ಶ್ರೀನಗರ: ಜಮ್ಮು & ಕಾಶ್ಮೀರದ ನಾಗ್ರೋಟಾದಲ್ಲಿ (Nagrota) ಭಾರತೀಯ ಸೇನೆ ಮತ್ತು ಶಂಕಿತ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದೆ ಎಂದು ವರದಿಯಾಗಿದೆ.
ನಾಗ್ರೋಟಾದ ಸೇನಾ ಘಟಕದಲ್ಲಿ ಗುಂಡಿನ ದಾಳಿ ನಡೆದಿದೆ. ಸ್ಥಳದಲ್ಲಿ ಅನುಮಾನಾಸ್ಪದ ಚಲನವಲನ ಕಂಡುಬಂದಿದೆ. ಆದರೆ ಆರಂಭಿಕ ಕಾರ್ಯಾಚರಣೆಯ ನಂತರ ಯಾವುದೇ ಸಂಪರ್ಕ ಕಂಡುಬಂದಿಲ್ಲ. ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. ಭದ್ರತಾ ಪಡೆಗಳಿಂದ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಇದನ್ನೂ ಓದಿ: ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿದೆ: ವಿಕ್ರಂ ಮಿಸ್ರಿ
#WATCH | Search operation by security forces underway in Nagrota, J&K
Firing incident was reported at an Army unit in Nagrota. As per Sentry, suspicious movement was seen, but there has been no further contact after initial engagement. Further investigations are on in the… https://t.co/8lUcM3RaKwpic.twitter.com/1ivjoh8Zuz
ಪರಿಧಿಯ ಬಳಿ ಅನುಮಾನಾಸ್ಪದ ಚಲನವಲನಗಳನ್ನು ಗಮನಿಸಿದ ನಗ್ರೋಟಾ ಮಿಲಿಟರಿ ಠಾಣೆಯ ಕಾವಲುಗಾರ ಗುಂಡು ಹಾರಿಸಿದ್ದಾರೆ. ಇದರಿಂದಾಗಿ ಶಂಕಿತ ವ್ಯಕ್ತಿಯೊಂದಿಗೆ ಸ್ವಲ್ಪ ಸಮಯದವರೆಗೆ ಗುಂಡಿನ ಚಕಮಕಿ ನಡೆದಿದೆ. ಕಾವಲುಗಾರರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ನುಸುಳುಕೋರರನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆಗಳು ನಡೆಯುತ್ತಿವೆ ಎಂದು ಎಕ್ಸ್ ಪೋಸ್ಟ್‌ನಲ್ಲಿ ಭಾರತೀಯ ಸೇನೆಯ ವೈಟ್ ನೈಟ್ ಕಾರ್ಪ್ಸ್ ತಿಳಿಸಿದೆ.
ಅಮೆರಿಕ ಮಧ್ಯಸ್ಥಿಕೆಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಶನಿವಾರ ಕದನ ವಿರಾಮ ಒಪ್ಪಂದ ಆಯಿತು. ಇದಾದ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದೆ. ಗಡಿ ಭಾಗದಲ್ಲಿ ಪಾಕ್ ಡ್ರೋನ್ ದಾಳಿ ನಡೆಸಿದೆ. ಪಾಕ್ ಡ್ರೋನ್‌ಗಳನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ಇದನ್ನೂ ಓದಿ: ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ – BSF ಯೋಧ ಹುತಾತ್ಮ
ನವದೆಹಲಿ: ಯುದ್ಧ ಇಂದು ಮುಗಿಯದೇ ಇರಬಹುದು. ಆದರೆ ನಮ್ಮ ಶಕ್ತಿ, ನಮ್ಮ ದೇಶದ ತಾಕತ್ ಪ್ರಪಂಚಕ್ಕೆ ಗೊತ್ತಾಗಿದೆ. ಶಾಂತಿ ನೆಲೆಸುವವರೆಗೂ ಇದು ನಿಲ್ಲಬಾರದು ಎಂದು ಬಾಲಿವುಡ್ (Bollywood) ನಟ ಸಂಜಯ್ ದತ್ (Sanjay Dutt) ಭಾರತೀಯ ಸೇನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಭಾರತ ಮತ್ತು ಪಾಕ್ ಮಧ್ಯೆ ನಡೆಯುತ್ತಿರುವ ಸಂಘರ್ಷದ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಆಪರೇಷನ್ ಸಿಂಧೂರಗೆ (Operation Sindoor) ಬೆಂಬಲ ವ್ಯಕ್ತಪಡಿಸಿದ್ದಾರೆ. ನಮ್ಮ ಜನರ ಮೇಲಿನ ನಿರಂತರ ದಾಳಿಗಳನ್ನು ಇನ್ನು ಮುಂದೆ ಸಹಿಸಲಾಗುವುದಿಲ್ಲ. ನಾವು ಹಿಂಜರಿಯದೇ ಪೂರ್ಣ ಬಲದಿಂದ ಮತ್ತು ಅಚಲ ದೃಢಸಂಕಲ್ಪದಿಂದ ಪ್ರತಿಕ್ರಿಯಿಸುತ್ತೇವೆ. ನಮ್ಮ ಯುದ್ಧ ಜನರು ಅಥವಾ ರಾಷ್ಟ್ರದ ವಿರುದ್ಧವಲ್ಲ. ಭಯ, ಅವ್ಯವಸ್ಥೆ ಮತ್ತು ವಿನಾಶದ ವಿರುದ್ಧ ಎಂಬುದನ್ನು ಜಗತ್ತು ಅರ್ಥಮಾಡಿಕೊಳ್ಳಬೇಕು. ಈ ಬಾರಿ ಯಾವುದೇ ಕಾರಣಕ್ಕೂ ನಾವು ಹಿಂದೆ ಸರಿಯುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಗುಂಡಿನ ದಾಳಿ, ಮಿಲಿಟರಿ ಕಾರ್ಯಾಚರಣೆ ನಿಲ್ಲಿಸಲು ಭಾರತ-ಪಾಕ್ ಒಪ್ಪಂದ: ಜೈಶಂಕರ್
ಈ ಭಯೋತ್ಪಾದಕರು ಹಿಂಸಾಚಾರದ ಪರದೆಯ ಹಿಂದೆ ಅಡಗಿರುವ ಹೇಡಿಗಳು. ಅವರು ನೆರಳಿನ ಹಿಂದೆ ನಿಂತು ದಾಳಿ ಮಾಡುತ್ತಾರೆ. ಆದರೆ ನಾವು ತಲೆಬಾಗದ ರಾಷ್ಟ್ರ ಎಂದು ಅವರಿಗೆ ಗೊತ್ತಾಗಬೇಕು. ಅವರು ನಮ್ಮನ್ನು ಬೀಳಿಸಲು ಪ್ರಯತ್ನಿಸಿದಾಗಲೆಲ್ಲಾ ನಾವು ಬಲಶಾಲಿಯಾಗುತ್ತೇವೆ. ನಮ್ಮ ಏಕತೆ, ನಮ್ಮ ಚೈತನ್ಯ ಮತ್ತು ಹೋರಾಡುವ ಇಚ್ಛಾಶಕ್ತಿ ಅವರ ದ್ವೇಷಕ್ಕಿಂತ ಬಹಳ ದೊಡ್ಡದು ಎಂದು ತಿಳಿಸಿದರು. ಇದನ್ನೂ ಓದಿ: ಭಾರತ- ಪಾಕ್ ನಡುವೆ ಕದನ ವಿರಾಮ
