ನವದೆಹಲಿ: ನಮ್ಮ ಹೆಮ್ಮೆಯ ಸೈನಿಕರು (Indian) ಮತ್ತೊಮ್ಮೆ ತಮ್ಮ ಶಕ್ತಿ ಏನೆಂದು ತೋರಿಸಿದ್ದಾರೆ. ಭಾರತೀಯ ಸೈನಿಕರು ಮತ್ತು ಚೀನಾ ಸೈನಿಕರ (China Soldiers) ನಡುವೆ ನಡೆದ ಹಗ್ಗಜಗ್ಗಾಟದಲ್ಲಿ (Tough of War) ನಮ್ಮವರೇ ಗೆದ್ದು ಬೀಗಿದ್ದಾರೆ.
ಸುಡಾನ್‌ನಲ್ಲಿ (Sudan) ನಡೆದ ಹಗ್ಗಜಗ್ಗಾಟದಲ್ಲಿ ಭಾರತದ ಸೈನಿಕರು ಪಟ್ಟು ಬಿಡದೇ ಚೀನಾ ವಿರುದ್ಧ ವಿಜಯಶಾಲಿಗಳಾಗಿದ್ದು, ಸಂಭ್ರಮಿಸಿದ್ದಾರೆ. ಇದಕ್ಕೆ ಸಂಬಂಧಿಸಿದ 49 ಸೆಕೆಂಡಿನ ವಿಡಿಯೋ ಈಗ ಸಖತ್ ವೈರಲ್ ಆಗಿದೆ. ಇದನ್ನೂ ಓದಿ: ವರ್ತೆ ಪಂಜುರ್ಲಿ ಅಭಯ ನಿಜವಾಯ್ತು- ಕೊಲೆ ಆರೋಪಿ ನ್ಯಾಯಾಲಯಕ್ಕೆ ಶರಣು!
#WATCH | Indian troops won a Tug of War that took place between them and Chinese troops during deployment in Sudan, Africa under a UN Peacekeeping mission: Army officials
ನವದೆಹಲಿ: ಭಾರತೀಯ ವಾಯುಪಡೆ (IAF) ಮೊದಲ ಬಾರಿಗೆ ಪೂರ್ವ ವಲಯದ ಅಡ್ವಾನ್ಸ್ಡ್ ಲ್ಯಾಂಡಿಂಗ್ ಗ್ರೌಂಡ್‍ನಲ್ಲಿ (Advanced landing ground ) ಎನ್‍ವಿಜಿ ಬಳಸಿ (ರಾತ್ರಿ ದೃಷ್ಟಿ ಕನ್ನಡಕ) ವಿಮಾನವನ್ನು ಯಶಸ್ವಿಯಾಗಿ ಇಳಿಸಿದೆ.
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ವಾಯುಪಡೆ, ಐಎಎಫ್ ಸಿ-130ಜೆ ವಿಮಾನವನ್ನು ಪೂರ್ವ ವಲಯದಲ್ಲಿರುವ ಅಡ್ವಾನ್ಸ್ಡ್ ಲ್ಯಾಂಡಿಂಗ್ ಗ್ರೌಂಡ್‍ನಲ್ಲಿ ನೈಟ್ ವಿಷನ್ ಗಾಗಲ್ಸ್ (Night Vision Goggles) ಸಹಾಯದಿಂದ ಲ್ಯಾಂಡ್ ಮಾಡಲಾಗಿದೆ ಎಂದು ಮಾಹಿತಿ ಹಂಚಿಕೊಂಡಿದೆ. ಅಲ್ಲದೇ ಎಕ್ಸ್‌ನಲ್ಲಿ ವಿಮಾನ ಲ್ಯಾಂಡಿಂಗ್ ಆಗುವ ವೀಡಿಯೋವನ್ನು ಸಹ ಹಂಚಿಕೊಳ್ಳಲಾಗಿದ್ದು, ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿರುವುದನ್ನು ಗಮನಿಸಬಹುದಾಗಿದೆ. ಇದರೊಂದಿಗೆ ಕಿಟಕಿಯಿಂದ ಸಹ ಎನ್‍ವಿಜಿ ಬಳಸಿ ಒಂದು ದೃಶ್ಯವನ್ನು ಸೆರೆ ಹಿಡಿದು ಹಂಚಿಕೊಳ್ಳಲಾಗಿದೆ. ಇದನ್ನೂ ಓದಿ: ವಿಚಾರಣೆಗೆ ಬಾರದ ಭವಾನಿ ರೇವಣ್ಣ- ಸರ್ಕಾರದ ವಿರುದ್ಧ ಜೆಡಿಎಸ್ MLC ಕಿಡಿ
Achieving another significant milestone, an #IAF C-130J aircraft carried out a successful Night Vision Goggles aided landing at an Advanced Landing Ground in the Eastern sector.#IAF continues to expand capabilities, reinforcing commitment to safeguard nation’s sovereignty by… pic.twitter.com/nMAbDnWPhR
ಪೂರ್ವ ವಲಯವು ಭಾರತದ ಈಶಾನ್ಯ ರಾಜ್ಯಗಳಾದ ಒಡಿಶಾ, ಜಾರ್ಖಂಡ್, ಸಿಕ್ಕಿಂ, ಪಶ್ಚಿಮ ಬಂಗಾಳ ಮತ್ತು ಬಿಹಾರದ ಭಾಗಗಳನ್ನು ಒಳಗೊಂಡಿದೆ. ಇದು ಚೀನಾ, ನೇಪಾಳ, ಭೂತಾನ್, ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶದೊಂದಿಗೆ 6300 ಕಿಮೀ ಉದ್ದದ ಅಂತರಾಷ್ಟ್ರೀಯ ಗಡಿಯ ರಕ್ಷಣೆಯ ಹೊಣೆ ಹೊತ್ತಿದೆ.
