Tag: indian army

  • ದೇಶದ ಸೈನಿಕರ ರಕ್ಷಣೆಗಾಗಿ ಮಂತ್ರಾಲಯದಲ್ಲಿ ವಿಶೇಷ ಪೂಜೆ

    ದೇಶದ ಸೈನಿಕರ ರಕ್ಷಣೆಗಾಗಿ ಮಂತ್ರಾಲಯದಲ್ಲಿ ವಿಶೇಷ ಪೂಜೆ

    ರಾಯಚೂರು: ಭಾರತ-ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆ ದೇಶದ ಸೈನಿಕರ (Indian Army) ಹಾಗೂ ನಾಗರಿಕರ ರಕ್ಷಣೆ, ಸುರಕ್ಷತೆಗಾಗಿ ಮಂತ್ರಾಲಯ (Mantralaya) ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ವಿವಿಧ ವಿಶೇಷ ಪೂಜೆ, ಹೋಮ-ಹವನ ನೆರವೇರಿಸಲಾಯಿತು.

    ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ನೇತೃತ್ವದಲ್ಲಿ ಹೋಮ, ಪೂಜೆಗಳು ನಡೆದವು. ಮೃತ್ಯುಂಜಯ ಹೋಮ, ಆಯುಷ್ಯ ಹೋಮ, ಮಾರ್ಕಂಡೇಯ ಹೋಮ ಹಾಗೂ ಇತರೆ ಹೋಮ ಹವನಗಳನ್ನು ಮಾಡಲಾಯಿತು. ಈ ವೇಳೆ ರಾಷ್ಟ್ರೀಯ ಬಿಕ್ಕಟ್ಟು ಹಿನ್ನೆಲೆ ಮಠದಲ್ಲಿ ಯಾವುದೇ ಸಂಭ್ರಮಾಚರಣೆಗಳು ನಡೆಸುವುದಿಲ್ಲ. ಸಾಂಪ್ರದಾಯಿಕ ಮತ್ತು ಅಗತ್ಯ ಧಾರ್ಮಿಕ ಆಚರಣೆಗಳನ್ನು ಮಾತ್ರ ಆಚರಿಸುವುದಾಗಿ ಶ್ರೀಗಳು ಘೋಷಣೆ ಮಾಡಿದರು. ಇದನ್ನೂ ಓದಿ: ಪಾಕ್ ಮೇಲೆ ಪ್ರಕೃತಿಗೂ ಮುನಿಸು – ಮತ್ತೆ ಭೂಕಂಪ

    ಈ ವಿಶೇಷ ಪೂಜಾ ಹವನ ಕಾರ್ಯಕ್ರಮದ ವೇಳೆ ನಟ, ನಿರ್ದೇಶಕ ಉಪೇಂದ್ರ ಹಾಗೂ ಹಿರಿಯ ನಟಿ ತಾರಾ ಕುಟುಂಬಗಳು ಭಾಗಿಯಾಗಿದ್ದವು. ರಾಯರ ದರ್ಶನಕ್ಕೆ ಮಂತ್ರಾಲಯಕ್ಕೆ ಆಗಮಿಸಿದ್ದ ಉಪೇಂದ್ರ ಹಾಗೂ ನಟಿ ತಾರಾ ಕುಟುಂಬ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾದರು. ಇದನ್ನೂ ಓದಿ: ನೆಹರು, ಇಂದಿರಾ ಗಾಂಧಿ ಮಾಡಿದ ತಪ್ಪನ್ನ ಮೋದಿ ಮಾಡಬಾರದು: ಯತ್ನಾಳ್

  • ಭಾರತ-ಪಾಕ್ ಯುದ್ಧ ಕಾರ್ಮೋಡ – ಸಹೋದರನ ಅಂತ್ಯಕ್ರಿಯೆಗೆ ಬಂದಿದ್ದ ಯೋಧ ಕರ್ತವ್ಯಕ್ಕೆ ವಾಪಸ್

    ಭಾರತ-ಪಾಕ್ ಯುದ್ಧ ಕಾರ್ಮೋಡ – ಸಹೋದರನ ಅಂತ್ಯಕ್ರಿಯೆಗೆ ಬಂದಿದ್ದ ಯೋಧ ಕರ್ತವ್ಯಕ್ಕೆ ವಾಪಸ್

    ಬಳ್ಳಾರಿ/ಯಾದಗಿರಿ/ವಿಜಯಪುರ: ಭಾರತ ಮತ್ತು ಪಾಕ್ (India-Pak) ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆ ಭಾರತೀಯ ಸೇನೆ (Indian Army) ತುರ್ತು ಕರೆ ಮೂಲಕ ರಜೆಯಲ್ಲಿರುವ ಸೈನಿಕರನ್ನು ಮರಳಿ ಕರೆಸಿಕೊಳ್ಳುತ್ತಿದೆ.

    ಕಲಬುರಗಿ:
    ಜಿಲ್ಲೆಯ ಅಲ್ಲೂರು ಗ್ರಾಮದ ಯೋಧ ಬಸವರಾಜ, 23 ವರ್ಷಗಳಿಂದ ಜಮ್ಮು ಮತ್ತು ಕಾಶ್ಮೀರದ ಉದಂಪುರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ತಮ್ಮ ಸಹೋದರನ ಅಂತ್ಯಕ್ರಿಯೆಗಾಗಿ ತುರ್ತು ರಜೆ ಪಡೆದು ಯಾದಗಿರಿಗೆ ಬಂದಿದ್ದರು. ಆಪರೇಷನ್ ಸಿಂಧೂರ (Operation Sindoor) ಇನ್ನೂ ಮುಗಿದಿಲ್ಲ ಎಂಬ ಆದೇಶದ ಬೆನ್ನ÷ಲ್ಲೇ ಸೇನೆಯಿಂದ ಕರೆ ಬಂದಿದ್ದು, ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿದ್ದಾರೆ. ಸದ್ಯ ಯೋಧನ ಕುಟುಂಬಸ್ಥರು ಅದ್ಧೂರಿಯಾಗಿ ಬೀಳ್ಕೊಟ್ಟಿದ್ದು, ನಮಗೆ ದೇಶವೇ ಮೊದಲು, ದೇಶಸೇವೆಗೆ ನಾವು ಸದಾ ಸಿದ್ಧ ಎಂದು ಹೇಳಿ ತೆರಳಿದ್ದಾರೆ.ಇದನ್ನೂ ಓದಿ: ಪಾಕ್‍ಗೆ ನಾವು ಹೇಗಾದ್ರೂ ಪ್ರತಿಕ್ರಿಯಿಸುತ್ತೇವೆ, ಇದನ್ನು ಟ್ರಂಪ್ ಸರ್ಕಾರ ಅರ್ಥ ಮಾಡಿಕೊಳ್ಳಲಿ: ಮೋದಿ

    ವಿಜಯಪುರ:
    ಇನ್ನೂ ವಿಜಯಪುರದ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ಸಿಆರ್‌ಪಿಎಫ್ ಯೋಧ ರಮೇಶ ಅಹಿರಸಂಗ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸೇನೆಯ ತುರ್ತು ಕರೆ ಮೇರೆಗೆ ವಾಪಸ್ ಹೊರಡಲು ಸಿದ್ಧರಾಗಿದ್ದಾರೆ. ಯೋಧನಿಗೆ ಇಂಡಿ ಪೊಲೀಸರು ಎಸ್ಕಾರ್ಟ್ ನೀಡಿ, ಕಳುಹಿಸಿಕೊಟ್ಟಿದ್ದಾರೆ.