ನಮ್ಮ ಯೋಧರು ಮುಂಚೂಣಿಯಲ್ಲಿ ನಿಂತು, ನಿರ್ಭೀತರಾಗಿ ಪ್ರತಿಯೊಂದು ಭಯೋತ್ಪಾದಕ ಕೃತ್ಯಕ್ಕೂ ಧೈರ್ಯದಿಂದ ಉತ್ತರಿಸುತ್ತಾರೆ. ಅವರು ಕೇವಲ ಗಡಿಗಳನ್ನು ರಕ್ಷಿಸುತ್ತಿಲ್ಲ. ಅವರು ಪ್ರತಿ ಮಗುವಿನ ಕನಸು, ಪ್ರತಿ ಕುಟುಂಬದ ಶಾಂತಿ ಮತ್ತು ಈ ರಾಷ್ಟ್ರವನ್ನು ರಕ್ಷಿಸುತ್ತಿದ್ದಾರೆ. ಅವರು ನಿಜವಾದ ವೀರರು. ಇವರಿಗೆ ನಾನು ಸಲ್ಯೂಟ್ ಹೊಡೆಯುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಪಾಕಿಸ್ತಾನ ಕದನ ವಿರಾಮಕ್ಕೆ ಒಪ್ಪಿದೆ: ಪಾಕ್ ವಿದೇಶಾಂಗ ಸಚಿವ ಘೋಷಣೆ
ಇದು ಕೇವಲ ಸೈನಿಕರ ಹೋರಾಟವಲ್ಲ, ಇದು ನಮ್ಮ ಹೋರಾಟ. ನಾಗರಿಕರಾಗಿ ನಾವು ಒಟ್ಟಾಗಿ ನಿಲ್ಲಬೇಕು. ಈ ಯುದ್ಧ ಇಂದು ಕೊನೆಗೊಳ್ಳದಿರಬಹುದು. ಆದರೆ ನಮ್ಮ ಶಕ್ತಿ, ನಮ್ಮ ದೃಢನಿಶ್ಚಯ ಮತ್ತು ನಮ್ಮ ಏಕತೆ ಶಾಶ್ವತ. ಅಗತ್ಯವಿದ್ದಲ್ಲಿ ನಾವು ಸಾಧ್ಯವಿರುವ ಯಾವುದೇ ರೀತಿಯ ಸೇವೆ ಸಲ್ಲಿಸುತ್ತೇವೆ ಎಂದು ಭರವಸೆಯ ನುಡಿಗಳನ್ನಾಡಿದರು. ಇದನ್ನೂ ಓದಿ: ಭಾರತ್ ಫೋರ್ಜ್, ಮಹೀಂದ್ರಾ ಕಂಪನಿಗಳಿಗೆ ಯುದ್ಧ ಸಾಮಗ್ರಿ ಉತ್ಪಾದನೆ ಹೆಚ್ಚಳಕ್ಕೆ ಕೇಂದ್ರ ಸೂಚನೆ
ನವದೆಹಲಿ: ಉಗ್ರರನ್ನು ಛೂ ಬಿಟ್ಟು ಕೆಣುಕುತ್ತಿರುವ ಪಾಕಿಸ್ತಾನ (Pakistan) ಭಾರತದ (India) ಮೇಲೆ ದಾಳಿ ಮಾಡುವಾಗಲೂ ಕುತಂತ್ರ ಮಾಡುತ್ತಿದೆ. ಪಾಕ್ ಕುತಂತ್ರ ಮಾಡಿದರೂ ಭಾರತೀಯ ಸೇನೆ ಸರಿಯಾಗಿ ತಿರುಗೇಟು ನೀಡಿ ಸಂಭವಿಸಬಹುದಾದ ಭಾರೀ ದುರಂತವನ್ನು ತಪ್ಪಿಸುತ್ತಿದೆ.
ಹೌದು. ಭಾರತ ಏರ್‌ಸ್ಟ್ರೈಕ್ ಮಾಡಿದ ನಂತರ ಪಾಕ್ ಡ್ರೋನ್ (Drone) ದಾಳಿ ಆರಂಭಿಸಿತ್ತು. ಈ ಡ್ರೋನ್ ದಾಳಿಯನ್ನು ಭಾರತ ಯಶಸ್ವಿಯಾಗಿ ಹಿಮ್ಮೆಟ್ಟಿಸಿತ್ತು.
ತನ್ನ ಡ್ರೋನ್ ದಾಳಿ ವಿಫಲಗೊಳ್ಳುತ್ತಿದ್ದಂತೆ ಪಾಕಿಸ್ತಾನ ತನ್ನ ನರಿ ಬುದ್ಧಿಯನ್ನು ಪ್ರದರ್ಶಿಸಲು ಆರಂಭಿಸಿದೆ. ರಾತ್ರಿ ಆಗುತ್ತಿದ್ದಂತೆ ಹಮಾಸ್ ರೀತಿ ಭಾರೀ ಸಂಖ್ಯೆಯಲ್ಲಿ ಡ್ರೋನ್ ಹಾರಿಸಲು ಆರಂಭಿಸಿದೆ. ಈ ಡ್ರೋನ್ ಹಾರಿಸುತ್ತಿದ್ದಂತೆ ಬೆಳಗ್ಗೆಯಿಂದ ಬಂದ್ ಆಗಿದ್ದ ವಾಯುಸೇವೆಯನ್ನು ಆರಂಭಿಸುತ್ತಿದೆ. ನಾಗರಿಕ ವಿಮಾನಗಳು ಹಾರಾಟ ಆರಂಭಿಸುತ್ತಿದ್ದಂತೆ ಬೆನ್ನಲ್ಲೇ ಕ್ಷಿಪಣಿ (Missile) ದಾಳಿ ನಡೆಸುತ್ತಿದೆ. ಇದನ್ನೂ ಓದಿ: ಭಯೋತ್ಪಾದನೆಯ ವಿರುದ್ಧ ಯುದ್ಧ ಸಾರಿದ ಭಾರತ
ನಾಗರಿಕ ವಿಮಾನಗಳು (Plane) ಸಂಚಾರ ಮಾಡುತ್ತಿದ್ದಾಗ ತನ್ನ ಮೇಲೆ ಭಾರತ ದಾಳಿ ನಡೆಸುವುದಿಲ್ಲ. ಒಂದು ವೇಳೆ ದಾಳಿ ನಡೆಸಿದರೆ ವಿಮಾನದ ಮೇಲೆ ಕ್ಷಿಪಣಿ ಬಿದ್ದು ವಿಮಾನ ನೆಲಕ್ಕೆ ಉರುಳಿದರೆ ಭಾರತವನ್ನು ದೂಷಿಸಬಹುದು ಎಂಬ ಮನಸ್ಥಿತಿಯಲ್ಲಿದೆ.
ಕಳೆದ ಎರಡು ದಿನಗಳಿಂದ ಪಂಜಾಬ್ ಗಡಿ ಹತ್ತಿರದಲ್ಲಿರುವ ಲಾಹೋರ್ ವಿಮಾನ ನಿಲ್ದಾಣದಲ್ಲಿ ರಾತ್ರಿ ಆಗುತ್ತಿದ್ದಂತೆ ವಿಮಾನ ಸಂಚಾರ ಆರಂಭವಾಗುತ್ತಿದೆ. ಈ ನಿರ್ಧಾರದ ಹಿಂದೆ ಪಾಕಿನ ಎರಡು ಕುತಂತ್ರಿ ಬುದ್ದಿ ಅಡಗಿದೆ. ಒಂದನೇಯದ್ದು ಭಾರತ ಬಹಳ ಯೋಚನೆ ಮಾಡಿ ಪ್ರತಿ ದಾಳಿ ಮಾಡಬೇಕು. ಇನ್ನೊಂದು ತಾನು ಸಿಡಿಸಿದ ಕ್ಷಿಪಣಿಯನ್ನು ಅಷ್ಟು ಸುಲಭವಾಗಿ ಭಾರತದ ರೇಡಾರ್‌ಗಳು ಗುರುತಿಸಲಾರದು ಎಂಬ ಲೆಕ್ಕಾಚಾರವನ್ನು ಪಾಕ್ ಹಾಕಿಕೊಂಡಿದೆ. ಇದನ್ನೂ ಓದಿ: ಕಾಶ್ಮೀರ ಗಡಿಯಲ್ಲಿನ ಪಾಕ್ ಉಗ್ರರ ನೆಲೆ ಉಡೀಸ್ – ವೀಡಿಯೋ ಬಿಡುಗಡೆ ಮಾಡಿದ ಸೇನೆ
ಶುಕ್ರವಾರ ಸಂಜೆ ಭಾರತ ಪಾಕಿನ ಈ ಕುತಂತ್ರವನ್ನು ಕರ್ನಲ್ ಸೋಫಿಯಾ ಖುರೇಷಿ ಅವರು ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದರು. ಆದರೆ ಶುಕ್ರವಾರ ರಾತ್ರಿ ಪಾಕಿಸ್ತಾನ ನಾಗರಿಕ ವಿಮಾನಗಳು ಹಾರುವ ಸಮಯದಲ್ಲೇ ದಾಳಿ ನಡೆಸಲು ಆರಂಭಿಸಿತ್ತು. ಭಾರೀ ಪ್ರಮಾಣದಲ್ಲಿ ಡ್ರೋನ್, ಕ್ಷಿಪಣಿಯನ್ನು ತಾನು ಹಾರಿಸುವಾಗ ತನ್ನ ವಾಯುಸೀಮೆಯನ್ನು ವಿಮಾನ ಹಾರಿಸಬಾರದು ಎಂಬ ನಿಯಮವನ್ನೇ ಗಾಳಿಗೆ ಭಾರತದ ನಗರಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದೆ. ಹೀಗಿದ್ದರೂ ಭಾರತ ಎಲ್ಲವನ್ನೂ ಯೋಚಿಸಿ ಕೇವಲ ಪಾಕಿಸ್ತಾನದ ಮಿಲಿಟರಿ ನೆಲೆಯನ್ನು ಮಾತ್ರ ಗುರಿಯಾಗಿಸಿ ಯಶಸ್ವಿಯಾಗಿ ದಾಳಿ ನಡೆಸುತ್ತಿದೆ.
