Tag: indian army

  • ಭಾರತದ ಸೇನೆಗೆ AI ತಂತ್ರಜ್ಞಾನದ ಬಲ – ಏನಿದರ ಮಹತ್ವ?

    ಭಾರತದ ಸೇನೆಗೆ AI ತಂತ್ರಜ್ಞಾನದ ಬಲ – ಏನಿದರ ಮಹತ್ವ?

    ಭಾರತ ಯಾವಾಗಲೂ ಭಯೋತ್ಪಾದನೆಯ ವಿರುದ್ಧವಾಗಿ ಒಂದು ಹೆಜ್ಜೆ ಮುಂದಿದೆ. ಇದೇ ನಿಟ್ಟಿನಲ್ಲಿ ಭಾರತ ಸೇನೆ (Indian Army) ಭಯೋತ್ಪಾದನೆಯ ನಿಗ್ರಹಕ್ಕೆ ಹಾಗೂ ಶತ್ರು ರಾಷ್ಟ್ರಗಳಿಂದ ರಕ್ಷಣೆಗಾಗಿ ತನ್ನ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಎಐ (Artificial Intelligence) ತಂತ್ರಜ್ಞಾನ ಅಳವಡಿಸಿಕೊಳ್ಳಲು ಮುಂದಾಗಿದೆ.  

    ಭಾರತಕ್ಕೆ ಶತ್ರು ರಾಷ್ಟ್ರಗಳಾಗಿ ಕಾಡುತ್ತಿರುವ ಪಾಕಿಸ್ತಾನ (Pakistan) ಮತ್ತು ಚೀನಾದ (China) ಗಡಿಯಲ್ಲಿ ಎಐ ತಂತ್ರಜ್ಞಾನ ಅಳವಡಿಕೆಗೆ ಸೇನೆ ಮುಂದಾಗಿದೆ. ಈ ಮೂಲಕ ದೇಶದ ಗಡಿಯೊಳಗೆ ನುಗ್ಗಲು ಭಯೋತ್ಪಾದಕರಿಗೆ ಉತ್ತೇಜಿಸುವ ಪಾಕಿಸ್ತಾನಕ್ಕೆ ಭಾರತ ಸೆಡ್ಡು ಹೊಡೆದಿದೆ. ಅಲ್ಲದೇ ಪದೇ ಪದೇ ಗಡಿಯಲ್ಲಿ ಸಮಸ್ಯೆ ಹುಟ್ಟು ಹಾಕಿ ಕಾಲು ಕೆದರಿ ಜಗಳಕ್ಕೆ ನಿಲ್ಲುವ ಚೀನಾ ತಂಟೆಯನ್ನೂ ಬಂದ್ ಮಾಡಲು ರಕ್ಷಣಾ ಇಲಾಖೆ ಮುಂದಾಗಿದೆ.  

    ಗಡಿಯಲ್ಲಿ ಎಐ ಹೇಗೆ ಶತ್ರುಗಳ ಮೇಲೆ ಕಣ್ಣಿಡಲಿದೆ?

    ರಕ್ಷಣೆಗೆ ಬಳಸುವ ಎಐ ತಂತ್ರಜ್ಞಾನದಲ್ಲಿ ಹೆಚ್ಚಿನ ರೆಸಲ್ಯೂಶನ್ ಹೊಂದಿರುವ ಕ್ಯಾಮೆರಾಗಳು, ಮಾನವರಹಿತ ವಿಮಾನಗಳು ಮತ್ತು ರೆಡಾರ್‌ಗಳನ್ನು ಒಳಗೊಂಡಿವೆ. ಇವುಗಳು ನೈಜ ಸಮಯದಲ್ಲಿ ಮಾನಿಟರಿಂಗ್ ಮಾಡುವ ಸಾಫ್ಟ್‌ವೇರ್‌ಗಳನ್ನು ಸಹ ಹೊಂದಿವೆ. ಈ ಮೂಲಕ ಗಡಿಯಲ್ಲಿ ಶತ್ರುಗಳ ಚಟುವಟಿಕೆಗಳ ಮೇಲೆ ತೀವ್ರ ನಿಗಾ ಇಡಲಾಗುತ್ತದೆ. 

    ಗಡಿಗಳಲ್ಲಿ ಗಸ್ತು ತಿರುಗಲು ಸಹ ಎಐ ಚಾಲಿತ ಡ್ರೋನ್‍ಗಳು ಮತ್ತು ರೋಬೋಟ್‍ಗಳನ್ನು ಬಳಸಲು ನಿರ್ಧರಿಸಲಾಗಿದ್ದು, ಮಾನವ ಹಸ್ತಕ್ಷೇಪ ಹಾಗೂ ಅಪಾಯಗಳ ಪ್ರಮಾಣವನ್ನು ತಗ್ಗಿಸಲಿದೆ. ಈ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು 75 ಹೊಸದಾಗಿ ಅಭಿವೃದ್ಧಿಪಡಿಸಿದ ಎಐ ತಂತ್ರಜ್ಞಾನಗಳನ್ನು ಕಳೆದ ಜುಲೈನಲ್ಲಿ `ಎಐ ಇನ್ ಡಿಫೆನ್ಸ್’ ವಿಚಾರ ಸಂಕಿರಣದಲ್ಲಿ ಮೊದಲ ಬಾರಿಗೆ ಮಾಹಿತಿ ನೀಡಿದ್ದರು. ಈ ವೇಳೆ ಅಲ್ಲಿ ರೋಬೋಟಿಕ್ಸ್, ಕಣ್ಗಾವಲು ಕ್ಯಾಮೆರಾಗಳನ್ನು ಪ್ರದರ್ಶಿಸಲಾಗಿತ್ತು. 

    ಈ ವರ್ಷದ ಆರಂಭದಲ್ಲಿ ನಡೆದ ಏಷ್ಯಾದ ಅತಿದೊಡ್ಡ ಏರ್ ಶೋಗಳಲ್ಲಿ ಒಂದಾದ ಏರೋ ಇಂಡಿಯಾದಲ್ಲಿ ಎಐ ಆಧಾರಿತ ಕಣ್ಗಾವಲು ಸಾಫ್ಟ್‌ವೇರ್‌ನ್ನು ರಕ್ಷಣಾ ಕ್ಷೇತ್ರದಲ್ಲಿ ಬಳಸುವ ವಿಧಾನವನ್ನು ಪರಿಚಯಿಸಲಾಗಿತ್ತು. ಈ ಬಗ್ಗೆ ಸೇನೆಗೆ ತರಬೇತಿಯನ್ನು ಸಹ ನೀಡಲಾಗಿದೆ. ಹೆಚ್ಚಿನ ತರಬೇತಿಗಾಗಿ ಅಮೆರಿಕದೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ.

    ರಕ್ಷಣೆಯಲ್ಲಿ ಎಐ ತಂತ್ರಜ್ಞಾನ ಹೇಗೆ ಸಹಾಯ ಮಾಡುತ್ತದೆ?

