Tag: indian army

  • ಪಾಕ್‌ನಿಂದ ಜಮ್ಮು & ಕಾಶ್ಮೀರ, ಪೂಂಚ್, ಉರಿ ಮೇಲೆ ಶೆಲ್ ದಾಳಿ

    ಪಾಕ್‌ನಿಂದ ಜಮ್ಮು & ಕಾಶ್ಮೀರ, ಪೂಂಚ್, ಉರಿ ಮೇಲೆ ಶೆಲ್ ದಾಳಿ

    ಶ್ರೀನಗರ: ಗುರುವಾರ ನಡೆದ ಕ್ಷಿಪಣಿ ದಾಳಿ ಬಳಿಕ ಇದೀಗ ಪಾಕ್ ಕದನ ವಿರಾಮ ಉಲ್ಲಂಘಿಸಿ ಮತ್ತೆ ದಾಳಿ ಆರಂಭಿಸಿದ್ದು, ಜಮ್ಮು & ಕಾಶ್ಮೀರ, ಪೂಂಚ್, ಉರಿ ಸೇರಿ ಹಲವು ಕಡೆಗಳಲ್ಲಿ ಶೆಲ್ ದಾಳಿ ನಡೆಸಿದೆ.

    ಆಪರೇಷನ್ ಸಿಂಧೂರ ಕಾರ್ಯಾಚರಣೆ ಬೆನ್ನಲ್ಲೇ ಗುರುವಾರ ಪಾಕಿಸ್ತಾನ ಕ್ಷಿಪಣಿ ದಾಳಿ ನಡೆಸಿತ್ತು. ಇದರ ಬೆನ್ನಲ್ಲೇ ದಾಳಿ ನಡೆಸಿದ್ದ ಭಾರತ ತಕ್ಕ ಉತ್ತರ ನೀಡಿತ್ತು. ಆದರೆ ಇದೀಗ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ, ಜಮ್ಮುವಿನ ಉರಿ ಪ್ರದೇಶದ ನಿಯಂತ್ರಣ ರೇಖೆ ಮತ್ತು ಅಂತಾರಾಷ್ಟ್ರೀಯ ಗಡಿಯಲ್ಲಿ ಭಾರೀ ಶೆಲ್ ದಾಳಿ ಆರಂಭಿಸಿದೆ.ಇದನ್ನೂ ಓದಿ: ಭಾರತದ ಧಾರ್ಮಿಕ ಕೇಂದ್ರಗಳನ್ನು ಗುರಿಯಾಗಿಸಿ ಪಾಕ್‌ ದಾಳಿ: ಕೇಂದ್ರ ಸರ್ಕಾರ ವಾಗ್ದಾಳಿ

    ಜಮ್ಮು-ಕಾಶ್ಮೀರದ ಹಂದ್ವಾರ ಜಿಲ್ಲೆಯ ನೌಗಮ್ ಸೆಕ್ಟರ್, ಉರಿ, ಪೂಂಚ್ ಬಳಿಕ ಕುಪ್ವಾರಾ ಜಿಲ್ಲೆಯ ಜಿಲ್ಲೆಯ ಕರ್ನಾ ಮತ್ತು ತಂಗ್ಧರ್ ವಲಯಗಳಲ್ಲಿ ದಾಳಿ ನಡೆಸಿಸುತ್ತಿದೆ. ಇದರ ಬೆನ್ನಲ್ಲೇ ಭಾರತದ ವಾಯು ಪಡೆ ಪಾಕಿಸ್ತಾನದ ಡ್ರೋನ್ ಹಾಗೂ ಕ್ಷಿಪಣಿಗಳನ್ನು ಹೊಡೆದುರುಳಿಸಿದೆ.

    ದಾಳಿ ಆರಂಭವಾಗುತ್ತಿದ್ದಂತೆ ಜಮ್ಮು ವಿಮಾನ ನಿಲ್ದಾಣ ಹಾಗೂ ಪಠಾಣ್‌ಕೋಟ್ ವಾಯುನೆಲೆಯ ಸೈರನ್‌ಗಳು ಮೊಳಗಿದವು. ನಿಯಂತ್ರಣ ರೇಖೆಯ ಉರಿ ವಲಯದಲ್ಲಿ ಪಾಕಿಸ್ತಾನ ನಡೆಸಿದ ದಾಳಿಗೆ ಓರ್ವ ಮಹಿಳೆ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ.ಇದನ್ನೂ ಓದಿ: 44 ಸೆಕೆಂಡ್‌ನಲ್ಲಿ 72 ರಾಕೆಟ್ – ಏನಿದು ಪಿನಾಕಾ ರಾಕೆಟ್ ಲಾಂಚರ್?

  • ಆಪರೇಷನ್ ಸಿಂಧೂರ ಯಶಸ್ವಿಯಾಗಲೆಂದು ವೀರೇಂದ್ರ ಹೆಗ್ಗಡೆ ವಿಶೇಷ ಪೂಜೆ

    ಆಪರೇಷನ್ ಸಿಂಧೂರ ಯಶಸ್ವಿಯಾಗಲೆಂದು ವೀರೇಂದ್ರ ಹೆಗ್ಗಡೆ ವಿಶೇಷ ಪೂಜೆ

    – ಸುರಕ್ಷಿತ ಕಾರ್ಯಾಚರಣೆಗೆ ಧರ್ಮಸ್ಥಳ ಮಂಜುನಾಥನಲ್ಲಿ ಪ್ರಾರ್ಥನೆ

    ಮಂಗಳೂರು: ಆಪರೇಷನ್ ಸಿಂಧೂರ (Operation Sindoor) ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆ (Indian Army) ಸರ್ವರೀತಿಯಲ್ಲೂ ಯಶಸ್ಸು ಕಾಣಲಿ ಎಂದು ಡಾ.ವೀರೇಂದ್ರ ಹೆಗ್ಗಡೆ (D Veerendra Heggade) ಧರ್ಮಸ್ಥಳ ಮಂಜುನಾಥನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ನಮ್ಮ ಹೆಮ್ಮೆಯ ಸೈನಿಕರಿಗೆ ಯಾವುದೇ ಹಾನಿಯಿಲ್ಲದೇ ಸುರಕ್ಷಿತವಾಗಿ ಕಾರ್ಯಾಚರಣೆ ನಡೆಸುವಂತೆ ಧರ್ಮಸ್ಥಳ ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ ಎಂದು ವೀರೇಂದ್ರ ಹೆಗ್ಗಡೆ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ದೇಶಕ್ಕಾಗಿ ನಾನು ಪ್ರಾಣ ಕೊಡಲು ಸಿದ್ಧ: ಜಮೀರ್ ಅಹ್ಮದ್