ಕಳೆದ ಮೂರು ದಿನಗಳಿಂದ ಗುಜರಾತ್, ರಾಜಸ್ಥಾನ, ಪಂಜಾಬ್, ಹರ್ಯಾಣ, ಜಮ್ಮು ಕಾಶ್ಮೀರದಲ್ಲಿ ಭಾರತ ತನ್ನ ವಿಮಾನ ಸೇವೆಯನ್ನು ಸಂಪೂರ್ಣವಾಗಿ ಬಂದ್ ಮಾಡಿ ಭಾರತ ಪಾಕ್ ದಾಳಿಗೆ ದಿಟ್ಟ ಪ್ರತಿ ದಾಳಿ ನಡೆಸುತ್ತಿದೆ.
ನವದೆಹಲಿ: ಜಮ್ಮು ಮತ್ತು ಕಾಶ್ಮೀರ(Jammu and Kashmir) ಹಾಗೂ ಪಂಜಾಬ್‌ನ(Panjab) ಮೇಲೆ ಡ್ರೋನ್ ದಾಳಿಗೆ ಪಾಕ್ ಯತ್ನಿಸಿದ್ದು, ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆಯು ಮೇ 8 ಮತ್ತು 9 ರಂದು ರಾತ್ರಿ ನಿಯಂತ್ರಣ ರೇಖೆಯ ಬಳಿಯಿದ್ದ ಪಾಕಿಸ್ತಾನದ ಲಾಂಚ್‌ಪ್ಯಾಡ್‌ಗಳನ್ನು(Launchpads) ಧ್ವಂಸಗೊಳಿಸಿದ ವೀಡಿಯೋವನ್ನು ಸೇನೆಯು ಎಡಿಜಿಪಿಐ ಇಂಡಿಯನ್ ಆರ್ಮಿ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.
OPERATION SINDOOR
Indian Army Pulverizes Terrorist Launchpads
As a response to Pakistan’s misadventures of attempted drone strikes on the night of 08 and 09 May 2025 in multiple cities of Jammu & Kashmir and Punjab, the #Indian Army conducted a coordinated fire assault on… pic.twitter.com/2i5xa3K7uk
ಗಡಿ ನಿಯಂತ್ರಣ ರೇಖೆಯ ಸಮೀಪವಿರುವ ಲಾಂಚ್‌ಪ್ಯಾಡ್‌ಗಳ ಮೂಲಕವೇ ಪಾಕಿಸ್ತಾನದ ಉಗ್ರರು(Pakistan Terrorists) ಭಾರತೀಯ ನಾಗರಿಕರು ಮತ್ತು ಭದ್ರತಾ ಪಡೆಗಳ ಮೇಲೆ ದಾಳಿಯನ್ನು ಯೋಜಿಸುತ್ತಿದ್ದರು. ಭಾರತೀಯ ಸೇನೆಯು ಪಾಕ್ ಉಗ್ರರ ಈ ನೆಲೆಯನ್ನು ಉಡೀಸ್ ಮಾಡುವ ಮೂಲಕ ತಕ್ಕ ಉತ್ತರ ನೀಡಿದೆ. ಇದನ್ನೂ ಓದಿ: ‘ಆಪರೇಷನ್ ಸಿಂಧೂರ’ ಮೆಚ್ಚಿ ಪ್ರಧಾನಿ ಮೋದಿಗೆ ಕಿಚ್ಚ ಸುದೀಪ್ ಪತ್ರ
ಭಾರತೀಯ ಸೇನೆಯು(Indian Army) ಭಯೋತ್ಪಾದಕ ಉಡಾವಣಾ ನೆಲೆಗಳನ್ನು ಪುಡಿಪುಡಿ ಮಾಡಿದೆ ಎಂದು ಎಕ್ಸ್ನಲ್ಲಿ ಬರೆದುಕೊಂಡಿದೆ. ಜಮ್ಮು ಮತ್ತು ಕಾಶ್ಮೀರ ಹಾಗೂ ಪಂಜಾಬ್‌ನ ಹಲವಾರು ನಗರಗಳಲ್ಲಿ 2025ರ ಮೇ 8 ಮತ್ತು 9ರಂದು ರಾತ್ರಿ ಪಾಕಿಸ್ತಾನ ಡ್ರೋನ್ ದಾಳಿಗೆ ಯತ್ನಿಸಿದ್ದಕ್ಕೆ ಪ್ರತಿಕ್ರಿಯೆಯಾಗಿ, ಭಾರತೀಯ ಸೇನೆಯು ಭಯೋತ್ಪಾದಕ ಉಡಾವಣಾ ನೆಲೆಗಳ ಮೇಲೆ ಸಂಘಟಿತ ಗುಂಡಿನ ದಾಳಿ ನಡೆಸಿ, ಅವುಗಳನ್ನು ಪುಡಿಪುಡಿ ಮಾಡಿ ನಾಶಮಾಡಿತು. ಇದನ್ನೂ ಓದಿ: ಮನಸ್ಸು ಮಾಡಿದ್ರೆ ಎರಡೇ ದಿನಕ್ಕೆ ಪಾಕಿಸ್ತಾನ ನಿರ್ನಾಮ ಮಾಡ್ಬೋದು: ಜಮೀರ್
ನಿಯಂತ್ರಣ ರೇಖೆಯ ಬಳಿ ಇರುವ ಭಯೋತ್ಪಾದಕ ಉಡಾವಣಾ ನೆಲೆಗಳು, ಹಿಂದೆ ಭಾರತೀಯ ನಾಗರಿಕರು ಮತ್ತು ಭದ್ರತಾ ಪಡೆಗಳ ವಿರುದ್ಧ ಭಯೋತ್ಪಾದಕ ದಾಳಿಗಳನ್ನು ಯೋಜಿಸುವ ಮತ್ತು ಕಾರ್ಯಗತಗೊಳಿಸುವ ಕೇಂದ್ರವಾಗಿತ್ತು. ಭಾರತೀಯ ಸೇನೆಯ ತ್ವರಿತ ಮತ್ತು ನಿರ್ಣಾಯಕ ಕ್ರಮವು ಭಯೋತ್ಪಾದಕ ಮೂಲಸೌಕರ್ಯ ಮತ್ತು ಸಾಮರ್ಥ್ಯಗಳಿಗೆ ಗಮನಾರ್ಹ ಹೊಡೆತ ನೀಡಿದೆ ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
ಬೆಂಗಳೂರು: ಭಾರತ-ಪಾಕಿಸ್ತಾನ (India – Pakistan) ನಡುವೆ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿರುವ ಕಾರಣ, ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದ ಪೊಲೀಸರಿಗೆ ರಜೆ ಕೊಡುವುದಿಲ್ಲ ಎಂದು ರಾಜ್ಯ ಗೃಹ ಸಚಿವ ಜಿ. ಪರಮೇಶ್ವರ್ (G Parameshwar) ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಯುದ್ದ ಭೀತಿ ಇದೆ. ಗಡಿ ಭಾಗದಲಲ್ಲಿ ಚಟುವಟಿಕೆಗಳು ನಡೆಯುತ್ತಿದೆ. ಉಗ್ರರನ್ನು ನಮ್ಮ ಸೇನೆ ಸದೆಬಡಿಯುತ್ತಿದೆ. ಇಂದಿನ ಪರಿಸ್ಥಿತಿ ತೀವ್ರ ಆದ್ರೆ, ಯುದ್ಧ ಆಗಬಹುದು. ಹೀಗಾಗಿ ಕೇಂದ್ರ ಎಲ್ಲಾ ರಾಜ್ಯಗಳಿಗೆ ಎಚ್ಚರ ವಹಿಸುವಂತೆ ಸೂಚನೆ ಕೊಟ್ಟಿದೆ. ಈ ಹಿನ್ನೆಲೆ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಿದ್ದೇವೆ. ಬೇರೆ ಯಾವುದೇ ರೀತಿಯ ಚಟುವಟಿಕೆಗಳ ಬಗ್ಗೆ ಎಚ್ಚರ ವಹಿಸುವಂತೆ ಪೊಲೀಸ್ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇವೆ ಎಂದು ತಿಳಿಸಿದರು.