    ಈಗಾಗಲೇ ಸಾಫ್ಟ್‌ವೇರ್ ಆಧಾರಿತ ಕ್ಯಾಮೆರಾಗಳನ್ನು ಪೂರ್ವ ಲಡಾಖ್ ಸೆಕ್ಟರ್‌ನಲ್ಲಿ ಇರಿಸಲಾಗಿದೆ. ಇದು ಚೀನಾಕ್ಕೆ ನಿಕಟವಾಗಿರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ.  ಇದರೊಂದಿಗೆ ಅಪಾಯದ ಸ್ಥಳಗಳಾದ ಕಾಶ್ಮೀರದಿಂದ (Kashmir) ಸಿಕ್ಕಿಂವರೆಗೆ ಭಾರತದ ಸೂಕ್ಷ್ಮ ಗಡಿಗಳಲ್ಲಿ ಎಐ ತಂತ್ರಜ್ಞಾನ ವರದಾನವಾಗಿದೆ. ಈ ಸಾಫ್ಟ್‌ವೇರ್ ಯಾವುದೇ ಚಲನೆ, ಶಸ್ತ್ರಾಸ್ತ್ರಗಳು, ವಾಹನಗಳು, ಟ್ಯಾಂಕರ್‌ಗಳು ಅಥವಾ ಕ್ಷಿಪಣಿಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದು ಲೈವ್ ಮತ್ತು ರೆಕಾರ್ಡ್ ಮಾಡುತ್ತದೆ. ಅಲ್ಲದೇ ಅದರ ಸಂಪೂರ್ಣ ಮಾಹಿತಿಯನ್ನು ಸೇನೆಗೆ ರವಾನಿಸುತ್ತದೆ.

    ಎಐ ತಂತ್ರಜ್ಞಾಕ್ಕೆ ರಕ್ಷಣಾ ಇಲಾಖೆ ಬಜೆಟ್ ಎಷ್ಟು?

    ಭಾರತೀಯ ಸೇನೆಯು ಪ್ರತಿ ವರ್ಷ ಎಐ ತಂತ್ರಜ್ಞಾನಕ್ಕಾಗಿ ಸರಿಸುಮಾರು 400 ಕೋಟಿ ರೂ.ಗಳನ್ನು ವಿನಿಯೋಗಿಸಲಿದೆ. ಈ ವಿಚಾರದಲ್ಲಿ ಅಮೆರಿಕ ಹಾಗೂ ಚೀನಾ ಮುಂದಿದ್ದರೂ ಅವುಗಳಿಗೆ ಸರಿಯಾಗಿ ನಿಲ್ಲಲು ಭಾರತ ಸಮರ್ಥವಾಗಿದೆ.

    ಇಸ್ರೇಲ್ ಬಳಿ ಇದೆ ಸಂಪೂರ್ಣ ಪ್ಯಾಲೆಸ್ತೇನಿಯನ್ ಸೇನಾ ಮಾಹಿತಿ!

    ಇಸ್ರೇಲ್‍ನಲ್ಲಿ ಪ್ಯಾಲೆಸ್ತೇನಿಯನ್ ಮಿಲಿಟರಿಗೆ ಸಂಬಂಧಿಸಿದ ವ್ಯಕ್ತಿಗಳನ್ನು ಕಂಡು ಹಿಡಿಯಲು ಮತ್ತು ಅವರ ಮೇಲೆ ನಿಗಾ ಇಡಲು ಎಐ ಬಳಕೆ ಮಾಡಲಾಗುತ್ತಿದೆ. ಈ ತಂತ್ರಜ್ಞಾನವು ಸೇನಾ ಸಿಬ್ಬಂದಿಯ ಹಾಗೂ ಅವರೊಂದಿಗೆ ಸಂಪರ್ಕದಲ್ಲಿರುವವರ ಮೊಬೈಲ್‍ಗಳನ್ನು ಅನ್‍ಲಾಕ್ ಮಾಡುವ ಮೂಲಕ ಅವರ ಮಾಹಿತಿ ಕಲೆಹಾಕುತ್ತದೆ. ಅವರ ಮೇಲೆ ಈ ಮೂಲಕ ನಿಗಾ ವಹಿಸುತ್ತದೆ.

  • ಜಮ್ಮು-ಕಾಶ್ಮೀರದಲ್ಲಿ ಎನ್‌ಕೌಂಟರ್‌; ಭಾರತೀಯ ಸೇನೆಯಿಂದ ಐವರು ಲಷ್ಕರ್‌ ಉಗ್ರರ ಹತ್ಯೆ

    ಜಮ್ಮು-ಕಾಶ್ಮೀರದಲ್ಲಿ ಎನ್‌ಕೌಂಟರ್‌; ಭಾರತೀಯ ಸೇನೆಯಿಂದ ಐವರು ಲಷ್ಕರ್‌ ಉಗ್ರರ ಹತ್ಯೆ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu Kashmir) ಗಡಿ ನಿಯಂತ್ರಣ ರೇಖೆ (LOC)ಯಲ್ಲಿ ಪೊಲೀಸರು ಮತ್ತು ಸೇನೆ ನಡೆಸಿದ ಎನ್‌ಕೌಂಟರ್ ಕಾರ್ಯಾಚರಣೆಯಲ್ಲಿ ಐವರು ಲಷ್ಕರ್ ಭಯೋತ್ಪಾದಕರು ಹತ್ಯೆಯಾಗಿದ್ದಾರೆ.

    ಕುಪ್ವಾರ ಜಿಲ್ಲೆಯ ಮಚಿಲ್ ಸೆಕ್ಟರ್‌ನಲ್ಲಿ ಇಂದು (ಗುರುವಾರ) ಎನ್‌ಕೌಂಟರ್ ನಡೆದಿದೆ. ಆರಂಭದಲ್ಲಿ ಸೇನೆ ಮತ್ತು ಉಗ್ರರ ನಡುವಿನ ಗುಂಡಿನ ಚಕಮಕಿಯಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದರು. ನಂತರದ ಗುಂಡಿನ ಕಾಳಗದಲ್ಲಿ ಇನ್ನೂ ಮೂವರು ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕತಾರ್‌ನಲ್ಲಿ ಬಂಧಿತರಾಗಿದ್ದ 8 ಮಾಜಿ ನೌಕಾಪಡೆ ಸಿಬ್ಬಂದಿಗೆ ಮರಣದಂಡನೆ! – ಭಾರತಕ್ಕೆ ಆಘಾತ

    ಹತ್ಯೆಯಾದ ಭಯೋತ್ಪಾದಕರು ಲಷ್ಕರ್-ಎ-ತೊಯ್ಬಾ (Lashkar-e-Toiba)ಗೆ ಸೇರಿದವರು. ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಹಿಂದೆ ಸೇನೆಯಿಂದ ಪ್ರತ್ಯೇಕವಾಗಿ ನಡೆಸಲಾಗಿದ್ದ ಒಳನುಸುಳುವಿಕೆ ವಿರುದ್ಧದ ಕಾರ್ಯಾಚರಣೆಯಲ್ಲಿ ಪೊಲೀಸರನ್ನು ಹೆಚ್ಚಾಗಿ ಬಳಸಿಕೊಳ್ಳಲಾಗುತ್ತಿದೆ.