ಎನ್‍ವಿಜಿ ತಂತ್ರಜ್ಞಾನ ಬಳಸಿಕೊಂಡು, ವಾಯುಪಡೆ ಈಗ ಕಡಿಮೆ ಬೆಳಕಿರುವ ಸಮಯದಲ್ಲೂ ಸುರಕ್ಷಿತ ಮತ್ತು ಹೆಚ್ಚು ಪರಿಣಾಮಕಾರಿ ಕಾರ್ಯಾಚರಣೆಗಳನ್ನು ನಡೆಸಬಹುದು. ಇದು ರಾತ್ರಿ ವೇಳೆಯ ಕಾರ್ಯಾಚರಣೆಗಳನ್ನು ಪರಿಣಾಮಕಾರಿಯಾಗಿ ನಡೆಸಲು ಸಹಕಾರಿಯಾಗಲಿದೆ.
ಈ ವರ್ಷದ ಆರಂಭದಲ್ಲಿ, ಐಎಎಫ್ ಕಾರ್ಗಿಲ್ ಏರ್‌ಸ್ಟ್ರಿಪ್‌ನಲ್ಲಿ ಇದೇ ವಿಮಾನ ರಾತ್ರಿ ವೇಳೆ ಲ್ಯಾಂಡಿಂಗ್‍ನ್ನು ಯಶಸ್ವಿಯಾಗಿ ನಡೆಸಿತ್ತು. ಇದು ಈ ಏರ್‌ಸ್ಟ್ರಿಪ್‌ನಲ್ಲಿ ರಾತ್ರಿ ವೇಳೆಯ ಕಾರ್ಯಾಚರಣೆ ಮೊದಲಾಗಿತ್ತು. ಇನ್ನೂ ಕಾರ್ಗಿಲ್, ಶ್ರೀನಗರ ಮತ್ತು ಜಮ್ಮು ನಡುವಿನ ನಾಗರಿಕ ಸಾರಿಗೆಗಾಗಿ, ವಿಶೇಷವಾಗಿ ತೀವ್ರ ಚಳಿಗಾಲದಲ್ಲಿ ವಿಮಾನ ಬಳಕೆ ಮಾಡಲಾಗುತ್ತದೆ. ಆದರೂ ಇತ್ತೀಚಿನವರೆಗೆ ಕಾರ್ಗಿಲ್ ಏರ್‌ಸ್ಟ್ರಿಪ್‌ನಲ್ಲಿ ರಾತ್ರಿ ವಿಮಾನ ಇಳಿಸುವ ವ್ಯವಸ್ಥೆ ಇರಲಿಲ್ಲ. ಇದನ್ನೂ ಓದಿ: ಪೊಲೀಸರಿಗಾಗಿ ನಾನು, ನನ್ನ ಪೋಷಕರು, ಹೆಂಡತಿ ಕಾಯುತ್ತಿದ್ದೇವೆ: ಕೇಜ್ರಿವಾಲ್ ಪೋಸ್ಟ್
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಕುಲ್ಗಾಮ್‍ನ ರೆಡ್ವಾನಿ ಪಯೀನ್ ಪ್ರದೇಶದಲ್ಲಿ ಭದ್ರತಾ ಪಡೆಗಳು (Security Forces) ನಡೆಸಿದ ಎನ್‍ಕೌಂಟರ್‌ನಲ್ಲಿ ಇಬ್ಬರು ಉಗ್ರರು ಬಲಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
— Kashmir Zone Police (@KashmirPolice) May 7, 2024
ಉಗ್ರರ ಶವವನ್ನು ವಶಪಡಿಸಿಕೊಳ್ಳಲಾಗಿದ್ದು, ಅವರ ಗುರುತು ಇನ್ನೂ ಪ್ತತೆಯಾಗಿಲ್ಲ. ಮೃತ ಉಗ್ರರ ಗುರುತು ಪತ್ತೆಹಚ್ಚುವ ಕಾರ್ಯನಡೆಯುತ್ತಿದೆ. ಅಲ್ಲದೇ ಉಗ್ರರ ಅಡಗುದಾಣದಲ್ಲಿ ಸೇನೆ ಕಾರ್ಯಾಚರಣೆ ಮುಂದುವರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಸೈನಿಕರ ಮೇಲೆ ದಾಳಿ – ಇಬ್ಬರು ಪಾಕ್ ಉಗ್ರರ ತಲೆಗೆ 20 ಲಕ್ಷ ಬಹುಮಾನ ಘೋಷಿಸಿದ IAF
ಮೇ 4 ರಂದು ಜಮ್ಮು ಮತ್ತು ಕಾಶ್ಮೀರದ ಪೂಂಚ್ನಲ್ಲಿ ಭಾರತೀಯ ವಾಯುಪಡೆಯ (Indian Air Force) ವಾಹನದ ಮೇಲೆ ಉಗ್ರರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಓರ್ವ ಯೋಧ ಸಾವನ್ನಪ್ಪಿ, ನಾಲ್ವರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದರು. ಇದಾದ ಬಳಿಕ ಈ ಭಾಗಗಳಲ್ಲಿ ಸೇನೆ, ಉಗ್ರರ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಲಾಗಿತ್ತು.
ಶ್ರೀನಗರ: ಕಾಶ್ಮೀರದ ಪೂಂಚ್ನಲ್ಲಿ ಭಾರತೀಯ ವಾಯುಪಡೆಯ (IAF) ಬೆಂಗಾವಲು ವಾಹನದ ಮೇಲೆ ದಾಳಿ ನಡೆಸಿದ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆಗಿಳಿದ ಸೇನೆ (Indian Army) ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ ಎಂದು ವರದಿಯಾಗಿದೆ.