    ವಿಜಯನಗರ:
    ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ಬಿಎಸ್‌ಎಫ್ ಯೋಧ ಪ್ರಕಾಶ್ ಕೊಪ್ಪೋಜಿ 2008ರಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಒಂದು ತಿಂಗಳ ಮೇಲೆ ರಜೆ ಮೇಲೆ ಊರಿಗೆ ಬಂದಿದ್ದರು. ಸದ್ಯ ಸೇನೆಯಿಂದ ತುರ್ತು ಕರೆ ಹಿನ್ನೆಲೆ ಕರ್ತವ್ಯಕ್ಕೆ ಮರಳುತ್ತಿದ್ದು, ವಿವಿಧ ಸಂಘಟನೆಗಳು ಸನ್ಮಾನ ಮಾಡಿ ಬೀಳ್ಕೊಟ್ಟಿದ್ದಾರೆ.ಇದನ್ನೂ ಓದಿ: ಭಾರತ ಮತ್ತಷ್ಟು ಸೇಡು ತೀರಿಸಿಕೊಳ್ಳಬೇಕು, ಕೇಂದ್ರಕ್ಕೆ ನಮ್ಮ ಬೆಂಬಲ ಇದೆ: ಆರ್‌.ವಿ ದೇಶಪಾಂಡೆ

     

  • ಭಾರತ-ಪಾಕ್ ʻಕದನ-ವಿರಾಮʼ ಮಾತುಕತೆ – ಇಂದು ಎರಡೂ ದೇಶಗಳ ಡಿಜಿಎಂಒಗಳ ಸಭೆ

    ಭಾರತ-ಪಾಕ್ ʻಕದನ-ವಿರಾಮʼ ಮಾತುಕತೆ – ಇಂದು ಎರಡೂ ದೇಶಗಳ ಡಿಜಿಎಂಒಗಳ ಸಭೆ

    ನವದೆಹಲಿ: ಭಾರತ – ಪಾಕಿಸ್ತಾನ (India vs Pakistan) ಸಂಘರ್ಷ ಮತ್ತು ಕದನ ವಿರಾಮದ ಬಳಿಕ ಇದೇ ಮೊದಲ ಬಾರಿಗೆ ಉಭಯ ದೇಶಗಳ ಸೇನಾ ಕಾರ್ಯಾಚರಣೆಗಳ ಮಹಾನಿರ್ದೇಶಕರ (DGMO) ಮಟ್ಟದ ಮಾತುಕತೆ ಸೋಮವಾರ (ಇಂದು) ಮಧ್ಯಾಹ್ನ 12 ಗಂಟೆಗೆ ನಿಗದಿಯಾಗಿದೆ ಎಂದು ಭಾರತದ ಡಿಜಿಎಂಓ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಪ್ರಕಟಿಸಿದ್ದಾರೆ.

    ನೌಕಾ ಕಾರ್ಯಾಚರಣೆಗಳ ಮಹಾನಿರ್ದೇಶಕ ವೈಸ್ ಅಡ್ಮಿರಲ್ ಎ.ಎನ್.ಪ್ರಮೋದ್ ಮತ್ತು ವಾಯು ಕಾರ್ಯಾಚರಣೆಗಳ ಮಹಾನಿರ್ದೇಶಕ ಏರ್ ಮಾರ್ಷಲ್ ಎ.ಕೆ.ಭಾರ್ತಿ ಅವರು ಸುದ್ದಿಗೋಷ್ಠಿಯಲ್ಲಿದ್ದರು. ಆಪರೇಷನ್ ಸಿಂಧೂರ (Operation Sindoor) ಬಗ್ಗೆ ಸಮಗ್ರ ಮಾಹಿತಿಗಳನ್ನು ಮಾಧ್ಯಮಗಳ ಜತೆ ಹಂಚಿಕೊಳ್ಳುವ ಸಂದರ್ಭದಲ್ಲಿ ಅವರು ಈ ಮಾಹಿತಿ ನೀಡಿದ್ದಾರೆ. ಇಂದಿನ ಉನ್ನತ ಮಟ್ಟದ ಸಭೆಯಲ್ಲಿ ಉಭಯ ರಾಷ್ಟ್ರ ನಾಯಕರು ಪರಿಸ್ಥಿತಿತಿಗಳ ಕುರಿತು ಅವಲೋಕಿಸಲಿದ್ದಾರೆ ಎಂದು ಸಹ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಯುದ್ಧ ಭೀತಿ ನಡುವೆ ಮತ್ತೊಂದು ಶಾಕ್‌ – ಪಾಕಿಸ್ತಾನದ 51 ಸ್ಥಳಗಳ ಮೇಲೆ ಬಲೂಚ್‌ ಹೋರಾಟಗಾರರಿಂದ ದಾಳಿ

    ಇದೇ ವೇಳೆ ಭಾರತದ ಕಾರ್ಯಾಚರಣೆಯಲ್ಲಿ ಯೂಸಫ್ ಅಝರ್, ಅಬ್ದುಲ್ ಮಲಿಕ್ ರವೂಫ್ ಮತ್ತು ಮುದಾಸಿರ್ ಅಹ್ಮದ್ ಸೇರಿದಂತೆ 100ಕ್ಕೂ ಹೆಚ್ಚು ಉಗ್ರರು ಹತರಾಗಿದ್ದಾರೆ. ಆರ್ಟಿಲರಿ ಮತ್ತು ಶೆಲ್ ಚಕಮಕಿಯಲ್ಲಿ ಪಾಕಿಸ್ತಾನ ಸೇನೆಯ 35-40 ಸೈನಿಕರು ಮೃತಪಟ್ಟಿದ್ದಾರೆ ಎಂದು ವಿವರಿಸಿದರು.  ಇದನ್ನೂ ಓದಿ: ಉಗ್ರರ ಸಂಹಾರಕ್ಕೆ ಭಾರತೀಯ ಸೇನೆಗೆ ನೆರವಾಗಿದ್ದು ಬೆಂಗಳೂರಿನ ʻಇಸ್ರೋʼ

    ಪಾಕಿಸ್ತಾನದ ಒಳಗೆ 11 ವಾಯುನೆಲೆಗಳು ನಾಶವಾಗಿವೆ ಮತ್ತು ಆ ದೇಶದ ಮಿಲಿಟರಿ ಸಾಮರ್ಥ್ಯಕ್ಕೆ ವ್ಯಾಪಕ ಹಾನಿಯಾಗಿದೆ. ಆದ್ರೆ ಶನಿವಾರ ಕದನ ವಿರಾಮ ಘೋಷಣೆಯಾದ ಬಳಿಕವೂ ಪಾಕಿಸ್ತಾನ ಹಲವು ಬಾರಿ ಇದನ್ನು ಉಲ್ಲಂಘಿಸಿದೆ. ಶನಿವಾರ ರಾತ್ರಿ ಜಮ್ಮು ಪ್ರದೇಶದಲ್ಲಿ ಡ್ರೋನ್‌ಗಳು ಪತ್ತೆಯಾಗಿದ್ದು, ದೊಡ್ಡ ಸ್ಫೋಟದ ಸದ್ದು ಕೇಳಿಬಂದಿದೆ ಎಂದು ತಿಳಿಸಿದರು.

