Tag: indian army

  • ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧ ಮುಂದುವರಿದ ಎನ್‌ಕೌಂಟರ್‌ – ಓರ್ವ ಯೋಧ ನಾಪತ್ತೆ

    ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧ ಮುಂದುವರಿದ ಎನ್‌ಕೌಂಟರ್‌ – ಓರ್ವ ಯೋಧ ನಾಪತ್ತೆ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu And Kashmir) ಅನಂತನಾಗ್ ಜಿಲ್ಲೆಯಲ್ಲಿ ನಡೆಯುತ್ತಿರುವ ಭಯೋತ್ಪಾದಕರ ಎನ್‌ಕೌಂಟರ್‌ನಲ್ಲಿ ಯೋಧನೊಬ್ಬ ನಾಪತ್ತೆಯಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

    ಕೋಕರ್‌ನಾಗ್‌ನ ದಟ್ಟ ಅರಣ್ಯದಲ್ಲಿ ಭಯೋತ್ಪಾದಕರನ್ನು ಬೇಟೆಯಾಡಲು ಸೇನೆ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಬುಧವಾರ ಮುಂಜಾನೆ ಗುಂಡಿನ ಚಕಮಕಿ ನಡೆದಿದೆ. ಇದನ್ನೂ ಓದಿ: ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟದ ಸೂತ್ರಧಾರ ದೆಹಲಿಯಲ್ಲಿ ಅರೆಸ್ಟ್‌

    ಅಂದು ನಡೆದ ಕಾರ್ಯಾಚರಣೆಯಲ್ಲಿ ಸೇನೆಯ ಇಬ್ಬರು ಮತ್ತು ಒಬ್ಬ ಪೊಲೀಸ್ ಸೇರಿದಂತೆ ಮೂವರು ಅಧಿಕಾರಿಗಳು ಹುತಾತ್ಮರಾಗಿದ್ದರು. ಇದರ ಬೆನ್ನಲ್ಲೇ ಇಂದು ಯೋಧರೊಬ್ಬರು ನಾಪತ್ತೆಯಾಗಿದ್ದಾರೆ.

    ಭದ್ರತಾ ಪಡೆಗಳು ತಮ್ಮ ತೀವ್ರವಾದ ಭಯೋತ್ಪಾದನಾ-ವಿರೋಧಿ ಕಾರ್ಯಾಚರಣೆಗಳಲ್ಲಿ ಹೆರಾನ್ ಡ್ರೋನ್‌ಗಳು ಸೇರಿದಂತೆ ಆಧುನಿಕ ಶಸ್ತ್ರಾಸ್ತ್ರಗಳು ಮತ್ತು ಸಾಧನಗಳನ್ನು ಬಳಸುತ್ತಿವೆ. ಇದನ್ನೂ ಓದಿ: ಕೇರಳದಲ್ಲಿ ಹೆಚ್ಚಿದ ನಿಫಾ ವೈರಸ್‌ ಭೀತಿ – ಕೋಝಿಕ್ಕೋಡ್‌ನ ಮದರಸಾಗಳಿಗೂ ರಜೆ ವಿಸ್ತರಣೆ

    ಸೇನೆ ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಸೆ.12-13 ರ ರಾತ್ರಿ ಜಂಟಿ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ. ಗರೋಲ್ ಗ್ರಾಮದಲ್ಲಿ ಅಡಗಿರುವ ಕೆಲವರು ಭಯೋತ್ಪಾದಕರ ವಿರುದ್ಧ ಈ ಆಪರೇಷನ್‌ ಕೈಗೊಂಡಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಾಕ್‌ ಜೊತೆ ಭಾರತೀಯ ಸೇನೆಯ ಮಾಹಿತಿ ಹಂಚಿಕೊಳ್ಳುತ್ತಿದ್ದ ಯೋಧ ಅರೆಸ್ಟ್‌

    ಪಾಕ್‌ ಜೊತೆ ಭಾರತೀಯ ಸೇನೆಯ ಮಾಹಿತಿ ಹಂಚಿಕೊಳ್ಳುತ್ತಿದ್ದ ಯೋಧ ಅರೆಸ್ಟ್‌

    ಚಂಡೀಗಢ: ಭಾರತೀಯ ಸೇನೆಗೆ (Indian Army) ಸಂಬಂಧಿಸಿದ ಸೂಕ್ಷ್ಮ ಮಾಹಿತಿಗಳನ್ನು ಪಾಕಿಸ್ತಾನದ (Pakistan) ಜೊತೆ ಹಂಚಿಕೊಳ್ಳುತ್ತಿದ್ದ ಯೋಧನನ್ನು ಪಂಜಾಬ್‌ ಪೊಲೀಸರು (Punjab Police) ಬಂಧಿಸಿದ್ದಾರೆ.

    ವೆಸ್ಟರ್ನ್ ಕಮಾಂಡ್‌ನ ಚಂಡಿಮಂದಿರ್ ಪ್ರಧಾನ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಸೇನಾ ಯೋಧನನ್ನು ಪಂಜಾಬ್ ಪೊಲೀಸರು ಡ್ರಗ್ ಡೀಲರ್ ಮೂಲಕ ಪಾಕಿಸ್ತಾನದ ಇಂಟರ್ ಸರ್ವಿಸ್ ಇಂಟೆಲಿಜೆನ್ಸ್ (ಐಎಸ್‌ಐ) ಗೆ ರವಾನಿಸಿದ ಆರೋಪದ ಮೇಲೆ ಬಂಧನ ಮಾಡಿದ್ದಾರೆ. ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಗುಂಡಿನ ಚಕಮಕಿ- ಸೇನಾಧಿಕಾರಿಗಳಿಬ್ಬರು ಹುತಾತ್ಮ

    ಆರೋಪಿ ಭೋಪಾಲ್ ಮೂಲದ ಮನ್‌ಪ್ರೀತ್ ಶರ್ಮಾ ಎಂದು ಗುರುತಿಸಲಾಗಿದೆ. ಮೇ 2022 ರಲ್ಲಿ ಪಟಿಯಾಲಾದಿಂದ ಅಮರಿಕ್ ಸಿಂಗ್ ಎಂಬ ಮಾದಕವಸ್ತು ವ್ಯಾಪಾರಿಯನ್ನು ಬಂಧಿಸಿದ ನಂತರ ಈತನ ವಿಚಾರ ಬೆಳಕಿಗೆ ಬಂದಿದೆ.