ಭದ್ರತಾ ಪಡೆಗಳು ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪೂಂಚ್ (Poonch) ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದ ಶೋಧ ಕಾರ್ಯಾಚರಣೆ ನಡೆಸುತ್ತಿವೆ. ಸೇನೆಯು ಹೆಲಿಕಾಪ್ಟರ್ ಬಳಸಿ ದಾಳಿ ನಡೆದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವೈಮಾನಿಕ ಕಣ್ಗಾವಲು ಕೂಡ ನಡೆಸಿದೆ. ಸ್ಥಳಕ್ಕೆ ಸೇನೆಯ ಅಧಿಕಾರಿಗಳು, ಗುಪ್ತಚರ ಸಂಸ್ಥೆ ಅಧಿಕಾರಿಗಳು ಹಾಗೂ ಜಮ್ಮುವಿನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಆನಂದ್ ಜೈನ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಕಾಶ್ಮೀರದ ಪೂಂಚ್‌ನಲ್ಲಿ ವಾಯು ಸೇನೆಯ ಬೆಂಗಾವಲು ವಾಹನದ ಮೇಲೆ ಉಗ್ರರ ದಾಳಿ – ಓರ್ವ ಯೋಧ ಹುತಾತ್ಮ
ಶಹಸಿತಾರ್ ಬಳಿ ಶನಿವಾರ ಸಂಜೆ ನಡೆದ ದಾಳಿಯಲ್ಲಿ ಐವರು ಐಎಎಫ್ ಸಿಬ್ಬಂದಿ ಗಾಯಗೊಂಡು, ಒಬ್ಬರು ಮೃತಪಟ್ಟಿದ್ದರು. ದಾಳಿ ನಡೆದ ಬಳಿಕ ಉಗ್ರರು ಸಮೀಪದ ಅರಣ್ಯಕ್ಕೆ ಪರಾರಿಯಾಗಿದ್ದರು. ದಾಳಿಗೆ ಉಗ್ರರು ಎಕೆ ಅಸಾಲ್ಟ್ ರೈಫಲ್, ಅಮೆರಿಕ ನಿರ್ಮಿತ ಎಂ4 ಕಾರ್ಬೈನ್ ಮತ್ತು ಸ್ಟೀಲ್ ಬುಲೆಟ್‍ಗಳನ್ನು ಬಳಸಿದ್ದಾರೆ. ಉಗ್ರರಿಗಾಗಿ ಸೇನೆ ಶೋಧ ಕಾರ್ಯ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ (Jammu Kashmir) ಲೋಕಸಭಾ ಚುನಾವಣೆಯ (Lok Sabha Election) ಸಮಯದಲ್ಲಿ ಸಂಭವಿಸಬಹುದಾಗಿದ್ದ ಭಾರೀ ವಿಧ್ವಂಸಕ ಕೃತ್ಯವನ್ನು ಭದ್ರತಾ ಪಡೆ ವಿಫಲಗೊಳಿಸಿದೆ.
ಭಾನುವಾರ ಭಾರತೀಯ ಸೇನೆಯು (Indian Army) ಮತ್ತು ಜಮ್ಮು ಮತ್ತು ಕಾಶ್ಮೀರ ಪೋಲಿಸರು (Jammu Kashmir Police) ಜಂಟಿ ಕಾರ್ಯಾಚರಣೆ ನಡೆಸಿ ಪೂಂಚ್ ಜಿಲ್ಲೆಯ ಹರಿ ಬುದ್ಧ ನಗರದಲ್ಲಿ ಉಗ್ರರ ಕೃತ್ಯಕ್ಕೆ ಸಹಕಾರ ನೀಡುತ್ತಿದ್ದ ಹೆಡ್ ಮಾಸ್ತರ್‌ನನ್ನು (Head Master) ಬಂಧಿಸಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ 5 ಲೋಕಸಭಾ ಕ್ಷೇತ್ರಗಳಿಗೆ 5 ಹಂತದಲ್ಲಿ ಚುನಾವಣೆ ನಡೆಯಲಿದೆ. ಉದಂಪುರ್‌ನಲ್ಲಿ ಏ.19 ರಂದು ನಡೆದಿದ್ದರೆ ಏ.26 ರಂದು ಜಮ್ಮು, ಮೇ 7 ರಂದು ಅನಂತನಾಗ್-ರಾಜೌರಿ, ಮೇ 13 ರಂದು ಶ್ರೀನಗರ, ಮೇ 20 ರಂದು ಬಾರಾಮುಲ್ಲಾದಲ್ಲಿ ಚುನಾವಣೆ ನಡೆಯಲಿದೆ.
ಶ್ರೀನಗರ: ಶ್ರೀನಗರದಲ್ಲಿ (Srinagar) ನಾಲ್ವರು ಜೈಶ್-ಎ-ಮೊಹಮ್ಮದ್ ಭಯೋತ್ಪಾದಕರನ್ನು ಭದ್ರತಾ ಪಡೆ (Security forces) ಬಂಧಿಸಿದೆ.
ನಿರ್ದಿಷ್ಟ ಮಾಹಿತಿಯ ಮೇರೆಗೆ ನಿಷೇಧಿತ ಉಗ್ರ ಸಂಘಟನೆಯೊಂದಿಗೆ ಸಂಪರ್ಕದಲ್ಲಿರುವ ನಾಲ್ವರು ಬರುತ್ತಿದ್ದಾರೆ ಎಂಬ ಮಾಹಿತಿ ಇತ್ತು. ಇದರಿಂದ ಶನಿವಾರ ಸಂಜೆ ನಗರದ ಹೊರವಲಯದಲ್ಲಿರುವ ನೌಗಾಮ್‍ನ ಕೆನಿಹಮಾ ಪ್ರದೇಶದಲ್ಲಿ ಚೆಕ್‍ಪೋಸ್ಟ್ ಸ್ಥಾಪಿಸಲಾಗಿತ್ತು. ತಪಾಸಣೆಯ ಸಮಯದಲ್ಲಿ, ಭದ್ರತಾ ಪಡೆಗಳು ವಾಹನವನ್ನು ತಡೆದು ನಾಲ್ವರನ್ನು ಬಂಧಿಸಲಾಯಿತು ಎಂದು ಸೇನೆಯ (Indian Army) ವಕ್ತಾರರು ತಿಳಿಸಿದ್ದಾರೆ. ಇದನ್ನೂ ಓದಿ: ರಷ್ಯಾದಲ್ಲಿ ಉಗ್ರರ ಅಟ್ಟಹಾಸ- 70ಕ್ಕೂ ಹೆಚ್ಚು ಮಂದಿ ದುರ್ಮರಣ
Srinagar Police alongwith SF’s busted JeM #terror module, 04 #terrorist associates arrested & huge cache of Arms/Ammunition recovered from their possession. FIR registered, #Investigation set in progress. pic.twitter.com/D3au5eFw7k
ಬಂಧಿತರನ್ನು ಮೊಹಮ್ಮದ್ ಯಾಸೀನ್ ಭಟ್, ಶೆರಾಜ್ ಅಹ್ಮದ್ ರಾಥರ್, ಗುಲಾಮ್ ಹಸನ್ ಖಾಂಡೆ ಹಾಗೂ ಇಮ್ತಿಯಾಜ್ ಅಹ್ಮದ್ ಭಟ್ ಎಂದು ಗುರುತಿಸಿದ್ದಾರೆ. ಬಂಧಿತರು ಲಕ್‍ನಂಬಲ್ ಜಫ್ರಾನ್ ಕಾಲೋನಿ ಪಂಥಾ ಚೌಕ್ ಮತ್ತು ಫ್ರೆಸ್ಟಾಬಲ್ ಪಾಂಪೋರ್‌ನ ನಿವಾಸಿಗಳು ಎಂಬುದು ತಿಳಿದು ಬಂದಿದೆ.