    ಸಭೆಯಲ್ಲಿ ಪಾಕ್‌ ಆಕ್ರಮಿತ ಕಾಶ್ಮೀರ ಬಿಟ್ಟುಕೊಡಬೇಕು, ಜೊತೆಗೆ ಅಗತ್ಯವಿರುವ ಮೋಸ್ಟ್‌ ವಾಂಟೆಡ್‌ ಉಗ್ರರನ್ನ ಭಾರತಕ್ಕೆ ಹಸ್ತಾಂತರಿಸಬೇಕು ಎಂಬ ಷರತ್ತನ್ನು ಭಾರದ ವಿಧಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಜಮ್ಮು & ಕಾಶ್ಮೀರದ ವಾಯುಪ್ರದೇಶ ಮೂಲಕ ಹಾದುಹೋದ ಸ್ಟಾರ್‌ಲಿಂಕ್‌ ಉಪಗ್ರಹ – ಡ್ರೋನ್‌ ಅಂತ ಬೆಚ್ಚಿದ ಜನ

  • ಉಗ್ರರ ಸಂಹಾರಕ್ಕೆ ಭಾರತೀಯ ಸೇನೆಗೆ ನೆರವಾಗಿದ್ದು ಬೆಂಗಳೂರಿನ ʻಇಸ್ರೋʼ

    ಉಗ್ರರ ಸಂಹಾರಕ್ಕೆ ಭಾರತೀಯ ಸೇನೆಗೆ ನೆರವಾಗಿದ್ದು ಬೆಂಗಳೂರಿನ ʻಇಸ್ರೋʼ

    ಬೆಂಗಳೂರು: ಭಾರತೀಯ ಸೇನೆ ನಡೆಸಿದ ಕ್ರೂಸ್ ಕ್ಷಿಪಣಿ ದಾಳಿಯಲ್ಲಿ ಪಾಕಿಸ್ತಾನದ ಮಿಲಿಟರಿ ನೆಲೆಗಳಿಗೆ ಆಗಿರುವ ಹಾನಿಗಳ ಕುರಿತು ಸಾಕ್ಷಿ ಸಮೇತ ಓಪನ್ ಸೋರ್ಸ್ ಇಂಟೆಲಿಜೆನ್ಸ್ (OSINT) ತಜ್ಞರು ಮಾಹಿತಿ ಹಂಚಿಕೊಂಡಿದ್ದಾರೆ. ಆದ್ರೆ ಸೇನೆಯ ಈ ಕಾರ್ಯಾಚರಣೆಗೆ ನೆರವಾಗಿದ್ದು ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ನಮ್ಮ ಇಸ್ರೋ (ISRO) ಸಂಸ್ಥೆ ಅನ್ನೋದು ಉನ್ನತ ಮೂಲಗಳಿಂದ ತಿಳಿದುಬಂದಿದೆ.

    ಹೌದು, ಭಾರತೀಯ ಸೇನೆಗೆ (Indian Army) ಉಗ್ರರ ನೆಲೆಗಳನ್ನ ತೋರಿಸಿದ್ದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ). ಯುದ್ಧದ ಸಂದರ್ಭ ನಿರ್ಮಾಣ ಆಗ್ತಿದ್ದಂತೆ ಭಾರತೀಯ ಸೇನೆ ಇಸ್ರೋ ಸಂಸ್ಥೆಯ ಸಹಾಯ ಕೇಳಿತ್ತು. ಹೀಗಾಗಿ 10 ಉಪಗ್ರಹಗಳಿಂದ ಸತತ ನಿಗಾ ವಹಿಸಿದ್ದ ಇಸ್ರೋ ಉಗ್ರರ ನೆಲೆ ಫೋಟೋಗಳನ್ನ ಕಳಿಸಿಕೊಟ್ಟಿತ್ತು. ಪಾಕಿಸ್ತಾನದ ಸೇನಾ ನೆಲೆಗಳು, ಡ್ರೋನ್‌ ಲಾಂಚ್‌ ಪ್ಯಾಡ್‌ಗಳ ಮಾಹಿತಿಯನ್ನು ಚಿತ್ರ ಸಮೇತ ಸಂಗ್ರಹಿಸಿಕೊಟ್ಟಿತ್ತು. ಹೀಗಾಗಿ ನಿಕರ ಗುರಿಯಿಟ್ಟ ಭಾರತೀಯ ಸೇನೆ ಉಗ್ಗರ ಸೇನಾ ನೆಲೆಗಳು ಹಾಗೂ ವಾಯು ನೆಲೆಗಳನ್ನು ಛಿದ್ರಗೊಳಿಸಿತ್ತು ಎಂದು ಇಸ್ರೋದ ಉನ್ನತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಪಾಕ್‌ನಲ್ಲಿರುವ ಉಗ್ರರ ನೆಲೆಗಳಿಗೆ ಹೊಡೀತೀವಿ: ಅಮೆರಿಕಗೆ ಮೊದಲೇ ಹೇಳಿದ್ದ ಜೈಶಂಕರ್‌

    ಭಾರತವು ಪಾಕಿಸ್ತಾನದ ಪ್ರದೇಶದೊಳಗೆ ಆಯ್ದ ಮಿಲಿಟರಿ ಗುರಿಗಳ ಮೇಲೆ ನಿಖರ ದಾಳಿಗಳನ್ನು ನಡೆಸಿತು. ಇವುಗಳಲ್ಲಿ ರಫಿಕಿ, ಚಕ್ಲಾಲಾ, ರಹೀಮ್ ಯಾರ್ ಖಾನ್, ಸುಕ್ಕೂರ್ ಮತ್ತು ಸಿಯಾಲ್‌ಕೋಟ್‌ನಲ್ಲಿರುವ ರಾಡಾರ್ ಸ್ಥಾಪನೆಗಳು, ಕಮಾಂಡ್ ಮತ್ತು ನಿಯಂತ್ರಣ ಕೇಂದ್ರಗಳು ಮತ್ತು ಮದ್ದುಗುಂಡು ಡಿಪೋಗಳು ಸೇರಿವೆ. ಇದನ್ನೂ ಓದಿ: ಜಮ್ಮು & ಕಾಶ್ಮೀರದ ವಾಯುಪ್ರದೇಶ ಮೂಲಕ ಹಾದುಹೋದ ಸ್ಟಾರ್‌ಲಿಂಕ್‌ ಉಪಗ್ರಹ – ಡ್ರೋನ್‌ ಅಂತ ಬೆಚ್ಚಿದ ಜನ

    ಪಾಕಿಸ್ತಾನದ ಭೋಲಾರಿಯಲ್ಲಿರುವ ಪಿಎಎಫ್ ನೆಲೆಯ ಬಿಡಿಎ (ಬಾಂಬ್ ಹಾನಿ ಮೌಲ್ಯಮಾಪನ) ಚಿತ್ರವನ್ನು ಕಾವಾ ಸ್ಪೇಸ್ ಹಂಚಿಕೊಂಡಿದೆ. ಭಾರತೀಯ ಎಎಲ್‌ಸಿಎಂ (ವಾಯು-ಉಡಾವಣಾ ಕ್ರೂಸ್ ಕ್ಷಿಪಣಿ) ನಡೆಸಿದ ನಿಖರ ದಾಳಿಯ ಕುರಿತು ಸಾಕ್ಷಿ ಸಮೇತ ಮಾಹಿತಿ ಹಂಚಿಕೊಳ್ಳಲಾಗಿದೆ. ಪಿಎಎಫ್ (ಪಾಕಿಸ್ತಾನ ವಾಯುಪಡೆ) ಹ್ಯಾಂಗರ್ ಮೇಲೆ ಆಗಿರುವ ಎಫೆಕ್ಟ್‌ ಬಗ್ಗೆ ಸಾಕ್ಷಿ ಇದೆ. ಇದನ್ನೂ ಓದಿ: ಭಾರತೀಯ ಕ್ರೂಸ್ ಕ್ಷಿಪಣಿಗಳಿಂದ ಪಾಕ್ ವಾಯುನೆಲೆಗಳು ಧ್ವಂಸ – ಸೇನೆಯಿಂದ ಸಾಕ್ಷಿ ರಿಲೀಸ್‌

    ಸರ್ಗೋಧಾದಲ್ಲಿರುವ ಪಿಎಎಫ್ ನೆಲೆ ಮುಷಾಫ್‌ನ ಬಿಡಿಎ ವಿಶ್ಲೇಷಣೆ ಎಂಬ ಫೊಟೊವೊಂದನ್ನು ಒಸಿಂಟ್ ಹ್ಯಾಂಡಲ್ ಕಾವಾ ಸ್ಪೇಸ್ ಹಂಚಿಕೊಂಡಿದೆ. ದಾಳಿಯ ನಂತರದ ಚಿತ್ರಣ ವಿಶ್ಲೇಷಣೆಯು ಭಾರತೀಯ ಪಡೆಗಳಿಂದ ನಾಶವಾದ ರನ್‌ವೇಯನ್ನು ತೋರಿಸುತ್ತದೆ ಎಂದು ಕಾವಾ ಸ್ಪೇಸ್ ಹೇಳಿದೆ. ಜಾಕೋಬಾಬಾದ್‌ನಲ್ಲಿರುವ ಪಿಎಎಫ್ ಬೇಸ್ ಶಹಬಾಜ್‌ನ ಕಾವಾ ಸ್ಪೇಸ್ ನಡೆಸಿದ ಬಿಡಿಎ ವಿಶ್ಲೇಷಣೆಯು, ಪಿಎಎಫ್ ಹ್ಯಾಂಗರ್ ಮೇಲೆ ಭಾರತೀಯ ಎಎಲ್‌ಸಿಎಂ ನಡೆಸಿದ ನಿಖರ ದಾಳಿಯ ಪರಿಣಾಮವನ್ನು ತೋರಿಸುತ್ತದೆ.

  • ಪಾಕ್‌ನ 35-40 ಸೈನಿಕರು ಬಲಿ – ಆಪರೇಷನ್‌ ಸಿಂಧೂರ ಬಗ್ಗೆ ಇಂಚಿಂಚು ಮಾಹಿತಿ ಕೊಟ್ಟ ಇಂಡಿಯನ್‌ ಆರ್ಮಿ

    ಪಾಕ್‌ನ 35-40 ಸೈನಿಕರು ಬಲಿ – ಆಪರೇಷನ್‌ ಸಿಂಧೂರ ಬಗ್ಗೆ ಇಂಚಿಂಚು ಮಾಹಿತಿ ಕೊಟ್ಟ ಇಂಡಿಯನ್‌ ಆರ್ಮಿ

    – ಫೋಟೊ, ವೀಡಿಯೋ ಸಾಕ್ಷಿ ಮುಂದಿಟ್ಟು ಸುಳ್ಳುಗಾರ ಪಾಕ್‌ಗೆ ತಿರುಗೇಟು

    ನವದೆಹಲಿ: ಆಪರೇಷನ್‌ ಸಿಂಧೂರ (Operation Sindoor) ಕಾರ್ಯಾಚರಣೆ ಮೂಲಕ ಪಾಕಿಸ್ತಾನ ಮತ್ತು ಉಗ್ರರಿಗೆ ಕೊಟ್ಟ ಏಟಿನ ಬಗ್ಗೆ ಫೋಟೊ ಸಾಕ್ಷಿಗಳ ಮೂಲಕ ಭಾರತೀಯ ಸೇನೆ (Indian Army) ಇಂಚಿಂಚು ಮಾಹಿತಿಯನ್ನು ಹಂಚಿಕೊಂಡಿದೆ.

    ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿದ ಆಪರೇಷನ್‌ನಲ್ಲಿ ಪಾಕಿಸ್ತಾನ ಸೇನೆಯು ಸುಮಾರು 35ರಿಂದ 40 ಸಿಬ್ಬಂದಿಯನ್ನು ಕಳೆದುಕೊಂಡಿದೆ. ಮೇ 7ರಿಂದ 10ರ ವರೆಗೆ ಈ ಕಾರ್ಯಾಚರಣೆ ನಡೆಯಿತು ಎಂದು ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕ (DGMO) ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಶನಿವಾರ ವಿಶೇಷ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಪಾಕ್ ಜೊತೆಗಿನ ಸಂಘರ್ಷದಲ್ಲಿ ಐವರು ಯೋಧರು ಹುತಾತ್ಮರಾಗಿದ್ದಾರೆ: ಭಾರತೀಯ ಸೇನೆ

    ಪಾಕಿಸ್ತಾನಿ ನಾಗರಿಕರು ಅಥವಾ ಮಿಲಿಟರಿ ಸ್ಥಾಪನೆಗಳ ಮೇಲೆ ನಮ್ಮ ಸೇನೆ ದಾಳಿ ಮಾಡಿಲ್ಲ. ಭಯೋತ್ಪಾದಕರು ಮತ್ತು ಅವರ ಮೂಲಸೌಕರ್ಯಗಳ ಮೇಲೆ ದಾಳಿ ಮಾಡುವುದು ನಮ್ಮ ಗುರಿಯಾಗಿತ್ತು ಎಂದು ಸೇನೆ ಸ್ಪಷ್ಟಪಡಿಸಿದೆ.

    ಉಗ್ರರ ನೆಲೆಗಳನ್ನು ಟಾರ್ಗೆಟ್‌ ಮಾಡಿ ಹೊಡೆಯುವಲ್ಲಿ ಯಶಸ್ವಿಯಾಗಿದ್ದೇವೆ. ಇದರ ಬೆನ್ನಲ್ಲೇ, ಮೇ 7 ರಂದು ಸಂಜೆ ಭಾರತದ ನಮ್ಮ ನಾಗರಿಕ ಮತ್ತು ಮಿಲಿಟರಿ ಪ್ರದೇಶಗಳನ್ನು ಗುರಿಯಾಗಿಸಿ ಪಾಕಿಸ್ತಾನ ಮಾನವರಹಿತ ವೈಮಾನಿಕ ವಾಹನಗಳು (UAV), ಸಣ್ಣ ಡ್ರೋನ್‌ಗಳ ದಾಳಿ ನಡೆಸಿತು. ಅವುಗಳನ್ನು ಭಾರತೀಯ ಸೇನೆ ಯಶಸ್ವಿಯಾಗಿ ಹಿಮ್ಮೆಟ್ಟಿಸಿದೆ. ಮೂರು ಡ್ರೋನ್‌ಗಳು ದಾಳಿ ಮಾಡುವಲ್ಲಿ ಯಶಸ್ವಿಯಾದರೂ ಕಡಿಮೆ ಹಾನಿಯನ್ನುಂಟು ಮಾಡಿವೆ ಎಂದು ಸೇನೆ ತಿಳಿಸಿದೆ. ಇದನ್ನೂ ಓದಿ: ಆಪರೇಷನ್‌ ಸಿಂಧೂರ ಕಾರ್ಯಾಚರಣೆಯಲ್ಲಿ 100 ಕ್ಕೂ ಹೆಚ್ಚು ಉಗ್ರರ ಹತ್ಯೆ: ಭಾರತೀಯ ಸೇನೆ

    ನಾವು ಭಯೋತ್ಪಾದಕರನ್ನು ಮಾತ್ರ ಗುರಿಯಾಗಿಸಿದ್ದೆವು. ಆದರೆ, ಭಾರತದ ನಾಗರಿಕರು ಮತ್ತು ಮಿಲಿಟರಿ ಮೂಲಸೌಕರ್ಯಗಳನ್ನು ಪಾಕಿಸ್ತಾನ ಗುರಿಯಾಗಿಸಿ ದಾಳಿ ನಡೆಸಿತ್ತು. ಅದಕ್ಕೆ ತಕ್ಕ ಪ್ರತ್ಯುತ್ತರ ನಮ್ಮ ಸೇನೆ ನೀಡಿದೆ. ಪ್ರತೀಕಾರವಾಗಿ ನಾವು ಲಾಹೋರ್‌ ಬಳಿ ಮತ್ತು ಗುಜ್ರಾನ್‌ವಾಲಾ ಬಳಿ ರೆಡಾರ್‌ ಸ್ಥಾಪನೆಗಳ ಮೇಲೆ ದಾಳಿ ಮಾಡಿದ್ದೇವೆ ಎಂದು ಮಾಹಿತಿ ನೀಡಿದೆ.

    ಭಾರತದ ಕಾರ್ಯಾಚರಣೆ ಏನಿದ್ದರೂ ಭಯೋತ್ಪಾದಕರ ವಿರುದ್ಧವಷ್ಟೇ. ಪಾಕ್‌ ಜನರು ಮತ್ತು ಮಿಲಿಟರಿ ನೆಲೆ ನಮ್ಮ ದಾಳಿ ಉದ್ದೇಶ ಅಲ್ಲವೇ ಅಲ್ಲ ಎಂದು ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಪಾಕ್ ದಾಳಿ ಮಾಡಿದರೆ ನಾವು ಭೀಕರ ದಾಳಿ ಮಾಡುತ್ತೇವೆ: ಮೋದಿ ಎಚ್ಚರಿಕೆ

  • ಪಾಕ್ ಜೊತೆಗಿನ ಸಂಘರ್ಷದಲ್ಲಿ ಐವರು ಯೋಧರು ಹುತಾತ್ಮರಾಗಿದ್ದಾರೆ: ಭಾರತೀಯ ಸೇನೆ

    ಪಾಕ್ ಜೊತೆಗಿನ ಸಂಘರ್ಷದಲ್ಲಿ ಐವರು ಯೋಧರು ಹುತಾತ್ಮರಾಗಿದ್ದಾರೆ: ಭಾರತೀಯ ಸೇನೆ

    ನವದೆಹಲಿ: ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತಿಯಾಗಿ ಉಗ್ರರ ನೆಲೆಗಳ ವಿರುದ್ಧ ಭಾರತ ನಡೆಸಿದ ‘ಆಪರೇಷನ್ ಸಿಂಧೂರ’ (Operation Sindoor) ಕಾರ್ಯಾಚರಣೆಯಲ್ಲಿ ಐವರು ಯೋಧರು (Soldiers) ಹುತಾತ್ಮರಾಗಿದ್ದಾರೆ ಎಂದು ಭಾರತೀಯ ಸೇನೆ (Indian Army) ಅಧಿಕೃತವಾಗಿ ಮಾಹಿತಿ ನೀಡಿದೆ.

    ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಕುರಿತು ಭಾನುವಾರ ಸಂಜೆ ಹಿರಿಯ ಮಿಲಿಟರಿ ಅಧಿಕಾರಿಗಳು ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ದೇಶಕ್ಕಾಗಿ ಸೇವೆ ಸಲ್ಲಿಸಿ ಹುತಾತ್ಮರಾದ ಯೋಧರಿಗೆ ಭಾರತೀಯ ಸೇನಾಪಡೆ ಗೌರವ ಸಲ್ಲಿಸುತ್ತದೆ. ಅಲ್ಲದೇ ಅವರ ತ್ಯಾಗಗಳನ್ನು ಯಾವಾಗಲೂ ಸ್ಮರಿಸಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಕಾಶ್ಮೀರದಲ್ಲಿ ಸಿಲುಕಿರುವ 13 ಕರ್ನಾಟಕದ ವಿದ್ಯಾರ್ಥಿಗಳು – ವಾಪಸ್ ಕರೆತರಲು ನೆರವಾದ ಹೆಚ್‌ಡಿಕೆ

    ಮೇ 7ರಿಂದ ಮೇ 10 ರವರೆಗೆ ಜಮ್ಮು ಕಾಶ್ಮೀರ ಗಡಿಯಲ್ಲಿ (LOC) ನಡೆದ ಗುಂಡಿನ ಚಕಮಕಿಯಲ್ಲಿ ಪಾಕಿಸ್ತಾನ ಸುಮಾರು 35ರಿಂದ 40 ಸೇನಾ ಸಿಬ್ಬಂದಿಯನ್ನು ಕಳೆದುಕೊಂಡಿದೆ. ಪಾಕಿಸ್ತಾನದ ವಿರುದ್ಧ ಭಾರತೀಯ ಸೇನೆ ದಾಳಿ ನಡೆಸಿದ ಕುರಿತು ವೀಡಿಯೋ ಸಾಕ್ಷ್ಯ ಸಮೇತ ಇಂಚಿಂಚು ಮಾಹಿತಿ ನೀಡಿದ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್, ಮತ್ತೆ ಪಾಕ್ ದಾಳಿ ನಡೆಸಿದರೆ ತೀವ್ರವಾಗಿ ದಾಳಿ ನಡೆಸುವ ಬಗ್ಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ಇದನ್ನೂ ಓದಿ: ಆಪರೇಷನ್‌ ಸಿಂಧೂರ ಕಾರ್ಯಾಚರಣೆಯಲ್ಲಿ 100 ಕ್ಕೂ ಹೆಚ್ಚು ಉಗ್ರರ ಹತ್ಯೆ: ಭಾರತೀಯ ಸೇನೆ

  • ಆಪರೇಷನ್‌ ಸಿಂಧೂರ ಕಾರ್ಯಾಚರಣೆಯಲ್ಲಿ 100 ಕ್ಕೂ ಹೆಚ್ಚು ಉಗ್ರರ ಹತ್ಯೆ: ಭಾರತೀಯ ಸೇನೆ

    ಆಪರೇಷನ್‌ ಸಿಂಧೂರ ಕಾರ್ಯಾಚರಣೆಯಲ್ಲಿ 100 ಕ್ಕೂ ಹೆಚ್ಚು ಉಗ್ರರ ಹತ್ಯೆ: ಭಾರತೀಯ ಸೇನೆ

    ನವದೆಹಲಿ: ಆಪರೇಷನ್‌ ಸಿಂಧೂರ (Operation Sindoor) ಕಾರ್ಯಾಚರಣೆಯಲ್ಲಿ 100ಕ್ಕೂ ಹೆಚ್ಚು ಉಗ್ರರು ಹತ್ಯೆಯಾಗಿದ್ದಾರೆ ಎಂದು ಭಾರತೀಯ ಸೇನೆ (Indian Army) ತಿಳಿಸಿದೆ.

    ಹಿರಿಯ ಮಿಲಿಟರಿ ಅಧಿಕಾರಿಗಳು ಭಾನುವಾರ ಸುದ್ದಿಗೋಷ್ಠಿ ನಡೆಸಿ ಕಾರ್ಯಾಚರಣೆ ಕುರಿತು ಮಾಹಿತಿ ಹಂಚಿಕೊಂಡರು. ಆಪರೇಷನ್ ಸಿಂಧೂರ ಅಡಿಯಲ್ಲಿ ಎಚ್ಚರಿಕೆಯಿಂದ ಚರ್ಚಿಸಿದ ನಂತರ ಭಾರತೀಯ ವಾಯುಪಡೆ (ಐಎಎಫ್) ಪಾಕಿಸ್ತಾನದಲ್ಲಿ ಒಂಬತ್ತು ಉಗ್ರರ ನೆಲೆಗಳನ್ನು ಟಾರ್ಗೆಟ್‌ ಮಾಡಿತು. ಮೇ 7 ರಂದು ದಾಳಿಗಳನ್ನು ನಡೆಸಿ, 100 ಕ್ಕೂ ಹೆಚ್ಚು ಭಯೋತ್ಪಾದಕರನ್ನು ಕೊಂದಿತು ಎಂದು ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ತಿಳಿಸಿದ್ದಾರೆ. ಇದನ್ನೂ ಓದಿ: ಪಾಕ್ ದಾಳಿ ಮಾಡಿದರೆ ನಾವು ಭೀಕರ ದಾಳಿ ಮಾಡುತ್ತೇವೆ: ಮೋದಿ ಎಚ್ಚರಿಕೆ

    ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಮೇಲೆ ಭಾರತ ನಡೆಸಿದ ಮಿಲಿಟರಿ ದಾಳಿಗಳು ಭಯೋತ್ಪಾದಕರನ್ನು ಕೊಲ್ಲುವ ಉದ್ದೇಶವನ್ನು ಹೊಂದಿದ್ದವು ಎಂದು ಮಾಹಿತಿ ನೀಡಿದ್ದಾರೆ. ಕಾರ್ಯಾಚರಣೆ ಬಗ್ಗೆ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್, ಏರ್ ಮಾರ್ಷಲ್ ಅವಧೇಶ್ ಕುಮಾರ್ ಭಾರ್ತಿ, ವೈಸ್ ಅಡ್ಮಿರಲ್ ಎಎನ್ ಪ್ರಮೋದ್ ಮತ್ತು ಮೇಜರ್ ಜನರಲ್ ಸಂದೀಪ್ ಎಸ್ ಶಾರದಾ ವಿವರ ನೀಡಿದ್ದಾರೆ.

    ಪಾಕಿಸ್ತಾನ ನಡೆಸಿದ ಡ್ರೋನ್‌ ದಾಳಿಗಳನ್ನು ಹಿಮ್ಮೆಟ್ಟಿಸುವಲ್ಲಿ ಭಾರತದ ವಾಯು ರಕ್ಷಣಾ ಪಡೆ ಯಶಸ್ವಿಯಾಗಿದೆ. ಜೊತೆಗೆ ಪ್ರತಿದಾಳಿ ಕೂಡ ನಡೆಸಿದೆ. ಪಾಕಿಸ್ತಾನದ ಲಾಹೋರ್‌ನಲ್ಲಿರುವ ರೆಡಾರ್‌ ಸ್ಥಾಪನೆಯನ್ನು ನಾಶಪಡಿಸಿದೆ ಎಂದಿದ್ದಾರೆ. ಇದನ್ನೂ ಓದಿ: ಪಾಕ್‌ ಕದನ ವಿರಾಮ ಉಲ್ಲಂಘಿಸಿದ್ರೆ ಪ್ರತಿದಾಳಿ ನಡೆಸಿ – ಕಮಾಂಡರ್‌ಗಳಿಗೆ ಭಾರತೀಯ ಸೇನೆ ಪೂರ್ಣ ಅಧಿಕಾರ

    ಪಾಕಿಸ್ತಾನದ ದಾಳಿಯನ್ನು ತಡೆಯಲು ಸೇನೆಯು ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ವಿವರಿಸಿದ್ದಾರೆ.

  • ಪಾಕ್‌ ಕದನ ವಿರಾಮ ಉಲ್ಲಂಘಿಸಿದ್ರೆ ಪ್ರತಿದಾಳಿ ನಡೆಸಿ – ಕಮಾಂಡರ್‌ಗಳಿಗೆ ಭಾರತೀಯ ಸೇನೆ ಪೂರ್ಣ ಅಧಿಕಾರ

    ಪಾಕ್‌ ಕದನ ವಿರಾಮ ಉಲ್ಲಂಘಿಸಿದ್ರೆ ಪ್ರತಿದಾಳಿ ನಡೆಸಿ – ಕಮಾಂಡರ್‌ಗಳಿಗೆ ಭಾರತೀಯ ಸೇನೆ ಪೂರ್ಣ ಅಧಿಕಾರ

    ನವದೆಹಲಿ: ಪಾಕಿಸ್ತಾನ ಕದನ ವಿರಾಮ (Ceasefire) ಉಲ್ಲಂಘಿಸಿದರೆ ಪ್ರತಿದಾಳಿ ನಡೆಸಿ ಎಂದು ಸೇನಾ ಕಮಾಂಡರ್‌ಗಳಿಗೆ ಭಾರತೀಯ ಸೇನೆ (Indian Army) ಪೂರ್ಣ ಅಧಿಕಾರ ನೀಡಿದೆ.