ಒಂದು ವೇಳೆ ಯುದ್ಧದ ಸಮಯ ಬಂದರೆ ನೀರು, ಆಹಾರ ಪದಾರ್ಥ, ಅಗತ್ಯ ವಸ್ತುಗಳ ಸಂಗ್ರಹದ ಬಗ್ಗೆ ಕ್ರಮಕ್ಕೆ ತಯಾರಿ ಮಡೆಯುತ್ತದೆ. ಈ ಬಗ್ಗೆ ಸಿಎಂ ಜೊತೆಗೆ ಸಭೆ ನಡೆಸಿ ಚರ್ಚಿಸುತ್ತೇವೆ. ಮುಂದೆ ಕೇಂದ್ರದಿಂದ ಬರುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುತ್ತೇವೆ. ದೇಶದಲ್ಲಿ ಈ ಪರಿಸ್ಥಿತಿ ಇರುವುದರಿಂದ ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ರಾಜ್ಯದ ಪೊಲೀಸರಿಗೆ ರಜೆಗಳನ್ನು ಮಂಜೂರು ಮಾಡುವುದಿಲ್ಲ. ಕೇಂದ್ರ ಸರ್ಕಾರ ಎಲ್ಲವೂ ಸರಿಯಿದೆ ಎಂದು ಸೂಚನೆ ಕೊಡುವರೆಗೂ ನಮ್ಮ ಪೊಲೀಸರಿಗೆ ರಜೆ ಕೊಡಲ್ಲ ಎಂದು ಮಾಹಿತಿ ನೀಡಿದರು.
ಅಲ್ಲದೇ ಕರಾವಳಿ ಭಾಗದಲ್ಲಿ ಪೊಲೀಸರು ಮತ್ತಷ್ಟು ಪರಿಣಾಮವಾಗಿ ಕೆಲಸ ಮಾಡಬೇಕು. ಅಲ್ಲಿ ಕೂಡ ಭದ್ರತೆ ನೀಡಲಾಗಿದೆ. ಕೋಸ್ಟಲ್ ಭಾಗದಲ್ಲಿ ನಮ್ಮ ಅಧಿಕಾರದಲ್ಲಿರೋ ಕಡೆ ಭದ್ರತೆ ಕೊಡ್ತೀವಿ, ನೌಕಾಪಡೆ, ಅಂತಾರಾಷ್ಟ್ರೀಯ ಗಡಿಯಲ್ಲಿ ಎಲ್ಲ ಕಡೆಯೂ ಭದ್ರತೆ ಹೆಚ್ಚಿಸಲಾಗಿದೆ. ಕೇಂದ್ರ ಏನಾದ್ರು ಬಾರ್ಡರ್ ನಲ್ಲಿ ಸೆಕ್ಯುರಿಟಿ ಕೊಡೋದಾದರೆ ಕೇಂದ್ರ ನಮಗೆ ಸೂಚನೆ ಕೊಡುತ್ತದೆ. ಅದನ್ನ ನಾವು ಪಾಲನೆ ಮಾಡ್ತೀವಿ ಎಂದು ಹೇಳಿದರು.
ನವದೆಹಲಿ: ಪಾಪಿ ಪಾಕಿಸ್ತಾನ (Pakistan) ಗಡಿ ಮೀರಿ ಭಾರತದ ಮೇಲೆ ದಾಳಿ ಮಾಡುತ್ತಿದೆ. ಶೆಲ್ ದಾಳಿ ನಡೆಸಿ ಅಮಾಯಕರನ್ನ ಗುರಿ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಗಡಿ ಜಿಲ್ಲೆಗಳಾದ ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ರಾಜಸ್ಥಾನ, ಹರಿಯಾಣ ಹಾಗೂ ಹಿಮಾಚಲ ಪ್ರದೇಶದಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿದೆ. ಜಮ್ಮು-ಕಾಶ್ಮೀರದಲ್ಲಿ (Jammu And Kashmir) ಬೆಳಗ್ಗಿನವರೆಗೂ ಬ್ಲಾಕ್‌ಔಟ್ ಘೋಷಿಸಲಾಗಿತ್ತು.
#WATCH | Delhi | #OperationSindoor | Wing Commander Vyomika Singh says, “…Pakistan Army has been observed to be moving its troops towards forward areas, indicating an offensive intent to further escalation. Indian armed forces remain in a high state of operational readiness,… pic.twitter.com/hmbqPVEGBF
ಮೂಲಸೌಕರ್ಯಗಳಿಗೆ ಹಾನಿ:
ಇಂದು ರಕ್ಷಣಾ ಸಚಿವಾಲಯ ನಡೆಸಿದ ಮಹತ್ವದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಂಗ್ ಕಮಾಂಡರ್ ವ್ಯೂಮಿಕಾ ಸಿಂಗ್ (Vyomika Singh), ಪಾಕಿಸ್ತಾನವು ಜಮ್ಮು ಮತ್ತು ಕಾಶ್ಮೀರದ ಶ್ರೀನಗರ, ಅವರಂತಿಪುರ ಹಾಗೂ ಉಧಂಪುರದಲ್ಲಿರುವ ಆಸ್ಪತ್ರೆ, ಶಾಲೆ ಇತರ ಮೂಲ ಸೌಕರ್ಯಗಳ ಮೇಲೆ ದಾಳಿ ಮಾಡಿದೆ ಎಂದು ತಿಳಿಸಿದರು.
ಅಲ್ಲದೇ ದಾಳಿ ನಡೆಸಲು ತನ್ನ ಸೈನ್ಯವನ್ನು ಮುಂದಕ್ಕೆ ಸಾಗಿಸುತ್ತಿದೆ, ಇದು ಪರಿಸ್ಥಿತಿಯನ್ನ ಮತ್ತಷ್ಟು ಉಲ್ಬಣಗೊಳಿಸುವ ಆಕ್ರಮಣಕಾರಿ ಉದ್ದೇಶವನ್ನ ಸೂಚಿಸುತ್ತದೆ. ಭಾರತೀಯ ಸಶಸ್ತ್ರ ಪಡೆಗಳು ಹೆಚ್ಚಿನ ಕಾರ್ಯಾಚರಣೆಯ ಸನ್ನದ್ಧತೆಯಲ್ಲಿವೆ. ಎಲ್ಲಾ ಪ್ರತಿಕೂಲ ಕ್ರಮಗಳನ್ನು ಪರಿಣಾಮಕಾರಿಯಾಗಿ ಎದುರಿಸಲಾಗಿದೆ ಮತ್ತು ದಿಟ್ಟ ಉತ್ತರ ಸಹ ನೀಡಲಾಗಿದೆ. ಪಾಕಿಸ್ತಾನ ಮತ್ತೂ ದಾಳಿಗೆ ಪ್ರೈತ್ನಿಸಿದ್ರೆ ನಮ್ಮ ಸೇನೆ ತಕ್ಕ ಉತ್ತರ ನೀಡಲಿದೆ ಎಂದು ಎಚ್ಚರಿಸಿದರು.