ಉಗ್ರರಿಂದ ಮೂರು ಮ್ಯಾಗಜೀನ್‍ಗಳು, ಎಕೆ 56 ರೈಫಲ್, 7.62, 39 ಎಂಎಂನ 75 ಸುತ್ತುಗಳು, ಎರಡು ಮ್ಯಾಗಜೀನ್‍ಗಳಿರುವ ಗ್ಲೋಕ್ ಪಿಸ್ತೂಲ್, 9 ಎಂಎಂನ 26 ಸುತ್ತುಗಳು ಮತ್ತು ಆರು ಚೈನೀಸ್ ಗ್ರೆನೇಡ್‍ಗಳು ಸೇರಿದಂತೆ ಅಪಾರ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯ ವೇಳೆ, ಬಂಧಿತ ವ್ಯಕ್ತಿಗಳು ನಿಷೇಧಿತ ಭಯೋತ್ಪಾದಕ ಸಂಘಟನೆ ಜೆಎಂ ಜೊತೆ ನಂಟು ಹೊಂದಿರುವುದು ತಿಳಿದು ಬಂದಿದೆ.
ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆ, ಶಸ್ತ್ರಾಸ್ತ್ರ ಕಾಯ್ದೆ ಮತ್ತು ಐಪಿಸಿಯ ವಿವಿಧ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಚೆನ್ನೈ ಆಸ್ಪತ್ರೆಯಿಂದ ಹೆಚ್‌ಡಿಕೆ ಡಿಸ್ಚಾರ್ಜ್ – ಇಂದು ಬೆಂಗಳೂರಿಗೆ
ನವದೆಹಲಿ: ಭಾರತೀಯ ಸೇನೆ (Indian Army) ಮತ್ತು ಕೋಸ್ಟ್ ಗಾರ್ಡ್‍ಗಾಗಿ 34 ಸುಧಾರಿತ ಲಘು ಹೆಲಿಕಾಪ್ಟರ್ ಮತ್ತು ಅದಕ್ಕೆ ಸಂಬಂಧಿಸಿದ ಸಲಕರಣೆಗಳಿಗಾಗಿ ರಕ್ಷಣಾ ಸಚಿವಾಲಯವು ಬೆಂಗಳೂರಿನ (Bengaluru) ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‍ನೊಂದಿಗೆ 8073.17 ಕೋಟಿ ರೂ. ಮೌಲ್ಯದ ಎರಡು ಒಪ್ಪಂದಗಳಿಗೆ ಸಹಿ ಹಾಕಿದೆ.
34 ಧ್ರುವ ಎಮ್‍ಕೆ ಹೆಲಿಕಾಪ್ಟರ್‌ಗಳಲ್ಲಿ ಸೇನೆಯು 25 ಮತ್ತು ಕೋಸ್ಟ್ ಗಾರ್ಡ್ 9ನ್ನು ಪಡೆಯಲಿದೆ ಎಂದು ಸಚಿವಾಲಯ ತಿಳಿಸಿದೆ. ಭದ್ರತಾ ಕ್ಯಾಬಿನೆಟ್ ಸಮಿತಿ (ಸಿಸಿಎಸ್) ಕಳೆದ ವಾರ ಎರಡು ಖರೀದಿ ಯೋಜನೆಗಳಿಗೆ ಅನುಮತಿ ನೀಡಿತ್ತು.
ALH Mk III MR ಹೆಲಿಕಾಪ್ಟರ್‌ನ್ನು ಸೈನಿಕರನ್ನು ಕರೆದೊಯ್ಯಲು, ಹುಡುಕಾಟ ಮತ್ತು ಅಪಘಾತದ ವೇಳೆ ರಕ್ಷಣಾ ಕಾರ್ಯಾಚರಣೆಗಾಗಿ ವಿನ್ಯಾಸಗೊಳಿಸಲಾಗಿದೆ.
ಈ ಹೆಲಿಕಾಪ್ಟರ್, ಸಿಯಾಚಿನ್ ಗ್ಲೇಸಿಯರ್ ಮತ್ತು ಲಡಾಖ್‍ನಂತಹ ಎತ್ತರದ ಪ್ರದೇಶಗಳಲ್ಲಿ ತನ್ನ ಕಾರ್ಯಕ್ಷಮತೆಯನ್ನು ಸಾಬೀತುಪಡಿಸಿದೆ. ಸಮುದ್ರ ಮತ್ತು ಭೂಮಿಯ ಮೇಲಿನ ಪ್ರತಿಕೂಲ ವಾತಾವರಣದ ಪರಿಸ್ಥಿತಿಗಳಲ್ಲಿಯೂ ಇದು ತನ್ನ ಸಾಮಥ್ರ್ಯವನ್ನು ಸಾಬೀತುಪಡಿಸಿದೆ.