    ಅಮರಿಕ್ ಎಂಬ ಮಾದಕವಸ್ತು ಕಳ್ಳಸಾಗಣೆದಾರನನ್ನು ನಾವು ಬಂಧಿಸಿದ್ದೇವೆ. ಆತನ ಫೋನ್‌ನಿಂದ ಭಾರತೀಯ ಸೇನೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ಪಡೆದುಕೊಳ್ಳಲಾಗಿದೆ. ವಿಚಾರಣೆ ವೇಳೆ ಮನ್‌ಪ್ರೀತ್ ಶರ್ಮಾ ಎಂಬ ಯೋಧನಿಂದ ಈ ಮಾಹಿತಿ ಸಿಕ್ಕಿದೆ ಎಂದು ಹೇಳಿದ್ದಾನೆ. ನಮ್ಮ ತಂಡವು ಮಧ್ಯಪ್ರದೇಶದ ಭೋಪಾಲ್‌ನಿಂದ ಆತನನ್ನು ಬಂಧಿಸಿದೆ. ಪಾಕಿಸ್ತಾನದೊಂದಿಗೆ ಮಾಹಿತಿ ಹಂಚಿಕೊಳ್ಳಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಅಕ್ಟೋಬರ್ 1ರಿಂದ ಜನನ ಪ್ರಮಾಣ ಪತ್ರ ಕಡ್ಡಾಯ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹನಿಟ್ರ್ಯಾಪ್ ಭೀತಿ – ಯೂನಿಫಾರಂ ಧರಿಸಿ ಫೋಟೊ, ವೀಡಿಯೋ ಅಪ್ಲೋಡ್ ಮಾಡದಂತೆ ಅರೆಸೇನಾ ಪಡೆಗಳಿಗೆ ಸೂಚನೆ

    ಹನಿಟ್ರ್ಯಾಪ್ ಭೀತಿ – ಯೂನಿಫಾರಂ ಧರಿಸಿ ಫೋಟೊ, ವೀಡಿಯೋ ಅಪ್ಲೋಡ್ ಮಾಡದಂತೆ ಅರೆಸೇನಾ ಪಡೆಗಳಿಗೆ ಸೂಚನೆ

    ನವದೆಹಲಿ: ಹನಿಟ್ರ್ಯಾಪ್‍ಗೆ ಒಳಗಾಗಿ ಸೂಕ್ಷ್ಮ ಮಾಹಿತಿ ಸೋರಿಕೆಯಾಗುವ ಭೀತಿ ಹಿನ್ನೆಲೆಯಲ್ಲಿ ಸಮವಸ್ತ್ರ ಧರಿಸಿದ ಫೋಟೊಗಳನ್ನು ಹಾಗೂ ರೀಲ್ಸ್ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ‌ (Social Media) ಅಪ್ಲೋಡ್ ಮಾಡದಂತೆ ಕೇಂದ್ರೀಯ ಮೀಸಲು ಪಡೆಗಳಿಗೆ (Indian Army) ಸೂಚನೆ ನೀಡಲಾಗಿದೆ. ಅಲ್ಲದೇ ಅಪರಿಚಿತರೊಡನೆ ಸಾಮಾಜಿಕ ಜಾಲತಾಣದಲ್ಲಿ ಸಂಪರ್ಕಿಸದಂತೆ ಸೂಚಿಸಲಾಗಿದೆ.

    ಮೀಸಲು ಪಡೆಯ ಹಲವು ಯೋಧರು ಸಮವಸ್ತ್ರದಲ್ಲಿ ಸೂಕ್ಷ್ಮ ಸ್ಥಳಗಳಿಂದ ವೀಡಿಯೋ ಮತ್ತು ಫೋಟೊಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ. ಇದು ದುರ್ಬಳಕೆಯಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಗುಪ್ತಚರ ಇಲಾಖೆ (Intelligence Bureau) ಎಚ್ಚರಿಕೆ ನೀಡಿದೆ. ಎಚ್ಚರಿಕೆಯ ಬಳಿಕ ಭದ್ರತಾ ಪಡೆಗಳಿಗೆ ಆಯಾ ವಿಭಾಗದ ಮುಖ್ಯಸ್ಥರಿಂದ ಈ ಸೂಚನೆ ನೀಡಲಾಗಿದೆ. ಇದನ್ನೂ ಓದಿ: ಕರ್ನಾಟಕದಿಂದ ಪಾಠ ಕಲಿತ ಬಿಜೆಪಿ ಹೈಕಮಾಂಡ್ – ಮಧ್ಯಪ್ರದೇಶದಲ್ಲಿ ಮಾಡಿದ ಬದಲಾವಣೆ ಏನು?

    ಸಿಆರ್‌ಪಿಎಫ್, ಬಿಎಸ್‍ಎಫ್, ಐಟಿಬಿಪಿ, ಸಿಐಎಸ್‍ಎಫ್ ಸೇರಿದಂತೆ ಎಲ್ಲಾ ಮೀಸಲು ಪಡೆಗಳಿಗೆ ಈ ಸೂಚನೆ ರವಾನಿಸಲಾಗಿದೆ. ಸಾಮಾಜಿಕ ಮಾಧ್ಯಮಗಳ ಪ್ರೊಫೈಲ್‌ನಲ್ಲಿ ಸೈನಿಕರು ಸಮವಸ್ತ್ರದಲ್ಲಿ ತಮ್ಮ ಪೋಟೋ ಹಾಗೂ ವೀಡಿಯೊಗಳನ್ನು ಪೋಸ್ಟ್ ಮಾಡದಂತೆ ಖಚಿತಪಡಿಸಿಕೊಳ್ಳಬೇಕು ಎಂದು ಆಯಾ ವಿಭಾಗದ ಮುಖ್ಯಸ್ಥರಿಗೆ ನಿರ್ದೇಶನ ನೀಡಲಾಗಿದೆ.

    ಸಾಮಾಜಿಕ ಮಾಧ್ಯಮ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಣೆಯನ್ನು ಖಚಿತಪಡಿಸಿಕೊಳ್ಳಬೇಕು. ವ್ಯಕ್ತಿಯ ಪರಿಶೀಲನೆಯಿಲ್ಲದೆ ಸಾಮಾಜಿಕ ಮಾಧ್ಯಮದಲ್ಲಿ ಸ್ನೇಹಿತರನ್ನಾಗಿ ಮಾಡಿಕೊಳ್ಳಬಾರದು. ಈ ಸೂಚನೆಗಳ ಉಲ್ಲಂಘನೆಯಾದಲ್ಲಿ ಸಂಬಂಧಪಟ್ಟವರ ವಿರುದ್ಧ ಕಠಿಣ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಿದೆ.

    ಈ ಆದೇಶದ ಬೆನ್ನಲ್ಲೇ ದೆಹಲಿ ಪೊಲೀಸ್ ಕಮಿಷನರ್ ಸಂಜಯ್ ಅರೋರಾ ಅವರು ತಮ್ಮ ಪಡೆಗಳಿಗೆ ಪತ್ರ ಬರೆದಿದ್ದಾರೆ. ಯಾವುದೇ ಶಂಕಿತ ಅಥವಾ ಬಂಧಿತ ವ್ಯಕ್ತಿಯ ಅಪರಾಧ ಬಾಕಿ ಇರುವ ವಿಚಾರಣೆಗೆ ಸಂಬಂಧಿಸಿದ ಯಾವುದೇ ಗೌಪ್ಯ ಮಾಹಿತಿಯನ್ನು ಹಂಚಿಕೊಳ್ಳಬಾರದು. ಈ ವಿಚಾರವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹಾಗೂ ಸಂದೇ ರವಾನಿಸದಂತೆ ಸೂಚಿಸಿದ್ದಾರೆ.