ಪಾಕ್ ವಾಯುನೆಲೆಗಳು ಛಿದ್ರ:
ಇನ್ನೂ ಭಾರತ ನಡೆಸಿದ ವಾಯುದಾಳಿಯಲ್ಲಿ ಸಿಯಾಲ್‌ಕೋಟ್, ಪಸ್ರೂರ್ ರಾಡಾರ್ ಸೈಟ್, ರಹೀಮ್ ಯಾರ್ ಖಾನ್, ಮುರಿದ್, ರಫೀಕ್, ಚುನಿಯನ್, ಚಕ್ಲಾಲಾ, ಸುಕ್ಕೂರ್ ಮೊದಲಾದ ಪಾಕಿಸ್ತಾನ ವಾಯುನೆಲೆಗಳನ್ನು ಧ್ವಂಸಗೊಳಿಸಿದೆ. ಜೊತೆಗೆ ಭಾರತದ ಮೇಲೆ ಪದೇ ಪದೇ ದಾಳಿಗೆ ಯತ್ನಿಸುತ್ತಿದ್ದ ಡ್ರೋನ್ ಲಾಂಚ್‌ಪ್ಯಾಡನ್ನೇ ಉಡೀಸ್ ಮಾಡಿದೆ ಎಂದು ಫೋಟೋ ಮತ್ತು ವಿಡಿಯೋ ಸಮೇತ ವಿವರಿಸಿದರು.
ಅಮೃತಸರದಲ್ಲಿ ಪಾಕ್ ಡ್ರೋನ್ ಉಡೀಸ್:
ಭಾರತೀಯ ಸೇನೆಯು ಪಾಕಿಸ್ತಾನದ ಡ್ರೋನ್‌ಗಳನ್ನು ಅಮೃತಸರದ ಖಾಸಾ ಕಂಟೋನ್ಮೆಂಟ್‌ನಲ್ಲಿ ಹೊಡೆದುರುಳಿಸಿದೆ. ಭಾರತದ ಸಾರ್ವಭೌಮತ್ವವನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ. ಪಾಕಿಸ್ತಾನವು ಡ್ರೋನ್ ದಾಳಿಗಳ ಮೂಲಕ ಗಡಿಗಳಲ್ಲಿ ತೊಂದರೆ ಸೃಷ್ಟಿಸುತ್ತಿದೆ ಎಂದು ಭಾರತೀಯ ಸೇನೆ ಹೇಳಿದೆ. ಶನಿವಾರ ಮುಂಜಾನೆ 5 ಗಂಟೆಗೆ ಖಾಸಾ ಕಂಟೋನ್ಮೆಂಟ್ ಬಳಿ ಹಾರುತ್ತಿದ್ದ ಹಲವು ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ.
ಜೆ&ಕೆ ಗುರಿಯಾಗಿಸಿ ಡ್ರೋನ್ ದಾಳಿ
ಜಮ್ಮು ಮತ್ತು ಕಾಶ್ಮೀರವನ್ನು ಗುರಿಯಾಗಿಸಿ ಪಾಕಿಸ್ತಾನ ಶನಿವಾರವೂ ಹಲವಾರು ಡ್ರೋನ್ ದಾಳಿಗಳನ್ನು ನಡೆಸಿದೆ. ಶನಿವಾರ ಬೆಳಗಿನ ಜಾವ ಪಾಕಿಸ್ತಾನವು ಜಮ್ಮು ವಾಯುನೆಲೆ ಮತ್ತು ಉಧಂಪುರ ಗುರಿಯಾಗಿಸಿ ಕ್ಷಿಪಣಿ ದಾಳಿ ನಡೆಸಿದೆ, ಅಲ್ಲದೇ ಜಮ್ಮುವಿನ ಪ್ರಸಿದ್ಧ ಶಂಭು ದೇವಾಲಯದ ಮೇಲೂ ಕ್ಷಿಪಣಿ ದಾಳಿಗೆ ಪಾಕ್ ಯತ್ನಿಸಿದೆ. ಆದ್ರೆ ಭಾರತ ಈ ದಾಳಿಯನ್ನು ವಿಫಲಗೊಳಿಸಿದೆ. ಉಧಂಪುರದಲ್ಲಿ ಪಾಕಿಸ್ತಾನದ ಕ್ಷಿಪಣಿ ಬಿದ್ದಿದೆ. ಅದರ ಅವಶೇಷಗಳನ್ನು ಹೊರತೆಗೆಯಲಾಗಿದೆ.
ನವದೆಹಲಿ: ಭಾರತದ ಏರ್‌ಬೇಸ್, ಎಸ್- 400 ಕ್ಷಿಪಣಿ ರಕ್ಷಣಾ ವ್ಯವಸ್ಥೆ (S-400 missile system) ಸುರಕ್ಷಿತವಾಗಿದ್ದು, ಯಾವುದೇ ಹಾನಿಯಾಗಿಲ್ಲ. ಪಾಕ್ ತನ್ನ ಗಡಿಯಲ್ಲಿ ಸೇನೆಯನ್ನು ನಿಯೋಜಿಸುತ್ತಿದೆ ಎಂದು ಎಂದು ಭಾರತ ಸರ್ಕಾರ ತಿಳಿಸಿದೆ.
ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್, ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಶುಕ್ರವಾರ ಸಂಜೆಯಿಂದ ಇಂದು ಬೆಳಗ್ಗಿನವರೆಗೆ ನಡೆದ ಘಟನೆಯನ್ನು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಹೇಳಿದ್ದೇನು?
ಪಾಕಿಸ್ತಾನದ ಸೇನೆಯು ತನ್ನ ಪಡೆಗಳನ್ನು ಗಡಿ ಭಾಗಕ್ಕೆ ರವಾನಿಸಲು ಮುಂದಾಗಿದೆ. ಪಾಕಿಸ್ತಾನದ ಮುರಿದ್, ರಫೀಕಿ, ನೂರ್ ಖಾನ್ (ಚಕ್ಲಾಲಾ), ರಹಿಮ್ಯಾರ್, ಸುಕ್ಕೂರ್ (ಭೋಲಾರಿ) ಮತ್ತು ಚುನಿಯನ್ ಏರ್‌ಬೇಸ್‌ಗಳನ್ನು ಧ್ವಂಸ ಮಾಡಲಾಗಿದೆ.
ಪಾಕಿಸ್ತಾನವು ಉಧಂಪುರ, ಪಠಾಣ್‌ಕೋಟ್ ಮತ್ತು ಬಟಿಂಡಾದಲ್ಲಿನ ಭಾರತೀಯ ವಾಯುನೆಲೆಗಳು ಮತ್ತು ಇತರ 23 ಭಾರತೀಯ ನಗರಗಳ ಮೇಲೆ ದಾಳಿ ಮಾಡಿತ್ತು. ಕ್ಷಿಪಣಿ ಡ್ರೋನ್ ದಾಳಿಗಳನ್ನು ನಾವು ತಟಸ್ಥಗೊಳಿಸಿದ್ದೇವೆ.
ಪಾಕ್ ಸೇನೆ ಭಾರತದ ನಾಗರಿಕರನ್ನು, ಧಾರ್ಮಿಕ ಸ್ಥಳಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿವೆ. ಪ್ರಯಾಣಿಕ ವಿಮಾನವನ್ನು ಗುರಾಣಿಯನ್ನಾಗಿ ಬಳಸಿಕೊಂಡು ಭಾರತದ ಮೇಲೆ ದಾಳಿ ನಡೆಸುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ನಮ್ಮ ವಿರುದ್ಧ ಪಾಕ್ ಸುಳ್ಳು ಸುದ್ದಿ ಹಬ್ಬಿಸುತ್ತಿದೆ. ಭಾರತ ಅಫ್ಘಾನಿಸ್ತಾನದ ಮೇಲೆ ದಾಳಿ ನಡೆಸಿದೆ ಎಂದು ಪಾಕ್ ಹೇಳಿದೆ. ಆದರೆ ಕಳೆದ ಒಂದೂವರೆ ವರ್ಷದಿಂದ ನಮ್ಮ ಮೇಲೆ ಯಾರು ದಾಳಿ ನಡೆಸುತ್ತಿದ್ದಾರೆ ಎನ್ನುವುದು ಅಫ್ಘಾನಿಸ್ತಾನಕ್ಕೆ ಜನರಿಗೆ ಗೊತ್ತಿದೆ.