ನವದೆಹಲಿ: ಇತ್ತೀಚೆಗೆ ಭಾರತೀಯ ಸೇನೆಗೆ ಎಂಹೆಚ್ 60ಆರ್ ಸೀಹಾಕ್ (MH 60R Seahawk) ಹೆಲಿಕಾಪ್ಟರ್ ಸೇರ್ಪಡೆಗೊಂಡಿದ್ದು, ಕೊಚ್ಚಿಯ ನೌಕಾ ನೆಲೆಯಲ್ಲಿ ನಿಯೋಜಿಸಲು ಸಿದ್ಧತೆ ನಡೆದಿದೆ. ಈ ಬೆನ್ನಲ್ಲೇ ಮತ್ತೊಂದು ಮಹತ್ವದ ಯೋಜನೆಗೆ ಕೇಂದ್ರ ಸಂಪುಟ ಒಪ್ಪಿಗೆ ಸೂಚಿಸಿದ್ದು, ಭಾರತೀಯ ಸೇನೆಗೆ ಮತ್ತಷ್ಟು ಬಲ ಸಿಕ್ಕಂತಾಗಿದೆ.
ಭಾರತೀಯ ಸೇನೆ ಮತ್ತು ಭಾರತೀಯ ಕೋಸ್ಟ್ ಗಾರ್ಡ್‌ಗಾಗಿ 34 ಹೊಸ ಸುಧಾರಿತ ಲಘು ಹೆಲಿಕಾಪ್ಟರ್ (ALH) ಧ್ರುವ್ ಹೆಲಿಕಾಪ್ಟರ್‌ಗಳನ್ನು (ALH Dhruv Helicopters) ಖರೀದಿಸುವ ಪ್ರಸ್ತಾವನೆಗೆ ಕ್ಯಾಬಿನೆಟ್ ಒಪ್ಪಿಗೆ ಸೂಚಿಸಿದೆ. ಇದರೊಂದಿಗೆ ಪದಾತಿ ದಳದ ಯುದ್ಧ ವಾಹನಗಳನ್ನು (ಟ್ಯಾಂಕರ್ ವಾಹನ) ಮೇಲ್ದರ್ಜೆಗೇರಿಸುವ ಯೋಜನೆಗಳಿಗೂ ಸರ್ಕಾರ ಅನುಮತಿ ನೀಡಿದೆ.
34 ಹೆಲಿಕಾಪ್ಟರ್‌ಗಳ ಪೈಕಿ ಭಾರತೀಯ ಸೇನೆಯು (Indian Army) 25 ಹೆಲಿಕಾಪ್ಟರ್‌ಗಳನ್ನು ಪಡೆಯಲಿದ್ದು, 9 ಹೆಲಿಕಾಪ್ಟರ್‌ಗಳನ್ನು ಭಾರತೀಯ ಕೋಸ್ಟ್ ಗಾರ್ಡ್‌ಗೆ ನೀಡಲಾಗುತ್ತದೆ. ಈ ಹೆಲಿಕಾಪ್ಟರ್‌ಗಳನ್ನು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಸಂಸ್ಥೆ (HAL) ಸ್ಥಳೀಯವಾಗಿ ಉತ್ಪಾದಿಸಲಿದೆ ಎಂದು ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ನೌಕಾಪಡೆಗೆ ಎಂಹೆಚ್ 60ಆರ್ ಸೀಹಾಕ್ ಹೆಲಿಕಾಪ್ಟರ್ ನಿಯೋಜನೆಗೆ ಸಿದ್ಧತೆ – ಭಾರತಕ್ಕೆ ಭೀಮ ಬಲ
ಭಾರತೀಯ ಕೋಸ್ಟ್‌ಗಾರ್ಡ್‌ನಲ್ಲಿರುವ (Indian Coast Guard) ಸುಧಾರಿತ ಲಘು ಹೆಲಿಕಾಪ್ಟರ್‌ಗಳು ಹಳೆಯದ್ದಾದ ಕಾರಣ ಅವುಗಳನ್ನು ಬದಲಾಯಿಸಲು ಇಲಾಖೆ ಮುಂದಾಗಿದೆ. ಅಲ್ಲದೇ ಬಹುನಿಯೋಜಿತ ಕಾರ್ಯಗಳಿಗೆ ಭಾರತೀಯ ಸೇನೆಗೆ ಹೆಲಿಕಾಪ್ಟರ್‌ಗಳ ಅಗತ್ಯವಿದೆ. ಆದ್ದರಿಂದ ಸರ್ಕಾರ 34 ಹೆಲಿಕಾಪ್ಟರ್‌ಗಳ ಖರೀದಿಗೆ ಒಪ್ಪಿಗೆ ಸೂಚಿಸಿರುವುದಾಗಿ ಉನ್ನತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ನರೇಂದ್ರ ಮೋದಿ ಮುಂದಿನ 10 ವರ್ಷಗಳ ಕಾಲ ಪ್ರಧಾನಿಯಾಗಿ ಆಡಳಿತ ಮಾಡ್ತಾರೆ: ಅಮಿತ್ ಶಾ