    ಈ ತಿಂಗಳ ಆರಂಭದಲ್ಲಿ ಸಿಐಎಸ್‍ಎಫ್‍ನಲ್ಲಿ ಹನಿಟ್ರ್ಯಾಪ್ ಪ್ರಕರಣವು ಗಮನಕ್ಕೆ ಬಂದಿತ್ತು. ವಿಶಾಖಪಟ್ಟಣಂ ಸ್ಟೀಲ್ ಪ್ಲಾಂಟ್‍ನಲ್ಲಿ ಭದ್ರತೆಗೆ ನಿಯೋಜಿಸಲಾದ ಕಾನ್‍ಸ್ಟೆಬಲ್ ಪಾಕಿಸ್ತಾನದ ಮಹಿಳಾ ಗುಪ್ತಚರ ಅಧಿಕಾರಿಯೊಂದಿಗೆ ಸಂಪರ್ಕದಲ್ಲಿದ್ದು ಕೆಲವು ವಿವರಗಳನ್ನು ಹಂಚಿಕೊಂಡಿರಬಹುದು ಎನ್ನಲಾಗಿದೆ. ಪಾಕಿಸ್ತಾನದ ಗುಪ್ತಚರ ಅಧಿಕಾರಿಗಳು ತಮ್ಮನ್ನು ಹಿರಿಯ ಅಧಿಕಾರಿಗಳು ಎಂದು ಪರಿಚಯಿಸಿಕೊಳ್ಳುವ ಮೂಲಕ ವಿವಿಧ ಪಡೆಗಳ ನಿಯಂತ್ರಣ ಕೊಠಡಿಗಳಿಗೆ ಸಂಪರ್ಕಿಸಲು ಪ್ರಯತ್ನಿಸಿದ್ದರು ಎನ್ನಲಾಗಿತ್ತು. ಇದನ್ನೂ ಓದಿ: ಆಪರೇಷನ್ ಹಸ್ತ ಚರ್ಚೆ ಬೆನ್ನಲ್ಲೇ ರಹಸ್ಯವಾಗಿ ಸಿಎಂ ಭೇಟಿಯಾದ ಮತ್ತೊಬ್ಬ ಬಿಜೆಪಿ ಶಾಸಕ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸರ್ಜಿಕಲ್ ಸ್ಟ್ರೈಕ್ ಮಾಡಿಲ್ಲ – ಆದ್ರೆ ಭಯೋತ್ಪಾದಕರನ್ನು ಕೊಲ್ಲಲಾಗಿದೆ: ರಕ್ಷಣಾ ಸಚಿವಾಲಯ ಸ್ಪಷ್ಟನೆ

    ಸರ್ಜಿಕಲ್ ಸ್ಟ್ರೈಕ್ ಮಾಡಿಲ್ಲ – ಆದ್ರೆ ಭಯೋತ್ಪಾದಕರನ್ನು ಕೊಲ್ಲಲಾಗಿದೆ: ರಕ್ಷಣಾ ಸಚಿವಾಲಯ ಸ್ಪಷ್ಟನೆ

    ನವದೆಹಲಿ: ಭಾರತ (India) ಪಾಕಿಸ್ತಾನದ (Pakistan) ಮೇಲೆ ಮತ್ತೊಮ್ಮೆ ಸರ್ಜಿಕಲ್ ಸ್ಟ್ರೈಕ್ (Surgical Strike) ನಡೆಸಿದೆ ಎಂದು ವರದಿಯಾದ ಕೆಲವೇ ಗಂಟೆಗಳ ಬಳಿಕ ರಕ್ಷಣಾ ಸಚಿವಾಲಯ (Defense Ministry) ಇದನ್ನು ಸುಳ್ಳು ಎಂದು ಸ್ಪಷ್ಟಪಡಿಸಿದೆ. ಆದರೆ ಜಮ್ಮು ಮತ್ತು ಕಾಶ್ಮೀರದ ಬಾಲಾಕೋಟ್ ಸೆಕ್ಟರ್‌ನಲ್ಲಿ ಗಡಿ ನಿಯಂತ್ರಣ ರೇಖೆಯಲ್ಲಿ (LoC) ಪಾಕಿಸ್ತಾನದಿಂದ ಗಡಿ ಪ್ರವೇಶಿಸಲು ಪ್ರಯತ್ನಿಸುತ್ತಿದ್ದ ಭಯೋತ್ಪಾದಕರನ್ನು (Terrorists) ಕೊಲ್ಲಲಾಗಿದೆ ಎಂದು ತಿಳಿಸಿದೆ.

    ಸೋಮವಾರ ಬೆಳಗ್ಗೆ ಗಡಿ ಪ್ರವೇಶಿಸಲು ಪ್ರಯತ್ನಿಸುತ್ತಿದ್ದ ಇಬ್ಬರು ಭಯೋತ್ಪಾದಕರನ್ನು ಗುರುತಿಸಿ ಅವರನ್ನು ಕೊಲ್ಲಲಾಗಿದೆ. ಅವರು ಬಾಲಕೋಟ್ ವಲಯದ ಹಮೀರ್‌ಪುರ ಪ್ರದೇಶದಲ್ಲಿ ಪ್ರತಿಕೂಲ ಹವಾಮಾನ, ದಟ್ಟ ಮಂಜು, ದಟ್ಟ ಪೊದೆಗಳ ಅನುಕೂಲಗಳನ್ನು ಬಳಸಿಕೊಂಡು ಒಳನುಸುಳಲು ಪ್ರಯತ್ನಿಸುತ್ತಿದ್ದರು ಎಂದು ಸಚಿವಾಲಯ ತಿಳಿಸಿದೆ.

    ವರದಿ ಏನಿತ್ತು?
    ಮುಂಜಾನೆ ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಮತ್ತೊಮ್ಮೆ ಸರ್ಜಿಕಲ್ ಸ್ಟ್ರೈಕ್ ನಡೆಸಿದೆ ಎಂದು ಪತ್ರಿಕೆಯೊಂದು ವರದಿ ಮಾಡಿತ್ತು. ಭಾರತಿಯ ಸೇನೆ ಶನಿವಾರ ರಾತ್ರಿ ಎಲ್‌ಒಸಿಯಾದ್ಯಂತ 2.5 ಕಿ.ಮೀ ಮುಂದಕ್ಕೆ ಪ್ರವೇಶಿಸಿ ಪಾಕಿಸ್ತಾನಿ ಭಯೋತ್ಪಾದಕರ 4 ಲಾಂಚಿಂಗ್ ಪ್ಯಾಡ್‌ಗಳನ್ನು ನಾಶಪಡಿಸಿದೆ ಎಂದು ತಿಳಿಸಿತ್ತು. ಇದನ್ನೂ ಓದಿ: ಬುಧವಾರ ಆಗದಿದ್ರೆ ಆ.27ಕ್ಕೆ ಚಂದ್ರಯಾನ-3 ಲ್ಯಾಂಡಿಂಗ್

     

    ಈ ಸರ್ಜಿಕಲ್ ಸ್ಟ್ರೈಕ್‌ನಲ್ಲಿ 7-8 ಭಯೋತ್ಪಾದಕರು ಸಾವನ್ನಪ್ಪಿದ್ದು, ಕಾರ್ಯಾಚರಣೆ ಬಳಿಕ ಎಲ್ಲಾ ಸೈನಿಕರು ಸುರಕ್ಷಿತವಾಗಿ ಮರಳಿದ್ದಾರೆ ಎಂದು ಹೇಳಿತ್ತು. ಆದರೆ ಬಳಿಕ ರಕ್ಷಣಾ ಸಚಿವಾಲಯ ಅಧಿಕೃತ ಹೇಳಿಕೆಯಲ್ಲಿ ಈ ವರದಿ ಸುಳ್ಳು ಎಂದು ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಬೆಂಗಳೂರಿನ ಪೋಸ್ಟ್ ಮಾಸ್ಟರ್ ಕೆಲಸಕ್ಕೆ ಬಿಲ್ ಗೇಟ್ಸ್ ಫಿದಾ – ಡಿಜಿಟಲೀಕರಣಕ್ಕೆ ಮನಸೋತ ಪೋಸ್ಟ್ ವೈರಲ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜಮ್ಮು ಕಾಶ್ಮೀರದಲ್ಲಿ ಆಸ್ಪತ್ರೆಗೆ ತೆರಳುವ ನಾಟಕವಾಡಿ ಸೇನೆಗೆ ಸಿಕ್ಕಿಬಿದ್ದ ಉಗ್ರರು

    ಜಮ್ಮು ಕಾಶ್ಮೀರದಲ್ಲಿ ಆಸ್ಪತ್ರೆಗೆ ತೆರಳುವ ನಾಟಕವಾಡಿ ಸೇನೆಗೆ ಸಿಕ್ಕಿಬಿದ್ದ ಉಗ್ರರು

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ವಾಹನ ತಪಾಸಣೆ ವೇಳೆ ಆಸ್ಪತ್ರೆಗೆ ತೆರಳುವ ನಾಟಕವಾಡಿದ 7 ಉಗ್ರರನ್ನು ಭದ್ರತಾ ಪಡೆ (Indian Army) ಬಂಧಿಸಿದೆ.

    ಬಾರಾಮುಲ್ಲಾ ಜಿಲ್ಲೆಯಲ್ಲಿ ಲಷ್ಕರ್-ಎ-ತೊಯ್ಬಾ (ಎಲ್‍ಇಟಿ) ಭಯೋತ್ಪಾದಕರ ತಂಡವನ್ನು ಭದ್ರತಾ ಪಡೆಗಳು ಭೇದಿಸಿದೆ. ಆರೋಪಿಗಳು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಕಳ್ಳಸಾಗಣೆಯಲ್ಲಿ ತೊಡಗಿದ್ದರು. ಬಂಧಿತರಿಂದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಜಮ್ಮು ಕಾಶ್ಮೀರದ ಅಂಗಡಿಗಳ ಮೇಲೆ ಸೇನೆ ದಾಳಿ – ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಪತ್ತೆ

    ಆ.8ರಂದು ಉತ್ತರ ಕಾಶ್ಮೀರ ಜಿಲ್ಲೆಯ ಉರಿ ಪ್ರದೇಶದ ಚುರುಂಡಾದಲ್ಲಿ ಸೇನೆ ಗಸ್ತು ತಿರುಗುವ ಸಮಯದಲ್ಲಿ ಶಂಕಿತನೊಬ್ಬನನ್ನು ಗಮನಿಸಿತ್ತು. ಈ ವೇಳೆ ಆತ ಪರಾರಿಯಾಗಲು ಯತ್ನಿಸಿದ್ದ. ಬಳಿಕ ಆತನನ್ನು ಸೇನೆ ಬಂಧಿಸಿತ್ತು. ಆತನನ್ನು ಪರಿಶೀಲಿಸಿದಾಗ ಎರಡು ಗ್ರೆನೇಡ್‍ಗಳು ಪತ್ತೆಯಾಗಿತ್ತು. ವಿಚಾರಣೆ ವೇಳೆ ಆತ ಹಲವರ ವಿಚಾರ ಬಾಯ್ಬಿಟ್ಟಿದ್ದ.

    ಈ ಮಾಹಿತಿ ಆಧಾರದ ರಸ್ತೆಯಲ್ಲಿ ವಾಹನಗಳ ತಪಾಸಣೆ ಹೆಚ್ಚಿಸಲಾಗಿತ್ತು. ಈ ವೇಳೆ ಪೊವಾರಿಯನ್ ಥಾಜಲ್ ಉರಿಯಲ್ಲಿ ವಾಹನ ತಪಾಸಣೆ ವೇಳೆ ಭದ್ರತಾ ಪಡೆಗಳು ವಾಹನ ಒಂದನ್ನು ತಡೆದಿದ್ದರು. ಈ ವೇಳೆ ಆಸ್ಪತ್ರೆಗೆ ತೆರಳುತ್ತಿರುವುದಾಗಿ ಅದರಲ್ಲಿದ್ದ ವ್ಯಕ್ತಿಗಳು ತಿಳಿಸಿದ್ದರು. ಬಳಿಕ ಅನುಮಾನದ ಮೇಲೆ ವಾಹನ ತಪಾಸಣೆ ಮಾಡಿದಾಗ ನಾಲ್ಕು ಹ್ಯಾಂಡ್ ಗ್ರೆನೇಡ್‍ಗಳು, ಎರಡು ಪಿಸ್ತೂಲ್‍ಗಳು, ಎರಡು ಪಿಸ್ತೂಲ್ ಮ್ಯಾಗಜೀನ್‍ಗಳು, 10 ಜೀವಂತ ಗುಂಡುಗಳು ಮತ್ತು 50,000 ರೂ. ನಗದು ಪತ್ತೆಯಾಗಿದೆ. ಬಳಿಕ ಆರೋಪಿಗಳನ್ನು ಸೇನೆ ಬಂಧಿಸಿದೆ. ಆರೋಪಿಗಳು ಪಾಕಿಸ್ತಾನದ (Pakistan) ಉಗ್ರರ ಆಜ್ಞೆಯ ಮೇರೆಗೆ ಶಸ್ತ್ರಾಸ್ತ್ರಗಳ ಸಾಗಾಟದಲ್ಲಿ ತೊಡಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ದೆಹಲಿಯಿಂದ ಪುಣೆಗೆ ಹೊರಡಬೇಕಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜಮ್ಮು ಕಾಶ್ಮೀರದ ಅಂಗಡಿಗಳ ಮೇಲೆ ಸೇನೆ ದಾಳಿ – ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಪತ್ತೆ

    ಜಮ್ಮು ಕಾಶ್ಮೀರದ ಅಂಗಡಿಗಳ ಮೇಲೆ ಸೇನೆ ದಾಳಿ – ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಪತ್ತೆ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಕುಪ್ವಾರ ಜಿಲ್ಲೆಯ ಕೆಲವು ಅಂಗಡಿಗಳ ಮೇಲೆ ಭದ್ರತಾ ಪಡೆಗಳು (Indian Army) ದಾಳಿ ನಡೆಸಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ.

    ಐದು ಎಕೆ 47 ರೈಫಲ್‍ಗಳು, ಏಳು ಪಿಸ್ತೂಲ್‍ಗಳು, ನಾಲ್ಕು ಹ್ಯಾಂಡ್ ಗ್ರೆನೇಡ್‍ಗಳು ಮತ್ತು ಸ್ಫೋಟಕ್ಕೆ ಬಳಸುವ ಅಪಾರ ಪ್ರಮಾಣದ ಮದ್ದುಗುಂಡುಗಳು ಪತ್ತೆಯಾಗಿದೆ. ಸ್ಫೋಟಕಗಳು ಹಾಗೂ ಅಧುನಿಕ ಶಸ್ತ್ರಾಸ್ತ್ರಗಳು ಹೇಗೆ ಇಲ್ಲಿಗೆ ತಲುಪಿವೆ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಇದರ ಹಿಂದಿರುವ ಸಂಘಟನೆಗಳು ಹಾಗೂ ವ್ಯಕ್ತಿಗಳ ಬಗ್ಗೆ ಸೇನೆ ಮಾಹಿತಿ ಕಲೆಹಾಕುತ್ತಿದೆ. ಇದನ್ನೂ ಓದಿ: ದೆಹಲಿಯಿಂದ ಪುಣೆಗೆ ಹೊರಡಬೇಕಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆ

    ಗುಪ್ತಚರ ಮಾಹಿತಿ ಮೇರೆಗೆ ಸೇನೆ ಕೆಲವು ಅಂಗಡಿಗಳ ಮೇಲೆ ದಾಳಿ ನಡೆಸಿದೆ. ಈ ವೇಳೆ ಶಸ್ತ್ರಾಸ್ತ್ರಗಳು ಹಾಗೂ ಸ್ಫೋಟಕಗಳು ಪತ್ತೆಯಾಗಿವೆ. ಸ್ಫೋಟಕಗಳ ಸಂಗ್ರಹದ ಹಿಂದೆ ವಿಧ್ವಂಸಕ ಕೃತ್ಯ ನಡೆಸುವ ಹುನ್ನಾರದ ಬಗ್ಗೆ ಸೇನೆಯ ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ.

    ಈ ಪ್ರದೇಶದ ಸುತ್ತಮುತ್ತಲಿನ ಇನ್ನೂ ಅನೇಕ ಸಣ್ಣ ಅಂಗಡಿಗಳು ಹಾಗೂ ಮನೆಗಳಲ್ಲಿ ಶಸ್ತ್ರಾಸ್ತ್ರಗಳು ಇರುವ ಶಂಕೆ ಇದೆ. ಈ ಬಗ್ಗೆ ಶೋಧ ಕಾರ್ಯ ನಡೆಸಲಾಗುತ್ತಿದೆ. ಸ್ವಾತಂತ್ರ್ಯ ದಿನದಂದು ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಲಾಗಿತ್ತೇ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಕಳೆದ ಮೂರು ದಿನಗಳಿಂದ ಈ ಬಗ್ಗೆ ಗಮನ ಇಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಶ್ವಾನಗಳಿಂದಾಗಿ ಜಗಳ- ನೆರೆಮನೆಯ ಇಬ್ಬರನ್ನು ಗುಂಡಿಕ್ಕಿ ಕೊಂದ ವ್ಯಕ್ತಿ!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸೇನೆಗೆ ಪ್ರಬಲ ಶಸ್ತ್ರಾಸ್ತ್ರಗಳ ಬಲ ನೀಡಿದ್ದ DRDO ಮಾಜಿ ಮುಖ್ಯಸ್ಥ ನಿಧನ

    ಸೇನೆಗೆ ಪ್ರಬಲ ಶಸ್ತ್ರಾಸ್ತ್ರಗಳ ಬಲ ನೀಡಿದ್ದ DRDO ಮಾಜಿ ಮುಖ್ಯಸ್ಥ ನಿಧನ

    ನವದೆಹಲಿ: ಭಾರತದ ಸೇನೆಗೆ (Indian Army) ಪರಮಾಣು ಶಸ್ತ್ರಾಸ್ತ್ರಗಳ ಬಲ ನೀಡಿದ್ದ ಪ್ರಖ್ಯಾತ ವಿಜ್ಞಾನಿ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (DRDO) ಮಾಜಿ ಮುಖ್ಯಸ್ಥ ವಿ.ಎಸ್ ಅರುಣಾಚಲಂ (82) ಅವರು ಅಮೆರಿಕಾದಲ್ಲಿ (America) ನಿಧನರಾಗಿದ್ದಾರೆ.

    1982 ರಿಂದ 1992ರ ನಡುವೆ ಹತ್ತು ವರ್ಷಗಳ ಕಾಲ ಡಿಆರ್‌ಡಿಒ ಮುಖ್ಯಸ್ಥರಾಗಿ ಮತ್ತು ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರರಾಗಿ ಅವರು ಸೇವೆ ಸಲ್ಲಿಸಿದ್ದರು. ನಿವೃತ್ತಿಯ ಬಳಿಕ ಅಮೆರಿಕಾದಲ್ಲಿ ನೆಲೆಸಿದ್ದರು. ನ್ಯುಮೋನಿಯಾ ಮತ್ತು ಪಾರ್ಕಿನ್ಸನ್ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಇದನ್ನೂ ಓದಿ: ಕರುನಾಡ ಮಂದಿಗೆ ಮತ್ತೊಂದು ಶಾಕ್- ಬೇಳೆ, ತರಕಾರಿ ಬಳಿಕ ಅಕ್ಕಿ ಬೆಲೆಯೂ ದುಬಾರಿ

    ಡಿಆರ್‌ಡಿಒ ಅತ್ಯಂತ ಸ್ಫೂರ್ತಿದಾಯಕ ನಾಯಕರಲ್ಲಿ ಅವರು ಒಬ್ಬರಾಗಿದ್ದರು. ಅವರ ಅಧಿಕಾರ ಅವಧಿಯಲ್ಲಿ ಡಿಆರ್‌ಡಿಒ ಸಣ್ಣ ಯೋಜನೆಗಳ ಸಂಸ್ಥೆಯಿಂದ ಬಹು-ಮಿಷನ್ ಸಂಸ್ಥೆಯಾಗಿ ರೂಪಾಂತರಗೊಂಡಿತು. ಸಂಕೀರ್ಣ ಮತ್ತು ಅತ್ಯಾಧುನಿಕ ಯೋಜನೆಗಳನ್ನು ಯೋಜಿಸಿ ಮತ್ತು ಕಾರ್ಯಗತಗೊಳಿಸಿತು. ಲಘು ಯುದ್ಧ ವಿಮಾನ ಮತ್ತು ಮೇನ್ ಬ್ಯಾಟಲ್ ಟ್ಯಾಂಕ್ ಸೇರಿದಂತೆ ಹಲವು ಪ್ರಮುಖ ಕಾರ್ಯಕ್ರಮಗಳು ಅವರ ನೇತೃತ್ವದಲ್ಲಿ ಪ್ರಾರಂಭವಾಯಿತು. ಅವರು ದೀರ್ಘಾವಧಿಯ ದೂರದೃಷ್ಟಿ ಮತ್ತು ಉತ್ತಮ ನಾಯಕತ್ವದ ಗುಣಗಳನ್ನು ಹೊಂದಿದ್ದರು ಎಂದು ಅವರ ಅವಧಿಯಲ್ಲಿ ಕಾರ್ಯನಿರ್ವಹಿಸಿದ್ದ ಮಾಜಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಅರುಣಾಚಲಂ ಅವರು ಮುಂಬೈನ ಭಾಭಾ ಪರಮಾಣು ಸಂಶೋಧನಾ ಕೇಂದ್ರದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಡಿಫೆನ್ಸ್ ಮೆಟಲರ್ಜಿಕಲ್ ಸಂಶೋಧನಾ ಪ್ರಯೋಗಾಲಯವನ್ನು ಸೇರುವ ಮೊದಲು ಬೆಂಗಳೂರಿನ ರಾಷ್ಟ್ರೀಯ ವೈಮಾನಿಕ ಪ್ರಯೋಗಾಲಯದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು. ಅತೀ ಚಿಕ್ಕ ವಯಸ್ಸಿನಲ್ಲೇ ಅವರಿಗೆ 1980 ರಲ್ಲಿ ಭಟ್ನಾಗರ್ ಪ್ರಶಸ್ತಿಯೂ ಲಭಿಸಿತ್ತು. ಅವರು ಡಿಆರ್‌ಡಿಒ ಮುಖ್ಯಸ್ಥರಾಗಿ ಮತ್ತು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿಯಾಗಿ ನೇಮಕಗೊಂಡಾಗ ಅವರ ವಯಸ್ಸು ಕೇವಲ 40 ಆಗಿತ್ತು. ಅವರ ನಂತರ ಎಪಿಜೆ ಅಬ್ದುಲ್ ಕಲಾಂ ಅಧಿಕಾರ ವಹಿಸಿಕೊಂಡಿದ್ದರು. ಇದನ್ನೂ ಓದಿ: ಮಣಿಪುರ ಹಿಂಸಾಚಾರ ತನಿಖೆಗೆ 53 ಸಿಬಿಐ ಅಧಿಕಾರಿಗಳ ನಿಯೋಜನೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆ ಸಕ್ರಿಯ – ಈವರೆಗೂ ಹತರಾದ ಉಗ್ರರ ಸಂಖ್ಯೆ ಎಷ್ಟು?

    ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆ ಸಕ್ರಿಯ – ಈವರೆಗೂ ಹತರಾದ ಉಗ್ರರ ಸಂಖ್ಯೆ ಎಷ್ಟು?

    ನವದೆಹಲಿ: ಕಳೆದ ವರ್ಷ ಭದ್ರತಾ ಪಡೆಗಳು (Indian Army) ನಡೆಸಿದ ಎನ್‍ಕೌಂಟರ್‌ನಲ್ಲಿ 187 ಉಗ್ರರು (Terrorist) ಹತರಾಗಿದ್ದರು. ಈ ವರ್ಷ ಜುಲೈ 20ರವರೆಗೆ 35 ಉಗ್ರರು ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದಾರೆ. ಈ ಪೈಕಿ 27 ವಿದೇಶಿ ಹಾಗೂ 8 ಸ್ಥಳೀಯ ಭಯೋತ್ಪಾದಕರು ಸೇರಿದ್ದಾರೆ ಎಂದು ವರದಿಯಾಗಿದೆ.

    ಸೇನಾ ಮೂಲಗಳು ಜಮ್ಮು ಮತ್ತು ಕಾಶ್ಮೀರದಲ್ಲಿ (Jammu And Kashmir) ಭದ್ರತಾ ಪಡೆಗಳ ಗುಂಡಿಗೆ ಹತರಾದ ಭಯೋತ್ಪಾದಕರ ಮಾಹಿತಿಯನ್ನು ಹಂಚಿಕೊಂಡಿದೆ. ಈ ಮಾಹಿತಿಗಳ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಯಾವುದೇ ದೊಡ್ಡ ಒಳನುಸುಳುವಿಕೆ ನಡೆದಿಲ್ಲ. ಆದರೂ ಕಾಶ್ಮೀರದಲ್ಲಿ 71 ಪಾಕಿಸ್ತಾನಿ ಭಯೋತ್ಪಾದಕರು ಇದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಸಂಸತ್ತಿನಲ್ಲಿ ಅಂಗೀಕಾರವಾಗಿದ್ದ 4 ಮಸೂದೆಗಳಿಗೆ ರಾಷ್ಟ್ರಪತಿ ಸಹಿ

    ಸ್ಥಳೀಯ ಭಯೋತ್ಪಾದಕರ ಶರಣಾಗತಿಗೆ ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತದೆ. ಆದರೆ ಹೆಚ್ಚಿನ ಯಶಸ್ಸು ಇಲ್ಲಿ ಸಿಕ್ಕಿಲ್ಲ. 2018 ರಲ್ಲಿ ಒಬ್ಬ, 2020 ರಲ್ಲಿ 8, 2021 ರಲ್ಲಿ 2 ಮತ್ತು 2022 ರಲ್ಲಿ ಕೇವಲ ಇಬ್ಬರು ಭಯೋತ್ಪಾದಕರು ಶರಣಾಗಿದ್ದಾರೆ. ಆಗಾಗ ಸ್ಥಳೀಯ ಯುವಕರು ನಾಪತ್ತೆಯಾಗುತ್ತಾರೆ. ಅವರನ್ನು ಕುಟುಂಬಸ್ಥರು ಮತ್ತು ಜಮ್ಮು ಕಾಶ್ಮೀರ ಪೊಲೀಸರು ಹುಡುಕಾಟ ನಡೆಸುವ ಹೊತ್ತಿಗೆ ಆ ಯುವಕರು ಭಯೋತ್ಪಾದಕ ಸಂಘಟನೆಯ ಸದಸ್ಯನಂತೆ ಶಸ್ತ್ರಾಸ್ತ್ರಗಳನ್ನು ಹಿಡಿದಿರುವ ಚಿತ್ರಗಳು ವೈರಲ್ ಆಗುತ್ತವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ದಾರಿ ತಪ್ಪಿದ ಯುವಕರನ್ನು ಭಯೋತ್ಪಾದಕ ಸಂಘಟನೆಗಳು ಬ್ರೈನ್ ವಾಶ್ ಮಾಡುತ್ತವೆ. ಇದಾದ ಬಳಿಕವೂ ಯುವಕರು ಇನ್ನೂ ಸಂಪೂರ್ಣವಾಗಿ ಭಯೋತ್ಪಾದನೆಯ ಹಾದಿಯನ್ನು ಅನುಸರಿಸಲು ಸಿದ್ಧವಾಗಿಲ್ಲ ಮತ್ತು ಮುಖ್ಯವಾಹಿನಿಗೆ ಮರಳಲು ಬಯಸುತ್ತಾನೆ ಎಂದು ಸಂಘಟನೆಗಳು ಭಾವಿಸಿದಾಗ ಅಂತಹ ಯುವಕನ ಫೋಟೋವನ್ನು ಭಯೋತ್ಪಾದಕ ಸಂಘಟನೆಯೊಂದಿಗೆ ವೈರಲ್ ಮಾಡುತ್ತಾರೆ. ಇದಾದ ನಂತರ ಯುವಕರು ಅತಂತ್ರದಲ್ಲಿ ಸಿಲುಕಿಕೊಂಡು ಮುಖ್ಯವಾಹಿನಿಗೆ ಮರಳಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ.

    ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಸಂಘಟನೆಗಳು 2018 ರಲ್ಲಿ 187, 2019 ರಲ್ಲಿ 121, 2020 ರಲ್ಲಿ 181, 2021 ರಲ್ಲಿ 142, 2022 ರಲ್ಲಿ 91 ಯುವಕರನ್ನು ನೇಮಕ ಮಾಡಿಕೊಂಡಿವೆ. ಸದ್ಯ 109 ಉಗ್ರರು ಸಕ್ರಿಯರಾಗಿದ್ದಾರೆ. ಇವರಲ್ಲಿ 38 ಮಂದಿ ಸ್ಥಳೀಯರು ಹಾಗೂ 71 ಮಂದಿ ವಿದೇಶಿಗರು. ಜಮ್ಮು ಮತ್ತು ಕಾಶ್ಮೀರ ಪೊಲೀಸರು, ಐಬಿ, ಸೇನೆ ಮತ್ತು ಇತರ ಏಜೆನ್ಸಿಗಳು ಭಯೋತ್ಪಾದಕರ ಅಡಗುತಾಣವನ್ನು ತಲುಪಲು ಪ್ರಯತ್ನಿಸುತ್ತಿವೆ. ಭೂಗತವಾಗಿರುವ ವಿದೇಶಿ ಭಯೋತ್ಪಾದಕರು ಹೈಬ್ರೀಡ್ ಭಯೋತ್ಪಾದಕರ ಮೂಲಕ ತಮ್ಮ ಟಾರ್ಗೆಟ್‍ನತ್ತ ಕೆಲಸ ಮಾಡುತ್ತಿವೆ ಎಂಬ ಮಾಹಿತಿ ತಿಳಿದು ಬಂದಿದೆ. ಇದನ್ನೂ ಓದಿ: ಯಾರೋ ಹುಡುಗರು ಮಾಡಿದ್ದಾರೆ, ಟ್ವೀಟ್‌ ವಿಥ್‌ ಡ್ರಾ ಮಾಡಿಸಿದ್ದೇನೆ: ಡಿಕೆ ಶಿವಕುಮಾರ್‌

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾಶ್ಮೀರದಲ್ಲಿ ಉಗ್ರರಿಂದ ಗುಂಡಿನ ದಾಳಿ – ಮೂವರು ಯೋಧರು ಹುತಾತ್ಮ

    ಕಾಶ್ಮೀರದಲ್ಲಿ ಉಗ್ರರಿಂದ ಗುಂಡಿನ ದಾಳಿ – ಮೂವರು ಯೋಧರು ಹುತಾತ್ಮ

    ಶ್ರೀನಗರ: ಸೇನೆ (Indian Army) ಹಾಗೂ ಉಗ್ರರ (Terrorists) ನಡುವೆ ನಡೆದ ಗುಂಡಿನ ಚಕಮುಕಿಯಲ್ಲಿ ಮೂವರು ಯೋಧರು (Soldiers) ಹುತಾತ್ಮರಾದ ಘಟನೆ ಜಮ್ಮು ಮತ್ತು ಕಾಶ್ಮೀರದ (Jammu and Kashmir) ಕುಲ್ಗಾಮ್‍ನಲ್ಲಿ (Kulgam) ನಡೆದಿದೆ.

    ಹಾಲನ್ ಅರಣ್ಯ ಪ್ರದೇಶದಲ್ಲಿ ಭಯೋತ್ಪಾದಕರು ಅಡಗಿರುವ ಬಗ್ಗೆ ಖಚಿತ ಮಾಹಿತಿಯ ಮೇಲೆ ಸೇನೆ ಹಾಗೂ ಪೊಲೀಸರು ಶುಕ್ರವಾರ ಸಂಜೆಯಿಂದಲೇ ಎನ್‍ಕೌಂಟರ್ ಪ್ರಾರಂಭಿಸಿದ್ದಾರೆ. ಈ ವೇಳೆ ನಡೆದ ಗುಂಡಿನ ದಾಳಿಯಲ್ಲಿ ಮೂವರು ಯೋಧರು ಹುತಾತ್ಮರಾಗಿದ್ದಾರೆ. ಅಲ್ಲದೇ ಉಗ್ರರ ವಿರುದ್ಧ ಕಾರ್ಯಾಚರಣೆ ಮುಂದುವರೆಯುತ್ತಿದೆ ಎಂದು ಭಾರತೀಯ ಸೇನೆ ತಿಳಿಸಿದೆ. ಇದನ್ನೂ ಓದಿ: ಮೈಸೂರಿಗೆ ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ

    ಗುಂಡಿನ ದಾಳಿ ನಡೆಸಿ ಬಳಿಕ ಭಯೋತ್ಪಾದಕರಿಂದ ಯಾವುದೇ ಪ್ರತಿಕ್ರಿಯೆ ಇಲ್ಲದಿರುವಾಗ ಉಗ್ರರು ಮೃತಪಟ್ಟಿದ್ದಾರೆ ಎಂದು ಸೇನೆ ಹುಡುಕಾಟ ಆರಂಭಿಸಿದೆ. ಈ ವೇಳೆ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಯೋಧರನ್ನು ನಿಯೋಜಿಸಲಾಗಿದೆ. ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ.