ಭಾರತದ ʻಆಪರೇಷನ್ ಸಿಂಧೂರʼ (Operation Sindoor) ಎಫೆಕ್ಟ್ ಪಾಕಿಸ್ತಾನದ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ಬೀರಿದೆ. ಭಾರತ ನಡೆಸಿದ ವಾಯುದಾಳಿಗೆ ಪತರುಗುಟ್ಟಿಹೋಗಿರುವ ಪಾಕ್ ತಾನು ನಂಬಿದ್ದ ಶಕ್ತಿಶಾಲಿ ಅಸ್ತ್ರಗಳಿಂದಲೇ ಶತಕೋಟಿ ನಷ್ಟ ಅನುಭವಿಸಿದೆ. ಇದರಿಂದ ಪಾಕಿಸ್ತಾನದ (Pakistan) ಆರ್ಥಿಕ ಸ್ಥಿತಿ ಈಗಾಗಲೇ ಅಧೋಗತಿ ತಲುಪಿದ್ದು, ದಿವಾಳಿಯ ಆಗುವ ಹಂತಕ್ಕೆ ತಲುಪಿದೆ.
ಭಾರತದ (India) ವಿರುದ್ಧದ ಹೋರಾಟಕ್ಕೂ ಭಿಕ್ಷೆ ಬೇಡುವ ಪರಿಸ್ಥಿತಿಗೆ ತಲುಪಿದೆ. ಭಾರತದ ದಾಳಿಯಿಂದ ತನಗೆ ಭಾರೀ ನಷ್ಟವಾಗವಾಗಿದ್ದು ಸಾಲ ನೀಡುವಂತೆ ಅಂತಾರಾಷ್ಟ್ರೀಯ ಸಮುದಾಯದಲ್ಲಿ ಬೇಡಿಕೆ ಇಟ್ಟಿದೆ. ಪಾಕಿಸ್ತಾನದ ಆರ್ಥಿಕ ಇಲಾಖೆಯ ಆರ್ಥಿಕ ವ್ಯವಹಾರಗಳ ವಿಭಾಗದ ಸಾಮಾಜಿಕ ಜಾಲತಾಣ ʻxʼ ಖಾತೆಯಲ್ಲಿ ಸಾಲಕ್ಕಾಗಿ ಅಧಿಕೃತ ಮನವಿ ಮಾಡಿಕೊಂಡಿದೆ. ಇದು ವಿಶ್ವಮಟ್ಟದಲ್ಲಿ ಟೀಕೆಗೆ ಒಳಗಾಗುತ್ತಿದ್ದಂತೆ ವರಸೆ ಬದಲಿಸಿದ ಪಾಕ್ ʻತನ್ನ ಎಕ್ಸ್ ಖಾತೆ ಹ್ಯಾಕ್ ಆಗಿದೆʼ ಎಂದು ಹೇಳಿಕೊಂಡಿದೆ. ಇದಾದ ಬಳಿಕ ಭಾರತದ ಆಕ್ಷೇಪದ ನಡುವೆಯೂ ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) 2 ಕಂತುಗಳಲ್ಲಿ 19 ಸಾವಿರ ಕೋಟಿ ಸಾಲ ಮಂಜೂರು ಮಾಡಿದೆ. ಇದನ್ನೂ ಓದಿ: 44 ಸೆಕೆಂಡ್‌ನಲ್ಲಿ 72 ರಾಕೆಟ್ – ಏನಿದು ಪಿನಾಕಾ ರಾಕೆಟ್ ಲಾಂಚರ್?
ಹಾಗಾದ್ರೆ ಆರ್ಥಿಕವಾಗಿ ಕಂಗೆಟ್ಟಿದ್ದ ಪಾಕ್ ಭಾರತದ ಒಂದೇ ಏರ್‌ಸ್ಟ್ರೈಕ್‌ಗೆ ಭಿಕ್ಷೆ ಬೇಡುವ ಸ್ಥಿತಿ ತಲುಪಿದ್ದು ಏಕೆ? ತಾನು ಸರ್ವಶ್ರೇಷ್ಠ ಹಾಗೂ ಶಕ್ತಿಶಾಲಿ ಎಂದು ನಂಬಿದ್ದ ಅಸ್ತ್ರಗಳೇ ಮುಳುವಾಗಿದ್ದು ಹೇಗೆ? ಭಾರತದ ದಾಳಿಯಲ್ಲಿ ಛಿದ್ರವಾದ ಪಾಕ್‌ನ ಫೈಟರ್ ಜೆಟ್‌ಗಳು ಯಾವುವು? ಅವುಗಳ ಬೆಲೆ ಎಷ್ಟು ಎಂಬೆಲ್ಲ ಮಾಹಿತಿ ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ…
ಹೌದು… ಜಮ್ಮು ಮತ್ತು ಕಾಶ್ಮೀರ, ಪಂಜಾಬ್ ಗಡಿ ಸೇರಿದಂತೆ ಭಾರತದ ಒಟ್ಟು 36 ಕಡೆ ಪಾಕಿಸ್ತಾನ ಭಾರತದ ಮೇಲೆ ದಾಳಿ ನಡೆಸಿತ್ತು. ಎರಡು ದಿನಗಳಲ್ಲಿ (ಮೇ 8, 9) 300-400 ಮಿಸೈಲ್‌ಗಳು, ಡ್ರೋನ್‌ಗಳಿಂದ ದಾಳಿ ನಡೆಸಿತ್ತು. ಈ ಎಲ್ಲ ದಾಳಿಗಳನ್ನ ಭಾರತ ವಿಫಲಗೊಳಿಸಿತು. ಜೊತೆಗೆ ಪಾಕಿಸ್ತಾನ ಮಿಲಿಟರಿಯಲ್ಲಿ ಶಕ್ತಿಶಾಲಿ ಅಸ್ತ್ರಗಳೆಂದು ಕರೆಯುತ್ತಿದ್ದ F-16, JF-17, J-10 ಮತ್ತು Saab-2000 Erieye AWACS (ವಾಯುಗಾಮಿ ಮುನ್ನೆಚ್ಚರಿಕೆ ಮತ್ತು ನಿಯಂತ್ರಣ ವ್ಯವಸ್ಥೆ) ವಿಮಾನವನ್ನು ಛಿದ್ರಗೊಳಿಸಿ, ಶತಕೋಟಿ ನಷ್ಟ ಉಂಟುಮಾಡಿತು. ಇದು ಮೊದಲೇ ಕುಸಿದಿರುವ ಪಾಕ್ ಆರ್ಥಿಕತೆಗೆ ಮತ್ತಷ್ಟು ಹೊಡೆತ ಕೊಟ್ಟಿದೆ. ಇದನ್ನೂ ಓದಿ: ಭಾರತದ 36 ಕಡೆ 400 ಮಿಸೈಲ್‌ನಿಂದ ಪಾಕ್ ದಾಳಿ: ಕರ್ನಲ್ ಸೋಫಿಯಾ ಖುರೇಷಿ
JF-17 ವಿಶೇಷತೆ ಏನು – ಬೆಲೆ ಎಷ್ಟು?
ಜೆಎಫ್-17 ಥಂಡರ್ (JF 17 Thunder) ಪಾಕಿಸ್ತಾನ ಮತ್ತು ಚೀನಾದ ಸಹಭಾಗಿತ್ವದಲ್ಲಿ ನಿರ್ಮಿಸಲಾದ ಬಹುಪಯೋಗಿ ಯುದ್ಧ ವಿಮಾನ. ಇದನ್ನು ಪಾಕಿಸ್ತಾನ್ ಏರೋನಾಟಿಕಲ್ ಕಾಂಪ್ಲೆಕ್ಸ್ (PAC) ಮತ್ತು ಚೆಂಗ್ಡು ಏರ್‌ಕ್ರಾಫ್ಟ್ ಕಾರ್ಪೊರೇಷನ್ (CAC) ಜಂಟಿಯಾಗಿ ಅಭಿವೃದ್ಧಿಪಡಿಸಿವೆ. 1990ರ ದಶಕದಲ್ಲಿ ಅಮೆರಿಕ ಪರಮಾಣು ಒಪ್ಪಂದದ ಬಳಿಕ ಪಾಕಿಸ್ತಾನಕ್ಕೆ ಎಫ್-16 ಪೂರೈಕೆ ನಿಲ್ಲಿಸಿತ್ತು. ಆಗ 1992ರಲ್ಲಿ ಚೀನಾ ಜೊತೆಗಿನ ಒಪ್ಪಂದಕ್ಕೆ ಪಾಕ್ ಸಹಿ ಹಾಕಿತು. ಬಳಿಕ 1995ರಲ್ಲಿ ಜೆಫ್-17 ಯುದ್ಧವಿಮಾನ ತಯಾರಿಸುವ ಯೋಜನೆ ಶುರುವಾಯಿತು.