    ಗುರುವಾರ ರಾತ್ರಿ ಪಾಕ್ ವಿರುದ್ಧ ಭಾರತ ಮಿಸೈಲ್‌ಗಳ ಮಳೆ ಸುರಿಸಿದೆ. ಈ ವೇಳೆ ಪಾಕ್ ಸಹ ದಾಳಿ ನಡೆಸಿದೆ. ಆದರೆ ಭಾರತೀಯ ಸೇನೆ ಆ ದಾಳಿಯನ್ನು ವಿಫಲಗೊಳಿಸಿದೆ. ಇದರ ಬೆನ್ನಲ್ಲೇ ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದು, ಪಾಕ್ ತತ್ತರಿಸಿ ಹೋಗಿದೆ. ಇಷ್ಟಾಗಿಯೂ ಕಿತಾಪತಿ ಬಿಡದ ಪಾಕಿಸ್ತಾನ ಮತ್ತೆ ಭಾರತದ ಜಮ್ಮುವಿನ ಮೇಲೆ ದಾಳಿಗೆ ವಿಫಲಯತ್ನ ನಡೆಸಿದೆ. ಜಮ್ಮುವಿನಲ್ಲಿ ಇದುವರೆಗೆ ಪಾಕಿಸ್ತಾನದ 50ಕ್ಕೂ ಹೆಚ್ಚು ಡ್ರೋನ್ ದಾಳಿಯನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. ಇದನ್ನೂ ಓದಿ: ಸುಹಾಸ್ ಶೆಟ್ಟಿ ಹತ್ಯೆ ಕೇಸ್ | NIAಗೆ ವಹಿಸಲು ರಾಜ್ಯಪಾಲರಿಗೆ ಮನವಿ, ಕರಾವಳಿಗೆ ಪಾಕ್ ಸಂಪರ್ಕವಿದೆ: ಅಶೋಕ್

  • ‘ಆಪರೇಷನ್ ಸಿಂಧೂರ’ ಇಡೀ ದೇಶದ ಸ್ವಾಭಿಮಾನ, ಧೈರ್ಯ ಹೆಚ್ಚಿಸಿದೆ: ಆರ್‌ಎಸ್‌ಎಸ್

    ‘ಆಪರೇಷನ್ ಸಿಂಧೂರ’ ಇಡೀ ದೇಶದ ಸ್ವಾಭಿಮಾನ, ಧೈರ್ಯ ಹೆಚ್ಚಿಸಿದೆ: ಆರ್‌ಎಸ್‌ಎಸ್

    ನವದೆಹಲಿ: ಆಪರೇಷನ್ ಸಿಂಧೂರ(Operation Sindoor) ಇಡೀ ದೇಶದ ಸ್ವಾಭಿಮಾನ ಮತ್ತು ಧೈರ್ಯ ಹೆಚ್ಚಿಸಿದೆ. ಪಾಕ್ ಉಗ್ರರಿಗೆ ಪ್ರತ್ಯುತ್ತರ ನೀಡುತ್ತಿರುವ ಭಾರತ ಸರ್ಕಾರದ ನಾಯಕತ್ವ ಮತ್ತು ಸೇನಾಪಡೆಗಳಿಗೆ ಹೃದಯಪೂರ್ವಕ ಅಭಿನಂದನೆಗಳು ಎಂದು ಆರ್‌ಎಸ್‌ಎಸ್(RSS) ತಿಳಿಸಿತು.

    ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ.ಮೋಹನ್ ಭಾಗವತ್(Mohan Bhagwat) ಮತ್ತು ಸರಕಾರ್ಯವಾಹಕ ದತ್ತಾತ್ರೇಯ ಹೊಸಬಾಳೆ(Dattatreya Hosabale) ಅವರು ಆಪರೇಷನ್ ಸಿಂಧೂರದ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಪಹಲ್ಗಾಮ್‌ನಲ್ಲಿ(Pahalgam) ನಿಶಸ್ತ್ರ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯ ನಂತರ, ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕರ ಮೇಲೆ ಮತ್ತು ಅವರ ಬೆಂಬಲಿಗರ ವ್ಯವಸ್ಥೆಯ ಮೇಲೆ ನಿರ್ಣಾಯಕವಾದ `ಆಪರೇಷನ್ ಸಿಂಧೂರ’ ಮೂಲಕ ಪ್ರತ್ಯುತ್ತರ ನೀಡುತ್ತಿರುವ ಭಾರತ ಸರ್ಕಾರದ ನಾಯಕತ್ವ ಮತ್ತು ಸೇನಾಪಡೆಗಳಿಗೆ ಹೃದಯಪೂರ್ವಕ ಅಭಿನಂದನೆಗಳು. ಹಿಂದೂ ಯಾತ್ರಿಗಳ ಕ್ರೂರ ಕಗ್ಗೊಲೆಯಿಂದ ಆಘಾತಕ್ಕೊಳಗಾದ ಕುಟುಂಬಗಳಿಗೆ ಮತ್ತು ಇಡೀ ದೇಶಕ್ಕೆ ನ್ಯಾಯ ಒದಗಿಸುವ ಈ ಕಾರ್ಯಾಚರಣೆಯು ಇಡೀ ದೇಶದ ಸ್ವಾಭಿಮಾನ ಮತ್ತು ಧೈರ್ಯವನ್ನು ಹೆಚ್ಚಿಸಿದೆ ಎಂದರು. ಇದನ್ನೂ ಓದಿ: ಭಾರತ-ಪಾಕ್ ಯುದ್ಧ ಭೀತಿ; ಚಂಡೀಗಢ ಸರ್ಕಾರದಿಂದ 2 ತಿಂಗಳು ಪಟಾಕಿ ಬ್ಯಾನ್

    ಪಾಕಿಸ್ತಾನದಲ್ಲಿರುವ(Pakistan) ಭಯೋತ್ಪಾದಕರು, ಅವರ ಸೌಲಭ್ಯಗಳು ಮತ್ತು ಪೂರಕ ವ್ಯವಸ್ಥೆಯ ಮೇಲೆ ನಡೆಯುತ್ತಿರುವ ಸೇನಾ ಕಾರ್ಯಾಚರಣೆಯು ಭಾರತ ದೇಶದ ಭದ್ರತೆಗೆ ಅಗತ್ಯ ಮತ್ತು ಅನಿವಾರ್ಯ ಕ್ರಮವಾಗಿದೆ ಎಂದು ನಾವು ಭಾವಿಸುತ್ತೇವೆ. ರಾಷ್ಟ್ರೀಯ ಸಂಕಷ್ಟದ ಈ ಘಳಿಗೆಯಲ್ಲಿ, ಇಡೀ ದೇಶವು ತನು-ಮನ-ಧನದಿಂದ ಸರ್ಕಾರ ಮತ್ತು ಸೇನಾಪಡೆಗಳ ಜೊತೆಗೆ ಒಗ್ಗಟ್ಟಾಗಿ ನಿಂತಿದೆ ಎಂದು ಹೇಳಿದರು. ಇದನ್ನೂ ಓದಿ: ನಮ್ಮ ನಾಯಕ ಹೇಡಿ.. ಮೋದಿ ಹೆಸರು ಹೇಳುವುದಕ್ಕೂ ಹೆದರುತ್ತಿದ್ದಾರೆ: ತಮ್ಮ ಪ್ರಧಾನಿ ವಿರುದ್ಧವೇ ಗುಡುಗಿದ ಪಾಕ್ ಸಂಸದ