    16 ಭಯೋತ್ಪಾದಕ ಲಾಂಚಿಂಗ್ ಪ್ಯಾಡ್‌ಗಳು ಎಲ್‌ಒಸಿಯಾದ್ಯಂತ ಇನ್ನೂ ಕಾರ್ಯನಿರ್ವಹಿಸುತ್ತಿವೆ. ಪಾಕಿಸ್ತಾನದಿಂದ ಭಯೋತ್ಪಾದಕರನ್ನು ಭಾರತದ ಕಡೆ ಕಳುಹಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಜಮ್ಮು-ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ಹೇಳಿದ್ದಾರೆ. ಇದನ್ನೂ ಓದಿ: ದೆಹಲಿ ವಾಯುಮಾಲಿನ್ಯಕ್ಕೆ ಮೂಲ ಗೊತ್ತಿಲ್ಲ – ಆಪ್ ಸಚಿವೆ ವಿವಾದಾತ್ಮಕ ಹೇಳಿಕೆ

    ಜಮ್ಮು ಮತ್ತು ಕಾಶ್ಮೀರದ ಉನ್ನತ ಅಧಿಕಾರಿಗಳು ಮತ್ತು ಭದ್ರತಾ ಏಜೆನ್ಸಿಗಳ ಸಭೆಯು ಶ್ರೀನಗರದಲ್ಲಿರುವ 15 ಕಾರ್ಪ್ಸ್‌ನ ಪ್ರಧಾನ ಕಚೇರಿಯಲ್ಲಿ ಬುಧವಾರ ನಡೆಯಿತು. ಕಾಶ್ಮೀರದಲ್ಲಿ ವಿದೇಶಿ ಭಯೋತ್ಪಾದಕರ ಪಾತ್ರವಿರುವ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು. ಸ್ಥಳೀಯ ನೇಮಕಾತಿಗಳು ತೀವ್ರವಾಗಿ ಕಡಿಮೆಯಾಗಿರುವುದರಿಂದ ವಿದೇಶಿ ಭಯೋತ್ಪಾದಕರ ಸಂಖ್ಯೆ ಮತ್ತೆ ಹೆಚ್ಚಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಈ ವರ್ಷ ಕೇಂದ್ರಾಡಳಿತ ಪ್ರದೇಶದಲ್ಲಿ ಹತರಾದ 46 ಭಯೋತ್ಪಾದಕರ ಪೈಕಿ 37 ಮಂದಿ ಪಾಕಿಸ್ತಾನೀಯರು. ಒಂಬತ್ತು ಮಂದಿ ಮಾತ್ರ ಸ್ಥಳೀಯರು ಎಂದು ಅಧಿಕೃತ ಅಂಕಿ ಅಂಶಗಳು ಬಹಿರಂಗಪಡಿಸಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ 33 ವರ್ಷಗಳ ಭಯೋತ್ಪಾದನೆಯಲ್ಲಿ ವಿದೇಶಿ ಭಯೋತ್ಪಾದಕರ ಸಂಖ್ಯೆ ಸ್ಥಳೀಯ ಭಯೋತ್ಪಾದಕರಿಗಿಂತ ನಾಲ್ಕು ಪಟ್ಟು ಹೆಚ್ಚಿರುವುದು ಇದೇ ಮೊದಲು ಎನ್ನಲಾಗಿದೆ. ಪ್ರಸ್ತುತ ಕಣಿವೆಯಲ್ಲಿ ಸುಮಾರು 130 ಭಯೋತ್ಪಾದಕರು ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಪೈಕಿ ಅರ್ಧದಷ್ಟು ವಿದೇಶಿ ಭಯೋತ್ಪಾದಕರು ಎಂದು ಗೃಹ ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಡೇಟಿಂಗ್ ಆ್ಯಪ್ ಬಂಬಲ್ ಬಳಸುವ ಮುನ್ನ ಎಚ್ಚರ.. ಎಚ್ಚರ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಗ್ನಿವೀರರಿಗೆ ಮಿಲಿಟರಿ ಸೌಲಭ್ಯಗಳಿಲ್ಲ- ರಾಹುಲ್‌ ಆರೋಪಕ್ಕೆ ಸೇನೆಯಿಂದ ಪಟ್ಟಿ ರಿಲೀಸ್‌

    ಅಗ್ನಿವೀರರಿಗೆ ಮಿಲಿಟರಿ ಸೌಲಭ್ಯಗಳಿಲ್ಲ- ರಾಹುಲ್‌ ಆರೋಪಕ್ಕೆ ಸೇನೆಯಿಂದ ಪಟ್ಟಿ ರಿಲೀಸ್‌

    ನವದೆಹಲಿ: ಕರ್ತವ್ಯದಲ್ಲಿದ್ದಾಗ ಹುತಾತ್ಮರಾದ ಅಗ್ನಿವೀರರಿಗೆ (Agniveer) ಸರ್ಕಾರದಿಂದ ಯಾವುದೇ ಹಣ ಸಿಗುವುದಿಲ್ಲ ಎಂದು ಆರೋಪಿಸಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಆರೋಪಕ್ಕೆ ಭಾರತೀಯ ಸೇನೆ (Indian Army) ಪ್ರತಿಕ್ರಿಯೆ ನೀಡಿದೆ.

    ಅಗ್ನಿವೀರರಿಗೆ ಒಟ್ಟು 1.13 ಕೋಟಿ ರೂ. ಪರಿಹಾರ ಸಿಗುತ್ತದೆ ಎಂದು ತಿಳಿಸುವ ಮೂಲಕ ರಾಹುಲ್ ಗಾಂಧಿ ಮಾಡಿರುವ ಆರೋಪ ಸುಳ್ಳು ಎಂದು ಸೇನೆ ಪರೋಕ್ಷವಾಗಿ ಹೇಳಿದೆ. ಇದನ್ನೂ ಓದಿ: ರೇವಣ್ಣ ಆಪ್ತನ ಕಿಡ್ನ್ಯಾಪ್ ಯತ್ನ ಕೇಸ್ – ಇನ್ಸ್‌ಪೆಕ್ಟರ್‌ಗೆ ಭೂಗತ ಪಾತಕಿ ಲಿಂಕ್

    ರಾಹುಲ್‌ ಗಾಂಧಿ ಹೇಳಿದ್ದೇನು?
    ಸಿಯಾಚಿನ್‌ನಲ್ಲಿ ಹುತಾತ್ಮರಾದ ಅಗ್ನಿವೀರ್ ಅಕ್ಷಯ್ ಲಕ್ಷ್ಮಣ್‌ಗೆ ಸಂತಾಪ ಸೂಚಿಸಿದ್ದ ರಾಹುಲ್ ಗಾಂಧಿ, ಒಬ್ಬ ಯೋಧ ಹುತಾತ್ಮರಾಗಿದ್ದಾರೆ. ಆದರೆ ಅವರಿಗೆ ಯಾವುದೇ ಗ್ರಾಚ್ಯೂಟಿ ಇಲ್ಲ. ಮಿಲಿಟರಿ ಸೌಲಭ್ಯಗಳಿಲ್ಲ, ಕುಟುಂಬಕ್ಕೆ ಪಿಂಚಣಿ ಇಲ್ಲ ಎಂದು ಆರೋಪಿಸಿದ್ದರು. ಅಷ್ಟೇ ಅಲ್ಲದೇ ಭಾರತದ ವೀರರನ್ನು ಅಪಮಾನಿಸುವ ಯೋಜನೆ ಎಂದು ಕಿಡಿಕಾರಿದರು.