ಈ ಯೋಜನೆಗೆ ಸುಮಾರು 8,000 ಕೋಟಿ ರೂ. ವೆಚ್ಚ ತಗುಲಲಿದೆ. ಸ್ಥಳಿಯವಾಗಿಯೇ ಹೆಲಿಕಾಪ್ಟರ್‌ಗಳನ್ನು ನಿರ್ಮಿಸುವುದರಿಂದ ಸ್ವದೇಶಿ ಉತ್ಪನ್ನಗಳಿಗೆ ಉತ್ತೇಜನವೂ ಸಿಗಲಿದೆ. ಸುಧಾರಿತ ಲಘು ಹೆಲಿಕಾಪ್ಟರ್ (ಧ್ರುವ್) 5.5 ಟನ್‌ಗಳಷ್ಟು ತೂಕ ಹೊಂದಿದೆ. ಸ್ಥಳೀಯವಾಗಿ ಈಗಿನ ಸೇನಾ ಕಾರ್ಯಾಚರಣೆಗಳಿಗೆ ಬಳಸಿಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅದು 2019, ಮಾರ್ಚ್ 1 ರ ದಿನ. ಪಾಕಿಸ್ತಾನ (Pakistan) ಸೆರೆ ಹಿಡಿದಿದ್ದ ಭಾರತ ಮಾತೆಯ ವೀರಪುತ್ರನೊಬ್ಬ ಸುರಕ್ಷಿತವಾಗಿ ವಾಪಸ್ ಆಗಲೆಂದು ಕಾದಿದ್ದ ಕೋಟ್ಯಂತರ ಭಾರತೀಯರ ಕನಸು ನನಸಾದ ದಿನ. ಯೋಧ ಅಟ್ಟಾರಿ-ವಾಘಾ ಗಡಿಯಲ್ಲಿ ಕಾಲಿಟ್ಟಾಗ ಭಾರತೀಯರ ಕಣ್ಣಲ್ಲಿ ಆನಂದಭಾಷ್ಪ, ‘ಭಾರತ್ ಮಾತಾ ಕೀ ಜೈ’ ಜಯಘೋಷ. ದೇಶದ ಜನರಿಗೆ ಅದು ಸಂಭ್ರಮದ ಕ್ಷಣವಾಗಿತ್ತು. ದೇಶಕ್ಕೆ ದೇಶವೇ ತುದಿಗಾಲಲ್ಲಿ ಕಾದಿದ್ದ ಆ ಹೆಮ್ಮೆಯ ಪುತ್ರ ಬೇರಾರು ಅಲ್ಲ. ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್.
ಭಾರತದ ವಾಯುವಲಯ ಪ್ರವೇಶಿಸಿದ್ದ ಪಾಕಿಸ್ತಾನದ ಯುದ್ಧ ವಿಮಾನವನ್ನು ಭಾರತದ ಮಿಗ್ 21 ಯುದ್ಧ ವಿಮಾನ ಹೊಡೆದುರುಳಿಸಿತ್ತು. 2019 ರ ಫೆ.27 ರಂದು ಅಭಿನಂದನ್ ವರ್ಧಮಾನ್ (Abhinandan Varthaman) ಪಾಕಿಸ್ತಾನದ ಜೆಟ್ ಅನ್ನು ಹೊಡೆದುರುಳಿಸಿದ್ದರು. ಈ ವೇಳೆ ಅವರು ಪಾಕ್ ಸೇನೆಯಿಂದ ಸೆರೆಯಾಗಿದ್ದರು. ಪರಿಣಾಮವಾಗಿ ಎರಡು ದೇಶಗಳ ನಡುವೆ ಯುದ್ಧದ ಉದ್ವಿಗ್ನತೆ ಸೃಷ್ಟಿಯಾಗಿತ್ತು. ಕೊನೆಗೂ ಭಾರತ ತನ್ನ ವಿಂಗ್ ಕಮಾಂಡರ್‌ನನ್ನು ಸುರಕ್ಷಿತವಾಗಿ ವಾಪಸ್ ಕರೆಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಭಾರತದ ಆ ರಾಜತಾಂತ್ರಿಕ ಗೆಲುವಿಗೆ ಇಂದಿಗೆ 5 ವರ್ಷ.
ಪುಲ್ವಾಮ ದಾಳಿ ಕರಾಳತೆ!
2019 ರ ಫೆಬ್ರವರಿ 14 ರಂದು ಕಾಶ್ಮೀರದ ಪುಲ್ವಾಮದಲ್ಲಿ (Pulwama Attack) ಸಿಆರ್‌ಪಿಎಫ್ ಯೋಧರ ವಾಹನವೊಂದರ ಮೇಲೆ ಉಗ್ರರು ದಾಳಿ ನಡೆಸಿದ್ದರು. ಈ ವೇಳೆ ಅದರಲ್ಲಿದ್ದ 40 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಈ ದುರಂತಕ್ಕೆ ಇಡೀ ದೇಶ ಮರುಗಿತ್ತು. ಪುಲ್ವಾಮ ದಾಳಿಗೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಯಿತು. ಭಾರತದ ಇತಿಹಾಸದಲ್ಲಿ ಪುಲ್ವಾಮ ದುರಂತ ಕರಾಳ ದಿನವಾಗಿ ಉಳಿದಿದೆ.
ಭಾರತದಿಂದ ಪ್ರತಿ ದಾಳಿ
ಪುಲ್ವಾಮ ದಾಳಿಗೆ ಪ್ರತಿ ದಾಳಿಯಾಗಿ ಭಾರತ, ಪಾಕ್ ಆಕ್ರಮಿತ ಕಾಶ್ಮೀರದ ಭಾಗವಾದ ಬಾಲಾಕೋಟ್‌ನಲ್ಲಿದ್ದ ಉಗ್ರರ ತರಬೇತಿ ಶಿಬಿರದ ಮೇಲೆ ವಾಯುಸೇನೆ ಬಾಂಬ್ ದಾಳಿ ನಡೆಸಿತು. ಅಲ್ಲಿನ ತರಬೇತಿ ಕೇಂದ್ರ ಮತ್ತು ಅದರೊಳಗಿದ್ದ ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿತ್ತು.