    ಭಾರತದ ಗಡಿಪ್ರದೇಶದ ಧಾರ್ಮಿಕ ಸ್ಥಳಗಳ ಮೇಲೆ ಮತ್ತು ನಾಗರಿಕ ವಸತಿ ಪ್ರದೇಶಗಳ ಮೇಲೆ ಪಾಕಿಸ್ತಾನ ಸೇನೆಯಿಂದ ನಡೆಯುತ್ತಿರುವ ದಾಳಿಗಳನ್ನು ನಾವು ಖಂಡಿಸುತ್ತೇವೆ ಮತ್ತು ಈ ದಾಳಿಗಳಿಗೆ ಬಲಿಯಾದವರ ಕುಟುಂಬಗಳಿಗೆ ಸಂತಾಪವನ್ನು ವ್ಯಕ್ತಪಡಿಸುತ್ತೇವೆ. ಸರ್ಕಾರ ಮತ್ತು ಆಡಳಿತದಿಂದ ನೀಡಲಾದ ಎಲ್ಲಾ ಸೂಚನೆಗಳನ್ನು ಸಂಪೂರ್ಣವಾಗಿ ಪಾಲಿಸಬೇಕು ಎಂದು ಈ ಸವಾಲಿನ ಸಂದರ್ಭದಲ್ಲಿ ಸಮಸ್ತ ದೇಶವಾಸಿಗಳಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘವು ಕರೆ ನೀಡುತ್ತಿದೆ ಎಂದರು. ಇದನ್ನೂ ಓದಿ: ಎಲ್‌ಒಸಿಯಲ್ಲಿ ಭಾರತ-ಪಾಕ್ ಸಂಘರ್ಷ; ಭಾರತೀಯ ಯೋಧ ಹುತಾತ್ಮ

    ಜೊತೆಗೆ, ಈ ಸಂದರ್ಭದಲ್ಲಿ ಸಾಮಾಜಿಕ ಏಕತೆ ಮತ್ತು ಸೌಹಾರ್ದತೆಯನ್ನು ಭಂಗಗೊಳಿಸುವ ರಾಷ್ಟ್ರವಿರೋಧಿ ಶಕ್ತಿಗಳ ಯಾವುದೇ ಷಡ್ಯಂತ್ರ ಯಶಸ್ವಿಯಾಗದಂತೆ ಎಚ್ಚರಿಕೆ ವಹಿಸಬೇಕು. ಆ ಮೂಲಕ ನಾವೆಲ್ಲರೂ ನಾಗರಿಕ ಕರ್ತವ್ಯವನ್ನು ಪಾಲಿಸಬೇಕು. ಈ ಸಂದರ್ಭದಲ್ಲಿ ಸೇನೆ ಮತ್ತು ಸ್ಥಳೀಯ ಆಡಳಿತಕ್ಕೆ ಎಲ್ಲಿ, ಯಾವ ರೀತಿಯ ಅಗತ್ಯವಿದೆಯೋ, ಅಲ್ಲಿ ಸಾಧ್ಯವಾದ ಎಲ್ಲ ರೀತಿಯ ಸಹಕಾರಕ್ಕೆ ಸಿದ್ಧರಾಗಿರಿ ಮತ್ತು ರಾಷ್ಟ್ರೀಯ ಏಕತೆ ಮತ್ತು ಭದ್ರತೆಯನ್ನು ಕಾಪಾಡುವ ಎಲ್ಲ ಪ್ರಯತ್ನಗಳಿಗೆ ಬಲವನ್ನು ಒದಗಿಸುವ ಮೂಲಕ ದೇಶಭಕ್ತಿಯನ್ನು ಅಭಿವ್ಯಕ್ತಗೊಳಿಸಬೇಕು ಎಂದು ಸಮಸ್ತ ದೇಶವಾಸಿಗಳಲ್ಲಿ ವಿನಂತಿಸಿಕೊಂಡರು.

  • ಉಗ್ರರ ನಾಶಕ್ಕೆ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದಿಂದ ಭಾರತೀಯ ಸೇನೆಗೆ 10 ಲಕ್ಷ ದೇಣಿಗೆ

    ಉಗ್ರರ ನಾಶಕ್ಕೆ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದಿಂದ ಭಾರತೀಯ ಸೇನೆಗೆ 10 ಲಕ್ಷ ದೇಣಿಗೆ

    ಚಿಕ್ಕಮಗಳೂರು: ಪಾಕಿಸ್ತಾನದ (Pakistan) ಉಗ್ರರ ಹುಟ್ಟಡಗಿಸಲು ಭಾರತೀಯ ಸೇನೆಗೆ (Indian Army) ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದಿಂದ (Horanadu Annapoorneshwari Temple) 10 ಲಕ್ಷ ರೂ. ದೇಣಿಗೆ ನೀಡಲಾಗಿದೆ.

    ಕಳಸ ತಾಲೂಕಿನ ಆದಿಶಕ್ತ್ಯಾತ್ಮಕ ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದಿಂದ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಅವರಿಗೆ ಈ ಹಣವನ್ನು ಹಸ್ತಾಂತರ ಮಾಡಲಾಗಿದೆ. ಕ್ಷೇತ್ರದ 5ನೇ ಧರ್ಮಕರ್ತರ ಕಂಚಿನ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಧರ್ಮಕರ್ತ ಭೀಮೇಶ್ವರ ಜೋಶಿಯವರು ಚೆಕ್ ಹಸ್ತಾಂತರಿಸಿದರು. ಇದನ್ನೂ ಓದಿ: ವಾಯುಪಡೆಯ ಶೌರ್ಯ-ಸಾಹಸಕ್ಕೆ ಕನ್ನಡಿ ಹಿಡಿದ ಸಿನಿಮಾಗಳನ್ನ ನೀವೂ ನೋಡಿ….

    ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧದ ಕಾರ್ಮೋಡ ಕವಿದಿದೆ. ಗುರುವಾರ ರಾತ್ರಿ ಪಾಕ್‌ ವಿರುದ್ಧ ಭಾರತ ಮಿಸೈಲ್‌ಗಳ ಮಳೆ ಸುರಿಸಿದೆ. ಈ ವೇಳೆ ಪಾಕ್‌ ಸಹ ದಾಳಿ ನಡೆಸಿದೆ. ಆದರೆ ಭಾರತೀಯ ಸೇನೆ ಆ ದಾಳಿಯನ್ನು ವಿಫಲಗೊಳಿಸಿದೆ. ಇದರ ಬೆನ್ನಲ್ಲೇ ಆಪರೇಷನ್‌ ಸಿಂಧೂರ (Operation Sindoor) ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದು, ಪಾಕ್‌ ತತ್ತರಿಸಿ ಹೋಗಿದೆ. ಇಷ್ಟಾದರೂ ಕಿತಾಪತಿ ಬಿಡದ ಪಾಕಿಸ್ತಾನ ಮತ್ತೆ ಭಾರತದ ಜಮ್ಮುವಿನ ಮೇಲೆ ದಾಳಿಗೆ ವಿಫಲಯತ್ನ ನಡೆಸಿದೆ.