2009ರಲ್ಲಿ ಮೊದಲ ಜೆಫ್-17 ಯುದ್ಧ ವಿಮಾನವನ್ನು ಪಾಕಿಸ್ತಾನ ವಾಯುಪಡೆಗೆ ಸೇರ್ಪಡೆಗೊಳಿಸಿತು. ಇದೀಗ ಪಾಕ್ ಬಳಿ 150ಕ್ಕೂ ಹೆಚ್ಚು ವಿಮಾನಗಳಿವೆ. ಇದು ಹಗುರ ಮತ್ತು ವೇಗದ ಫೈಟರ್ ಜೆಟ್ ಆಗಿದ್ದು, ಗರಿಷ್ಠ ತೂಕ 13,500 ಕೆಜಿಯಷ್ಟು ಇರಲಿದೆ. ಜೆಫ್-17 ಬೆಲೆ ಸುಮಾರು 15 ದಶಲಕ್ಷ ಡಾಲರ್ ಅಂದ್ರೆ ಸುಮಾರು 120 ಕೋಟಿ ರೂ. ಇದೆ, ಇದರ ಬ್ಲಾಕ್-3 ರೂಪಾಂತರದ ಬೆಲೆ 25-30 ದಶಲಕ್ಷ ಡಾಲರ್‌ನಷ್ಟಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: `ಆಪರೇಷನ್ ಸಿಂಧೂರ’ಕ್ಕೆ ತತ್ತರಿಸಿ ಮಿತ್ರರಾಷ್ಟ್ರಗಳ ಬಳಿ ಸಾಲಕ್ಕಾಗಿ ಅಂಗಲಾಚಿದ ಪಾಕ್ – ಟ್ರೋಲ್
F-16 ವಿಶೇಷತೆ ಏನು, ಬೆಲೆ ಎಷ್ಟು?
ಎಫ್-16 ಅಮೆರಿಕದ ರಕ್ಷಣಾ ಕಂಪನಿ ಜನರಲ್ ಡೈನಾಮಿಕ್ಸ್ (ಈಗ ಲಾಕ್ಹೀಡ್ ಮಾರ್ಟಿನ್) ಅಭಿವೃದ್ಧಿಪಡಿಸಿರುವ ಅತ್ಯಾಧುನಿಕ ಯುದ್ಧವಿಮಾನ. 1981ರಲ್ಲಿ ಪಾಕಿಸ್ತಾನವು ಅಮೆರಿಕದಿಂದ 40 ಎಫ್-16 ಯುದ್ಧ ವಿಮಾನಗಳನ್ನು ಆರ್ಡರ್ ಮಾಡಿತು. 1983-87ರ ಅವಧಿಯಲ್ಲಿ ಈ ಯುದ್ಧ ವಿಮಾನಗಳನ್ನು ʻಪೀಸ್ ಗೇಟ್-1, ಗೇಟ್-2ʼ ಶಾಂತಿ ಒಪ್ಪಂದಗಳ ಅಡಿಯಲ್ಲಿ ಅಮೆರಿಕ ಪೂರೈಕೆ ಮಾಡಿತು. ಆಗ ಉಗ್ರರ ವಿರುದ್ಧ ಕಾರ್ಯಾಚರಣೆಗೆ ಮಾತ್ರ ಎಫ್-16 ಬಳಸಬೇಕೆಂದು ಅಮೆರಿಕ ಷರತ್ತು ವಿಧಿಸಿತ್ತು, ಆದ್ರೆ ಭಾರತದ ವಿರುದ್ಧ ಪಾಕ್ ಈ ವಿಮಾನ ಪ್ರಯೋಗಿಸಿದೆ. ಮೊದಲ ಜೆಟ್ 1983ರ ಜನವರಿ 15ರಂದು ಪಾಕಿಸ್ತಾನ ತಲುಪಿತು.
ಇದಾದ ಬಳಿಕ 1988ರಲ್ಲಿ ಪಾಕಿಸ್ತಾನವು ಇನ್ನೂ 11 ಎಫ್-16 ಯುದ್ಧ ವಿಮಾನಗಳಿಗೆ ಆರ್ಡರ್ ನೀಡಿತು. ಆದ್ರೆ 1990ರ ಪರಮಾಣು ಒಪ್ಪಂದದ ಮೇಲೆ ಅಮೆರಿಕ ಜೆಟ್ ಪೂರೈಕೆಗೆ ನಿರ್ಬಂಧ ಹೇರಿತ್ತು. ಇದಾದ 15 ವರ್ಷಗಳ ನಂತರ 2005ರಲ್ಲಿ ಮತ್ತೆ ಅಮೆರಿಕ ಎಫ್-16 ಖರೀದಿಗೆ ಪಾಕ್‌ಗೆ ಅವಕಾಶ ಮಾಡಿಕೊಟ್ಟಿತು. ಆಗ ಪಾಕಿಸ್ತಾನ 18 ಹೊಸ ಎಫ್-16 ಯುದ್ಧ ವಿಮಾನಗಳನ್ನು ಖರೀದಿ ಮಾಡಿತು. 2010ರ ವೇಳೆಗೆ ಪಾಕ್ ಆರ್ಡರ್ ಮಾಡಿದ್ದ ಅಷ್ಟೂ ವಿಮಾನಗಳನ್ನು ಅಮೆರಿಕ ಪೂರೈಕೆ ಮಾಡಿತು. ಸದ್ಯ ಪಾಕ್ ಸುಮಾರು 75 ರಿಂದ 85 ಎಫ್-16 ಯುದ್ಧ ವಿಮಾನಗಳನ್ನು ಹೊಂದಿದೆ. ಇದರಲ್ಲಿ A, B, C, D ನಂತೆ 4 ರೂಪಾಂತರಗಳಿವೆ. ಪ್ರತಿಯೊಂದರ ಬೆಲೆಯೂ ಅದರ ಮಾದರಿಯನ್ನು ಅವಲಂಬಿಸಿರುತ್ತದೆ. ಸದ್ಯ ಹೊಸ ಎಫ್-16 ಬೆಲೆ 40 ರಿಂದ 70 ದಶಲಕ್ಷ ಡಾಲರ್‌ನಷ್ಟಿದೆ. ಅಂದ್ರೆ ಸುಮಾರು 300 ರಿಂದ 500 ಶತಕೋಟಿ ರೂಪಾಯಿ ಇದೆ.
AWACS ವಿಶೇಷತೆ ಏನು, ಬೆಲೆ ಎಷ್ಟು?
AWACS ರೆಡಾರ್ ವ್ಯವಸ್ಥೆಯ ವಿಮಾನಗಳು ಯಾವುದೇ ದೇಶದ ವಾಯುಪಡೆಯ ರಕ್ಷಣಾ ವ್ಯವಸ್ಥೆಯ ಭಾಗವಾಗಿದೆ. ಹಾಗೆಯೇ ಪಾಕ್ ಸಹ ತನ್ನ ವಾಯುಸೇನೆಗೆ ಇದನ್ನು ಅಳವಡಿಸಿಕೊಂಡಿದೆ. ಇದರಲ್ಲಿರುವ ತಿರುಗುವ ರೆಡಾರ್ ವ್ಯವಸ್ಥೆಯು 400 ಕಿಮೀ ಗಿಂತಲೂ ಹೆಚ್ಚು ವ್ಯಾಪ್ತಿವರೆಗೂ ಶತ್ರುಗಳ ಮೇಲೆ ನಿಗಾ ಇಡುತ್ತದೆ. ಹಾಗಾಗಿ ಇದನ್ನ ʻಸ್ಕೈ ಐಸ್ʼ (ಆಕಾಶದ ಕಣ್ಣು) ಎಂದು ಕರೆಯುತ್ತಾರೆ. ಈ ವಿಮಾನಗಳು ಶತ್ರುಗಳ ಯುದ್ಧ ವಿಮಾನಗಳು, ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಸಮಯಕ್ಕೆ ಸರಿಯಾಗಿ ಪತ್ತೆ ಹಚ್ಚಿ ಆ ದೇಶದ ವಾಯುಪಡೆಗೆ ನಿರ್ದೇಶನ ನೀಡುವಲ್ಲಿ ಸಹಾಯ ಮಾಡುತ್ತವೆ. ಇದನ್ನೂ ಓದಿ: ಭಾರತದ ವಿರೋಧದ ನಡುವೆಯೂ ಪಾಕ್‌ಗೆ 19,000 ಕೋಟಿ ಸಾಲ ಕೊಟ್ಟ ಐಎಂಎಫ್
ಪಾಕಿಸ್ತಾನವು ಒಟ್ಟು 9 ವಾಯುಗಾಮಿ ರೆಡಾರ್ ವ್ಯವಸ್ಥೆಗಳನ್ನು ಹೊಂದಿದೆ, ಅವುಗಳಲ್ಲಿ ಸ್ವೀಡನ್‌ನ ಸಾಬ್-2000 ಎರಿಯೇ ಮತ್ತು ಚೀನಾದ ZDK-03 ಕರಕೋರಂ ಈಗಲ್ ಸೇರಿವೆ. ಚೀನಾ ನಿರ್ಮಿತ ರೆಡಾರ್ ವ್ಯವಸ್ಥೆಗೆ ಪಾಕ್ 2024ರಲ್ಲೇ ಗುಡ್‌ಬೈ ಹೇಳಿಕೊಂಡಿದೆ. ಆದ್ರೆ ಈಗ ಭಾರತದ ದಾಳಿಯಲ್ಲಿ ಛಿದ್ರವಾದ ಪತನಗೊಂಡ ರೆಡಾರ್ ಚೀನಾದ್ದೆ ಎಂದು ಕೆಲ ವರದಿಗಳು ತಿಳಿಸಿವೆ.