    ಎಡಿಜಿಪಿ ಇಂಡಿಯನ್‌ ಆರ್ಮಿ (ADGP Indian Army) ಎಕ್ಸ್‌ನಲ್ಲಿ ಕರ್ತವ್ಯದಲ್ಲಿರುವ ಅಗ್ನಿವೀರರಿಗೆ ಸರ್ಕಾರದಿಂದ ಸಿಗುವ ಪರಿಹಾರದ ವಿವರಗಳನ್ನು ಪಟ್ಟಿ ಮಾಡಿ ತಿಳಿಸಿದೆ.

    ಕಾರಕೋರಂ ಶ್ರೇಣಿಯಲ್ಲಿ ಸುಮಾರು 20,000 ಅಡಿ ಎತ್ತರದಲ್ಲಿರುವ ಸಿಯಾಚಿನ್ ಹಿಮನದಿಯು ವಿಶ್ವದ ಅತಿ ಎತ್ತರದ ಮಿಲಿಟರಿ ವಲಯವಾಗಿದೆ. ಅಲ್ಲಿ ಸೈನಿಕರು ಹಿಮಪಾತ ಮತ್ತು ಶೀತ ಗಾಳಿಯೊಂದಿಗೆ ಹೋರಾಡಬೇಕಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕರ್ತವ್ಯದ ವೇಳೆ ಆತ್ಮಹತ್ಯೆ ಮಾಡಿಕೊಂಡರೆ ಅಂತ್ಯಕ್ರಿಯೆಯಲ್ಲಿ ಮಿಲಿಟರಿ ಗೌರವ ಇಲ್ಲ: ಭಾರತೀಯ ಸೇನೆ

    ಕರ್ತವ್ಯದ ವೇಳೆ ಆತ್ಮಹತ್ಯೆ ಮಾಡಿಕೊಂಡರೆ ಅಂತ್ಯಕ್ರಿಯೆಯಲ್ಲಿ ಮಿಲಿಟರಿ ಗೌರವ ಇಲ್ಲ: ಭಾರತೀಯ ಸೇನೆ

    ನವದೆಹಲಿ: ಕರ್ತವ್ಯದ ವೇಳೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡರೆ ಅಥವಾ ಸ್ವಯಂ ಪ್ರೇರಿತ ಕಾರಣಗಳಿಂದ ಉಂಟಾಗುವ ಸಾವುಗಳಿಗೆ ಅಂತ್ಯಕ್ರಿಯೆ ವೇಳೆ ಮಿಲಿಟರಿ ನಿಯಮಗಳ ಪ್ರಕಾರ ಗೌರವ (Military Honor) ನೀಡುವುದಿಲ್ಲ ಎಂದು ಭಾರತೀಯ ಸೇನೆ (Indian Army) ಹೇಳಿದೆ.

    ಅಗ್ನಿವೀರ್ ಅಮೃತಪಾಲ್ ಸಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸೇನಾ ವಕ್ತಾರರು, ಅಗ್ನಿವೀರ್ ಎನ್ನುವ ಕಾರಣಕ್ಕೆ ಸೇನಾ ಗೌರವ ನೀಡಿಲ್ಲ ಎನ್ನುವ ಆರೋಪ ಸರಿಯಲ್ಲ. ಸ್ವಯಂ ಕಾರಣಗಳಿಂದ ಆಗುವ ಸಾವುಗಳಿಗೆ ಸೇನಾ ಗೌರವ ಸಿಗುವುದಿಲ್ಲ. ಇದನ್ನು ನಿಯಮಗಳೇ ಉಲ್ಲೇಖಿಸಿದೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಮಣಿಪುರ ಸಂಘರ್ಷಕ್ಕಿಂತ ಇಸ್ರೇಲ್ ಯುದ್ಧದ ಮೇಲೆ ಪ್ರಧಾನಿ ಮೋದಿಗೆ ಆಸಕ್ತಿ: ರಾಹುಲ್ ಗಾಂಧಿ ವಾಗ್ದಾಳಿ

    ರಜೌರಿ ಸೆಕ್ಟರ್‌ನಲ್ಲಿ ಸೆಂಟ್ರಿ ಡ್ಯೂಟಿಯಲ್ಲಿದ್ದಾಗ ಸ್ವಯಂ ಪ್ರೇರಿತ ಗುಂಡಿನ ಗಾಯದಿಂದಾಗಿ ಅಮೃತಪಾಲ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದರು. ಭಾನುವಾರ ರಾತ್ರಿಯ ಹೇಳಿಕೆಯಲ್ಲಿ ಸಿಂಗ್ ಅವರ ದುರದೃಷ್ಟಕರ ಸಾವಿಗೆ ಸಂಬಂಧಿಸಿದ ಕೆಲವು ತಪ್ಪು ತಿಳುವಳಿಕೆ ಮತ್ತು ತಪ್ಪು ನಿರೂಪಣೆ ಇದೆ ಎಂದು ಸೇನೆ ಹೇಳಿತ್ತು. ಇದನ್ನೂ ಓದಿ: ಮಿಷನ್‌ ಗಗನಯಾನ; ಅ.21 ಕ್ಕೆ ಮೊದಲ ಪರೀಕ್ಷಾರ್ಥ ಉಡಾವಣೆ

    1967ರ ಅಸ್ತಿತ್ವದಲ್ಲಿರುವ ಆರ್ಮಿ ಆರ್ಡರ್ ಪ್ರಕಾರ, ಮಿಲಿಟರಿ ಶವಸಂಸ್ಕಾರಕ್ಕೆ ಅರ್ಹತೆ ಹೊಂದಿಲ್ಲ. ಈ ವಿಷಯದ ನೀತಿಯನ್ನು ಯಾವುದೇ ತಾರತಮ್ಯವಿಲ್ಲದೆ ನಿರಂತರವಾಗಿ ಅನುಸರಿಸಲಾಗಿದೆ. ದತ್ತಾಂಶದ ಪ್ರಕಾರ, 2001 ರಿಂದ 100-140 ಸೈನಿಕರ ಆತ್ಮಹತ್ಯೆ/ ಸ್ವಯಂ ಕಾರಣಗಳಿಂದ ಸಾವುಗಳು ಸಂಭವಿಸಿವೆ. ಅಂತಹ ಸಂದರ್ಭಗಳಲ್ಲಿ ಮಿಲಿಟರಿ ಅಂತ್ಯಕ್ರಿಯೆಯನ್ನು ನೀಡಲಾಗಿಲ್ಲ ಎಂದು ಸೇನೆ ಹೇಳಿದೆ. ಇದನ್ನೂ ಓದಿ: ತೆಲಂಗಾಣ ಚುನಾವಣೆ – ‘ಕೈ’ ಪ್ರಣಾಳಿಕೆಯಲ್ಲಿ ವಧುವಿಗೆ 10 ಗ್ರಾಂ ಚಿನ್ನ, ಮಕ್ಕಳಿಗೆ ಉಚಿತ ಇಂಟರ್ನೆಟ್?

    ಅಂತ್ಯಕ್ರಿಯೆ ನಡೆಸಲು ತಕ್ಷಣದ ಆರ್ಥಿಕ ಪರಿಹಾರ ಸೇರಿದಂತೆ ಅರ್ಹತೆಗೆ ಅನುಗುಣವಾಗಿ ಹಣಕಾಸಿನ ನೆರವು ಮತ್ತು ಪರಿಹಾರವನ್ನು ಆದ್ಯತೆಯಲ್ಲಿ ನೀಡಲಾಗಿದೆ. ಇಂತಹ ದುರದೃಷ್ಟಕರವಾದ ನಷ್ಟಗಳು ಕುಟುಂಬ, ಭದ್ರತಾ ಪಡೆಗಳು ಮೇಲೆ ಭ್ರಾತೃತ್ವದ ಮೇಲೆ ಪರಿಣಾಮ ಬೀರಲಿದೆ. ಅಂತಹ ದುಃಖದ ಕ್ಷಣದಲ್ಲಿ ಕುಟುಂಬದ ಗೌರವ, ಗೌಪ್ಯತೆ ಮತ್ತು ಘನತೆಯನ್ನು ಎತ್ತಿಹಿಡಿಯುವುದು ಸಮಾಜದ ಮುಖ್ಯ ಮತ್ತು ಜವಾಬ್ದಾರಿಯಾಗಿದೆ. ಸೇನೆ ಅದನ್ನು ಮಾಡುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಚಂದ್ರಯಾನ-3ರ ಬಳಿಕ ಇಸ್ರೋ ತಂತ್ರಜ್ಞಾನ ಬಯಸಿದ ನಾಸಾ: ಸೋಮನಾಥ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗಡಿಯಲ್ಲಿ ಚೀನಾ, ಪಾಕ್ ತಂಟೆಗೆ ಬ್ರೇಕ್ ಹಾಕಲು ಸೇನೆಗೆ `ಪ್ರಚಂಡ’ ಬಲ

    ಗಡಿಯಲ್ಲಿ ಚೀನಾ, ಪಾಕ್ ತಂಟೆಗೆ ಬ್ರೇಕ್ ಹಾಕಲು ಸೇನೆಗೆ `ಪ್ರಚಂಡ’ ಬಲ

    ನವದೆಹಲಿ: ಕೇಂದ್ರ ಸರ್ಕಾರವು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‍ನಿಂದ (HAL) ಭಾರತದ ವಾಯುಸೇನೆಗೆ (Indian Air Force) 156 ಸ್ಥಳೀಯ `ಪ್ರಚಂಡ್’ ಲಘು ಸೇನಾ ಹೆಲಿಕಾಪ್ಟರ್‌ಗಳನ್ನು (Prachand Helicopter) ಖರೀದಿಸಲು ಮುಂದಾಗಿದೆ. ಈ ಮೂಲಕ ಗಡಿಯಲ್ಲಿ ಪಾಕಿಸ್ತಾನ ಹಾಗೂ ಚೀನಾ ಮಾಡುತ್ತಿರುವ ಸಮಸ್ಯೆಯನ್ನು ನಿಯಂತ್ರಿಸಲು ವಾಯುಸೇನೆಗೆ ಬಲ ತುಂಬಲು ಕೇಂದ್ರ ಈ ನಿರ್ಧಾರ ಕೈಗೊಂಡಿದೆ.

    ಈಗಾಗಲೇ ಈ ಯೋಜನೆಯನ್ನು ಅಂತಿಮಗೊಳಿಸಲಾಗಿದೆ. ಹೆಲಿಕಾಪ್ಟರ್‌ಗಳು ಸಿಯಾಚಿನ್ ಗ್ಲೇಸಿಯರ್ ಮತ್ತು ಪೂರ್ವ ಲಡಾಖ್‍ನಂತಹ ಎತ್ತರದ ಪ್ರದೇಶಗಳಲ್ಲಿ ಆಕ್ರಮಣಕಾರಿ ಕಾರ್ಯಾಚರಣೆಗೆ ಸಮರ್ಥವಾಗಿವೆ. ಸೇನೆಯು (Indian Army) 90 ಹೆಲಿಕಾಪ್ಟರ್‌ಗಳನ್ನು ಪಡೆಯಲಿದೆ. 66 ಹೆಲಿಕಾಪ್ಟರ್‌ಗಳನ್ನು ವಾಯುಸೇನೆ ಪಡೆಯಲಿದೆ. ಇದನ್ನೂ ಓದಿ: ಭಾರತಕ್ಕೆ ಬೇಕಾಗಿದ್ದ ಮೋಸ್ಟ್‌ ವಾಂಟೆಡ್‌ ಉಗ್ರ ಕರಾಚಿಯಲ್ಲಿ ಗುಂಡೇಟಿಗೆ ಬಲಿ

    ಈ ಯೋಜನೆಗೆ ವಾಣಿಜ್ಯ ಮಾತುಕತೆಗಳ ಮತ್ತು ಭದ್ರತೆಯ ಕ್ಯಾಬಿನೆಟ್ ಸಮಿತಿ (ಸಿಸಿಎಸ್) ಅಂತಿಮ ಒಪ್ಪಿಗೆಯ ನಂತರ ಆದೇಶವನ್ನು ನೀಡಲು ನಿರ್ಧರಿಸಲಾಗಿದೆ.

    5.8 ಟನ್ ತೂಕದ ಪ್ರಚಂಡ್ ಲಘು ಯುದ್ಧ ಚಾಪರ್ ಸ್ಥಳೀಯವಾಗಿ ತಯಾರಿಸಲಾಗಿದೆ. ಅಲ್ಲದೇ ವಿಶ್ವದಲ್ಲಿ ತೂಕದ ವರ್ಗದ ಏಕೈಕ ದಾಳಿ ಹೆಲಿಕಾಪ್ಟರ್ ಎಂದು ಹೆಸರು ಪಡೆದಿದೆ. 20 ಎಂಎಂ ಬಂದೂಕುಗಳು, 70 ಎಂಎಂ ರಾಕೆಟ್ ವ್ಯವಸ್ಥೆ ಮತ್ತು ಕ್ಷಿಪಣಿಗಳನ್ನು ಇಂದು ಹೊಂದಿದೆ. ಇದು 16,400 ಅಡಿ ಎತ್ತರದಲ್ಲಿ ಹಾರುವ ಸಾಮರ್ಥ್ಯ ಹೊಂದಿರುವುದು ವಿಶೇಷ. ಇದನ್ನೂ ಓದಿ: ವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ 209ರೂ. ಏರಿಕೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗಡಿ ನುಸುಳಲು ಉಗ್ರರ ಯತ್ನ – ಇಬ್ಬರನ್ನು ಹೊಡೆದುರುಳಿಸಿದ ಸೇನೆ

    ಗಡಿ ನುಸುಳಲು ಉಗ್ರರ ಯತ್ನ – ಇಬ್ಬರನ್ನು ಹೊಡೆದುರುಳಿಸಿದ ಸೇನೆ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ಗಡಿ ನುಸುಳಲು ಯತ್ನಿಸಿದ ನಾಲ್ವರು ಉಗ್ರರ (Terrorists) ಪೈಕಿ ಇಬ್ಬರನ್ನು ಭದ್ರತಾ ಪಡೆಗಳು (Indian Army) ಹೊಡೆದುರುಳಿಸಿವೆ.

    ಕಾರ್ಯಾಚರಣೆ ವೇಳೆ ಎರಡು ಎಕೆ 47 ರೈಫಲ್ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ತಪ್ಪಿಸಿಕೊಂಡ ಇನ್ನಿಬ್ಬರು ಉಗ್ರರಿಗಾಗಿ ಸೇನೆ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿದೆ. ಈ ವೇಳೆ ಭಯೋತ್ಪಾದಕರ ಅಡಗು ತಾಣಗಳು ಪತ್ತೆಯಾಗಿದ್ದು ಅವುಗಳನ್ನು ನಾಶಪಡಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರ ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆಯನ್ನು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮತದಾರರು ಪ್ರತಿ ಅಭ್ಯರ್ಥಿಯಿಂದ ಹಣ ಪಡೆದು ಸರಿಯಾದ ವ್ಯಕ್ತಿಗೆ ಮತ ಹಾಕ್ತಾರೆ: ಗಡ್ಕರಿ

    ಅನಂತನಾಗ್‍ನ ದಟ್ಟವಾದ ಕಾಡುಗಳಲ್ಲಿ ಈ ತಿಂಗಳ ಆರಂಭದಲ್ಲಿ ಒಂದು ವಾರದ ಅವಧಿಯಲ್ಲಿ ಎನ್‍ಕೌಂಟರ್ ನಡೆಸಲಾಗಿತ್ತು. ಈ ವೇಳೆ ಲಷ್ಕರ್ ಕಮಾಂಡರ್ ಮತ್ತು ಇನ್ನೊಬ್ಬ ಭಯೋತ್ಪಾದಕನನ್ನು ಹತ್ಯೆಗೈಯಲಾಗಿತ್ತು. ಅಲ್ಲದೇ ಗುಂಡಿನ ಚಕಮಕಿಯಲ್ಲಿ ಮೂವರು ಅಧಿಕಾರಿಗಳು ಸೇರಿದಂತೆ ನಾಲ್ವರು ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದರು.

    ಕೆಲವು ತಿಂಗಳ ಹಿಂದೆ ನಡೆದ ಸೇನಾ ವಾಹನದ ಮೇಲಿನ ದಾಳಿಯ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ವಿರುದ್ಧ ನಿರಂತರ ಕಾರ್ಯಾಚರಣೆ ನಡೆಸಲಾಗುತ್ತಿದೆ. ಅಲ್ಲದೇ ಭಯೋತ್ಪಾದಕ ಕೃತ್ಯಗಳನ್ನು ಬೆಂಬಲಿಸುವವರ ವಿರುದ್ಧವು ಅಗತ್ಯ ಕ್ರಮ ಜರುಗಿಸಲಾಗುತ್ತಿದೆ. ಇದನ್ನೂ ಓದಿ: 84 ಬ್ಯಾಂಕ್ ಅಕೌಂಟ್, 854 ಕೋಟಿ ವಹಿವಾಟು – ಬೃಹತ್ ಸೈಬರ್ ಕ್ರೈಂ ಜಾಲ ಬೆಳಕಿಗೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಉಗ್ರರಿಗೆ ಬೆಂಬಲ – ಇಬ್ಬರು ಮಹಿಳೆಯರು, ಓರ್ವ ಅಪ್ರಾಪ್ತ ಸೇರಿ ಆರು ಮಂದಿ ಅರೆಸ್ಟ್

    ಉಗ್ರರಿಗೆ ಬೆಂಬಲ – ಇಬ್ಬರು ಮಹಿಳೆಯರು, ಓರ್ವ ಅಪ್ರಾಪ್ತ ಸೇರಿ ಆರು ಮಂದಿ ಅರೆಸ್ಟ್

    ಶ್ರೀನಗರ: ಉಗ್ರ (Terrorist) ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿದ್ದ ಇಬ್ಬರು ಮಹಿಳೆಯರು ಹಾಗೂ ಓರ್ವ ಅಪ್ರಾಪ್ತ ಸೇರಿ ಆರು ಜನ ಆರೋಪಿಗಳನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ಸೇನೆ (Indian Army) ಬಂಧಿಸಿದೆ.

    ಬಾರಮುಲ್ಲಾ ಜಿಲ್ಲೆಯಲ್ಲಿ ಭಯೋತ್ಪಾದಕರು ಹಾಗೂ ಮತ್ತವರ ಬೆಂಬಲಿಗರ ಜಾಲದ ವಿರುದ್ಧ ಸೇನೆ ಹಾಗೂ ಪೊಲೀಸರು (Police) ಕಾರ್ಯಾಚರಣೆ ಆರಂಭಿಸಿದ್ದಾರೆ. ಈ ವೇಳೆ ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ ಮೂರು ಪಿಸ್ತೂಲ್‍ಗಳು ಮತ್ತು ಐದು ಹ್ಯಾಂಡ್ ಗ್ರೆನೇಡ್‍ಗಳು ಸೇರಿದಂತೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬೂದಿ ಮುಚ್ಚಿದ ಕೆಂಡದಂತಾದ ಮಣಿಪುರ – ಇಬ್ಬರು ವಿದ್ಯಾರ್ಥಿಗಳ ಶವದ ಫೋಟೋ ವೈರಲ್‌

    ಬಂಧಿತರಲ್ಲಿ ಸಕ್ರಿಯ ಭಯೋತ್ಪಾದಕ ಯಾಸಿರ್ ಅಹ್ಮದ್ ಶಾ ಕೂಡ ಸೇರಿದ್ದಾನೆ. ಬಾಲಾಪರಾಧಿ ಸೇರಿದಂತೆ ಇತರ ಐವರು ಆತನ ಸಹಚರರಾಗಿದ್ದಾರೆ. ಮಹಿಳೆಯರನ್ನು ಸಾಮಾನ್ಯವಾಗಿ ಅನುಮಾನಿಸದ ಕಾರಣ ಇಂತಹ ಚಟುವಟಿಕೆಗಳಿಗೆ ನೇಮಿಸಿಕೊಂಡಿದ್ದಾರೆ. ಈ ಬಂಧನವು ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಭವನೀಯ ಭಯೋತ್ಪಾದಕ ದಾಳಿಯನ್ನು ತಡೆಗಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಅನಂತ್‍ನಾಗ್‍ನಲ್ಲಿ ಇತ್ತೀಚೆಗೆ ನಡೆದ ಎನ್‍ಕೌಂಟರ್‌ನಲ್ಲಿ ಮೂವರು ಅಧಿಕಾರಿಗಳು ಸೇರಿದಂತೆ ನಾಲ್ವರು ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದರು. ಇದಾದ ಬಳಿಕ ಭದ್ರತಾ ಪಡೆಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಶಂಕಿತ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ.

    ಬಂಧಿತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಮಹಿಳೆಯರು ಎಂಬ ಕಾರಣಕ್ಕೆ ಮೃದುವಾಗಿ ವರ್ತಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಪ್ರತಿನಿತ್ಯ 3 ಸಾವಿರ ಕ್ಯೂಸೆಕ್‌ ನೀರು ಹರಿಸಿ – ಕರ್ನಾಟಕಕ್ಕೆ CWRC ಆದೇಶ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬರೋಬ್ಬರಿ 83 ಟಿಎಂಸಿ ನೀರಿಗೆ ಬೇಡಿಕೆ ಇಟ್ಟ ತಮಿಳುನಾಡು

    ಬರೋಬ್ಬರಿ 83 ಟಿಎಂಸಿ ನೀರಿಗೆ ಬೇಡಿಕೆ ಇಟ್ಟ ತಮಿಳುನಾಡು

    ನವದೆಹಲಿ: ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಸಭೆಯಲ್ಲಿ ತಮಿಳುನಾಡು (Tamil Nadu) ಬರೋಬ್ಬರಿ 83 ಟಿಎಂಸಿ ನೀರಿಗೆ ಬೇಡಿಕೆ ಇಟ್ಟಿದೆ.