    ಜಮ್ಮುವಿನಲ್ಲಿ ಇದುವರೆಗೆ ಪಾಕಿಸ್ತಾನದ 50ಕ್ಕೂ ಹೆಚ್ಚು ಡ್ರೋನ್‌ ದಾಳಿಯನ್ನು ಭಾರತೀಯ ವಿಫಲಗೊಳಿಸಿದೆ. ಭಾರತೀಯ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಹಾಗೂ ವಿವಿಧ ಪ್ರದೇಶಗಳನ್ನು ಗುರಿಯಾಗಿಸಿ ಪಾಕಿಸ್ತಾನ ಡ್ರೋನ್‌ ದಾಳಿ ನಡೆಸಿತ್ತು. ಅವಂತಿಪುರ, ಶ್ರೀನಗರ, ಜಮ್ಮು, ಪಠಾಣ್‌ಕೋಟ್, ಅಮೃತಸರ, ಕಪುರ್ತಲ, ಜಲಂಧರ್, ಲುಧಿಯಾನ, ಆದಂಪುರ, ಬಟಿಂಡಾ, ಚಂಡೀಗಢ, ನಾಲ್, ಫಲೋಡಿ, ಉತ್ತರಲೈ, ಭುಜ್ ಸೇರಿ ಒಟ್ಟು 15 ನಗರಗಳ ಮೇಲೂ ದಾಳಿಗೆ ಸಂಚುಮಾಡಿತ್ತು. ಆದರೆ ಭಾರತೀಯ ಸೇನೆ (Indian Army) ಎಲ್ಲಾ ದಾಳಿಯನ್ನು ವಿಫಲಗೊಳಿಸಿದೆ.

    ಮೇ 7 ರಂದು ಭಾರತ ಪಾಕಿಸ್ತಾನ ಹಾಗೂ ಪಿಒಕೆಯಲ್ಲಿದ್ದ 9 ಭಯೋತ್ಪಾದಕರ ಶಿಬಿರಗಳ ಮೇಲೆ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿ ಉಗ್ರರನ್ನು ಧ್ವಂಸಮಾಡಿತ್ತು. ಇದಕ್ಕೆ ಪ್ರತಿಯಾಗಿ ಪಾಕ್ ಅಮಾಯಕ ನಾಗರಿಕರ ಮೇಲೆ ದಾಳಿ ಮಾಡಿ 16 ಜನರನ್ನು ಕೊಂದಿತ್ತು. ಇದನ್ನೂ ಓದಿ: ಭಾರತ-ಪಾಕ್ ಯುದ್ಧ ಭೀತಿ; ಚಂಡೀಗಢ ಸರ್ಕಾರದಿಂದ 2 ತಿಂಗಳು ಪಟಾಕಿ ಬ್ಯಾನ್

  • India’s Strike | ಪಾಕ್‌ ಮೇಲೆ ಭಾರತ ಪ್ರಯೋಗಿಸಿದ 3 ರಾಷ್ಟ್ರಗಳ ಶಸ್ತ್ರಾಸ್ತ್ರಗಳು ಎಷ್ಟು ಪವರ್‌ಫುಲ್?‌

    India’s Strike | ಪಾಕ್‌ ಮೇಲೆ ಭಾರತ ಪ್ರಯೋಗಿಸಿದ 3 ರಾಷ್ಟ್ರಗಳ ಶಸ್ತ್ರಾಸ್ತ್ರಗಳು ಎಷ್ಟು ಪವರ್‌ಫುಲ್?‌

    ನವದೆಹಲಿ: ಭಾರತದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ನಡೆಸಿದ ಡ್ರೋನ್‌, ಫೈಟರ್‌ ಜೆಟ್‌ (Fighter Jets) ಹಾಗೂ ಕ್ಷಿಪಣಿ ದಾಳಿಯನ್ನು ಭಾರತೀಯ ಸಶಸ್ತ್ರ ಪಡೆಗಳು ಸಮರ್ಥವಾಗಿ ಹಿಮ್ಮೆಟ್ಟಿಸಿವೆ. ಜೊತೆಗೆ ಪ್ರತೀಕಾರದ ದಾಳಿ ನಡೆಸಿರುವ ಭಾರತ ಸ್ವದೇಶಿ ನಿರ್ಮಿತ ʻಆಕಾಶ್‌ʼ ಕ್ಷಿಪಣಿ (Akash Missile) ಸೇರಿ ಒಟ್ಟು ಮೂರು ರಾಷ್ಟ್ರಗಳು ತಯಾರಿಸಿದ ಕ್ಷಿಪಣಿಗಳನ್ನು ಪರಿಣಾಮಕಾರಿಯಾಗಿ ಬಳಸಿ ದಾಳಿ ನಡೆಸಿರುವುದಾಗಿ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.

    ಹೌದು.. ಆಪರೇಷನ್‌ ಸಿಂಧೂರ (Operation Sindoor) ಪಾರ್ಟ್‌-1 ಮತ್ತು ಪಾರ್ಟ್‌-2ನಲ್ಲಿ ರಷ್ಯಾ, ಇಸ್ರೇಲ್ ಹಾಗೂ ನಾವು (ಭಾರತ) ನಿರ್ಮಿಸಿದ ಮೂರು ರಾಷ್ಟ್ರಗಳ ವೆಪನ್‌ ಬಳಸಿ ಪಾಕ್‌ ಉಗ್ರರ ತಾಣಗಳು, ಬಂದರು ಇತರ ಪ್ರಮುಖ ನೆಲೆಗಳನ್ನು ಛಿದ್ರ, ಛಿದ್ರ ಮಾಡಿವೆ. 1971ರ ಬಳೀಕ ಕರಾಚಿ ಬಂದರಿನ ಮೇಲೂ ದಾಳಿ ನಡೆಸಿ, ಶತ್ರುಗಳಲ್ಲಿ ನಡುಕ ಹುಟ್ಟಿಸಿವೆ. ಚೀನಾ ನಿರ್ಮಿತ ಪವರ್‌ಫುಲ್‌ ಶಸ್ತ್ರಾಸ್ತ್ರಗಳನ್ನು (Chinese weapon) ಭೇಸಿದಿ ಪಾಕ್‌ ಪತರುಗುಟ್ಟುವಂತೆ ಮಾಡಿದ್ದು ಈ ಅಸ್ತ್ರಗಳೇ ಅನ್ನುವುದು ಗಮನಾರ್ಹ.

    ಯಾವ ಅಸ್ತ್ರ – ಯಾವ ದೇಶ ನಿರ್ಮಿಸಿದ್ದು?
    1. ಸುದರ್ಶನ್ ಚಕ್ರ – S-400 ಮಿಸೈಲ್‌ – ರಷ್ಯಾ ನಿರ್ಮಿತ
    2. ಕಾಮಿಕಾಜ್ ಡ್ರೋನ್‌ – ಭಾರತ ನಿರ್ಮಿತ
    3. ಏರ್‌ ಮಿಸೈಲ್ – ಭಾರತ ನಿರ್ಮಿತ
    4. ಹಾರ್ಪಿ ಡ್ರೋನ್ – ಇಸ್ರೇಲ್ ನಿರ್ಮಿತ
    5. ಡೀಪ್ ಸ್ಟ್ರೈಕ್ ಕ್ರೂಸರ್ ಕ್ಷಿಪಣಿ – ಭಾರತ ನಿರ್ಮಿತ