    ಕಳೆದ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಪೂಂಚ್ ಮತ್ತು ರಜೌರಿ ಜಿಲ್ಲೆಗಳಲ್ಲಿ ನಡೆದ ಎರಡು ಪ್ರತ್ಯೇಕ ದಾಳಿಯಲ್ಲಿ ಐವರು ಮುಖ್ಯ ಕಮಾಂಡೋಗಳು ಸೇರಿದಂತೆ 10 ಸೈನಿಕರು ಹುತಾತ್ಮರಾಗಿದ್ದರು. ಇದನ್ನೂ ಓದಿ: ಬೇಲ್ ಮೇಲೆ ರಿಲೀಸ್ ಆಗ್ತಿದ್ದಂತೆ ರೌಡಿಶೀಟರ್ ಮರ್ಡರ್ – ಮಗ ಬರ್ತಾನೆ ಅಂತ ಮಟನ್ ಚಾಪ್ಸ್ ಮಾಡ್ತಿದ್ಲು ತಾಯಿ!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಿಗೂಢವಾಗಿ ನಾಪತೆಯಾಗಿದ್ದ ಕಾಶ್ಮೀರದ ಯೋಧ ವಾರದ ಬಳಿಕ ಪತ್ತೆ

    ನಿಗೂಢವಾಗಿ ನಾಪತೆಯಾಗಿದ್ದ ಕಾಶ್ಮೀರದ ಯೋಧ ವಾರದ ಬಳಿಕ ಪತ್ತೆ

    ಶ್ರೀನಗರ: ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದಿಂದ (Jammu and Kashmir) ನಾಪತ್ತೆಯಾಗಿದ್ದ ಭಾರತೀಯ ಸೇನಾ ಯೋಧನನ್ನು (Indian Army) ಪೊಲೀಸರು ಪತ್ತೆಹಚ್ಚಿದ್ದಾರೆ. ನಿಗೂಢವಾಗಿ ನಾಪತ್ತೆಯಾಗಿ ಸುಮಾರು ಒಂದು ವಾರದ ಬಳಿಕ ಪ್ರಕರಣಕ್ಕೆ ಪೊಲೀಸರು (Police) ಅಂತ್ಯ ಹಾಡಿದ್ದಾರೆ.

    ನಾಪತ್ತೆಯಾಗಿದ್ದ ಸೇನಾ ಯೋಧನನ್ನು ಕುಲ್ಗಾಮ್ ಪೊಲೀಸರು ವಶಪಡಿಸಿಕೊಂಡಿದ್ದಾರೆ. ವೈದ್ಯಕೀಯ ತಪಾಸಣೆಯ ನಂತರ ಜಂಟಿ ವಿಚಾರಣೆ ಆರಂಭವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮನೆಗೆ ತೆರಳಿದ್ದ ಯೋಧನ ಕಿಡ್ನ್ಯಾಪ್ – ಸೇನೆಯಿಂದ ತೀವ್ರ ಹುಡುಕಾಟ

    ಯೋಧನ ನಾಪತ್ತೆ ಪ್ರಕರಣದ ಬಗ್ಗೆ ಪೊಲೀಸರು ಈ ಹಿಂದೆ ಯಾವುದೇ ವಿವರಗಳನ್ನು ಬಹಿರಂಗಪಡಿಸಿರಲಿಲ್ಲ. ಆದರೂ ಅವರನ್ನು ಭಯೋತ್ಪಾದಕರು ಅಪಹರಿಸಿರಬಹುದು ಎಂಬ ಆತಂಕವಿತ್ತು. ಆದರೆ ಯಾವುದೇ ಉಗ್ರಗಾಮಿ ಸಂಘಟನೆಗಳು ಅವರ ಅಪಹರಣದ ಹೊಣೆಯನ್ನು ಹೊತ್ತುಕೊಂಡಿರಲಿಲ್ಲ.

    ಉಗ್ರರು ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆಯ ಜವಾನರನ್ನು ಅಪಹರಿಸಿದ ಪ್ರಕರಣಗಳು ಹಲವಾರು ಬಾರಿ ಸಂಭವಿಸಿವೆ. ಇದೇ ಕಾರಣಕ್ಕೆ ಅವರನ್ನು ಉಗ್ರರು ಅಪಹರಿಸಿದ್ದ ಶಂಕೆ ವ್ಯಕ್ತವಾಗಿತ್ತು. ಯೋಧನ ಹುಡುಕಾಟ ನಡೆಸುವಂತೆ ಈ ಹಿಂದೆ ಆತನ ಕುಟುಂಬ ಕೇಂದ್ರಕ್ಕೆ ಮನವಿ ಮಾಡಿತ್ತು.

    ಲಡಾಖ್‍ನಲ್ಲಿ ನಿಯೋಜನೆಗೊಂಡಿದ್ದ ಜಾವೆದ್ ಅಹ್ಮದ್ ವಾನಿ (25) ಅವರು ರಜೆ ಮೇಲೆ ಮನೆಗೆ ತೆರಳಿದ್ದರು. ಈ ವೇಳೆ ಅವರು ಕಳೆದ ಜು.29ರ ಸಂಜೆ ಮನೆಯಿಂದ ಅಂಗಡಿಯೊಂದಕ್ಕೆ ತೆರಳಿದ್ದರು. ಬಳಿಕ ನಿಗೂಢವಾಗಿ ಕುಲ್ಗಾಮ್‍ನಿಂದ ಅವರು ನಾಪತ್ತೆಯಾಗಿದ್ದರು. ಅಲ್ಲದೇ ಕಾರಿನಲ್ಲಿ ಅವರ ಚಪ್ಪಲಿ ಹಾಗೂ ರಕ್ತದ ಕಲೆಗಳು ಪತ್ತೆಯಾಗಿತ್ತು ಇದರಿಂದ ಇನ್ನೂ ಆತಂಕ ಹೆಚ್ಚಾಗಿತ್ತು. ಅಲ್ಲದೇ ಅವರನ್ನು ಉಗ್ರಗಾಮಿಗಳು ಅಪಹರಿಸಿರಬಹುದು ಎಂದು ಶಂಕಿಸಲಾಗಿತ್ತು. ಇದನ್ನೂ ಓದಿ: ಸಿರಿಯಾ ಘರ್ಷಣೆಯಲ್ಲಿ ಐಸಿಸ್ ನಾಯಕ ಸಾವು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]