    ಕರ್ನಾಟಕ ಮತ್ತು ತಮಿಳುನಾಡು ಪ್ರತಿನಿಧಿಗಳ ಜೊತೆ CWRC ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸುತ್ತಿದೆ. ಸೆ.13ರಂದು ಹದಿನೈದು ದಿನ ನಿತ್ಯ 5,000 ಕ್ಯೂಸೆಕ್ ಕಾವೇರು ನೀರು (Cauvery Water) ಹರಿಸುವಂತೆ ನೀಡಿದ ಆದೇಶ ಇಂದಿಗೆ ಅಂತ್ಯವಾಗುತ್ತಿರುವ ಹಿನ್ನೆಲೆ ಈ ಸಭೆ ಕರೆಯಲಾಗಿದ್ದು, ಸಭೆಯಲ್ಲಿ ತಮಿಳುನಾಡಿಗೆ ನೀರು ಹರಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ.

    ಈ ಚರ್ಚೆಯ ವೇಳೆ ಕಳೆದ ಜೂನ್‌ನಿಂದ ಸೆಪ್ಟೆಂಬರ್‌ವರೆಗೂ 123 ಟಿಎಂಸಿ ಹರಿಸಬೇಕಿತ್ತು. ಕರ್ನಾಟಕ (Karnataka) ಈವರೆಗೂ ಕೇವಲ 40 ಟಿಎಂಸಿ ನೀರು ಹರಿಸಿದೆ. ಹೀಗಾಗಿ ಬಾಕಿ 83 ಟಿಎಂಸಿ ನೀರು ಕೂಡಲೇ ಬಿಡುಗಡೆ ಮಾಡಬೇಕು ಎಂದು ತಮಿಳುನಾಡು ವಾದ ಮಂಡಿಸಿದೆ.  ಇದನ್ನೂ ಓದಿ: Bengaluru Bandh: ಬಂದೋಬಸ್ತ್‌ನಲ್ಲಿದ್ದ ಪೊಲೀಸರಿಗೆ ಕೊಟ್ಟ ಟಿಫನ್‍ನಲ್ಲಿ ಇಲಿ!

    ಸಮಿತಿ ಯಾವುದೇ ಕಾರಣಕ್ಕೂ ನೀರಿನ ಪ್ರಮಾಣವನ್ನು ಕಡಿಮೆ ಮಾಡಬಾರದು. ಅಕ್ಟೋಬರ್‌ 22 ಟಿಎಂಸಿ ನೀರನ್ನು ಸಹ ಕರ್ನಾಟಕ ಹರಿಸಬೇಕು. ರಾಜ್ಯಕ್ಕೆ ಹರಿಸಬೇಕಾದ ನೀರನ್ನು ಸಮಿತಿ ಕೊಡುವಂತೆ ಕರ್ನಾಟಕಕ್ಕೆ ಆದೇಶಿಸಬೇಕು ಎಂದು ತಮಿಳುನಾಡು ಬೇಡಿಕೆ ಇಟ್ಟಿದೆ.  ಎರಡೂ ರಾಜ್ಯಗಳಲ್ಲಿ ರೈತರ ಹೋರಾಟ ತೀವ್ರವಾಗುತ್ತಿರುವ ಹೊತ್ತಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿ ಹೈವೋಲ್ಟೇಜ್‌ ಸಭೆ ನಡೆಯುತ್ತಿದೆ.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಟೆರರಿಸ್ಟ್‌ಗಳು ಎಸ್ಕೇಪ್‌ ಆಗಲು ಪಾಕ್‌ ಸೇನೆ ನೆರವು – ಮೂವರು ಭಯೋತ್ಪಾದಕರ ಹೊಡೆದುರುಳಿಸಿದ ಭಾರತೀಯ ಸೇನೆ

    ಟೆರರಿಸ್ಟ್‌ಗಳು ಎಸ್ಕೇಪ್‌ ಆಗಲು ಪಾಕ್‌ ಸೇನೆ ನೆರವು – ಮೂವರು ಭಯೋತ್ಪಾದಕರ ಹೊಡೆದುರುಳಿಸಿದ ಭಾರತೀಯ ಸೇನೆ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu Kashmir) ಬಾರಾಮುಲ್ಲಾ ಜಿಲ್ಲೆಯಲ್ಲಿ ಗಡಿ ನಿಯಂತ್ರಣ ರೇಖೆ (LOC) ದಾಟಲು ಯತ್ನಿಸಿದ ಮೂವರು ಭಯೋತ್ಪಾದಕರನ್ನು ಶನಿವಾರ ಭದ್ರತಾ ಪಡೆಗಳು ಹೊಡೆದುರುಳಿಸಿವೆ. ಭಯೋತ್ಪಾದಕರು ತಪ್ಪಿಸಿಕೊಳ್ಳಲು ಪಾಕಿಸ್ತಾನಿ ಸೈನಿಕರು (Pakistan Soldiers) ನೆರವಿಗೆ ಯತ್ನಿಸಿದ್ದರು ಎಂದು ಭಾರತೀಯ ಸೇನೆ (Indian Army) ಹೇಳಿದೆ.

    ಉಗ್ರರ (Terrorists) ಒಳನುಸುಳುವಿಕೆ ಯತ್ನವನ್ನು ವಿಫಲಗೊಳಿಸಲು ಇಂಟೆಲ್ ಆಧಾರದ ಮೇಲೆ ಭಾರತೀಯ ಸೇನೆ ಮತ್ತು ಜಮ್ಮು-ಕಾಶ್ಮೀರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಪೀರ್ ಪಂಜಾಲ್ ಬ್ರಿಗೇಡ್‌ನ ಕಮಾಂಡರ್ ಬ್ರಿಗೇಡಿಯರ್ ಪಿಎಂಎಸ್ ಧಿಲ್ಲೋನ್ ತಿಳಿಸಿದ್ದಾರೆ. ಇದನ್ನೂ ಓದಿ: ಕಾಶ್ಮೀರದಲ್ಲಿ 3ನೇ ದಿನಕ್ಕೆ ಕಾಲಿಟ್ಟ ಸೇನಾ ಕಾರ್ಯಾಚರಣೆ – ಉಗ್ರರ ಹುಟ್ಟಡಗಿಸಲು ವಿಳಂಬವಾಗ್ತಿರುವುದ್ಯಾಕೆ?