    2ಕ್ಕೂ ಹೆಚ್ಚು ಫೂಟರ್‌ ಜೆಟ್‌ ಉಡೀಸ್‌:
    ಕ್ಷಿಪಣಿ ದಾಳಿಗಷ್ಟೇ ನಿಲ್ಲದ ಭಾರತೀಯ ಸೇನೆಯ ಪರಾಕ್ರಮ ಇನ್ನೂ ಮುಂದುವರಿಯಿತು. ಚೀನಾ ನಿರ್ಮಿತ ಜೆಎಫ್‌-10, JF-17 ಅಮೆರಿಕ ನಿರ್ಮಿತ ಎಫ್‌-16 ಶಕ್ತಿಶಾಲಿ ಫೈಟರ್‌ಜೆಟ್‌ ಹಾಗೂ ಡ್ರೋನ್‌, ಕ್ಷಿಪಣಿಗಳನ್ನ ಸಾಲು ಸಾಲಾಗಿ ಹೊಡೆದುರುಳಿಸಿತು. ಈ ಕಾರ್ಯಾಚರಣೆಯಲ್ಲಿ ಭಾರತ ಈ ಕಾರ್ಯಾಚರಣೆಯಲ್ಲಿ L-70 ಗನ್‌, ಆಕಾಶ್, MRSAM, Zu-23, L-70 ಮತ್ತು ಶಿಲ್ಕಾ ಡಿಫೆನ್ಸ್‌ ಸಿಸ್ಟಮ್‌ಗಳನ್ನ ಬಳಕೆ ಮಾಡಿತ್ತು. ಶತ್ರುಗಳ ವಾಯುದಾಳಿಗಳನ್ನು ಸಮರ್ಥವಾಗಿ ಎದುರಿಸಬಲ್ಲ ಈ ರಕ್ಷಣಾ ವ್ಯವಸ್ಥೆಗಳು ಪಾಕ್‌ಗೆ ದಿಟ್ಟ ಉತ್ತರ ನೀಡುವಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದವು.

    ಗುರುವಾರ ಭಾರತೀಯ ನಗರಗಳನ್ನ (Indian Cities) ಟಾರ್ಗೆಟ್‌ ಮಾಡಿದ್ದ ಪಾಕ್‌ಗೆ ದಿಟ್ಟ ಉತ್ತರ ನೀಡಿದ್ದ ಭಾರತೀಯ ವಾಯುಸೇನೆ, ಲಾಹೋರ್‌ನಲ್ಲಿರುವ ರೆಡಾರ್‌ ಕೇಂದ್ರವನ್ನೇ ಧ್ವಂಸ ಮಾಡಿತ್ತು. ಶೇಖ್‌ಪುರ, ಸಿಯಾಲ್‌ ಕೋಟ್‌, ಗುಜರನ್‌ ವಾಲಾ ಮತ್ತು ನರೊವಾಲಾ ಮತ್ತ ಚಕ್ವಾಲ್‌ ಮೇಲೂ ಭಾರತದ ಕಾಮಕಾಜಿ ಡ್ರೋನ್‌ ದಾಳಿ ನಡೆಸಿತ್ತು. ಒಟ್ಟು 25 ಕ್ಷಿಪಣಿಗಳನ್ನು ಭಾರತ ಹಾರಿಸಿತ್ತು, ಇದರಲ್ಲಿ 7 ಇಸ್ಲಾಮಾಬಾದ್‌ ಮತ್ತು ರಾವಲ್ಪಿಂಡಿಯನ್ನ ಗುರಿಯಾಗಿಸಿದ್ದವು. ಆದರೂ ಕಿತಾಪತಿ ಬಿಡದ ಪಾಕಿಸ್ತಾನ ರಾತ್ರಿ ವೇಳೆಗೆ ಜಮ್ಮುವಿನ ಮೇಲೆ 100 ಕ್ಷಿಪಣಿಗಳಿಂದ ದಾಳಿ ನಡೆಸಿತ್ತು. ಇದಕ್ಕೆ ಕೆರಳಿ ಕೆಂಡವಾದ ಭಾರತ ಏಕಾಏಕಿ ನೂರಕ್ಕೂ ಹೆಚ್ಚು ಕ್ಷಿಪಣಿಗಳನ್ನ ಪಾಕ್‌ ಮೇಲೆ ಹಾರಿಸಿತು. ಇದರಿಂದ ಪಾಕ್‌ನ 16 ನಗರಗಳಲ್ಲಿ ಭಾರೀ ಹಾನಿ ಸಂಭವಿಸಿದೆ.

  • ಸೇನಾ ಮುಖ್ಯಸ್ಥರ ಜೊತೆ ಹೈವೋಲ್ಟೇಜ್‌ ಸಭೆ ನಡೆಸಿದ ರಾಜನಾಥ್ ಸಿಂಗ್‌

    ಸೇನಾ ಮುಖ್ಯಸ್ಥರ ಜೊತೆ ಹೈವೋಲ್ಟೇಜ್‌ ಸಭೆ ನಡೆಸಿದ ರಾಜನಾಥ್ ಸಿಂಗ್‌

    – 2 ಗಂಟೆ ಸುದೀರ್ಘ ಚರ್ಚೆ ನಡೆಸಿದ ರಕ್ಷಣಾ ಸಚಿವ

    ನವದೆಹಲಿ: ಪಾಕಿಸ್ತಾನದ (Pakistan) ವಿರುದ್ಧ ನಡೆಯುತ್ತಿರುವ ಸೇನಾ ಕಾರ್ಯಾಚರಣೆಯ ಬಗ್ಗೆ ಸಿಡಿಎಸ್ ಮತ್ತು ಮೂರು ಸೇನಾ ಮುಖ್ಯಸ್ಥರ ಜೊತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಹೈವೋಲ್ಟೇಜ್‌ ಸಭೆ ನಡೆಸಿದ್ದಾರೆ.

    ದೆಹಲಿಯಲ್ಲಿ ಸಿಡಿಎಸ್ ಜನರಲ್ ಅನಿಲ್ ಚೌಹಾಣ್ ಮತ್ತು ಮೂರು ಸೇನಾ ಮುಖ್ಯಸ್ಥರೊಂದಿಗೆ 2 ಗಂಟೆಗಳ ಕಾಲ ಈ ಸಭೆ ನಡೆದಿದೆ. ಈ ವೇಳೆ ಪಾಕ್ ಕ್ಷಿಪಣಿ ಮತ್ತು ಡ್ರೋನ್ ದಾಳಿಯನ್ನು ಭಾರತ ಯಶಸ್ವಿಯಾಗಿ ತಡೆದ ಬಗ್ಗೆ ಅವರು ಮಾಹಿತಿ ಪಡೆದರು. ʻಆಪರೇಷನ್ ಸಿಂಧೂರʼ ಬಳಿಕ ಗಡಿಯಲ್ಲಿ ಭದ್ರತಾ ಪರಿಸ್ಥಿತಿಯ ಬಗ್ಗೆ ನಿರ್ಣಯಿಸಲು ಈ ಸಭೆ ನಡೆಸಲಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಪಂಜಾಬ್‌ನಲ್ಲಿ ಪಾಕ್‌ ಕ್ಷಿಪಣಿ ಅವಶೇಷ ಪತ್ತೆ – ಚೀನಾ ನಿರ್ಮಿತ ಪವರ್‌ಫುಲ್‌ ಮಿಸೈಲ್‌ ಠುಸ್‌!

    ಗುರುವಾರ ರಾತ್ರಿ ಪಾಕ್‌ ವಿರುದ್ಧ ಭಾರತ ಮಿಸೈಲ್‌ಗಳ ಮಳೆ ಸುರಿಸಿದೆ. ಈ ವೇಳೆ ಪಾಕ್‌ ಸಹ ದಾಳಿ ನಡೆಸಿದೆ. ಆದರೆ ಭಾರತೀಯ ಸೇನೆ ಆ ದಾಳಿಯನ್ನು ವಿಫಲಗೊಳಿಸಿದೆ. ಇದರ ಬೆನ್ನಲ್ಲೇ ಆಪರೇಷನ್‌ ಸಿಂಧೂರ (Operation Sindoor) ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದು, ಪಾಕ್‌ ತತ್ತರಿಸಿ ಹೋಗಿದೆ. ಇಷ್ಟಾಗಿಯೂ ಕಿತಾಪತಿ ಬಿಡದ ಪಾಕಿಸ್ತಾನ ಮತ್ತೆ ಭಾರತದ ಜಮ್ಮುವಿನ ಮೇಲೆ ದಾಳಿಗೆ ವಿಫಲಯತ್ನ ನಡೆಸಿದೆ.

    ಜಮ್ಮುವಿನಲ್ಲಿ ಇದುವರೆಗೆ ಪಾಕಿಸ್ತಾನದ 50ಕ್ಕೂ ಹೆಚ್ಚು ಡ್ರೋನ್‌ ದಾಳಿಯನ್ನು ಭಾರತೀಯ ವಿಫಲಗೊಳಿಸಿದೆ. ಭಾರತೀಯ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಹಾಗೂ ವಿವಿಧ ಪ್ರದೇಶಗಳನ್ನು ಗುರಿಯಾಗಿಸಿ ಪಾಕಿಸ್ತಾನ ಡ್ರೋನ್‌ ದಾಳಿ ನಡೆಸಿತ್ತು. ಅವಂತಿಪುರ, ಶ್ರೀನಗರ, ಜಮ್ಮು, ಪಠಾಣ್‌ಕೋಟ್, ಅಮೃತಸರ, ಕಪುರ್ತಲ, ಜಲಂಧರ್, ಲುಧಿಯಾನ, ಆದಂಪುರ, ಬಟಿಂಡಾ, ಚಂಡೀಗಢ, ನಾಲ್, ಫಲೋಡಿ, ಉತ್ತರಲೈ, ಭುಜ್ ಸೇರಿ ಒಟ್ಟು 15 ನಗರಗಳ ಮೇಲೂ ದಾಳಿಗೆ ಸಂಚುಮಾಡಿತ್ತು. ಆದರೆ ಭಾರತೀಯ ಸೇನೆ (Indian Army) ಎಲ್ಲಾ ದಾಳಿಯನ್ನು ವಿಫಲಗೊಳಿಸಿದೆ.

    ಮೇ 7 ರಂದು ಭಾರತ ಪಾಕಿಸ್ತಾನ ಹಾಗೂ ಪಿಒಕೆಯಲ್ಲಿದ್ದ 9 ಭಯೋತ್ಪಾದಕರ ಶಿಬಿರಗಳ ಮೇಲೆ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿ ಉಗ್ರರನ್ನು ಧ್ವಂಸಮಾಡಿತ್ತು. ಇದಕ್ಕೆ ಪ್ರತಿಯಾಗಿ ಪಾಕ್ ಅಮಾಯಕ ನಾಗರಿಕರ ಮೇಲೆ ದಾಳಿ ಮಾಡಿ 16 ಜನರನ್ನು ಕೊಂದಿತ್ತು. ಇದನ್ನೂ ಓದಿ: Breaking | ಭಾರತ-ಪಾಕ್‌ ಉದ್ವಿಗ್ನತೆ – IPL 2025 ಟೂರ್ನಿ ಸಸ್ಪೆಂಡ್‌!

  • ಬಿಎಸ್‌ಎಫ್‌ ಯೋಧರ ಭರ್ಜರಿ ಬೇಟೆ – ಸಾಂಬಾದಲ್ಲಿ 7 ಮಂದಿ ಜೈಶ್‌ ಉಗ್ರರ ಹತ್ಯೆ

    ಬಿಎಸ್‌ಎಫ್‌ ಯೋಧರ ಭರ್ಜರಿ ಬೇಟೆ – ಸಾಂಬಾದಲ್ಲಿ 7 ಮಂದಿ ಜೈಶ್‌ ಉಗ್ರರ ಹತ್ಯೆ

    ನವದೆಹಲಿ: ಅಕ್ರಮವಾಗಿ ಭಾರತಕ್ಕೆ ನುಸುಳುತ್ತಿದ್ದ ಜೈಶ್-ಎ-ಮೊಹಮ್ಮದ್‌ (Jaish-e-Mohammed) ಸಂಘಟನೆಯ 7 ಉಗ್ರರನ್ನು ಜಮ್ಮು ಮತ್ತು ಕಾಶ್ಮೀರದ ಸಾಂಭಾದಲ್ಲಿ (Samba) ಭಾರತದ ಗಡಿ ಭದ್ರತಾ ಪಡೆ ಹೊಡೆದುರುಳಿಸಿದೆ.

    ಗುರುವಾರ ಹಲವು ಗಂಟೆಗಳ ಕಾಲ ನಡೆದ ದಾಳಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ಪ್ರಮುಖ ಒಳನುಸುಳುವಿಕೆ ಪ್ರಯತ್ನವನ್ನು ಬಿಎಸ್‌ಎಫ್ (BSF) ವಿಫಲಗೊಳಿಸಿದೆ. ಇದನ್ನೂ ಓದಿ: ಜಮ್ಮುವಿನಲ್ಲಿ ಅಮಾಯಕರನ್ನ ಟಾರ್ಗೆಟ್‌ ಮಾಡಿದ ʻಪಾಪಿಸ್ತಾನʼ – 10,000 ಮಂದಿ ಸ್ಥಳಾಂತರ?

    ಅಂತಾರಾಷ್ಟ್ರೀಯ ಗಡಿಯನ್ನು ಅಕ್ರಮವಾಗಿ ಪ್ರವೇಶಿಸಲು ಯತ್ನಿಸುತ್ತಿದ್ದಾಗ ಬಿಎಸ್‌ಎಫ್‌ ಯೋಧರು ಗುಂಡಿಕ್ಕಿ ಕೊಂದಿದ್ದಾರೆ ಈ ಮಾಹಿತಿಯನ್ನು ಬಿಎಸ್‌ಎಫ್‌ ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದೆ. ಇದನ್ನೂ ಓದಿ: Video | ಪ್ರತೀಕಾರ ಸಮರ – ರಾತ್ರಿಯಿಡೀ ವಾರ್‌ರೂಂನಲ್ಲಿದ್ದು ಕ್ಷಣಕ್ಷಣದ ಮಾಹಿತಿ ಪಡೆದ ಮೋದಿ