ಸಾಬ್-2000 ಎರಿಯೇ ಒಂದು ಮಧ್ಯಮ-ಶ್ರೇಣಿಯ ವಾಯುಗಾಮಿ ರೆಡಾರ್ ವ್ಯವಸ್ಥೆಯಾಗಿದೆ. ಇದರ ಬೆಲೆ ಸುಮಾರು 100 ರಿಂದ 150 ದಶಲಕ್ಷ ಡಾಲರ್ ಅಂದರೆ 830 ರಿಂದ 1,245 ಕೋಟಿ ರೂ.ಗಳ ವರೆಗೆ ಇರುತ್ತದೆ. ಇದಕ್ಕೆ ನಾವು ರೆಡಾರ್, ನಿಯಂತ್ರಣ ವ್ಯವಸ್ಥೆ, ತರಬೇತಿ ಮತ್ತು ಲಾಜಿಸ್ಟಿಕ್ಸ್ ಸೇರಿಸಿದ್ರೆ, ಅದರ ಒಟ್ಟು ವೆಚ್ಚ 200 ದಶಲಕ್ಷ ಡಾಲರ್ ಅಂದ್ರೆ 1,660 ಕೋಟಿ ರೂ.ಗಳಷ್ಟು ತಲುಪಬಹುದು ಎಂದು ವರದಿಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ವಾಯುನೆಲೆಯ ಮೇಲೆ ಭಾರತ ದಾಳಿ – ಇಸ್ಲಾಮಾಬಾದ್, ರಾವಲ್ಪಿಂಡಿಯಲ್ಲಿ ಅಲ್ಲೋಲ ಕಲ್ಲೋಲ
ನವದೆಹಲಿ: ಪಾಕಿಸ್ತಾನದ ಭಯೋತ್ಪಾದಕರ ವಿರುದ್ಧ ಹೋರಾಡುತ್ತಿರುವ ಕೆಚ್ಚೆದೆಯ ಭಾರತೀಯ ಯೋಧರು (Indian Army) ನಿಜವಾಗಿಯೂ ಲೆಜೆಂಡ್ಸ್ ಎಂದು ಆಸ್ಟ್ರೇಲಿಯಾ (Australia) ಕ್ರಿಕೆಟಿಗ ಹಾಗೂ ಆರ್‌ಸಿಬಿ ಆಟಗಾರ ಜೋಶ್ ಹ್ಯಾಜಲ್‌ವುಡ್ (Josh Hazlewood) ಹಾಡಿಹೊಗಳಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಒಬ್ಬ ಆಸ್ಟ್ರೇಲಿಯಾದ ಕ್ರಿಕೆಟಿಗನಾಗಿ, ಪಾಕಿಸ್ತಾನ ಮೂಲದ ಭಯೋತ್ಪಾದಕರ ವಿರುದ್ಧ ಹೋರಾಡುತ್ತಿರುವ ನಮ್ಮ ಕೆಚ್ಚೆದೆಯ ಭಾರತೀಯ ಸೇನಾ ಪಡೆಯಲ್ಲಿ ನಾನು ನಂಬಿಕೆ ಇಟ್ಟಿದ್ದೇನೆ. ನೀವು ನಿಜವಾದ ಲೆಜೆಂಡ್ಸ್ ಎಂದು ಭಾರತದ ಸೈನಿಕರಿಗೆ ನನ್ನ ಹೃದಯಾಂತರದಿಂದ ಹೇಳಲು ಬಯಸುತ್ತೇನೆ. ನಿಮ್ಮ ಧೈರ್ಯ, ತ್ಯಾಗ ಮತ್ತು ರಾಷ್ಟ್ರವನ್ನು ರಕ್ಷಿಸುವ ಅಚಲ ಬದ್ಧತೆ ನನ್ನನ್ನೂ ಒಳಗೊಂಡಂತೆ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಭಾರತದ ವಿರೋಧದ ನಡುವೆಯೂ ಪಾಕ್‌ಗೆ 19,000 ಕೋಟಿ ಸಾಲ ಕೊಟ್ಟ ಐಎಂಎಫ್
ಶಾಂತಿ ಮತ್ತು ಏಕತೆಯ ಮೌಲ್ಯಗಳನ್ನು ರಕ್ಷಿಸುವ ದೃಢಸಂಕಲ್ಪದೊಂದಿಗೆ ನೀವು ಪ್ರತಿದಿನ ಊಹಿಸಲಾಗದ ಅಡೆತಡೆಗಳನ್ನು ಎದುರಿಸುತ್ತಿದ್ದೀರಿ. ನಿಮ್ಮ ಹೋರಾಟವು ಭಾರತಕ್ಕಾಗಿ ಮಾತ್ರವಲ್ಲ, ಸುರಕ್ಷಿತ ಪ್ರಪಂಚದ ಭರವಸೆಗಾಗಿ ಎಂದು ತಿಳಿಯಿರಿ. ನಾವು ಆಸ್ಟ್ರೇಲಿಯಾದವರಾಗಿ ನಿಮ್ಮ ಬದ್ಧತೆಯನ್ನು ಮೆಚ್ಚುತ್ತೇವೆ. ನಾನು ನಿಮ್ಮನ್ನು ಸದಾ ಪ್ರೋತ್ಸಾಹಿಸುತ್ತೇನೆ. ದೃಢವಾಗಿರಿ, ಸುರಕ್ಷಿತವಾಗಿರಿ. ವಿಶ್ವವೇ ನಿಮ್ಮ ಬೆಂಬಲಕ್ಕಿದೆ ಎಂದು ಭರವಸೆಯ ನುಡಿಗಳನ್ನಾಡಿದರು. ಇದನ್ನೂ ಓದಿ: ನಾವಿರುವ ಸ್ಥಳದಲ್ಲಿ ಗುಂಡಿನ ಶಬ್ಧಗಳು ಕೇಳುತ್ತಿದೆ: ಓಮರ್ ಅಬ್ದುಲ್ಲಾ
ಪಾಕ್ ನಡೆಸಿದ ದಾಳಿಯ ಪರಿಣಾಮ ಪಂಜಾಬ್‌ನ ಫಿರೋಜ್‌ಪುರದಿಂದ 12ಕಿ.ಮೀ ದೂರದಲ್ಲಿರುವ ಖೈ ಫೆಮೆ ಕಿ ಗ್ರಾಮದ ಮನೆಯೊಂದರ ಮೇಲೆ ಡ್ರೋನ್ ಬಿದ್ದಿದ್ದು, ಭಾರೀ ಸ್ಫೋಟಗೊಂಡಿದೆ. ಪರಿಣಾಮ ಕಾರಿಗೆ ಬೆಂಕಿ ತಗುಲಿದ್ದು, ಮೂವರು ಗಾಯಗೊಂಡಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ.