ್ಕಿ ಕೊಂದಿದ್ದರು. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಪಣ ತೊಟ್ಟಿದ್ದ ಭಾರತ ಮಂಗಳವಾರ ತಡರಾತ್ರಿ 1:44 ಗಂಟೆ ಸುಮಾರಿಗೆ ಪಾಕ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದೆ. ದಾಳಿಯಲ್ಲಿ ಪಾಕ್ ಸೇನೆಯಾಗಲಿ ಅಥವಾ ನಾಗರಿಕರ ಮೇಲಾಗಲಿ ದಾಳಿ ಮಾಡದೇ ಉಗ್ರರ ನೆಲೆಗಳನ್ನು ಮಾತ್ರವೇ ಗುರಿಯಾಗಿಸಿ ದಾಳಿ ನಡೆಸಿದೆ.
#WATCH | Delhi | After the all-party meeting, BJD MP Sasmit Patra says, “On behalf of BJD and our President Naveen Patnaik, we extend our sincere gratitude to the government for convening this critical all-party meeting. The BJD wholeheartedly commends the extraordinary courage,… pic.twitter.com/cHU7g9RobO
ಮೋಸ್ಟ್‌ವಾಂಟೆಡ್‌ಗಳನ್ನ ತಯಾರು ಮಾಡ್ತಿದ್ದ ನೆಲೆಗಳು ಧ್ವಂಸ:
ಭಾರತ ಧ್ವಂಸ ಮಾಡಿರುವ ಈ ಉಗ್ರರ ನೆಲೆಗಳು ಮೋಸ್ಟ್ ಡೇಂಜರಸ್ ತಾಣಗಳು ಎಂದೇ ಗುರುತಿಸಿಕೊಂಡಿದ್ದು, ಇಡೀ ವಿಶ್ವಕ್ಕೆ ಕಂಟಕವಾಗಿದ್ದವು. ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಇಲ್ಲಿ ಅಡಗಿಸಿಡಲಾಗಿತ್ತು. ಜೊತೆಗೆ ವಿಶ್ವಾದ್ಯಂತ ವಿವಿಧೆಡೆಗೆ ಕಳುಹಿಸಲು ಉಗ್ರರಿಗೆ ಇಲ್ಲಿ ತರಬೇತಿ ನೀಡಲಾಗುತ್ತಿತ್ತು ಅನ್ನೋ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ನಮ್ಮ ಸಹೋದರಿಯರ ಗಂಡಂದಿರನ್ನು ಕೊಂದವರು ಈಗ ತಮ್ಮ ಇಡೀ ಕುಟುಂಬ ಕಳೆದುಕೊಂಡಿದ್ದಾರೆ: ಯೋಗಿ ಆದಿತ್ಯನಾಥ್
#WATCH | Delhi | After the all-party meeting, AIMIM chief Asaduddin Owaisi says, “I have complimented our armed forces and the government for #OperationSindoor. I also suggested that we should run a global campaign against the Resistance Front (TRF). I also suggested that the… pic.twitter.com/cPca9t6IHA
ಎಲ್ಲೆಲ್ಲಿ ದಾಳಿ ನಡೆದಿದೆ? 1) ಬಹವಾಲ್ಪುರ್: ಅಂತರರಾಷ್ಟ್ರೀಯ ಗಡಿಯಿಂದ ಸುಮಾರು 100 ಕಿ.ಮೀ ದೂರದಲ್ಲಿರುವ ಬಹವಾಲ್ಪುರ್ ಮೇಲೆ ದಾಳಿ ನಡೆದಿದೆ. ಇದು ಜೈಷ್ ಉಗ್ರ ಸಂಘಟನೆಯ ಪ್ರಧಾನ ಕಚೇರಿಯಾಗಿತ್ತು.
2) ಮುರಿಡ್ಕೆ: ಸಾಂಬಾ ಎದುರಿನ ಗಡಿಯಿಂದ 30 ಕಿ.ಮೀ ದೂರದಲ್ಲಿದ್ದು ಇದು ಲಷ್ಕರ್-ಎ-ತೈಬಾ ಸಂಘಟನೆ ಉಗ್ರರ ಶಿಬಿರ ನಡೆಸುತ್ತಿತ್ತು. ಮುಂಬೈ ದಾಳಿ ನಡೆಸಿದ ಉಗ್ರರಿಗೆ ಇಲ್ಲಿ ತರಬೇತಿ ನೀಡಲಾಗಿತ್ತು.