    ಜಮ್ಮು, ರಾಜಸ್ಥಾನ ಮತ್ತು ಪಂಜಾಬ್‌ನ ಅಮೃತಸರ ಸೇರಿ ಭಾರತದ 15 ನಗರಗಳನ್ನು ಗುರಿಯಾಗಿಸಿ ಪಾಕಿಸ್ತಾನ ಮಿಸೈಲ್‌, ಡ್ರೋನ್‌ ದಾಳಿ ನಡೆಸಿತು. ಭಾರತೀಯ ಸೇನೆ ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಿದೆ. ಪಾಕ್‌ನ ಎಲ್ಲಾ ಮಿಸೈಲ್‌ಗಳನ್ನು ಹೊಡೆದುರುಳಿಸಿದೆ. ಇದನ್ನೂ ಓದಿ: ಭಾರತ-ಪಾಕ್‌ ನಡುವೆ ಯುದ್ಧ ಛಾಯೆ – ರದ್ದಾಗುತ್ತಾ ಐಪಿಎಲ್‌?- ಅತ್ತ ಪಾಕ್‌ ಸೂಪರ್‌ ಲೀಗ್‌ ದುಬೈಗೆ ಶಿಫ್ಟ್‌

  • Video | ಪ್ರತೀಕಾರ ಸಮರ – ರಾತ್ರಿಯಿಡೀ ವಾರ್‌ರೂಂನಲ್ಲಿದ್ದು ಕ್ಷಣಕ್ಷಣದ ಮಾಹಿತಿ ಪಡೆದ ಮೋದಿ

    Video | ಪ್ರತೀಕಾರ ಸಮರ – ರಾತ್ರಿಯಿಡೀ ವಾರ್‌ರೂಂನಲ್ಲಿದ್ದು ಕ್ಷಣಕ್ಷಣದ ಮಾಹಿತಿ ಪಡೆದ ಮೋದಿ

    ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವೆ ಪ್ರತೀಕಾರದ ಸಮರ ಈಗ ವಿಶ್ವಮಟ್ಟದಲ್ಲಿ ಸದ್ದು ಮಾಡುತ್ತಿದೆ. ಗುರುವಾರ ರಾತ್ರಿ ಜಮ್ಮುವಿನ ಮೇಲೆ ಪಾಕ್‌ 100 ಕ್ಷಿಪಣಿಗಳ ದಾಳಿ ನಡೆಸಿದ ಬಳಿಕ ಭಾರತ ಪ್ರತೀಕಾರದ ತೀವ್ರತೆಯನ್ನ ಹೆಚ್ಚಿಸಿದೆ. ಹೀಗಾಗಿ ರಾತ್ರಿಯಿಡೀ ವಾರ್‌ರೂಮ್‌ನಲ್ಲೇ ವಾಸ್ತವ್ಯ ಹೂಡಿದ ಪ್ರದಾನಿ ಮೋದಿ ಎನ್‌ಎಸ್‌ಎ, ಸಿಡಿಎಸ್‌ ಅವರಿಂದ ಕ್ಷಣ ಕ್ಷಣದ ಮಾಹಿತಿ ಪಡೆದುಕೊಂಡಿದ್ದಾರೆ. ಜೊತೆಗೆ ಮುಂದಿನ ಕ್ರಮಗಳ ಬಗ್ಗೆಯೂ ಸೂಚಿಸಿದ್ದಾರೆ. ಈ ಕುರಿತ ವಿಡಿಯೋ ಇಲ್ಲಿದೆ…

  • ಜಮ್ಮುವಿನಲ್ಲಿ ಅಮಾಯಕರನ್ನ ಟಾರ್ಗೆಟ್‌ ಮಾಡಿದ ʻಪಾಪಿಸ್ತಾನʼ – 10,000 ಮಂದಿ ಸ್ಥಳಾಂತರ?

    ಜಮ್ಮುವಿನಲ್ಲಿ ಅಮಾಯಕರನ್ನ ಟಾರ್ಗೆಟ್‌ ಮಾಡಿದ ʻಪಾಪಿಸ್ತಾನʼ – 10,000 ಮಂದಿ ಸ್ಥಳಾಂತರ?

    – ಜಮ್ಮು ಕಾಶ್ಮೀರದ ಎಲ್ಲಾ ಶಾಲಾ ಕಾಲೇಜುಗಳೂ ಬಂದ್

    ನವದೆಹಲಿ/ಇಸ್ಲಾಮಾಬಾದ್‌: ಭಾರತೀಯ ರಕ್ಷಣಾ ಪಡೆಗಳ ದಾಳಿಗೆ ತತ್ತರಿಸಿರುವ ಪಾಪಿ ಪಾಕಿಸ್ತಾನ (Pakistan) ಗಡಿ ಮೀರಿ ಭಾರತದ ಮೇಲೆ ದಾಳಿ ಮಾಡುತ್ತಿದೆ.

    ಕೈಯಲ್ಲಾಗದವರು ಮೈ ಪರಚಿಕೊಂಡದೇ ಸೇನೆ ವಿರುದ್ಧ ಸೆಣಸಲಾಗದ ಪಾಕ್‌ ಶೆಲ್ ದಾಳಿ (Missile Attack) ನಡೆಸಿ ಅಮಾಯಕರನ್ನ ಟಾರ್ಗೆಟ್‌ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಗಡಿ ಜಿಲ್ಲೆಗಳಾದ ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ರಾಜಸ್ಥಾನ, ಹರಿಯಾಣ ಹಾಗೂ ಹಿಮಾಚಲ ಪ್ರದೇಶದಲ್ಲಿ (Himachal Pradesh) ತುರ್ತು ಪರಿಸ್ಥಿತಿ ಹೇರಲಾಗಿದೆ. ಜಮ್ಮು ಕಾಶ್ಮೀರದಲ್ಲಿ ಬೆಳಗ್ಗಿನವರೆಗೂ ಬ್ಲಾಕ್‌ಔಟ್ ಘೋಷಿಸಲಾಗಿತ್ತು.

    10 ಸಾವಿರ ಮಂದಿ ಸ್ಥಳಾಂತರ?
    ಭಾರತ ಮತ್ತು ಪಾಕ್‌ (India vs Pakistan) ನಡುವೆ ಉದ್ವಿಗ್ನತೆ ಹೆಚ್ಚಿದ ಬೆನ್ನಲ್ಲೇ ಗಡಿ ಗ್ರಾಮಗಳಿಂದ ಸುಮಾರು 10,000 ನಿವಾಸಿಗಳನ್ನು ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ. ಈ ಹೊತ್ತಿನಲ್ಲೇ ಪಾಕ್‌ ಅಮಾಯಕರನ್ನ ಗುರಿಯಾಗಿಸಿ ಶೆಲ್‌ ದಾಳಿ ನಡೆಸಿದೆ. ಪಾಕ್‌ ದಾಳಿಯಿಂದ ಪೂಂಚ್‌ ಜಿಲ್ಲೆ ಮಾತ್ರವಲ್ಲದೆ, ಉರಿ, ಬಾರಾಮುಲ್ಲಾ, ಕರ್ನಾ, ತಂಗ್ಧರ್, ಮೆಂಧರ್‌ ಸೇರಿದಂತೆ ವಿವಿಧೆಡೆ ನಾಗರಿಕರ ಮನೆ ಮಳಿಗೆಗಳು ಹಾನಿಗೊಳಗಾಗಿವೆ.