    ಭಾರತ ಮತ್ತು ಪಾಕಿಸ್ತಾನದ ಡಿಜಿಎಂಒಗಳ ನಡುವೆ ಶನಿವಾರ ನಡೆದ ಒಪ್ಪಂದವನ್ನು ಉಲ್ಲಂಘಿಸಿದರೆ ಪ್ರತಿದಾಳಿ ನಡೆಸಲು ಪಶ್ಚಿಮ ಗಡಿಯಲ್ಲಿರುವ ಎಲ್ಲಾ ಸೇನಾ ಕಮಾಂಡರ್‌ಗಳಿಗೆ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅಧಿಕಾರ ನೀಡಿ ಆದೇಶಿಸಿದ್ದಾರೆ. ಇದನ್ನೂ ಓದಿ: ಆಪರೇಷನ್‌ ಸಿಂಧೂರ- ಹುತಾತ್ಮ ವೀರ ಯೋಧನಿಗೆ ಭಾವುಕ ವಿದಾಯ; ಕಣ್ಣೀರಿಟ್ಟ ಕುಟುಂಬಸ್ಥರು

    ನಿನ್ನೆ ಸಂಜೆ ಎರಡೂ ಕಡೆಯ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು (ಡಿಜಿಎಂಒಗಳು) ಮಾತನಾಡಿದ ನಂತರ ಗಡಿಯಲ್ಲಿ ಯಾವುದೇ ದಾಳಿಗಳು ನಡೆದಿಲ್ಲ ಎನ್ನಲಾಗಿದೆ.

    ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕಿಸ್ತಾನ ನಂಟು ಹೊಂದಿದ್ದ ಭಯೋತ್ಪಾದಕರು 26 ಪ್ರವಾಸಿಗರನ್ನು ಹತ್ಯೆ ಮಾಡಿದ್ದರು. ಅದಕ್ಕೆ ಪ್ರತೀಕಾರವಾಗಿ ಭಾರತ ಆಪರೇಷನ್‌ ಸಿಂಧೂರ ಕಾರ್ಯಾಚರಣೆ ನಡೆಸಿತು. ಪಾಕಿಸ್ತಾನ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಭಾರತ ದಾಳಿ ಮಾಡಿತು.

    ನಾಗರಿಕ ಸರ್ಕಾರದ ಮೇಲೆ ಸೇನೆಯು ಬಲವಾದ ಹಿಡಿತವನ್ನು ಹೊಂದಿರುವ ನೆರೆಯ ರಾಷ್ಟ್ರವು ಭಾರತದ ನಾಗರಿಕ ಪ್ರದೇಶಗಳ ಮೇಲೆ ಡ್ರೋನ್‌ಗಳ ಮೂಲಕ ದಾಳಿ ಮಾಡುವ ಮೂಲಕ ಪರಿಸ್ಥಿತಿಯನ್ನು ಉಲ್ಬಣಗೊಳಿಸಿತ್ತು. ಇದನ್ನೂ ಓದಿ: ಅಣ್ವಸ್ತ್ರಗಳಿರೋ ಬೆಟ್ಟದ ಮೇಲೆ ದಾಳಿ – ಬೆದರಿದ ಪಾಕ್‌, ಅಮೆರಿಕಕ್ಕೂ ಶಾಕ್‌!

    ಭಾರತವು ಪ್ರತಿಯಾಗಿ ಪಾಕಿಸ್ತಾನದ ಪ್ರದೇಶದೊಳಗೆ ಆಯ್ದ ಮಿಲಿಟರಿ ಗುರಿಗಳ ಮೇಲೆ ನಿಖರವಾದ ದಾಳಿಗಳನ್ನು ನಡೆಸಿತು. ಇವುಗಳಲ್ಲಿ ರಫಿಕಿ, ಚಕ್ಲಾಲಾ, ರಹೀಮ್ ಯಾರ್ ಖಾನ್, ಸುಕ್ಕೂರ್ ಮತ್ತು ಸಿಯಾಲ್‌ಕೋಟ್‌ನಲ್ಲಿರುವ ರೆಡಾರ್‌ ಸ್ಥಾಪನೆಗಳು, ಕಮಾಂಡ್ ಮತ್ತು ನಿಯಂತ್ರಣ ಕೇಂದ್ರಗಳು ಮತ್ತು ಮದ್ದುಗುಂಡು ಡಿಪೋಗಳು ಸೇರಿವೆ.

  • ದೇಶ ಮೊದಲು – ರಜೆ ಮೊಟಕು, ಬಳ್ಳಾರಿ ಯೋಧ ಕರ್ತವ್ಯಕ್ಕೆ ಹಾಜರ್‌

    ದೇಶ ಮೊದಲು – ರಜೆ ಮೊಟಕು, ಬಳ್ಳಾರಿ ಯೋಧ ಕರ್ತವ್ಯಕ್ಕೆ ಹಾಜರ್‌

    ಬಳ್ಳಾರಿ: ರಜೆಗೆ ಬಂದಿದ್ದ ಯೋಧರೊಬ್ಬರು (Soldiers) ರಜೆಯನ್ನು ಮೊಟುಕುಗೊಳಿಸಿ ಸೈನ್ಯಕ್ಕೆ (Indian Army) ವಾಪಸ್‌ ತೆರಳಿದ್ದಾರೆ.

    ಸೈಯ್ಯದ್ ಅವರು 30 ದಿನಗಳ ರಜೆ ಮೇಲೆ ಸ್ವಗ್ರಾಮ ಬಳ್ಳಾರಿಗೆ (Ballari) ಆಗಮಿಸಿದ್ದರು. ರಜೆಯಲ್ಲಿದ್ದಾಗಲೇ ಭಾರತ ಮತ್ತು ಪಾಕ್‌ ಮಧ್ಯೆ ಸಂಘರ್ಷ ಹೆಚ್ಚಾಗಿದೆ. ಹೀಗಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ಕರೆ ಬಂದಿದೆ. ಹೀಗಾಗಿ 9 ದಿನಗಳಿಗೆ ರಜೆಯನ್ನು ಮೊಟಕುಗೊಳಿಸಿ ಕರ್ತವ್ಯಕ್ಕೆ ಮರಳಿದ್ದಾರೆ.  ಇದನ್ನೂ ಓದಿ: ಅಣ್ವಸ್ತ್ರಗಳಿರೋ ಬೆಟ್ಟದ ಮೇಲೆ ದಾಳಿ – ಬೆದರಿದ ಪಾಕ್‌, ಅಮೆರಿಕಕ್ಕೂ ಶಾಕ್‌!