3) ಗುಲ್ಪುರ್ : ಗಡಿ ನಿಯಂತ್ರಣ ರೇಖೆ ಪೂಂಚ್-ರಾಜೌರಿಯಿಂದ 35 ಕಿ.ಮೀ ದೂರದಲ್ಲಿದೆ. ಪೂಂಚ್‌ನಲ್ಲಿ ಏಪ್ರಿಲ್ 20, 2023 ರಂದು ನಡೆದ ದಾಳಿ ಮತ್ತು ಜೂನ್ 24 ರಂದು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಅಮಾಯಕ ಯಾತ್ರಿಕರ ಮೇಲೆ ಇಲ್ಲಿ ತರಬೇತಿ ಪಡೆದ ಉಗ್ರರು ದಾಳಿ ನಡೆಸಿದ್ದರು.
4) ಸವಾಯಿ: ಲಷ್ಕರ್ ಉಗ್ರರ ಕ್ಯಾಂಪ್ ಇದಾಗಿದ್ದು ಗಡಿ ನಿಯಂತ್ರಣ ರೇಖೆಯಿಂದ 30 ಕಿ.ಮೀ ದೂರದಲ್ಲಿದೆ. ಕಳೆದ ವರ್ಷ ಅಕ್ಟೋಬರ್ 20, 24 ರಂದು ಸೋನ್‌ಮಾರ್ಗ್, ಅಕ್ಟೋಬರ್ 24 ರಂದು ಗುಲ್ಮಾರ್ಗ್ ಮತ್ತು ಏಪ್ರಿಲ್ 22 ರಂದು ಪಹಲ್ಗಾಮ್ ಮೇಲೆ ದಾಳಿ ನಡೆಸಿದ ಉಗ್ರರು ಇಲ್ಲಿ ತರಬೇತಿ ಪಡೆದಿದ್ದರು.
5) ಬಿಲಾಲ್: ಉಗ್ರ ಸಂಘಟನೆ ಜೈಷ್–ಎ–ಮೊಹಮದ್ ಲಾಂಚ್ ಪ್ಯಾಡ್ ಇದಾಗಿದ್ದು ಉಗ್ರರು ಇಲ್ಲಿ ಕೊನೆಯ ಹಂತದ ತರಬೇತಿ ಪಡೆದು ಭಾರತಕ್ಕೆ ನುಗ್ಗುತ್ತಿದ್ದರು.
6) ಕೋಟ್ಲಿ: ಗಡಿ ನಿಯಂತ್ರಣ ರೇಖೆಯಿಂದ 15 ಕಿ.ಮೀ ದೂರದಲ್ಲಿದೆ. ಲಷ್ಕರ್ ಉಗ್ರರ ಕ್ಯಾಂಪ್ ಇದಾಗಿದ್ದು 50 ಉಗ್ರರಿಗೆ ತರಬೇತಿ ನೀಡುವ ಸಾಮರ್ಥ್ಯ ಹೊಂದಿತ್ತು.
7) ಬರ್ನಾಲಾ: ಭಾರತ ಗಡಿಯಿಂದ 10 ಕಿ.ಮೀ ದೂರದಲ್ಲಿದೆ. ಇಲ್ಲೂ ಲಷ್ಕರ್ ಉಗ್ರರಿಗೆ ತರಬೇತಿ ನೀಡಲಾಗುತ್ತಿತ್ತು.
8) ಸರ್ಜಲ್: ಸಾಂಬಾ ಕಟುವಾ ಬಳಿ ಅಂತಾರಾಷ್ಟ್ರೀಯ ಗಡಿಯಿಂದ 8 ಕಿಲೋಮೀಟರ್ ದೂರದಲ್ಲಿ ಜೈಶ್ ಎ ಮೊಹಮದ್ ಕ್ಯಾಂಪ್.
9) ಮಹಮೂನಾ: ಸಿಯಾಲ್ ಕೋಟ್ ಬಳಿಯ ಅಂತಾರಾಷ್ಟ್ರೀಯ ಗಡಿಯಿಂದ 15 ಕಿಲೋಮೀಟರ್ ದೂರದಲ್ಲಿ ಹಿಜ್ಬುಲ್ಲಾ ಟ್ರೈನಿಂಗ್ ಸೆಂಟರ್.