ಪಾಕ್ ಸೇನೆಗೆ ಸಿಕ್ಕಿಬಿದ್ದ ವರ್ಧಮಾನ್
ಬಾಲಾಕೋಟ್ ಮೇಲೆ ಏರ್‌ಸ್ಟ್ರೈಕ್ (Balakot Airstrikes) ಮಾಡಿದ್ದಕ್ಕೆ ಪ್ರತಿಯಾಗಿ ಪಾಕ್ ಸೇನೆ ಫೆ.27 ರಂದು ಭಾರತದ ಮೇಲೆ ವಾಯು ದಾಳಿ ನಡೆಸುವ ಪ್ರಯತ್ನ ನಡೆಸಿತ್ತು. ಭಾರತದ ವಾಯುವಲಯ ಪ್ರವೇಶಿಸಿದ ಪಾಕಿಸ್ತಾನದ ಯುದ್ಧ ವಿಮಾನವನ್ನು ಭಾರತದ ಮಿಗ್ 21 ಯುದ್ಧ ವಿಮಾನ ಹೊಡೆದುರುಳಿಸಿತ್ತು. ಈ ಕಾರ್ಯಾಚರಣೆಯಲ್ಲಿ ಭಾರತದ ಮಿಗ್ 21 ಯುದ್ಧ ವಿಮಾನವೊಂದು ಪತನಗೊಂಡಿತ್ತು. ಅದರ ಪೈಲಟ್ ಕಾಣೆಯಾಗಿದ್ದರು. ಅವರೇ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್. ಆಗ ಪೈಲಟ್ ನಮ್ಮ ವಶದಲ್ಲಿದ್ದಾನೆ ಎಂದು ಪಾಕಿಸ್ತಾನ ಹೇಳಿತ್ತು. ಪಾಕ್ ಸೇನೆ ವರ್ಧಮಾನ್‌ನನ್ನು ಒತ್ತೆಯಾಳಾಗಿ ಇರಿಸಿತ್ತು.
ವರ್ಧಮಾನ್ ಬಂಧನ ಹೇಗಾಯ್ತು?
2019 ರ ಫೆಬ್ರವರಿ 27 ರಂದು ಅಭಿನಂದನ್ ವರ್ಧಮಾನ್ ಅವರು ಡಾಗ್‌ಫೈಟ್ ಮಾಡಿ ಪಾಕಿಸ್ತಾನದ ಎಫ್16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದರು. ಈ ಡಾಗ್ ಫೈಟ್ ವೇಳೆ ಪಾಕಿಸ್ತಾನದ ಯುದ್ಧ ವಿಮಾನ ಹಾರಿಸಿದ ಕ್ಷಿಪಣಿ ಅಭಿನಂದನ್ ಇದ್ದ ಮಿಗ್ 21 ವಿಮಾನಕ್ಕೆ ಬಡಿಯಿತು. ಪರಿಣಾಮ ಮಿಗ್ 21 ಯುದ್ಧ ವಿಮಾನ ಪತನವಾಗಿ ವರ್ಧಮಾನ್ ಪಾಕಿಸ್ತಾನದ ಭೂಪ್ರದೇಶದಲ್ಲಿ ಪ್ಯಾರಾಚೂಟ್ ಸಹಾಯದಿಂದ ಇಳಿದಿದ್ದರು. ಅವರನ್ನು ತಕ್ಷಣ ಪಾಕ್ ಸೇನೆ ಬಂಧಿಸಿ ಒತ್ತೆಯಾಳಾಗಿ ಇರಿಸಿಕೊಂಡಿತ್ತು.
ವರ್ಧಮಾನ್‌ಗೆ ನೀಡಿದ್ದ ಚಿತ್ರಹಿಂಸೆಯ ವೀಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದಕ್ಕೆ ಭಾರತದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಯಿತು. ಭಾರತದ ವಿಂಗ್ ಕಮಾಂಡರ್‌ನನ್ನು ಸುರಕ್ಷಿತವಾಗಿ ಕರೆತರುವಂತೆ ಹೋರಾಟಗಳು ನಡೆದವು. ಕೋಟ್ಯಂತರ ಜನರು ಭಾರತೀಯ ಯೋಧನಿಗಾಗಿ ಪ್ರಾರ್ಥಿಸಿದರು. ಸರ್ಕಾರಕ್ಕೆ ಒತ್ತಡ ಶುರುವಾಯಿತು. ಈ ಬೆಳವಣಿಗೆ ಉಭಯ ದೇಶಗಳ ನಡುವೆ ಯುದ್ಧದ ಪರಿಸ್ಥಿತಿ ಸೃಷ್ಟಿಸಿತ್ತು. ಅನೇಕ ರಾಷ್ಟ್ರಗಳು ಭಾರತದ ಬೆಂಬಲಕ್ಕೆ ನಿಂತಿದ್ದವು.
ಮೋದಿ ಜೊತೆ ಪಾಕ್ ಪ್ರಧಾನಿ ಮಾತುಕತೆ
ಭಾರತದ ವಿಂಗ್ ಕಮಾಂಡರ್ ಬಂಧನದಿಂದ ಭಾರತ-ಪಾಕ್ ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ಹದಗೆಟ್ಟು, ಯುದ್ಧದ ಭೀತಿ ಆವರಿಸಿತ್ತು. ‘ಅಭಿನಂದನ್ ಅವರನ್ನು ಚೌಕಾಶಿಯ ವಸ್ತುವಾಗಿ ಮಾಡಲು ಅವಕಾಶ ಕೊಡುವುದಿಲ್ಲ. ಈ ವಿಚಾರದಲ್ಲಿ ಯಾವುದೇ ಒಪ್ಪಂದವಿಲ್ಲ. ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು’ ಪಾಕಿಸ್ತಾನಕ್ಕೆ ಭಾರತ ಸರ್ಕಾರ ಸ್ಪಷ್ಟ ಸಂದೇಶ ರವಾನಿಸಿತ್ತು. ಆಗ ಭಾರತದ ಪ್ರಧಾನಿ ಮೋದಿ ಅವರನ್ನು ಸಂಪರ್ಕಿಸಲು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪ್ರಯತ್ನಿಸಿದರು. ಆದರೆ ಮೋದಿ ಮಾತುಕತೆಗೆ ನಿರಾಕರಿಸಿದರು.
ವಿಂಗ್ ಕಮಾಂಡರ್ ಬಿಡುಗಡೆ ಘೋಷಣೆ ಮಾಡಿದ ಪಾಕ್
ಎರಡು ದಿನ ಅಭಿನಂದನ್ ವರ್ಧಮಾನ್ ಅವರನ್ನು ಒತ್ತೆಯಾಳಾಗಿ ಪಾಕಿಸ್ತಾನ ಇಟ್ಟುಕೊಂಡಿತ್ತು. ಭಾರತದ ಜೊತೆಗೆ ಶಾಂತಿ ಕಾಯ್ದುಕೊಳ್ಳುವುದು ಮತ್ತು ಸಂಧಾನಕ್ಕೆ ಬಾಗಿಲು ತೆರೆಯುವ ಮೊದಲ ಹೆಜ್ಜೆಯಾಗಿ ಭಾರತೀಯ ವಾಯುಪಡೆಯ ಪೈಲಟ್‌ನನ್ನು ಬಿಡುಗಡೆ ಮಾಡುವುದಾಗಿ ಪಾಕಿಸ್ತಾನ ಸಂಸತ್‌ನಲ್ಲಿ ಇಮ್ರಾನ್ ಖಾನ್ ಘೋಷಿಸಿದರು.
ತಾಯ್ನಾಡಿಗೆ ವೀರಪುತ್ರ
ಪಾಕ್ ವಶದಲ್ಲಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು 2019 ರ ಮಾ.1 ರಂದು ಬಿಡುಗಡೆ ಮಾಡಲಾಯಿತು. ವಾಘಾ ಗಡಿ ಮೂಲಕ ಭಾರತದ ಯೋಧ ತಾಯ್ನೆಲ ಪ್ರವೇಶಿಸಿದರು. ಅಂದು ರಾತ್ರಿ 9:25 ಕ್ಕೆ ಭಾರತ ಪ್ರವೇಶಿಸುತ್ತಿದ್ದಂತೆ ಗಡಿಯಲ್ಲಿ ನೆರೆದಿದ್ದ ಸಾವಿರಾರು ಜನ ಜಯಘೋಷ ಕೂಗಿದರು. ಅಭಿನಂದನ್ ಸ್ವಾಗತಿಸಲು ಅವರ ಪೋಷಕರು, ವಾಯು, ಭೂ, ನೌಕಸೇನೆಯ ಮುಖ್ಯಸ್ಥರು ಸೇರಿದಂತೆ ಸಾವಿರಾರು ಜನ ವಾಘಾ ಗಡಿಯಲ್ಲಿ ಜಮಾಯಿಸಿದ್ದರು. ಅಭಿನಂದನ್ ದೇಶಕ್ಕೆ ಆಗಮಿಸುತ್ತಿದ್ದಂತೆ ಬಿಎಸ್‌ಎಫ್ ಅಧಿಕಾರಿಗಳು ಅವರನ್ನು ಅಪ್ಪಿಕೊಂಡು ದೇಶಕ್ಕೆ ಸ್ವಾಗತಿಸಿದರು. ಗಡಿಯಲ್ಲಿ ‘ಜೈ ಹಿಂದ್’.. ‘ಭಾರತ್ ಮಾತಾ ಕೀ ಜೈ’ ಘೋಷಣೆಗಳು ಮೊಳಗಿದವು. ಆ ಯಶಸ್ಸಿನ ದಿನಕ್ಕೆ ಇಂದು 5 ರ ಸಂಭ್ರಮ.
ರಾಯ್‍ಪುರ್: ಛತ್ತೀಸ್‍ಗಢದ (Chhattisgarh) ಕಂಕೇರ್‌ನಲ್ಲಿ ಭದ್ರತಾ ಸಿಬ್ಬಂದಿ ಹಾಗೂ ಮಾವೋವಾದಿಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಮಾವೋವಾದಿಗಳು (Maoists) ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೊಯಲಿಬೆಡ ಪೊಲೀಸ್ ಠಾಣೆ ವ್ಯಾಪ್ತಿಯ ಬೊಮ್ರಾ-ಹುರ್ತರೈ ಗ್ರಾಮಗಳ ನಡುವಿನ ಬೆಟ್ಟದ ಮೇಲೆ ಮಾವೋವಾದಿಗಳು ಹಾಗೂ ಭದ್ರತಾ ಸಿಬ್ಬಂದಿ ಮುಖಾಮುಖಿಯಾಗಿದ್ದಾರೆ. ಈ ವೇಳೆ ಎರಡೂ ಕಡೆಗಳಿಂದಲೂ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ ಮೂವರು ನಕ್ಸಲರು ಭದ್ರತಾ ಸಿಬ್ಬಂದಿ ಗುಂಡಿಗೆ ಬಲಿಯಾಗಿದ್ದಾರೆ. ಗುಂಡಿನ ದಾಳಿ ಬಳಿಕ ಉಳಿದ ಕೆಲವು ಮಾವೋವಾದಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಎನ್‍ಕೌಂಟರ್ ನಡೆದ ಸ್ಥಳದಲ್ಲಿ ಬಂದೂಕುಗಳು ಹಾಗೂ ನಕ್ಸಲರ ಕೆಲವು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಹತ್ಯೆಯಾದ ಮಾವೋವಾದಿಗಳ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೊಮ್ರಾ-ಹುರ್ತರೈ ಪ್ರದೇಶದಲ್ಲಿ ನಕ್ಸಲರು ಅಡಗಿರುವ ಬಗ್ಗೆ ಮಾಹಿತಿ ತಿಳಿದ ಬಳಿಕ ಜಿಲ್ಲಾ ರಿಸರ್ವ್ ಗಾರ್ಡ್ ಮತ್ತು ಗಡಿ ಭದ್ರತಾ ಪಡೆ (ಬಿಎಸ್‍ಎಫ್) ಜಂಟಿ ತಂಡವನ್ನು ಶನಿವಾರ ರಾತ್ರಿ ಪ್ರದೇಶಕ್ಕೆ ಕಳಿಸಿ ಕಾರ್ಯಾಚರಣೆ ಆರಂಭಿಸಲಾಗಿತ್ತು.