    ರಾಜಸ್ಥಾನದ ಶ್ರೀರಂಗಾದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸೈಯ್ಯದ್‌ ಕಳೆದ ವರ್ಷ ಸೇನೆಗೆ ಸೇರ್ಪಡೆಯಾಗಿದ್ದರು. ಮರಳಿ ಕರ್ತವ್ಯಕ್ಕೆ ತೆರಳುವಾಗ ಸೈಯದ್‌ ಅವರಿಗೆ ಗ್ರಾಮಸ್ಥರು ಶುಭ ಹಾರೈಸಿ ಬೀಳ್ಕೊಟ್ಟಿದ್ದಾರೆ. ಈ ವೇಳೆ ರಜೆಗಿಂತಲೂ ದೇಶ ಸೇವೆ ಮುಖ್ಯ ಎಂದು ಹೇಳಿದ್ದಾರೆ. ಇದನ್ನೂ ಓದಿ: 6 ವರ್ಷಗಳ ಬಳಿಕ ಪುಲ್ವಾಮಾ ದಾಳಿಯಲ್ಲಿ ತನ್ನ ಪಾತ್ರ ಒಪ್ಪಿಕೊಂಡ ಕುತಂತ್ರಿ ಪಾಕ್‌

  • ಭಾರತ-ಪಾಕ್ ಸಂಘರ್ಷ | ನವಜಾತ ಶಿಶು, ಪತ್ನಿ ಜೊತೆ ಕಾಲ ಕಳೆಯಬೇಕಿದ್ದ ಯೋಧ ಕರ್ತವ್ಯಕ್ಕೆ ವಾಪಸ್

    ಭಾರತ-ಪಾಕ್ ಸಂಘರ್ಷ | ನವಜಾತ ಶಿಶು, ಪತ್ನಿ ಜೊತೆ ಕಾಲ ಕಳೆಯಬೇಕಿದ್ದ ಯೋಧ ಕರ್ತವ್ಯಕ್ಕೆ ವಾಪಸ್

    ಕಲಬುರಗಿ: ಭಾರತ-ಪಾಕ್ ನಡುವಿನ (India-Pakistan) ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆ ಭಾರತೀಯ ಸೇನೆ (Indian Army) ರಜೆಯಲ್ಲಿರುವ ಯೋಧರನ್ನು ಮರಳಿ ಕರೆಸಿಕೊಳ್ಳುತ್ತಿದೆ. ಹೀಗಾಗಿ ಕುಟುಂಬಸ್ಥರನ್ನು ಬಿಟ್ಟು ಕರ್ತವ್ಯಕ್ಕೆ ವಾಪಸ್ಸಾಗುತ್ತಿದ್ದಾರೆ.

    ಕಲಬುರಗಿ (Kalaburagi) ಜಿಲ್ಲೆಯ ಆಳಂದ ತಾಲೂಕಿನ ಧುತ್ತರಗಾವ್ ಗ್ರಾಮದ ಹಣಮಂತರಾಯ್ ಔಸೆ ಅವರು ಕಳೆದ 20 ವರ್ಷಗಳಿಂದ ಸಿಆರ್‌ಪಿಎಫ್ ಯೋಧರಾಗಿ ಸೇವೆ ಸಲ್ಲಿಸುತ್ತಿದ್ದು, ಸದ್ಯ ಜಮ್ಮುವಿನ (Jammu) ಶ್ರೀನಗರದಲ್ಲಿ (Srinagar) ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೆಂಡತಿಯ ಹೆರಿಗೆಗಾಗಿ 1 ತಿಂಗಳ ರಜೆ ಪಡೆದು ಏ.25 ರಂದು ಊರಿಗೆ ಬಂದಿದ್ದರು.ಇದನ್ನೂ ಓದಿ: ಇನ್ನು ಮುಂದೆ ನಾನು ಪಾಕ್‌ಗೆ ಹೋಗಲ್ಲ: ಡೇರಿಲ್ ಮಿಚೆಲ್

    ಒಂದು ವಾರದ ಹಿಂದೆಯಷ್ಟೇ ಗಂಡು ಮಗು ಜನಿಸಿದ್ದು, ನವಜಾತ ಶಿಶು ಹಾಗೂ ಪತ್ನಿಯೊಂದಿಗೆ ಕಾಲ ಕಳೆಯಬೇಕಿದ್ದ ಹಣಮಂತರಾಯ್ ಔಸೆ ಅವರಿಗೆ ಇದೀಗ ಭಾರತೀಯ ಸೇನೆಗೆ ಮರಳಿ ಕರ್ತವ್ಯಕ್ಕೆ ಹಾಜರಾಗುವಂತೆ ತಿಳಿಸಿದೆ. ಗಡಿಯಲ್ಲಿ ಯುದ್ಧ ಕಾರ್ಮೋಡ ಮುಂದುವರಿದ ಹಿನ್ನೆಲೆ ರಜೆಯಲ್ಲಿರುವ ಯೋಧರನ್ನು ಮರಳಿ ಕರೆಸಿಕೊಳ್ಳುತ್ತಿದ್ದು, ಕುಟುಂಬಕ್ಕಿಂತ ದೇಶ ಸೇವೆಯೇ ಮೊದಲು ಎಂದು ಕರ್ತವ್ಯಕ್ಕೆ ಮರಳುತ್ತಿದ್ದಾರೆ. ಕಲಬುರಗಿಯಿಂದ ರೈಲು ಮೂಲಕ ಹೈದ್ರಾಬಾದ್‌ಗೆ ತೆರಳಿ ಅಲ್ಲಿಂದ ಜಮ್ಮುವಿಗೆ ಪ್ರಯಾಣ ಬೆಳಸಲಿದ್ದು, ಕಲಬುರಗಿ ರೈಲು ನಿಲ್ದಾಣದಲ್ಲಿ ಸನ್ಮಾನ ಮಾಡಿ ಕುಟುಂಬಸ್ಥರು ಕಳುಹಿಸಿಕೊಟ್ಟಿದ್ದಾರೆ.

    ವಿಜಯಪುರ (Vijayapura) ಜಿಲ್ಲೆಯ ಬಬಲೇಶ್ವರ ತಾಲೂಕಿನ ಬಿಎಸ್‌ಎಫ್ ಯೋಧ ಸಿದ್ದಪ್ಪ ಅವರು ರಜೆಗೆಂದು ಊರಿಗೆ ಬಂದಿದ್ದರು. ಸದ್ಯ ಸೇನೆಯ ತುರ್ತು ಕರೆಯ ಮೇರೆಗೆ ಕಲಬುರಗಿ ರೈಲು ನಿಲ್ದಾಣದಿಂದ ಹೈದ್ರಾಬಾದ್‌ಗೆ ಹೋಗಿ, ಅಲ್ಲಿಂದ ಪಶ್ಚಿಮ ಬಂಗಾಳಕ್ಕೆ ತೆರಳಲಿದ್ದಾರೆ.ಇದನ್ನೂ ಓದಿ: ಬ್ರಹ್ಮೋಸ್‌ ದಾಳಿಗೆ ಬೆಚ್ಚಿ ಗೋಗರೆದು ಕದನ ವಿರಾಮ ಮಾಡಿಸಿದ್ದ ಪಾಕ್‌!