    ಮೂವರು ಭಯೋತ್ಪಾದಕರು ಒಳನುಸುಳಲು ಪ್ರಯತ್ನಿಸಿದರು. ಮೊದಲು ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಲಾಯಿತು. ನಂತರ ಮೂರನೇ ಭಯೋತ್ಪಾದಕನನ್ನು ಹತ್ಯೆ ಮಾಡಲಾಯಿತು. ಆರಂಭದಲ್ಲಿ ಭಯೋತ್ಪಾದಕರು ತಪ್ಪಿಸಿಕೊಳ್ಳುವುದಕ್ಕೆ ನೆರವಾಗಲು ಪಾಕ್‌ ಸೈನಿಕರು ಮುಂದಾದರು. ಆದರೆ ಅವರ ಪ್ರಯತ್ನಿ ವಿಫಲವಾಯಿತು. ಅಷ್ಟರೊಳಗೆ ಭಯೋತ್ಪಾದಕರನ್ನು ಭಾರತೀಯ ಸೇನೆ ಹೊಡೆದುರುಳಿಸಿತು. ಭಯೋತ್ಪಾದಕರ ಮೃತದೇಹವನ್ನು ಪಡೆಯಲು ಎಲ್ಒಸಿ ಸಮೀಪದಲ್ಲಿ ಪಾಕ್‌ ಸೈನಿಕರು ಗುಂಡಿನ ದಾಳಿ ನಡೆಸಿದ್ದರು ಎಂದು ಸೇನೆ ತಿಳಿಸಿದೆ.

    ಭಯೋತ್ಪಾದಕರ ಬಳಿಯಿದ್ದ ಎರಡು ಎಕೆ ರೈಫಲ್‌, ಒಂದು ಪಿಸ್ತೂಲ್, ಏಳು ಹ್ಯಾಂಡ್ ಗ್ರೆನೇಡ್‌, ಒಂದು ಸುಧಾರಿತ ಸ್ಫೋಟಕ ಸಾಧನ (ಐಇಡಿ), ಪಾಕಿಸ್ತಾನದ ಕರೆನ್ಸಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸೇನೆ ತಿಳಿಸಿದೆ. ಇದನ್ನೂ ಓದಿ: ಸೇಡು ತೀರಿಸಿಕೊಳ್ಳಲು ಮೊಮ್ಮಗಳನ್ನು ಸೇನೆಗೆ ಸೇರಿಸ್ತೀನಿ- ಆಶೀಶ್ ಢೋನ್‍ಚಕ್ ತಾಯಿ

    2021ರ ಫೆಬ್ರವರಿಯಲ್ಲಿ, ಗಡಿಗಳಲ್ಲಿ ಪರಸ್ಪರ ಶಾಂತಿ ಸಾಧಿಸುವ ಹಿತಾಸಕ್ತಿಯಿಂದ ಭಾರತ ಮತ್ತು ಪಾಕಿಸ್ತಾನದ ಸೇನೆಗಳು ಗಡಿ ನಿಯಂತ್ರಣ ರೇಖೆಯ (LoC) ಉದ್ದಕ್ಕೂ ಗುಂಡಿನ ದಾಳಿಯನ್ನು ನಿಲ್ಲಿಸಲು ಒಪ್ಪಿಕೊಂಡಿದ್ದವು. ಆದರೆ ಈಗ ಮತ್ತೆ ಅಶಾಂತಿ ವಾತಾವರಣ ಸೃಷ್ಟಿಯಾಗಿದೆ. ಅನಂತನಾಗ್ ಜಿಲ್ಲೆಯಲ್ಲಿ ನಡೆಯುತ್ತಿರುವ ಎನ್‌ಕೌಂಟರ್ ಶನಿವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಎನ್‌ಕೌಂಟರ್‌ನಲ್ಲಿ ನಾಲ್ವರು ಭದ್ರತಾ ಪಡೆ ಸಿಬ್ಬಂದಿ ಹುತಾತ್ಮರಾಗಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸೇನೆ, ಉಗ್ರರ ನಡುವೆ ಗುಂಡಿನ ಚಕಮಕಿ- ಇದುವರೆಗೆ ನಾಲ್ವರು ಯೋಧರು ಹುತಾತ್ಮ

    ಸೇನೆ, ಉಗ್ರರ ನಡುವೆ ಗುಂಡಿನ ಚಕಮಕಿ- ಇದುವರೆಗೆ ನಾಲ್ವರು ಯೋಧರು ಹುತಾತ್ಮ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಅನಂತನಾಗ್‍ನಲ್ಲಿ ಉಗ್ರರು ಹಾಗೂ ಸೇನಾ ಪಡೆಗಳ (Indian Army) ನಡುವೆ ಬುಧವಾರ ಆರಂಭಗೊಂಡಿರುವ ಗುಂಡಿನ ಚಕಮಕಿ ಇಂದು ಮುಂದುವರಿದಿದೆ. ದಾಳಿಯಲ್ಲಿ ಇಂದು ಯೋಧರೊಬ್ಬರು (Soldier) ಸಾವನ್ನಪ್ಪಿದ್ದಾರೆ. ಇಲ್ಲಿಯವರೆಗೂ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ ಎಂದು ತಿಳಿದು ಬಂದಿದೆ.

    ಬುಧವಾರ ನಡೆದ ಗುಂಡಿನ ಚಕಮಕಿಯಲ್ಲಿ ಕರ್ನಲ್ ಮನ್‍ಪ್ರೀತ್ ಸಿಂಗ್, ಮೇಜರ್ ಆಶಿಶ್ ಮತ್ತು ಡಿಎಸ್‍ಪಿ ಹುಮಾಯೂನ್ ಭಟ್ ಸೇರಿದಂತೆ ಮೂವರು ಅಧಿಕಾರಿಗಳು ಸಾವನ್ನಪ್ಪಿದ್ದರು. ಇಂದು ಮೃತಪಟ್ಟ ನಾಲ್ಕನೇ ಯೋಧನ ಗುರುತು ಇನ್ನೂ ಬಹಿರಂಗವಾಗಿಲ್ಲ ಎಂದು ಸೇನಾ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧ ಮುಂದುವರಿದ ಎನ್‌ಕೌಂಟರ್‌ – ಓರ್ವ ಯೋಧ ನಾಪತ್ತೆ

    ಅನಂತನಾಗ್‍ನ ಕೋಕರ್‌ನಾಗ್‌ ಅರಣ್ಯ ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರಿದಿವೆ. ಭಯೋತ್ಪಾದಕರ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಶುಕ್ರವಾರ ಬೆಳಗ್ಗೆ ಅರಣ್ಯ ಪ್ರದೇಶದಿಂದ ಭಾರೀ ಸ್ಫೋಟಗಳು ಮತ್ತು ಭಾರೀ ಗುಂಡಿನ ಸದ್ದು ಕೇಳಿಬಂದಿತ್ತು. ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಈ ಪ್ರದೇಶದಲ್ಲಿ ನಿರ್ದಿಷ್ಟವಾಗಿ ಎಷ್ಟು ಜನ ಉಗ್ರರು ಅಡಗಿದ್ದಾರೆ ಎಂಬ ಬಗ್ಗೆ ನಿಖರ ಮಾಹಿತಿ ಇಲ್ಲ. ಅವರ ಪತ್ತೆಗಾಗಿ ಡ್ರೋನ್‍ಗಳನ್ನು ಬಳಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟದ ಸೂತ್ರಧಾರ ದೆಹಲಿಯಲ್ಲಿ ಅರೆಸ್ಟ್‌

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]