    ಹೀಗಾಗಿ ಪಾಕಿಸ್ತಾನಕ್ಕೆ ಸೈನ್ಯದ ಜೊತೆ ಹೋರಾಡುವ ಶಕ್ತಿ ಇಲ್ಲ-ಅದಕ್ಕೆ ನಾಗರಿಕರ ಮೇಲೆ ದಾಳಿ ಮಾಡ್ತಿದೆ-ಬೆಳಗ್ಗೆ 4-30 ಕ್ಕೂ ಸ್ಫೋಟದ ಸದ್ದು ಕೇಳಿದೆ ಎಂದು ಜಮ್ಮುವಿನ ನಾಗರಿಕರು ಆಕ್ರೋಶ ಹೊರಹಾಕಿದ್ದಾರೆ.

    ಜಮ್ಮು ಕಾಶ್ಮೀರದ ಎಲ್ಲಾ ಶಾಲಾ ಕಾಲೇಜುಗಳೂ ಬಂದ್
    ಭಾರತ-ಪಾಕಿಸ್ತಾನ ಸಂಘರ್ಷದ ಹಿನ್ನಲೆಯಲ್ಲಿ ಜಮ್ಮು ಕಾಶ್ಮೀರದ ಎಲ್ಲಾ ಶಾಲಾ ಕಾಲೇಜುಗಳು ಇಂದು ಕೂಡಾ ಬಂದ್ ಆಗಲಿದೆ. ಸುರಕ್ಷತೆಗೆ ಹೆಚ್ಚಿನ ಕ್ರಮ ವಹಿಸಲಾಗಿದೆ.

    ಮಿಲಿಟರಿ ಕಂಟೋನ್ಮೆಂಟ್‌ಗಳೇ ಶಿಫ್ಟ್‌
    ಇನ್ನೂ ಭಾರತೀಯ ರಕ್ಷಣಾ ಪಡೆಗಳ ದಿಟ್ಟ ಉತ್ತರಕ್ಕೆ‌ ಕಕ್ಕಾಬಿಕ್ಕಿಯಾಗಿರುವ ಪಾಕಿಸ್ತಾನದ ಸಿಂಧ್, ಪಂಜಾಬ್ ಕಂಟೋನ್ಮೆಂಟ್‌ಗಳಲ್ಲಿ ಭೀತಿ ಹೆಚ್ಚಾಗಿದೆ. ಹೀಗಾಗಿ ಮಿಲಿಟರಿ ಕಂಟೋನ್ಮೆಂಟ್‌ಗಳನ್ನ ಸಾಮೂಹಿಕವಾಗಿ ಸ್ಥಳಾಂತರ ಮಾಡಿಕೊಳ್ಳುತ್ತಿದೆ.

  • ಪಾಕ್‌ ಕ್ಷಿಪಣಿ ದಾಳಿ ಬೆನ್ನಲ್ಲೇ ಹೈಅಲರ್ಟ್‌ – ದೇಶಾದ್ಯಂತ 24 ಏರ್‌ಪೋರ್ಟ್‌ಗಳು ತಾತ್ಕಾಲಿಕ ಬಂದ್‌

    ಪಾಕ್‌ ಕ್ಷಿಪಣಿ ದಾಳಿ ಬೆನ್ನಲ್ಲೇ ಹೈಅಲರ್ಟ್‌ – ದೇಶಾದ್ಯಂತ 24 ಏರ್‌ಪೋರ್ಟ್‌ಗಳು ತಾತ್ಕಾಲಿಕ ಬಂದ್‌

    ನವದೆಹಲಿ: ಪಾಕಿಸ್ತಾನ ಕ್ಷಿಪಣಿ ದಾಳಿ ನಡೆಸಿದ ಬಳಿಕ ಭಾರತ ʻಆಪರೇಷನ್‌ ಸಿಂಧೂರʼ (Operation Sindoor) ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಭಿಕಾರಿಸ್ತಾನದ ಮೇಲೆ ಮಿಸೈಲ್‌ಗಳ ಸುರಿಮಳೆಗೈದಿದೆ. ಈ ನಡುವೆ ಉಭಯ ರಾಷ್ಟ್ರಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ಆದ್ರೆ ಪಾಕ್‌ ಕ್ಷಿಪಣಿ ದಾಳಿ ಬೆನ್ನಲ್ಲೇ ಭಾರತ (India) ದೇಶಾದ್ಯಂತ 24 ವಿಮಾನ ನಿಲ್ದಾಣಗಳ (Airports) ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಜಮ್ಮುವಿನ ಮೇಲೆ ದಾಳಿಗೆ ಯತ್ನಿಸಿದ್ದ ಪಾಕ್‌ನ 50ಕ್ಕೂ ಹೆಚ್ಚು ಡ್ರೋನ್‌ಗಳು ಮಟಾಶ್‌

    ಹಲವು ಭಾರತೀಯ ವಿಮಾನಯಾನ ಸಂಸ್ಥೆಗಳು (Indian Airlines) ಪ್ರಯಾಣ ಸಲಹೆಗಳನ್ನು ನೀಡಿದ್ದು, ಅದಕ್ಕೆ ಅನುಗುಣವಾಗಿ ಪ್ರಯಾಣಿಕರು ತಮ್ಮ ಪ್ರಯಾಣದ ಯೋಜನೆಯನ್ನು ಪ್ಲ್ಯಾನ್‌ ಮಾಡಿಕೊಳ್ಳುವಂತೆ ತಿಳಿಸಿವೆ. ಇನ್ನೂ ದೇಶಾದ್ಯಂತ ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಇದನ್ನೂ ಓದಿ: ಪಾಕ್‌ ದಾಳಿಯನ್ನು ಪರಿಣಾಮಕಾರಿಯಾಗಿ ಹಿಮ್ಮೆಟ್ಟಿಸಿದ್ದೇವೆ – ಭಾರತೀಯ ಸೇನೆ ಅಭಯ

    ದೆಹಲಿ ಏರ್‌ಪೋರ್ಟ್‌ ಸಹಜ ಸ್ಥಿತಿಯಲ್ಲಿ ಕಾರ್ಯಾಚರಣೆ – ಕೆಲ ವಿಮಾನ ಹಾರಾಟ ರದ್ದು
    ಇನ್ನೂ ದೇಶದ ರಾಜಧಾನಿ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದಿನಂತೆ ಕಾರ್ಯನಿರ್ವಹಿಸುತ್ತಿದೆ. ಭದ್ರತೆ ಹೆಚ್ಚಿಸಿರುವ ಕಾರಣ ಕೆಲವು ವಿಮಾನಗಳ ಹಾರಾಟಗಳು ರದ್ದಾಗಿವೆ. ಪ್ರಯಾಣಿಕರು ತಮ್ಮ ವಿಮಾನಯಾನದ ಬಗ್ಗೆ ಮಾಹಿತಿ ತಿಳಿದುಕೊಂಡು ಏರ್‌ಪೋರ್ಟ್‌ಗೆ ಬರಲು ಸೂಚಿಸಲಾಗಿದೆ. ಇದನ್ನೂ ಓದಿ: ಪಾಕಿಸ್ತಾನಿಗಳಿಗೆ ಶಸ್ತ್ರಾಸ್ತ್ರಗಳನ್ನ ತ್ಯಜಿಸುವಂತೆ ಅಮೆರಿಕ ಹೇಳಲು ಸಾಧ್ಯವಿಲ್ಲ: ಜೆಡಿ ವ್ಯಾನ್ಸ್